20 ಯುವ ನಾಯಕರಿಗೆ ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್; ಡಿಕೆ ಶಿವಕುಮಾರ್‌, ಬಿವೈ ವಿಜಯೇಂದ್ರರಿಂದ ನಾಯಕತ್ವ ಪಾಠ - Vistara News

ಕರ್ನಾಟಕ

20 ಯುವ ನಾಯಕರಿಗೆ ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್; ಡಿಕೆ ಶಿವಕುಮಾರ್‌, ಬಿವೈ ವಿಜಯೇಂದ್ರರಿಂದ ನಾಯಕತ್ವ ಪಾಠ

Vistara News Emerging Leader Award: ರಾಜ್ಯದ 20 ಯುವ ನಾಯಕರ ಸಾಧನೆಯನ್ನು ವಿಸ್ತಾರ ನ್ಯೂಸ್‌ ಗುರುತಿಸಿ ಈ ಯುವ ನಾಯಕರಿಗೆ “ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್” ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗಿಯಾಗಿದ್ದರು. ಈ ವೇಳೆ ಯುವ ನಾಯಕರಿಗೆ ಉಭಯ ನಾಯಕರು ಮುಂಚೂಣಿ ನಾಯಕತ್ವದ ಬಗ್ಗೆ ಕಿವಿ ಮಾತನ್ನು ಹೇಳಿದರು. ವಿಸ್ತಾರ ನ್ಯೂಸ್‌ ಗೌರವಿಸಿದ ರಾಜ್ಯದ ಆ 20 ಯುವ ನಾಯಕರು ಯಾರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Vistara News Emerging Leader Award for 20 young leaders Leadership lessons from DK Shivakumar and BY Vijayendra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸುದ್ದಿ ವಾಹಿನಿ ವಿಸ್ತಾರ ನ್ಯೂಸ್ ಸುದ್ದಿ ಬಿತ್ತರಿಸುವುದಷ್ಟೇ ಅಲ್ಲ, ಸಮಾಜದ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತಿದೆ. ಜನರಿಗೆ ಅದರಿಂದ ಅನುಕೂಲವಾಗುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಾ ಬಂದಿದೆ. ಮಾತ್ರವಲ್ಲ, ಹಲವು ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸಾಧನೆ ಮಾಡಿದವರನ್ನು ಗುರುತಿಸುವುದರಲ್ಲಿಯೂ ಮುಂಚೂಣಿಯಲ್ಲಿದೆ. ಈಗ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ವಿಸ್ತಾರ ನ್ಯೂಸ್ “ಎಮರ್ಜಿಂಗ್ ಲೀಡರ್” ಅವಾರ್ಡ್ (Vistara News Emerging Leader Award) ನೀಡಿ ಪ್ರೋತ್ಸಾಹಿಸಿದೆ. ಪ್ರಜ್ವಲಿಸುತ್ತಿರುವ ಭವಿಷ್ಯದ ನಾಯಕರನ್ನು ಗೌರವಿಸುವ ಕೆಲಸವನ್ನು ಮಾಡಲಾಗಿದೆ.

Vistara News Emerging Leader Award for 20 young leaders Leadership lessons from DK Shivakumar and BY Vijayendra

ರಾಜ್ಯದ 20 ಯುವ ನಾಯಕರ ಸಾಧನೆಯನ್ನು ವಿಸ್ತಾರ ನ್ಯೂಸ್‌ ಗಮನಿಸಿದೆ. ಈ ಯುವ ನಾಯಕರಿಗೆ “ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್” ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು.

Vistara News Emerging Leader Award for 20 young leaders Leadership lessons from DK Shivakumar and BY Vijayendra

ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯುವ ನಾಯಕರಿಗೆ ಒಂದಷ್ಟು ಹಿತನುಡಿಗಳನ್ನು ಹೇಳಿದರು. ರಾಜಕೀಯದ ಮೊದಲ ಪಾಠವನ್ನು ಮಾಡಿದರು. ರಾಜಕೀಯ ಎಂದರೆ ಅಧಿಕಾರ ಒಂದೇ ಅಲ್ಲ, ಒಬ್ಬ ಯಶಸ್ವಿ ನಾಯಕ ಆಗುವುದರ ಹಿಂದಿನ ಪರಿಶ್ರಮಗಳು ಏನು? ಜನರನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು? ಈ ಯುವ ನಾಯಕರ ಮುಂದಿನ ಜವಾಬ್ದಾರಿಗಳು ಹೇಗಿರಬೇಕು ಎಂಬ ಬಗ್ಗೆ ಸಲಹೆಗಳನ್ನು ನೀಡಿದರು. ಅಲ್ಲದೆ, ಸಂವಾದವನ್ನೂ ನಡೆಸಿಕೊಟ್ಟು ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು.

Vistara News Emerging Leader Award for 20 young leaders Leadership lessons from DK Shivakumar and BY Vijayendra

ಡಿ.ಕೆ. ಮಾಡಿದ ರಾಜಕೀಯ ಪಾಠ ಏನು?

ಈ ವೇಳೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಒಬ್ಬ ನಾಯಕನಾದವನು ನಾಯಕರನ್ನು ತಯಾರು ಮಾಡಬೇಕು. ಹಿಂಬಾಲಕರನ್ನಲ್ಲ. ಈ ದೇಶಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಬೇಕು. ಒಬ್ಬ ನಾಯಕನಾದವನಿಗೆ ಹಲವು ಗುಣಗಳು ಇರಬೇಕು. ಅವು ಯಾವುವೆಂದರೆ, ಧರ್ಮರಾಯನ ಧರ್ಮತ್ವ, ದಾನಶೂರ ಕರ್ಣನ ದಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ವಿದುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು ಎಂದು ಹೇಳಿದರು. ಈ ಎಲ್ಲ ಗುಣಗಳು ಒಬ್ಬ ರಾಜಕಾರಣಿಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.

Vistara News Emerging Leader Award for 20 young leaders Leadership lessons from DK Shivakumar and BY Vijayendra

ಬಿ.ವೈ. ವಿಜಯೇಂದ್ರ ಕಿವಿಮಾತು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ರಾಜಕಾರಣ ಎಂಬುದು, ನಾಯಕರಾಗಿ ಬೆಳೆಯುವುದು ಎಲ್ಲರಿಗೂ ಒಲಿಯುವ ಮಾತಲ್ಲ. ಇಂದು ರಾಜಕೀಯದಲ್ಲಿ ಎಷ್ಟು ಜನಕ್ಕೆ ಅವಕಾಶ ಸಿಗುತ್ತದೆ? ರಾಜ್ಯದಲ್ಲಿ ಆರೂವರೆ ಕೋಟಿ ಜನರಿದ್ದು, ಎಲ್ಲರಿಗೂ ರಾಜಕಾರಣದಲ್ಲಿ ಅವಕಾಶ ಸಿಗುವುದಿಲ್ಲ. 224 ಕ್ಷೇತ್ರಗಳಲ್ಲಿ ಎಷ್ಟು ಜನ ಶಾಸಕರಾಗುತ್ತಾರೆ? ಅಷ್ಟು ಜನ ಮಾತ್ರ ಶಾಸಕರಾಗಲು ಅವಕಾಶ ಇದೆ. ಇನ್ನು 28 ಜನ ಮಾತ್ರ ಸಂಸದರಾಗಲು ಸಾಧ್ಯ. ಅಂದರೆ, ಬೆರಳಿಣಿಕೆಯಷ್ಟು ಮಂದಿಗೆ ಮಾತ್ರ ಇಂಥದ್ದೊಂದು ಸುವರ್ಣಾವಕಾಶ ಸಿಗುತ್ತದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Vistara News Emerging Leader Award for 20 young leaders Leadership lessons from DK Shivakumar and BY Vijayendra

ಈ ಅವಕಾಶ ಎಂಬುದು ನಿಜಕ್ಕೂ ಹುಡುಗಾಟಿಕೆ ಅಲ್ಲ. ಇಷ್ಟೊಂದು ವಿಶ್ವಾಸ ಇಟ್ಟು ಜವಾಬ್ದಾರಿ ಕೊಡುವಂತಹ ಮಟ್ಟಕ್ಕೆ ಎಲ್ಲರೂ ಬೆಳೆಯಬೇಕು. ಒಂದು ಪಕ್ಷದಲ್ಲಿ ಎಲ್ಲ ಕಾರ್ಯಕರ್ತರು ಮೆಚ್ಚಿದಾಗ ಮಾತ್ರ ನೀವೊಬ್ಬ ಅತ್ಯುತ್ತಮ ನಾಯಕನಾಗಲು ಸಾಧ್ಯವಾಗುತ್ತದೆ. ರಾಜಕಾರಣದಲ್ಲಿ ಮೊದಲಿಗೆ ನಮ್ಮ ಸರಳತೆ ಮತ್ತು ವಿನಯವಂತಿಕೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆಗ ಮಾತ್ರ ನಾವು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

Vistara News Emerging Leader Award for 20 young leaders Leadership lessons from DK Shivakumar and BY Vijayendra

“ನಾಯಕತ್ವ”ದ ಬಗ್ಗೆ ಡಿಕೆ ಶಿವಕುಮಾರ್‌ – ವಿಜಯೇಂದ್ರ ಮಾತು!

ಸಂವಾದದ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು ಬಿ.ವೈ. ವಿಜಯೇಂದ್ರ ಅವರನ್ನು ಉದಾಹರಣೆಗೆ ತೆಗೆದುಕೊಳ್ಳುತ್ತಾ ಕೆಲವರಿಗೆ ಅವರ ತಂದೆಯ ರಾಜಕಾರಣದ ಬಲ ಸಿಗುತ್ತದೆ. ಹೀಗಾಗಿ ಅವರಿಗೆ ಅನಾಯಾಸವಾಗಿ ನಾಯಕತ್ವದ ಪಟ್ಟ ಸಿಕ್ಕಿ ಬಿಡುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಎಲ್ಲರಿಗೂ ತಂದೆಯ ಬಲದ ಮೇಲೆ ನಾಯಕತ್ವ ಸಿಕ್ಕಿಬಿಡುವುದಿಲ್ಲ. ನಾನು ಸಹ ಪಕ್ಷದಲ್ಲಿ ತಳಮಟ್ಟದಿಂದ ಕಾರ್ಯನಿರ್ವಹಿಸಿದ್ದೇನೆ. ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಸಾಕಷ್ಟು ಹೋರಾಟಗಳ ಮೂಲಕ ನನ್ನ ಸಾಮರ್ಥ್ಯವನ್ನು ನೋಡಿ ಪಕ್ಷ ನನಗೆ ಈಗ ಜವಾಬ್ದಾರಿಯನ್ನು ನೀಡಿದೆ. ಹೀಗಾಗಿ ಪರಿಶ್ರಮದಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಫಲ ಸಿಗುತ್ತದೆ ಎಂದು ಹೇಳಿದರು.

ವಿಸ್ತಾರ ನ್ಯೂಸ್‌ನ ವಿಶೇಷ ಪುರಸ್ಕಾರ

ಬಿ. ನಾಗೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಚಿವ

Vistara News Emerging Leader Award for 20 young leaders Leadership lessons from DK Shivakumar and BY Vijayendra

ಇವರೇ ನಮ್ಮ ಎಮರ್ಜಿಂಗ್‌ ಲೀಡರ್ಸ್

  • ಧೀರಜ್ ಮುನಿರಾಜು, ಯುವ ಮುಖಂಡ, ಶಾಸಕ, ದೊಡ್ಡಬಳ್ಳಾಪುರ
  • ರಕ್ಷಾ ರಾಮಯ್ಯ, ಯುವ ಮುಖಂಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಭಾರತೀಯ ಯುವ ಕಾಂಗ್ರೆಸ್, ಬೆಂಗಳೂರು
  • ವೀಣಾ ವಿಜಯಾನಂದ ಕಾಶಪ್ಪನವರ, ಯುವ ನಾಯಕಿ, ಮಾಜಿ ಅಧ್ಯಕ್ಷೆ, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ
  • ಎಸ್.ವಿ. ರಾಮಚಂದ್ರ ಗೌಡ, ಬಿಜೆಪಿ ನಾಯಕ, ಶಿಡ್ಲಘಟ್ಟ ಟ್ರೈ ಲೈಫ್ ಹಾಸ್ಪಿಟಲ್ ಸಂಸ್ಥಾಪಕ
  • ಟಿ.ವಿ. ಬಾಬು, ಯುವ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ, ತಿಗಳ ಚೌಡದೇನಹಳ್ಳಿ, ಆನೇಕಲ್
  • ಮೊಹಮ್ಮದ್ ಹ್ಯಾರಿಸ್ ನಲಪಾಡ್, ಯುವ ಮುಖಂಡ, ಕೆಪಿಸಿಸಿ ಯುವ ಘಟಕದ ಅಧ್ಯಕ್ಷ, ಬೆಂಗಳೂರು
  • ವಿನಯ್ ಕುಮಾರ್ ಜಿ.ಬಿ., ಯುವ ಮುಖಂಡ, ಕರ್ನಾಟಕ ಯುವ ಕಾಂಗ್ರೆಸ್ ಬೆಂಗಳೂರು ಘಟಕದ ಉಪಾಧ್ಯಕ್ಷ
  • ಕೆ. ಉಮೇಶ್ ಶೆಟ್ಟಿ, ಬಿಜೆಪಿ ನಾಯಕ, ಬಿಬಿಎಂಪಿ ಮಾಜಿ ಸದಸ್ಯ, ಗೋವಿಂದರಾಜನಗರ, ಬೆಂಗಳೂರು
  • ಎಸ್.ವಿ. ಭರತ್, ಸಮಾಜ ಸೇವಕರು, ಬಿಜೆಪಿ ನಾಯಕರು, ಸರ್ಜಾಪುರ, ಆನೇಕಲ್
  • ದರ್ಶನ್‌ ಕುಮಾರ್‌ ಆರ್., ಯುವ ಮುಖಂಡ, ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ
  • ಡಾ. ಶುಶ್ರುತ್ ಗೌಡ, ಖ್ಯಾತ ನ್ಯೂರಾಲಜಿಸ್ಟ್, ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಸಮಾಜ ಸೇವಕ, ಮೈಸೂರು
  • ಸುನಿಲ್ ನಂಜೇಗೌಡ, ಸಮಾಜ ಸೇವಕ, ಕೊಮ್ಮನಹಳ್ಳಿ, ಮಾಲೂರು, ಕೋಲಾರ
  • ಆನೇಕಲ್ ರಾಮೋಜಿ ಗೌಡ, ಶಿಕ್ಷಣ ತಜ್ಞ, ಕಾಂಗ್ರೆಸ್ ಯುವ ನಾಯಕ, ಆನೇಕಲ್
  • ಡಾ. ಜಯಕುಮಾರ್ ಆರ್., ಸಮಾಜ ಸೇವಕ, ಬಾಗೆಪಲ್ಲಿ, ಚಿಕ್ಕಬಳ್ಳಾಪುರ
  • ಎಂ. ದೊಡ್ಡಯ್ಯ ಆನೇಕಲ್, ಸಮಾಜ ಸೇವಕ, ಆನೇಕಲ್, ಬೆಂಗಳೂರು
  • ಡಾ. ಅಜಿತ್‌ ಕುಮಾರ್‌ ಶಾಸ್ತ್ರಿ, ಖ್ಯಾತ ವೈದ್ಯ, ಜನಪ್ರಿಯ ಸಮಾಜ ಸೇವಕ, ಬೀದರ್
  • ಮೂಡ್ಲೂರು ಪ್ರಭಂಜನ್ ಕುಮಾರ್, ಯುವ ಮುಖಂಡ, ಮಹಾನಗರ ಪಾಲಿಕೆ ಸದಸ್ಯ, ಬಳ್ಳಾರಿ
  • ಗುಜ್ಜಲ್ ನಾಗರಾಜ್, ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ
  • ಭೀಮಾಶಂಕರ ಪಾಟೀಲ, ಯುವ ಮುಖಂಡ, ರಾಜ್ಯಾಧ್ಯಕ್ಷ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕ, ಅಳಂದ, ಕಲಬುರಗಿ

ಇದನ್ನೂ ಓದಿ: Lal Krishna Advani: ಭಾರತ ರತ್ನ ಎಲ್​ ಕೆ. ಅಡ್ವಾಣಿ ಅವರ ಅಪರೂಪದ ಚಿತ್ರಗಳು

ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ. ಧರ್ಮೇಶ್‌, ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್ ಎಕ್ಸಿಕ್ಯುಟಿವ್‌ ಡೈರೆಕ್ಟರ್ ಡಿ.ಕೆ. ಕಿರಣ್ ಕುಮಾರ್‌, ವಿಸ್ತಾರ ನ್ಯೂಸ್ ಅಸೋಸಿಯೇಟ್ ಎಕ್ಸಿಕ್ಯುಟಿವ್‌ ಎಡಿಟರ್ ಹರೀಶ್ ನಾಗರಾಜ್ ಸೇರಿದಂತೆ ಹಲವು ಗಣ್ಯರು ಹಾಗೂ ವಿಸ್ತಾರ ನ್ಯೂಸ್ ವಾಹಿನಿಯ ಸಿಬ್ಬಂದಿ ಭಾಗಿಯಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Self Harming: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಸಾವು

Self Harming: ಗುರುವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈಕೆಯ ಸಹೋದರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಇವರು ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

VISTARANEWS.COM


on

Self Harming Guest lecturer hangs herself to death
Koo

ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯಿತ್ರಿ ಬಡಾವಣೆಯಲ್ಲಿ ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

ಕು. ದೀಪಾ (34) ಆತ್ಮಹತ್ಯೆಗೆ ಶರಣಾದ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಇವರು ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ನಿವಾಸಿ ಸೋಮಶೇಖರ್ ಹಾಗೂ ಭಾಗ್ಯ ದಂಪತಿ ಪುತ್ರಿಯಾಗಿದ್ದಾರೆ. ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Self Harming Guest lecturer hangs herself to death

ಆದರೆ, ಗುರುವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈಕೆಯ ಸಹೋದರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದೆ. ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ್ದಾಳೆ.

ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್‌ ಆಗಿಬಿಟ್ಟೆ ಎಂದು ತಿಳಿದು ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಕಟ್ಟಡದ ಮೇಲಿಂದ ಬಿದ್ದು ಯುವಕ ಸೂಸೈಡ್‌

ಬೆಂಗಳೂರು: ಪಿ.ಜಿ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ಬೆಂಗಳೂರಿನ ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ. ಕಲಬುರಗಿ ಮೂಲದ 28ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಘಟನಾ ಸ್ಥಳಕ್ಕೆ ವೈಟ್ ಫಿಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಆದರೆ ಅಲೆದಾಡಿ ಸುಸ್ತಾದ ಯುವಕನಿಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದು ತಾನು ವಾಸವಿದ್ದ ಪಿಜಿ ಕಟ್ಟಡದ ಮೇಲಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

Karnataka Weather Forecast : ವಿವಿಧೆಡೆ ಭಾರಿ ಗಾಳಿ-ಮಳೆಗೆ (Rain News) ಅನಾಹುತಗಳು ಸಂಭವಿಸಿದೆ. ಮಡಿಕೇರಿಯಲ್ಲಿ ಮಳೆ-ಗಾಳಿಗೆ ಕಾರಿನ ಮೇಲೆ ಮರ ಬಿದ್ದು ಜಖಂಗೊಂಡಿದೆ. ಶುಕ್ರವಾರವು ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇತ್ತ ಮಳೆಗಾಗಿ ಮಕ್ಕಳಿಗೆ ಮದುವೆ ಮಾಡಿಸಿದ ಪ್ರಸಂಗವು ನಡೆದಿದೆ.

VISTARANEWS.COM


on

By

karnataka weather Forecast
Koo

ಕೊಡಗು/ಕೊಪ್ಪಳ/ಬೆಂಗಳೂರು: ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆಯು (Rain News) ಅಬ್ಬರಿಸುತ್ತಿದೆ. ಗುರುವಾರದಂದು ಕೊಡಗು‌ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ (Karnataka Weather Forecast) ಮಳೆಯಾಗಿದೆ. ಕಳೆದೆರಡು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮಳೆಯ ಸಿಂಚನವಾಗುತ್ತಿದೆ. ಮುಂಜಾನೆ ಮೋಡ‌ ಕವಿದ ವಾತಾವರಣವಿದ್ದು, ಸಂಜೆ‌ ಅಬ್ಬರದೊಂದಿಗೆ ಮಳೆ ಸುರಿಯುತ್ತಿದೆ. ಮಳೆಯಿಂದ ಕೊಡಗಿನ‌ ರೈತರು ಹಾಗೂ ಸಾರ್ವಜನಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಮಡಿಕೇರಿ ಸಮೀಪ ನಿಲ್ಲಿಸಿದ್ದ ಕಾರಿನ ಮೇಲೆ ಭಾರಿ ಗಾಳಿ‌ಗೆ ಮರವು ಧರೆಗುರುಳಿದೆ. ಮಡಿಕೇರಿಯ ಸುದರ್ಶನ ಅಥಿತಿಗೃಹದ ಬಳಿ ಘಟನೆ ನಡೆದಿದೆ. ಅದೃಷ್ಟವಶಾತ್‌ ಕಾರಿನೊಳಗೆ ಯಾರು ಇರಲಿಲ್ಲ.

ಇತ್ತ ಕೊಪ್ಪಳ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಬಿಸಿಲನಿಂದ ಕಂಗೆಟ್ಟ ಜನರಿಗೆ ಗಾಳಿ ಸಹಿತ ಮಳೆಯು ಅಬ್ಬರಿಸಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನಲ್ಲಿ ಜೋರಾಗಿ ಮಳೆಯಾಗಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಏರ್‌ಪೋರ್ಟ್‌ನಲ್ಲೂ ಉತ್ತಮ ಮಳೆಯಾಗಿದೆ. ಬೆಳಗ್ಗೆನಿಂದ ಬಿಸಿಲಿಗೆ ಕಂಗೆಟ್ಟಿದ್ದ ಏರ್‌ಪೋರ್ಟ್‌ ಪ್ರಯಾಣಿಕರು, ಟ್ಯಾಕ್ಸಿ ಚಾಲಕರು ಮಳೆ ಆಗಮನದಿಂದ ಖುಷಿಯಾದರು. ಮಳೆಗೆ ವಾತಾವರಣವು ಕೂಲ್‌ ಆಗಿತ್ತು.

ವಿಜಯನಗರದಲ್ಲಿ ಮಳೆಗೆ ಉರುಳಿದ ಬಾಳೆ ಬೆಳೆ

ಹಂಪಿ ಪರಿಸರದಲ್ಲಿ ಸುರಿದ ಮಳೆಗೆ ಬಾಳೆ ಬೆಳೆ ಉರುಳಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಗಾಳಿ, ಮಳೆಗೆ ಸಾವಿರಾರು ಬಾಳೆಗಿಡಗಳು ನೆಲಕ್ಕುರುಳಿವೆ. ರೈತಾಪಿ ವರ್ಗ ವರ್ಷದ ಮೊದಲ ದೊಡ್ಡ ಮಳೆ ಎಂದೇ ಕೊಂಡಾಡಿದ್ದಾರೆ. ವೆಂಕಟಾಪುರ ಮಾಗಣೆ, ನಿಂಬಾಪುರ, ಬುಕ್ಕಸಾಗರ ಮಾಗಣೆ ಗ್ರಾಮಗಳಲ್ಲಿ ಬಾಳೆ ಬೆಳೆ ನೆಲಕ್ಕೆ ಬಿದ್ದಿದೆ.

ರೈತರು ಹೆಚ್ಚಾಗಿ ಸುಗಂದಿ, ಏಲಕ್ಕಿ, ಸಕ್ಕರೆ ಬಾಳೆಯನ್ನು ಬೆಳೆದಿದ್ದರು. ವೆಂಕಟಾಪುರ ಮಾಗಣೆಯಲ್ಲಿ ಗ್ರಾಮದಲ್ಲಿ ಬಾಳೆಗಿಡಗಳಿಗೆ ಹೆಚ್ಚಿನ ಹಾನಿಯಾಗಿದೆ. ಎಕರೆಗೆ 900 ಗಿಡಗಳು ನೆಟ್ಟಿದರೆ ಕೆಲವೆಡೆ 300 ರಿಂದ 400 ಬಾಳೆ ಗಿಡ ನೆಲಸಮವಾಗಿವೆ. ಕೆಲವೆಡೆ ಎಕೆರೆಗಟ್ಟಲೇ ಗಿಡಗಳು ನೆಲಕ್ಕುರುಳಿವೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಳೆ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರದ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಇನ್ನೂ ಹಲವು ತಿಂಗಳಿಂದ ತುರ್ತಾ, ಬಸವಣ್ಣ, ರಾಯ ಕಾಲುವೆಗಳಲ್ಲಿ ನೀರಿಲ್ಲದೇ ಬರಿದಾಗಿತ್ತು. ಇದೀಗ ಮಳೆಗೆ ಕಾಲುವೆಗಳಲ್ಲೂ ನೀರು ಹರಿದಿದ್ದು, ರೈತರಲ್ಲೂ ಕೊಂಚ ಸಂತಸಗೊಂಡಿದ್ದಾರೆ.

ತುಮಕೂರಲ್ಲಿ ಮಳೆಗಾಗಿ ಮಕ್ಕಳಿಗೆ ಮದುವೆ

ಕೆಲವೆಡೆ ಮಳೆಯು ಅಬ್ಬರಿಸುತ್ತಿದ್ದರೆ ಇತ್ತ ಮಳೆಗಾಗಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಮಳೆಗಾಗಿ ತುಮಕೂರಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ತೀವ್ರ ಬರ ಹಿನ್ನೆಲೆಯಲ್ಲಿ ಬೆಳದಿಂಗಳು ಹಬ್ಬ ಆಚರಣೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಚಿಕ್ಕ ಮಕ್ಕಳಿಗೆ ವಧು-ವರರಂತೆ ಸಿಂಗಾರಿಸಿ, ಅಲಂಕಾರಿಸಿ ಮದುವೆ ಮಾಡಿ ವಿಶೇಷ ಆಚರಣೆ ಮಾಡಿದ್ದಾರೆ. ತುಮಕೂರಿನ ಜಯಪುರ ಬಡಾವಣೆಯಲ್ಲಿ ಘಟನೆ ನಡೆದಿದೆ. ಮಳೆಗಾಗಿ ಜನರು ಹಲವು ಆಚರಣೆಗಳ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: SSLC Result 2024: ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

ಭಾರಿ ಮಳೆಯೊಂದಿಗೆ ರಭಸವಾಗಿ ಬೀಸಲಿದೆ ಗಾಳಿ

ಮೇ 10ರಂದು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕೆಲವು ಸ್ಥಳಗಳಲ್ಲಿ ಗಾಳಿಯು 40-50 ಕಿ.ಮೀ ವೇಗದಲ್ಲಿ ಬೀಸಲಿದೆ.

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ದಕ್ಷಿಣ ಒಳನಾಡಿನಲ್ಲಿ ತುಮಕೂರು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಸಿನ ಗಾಳಿಯೊಂದಿಗೆ ಗುಡುಗು ಸಹಿತ ಮಧ್ಯಮ ಮಳೆಯಾಗಲಿದೆ. ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರದಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ಗರಿಷ್ಠ ತಾಪಮಾನವು 2-4 ಡಿ.ಸೆ ಕಡಿಮೆಯಾಗುವ ಸಾಧ್ಯತೆ ಇದೆ.

ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿಗೆ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 34-22 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Heavy Rain: ಗಂಗಾವತಿಯಲ್ಲಿ ಭಾರೀ ಬಿರುಗಾಳಿ ಮಳೆಗೆ ಬಾಳೆ, ಮಾವು, ಮನೆಗಳಿಗೆ ಹಾನಿ

Heavy Rain: ಗಂಗಾವತಿ ತಾಲೂಕಿನಲ್ಲಿ ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಮತ್ತು ಮಳೆಗೆ ಅಪಾರ ಪ್ರಮಾಣದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ಘಟನೆ ಜರುಗಿದೆ. ತಾಲೂಕಿನ ಸಣಾಪುರ, ಆನೆಗೊಂದಿ, ಮಲ್ಲಾಪುರ ಸೀಮೆಯಲ್ಲಿ ಬೆಳೆಯಲಾಗಿದ್ದ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬಾಳೆ ಬೆಳೆಗೆ ಹಾನಿಯಾಗಿದ್ದು, ವೆಂಕಟಗಿರಿ ಹೋಬಳಿಯ ಬಸವಪಟ್ಟಣ, ವಡ್ಡರಹಟ್ಟಿ, ಬೆಣಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿನ ನೂರಾರು ಹೆಕ್ಟೇರು ಪ್ರದೇಶದಲ್ಲಿನ ಮಾವು ಬೆಳೆಗೆ ಹಾನಿಯಾಗಿದೆ.

VISTARANEWS.COM


on

Bananas mangoes crops and houses damaged due to heavy rain in Gangavathi
Koo

ಗಂಗಾವತಿ: ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಮತ್ತು ಮಳೆಗೆ (Heavy Rain) ತಾಲೂಕಿನಲ್ಲಿ ಅಪಾರ ಪ್ರಮಾಣದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ಘಟನೆ ಜರುಗಿದೆ. ತಾಲೂಕಿನ ಸಣಾಪುರ, ಆನೆಗೊಂದಿ, ಮಲ್ಲಾಪುರ ಸೀಮೆಯಲ್ಲಿ ಬೆಳೆಯಲಾಗಿದ್ದ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬಾಳೆ ಬೆಳೆಗೆ ಹಾನಿಯಾಗಿದೆ. ವೆಂಕಟಗಿರಿ ಹೋಬಳಿಯ ಬಸವಪಟ್ಟಣ, ವಡ್ಡರಹಟ್ಟಿ, ಬೆಣಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿನ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಮಾವು ಬೆಳೆಗೆ ಹಾನಿಯಾಗಿದೆ.

ಬಾಳೆ- ಮಾವು ಹಾನಿ

ತಡರಾತ್ರಿ ಬೀಸಿದ ಭಾರೀ ಪ್ರಮಾಣದ ಬಿರುಗಾಳಿಗೆ ಆನೆಗೊಂದಿ ಭಾಗದಲ್ಲಿ ಬಾಳೆ ಗಿಡಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಸಣಾಪುರ, ಆನೆಗೊಂದಿ, ಮಲ್ಲಾಪುರ ಸೀಮೆಯಲ್ಲಿ ಬೆಳೆಯಲಾಗಿದ್ದ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬಾಳೆಗೆ ಹಾನಿ ಉಂಟಾಗಿದೆ.

ಇದನ್ನೂ ಓದಿ: Pejawar Swamiji: ದೇವಾಲಯಗಳ ಆಡಳಿತ ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕು: ಪೇಜಾವರ ಶ್ರೀ

ವೆಂಕಟಗಿರಿ ಹೋಬಳಿಯ ಬಸವಪಟ್ಟಣ, ವಡ್ಡರಹಟ್ಟಿ, ಬೆಣಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿನ ನೂರಾರು ಹೆಕ್ಟೇರು ಪ್ರದೇಶದಲ್ಲಿನ ಮಾವು ಬೆಳೆಗೆ ಹಾನಿಯಾಗಿದೆ. ಭಾರೀ ಬಿರುಗಾಳಿಗೆ ಗಿಡದಲ್ಲಿನ ಮಾವುಗಳು ಉದುರು ಬಿದ್ದಿದ್ದು ಲಕ್ಷಾಂತರ ರೂಪಾಯಿ ಮೊತ್ತದ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಸಮೇತ ಮಳೆಗೆ ಗಂಗಾವತಿ ನಗರದ ವಿವಿಧೆಡೆ ದೊಡ್ಡ ಮರಗಳ ಕೊಂಬೆಗಳು ತುಂಡಾಗಿ ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ನಗರದ ಅಂಗಡಿ ಸಂಗಣ್ಣ ಕ್ಯಾಂಪ್, ಮಹೆಬೂಬನಗರ, ಗೌಸಿಯಾ ಕಾಲೋನಿ, ಎಚ್.ಆರ್.ಎಸ್. ಕ್ಯಾಂಪ್, ಅಣ್ಣೂರು ಗೌರಮ್ಮಕ್ಯಾಂಪ್, ಲಿಂಗರಾಜ ಕ್ಯಾಂಪ್ ಮತ್ತು ಶರಣಬಸವೇಶ್ವರ ನಗರದಲ್ಲಿ ಕೆಲ ತಗಡಿನ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

ಜಂಟಿ ಸಮೀಕ್ಷೆ

ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ, ಮಳೆಗೆ ಆನೆಗೊಂದಿ ಭಾಗದಲ್ಲಿ ಬಾಳೆ ನಾಶವಾಗಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಕಂದಾಯ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಹಾನಿಯ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಯು. ನಾಗರಾಜ್ ತಿಳಿಸಿದ್ದಾರೆ.

Continue Reading

ವಿಜಯನಗರ

Vijayanagara News: ಅಕ್ಷತ್ತದಿಗಿ ಅಮವಾಸ್ಯೆ; ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು

Vijayanagara News: ಅಕ್ಷತ್ತದಿಗಿ ಅಮವಾಸ್ಯೆ ನಿಮಿತ್ತ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದುಕೊಳ್ಳಲು ನಾಡಿನ ವಿವಿಧೆಡೆಯಿಂದ ಬುಧವಾರ ಬೆಳ್ಳಿಗ್ಗೆಯಿಂದಲೇ ಪಟ್ಟಣದತ್ತ ದಂಡು ದಂಡಾಗಿ ಭಕ್ತರು ಆಗಮಿಸಿದರು. ಅಕ್ಷತ್ತದಿಗಿ ಅಮವಾಸ್ಯೆ ಅಂಗವಾಗಿ ಶ್ರೀ ಗುರು ಕೊಟೂರೇಶ್ವರ ಸ್ವಾಮಿಯ ಹಿರೇಮಠದಲ್ಲಿ ಸ್ವಾಮಿಗೆ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.

VISTARANEWS.COM


on

Akshattadigi Amavasya Devotees darshan of Sri Guru Kottureswara Swamy
Koo

ಕೊಟ್ಟೂರು: ಅಕ್ಷತ್ತದಿಗಿ ಅಮವಾಸ್ಯೆ ನಿಮಿತ್ತ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದುಕೊಳ್ಳಲು ನಾಡಿನ ವಿವಿಧೆಡೆಯಿಂದ ಬುಧವಾರ ಬೆಳ್ಳಿಗ್ಗೆಯಿಂದಲೇ ಪಟ್ಟಣದತ್ತ ದಂಡುದಂಡಾಗಿ ಭಕ್ತರು (Vijayanagara News) ಆಗಮಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

ಅಕ್ಷತ್ತದಿಗಿ ಅಮವಾಸ್ಯೆ ಅಂಗವಾಗಿ ಶ್ರೀ ಗುರು ಕೊಟೂರೇಶ್ವರ ಸ್ವಾಮಿಯ ಹಿರೇಮಠದಲ್ಲಿ ಸ್ವಾಮಿಗೆ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

ಬುಧವಾರ ಅಮವಾಸ್ಯೆ ನಿಮಿತ್ತ ಪಟ್ಟಣ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ನೆರಳಿಗೆಂದು ಶಾಮಿಯಾನ ವ್ಯವಸ್ಥೆಯನ್ನು ಮಾಡಲಾಗಿತ್ತು.

Continue Reading
Advertisement
Self Harming Guest lecturer hangs herself to death
ಕರ್ನಾಟಕ2 mins ago

Self Harming: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಸಾವು

karnataka weather Forecast
ಮಳೆ7 mins ago

Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

Dog bite
Latest16 mins ago

Dog Bite : ಮಗುವಿಗೆ ಕಚ್ಚಿದ ನಾಯಿ; ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ದಂಪತಿಗೆ ಥಳಿತ, ಇಲ್ಲಿದೆ ವಿಡಿಯೊ

Toxic Shawarma
ಆರೋಗ್ಯ40 mins ago

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

Sensex crash
ಪ್ರಮುಖ ಸುದ್ದಿ43 mins ago

Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

Dietary Guidelines
ಆರೋಗ್ಯ51 mins ago

Dietary Guidelines: ಭಾರತೀಯರ ಆಹಾರ ಹೇಗಿರಬೇಕು? ಐಸಿಎಂಆರ್ ಮಾರ್ಗಸೂಚಿ ಹೀಗಿದೆ

Bananas mangoes crops and houses damaged due to heavy rain in Gangavathi
ಮಳೆ56 mins ago

Heavy Rain: ಗಂಗಾವತಿಯಲ್ಲಿ ಭಾರೀ ಬಿರುಗಾಳಿ ಮಳೆಗೆ ಬಾಳೆ, ಮಾವು, ಮನೆಗಳಿಗೆ ಹಾನಿ

New fashion Trend
ಫ್ಯಾಷನ್57 mins ago

New Fashion Trend: ಕ್ವೀನ್‌ ಲುಕ್‌ ನೀಡುವ ಡಿಸೈನರ್‌ ಪರ್ಲ್ ಶೈಲಿಯ ಹೆಡ್‌ಬ್ಯಾಂಡ್‌

Akshattadigi Amavasya Devotees darshan of Sri Guru Kottureswara Swamy
ವಿಜಯನಗರ57 mins ago

Vijayanagara News: ಅಕ್ಷತ್ತದಿಗಿ ಅಮವಾಸ್ಯೆ; ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು

Opposition party leader R Ashok latest statement in bengaluru
ಬೆಂಗಳೂರು59 mins ago

R Ashok: ಶಾಂತಿಯ ತೋಟವನ್ನು ಹಾಳುಗೆಡವುತ್ತಿರುವುದು ಬಿಜೆಪಿಯಲ್ಲ, ಕಾಂಗ್ರೆಸ್‌: ಆರ್. ಅಶೋಕ್‌ ಆಕ್ರೋಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ5 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ6 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ6 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು6 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ7 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು8 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌