Gruhajyoti scheme: ಬಾಡಿಗೆದಾರರಿಗೆ ಗುಡ್‌ ನ್ಯೂಸ್;‌ ಹೊಸ ವಿಳಾಸಕ್ಕೆ De-Link ಆಯ್ಕೆ ಕೊಟ್ಟ ಸರ್ಕಾರ! - Vistara News

ಬೆಂಗಳೂರು

Gruhajyoti scheme: ಬಾಡಿಗೆದಾರರಿಗೆ ಗುಡ್‌ ನ್ಯೂಸ್;‌ ಹೊಸ ವಿಳಾಸಕ್ಕೆ De-Link ಆಯ್ಕೆ ಕೊಟ್ಟ ಸರ್ಕಾರ!

Gruhajyoti scheme: ಇನ್ನು ಮುಂದೆ ಬಾಡಿಗೆದಾರರು ಮನೆಯನ್ನು ಬದಲಾವಣೆ ಮಾಡಿದರೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಬಾಡಿಗೆ ಮನೆಯನ್ನು ಬದಲಾವಣೆ ಮಾಡಿದವರಿಗೆ ಕೂಡಲೇ ಹಳೇ ವಿಳಾಸದ ಸಂಪರ್ಕವನ್ನು ರದ್ದು ಪಡಿಸಿ, ಹೊಸ ವಿಳಾಸಕ್ಕೆ ಯೋಜನೆಯ ಫಲವನ್ನು ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

VISTARANEWS.COM


on

Gruhajyoti scheme in Karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಒಂದಾದ ಗೃಹ ಜ್ಯೋತಿ (Gruhajyoti scheme) ಉಚಿತ ವಿದ್ಯುತ್‌ ಯೋಜನೆಯ (Free Eelectricity Scheme) ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆ (Gruhajyoti Rules Change) ಮಾಡಲಾಗಿದೆ. ಇಷ್ಟು ದಿನ ಬಾಡಿಗೆ ಮನೆಯಲ್ಲಿದ್ದವರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಆದರೆ, ಇನ್ನು ಮುಂದೆ ಬಾಡಿಗೆದಾರರು ಮನೆಯನ್ನು ಬದಲಾವಣೆ ಮಾಡಿದರೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಹೌದು, ಬಾಡಿಗೆ ಮನೆಯನ್ನು ಬದಲಾವಣೆ ಮಾಡಿದವರಿಗೆ ಕೂಡಲೇ ಹಳೇ ವಿಳಾಸದ ಸಂಪರ್ಕವನ್ನು ರದ್ದು ಪಡಿಸಿ, ಹೊಸ ವಿಳಾಸಕ್ಕೆ ಯೋಜನೆಯ ಫಲವನ್ನು ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಮೇಲೆ ಕೆಲವು ಸಮಸ್ಯೆಗಳು ಉದ್ಭವವಾಗಿದ್ದವು. ಈ ಬಗ್ಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಅದೇನೆಂದರೆ, ಒಂದು ಕಡೆ ಬಾಡಿಗೆ ಮನೆಯಲ್ಲಿದ್ದವರು ನಾನಾ ಕಾರಣಗಳಿಗೆ ಮನೆಗಳನ್ನು ಬದಲಾವಣೆ ಮಾಡಿರುತ್ತಾರೆ. ಆದರೆ, ಹೋಗಿರುವ ಹೊಸ ಮನೆಗೆ ತಮ್ಮ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿ ಸೌಲಭ್ಯವನ್ನು ಪಡೆಯಲು ಆಗುತ್ತಿರಲಿಲ್ಲ. ಇವರು ಈ ಹಿಂದೆ ಇದ್ದ ಮನೆಯ ವಿದ್ಯುತ್‌ ಸಂಪರ್ಕಕ್ಕೆ ಲಿಂಕ್‌ ಆಗಿದ್ದ ಆಧಾರ್‌ ಸಂಖ್ಯೆಯನ್ನು ರದ್ದುಪಡಿಸಲೂ ಬರುತ್ತಿರಲಿಲ್ಲ. ಹೀಗಾಗಿ ಈ ಹಿಂದೆ ಆ ಮನೆಯಲ್ಲಿದ್ದವರು ಬಳಕೆ ಮಾಡುತ್ತಿದ್ದ ಯೂನಿಟ್‌ಗೆ ಹೆಚ್ಚುವರಿ ಶೇ. 10ರಂತೆ ಇವರು ಬಳಕೆ ಮಾಡಬೇಕಿತ್ತು.

ಇದನ್ನೂ ಓದಿ: Free Electricity : ಗೃಹ ಜ್ಯೋತಿ ನಿಯಮ ಬದಲು ; 10% ಬದಲು 10 ಯುನಿಟ್‌ ಹೆಚ್ಚುವರಿ; ಲಾಭಾನಾ? ನಷ್ಟಾನಾ?

ಅದೇ ಈ ಹಿಂದೆ ಇದ್ದವರು ಹೆಚ್ಚುವರಿಯಾಗಿ ಬಳಕೆ ಮಾಡಿದ್ದರೆ ಇವರಿಗೆ ಯಾವುದೇ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಅವರು ಕಡಿಮೆ ಯೂನಿಟ್‌, ಅಂದರೆ 110 ಯೂನಿಟ್‌ ಅನ್ನು ಬಳಕೆ ಮಾಡುತ್ತಿದ್ದು, ಈಗ ಹೊಸದಾಗಿ ಆ ಮನೆಗೆ ಹೋದವರು 150 ಯುನಿಟ್‌ ಸರಾಸರಿ ಬಳಕೆ ಮಾಡುತ್ತಿದ್ದರೆ, ಅಂಥವರಿಗೆ ಕಷ್ಟವಾಗುತ್ತಿತ್ತು. ಅಲ್ಲದೆ, ತಮ್ಮ ಆಧಾರ್‌ ಕಾರ್ಡ್‌ ಅನ್ನು ಹೊಸ ಮನೆಯ ವಿದ್ಯುತ್‌ ಸಂಪರ್ಕಕ್ಕೆ ಜೋಡಣೆ ಮಾಡಲು ಸಹ ಆಗುತ್ತಿರಲಿಲ್ಲ. ಈಗ ರಾಜ್ಯ ಸರ್ಕಾರ ನೀಡಿರುವ ಆದೇಶವು ನಿರಾಳತೆಯನ್ನು ತಂದಿದೆ.

ಡಿ‌ – ಲಿಂಕ್ ಮತ್ತು ರೀ- ಲಿಂಕ್‌ಗೆ ಅವಕಾಶ

ಗೃಹ ಜ್ಯೋತಿ” ಯೋಜನೆಯ ನೋಂದಣಿ ವ್ಯವಸ್ಥೆಯಾದ ಸೇವಾ ಸಿಂಧು ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯವನ್ನು ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶದಲ್ಲೇನಿದೆ?

“ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿ ನೀಡಲಾಗಿದೆ. ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್‌ ಬಿಲ್ಲನ್ನು ಪಾವತಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.

“ಗೃಹ ಜ್ಯೋತಿ” ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ತಂತ್ರಾಂಶದ ಮೂಲಕ ನೋಂದಣಿ ಮಾಡಬಹುದಾಗಿರುತ್ತದೆ. ಆದರೆ, ಸೇವಾ ಸಿಂಧು ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯವನ್ನು ಪ್ರಸ್ತುತ ಕಲ್ಪಿಸಿರುವುದಿಲ್ಲ. ಗ್ರಾಹಕರು ತಮ್ಮ ಮನೆಯನ್ನು ಬದಲಾಯಿಸಿದಂತಹ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಈಗಾಗಲೇ ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು De-Link ಅವಕಾಶ ಮಾಡಿಕೊಡಬೇಕಾಗುತ್ತದೆ. ಆದ್ದರಿಂದ, ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಈ ಸಂಬಂಧ, ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೀಗಾಗಿ ಇನ್ನು ಮುಂದೆ ಬಾಡಿಗೆ ಮನೆಯನ್ನು ಬದಲಾವಣೆ ಮಾಡುವವರು ಹಳೇ ಮನೆಯ ವಿದ್ಯುತ್‌ ಸಂಪರ್ಕದ ಆರ್‌ ಆರ್‌ ನಂಬರ್‌ಗೆ ಜೋಡಿಸಿದ್ದ ಆಧಾರ್‌ ಸಂಖ್ಯೆಯನ್ನು De-Link ಮಾಡಬಹುದಾಗಿದೆ. ಆಗ ಹೊಸ ಮನೆಯ ಆರ್‌ ಆರ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು Re-Link ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Gruha Lakshmi: ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಿದ್ದನ್ನು ತಿಳಿಯೋದು ಹೇಗೆ? ಇಲ್ಲಿದೆ ಸಿಂಪಲ್‌ ಟ್ರಿಕ್ಸ್!‌

ಇದೊಂದು ಸ್ಪಷ್ಟತೆ ಇಲ್ಲ!

ಇಲ್ಲಿ ಇನ್ನೊಂದು ತಾಂತ್ರಿಕ ಪ್ರಶ್ನೆ ಎದುರಾಗಿದ್ದು, ಹೊಸ ಮನೆಗೆ ಬಂದ ಬಳಿಕ ಮೊದಲು ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಅಲ್ಲಿ ವಾಸವಾಗುವ ಬಾಡಿಗೆದಾರರು ಈ ಹಿಂದಿನ ಮನೆಯಲ್ಲಿ ಬಳಕೆ ಮಾಡುತ್ತಿದ್ದ ವಿದ್ಯುತ್‌ ಸರಾಸರಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆಯೋ ಅಥವಾ ಈಗ ಬಂದಿರುವ ಮನೆಯಲ್ಲಿ ಹಿಂದಿನವರು ಬಳಕೆ ಮಾಡುತ್ತಿದ್ದ ಸರಾಸರಿ ವಿದ್ಯುತ್‌ ಬಳಕೆಗಷ್ಟೆ ಉಚಿತ ಬಿಲ್‌ ಅನ್ನು ನೀಡಲಾಗುತ್ತದೆಯೋ ಎಂಬುದು ಮಾತ್ರ ಸ್ಪಷ್ಟತೆ ಇಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

Bangalore Rain News : ಸಂಜೆ ಶುರುವಾರ ಮಳೆ ರಾತ್ರಿ 12 ಗಂಟೆಯ ವರೆಗೆ ಬಿಡದೇ ಸುರಿಯಿತು. ಹೀಗಾಗಿ ಭಾನುವಾರದ ವಾರಾಂತ್ಯದ ಸಂಚಾರಕ್ಕೆ ಹೊರಗಡೆ ಬಂದಿದ್ದ ನಗರದ ಮಂದಿ ಅಲ್ಲಲ್ಲೇ ಉಳಿಯುವಂತಾಯಿತು. ಅವರ ಖುಷಿಗೆ ಮಳೆರಾಯನ ಅಡಚಣೆಯೂ ಉಂಟಾಯಿತು. ವಾಹನ ಸಂಚಾರಕ್ಕೆ ಅಡಚಣೆಯಾದ ಕಾರಣ ಕುಟುಂಬ ಸಮೇತ ಹೊರಟಿದ್ದವರು ರಸ್ತೆಯ ಬದಿಯಲ್ಲಿ ಕಾಯುವ ಪರಿಸ್ಥಿತಿ ಸೃಷ್ಟಿಯಾಯಿತು.

VISTARANEWS.COM


on

Banglore rain
Koo

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಭಾನುವಾರ ಸಂಜೆ ಏಕಾಏಕಿ ಭರ್ಜರಿ (Bangalore Rain News) ಮಳೆಯಾಯಿತು. ಸಂಜೆ 6 ಗಂಟೆಯ ಬಳಿಕ ಬೆಂಗಳೂರಿನ ನಗರ ವ್ಯಾಪ್ತಿಯ ಬಹುತೇಕ ಕಡೆ ಜೋರು ಮಳೆಯಾಯಿತು. ಈ ಮಳೆಯ ಅಬ್ಬರಕ್ಕೆ ನಗರದಲ್ಲಿ ಹಲವು ಮರಗಳು ಉರುಳಿ ಬಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಮರಗಳು ಉರುಳಿ ಬಿದ್ದ ಮರಗಳಿಂದಾಗಿ ವಾಹನಗಳಿಗೆ ಹಾನಿ ಉಂಟಾದವು. ಅದೇ ರೀತಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಕಾರಣ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಸಂಜೆ ಶುರುವಾರ ಮಳೆ ರಾತ್ರಿ 12 ಗಂಟೆಯ ವರೆಗೆ ಬಿಡದೇ ಸುರಿಯಿತು. ಹೀಗಾಗಿ ಭಾನುವಾರದ ವಾರಾಂತ್ಯದ ಸಂಚಾರಕ್ಕೆ ಹೊರಗಡೆ ಬಂದಿದ್ದ ನಗರದ ಮಂದಿ ಅಲ್ಲಲ್ಲೇ ಉಳಿಯುವಂತಾಯಿತು. ಅವರ ಖುಷಿಗೆ ಮಳೆರಾಯನ ಅಡಚಣೆಯೂ ಉಂಟಾಯಿತು. ವಾಹನ ಸಂಚಾರಕ್ಕೆ ಅಡಚಣೆಯಾದ ಕಾರಣ ಕುಟುಂಬ ಸಮೇತ ಹೊರಟಿದ್ದವರು ರಸ್ತೆಯ ಬದಿಯಲ್ಲಿ ಕಾಯುವ ಪರಿಸ್ಥಿತಿ ಸೃಷ್ಟಿಯಾಯಿತು. ಬಸ್ ಸಂಚಾರವೂ ನಿಧಾಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಹರಸಾಹಸಪಟ್ಟರು.

ಮೆಟ್ರೊ ಸಂಚಾರ ಬಂದ್​

ಮಳೆರಾಯನ ಅಬ್ಬರಕ್ಕೆ ಬೆಂಗಳೂರಿನ ಜೀವನಾಡಿಯಾಗಿರುವ ಮೆಟ್ರೊ ಸಂಚಾರಕ್ಕೂ ಅಡಚಣೆ ಉಂಟಾಯಿತು. ನೇರಳೆ ಲೈನ್​​ನ ಇಂದಿರಾನಗರ ಮತ್ತು ಎಂಜಿ ರಸ್ತೆಯ ನಡುವಿನ ಮೆಟ್ರೊ ಬ್ರಿಜ್​ ಮೇಲೆ ಮರವೊಂದು ಉರುಳಿ ಬಿತ್ತು. ಹೀಗಾಗಿ ಮೆಟ್ರೊ ಸಂಚಾರವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಇದರಿಂದಾಗಿ ಬೆಂಗಳೂರಿನ ಹೃದಯ ಭಾಗವಾಗಿರುವ ಎಂಜಿ ರಸ್ತೆಯ ನಿಲ್ದಾಣದಲ್ಲಿ ಪ್ರಯಾಣಿಕ ಕಿಕ್ಕಿರಿದು ತುಂಬಿಕೊಂಡರು. ಒಂದು ಕಡೆ ಹೊರಗಡೆ ಸುರಿಯುತ್ತಿರುವ ಮಳೆ ಮತ್ತೊಂಡೆದೆ ರೈಲು ಸಂಚಾರ ಬಂದ್​. ಹೀಗಾಗಿ ಜನರ ಎಲ್ಲಿಗೂ ಹೋಗಲು ಸಾಧ್ಯವಾಗದೇ ಪರಿತಪಿಸಿದರು.

ಮನೆಗಳಿಗೆ ನುಗ್ಗಿದ ನೀರು

ಕೆ.ಪಿ ಅಗ್ರಹಾರ, ಇಂದಿರಾನಗರ, ಬಸವೇಶ್ವರ ನಗರ, ಮಂತ್ರಿ ಮಾಲ್​ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ಏಕಾಏಕಿ ಕುಂಭದ್ರೋಣ ಮಳೆ ಸುರಿದ ಕಾರಣ ಚರಂಡಿಯಲ್ಲಿ ನೀರು ಹೋಗದೇ ಸಮೀಪದ ಮನೆಗಳಿಗೆ ನುಗ್ಗಿದವು. ಬಿಬಿಎಂಪಿ ಅಧಿಕಾರಿಗಳು ಮಳೆಗಾಲದ ಮುನ್ಸೂಚನೆಯ ಹೊರತಾಗಿಯೂ ಒಳಚರಂಡಿಗಳು ಹಾಗೂ ಮಳೆ ನೀರು ಕಾಲುವೆಗಳನ್ನು ಸರಿಯಾದ ಸಮಯಕ್ಕೆ ಸರಿಪಡಿಸಿಲ್ಲ. ಇದರಿಂದಾಗಿ ಮನೆಗಳಿಗೆ ಹಾಗೂ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ ಎಂದು ಜನರು ಆರೋಪಿಸಿದರು.

ಉರುಳಿ ಬಿದ್ದ ಮರಗಳು

ಮಳೆಯ ಜತೆಗೆ ಮಾರುತವೂ ಜೋರಾಗಿತ್ತು. ಹೀಗಾಗಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದವು. ಅಧಿಕಾರಿಗಳ ಪ್ರಕಾರ ಒಂದೇ ರಾತ್ರಿಯಲ್ಲಿ 100ಕ್ಕೂ ಅಧಿಕ ಮರಗಳು ಧರಾಶಾಹಿಯಾಗಿವೆ. ಬಸವೇಶ್ವರ ನಗರ ವ್ಯಾಪ್ತಿಯೊಂದರಲ್ಲೇ 40 ಮರಗಳು ಉರುಳಿ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಗಳು ಬೀಳುವ ಸಮಯದಲ್ಲಿ ವಿದ್ಯುತ್​ ತಂತಿಗಳು ಕೂಡ ತುಂಡಾದ ಕಾರಣ ಬೆಂಗಳೂರಿನ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು. ನಾಗರಿಕರು ರಾತ್ರಿಯೆಲ್ಲ ಕತ್ತಲೆಯಲ್ಲಿ ಕಳೆಯುವಂತಾಯಿತು.

ಇದನ್ನೂ ಓದಿ: Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

ಟ್ರಾಫಿಕ್ ಜಾಮ್​

ವಿಪರೀತ ಮಳೆಗೆ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಜಾಮ್ ನಿಂದ ಜನರು ಪರದಾಡುವಂತಾಯಿತು. ಹೆಬ್ಬಾಳದಿಂದ ಕೋಡಿಗೆಹಳ್ಳಿವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು. ಎಂಜಿ ರೋಡ್, ಮಾಗಡಿ ರೋಡ್, ಮೈಸೂರು ರೋಡ್, ಕೆಂಗೇರಿಯವರೆಗೆ ಮಳೆಯಿಂದಾಗಿ ಟ್ರಾಫಿಕ್​ ಜಾಮ್ ಉಂಟಾಯಿತು. ತುಮಕೂರು ರೋಡ್ ನಲ್ಲಿ ಟ್ರಾಫಿಕ್ ಜಾಮ್ ಜೋರಾಯಿತು. ಮಳೆ ಕಡಿಮೆಯಾಗಿದ್ದರೂ ರಾತ್ರಿಯವರೆಗೂ ಟ್ರಾಫಿಕ್ ಜಾಮ್ ಕಂಡು ಬಂತು. ಅಲ್ಲಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಅದರ ಮೇಲೆ ಓಡಾಡಿದ ವಾಹಗಳು ಅಲ್ಲಲ್ಲಿ ಕೆಟ್ಟು ನಿಂತವು.

ಅಂಡರ್ ಪಾಸ್​ಗಳಲ್ಲಿ ಕೆಟ್ಟು ನಿಂತ ವಾಹನಗಳು

ಬೆಂಗಳೂರಿನ ಹವಲಾರು ಕಡೆಗಳಲ್ಲಿ ಅಂಡರ್​ ಪಾಸ್​ ಕೆಳಗೆ ತುಂಬಿದ್ದ ನೀರಿನಲ್ಲಿ ವಾಹನಗಳು ಕೆಟ್ಟು ನಿಂತವು. ಇಂಥ ಪ್ರಕರಣಗಳಲ್ಲಿ ಹಲವಾರು ಮಂದಿ ಪ್ರಾಣಾಪಾಯಿಂದ ಪಾರಾದರು. ಶೇಷಾದ್ರಿಪುರದಲ್ಲಿ ಬಿಎಂಟಿಸಿ ಬಸ್​ ಕೆಟ್ಟು ನಿಂತ ಕಾರಣ ಆತಂಕ ಸೃಷ್ಟಿಯಾಗಿತ್ತು. ಸ್ಥಳೀಯರು ಬಸ್​ನಲ್ಲಿದ್ದ 22 ಮಂದಿಯನ್ನು ಕಾಪಾಡಿದರು.

ದಾಖಲಾದ ಮಳೆ (ಮಿಲಿಮೀಟರ್‌ಗಳಲ್ಲಿ)

ಹೊರಮಾವು(2) (ಮಹದೇವಪುರ): 80 ಮಿ.ಮೀ, ಕೊಡಿಗೇಹಳ್ಳಿ (ಯಲಹಂಕ): 78ಮಿ.ಮೀ, ವಿದ್ಯಾಪೀಠ (ದಕ್ಷಿಣ ವಲಯ) : 65.5 ಮಿ.ಮೀ, ಜಕ್ಕೂರು(1) (ಯಲಹಂಕ): 56 ಮಿ.ಮೀ, ಕಾಟನ್‌ಪೇಟೆ (ಪಶ್ಚಿಮ ವಲಯ): 55.5 ಮಿ.ಮೀ.
ಕೊಟ್ಟಿಗೆಪಾಳ್ಯ (ಆರ್‌ಆರ್‌ನಗರ): 54 ಮಿ.ಮೀ, ನಂದಿನಿಲೇಔಟ್ (ಪಶ್ಚಿಮ ವಲಯ): 52.5 ಮಿ.ಮೀ, ದಯಾನಂದನಗರ (ಪಶ್ಚಿಮ ವಲಯ): 49 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ (ಪಶ್ಚಿಮ ವಲಯ): 47.5 ಮಿ.ಮೀ, ಪೀಣ್ಯ ಸ್ಥಳೀಯ ಪ್ರದೇಶ (ದಾಸರಹಳ್ಳಿ): 45.5 ಮಿ.ಮೀ, ಯಲಹಂಕ (ಯಲಹಂಕ): 45.5 ಮಿ.ಮೀ, ವಿಶ್ವನಾಥ ನಾಗೇನಹಳ್ಳಿ (ಪೂರ್ವವಲಯ): 44.5 ಮಿ.ಮೀ, ಬೊಮ್ಮನಹಳ್ಳಿ (ಬೊಮ್ಮನಹಳ್ಳಿ ವಲಯ): 43.5 ಮಿ.ಮೀ, ಮಾರುತಿ ಮಂದಿರ ವಾರ್ಡ್ (ಪಶ್ಚಿಮ ವಲಯ): 43 ಮಿ.ಮೀ, ನಾಗಾಪುರ (ಪಶ್ಚಿಮ ವಲಯ): 41.5 ಮಿ.ಮೀ, ಹಂಪಿ ನಗರ (ದಕ್ಷಿಣ ವಲಯ): 40.5 ಮಿ.ಮೀ, ಸಂಪಂಗಿ ರಾಮನಗರ (1) (ಪೂರ್ವವಲಯ): 40 ಮಿ.ಮೀ, ಚೌಡೇಶ್ವರಿ ವಾರ್ಡ್ (ಯಲಹಂಕ): 39 ಮಿ.ಮೀ, ಬಿಟಿಎಂ ಲೇಔಟ್ (ದಕ್ಷಿಣ ವಲಯ): 38 ಮಿ.ಮೀ, ನಾಯಂಡಹಳ್ಳಿ (ಪಶ್ಚಿಮ ವಲಯ): 37 ಮಿ.ಮೀ, ಚಾಮರಾಜಪೇಟೆ (ಪಶ್ಚಿಮ ವಲಯ): 36.5 ಮಿ.ಮೀ, ಪುಲಕೇಶಿನಗರ (ಪೂರ್ವವಲಯ): 34.5 ಮಿ.ಮೀ, ಹೇರೋಹಳ್ಳಿ 33.5 ಮಿ.ಮೀ, ರಾಜಾಜಿನಗರ (ಪಶ್ಚಿಮ ವಲಯ): 33 ಮಿ.ಮೀ, ರಾಜರಾಜೇಶ್ವರಿ ನಗರ 31.5 ಮಿ.ಮೀ, ಉತ್ತರಹಳ್ಳಿ: 28 ಮಿ.ಮೀ, ಎಚ್ಎಸ್ಆರ್ ಲೇಔಟ್ ದಾಖಲಾದ 27.5 ಮಿ.ಮೀ, ಬಿಳೇಕಹಳ್ಳಿ (ಬೊಮ್ಮನಹಳ್ಳಿ ವಲಯ): 25.5 ಮಿ.ಮೀ, ದೊರೆಸಾನಿಪಾಳ್ಯ: 24.5 ಮಿ.ಮೀ, ಹೆಮ್ಮಿಗೆಪುರ 23.5 ಮಿ.ಮೀ, ಪಟ್ಟಾಭಿರಾಮನಗರ: 22 ಮಿ.ಮೀ, ಕುಶಾಲನಗರ 21 ಮಿ.ಮೀ, ಕೋಣನಕುಂಟೆ: 19.5 ಮಿ.ಮೀ.
ಸಿಂಗಸಂದ್ರ-2: 18.5 ಮಿ.ಮೀ, ಅರಕೆರೆ: 18.5 ಮಿ.ಮೀ, ರಾಜರಾಜೇಶ್ವರಿನಗರ: 18 ಮಿ.ಮೀ, ವಿದ್ಯಾರಣ್ಯಪುರ: 17.5 ಮಿ.ಮೀ, ದೊಡ್ಡನೆಕ್ಕುಂದಿ: 16.5 ಮಿ.ಮೀ, ಬಾಣಸವಾಡಿ: 15 ಮಿ.ಮೀ, ಮನೋರಾಯನಪಾಳ್ಯ: 15 ಮಿ.ಮೀ
ವನ್ನರಪೇಟ್: 14.5 ಮಿ.ಮೀ, ಹೆಮ್ಮಿಗೆಪುರ: 14 ಮಿ.ಮೀ, ಬೆಳ್ಳಂದೂರು: 13 ಮಿ.ಮೀ, ಹೊಯ್ಸಳನಗರ: 12 ಮಿ.ಮೀ, ಎಚ್.ಗೊಲ್ಲಹಳ್ಳಿ: 11.5 ಮಿ.ಮೀ, ಚೊಕ್ಕಸಂದ್ರ: 11 ಮಿ.ಮೀ, ಕಮ್ಮನಹಳ್ಳಿ: 10 ಮಿ.ಮೀ, ಹಾಲ್ ವಿಮಾನ ನಿಲ್ದಾಣ: 10 ಮಿ.ಮೀ, ಕೆಂಗೇರಿ: 10 ಮಿ.ಮೀ, ಎಚ್​ಎ ವಿಮಾನ ನಿಲ್ದಾಣ-2: 10 ಮಿ.ಮೀ, ಮಾರತ್ತಹಳ್ಳಿ: 10 ಮಿ.ಮೀ.

Continue Reading

ಕರ್ನಾಟಕ

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Bangalore Rain: ಬೆಂಗಳೂರಿನಲ್ಲಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ದುರಂತದ ಬಳಿಕ ಮತ್ತೊಂದು ದುರಂತ ತಪ್ಪಿದೆ. ಶೇಷಾದ್ರಿಪುರಂ ಅಂಡರ್ ಪಾಸ್‌ನ ನೀರಿನಲ್ಲಿ ಬಿಎಂಟಿಸಿ ಬಸ್ ಸಿಲುಕಿದ್ದು, 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಹಲವೆಡೆ ಭಾರಿ ಮಳೆಯಿಂದ ಹತ್ತಾರು ಮರಗಳು ಧರೆಗುರುಳಿದ್ದು, ಹಲವು ವಾಹನಗಳು ಜಖಂಗೊಂಡಿವೆ.

VISTARANEWS.COM


on

Bangalore Rain
Koo

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಬಿರುಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಇನ್ನು ಕೆಲವು ಕಡೆ ಬೃಹತ್‌ ಮರಗಳು ನೆಲಕ್ಕುರುಳಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.

ತಪ್ಪಿದ ಮತ್ತೊಂದು ದುರಂತ

ಕೆ.ಆರ್. ಸರ್ಕಲ್ ಅಂಡರ್ ಪಾಸ್ ದುರಂತದ ಬಳಿಕ ಮತ್ತೊಂದು ದುರಂತ ತಪ್ಪಿದೆ. ಶೇಷಾದ್ರಿಪುರಂ ಅಂಡರ್ ಪಾಸ್‌ನ ನೀರಿನಲ್ಲಿ ಬಿಎಂಟಿಸಿ ಬಸ್ ಸಿಲುಕಿದ್ದು, 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಮುಂದೆ ಮೂವ್ ಆಗ್ತಿದ್ದಂತೆ, ಅಪಾಯದ ಮುನ್ಸೂಚನೆ ಅರಿತು ಬಸ್ ಚಾಲಕ ಅಲ್ಲೇ ನಿಲ್ಲಿಸಿದ್ದಾರೆ. ನಂತರ ಬಸ್‌ನಲ್ಲಿದ್ದವರನ್ನು ಸ್ಥಳೀಯ ವ್ಯಕ್ತಿ ಮಣಿಕಂಠ ಹೊರ ಕರೆತಂದಿದ್ದಾರೆ. ಓರ್ವ ವೃದ್ಧೆ, ಇಬ್ಬರು ಮಹಿಳೆಯರು, ಮಗುವನ್ನು ಬಸ್‌ನಿಂದ ರಕ್ಷಣೆ ಮಾಡಲಾಗಿದೆ.

ಅಂಡರ್‌ಪಾಸ್‌ನಲ್ಲಿ ನೀರಿಗೆ ಬಿದ್ದ ಇಬ್ಬರು ಯುವಕರು

ಬಿರುಸಿನ ಮಳೆಯಿಂದ ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು K.R. ಸರ್ಕಲ್ ಅಂಡರ್ ಪಾಸ್‌ನಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಬ್ಯಾರಿಕೇಡ್ ಹಾಕಿ ಮುಚ್ಚಲಾಗಿತ್ತು. ಹೆಚ್ಚು ನೀರು ಇರುವುದು ತಿಳಿಯದೇ ಬೈಕ್‌ನಲ್ಲಿ ವೇಗವಾಗಿ ಬಂದ ಇಬ್ಬರು ಯುವಕರು ನೀರಿಗೆ ಬಿದ್ದಿದ್ದು, ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.‌

ಮೆಟ್ರೋ ವಯಡಕ್ಟ್ ಮೇಲೆ ಬಿದ್ದ ಮರ

ಸಂಜೆ ಭಾರಿ ಮಳೆಯಿಂದಾಗಿ ಎಂಜಿ ರಸ್ತೆ ಮತ್ತು ಟ್ರಿನಿಟಿ ರೋಡ್‌ ನಿಲ್ದಾಣದ ನಡುವಿನ ವಯಡಕ್ಟ್ ಟ್ರ್ಯಾಕ್‌ನಲ್ಲಿ ಮರ ಬಿದ್ದ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಮತ್ತು ಇಂದಿರಾನಗರ ನಡುವೆ ರೈಲು ಸೇವೆ ಸ್ಥಗಿತಗೊಂಡಿದೆ. ಆದರೆ, ಇಂದಿರಾನಗರ ಮತ್ತು ವೈಟ್‌ಫೀಲ್ಡ್ ನಡುವೆ ಶಾರ್ಟ್ ಲೂಪ್‌ಗಳು ಚಾಲನೆಯಲ್ಲಿವೆ. ಚಲ್ಲಘಟ್ಟ ಮತ್ತು ಎಂಜಿ ರೋಡ್ ನಡುವೆ
ಉಂಟಾದ ಅನನುಕೂಲತೆ ಬಗ್ಗೆ ಬಿಎಂಆರ್‌ಸಿಎಲ್‌ ವಿಷಾದ ವ್ಯಕ್ತಪಡಿಸಿದೆ.

ನಗರದ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭ ನಗರ, ಜಯನಗರ, ಪೀಣ್ಯ, ಬನ್ನೇರುಘಟ್ಟ ರಸ್ತೆ, ಮಲ್ಲೇಶ್ವರ, ರೇಸ್ ಕೋರ್ಸ್, ವಿಜಯನಗರ, ಶಾಂತಿನಗರ, ಎಂಜಿ ರೋಡ್, ಕೆ.ಆರ್ ಸರ್ಕಲ್, ಚಾಲುಕ್ಯ ಸರ್ಕಲ್ ಸೇರಿದಂತೆ ಹಲವು ಕಡೆ ಬಿರುಸಿನ ಮಳೆಯಾಗಿದೆ.

ಮರಗಳು ಬಿದ್ದು ಹಲವು ವಾಹನ ಜಖಂ

ಭಾರಿ ಮಳೆಯಿಂದ ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಜಯನಗರ-ಬನ್ನೇರುಘಟ್ಟ ರಸ್ತೆ, ಪೀಣ್ಯ ಬಳಿ ಮರಗಳು ನೆಲಕ್ಕುರುಳಿವೆ. ಪೀಣ್ಯದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದ್ದು, ಕಾರಿನಲ್ಲಿ ಸಿಲುಕಿರುವ ಚಾಲಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು ಬನ್ನೇರುಘಟ್ಟ ರಸ್ತೆ ವೆಗಾ ಸಿಟಿ ಮಾಲ್ ಬಳಿ ಮರ ಧರೆಗುರುಳಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅದೇ ರೀತಿ ಜಯನಗರದ 4ನೇ ಟಿ ಬ್ಲಾಕ್ ಬಳಿ ಮರ ಧರೆಗುರುಳಿದಿದೆ, ರಾಜಾಜಿನಗರದ ಮಂಜುನಾಥನಗರದಲ್ಲಿ ಮರ ಬಿದ್ದಿದೆ. ಬಸವನಗುಡಿ ರಾಮಕೃಷ್ಣ ಆಶ್ರಮ ಬಳಿ ಮತ್ತು ಕೆಜಿ ರಸ್ತೆ ಪೋತೀಸ್ ಮುಂಭಾಗ ಬೃಹತ್ ಮರ ಧರೆಗಿರುಳಿದೆ. ಹುಳಿಮಾವು ರಸ್ತೆಯಲ್ಲಿ ಮರ ಧರೆಗುರುಳಿದಿದ್ದು, ಪಾನಿಪುರಿ ಅಂಗಡಿ, ಸುಮಾರು 10 ಬೈಕ್‌ಗಳು ಜಖಂಗೊಂಡಿವೆ.

ಇದನ್ನೂ ಓದಿ | Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

ಇನ್ನು ಹಲವು ಕಡೆ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೋವಿಂದರಾಜ ನಗರದ ಪಟ್ಟೇಗಾರ ಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜೋರಾದ ಮಳೆ ಹಿನ್ನೆಲೆ ಪ್ರಮುಖ ರಸ್ತೆಗಳು ಹೊಳೆಯಂತೆ ಬದಲಾಗಿದ್ದರಿಂದ ಬೈಕ್ ಸವಾರರು ಪರದಾಡಿದರು. ಹಲವೆಡೆ ವಾಹನಗಳು ಕೆಟ್ಟುನಿಂತು ಸವಾರರು ತೊಂದರೆಪಟ್ಟರು.

Continue Reading

ಕರ್ನಾಟಕ

Pro-Palestinian Protest: ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ; ಮಹಿಳೆಯರು ಸೇರಿ ಹಲವರು ವಶಕ್ಕೆ

Pro-Palestinian Protest: ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಹೋರಾಟ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.

VISTARANEWS.COM


on

Pro-Palestinian Protest
Koo

ಬೆಂಗಳೂರು: ನಗರದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ (Pro-Palestinian Protest) ನಡೆಸುತ್ತಿದ್ದ ಮಹಿಳೆಯರು ಸೇರಿ ಹಲವರನ್ನು ವಶಕ್ಕೆ ಪಡೆದ ಘಟನೆ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ದಾಳಿ ಖಂಡಿಸಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಅದೇ ರೀತಿ ನಗರದ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರು ಸೇರಿ ಹಲವರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ ಠಾಣೆಗೆ ಕರೆದೊಯ್ದ ವೇಳೆ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿ ಮಹಿಳೆ ಹೈಡ್ರಾಮಾ ಸೃಷ್ಟಿಸಿದ್ದಾಳೆ.

ಪ್ಯಾಲೆಸ್ತೀನ್‌ ಪರ ʼಆಲ್‌ ಐಸ್‌ ಆನ್‌ ರಫಾʼ ಅಭಿಯಾನ

ದಕ್ಷಿಣ ಗಾಝಾ ನಗರವಾದ ರಫಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ವಾಯು ದಾಳಿ ಬಗ್ಗೆ ಹಲವು ದೇಶಗಳಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ʼಆಲ್‌ ಐಸ್‌ ಆನ್‌ ರಫಾʼ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲವರು ರಫಾ ನಗರದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

‘ಆಲ್ ಐಸ್ ಆನ್ ರಫಾ’ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ, ಅಲ್ಲಿ ಇಸ್ರೇಲ್‌ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಪ್ಯಾಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ. ‘ರಫಾ ಮೇಲೆ ಎಲ್ಲರ ಕಣ್ಣುಗಳು’ ಚಿತ್ರವು ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡುತ್ತದೆ.

ಇದನ್ನೂ ಓದಿ | Congress leader Celebration: ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ಕಾಂಗ್ರೆಸ್‌ ಮುಖಂಡ; ವಿಡಿಯೊ ವೈರಲ್‌

ರಫಾವನ್ನು ಹಮಾಸ್‌ ಉಗ್ರರ ಭದ್ರಕೋಟೆ ಎಂದಿದ್ದ ಇಸ್ರೇಲ್‌ ಪ್ರಧಾನಿ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಆಶ್ರಯ ಪಡೆದಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ 45ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ನ ಇತ್ತೀಚಿನ ದಾಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಈ ಸಾಲಿನಲ್ಲಿ ಹಲವು ಭಾರತೀಯ ಸೆಲೆಬ್ರಿಟಿಗಳು ಸಹ ಸೇರಿದ್ದಾರೆ.

Continue Reading

ಪ್ರಮುಖ ಸುದ್ದಿ

Bangalore Rural Lok Sabha Constituency : ಡಿ.ಕೆ ಸುರೇಶ್​​ ನಾಗಾಲೋಟಕ್ಕೆ ಡಾ. ಮಂಜುನಾಥ್​ ಅಡ್ಡಿಯಾಗುವ ಆತಂಕ

Bangalore Rural Lok Sabha Constituency : ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿಲ್ಲಿಸಿದೆ.

VISTARANEWS.COM


on

Bangalore Rural Lok Sabha Constituency
Koo

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ (Bangalore Rural Lok Sabha Constituency) 24 ಲಕ್ಷ ಮತದಾರರನ್ನು ಹೊಂದಿರುವ ದೇಶದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಾನವು 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂತು. ಇಲ್ಲಿ ಮೊದಲ ಚುನಾವಣೆ 2009ರಲ್ಲಿ ಇಲ್ಲಿ ನಡೆಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ (JDS) ನಾಯಕ ಎಚ್.ಡಿ.ಕುಮಾರಸ್ವಾಮಿ (HD kumaraswmay) ಈ ಕ್ಷೇತ್ರದ ಮೊದಲ ಸಂಸದ. ಆದರೆ, 2013ರ ಉಪಚುನಾವಣೆ ಸೇರಿದಂತೆ ಸತತ ಎರಡು ಬಾರಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದುಕೊಂಡಿದೆ. ಇಲ್ಲಿನ ಹಾಲಿ ಸಂಸದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರ ಸಹೋದರ ಡಿ.ಕೆ ಸುರೇಶ್​.

ಕ್ಷೇತ್ರ ವಿಂಗಡಣೆಗೆ ಮೊದಲು ಇದನ್ನು ಕನಕಪುರ ಲೋಕಸಭಾ ಕ್ಷೇತ್ರವಾಗಿ ಗುರುತಿಸಲಾಗಿತ್ತು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ಇಲ್ಲಿ ಕೊನೇ ಬಾರಿ ಗೆದ್ದಿದ್ದರು. ಎಂ.ವಿ.ಚಂದ್ರಶೇಖರ ಮೂರ್ತಿ ಈ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಅವುಗಳಲ್ಲಿ ಏಳು ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದವು. ತುಮಕೂರು ಜಿಲ್ಲೆಯ ಕುಣಿಗಲ್ ಜೊತೆಗೆ ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ರಾಜರಾಜೇಶ್ವರಿ ನಗರ ಹೊಸ ವಿಧಾನಸಭಾ ಕ್ಷೇತ್ರಗಳು ಇದರ ಭಾಗವಾಗಿವೆ.

ಡಿಕೆಸು ವೇಗಕ್ಕೆ ಅಡ್ಡಿಯಾಗುವರೇ ಮಂಜುನಾಥ್​​?

ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಎಚ್.ಡಿ.ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಅವರನ್ನು ನಿಲ್ಲಿಸಿದೆ.

ಇಲ್ಲಿ ಗೆದ್ದವರು ಯಾರು?

2014ರ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಅವರನ್ನು 2.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸುರೇಶ್ 6.52 ಲಕ್ಷ ಮತಗಳನ್ನು ಪಡೆದರೆ, ದೇವೇಗೌಡರು 4.21 ಲಕ್ಷ ಮತಗಳನ್ನು ಮಾತ್ರ ಪಡೆದರು.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಅಶ್ವತ್ಥನಾರಾಯಣ ಗೌಡ ಅವರನ್ನು 2,06,870 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 2019 ರಲ್ಲಿ ಕಾಂಗ್ರೆಸ್ 54.12% ಮತಗಳನ್ನು ಹೊಂದಿತ್ತು.

ಇದನ್ನೂ ಓದಿ: Bangalore Central Election : ಮನ್ಸೂರ್ ಅಲಿ ಖಾನ್ ವಿರುದ್ಧ ಗೆದ್ದು ಅಜೇಯ ಓಟ ಮುಂದುವರಿಸುವರೇ ಪಿ. ಸಿ ಮೋಹನ್​

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಪಿ ಅವರನ್ನು 2,31,480 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 44.76% ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯ ಸಿ.ಪಿ.ಯೋಗೀಶ್ವರ್ ಅವರನ್ನು 1,30,275 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.44.73ರಷ್ಟು ಮತಗಳನ್ನು ಪಡೆದಿತ್ತು.

ವ್ಯಾಪ್ತಿ ಹೇಗಿದೆ?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಬಿಜೆಪಿ 2, ಜೆಡಿಎಸ್ 1 ಸ್ಥಾನ ಹೊಂದಿವೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು ಮತದಾರರ ಸಂಖ್ಯೆ 24,97,458. 2019ರಲ್ಲಿ ಶೇ.64.9ರಷ್ಟು ಮತದಾನವಾಗಿತ್ತು. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರ ಪೈಕಿ 54.2% ರಷ್ಟಿದ್ದಾರೆ. ಸರಾಸರಿ ಸಾಕ್ಷರತಾ ಪ್ರಮಾಣವು 68.91% ಆಗಿತ್ತು.

Continue Reading
Advertisement
Tattoo Care
ಆರೋಗ್ಯ7 mins ago

Tattoo Care: ಟ್ಯಾಟೂ ಪ್ರಿಯರೇ ಹುಷಾರ್‌! ಎಚ್‌ಐವಿ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು!

Banglore rain
ಪ್ರಮುಖ ಸುದ್ದಿ37 mins ago

Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

Chamarajanagar Lok Sabha Constituency
ಪ್ರಮುಖ ಸುದ್ದಿ37 mins ago

Chamarajanagar Lok Sabha Constituency : ಚಾಮರಾಜನಗರ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್​​ಗೆ ತವಕ

Dina Bhavishya
ಭವಿಷ್ಯ37 mins ago

Dina Bhavishya : ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ

Amul Milk
ದೇಶ5 hours ago

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Odisha Assembly Election
ದೇಶ6 hours ago

Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

Mysore lok sabha constituency
ಪ್ರಮುಖ ಸುದ್ದಿ7 hours ago

Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

Haveri Lok Sabha Constituency
ಹಾವೇರಿ8 hours ago

Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Hyderabad City : Hyderabad no longer joint capital of Andhra Pradesh, Telangana from today
ಪ್ರಮುಖ ಸುದ್ದಿ8 hours ago

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Loksabha Election 2024
Lok Sabha Election 20248 hours ago

Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ19 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌