WPL 2024: 2ನೇ ಆವೃತ್ತಿಯ ಡಬ್ಲ್ಯೂಪಿಎಲ್​ಗೆ ದಿನಗಣನೆ; ಅಭ್ಯಾಸ ಆರಂಭಿಸಿದ ಆಟಗಾರ್ತಿಯರು - Vistara News

ಕ್ರೀಡೆ

WPL 2024: 2ನೇ ಆವೃತ್ತಿಯ ಡಬ್ಲ್ಯೂಪಿಎಲ್​ಗೆ ದಿನಗಣನೆ; ಅಭ್ಯಾಸ ಆರಂಭಿಸಿದ ಆಟಗಾರ್ತಿಯರು

ಡಬ್ಲ್ಯೂಪಿಎಲ್ (WPL 2024) ನ ಎರಡನೇ ಆವೃತ್ತಿ ಫೆಬ್ರವರಿ 23ರಂದು ಬೆಂಗಳೂರಿನಲ್ಲಿ ಟೂರ್ನಿ ಆರಂಭವಾಗಲಿದೆ.

VISTARANEWS.COM


on

Mumbai Indians
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಹಿಳಾ ಕ್ರಿಕೆಟಿಗರ ವರ್ಣರಂಜಿತ ಟಿ20 ಕ್ರಿಕೆಟ್​ ಲೀಗ್ ಡಬ್ಲ್ಯೂಪಿಎಲ್ (WPL 2024) ನ ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 23ರಂದು ಬೆಂಗಳೂರಿನಲ್ಲಿ ಟೂರ್ನಿ ಆರಂಭವಾಗಲಿದ್ದು ಮಾರ್ಚ್ 17ರಂದು ನವದೆಹಲಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಗಾಗಿ ಎಲ್ಲ 5 ತಂಡಗಳು ಕೂಡ ಭರ್ಜರಿ ತಯಾರಿ ಆರಂಭಿಸಿದೆ. ಎಲ್ಲ ತಂಡಗಳು ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಆಯಾ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಕಳೆದ ವರ್ಷ ಸಂಪೂರ್ಣವಾಗಿ ಮುಂಬೈನಲ್ಲಿ ಟೂರ್ನಿ ನಡೆದಿತ್ತು. ಈ ಬಾರಿ ಬೆಂಗಳೂರು ಮತ್ತು ದೆಹಲಿಯಲ್ಲಿಯೂ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ ಅಭ್ಯಾಸ

ಡಬ್ಲ್ಯೂಪಿಎಲ್ನ 2024 ರ ಋತುವು ಕಳೆದ ವರ್ಷದಂತೆ ಅದೇ ಸ್ವರೂಪದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ತಂಡಗಳು ಪ್ಲೇ ಆಫ್​ಗಳಿಗೆ ಅರ್ಹತೆ ಪಡೆಯುತ್ತವೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಮಾರ್ಚ್ 15 ರಂದು ಎಲಿಮಿನೇಟರ್​ನಲ್ಲಿ ಆಡಲಿವೆ.

ಇದನ್ನೂ ಓದಿ Ravindra Jadeja : ಸರ್ಫರಾಜ್​ ಖಾನ್​ ಕ್ಷಮೆ ಕೋರಿದ ರವೀಂದ್ರ ಜಡೇಜಾ!

ಆರ್​ಸಿಬಿ ತಂಡದ ಅಭ್ಯಾಸ

ಪೂರ್ಣ ವೇಳಾಪಟ್ಟಿ


ಫೆಬ್ರವರಿ 23- ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು

ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು

ಫೆಬ್ರವರಿ 25- ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು

ಫೆಬ್ರವರಿ 26 -ಯುಪಿ ವಾರಿಯರ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು

ಫೆಬ್ರವರಿ 27- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್: ಬೆಂಗಳೂರು

ಫೆಬ್ರವರಿ 28- ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು

ಫೆಬ್ರವರಿ 29- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು

ಮಾರ್ಚ್ 1-ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್; ಬೆಂಗಳೂರು

ಮಾರ್ಚ್ 2-ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು

ಮಾರ್ಚ್ 3- ಗುಜರಾತ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು

ಮಾರ್ಚ್ 4- ಯುಪಿ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಬೆಂಗಳೂರು

ಮಾರ್ಚ್ 5 -ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ

ಮಾರ್ಚ್ 6 – ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ

ಮಾರ್ಚ್ 7 – ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ

ಮಾರ್ಚ್ 8 – ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ

ಮಾರ್ಚ್ 9-ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ

ಮಾರ್ಚ್ 10-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ

ಮಾರ್ಚ್ 11- ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ

ಮಾರ್ಚ್ 12- ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು; ದೆಹಲಿ

ಮಾರ್ಚ್ 13-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ

ಮಾರ್ಚ್ 15 -ಎಲಿಮಿನೇಟರ್: ದೆಹಲಿ

ಮಾರ್ಚ್ 17 -ಫೈನಲ್: ದೆಹಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Shakib Al Hasan: ನಿವೃತ್ತಿಯಾಗಿ ಎಂದು ಲೇವಡಿ ಮಾಡಿದ ಸೆಹವಾಗ್​ಗೆ ತಕ್ಕ ತಿರುಗೇಟು ನೀಡಿದ ಬಾಂಗ್ಲಾ ನಾಯಕ

Shakib Al Hasan: ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಶಕೀಬ್​ ಅವರು ಅಜೇಯ 64 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಈ ಮ್ಯಾಚ್​ ವಿನ್ನಿಂಗ್​ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು.

VISTARANEWS.COM


on

Shakib Al Hasan
Koo

ನ್ಯೂಯಾರ್ಕ್​: ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್​ ಅಲ್​ ಹಸನ್(Shakib Al Hasan)​ ಅವರನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಕೈಬಿಟ್ಟರೆ ಉತ್ತಮ ಎಂದು ಹೇಳಿದ್ದ ಟೀಮ್​ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್​ಗೆ(Virender Sehwag) ಶಕೀಬ್​ ತಿರಿಗೇಟು ನೀಡಿದ್ದಾರೆ.

ಗುರುವಾರ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೆದರ್ಲೆಂಡ್ಸ್(Bangladesh vs Netherlands)​ ವಿರುದ್ಧ 25 ರನ್​ ಅಂತರದ ಗೆಲುವು ಸಾಧಿಸಿ ಸೂಪರ್​-8 ಪ್ರವೇಶವನ್ನು ಜೀವಂತವಾಗಿ ಇರಿಸಿದೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಶಕೀಬ್​, ಯಾವುದೇ ತಂಡದ ಆಟಗಾರರು ಮೂರನೇ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರಿಸಲು ಆಡುತ್ತಿಲ್ಲ. ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಜವಾಬ್ದಾರಿಯಿಂದ ಅಷ್ಟೇ. ಅದು ಒಬ್ಬ ಬ್ಯಾಟ್ಸ್​ಮನ್​, ಬೌಲರ್ ಅಥವಾ ಫೀಲ್ಡರ್​ ಆಗಿಯೂ ಇರಬಹುದು. ಕೊಡುಗೆ ನೀಡುವಲ್ಲಿ ವಿಫಲರಾದರೆ, ತಮ್ಮ ಫಾರ್ಮ್​ ಬಗ್ಗೆ ಇಂತಹ ಟೀಕೆಗಳು ಕೇಳಿಬರುವುದು ಸಾಮಾನ್ಯ ಎಂದು ಹೇಳುವ ಮೂಲಕ ಸೆಹವಾಗ್​ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಸೆಹವಾಗ್​ ಹೇಳಿದ್ದೇನು?


ನನ್ನ ಪ್ರಕಾರ, ಶಕೀಬ್ ಅಲ್​ ಹಸನ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆಯುವುದೇ ಉತ್ತಮ. ಶಕೀಬ್​ ಅವರನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಂದೇ ಕೈಬಿಡಬೇಕಿತ್ತು. ಅವರನ್ನು ಆಡಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ಸೆಹವಾಗ್​ ಲೇವಡಿ ಮಾಡಿದ್ದರು. ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಶಕೀಬ್​ ಅವರು ಅಜೇಯ 64 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಈ ಮ್ಯಾಚ್​ ವಿನ್ನಿಂಗ್​ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು.


ಬಾಂಗ್ಲಾದೇಶ ತಂಡ ‘ಸಿ’ ಗುಂಪಿನಲ್ಲಿ ಸದ್ಯ 4 ಅಂಕದೊಂದಿಗೆ 2ನೇ ಸ್ಥಾನಿಯಾಗಿದೆ. ಸೂಪರ್​ 8 ಹಂತಕ್ಕೇರಲು ನೆಪಾಳ ವಿರುದ್ಧ ನಡೆಯುವ ಅಂತಿಮ ಲೀಗ್​ ಪಂದ್ಯದಲ್ಲಿ ಗೆಲ್ಲಲೇ ಬೇಕು. ಒಂದು ವೇಳೆ ಬಾಂಗ್ಲಾದೇಶ ಈ ಪಂದ್ಯದಲ್ಲಿ ಸೋತು, ಶ್ರೀಲಂಕಾ ವಿರುದ್ಧ ನೆದರ್ಲೆಂಡ್ ಸೋತರೆ ಬಾಂಗ್ಲಾ ತಂಡವೇ ಸೂಪರ್​ 8ಗೆ ಪ್ರವೇಶಿಸುತ್ತದೆ.

ಇದನ್ನೂ ಓದಿ T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನವೇ ತವರಿಗೆ ಮರಳಲು ಸಿದ್ಧರಾದ ಟೀಮ್​ ಇಂಡಿಯಾದ ಇಬ್ಬರು ಆಟಗಾರರು​

ಟಿ20 ವಿಶ್ವಕಪ್​ನಿಂದ ಹೊರಬಿದ್ದ ನ್ಯೂಜಿಲ್ಯಾಂಡ್​


ಶುಕ್ರವಾರ ನಡೆದ ಟಿ20 ವಿಶ್ವಕಪ್​ನ ‘ಸಿ’ ವಿಭಾಗದ ಪಂದ್ಯದಲ್ಲಿ ಅಫಘಾನಿಸ್ತಾನ(PNG vs AFG) ತಂಡ ಪಪುವಾ ನ್ಯೂ ಗಿನಿಯಾ ವಿರುದ್ಧ 7 ವಿಕೆಟ್​ ಅಂತರದ ಗೆಲುವು ಸಾಧಿಸುವ ಮೂಲಕ ಸೂಪರ್​-8 ಹಂತಕ್ಕೆ ಪ್ರವೇಶ ಪಡೆದಿದೆ. ಅಫಘಾನಿಸ್ತಾನ ಗೆಲುವಿನಿಂದ ನ್ಯೂಜಿಲ್ಯಾಂಡ್(New Zealand)​ ತಂಡ ಟೂರ್ನಿಯಿಂದ ಹೊರಬಿದ್ದಿತು.

ಇಲ್ಲಿನ ಟರೂಬದಲ್ಲಿರುವ ಬ್ರಿಯಾನ್‌ ಲಾರಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಪಪುವಾ ನ್ಯೂ ಗಿನಿಯಾ ತಂಡ ಫಜಲ್ಹಕ್ ಫಾರೂಕಿ ಮತ್ತು ನವೀನ್​ ಉಲ್​ ಹಕ್​ ಅವರ ಘಾತಕ ದಾಳಿಗೆ ನಲುಗಿ 95 ರನ್​ಗೆ ಸರ್ವಪತನ ಕಂಡಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಅಫಘಾನಿಸ್ತಾನ 15.1 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 101 ರನ್​ ಬಾರಿಸಿ ಗೆಲುವು ದಾಖಲಿಸಿತು. ಅತ್ತ ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ನ್ಯೂಜಿಲ್ಯಾಂಡ್‌ ಈ ಬಾರಿ ಲೀಗ್​ನಿಂದಲೇ ಹೊರಬಿದ್ದ ಅವಮಾನಕ್ಕೆ ಸಿಲುಕಿತು.

Continue Reading

ಕ್ರೀಡೆ

Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

Euro Cup 2024: ಒಟ್ಟು 24 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, 6 ಗುಂಪುಗಳನ್ನು ಮಾಡಲಾಗಿದೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಫ್ರಾನ್ಸ್‌ನ ಕೀಲಿಯನ್ ಎಂಬಾಪೆ ಅವರು ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ

VISTARANEWS.COM


on

Euro Cup 2024
Koo

ಮ್ಯೂನಿಚ್: ಫುಟ್ಬಾಲ್​ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದ ಪ್ರತಿಷ್ಠಿತ ಕಾಲ್ಚೆಂಡಿನ ಕಾಳಗ ಯುರೋ ಕಪ್(Euro Cup 2024) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಈ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ನಡೆಯಲಿರುವ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಜರ್ಮನಿ 28 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.

ಒಟ್ಟು 5 ಗುಂಪುಗಳು


ಒಟ್ಟು 24 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, 6 ಗುಂಪುಗಳನ್ನು ಮಾಡಲಾಗಿದೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಫ್ರಾನ್ಸ್‌ನ ಕೀಲಿಯನ್ ಎಂಬಾಪೆ ಅವರು ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅಚ್ಚರಿ ಎಂದರೆ 2014ರ ವಿಶ್ವಕಪ್ ಜಯಿಸಿದ್ದ ಜರ್ಮನಿ ತಂಡಕ್ಕೆ ನಾಯಕರಾಗಿದ್ದ ಫಿಲಿಪ್ ಲಾಮ್ ಈಗ ಯುರೋ 2024 ಟೂರ್ನಿಯ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ Lionel Messi Retirement: ನಿವೃತ್ತಿಯ ಸುಳಿವು ನೀಡಿದ ಲಿಯೋನೆಲ್​ ಮೆಸ್ಸಿ

ತಂಡಗಳು


A ಗುಂಪಿನ ತಂಡಗಳು: ಜರ್ಮನಿ, ಸ್ಕಾಟ್ಲೆಂಡ್​, ಹಂಗೆರಿ, ಸ್ವಿಜರ್ಲೆಂಡ್​

B ಗುಂಪಿನ ತಂಡಗಳು; ಸ್ಪೇನ್​, ಕ್ರೊವೇಷಿಯಾ, ಇಟಲಿ, ಅಲ್ಬೆನಿಯಾ

C ಗುಂಪಿನ ತಂಡಗಳು: ಇಂಗ್ಲೆಂಡ್​, ಸ್ಲವೆನಿಯಾ, ಡನ್ಮಾರ್ಕ್​, ಸರ್ಬಿಯಾ

D ಗುಂಪಿನ ತಂಡಗಳು: ಪೋಲೆಂಡ್​, ನೆದರ್ಲೆಂಡ್​, ಆಸ್ಟ್ರೀಯಾ, ಫ್ರಾನ್ಸ್​.

E ಗುಂಪಿನ ತಂಡಗಳು: ಬೆಲ್ಜಿಯಂ, ಸ್ಲೊವಾಕಿಯಾ, ರೊಮೆನಿಯಾ, ಯುಕ್ರೇನ್​

F ಗುಂಪಿನ ತಂಡಗಳು:​ ಪೋರ್ಚುಗಲ್​, ಟರ್ಕಿ, ಜಾರ್ಜಿಯಾ, ಜೆಕ್​ ಗಣರಾಜ್ಯ

ಬಹುಮಾನ ಮೊತ್ತ


ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ತಂಡಕ್ಕೆ ಬರೋಬ್ಬರಿ 71.87 ಕೋಟಿ ರೂ. ಸಿಗಲಿದೆ. ರನ್ನರ್​ ಅಪ್​ ತಂಡ 44.92 ಕೋಟಿ ರೂ. ಪಡೆಯಲಿದೆ. ಸೆಮಿಫೈನಲ್​, ಕ್ವಾರ್ಟರ್​ ಫೈನಲ್​ ಮತ್ತು ಪ್ರೀ ಕ್ವಾರ್ಟರ್​ ಫೈನಲ್​ ತಲುಪಿದ ತಂಡಗಳಿಗೆ ಕ್ರಮವಾಗಿ ತಲಾ, 35.93 ಕೋಟಿ, 22.46 ಕೋಟಿ, 13.47 ಕೋಟಿ ರೂ. ಸಿಗಲಿದೆ. ಇದು ಮಾತ್ರವಲ್ಲದೆ ಪ್ರತಿ ಪಂದ್ಯದ ಗೆಲುವಿಗೆ 8.98 ಕೋಟಿ ಮತ್ತು ಡ್ರಾ ಗೊಂಡ ಪಂದ್ಯದ ತಂಡಗಗಳಿಗೆ 4.49 ಕೋಟಿ ರೂ. ಲಭಿಸಲಿದೆ. ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತ 2,973(331 ದಶಲಕ್ಷ ಯುರೋ) ಕೋಟಿ ರೂ. ಆಗಿದೆ.

ಪಂದ್ಯ ಆರಂಭ: ರಾತ್ರಿ 12.30, ನೇರಪ್ರಸಾರ : ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.

Continue Reading

ಕ್ರೀಡೆ

T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನವೇ ತವರಿಗೆ ಮರಳಲು ಸಿದ್ಧರಾದ ಟೀಮ್​ ಇಂಡಿಯಾದ ಇಬ್ಬರು ಆಟಗಾರರು​

T20 World Cup 2024: ಭಾರತವು ಅಮೆರಿಕದಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಶುಭಮನ್​ ಗಿಲ್(Shubman Gill)​ ಮತ್ತು ಅವೇಶ್​ ಖಾನ್(Avesh Khan)​ ತವರಿಗೆ ಮರಳಲಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಜೂನ್​ 15ರಂದು ಉಭಯ ಆಟಗಾರರು ಭಾರತಕ್ಕೆ ವಾಪಸ್‌ ಆಗಲಿದ್ದಾರೆ ಎಂದು ತಿಳಿಸಿದೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್: ಭಾರತ ಕ್ರಿಕೆಟ್ ತಂಡವು ಈಗಾಗಲೇ 2024 ರ ಟಿ20 ವಿಶ್ವಕಪ್‌(T20 World Cup 2024) ಟೂರ್ನಿಯಲ್ಲಿ ಸೂಪರ್ 8 ಹಂತಕೇರಿದೆ. ಸೂಪರ್ 8 ಮತ್ತು ನಾಕೌಟ್ ಹಂತಕ್ಕಾಗಿ ವೆಸ್ಟ್ ಇಂಡೀಸ್‌ಗೆ ತೆರಳುವ ಮೊದಲು ಭಾರತವು ಅಮೆರಿಕದಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಶುಭಮನ್​ ಗಿಲ್(Shubman Gill)​ ಮತ್ತು ಅವೇಶ್​ ಖಾನ್(Avesh Khan)​ ತವರಿಗೆ ಮರಳಲಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಜೂನ್​ 15ರಂದು ಉಭಯ ಆಟಗಾರರು ಭಾರತಕ್ಕೆ ವಾಪಸ್‌ ಆಗಲಿದ್ದಾರೆ ಎಂದು ತಿಳಿಸಿದೆ.

ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ತಂಡದಲ್ಲಿ ಪ್ರಯಾಣ ಮೀಸಲು ಭಾಗವಾಗಿ ಸ್ಥಾನ ಪಡೆದಿದ್ದರು. ಇವರ ಜತೆ ಸ್ಥಾನ ಪಡೆದಿದ್ದ ರಿಂಕು ಸಿಂಗ್(Rinku Singh) ಮತ್ತು ಖಲೀಲ್ ಅಹ್ಮದ್(Khaleel Ahmed) ತಂಡದ ಜತೆಗೆ ಇರಲಿದ್ದಾರೆ ಎನ್ನಲಾಗಿದೆ. ಗಿಲ್​ ಮತ್ತು ಅವೇಶ್​ ತವರಿಗೆ ಮರಳಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಉಭಯ ಆಟಗಾರರು ತಂಡದೊಂದಿಗೆ ಇದ್ದರೂ ಕೂಡ ಇವರಿಗೆ ಆಡುವ ಅವಕಾಶವಿಲ್ಲ. ಏಕೆಂದರೆ ಇವರು ಪ್ರಧಾನ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿಲ್ಲ.

ಭಾರತ ತನ್ನ ಕೊನೆಯ ಲೀಗ್​ ಪಂದ್ಯವನ್ನು ಜೂನ್​ 15ರಂದು ಕೆನಡಾ ವಿರುದ್ಧ ಆಡಲಿದೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಈ ಪಂದ್ಯಕ್ಕೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಪಂದ್ಯ ರದ್ದಾದರೂ ಕೂಡ ಭಾರತಕ್ಕೆ ಯಾವುದೇ ನಷ್ಟ ಸಂಭವಿಸದು. ಏಕೆಂದರೆ ಭಾರತ ಈಗಾಗಲೇ ಸೂಪರ್​-8 ಪ್ರವೇಶ ಪಡೆದಾಗಿದೆ. ಹೀಗಾಗಿ ಈ ಪಂದ್ಯ ಭಾರತದ ಪಾಲಿಗೆ ಔಪಚಾರಿಕ ಪಂದ್ಯವಿದ್ದಂತೆ.

ಇದನ್ನೂ ಓದಿ PNG vs AFG: ಆಫ್ಘಾನ್​ಗೆ ಗೆಲುವು; ಟಿ20 ವಿಶ್ವಕಪ್​ನಿಂದ ಹೊರಬಿದ್ದ ನ್ಯೂಜಿಲ್ಯಾಂಡ್​

ನ್ಯೂಯಾರ್ಕ್‌ ಪಿಚ್‌ನಲ್ಲಿ ಆಡುವುದು ಸುಲಭವಲ್ಲ: ರೋಹಿತ್​


ಸತತ ಮೂರು ಗೆಲುವು ಸಾಧಿಸಿ ಸೂಪರ್​-8 ಪ್ರವೇಶ ಪಡೆದಿದ್ದರೂ ಕೂಡ ಟೀಮ್​ ಇಂಡಿಯಾದ(Team India) ನಾಯಕ ರೋಹಿತ್​ ಶರ್ಮ(Rohit Sharma) ಅವರು ನ್ಯೂಯಾರ್ಕ್​ನಲ್ಲಿ ಆಡಿದ್ದು ನಿಜಕ್ಕೂ ಸವಾಲಿನಿಂದ ಕೂಡಿತ್ತು ಎಂದು ಹೇಳಿದ್ದಾರೆ.

‘ನಾವು ಮೂರು ಪಂದ್ಯಗಳನ್ನು ಗೆದ್ದಿರಬಹುದು. ಆದರೆ, ಈ ಪಂದ್ಯ ಗೆಲ್ಲಲು ನಾವು ಪಟ್ಟ ಕಷ್ಟ ನಮ್ಮ ತಂಡದ ಆಟಗಾರರಿಗೆ ಮಾತ್ರ ಗೊತ್ತು. ಇಲ್ಲಿ ಯಾವ ತಂಡ ಗೆಲ್ಲಬಹುದು ಎನ್ನುವುದನ್ನು ಊಹಿಸಲು ಕೂಡ ಅಸಾಧ್ಯ. ನಮ್ಮ ತಂಡದ ಗೆಲುವು ಅಷ್ಟು ಸುಲಭವಾಗಿರಲಿಲ್ಲ” ಎಂದು ಹೇಳಿದ್ದಾರೆ.

ರೋಹಿತ್​ ಅವರು ಈ ಹಿಂದೆಯೇ ನಸೌ ಪಿಚ್​ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಪಿಚ್​ ಮತ್ತು ಮೈದಾನ ಕ್ರಿಕೆಟ್​ ಆಡಲು ಸೂಕ್ತವಾಗಿಲ್ಲ. ಆಟಗಾರರು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಿದ್ದರು. ಭಾರತ ಸೂಪರ್​-8 ಹಂತದಲ್ಲಿ ಭಾರತಕ್ಕೆ ಮೊದಲ ಪಂದ್ಯದಲ್ಲಿ ಆಸ್ಟ್ರೇಯಾ ತಂಡದ ಸವಾಲು ಎದುರಾಗುವ ಸಾಧ್ಯತೆ ಇದೆ.

Continue Reading

ಕ್ರೀಡೆ

Wimbledon 2024: ವಿಂಬಲ್ಡನ್ ಟೂರ್ನಿಯಿಂದ ಹಿಂದೆ ಸರಿದ ಟೆನಿಸ್ ದಿಗ್ಗಜ ರಫೆಲ್‌ ನಡಾಲ್‌

Wimbledon 2024: ಒಲಿಂಪಿಕ್ಸ್​ ಆಡುವ ಸಲುವಾಗಿ ಪ್ರತಿಷ್ಠಿತ ವಿಂಬಲ್ಡನ್​ ಟೂರ್ನಿಯಿಂದ(Wimbledon 2024) ಸ್ಪೇನ್‌ನ ಟೆನಿಸ್ ದಿಗ್ಗಜ ರಫೆಲ್‌ ನಡಾಲ್‌(Rafael Nadal) ಅವರು ಹಿಂದೆ ಸರಿದಿದ್ದಾರೆ.

VISTARANEWS.COM


on

Wimbledon 2024
Koo

ಲಂಡನ್​: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಪ್ರತಿಷ್ಠಿತ ವಿಂಬಲ್ಡನ್​ ಟೂರ್ನಿಯಿಂದ(Wimbledon 2024) 22 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ, ಸ್ಪೇನ್‌ನ ಟೆನಿಸ್ ದಿಗ್ಗಜ ರಫೆಲ್‌ ನಡಾಲ್‌(Rafael Nadal) ಅವರು ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಟ್ವೀಟ್​ ಮಾಡುವ ಮೂಲಕ ದೃಢಪಡಿಸಿದ್ದಾರೆ.

“ಆವೆ ಮಣಿನ ಮೈದಾನದಲ್ಲಿ ಹೆಚ್ಚಿನ ಅಭ್ಯಾಸ ನಡೆಸುತ್ತಿದ್ದು ಈ ಮೂಲಕ ನಾನು ಮತ್ತೆ ಫಿಟ್​ನಿಸ್​ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೀಗಾಗಿ ನಾನು ಈ ವರ್ಷ ವಿಂಬಲ್ಡನ್ ಚಾಂಪಿಯನ್ ಶಿಪ್​ನಲ್ಲಿ ಆಡುವುದನ್ನು ತಪ್ಪಿಸಿಕೊಳ್ಳುತ್ತೇನೆ. ಗ್ರಾಸ್​ ಕೋರ್ಟ್​ ವಿಂಬಲ್ಡನ್​ ಆಡುವುದೇ ಒಂದು ಖಷಿ. ಅತ್ಯಂತ ಶಿಸ್ತಿನ ಟೂರ್ನಿಯಾದ ವಿಂಬಲ್ಡನ್​ನಲ್ಲಿ ಈ ಬಾರಿ ಆಡದಿರುವುದು ನಿಜಕ್ಕೂ ಬೇಸರ ತಂದಿದೆ. ನಾನು ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಬರೆದುಕೊಂಡು ಟೂರ್ನಿಯಿಂದ ಹಿಂದೆ ಸರಿದ ವಿಚಾರವನ್ನು ಪ್ರಕಟಿಸಿದ್ದಾರೆ.

ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್​ನಿಂದ ದೂರ ಉಳಿದಿದ್ದ ನಡಾಲ್​ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್‌ ಇಂಟರ್‌ನ್ಶಾಶನಲ್‌ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದಿಂದ ಹಿಂದೆ ಸರಿದಿದ್ದರು. ಗಾಯದಿಂದ ಚೇತರಿಕೊಂಡು ಈ ಬಾರಿಯ ಫ್ರೆಂಚ್​ ಓಪನ್​ನಲ್ಲಿ ಆಡಿದ್ದ ನಡಾಲ್​ ಮೊದಲ ಸುತ್ತಿನಲ್ಲಿ ಸೋತು ಆಘಾತ ಎದುರಿಸಿದ್ದರು.

ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಕೂಡ ತಮ್ಮ ದೇಶಕ್ಕಾಗಿ ಒಲಿಂಪಿಕ್ಸ್​ ಆಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಅವರು ಈ ಬಾರಿ ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ಒಲಿಂಪಿಕ್ಸ್​ ಆಡಲಿದ್ದಾರೆ. “ಎರಡು ವರ್ಷಗಳಿಂದ ನನ್ನ ದೇಹವು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ, ಒಲಿಂಪಿಕ್ಸ್​ ಆಡಲು ಸಿದ್ಧನಿದ್ದೇನೆ ಎಂದು ಭಾವಿಸಿದ್ದೇನೆ” ಎಂದು ನಡಾಲ್​ ಹೇಳಿದ್ದಾರೆ.

ಇದನ್ನೂ ಓದಿ Rafael Nadal: ಲೇವರ್‌ ಕಪ್‌ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್​ ನಡಾಲ್‌ ನಿವೃತ್ತಿ!

ಒಲಿಂಪಿಕ್ಸ್​ ಬಳಿಕ ನಿವೃತ್ತಿ ಸಾಧ್ಯತೆ?


‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್​ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಆದರೆ ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ ಹೀಗಾಗಿ ಅವರು ಒಲಿಂಪಿಕ್ಸ್​ ಬಳಿಕ ವಿದಾಯ ಘೋಷಿಸಿದರೂ ಅಚ್ಚರಿಯಿಲ್ಲ.

ಒಲಿಂಪಿಕ್ಸ್​ನಲ್ಲಿ ರಾಫೆಲ್ ನಡಾಲ್ ಮತ್ತು ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್(Carlos Alcaraz) ಜತೆಯಾಗಿ ಕಣಕ್ಕಿಳಿಯಲಿದ್ದಾರೆ. ಕಾರ್ಲೋಸ್ ಅಲ್ಕರಾಜ್ ಮತ್ತು ರಾಫೆಲ್ ನಡಾಲ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ 15 ರೋಲ್ಯಾಂಡ್ ಗ್ಯಾರೋಸ್(Roland Garros) ಪ್ರಶಸ್ತಿಗಳೊಂದಿಗೆ ಉತ್ತಮ ಪ್ರಾಬಲ್ಯ ಹೊಂದಿದ್ದಾರೆ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟೆನಿಸ್ ಸ್ಪರ್ಧೆಯನ್ನು ಪ್ಯಾರಿಸ್‌ನ ಕ್ಲೇ ಕೋರ್ಟ್‌ನಲ್ಲಿ ಆಡಲಾಗುತ್ತದೆ. ಕ್ಲೇ ಕೋರ್ಟ್‌ ಕಿಂಗ್​ ಎನಿಸಿಕೊಂಡಿರುವ ನಡಾಲ್​ಗೆ ಪ್ರಶಸ್ತಿ ಗೆಲ್ಲಲು ಇದು ಉತ್ತಮ ಅವಕಾಶವಾಗಿದೆ.

Continue Reading
Advertisement
Actor Darshan Assistant Malli missing case
ಸ್ಯಾಂಡಲ್ ವುಡ್5 mins ago

Actor Darshan: ಹಲವು ವರ್ಷಗಳಿಂದ ದರ್ಶನ್ ಆಪ್ತ ʻಮಲ್ಲಿʼನಾಪತ್ತೆ; ರೇಣುಕಾ ಸ್ವಾಮಿಯ ಗತಿಯೇ ಆಯ್ತಾ?

V Somanna
ಪ್ರಮುಖ ಸುದ್ದಿ17 mins ago

V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ

Self Harming
ಉತ್ತರ ಕನ್ನಡ20 mins ago

Self Harming : ಪಿಎಸ್‌ಐ ಕಿರುಕುಳ; ಕುಡಿದ ಅಮಲಿನಲ್ಲಿ ಠಾಣೆ ಎದುರೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ

Shakib Al Hasan
ಕ್ರೀಡೆ38 mins ago

Shakib Al Hasan: ನಿವೃತ್ತಿಯಾಗಿ ಎಂದು ಲೇವಡಿ ಮಾಡಿದ ಸೆಹವಾಗ್​ಗೆ ತಕ್ಕ ತಿರುಗೇಟು ನೀಡಿದ ಬಾಂಗ್ಲಾ ನಾಯಕ

Farmer Death
ಮೈಸೂರು47 mins ago

Farmer Death : ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

Gold Rate Today
ಚಿನ್ನದ ದರ47 mins ago

Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ

Duniya Vijay wife Nagarathna Facebook Post After Court Order
ಸ್ಯಾಂಡಲ್ ವುಡ್1 hour ago

Duniya Vijay: ಗಂಡ ಕೈಬಿಟ್ರೂ, ನಂಬಿದ ದೇವರು ಕೈ ಬಿಡಲಿಲ್ಲ: ದುನಿಯಾ ವಿಜಯ್ ಪತ್ನಿ ನಾಗರತ್ನ

Actress Bbk 10 Siri Marriage Video Goes Viral
ಬಿಗ್ ಬಾಸ್1 hour ago

Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

Self Harming
ಕ್ರೈಂ1 hour ago

Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು

Euro Cup 2024
ಕ್ರೀಡೆ1 hour ago

Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌