Karnataka Budget Session 2024: ಮಹಿಳೆಯರಿಗೆ ಗೃಹಲಕ್ಷ್ಮಿಯೇ ಹೈಲೈಟ್‌; ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ ಹೆಚ್ಚಳ - Vistara News

ಪ್ರಮುಖ ಸುದ್ದಿ

Karnataka Budget Session 2024: ಮಹಿಳೆಯರಿಗೆ ಗೃಹಲಕ್ಷ್ಮಿಯೇ ಹೈಲೈಟ್‌; ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ ಹೆಚ್ಚಳ

Karnataka Budget Session 2024: ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಯನ್ನು ಸುಗಮಗೊಳಿಸಲು 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಒದಗಿಸಲಾಗುವುದು. ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.

VISTARANEWS.COM


on

Karnataka Budget Session 2024 for women Monthly pension hike for ex Devadasis
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ 15ನೇ ಬಜೆಟ್‌ (Karnataka Budget Session 2024) ಅನ್ನು ಮಂಡಿಸಿದ್ದು, ಈ ಬಾರಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯೇ (Gruha Lakshmi Scheme) ಹೈಲೈಟ್‌ ಆಗಿದೆ. ಆದರೆ, ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಪ್ರಕಟಿಸಿರುವ ಸಿಎಂ, ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು 1500 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.

ಬಜೆಟ್‌ ಮಂಡನೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿದೆ. ಕುಟುಂಬ ದತ್ತಾಂಶದನ್ವಯ 1.33 ಕೋಟಿ ಎಪಿಎಲ್‌, ಬಿಪಿಎಲ್‌, ಎಎವೈ (APL, BPL, AAY) ಪಡಿತರ ಚೀಟಿ ಹೊಂದಿರುವ ಯಜಮಾನಿ ಮಹಿಳೆಯರನ್ನು ಅರ್ಹ ಫಲಾನುಭವಿಗಳೆಂದು ಗುರುತಿಸಲಾಗಿದೆ. ಜನವರಿ ಅಂತ್ಯದವರೆಗೆ 1.17 ಕೋಟಿ ಮಹಿಳೆಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಈವರೆಗೆ 11,726 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.

2024-25ನೇ ಸಾಲಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಒದಗಿಸಲಾಗಿದೆ. ಇದರಿಂದ ಕುಟುಂಬ ನಿರ್ವಹಣೆಯ ಜತೆಗೆ ಆದಾಯೋತ್ಪನ್ನ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮಹಿಳೆಯರಿಗೆ ಈ ಯೋಜನೆ ಅವಕಾಶ ಕಲ್ಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ತರಬೇತಿಗೆ 10 ಕೋಟಿ ರೂ.

    ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು 10 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

    ಮಹಿಳೆಯರಿಗೆ ವಿವಿಧ ಕೊಡುಗೆ

    • ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಯನ್ನು ಸುಗಮಗೊಳಿಸಲು 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಒದಗಿಸಲಾಗುವುದು
    • ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
    1. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತುಗಳನ್ನು ನೀಡಲಾಗುವುದು.
    2. Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ 1,000 ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು.
    • ಆರೋಗ್ಯ ಇಲಾಖೆಯೊಂದಿಗೆ ಸಮನ್ವಯಿಸಿ ಎಲ್ಲ ತಾಲೂಕುಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಎರಡು Cataract ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಆಯೋಜಿಸಲಾಗುವುದು.
    • ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆ ಮತ್ತು ಸಂರಕ್ಷಣೆಗಾಗಿ 4 ಅನುಪಾಲನಾ ಗೃಹಗಳನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
    • ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಒದಗಿಸಲು ಇನ್ನೂ ಬಾಕಿಯಿರುವ 1,500 ವಿಶೇಷಚೇತನರಿಗೆ 2024-25ನೇ ಸಾಲಿನಲ್ಲಿ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು.
    • ಲಿಂಗತ್ವ ಅಲ್ಪಸಂಖ್ಯಾತರ ಬದುಕನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಮೈತ್ರಿ ಯೋಜನೆಯಡಿ ನೀಡುವ ಮಾಸಾಶನವನ್ನು 800 ರೂ.ಗಳಿಂದ 1,200 ರೂ.ಗಳಿಗೆ ಹೆಚ್ಚಿಸಲಾಗುವುದು. ಜತೆಗೆ ಗುರುತಿಸುವಿಕೆ ಹಾಗೂ ಗುರುತಿನ ಚೀಟಿ ವಿತರಣೆಯ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುವುದು.
    • ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಹೀಗಾಗಿ ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು 1500 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಿಸಲಾಗುವುದು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಪ್ಯಾಕೇಜ್ ಅನ್ನು ನೀಡಲಾಗುವುದು.
    • ನಿವೇಶನ ಹೊಂದಿರುವ ವಸತಿರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುವುದು.
    • ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಮರುಸಮೀಕ್ಷೆ ನಡೆಸಲಾಗುವುದು.

    ಇದನ್ನೂ ಓದಿ: Karnataka Budget Session 2024: ಪತ್ರಕರ್ತರಿಗೆ ಉಚಿತ ಬಸ್ ಪಾಸ್; ಕೆಯುಡಬ್ಲ್ಯುಜೆ ಹೋರಾಟಕ್ಕೆ ಸಂದ ಫಲ

    • 2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 86,423 ಕೋಟಿ ರೂ.ಗಳನ್ನು ಒದಗಿಸಲಾಗುವುದು.
    • ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ 54,617 ಕೋಟಿ ರೂ.ಗಳನ್ನು ಒದಗಿಸಲಾಗುವುದು.
    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
    Continue Reading
    Click to comment

    Leave a Reply

    Your email address will not be published. Required fields are marked *

    ವಿದೇಶ

    Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

    Ebrahim Raisi: ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ಹೆಲಿಕಾಪ್ಟರ್ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿರುವ ಕಾರಣ ಹುಡುಕಾಟ ನಡೆಯುತ್ತಲೇ ಇದೆ. ಇದುವರೆಗೆ ಹೆಲಿಕಾಪ್ಟರ್‌ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

    VISTARANEWS.COM


    on

    Ebrahim Raisi
    Koo

    ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter Crash) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ಬಳಿಕವೂ ಹೆಲಿಕಾಪ್ಟರ್‌ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತ್ತೆಗಾಗಿ ಸುಮಾರು 40 ತಂಡಗಳು ಶೋಧ ಕಾರ್ಯ ನಡೆಸುತ್ತಲೇ ಇವೆ. ಇಷ್ಟಾದರೂ ಹೆಲಿಕಾಪ್ಟರ್‌ ಪತ್ತೆಯಾಗಿರುವ ಕಾರಣ ಇಬ್ರಾಹಿಂ ರೈಸಿ ಸೇರಿ ಹಲವರ ಪ್ರಾಣಕ್ಕೆ ಕುತ್ತುಂಟಾಗಿರುವ ಸಾಧ್ಯತೆ ಇದೆ ಎಂದು ಇರಾನ್‌ ಅಧಿಕಾರಿಗಳು ತಿಳಿಸಿದ್ದಾರೆ.

    ಅಜರ್‌ಬೈಜಾನ್‌ ಸಮೀಪದ ಜೋಲ್ಫಾ ಎಂಬ ಪ್ರದೇಶ ಬೆಟ್ಟಗಳ ಮಧ್ಯೆ ಹೆಲಿಕಾಪ್ಟರ್‌ ಪತನಗೊಂಡಿರುವ ಕಾರಣ ಶೋಧ ಕಾರ್ಯ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತ್ತೆಗಾಗಿ ಹಲವು ಸಿಬ್ಬಂದಿ ಇರುವ ಸುಮಾರು 40 ತಂಡಗಳನ್ನು ಇರಾನ್‌ ರಚಿಸಿದೆ. ಬೆಟ್ಟಗಳಲ್ಲಿ ಭದ್ರತಾ ಸಿಬ್ಬಂದಿಯು ಎಡೆಬಿಡದೆ ಶೋಧ ಕಾರ್ಯ ಕೈಗೊಂಡರೂ ಮುನ್ನಡೆ ಸಿಗುತ್ತಿಲ್ಲ. ಹೆಲಿಕಾಪ್ಟರ್‌ ಪತನದ ಬಳಿಕ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಬದುಕುಳಿಯುವ ಸಾಧ್ಯತೆ ತೀರಾ ಕ್ಷೀಣ ಎಂದು ಹೇಳಲಾಗುತ್ತಿದೆ.

    ಹೆಲಿಕಾಪ್ಟರ್‌ನಲ್ಲಿ ಯಾರಿದ್ದರು?

    ಹೆಲಿಕಾಪ್ಟರ್‌ನಲ್ಲಿ ಇಬ್ರಾಹಿಂ ರೈಸಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ, ಪೂರ್ವ ಅಜರ್‌ಬೈಜಾನ್‌ ಗವರ್ನರ್‌ ಮಲೇಕ್‌ ರಹಮತಿ ಹಾಗೂ ಪೂರ್ವ ಅಜರ್‌ಬೈಜಾನ್‌ನಲ್ಲಿರುವ ಇರಾನ್‌ ಸುಪ್ರೀಂ ಲೀಡರ್‌ನ ಪ್ರತಿನಿಧಿ ಅಯೊತೊಲ್ಲಾ ಮೊಹಮ್ಮದ್‌ ಅಲಿ ಅಲೆ-ಹಶೇಮ್‌ ಅವರು ಕೂಡ ಇದ್ದರು. ಇದುವರೆಗೆ ಹೆಲಿಕಾಪ್ಟರ್‌ ಎಲ್ಲಿದೆ ಎಂಬುದರ ಸುಳಿವೇ ಸಿಗದ ಕಾರಣ ಇವರೆಲ್ಲರ ಪ್ರಾಣಕ್ಕೆ ಕುತ್ತು ಎದುರಾಗಿರಬಹುದು ಎಂದು ಹೇಳಲಾಗುತ್ತಿದೆ.

    ಇಬ್ರಾಹಿಂ ರೈಸಿಗಾಗಿ ಮೋದಿ ಪ್ರಾರ್ಥನೆ

    ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನಗೊಂಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. “ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್‌ ಪತನದ ಸುದ್ದಿ ತಿಳಿದು ಆತಂಕವಾಗಿದೆ. ಇರಾನ್‌ ಜನರ ಭಾವನೆಗಳ ಜತೆ ನಾವಿದ್ದೇವೆ. ಇಬ್ರಾಹಿಂ ರೈಸಿ ಹಾಗೂ ಅವರ ಜತೆಗಿದ್ದ ಎಲ್ಲರೂ ಸುರಕ್ಷಿತವಾಗಿರಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಮೋದಿ ಪೋಸ್ಟ್‌ ಮಾಡಿದ್ದಾರೆ.

    ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಪತನಗೊಂಡಿರಬಹುದು ಎಂದು ಇರಾನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹವಾಮಾನ ವೈಪರೀತ್ಯವು ಶೋಧ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ. 2021ರಿಂದಲೂ ಇಬ್ರಾಹಿಂ ರೈಸಿ ಅವರು ಇರಾನ್‌ ಅಧ್ಯಕ್ಷರಾಗಿದ್ದಾರೆ.

    ಇದನ್ನೂ ಓದಿ: Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

    Continue Reading

    ಕ್ರೀಡೆ

    RR vs KKR: ಮಳೆಯಿಂದ​ ಪಂದ್ಯ ರದ್ದು; ಎಲಿಮಿನೇಟರ್‌ ಪಂದ್ಯದಲ್ಲಿ​ ಆರ್​ಸಿಬಿಗೆ ರಾಜಸ್ಥಾನ್​ ಎದುರಾಳಿ

    RR vs KKR: ಕೆಕೆಆರ್​ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್​ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್​ಗೆ(Rajasthan Royals)​ ಮಳೆ ತಣ್ಣೀರೆರಚಿತು. ಸನ್​ರೈಸರ್ಸ್​ ಹೈದರಾಬಾದ್​ 2ನೇ ತಂಡವಾಗಿ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಿತು.

    VISTARANEWS.COM


    on

    RR vs KKR
    Koo

    ಗುವಾಹಟಿ: 17ನೇ ಆವೃತ್ತಿಯ ಐಪಿಎಲ್​ನ(IPL 2024) ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​(RR vs KKR) ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ ಮಳೆಯಿಂದ ಒಂದೂ ಎಸೆತ ಕಾಣದೆ ಈ ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.

    10 ಗಂಟೆ ಸುಮಾರಿಗೆ ಮಳೆ ನಿಂತಿತು. ಮಳೆ ನಿಂತ ಕಾರಣ ಪಂದ್ಯವನ್ನು ಡಕ್​ವರ್ತ್​ ನಿಯಮದ ಪ್ರಕಾರ 7 ಓವರ್​ಗೆ ಸೀಮಿತಗೊಳಿಸಿ ಟಾಸ್​ ಕೂಡ ಹಾರಿಸಲಾಯಿತು. ಟಾಸ್​ ಗೆದ್ದು ಕೆಕೆಆರ್​ ಫೀಲ್ಡಿಂಗ್​ ಆಯ್ದುಕೊಂಡಿತು. ಇನ್ನೇನು ಆಟಗಾರರು ಮೈದಾನಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮಳೆ ಮತ್ತೆ ಆರಂಭಗೊಂಡಿತು. ಹೀಗಾಗಿ ಅಂಪೈರ್​ಗಳು ಕೊನೆಗೆ ಪಂದ್ಯವನ್ನು ರದ್ದು ಎಂದು ಘೋಷಣೆ ಮಾಡಿದರು.

    ಕೆಕೆಆರ್​ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್​ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್​ಗೆ(Rajasthan Royals)​ ಮಳೆ ತಣ್ಣೀರೆರಚಿತು. ಸನ್​ರೈಸರ್ಸ್​ ಹೈದರಾಬಾದ್​ 2ನೇ ತಂಡವಾಗಿ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಿತು. ರಾಜಸ್ಥಾನ್​ ಮತ್ತು ಹೈದರಾಬಾದ್ ಸಮಾನ 17 ಅಂಕ ಹೊಂದಿದರೂ ರನ್​ ರೇಟ್​ನಲ್ಲಿ ಮುಂದಿದ್ದ ಕಾರಣ ಈ ಲಾಭ ಕಮಿನ್ಸ್​ ಪಡೆಗೆ ಲಭಿಸಿತು. ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಹೈದರಾಬಾದ್​ ಕಣಕ್ಕಿಳಿಯಲಿದೆ. ಈ ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿದೆ.

    ಆರ್​ಸಿಬಿ-ರಾಜಸ್ಥಾನ್​ ಮಧ್ಯೆ ಎಲಿಮಿನೇಟರ್​ ಪಂದ್ಯ


    ಬುಧವಾರ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ ಆಫ್​ಗೆ ಲಗ್ಗೆಯಿಟ್ಟ ಆರ್​ಸಿಬಿಗೆ ಎಲಿಮಿನೇಟರ್​ ಪಂದ್ಯದಲ್ಲೂ ಲಕ್​ ಹೈ ಹಿಡಿಯುವುದೇ ಎಂದು ಕಾದು ನೋಡಬೇಕಿದೆ.

    ಪಂಜಾಬ್​ ವಿರುದ್ಧ ಗೆದ್ದ ಹೈದರಾಬಾದ್​


    ದಿನದ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡ ಪಂಜಾಬ್​ ಕಿಂಗ್ಸ್​ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಬ್ಯಾಟಿಂಗ್​ ಸ್ನೇಹಿಯಾದ ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಂಜಾಬ್​ ಕಿಂಗ್ಸ್​ 5 ವಿಕೆಟ್​ಗೆ 214 ರನ್​ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆದರೆ ಈ ಮೊತ್ತ ಹೈದರಾಬಾದ್​ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಗುರಿ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾಬಾದ್ 19.1​ ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 215 ಬಾರಿಸಿ ತವರಿನಲ್ಲಿ ವಿಜಯ ಪತಾಕೆ ಹಾರಿಸಿತು. ಉಭಯ ತಂಡಗಳ ಜಿದ್ದಾಜಿದ್ದಿನ ಬ್ಯಾಟಿಂಗ್​ ಪರಾಕ್ರಮದಿಂದಾಗಿ ಈ ಪಂದ್ಯದಲ್ಲಿ ಒಟ್ಟು 429 ರನ್​ ದಾಖಲಾಯಿತು.

    Continue Reading

    ದೇಶ

    Parliament Security: ನಾಳೆಯಿಂದ ಸಂಸತ್‌ಗೆ ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಭದ್ರತೆ; ಏಕಿಂಥ ನಿರ್ಧಾರ?

    Parliament Security: ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್‌ ಭದ್ರತೆಯಿಂದ ವಿಮುಖರಾಗಲಿದ್ದಾರೆ. ಕಳೆದ ವರ್ಷ ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಉಂಟಾದ ಕಾರಣ ಕೇಂದ್ರ ಸರ್ಕಾರವು ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.

    VISTARANEWS.COM


    on

    Parliament Security
    Koo

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ನೂತನ ಸಂಸತ್‌ ಭವನದ ರಕ್ಷಣೆಯ ಹೊಣೆಯನ್ನು ಸೋಮವಾರದಿಂದ (ಮೇ 20) ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (CRPF) ಬದಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿಯು ವಹಿಸಿಕೊಳ್ಳಲಿದೆ. ಕಳೆದ ವರ್ಷ ಸಂಸತ್‌ನಲ್ಲಿ ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಸಿಐಎಸ್‌ಎಫ್‌ ಸಿಬ್ಬಂದಿಯ ಭದ್ರತೆಗೆ ವಹಿಸಿದೆ. ಅದರಂತೆ, ಸೋಮವಾರದಿಂದ ಸಿಐಎಸ್‌ಎಫ್‌ ಸಿಬ್ಬಂದಿಯೇ ಸಂಸತ್‌ನ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.

    ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್‌ ಭದ್ರತೆಯಿಂದ ವಿಮುಖರಾಗಲಿದ್ದಾರೆ. 2013ರಿಂದಲೂ ಸಿಆರ್‌ಪಿಎಫ್‌ ಪಡೆಗಳು ಸಂಸತ್‌ಗೆ ಭದ್ರತೆ ಒದಗಿಸಿದ್ದವು. ಸಿಆರ್‌ಪಿಎಫ್‌ನ ಪಿಡಿಜಿ (ಪಾರ್ಲಿಮೆಂಟ್‌ ಡ್ಯೂಟಿ ಗ್ರೂಪ್‌) ವಾಹನಗಳು, ಶಸ್ತ್ರಾಸ್ತ್ರ, ಸಿಬ್ಬಂದಿಯನ್ನು ಸೋಮವಾರ ತೆರವುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿಐಎಸ್‌ಎಫ್‌ ಪಡೆಗಳು ಸಂಸತ್‌ ಭದ್ರತೆಗೆ ನಿಯೋಜನೆಗೊಂಡಿವೆ ಎಂದು ಹೇಳಲಾಗುತ್ತಿದೆ.

    ಭದ್ರತಾ ವೈಫಲ್ಯ ಹೇಗಾಗಿತ್ತು?

    2023ರ ಡಿಸೆಂಬರ್‌ 13ರಂದು ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿತ್ತು. ಪ್ರೇಕ್ಷಕರ ಗ್ಯಾಲರಿಯಿಂದ ಕಾಲಾಪದ ಮಧ್ಯೆ ಜಿಗಿದ ಇಬ್ಬರು ದುಷ್ಕರ್ಮಿಗಳು ಹೊಗೆ ಬಾಂಬ್‌ (ಬಣ್ಣದ ಹೊಗೆ ಬರುವ ವಸ್ತುಗಳ ಸ್ಫೋಟ) ಸ್ಫೋಟಿಸಿದ್ದರು. ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಹೊಗೆ ಬಾಂಬ್‌ ಸ್ಫೋಟಿಸಿದ ಹಿನ್ನೆಲೆಯಲ್ಲಿ ಮೈಸೂರು ನಿವಾಸಿ ಸೇರಿ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಸಂಸದ ಪ್ರತಾಪ್‌ ಸಿಂಹ ಅವರು ಮೈಸೂರಿನ ವ್ಯಕ್ತಿಗೆ ಪಾಸ್‌ ನೀಡಿದ್ದು ಕೂಡ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು.

    ಲೋಕಸಭೆಯಲ್ಲಿ ಸ್ಮೋಕ್‌ ಬಾಂಬ್‌ ಸ್ಫೋಟದ ಅವಾಂತರ.

    ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್‌ ಮಹಾ ನಿರ್ದೇಶಕ ಅನೀಶ್‌ ದಯಾಳ್‌ ಸಿಂಗ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಸಿಆರ್‌ಪಿಎಫ್‌ ಹಾಗೂ ಹಲವು ಭದ್ರತಾ ತಜ್ಞರು, ಸಂಸತ್‌ ಭದ್ರತಾ ವ್ಯವಸ್ಥೆಯನ್ನು ಬದಲಿಸಬೇಕು ಎಂಬುದಾಗಿ ಶಿಫಾರಸು ಮಾಡಿದ್ದರು. ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಪಡೆಗಳನ್ನು ಸಂಸತ್‌ ಭದ್ರತೆಗೆ ನಿಯೋಜಿಸುವುದು ಉತ್ತಮ ಎಂಬ ಶಿಫಾರಸು ವ್ಯಕ್ತವಾಗಿತ್ತು. ಹಾಗಾಗಿ, ಕೇಂದ್ರ ಸರ್ಕಾರವು ಸಂಸತ್‌ ಭದ್ರತೆಗೆ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸುತ್ತಿದೆ.

    ಇದನ್ನೂ ಓದಿ: T20 World Cup 2024: ಪಾಕ್​ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್​ ಕ್ರಿಕೆಟ್​ ಮಂಡಳಿ

    Continue Reading

    ದೇಶ

    Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

    Narendra Modi: ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘದ ವಿರುದ್ಧ ಮಮತಾ ಬ್ಯಾನರ್ಜಿ ಹಲವು ಆರೋಪ ಮಾಡಿದ್ದರು. ಇದಕ್ಕೆ ನರೇಂದ್ರ ಮೋದಿ ತಿರುಗೇಟು ನೀಡಿದ್ದು, “ಮುಸ್ಲಿಮರ ಮತಗಳ ಓಲೈಕೆಗಾಗಿ ಮಮತಾ ಬ್ಯಾನರ್ಜಿ ಅವರು ಹೀಗೆ ಮಾಡುತ್ತಿದ್ದಾರೆ” ಎಂದು ಕುಟುಕಿದ್ದಾರೆ.

    VISTARANEWS.COM


    on

    Narendra Modi
    Koo

    ಕೋಲ್ಕೊತಾ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಜಾತಿ, ಧರ್ಮ, ಮೀಸಲಾತಿ ಸೇರಿ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬರುತ್ತಿವೆ. ರಾಜಕೀಯ ನಾಯಕರ ಹೇಳಿಕೆಗಳು ತೀಕ್ಷ್ಣತೆ ಪಡೆದುಕೊಂಡಿವೆ. ಇನ್ನು, ಹಿಂದು ಸಂಘ-ಸಂಸ್ಥೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಹರಿಹಾಯ್ದಿದ್ದಾರೆ. “ಮುಸ್ಲಿಮರ ಮತಗಳಿಗಾಗಿ ಮಮತಾ ಬ್ಯಾನರ್ಜಿ ಅವರು ಹಿಂದು ಸಂಘ-ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ” ಎಂದು ಕುಟುಕಿದ್ದಾರೆ.

    “ಚುನಾವಣೆ ಸಂದರ್ಭದಲ್ಲಿ ಟಿಎಂಸಿಯು ಜನರಿಗೆ ಬೆದರಿಕೆ ಒಡ್ಡಿತ್ತು. ಈಗ ಅದು ತನ್ನ ಮಿತಿಯನ್ನು ಮೀರಿದೆ. ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘವು ಜಗತ್ತಿನಾದ್ಯಂತ ಜನರಿಗೆ ಸೇವೆ ಮಾಡುತ್ತಿವೆ. ನೈತಿಕ ಬೆಂಬಲ, ಮಾರ್ಗದರ್ಶನ ನೀಡುತ್ತಿವೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು ಇಂತಹ ಹಿಂದು ಸಂಘ-ಸಂಸ್ಥೆಗಳ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ, ಬೆದರಿಕೆ ಒಡ್ಡುತ್ತಿದ್ದಾರೆ. ಮುಸ್ಲಿಮರ ಮತಗಳ ಓಲೈಕೆಗಾಗಿ ಮಮತಾ ಬ್ಯಾನರ್ಜಿ ಅವರು ಹೀಗೆ ಮಾಡುತ್ತಿದ್ದಾರೆ” ಎಂದು ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

    “ಮಮತಾ ಬ್ಯಾನರ್ಜಿ ಅವರು ಓಲೈಕೆ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೂಲಭೂತವಾದಿಗಳನ್ನು ಓಲೈಸುವ ದೃಷ್ಟಿಯಿಂದ ಅವರು ಸಾಧು-ಸಂತರ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ, ಜನರು ಅಭಿವೃದ್ಧಿಯನ್ನು ನೋಡುತ್ತಾರೆಯೇ ಹೊರತು ಓಲೈಕೆ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ. ಪಶ್ಚಿಮ ಬಂಗಾಳದ ಜನರು ಬಿಜೆಪಿಯ ಆಡಳಿತವನ್ನು ಬಯಸುತ್ತಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರ ನಿದ್ದೆಗೆಡಿಸಲು ಕಾರಣವಾಗಿದೆ” ಎಂದು ಟೀಕಿಸಿದರು.

    ಮಮತಾ ಬ್ಯಾನರ್ಜಿ ಹೇಳಿದ್ದೇನು?

    ಶನಿವಾರ (ಮೇ 18) ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಅವರು ಇಸ್ಕಾನ್‌, ರಾಮಕೃಷ್ಣ ಮಿಷನ್‌ ಹಾಗೂ ಭಾರತ್‌ ಸೇವಾಶ್ರಮ ಸಂಘದ ವಿರುದ್ಧ ಆರೋಪ ಮಾಡಿದ್ದರು. “ಮೂರೂ ಸಂಸ್ಥೆಗಳು ದೆಹಲಿಯಿಂದ ಬರುವ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿವೆ. ರಾಮಕೃಷ್ಣ ಮಿಷನ್‌ ಅನುಯಾಯಿಗಳ ಒಂದು ವಾಟ್ಸ್‌ಆ್ಯಪ್‌ ಗ್ರೂಪ್‌ ಇದೆ. ಇಂತಹ ಚಟುವಟಿಕೆಗಳಲ್ಲಿ ಸನ್ಯಾಸಿಗಳು ಏಕೆ ಭಾಗಿಯಾಗಬೇಕು? ರಾಮಕೃಷ್ಣ ಮಿಷನ್‌ ಬಗ್ಗೆ ಜನರಿಗೆ ಗೌರವವಿದೆ. ರಾಮಕೃಷ್ಣ ಮಿಷನ್‌ನ ಸನ್ಯಾಸಿಗಳು ಮತದಾನ ಮಾಡುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ, ನೀವೇಕೆ ಬಿಜೆಪಿಗೆ ಮತ ನೀಡಿ ಎಂಬುದಾಗಿ ಬೇರೆಯವರಿಗೆ ಕರೆ ನೀಡುತ್ತೀರಿ? ಎಲ್ಲರೂ ಅಲ್ಲ, ಕೆಲವು ಸನ್ಯಾಸಿಗಳು ಹೀಗೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

    “ಭಾರತ ಸೇವಾಶ್ರಮ ಸಂಘದ ಮೇಲೆ ನನಗೆ ಅಪಾರ ಗೌರವ ಇತ್ತು. ಆದರೆ, ತೃಣಮೂಲ ಕಾಂಗ್ರೆಸ್‌ ಏಜೆಂಟ್‌ನನ್ನು ಮತಗಟ್ಟೆ ಒಳಗೆ ಬಿಡುವುದಿಲ್ಲ ಎಂಬುದಗಿ ಒಬ್ಬ ಕಾರ್ತಿಕ ಮಹಾರಾಜ ಹೇಳಿದ್ದಾರೆ ಎಂಬುದಾಗಿ ನಾನು ಕೇಳುತ್ತಲೇ ಇದ್ದೇನೆ. ರಾಜಕೀಯದಲ್ಲ ಹೀಗೆ ಭಾಗಿಯಾದವರನ್ನು ನಾನು ಸನ್ಯಾಸಿ ಎಂಬುದಾಗಿ ಕರೆಯುವುದಿಲ್ಲ. ಹೀಗೆ ರಾಜಕೀಯ ಮಾಡುತ್ತಿರುವವರನ್ನು ನಾನು ಗುರುತಿಸಿದ್ದೇನೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿಯ ಕೆಲ ನಾಯಕರೂ ಟೀಕಿಸಿದ್ದಾರೆ.

    ಮಮತಾ ಬ್ಯಾನರ್ಜಿ ಹೇಳಿಕೆ ವಿರುದ್ಧ ನರೇಂದ್ರ ಮೋದಿ ಟೀಕಿಸುತ್ತಲೇ ಬಿಜೆಪಿ ನಾಯಕ ಅಮಿತ್‌ ಮಾಳವಿಯ ಅವರು ಪೋಸ್ಟ್‌ ಮಾಡಿದ್ದಾರೆ. “ಭಾರತ ಸೇವಾಶ್ರಮ ಸಂಘವು ಮಮತಾ ಬ್ಯಾನರ್ಜಿ ಅವರು ಸಂತರ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ಹೈಕೋರ್ಟ್‌ ಮೊರೆ ಹೋಗಲಿದ್ದಾರೆ. ಕಾರ್ತಿಕ್‌ ಮಹಾರಾಜ ಅವರು ಎಂದಿಗೂ ಬೂತ್‌ ಏಜೆಂಟ್‌ಗಳ ವಿರುದ್ಧ ಮಾತನಾಡಿಲ್ಲ” ಎಂದು ಮಮತಾ ಆರೋಪವನ್ನು ನಿರಾಕರಿಸಿದ್ದಾರೆ.

    ಇದನ್ನೂ ಓದಿ: Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

    Continue Reading
    Advertisement
    Pralhad Joshi
    ಕರ್ನಾಟಕ17 mins ago

    Pralhad Joshi: ರಾಜ್ಯದಲ್ಲಿ ಹತ್ಯೆ, ಆತ್ಮಹತ್ಯೆಗಳೇ ಅಧಿಕ, ಅಭಿವೃದ್ಧಿ ಸಮಾಧಿ: ಪ್ರಲ್ಹಾದ್‌ ಜೋಶಿ ಟೀಕೆ

    Ebrahim Raisi
    ವಿದೇಶ37 mins ago

    Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

    Mrs India Karnataka
    ದಕ್ಷಿಣ ಕನ್ನಡ41 mins ago

    Mrs India Karnataka: ಮಿಸಸ್ ಕರ್ನಾಟಕ ಮಂಗಳೂರು ಗ್ರ್ಯಾಂಡ್ ಫಿನಾಲೆ; ಸಾಂಪ್ರದಾಯಿಕ, ಮಾಡರ್ನ್ ಉಡುಗೆಯಲ್ಲಿ ಮಿಂಚಿದ ನಾರಿಯರು

    IPL 2024 Eliminato
    ಕ್ರೀಡೆ1 hour ago

    IPL 2024 Eliminator: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಆಘಾತ; ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ!

    Tourist boat capsizes
    ಕರ್ನಾಟಕ1 hour ago

    Tourist Boat Capsizes: ತದಡಿ ಬಳಿ ಮಗುಚಿದ ಪ್ರವಾಸಿಗರ ಬೋಟ್; 40 ಪ್ರವಾಸಿಗರ ರಕ್ಷಣೆ

    RR vs KKR
    ಕ್ರೀಡೆ2 hours ago

    RR vs KKR: ಮಳೆಯಿಂದ​ ಪಂದ್ಯ ರದ್ದು; ಎಲಿಮಿನೇಟರ್‌ ಪಂದ್ಯದಲ್ಲಿ​ ಆರ್​ಸಿಬಿಗೆ ರಾಜಸ್ಥಾನ್​ ಎದುರಾಳಿ

    Parliament Security
    ದೇಶ2 hours ago

    Parliament Security: ನಾಳೆಯಿಂದ ಸಂಸತ್‌ಗೆ ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಭದ್ರತೆ; ಏಕಿಂಥ ನಿರ್ಧಾರ?

    Dangerous Bike Stunt
    ಕರ್ನಾಟಕ2 hours ago

    Dangerous Bike Stunt: ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ಓಡಿಸಿದ ಯುವಕ ಅರೆಸ್ಟ್‌

    Narendra Modi
    ದೇಶ3 hours ago

    Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

    SRH vs PBKS
    ಕ್ರೀಡೆ3 hours ago

    SRH vs PBKS: ಆರ್​ಸಿಬಿಯ ಸಿಕ್ಸರ್​ ದಾಖಲೆ ಮುರಿದ ಹೈದರಾಬಾದ್​

    Sharmitha Gowda in bikini
    ಕಿರುತೆರೆ8 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ7 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ7 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ6 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ8 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ7 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ5 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ6 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    Karnataka Rain
    ಮಳೆ9 hours ago

    Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

    Karnataka rain
    ಮಳೆ9 hours ago

    Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

    Karnataka Rain
    ಮಳೆ11 hours ago

    Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

    Prajwal Revanna Case JDS calls CD Shivakumar pen drive gang
    ರಾಜಕೀಯ2 days ago

    Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

    Karnataka weather Forecast
    ಮಳೆ3 days ago

    Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

    Dina Bhavishya
    ಭವಿಷ್ಯ3 days ago

    Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

    Karnataka Weather Forecast
    ಮಳೆ3 days ago

    Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

    Drowned in water
    ಹಾಸನ3 days ago

    Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

    Suspicious Case
    ಬೆಂಗಳೂರು4 days ago

    Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

    Prajwal Revanna Case
    ಕರ್ನಾಟಕ5 days ago

    Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

    ಟ್ರೆಂಡಿಂಗ್‌