Karnataka Budget 2024 : ಮೆಟ್ರೊ 3ನೆ ಹಂತ ಸೇರಿದಂತೆ ಬೆಂಗಳೂರು ನಗರ ಸಂಚಾರ ವ್ಯವಸ್ಥೆಗೆ ಬಜೆಟ್​ನಲ್ಲಿ ಒತ್ತು - Vistara News

ಪ್ರಮುಖ ಸುದ್ದಿ

Karnataka Budget 2024 : ಮೆಟ್ರೊ 3ನೆ ಹಂತ ಸೇರಿದಂತೆ ಬೆಂಗಳೂರು ನಗರ ಸಂಚಾರ ವ್ಯವಸ್ಥೆಗೆ ಬಜೆಟ್​ನಲ್ಲಿ ಒತ್ತು

Karnataka Budget 2024 : ಮೆಟ್ರೊ, ಉಪನಗರ ರೈಲು ಹಾಗೂ ಬಿಎಂಟಿಗೆ ಉತ್ತೇಜನ ನೀಡುವ ಭರವಸೆಯನ್ನು ಬಜೆಟ್​ನಲ್ಲಿ ವ್ಯಕ್ತಪಡಿಸಲಾಗಿದೆ.

VISTARANEWS.COM


on

Namma Metro
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರು ನಗರದೊಳಗಿನ ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಅವರು ತಾವು ಮಂಡಿಸಿರುವ 15ನೇ ಬಜೆಟ್​ನಲ್ಲಿ (Karnataka Budget 2024) ಒತ್ತು ನೀಡಿದ್ದಾರೆ. ಪ್ರಮುಖವಾಗಿ ಸರ್ಜಾಪುರದಿಂದ ಹೆಬ್ಬಾಳದವರೆಗಿನ ನಮ್ಮ ಮೆಟ್ರೋ ಹಂತ 3 ಕರಡು ಸಿದ್ಧಪಡಿಸುವುದು, ಉಪನಗರ ರೈಲು ಯೋಜನೆಗೆ ಚುರುಕು, ಬಿಎಂಟಿಸಿ ಸಾರಿಗೆ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗಿದೆ.

ನಮ್ಮ ಮೆಟ್ರೋ ರೈಲಿನ ಮೂಲಕ 8 ಲಕ್ಷಕ್ಕೂ ಹೆಚ್ಚಿನ ಜನರು ಪ್ರತಿನಿತ್ಯ ಪ್ರಯಾಣಿಸುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 74 ಕಿ.ಮೀ. ಮಾರ್ಗದೊಂದಿಗೆ 2025ರ ಮಾರ್ಚ್‌ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ. ಮಾರ್ಗ ಸೇರ್ಪಡೆಯಾಗಲಿದೆ. ಮೆಟ್ರೋ ಯೋಜನೆ ಹಂತ-2 ಮತ್ತು 2ಎ ಯೋಜನೆಯಡಿ ಹೊರವರ್ತುಲ ರಸ್ತೆ- ವಿಮಾನ ನಿಲ್ದಾಣ ಮಾರ್ಗವು 2026ರ ಜೂನ್‌ ವೇಳೆಗೆ ಸಿದ್ದವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದಾರೆ.

ಇದನ್ನೂ ಓದಿ :Karnataka Budget 2024 : ಸಿದ್ದರಾಮಯ್ಯ ಬಜೆಟ್​ ಎಕ್ಸ್​ ಟ್ರೆಂಡಿಂಗ್​ನಲ್ಲಿ ನಂಬರ್​ 1

ಮೆಟ್ರೊ ಹಂತ-3ರ ಅಂದಾಜು 15,611 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ಕೊಟ್ಟಿದೆ. ನಮ್ಮ ಮೆಟ್ರೋ ಹಂತ-3ಎ ರಡಿಯಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಖ್ರಿ ವೃತ್ತ ಮೂಲಕ ಹೆಬ್ಬಾಳವನ್ನು ಸಂಪರ್ಕಿಸಲಿದೆ.

ಉಪನಗರ ರೈಲು

ಬೆಂಗಳೂರು ಉಪನಗರ ರೈಲು ಯೋಜನೆಯಡಿ ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ ಕಾರಿಡಾರ್‌-2ರ ಸಿವಿಲ್‌ ಕಾಮಗಾರಿಗಳನ್ನು ವೇಗವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಾರಿಡಾರ್‌-4 ರ ಹೀಲಲಿಗೆಯಿಂದ ರಾಜಾನುಕುಂಟೆ ವರೆಗಿನ 46.2 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಐರೋಪ್ಯ ಹೂಡಿಕೆ ಬ್ಯಾಂಕ್‌ ಮತ್ತು ಜರ್ಮನಿಯ KFW ಬ್ಯಾಂಕುಗಳ ಜೊತೆಗೆ ಆರ್ಥಿಕ ನೆರವಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬಿಎಂಟಿಸಿಗೆ ಹೊಸ ಬಸ್‌ಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರತಿದಿನ ಸರಾಸರಿ 42 ಲಕ್ಷ ಜನರಿಗೆ ಸೇವೆಯನ್ನು ಒದಗಿಸುತ್ತಿದ್ದು, ದೇಶದಲ್ಲಿಯೇ ಅತ್ಯುತ್ತಮ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ 1,334 ಹೊಸ ಎಲೆಕ್ಟ್ರಿಕ್‌ ಬಸ್‌ಗಳು ಮತ್ತು 820 ಬಿಎಸ್-6 ಡೀಸೆಲ್‌ ಬಸ್ಸುಗಳನ್ನು ಬಿ.ಎಂ.ಟಿ.ಸಿ.ಗೆ ಸೇರ್ಪಡೆಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​ ಬಾಷಣದಲ್ಲಿ ಹೇಳಿದ್ದಾರೆ.

ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆ್ಯಪ್​

ಬಿಎಂಟಿಸಿಯಲ್ಲಿ ಮಹಿಳಾ ಸುರಕ್ಷತೆಯನ್ನು ಒಳಗೊಂಡ ವೆಹಿಕಲ್‌ ಟ್ರ್ಯಾಕಿಂಗ್‌ ಹೊಂದಿರುವ ಮೊಬೈಲ್‌ ಆಪ್‌ ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಪಾನ್‌ ಸರ್ಕಾರದ ಸಹಯೋಗದೊಂದಿಗೆ ಬೆಂಗಳೂರು ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏರಿಯಾ ಟ್ರಾಫಿಕ್‌ ಸಿಗ್ನಲ್‌ ಸಿಸ್ಟಮ್‌ ಅನ್ನು ನಗರದ ಪ್ರಮುಖ 28 ಜಂಕ್ಷನ್‌ಗಳಲ್ಲಿ ಅಳವಡಿಸುವ ಮೂಲಕ ಟ್ರಾಫಿಕ್‌ ಸಿಗ್ನಲ್‌ ನಲ್ಲಿ ವಾಹನಗಳ ಸಂದಣಿಯನ್ನು ಶೇ.30ರಷ್ಟು ಹಾಗೂ ಸರಾಸರಿ ವಿಳಂಬವನ್ನು ಶೇ.13ರಷ್ಟು ಕಡಿಮೆಗೊಳಿಸಲಾಗುವುದು ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Virar kohli: ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು.

VISTARANEWS.COM


on

Virat kohli
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2024 ರ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೋಪಗೊಂಡ ಪ್ರಸಂಗ ನಡೆಯಿತು. ವಿವಾದಾತ್ಮಕ ಅಂಪೈರ್ ನಿರ್ಧಾರದ ಬಗ್ಗೆ ಆನ್ ಫೀಲ್ಡ್ ಅಂಪೈರ್ ಜೊತೆ ಅವರು ತೀವ್ರ ವಾಗ್ವಾದ ನಡೆಸಿದರು. ಅಭಿಷೇಕ್ ಪೊರೆಲ್ ಅವರಿಗೆ ನೀಡಲಾದ ಎಲ್​ಬಿಡಬ್ಲ್ಯು ನಿರ್ಧಾರದ ವಿರುದ್ಧ ಕೊಹ್ಲಿ ಸಿಡಿದೆದ್ದರು. ಡಿಸಿ ರನ್ ಚೇಸ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಈ ಘಟನೆ ನಡೆದಿದೆ.

ಮೊಹಮ್ಮದ್ ಸಿರಾಜ್ ಅವರ ಸ್ವಿಂಗ್ ಯಾರ್ಕರ್ ಆಡಲು ಪೊರೆಲ್ ತಮ್ಮ ಬ್ಯಾಟ್ ಅನ್ನು ಅಡ್ಡವಿಟ್ಟರು. ಆರ್​ಸಿಬಿ ಕ್ರಿಕೆಟಿಗರಿಗೆ ಚೆಂಡು ಸ್ಟಂಪ್​​ಗಳ ಮುಂದೆ ಅವರ ಪ್ಯಾಡ್​ಗಳಿಗೆ ಹೊಡೆದಿದೆ ಎಂದು ಮನವರಿಕೆಯಾಯಿತು. ಅವರು ಡಿಆರ್​ಎಸ್​ ಪರಿಶೀಲನೆಗೆ ಮುಂದಾದರು. ಮೂರನೇ ಅಂಪೈರ್ ಚೆಂಡು ಅವರ ಬ್ಯಾಟ್​ಗೆ ತಾಗಿದೆ ಎಂದು ನಿರ್ಧರಿಸಿದರು. ಡೆಲ್ಲಿ ಪರವಾಗಿ ತೀರ್ಪು ನೀಡಿದರು. ಹೀಗಾಗಿ ಕೊಹ್ಲಿ ಕೆರಳಿದರು. ಅವರು ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜತೆ ಸೇರಿ ಅಂಪೈರ್ ಜತೆ ಜಗಳಕ್ಕೆ ನಿಂತರು. ವಿಷಯದ ಬಗ್ಗೆ ಅಂಪೈರ್​ಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.

ಇದನ್ನೂ ಓದಿ: Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ (IPL 2024) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ (Ishant Sharma) ನಡುವೆ ಗೆಳೆತನದ ಜಟಾಪಟಿ ನಡೆಯಿತು. ಈ ವಿಡಿಯೊ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್​ನಲ್ಲಿ ಅಬ್ಬರಿಸಿದ ಕೊಹ್ಲಿ ಆರ್​ಸಿಬಿಗೆ ನೆರವಾಗಲು ಮುಂದಾದರು. ಆದರೆ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವಲ್ಲಿ ಇಶಾನ್​ ಯಶಸ್ವಿಯಾದರು. ಆರ್​​ಸಿಬಿ ಇನ್ನಿಂಗ್ಸ್​​ನ ನಿದಕ ಓವರ್​ನಲ್ಲಿಯೇ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಹೊಡೆಯುವ ಮೂಲಕ ಮಿಂಚಿದ್ದರು.

ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.


ಎರಡನೇ ಎಸೆತದಲ್ಲಿ ಕೊಹ್ಲಿ ಇಶಾಂತ್ ಶರ್ಮಾಗೆ ಸಿಕ್ಸರ್ ಬಾರಿಸಿದರು. ಬಲಗೈ ವೇಗಿ ನಂತರದ ಎಸೆತವನ್ನು ಹಾಗೆಯೇ ಬಿಟ್ಟರು.ಆದರೆ, ಓವರ್​ನ ನಾಲ್ಕನೇ ಎಸೆತದಲ್ಲಿ ಕೊಹ್ಲಿಯನ್ನು ಇಶಾಂತ್​​ ಔಟ್ ಮಾಡಿದರು. ಕೊಹ್ಲಿ ಡ್ರೈವ್ ಗೆ ಹೋದರು ಆದರೆ ಅಂತಿಮವಾಗಿ ಬ್ಯಾಟ್​ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಹಿಡಿದರು.

Continue Reading

ಪ್ರಮುಖ ಸುದ್ದಿ

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

Sunil Narine: ಪವರ್​​ಪ್ಲೇನಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ವಿಕೆಟ್ ಪಡೆದ ನಂತರ, ಸ್ಪಿನ್ನರ್ ಐಪಿಎಲ್ ಇತಿಹಾಸದಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಕ್ತ ಋತುವಿನಲ್ಲಿ ನರೈನ್ 461 ರನ್ ಮತ್ತು 15 ವಿಕೆಟ್ ಪಡೆದಿದ್ದಾರೆ.

VISTARANEWS.COM


on

Sunil Narine
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್​ರೌಂಡರ್​ ಸುನಿಲ್ ನರೈನ್ (Sunil Narine) ಶೇನ್ ವ್ಯಾಟ್ಸನ್ ಮತ್ತು ಜಾಕ್ ಕಾಲಿಸ್ ನಂತರ ಒಂದೇ ಋತುವಿನಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಡನ್ ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ಶನಿವಾರ ನಡೆದ ಐಪಿಎಲ್ 2024 ರ ಮುಖಾಮುಖಿಯಲ್ಲಿ ಕೆಕೆಆರ್ ಸ್ಪಿನ್ನರ್​​​ಗಳು ಅದ್ಭುತ ಪ್ರಯತ್ನ ನಡೆಸಿದರು ಈ ವೇಳೆ ಸುನೀಲ್​ ನರೈನ್ ಅಮೋಘ ಸಾಧನೆ ಮಾಡಿದರು.

ಮುಂಬೈ ಇಂಡಿಯನ್ಸ್ 158 ರನ್​​ಗಳ ರನ್ ಚೇಸ್ ಮಾಡಲು ಮುಂದಾದಾಗ ನರೈನ್ ಸೇರದಂತೆ ಸ್ಪಿನ್ನರ್​ಗಳು ಹಳಿ ತಪ್ಪಿಸಿದರು. ಅವರನ್ನು 16 ಓವರ್ಗಳಲ್ಲಿ 139/8 ಕ್ಕೆ ಸೀಮಿತಗೊಳಿಸಿದರು. ಮತ್ತು ಎರಡು ಬಾರಿಯ ಚಾಂಪಿಯನ್ಸ್ ಕೆಕೆಆರ್​ ಪ್ಲೇಆಫ್ ತಲುಪಿದ ಮೊದಲ ತಂಡವಾಯಿತು.

ಈ ಮೊದಲು ಮಳೆಯಿಂದ ಪಂದ್ಯವನ್ನು 16 ಓವರ್​ಗಳ ಪಂದ್ಯವನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಐಪಿಎಲ್ 2024 ರ 60 ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ವಿರುದ್ಧ ನರೈನ್ ತಮ್ಮ ಮೂರು ಓವರ್​ಗಳಲ್ಲಿ ಒಂದು ವಿಕೆಟ್ ಪಡೆದರು. ಪವರ್​​ಪ್ಲೇನಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ವಿಕೆಟ್ ಪಡೆದ ನಂತರ, ಸ್ಪಿನ್ನರ್ ಐಪಿಎಲ್ ಇತಿಹಾಸದಲ್ಲಿ 400 ರನ್ ಮತ್ತು 15 ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಕ್ತ ಋತುವಿನಲ್ಲಿ ನರೈನ್ 461 ರನ್ ಮತ್ತು 15 ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ವಾಟ್ಸನ್ (472 ರನ್, 17 ವಿಕೆಟ್) ಹಾಗೂ 2012ರ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಕಾಲಿಸ್ (409 ರನ್, 15 ವಿಕೆಟ್) ಈ ಸಾಧನೆ ಮಾಡಿದ್ದಾರೆ.

IPL 2024 : ಕೆಕೆಆರ್ ತಂಡದ ಇನ್ನೊಬ್ಬ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

ಇಲ್ಲಿನ ಈಡನ್ ಗಾರ್ಡನ್ಸ್​ನಲ್ಲಿ ಮೇ 11 ರಂದು ನಡೆದ ಐಪಿಎಲ್ 2024 ರ 60 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 18 ರನ್​ಗಳ ಗೆಲುವು ಸಾಧಿಸಿದ ಸಂದರ್ಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್ಮನ್ ರಮಣ್​ದೀಪ್​ ಸಿಂಗ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20 ರ ಪ್ರಕಾರ ರಮಣ್​​ದೀಪ್​ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ ಎಂದು ಸಾಬೀತಾಗಿದೆ. ಈ ಅಪರಾಧಕ್ಕಾಗಿ ಕೆಕೆಆರ್ ಬ್ಯಾಟರ್​ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.

27 ವರ್ಷದ ಆಟಗಾರ ಅಪರಾಧ ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ತೆಗೆದುಕೊಂಡ ನಿರ್ಧಾರಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ.

Continue Reading

ಪ್ರಮುಖ ಸುದ್ದಿ

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Virat kohli: ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.

VISTARANEWS.COM


on

Virat Kohli
Koo

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ (IPL 2024) ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ (Ishant Sharma) ನಡುವೆ ಗೆಳೆತನದ ಜಟಾಪಟಿ ನಡೆಯಿತು. ಈ ವಿಡಿಯೊ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಬೌಲಿಂಗ್​ನಲ್ಲಿ ಅಬ್ಬರಿಸಿದ ಕೊಹ್ಲಿ ಆರ್​ಸಿಬಿಗೆ ನೆರವಾಗಲು ಮುಂದಾದರು. ಆದರೆ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವಲ್ಲಿ ಇಶಾನ್​ ಯಶಸ್ವಿಯಾದರು. ಆರ್​​ಸಿಬಿ ಇನ್ನಿಂಗ್ಸ್​​ನ ನಿದಕ ಓವರ್​ನಲ್ಲಿಯೇ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾ ಅವರ ಎಸೆತಕ್ಕೆ ಹೊಡೆಯುವ ಮೂಲಕ ಮಿಂಚಿದ್ದರು.

ಭಾರತದ ಮಾಜಿ ನಾಯಕ ಇನ್ನಿಂಗ್ಸ್​ನ ಎರಡನೇ ಮತ್ತು ನಾಲ್ಕನೇ ಎಸೆತವನ್ನು ಎಸೆಯಲು ಬಂದಾಗ ವೇಗಿ ಇಶಾಂತ್ ವಿರುದ್ಧ ಆಕ್ರಮಣ ಮಾಡಲು ನಿರ್ಧರಿಸಿದರು. ಓವರ್​ನ ಮೊದಲ ಎಸೆತದಲ್ಲಿ, ಕೊಹ್ಲಿ ಎಸೆತ ಬ್ಯಾಟ್​ನ ಅಂಚಿಗೆ ತಾಗಿತು. ಅದೃಷ್ಟವಶಾತ್ ಅದು ವಿಕೆಟ್ ಕೀಪರ್​ಗಿಂತ ದೂರ ಹೋಯಿತು. ಕೊಹ್ಲಿಗೆ ನಾಲ್ಕು ರನ್​ಗಳು ಸಿಕ್ಕವು. ಈ ವೇಳೆ ಇಬ್ಬರೂ ಆಟಗಾರರು ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.

ಇದನ್ನೂ ಓದಿ: Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

ಎರಡನೇ ಎಸೆತದಲ್ಲಿ ಕೊಹ್ಲಿ ಇಶಾಂತ್ ಶರ್ಮಾಗೆ ಸಿಕ್ಸರ್ ಬಾರಿಸಿದರು. ಬಲಗೈ ವೇಗಿ ನಂತರದ ಎಸೆತವನ್ನು ಹಾಗೆಯೇ ಬಿಟ್ಟರು.ಆದರೆ, ಓವರ್​ನ ನಾಲ್ಕನೇ ಎಸೆತದಲ್ಲಿ ಕೊಹ್ಲಿಯನ್ನು ಇಶಾಂತ್​​ ಔಟ್ ಮಾಡಿದರು. ಕೊಹ್ಲಿ ಡ್ರೈವ್ ಗೆ ಹೋದರು ಆದರೆ ಅಂತಿಮವಾಗಿ ಬ್ಯಾಟ್​ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಹಿಡಿದರು.

ಇಶಾಂತ್ ಶರ್ಮಾ ಈ ವಿಕೆಟ್​​ನಿಂದ ಸಂತೋಷಪಟ್ಟರು. ಅದರ ಬಗ್ಗೆ ಕೊಹ್ಲಿಗೆ ತಿಳಿಸಲು ನಿರ್ಧರಿಸಿದರು. ಕೊಹ್ಲಿ ನಿರ್ಗಮಿಸುವ ಮೊದಲು ಇಬ್ಬರೂ ಆಟಗಾರರು ನಗುವನ್ನು ಹಂಚಿಕೊಂಡರು. ಕೊಹ್ಲಿ 13 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 27 ರನ್ ಗಳಿಸಿ ನಿರ್ಗಮಿಸಿದರು. ರಜತ್ ಪಾಟಿದಾರ್ ಹಾಗೂ ವಿಲ್ ಜಾಕ್ಸ್ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ 9 ವಿಕೆಟ್​ಗೆ 187 ರನ್ ಗಳಿಸಿದೆ.

ಐಪಿಎಲ್ 2024 ರಲ್ಲಿ ಕೊಹ್ಲಿಯ ಅಭಿಯಾನದ ಬಗ್ಗೆ ಮಾತನಾಡುತ್ತಾ, ಅವರು ಅದ್ಭುತ ರನ್ ಗಳಿಸಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆಡಿರುವ 13 ಪಂದ್ಯಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 661 ರನ್ ಗಳಿಸಿದ್ದಾರೆ.

Continue Reading

ಕ್ರೀಡೆ

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Ravindra jadeja: ಸಂಜು ಎಸೆತವು ಜಡೇಜಾ ಅವರ ಬೆನ್ನಿಗೆ ಬಡಿಯಿತು. ರಿಪ್ಲೇಗಳನ್ನು ನೋಡಿದ ನಂತರ ಮೂರನೇ ಅಂಪೈರ್ ಸಿಎಸ್ಕೆ ಸ್ಟಾರ್ ಚೆಂಡನ್ನು ಬೇಕೆಂತಲೇ ಮುಂದಕ್ಕೆ ಹೋಗದಂತೆ ತಡೆದಿದ್ದಾರೆ. ಚೆಂಡು ವಿಕೆಟ್​ಗೆ ಹೋಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು ಎಂದು ತೀರ್ಮಾನಿಸಿದರು. ಜಡೇಜಾ ಉದ್ದೇಶಪೂರ್ವಕವಾಗಿ ಚೆಂಡನ್ನು ಸ್ಟಂಪ್ ಗಳ ಕಡೆಗೆ ಹೋಗದಂತೆ ತಡೆದಿದ್ದಾರೆ ಎಂದು ಅಂಪೈರ್ ಗೆ ಔಟ್ ತೀರ್ಪು ಕೊಟ್ಟರು.

VISTARANEWS.COM


on

Ravindra Jadeja
Koo

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ (ಮೇ 12) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದ (IPL 2024) ವೇಳೆ ರವೀಂದ್ರ ಜಡೇಜಾ (Ravindra Jadeja ) ಅವರು ಅನಪೇಕ್ಷಿತವಾಗಿ ಔಟಾದರು. ಫೀಲ್ಡರ್​ಗಳಿಗೆ ಅಂದರೆ ಆಟಕ್ಕೆ ಅಡ್ಡಿಪಡಿಸಿದ ನಿಯಮದ ಪ್ರಕಾರ ರವೀಂದ್ರ ಜಡೇಜಾ ಅವರನ್ನು ಔಟ್ ಎಂದು ಅಂಪೈರ್​ಗಳು ತೀರ್ಮಾನಿಸಿದರು. ರವೀಂದ್ರ ಜಡೇಜಾ ಅವರು ಅವೇಶ್ ಖಾನ್ ಅವರ ಬೌಲಿಂಗ್​ ಎದುರಿಸುತ್ತಿದ್ದಾಗ 16 ನೇ ಓವರ್​ನಲ್ಲಿ ಈ ಪ್ರಸಂಗ ನಡೆದಿದೆ. 142 ರನ್​ಗ ಗುರಿ ಬೆನ್ನತ್ತಿದ ಸಿಎಸ್​ಕೆ ತಂಡ 15ನೇ ಓವರ್​ನಲ್ಲಿ ಶಿವಂ ದುಬೆ ಔಟಾದ ಬಳಿಕ 4 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. ಆದಾಗ್ಯೂ, ರವೀಂದ್ರ ಜಡೇಜಾ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಮೈದಾನಕ್ಕೆ ಅಡ್ಡಿಪಡಿಸಿದ ಕಾರಣ ಏಳು ಎಸೆತಗಳಲ್ಲಿ ಕೇವಲ 5 ರನ್​ ಗಳಿಸಿ ನಿರ್ಗಮಿಸಿದರು.

ಓವರ್​ನ ಐದನೇ ಎಸೆತದಲ್ಲಿ ಈ ಘಟನೆ ನಡೆದಿದೆ. ರವೀಂದ್ರ ಜಡೇಜಾ ಅವೇಶ್ ಹಾಕಿದ ಎಸೆತವನ್ನು ಥರ್ಡ್ ಮ್ಯಾನ್ ಏರಿಯಾ ಕಡೆಗೆ ಹೊಡೆದು ರನ್ ಗಳಿಸಲು ಹೊರಟರು. ಸಿಎಸ್​ಕೆ ​ಅಲ್​ರೌಂಡರ್​ ಎರಡನೇ ರನ್ ಗಳಿಸಲು ಬಯಸಿದರು ಮತ್ತು ಓಡಲು ಪ್ರಾರಂಭಿಸಿದ್ದರು. ಆದರೆ, ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಎರಡನೇ ರನ್ ಗಳಿಸಲು ಒಪ್ಪಲಿಲ್ಲ.

ಗಾಯಕ್ವಾಡ್ ಪ್ರತಿಕ್ರಿಯಿಸದ ಕಾರಣ, ರವೀಂದ್ರ ಜಡೇಜಾ ಹಿಂದಕ್ಕೆ ತಿರುಗಿ ನಾನ್ ಸ್ಟ್ರೈಕರ್ ತುದಿಯತ್ತ ಓಡಲು ಪ್ರಾರಂಭಿಸಿದರು. ಈ ಮಧ್ಯೆ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಫೀಲ್ಡರ್​ ಕಡೆಯಿಂದ ಬಂದ ಎಸೆತವನ್ನು ಸ್ವೀಕರಿಸಿ ಮತ್ತು ಸ್ಟ್ರೈಕರ್ ಅಲ್ಲದ ತುದಿಯ ವಿಕೆಟ್​ಗೆ ಹೊಡೆಯಲು ಮುಂದಾದರು.

ಅವರ ಎಸೆತವು ಜಡೇಜಾ ಅವರ ಬೆನ್ನಿಗೆ ಬಡಿಯಿತು. ರಿಪ್ಲೇಗಳನ್ನು ನೋಡಿದ ನಂತರ ಮೂರನೇ ಅಂಪೈರ್ ಸಿಎಸ್ಕೆ ಸ್ಟಾರ್ ಚೆಂಡನ್ನು ಬೇಕೆಂತಲೇ ಮುಂದಕ್ಕೆ ಹೋಗದಂತೆ ತಡೆದಿದ್ದಾರೆ. ಚೆಂಡು ವಿಕೆಟ್​ಗೆ ಹೋಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು ಎಂದು ತೀರ್ಮಾನಿಸಿದರು. ಜಡೇಜಾ ಉದ್ದೇಶಪೂರ್ವಕವಾಗಿ ಚೆಂಡನ್ನು ಸ್ಟಂಪ್ ಗಳ ಕಡೆಗೆ ಹೋಗದಂತೆ ತಡೆದಿದ್ದಾರೆ ಎಂದು ಅಂಪೈರ್ ಗೆ ಔಟ್ ತೀರ್ಪು ಕೊಟ್ಟರು.

ಇದನ್ನೂ ಓದಿ: IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

ಅಂಪೈರ್ ಸ್ಯಾಮ್ಸನ್ ಪರವಾಗಿ ತಮ್ಮ ನಿರ್ಧಾರವನ್ನು ನೀಡಿದರು. ನಂತರ ಜಡೇಜಾ ಮತ್ತು ಗಾಯಕ್ವಾಡ್ ಅಂಪೈರ್​ಗಳ ಜತೆ ಚರ್ಚೆ ನಡೆಸುತ್ತಿರುವುದು ಕಂಡುಬಂದಿತು. ಆದರೆ ಅದು ಹೆಚ್ಚಿನ ವ್ಯತ್ಯಾಸವನ್ನುಂಟುಮಾಡಲಿಲ್ಲ ಮತ್ತು ಅವರು ಪೆವಿಲಿಯನ್​ಗೆ ಮರಳಬೇಕಾಯಿತು.

ರವೀಂದ್ರ ಜಡೇಜಾ ಮೊದಲಿಗರಲ್ಲ


ರವೀಂದ್ರ ಜಡೇಜಾ ಐಪಿಎಲ್​​ನಲ್ಲಿ ಆಟಕ್ಕೆ ಅಡ್ಡಿಪಡಿಸಿದ ಮೊದಲ ಆಟಗಾರನಲ್ಲ. ಇದಕ್ಕೂ ಮುನ್ನ ಇಬ್ಬರು ಆಟಗಾರರು ಇದೇ ರೀತಿಯ ತಪ್ಪಿಗೆ ವಿಕೆಟ್ ಕಳೆದುಕೊಂಡಿದ್ದರು. ಮೈದಾನಕ್ಕೆ ಅಡ್ಡಿಪಡಿಸಿ ಔಟ್ ಆದ ಮೊದಲ ಆಟಗಾರ ಯೂಸುಫ್ ಪಠಾಣ್.

2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುವಾಗ ಮೈದಾನಕ್ಕೆ ಅಡ್ಡಿಪಡಿಸಿದ ಕಾರಣ ಅವರನ್ನು ಔಟ್ ಎಂದ ಘೋಷಿಸಲಾಗಿತ್ತು. ನಂತರ 2019 ರಲ್ಲಿ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಾಗ ಅಮಿತ್ ಮಿಶ್ರಾ ಅವರನ್ನು ಮೈದಾನಕ್ಕೆ ಅಡ್ಡಿಪಡಿಸಿ ಕಾರಣಕ್ಕೆ ಔಟ್ ಆದರು.

Continue Reading
Advertisement
Virat kohli
Latest4 mins ago

Virat kohli: ಅಂಪೈರ್​ಗಳ ಜತೆ ಮತ್ತೆ ಜಗಳವಾಡಿದ ವಿರಾಟ್​ ಕೊಹ್ಲಿ; ಇಲ್ಲಿದೆ ವಿಡಿಯೊ

Sunil Narine
ಪ್ರಮುಖ ಸುದ್ದಿ23 mins ago

Sunil Narine : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದು ಎಲೈಟ್​ ಪಟ್ಟಿ ಸೇರಿದ ಸುನೀಲ್ ನರೈನ್​

vijay Rao herur
ಸಿನಿಮಾ28 mins ago

Vijay Rao Herur: ‘ವಿಜಯದಾಸರು’ ಚಿತ್ರದ ಸಹ ನಟ ವಿಜಯ್‌ ರಾವ್ ಹೇರೂರು ವಿಧಿವಶ

Virat Kohli
ಪ್ರಮುಖ ಸುದ್ದಿ36 mins ago

Virat kohli: ಕೊಹ್ಲಿಯನ್ನುಔಟ್ ಮಾಡಿ ಕೆಣಕಿದ ಇಶಾಂತ್​ ಶರ್ಮಾ; ವಿಡಿಯೊ ನೋಡಿ

Ravindra Jadeja
ಕ್ರೀಡೆ54 mins ago

Ravindra Jadeja : ವಿಕೆಟ್​ಗೆ ಹೋಗುತ್ತಿದ್ದ ಚೆಂಡು ತಡೆದ ಜಡೇಜಾಗೆ ಔಟ್ ಕೊಟ್ಟ ಅಂಪೈರ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ55 mins ago

Rain News: ಬಾಗಲಕೋಟೆಯಲ್ಲಿ ಸಿಡಿಲಿಗೆ ಬಾಲಕ ಬಲಿ; ಬೆಳಗಾವಿಯ ಮನೆಗಳಿಗೆ ನುಗ್ಗಿದ ಮಳೆ ನೀರು

IPL 2024
ಪ್ರಮುಖ ಸುದ್ದಿ1 hour ago

IPL 2024 : ಅತಿಯಾಗಿ ಸಂಭ್ರಮಿಸುತ್ತಿದ್ದ ಡೆಲ್ಲಿ ಬೌಲರ್​ ರಸಿಕ್ ಸಲಾಮ್​ನನ್ನು ತಳ್ಳಿದ ರಜತ್​ ಪಾಟೀದಾರ್​

IPL 2024
Latest1 hour ago

IPL 2024 : ಸಿಎಸ್​ಕೆ ವರ್ಸಸ್​ ಆರ್​ಆರ್​ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಿತಾ? ಅಭಿಮಾನಿಗಳ ಅನುಮಾನ

Self Harming
ಕ್ರೈಂ2 hours ago

Self Harming: ಎರಡು ಸಬ್ಜೆಕ್ಟ್‌ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Narendra modi
ದೇಶ2 hours ago

Narendra Modi : 2019ರಲ್ಲಿ ಬಿಹಾರದ ಒಂದು ಕ್ಷೇತ್ರದಲ್ಲಿ ಸೋತಿದ್ದೆವು; ಈ ಬಾರಿ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದ ಮೋದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case I was never kidnapped and son has made a false complaint Video of victim goes viral
ಕ್ರೈಂ4 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ5 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ5 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ9 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ10 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ18 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಟ್ರೆಂಡಿಂಗ್‌