Weight Loss: ತೂಕ ಇಳಿಕೆಯ ಶತ್ರು ಈ ಮಧ್ಯರಾತ್ರಿಯ ಬಾಯಿ ಚಪಲ! ಇದಕ್ಕೇನು ಪರಿಹಾರ? - Vistara News

ಆರೋಗ್ಯ

Weight Loss: ತೂಕ ಇಳಿಕೆಯ ಶತ್ರು ಈ ಮಧ್ಯರಾತ್ರಿಯ ಬಾಯಿ ಚಪಲ! ಇದಕ್ಕೇನು ಪರಿಹಾರ?

ಮಧ್ಯರಾತ್ರಿಯ ತಿನ್ನುವ ಚಪಲವನ್ನು ಮೀರುವುದು ಹೇಗೆ? ಇದರಿಂದ ಹೊರಬರುವುದು ಹೇಗೆ ಎಂಬ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಯಸುವವರಿಗೆ ಇಲ್ಲಿ ಕೆಲವು (weight loss) ಸಲಹೆಗಳಿವೆ.

VISTARANEWS.COM


on

Weight Loss tension
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳಷ್ಟು ಮಂದಿಯ ಸಮಸ್ಯೆ ಎಂದರೆ ಮಧ್ಯರಾತ್ರಿಯ ಹಸಿವು. ಹೌದು. ಇಡೀ ದಿನ ಒಂದು ಶಿಸ್ತುಬದ್ಧ ಆಹಾರ ಕ್ರಮದಲ್ಲಿ ದಿನ ಕಳೆದ ಮೇಲೆ, ಅದ್ಯಾಕೋ ಮಧ್ಯರಾತ್ರಿಯ ಹೊತ್ತು ಏನಾದರೂ ತಿನ್ನಬೇಕೆಂಬ ಚಪಲ ಹೆಚ್ಚುತ್ತದೆ. ಇಡೀ ದಿನದ ತಪಸ್ಸು ನೀರಿನಲ್ಲಿ ಮಾಡಿದ ಹೋಮದಂತಾಗಿಬಿಡುತ್ತದೆ. ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರೊಂದು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಇದರ ಪರಿಣಾಮ ಅನಾರೋಗ್ಯಕರ ಕುರುಕಲು ತಿನಿಸುಗಳೇ ಹೊಟ್ಟೆ ಸೇರುತ್ತದೆ. ಹಾಗಾದರೆ, ಈ ಮಧ್ಯರಾತ್ರಿಯ ತಿನ್ನುವ ಚಪಲವನ್ನು ಮೀರುವುದು ಹೇಗೆ? ಇದರಿಂದ ಹೊರಬರುವುದು ಹೇಗೆ ಎಂಬ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಯಸುವವರಿಗೆ ಇಲ್ಲಿ (weight loss) ಕೆಲವು ಸಲಹೆಗಳಿವೆ.

protein food

ರಾತ್ರಿಯೂಟ ಪ್ರೊಟೀನ್‌ನಿಂದ ಶ್ರೀಮಂತವಾಗಿರಲಿ

ರಾತ್ರಿಯ ಊಟವನ್ನು ಬೇಗ ಮುಗಿಸುವವರೂ ಸೇರಿದಂತೆ ಒಂದು ಬಹುಮುಖ್ಯ ಉಪಾಯವೆಂದರೆ, ರಾತ್ರಿಯ ಊಟದ ಆಯ್ಕೆ. ನಿಮ್ಮ ರಾತ್ರಿಯ ಊಟದಲ್ಲಿ ಪ್ರೊಟೀನ್‌ ಹೆಚ್ಚಿರಲಿ. ಪ್ರೊಟೀನ್‌ನಿಂದ ಕೂಡಿದ ಆಹಾರ ಹೊಟ್ಟೆ ತುಂಬಿಸಿದ ಅನುಭವ ಕೊಡುತ್ತದೆ. ಪರಿಣಾಮವಾಗಿ ಹಸಿವಾಗುವುದಿಲ್ಲವಾದ್ದರಿಂದ ತಡರಾತ್ರಿ ತಿನ್ನಬೇಕೆಂಬ ತುಡಿತ ಕಾಡುವುದಿಲ್ಲ. ಹಾಗಾಗಿ ರಾತ್ರಿಯ ಊಟವನ್ನೇ ಯೋಚಿಸಿ ಮಾಡಿ. ಆಗ ಏನೇನೋ ಹಾಳುಮೂಳು ತಡರಾತ್ರಿ ತಿನ್ನುವುದು ತಪ್ಪುತ್ತದೆ.

beautiful asian young woman eating healthy food Sleep Tips

ಕಡಿಮೆ ತಿನ್ನಿ

ರಾತ್ರಿ ಹೀಗೆ ಪ್ರೊಟೀನ್‌ಭರಿತ ಊಟ ಮಾಡಿದರೂ ಮಧ್ಯರಾತ್ರಿ ಹಸಿವಾಯಿತು ಎಂದೇ ಇಟ್ಟುಕೊಳ್ಳೋಣ. ಆಗ ಏನು ಮಾಡುವುದು, ಏನಾದರೂ ತಿನ್ನದೆ ಇದ್ದರೆ ಅಸಿಡಿಟಿಯ ಸಮಸ್ಯೆ ಕೆಲವರದ್ದು. ಹೀಗಾಗಿ ಏನು ತಿನ್ನಬಹುದು, ಏನು ಮಾಡಬೇಕು ಎಂಬ ಪ್ರಶ್ನೆ ಕೆಲವರದ್ದು. ಇಂಥ ಸಂದರ್ಭ ಖಂಡಿತವಾಗಿಯೂ ತಿನ್ನಿ. ಆದರೆ ಏನು ತಿನ್ನುತ್ತಿದ್ದೀರಿ ಎಂಬ ಬಗ್ಗೆ ಗಮನ ಇರಲಿ. ಜೊತೆಗೆ ಎಷ್ಟು ತಿನ್ನುತ್ತಿದ್ದೀರಿ ಎಂಬ ಗಮನವೂ ಇರಲಿ. ಹಾಗಾಗಿ ಇಂಥ ಸಂದರ್ಭ ತಿನ್ನಲಿಕ್ಕಾಗಿಯೇ ಕೆಲವು ಆರೋಗ್ಯಕರ ಆಹಾರಗಳನ್ನು ಸ್ನ್ಯಾಕ್‌ಗಳನ್ನು ಜೊತೆಗೆ ಇಟ್ಟುಕೊಂಡಿರಿ. ಅಷ್ಟೇ ಅಲ್ಲ, ಹೆಚ್ಚು ತಿನ್ನಬೇಡಿ. ಕಡಿಮೆ ಪ್ರಮಾಣದಲ್ಲಿ ತಿಂದು ಹೊಟ್ಟೆಯನ್ನು ಸಮಾಧಾನಪಡಿಸಿ.

Image Of Dry Fruits for Womens Health

ಒಣಬೀಜಗಳು

ಹೊಟ್ಟೆಯನ್ನು ಸಮಾಧಾನಪಡಿಸುವ ಇಂತಹ ಆರೋಗ್ಯಕರ ಸ್ನ್ಯಾಕ್‌ಗಳು ಏನಿವೆ ಎಂದು ನೀವು ಕೇಳಿದರೆ, ಖಂಡಿತ ಇವೆ. ಒಣಬೀಜಗಳು ಇಂಥ ಸಮಯಕ್ಕೆ ಹೇಳಿ ಮಾಡಿಸಿದ ಸ್ನ್ಯಾಕ್‌ಗಳು. ಕೆಲವು ಹುರಿದ ಧಾನ್ಯಗಳು, ಒಣಬೀಜಗಳು, ಮಖಾನಾದಂತಹ ಕಡಿಮೆ ಕ್ಯಾಲರಿಯ ಸ್ನ್ಯಾಕ್‌ಗಳನ್ನು ಇಟ್ಟುಕೊಳ್ಳಬಹುದು. ಇವು ಕೇವಲ ಆರೋಗ್ಯಕರವಷ್ಟೇ ಅಲ್ಲ, ಇದರಲ್ಲಿರುವ ಕೊಬ್ಬೂ ಕೂಡಾ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಒಳ್ಳೆಯ ಕೊಬ್ಬೇ ಆಗಿದೆ. ಹೀಗಾಗಿ. ಚಿಪ್ಸ್‌, ಕುರುಕಲು, ಎಣ್ಣೆ ಪದಾರ್ಥಗಳು, ಜ್ಯೂಸ್‌ಗಳು, ಟೆಟ್ರಾ ಪ್ಯಾಕೆಟ್‌ಗಳು, ಕೆಫಿನ್‌ಯುಕ್ತ ಪೇಯಗಳು ಇತ್ಯಾದಿಗಳನ್ನು ಹೀರುವ ಅಭ್ಯಾಸವಿದ್ದರೆ ಖಂಡಿತಾ ಬಿಡಿ. ಬಹುಮುಖ್ಯವಾಗಿ ಇಂಥವನ್ನು ಖರೀದಿಸುವ ಅಭ್ಯಾಸವನ್ನೇ ಮೊದಲು ಬಿಡಿ. ಉತ್ತಮ ಆರೋಗ್ಯಕರ ಒಣಬೀಜಗಳು, ಹುರುದ ಧಾನ್ಯಗಳು ಇತ್ಯಾದಿಗಳನ್ನು ಪಕ್ಕದಲ್ಲಿಡಿ. ಕೆಲ ದಿನಗಳ ಕಾಲ ಈ ಅಭ್ಯಾಸ ಕಷ್ಟವಾಗಬಹುದು. ಆದರೆ, ಕಷ್ಟವೇನಲ್ಲ. ಪ್ರಯತ್ನ ಪಟ್ಟರೆ ಖಂಡಿತ ಸಾಧ್ಯವಾಗುತ್ತದೆ.

ಇದನ್ನೂ ಓದಿ: Boost Gut Health In Kids: ಮಕ್ಕಳಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡುವುದು ಹೇಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Benefits of Mango Leaves: ಮಾವಿನೆಲೆಗಳು ತೋರಣ ಕಟ್ಟಲಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!

ಮಾವಿನೆಲೆ ಎನ್ನುತ್ತಿದ್ದಂತೆ ತೋರಣಗಳೇ ನೆನಪಾಗುತ್ತವೆ ನಮಗೆ. ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೆ ಹಬ್ಬವಾಗಲೀ ಹರಿದಿನವಾಗಲಿ, ಮಾವಿನ ತೋರಣವಿದ್ದರೆ ಶೋಭೆ. ಕಳಶಗಳಿಗೆ ಮಾವಿನೆಲೆ ಬೇಕು. ಒಳ್ಳೆಯ ಕೆಲಸಗಳು ಏನೇ ಇದ್ದರೂ ಅದಕ್ಕೆ ಮಾವಿನೆಲೆ ಇಲ್ಲದಿದ್ದರಾಗದು. ಇದಕ್ಕಿಂತ ಹೆಚ್ಚಿನ ಉಪಯೋಗಗಳು (Health Benefits of Mango Leaves) ಮಾವಿನೆಲೆಗಳಿಗೆ ಏನಿವೆ?

VISTARANEWS.COM


on

Health Benefits of Mango Leaves
Koo

ಇದು ಮಾವಿನ ಕಾಲ. ಹಾಗೆನ್ನುತ್ತಿದ್ದಂತೆ ಮಾವಿನ ಹಣ್ಣಿನ ಘಮ್ಮೆನ್ನುವ ಪರಿಮಳ, ರುಚಿಯೆಲ್ಲ ನೆನಪಾಗಿ ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣಿಗಾದರೆ ಇದೊಂದೇ ಋತುವಿಗೆ ಕಾಯಬೇಕು. ಆದರೆ ಮಾವಿನ ಎಲೆಗಳ ಉಪಯೋಗಕ್ಕೆ ವರ್ಷವಿಡೀ ಒಳ್ಳೆಯ ಕಾಲ. ಆದರೆ ಹಣ್ಣಿಗಿರುವ ಉಪಯೋಗ ಮಾವಿನ ಎಲೆಗಳಿಗೆ ಇಲ್ಲವಲ್ಲ. ಹಾಗಿರುವಾಗ ವರ್ಷವಿಡೀ ಎಲೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಯೋಚಿಸಬೇಡಿ. ಮಾವಿನ ಎಲೆಗಳಲ್ಲಿ ಉಪ್ಪಿನಕಾಯಿ ಹಾಕುವುದೋ ಸೀಕರಣೆ ಮಾಡುವುದೋ ಆಗದಿದ್ದರೂ, ಅದಕ್ಕೂ ತನ್ನದೇ ಆದ ಉಪಯೋಗಗಳಿವೆ. ಏನವು Health (Benefits of Mango Leaves) ಎಂಬುದನ್ನು ಗಮನಿಸೋಣ. ಮಾವಿನೆಲೆ ಎನ್ನುತ್ತಿದ್ದಂತೆ ತೋರಣಗಳೇ ನೆನಪಾಗುತ್ತವೆ ನಮಗೆ. ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೂ ಒಂದು ಮಾವಿನ ತೋರಣ, ಹಸಿರು ಚಪ್ಪರ ಆಗಲೇ ಬೇಕು. ಹಬ್ಬವಾಗಲೀ ಹರಿದಿನವಾಗಲಿ, ಮಾವಿನ ತೋರಣವಿದ್ದರೆ ಶೋಭೆ. ಕಳಶಗಳಿಗೆ ಮಾವಿನೆಲೆ ಬೇಕು. ಯಾವುದೋ ದೇವರ ಪ್ರತಿಷ್ಠಾಪನೆ, ಪೂಜೆ ಇದ್ದರೆ ಅದಕ್ಕೂ ಮಾವಿನೆಲೆ ಅಗತ್ಯ. ಒಳ್ಳೆಯ ಕೆಲಸಗಳು ಏನೇ ಇದ್ದರೂ ಅದಕ್ಕೆ ಮಾವಿನೆಲೆ ಇಲ್ಲದಿದ್ದರಾಗದು. ಹೀಗೆ ಧರ್ಮ, ಸಂಪ್ರದಾಯ, ಸಂಸ್ಕೃತಿಯ ಉತ್ಸವಗಳಿಗೆ ಮಾವಿನೆಲೆ ಅಲಂಕಾರಕ್ಕೂ ಬೇಕು, ಅಗತ್ಯಕ್ಕೂ ಸೈ. ಇದಕ್ಕಿಂತ ಹೆಚ್ಚು ಇನ್ನೇನು?
ಕೆಲವು ಬಗೆಯ ಸಾಂಪ್ರದಾಯಿಕ ಔಷಧಿಗಳಿಗೆ ಮಾವಿನೆಲೆ ಅಗತ್ಯ. ಬೆಳಗ್ಗೆ ಏಳುತ್ತಿದ್ದಂತೆ, ಮಾವಿನೆಲೆಯನ್ನು ಹಲ್ಲುಜ್ಜುವುದಕ್ಕೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಚಿಗುರೆಲೆಗಳನ್ನು ಕಷಾಯ ಮಾಡಿ, ಅದನ್ನು ಹಲವು ಸಮಸ್ಯೆಗಳಿಗೆ ಮದ್ದಾಗಿ ಉಪಯೋಗಿಸುತ್ತಿದ್ದರು. ಜೀರ್ಣಾಂಗಗಳ ಸಮಸ್ಯೆ ಇದ್ದರೆ, ಮಧುಮೇಹ ನಿಯಂತ್ರಣಕ್ಕೆ, ಕೆಲವು ಬಗೆಯ ಶ್ವಾಸಕೋಶದ ತೊಂದರೆಗಳಿಗೆಲ್ಲ ಮಾವಿನೆಲೆ ಕಷಾಯವನ್ನು ಔಷಧಿಯಾಗಿ ಬಳಸುತ್ತಿದ್ದರು. ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಎಲೆಗಳು ಒಟ್ಟಾರೆ ದೇಹಸ್ವಾಸ್ಥ್ಯಕ್ಕೆ ಅನುಕೂಲ ಒದಗಿಸುತ್ತವೆ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟ್ರಾಲ್‌ ಕಡಿತ

ಮಾವಿನೆಲೆಯನ್ನು ಗ್ರೀನ್‌ ಟೀ ರೀತಿಯಲ್ಲಿ ಅಥವಾ ಕಷಾಯದ ರೀತಿಯಲ್ಲಿ ಔಷಧಿಗಾಗಿ ಉಪಯೋಗಿಸುವ ವಾಡಿಕೆಯಿದೆ. ಇದನ್ನು ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಮತ್ತು ಕ್ವೆರ್ಸೆಟಿನ್‌ ಎಂಬ ಸಂಯುಕ್ತಗಳು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಜೀರ್ಣಾಂಗಗಳಲ್ಲಿ ಕೊಲೆಸ್ಟ್ರಾಲ್‌ ಹೀರಲ್ಪಡದೆ ಇರುವಂತೆ, ಈ ಕೊಬ್ಬು ದೇಹದಿಂದ ಹೊರ ಹೋಗುವಂತೆ ಮಾಡುತ್ತವೆ. ಈ ಮೂಲಕ ಹೃದಯದ ಆರೋಗ್ಯ ಚೆನ್ನಾಗಿರುವಂತೆ ಮಾಡುತ್ತವೆ.

Diabetes management Daruharidra Benefits

ಮಧುಮೇಹ ನಿಯಂತ್ರಣ

ಮಾವಿನೆಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ರೋಗ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಅಂಶವು ಮಧುಮೇಹ ನಿಯಂತ್ರಣಕ್ಕೆ ನೆರವಾಗಬಲ್ಲವು. ಇದು ದೇಹದಲ್ಲಿ ನೈಸರ್ಗಿಕವಾಗಿ ಇನ್‌ಸುಲಿನ್‌ ಉತ್ಪಾದನೆಯನ್ನು ಹೆಚ್ಚಿಸಲು ಯತ್ನಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ.

healthy internal organs of human digestive system

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಪಚನಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆ ಈ ಎಲೆಗಳಿಗಿದೆ. ಡಯರಿಯಾದಂಥ ತೊಂದರೆಗಳಿದ್ದಾಗ ಇದನ್ನು ಮದ್ದಾಗಿ ಬಳಸುವ ಅಭ್ಯಾಸ ಕೆಲವೆಡೆಗಳಲ್ಲಿದೆ. ಜೊತೆಗೆ ದೇಹದ ಚಯಾಪಚಯ ಹೆಚ್ಚು ಮಾಡುವ ಗುಣವಿದೆ ಇದಕ್ಕೆ. ಹಾಗಾಗಿ ಅಜೀರ್ಣದಂಥ ತೊಂದರೆಗಳು ಬಗೆಹರಿಯಬಹುದು. ಜೊತೆಗೆ, ತೂಕ ಇಳಿಕೆಗೆ ಸ್ವಲ್ಪ ನೆರವೂ ನೀಡಬಹುದು.

Doctor listens to the human lungs

ಶ್ವಾಸಕೋಶ ಸಬಲ

ಕಫ, ಕೆಮ್ಮು, ದಮ್ಮಿನಂಥ ತೊಂದರೆಗಳ ನಿವಾರಣೆಗೆ ಮಾವಿನೆಲೆ ಉಪಯುಕ್ತ. ಶ್ವಾಸನಾಳದಲ್ಲಿ ಬಿಗಿದಿರುವ ಕಫವನ್ನು ಸಡಿಲಿಸಿ, ಕೆಮ್ಮು ಕಡಿಮೆ ಮಾಡುವ ಗುಣಗಳು ಇದಕ್ಕಿವೆ. ಕಫ ಹೆಚ್ಚಾಗಿದ್ದರಿಂದ ಕಾಡುವ ದಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಈ ಮೂಲಕ ಮಾವಿನೆಲೆಗಳು ಕಡಿಮೆ ಮಾಡುತ್ತವೆ.

ಇದನ್ನೂ ಓದಿ: Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಫ್ಲೆವನಾಯ್ಡ್‌ಗಳು, ಫೆನಾಲ್‌ಗಳು ಮತ್ತು ಆಸ್ಕಾರ್ಬಿಕ್‌ ಆಮ್ಲ (ವಿಟಮಿನ್‌ ಸಿ)ಯಂಥ ಉರಿಯೂತ ಶಾಮಕಗಳು ಹೇರಳವಾಗಿವೆ. ಇದರಿಂದ ಶರೀರದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಹಿಡಿತಕ್ಕೆ ತರಬಹುದು. ಜೊತೆಗೆ ಹೃದಯ ತೊಂದರೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಬಹುದು.

Continue Reading

ಆರೋಗ್ಯ

Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

ʻಎಣ್ಣೆ-ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ಸಾಕು ಸ್ವಚ್ಛತೆಯಲ್ಲಿ ಸೀಗೆಕಾಯಿಯ ಸಾಮರ್ಥ್ಯ ಎಷ್ಟು ಎನ್ನುವುದನ್ನು ತಿಳಿಯುವುದಕ್ಕೆ. ಕೂದಲಿನ ಆರೈಕೆಯಲ್ಲಿ ಶತಮಾನಗಳಿಂದ ಇದು ಪ್ರಮಾಣೀಕೃತಗೊಂಡಿದೆ. ಆದರೆ ಕೂದಲಿಗೆ ಬೇಕಾದಂಥ ಒಳ್ಳೆಯ ಸತ್ವಗಳು ಏನಿವೆ ಸೀಗೆಕಾಯಿಯಲ್ಲಿ? ಈ ಕುರಿತ ಉಪಯುಕ್ತ (Shikakai For Hair) ಮಾಹಿತಿ ಇಲ್ಲಿದೆ.

VISTARANEWS.COM


on

Shikakai For Hair
Koo

ಹಳೆಯ ಕಾಲದಿಂದಲೂ ತಲೆಗೂದಲ ಆರೈಕೆಗೆ ಸೀಗೆಕಾಯಿ ಅಥವಾ ಶಿಕಾಕಾಯಿ ಬಳಕೆಯಲ್ಲಿದೆ. ಈಗಿನಂತೆ ಕಡಿಮೆ ಜಿಡ್ಡಿನ ಎಣ್ಣೆಗಳು ಇಲ್ಲದ ಕಾಲದಲ್ಲಿ, ದಿನವೂ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಲೇಪಿಸುತ್ತಿದ್ದ ಕಾಲದಲ್ಲಿ ತಲೆಯ ಸ್ವಚ್ಛತೆಯ ಹೊಣೆಯನ್ನು ಶತಮಾನಗಳ ಕಾಲ ನಿರ್ವಹಿಸಿದ್ದು ಸೀಗೆಕಾಯಿಯೆ. ಯಾವುದೇ ಜಾಹೀರಾತುಗಳ ಪ್ರಚಾರವಿಲ್ಲದೆ, ಬಣ್ಣದ ಪ್ಯಾಕಿಂಗ್‌ಗಳ ಅಬ್ಬರವಿಲ್ಲದೆ ಅಜ್ಜಿ-ಅಮ್ಮಂದಿರು ತುಂಬಿಡುತ್ತಿದ್ದ ಡಬ್ಬಿಗಳಿಂದ ನೇರವಾಗಿ ತರಳೆಯರ ಹೆರಳನ್ನು ಶುಚಿ ಮಾಡಿ, ಕೇಶರಾಶಿಯನ್ನು ಆರೋಗ್ಯವಾಗಿ ಇರಿಸುತ್ತಿತ್ತು. ಬ್ಯಾಕ್ಟೀರಿಯ ವಿರೋಧಿ, ಫಂಗಸ್‌ ನಿರೋಧಕ ಸಾಮರ್ಥ್ಯವಿರುವ ಇದು ಉರಿಯೂತ ಶಾಮಕ ಗುಣವನ್ನು ಸಹ ಹೊಂದಿಗೆ. ಹಾಗಾಗಿ ತಲೆಯ ಚರ್ಮವನ್ನು ತುರಿಕೆ, ಹೊಟ್ಟು, ಸೋಂಕುಗಳಿಂದ ಮುಕ್ತವಾಗಿರಿಸುವುದಕ್ಕೆ ಸೀಗೆಕಾಯಿಗೆ ಸಾಧ್ಯ. ಇನ್ನೂ ಏನೆಲ್ಲಾ ಗುಣಗಳಿವೆ ಇದರಲ್ಲಿ (Shikakai For Hair) ಕೇಶಗಳ ಆರೈಕೆಗೆ ಬೇಕಾಗುವಂಥದ್ದು.

Shikakai

ಸ್ವಚ್ಛತೆಯಲ್ಲಿ ಮುಂದೆ

ʻಎಣ್ಣೆ ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ನಮಗೆ ಇದರ ಸ್ವಚ್ಛತೆಯ ಸಾಮರ್ಥ್ಯಕ್ಕೆ ನೀಡಿದ ಪ್ರಮಾಣಪತ್ರದಂತಿದೆ. ವಾತಾವರಣದ ಧೂಳು, ಮಣ್ಣು, ಹೊಗೆಯಂಥ ಕೊಳೆಗಳನ್ನು ನಾಜೂಕಾಗಿಯೇ ಸ್ವಚ್ಛಗೊಳಿಸುವ ಕ್ಷಮತೆ ಇದರದ್ದು. ತಲೆಯ ಚರ್ಮದ ನೈಸರ್ಗಿಕ ತೈಲದಂಶವನ್ನು ತೆಗೆಯದಂತೆ, ಕೊಳೆಯನ್ನಷ್ಟೇ ತೆಗೆದು ಕೂದಲಿಗೆ ಸ್ವಚ್ಛ ಮತ್ತು ತಾಜಾ ಅನುಭವ ನೀಡುತ್ತದೆ.

Hair Growth Tips

ಕೇಶವರ್ಧನೆ

ಕೂದಲಿನ ಬೆಳವಣಿಗೆಗೆ ಸೀಗೆಕಾಯಿ ನೆರವು ನೀಡುತ್ತದೆ. ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವದ ಅಂಶಗಳು ಇದರಲ್ಲಿವೆ. ಇವುಗಳು ಕೂದಲಿನ ಬುಡವನ್ನು ಬಿಗಿ ಮಾಡಿ, ಕೂದಲೆಳೆಗಳನ್ನು ಸುದೃಢಗೊಳಿಸುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ, ಬೆಳವಣಿಗೆ ಹೆಚ್ಚುತ್ತದೆ. ಜಾಹೀರಾತುಗಳಲ್ಲಿ ತೋರಿಸಿದಷ್ಟು ಅಲ್ಲದಿದ್ದರೂ, ಆರೋಗ್ಯಕರವಾದ ಉದ್ದ ಕೂದಲನ್ನಂತೂ ಹೊಂದಬಹುದು.

dandruff

ಹೊಟ್ಟು ನಿವಾರಣೆ

ಒಮ್ಮೆ ತಲೆ ಹೊಟ್ಟಿನ ಸಮಸ್ಯೆ ಪ್ರಾರಂಭವಾದರೆ, ಅದರಿಂದ ಪಾರಾಗುವುದಕ್ಕೆ ಏನೇನೋ ಒದ್ದಾಟಗಳನ್ನು ಮಾಡಬೇಕಾಗುತ್ತದೆ. ಹೊಟ್ಟು ಹೋಗಿಸುವಂಥ ಹತ್ತಾರು ಶಾಂಪೂಗಳನ್ನು ಬಳಸುತ್ತೇವೆ. ಕೆಲವೊಮ್ಮೆ ವೈದ್ಯರ ಬಳಿ ಔಷಧಿಯನ್ನೂ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ. ಇಷ್ಟಾಗಿ ಹೊಟ್ಟು ದೂರ ಮಾಡಲು ಆಗದೇ ಇರಬಹುದು. ಆದರೆ ಫಂಗಸ್‌ ವಿರೋಧಿ ಗುಣವನ್ನು ಹೊಂದಿರುವ ಸೀಗೆಕಾಯಿಯ ನಿಯಮಿತವಾದ ಬಳಕೆಯಿಂದ ಹೊಟ್ಟು ಕ್ರಮೇಣ ಮಾಯವಾಗುತ್ತದೆ.

ಕಂಡೀಶನರ್

ಸೀಗೆಕಾಯಿಯಲ್ಲಿರುವ ಸಪೋನಿನ್‌ ಎಂಬ ಅಂಶವು ಕೂದಲಿನ ಕಂಡೀಶನರ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೂದಲುಗಳ ಪಿಎಚ್‌ ಸಹ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಯಾವುದೇ ರಾಸಾಯನಿಕವಿಲ್ಲದ ಈ ನೈಸರ್ಗಿಕ ಕಂಡೀಶನರ್‌ ಬಳಕೆಯಿಂದ ಕೂದಲಿನ ಹೊಳಪು ಹೆಚ್ಚಿ, ಮೃದುವಾಗುತ್ತದೆ. ಇದರಿಂದ ಕೂದಲು ಒರಟಾಗಿ ಬಾಚುವಾಗ ತುಂಡಾಗುವುದನ್ನು ತಪ್ಪಿಸಬಹುದು.

Shikakai photo

ತುದಿ ಕವಲಿಲ್ಲ

ಕೂದಲಿಗೆ ಅಗತ್ಯ ಪೋಷಣೆ ದೊರೆಯದಿದ್ದರೆ, ಕೇಶಗಳ ತುದಿ ಕವಲಾಗಬಹುದು. ಇದರಿಂದ ಕೂದಲು ನಿರ್ಜೀವವಾದಂತಾಗಿ, ತುಂಡಾಗುತ್ತವೆ. ಸೀಗೆಕಾಯಿಯ ಬಳಕೆಯಿಂದ ಕೂದಲಿಗೆ ಸೂಕ್ತ ಆರೈಕೆ ದೊರೆತು, ತುದಿ ಸೀಳಿದಂತಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲೆಳೆಗಳು ದಪ್ಪವಾಗಿಯೂ ಬೆಳೆದು, ಕೂದಲಿನ ಒಟ್ಟಾರೆ ಗಾತ್ರ ಹೆಚ್ಚುತ್ತದೆ.

ಎಲ್ಲರಿಗೂ ಸೂಕ್ತ

ರಾಸಾಯನಿಕ ಭರಿತ ಶಾಂಪೂ ಮತ್ತು ಕಂಡೀಶನರ್‌ಗಳು ಎಲ್ಲ ರೀತಿಯ ಚರ್ಮ ಮತ್ತು ಕೂದಲುಗಳಿಗೆ ಹೊಂದುವಂಥವಲ್ಲ. ಸೂಕ್ಷ್ಮ ಕೂದಲಿನವರು ಯಾವ ಶಾಂಪೂ ತಮಗೆ ಹೊಂದುತ್ತದೆ ಎಂಬ ಪ್ರಯೋಗದಲ್ಲಿಯೇ ಕೂದಲು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಸೌಮ್ಯ ಮತ್ತು ನೈಸರ್ಗಿಕವಾದ ಸೀಗೇಕಾಯಿ ಬಳಕೆಯಿಂದ ಇಂಥ ಸಮಸ್ಯೆಗಳಿಗೆ ಅವಕಾಶವಿಲ್ಲ.

ಇದನ್ನೂ ಓದಿ: 5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

ಪರಿಸರ ಸ್ನೇಹಿ ಆಯ್ಕೆ

ಯಾವುದೇ ರಾಸಾಯನಿಕ, ಪ್ಲಾಸ್ಟಿಕ್‌ಗಳ ಹಾವಳಿಯಿಲ್ಲ ಸೀಗೆಕಾಯಿಯ ಬಳಕೆಯಲ್ಲಿ. ಪರಿಸರಕ್ಕೆ ಮಾರುಕವಾಗುವಂಥ ಯಾವುದೇ ಅಂಶ ಇದರಲ್ಲಿ ಇಲ್ಲ. ಇದನ್ನು ಬಳಸಿನ ನಂತರ ಉಳಿವಂಥ ಶೇಷವೆಲ್ಲ ವಾತಾವರಣದಲ್ಲಿ ಕರಗುವಂಥವು. ಹಾಗಾಗಿ ಕೂದಲಿನ ಸ್ವಚ್ಛತೆಗೆ ಅತ್ಯಂತ ಸೂಕ್ತವಾದ ಆಯ್ಕೆಯೆಂದರೆ ಸೀಗೆಕಾಯಿ.

Continue Reading

ಆರೋಗ್ಯ

Health Tips Kannada: ಉಪ್ಪು ತಿನ್ನುವುದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮುಖ್ಯ!

ನಾವು ಉಪ್ಪನ್ನೇಕೆ ತಿನ್ನುತ್ತೇವೆ? ಆಹಾರದ ರುಚಿ ಹೆಚ್ಚಿಸುವುದಕ್ಕೆ ಎಂದು ಸುಲಭವಾಗಿ ಹೇಳಬಹುದು. ಆದರೆ ಅದಷ್ಟಕ್ಕೆ ಮಾತ್ರ ಉಪ್ಪು ಬೇಕೆ ನಮಗೆ? ಉಪ್ಪು ಇಲ್ಲದಿದ್ದರೆ ಕಷ್ಟವಾಗುವ ಹಾಗೆ, ಉಪ್ಪು ಹೆಚ್ಚಾದರೂ ತಿನ್ನಲಾಗದು ತಾನೇ? ಆದರೆ ಎಷ್ಟು ಉಪ್ಪು ತಿಂದರೆ ಹೆಚ್ಚು ಅಥವಾ ಕಡಿಮೆ ಎನ್ನುವುದು ಹೇಗೆ ತಿಳಿಯಬೇಕು ನಾವು? ಈ ಬಗ್ಗೆ (Health Tips Kannada) ಇಲ್ಲಿದೆ ಮಾಹಿತಿ.

VISTARANEWS.COM


on

Health Tips Kannada
Koo

ʻರುಚಿಗೆ ತಕ್ಕಷ್ಟು ಉಪ್ಪುʼ ಎಂದು (Health Tips Kannada) ಹೇಳುವುದು ಹೌದಾದರೂ ಉಪ್ಪು ಬಾಯಿಯ ರುಚಿಗೆ ಮಾತ್ರವಲ್ಲ, ದೇಹದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತದೆ. ಹಾಗೆಂದು ಅದನ್ನು ಸಿಕ್ಕಾಪಟ್ಟೆ ತಿನ್ನುವಂತಿಲ್ಲ. ಆದರೆ ನಾವು ತಿನ್ನುತ್ತಿರುವ ಉಪ್ಪಿನ ಪ್ರಮಾಣ ಮಿತಿಮೀರುತ್ತಿಲ್ಲ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ.
ನಾವು ಉಪ್ಪನ್ನೇಕೆ ತಿನ್ನುತ್ತೇವೆ? ಆಹಾರದ ರುಚಿ ಹೆಚ್ಚಿಸುವುದಕ್ಕೆ ಎಂದು ಸುಲಭವಾಗಿ ಹೇಳಬಹುದು. ಆದರೆ ಅದಷ್ಟಕ್ಕೆ ಮಾತ್ರ ಉಪ್ಪು ಬೇಕೆ ನಮಗೆ? ಉಪ್ಪು ಇಲ್ಲದಿದ್ದರೆ ಕಷ್ಟವಾಗುವ ಹಾಗೆ, ಉಪ್ಪು ಹೆಚ್ಚಾದರೂ ತಿನ್ನಲಾಗದು ತಾನೇ? ಆದರೆ ಎಷ್ಟು ಉಪ್ಪು ತಿಂದರೆ ಹೆಚ್ಚು ಅಥವಾ ಕಡಿಮೆ ಎನ್ನುವುದು ಹೇಗೆ ತಿಳಿಯಬೇಕು ನಾವು? ಬಾಯಿ ರುಚಿಯ ಮೂಲಕ ಮಾತ್ರವೇ? ಕೆಲವು ಪಾಕಗಳಲ್ಲಿ ಉಪ್ಪಿನ ರುಚಿ ಹೆಚ್ಚಿಲ್ಲದಿದ್ದರೂ, ಸೋಡಿಯಂ ಅಂಶ ಹೆಚ್ಚಿದೆ ಎನ್ನುತ್ತಾರಲ್ಲ, ಇದನ್ನು ಹೇಗೆ ತಿಳಿಯಬೇಕು? ಎಷ್ಟು ಉಪ್ಪು ತಿಂದರೆ ಹೆಚ್ಚು ಎನ್ನುವುದಕ್ಕೆ ಏನಾದರೂ ಸೂಚನೆಗಳಿವೆಯೇ?

ಉಪ್ಪೇಕೆ ಬೇಕು?

ಮೊದಲಿಗೆ ಉಪ್ಪು ಎಂದರೆ ರುಚಿಗೆ ಮಾತ್ರವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಉಪ್ಪು ಅಥವಾ ಸೋಡಿಯಂಗೆ ನಮ್ಮ ದೇಹದಲ್ಲಿ ಹೆಚ್ಚಿನ ಕೆಲಸವಿದೆ. ನಮ್ಮ ಶರೀರದ ಕೋಶಗಳಲ್ಲಿರುವ ನೀರಿನಂಶದ ನಿರ್ವಹಣೆಗೆ, ಸ್ನಾಯುಗಳ ಸಂಚಲನಕ್ಕೆ, ನರಗಳ ಕ್ಷಮತೆಗೆ, ಸಣ್ಣ ಕರುಳಿನಲ್ಲಿ ಕೆಲವು ಸತ್ವಗಳು ಹೀರಲ್ಪಡುವುದಕ್ಕೆ, ರಕ್ತದೊತ್ತಡ ನಿರ್ವಹಣೆಗೆ- ಹೀಗೆ ಬಹಳಷ್ಟು ಕೆಲಸಗಳಿಗೆ ಸೋಡಿಯಂ ಆವಶ್ಯಕ. ಇವೆಲ್ಲ ನಮಗೆ ದೊರೆಯುವ ಮುಖ್ಯ ಮೂಲವೆಂದರೆ ಉಪ್ಪು. ಆದರೆ ಅದನ್ನಾದರೂ ತಿನ್ನುವುದು ಹೆಚ್ಚಾಗಬಾರದು. ತಿನ್ನುತ್ತಿರುವ ಉಪ್ಪಿನ ಪ್ರಮಾಣ ಹೆಚ್ಚು ಎಂಬುದಕ್ಕೆ ದೇಹ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಏನು ಆ ಲಕ್ಷಣಗಳು?

Blood Pressure

ರಕ್ತದೊತ್ತಡ

ಬಿಪಿ ಅಥವಾ ರಕ್ತದೊತ್ತಡ ಹೆಚ್ಚಿದೆಯೇ? ಉಪ್ಪು ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ತಿನ್ನುತ್ತಿರುವ ಪ್ರಮಾಣ ಹೆಚ್ಚಿದೆಯೇ ಎಂಬುದನ್ನು ಗಮನಿಸಿ. ಹೆಚ್ಚು ಉಪ್ಪಿನಕಾಯಿ, ಚಿಪ್ಸ್‌, ಬೇಕರಿ ತಿಂಡಿಗಳು ಹೊಟ್ಟೆ ಸೇರುತ್ತಿವೆಯೇ? ಹೌದೆಂದಾದರೆ, ರಕ್ತದೊತ್ತಡ ಹೆಚ್ಚುವುದಕ್ಕೆ ಅದೂ ಕಾರಣವಾಗಿರಬಹುದು.

ಊದಿಕೊಳ್ಳುವುದು

ಕೈಬೆರಳುಗಳು, ಪಾದ, ಕಾಲುಗಳು, ಕಿಬ್ಬೊಟ್ಟೆಯಲ್ಲಿ ಊತ ಕಾಣುತ್ತಿದೆಯೇ? ಇದು ದೇಹದಲ್ಲಿ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಉಳಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ದೇಹಕ್ಕೆ ಹೆಚ್ಚಿನ ಪ್ರಮಾಣದ ಉಪ್ಪಿನಂಶ ದೊರೆತಾಗ, ಹೆಚ್ಚು ನೀರಿನಂಶ ಶರೀರದಲ್ಲಿ ಉಳಿಯುವುದು ಸಾಮಾನ್ಯ. ಹಾಗಾಗಿ ಉಪ್ಪು ಎಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಪರಿಶೀಲಿಸಲು ಇದು ಸಕಾಲ.

drinking water

ಬಾಯಾರಿಕೆ

ಉಪ್ಪು ತಿಂದವ ನೀರು ಕುಡಿಯಲೇ ಬೇಕೆಂಬ ಗಾದೆ ಸುಳ್ಳಲ್ಲ. ಅತಿಯಾಗಿ ಉಪ್ಪು ತಿಂದರೆ ಬಾಯಾರಿಕೆ ತಪ್ಪಿದ್ದಲ್ಲ. ಅತಿಯಾಗಿ ದಾಹ ಕಾಡುತ್ತಿದೆ ಎಂದಾದರೆ ಉಪ್ಪೆಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಗಮನಿಸುವುದು ಅಗತ್ಯ. ರಕ್ತದಲ್ಲಿರುವ ಅಧಿಕ ಸೋಡಿಯಂ ಅಂಶವನ್ನು ತೆಗೆಯುವ ಭರದಲ್ಲಿ ಕೋಶಗಳಲ್ಲಿರುವ ನೀರಿನಂಶವೆಲ್ಲ ಕೆಲವೊಮ್ಮೆ ಖಾಲಿಯಾಗಿಬಿಡುತ್ತದೆ. ಆಗ ಬಾಯಾರಿಕೆ ಹೆಚ್ಚುತ್ತದೆ.

Heart Health Fish Benefits

ಹೃದಯದ ಬಡಿತ ಏರುಪೇರು

ಸೋಡಿಯಂ ಮತ್ತು ಪೊಟಾಶಿಯಂನಂಥ ಖನಿಜಗಳ ಸಮತೋಲನ ವ್ಯತ್ಯಾಸವಾಗಬಹುದು ಅಧಿಕ ಉಪ್ಪು ತಿನ್ನುವುದರಿಂದ. ಇದರಿಂದ ಹೃದಯದ ಬಡಿತದಲ್ಲೂ ಏರುಪೇರು ಉಂಟಾಗಬಹುದು. ಅದರಲ್ಲೂ ಹೃದಯದ ಸಮಸ್ಯೆಗಳು ಇರುವವರಲ್ಲಿ ಈ ತೊಂದರೆ ಇನ್ನೂ ಹೆಚ್ಚಬಹುದು.

Unexplained frequent headaches Excessive Use Of Electronic Gadgets

ತಲೆನೋವು

ಯಾವುದೇ ಕಾರಣಕ್ಕೂ ತಲೆನೋವು ಬರುವುದು ಸಾಮಾನ್ಯವಾದರೂ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಬರುವುದು ಹೆಚ್ಚು. ಉಪ್ಪು ತಿನ್ನುವುದು ಹೆಚ್ಚಿದರೆ, ದೇಹದಲ್ಲಿ ನೀರಿನಂಶ ಕಡಿಮೆಯಾಗುವ ಸಾಧ್ಯತೆಯೂ ಇರುವುದರಿಂದ, ಪದೇಪದೆ ನಿರ್ಜಲೀಕರಣದಿಂದ ತಲೆನೋವು ಬರುತ್ತಿದೆ ಎಂದಾದರೆ, ತಿನ್ನುತ್ತಿರುವ ಉಪ್ಪಿನ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸುವುದು ಮುಖ್ಯ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಕಿಡ್ನಿ ಸಮಸ್ಯೆ

ದೇಹಕ್ಕೆ ಅನಗತ್ಯ ಎನಿಸಿದ ಬಹಳಷ್ಟನ್ನು ವಿಸರ್ಜಿಸಲು ಮೂತ್ರಪಿಂಡಗಳು ಹಗಲಿರುಳು ಶ್ರಮಿಸುತ್ತಲೇ ಇರುತ್ತವೆ. ಉಪ್ಪಿನಂಶ ಹೆಚ್ಚು ಉಳಿಯುತ್ತಿದೆ ದೇಹದಲ್ಲಿ ಎಂದಾದರೆ ಅದನ್ನು ವಿಸರ್ಜಿಸಲು ಸಹ ಕಿಡ್ನಿಗಳು ಹೆಚ್ಚುವರಿ ಕೆಲಸ ಮಾಡಬೇಕು. ಹೀಗೆ ಅತಿಯಾಗಿ ಕೆಲಸ ಮಾಡುವುದರಿಂದ ಕ್ರಮೇಣ ಮೂತ್ರಪಿಂಡಗಳು ಸೋತು, ರೋಗಗಳಿಗೆ ಈಡಾಗಬಹುದು.

Continue Reading

ಆರೋಗ್ಯ

Health Tips: ಆರೋಗ್ಯಕರ ಆಗಿರಬೇಕಿದ್ದರೆ ನಾವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು?

ನಾವು ದಿನಕ್ಕೆ ಮೂರು ಹೊತ್ತು ತಿನ್ನುವುದು ಅಧಿಕೃತವಾದರೂ, ಆಗಾಗ ಮಧ್ಯದಲ್ಲಿ ತಿನ್ನುವ ತಿಂಡಿಗಳ, ಕುರುಕಲುಗಳ, ಲೆಕ್ಕ ಇಡುವವರಲ್ಲ. ರುಚಿರುಚಿಯಾಗಿ ಏನಾದರೂ ತಿನ್ನುವುದು, ಸಂಜೆಯ ಹೊತ್ತಿನಲ್ಲಿ ಗೆಳೆಯರ ಜೊತೆ ಹೋಗಿ ರಸ್ತೆಬದಿಯಲ್ಲಿ ಏನಾದರೂ ತಿನ್ನುವುದು, ನಡುವೆ ಬಿಸಿ ಬಿಸಿ ಕಾಫಿ, ಚಹಾಗಳು ಒಂದಾದ ಮೇಲೆ ಒಂದರಂತೆ ನಾವು ಎಷ್ಟು ತಿನ್ನುತ್ತಿದ್ದೇವೆ, ಕುಡಿಯುತ್ತಿದ್ದೇವೆ ಎಂಬ ಲೆಕ್ಕ ಹಾಕಲು ಆಸ್ಪದ ನೀಡುವುದೇ ಇಲ್ಲ. ಹಾಗಾದರೆ ನಾವು ಎಷ್ಟು ಉಣ್ಣಬೇಕು? ಇಲ್ಲಿದೆ (Health Tips) ಮಾಹಿತಿ.

VISTARANEWS.COM


on

Health Tips
Koo

ಪ್ರತಿ ನಿತ್ಯವೂ ನಾವು (Health Tips) ಎಷ್ಟು ತಿನ್ನಬೇಕು? ಇದು ಎಲ್ಲರಿಗೂ ಸದಾ ಕಾಲ ಗೊಂದಲ ಇರುವ ಮಿಲಿಯನ್‌ ಡಾಲರ್‌ ಪ್ರಶ್ನೆ. ಯಾಕೆಂದರೆ, ನಾವು ದಿನಕ್ಕೆ ಮೂರು ಹೊತ್ತು ತಿನ್ನುವುದು ಅಧಿಕೃತವಾದರೂ, ಆಗಾಗ ಮಧ್ಯದಲ್ಲಿ ತಿನ್ನುವ ತಿಂಡಿಗಳ, ಕುರುಕಲುಗಳ, ಲೆಕ್ಕ ಇಡುವವರಲ್ಲ. ರುಚಿರುಚಿಯಾಗಿ ಏನಾದರೂ ತಿನ್ನುವುದು, ಸಂಜೆಯ ಹೊತ್ತಿನಲ್ಲಿ ಗೆಳೆಯರ ಜೊತೆ ಹೋಗಿ ರಸ್ತೆಬದಿಯಲ್ಲಿ ಏನಾದರೂ ತಿನ್ನುವುದು, ನಡುವೆ ಬಿಸಿ ಬಿಸಿ ಕಾಫಿ, ಚಹಾಗಳು ಒಂದಾದ ಮೇಲೆ ಒಂದರಂತೆ ನಾವು ಎಷ್ಟು ತಿನ್ನುತ್ತಿದ್ದೇವೆ, ಕುಡಿಯುತ್ತಿದ್ದೇವೆ ಎಂಬ ಲೆಕ್ಕ ಹಾಕಲು ಆಸ್ಪದ ನೀಡುವುದೇ ಇಲ್ಲ. ದಿನಗಳೆದಂತೆ ತೂಕದಲ್ಲಿ ಗಣನೀಯ ಬದಲಾವಣೆಯಾದಾಗ, ಏನಾದರೊಂದು ಆರೋಗ್ಯ ಸಮಸ್ಯೆ ಬಂದಾಗ, ನಾವು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿಲ್ಲ ಎಂದು ಜ್ಞಾನೋದಯವಾದಾಗ ನಾವೇನು ತಿನ್ನುತ್ತಿದ್ದೇವೆ ಅಥವಾ ಕುಡಿಯುತ್ತಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಲು ತೊಡಗುತ್ತೇವೆ. ಹಾಗೆ ನೋಡಿದರೆ, ತೂಕ ಇಳಿಸುವಿಕೆ ಇತ್ಯಾದಿಗಳ ವಿಚಾರ ಬಂದಾಗಿನಿಂದ ನಾವು ಕ್ಯಾಲರಿಗಳ ಲೆಕ್ಕ ಹಾಕಲು ಶುರು ಮಾಡುತ್ತೇವೆ. ಆಗ ನಮಗೆ, ನಾವು ದಿನಕ್ಕೆ ನಿಜಕ್ಕೂ ಎಷ್ಟೆಲ್ಲ ಕ್ಯಾಲರಿ ಆಹಾರ ಸೇವಿಸುತ್ತಾ ಇದ್ದೇವೆ ಎಂಬುದರ ಅರಿವಾಗುತ್ತದೆ. ಒಬ್ಬ ಸಾಮಾನ್ಯ ಆರೋಗ್ಯವಂತ ಪುರುಷನಿಗೆ ದಿನಕ್ಕೆ 2,400ರಿಂದ 3000 ಹಾಗೂ ಆರೋಗ್ಯವಂತ ಮಹಿಳೆಗೆ ದಿನಕ್ಕೆ 1,800ರಿಂದ 2,400 ಕ್ಯಾಲರಿವರೆಗೆ ಆಹಾರ ಬೇಕು ಎಂಬುದನ್ನು ತಜ್ಞರು ಲೆಕ್ಕ ಹಾಕಿದರೂ, ತೂಕ ಇಳಿಸಬೇಕಾದ ಮಂದಿಯ ಲೆಕ್ಕಾಚಾರ ಬೇರೆಯೇ ಇರುತ್ತದೆ. ಎಷ್ಟೇ ಈ ವಿಚಾರದಲ್ಲಿ ಅರಿಯಲು ಹೊರಟರೂ ಹೊಸ ಹೊಸ ವಿಚಾರಗಳು ತಿಳಿಯುವ ಮೂಲಕ ತಲೆ ಗೊಂದಲದ ಗೂಡಾಗುತ್ತದೆ. ಆಹಾರ ತಜ್ಞರ ಪ್ರಕಾರ ತೂಕ ಇಳಿಸುವ ಮಂದಿ ಕ್ಯಾಲರಿ ಲೆಕ್ಕಾಚಾರದಲ್ಲಿ ತಿನ್ನುವ ಅಗತ್ಯವಿಲ್ಲ. ದಿನಕ್ಕೆ ಇಷ್ಟೇ ಕ್ಯಾಲರಿಯ ಆಹಾರವನ್ನಷ್ಟೇ ಹೊಟ್ಟೆಗೆ ಕಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ತಿನ್ನುವುದರಿಂದ ಮಾತ್ರ ತೂಕ ಇಳಿಯುತ್ತದೆ ಎಂಬುದು ಸತ್ಯವಲ್ಲ. ಹಲವು ವಿಚಾರಗಳ ಪೈಕಿ ಕ್ಯಾಲರಿ ಕೌಂಟ್‌ ಕೂಡಾ ಒಂದು ಅಷ್ಟೇ, ಆದರೆ ಏನು ತಿನ್ನುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ.

Eating Style

ಎಷ್ಟು ತಿನ್ನಬೇಕು?

ಹಾಗಾದರೆ ಏನು ಎಷ್ಟು ತಿನ್ನಬೇಕು ಎಂಬ ಗೊಂದಲಕ್ಕೆ ಅವರ ಉತ್ತರ ಹೀಗಿದೆ. ತೂಕ ಇಳಿಸುವ ಗಡಿಬಿಡಿಯಲ್ಲಿ, ಏನೆಲ್ಲ ಸರ್ಕಸ್‌ ಮಾಡಿ, ತಮ್ಮ ಆಹಾರ ಶೈಲಿಯನ್ನೇ ಬದಲಾಯಿಸಿಕೊಂಡು ಕಷ್ಟಪಡುವ ಮಂದಿಗೆ ಅವರು ಸರಳವಾಗಿ ಆರೋಗ್ಯವಾಗಿರಲು ತಿನ್ನಬೇಕಾದ ಆಹಾರ ಏನು ಎಂಬುದನ್ನು ವಿವರಿಸುತ್ತಾರೆ.

Indian girl eating rice

ಉಣ್ಣುವ ಕ್ರಮ ಮುಖ್ಯ

ಅವರು ಹೇಳುವ ಕೆಲವು ಮಂತ್ರಗಳ ಪೈಕಿ, ನಿಧಾನವಾಗಿ ಉಣ್ಣುವ ಕ್ರಮ ಮುಖ್ಯವಾದುದು. ನಿಧಾನವಾಗಿ, ಪ್ರತಿಯೊಂದು ತುತ್ತನ್ನೂ ಅನುಭವಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಿದ್ದಷ್ಟೇ ತಿನ್ನಲು ಸಾಧ್ಯವಾಗುತ್ತದೆ. ಆಹಾರ ಹೊಟ್ಟೆಗೆ ಸೇರಿ ಅದು ಸರಿಯಾಗಿ ಜೀರ್ಣವಾಗುತ್ತದೆ. ಆದರೆ, ಗಬಗಬನೆ ತಿನ್ನುವುದರಿಂದ ನಮ್ಮ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆಗಳೇ ಹೆಚ್ಚು. ಅದಕ್ಕೊಂದು ಸರಳವಾದ ಟ್ರಿಕ್‌ ಕೂಡಾ ಅವರು ಹೇಳುತ್ತಾರೆ. ನಮಗೆಷ್ಟು ಬೇಕೋ ಅದಕ್ಕಿಂತ ಅರ್ಧದಷ್ಟು ಪ್ರಮಾಣವನ್ನು ನಾವು ಬಡಿಸಿಕೊಂಡು, ನಾವು ಅದನ್ನು ಉಣ್ಣಲು ಸಾಮಾನ್ಯವಾಗಿ ಎಷ್ಟು ಸಮಯ ತೆಗೆದುಕೊಳ್ಳುತ್ತೇವೋ ಅದರ ದುಪ್ಪಟ್ಟು ಸಮಯ ತೆಗೆದುಕೊಂಡು ಉಣ್ಣುವುದು!
ಇನ್ನೊಂದು ಬಹುಮುಖ್ಯ ಅಂಶವೆಂದರೆ, ಕುಳಿತು ಉಣ್ಣುವುದು. ನಿಂತು ಉಣ್ಣುವುದಕ್ಕಿಂತ ಕುಳಿತು ಉಣ್ಣುವ ಕ್ರಮ ಒಳ್ಳೆಯದು ಎಂದೂ ಅವರು ಹೇಳುತ್ತಾರೆ.

ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ನಿಮ್ಮ ತಟ್ಟೆಯಲ್ಲಿ ಏನೇನಿರಬೇಕು?

ನಿಮ್ಮ ತಟ್ಟೆಯಲ್ಲಿ ಏನೇನಿರಬೇಕು ಎಂಬುದನ್ನೂ ಅವರು ಎಲ್ಲರಿಗೂ ಅರ್ಥವಾಗುವಂತೆ ಬಹಳ ಸರಳವಾಗಿ ಹೇಳುತ್ತಾರೆ. ನಿಮ್ಮ ಆಹಾರದ ಶೇ.50ರಷ್ಟು ಪ್ರಮಾಣ ಧಾನ್ಯಗಳು ಅಥವಾ ಸಿರಿಧಾನ್ಯಗಳಿರಬೇಕು. ಶೇ ೩೫ರಷ್ಟು ಪ್ರಮಾಣ ತರಕಾರಿಗಳು, ಮೊಳಕೆ ಕಾಳು ಹಾಗೂ ಬೇಳೆಗಳಿರಬೇಕು. ಉಳಿದಂತೆ ಶೇ.೧೫ರಷ್ಟು ಕೆಲವು ಇತರ ರುಚಿಕರ ಆಹಾರವನ್ನು ಸೇರಿಸಬಹುದು. ಉದಾಹರಣೆಗೆ ಉಪ್ಪಿನಕಾಯಿ, ಚಟ್ನಿ, ಹಪ್ಪಳ ಇತ್ಯಾದಿಗಳು. ಸಾಮಾನ್ಯವಾಗಿ ಹೆಚ್ಚು ಚಿಂತೆ ಮಾಡದೆ ಆರೋಗ್ಯದ ಕಾಳಜಿ ವಹಿಸುವ ಮಂದಿ ಈ ಮಾದರಿಯಲ್ಲಿ ಉಣ್ಣುವ ಕ್ರಮ ರೂಢಿಸಿಕೊಂಡರೆ ಒಳ್ಳೆಯದು ಎಂದು ಅವರು ಎಲ್ಲರ ದೃಷ್ಟಿಯಿಂದ ಸರಳವಾಗಿ ವಿವರಿಸುತ್ತಾರೆ. ಇನ್ನುಳಿದಂತೆ, ಹೆಚ್ಚು ಈ ಬಗ್ಗೆ ಆಸ್ತೆ ವಹಿಸುತ್ತಿದ್ದರೆ, ಪ್ರತಿಯೊಬ್ಬರೂ ಅವರವರ ಆಯ್ಕೆಗೆ ಅನುಗುಣವಾಗಿ ಆಹಾರ ಅಭ್ಯಾಸಗಳನ್ನು ಆಹಾರ ತಜ್ಞರ ಶಿಫಾರಸಿನ ಮೇಲೆ ರೂಢಿಸಿಕೊಳ್ಳಬಹುದು ಎಂದೂ ಅವರು ಹೇಳುತ್ತಾರೆ.

Continue Reading
Advertisement
Chandan Shetty reaction about prashant sambaragi statement on divorce
ಸಿನಿಮಾ2 mins ago

Chandan Shetty: ನಮ್ಮ ಖುಷಿ ಮೇಲೆ ಪ್ರಶಾಂತ್‌ ಸಂಬರಗಿ ಕಣ್ಣು; ಟಾಂಗ್‌ ಕೊಟ್ಟ ಚಂದನ್‌ ಶೆಟ್ಟಿ

Health Benefits of Mango Leaves
ಆರೋಗ್ಯ9 mins ago

Health Benefits of Mango Leaves: ಮಾವಿನೆಲೆಗಳು ತೋರಣ ಕಟ್ಟಲಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!

Yuva Rajkumar
ಸಿನಿಮಾ10 mins ago

Yuva Rajkumar: ವಿಚ್ಛೇದನ ಅರ್ಜಿ ಸಿಕ್ಕಾಗ ಉತ್ತರಿಸುವೆ; ಯುವ ನೋಟಿಸ್‌ಗೆ ಪತ್ನಿ ಶ್ರೀದೇವಿ ಫಸ್ಟ್‌ ರಿಯಾಕ್ಷನ್!

Suspension Order tumkur News
ತುಮಕೂರು17 mins ago

Suspension Order : ಕ್ರಿಮಿನಲ್‌ಗಳಿಗೆ ಮಾಹಿತಿ ಸೋರಿಕೆ; ಐವರು ಪೊಲೀಸ್‌ ಸಿಬ್ಬಂದಿ ಅಮಾನತು

Niveditha Gowda Chandan Shetty Divorce Case
ಸಿನಿಮಾ26 mins ago

Niveditha Gowda: ಸೃಜನ್‌, ಸಂಬರಗಿ, ಜೀವನಾಂಶ, ಮಗು; ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಚಂದನ್‌-ನಿವೇದಿತಾ!

Yuva Rajkumar
ಸಿನಿಮಾ27 mins ago

Yuva Rajkumar: ಹೆಣ್ಣು ಹೆತ್ತವರು ಏನ್‌ ಮಾಡೋದು ಹೇಳಿ; ಡಿವೋರ್ಸ್‌ ನೋಟಿಸ್‌ಗೆ ಶ್ರೀದೇವಿ ತಂದೆ ಭೈರಪ್ಪ ಬೇಸರ

K S Bhagavan
ಪ್ರಮುಖ ಸುದ್ದಿ32 mins ago

K S Bhagavan: ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು: ಪ್ರೊ. ಭಗವಾನ್ ವಿವಾದಿತ ಹೇಳಿಕೆ

Karnataka weather Forecast
ಮಳೆ50 mins ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

IND vs PAK
ಕ್ರೀಡೆ1 hour ago

IND vs PAK : ಭಾರತ ವಿರುದ್ಧ ಸೋಲುವುದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಪಾಕ್​ ಆಟಗಾರ; ಆರೋಪ

Tshering Tobgay
ದೇಶ1 hour ago

Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ;‌ ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ ಬಹುಪರಾಕ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ50 mins ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌