Viral News: ಹಲ್ಲಿನ ಚಿಕಿತ್ಸೆಗೆಂದು ಕ್ಲಿನಿಕ್‌ಗೆ ಬಂದವಳ ತುಟಿಯನ್ನೇ ಕತ್ತರಿಸಿದರು! - Vistara News

ವೈರಲ್ ನ್ಯೂಸ್

Viral News: ಹಲ್ಲಿನ ಚಿಕಿತ್ಸೆಗೆಂದು ಕ್ಲಿನಿಕ್‌ಗೆ ಬಂದವಳ ತುಟಿಯನ್ನೇ ಕತ್ತರಿಸಿದರು!

Viral News: ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ವೈದ್ಯರೊಬ್ಬರು ಗಾಯಗೊಳಿಸಿದ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ವಿಚಾರವನ್ನು ಮಹಿಳೆಯ ಗೆಳತಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್‌ ಆಗಿದೆ.

VISTARANEWS.COM


on

dentle treatment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ವೈದ್ಯರೊಬ್ಬರು ಗಾಯಗೊಳಿಸಿದ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದಂತ ವೈದ್ಯರ ನಿರ್ಲಕ್ಷ್ಯದಿಂದಾಗಿ (Medical negligence) ಮಹಿಳೆ ‘ವಿರೂಪಗೊಂಡ’ ತುಟಿ, ಸಾಕಷ್ಟು ದೈಹಿಕ ಮತ್ತು ಮಾನಸಿಕ ನೋವನ್ನು ಅನುಭವಿಸಿದ್ದಾರೆ. ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಚಾರವನ್ನು ಮಹಿಳೆಯ ಗೆಳತಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್‌ ಆಗಿದೆ (Viral News).

ಪೋಸ್ಟ್‌ನಲ್ಲೇನಿದೆ?

“ಇತ್ತೀಚೆಗಷ್ಟೇ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಲ್ಲಿ ಅನಸ್ತೇಶಿಯ ಒವರ್​​ ಡೋಸ್​​ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಘಾತವನ್ನುಂಟು ಮಾಡಿದೆ. ಆದರೆ ಇಲ್ಲಿನ ದಂತ ವೈದ್ಯರ ನಿರ್ಲಕ್ಷ್ಯಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಇಂತದ್ದೇ ಘಟನೆ ನಡೆದಿದೆ. ತನ್ನ ಗೆಳತಿಯೊಬ್ಬಳು ಇಲ್ಲಿ ಹಲ್ಲಿನ ಚಿಕಿತ್ಸೆಗೆಂದು ಹೋದಾಗ ವೈದ್ಯರು ಡೆಂಟಲ್​​​ ಬ್ಲೆಡ್​ನಿಂದ ಆಕೆಯ ತುಟಿಗಳನ್ನೇ ಕತ್ತರಿಸಿದ್ದಾರೆ” ಎಂದು ಸೌಮ್ಯಾ ಸಂಗಮ್‌ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ತನ್ನ ಸ್ನೇಹಿತೆಯ ತುಟಿಯ ಫೋಟೊವನ್ನೂ ಲಗತ್ತಿಸಿದ್ದಾರೆ. ಇದರಲ್ಲಿ ತುಟಿಯ ಒಂದು ಭಾಗಕ್ಕೆ ಗಾಯವಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.

ಈ ಘಟನೆ ಕಳೆದ ವರ್ಷ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ವಿವರ ನೀಡಿರುವ ಸೌಮ್ಯಾ, ತನ್ನ ಗೆಳತಿ ಎದುರಿಸಿದ ಮಾನಸಿಕ ಮತ್ತು ದೈಹಿಕ ಸಂಕಷ್ಟದ ಪರಿಸ್ಥಿತಿಗಳನ್ನು ತಿಳಿಸಿದ್ದಾರೆ. ʼʼಘಟನೆ ನಡೆದು ಒಂದು ವರ್ಷವಾದರೂ ಆಕೆ ಇನ್ನೂ ಶಾಕ್‌ನಿಂದ ಚೇತರಿಸಿಕೊಂಡಿಲ್ಲ. ಈಗಲೂ ಗಾಯದ ಕಲೆ ಉಳಿದುಕೊಂಡಿದೆ. ಅವಳಿಗೆ ಸರಿಯಾಗಿ ನಗಲೂ ಸಾಧ್ಯವಾಗುತ್ತಿಲ್ಲ. ಅವಳು ಇನ್ನೂ ಸ್ಟೀರಾಯ್ಡ್‌ ತೆಗೆದುಕೊಳ್ಳುತ್ತಿದ್ದಾಳೆ ಮತ್ತು ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗಳು ಬೇಕಾಗಬಹುದುʼʼ ಎಂದು ತಿಳಿಸಿದ್ದಾರೆ.

ತಾಯಿ ಹೇಳಿದ್ದೇನು?

ಮಹಿಳೆಯ ತಾಯಿ ಆಸ್ಪತ್ರೆಯಲ್ಲಿ ಅನುಭವಿಸಿದ ಯಾತನೆಯನ್ನು ವಿವರಿಸಿದ್ದಾರೆ. ʼʼಇಲ್ಲಿನ ವೈದ್ಯರು ನನ್ನ ಮಗಳ ತುಟಿಯನ್ನು ವಿರೂಪಗೊಳಿಸಿದರು. ಮಾತ್ರವಲ್ಲ ಕಿರುಕುಳ ನೀಡಿದರು ಹಾಗೂ ಬೆದರಿಕೆ ಹಾಕಿದರು. ಅವಳ ಹಲ್ಲು ಹೊರತೆಗೆಯುವ ಸಮಯದಲ್ಲಿ ಹಿರಿಯ ದಂತವೈದ್ಯರು (ಮ್ಯಾಕ್ಸಿಲೋಫೇಷಿಯಲ್ ಸರ್ಜನ್ ಕೂಡ) ತಮ್ಮ ಸಹಾಯಕನೊಂದಿಗೆ ತಮ್ಮ ದಂತ ಉಪಕರಣಗಳಿಂದ ಅವಳ ಬಾಯಿಯನ್ನು ಸುಟ್ಟು ಹಾಕಿದರು. ಗಾಯ ಗುಣವಾದ ನಂತರ ಅವರು ಅವಳಿಗೆ ಸಹಾಯದ ಭರವಸೆ ನೀಡಿದರು. ಇದು ಕೆಲವು ತಿಂಗಳಲ್ಲಿ ಗುಣವಾಗುತ್ತದೆ ಎಂದು ಹೇಳಿದರು. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚಾಗಿದ್ದರೂ ಇನ್ನೂ ವಾಸಿಯಾಗಿಲ್ಲ. ನಿರಂತರ ನೋವಿನಿಂದ ಅವಳ ಬದುಕು ಶೋಚನೀಯವಾಗಿದೆ. ಎಫ್ಎಂಎಸ್ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಉಸ್ತುವಾರಿ ಹೊಂದಿರುವ ಶೇಖರ್ ತನ್ನ ಸಹೋದ್ಯೋಗಿಗಳೊಂದಿಗೆ ಅವಳು ಮತ್ತು ಅವಳ ತಂದೆಯನ್ನು ಅವಮಾನಿಸಿದ್ದರು. ಅಲ್ಲದೆ ಅಶ್ಲೀಲ ಕಮೆಂಟ್‌ಗಳಿಂದ ಆಕೆಗೆ ಕಿರುಕುಳ ನೀಡಿದ್ದರುʼʼ ಎಂದು ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Cosmetic Surgery: ನಗು ಹೆಚ್ಚಿಸಿಕೊಳ್ಳಲು ಸರ್ಜರಿಗೆ ಹೋದ ಭಾವಿ ವರನ ನಗುವನ್ನೇ ನಿಲ್ಲಿಸಿದರು

ಜೀವವನ್ನೇ ತೆಗೆದಿದ್ದ ಕಾಸ್ಮೆಟಿಕ್‌ ಸರ್ಜರಿ

ಇತ್ತೀಚೆಗೆ ತನ್ನ ಮದುವೆಗೆ ಒಂದು ತಿಂಗಳು ಮುನ್ನ, ಮುಖದ ನಗುವಿನ ಭಾವ ಹೆಚ್ಚಿಸಲೆಂದು ಕಾಸ್ಮೆಟಿಕ್‌ ಸರ್ಜರಿಗೆ ಹೋದ ವ್ಯಕ್ತಿಯೊಬ್ಬರು ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಿಂದ ಶವವಾಗಿ ಮರಳಿದ್ದರು. ಮಿತಿ ಮೀರಿದ ಅರಿವಳಿಕೆ ನೀಡಿದ್ದರಿಂದ 28 ವರ್ಷದ ಲಕ್ಷ್ಮೀನಾರಾಯಣ ವಿಂಜಮ್ ಮೃತಪಟ್ಟಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು(Indian Origin Crow) ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಯಾಕೆ ಗೊತ್ತೇ? ಇಲ್ಲಿದೆ ಮಾಹಿತಿ.

VISTARANEWS.COM


on

By

Indian Origin Crow
Koo

ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು (Indian Origin Crow) ಈ ವರ್ಷಾಂತ್ಯದ ವೇಳೆಗೆ ಕೊಲ್ಲಲು ಕೀನ್ಯಾ (Kenya) ಯೋಜನೆ ಹಾಕಿಕೊಂಡಿದೆ. ಕಾಗೆಯು ಪ್ರಾಥಮಿಕ ಪರಿಸರ ವ್ಯವಸ್ಥೆಯ ಭಾಗವಲ್ಲ. ಈ ಕಾಗೆಗಳು ದಶಕಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಸ್ಥಳೀಯ ಪಕ್ಷಿಗಳನ್ನು ಸಾಯಿಸುತ್ತಿವೆ ಎಂದು ಕೀನ್ಯಾದ ವನ್ಯಜೀವಿ ಇಲಾಖೆ (Wildlife Department) ಹೇಳಿದೆ.

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ಮೂಲದ ಕಾಗೆಗಳನ್ನು ‘ಆಕ್ರಮಣಕಾರಿ ವಿದೇಶಿ ಪಕ್ಷಿಗಳು’ ಎಂದು ಕರೆದಿರುವ ಕೀನ್ಯಾದ ವನ್ಯಜೀವಿ ಪ್ರಾಧಿಕಾರವು ಈ ಕಾಗೆಗಳು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿಲ್ಲ ಎಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಕರಾವಳಿ ನಗರಗಳಾದ ಮೊಂಬಾಸಾ, ಮಲಿಂಡಿ, ಕಿಲಿಫಿ ಮತ್ತು ವಟಮುಗಳಲ್ಲಿ ಅವುಗಳ ಸಂಖ್ಯೆಯು ವೇಗವಾಗಿ ಹೆಚ್ಚಾಗಿದೆ. ಇದರಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು 1 ಮಿಲಿಯನ್ ಕಾಗೆಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೊಟೇಲ್ ಉದ್ಯಮದ ಪ್ರತಿನಿಧಿಗಳು ಮತ್ತು ಕಾಗೆ ನಿಯಂತ್ರಣದಲ್ಲಿ ಪರಿಣತಿ ಹೊಂದಿರುವ ವೈದ್ಯರನ್ನು ಒಳಗೊಂಡ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹೊಟೇಲ್ ಉದ್ಯಮಕ್ಕೆ ತೊಂದರೆ

ವನ್ಯಜೀವಿ ಪ್ರಾಧಿಕಾರವು ನೀಡಿರುವ ಹೇಳಿಕೆಯಲ್ಲಿ ಕರಾವಳಿ ನಗರಗಳ ಹೊಟೇಲ್ ಉದ್ಯಮಕ್ಕೆ ಈ ಕಾಗೆಗಳು ದೊಡ್ಡ ಸಮಸ್ಯೆಯಾಗುತ್ತಿವೆ. ಕಾಗೆಗಳಿಂದ ಪ್ರವಾಸಿಗರು ತೆರೆದ ಜಾಗದಲ್ಲಿ ಕುಳಿತು ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದವರು ಸಹ ಕಾಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಅವುಗಳ ಮೇಲೆ ನಿಯಂತ್ರಣಕ್ಕೆ ಒತ್ತಾಯಿಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಕಾಗೆಗಳನ್ನು ನಿರ್ಮೂಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಕೀನ್ಯಾ ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಯಾರಿಗೆ ಅಪಾಯ?

ಕೀನ್ಯಾದಲ್ಲಿ ಕಾಗೆಗಳಿಂದಾಗಿ ಅನೇಕ ಪಕ್ಷಿಗಳು ಅಳಿವಿನಂಚಿನಲ್ಲಿವೆ. ಅಂತಹ ಪಕ್ಷಿಗಳನ್ನು ಕಾಗೆಗಳು ನಿರಂತರವಾಗಿ ಬೇಟೆಯಾಡುತ್ತಿವೆ ಎಂದು ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

ಈ ಕಾಗೆಗಳು ಸಣ್ಣ ಸ್ಥಳೀಯ ಪಕ್ಷಿಗಳ ಗೂಡುಗಳನ್ನು ನಾಶಪಡಿಸುತ್ತವೆ ಮತ್ತು ಅವುಗಳ ಮೊಟ್ಟೆಗಳು ಮತ್ತು ಮರಿಗಳನ್ನು ತಿನ್ನುತ್ತವೆ, ಇದರಿಂದಾಗಿ ಅನೇಕ ಪಕ್ಷಿ ಪ್ರಭೇದಗಳು ಕಡಿಮೆಯಾಗುತ್ತಿವೆ ಎಂದು ಕೀನ್ಯಾದ ಪಕ್ಷಿವಿಜ್ಞಾನಿ ಕಾಲಿನ್ ಜಾಕ್ಸನ್ ತಿಳಿಸಿದ್ದಾರೆ.

ಸ್ಥಳೀಯ ಪಕ್ಷಿಗಳ ಕೊರತೆಯಿಂದ ಪರಿಸರ ಸಂರಕ್ಷಣೆಗೆ ತೊಂದರೆಯಾಗಿದೆ. ಕಾಗೆಗಳ ಹೆಚ್ಚುತ್ತಿರುವ ಸಂಖ್ಯೆಯ ಪರಿಣಾಮವು ಅಂತಹ ಪಕ್ಷಿಗಳ ಮೇಲೆ ಮಾತ್ರವಲ್ಲ ಇಡೀ ಪರಿಸರ ವ್ಯವಸ್ಥೆಯು ಪರಿಣಾಮ ಬೀರುತ್ತಿದೆ ಎಂದು ಕೀನ್ಯಾ ಹೇಳಿದೆ.

Continue Reading

ಕ್ರೀಡೆ

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

Virat Kohli:2014, 2016, 2022ರಲ್ಲಿ ಭಾರತ ಆಡಿದ ಎಲ್ಲ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅರ್ಥಶತಕ ಬಾರಿಸಿ ಮಿಂಚಿದ್ದರು. ಆದರೆ, ಈ ಬಾರಿ ಒಂದಂಕಿಗೆ ಸೀಮಿತರಾದರು.

VISTARANEWS.COM


on

virat kohli
Koo

ಪ್ರೊವಿಡೆನ್ಸ್‌: ವಿರಾಟ್​ ಕೊಹ್ಲಿ(Virat Kohli) ಅವರು ಮೊಟ್ಟ ಮೊದಲ ಬಾರಿಗೆ ಟಿ20 ವಿಶ್ವಕಪ್(T20 World Cup 2024) ಸೆಮಿಫೈನಲ್​ ಪಂದ್ಯದಲ್ಲಿ ಸಿಂಗಲ್​ ಡಿಜಿಟ್​ಗೆ ವಿಕೆಟ್​ ಒಪ್ಪಿಸಿದ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸೆಮಿ ಪಂದ್ಯದಲ್ಲಿ 9 ರನ್​ಗೆ ವಿಕೆಟ್​ ಕಳೆದುಕೊಂಡು ಈ ಅನಗತ್ಯ ದಾಖಲೆ ಬರೆದರು.

2014, 2016, 2022ರಲ್ಲಿ ಭಾರತ ಆಡಿದ ಎಲ್ಲ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅರ್ಥಶತಕ ಬಾರಿಸಿ ಮಿಂಚಿದ್ದರು. ಆದರೆ, ಈ ಬಾರಿ ಒಂದಂಕಿಗೆ ಸೀಮಿತರಾದರು. ಜತೆಗೆ ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಂತಾಯಿತು. ಇಂಗ್ಲೆಂಡ್​ ವಿರುದ್ಧ 9 ಎಸೆತಗಳಲ್ಲಿ 9 ರನ್​ ಬಾರಿಸಿ ಟಾಪ್ಲಿ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು.

ವಿಕೆಟ್​ ಕಳೆದುಕೊಂಡು ಡಗೌಟ್​ನಲ್ಲಿ​ ಹತಾಶರಾಗಿ ಕುಳಿತಿದ್ದ ವಿರಾಟ್​ ಕೊಹ್ಲಿಯನ್ನು ಕೋಚ್​ ರಾಹುಲ್​ ದ್ರಾವಿಡ್​ ಬಂದು ಸಮಾಧಾನ ಪಡಿಸಿದರು. ಈ ವಿಡಿಯೊವೊಂದು ವೈರಲ್​ ಆಗಿದೆ.

ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್​ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್​ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿಯ ಮೇಲೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿಯೂ ಭಾರೀ ನಿರೀಕ್ಷೆ ಇಡಲಾಗಿತ್ತು. ಆದರೆ ಕೊಹ್ಲಿ ಕಳಪೆ ಬ್ಯಾಟಿಂಗ್​ ಮೂಲಕ ಈ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಆಡಿದ 7 ಪಂದ್ಯಗಳ ಪೈಕಿ 2 ಪಂದ್ಯದಲ್ಲಿ ಶೂನ್ಯ ಸುತ್ತಿದ್ದಾರೆ. ಒಟ್ಟಾರೆ ಅವರ ಗಳಿಕೆ 75 ರನ್​.

ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

ಇದನ್ನೂ ಓದಿ Virat kohli : ನಿವೃತ್ತಿಯಾಗುವುದು ಉತ್ತಮ; ಕೊಹ್ಲಿ, ರೋಹಿತ್​ಗೆ ಸಲಹೆ ನೀಡಿದ ವೀರೇಂದ್ರ ಸೆಹ್ವಾಗ್​

ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್​ ಬಾಲ್​ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್​ ಕಂಡಿರುವುದು.

Continue Reading

ವೈರಲ್ ನ್ಯೂಸ್

Viral Video: ಅಬ್ಬಾ.. ಎಂಥಾ ಕ್ರೌರ್ಯ! ಮಹಿಳೆ ಮೇಲೆ ಕಿಡಿಗೇಡಿಗಳಿಂದ ಇದೆಂಥಾ ದೌರ್ಜನ್ಯ-ವಿಡಿಯೋ ಇದೆ ನೋಡಿ

Viral Video: ಪಶ್ಚಿಮ ಗರೋ ಹಿಲ್ಸ್‌ ಜಿಲ್ಲೆಯ ದಡೆಂಗರೆ ಗ್ರಾಮದ ಟೆಕ್ಸಾಗ್ರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ವ್ಯಕ್ತಿಗಳು ಸೇರಿ ಮಹಿಳೆಯನ್ನು ಕೋಲಿನಿಂದ ಥಳಿಸಿ ಆಕೆಯ ಕೂದಲು ಹಿಡಿದು ನೆಲದಲ್ಲಿ ಎಳೆದಾಡಿದ್ದಾರೆ. ಅದೂ ಅಲ್ಲದೇ ಆಕೆಯನ್ನು ನೆಲಕ್ಕೆ ಬಡಿದು ಕಾಲಿನಿಂದ ಒದ್ದಿದ್ದಾರೆ. ಸಾರ್ವಜನಿಕವಾಗಿ ಇಂತಹ ಕ್ರೌರ್ಯ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಜನ ಆಕೆಯ ಸಹಾಯಕ್ಕೆ ಬರಲಿಲ್ಲ. ಹಿರಿಯ ವ್ಯಕ್ತಿ ಮತ್ತು ಮಕ್ಕಳು ಅಲ್ಲಿ ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಮೇಘಾಲಯ: ಕೋಲಾರದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಜಮೀನು ವಿವಾದದ ಹಿನ್ನೆಲೆ ಮಹಿಳೆಯನ್ನು ಗ್ರಾಮಸ್ಥರು ಸೇರಿ ಥಳಿಸಿರುವ ಘಟನೆ ನಡೆದಿತ್ತು. ಇಂತಹದ್ದೇ ಒಂದು ಘಟನೆ ಮೇಘಾಲಯದಲ್ಲಿ ನಡೆದಿದೆ. ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದಲ್ಲಿ ಮಹಿಳೆಯನ್ನು ನಾಲ್ವರು ಸೇರಿದ ದೊಣ್ಣೆಯಿಂದ ಥಳಿಸಿ, ನೆಲದಲ್ಲಿ ಎಳೆದಾಡಿದ ಘಟನೆ ಮೇಘಾಲಯದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಪಶ್ಚಿಮ ಗರೋ ಹಿಲ್ಸ್‌ ಜಿಲ್ಲೆಯ ದಡೆಂಗರೆ ಗ್ರಾಮದ ಟೆಕ್ಸಾಗ್ರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ವ್ಯಕ್ತಿಗಳು ಸೇರಿ ಮಹಿಳೆಯನ್ನು ಕೋಲಿನಿಂದ ಥಳಿಸಿ ಆಕೆಯ ಕೂದಲು ಹಿಡಿದು ನೆಲದಲ್ಲಿ ಎಳೆದಾಡಿದ್ದಾರೆ. ಅದೂ ಅಲ್ಲದೇ ಆಕೆಯನ್ನು ನೆಲಕ್ಕೆ ಬಡಿದು ಕಾಲಿನಿಂದ ಒದ್ದಿದ್ದಾರೆ. ಸಾರ್ವಜನಿಕವಾಗಿ ಇಂತಹ ಕ್ರೌರ್ಯ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಜನ ಆಕೆಯ ಸಹಾಯಕ್ಕೆ ಬರಲಿಲ್ಲ. ಹಿರಿಯ ವ್ಯಕ್ತಿ ಮತ್ತು ಮಕ್ಕಳು ಅಲ್ಲಿ ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಘಟನೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಒಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಅರೆಸ್ಟ್‌ ಮಾಡಿದ್ದಾರೆ. ಏತನ್ಮಧ್ಯೆ, ಮಹಿಳಾ ಸಬಲೀಕರಣದ ಮೇಘಾಲಯ ಅಸೆಂಬ್ಲಿ ಸಮಿತಿಯ ಅಧ್ಯಕ್ಷೆಯಾಗಿರುವ ಸುಟ್ಂಗಾ ಸೈಪುಂಗ್ ಶಾಸಕಿ ಸಾಂತಾ ಮೇರಿ ಶೈಲ್ಲಾ ಅವರು ಪೊಲೀಸರಿಂದ ವರದಿಯನ್ನು ಕೇಳಿದ್ದಾರೆ ಮತ್ತು ಮಹಿಳೆಯರ ವಿರುದ್ಧ ಯಾವುದೇ ರೀತಿಯ ಅಪರಾಧ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಕೇಳುವುದಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಜಮೀನು ವಿವಾದ ಹಿನ್ನೆಲೆಯಲ್ಲಿ ಒಂಟಿ ಮಹಿಳೆಯನ್ನು ಸಂಬಂಧಿಕರು ಥಳಿಸಿರುವ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತೊಂಗಲಕುಪ್ಪ ಗ್ರಾಮದಲ್ಲಿ ಘಟನೆ ನಡೆದಿತ್ತು. ಆಶಾ ಎಂಬಾಕೆಯನ್ನು ಐದಾರು ಮಂದಿ ಸೇರಿ ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯತ್‌ ಸದಸ್ಯ ಶ್ರೀನಿವಾಸ್‌ ಸೇರಿ ಆಶಾಗೆ ಕಾಲಿನಿಂದ ಒದ್ದು, ಮನಬಂದಂತೆ ಥಳಿಸಿದ್ದಾರೆ.

ಪತಿಯನ್ನು ಕಳೆದುಕೊಂಡು ಒಂಟಿಯಾಗಿರುವ ಆಶಾ ನಿನ್ನೆ ಗುರುವಾರ ಸಂಜೆ ಆಸ್ತಿ ಪಾಲು ಕೇಳಲು ಹೋದಾಗ ಸಂಬಂಧಿಕರ ಜತೆಗೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಗಲಾಟೆ ಶುರುವಾಗಿದ್ದು, ನೋಡನೋಡುತ್ತಿದ್ದಂತೆ ಎಲ್ಲ ಸಂಬಂಧಿಕರು ಒಂಟಿಯಾಗಿದ್ದ ಆಶಾ ಮೇಲೆ ಎರಗಿದ್ದಾರೆ.

ಆಶಾಳನ್ನು ನೆಲಕ್ಕುರಳಿಸಿ ಸಿಕ್ಕ ಸಿಕ್ಕ ವಸ್ತುಗಳಿಂದ ಐದಾರು ವ್ಯಕ್ತಿಗಳು ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದೆಲ್ಲವೂ ಅಲ್ಲೆ ಇದ್ದ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಒಂಟಿ ಹೆಣ್ಣಿನ ಮೇಲೆ ಕ್ರೌರ್ಯ ಮೆರೆದ ಪುಂಡರ ವಿರುದ್ಧ ಆಕ್ರೋಶಗಳು ಕೇಳಿ ಬಂದಿದೆ. ಕ್ಯಾಸಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bulldozer: ‌ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್‌ ಸದ್ದು; ರಸ್ತೆಯಲ್ಲಿ ಗುಂಡು ಹಾರಿಸಿದವರ ಹೋಟೆಲ್ ಧ್ವಂಸ!

Continue Reading

Latest

Viral News: ಆರ್ಡರ್ ಮಾಡಿ 6 ವರ್ಷ ಕಳೆದರೂ ವಸ್ತು ಕಳುಹಿಸದ ಫ್ಲಿಪ್‌ಕಾರ್ಟ್!

Viral News: ಈಗ ಮನೆಗೆ ಬೇಕಾಗಿರುವ ವಸ್ತುಗಳಿಂದ ಹಿಡಿದು ತಿನ್ನುವುದಕ್ಕೆ ಬೇಕಾಗಿರುವ ಆಹಾರದವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳುವ ಕಾಲ! ಕಣ್ಣು ಮುಚ್ಚಿ ತೆರೆಯುವುದರೊಳಗೆ ಮನೆಬಾಗಿಲಿಗೆ ನೀವು ಆರ್ಡರ್ ಮಾಡಿದ ವಸ್ತು ಬಂದು ಬೀಳುತ್ತೆ. ಅಂಥದ್ದರಲ್ಲಿ ಇಲ್ಲೊಬ್ಬರಿಗೆ ಆರ್ಡರ್ ಮಾಡಿ 6 ವರ್ಷದ ಬಳಿಕ ಪೇಡಿಂಗ್‌ ಆರ್ಡರ್‌ ಕುರಿತು ಫ್ಲಿಪ್‌ಕಾರ್ಟ್‌ನಿಂದ ಕರೆ ಬಂದಿದೆಯಂತೆ. ಅಹ್ಸಾನ್ ಖರ್ಬಾಯಿ ಎಂಬ ಮುಂಬೈ ನಿವಾಸಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅವರ ಆರ್ಡರ್ ಹಿಸ್ಟ್ರಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿ ತಮಗಾದ ಈ ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Viral News
Koo

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಬಹುತೇಕ ಸಮಯ ಈ ಆರ್ಡರ್ ಅವರು ತಿಳಿಸಿದ ಸಮಯಕ್ಕೆ ಸರಿಯಾಗಿ ಬರುತ್ತದೆ, ಕೆಲವೊಮ್ಮೆ ಅದಕ್ಕೂ ಮುಂಚಿತವಾಗಿ ಬರುತ್ತದೆ. ಆದರೆ ಮುಂಬೈ ವ್ಯಕ್ತಿಯೊಬ್ಬರಿಗೆ ವಸ್ತುವನ್ನು ಆರ್ಡರ್ ಮಾಡಿದ 6 ವರ್ಷಗಳ ನಂತರ ಕಸ್ಟಮರ್ ಕೇರ್‌ನಿಂದ ಕರೆ ಬಂದಿದೆಯಂತೆ. ಅಂದ ಹಾಗೆ ಆರು ವರ್ಷ ಕಳೆದರೂ ಅವರಿಗೆ ಆರ್ಡರ್‌ ಮಾಡಿದ ವಸ್ತು ಬಂದಿರಲಿಲ್ಲ. ಈ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.

ಅಹ್ಸಾನ್ ಖರ್ಬಾಯಿ ಎಂಬ ಮುಂಬೈ ನಿವಾಸಿ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅವರ ಆರ್ಡರ್ ಹಿಸ್ಟ್ರಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿ ತಮಗಾದ ಈ ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಅವರು ತಿಳಿಸಿದಂತೆ 2018ರಲ್ಲಿ ಫ್ಲಿಪ್ ಕಾರ್ಟ್ ಇ ಕಾಮರ್ಸ್ ವೆಬ್ ಸೈಟ್‌ನಲ್ಲಿ ಅಹ್ಸಾನ್ ಸ್ಪಾರ್ಕ್ಸ್ ಚಪ್ಪಲಿಯನ್ನು ಆರ್ಡರ್ ಮಾಡಿದ್ದರಂತೆ. ಆದರೆ ಚಪ್ಪಲಿಯನ್ನು ಅವರು ಇಂದಿಗೂ ಡೆಲಿವರಿ ನೀಡಲಿಲ್ಲ. ಆದರೆ 6 ವರ್ಷಗಳು ಕಳೆದ ನಂತರ ಅದು ಡೆಲಿವರಿ ಆಗಲಿದೆ ಎಂದು ತೋರಿಸುತ್ತಿದ್ದ ಕಾರಣ ಅವರು ಅದನ್ನು ಕ್ಲಿಕ್ ಮಾಡಿದ್ದಾರೆ. ಆಗ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ನಿಂದ ಕರೆ ಬಂದಿದೆಯಂತೆ. “ನೀವು ಆರ್ಡರ್ ನೊಂದಿಗೆ ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?” ಎಂದು ಕೇಳುವ ಕರೆಯನ್ನು ಸ್ವೀಕರಿಸಿದ ಅಹ್ಸಾನ್ ಅದಕ್ಕೆ ಉತ್ತರಿಸಿದ್ದಕ್ಕೆ “ಫ್ಲಿಪ್ ಕಾರ್ಟ್ ನಿಂದ ನಿಮಗೆ ಯಾವುದೇ ಕರೆ ಬರಲಿಲ್ಲವೇ? ಇದಕ್ಕಾಗಿ ನಾವು ವಿಷಾದಿಸುತ್ತೇವೆ ಸರ್” ಎಂದು ಹೇಳಿ ಕರೆ ಕಟ್ ಆಗಿದೆಯಂತೆ.

ಅಹ್ಸಾನ್ ಅವರು ಆರ್ಡರ್ ಅನ್ನು ಕ್ಯಾಶ್ ಆನ್ ಡೆಲಿವರಿಗೆ ಮಾಡಿದ್ದರಿಂದ ಅವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲವಂತೆ. ಆದರೆ ಅದನ್ನು ರದ್ದುಗೊಳಿಸಲು ಅದರಲ್ಲಿ ಯಾವುದೇ ಆಯ್ಕೆ ಇರಲಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಆದರೆ ಅವರ ಆರ್ಡರ್ ಲಿಸ್ಟ್ ತೆಗೆದಾಗ ಮೊದಲು ಅದೇ ಆರ್ಡರ್ ಬರುವ ಕಾರಣ ಅದನ್ನು ಅವರೇ ರದ್ದುಗೊಳಿಸಬೇಕೆಂದು ಅಹ್ಸಾನ್ ಕೇಳಿಕೊಂಡಿದ್ದಾರೆ.

Viral News

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಗೆ 1.3 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ಜೊತೆಗೆ ಅನೇಕ ಕಾಮೆಂಟ್ ಗಳು ಕೂಡ ಬಂದಿದೆ. ಅದರಲ್ಲಿ ಕೆಲವರು ಫ್ಲಿಪ್ ಕಾರ್ಟ್ ನಲ್ಲಿ ತಮಗೂ ಇದೇ ರೀತಿಯ ಅನುಭವವಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಅದರಲ್ಲಿ ಯಾವುದೂ 6 ವರ್ಷಗಳ ದೀರ್ಘಕಾಲದವರೆಗೆ ವಿಳಂಬವಾಗಿರಲಿಲ್ಲ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಹಾಗಾಗಿ ಫ್ಲಿಪ್ ಕಾರ್ಟ್ ಸೇರಿದಂತೆ ಯಾವುದೇ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಮೋಸ, ವಂಚನೆ ನಡೆಯುತ್ತಿರುತ್ತದೆ. ಆದಕಾರಣ ಇವುಗಳಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡುವಾಗ ಕ್ಯಾಶ್ ಆನ್ ಡೆಲಿವರಿ ಗೆ ಆರ್ಡರ್ ಮಾಡಿ. ಇದರಿಂದ ನಿಮಗೆ ಯಾವುದೇ ನಷ್ಟವಾಗುವುದಿಲ್ಲ.

Continue Reading
Advertisement
Kalki 2898 AD Box Office Day Prabhas Film Indian Opener Earns 180 Crore
ಟಾಲಿವುಡ್10 mins ago

Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

mp meet cm siddaramaiah
ಪ್ರಮುಖ ಸುದ್ದಿ22 mins ago

CM Siddaramaiah: ವಿನಾಕಾರಣ ಕೇಂದ್ರವನ್ನು ದೂರಬೇಡಿ: ರಾಜ್ಯ ಸಂಸದರ ಸಭೆಯಲ್ಲಿ ಸಿಎಂಗೆ ಎನ್‌ಡಿಎ ಪಾಠ

Seeds For Weight Loss
ಆರೋಗ್ಯ27 mins ago

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

Top 5 Engineering Courses
ಶಿಕ್ಷಣ27 mins ago

Top 5 Engineering Courses: ಇವು ಬಹು ಬೇಡಿಕೆಯ ಟಾಪ್ 5 ಎಂಜಿನಿಯರಿಂಗ್ ಕೋರ್ಸ್‌ಗಳು

Vastu Tips
ಧಾರ್ಮಿಕ57 mins ago

Vastu Tips: ಈ ವಾಸ್ತು ನಿಯಮ ಪಾಲಿಸಿದರೆ ವ್ಯವಹಾರದಲ್ಲಿ ವೃದ್ಧಿ

haveri Accident
ಕರ್ನಾಟಕ1 hour ago

Haveri Accident: ಹಾವೇರಿಯಲ್ಲಿ ಭಯಾನಕ ಅಪಘಾತ: ಲಾರಿಗೆ ಟಿಟಿ ಡಿಕ್ಕಿ, 13 ಜನರ ಸಾವು

Weight Loss Tips
ಆರೋಗ್ಯ1 hour ago

Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

Indian Origin Crow
ವಿದೇಶ2 hours ago

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

karnataka weather Forecast
ಮಳೆ2 hours ago

Karnataka Weather : ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌; ತಿಂಗಳಾಂತ್ಯದವರೆಗೆ ಮೀನುಗಾರರಿಗೆ ನಿರ್ಬಂಧ

World's Newest Countries
ವಿದೇಶ2 hours ago

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ13 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ15 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು16 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ20 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌