Sedition Case: ವಿಧಾನಸೌಧದೊಳಗೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ‌ ದೃಢ; ಮೂವರು ಅರೆಸ್ಟ್ - Vistara News

ಪ್ರಮುಖ ಸುದ್ದಿ

Sedition Case: ವಿಧಾನಸೌಧದೊಳಗೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ‌ ದೃಢ; ಮೂವರು ಅರೆಸ್ಟ್

Sedition Case: ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢವಾದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ವಿಧಾನಸೌಧ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇಲ್ತಾಜ್, ಮುನಾವರ್ ಹಾಗೂ ಮೊಹಮದ್ ಶಫಿ ನಾಶಿ ಪುಡಿ ಬಂಧಿತರು ಎನ್ನಲಾಗಿದೆ.

VISTARANEWS.COM


on

Sedition Case Pakistan Zindabad slogans confirmed inside Vidhana Soudha Three arrested
ಬಂಧಿತ ಆರೋಪಿ ಮೊಹಮದ್ ಶಫಿ ನಾಶಿ ಪುಡಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಸಿರ್‌ ಹುಸೇನ್‌ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಕೂಗಿದ್ದ ದೇಶದ್ರೋಹದ ಪ್ರಕರಣಕ್ಕೆ (Sedition Case) ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢವಾದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ವಿಧಾನಸೌಧ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇಲ್ತಾಜ್, ಮುನಾವರ್ ಹಾಗೂ ಮೊಹಮದ್ ಶಫಿ ನಾಶಿ ಪುಡಿ ಬಂಧಿತರು ಎನ್ನಲಾಗಿದೆ. ದೆಹಲಿ ಮೂಲದ ಇಲ್ತಾಜ್, ಆರ್‌.ಟಿ. ನಗರದ ಮುನಾವರ್ ಹಾಗೂ ಮೊಹಮ್ಮದ್ ಶಫಿ ನಾಶಿ ಪುಡಿ ಬ್ಯಾಡಗಿಯವನಾಗಿದ್ದಾನೆ.

ಏನಿದು ಘಟನೆ?

ಫೆ. 27ರಂದು ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿದ್ದರು. ನಮ್ಮ ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ನಡೆದಿತ್ತು. ಇದಕ್ಕೆ ಬಿಜೆಪಿ ಸೇರಿದಂತೆ ನಾಗರಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದಲ್ಲದೆ, ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿಯಲಾಗಿತ್ತು.

ಆರೋಪವನ್ನು ತಳ್ಳಿಹಾಕಿದ್ದ ಕಾಂಗ್ರೆಸ್‌

ಆದರೆ, ಈ ಆರೋಪವನ್ನು ಕಾಂಗ್ರೆಸ್‌ ತಳ್ಳಿ ಹಾಕಿದ್ದು, ಪೊಲೀಸರು ವಿಡಿಯೊವನ್ನು ನೋಡಿದ್ದು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಲೇ ಇಲ್ಲ ಎಂದು ಹೇಳಿತ್ತು. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸ್ಪಷ್ಟನೆ ನೀಡಿದ್ದರು. ಸದನದಲ್ಲೂ ಪ್ರಸ್ತಾಪವಾದಾಗ ಉತ್ತರ ನೀಡಿದ್ದ ಪರಮೇಶ್ವರ್‌, ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ತಪ್ಪು ನಡೆದಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ಎಫ್‌ಎಸ್‌ಎಲ್‌ ವರದಿ ಬಗ್ಗೆ ಗಮನ ಸೆಳೆದಿದ್ದ ವಿಸ್ತಾರ ನ್ಯೂಸ್‌

“ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದು ನಿಜ” ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ (FSL Expert) ಡಾ.ಬಿ.ಎನ್‌.ಫಣೀಂದ್ರ (Dr B N Phaneendar) ಅವರು ಮಾ. 1ರಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದರು. ಎಫ್‌ಎಸ್‌ಎಲ್‌ ವರದಿಯಲ್ಲೂ (FSL Report) ಇದನ್ನೇ ಉಲ್ಲೇಖಿಸಿರುವುದಾಗಿ ಫಣೀಂದ್ರ ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ಸಹ ಇದೇ ವರದಿಯನ್ನು ಉಲ್ಲೇಖಿಸಿ, ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಡಿಜಿಪಿ ಅಲೋಕ್‌ ಮೋಹನ್‌ಗೆ ಮನವಿಯನ್ನೂ ಸಲ್ಲಿಸಿತ್ತು. ಈಗ FSL ವರದಿಯಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಅನ್ನು ಕೂಗಿರುವುದು ದೃಢಪಟ್ಟಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ವಾದ ಏನಾಗಿತ್ತು?

ಕಾಂಗ್ರೆಸ್‌ ಪಕ್ಷದ ಪ್ರಕಾರ ಅಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ (Pakistan Zindabad) ಘೋಷಣೆ ಕೂಗಲಾಗಿಲ್ಲ. ಬದಲಾಗಿ ನಾಸಿರ್‌ ಸಾಬ್‌ ಜಿಂದಾಬಾದ್‌ (Nasir saab Zindabad) ಎಂಬ ಘೋಷಣೆಯನ್ನು ತಿರುಚಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದಂತೆ ಬಿಂಬಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ವಾದಿಸುತ್ತಾ ಬಂದಿತ್ತು.

ಕಾಂಗ್ರೆಸ್‌ ನಾಯಕರು ಈ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ, ಜತೆಗೆ ಫ್ಯಾಕ್ಟ್‌ ಚೆಕ್‌ ಮಾಡಿದ್ದನ್ನು ಬಿಡುಗಡೆ ಮಾಡಿದ್ದಾರೆ. ಫ್ಯಾಕ್ಟ್‌ ಚೆಕ್‌ ವಿಡಿಯೊದಲ್ಲಿ ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದು ಹೇಳಿದಂತೆ ಕೇಳಿಸಿದೆ ಎಂದು ಕಾಂಗ್ರೆಸ್‌ ಹೇಳಿತ್ತು.

ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಾದವೇನಾಗಿತ್ತು?

ಈ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌ ಪೋಸ್ಟ್‌ ಮಾಡಿ ಅಲ್ಲಿ ತಮ್ಮ ವಾದದ ವಿಚಾರವನ್ನು ಮುಂದಿಟ್ಟಿದ್ದರು. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದಿದ್ದಾರೆ. ಮಾಧ್ಯಮಗಳಿಗೂ ಹಲವು ಪ್ರಶ್ನೆ ಕೇಳಿದ್ದರು. ಅಂತಿಮವಾಗಿ ಅಲ್ಲಿ ಏನೂ ನಡೆದಿಲ್ಲ. ಏನೋ ನಡೆದಿದೆ ಎಂಬಂತೆ ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: FSL Report : ಸರ್ಕಾರಿ FSL ವರದಿ ಬಂದಿಲ್ಲ, ಖಾಸಗಿ ವರದಿ ಒಪ್ಪಲ್ಲ; ಬಿಜೆಪಿಗೆ ಪರಮೇಶ್ವರ್‌ ತಿರುಗೇಟು

  1. ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ “ಪಾಕಿಸ್ತಾನ್ ಜಿಂದಾಬಾದ್” ಎನ್ನುವ ಶಬ್ದ ಸದ್ದು ಮಾಡುತ್ತದೆ!
  2. ಮಾಧ್ಯಮ ಸ್ನೇಹಿತರಲ್ಲಿ ಕೇಳಬೇಕು ಎನಿಸುವ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ,
    -ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಜಿಂದಾಬಾದ್” ಎಂದು ಕೂಗಿರುವುದಾಗಿ ಹೇಳಿದ್ದಾರೆ.
    -ಅಕಸ್ಮಾತ್ ಅಲ್ಲಿ “ಪಾಕಿಸ್ತಾನ್” ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ?
    – ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು, ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸುವುದಿಲ್ಲ,
    -ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು.
    – ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ,
    – ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ“ ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಪತ್ರಕರ್ತ ಸ್ನೇಹಿತರೇ ಉತ್ತರಿಸಬೇಕು.
    ಮಾಧ್ಯಮ ಜಾಗೃತವಾಗಲಿ. ಜಾಗೃತ ಮಾಧ್ಯಮ ಜನಕಲ್ಯಾಣಕ್ಕೆ ಕಾರಣವಾಗಲಿ. ಈ ರೀತಿ ಭಜನೆಗಲ್ಲಾ.- ಎಂದಿದ್ದಾರೆ ಪ್ರಿಯಾಂಕ್‌ ಖರ್ಗೆ.
  3. ಇದರ ಜತೆಗೆ ಪ್ರಿಯಾಂಕ್‌ ಖರ್ಗೆ ಅವರು ಕೆಲವೊಂದು ಮಾಧ್ಯಮದ ತುಣುಕುಗಳನ್ನು ಟ್ಯಾಗ್‌ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Agniveer Scheme: ʼಅಗ್ನಿವೀರ್‌ʼ ಯೋಜನೆಯಲ್ಲಿನ ಈ ಎಲ್ಲ ಬದಲಾವಣೆಗೆ ಭಾರತೀಯ ಸೇನೆ ಸಲಹೆ

Agniveer Scheme: ಕೇಂದ್ರ ಸರ್ಕಾರ 2022ರಲ್ಲಿ ಪರಿಚಯಿಸಿದ, ಭಾರತೀಯ ಸೇನೆಯಲ್ಲಿ ಕಿರು ಅವಧಿಗೆ ಸೇವೆ ಸಲ್ಲಿಸುವ ‘ಅಗ್ನಿವೀರ್’‌ ಯೋಜನೆಗೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯುವಜನತೆಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. ಅದೇನು ಏನೇನು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Agniveer Scheme
Koo

ನವದೆಹಲಿ: ಕೇಂದ್ರ ಸರ್ಕಾರ 2022ರಲ್ಲಿ ಪರಿಚಯಿಸಿದ, ಭಾರತೀಯ ಸೇನೆಯಲ್ಲಿ ಕಿರು ಅವಧಿಗೆ ಸೇವೆ ಸಲ್ಲಿಸುವ ‘ಅಗ್ನಿವೀರ್’‌ (Agniveer Scheme) ಯೋಜನೆಗೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯುವಜನತೆಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. 4 ವರ್ಷಗಳ ಕೆಲಸದ ಅವಧಿ ಪೂರ್ಣಗೊಂಡ ನಂತರ, ‘ಅಗ್ನಿವೀರ್’ ಗಳಿಗೆಗೆ ಒಂದು ದೊಡ್ಡ ಮೊತ್ತದ ‘ನಿವೃತ್ತಿ’ ಪ್ಯಾಕೇಜ್ ಸಹ ಪಾವತಿಸಲಾಗುತ್ತದೆ. ಇದೀಗ ಭಾರತೀಯ ಸೇನೆ ಈ ಅಗ್ನಿವೀರ್‌ ಯೋಜನೆಯಲ್ಲಿ ಕೆಲವು ಬದಲಾವಣೆಯನ್ನು ಸೂಚಿಸಿದೆ. ಅದೇನು ಏನೇನು ಎನ್ನುವ ವಿವರ ಇಲ್ಲಿದೆ.

ಸಂಖ್ಯೆಯ ಹೆಚ್ಚಳ

ಪ್ರಸ್ತುತ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಶೇ. 25ರಷ್ಟು ಅಗ್ನಿವೀರರನ್ನು ಮಾತ್ರ ಉಳಿಸಿಕೊಳ್ಳುವ ನಿಯಮವಿದೆ. ಉಳಿದ ಶೇ. 75ರಷ್ಟು ಮಂದಿ ನಿವೃತ್ತಿ ಪಡೆಯುತ್ತಾರೆ. ಇದು ಬದಲಾಗಬೇಕಿದೆ. ಉಳಿಸಿಕೊಳ್ಳುವವರ ಸಂಖ್ಯೆಯನ್ನು ಶೇ. 25ರಿಂದ ಶೇ. 60-70ಕ್ಕೆ ಏರಿಸಬೇಕು. ಇದರಿಂದ ಭಾರತೀಯ ಸೇನೆಗೆ ಅನುಭವಿ ಯೋಧರು ಲಭ್ಯರಾಗುತ್ತಾರೆ.

ಸೇವಾ ಅವಧಿಯ ಹೆಚ್ಚಳ

ಸದ್ಯ ಅಗ್ನಿವೀರರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ 9 ತಿಂಗಳು ತರಬೇತಿಗೆ ಮೀಸಲಿಡಲಾಗಿದೆ. ತರಬೇತಿ ಕಳೆದು ಉಳಿದ ಅಭ್ಯರ್ಥಿಗಳು 3 ವರ್ಷ, 3 ತಿಂಗಳು ಸೇವೆ ಸಲ್ಲಿಸುತ್ತಾರೆ. ಇದು ಬದಲಾಗಬೇಕು. ಸೇವಾ ಅವಧಿಯನ್ನು 7-8 ವರ್ಷಗಳಾಗಿ ಹೆಚ್ಚಿಸಲು ಸೇನೆ ಶಿಫಾರಸ್ಸು ಮಾಡಿದೆ. ಈ ಅವಧಿಯಲ್ಲಿ ಅಗ್ನಿವೀರರು ಸಮಗ್ರ ತರಬೇತಿ ಮತ್ತು ಅನುಭವ ಪಡೆಯಲು ಸಾಧ್ಯವಾಗುತ್ತದೆ.

ತಾಂತ್ರಿಕ ವಿಭಾಗಗಳ ವಯೋಮಿತಿಯಲ್ಲಿ ಹೆಚ್ಚಳ

ಪ್ರಸ್ತುತ 17 ಮತ್ತು 21.5 ವಯೋಮಾನದವರನ್ನು ಅಗ್ನಿವೀರರನ್ನಾಗಿ ನೇಮಿಸಲಾಗುತ್ತದೆ. ಈ ಮಿತಿಯನ್ನು ಹೆಚ್ಚಿಸಲು ಸೇನೆ ಸಲಹೆ ನೀಡಿದೆ. ಸಿಗ್ನಲ್ಸ್‌, ಏರ್‌ ಡಿಫೆನ್ಸ್‌ ಮತ್ತು ಎಂಜಿನಿಯರ್‌ನಂತಹ ತಾಂತ್ರಿಕ ಹುದ್ದೆಗಳಿಗೆ ನೇಮಕ ಮಾಡುವಾಗ ವಯೋಮಿತಿಯನ್ನು 23 ವರ್ಷಕ್ಕೆ ಏರಿಸಬೇಕು ಎಂದು ಸಲಹೆ ನೀಡಲಾಗಿದೆ.

ಅಂಗವಿಕಲರಿಗೆ ಹೆಚ್ಚಿನ ನೆರವು

ಪ್ರಸ್ತುತ ತರಬೇತಿ ಅವಧಿಯಲ್ಲಿ ಅಂಗವಿಕಲರಾಗುವ ಅಗ್ನಿವೀರರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಯಮಗಳಿಲ್ಲ. ಹೀಗಾಗಿ ತರಬೇತಿ ಅವಧಿಯಲ್ಲಿ ಅಂಗವೈಕಲ್ಯ ಅನುಭವಿಸುವವರಿಗೆ ಹೆಚ್ಚಿನ ಸೌಕರ್ಯ ಒದಗಿಸಬೇಕು. ಅಲ್ಲದೆ ಅಗ್ನಿವೀರರು ತಮ್ಮ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ಉತ್ತಮ ಉದ್ಯೋಗ ಹುಡುಕಿಕೊಳ್ಳಲು ನೆರವು ನೀಡಬೇಕು. ಇದಕ್ಕಾಗಿ ವೃತ್ತಿಪರ ಏಜೆನ್ಸಿ ಆರಂಭಿಸಬಹುದು.

ಕುಟುಂಬಗಳಿಗೆ ಸಹಾಯಹಸ್ತ

ಪ್ರಸ್ತುತ ಯುದ್ಧದಲ್ಲಿ ಮಡಿವ ಅಗ್ನಿವೀರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಯಾವುದೇ ಅವಕಾಶ, ನಿಯಮಗಳಿಲ್ಲ. ಹೀಗಾಗಿ ಹುತಾತ್ಮರಾಗುವ ಅಗ್ನಿವೀರರ ಕುಟುಂಬಕ್ಕೆ ನೆರವಾಗುವ ಭತ್ಯೆಯನ್ನು ಪರಿಚಯಿಸಲು ಸೇನೆ ಸಲಹೆ ನೀಡಿದೆ.

ಇದನ್ನೂ ಓದಿ: Agniveer: ಮೃತ ಅಗ್ನಿವೀರನ ಕುಟುಂಬಕ್ಕೆ ಸಲ್ಲುತ್ತಿದೆ ₹1.13 ಕೋಟಿ ಪರಿಹಾರ; ರಾಹುಲ್‌ ಆರೋಪ ಸುಳ್ಳು ಎಂದ ಸೇನೆ

ಹಲವರಿಂದ ವಿರೋಧ

ಅಲ್ಪಾವಧಿಗೆ ನೇಮಕಾತಿ ನಡೆಸಲಾಗುವ ಅಗ್ನಿಪಥ್ ಯೋಜನೆಯ ಬಗ್ಗೆ ಕೆಲವರು ಈ ಹಿಂದೆಯೇ ಅಪಸ್ವರ ಎತ್ತಿದ್ದಾರೆ. ಇದು ಉದ್ಯೋಗ ಅಭದ್ರತೆ ಮತ್ತು ಮಿಲಿಟರಿ ಸಿಬ್ಬಂದಿಯ ಅಪೂರ್ಣ ತರಬೇತಿಗೆ ಕಾರಣವಾಗಬಹುದು ಎಂದು ಕೆಲವರು ವಾದಿಸುತ್ತಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿರುವ ಜೆಡಿಯು ಮತ್ತು ಎಲ್‌ಜೆಪಿ (ಆರ್‌ವಿ) ಕೂಡ ಯೋಜನೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

Continue Reading

EXPLAINER

Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!

Jagannath Temple: ಕಳೆದ ನಾಲ್ಕು ವರ್ಷಗಳಿಂದ ಮುಚ್ಚಲಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಾಲಯದ ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ ತೆರೆಯಲಾಗಿದೆ. ಅದರಂತೆ, ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಬಿಜೆಪಿಯು ಅಧಿಕಾರಕ್ಕೆ ಬರುತ್ತಲೇ ಈಡೇರಿಸಿದಂತಾಗಿದೆ. ದೇವಾಲಯದ ಬಾಗಿಲುಗಳನ್ನು ಮುಚ್ಚಿದ್ದೇಕೆ? ಇದು ಏಕೆ ಪ್ರಮುಖ ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.

VISTARANEWS.COM


on

Jagannath Temple
Koo

ಭುವನೇಶ್ವರ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದ (Jagannath Temple) ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ (ಜೂನ್‌ 13) ತೆರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಬಾಗಿಲಿನ ಮೂಲಕ ತೆರಳಿ, ದೇವರ ದರ್ಶನ ಪಡೆಯುತ್ತಿದ್ದ ಭಕ್ತರು ಗುರುವಾರದಿಂದ ನಾಲ್ಕೂ ಬಾಗಿಲುಗಳ ಮೂಲಕ ಜಗನ್ನಾಥನ ದರ್ಶನ ಪಡೆಯಬಹುದಾಗಿದೆ. ಒಡಿಶಾದ ನೂತನ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ (Mohan Charan Majhi) ಅವರ ಸಮ್ಮುಖದಲ್ಲಿ ಎಲ್ಲ ಬಾಗಿಲುಗಳನ್ನು ತೆರೆಯಲಾಗಿದೆ.

ಬಾಗಿಲುಗಳಿಗೆ ಬೀಗ ಹಾಕಿದ್ದೇಕೆ?

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹಿಂದೆ ಪುರಿ ಜಗನ್ನಾಥ ದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಕೊರೊನಾ ಲಾಕ್‌ಡೌನ್‌, ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದೇ ಸಂದರ್ಭದಲ್ಲಿ ದೇವಾಲಯದ ನಾಲ್ಕು ಬಾಗಿಲುಗಳನ್ನು ಮುಚ್ಚಲಾಗಿತ್ತು. ಆದರೆ, ಕೋವಿಡ್‌ 19 ಬಿಕ್ಕಟ್ಟಿನ ಬಳಿಕವೂ, ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕವೂ ನಾಲ್ಕೂ ಬಾಗಿಲುಗಳನ್ನು ತೆರೆದಿರಲಿಲ್ಲ. ಸಿಂಹದ್ವಾರದ ಮೂಲಕ ಮಾತ್ರ ಭಕ್ತರು ದೇವರು ದರ್ಶನ ಪಡೆಯುವಂತಾಗಿತ್ತು.

ಬಿಜೆಪಿ ಪ್ರಣಾಳಿಕೆಗೂ, ಇದಕ್ಕೂ ಏನು ಸಂಬಂಧ?

ಪುರಿ ಜಗನ್ನಾಥ ದೇವಾಲಯಕ್ಕೆ 12ನೇ ಶತಮಾನದ ಇತಿಹಾಸವಿದೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತ ಸೇರಿ ದೇಶ-ವಿದೇಶಗಳಿಂದ ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಪ್ರತಿ ವರ್ಷವು ಪುರಿ ಜಗನ್ನಾಥ ರಥಯಾತ್ರೆ ನಡೆಯುತ್ತದೆ. ಇದು ವಿಶ್ವದಲ್ಲೇ ಬೃಹತ್‌ ಹಿಂದು ಹಬ್ಬ ಅಥವಾ ಜಾತ್ರೆ ಎಂದೇ ಖ್ಯಾತಿಯಾಗಿದೆ. ಆದರೆ, ಈ ದೇವಾಲಯದ ನಾಲ್ಕೂ ದ್ವಾರಗಳನ್ನು ತೆರೆಯದೆ ಇರುವುದು ರಾಜಕೀಯ ವಿಷಯವಾಗಿ ಬದಲಾಗಿತ್ತು.

ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್‌ ಪಟ್ನಾಯಕ್‌ ಅವರ ಆಡಳಿತದಲ್ಲಿ ನಾಲ್ಕೂ ದ್ವಾರಗಳನ್ನು ತೆಗೆಯದಿರುವ ಕುರಿತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯದ ನಾಲ್ಕೂ ಬಾಗಿಲುಗಳನ್ನು ತೆರೆಯಲಾಗುವುದು, ಕಳೆದು ಹೋಗಿರುವ ಭಂಡಾರದ ಬೀಗದ ಕೈ ಕುರಿತು ತನಿಖೆ ನಡೆಸಲಾಗುವುದು ಎಂಬುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಅದರಂತೆ, ಬಿಜೆಪಿಯ ಮೋಹನ್‌ ಚರಣ್‌ ಮಾಝಿ ಅವರು ದೇವಾಲಯದ ಬಾಗಿಲುಗಳನ್ನು ತೆರೆಸುವ ಮೂಲಕ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.

ದೇಗುಲದ ಬಾಗಿಲುಗಳು ಏಕೆ ಪ್ರಮುಖ?

ದೇವಾಲಯದ ನಾಲ್ಕು ದ್ವಾರಗಳು ಭಕ್ತರಿಗೆ ಪ್ರಮುಖವಾಗಿವೆ. ನಾಲ್ಕೂ ದ್ವಾರಗಳು ಒಂದೊಂದು ಪ್ರಾಣಿಯನ್ನು ಪ್ರತಿನಿಧಿಸುತ್ತವೆ. ಪೂರ್ವದಲ್ಲಿರುವ ದ್ವಾರವು ಸಿಂಹವನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ಸಿಂಹದ್ವಾರ ಎನ್ನುತ್ತಾರೆ. ಇನ್ನು ಪಶ್ಚಿಮದಲ್ಲಿರುವ ದ್ವಾರವು ಹುಲಿಯನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ವ್ಯಾಘ್ರದ್ವಾರ ಎಂದು ಕರೆಯುತ್ತಾರೆ. ಅದರಂತೆ, ಉತ್ತರಕ್ಕೆ ಇರುವ ದ್ವಾರವು ಆನೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಹಸ್ತಿದ್ವಾರ ಎಂದೂ, ದಕ್ಷಿಣಕ್ಕೆ ಇರುವ ದ್ವಾರವು ಕುದುರೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಅಶ್ವದ್ವಾರ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

Continue Reading

ಪ್ರಮುಖ ಸುದ್ದಿ

Actor Darshan Arrested : ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಬೂಟು ಕಾಲಿನಿಂದ ಒದ್ದಿದ್ದ ದರ್ಶನ್​!

Actor Darshan Arrested : ದರ್ಶನ್​ ಮತ್ತು ಗ್ಯಾಂಗ್​ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಯರ್ರಾಬಿರ್ರಿ ಹಲ್ಲೆ ಮಾಡಿದ್ದರು. ಹೀಗಾಗಿ ಒಂಟಿ ಮನೆಯಲ್ಲಿಯೇ ಪ್ರಾಣ ಬಿಟ್ಟಿದ್ದರು. ಇದನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. ನನ್ನ ಗೆಳತಿಗೆ ಮರ್ಮಾಂಗದ ಫೋಟೋ ಕಳುಹಿಸ್ತಿಯಾ ಎಂದು ಬಂದ ದರ್ಶನ್​, ರೇಣುಕಾ ಸ್ವಾಮಿಯ ಕಾಲು ಅಗಲಿಸಿ ಬೂಟುಗಾಲಿನಲ್ಲಿ ಮರ್ಮಾಂಗವನ್ನು ಹೊಸಕಿದ್ದ. ಇದು ರೇಣುಕಾ ಸ್ವಾಮಿಯ ಅರ್ಧ ಪ್ರಾಣವನ್ನು ತೆಗೆದಿತ್ತು.

VISTARANEWS.COM


on

Actor Darshan Arrested
Koo

ಬೆಂಗಳೂರು: ತನ್ನ ಗೆಳತಿ ಪವಿತ್ರಾ ಗೌಡಗೆ ಮರ್ಮಾಂಗದ ಪೋಟೋ ಕಳುಹಿಸಿದ ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ದರ್ಶನ್​ ಸಿಟ್ಟಿನಿಂದ ಬೂಟು ಕಾಲಿನಿಂದ ಒದ್ದಿದ್ದಾರೆ. ದರ್ಶನ್​ ವಿಚಾರಣೆ ವೇಳೆ (Actor Darshan Arrested) ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರೇಣುಕಾ ಸ್ವಾಮಿಯನ್ನು ಭಯಂಕರವಾಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು ಮತ್ತು ಪೋಸ್ಟ್​ ಮಾರ್ಟಂ ರಿಪೋರ್ಟ್ ಕೂಡ ಅದನ್ನೇ ಹೇಳಿತ್ತು. ಇದೀಗ ಸ್ವತಃ ದರ್ಶನ್​ ಸಿಟ್ಟಿನ ಭರದಲ್ಲಿ ಮಾಡಿರುವ ಕ್ರೌರ್ಯವನ್ನು ಒಂದೊಂದಾಗಿ ಒಪ್ಪಿಕೊಂಡಿದ್ದಾರೆ.

ದರ್ಶನ್​ ಮತ್ತು ಗ್ಯಾಂಗ್​ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಯರ್ರಾಬಿರ್ರಿ ಹಲ್ಲೆ ಮಾಡಿದ್ದರು. ಹೀಗಾಗಿ ಒಂಟಿ ಮನೆಯಲ್ಲಿಯೇ ಪ್ರಾಣ ಬಿಟ್ಟಿದ್ದರು. ಇದನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. ನನ್ನ ಗೆಳತಿಗೆ ಮರ್ಮಾಂಗದ ಫೋಟೋ ಕಳುಹಿಸ್ತಿಯಾ ಎಂದು ಬಂದ ದರ್ಶನ್​, ರೇಣುಕಾ ಸ್ವಾಮಿಯ ಕಾಲು ಅಗಲಿಸಿ ಬೂಟುಗಾಲಿನಲ್ಲಿ ಮರ್ಮಾಂಗವನ್ನು ಹೊಸಕಿದ್ದ. ಇದು ರೇಣುಕಾ ಸ್ವಾಮಿಯ ಅರ್ಧ ಪ್ರಾಣವನ್ನು ತೆಗೆದಿತ್ತು.

ದರ್ಶನ್ ಮತ್ತು ಬಳಗದ ಏಟಿನ ಆಘಾತಕ್ಕೆ ನೆಲದಲ್ಲಿ ಬಿದ್ದಿದ್ದ ರೇಣುಕಾ ಸ್ವಾಮಿ ತಪ್ಪಾಯ್ತು ಎಂದು ದರ್ಶನ್ ಕಾಲು ಹಿಡಿಲು ಹೋಗಿದ್ದರು. ಈ ವೇಳೆ ಇನ್ನಷ್ಟು ಸಿಟ್ಟಿಗೆದ್ದಿದ್ದ ದರ್ಶನ್ ಮುಖದ ಮೇಲೆಯೂ ಹಲ್ಲೆ ಮಾಡಿದ್ದರು. ಒದ್ದ ರಭಸಕ್ಕೆ ರೇಣುಕಾ ಸ್ವಾಮಿಯ ತಲೆ ಗೋಡೌನ್​ನಲ್ಲಿ ನಿಲ್ಲಿಸಿದ್ದ ಟೆಂಪೊಗೆ ತಗುಲಿತ್ತು. ಹೀಗಾಗಿ ಮಂಡೆಗೂ ಸರಿಯಾಗಿ ಪೆಟ್ಟು ಬಿದ್ದಿತ್ತು. ಬಳಿಕ ಮತಿ ತಪ್ಪುವ ತನಕ ಸಿಕ್ಕಾಪಟ್ಟೆ ಹೊಡೆದಿದ್ದರು.

ಆ ಬಳಿಕ ರಿಪೀಸ್​, ದೊಣ್ಣೆ ಸೇರಿದಂತೆ ನಾನಾ ವಸ್ತುಗಳಿಂದ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ. ಹಲವಾರು ಹೊಡೆತಗಳನ್ನು ತಿಂದ ಬಳಿಕ ರೇಣುಕಾಸ್ವಾಮಿ ಸತ್ತಿದ್ದಾರೆ ಎಂಬುದಾಗಿ ಪ್ರದೂಷ್ ಫೋನ್ ಮಾಡಿ ದರ್ಶನ್​ಗೆ ತಿಳಿಸಿದ್ದ. ನಂತರ ಅವರು ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ಹೋಟೆಲ್​ನಲ್ಲಿ ಮೀಟಿಂಗ್ ಮಾಡಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿದ್ದರು.

ನಂತರ ಅವರು ಮೃತದೇಹವನ್ನು ಮೋರಿಗೆ ಎಸೆದು ಸುಮ್ಮನಾಗುವ ಪ್ರಯತ್ನ ಮಾಡಿದ್ದರು. ಆದರೆ, ಮೋರಿಗೆ ಬೀಳದ ದೇಹ ಸೀದಾ ತಟದಲ್ಲಿ ಬಿದ್ದಿತ್ತು.

ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಫೋನ್‌ ಮಾಡಿದ್ದು ಯಾರಿಗೆ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಸ್ಟಡಿಯಲ್ಲಿರುವ ನಟ ದರ್ಶನ್‌ (Actor Darshan), ಪವಿತ್ರಾ ಗೌಡ (Pavitra Gowda) ಸೇರಿ ಇತರ ಆರೋಪಿಗಳ ತೀವ್ರ ವಿಚಾರಣೆಯು ನಡೆಯುತ್ತಿದೆ. ಈ ಮಧ್ಯೆ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಭಾಗಿಯಾಗಿರುವ ಗುಮಾನಿಯು ಶುರುವಾಗಿದೆ.

ಇದನ್ನೂ ಓದಿ :Actor darshan Arrested : ದರ್ಶನ್​ಗೆ ಎಣ್ಣೆ ಹೊಡೆಯಲು, ಸಿಗರೇಟ್​ ಸೇದಲು ಪೊಲೀಸ್​ ಠಾಣೆಗೆ ಶಾಮಿಯಾನ​ವೇ?

ರೇಣುಕಾಸ್ವಾಮಿ ಕೊಲೆಯಾದ ಬಳಿಕ ಆರೋಪಿಗಳು ಒರ್ವ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆರ್‌ಆರ್ ನಗರದಲ್ಲಿ ನಡೆದ ಕೊಲೆ ನಂತರ ಮೃತದೇಹವನ್ನು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದು ಯಾಕೆ? ಎಲ್ಲಿಯೂ ಜಾಗ ಇಲ್ಲವೆಂದು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡೆಡ್‌ಬಾಡಿ ಹಾಕಬೇಡಿ ಎಂದಿದ್ದರಾ? ಆರೋಪಿಗಳು ಪೊಲೀಸ್‌ ಅಧಿಕಾರಿ ಸೂಚನೆ ಮೇರೆಗೆ ಮೃತದೇಹ ಕಾಮಾಕ್ಷಿಪಾಳ್ಯಕ್ಕೆ ತಂದು ಎಸೆಯಲಾಗಿದೆ. ಮೃತ ದೇಹ ಎಸೆದ ಬಳಿಕ ಸಹ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Continue Reading

Latest

Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

Kangana Ranaut: ಸಿನಿಮಾ ರಂಗದಿಂದ ರಾಜಕೀಯಕ್ಕೆ ಕಾಲಿಟ್ಟ ನಟಿ ಕಂಗನಾ ರಣಾವತ್ ಈಗ ಸಂಸದೆಯಾಗಿದ್ದಾರೆ. ಸಂಸದರು ತಿಂಗಳಿಗೆ 1 ಲಕ್ಷ ರೂ. ಮೂಲ ವೇತನವನ್ನು ಪಡೆಯುತ್ತಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಭರಿಸಲು 2018ರಲ್ಲಿ ವೇತನ ಹೆಚ್ಚಳ ಮಾಡಿದ ನಂತರ ಈ ಮೊತ್ತವನ್ನು ನೀಡಲಾಗುತ್ತಿದೆ. ಸಂಬಳದ ಜತೆ ಇನ್ನೂ ಏನೇನು ಸೌಲಭ್ಯವನ್ನು ಅವರು ಪಡೆಯುತ್ತಾರೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Kangana Ranaut
Koo

ದೆಹಲಿ: ನಟಿ ಕಂಗನಾ ರಣಾವತ್ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಂಗನಾ ರಾಜಕೀಯ ರಂಗವನ್ನು ಪ್ರವೇಶಿಸಿ ಸೈ ಎನಿಸಿಕೊಂಡಿದ್ದಾರೆ. 2024ರ ಲೋಕಸಭೆಯ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಜಯಗಳಿಸಿದ ನಟಿ ಕಂಗನಾ ರಣಾವತ್‌ (Kangana Ranaut) ಅವರು ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಾರೆ.

ಸಿನಿಮಾ ರಂಗದಿಂದ ರಾಜಕೀಯಕ್ಕೆ ಕಾಲಿಟ್ಟ ನಟಿ ಸಂಸದೆಯಾದ ಕಾರಣ ಹಲವು ರೀತಿಯ ಸವಲತ್ತುಗಳನ್ನು ಹೊಂದಿರುತ್ತಾರೆ. ಹಾಗಾದ್ರೆ ಅವರ ಸಂಬಳ ಮತ್ತು ಸವಲತ್ತುಗಳ ಬಗ್ಗೆ ತಿಳಿಯೋಣ:

ತಿಂಗಳ ಸಂಬಳ: ಸಂಸದರು ತಿಂಗಳಿಗೆ 1 ಲಕ್ಷ ರೂ. ಮೂಲ ವೇತನವನ್ನು ಪಡೆಯುತ್ತಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಭರಿಸಲು 2018ರಲ್ಲಿ ವೇತನ ಹೆಚ್ಚಳ ಮಾಡಿದ ನಂತರ ಈ ಮೊತ್ತವನ್ನು ನೀಡಲಾಗುತ್ತಿದೆ.

ಸವಲತ್ತುಗಳ ವಿವರ ಹೀಗಿದೆ:

  • ಕ್ಷೇತ್ರ ಭತ್ಯೆ : ಕಂಗನಾ ಅವರಿಗೆ ತಮ್ಮ ಕ್ಷೇತ್ರದಲ್ಲಿ ಕಚೇರಿಗಳನ್ನು ನಿರ್ವಹಿಸಲು ಮತ್ತು ಮತದಾರರೊಂದಿಗೆ ಸಂವಹನ ಸಾಧಿಸುವ ವೆಚ್ಚವನ್ನು ಭರಿಸಲು ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ 70,000 ರೂ. ನೀಡುತ್ತಾರೆ.
  • ದೈನಂದಿನ ಭತ್ಯೆ : ಸಂಸತ್ತಿನ ಅಧಿವೇಶನಗಳು ಮತ್ತು ಸಮಿತಿ ಸಭೆಗಳಲ್ಲಿ ದಿಲ್ಲಿಯಲ್ಲಿದ್ದಾಗ ಕಂಗನಾ ಅವರು ವಸತಿ, ಆಹಾರ ಮತ್ತು ಇತರ ವೆಚ್ಚಗಳಿಗಾಗಿ 2000 ರೂ. ದೈನಂದಿನ ಭತ್ಯೆಯಾಗಿ ಪಡೆಯುತ್ತಾರೆ.
  • ಪ್ರಯಾಣ ಭತ್ಯೆ : ಎಲ್ಲಾ ಸಂಸದರು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ವರ್ಷಕ್ಕೆ 34 ಬಾರಿ ಉಚಿತ ದೇಶಿಯ ವಿಮಾನ ಪ್ರಯಾಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅವರು ಅಧಿಕೃತ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಉಚಿತ ಪ್ರಥಮ ದರ್ಜೆ ರೈಲು ಪ್ರಯಾಣವನ್ನು ಸಹ ಪಡೆಯುತ್ತಾರೆ ಮತ್ತು ತಮ್ಮ ಕ್ಷೇತ್ರಗಳಲ್ಲಿ ರಸ್ತೆಯಲ್ಲಿ ಪ್ರಯಾಣಿಸಲು ಮೈಲೇಜ್ ಭತ್ಯೆವನ್ನು ಪಡೆಯಬಹುದು.
  • ವಸತಿ: ಸಂಸದರಿಗೆ ಅವರ 5 ವರ್ಷದ ಆಡಳಿತ ಅವಧಿಯಲ್ಲಿ ಬಂಗಲೆಗಳು, ಪ್ಲ್ಯಾಟ್‌ಗಳು ಅಥವಾ ಹಾಸ್ಟೆಲ್ ಕೊಠಡಿಗಳು ಹಾಗೂ ಬಾಡಿಗೆ ಮುಕ್ತ ವಸತಿಯನ್ನು ಒದಗಿಸಲಾಗುವುದು. ಒಂದು ವೇಳೆ ಅಧಿಕೃತ ವಸತಿ ಸೌಕರ್ಯವನ್ನು ಬಳಸದವರಿಗೆ ತಿಂಗಳಿಗೆ 2,00,000 ರೂ. ವಸತಿ ಭತ್ಯೆವನ್ನು ಪಡೆಯಬಹುದು.
  • ವೈದ್ಯಕೀಯ ಸೌಲಭ್ಯ : ಕಂಗನಾ ಮತ್ತು ಅವರ ಕುಟುಂಬದವರು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CCHS) ಅಡಿಯಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಪಡೆಯುತ್ತಾರೆ. ಇದರಿಂದ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
  • ಇತರೆ: ಸಂಸದರಿಗೆ ವರ್ಷಕ್ಕೆ 1,50,000 ರೂ.ನಷ್ಟು ಉಚಿತ ದೂರವಾಣಿ ಕರೆಗಳನ್ನು ನೀಡಲಾಗುತ್ತದೆ ಮತ್ತು ಅವರು ತಮ್ಮ ನಿವಾಸದಲ್ಲಿ ಮತ್ತು ಕಚೇರಿಗಳಲ್ಲಿ ಉಚಿತ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಅವರಿಗೆ ವರ್ಷಕ್ಕೆ 50,000 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು 4,000 ಕಿಲೋ ಲೀಟರ್‌ನಷ್ಟು ನೀರನ್ನು ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ

Continue Reading
Advertisement
Agniveer Scheme
ದೇಶ18 seconds ago

Agniveer Scheme: ʼಅಗ್ನಿವೀರ್‌ʼ ಯೋಜನೆಯಲ್ಲಿನ ಈ ಎಲ್ಲ ಬದಲಾವಣೆಗೆ ಭಾರತೀಯ ಸೇನೆ ಸಲಹೆ

Rajal Arora
ಕ್ರೀಡೆ2 mins ago

Rajal Arora: ಟೀಮ್​ ಇಂಡಿಯಾ ಜತೆಗಿರುವ ಏಕೈಕ ಮಹಿಳಾ ಸಿಬ್ಬಂದಿ ಯಾರು? ಇವರ ಕೆಲಸವೇನು?

Jagannath Temple
EXPLAINER11 mins ago

Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!

Yuva Movie Premier On star Suvarna
ಕಿರುತೆರೆ13 mins ago

Yuva Movie: ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ ʻಯುವ; ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ!

Actor Darshan aryvardhan Guruji told RR nagar vasthu
ಸ್ಯಾಂಡಲ್ ವುಡ್44 mins ago

Actor Darshan: ಆರ್ ಆರ್​​ ನಗರ ವಾಸ್ತು ಸರಿಯಿಲ್ಲ, ಕೇಸುಗಳು ಬೀಳ್ತವೆ ಎಂದಿದ್ದರು ಆರ್ಯವರ್ಧನ್​ ಗುರೂಜಿ; ದರ್ಶನ್ ವಿಷಯದಲ್ಲಿ ಸತ್ಯವಾಯ್ತೇ?

Actor Darshan Arrested
ಪ್ರಮುಖ ಸುದ್ದಿ51 mins ago

Actor Darshan Arrested : ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಬೂಟು ಕಾಲಿನಿಂದ ಒದ್ದಿದ್ದ ದರ್ಶನ್​!

Road Accident
ಕ್ರೈಂ52 mins ago

Road Accident : ಪ್ರತ್ಯೇಕ 5 ಕಡೆಗಳಲ್ಲಿ ಆ್ಯಕ್ಸಿಡೆಂಟ್‌; ಕಾರು ಡಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಸವಾರ ಸಾವು

IND vs USA
ಕ್ರೀಡೆ1 hour ago

IND vs USA: ಕೊಹ್ಲಿಯ ವಿಕೆಟ್​ ಪತನ ಕಂಡು ದಂಗಾದ ರೋಹಿತ್​ ಶರ್ಮ; ವಿಡಿಯೊ ವೈರಲ್​

World Anti Child Labor Day celebration in Hosapete
ವಿಜಯನಗರ2 hours ago

Vijayanagara News: ಹೊಸಪೇಟೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

Kangana Ranaut
Latest2 hours ago

Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌