Milk With Banana Side Effects: ಬಾಳೆಹಣ್ಣನ್ನೂ ಹಾಲನ್ನೂ ಜೊತೆಯಾಗಿ ಸೇವಿಸಬಾರದು, ಯಾಕೆ ಗೊತ್ತೆ? - Vistara News

ಆರೋಗ್ಯ

Milk With Banana Side Effects: ಬಾಳೆಹಣ್ಣನ್ನೂ ಹಾಲನ್ನೂ ಜೊತೆಯಾಗಿ ಸೇವಿಸಬಾರದು, ಯಾಕೆ ಗೊತ್ತೆ?

ಬಾಳೆಹಣ್ಣು ಹಾಗೂ ಹಾಲು ಇವೆರಡು ಒಳ್ಳೆಯ ಜೋಡಿ (Milk With Banana Side Effects) ಎಂದು ನಿಮಗನಿಸಿದ್ದರೆ, ಅದು ಸುಳ್ಳೂ ಆಗಿರಬಹುದು ಎಂಬುದನ್ನು ಒಪ್ಪುತ್ತೀರಾ? ಒಪ್ಪಲೇಬೇಕು. ಏಕೆಂದರೆ…

VISTARANEWS.COM


on

Milk With Banana Side Effects
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಳೆಹಣ್ಣನ್ನೂ ಹಾಲನ್ನೂ ಬೆರೆಸುವ ಅಭ್ಯಾಸ ನಿಮಗಿದೆಯೇ? (Milk With Banana Side Effects) ಯಾವಾಗಲೂ ಬಾಳೆಹಣ್ಣಿನ ಸ್ಮೂದಿ, ಮಿಲ್ಕ್‌ ಶೇಕ್‌ ಮಾಡಿಕೊಂಡು ಕುಡಿಯುತ್ತೀರಾ? ಅಥವಾ ನಿಮ್ಮ ಮಕ್ಕಳಿಗೂ ಕೊಡುತ್ತೀರಾ? ಹಾಗಾದರೆ ಒಮ್ಮೆ ಇಲ್ಲಿ ಕೇಳಿ. ಬಾಳೆಹಣ್ಣು ಹಾಗೂ ಹಾಲು ಇವೆರಡು ಒಳ್ಳೆಯ ಜೋಡಿ ಎಂದು ನಿಮಗನಿಸಿದ್ದರೆ, ಅದು ಸುಳ್ಳೂ ಆಗಿರಬಹುದು ಎಂಬುದನ್ನು ಒಪ್ಪುತ್ತೀರಾ? ಒಪ್ಪಲೇಬೇಕು. ಬಾಳೆಹಣ್ಣನ್ನೂ ಹಾಲನ್ನೂ ಮಿಕ್ಸಿಯಲ್ಲಿ ಹಾಕಿ ಗರ್ರೆಂದು ತಿರುಗಿಸಿ ಒಂದಿಷ್ಟು ಸಕ್ಕರೆ ಹಾಕಿದರೆ, ಆಹಾ ಎಂಬ ರುಚಿಯೇನೋ ಹೌದು. ಬೇಸಿಗೆಯಲ್ಲಿ ಒಂದೆರಡು ಕ್ಯೂಬ್‌ ಐಸ್‌ ಹಾಕಿದರಂತೂ ಹೊಟ್ಟೆ ತಂಪಾದ ಅನುಭವ. ಇಂಥ ರುಚಿಯಾದ ಪಾನೀಯವನ್ನು ಮಧ್ಯದಲ್ಲೆಲ್ಲೋ ಹಸಿವಾದಾಗ ಕುಡಿದರೆ ಹೊಟ್ಟೆ ತುಂಬಿದ ಭಾವ. ಬಾಯಿಗೂ ರುಚಿ. ಹೊಟ್ಟೆಗೂ, ನಮ್ಮ ಆರೋಗ್ಯಕ್ಕೂ ನಾವು ಒಳ್ಳೆಯದನ್ನೇ ಮಾಡಿದ್ದೇವೆ ಎಂಬ ಭಾವ. ಆದರೆ, ನಾವು ಅಂದುಕೊಂಡಿದ್ದೆಲ್ಲ ನಿಜವಾಗಲೇಬೇಕಾಗಿ ಇಲ್ಲವಲ್ಲ!
ಹೌದು. ಬಾಳೆಹಣ್ಣಿನ ಮಿಲ್ಕ್‌ಶೇಕ್‌ ಬಹಳ ಪ್ರಸಿದ್ಧವೇನೋ ಹೌದಾದರೂ, ಯಾವಾಗಲೂ ಇದರ ಬಗ್ಗೆ ಹೀಗೆ ವಾದವಿವಾದಗಳು ಇದ್ದೀದ್ದೇ. ಒಂದು ವರ್ಗ ಇದನ್ನು ಒಳ್ಳೆಯದು ಎಂದರೆ, ಇನ್ನೊಂದು ವರ್ಗ ಇದು ಒಳ್ಳೆಯದಲ್ಲ ಎನ್ನುತ್ತದೆ. ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬಂತೆ ಈ ವಾದಕ್ಕೆ ಎಂದಿಗೂ ಕೊನೆಯೇ ಇಲ್ಲ. ಹಾಲೂ ಒಳ್ಳೆಯದು, ಬಾಳೆಹಣ್ಣೂ ಒಳ್ಳೆಯದು, ಇವೆರಡನ್ನೂ ಜೊತೆ ಸೇರಿಸಿ ಸ್ಮೂದಿ ಮಾಡಿ ಕುಡಿದರೆ ಯಾಕೆ ಒಳ್ಳೆಯದಲ್ಲ ಎಂಬ ಬಹುತೇಕರ ಪ್ರಶ್ನೆ ಸಹಜವೇ ಆದರೂ, ಯಾಕೆ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಹೀಗೆ ವಿವರಿಸುತ್ತಾರೆ. ಅವರ ಪ್ರಕಾರ, ಬಾಳೆಹಣ್ಣು ಹಾಗೂ ಹಾಲು ಇವೆರಡರ ಒಳ್ಳೆಯ ಗುಣಗಳನ್ನು ಪಡೆಯಬೇಕಾದರೆ, ಹಾಲು ಕುಡಿದು 20 ನಿಮಿಷಗಳ ಬಳಿಕ ಬಾಳೆಹಣ್ಣು ಸೇವಿಸಬಹುದು. ಇವೆರಡನ್ನೂ ಒಟ್ಟಿಗೆ ಸೇರಿಸಿ ತಿಂದರೆ ಅಥವಾ ಕುಡಿದರೆ, ಅಥವಾ ಬೇರೆಬೇರೆಯಾಗಿಯಾದರೂ ಜೊತೆಯಾಗಿ ಸೇವಿಸಿದಿರಿ ಎಂದರೆ, ನಿಮಗೆ ಜೀರ್ಣಕ್ರಿಯೆ ಸಂಬಂಧೀ ತೊಂದರೆಗಳು ಬರಬಹುದು. ಜೊತೆಗೆ ಇದರಿಂದ ನಿಮ್ಮ ನಿದ್ರೆಗೂ ತೊಂದರೆಯಾಗಬಹುದು (Milk With Banana Side Effects) ಎನ್ನಲಾಗುತ್ತದೆ.

Weight Gain Journey Presentation Idea Anti Infective Foods

ತೂಕ ಹೆಚ್ಚಿಸುವುದೆ?

ಇನ್ನೊಂದು ವರ್ಗ ಹೇಳುವ ಪ್ರಕಾರ, ಬಾಳೆಹಣ್ಣು ಹಾಗೂ ಹಾಲು ಸೇವಿಸುವುದು ತೂಕ ಹೆಚ್ಚಿಸಲು ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಹೂ ಇಂಟೆನ್ಸಿಟಿ ವರ್ಕೌಟ್‌ ಮಾಡುವ ಮಂದಿಗೂ ಇದು ಶಕ್ತಿ ನೀಡುವ ಆಹಾರ ಎನ್ನುತ್ತದೆ. ಆದರೆ, ಅಸ್ತಮಾದಂತಹ ಸಮಸ್ಯೆ ಇರುವ ಮಂದಿ ಇದನ್ನು ಹೀಗೆ ಸೇವಿಸುವುದು ಒಳ್ಳೆಯದಲ್ಲ ಎಂದೂ ಹೇಳುತ್ತದೆ.

ಆಯುರ್ವೇದ ಏನು ಹೇಳುತ್ತದೆ?

ಹಾಗಾದರೆ ನಮ್ಮ ಆಯುರ್ವೇದ ಏನು ಹೇಳುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಸಹಜ. ಇದರ ಪ್ರಕಾರ ಹಾಲು ಹಾಗೂ ಬಾಳೆಹಣ್ಣು, ಜೊತೆಯಾಗಿ ತೆಗೆದುಕೊಳ್ಳಬಾರದ ಪಟ್ಟಿಯಲ್ಲಿ ಬರುತ್ತದೆ. ಹಾಲಿನ ಜೊತೆ ಬಾಳೆಹಣ್ಣು ಸೇವಿಸುವುದರಿಂದ, ಇದು ದೇಹದ ಅಗ್ನಿ ಅಂದರ ಜೀರ್ಣಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಇದರ ಪರಿಣಾಮ ನೆಗಡಿ, ಶೀತ, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆ, ಕಫದ ತೊಂದರೆ ಇತ್ಯಾದಿ ಸಮಸ್ಯೆಗಳು ಉದ್ಭವಿಸಬಹುದು. ಇವೆರಡೂ ಸಿಹಿರುಚಿಯನ್ನು ಹೊಂದಿರುವುದರಿಂದ ಹಾಗೂ ತಂಪಿನ ಗುಣಗಳನ್ನು ಹೊಂದಿರುವುದರಿಂದ, ಇದರ ಜೀರ್ಣಾನಂತರದ ಪರಿಣಾಮ ಭಿನ್ನವಾಗಿರುತ್ತವೆ. ಬಾಳೆಹಣ್ಣು ಸ್ವಲ್ಪ ಹುಳಿಯಾಗಿದ್ದರೆ, ಇದರ ಪರಿಣಾಮ ಇನ್ನೂ ಹೆಚ್ಚು. ಕೆಲವರಿಗೆ ಇದು ಬೇದಿ, ವಾಂತಿ ಹಾಗೂ ಅಲರ್ಜಿಯಂತಹ ಸಮಸ್ಯೆಗಳನ್ನೂ ತರಬಹುದು.

Banana Yogurt Shake in Glass

ಹಾಗಾದರೆ ಏನು ಮಾಡಬೇಕು?

ಹಾಗಾದರೆ, ಏನು ಮಾಡಬೇಕು ಎಂದು ನೀವು ಕೇಳಬಹುದು. ತಜ್ಞರು ಹೇಳುವಂತೆ, ಇವೆರಡನ್ನೂ ಜೊತೆಯಾಗಿ ತಿನ್ನದಿರುವುದೇ ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಕ್ಷೇಮ. ಅಷ್ಟೇ ಅಲ್ಲ, ಇವೆರಡರ ಎಲ್ಲ ಉತ್ತಮ ಅಂಶಗಳನ್ನೂ ದೇಹ ಪಡೆಯಬೇಕೆಂದಾದಲ್ಲಿ, ಇವೆರಡಕ್ಕೂ ಕನಿಷ್ಟ ಅರ್ಧ ಗಂಟೆಯ ತರ ಕೊಟ್ಟು ಸೇವಿಸುವುದು ಒಳ್ಳೆಯದು. ಪ್ರತ್ಯೇಕವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತದೆ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಬಳ್ಳಾಪುರ

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

Chikkaballapura News : ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani Taluk Hospital) ಒಂದು ವರ್ಷದ ಮಗುವನ್ನ ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್ ಆಗಿದ್ದಾಳೆ. ಮಗುವನ್ನು ತೊಟ್ಟಿಲಲ್ಲಿ ಹಾಕಿ ಬಿಟ್ಟೋಗ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

By

Chikkaballapura News
Koo

ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ಹೆತ್ತ ಮಗುವನ್ನು ಆಸ್ಪತ್ರೆಯಲ್ಲಿ (Chikkaballapura News) ಬಿಟ್ಟು ಓಡಿ ಹೋಗಿದ್ದಾಳೆ. ಒಂದು ವರ್ಷದ ಮಗುವನ್ನು ಆಸ್ಪತ್ರೆಯ ತೊಟ್ಟಿಲಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani Taluk Hospital) ನಡೆದಿದೆ.

ಮಗುವನ್ನು ತೊಟ್ಟಿಲಲ್ಲಿ ಹಾಕಿ ಹೋಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಕೆ ಮಗು ಬಿಟ್ಟು ಕ್ಷಣಾರ್ಧದಲ್ಲೇ ಮಾಯವಾಗಿದ್ದಾಳೆ.

ಮಗು ಅಳುವುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ತಾಯಿಗಾಗಿ ಹುಡುಕಾಟ ನಡೆಸಿ, ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ತರಾತುರಿಯಲ್ಲಿ ಬರುವ ಮಹಿಳೆ ಅತ್ತಿಂದಿತ್ತ ಕಣ್ಣಾಡಿಸಿ ಏಕಾಏಕಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಕಾಲ್ಕಿತ್ತಿದ್ದಾರೆ.

ಸದ್ಯ ಆಸ್ಪತ್ರೆ ಸಿಬ್ಬಂದಿ ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಮಗುವಿನ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಮಹಿಳೆ ಯಾಕಾಗಿ ಮಗುವನ್ನು ಬಿಟ್ಟು ಹೋಗಿದ್ದಾಳೆ? ಆ ಮಗು ಆಕೆಯದ್ದಾ ಅಥವಾ ಬೇರೆಯವರದ್ದಾ? ಹೀಗೆ ಎಲ್ಲ ಆಯಾಮದಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Murder case : ಹಾಸನದಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

ಹಾಸನ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ನಡುವೆ ಶುರುವಾದ ಜಗಳವು ಕೊಲೆಯಲ್ಲಿ (Murder case) ಅಂತ್ಯವಾಗಿದೆ. ದಯಾನಂದ್ (40) ಮೃತ ದುರ್ದೈವಿ. ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ದಮ್ಮನಿಂಗಳ ಗ್ರಾಮದಲ್ಲಿ ಘಟನೆ ನಡೆದಿದೆ.

ಜಲಜೀವನ್ ಮಿಷನ್ ಯೋಜನೆಯ ನೀರಿನಲ್ಲಿ ಸಂಪರ್ಕ ಅಳವಡಿಸುವ ಜಾಗದ ವಿಷಯಕ್ಕೆ ದಯಾನಂದ್ ಹಾಗೂ ವರುಣ್ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಹೋದರರು ಚಾಕು ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಈ ವೇಳೆ ದಯಾನಂದ್‌ ಸ್ಥಳದಲ್ಲೇ ಮೃತಪಟ್ಟರೆ, ವರುಣ್ (36) ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ವರುಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದ ನಾಲ್ಕು ಅಡಿ ಜಾಗಕ್ಕಾಗಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಇದೇ ಜಾಗಕ್ಕಾಗಿ ಸಹೋದರರ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Dengue Fever In Children: ಮಗುವಿನ ಮೈ ಬಿಸಿ ಆಗಿದೆಯೇ? ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ

Dengue Fever In Children: ಮಕ್ಕಳಿಗೆ ಮೈ ಬೆಚ್ಚಗಾಗುವುದಕ್ಕೆ ಮಳೆಗಾಲವೇ ಬರಬೇಕೆಂದಿಲ್ಲ. ಕಾಲ ಯಾವುದೇ ಆದರೂ, ಸೋಂಕು ಸಣ್ಣದೇ ಇದ್ದರೂ, ರೋಗ ನಿರೋಧಕ ಶಕ್ತಿ ಇನ್ನೂ ಬೆಳೆಯದ ಎಳೆಯರಲ್ಲಿ ಜ್ವರ ಸಾಮಾನ್ಯ. ಹಾಗೆಂದು ಇದೆಲ್ಲಾ ಮಾಮೂಲಿ ಎಂದು ಬಿಡುವುದಕ್ಕೆ ಸಾಧ್ಯವೇ? ಅದರಲ್ಲೂ ಎಲ್ಲೆಡೆ ಡೆಂಗು ಪ್ರಕರಣಗಳೇ ಕೇಳಿ ಬರುತ್ತಿರುವಾಗ ಪುಟಾಣಿಗಳಲ್ಲಿ ಜ್ವರವನ್ನು ಉಪೇಕ್ಷಿಸಲಂತೂ ಸಾಧ್ಯವಿಲ್ಲ. ಹಾಗಾದರೆ ಮಕ್ಕಳಲ್ಲಿ ಡೆಂಗ್ಯು ಲಕ್ಷಣಗಳು ಹೇಗಿರುತ್ತವೆ? ಅದನ್ನು ಪಾಲಕರು ಅರ್ಥ ಮಾಡಿಕೊಳ್ಳುವುದು ಹೇಗೆ?

VISTARANEWS.COM


on

Dengue Fever In Children
Koo

ಮಗುವಿಗೆ ಡೆಂಗ್ಯು (Dengue Fever In Children) ಇರಬಹುದೆಂಬ ಸಣ್ಣ ಅನುಮಾನವಿದ್ದರೂ ವೈದ್ಯರಲ್ಲಿ ಕರೆಯೊಯ್ಯಿರಿ. ಇತ್ತೀಚಿನ ದಿನಗಳಲ್ಲಿ ಎಲ್ಲಿಗೆ ಪ್ರಯಾಣಿಸಿದ್ದರಿ ಎನ್ನುವುದನ್ನೂ ವೈದ್ಯರಿಗೆ ತಿಳಿಸಿ. ಮಕ್ಕಳಲ್ಲಿ ಡೆಂಗು ಜ್ವರದ ಆರಂಭಿಕ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿದರೆ, ಬರಬಹುದಾದ ಅಪಾಯವನ್ನು ಖಂಡಿತಾ ತಪ್ಪಿಸಬಹುದು. ಮಕ್ಕಳಿಗೆ ಮೈ ಬೆಚ್ಚಗಾಗುವುದಕ್ಕೆ ಮಳೆಗಾಲವೇ ಬರಬೇಕೆಂದಿಲ್ಲ. ಕಾಲ ಯಾವುದೇ ಆದರೂ, ಸೋಂಕು ಸಣ್ಣದೇ ಇದ್ದರೂ, ರೋಗ ನಿರೋಧಕ ಶಕ್ತಿ ಇನ್ನೂ ಬೆಳೆಯದ ಎಳೆಯರಲ್ಲಿ ಜ್ವರ ಸಾಮಾನ್ಯ. ಹಾಗೆಂದು ಇದೆಲ್ಲಾ ಮಾಮೂಲಿ ಎಂದು ಬಿಡುವುದಕ್ಕೆ ಸಾಧ್ಯವೇ? ಅದರಲ್ಲೂ ಎಲ್ಲೆಡೆ ಡೆಂಗು ಪ್ರಕರಣಗಳೇ ಕೇಳಿ ಬರುತ್ತಿರುವಾಗ ಪುಟಾಣಿಗಳಲ್ಲಿ ಜ್ವರವನ್ನು ಉಪೇಕ್ಷಿಸಲಂತೂ ಸಾಧ್ಯವಿಲ್ಲ. ಹಾಗಾದರೆ ಮಕ್ಕಳಲ್ಲಿ ಡೆಂಗ್ಯು ಲಕ್ಷಣಗಳು ಹೇಗಿರುತ್ತವೆ? ಅದನ್ನು ಪಾಲಕರು ಅರ್ಥ ಮಾಡಿಕೊಳ್ಳುವುದು ಹೇಗೆ? ಏಡಿಸ್‌ ವೈರಸ್‌ಗಳು ಸೊಳ್ಳೆಗಳ ಮೂಲಕ ಹರಡುವ ಈ ಜ್ವರ, ಸೋಂಕು ತಾಗಿದ 4-10 ದಿನಗಳಲ್ಲಿ ಲಕ್ಷಣಗಳನ್ನು ತೋರಿಸುತ್ತದೆ. ಪುಟ್ಟ ಮಕ್ಕಳಲ್ಲಿ ಡೆಂಗು ಜ್ವರದ ಲಕ್ಷಣಗಳು ಸಿಕ್ಕಾಪಟ್ಟೆ ತೀವ್ರವಾಗಿ ಇಲ್ಲದೆಯೂ ಇರಬಹುದು. ಅದರಲ್ಲೂ ಮೊದಲ ಬಾರಿಗೆ ಈ ಸೋಂಕು ತಾಗಿದ್ದಾದರೆ ತೀವ್ರತೆ ಕಡಿಮೆ ಎಂದೇ ಹೇಳಬಹುದು. ದೊಡ್ಡವರಾಗುತ್ತಿದ್ದಂತೆ ಅಥವಾ ಸೋಂಕು ಮರುಕಳಿಸುತ್ತಿದ್ದಂತೆ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ.

Dengue Fever

ಲಕ್ಷಣಗಳು

ತೀವ್ರ ಜ್ವರ, ಅದರಲ್ಲೂ 104 ಡಿ.ಫ್ಯಾ. ಸಮೀಪ ಇರುವುದು, ಕಣ್ಣುಗಳ ಹಿಂದೆ ನೋವು, ಸ್ನಾಯು, ಕೀಲು ಮತ್ತು ಮೂಳೆಗಳಲ್ಲಿ ವಿಪರೀತ ನೋವು, ಅತೀವ ತಲೆನೋವು, ಮೈಮೇಲೆ ದದ್ದುಗಳು, ಮೂಗು ಅಥವಾ ದಂತದಲ್ಲಿ ಸ್ವಲ್ಪ ರಕ್ತಸ್ರಾವ, ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಮೊದಲಿಗೆ ಫ್ಲೂ ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಜ್ವರಕ್ಕೆ ಮಕ್ಕಳು ಸುಸ್ತಾಗಿ ಹೈರಾಣಾಗುವುದು, ಹಠ ಮಾಡುವುದು, ಕಿರಿಕಿರಿ, ಮೈಯೆಲ್ಲಾ ತುರಿಕೆ ಮುಂತಾದವುಗಳು ಮೊದಲ ಎಚ್ಚರಿಕೆ ಗಂಟೆ. ಚರ್ಮದಡಿಯಲ್ಲಿ ರಸ್ತಸ್ರಾವ ಆಗುತ್ತಿದ್ದರೆ (ತರಚಿದಂತೆ ಕಾಣಬಹುದು), ಉಸಿರಾಟಕ್ಕೆ ಕಷ್ಟವಾದರೆ, ಅತೀವ ಹೊಟ್ಟೆ ನೋವು ಮತ್ತು ವಾಂತಿ, ಮಲಮೂತ್ರಗಳಲ್ಲಿ ರಕ್ತ ಮುಂತಾದ ಲಕ್ಷಣಗಳು ಕಂಡುಬಂದರೆ ಡೆಂಗ್ಯು ಲಕ್ಷಣಗಳು ತೀವ್ರವಾಗಿದ್ದು, ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಈ ಹೊತ್ತಿನಲ್ಲಿ ಕಾಳಜಿ ತಪ್ಪಿದರೆ ಜೀವಕ್ಕೆ ಆಪತ್ತು. ಹಾಗೆಂದು ಸೌಮ್ಯ ಲಕ್ಷಣಗಳಿದ್ದರೆ ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡುತ್ತಾರೆ.

ಭಿನ್ನ ಹಂತಗಳು

ಒಮ್ಮೆ ಜ್ವರ ಆರಂಭವಾದ ಮೇಲೆ 2ರಿಂದ 7 ದಿನಗಳವರೆಗೆ ಇರಬಹುದು. ಇದನ್ನು ಫಿಬ್ರಿಲ್‌ ಹಂತವೆಂದು ಕರೆಯಲಾಗುತ್ತದೆ. ತೀರಾ ಚಿಕ್ಕ ಮಕ್ಕಳಲ್ಲಿ ತೀವ್ರ ಜ್ವರಕ್ಕೆ ಎಚ್ಚರ ತಪ್ಪುವ ಸಾಧ್ಯತೆಯ ಬಗ್ಗೆ ಪಾಲಕರು ನಿಗಾ ವಹಿಸಬೇಕು. ಆದರೆ ಜ್ವರ ಬಿಟ್ಟ ನಂತರವೇ ಹೆಚ್ಚಿನವರಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ; ಈ ಹಂತವನ್ನು ಕ್ರಿಟಿಕಲ್‌ ಹಂತವೆಂದೇ ಗುರುತಿಸಲಾಗುತ್ತದೆ. ಹಾಗಾಗಿ ಜ್ವರ ಬಿಟ್ಟಕೂಡಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಅವರಿಗೆ ಇನ್ನಷ್ಟು ಆರೈಕೆಯ ಅಗತ್ಯವಿರುತ್ತದೆ. ಹೊಟ್ಟೆನೋವು, ವಾಂತಿ, ಉಸಿರಾಟ ಸಮಸ್ಯೆಗಳು, ತೀವ್ರ ತೆರನಾದ ಸ್ನಾಯು ಅಥವಾ ಮೂಳೆ ನೋವು (ಮೂಳೆ ಮುರಿದಂತೆ ನೋವು), ನಿರ್ಜಲೀಕರಣ, ರಕ್ತದೊತ್ತಡ ಇಳಿಯುವುದು ಮುಂತಾದ ಹಲವರು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಈ ದಿನಗಳಲ್ಲಿ ಮಕ್ಕಳಿಗೆ ಔಷಧಿಯ ಜೊತೆಗೆ ಸರಿಯಾದ ನಿದ್ದೆ, ಪೌಷ್ಟಿಕ ಆಹಾರ, ಧಾರಾಳವಾಗಿ ದ್ರವಾಹಾರ ಮುಂತಾದ ಆರೈಕೆಗಳು ಕಡ್ಡಾಯವಾಗಿ ಬೇಕು.

Image Of Foods For Fight Against Dengue Fever

ಚಿಕಿತ್ಸೆ

ಜ್ವರದ ತೀವ್ರತೆಯನ್ನು ತಗ್ಗಿಸುವುದಕ್ಕೆ ಪುಟಾಣಿಗಳಿಗೆ ಔಷಧಿ ನೀಡಬೇಕಾಗುತ್ತದೆ. ತೀರಾ ಚಿಕ್ಕ ಮಕ್ಕಳಿಗೆ ಆಗಾಗ ಸ್ಪಾಂಜ್‌ ಬಾತ್‌ ನೀಡುವುದು ಸಹ ದೇಹದ ಶಾಖವನ್ನು ತಗ್ಗಿಸಲು ಸಹಕಾರಿ. ವಾಂತಿ-ಅತಿಸಾರಗಳು ಡೆಂಗು ಜ್ವರದಲ್ಲಿ ಕಾಡುವ ಇನ್ನೊಂದು ಸಮಸ್ಯೆ. ಹಾಗಾಗಿ ಮಕ್ಕಳಿಗೆ ದ್ರವಾಹಾರ ನಿರಂತರವಾಗಿ ನೀಡುತ್ತಲೇ ಇರಬೇಕು. ಜ್ವರದಿಂದ ಹೈರಾಣಾದ ಮಕ್ಕಳು ಆಹಾರ ಸೇವಿಸುವುದಕ್ಕೂ ಹಠ ಮಾಡುವುದು ಸಹಜ. ಆದರೆ ಇರುವುದರಲ್ಲೇ ನಾನಾ ರೀತಿಯ ಸೂಪ್‌ಗಳು, ತರಕಾರಿಯ ಬ್ರಾತ್‌, ಬೇಳೆ ಕಟ್ಟು, ಹಣ್ಣಿನ ರಸಗಳು, ಎಳನೀರು, ಎಲೆಕ್ಟ್ರಾಲ್‌ ಮುಂತಾದವು ಹೊಟ್ಟೆಗೆ ಹೋಗುವುದು ಅಗತ್ಯ. ಪೌಷ್ಟಿಕ ಆಹಾರದಿಂದ ರಕ್ತದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ ಇಳಿಯದಂತೆ ಕಾಪಾಡಿಕೊಳ್ಳಲು ಸಾಧ್ಯ. ಉಳಿದಂತೆ ಲಕ್ಷಣಗಳು ಏನಿವೆ ಎನ್ನುವುದರ ಮೇಲೆ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಇದನ್ನೂ ಓದಿ: Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

ತಡೆಯಬಹುದೇ?

ಖಂಡಿತ. ಈ ಸೋಂಕು ಬರದಂತೆ ತಡೆಯಬೇಕೆಂದರೆ ಮನೆಯ ಸುತ್ತಮುತ್ತಲು ಎಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ. ಮನೆಯೊಳಗೂ ನೀರು ತುಂಬಿದ ಪಾತ್ರೆಗಳಿಗೆ ಮುಚ್ಚಳ ಹಾಕಿ. ಬೆಳಗ್ಗೆ ಮತ್ತು ಸಂಜೆ ಸೊಳ್ಳೆಗಳು ಹೆಚ್ಚು ಸಕ್ರಿಯವಾಗಿರುವ ಸಮಯಗಳಲ್ಲಿ ಹೊರಗೆ ಹೋಗಬೇಡಿ; ಮಕ್ಕಳನ್ನೂ ಹೊರಗೆ ಬಿಡಬೇಡಿ. ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ. ಸೊಳ್ಳೆ ರಿಪೆಲ್ಲೆಂಟ್‌ಗಳು, ಲಿಕ್ವಿಡೇಟರ್‌ಗಳು ಮುಂತಾದವು ಸೊಳ್ಳೆಗಳನ್ನು ದೂರ ಇರಿಸಲು ಸಹಾಯ ಮಾಡುತ್ತವೆ. ಮಕ್ಕಳಿಗೆ ಮೈ, ಕೈ, ಕಾಲಿನ ತುಂಬಾ ಬಟ್ಟೆ ಹಾಕಿ. ಮಲಗುವಾಗ ಕಡ್ಡಾಯವಾಗಿ ಸೊಳ್ಳೆಪರದೆ ಬಳಸಿ. ಸೋಂಕಿತರಿಗೆ ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗಲೇ ರೋಗ ಹರಡುವುದು, ನೆನಪಿರಲಿ. ಹಾಗಾಗಿ ಸೊಳ್ಳೆಯನ್ನು ಎಷ್ಟು ಪರಿಣಾಮಕಾರಿಯಾಗಿ ದೂರ ಇರಿಸುತ್ತೀರೊ ಅಷ್ಟು ನಿಶ್ಚಿತವಾಗಿ ಸೋಂಕಿನಿಂದಲೂ ತಪ್ಪಿಸಿಕೊಳ್ಳುತ್ತೀರಿ.

Continue Reading

ಆರೋಗ್ಯ

Health Tips: ಮಧ್ಯಾಹ್ನದ ನಂತರ ಏನಾದರು ಸಿಹಿತಿನಿಸು ತಿನ್ನಬೇಕು ಅನಿಸುತ್ತಿದೆಯೆ? ಇದಕ್ಕೂ ಇದೆ ಕಾರಣ

Health Tips: ನಿಮಗೆ ಯಾವ ಹೊತ್ತಿನಲ್ಲಿ ಹಸಿವಾಗುತ್ತದೆ, ಯಾವ ಹೊತ್ತಿನಲ್ಲಿ ಏನಾದರೊಂದು ಮೆಲ್ಲಬೇಕೆಂಬ ಬಯಕೆಯಾಗುತ್ತದೆ, ಯಾವ ಹೊತ್ತಿನಲ್ಲಿ ಸಿಹಿ ತಿನ್ನಬೇಕೆನಿಸುತ್ತದೆ ಇತ್ಯಾದಿಗಳನ್ನು ನೀವು ಗಮನಿಸಿದ್ದರೆ, ಇವೆಲ್ಲವಕ್ಕೂ ಇಂಥದ್ದೆ ಒಂದು ನಿರ್ದಿಷ್ಟ ಹೊತ್ತಿರುತ್ತದೆ ಎಂಬುದು ನಿಮಗೆ ಅರ್ಥವಾಗುತ್ತದೆ. ಉದಾಹರಣೆಗೆ ನಿಮ್ಮಲ್ಲಿ ಕೆಲವರಿಗೆ ಸಿಹಿತಿನಿಸು ಮಧ್ಯಾಹ್ನ ಊಟವಾದ ತಕ್ಷಣ ತಿನ್ನಬೇಕೆನಿಸಬಹುದು. ಇನ್ನೂ ಕೆಲವರಿಗೆ ಊಟವಾಗಿ ಕೆಲ ಗಂಟೆ ಕಳೆದ ಮೇಲೆ ಚಹಾದ ಹೊತ್ತಿನಲ್ಲಿ ಏನಾದರೂ ಸಿಹಿಯಾಗಿರುವುದನ್ನು ತಿನ್ನೋಣ ಅನಿಸಬಹುದು. ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ.

VISTARANEWS.COM


on

sweets Gujiya peda barfi Motichoor Laddu Indian Sweet dessert mithai festival dish
Koo

ನೀವು ಯಾವತ್ತಾದರೂ ನಿಮ್ಮ ಆಹಾರ (Health Tips) ಅಭ್ಯಾಸದ ಬಗ್ಗೆ ಕೊಂಚ ಸೂಕ್ಷ್ಮವಾಗಿ ಗಮನಿಸಿದ್ದೀರಾ? ನಿಮಗೆ ಯಾವ ಹೊತ್ತಿನಲ್ಲಿ ಹಸಿವಾಗುತ್ತದೆ, ಯಾವ ಹೊತ್ತಿನಲ್ಲಿ ಏನಾದರೊಂದು ಮೆಲ್ಲಬೇಕೆಂಬ ಬಯಕೆಯಾಗುತ್ತದೆ, ಯಾವ ಹೊತ್ತಿನಲ್ಲಿ ಸಿಹಿ ತಿನ್ನಬೇಕೆನಿಸುತ್ತದೆ ಇತ್ಯಾದಿಗಳನ್ನು ನೀವು ಗಮನಿಸಿದ್ದರೆ, ಇವೆಲ್ಲವಕ್ಕೂ ಇಂಥದ್ದೆ ಒಂದು ನಿರ್ಧಿಷ್ಟ ಹೊತ್ತಿರುತ್ತದೆ ಎಂಬುದು ನಿಮಗೆ ಅರ್ಥವಾಗುತ್ತದೆ. ಉದಾಹರಣೆಗೆ ನಿಮ್ಮಲ್ಲಿ ಕೆಲವರಿಗೆ ಸಿಹಿತಿನಿಸು ಮಧ್ಯಾಹ್ನ ಊಟವಾದ ತಕ್ಷಣ ತಿನ್ನಬೇಕೆನಿಸಬಹುದು. ಇನ್ನೂ ಕೆಲವರಿಗೆ ಊಟವಾಗಿ ಕೆಲ ಗಂಟೆ ಕಳೆದ ಮೇಲೆ ಚಹಾದ ಹೊತ್ತಿನಲ್ಲಿ ಏನಾದರೂ ಸಿಹಿಯಾಗಿರುವುದನ್ನು ತಿನ್ನೋಣ ಅನಿಸಬಹುದು. ಇದು ಕೇವಲ ಒಂದೇ ದಿನದ ಕಥೆಯಲ್ಲ, ಹೀಗೆ ತಿನ್ನಬೇಕೆನ್ನುವ ಮನಸ್ಥಿತಿ ಸದಾ ಕಾಲ ಒಂದೇ ರೀತಿ ಇದೆ ಎಂಬುದು ನಿಮಗೆ ಅರ್ಥವಾಗಬಹುದು. ಹೀಗೆ ಅನಿಸುವುದು ಕೇವಲ ನಿಮಗಷ್ಟೇ ಅಲ್ಲ, ನಿಮ್ಮಂತೆ ಚಹಾದ ಹೊತ್ತಿಗೆ ಸಕ್ಕರೆಯುಕ್ತ ಏನಾದರೊಂದು ತಿನ್ನುವ ಖಯಾಲಿ ಹಲವರಿಗಿದೆ. ಸಿಹಿತಿನಿಸಾದರೂ ಆದೀತು, ಕುಕ್ಕೀಸ್‌ ಬಿಸ್ಕತ್ತುಗಳೂ ಆದಾವು, ಏನಾದರೊಂದು ಸಿಹಿಯಾದ ತಿಂಡಿ ಚಹಾದ ಜೊತೆಗಿರಬೇಕು ಎಂಬ ಆಸೆ. ನಿಮಗೆ ಹಸಿವೇನೂ ಆಗದೆ ಇದ್ದರೂ, ಏನಾದರೂ ಈ ಹೊತಿಗೆ ತಿನ್ನಬೇಕೆಂಬ ಚಪಲ ಇದ್ದೇ ಇರುತ್ತದೆ. ತಿನ್ನದಿದ್ದರೆ ಏನೋ ಒಂದು ಕಸಿವಿಸಿ, ಕಳೆದುಕೊಂಡ ಭಾವ. ಹೀಗೆ ಕೇವಲ ನಿಮಗಷ್ಟೇ ಅಲ್ಲ, ನಿಮ್ಮಂತೆ ಹಲವಾರು ಮಂದಿಗೂ ಈ ಸಮಸ್ಯೆಯಿದೆ. ಬನ್ನಿ, ಈ ಅನುಭವ ನಿಮಗಾಗಿದ್ದರೆ, ಸಂಜೆಯ ಸ್ವೀಟ್‌ ಕ್ರೇವಿಂಗ್‌ ಇದ್ದರೆ ಇದಕ್ಕೆ ಕಾರಣಗಳೇನು, ಹೇಘೆ ಈ ಅಭ್ಯಾಸ ಕಡಿಮೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

Sweet CANDAY

ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೇಹದ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾದಾಗ ನಮಗೆ ಸಿಹಿ ತಿನ್ನಬೇಕೆಂಬ ಪ್ರಚೋದನೆಯಾಗುತ್ತದೆ. ಸಾಮಾನ್ಯವಾಗಿ ಮಧ್ಯಾಹ್ನ ಊಟವಾಗಿ ಕೆಲ ಗಂಟೆಗಳ ನಂತರ ದೇಹದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾದ ಹೊತ್ತಿನಲ್ಲಿ ಮತ್ತಷ್ಟು ಶಕ್ತಿವರ್ಧನೆಗಾಗಿ, ಸಿಹಿಯನ್ನು ಬೇಡುತ್ತದೆ. ಕೂಡಲೇ ಏನಾದರೊಂದು ಸಿಹಿ ತಿಂದಾಕ್ಷಣ, ಮುಖ್ಯವಾಗಿ ಸಂಸ್ಕರಿಸಿದ ಸಕ್ಕರೆಯಿಂದ ಮಾಡಿದ ಸಿಹಿತಿನಿಸುಗಳನ್ನು ತಿಂದಾಗ ತಾತ್ಕಾಲಿಕವಾಗಿ ದೇಹದಲ್ಲಿ ಶಕ್ತಿವರ್ಧನೆಯಾಗಿ ಸಕ್ಕರೆಯ ಮಟ್ಟವೂ ಏರುತ್ತದೆ.

ನಿತ್ಯವೂ ಏನಾದರೊಂದು ಇಂಥದ್ದೇ ಹೊತ್ತಿಗೆ ಎಂದು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಅದೇ ಹೊತ್ತಿಗೆ ಸರಿಯಾಗಿ ಸಿಹಿ ತಿನ್ನಬೇಕೆಂಬ ಕ್ರೇವಿಂಗ್‌ ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು. ನಾಲ್ಕು ದಿನ ಇದೇ ಹೊತ್ತಿಗೆ ಸಿಹಿ ತಿಂದರೂ ಸಾಕು, ಐದನೇ ದಿನ ಅದೇ ಹೊತ್ತಿಗೆ ಸರಿಯಾಗಿ ಮನಸ್ಸು ದೇಹ ಎರಡೂ ಅದನ್ನೇ ಬೇಡುತ್ತದೆ. ಸಂಜೆ ಚಹಾದ ಹೊತ್ತಿಗೆ ನೀವು ಬಿಸ್ಕತ್ತು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಆ ಅಭ್ಯಾಸವನ್ನು ಕಷ್ಟಪಟ್ಟು ಬಿಡಬೇಕಾಗುತ್ತದೆ. ಇಲ್ಲವಾದರೆ, ಆ ಹೊತ್ತಿನಲ್ಲಿ ಏನಾದರೂ ಸಿಹಿ ತಿನ್ನಬೇಕೆನಿಸುತ್ತದೆ.

ನೀವು ಬೆಳಗಿನ ಉಪಾಹಾರವನ್ನು ಸರಿಯಾಗಿ ಸೇವಿಸದೆ ಇರುವುದೂ ಕೂಡಾ ಈ ಕ್ರೇವಿಂಗ್‌ಗೆ ಕಾರಣವಾಗಿರಬಹುದು. ಬೆಳಗಿನ ಉಪಹಾರ ಬಿಡುವುದು, ಅಥವಾ ಮಧ್ಯಾಹ್ನದೂಟ ಬಿಡುವುದು ಇತ್ಯಾದಿ ಮಾಡುವುದರಿಂದಲೂ ನಿಮಗೆ ಸಂಜೆಯ ಹೊತ್ತಿಗೆ ಸಿಹಿ ತಿನ್ನಬೇಕೆನಿಸಬಹುದು. ಹೆಚ್ಚು ಹೊತ್ತು ತಿನ್ನದೆ ಇರುವ ಸಂದರ್ಭ ದೇಹ ಬಹುಬೇಗನೆ ಶಕ್ತಿ ಪಡೆದುಕೊಳ್ಳುವ ಮಾರ್ಗವನ್ನೇ ಬಯಸುತ್ತದೆ.

Sleeping tips

ನಿದ್ದೆಯ ಕೊರತೆಯೂ ಕಾರಣವಾಗಿರಬಹುದು. ನಿದ್ದೆಯಿಲ್ಲದ ರಾತ್ರಿ ಕಳೆದಿದ್ದರೆ, ಅತಿಯಾದ ಒತ್ತಡದಿಂದ ರಾತ್ರಿಯಲ್ಲಿ ಕೆಲಸ ಮಾಡಿದ್ದರೆ, ನಿದ್ದೆ ಸರಿಯಾಗಿ ಆಗಿರದಿದ್ದರೆ, ದೇಹ ಸುಸ್ತಾಗಿ ಬಿಟ್ಟಿರುತ್ತದೆ. ಇಂತಹ ಸಮಯದಲ್ಲಿ ತಕ್ಷಣದ ಶಕ್ತಿವರ್ಧನೆಗೆ ದೇಹ ಸಿಹಿಯಾದುದನ್ನೇ ಬಯಸುತ್ತದೆ.

ಹಾಗಾದರೆ, ಈ ಅಭ್ಯಾಸದಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಮನಸ್ಸಿದ್ದರೆ ಮಾರ್ಗ ಎಂಬುದು ಗಾದೆಯನ್ನು ನೀವು ಕೇಳಿರಬಹುದು. ಎಲವೂ ನೀವು ಮನಸ್ಸು ಮಾಡಿದರೆ ಸಾಧ್ಯ. ಸಿಹಿತಿಂಡಿ ತಿನ್ನಬಾರದು ಎಂಬ ನಿರ್ಧಾರ ನೀವು ಮಾಡಿದ್ದರೆ, ಅದಕ್ಕೆ ಪೂರಕವಾದ ಆಹಾರಕ್ರಮವನ್ನೂ ನೀವು ಬೆಳೆಸಿಕೊಳ್ಳಿ.

ಇದನ್ನೂ ಓದಿ: Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

  • ಬೆಳಗ್ಗಿನ ಉಪಾಹಾರ, ಮಧ್ಯಾಹ್ನದೂಟ, ರಾತ್ರಿಯ ಊಟ ಎಲ್ಲವನ್ನೂ ನಿಧಾನವಾಗಿ, ಚೆನ್ನಾಗಿ ಅಗಿದು, ಪೂರ್ತಿ ಗಮನವಿಟ್ಟು ನಾನೇನು ತಿನ್ನುತ್ತಿದ್ದೇನೆ ಎಂಬುದನ್ನು ಅರಿತುಕೊಂಡೆ ಮೈಂಡ್‌ಫುಲ್‌ ಆಗಿ ತಿನ್ನಿ. ಅತಿಯಾಗಿ ಅಲ್ಲದೆ, ಹಿತಮಿತವಾಗಿ ತಿನ್ನಿ. ತಿನ್ನುವ ಆಹಾರ ಆರೋಗ್ಯಪೂರ್ಣವಾಗಿರಲಿ.
  • ಹೆಚ್ಚು ನೀರು ಕುಡಿಯಿರಿ. ಕೆಲವೊಮ್ಮೆ ನಿರ್ಜಲೀಕರಣವೂ ಕೂಡಾ ಸಿಹಿಯನ್ನು, ಹೆಚ್ಚು ತಿನ್ನುವುದನ್ನು ಪ್ರೋತ್ಸಾಹಿಸುತ್ತದೆ. ಹೀಗಾಗಿ ಸಾಕಷ್ಟು ನೀರು ಕುಡಿಯಿರಿ.
  • ವಾಕ್‌ ಮಾಡಿ. ಸಿಹಿ ತಿನ್ನಬೇಕೆನಿಸುವಾಗಲೆಲ್ಲ ವಾಕ್‌ ಮಾಡಿ. ಆಗ ನಿಮ್ಮ ಮನಸ್ಸು ಬದಲಾಗುತ್ತದೆ. ಸಿಹಿಯ ಬಯಕೆ ಸೈಡ್‌ಲೈನ್‌ ಆಗಿ ಮರೆತು ಹೋಗುತ್ತದೆ.
Continue Reading

ಆರೋಗ್ಯ

Drinking Water Tips: ನೀರು ಕುಡಿಯುವುದೇ ನಿಮ್ಮ ಸಮಸ್ಯೆಯೇ? ಇಲ್ಲಿವೆ ಸರಳ ಉಪಾಯಗಳು!

Drinking water tips: ಕೆಲವರು ಸಹಜವಾಗಿಯೇ ಹೆಚ್ಚು ನೀರು ಕುಡಿದರೆ, ಇನ್ನೂ ಕೆಲವರು ಸ್ವಭಾವತಃ ನೀರು ಕುಡಿಯುವುದು ಹೆಚ್ಚು. ಆದರೆ, ಕಾಲ ಯಾವುದೇ ಆಗಿರಲಿ, ದೇಹಕ್ಕೆ ನಿತ್ಯ ನೀರು ಬೇಕೇ ಬೇಕು. ನೀರು ಹೆಚ್ಚು ಕುಡಿದರೆ, ಒಳ್ಳೆಯದು ಎಂಬ ಸತ್ಯ ತಿಳಿದಿದ್ದರೂ ಹೆಚ್ಚು ನೀರು ಕುಡಿಯುವ ಪರಿ ಹೇಗೆ, ಈ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ತಿಳಿಯುವುದಿಲ್ಲ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Positive woman drinking water
Koo

ನೀರು ಕುಡಿಯುವುದು (Drinking water tips) ಅತ್ಯಂತ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕೆಲವೊಮ್ಮೆ ನೀರು ಕುಡಿಯುವುದೂ ಕೂಡ ಕಷ್ಟದ ಕೆಲಸವೇ. ಕೆಲವರು ಸಹಜವಾಗಿಯೇ ಹೆಚ್ಚು ನೀರು ಕುಡಿದರೆ, ಇನ್ನೂ ಕೆಲವರು ಸ್ವಭಾವತಃ ನೀರು ಕುಡಿಯುವುದು ಹೆಚ್ಚು. ಆದರೆ, ಕಾಲ ಯಾವುದೇ ಆಗಿರಲಿ, ದೇಹಕ್ಕೆ ನಿತ್ಯ ನೀರು ಬೇಕೇ ಬೇಕು. ನೀರು ಹೆಚ್ಚು ಕುಡಿದರೆ, ಒಳ್ಳೆಯದು ಎಂಬ ಸತ್ಯ ತಿಳಿದಿದ್ದರೂ ಹೆಚ್ಚು ನೀರು ಕುಡಿಯುವ ಪರಿ ಹೇಗೆ, ಈ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ತಿಳಿಯುವುದಿಲ್ಲ. ನೀರು ಕುಡಿಯಲು ಕಷ್ಟವಾಗುವ, ತನ್ನ ದೇಹಕ್ಕೆ ಬೇಕಾದಷ್ಟು ನೀರು ಸೇವಿಸದೆ ಇರುವ, ಆದರೆ, ಹೆಚ್ಚು ನೀರು ಕುಡಿಯಲು ಮನಸ್ಸಿರುವ ಆ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮಂದಿ ಹೆಚ್ಚು ನೀರು ಕುಡಿಯಲು ಹೀಗೆ ಮಾಡಬಹುದು.

drinking water
  • ನೀವು ಎಲ್ಲಿಗೇ ಹೊರಗೆ ಹೋಗುವುದಿದ್ದರೂ ಕೈಯಲ್ಲೊಂದು ನೀರಿನ ಬಾಟಲಿ ಇಟ್ಟುಕೊಳ್ಳಿ. ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ ನೀರಿನ ಬಾಟಲಿ ನಿಮ್ಮ ಜೊತೆಗಿರಲಿ. ಆ ಮೂಲಕ ಆಗಾಗ ನೀವು ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರಬಹುದು. ಹೊರಗೆ ಹೋದಾಗ, ನೀರಿನ ಮೂಲವನ್ನು ಹುಡುಕಿಕೊಂಡು ಹೋಗುವುದು ಸಾಧ್ಯವಾಗದು. ಅಥವಾ ನೀರು ಕುಡಿಯಬೇಕೆನ್ನುವ ಯೋಚನೆಯೂ ಬಾರದು. ಇಂತಹ ಸಂದರ್ಭ ನಿಮ್ಮ ಬಳಿ ಬಾಟಲಿಯಲ್ಲಿ ನೀರಿದ್ದರೆ, ಆಗಾಗ ಕುಡಿಯುವ ಮೂಲಕ ಒಂದಿಷ್ಟು ನೀರು ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಿಮ್ಮ ಹೊಟ್ಟೆ ಸೇರುತ್ತದೆ. ಅಥವಾ ನಿಮಗೆ ನಿಜವಾಗಿ ಬಾಯಾರಿಕೆಯಾದಾಗಲೂ ನಿಮ್ಮ ಸಹಾಯಕ್ಕೆ ಬರುತ್ತದೆ.
  • ಈಗ ನೀರು ಕುಡಿಯಲು ರಿಮೈಂಡರ್‌ಗಳನ್ನೂ ಹಾಕಬಹುದು. ಅನೇಕ ಆಪ್‌ಗಳೂ ನಿಮ್ಮ ಸಹಾಯಕ್ಕಿವೆ. ಅವು ಆಗಾಗ ಎಷ್ಟು ನೀರು ಕುಡಿಯಬೇಕೆಂದು ನಿಮ್ಮನ್ನು ನೆನಪಿಸುತ್ತಿರುತ್ತವೆ. ಹಾಗಾಗಿ, ನಿಮಗೆ ನೆನಪಾಗದಿದ್ದರೂ, ಕೆಲಸದಲ್ಲಿ ಬ್ಯುಸಿ ಆದರೂ, ಈ ಅಲರಾಂಗಳು ನಿಮ್ಮನ್ನು ನೀರು ಕುಡಿಯಲು ನಿಮ್ಮ ಅಮ್ಮನಂತೆ ನಿಮಗೆ ನೆನಪು ಮಾಡುವ ಕೆಲಸವನ್ನು ಮಾಡುತ್ತದೆ.
  • ಸೋಡಾ, ಕಾರ್ಬೋನೇಟೆಡ್‌ ಡ್ರಿಂಕ್‌ಗಳ ಬದಲಾಗಿ ನೀರನ್ನೇ ಕುಡಿಯಿರಿ. ಬಾಯಾರಿದಾಗ ನೀರಿಗಿಂತ ಒಳ್ಲೆಯ ದ್ರವಾಹಾರ ಇನ್ನೊಂದಿಲ್ಲ. ಹಾಗಾಗಿ ನೀರನ್ನೇ ಸೇವಿಸಿ.
  • ನೀರು ಕುಡಿಯಲು ಸಾಧ್ಯವಾಗದಿದ್ದರೆ, ನೀರು ಹೆಚ್ಚಿರುವ ಹಣ್ಣು ಹಂಪಲುಗಳನ್ನು ಸೇವಿಸಿ. ಕಲ್ಲಂಗಡಿ ಹಣ್ಣು, ಅನಾನಾಸು, ಖರ್‌ಬೂಜ, ಸೌತೆಕಾಯಿ ಇತ್ಯಾದಿಗಳನ್ನು ಸೇವಿಸಿ. ಇವುಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ನಿಮ್ಮ ದೇಹಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಇವುಗಳಲ್ಲಿ ಕ್ಯಾಲರಿಯೂ ಕಡಿಮೆ ಇರುವುದರಿಂದ ಹೊಟ್ಟೆ ಫುಲ್‌ ಆದ ಅನುಭವವನ್ನೂ ನೀಡುತ್ತವೆ.
  • ಖಾಲಿ ನೀರನ್ನೇ ಕುಡಿಯುವುದು ನಿಮ್ಮ ಸಮಸ್ಯೆ ಆದಲ್ಲಿ, ನೀರಿಗೆ ಫ್ಲೇವರ್‌ ಬರಿಸಿ. ಅರ್ಥಾತ್ ಇನ್‌ಫ್ಯೂಸ್ಡ್‌ ನೀರನ್ನು ತಯಾರು ಮಾಡಿ. ನೀರಿಗೆ, ಕೊಂಚ ಪುದಿನ ಎಲೆಗಳನ್ನು ಹಾಕಿಡಿ. ಅಥವಾ ಸೌತೆಕಾಯಿ, ಲಿಂಬೆರಸ, ಕಿತ್ತಳೆ ಹೀಗೆ ಬಗೆಬಗೆಯ ನೈಸರ್ಗಿಕ ರಿಫ್ರೆಶಿಂಗ್‌ ಅನುಭವ ನೀಡುವ ಐಡಿಯಾಗಳನ್ನು ಮಬಹುದು. ಪುದಿನ ಎಲೆ ಹಾಕಿದ ನೀರು ತಾಜಾ ಅನುಭವವನ್ನು ನೀಡುವ ಜೊತೆಗೆ ದೇಹವನ್ನು ತಂಪಾಗಿಡುತ್ತದೆ. ಮನಸ್ಸಿಗೂ ಮುದ ನೀಡುತ್ತದೆ. ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ದೇಹಕ್ಕೂ ಒಳ್ಳೆಯದು.
Continue Reading
Advertisement
Actor Darshan
ಕರ್ನಾಟಕ3 mins ago

Actor Darshan: ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರವೇ ಗತಿ; ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Team India
ಕ್ರೀಡೆ3 mins ago

Team India: ಮೋದಿಗೆ ನಮೋ ಹೆಸರಿನ ಟೀಮ್​ ಇಂಡಿಯಾ ಜೆರ್ಸಿ ಉಡುಗೊರೆ ನೀಡಿದ ಬಿಸಿಸಿಐ

Sumalatha Ambareesh First Reaction To Darshan Arrest And Renuka Swamy Murder Case
ಸ್ಯಾಂಡಲ್ ವುಡ್9 mins ago

Sumalatha Ambareesh: ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ ; ದರ್ಶನ್​ ಬಗ್ಗೆ ಸುಮಲತಾ ಅಂಬರೀಶ್‌​ ಮೊದಲ ಪ್ರತಿಕ್ರಿಯೆ

cm siddaramaiah MUDA scam
ಪ್ರಮುಖ ಸುದ್ದಿ10 mins ago

CM Siddaramaiah: ʼಮುಡಾದ ತಪ್ಪು, ನಾನು ಸಿಎಂ ಅಂತ ಸೈಟ್‌ ಬಿಡೋಕೆ ಆಗುತ್ತಾ?ʼ ಸಿಎಂ ಸಿದ್ದರಾಮಯ್ಯ

Satsang programme on 5th July in Bengaluru
ಬೆಂಗಳೂರು28 mins ago

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Hassan News Distribution of free notebook bag to government primary schools in Alur
ಹಾಸನ30 mins ago

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

To complete pending railway projects in the state former MP DK Suresh appeals central government
ಬೆಂಗಳೂರು31 mins ago

DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

ದೇಶ40 mins ago

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೆ ಒಲಿದ ಸಿಎಂ ಪಟ್ಟ; ಜು.7ರಂದು ಪ್ರಮಾಣ ವಚನ- ರಾಜ್ಯಪಾಲರಿಂದ ಗ್ರೀನ್‌ ಸಿಗ್ನಲ್‌

drivers protest
ಪ್ರಮುಖ ಸುದ್ದಿ50 mins ago

Drivers Protest: ಆಟೋ, ಕ್ಯಾಬ್ ಚಾಲಕರಿಂದ ದಿಢೀರ್‌ ರಸ್ತೆ ತಡೆ, ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ, ಸಂಚಾರ ಅಸ್ತವ್ಯಸ್ತ

Viral News
ವೈರಲ್ ನ್ಯೂಸ್1 hour ago

Viral News: ಇವನು ಅಂತಿಂತಾ ಕಳ್ಳನಲ್ಲ…ಮನೆ ಎಲ್ಲಾ ದೋಚಿ, ಲೆಟರ್‌ ಬರೆದಿಟ್ಟು ಕ್ಷಮೆ ಕೇಳ್ತಾನೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Chikkaballapura News
ಚಿಕ್ಕಬಳ್ಳಾಪುರ1 hour ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ3 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ4 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

ಟ್ರೆಂಡಿಂಗ್‌