Murder Case : ಬೆಂಗಳೂರಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಂದನೇ ಹಂತಕ! - Vistara News

ಬೆಂಗಳೂರು

Murder Case : ಬೆಂಗಳೂರಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಂದನೇ ಹಂತಕ!

Murder Case : ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಿದೇಶಿ ಮಹಿಳೆಯೊಬ್ಬರು ಅನುಮಾನಸ್ಪಾದವಾಗಿ (Suspicious death) ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

VISTARANEWS.COM


on

Foreign woman found dead in Bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿದೇಶಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೇಲ್ನೋಟಕ್ಕೆ ಹಂತಕರು ಉಸಿರುಗಟ್ಟಿಸಿ ಕೊಲೆ ಮಾಡಿರುವ (Murder Case) ಶಂಕೆ ವ್ಯಕ್ತವಾಗಿದೆ. ಉಜ್ಬೇಕಿಸ್ತಾನ ಮೂಲದ ಜರೀನಾ ಮೃತ ದುರ್ದೈವಿ.

ಬೆಂಗಳೂರಿನ ಬಿಡಿಎ ಮೇಲ್ಸೇತುವೆ ಸಮೀಪದ ಖಾಸಗಿ ಹೋಟೆಲ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಟೂರಿಸ್ಟ್ ವೀಸಾದಡಿ ಜರೀನಾ ನಾಲ್ಕು ದಿನಗಳ ಹಿಂದಷ್ಟೇ ರಾಜಧಾನಿ ಬೆಂಗಳೂರಿಗೆ ಬಂದಿದ್ದರು. ನಿನ್ನೆ ರೂಮಿನೊಳಗೆ ಹೋದ ಜರೀನಾಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

ಹೀಗಾಗಿ ಅನುಮಾನಗೊಂಡು ಹೋಟೆಲ್‌ ಸಿಬ್ಬಂದಿ ಬುಧವಾರ ಸಂಜೆ 4.30ರ ಸುಮಾರಿಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಮಾಸ್ಟರ್ ಕೀ ಮೂಲಕ ರಾತ್ರಿ ರೂಂನ ಬಾಗಿಲು ತೆರೆದು ನೋಡಿದಾಗ ಶವವಾಗಿ ಪತ್ತೆಯಾಗಿದ್ದಾಳೆ. ಜರೀನಾ ದೇಹದ ಮೇಲೆ ಗಾಯದ ಕಲೆಗಳು ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಹೋಟೆಲ್‌ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಎಫ್ಎಸ್ಎಲ್, ಬೆರಳಚ್ಚು ಹಾಗೂ ಶ್ವಾನದಳ ದೌಡಾಯಿಸಿದೆ. ಶೇಷಾದ್ರಿಪುರಂ ಪೊಲೀಸರು ಮಹಿಳೆ ತಂಗಿದ್ದ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಶೇಖರ್, ಸಿಎಆರ್‌ಡಿಸಿಪಿ ಅರುಣಾಂಶು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲ್‌ನ ದಾಖಲಾತಿ ಪುಸ್ತಕ, ಸಿಸಿಟಿವಿ ಹಾಗೂ ಯಾರೆಲ್ಲ ಹೋಟೆಲ್‌ಗೆ ಬಂದು ಹೋಗಿದ್ದಾರೆ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

ಖಾಸಗಿ ಹೋಟೆಲ್ ಮ್ಯಾನೇಜರ್ ಕೊಟ್ಟ ದೂರಿನ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ಇರುವುದರಿಂದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Viral Video: ಥೂ ಅಸಹ್ಯ! ಹಣಕ್ಕಾಗಿ ವಿದ್ಯಾರ್ಥಿಗಳಿಂದ ದಾನಿಗಳ ಕಾಲು ನೆಕ್ಕಿಸಿದ ಶಾಲಾ ನಿರ್ವಾಹಕರು

ರಕ್ತಮಯವಾಗಿ ಅಂಗಾತ ಬಿದ್ದಿದ್ದ ಜರೀನಾ

ಹೋಟೆಲ್‌ ಜನರಲ್ ಮ್ಯಾನೇಜರ್ ಗೌರವ್ ಕುಮಾರ್ ಸಿಂಗ್‌ ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ರಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕಳೆದ‌ ಮಾ. 5 ರಂದು ಬ್ರೋಕರ್ ರಾಹುಲ್ ಕುಮಾರ್‌ ಎಂಬಾತ ಮುಖಾಂತರ ಜರೀನಾ ಹೋಟೆಲ್‌ ರೂಂ‌ಮ್‌ ನಂಬರ್ 216ರಲ್ಲಿ‌ ತಂಗಿದ್ದಳು. ದಿನಕ್ಕೆ 5,500 ರಂತೆ ರಾಹುಲ್‌ ಮಾ.16 ರವರಗೆ ಹೊಟೇಲ್ ರೂಂ ಬಾಡಿಗೆಗೆ ಬುಕ್ ಮಾಡಿದ್ದ.

ನಿನ್ನೆ ಬುಧವಾರ ಮಧ್ಯಾಹ್ನ ಹೊಟೇಲ್ ಸಿಬ್ಬಂದಿಗೆ ಜರೀನಾ ಬಾಡಿಗೆ ಹಣವನ್ನು ನೀಡಿ ರೂಂಗೆ ಹೋಗಿದ್ದಳು. ರಾತ್ರಿ 10.30ರ ಹೊತ್ತಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಜರೀನಾ ಕರೆ ಸ್ವೀಕರಿಸುತ್ತಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದರು. ಹೌಸ್ ಕಿಪಿಂಗ್ ಸಿಬ್ಬಂದಿ ತೆರಳಿ ಗಮನಿಸಿದಾಗ ಮಹಿಳೆ ಬಾಗಿಲು ತೆರೆಯುತ್ತಿಲ್ಲಾ ಎಂದು ಮಾಹಿತಿ ನೀಡಿದ್ದ. ಈ ಬಗ್ಗೆ ರಾಹುಲ್‌ಗೆ ತಿಳಿಸಿದ್ದ ಹೊಟೇಲ್ ಸಿಬ್ಬಂದಿ ನಂತರ ಮಾಸ್ಟರ್ ಕೀ ಬಳಸಿ ರೂಂ ಬಾಗಿಲು ತೆರೆದಿದ್ದಾರೆ. ರೂಂ ತೆರೆದಾಗ ನೆಲದ ಮೇಲೆ ಅಂಗಾತವಾಗಿ ಬಿದ್ದಿದ್ದ ಜರೀನಾ ಮುಖದಲ್ಲಿ ಸಣ್ಣಪುಟ್ಟ ಗಾಯಗಳಿಂದ ರಕ್ತಮಯವಾಗಿದ್ದು ಕಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Govt Employees: ರೈತರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಅಧಿಕಾರಿ, ನೌಕರರು ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

VISTARANEWS.COM


on

Govt Employees
Koo

ಬೆಂಗಳೂರು: ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು (Govt Employees) ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕಚೇರಿಗಳಿಗೆ ಆಗಮಿಸುವ ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ. ಬಿ ಅವರು ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಆದೇಶ ಹೊರಡಿಸಿದ್ದಾರೆ.

ಕರ್ನಾಟಕವು ಕೃಷಿ ಪ್ರಧಾನವಾದ ರಾಜ್ಯವಾಗಿದ್ದು, ಸಾಮಾನ್ಯವಾಗಿ ಕೃಷಿಕರು ಸೋಮವಾರದ ದಿನದಂದು ತುಸುಮಟ್ಟಿಗೆ ಕೃಷಿ ಚಟುವಟಿಕೆಗಳಿಗೆ ಬಿಡುವು ನೀಡಿ, ಸಂತೆ, ಪೇಟೆ ಕೆಲಸಗಳು ಹಾಗೂ ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆಯಾಗಿದೆ.

ಈ ಹಿಂದೆ, ಪ್ರತಿ ಸೋಮವಾರಗಳಂದು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಾದಿಯಾಗಿ ಎಲ್ಲರೂ ತಮ್ಮ ತಮ್ಮ ಕೇಂದ್ರಸ್ಥಾನದ ಕಚೇರಿಗಳಲ್ಲಿದ್ದು, ಜನರ ಕೆಲಸಗಳನ್ನು ಮಾಡುತ್ತಿದ್ದರು. ಆದರೆ, ಕೃಷಿಯೇತರ ಹಿನ್ನೆಲೆಯಿಂದ ಅಧಿಕಾರಿಗಳು, ನೌಕರರು ಸರ್ಕಾರಿ ಸೇವೆಗೆ ಬರುವ ಪ್ರಮಾಣ ಹೆಚ್ಚಿದ ಮೇಲೆ ಈ ಪದ್ಧತಿಯಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರಾಗಿದೆ. ಆದ್ದರಿಂದ, ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕರ್ತವ್ಯ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಮನವಿ ಕೋರಿದ್ದರು. ಈ ಬಗ್ಗೆ ಸಕಾರಾತ್ಮಕವಾಗಿ ಸಿಎಂ ಸಿದ್ದರಾಮಯ್ಯ ಸ್ಪಂದಿಸಿ, ಅಗತ್ಯ ಕ್ರಮವಹಿಸಲು ಸೂಚನೆ ನೀಡಿದ್ದಾರೆ.

ಸಾರಿಗೆ ನಿಗಮಕ್ಕೂ ಅನ್ವಯ

ಪ್ರತಿ ಸೋಮವಾರಗಳಂದು ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕು ಎಂಬ ರಾಜ್ಯ ಸರ್ಕಾರ ಸೂಚನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಕ್ಕೂ ಅನ್ವಯವಾಗಿದೆ. ನಿಗಮ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ತುರ್ತು ಕಾರ್ಯಗಳನ್ನು ಹೊರತುಪಡಿಸಿ. ಪ್ರತಿ ಸೋಮವಾರಗಳಂದು ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಸೇವೆ ಒದಗಿಸಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಸುತ್ತೋಲೆ ಹೊರಡಿಸಿದ್ದಾರೆ.

Continue Reading

ವೈರಲ್ ನ್ಯೂಸ್

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಹಣ ಹಿಂತಿರುಗಿಸಲು ತೆಲಂಗಾಣ ಸಿಎಂಗೆ ಪತ್ರ ಬರೆದ ಕನ್ನಡಿಗರು

Valmiki Corporation Scam: ನಿಮ್ಮ ನಾಯಕ ರಾಹುಲ್ ಗಾಂಧಿ ಆಣತಿಯಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಹಣ ಸಾಗಿಸಿದೆ. ಹೀಗಾಗಿ ಹಣವನ್ನು ಹಿಂತಿರುಗಿಸಬೇಕು ಎಂದು ಪತ್ರದಲ್ಲಿ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಗೆ ಮನವಿ ಮಾಡಲಾಗಿದೆ.

VISTARANEWS.COM


on

Valmiki Corporation Scam
Koo

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ (Valmiki Corporation Scam) ಕೋಟ್ಯಂತರ ರೂಪಾಯಿ ತೆಲಂಗಾಣ ಕಂಪನಿಗಳಿಗೆ ವರ್ಗಾವಣೆಯಾಗಿದೆ ಎಂಬ ಆರೋಪಗಳು ಕೇಳಿಬಂದಿರುವುದರಿಂದ ಹಣ ವಾಪಸ್ ನೀಡುವಂತೆ ನೆರೆ ರಾಜ್ಯದ ಸಿಎಂಗೆ ಕನ್ನಡಿಗರು ಪತ್ರ ಬರೆದಿರುವುದು ಕಂಡುಬಂದಿದೆ. ಕರ್ನಾಟಕದ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಲಾಗಿದೆ. ಹೀಗಾಗಿ ಅಕ್ರಮವಾಗಿ ವರ್ಗಾವಣೆಯಾದ ಹಣವನ್ನು ಹಿಂತಿರುಗಿಸಬೇಕು ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರಿಗೆ ಮನವಿ ಮಾಡಲಾಗಿದೆ.

ತೆಲಂಗಾಣ ಸಿಎಂಗೆ ಕನ್ನಡಿಗರ ಹೆಸರಿನಲ್ಲಿ ಪತ್ರ ಬರೆದಿರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್‌ ಹಂಚಿಕೊಂಡಿದೆ. ಕರ್ನಾಟಕದ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾಗಿದ್ದ ಸುಮಾರು 187 ಕೋಟಿ ರೂ. ಹಣವನ್ನು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಆಣತಿಯಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಸಚಿವ ನಾಗೇಂದ್ರ ಅವರ ಮೂಲಕ ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗೆ ಸಾಗಿಸಿದ್ದಾರೆ.

ಇದನ್ನೂ ಓದಿ | Congress Guarantee: ʼಸ್ಯಾಡಿಸ್ಟ್‌ʼ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ, ನಿಲ್ಲಿಸೋದೇ ಒಳಿತು ಎಂದ ಲಕ್ಷ್ಮಣ್‌!

ನಿಮ್ಮಲ್ಲಿ ಕನ್ನಡಿಗರು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ಹಣವನ್ನು ದಯಮಾಡಿ ಹಿಂತಿರುಗಿಸಿ ಕೊಡಿ. ಈ ಹಣ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಬಳಕೆ ಆಗಬೇಕಿತ್ತು ಈ ನೀಚ ಸರ್ಕಾರ ಉಂಡು ಹೋದ ಕೊಂಡು ಹೋದ ಎಂಬಂತೆ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಲೂಟಿ ಹೊಡೆದದ್ದಲ್ಲದೆ, ಮಿಕ್ಕ ಹಣವನ್ನೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಖರ್ಚಿಗೆ ಸಾಗಿಸಿದ್ದಾರೆ.

ಗುಂಡಿಗೆ ಹೋದ ಹೆಣ, ಕಾಂಗ್ರೆಸ್ ನುಂಗಿದ ಹಣ ಎಂದಿಗೂ ವಾಪಸ್ ಬರುವುದಿಲ್ಲ ಎಂಬುದು ನಮಗೆ ತಿಳಿದಿದೆ ಆದ್ರೆ ಕೊನೆ ಪ್ರಯತ್ನವಾಗಿ ನಿಮ್ಮಲ್ಲಿ ಈ ಮನವಿ ಮಾಡುತ್ತಿದ್ದೇವೆ, ಹಣ ಹಿಂತಿರುಗಿಸಿ ವಿಶ್ವಾಸ ಉಳಿಸಿಕೊಳ್ಳಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ | ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣದಲ್ಲಿ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಹೆಸರು; ಡಾ. ಜಿ.ಪರಮೇಶ್ವರ್‌ ಹೇಳಿದ್ದೇನು?

ತೆಲಂಗಾಣ ಸಹಕಾರ ಬ್ಯಾಂಕ್‌ ಅಧ್ಯಕ್ಷನನ್ನು ಬಂಧಿಸಿದ್ದ ಎಸ್‌ಐಟಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಸಹಕಾರ ಬ್ಯಾಂಕ್‌ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಎಂಬುವವರನ್ನು ಸಿಐಡಿ ಎಸ್‌ಐಟಿ ಜೂನ್‌ 4ರಂದು ಬಂಧಿಸಿತ್ತು. ಆರೋಪಿ ಸತ್ಯನಾರಾಯಣ ಹೈದರಾಬಾದ್‌ನ ನಲ್ಲಕುಂಟ ಪ್ರದೇಶದಲ್ಲಿರುವ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕರಾಗಿದ್ದಾರೆ.

ವಾಲ್ಮೀಕಿ ನಿಗಮದ 94.73 ಕೋಟಿ ರೂ. ಅಕ್ರಮ ವರ್ಗಾವಣೆಯಲ್ಲಿ ಸತ್ಯನಾರಾಯಣ ಪ್ರಧಾನ ಸೂತ್ರಧಾರ ಆರೋಪಿಯಾಗಿದ್ದಾರೆ. ಯೂನಿಯನ್‌ ಬ್ಯಾಂಕ್‌ನಲ್ಲಿರುವ ವಾಲ್ಮೀಕಿ ನಿಗಮದ ಖಾತೆಯಿಂದ 18 ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಆಗಿತ್ತು. ತನಿಖೆ ವೇಳೆ ಫೈನಾನ್ಸ್‌ ಕಂಪನಿ ಸತ್ಯನಾರಾಯಣ ಅವರೇ 18 ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು. ಹೀಗಾಗಿ ಅವರನ್ನು ಎಸ್‌ಐಟಿ ಬಂಧಿಸಿತ್ತು.

Continue Reading

ಮಳೆ

Karnataka Weather : ಉತ್ತರ ಒಳನಾಡು, ಕರಾವಳಿಯಲ್ಲಿ ವ್ಯಾಪಕ ಮಳೆ; ಶಾಲೆಗೆ ನುಗ್ಗಿದ ನೀರು, ಮಕ್ಕಳಿಗೆ ರಜೆ

Karnataka Weather Forecast : ರಾಜ್ಯಾದ್ಯಂತ ಮಳೆಯ (Rain News) ಅಬ್ಬರ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಉಡುಪಿಯ ಶಾಲೆಗೆ ನೀರು ನುಗ್ಗಿದ್ದರಿಂದ ಮಕ್ಕಳಿಗೆ ರಜೆ ನೀಡಲಾಗಿತ್ತು. ಕೆಲವೆಡೆ ರಸ್ತೆಗಳು ಕೆರೆಯಂತೆ ಮಾರ್ಪಾಡಾಗಿತ್ತು. ಎಲ್ಲೆಲ್ಲಿ ಏನೆಲ್ಲ ಅವಾಂತರಗಳು ಆಗಿವೆ. ಇನ್ನೂ ಎಷ್ಟು ದಿನ ಮಳೆಯಾಟ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Karnataka weather Forecast
Koo

ಉಡುಪಿ: ಉತ್ತರ ಒಳನಾಡು, ಕರಾವಳಿ ಸೇರಿ ಮಲೆನಾಡು ಭಾಗದ ವಿವಿಧೆಡೆ ಭಾರಿ ವರ್ಷಧಾರೆಗೆ ಜನರು ತತ್ತರಿಸಿಹೋಗಿದ್ದಾರೆ. ನಾಲ್ಕೈದು ದಿನಗಳು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ (Rain News) ಉಡುಪಿಯ ಬೈಂದೂರು ತಾಲೂಕಿನ ಯಡ್ತರೆ ಸಮೀಪ ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. ತರಗತಿ ಕೋಣೆಗಳು ಜಲಾವೃತಗೊಂಡ ಪರಿಣಾಮ ಶಾಲಾ ಮಕ್ಕಳಿಗೆ ಶನಿವಾರ ರಜೆ ನೀಡಲಾಗಿತ್ತು. ಶಾಲೆ ಸಮೀಪ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ ಹರಿದ ನೀರು ನೇರ ಶಾಲೆಗೆ ನುಗ್ಗುತ್ತಿದೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಇದೇ ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ದಾವಣಗೆರೆಯಲ್ಲಿ ಕೆರೆಯಂತಾದ ಜಮೀನುಗಳು

ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಶನಿವಾರ ಭರ್ಜರಿ ಮಳೆಯಾಗಿದೆ. ಹನುಮಂತಪುರ, ದಿದ್ದಗಿ , ಹುಚ್ಚವನಹಳ್ಳಿ ಪಲ್ಲಾಗಟ್ಟೆ, ಮೇದಕೇರನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಜಮೀನುಗಳು ಕೆರೆಯಂತಾಗಿದೆ.

ಧಾರವಾಡದ ಆಯಟ್ಟಿ ಬ್ರಿಡ್ಜ್ ಬಂದ್‌

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಬ್ರಿಡ್ಜ್ ಮಳೆಗೆ ಮುಳುಗಡೆಯಾಗಿದ್ದು, ಸಂಚಾರ ಬಂದ್‌ ಮಾಡಲಾಗಿದೆ. ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಮಳೆ ಬಂದರೆ ಸಾಕು ನೀರಿನಲ್ಲಿ ಮುಳುಗಡೆಯಾಗುತ್ತದೆ. ಹೀಗಾಗಿ ಸೇತುವೆ ಮೇಲೆ ನೀರು ತಗ್ಗುವವರೆಗೂ ಜನರ ಓಡಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಇನ್ನೂ ಸೇತುವೆ ಎತ್ತರ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತಿಲ್ಲ. ಇತ್ತ ಹೊಸ ಬ್ರಿಡ್ಜ್ ನಿರ್ಮಾಣ ಮಾಡುವವರೆಗೂ ಜನರ ಸಮಸ್ಯೆ ತಪ್ಪಿದ್ದಲ್ಲ. ಬ್ರಿಡ್ಜ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದರೂ ಸಹ ಕೆಲಸ ಮಾತ್ರ ಶುರುವಾಗಿಲ್ಲ.

karnataka weather Forecast

ಇದನ್ನೂ ಓದಿ: Murder Case : ತಂಗಿಗೆ ವರದಕ್ಷಿಣೆ ಟಾರ್ಚರ್‌; ಬಾಮೈದನ ಕೊಲೆ ಮಾಡಿದ ಬಾವ

ವಿಜಯಪುರದ ದೋಣಿ ನದಿ ಸೇತುವೆ ಜಲಾವೃತ

ವಿಜಯಪುರದ ಯಾಳವಾರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಭಾರಿ ಮಳೆಗೆ ಸಂಪೂರ್ಣ ದೋಣಿ ನದಿ ಸೇತುವೆ ಜಲಾವೃತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಜಲಾವೃತದಿಂದ ಹೊಲಗಳಿಗೆ ತೆರಳುವ ರೈತರಿಗೂ ಸಂಕಷ್ಟ ಎದುರಾಗಿದೆ. ಡೋಣಿ ನದಿಗೆ ಕಟ್ಟಿರುವ ಹಳೆಯ ನೆಲ ಸೇತುವೆ ಜಲಾವೃತಗೊಂಡಿದೆ. ಹೊಸ ಸೇತುವೆ ಕಳಪೆ‌ ಕಾಮಗಾರಿಯಿಂದ ಶಿಥಿಲಗೊಂಡಿದೆ. ಹೀಗಾಗಿ ಜಲಾವೃತವಾದ ಹಳೆಯ ಸೇತುವೆಯ‌ ಮೇಲೆಯೇ ವಾಹನಗಳು ಸಂಚಾರಿಸುತ್ತಿದೆ. ಹೊಸ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ. ಹೀಗಾಗಿ ಹೊಸ ಸೇತುವೆ ಮೇಲೆ ಕಳೆದ ಎರಡು ವರ್ಷಗಳಿಂದ ಸಂಚಾರ‌ ನಿಷೇಧಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ನೆಲ ಮಟ್ಟದ ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಹಳ್ಳದ ನೀರು

ವಿಜಯನಗರ ಜಿಲ್ಲೆಯ ಗುಡೇಕೋಟೆ ಹೋಬಳಿಯ ಮಹದೇವಪುರ ಗ್ರಾಮದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ಬೀದಿಗಳಲ್ಲಿ ರಭಸವಾಗಿ ಹರಿದು ಮನೆ ಒಳಗೆ ನುಗ್ಗಿದೆ. ಮಹದೇವಪುರ ಗ್ರಾಮದ ಮಾರಿಗುಡ್ಡ ಏರಿಯಾದಿಂದ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಮಹದೇವಪುರ ಗ್ರಾಮದಲ್ಲಿ ದಲಿತ ಕೇರಿ ತಗ್ಗು ಪ್ರದೇಶದಲ್ಲಿ ಇದೆ.

ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರಿದಿದೆ. ಕರಾವಳಿಯ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಗೆ ವಾಹನ ಸವಾರರು ಪರದಾಡಿದರು. ಮಳೆ ರಭಸಕ್ಕೆ ರಸ್ತೆ ಕಾಣದೆ ಇರುವುದರಿಂದ ಸವಾರರು ಕೊಟ್ಟಿಗೆಹಾರದಲ್ಲೇ ವಾಹನ ನಿಲ್ಲಿಸಿಕೊಂಡಿರುವುದು ಕಂಡು ಬಂತು.

ಗದಗದಲ್ಲಿ ಕೊಚ್ಚಿ ಹೋದ ಕಿರುಸೇತುವೆ

ಸತತ ಮಳೆಯಿಂದಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಧರ್ಮಾಪುರ ಗ್ರಾಮದ ಗಣಪತಿ ಕೆರೆಯ ಕಿರುಸೇತುವೆ ಕೊಚ್ಚಿ ಹೋದೆ. ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಿದ್ದ ಕಿರುಸೇತುವೆ ನೀರುಪಾಲಾಗಿದೆ. ಕಳೆದ ವರ್ಷವಷ್ಟೇ ರೈತರು ತಮ್ಮ ಜಮೀನುಗಳಿಗೆ ತೆರಳಲು ನಿರ್ಮಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಕಿರುಸೇತುವೆ ರಸ್ತೆ ಕೊಚ್ಚಿ ಹೋಗಿದ್ದು, ರೈತರು ಪರದಾಡುತ್ತಿದ್ದಾರೆ. ರಸ್ತೆ ಇಲ್ಲದ ಹಿನ್ನೆಲೆ ಇದೀಗ ರೈತರು ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗಿದೆ.

ಬೆಳಗಾವಿಯಲ್ಲಿ ಕೆರೆಯಂತಾದ ರಸ್ತೆಗಳು

ಮಳೆರಾಯನ ಅರ್ಭಟಕ್ಕೆ ಬೆಳಗಾವಿ ಕ್ಯಾಂಪ್‌ ಪ್ರದೇಶದ ಹತ್ತಿರ ರಸ್ತೆಗಳು ಕೆರೆಯಂತೆ ಮಾರ್ಪಾಟ್ಟಿವೆ. ಬೆಳಗಾವಿಯ ವಿವಿಧೆಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಬೆಳಗಾವಿಯ ಖಾನಾಪುರ ರಸ್ತೆಯಲ್ಲಿ ಎರಡು ‌ಅಡಿ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು. ಬೆಳಗಾವಿಯ ಗ್ಲೋಬ್ ಥೀಯೇಟರ್‌ ಅಂಗಳಕ್ಕೆ ನೀರು ನುಗ್ಗಿತ್ತು. ಟಿಕೆಟ್ ಕೌಂಟರ್ ಸಂಪೂರ್ಣ ಜಲಾವೃತಗೊಂಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Wheelchair Cricket Tournament: ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ರವಿಶಂಕರ್ ಗುರೂಜಿ

Wheelchair Cricket Tournament: ಜೀವನದಲ್ಲಿ ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದಿರಬೇಕು. ಬಲವಾದ, ಸಂತೋಷವಾದ ಮನಸ್ಸನ್ನು ಹೊಂದುವುದು ಮುಖ್ಯ ಎಂದು ಖ್ಯಾತ ಆಧ್ಯಾತ್ಮಿಕ ಗುರು ರವಿಶಂಕರ್‌ ಗುರೂಜಿ ಅವರು ತಿಳಿಸಿದ್ದಾರೆ.

VISTARANEWS.COM


on

Koo

ಬೆಂಗಳೂರು: ಪರಿಶ್ರಮ ದಿವ್ಯಾಂಗ ಕ್ರೀಡಾ ಅಕಾಡೆಮಿಯು ಆಯೋಜಿಸಿದ್ದ ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿಯನ್ನು (Wheelchair Cricket Tournament) ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಖ್ಯಾತ ಆಧ್ಯಾತ್ಮಿಕ ಗುರುಗಳಾದ ಗುರುದೇವ್‌ ಶ್ರೀ ಶ್ರೀ ರವಿಶಂಕರ್‌ ಹಾಗೂ ಇತರ ಗಣ್ಯರು ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ, 35 ಪುರುಷರು, 25 ಮಹಿಳಾ ಕ್ರೀಡಾಪಟುಗಳು ಹಾಗೂ 10 ಸಹಚರರು ಭಾಗಿಯಾಗಿದ್ದರು.

ಕ್ರೀಡೆಗಳಲ್ಲಿ ನೈತಿಕತೆಯ ಬೆಂಬಲ ನೀಡಲು ದನಿಯಾಗಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರು ಮಾತನಾಡಿ, “ಈ ಅಕಾಡೆಮಿಯು ಎಲ್ಲರಿಗೂ ಆಶಾಕಿರಣವನ್ನು ಮೂಡಿಸುತ್ತಿದೆ. ಇಂದಿನ ದಿನಗಳಲ್ಲಿ ಒತ್ತಡಕ್ಕೆ ಒಳಗಾಗುತ್ತಿರುವ ಯುವಕರಿಗೆ ಇದು ದಾರಿಯನ್ನು ತೋರಿಸುತ್ತಿದೆ. ಏನೇ ಆದರೂ ಜೀವನದಲ್ಲಿ ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದಿರಬೇಕು. ಬಲವಾದ, ಸಂತೋಷವಾದ ಮನಸ್ಸನ್ನು ಹೊಂದುವುದು ಮುಖ್ಯ. ಇಂದು ಪ್ರತಿ 40 ಸೆಕೆಂಡುಗಳಿಗೊಮ್ಮೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೀವು ಆಶಾಕಿರಣವನ್ನು ನೀಡಿ, ಜೀವನವನ್ನು ಸನ್ಮಾನಿಸಿ, ಕ್ರೀಡಾಪಟುತ್ವದ ಸ್ಫೂರ್ತಿಯನ್ನು ಹೊಂದುವಂತೆ ಹೇಳುತ್ತಿರುವಿರಿ. ಕ್ರೀಡೆಗಳನ್ನು ಆಡಲು ಉತ್ಸಾಹ, ಸ್ಫೂರ್ತಿ ಮತ್ತು ಧ್ಯಾನ ಬೇಕು” ಎಂದು ಸಲಹೆ ನೀಡಿದರು.

wheelchair cricket tournament

ಇದನ್ನೂ ಓದಿ | IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

ಈ ಪಂದ್ಯಾವಳಿಯನ್ನು, ಜಾಗತಿಕ ಆಧ್ಯಾತ್ಮಿಕ ಗುರುಗಳಾದ ಗುರುದೇವ ಶ್ರೀ ಶ್ರೀ ರವಿಶಂಕರ್, ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಕ್ರೀಡಾಪಟುಗಳ ವಿಭಾಗದ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ, ಮಾಜಿ ಯೋಧರು, ಮುಖ್ಯ ಕ್ಲಸಿಫೈಯರ್ ಹಾಗೂ ಟೋಕ್ಯೋ ಪಾರಾ ಒಲಿಂಪಿಕ್ಸ್‌ನ ವೈದ್ಯಕೀಯ ನಿರ್ದೇಶಕರು ಡಾ. ಅಮೇಯ, ಮಾಜಿ ಕೆಪಿಎಸ್‌ಇ ಸದಸ್ಯರು, ಬಿಬಿಎಂಪಿ ಕಾರ್ಪೊರೇಟರ್ ಡಾ.ಮಂಗಳಾ ಶ್ರೀಧರ್, ಸುಮಧುರ ಗ್ರೂಪ್ ಸಿಒಒ ಗಿರಿಧರ್ ಕುಮಾರ್. ಬಿ, ಸುಮಧುರ ಗ್ರೂಪ್‌ನ ಸಸ್ಟೇಪಬಿಲಿಟಿ ಮತ್ತು ಸಿಎಸ್ ಆರ್ನ ಮುಖ್ಯಸ್ಥೆ ಜೀವನ ಕಲಾಕುಂದಲ, ಟಿಸಿಎಫ್ಎಂ-ಎಂಬಸ್ಸಿ ಗ್ರೂಪ್ ಸಿಇಒ ಅಶ್ವಿನಿ ವಲಾವಲ್ಕರ್ ಉದ್ಘಾಟಿಸಿದರು.

ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಕ್ರೀಡಾಪಟುಗಳ ಅಧ್ಯಕ್ಷರಾದ ಸತ್ಯನಾರಾಯಣ ಅವರು ಗುರುದೇವರನ್ನು ಕುರಿತು ಮಾತನಾಡಿ, “ತಮ್ಮ ಆಶ್ರಮದಲ್ಲಿ ಅನೇಕ ವರ್ಷಗಳಿಂದಲೂ, ಗುರುದೇವ ಶ್ರೀ ಶ್ರೀ ರವಿಶಂಕರರು ಈ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇಂದು ಎಲ್ಲೆಡೆಯೂ ಪ್ಯಾರಾ ಒಲಿಂಪಿಕ್ ಕ್ರೀಡೆಗಳಿಗೆ ಬಹಳ ಪ್ರೋತ್ಸಾಹ ದೊರಕುತ್ತಿದೆ. ಹಿಂದೆ ಈ ರೀತಿಯ ಪ್ರೋತ್ಸಾಹ ಇರಲಿಲ್ಲ. ಈಗ ಸರ್ಕಾರವೂ ಸಹ ಬಹಳ ಪ್ರೋತ್ಸಾಹವನ್ನು ನೀಡುತ್ತಿದೆ. ಈಗ ಬೇಕಾಗಿರುವುದೆಂದರೆ, ದಿವ್ಯಾಂಗ ಪಟುಗಳು ಪ್ರತಿ ದಿನ ಅಭ್ಯಾಸ ಮಾಡುವುದು” ಎಂದರು.

ಇದನ್ನೂ ಓದಿ | Norway Chess: 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಪ್ರಜ್ಞಾನಂದ; ಸಹೋದರಿ ವೈಶಾಲಿಗೆ 4ನೇ ಸ್ಥಾನ

ಜೂನ್ 8 ಮತ್ತು 9ರಂದು ಎಸ್‌ಎಸ್ಆರ್‌ವಿಎಮ್‌ ಗ್ರೌಂಡ್ಸ್‌ನಲ್ಲಿ ಪುರುಷರ ಪಂದ್ಯಾವಳಿ ನಡೆಯಲಿದ್ದು, ವಿರಾಮದ ಸಮಯದಲ್ಲಿ ಮಹಿಳೆಯರ ಟಿ20 ಪಂದ್ಯಾವಳಿಯೂ ನಡೆಯಲಿದೆ.

Continue Reading
Advertisement
NED vs RSA
T20 ವಿಶ್ವಕಪ್4 hours ago

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

Karnataka police
ಕರ್ನಾಟಕ6 hours ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

French Open Final 2024
ಪ್ರಮುಖ ಸುದ್ದಿ6 hours ago

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

Govt Employees
ಕರ್ನಾಟಕ6 hours ago

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Kisan Samman Nidhi
ಪ್ರಮುಖ ಸುದ್ದಿ7 hours ago

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

IND vs PAK
ಕ್ರೀಡೆ7 hours ago

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

World Environment Day Celebration at Kittur Rani Chennamma Residential School
ದಾವಣಗೆರೆ7 hours ago

Davanagere News: ತರಗನಹಳ್ಳಿಯ ಚನ್ನಮ್ಮ ವಸತಿ ಶಾಲೆಯಲ್ಲಿ ಪರಿಸರ ದಿನಾಚರಣೆ

Physical Abuse
ಕರ್ನಾಟಕ7 hours ago

Physical Abuse: 34 ವರ್ಷದ ವಿಚ್ಛೇದಿತ ಮಹಿಳೆ ಜತೆ 25ರ ಯುವಕನ ಲವ್ವಿ ಡವ್ವಿ; ಗರ್ಭಿಣಿ ಮಾಡಿ ಪರಾರಿ!

World Environment Day Celebration at Kamaruru Government higher Primary School
ಶಿವಮೊಗ್ಗ7 hours ago

World Environment Day: ಚಂದ್ರಗುತ್ತಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

Youth Congress National General Secretary Raksha Ramaiah latest statement
ಚಿಕ್ಕಬಳ್ಳಾಪುರ7 hours ago

Raksha Ramaiah: ಚಿಕ್ಕಬಳ್ಳಾಪುರದಲ್ಲಿ ನಾನಾ ಕಾರಣಗಳಿಂದ ಮತಗಳನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ: ರಕ್ಷಾ ರಾಮಯ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌