Pill Label: ಮಾತ್ರೆಗಳ ಮೇಲಿನ ಲೇಬಲ್‌ ಗಮನಿಸಿದ್ದೀರಾ? ಏನೇನಿವೆ ಅದರಲ್ಲಿ? - Vistara News

ಆರೋಗ್ಯ

Pill Label: ಮಾತ್ರೆಗಳ ಮೇಲಿನ ಲೇಬಲ್‌ ಗಮನಿಸಿದ್ದೀರಾ? ಏನೇನಿವೆ ಅದರಲ್ಲಿ?

ಕೆಂಪು ಗೆರೆಯಿರುವ ಮಾತ್ರೆಗಳನ್ನು ವೈದ್ಯರು ಸೂಚನೆಯ ಮೇರೆಗೆ ಮಾತ್ರವೇ ಫಾರ್ಮಸಿಗಳು ನೀಡಬೇಕು. ಇದರಿಂದ ಪ್ರತಿಜೈವಿಕಗಳಿಗೆ ಪ್ರತಿರೋಧ ಬೆಳೆಯುವ ಅಪಾಯಕಾರಿ ಅವಸ್ಥೆಗೆ ದೇಹವನ್ನು ನೂಕದಂತೆ ತಡೆಯಬಹುದು. ಇದಲ್ಲದೆ, ಇನ್ನಷ್ಟು ಸೂಚನೆಗಳನ್ನು ಲೇಬಲ್‌ಗಳ (Pill label) ಮೇಲೆ ಗಮನಿಸಬಹುದು. ಏನು ಅವುಗಳ ಅರ್ಥ?

VISTARANEWS.COM


on

Pill Label
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಔಷಧಿ ಅಂಗಡಿಯಿಂದ ಮಾತ್ರೆಗಳನ್ನು ತಂದಾಗ ಅದರ ಮೇಲಿರುವ ಕೆಂಪು ಗೆರೆಯನ್ನು (Pill label) ಎಂದಾದರೂ ಗಮನಿಸಿದ್ದೀರಾ? ಆ ಮಾತ್ರೆಚೀಟಿಯ ಸೌಂದರ್ಯವರ್ಧನೆಗಾಗಿ ಹಾಕಿದ ಕೆಂಬಣ್ಣ ಗೆರೆಗಳಲ್ಲ ಎಂಬುದು ತಿಳಿದಿದ್ದರೂ, ಯಾಕೆ ಎಂಬುದು ಬಗೆಹರಿದಿರಲಾರದು. ಇದೊಂದು ಸಣ್ಣ ಕೆಂಪು ಗೆರೆಯ ಸಂದೇಶವನ್ನು ಸರಿಯಾಗಿ ಪಾಲಿಸಿದರೆ, ದೇಹದಲ್ಲಿ ಪ್ರತಿಜೈವಿಕಗಳಿಗೆ ಪ್ರತಿರೋಧ (ಆಂಟಿಬಯಾಟಿಕ್‌ ರೆಸಿಸ್ಟೆನ್ಸ್‌-antibiotic resistance) ಬೆಳೆಯುವ ಅಪಾಯಕಾರಿ ಅವಸ್ಥೆಯಿಂದ ತಪ್ಪಿಸಿಕೊಳ್ಳಬಹುದು. ಇಂಥ ಕೆಂಪು ಗೆರೆಯ ಮಾತ್ರೆಗಳು, ಆಂಟಿಬಯಾಟಿಕ್‌ ಔಷಧಿಗಳಾಗಿದ್ದು, ವೈದ್ಯರ ಸೂಚನೆಯಿಲ್ಲದೆ ಸೇವಿಸಕೂಡದು. ಈ ಪ್ರತಿಜೈವಿಕ ಔಷಧಿಗಳ ವಿಚಾರದಲ್ಲಿ ಸ್ವಯಂವೈದ್ಯ ಮಾಡಿಕೊಳ್ಳುವುದು ಜೀವಕ್ಕೆ ಅಪಾಯ ತರಬಹುದು. ಮಾತ್ರವಲ್ಲ, ವೈದ್ಯರು ಹೇಳಿದಷ್ಟು ಮಾತ್ರೆಗಳನ್ನು ಸೇವಿಸಬೇಕು, ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಔಷಧಿ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಅವರ ಸೂಚನೆಗಳನ್ನು ಇದು ಅವಲಂಬಿಸುತ್ತದೆ. ಜೊತೆಗೆ, ಈ ಬಗ್ಗೆ ವೈದ್ಯರ ಪ್ರಿಸ್ಕ್ರಿಪ್ಶನ್‌ ಇಲ್ಲದೆಯೇ ಇಂಥ ಮಾತ್ರೆಗಳನ್ನು ಫಾರ್ಮಸಿಗಳು ಸಹ ಗ್ರಾಹಕರಿಗೆ ನೀಡುವಂತಿಲ್ಲ ಎಂದು ಕೇಂದ್ರ ಸಚಿವಾಲಯವೂ ತನ್ನ ಎಕ್ಸ್‌ ಖಾತೆಯಲ್ಲಿ (Pill label) ಇತ್ತೀಚೆಗೆ ತಿಳಿಸಿತ್ತು.

Tablets Pills Capsules Heap Packaging Medicine Medical Antibioti

ಗೆರೆ ಗಮನಿಸಿ

ಇನ್ನು ಮೇಲೆ ಔಷಧಿಗಳ ಲೇಬಲ್‌ ನೋಡುವಾಗ ಅದರ ಹೆಸರು, ಎಂ.ಜಿ, ದಿನಾಂಕ ನೋಡುವುದು ಮಾತ್ರವಲ್ಲ, ಕೆಂಪು ಗೆರೆ ಇದೆಯೇ ಗಮನಿಸಿ. ಇಲ್ಲಿ ಕೆಂಪುಗೆರೆ ಇದೆಯೆಂದಾದರೆ ಇದಕ್ಕೆ ವೈದ್ಯರ ಸೂಚನೆ ಅಗತ್ಯ. ಇದನ್ನು ಸರಿಯಾಗಿ ಪಾಲಿಸುವುದರಿಂದ, ದೇಹದಲ್ಲಿ ಪ್ರತಿಜೈವಿಕಗಳಿಗೆ ಪ್ರತಿರೋಧ ಸೃಷ್ಟಿ ಆಗುವುದನ್ನು ತಪ್ಪಿಸಬಹುದು. ಈ ಕೆಂಪು ಗೆರೆಯ ಜೊತೆಗೆ, ಇನ್ನಷ್ಟು ಸೂಚನೆಗಳು ಮಾತ್ರೆಯ ಲೇಬಲ್‌ ಮೇಲಿರುತ್ತವೆ. ಯಾವುದು ಅವೆಲ್ಲ? ಯಾಕಿರುತ್ತವೆ? ಏನು ಅವುಗಳ ಅರ್ಥ?

ಆರ್‌ಎಕ್ಸ್‌

ಸಾಮಾನ್ಯವಾಗಿ ಆಂಟಿಬಯಾಟಿಕ್‌ ಔಷಧಿಗಳಿಗೆ ಮಾತ್ರವೇ ವೈದ್ಯರ ಸೂಚನೆ ಬೇಕಾಗುತ್ತದೆ. ಉಳಿದವನ್ನು ಗೂಗಲ್‌ ಸಲಹೆಯಂತೆ ಅಥವಾ ಫಾರ್ಮಸಿಯವರ ಸಲಹೆಯಂತೆ ʻಗುಳುಂʼ ಮಾಡಬಹುದು ಎಂಬುದು ಬಹಳಷ್ಟು ಜನರ ನಂಬುಗೆ. ವಿಷಯ ಹಾಗಲ್ಲ. Rx ಎಂದು ಸೂಚಿತವಾದ ಯಾವ ಔಷಧಿಯನ್ನೂ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವಂತಿಲ್ಲ. ಹಾಗೆಂದು ಇವೆಲ್ಲ ಸ್ಟೆರಾಯ್ಡ್‌, ಆಂಟಿಬಯಾಟಿಕ್‌ನಂಥ ಯಾವುದೇ ವರ್ಗಕ್ಕೆ ಸೇರಲೇಬೇಕೆಂದಿಲ್ಲ. ಆದರೆ ವೈದ್ಯರ ಸಲಹೆ ಈ ಔಷಧಗಳಿಗೆ ಬೇಕಾಗುತ್ತದೆ.

Photo Of Assorted Pills

ಎನ್‌ಆರ್‌ಎಕ್ಸ್‌

ಅಂದರೆ, NRx ಎಂಬುದು ಕೆಲವೊಮ್ಮೆ ನಮೂದಾಗಿರುತ್ತದೆ ಲೇಬಲ್‌ ಮೇಲೆ. ಈ ವರ್ಗದ ಔಷಧಿಗಳನ್ನು ಮತ್ತು-ಬರಿಸುವ ಅಥವಾ ನಾರ್ಕೊಟಿಕ್‌ ವಿಭಾಗಕ್ಕೆ ಸೇರಿದ ಔಷಧಗಳೆಂದು ಕರೆಯಲಾಗುತ್ತದೆ. ಇವುಗಳನ್ನಂತೂ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವ ಮಾತೇ ಇಲ್ಲ. ಕಾರಣ, ಕೆಲವು ನಿಗದಿತ ಸಂದರ್ಭಗಳಲ್ಲಿ ಹಾಗೂ ಚಿಕಿತ್ಸೆಗಳಲ್ಲಿ ಮಾತ್ರ ವೈದ್ಯರು ಇದನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ.

ಎಕ್ಸ್‌ಆರ್‌ಎಕ್ಸ್‌

ಲೇಬಲ್‌ಗಳ ಮೇಲೆ XRx ಎಂಬ ಉಲ್ಲೇಖವನ್ನೂ ಕೆಲವೊಮ್ಮೆ ಕಾಣಬಹುದು. ಇದರರ್ಥ, ವೈದ್ಯರೇ ಈ ಔಷಧಿಗಳನ್ನು ನೇರವಾಗಿ ರೋಗಿಗಳಿಗೆ ನೀಡಬೇಕು. ರೋಗಿಗಳು ಫಾರ್ಮಸಿಗಳಿಂದ ಇವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಒಂದೊಮ್ಮೆ ವೈದ್ಯರಿಂದ ಸಲಹಾ ಚೀಟಿ ತಂದರೂ, ರೋಗಿಗಳಿಗೆ ಔಷಧಿ ಅಂಗಡಿಗಳು ಇದನ್ನು ಮಾರಾಟ ಮಾಡುವಂತಿಲ್ಲ. ಇದನ್ನು ವೈದ್ಯರೇ ನೇರವಾಗಿ ತಂದು, ರೋಗಿಗಳ ಚಿಕಿತ್ಸೆಯಲ್ಲಿ ಬಳಸಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Apple With sticker: ಸೇಬು ಹಣ್ಣು ಎಂದರೆ ಯಾರಿಗೆ ಇಷ್ಟವಿರಲ್ಲ? ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಇರುತ್ತಾರೆ. ಇದೆಲ್ಲಾ ಸರಿ ಮಾರುಕಟ್ಟೆಯಲ್ಲಿ ಹಣ್ಣು ತರಲು ಹೋದಾಗ ಈ ಸೇಬು ಹಣ್ಣುಗಳ ಮೇಲೆ ಚಿಕ್ಕದಾದ ಸ್ಟಿಕ್ಕರ್‌ವೊಂದು ಹಚ್ಚಿರುತ್ತಾರೆ ಅಲ್ವಾ ಅದರ ಹಿಂದಿರುವ ರಹಸ್ಯವೇನೆಂದು ನಿಮಗೆ ಗೊತ್ತಾ? ಆ ಭಾಗ ಹಾಳಾದ ಕಾರಣ ಸ್ಟಿಕರ್‌ನಿಂದ ಮುಚ್ಚಿರುತ್ತಾರೆ ಎನ್ನುತ್ತಾರೆ ಕೆಲವರು ಅದರ ನಿಜವಾದ ಕಾರಣ ಬೇರೆಯೇ ಇದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Apple With sticker
Koo

ಬೆಂಗಳೂರು : ಮಾರುಕಟ್ಟೆಯಲ್ಲಿ ಸೇಬುಹಣ್ಣುಗಳು ಹಲವು ವಿಧಗಳಲ್ಲಿ ಕಂಡುಬರುತ್ತದೆ. ಕೆಲವು ಸೇಬುಗಳು ಹಸಿರು ಬಣ್ಣದಲ್ಲಿರುತ್ತದೆ. ಕೆಲವು ಸೇಬುಗಳು ಕೆಂಪು ಬಣ್ಣದಲ್ಲಿರುತ್ತದೆ. ಹಾಗೇ ಕೆಲವು ಸೇಬು ಹಣ್ಣಿನ (Apple With sticker) ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿರುತ್ತಾರೆ. ಅದಕ್ಕೆ ಬೆಲೆ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಕೆಲವರು ಅದು ಉತ್ತಮವಾಗಿರುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಅದನ್ನೇ ಕಂಡುಕೊಳ್ಳುತ್ತಾರೆ. ಆದರೆ ಕೆಲವರು ಅದು ಹಾಳಾದ ಕಾರಣ ಆ ಭಾಗವನ್ನು ಸ್ಟಿಕರ್ ನಿಂದ ಮುಚ್ಚಿದ್ದಾರೆ ಎಂದು ಭಾವಿಸುತ್ತಾರೆ. ಸೇಬಿನ ಮೇಲೆ ಸ್ಟಿಕ್ಕರ್ ಯಾಕೆ ಅಂಟಿಸುತ್ತಾರೆ. ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಮೊದಲು ತಿಳಿಯಿರಿ.

ಸ್ಟಿಕ್ಕರ್ ಇರುವ ಸೇಬು ಒಳ್ಳೆಯ ಗುಣಮಟ್ಟದಾಗಿರುತ್ತದೆ ಮತ್ತು ಅದಕ್ಕೆ ಬೆಲೆ ಕೂಡ ಹೆಚ್ಚು ಎಂದು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಆದರೆ ವಾಸ್ತವಾಗಿ ಕೆಟ್ಟ ಭಾಗವನ್ನು ಮುಚ್ಚಲು ಅಥವಾ ಕೊಳೆತ ಭಾಗವನ್ನು ಮರೆಮಾಚಲು ಸ್ಟಿಕ್ಕರ್ ಅನ್ನು ಅಂಟಿಸಿರುವುದಿಲ್ಲ.

ತಜ್ಞರು ತಿಳಿಸಿದ ಪ್ರಕಾರ, ಸೇಬು ಮಾತ್ರವಲ್ಲ ಕಿತ್ತಳೆ ಹಣ್ಣುಗಳನ್ನು ಸಹ ಸ್ಟಿಕ್ಕರ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಸ್ಟಿಕ್ಕರ್ ನೋಡಿದವರು ಅದು ದುಬಾರಿ ಎಂದು ಭಾವಿಸುತ್ತಾರೆ. ಆದರೆ ಸ್ಟಿಕ್ಕರ್ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆಯಂತೆ. ಹಾಗಾಗಿ ನೀವು ಸೇಬು ಖರೀದಿಸುವಾಗ ಅದರ ಮೇಲಿರುವ ಸ್ಟಿಕ್ಕರ್ ಅನ್ನು ಓದಿ.

ಸೇಬಿನ ಮೇಲಿನ ಸ್ಟಿಕ್ಕರ್‌ನಲ್ಲಿ ಸೇಬಿನ ಗುಣಮಟ್ಟ ಹಾಗೂ ಅದನ್ನು ಹೇಗೆ ಬೆಳೆಸಲಾಗಿದೆ ಎಂಬುದರ ಕುರಿತು ಮಾಹಿತಿ ಇದೆಯಂತೆ. ಕೆಲವು ಸ್ಟಿಕ್ಕರ್ ಗಳ ಮೇಲೆ ನಾಲ್ಕು ಸಂಖ್ಯೆಯ ನಂಬರ್ ಇರುತ್ತದೆ. ಅಂದರೆ ಅವು 4026 ಅಥವಾ 4987 ನಂತಹ ಸಂಖ್ಯೆ ಇರುತ್ತದೆ. ಇದು ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ಬಳಸಿ ಬೆಳೆಸಲಾಗಿದೆ ಎಂದು ಸೂಚಿಸುತ್ತದೆಯಂತೆ. ಈ ಹಣ್ಣುಗಳ ಮೇಲೆ ಕೀಟನಾಶಕವನ್ನು ಹೆಚ್ಚಾಗಿ ಬಳಸಿರುತ್ತಾರಂತೆ. ಈ ಹಣ್ಣು ಅಗ್ಗವಾಗಿರುತ್ತದೆ.

ಕೆಲವು ಹಣ್ಣುಗಳ ಮೇಲೆ ಐದು ಅಂಕಿಯ ಸಂಖ್ಯೆಯನ್ನು ಬರೆಯಲಾಗುತ್ತದೆ. ಅಂದರೆ 84131 ಅಥವಾ 86532 ಹೀಗೆ 8ರಿಂದ ಪ್ರಾರಂಭವಾಗುವ ನಂಬರ್ ಇರುತ್ತದೆ. ಈ ಹಣ್ಣುಗಳು ನೈಸರ್ಗಿಕವಲ್ಲ. ಇವುಗಳನ್ನು ರಾಸಾಯನಿಕಗಳಿಂದ ಸಂಸ್ಕರಿಸಿದ್ದು, ಇದು ತುಂಬಾ ದುಬಾರಿಯಾಗಿರುತ್ತದೆ.

ಕೆಲವು ಹಣ್ಣುಗಳಲ್ಲಿ 9ರಿಂದ ಪ್ರಾರಂಭವಾಗುವ ಐದು ಅಂಕಿಯ ನಂಬರ್ ಇರುತ್ತದೆ. ಅದು 93435 ಇರುತ್ತದೆ. ಈ ಹಣ್ಣು ಸಾವಯವವಾಗಿ ಬೆಳೆದಿರುತ್ತದೆ. ಇದಕ್ಕೆ ಕೀಟನಾಶಕ ಮತ್ತು ರಾಸಾಯನಿಕ ಬಳಸಿಲ್ಲ ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ಬೆಲೆ ಜಾಸ್ತಿಯಾದರೂ ಇದು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

ಹೀಗೆ ಒಂದೊಂದು ಸ್ಟಿಕ್ಕರ್‌ಗೂ ಬೇರೆ ಬೇರೆ ಅರ್ಥವಿದ್ದರೂ ಕೂಡ ಕೆಲವೊಮ್ಮೆ ನಕಲಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಾರೆ. ಹಾಗಾಗಿ ಯಾವುದೇ ಹಣ್ಣುಗಳನ್ನು ಖರೀದಿಸುವಾಗ ತುಂಬಾ ಜಾಗರೂಕರಾಗಿರಿ.

Continue Reading

Latest

Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Health Tips: ಒಂದೊಂದು ಋತುವಿನಲ್ಲೂ ಒಂದೊಂದು ರೀತಿಯ ಹವಾಮಾನವಿರುತ್ತದೆ. ಆಯಾಯ ಕಾಲಕ್ಕೆ ತಕ್ಕ ಹಾಗೇ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಬೇಸಿಗೆಯಲ್ಲಿ ಸೇವಿಸುವ ತಂಪು ಪಾನೀಯವನ್ನು ಮಳೆಗಾಲದಲ್ಲಿ ಸೇವಿಸಿದರೆ ಕಂಬಳಿ ಹೊದ್ದು ಮಲಗಬೇಕಾಗುತ್ತದೆ, ಹಾಗಾಗಿ ಆಯಾಯ ಕಾಲಕ್ಕೆ ತಕ್ಕ ಹಾಗೇ ಇರಬೇಕಾಗುತ್ತದೆ. ಮಳೆಗಾಲ ಕಾಲಿಟ್ಟಾಗಿದೆ. ಸೊಳ್ಳೆಗಳ ಕಾಟವೂ ಶುರುವಾಗಿದೆ. ಧೋ ಎಂದು ಸುರಿಯುವ ಮಳೆಯನ್ನು ನೋಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

VISTARANEWS.COM


on

Health Tips
Koo

ಬೆಂಗಳೂರು: ಬೇಸಿಗೆ ಕಾಲದ ನಂತರ ಬರುವ ಮಳೆಗಾಲ ನಿಮ್ಮನ್ನು ಶಾಖದಿಂದ ಮುಕ್ತಗೊಳಿಸಿ ತಂಪನ್ನು ನೀಡುತ್ತದೆ ನಿಜ. ಆದರೆ ಈ ಸಮಯದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳ ಹಾವಳಿ ಹೆಚ್ಚಾಗಿರುತ್ತದೆ. ಹಾಗಾಗಿ ಅನೇಕ ಕಾಯಿಲೆಗಳು ಕೂಡ ಹರಡುತ್ತದೆ. ಇದರಿಂದ ನೀವು ಬಹಳ ಬೇಗನೆ ಅನಾರೋಗ್ಯಕ್ಕೊಳಗಾಗುತ್ತೀರಿ. ಹಾಗಾಗಿ ಮಳೆಗಾಲದಲ್ಲಿ ನೀವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ನೀವು ಫಿಟ್ ಆಗಿ ಆರೋಗ್ಯ (Health Tips) ವಾಗಿರಬಹುದು.

ಶುದ್ಧ ಮತ್ತು ಕುದಿಸಿದ ನೀರನ್ನು ಕುಡಿಯಿರಿ

ಮಳೆಗಾಲದಲ್ಲಿ ನೀರು ತುಂಬಾ ಕಲುಷಿತವಾಗಿರುತ್ತದೆ. ಹಾಗಾಗಿ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ನೀರನ್ನು ನೀವು ಹಾಗೇ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಶುದ್ಧವಾದ ನೀರನ್ನು ಬಳಸಿ ಮತ್ತು ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಹಾಗೇ ಹೊರಗಡೆ ಹೋದಾಗ ಅಲ್ಲಲ್ಲಿ ನೀರನ್ನು ಕುಡಿಯುವ ಬದಲು ಮನೆಯ ನೀರನ್ನು ತೆಗೆದುಕೊಂಡು ಹೋಗಿ ಬಳಸಿ.

Health Tips

ಬೀದಿ ಬದಿಯ ಆಹಾರ ಮತ್ತು ಜಂಕ್ ಫುಡ್ ಸೇವನೆಯನ್ನು ತಪ್ಪಿಸಿ

ಹೆಚ್ಚಿನ ಜನರು ಬೀದಿಗಳಲ್ಲಿ ಮಾರಾಟ ಮಾಡುತ್ತಿರುವ ಆಹಾರವನ್ನು ಸೇವಿಸುತ್ತಾರೆ. ಆದರೆ ಬೀದಿಗಳಲ್ಲಿ ಆಹಾರಗಳನ್ನು ತೆರೆದಿಡುತ್ತಾರೆ. ಹಾಗಾಗಿ ಅದರಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತದೆ. ಅದನ್ನು ಸೇವಿಸಿದರೆ ನಿಮ್ಮ ಆರೋಗ್ಯ ಕೆಡುತ್ತದೆ. ಹಾಗಾಗಿ ಅವುಗಳನ್ನು ತಿನ್ನುವುದನ್ನು ತಪ್ಪಿಸಿ.

ಮನೆಯ ಸುತ್ತಮುತ್ತ ನೀರು ನಿಲ್ಲುವುದನ್ನು ತಪ್ಪಿಸಿ

ಮಳೆಗಾಲದಲ್ಲಿ ಮನೆಯ ಸುತ್ತಮುತ್ತಲಿರುವ ಹೊಂಡಗಳು, ಮಡಿಕೆಗಳು, ಪ್ಲಾಸ್ಟಿಕ್ ಡಬ್ಬಗಳು, ಬಾಟಲಿಗಳು ಮುಂತಾದವುಗಳಲ್ಲಿ ನೀರು ಸಂಗ್ರಹವಾಗುತ್ತದೆ. ಹಾಗಾಗಿ ಇಂತಹ ನೀರಿನಲ್ಲಿ ಸೊಳ್ಳೆಗಳು ಮೊಟ್ಟಯಿಟ್ಟು ಮರಿ ಮಾಡುತ್ತವೆ. ಈ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಹಲವಾರು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಈ ನೀರು ಶೇಖರಣೆಯಾಗುವುದನ್ನು ತಪ್ಪಿಸಿ.

Health Tips

ಹಣ್ಣುಗಳು-ತರಕಾರಿಗಳನ್ನು ತೊಳೆದು ಬಳಸಿ

ಮಾರುಕಟ್ಟೆಯಿಂದ ತಂದ ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈ ಮೇಲೆ ಬ್ಯಾಕ್ಟೀರಿಯಾಗಳು ಇರುತ್ತವೆ. ಇದನ್ನು ಹಾಗೇ ಸೇವಿಸಿದರೆ ಹೊಟ್ಟೆ ಕೆಡುತ್ತದೆ. ಹಾಗಾಗಿ ಅವುಗಳನ್ನು ಉಪ್ಪನ್ನು ಬೆರೆಸಿದ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಿ. ಮತ್ತು ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಹಸಿ ತರಕಾರಿ ತಿನ್ನುವುದನ್ನು ತಪ್ಪಿಸಿ.

Health Tips

ಸುಖಕರವಾಗಿ ನಿದ್ರೆ ಮಾಡಿ

ನಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ತಡವಾಗಿ ನಿದ್ರೆ ಮಾಡುವುದು , ಕಡಿಮೆ ನಿದ್ರೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಜ್ವರ, ಶೀತದಂತಹ ಸಾಮಾನ್ಯ ಕಾಯಿಲೆಯಿಂದ ಬಳಲುತ್ತೀರಿ. ಹಾಗಾಗಿ ದಿನದಲ್ಲಿ 8 ಗಂಟೆಗಳ ಕಾಲ ನಿದ್ರಿಸಿ.

Health Tips

ನಿಯಮಿತವಾದ ವ್ಯಾಯಾಮ

ಮಳೆಗಾಲದಲ್ಲಿ ಹೊರಗಡೆ ಮಳೆ ಸುರಿಯುವುದರಿಂದ ವಾಕಿಂಗ್, ಸೈಕ್ಲಿಂಗ್, ಯೋಗ ಮುಂತಾದ ವ್ಯಾಯಾಮಗಳನ್ನು ಮಾಡಲು ಅಡ್ಡಿಯಾಗುತ್ತದೆ. ಆದರೆ ನೀವು ಪ್ರತಿದಿನದ ವ್ಯಾಯಾಮವನ್ನು ತಪ್ಪಿಸಬೇಡಿ. ಮನೆಯೊಳಗೆ ನಿಮಗೆ ಸಾಧ್ಯವಾದಷ್ಟು ವ್ಯಾಯಾಮ ಮಾಡಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ

ನೀವು ಹೊರಗಡೆಯಿಂದ ಬಂದಾಗ ಕೈಕಾಲುಗಳನ್ನು ಸ್ವಚ್ಛ ಗೊಳಿಸುವುದನ್ನು ಮರೆಯಬೇಡಿ. ಹಾಗೇ ಯಾವುದೇ ಆಹಾರವನ್ನು ಸೇವಿಸುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಇದು ನಿಮ್ಮನ್ನು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ.

ಆಗಾಗ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ

ಮಳೆಗಾಲದಲ್ಲಿ ಹೊರಗಡೆ ಮಳೆ ಧಾರಕಾರವಾಗಿ ಸುರಿಯುತ್ತಿರುತ್ತದೆ. ಹಾಗಾಗಿ ನೀವು ಹೊರಗಡೆ ಹೋಗುವಾಗ ಛತ್ರಿ, ರೈನ್ ಕೋಟ್ ಧರಿಸುವುದನ್ನು ಮರೆಯಬೇಡಿ. ಇಲ್ಲವಾದರೆ ನೀವು ಮಳೆಯಲ್ಲಿ ನೆನೆಯಬೇಕಾಗುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೊಳಗಾಗಬಹುದು.

ಇದನ್ನೂ ಓದಿ: Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

ಹಾಗಾಗಿ ಮಳೆಗಾಲದಲ್ಲಿ ನೀವು ಆರೋಗ್ಯವಾಗಿರಲು ಪ್ರಯತ್ನಿಸಿ. ಅದಕ್ಕಾಗಿ ಈ ಸಲಹೆಗಳನ್ನು ತಪ್ಪದೇ ಪಾಲಿಸಿ. ಇವು ನಿಮ್ಮನ್ನು ರೋಗಗಳಿಂದ ಕಾಪಾಡಲು ಸಹಾಯ ಮಾಡುತ್ತವೆ.

Continue Reading

ಆರೋಗ್ಯ

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

ರಾತ್ರಿಯಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆ (Morning Nutrition) ಎದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಒಂದು ಆಮ್ಲೇಟ್‌ ಸಾಕೇ? ಜೊತೆಗೆರಡು ಬ್ರೆಡ್‌…? ಅಥವಾ ಎರಡು ದೋಸೆ? ಹೀಗೆ ಗೊಂದಲಗಳು ಬಹಳಷ್ಟು ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Morning Nutrition
Koo

ಹೆಚ್ಚಿನ ಜನಕ್ಕೆ ಬೆಳಗಿನ ತಿಂಡಿಯ ಮಹತ್ವವೇ ತಿಳಿದಿರುವುದಿಲ್ಲ. ಈ ಮಾತನ್ನು ಹೇಳುವುದಕ್ಕೂ ಕಾರಣವಿದೆ. ಬೆಳಗ್ಗೆ (Morning Nutrition) ತಿಂಡಿಯನ್ನು ಎದ್ದ ನಾಲ್ಕು ತಾಸುಗಳ ನಂತರ ತಿನ್ನುವುದು, ಕೆಲವೊಮ್ಮೆ ತಿಂಡಿಯನ್ನೇ ತಿನ್ನದಿರುವುದು, ದಿನದ ಪ್ರಾರಂಭಕ್ಕೆ ಸೂಕ್ತ ಅಲ್ಲದ್ದನ್ನು ತಿನ್ನುವುದು, ಕೇವಲ ಕಾಫಿ/ಟೀ ಕುಡಿದು ಮಧ್ಯಾಹ್ನ ಊಟ ಮಾಡುವುದು- ಇಂಥ ಉದಾಹರಣೆಗಳು ಕಡಿಮೆಯೇನಿಲ್ಲ. ಆದರೆ ಬೆಳಗಿನ ತಿಂಡಿಯನ್ನು ದಿನದ ಅತ್ಯಂತ ಆರೋಗ್ಯಕರ ಊಟವನ್ನಾಗಿ ಮಾಡುವುದು ಮಹತ್ವದ್ದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ರಾತ್ರಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಅಧಿಕ ಸತ್ವಗಳನ್ನು ಹೊಂದಿದ ಆಹಾರವನ್ನೇ ತಿನ್ನಬೇಕು ಎಂದಾದರೆ, ಏಕೆ ಹಾಗೆ? ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಸುವುದು ಸಾಧ್ಯವಿಲ್ಲವೇ? ಇಂತಹ ಹಲವಾರು ಪ್ರಶ್ನೆಗಳು ಮನದಲ್ಲಿದ್ದರೆ, ಅವಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ಬೆಳಗಿನ ತಿಂಡಿಗೆ ಆರೋಗ್ಯಕರ ಕೊಬ್ಬುಗಳು, ಸಂಕೀರ್ಣ ಪಿಷ್ಟ ಮತ್ತು ಪ್ರೊಟೀನ್‌ ಇರುವಂಥ ಆಹಾರ ಅಗತ್ಯ. ಈ ಸತ್ವಗಳ ಮಿಶ್ರಣವು ದೇಹವು ದೀರ್ಘಕಾಲದವರೆಗೆ ಬಳಲದಂತೆ ನೋಡಿಕೊಳ್ಳುತ್ತದೆ. ದಿನವಿಡೀ ಅಗತ್ಯವಾದ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ ಮತ್ತು ಆಹಾರ ತಿಂದ ತೃಪ್ತಿಯನ್ನು ಒದಗಿಸುತ್ತದೆ. ಜೊತೆಗೆ, ಬೇಗ ಹಸಿವಾಗುವುದನ್ನು ತಡೆಯುತ್ತದೆ. ಇಂಥ ಆಹಾರವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಬೇಕಾದ ಗ್ರಾಸವನ್ನು ಒದಗಿಸಿಕೊಡುತ್ತದೆ. ಈ ಬಗ್ಗೆ ವಿವರಣೆ ಇಲ್ಲಿದೆ.

South Indian breakfast

ಸಂಕೀರ್ಣ ಪಿಷ್ಟಗಳು

ನಮ್ಮೆಲ್ಲ ಚಟುವಟಿಕೆಗಳನ್ನು ಮಾಡುವುದಕ್ಕೆ ನಮಗೆ ಪಿಷ್ಟ ಅಥವಾ ಕಾರ್ಬೊಹೈಡ್ರೇಟ್‌ಗಳು ಬೇಕು. ಆದರೆ ಮೈದಾ ಅಥವಾ ಸಂಸ್ಕರಿತ ತಿನಿಸುಗಳಿಂದ ಬರುವಂಥ ಸರಳ ಪಿಷ್ಟವಲ್ಲ, ದೀರ್ಘ ಕಾಲದವರೆಗೆ ಶಕ್ತಿಯನ್ನು ಉಣಿಸುವಂಥ ಸಂಕೀರ್ಣವಾದ ಪಿಷ್ಟಗಳು ಬೇಕು. ಇದನ್ನು ಇಡೀ ಧಾನ್ಯಗಳು, ಓಟ್ಸ್‌, ಸಿರಿ ಧಾನ್ಯಗಳು, ಕಿನೊವಾ, ರಾಗಿ ಮುಂತಾದ ನಾರುಭರಿತ ಅಂದರೆ ತೌಡು ಸಹಿತವಾದ ಧಾನ್ಯಗಳಿಂದ ಪಡೆಯಬಹುದು. ಈ ಧಾನ್ಯಗಳಿಂದ ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿ, ಚಿತ್ರಾನ್ನ… ನಿಮಗೆ ಇಷ್ಟವಾದ ಯಾವುದನ್ನಾದರೂ ಮಾಡಿ.

ಪ್ರೊಟೀನ್‌

ಬೆಳಗಿನ ತಿಂಡಿಗೆ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಗತ್ಯ. ಇದರಿಂದ ದೇಹದ ರಿಪೇರಿ ಕೆಲಸ, ಹಾರ್ಮೋನುಗಳ ಕ್ಷಮತೆ, ಕಿಣ್ವಗಳ ಉತ್ಪಾದನೆ ಮುಂತಾದ ಮಹತ್ವದ ಕೆಲಸಗಳೆಲ್ಲವೂ ಮಟ್ಟಸವಾಗಿ ಇರುತ್ತದೆ. ಇದಕ್ಕಾಗಿ ಹಾಲು, ಮೊಸರು, ಗ್ರೀಕ್‌ ಯೋಗರ್ಟ್‌, ಪನೀರ್‌, ತೋಫು, ಮೊಟ್ಟೆ, ಕಾಳುಗಳು, ಸೋಯಾ, ಕಾಯಿ ಮತ್ತು ಬೀಜಗಳು ಬೆಳಗಿನ ಆಹಾರದಲ್ಲಿ ಇರಬೇಕು. ಆಮ್ಲೆಟ್‌ ಜೊತೆಗೆ ಇಡೀಧಾನ್ಯದ ಬ್ರೆಡ್‌ ಅಥವಾ ಚಪಾತಿಯಂಥವು ಬೇಕು ಎನ್ನುವುದು ಸ್ಪಷ್ಟವಾಗಿದೆಯಲ್ಲವೇ?

ಇದನ್ನೂ ಓದಿ: World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

ಆರೋಗ್ಯಕರ ಕೊಬ್ಬು

ಇದು ಸಹ ಅತಿ ಮುಖ್ಯವಾದ ಸತ್ವ. ದೇಹದ ತೂಕವನ್ನು ನಿಯಂತ್ರಿಸಲು, ಹೆಚ್ಚಿನ ಕೊಬ್ಬು ದೇಹದಲ್ಲಿ ಜಮೆಯಾಗದಂತೆ ಕಾಯ್ದುಕೊಳ್ಳಲು ಇದು ಅಗತ್ಯ. ದೇಹದ ಅಂಗಾಂಗಗಳೆಲ್ಲ ಸರಿಯಾಗಿ ಕೆಲಸ ಮಾಡಲು ಈ ಕೊಬ್ಬು ಬೇಕೇಬೇಕು. ಇದಕ್ಕಾಗಿ ಅವಕಾಡೊ, ಕಾಯಿ-ಬೀಜಗಳು, ತುಪ್ಪ, ಕೊಬ್ಬರಿ ಎಣ್ಣೆಯಂಥ ಆರೋಗ್ಯಕರ ತೈಲಗಳು, ಪೀನಟ್‌ಬಟರ್‌ ಅಥವಾ ಇನ್ನಾವುದಾದರೂ ಬೀಜಗಳ ತುಪ್ಪ- ಇವೆಲ್ಲ ಶರೀರಕ್ಕೆ ಬೇಕು. ಮೆದುಳಿನ ಆರೋಗ್ಯ ರಕ್ಷಣೆಗಂತೂ ಇವು ತೀರಾ ಅಗತ್ಯವಾದವು. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಇಡೀ ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾಗಿದ್ದು.

drinking water

ನೀರು

ಇದಿಷ್ಟರ ಜೊತೆಗೆ ದಿನಕ್ಕೆ ಮೂರು ಲೀ. ನೀರು ಕುಡಿಯುವುದು ಬಹುಮುಖ್ಯ. ರಾತ್ರಿಡೀ ನೀರಿಲ್ಲದೆ ಇರುವಂಥ ದೇಹಕ್ಕೆ ಬೆಳಗಿನ ಹೊತ್ತು ಒಂದೆರಡು ಗ್ಲಾಸ್‌ ನೀರು ಕುಡಿಸಿ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಸಕ್ಕರೆ ರಹಿತವಾದ ಯಾವುದೇ ರಸಗಳನ್ನು ಸೇರಿಸಿಕೊಳ್ಳಬಹುದು. ಜೊತೆಗೆ, ದಿನವಿಡೀ ಹರ್ಬಲ್‌ ಚಹಾಗಳು, ಎಳನೀರು, ರಸಭರಿತ ಹಣ್ಣು-ತರಕಾರಿಗಳು, ಮಜ್ಜಿಗೆ- ಇಂಥವೆಲ್ಲ ದಿನದ ಮೂರು ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಲು ನೆರವಾಗುತ್ತವೆ.

Continue Reading

ಆರೋಗ್ಯ

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

ಗರ್ಭಿಣಿಯರು ಕೆಲಸ ಮಾಡುತ್ತಿದ್ದರೆ ಮೈ ಹಗುರ ಇರುತ್ತದೆಂಬುದು ಪರಂಪರಾಗತ ತಿಳಿವಳಿಕೆ. ಇದಕ್ಕೆ ಅನುಗುಣವಾಗಿ, ಗರ್ಭಾವಸ್ಥೆಯಲ್ಲಿ ಕೆಲವು ಯೋಗಾಸನ ಮತ್ತು ಉಸಿರಾಟದ ತಂತ್ರಗಳನ್ನು (International Yoga Day 2024) ಮಾಡಬಹುದು. ಪ್ರಿನೇಟಲ್‌ ಯೋಗದ ಬಗ್ಗೆ ಕುತೂಹಲವಿದ್ದರೆ, ಇಲ್ಲಿದೆ ಮಾಹಿತಿ.

VISTARANEWS.COM


on

International Yoga Day 2024
Koo

ಮಗುವಿನ ನಿರೀಕ್ಷೆಯಲ್ಲಿದ್ದೀರೇ? ಅಭಿನಂದನೆಗಳು! ಕೌತುಕ, ತಳಮಳ, ಹೆದರಿಕೆ, ನಿರೀಕ್ಷೆ, ಆಯಾಸ- ಏನೇನೆಲ್ಲ ಆಗುತ್ತಿರಬೇಕಲ್ಲವೇ ಈಗ. ಜೀವದೊಳಗೆ ಜೀವವಿರುವ ಅನುಭವವೇ ವರ್ಣನೆಗೆ ನಿಲುಕದ್ದು. ಈ ನವಮಾಸಗಳು ಮಹಿಳೆಯರ ಬದುಕಿನ ಮಹತ್ವದ ಹಂತಗಳು. ಇವು ಆಯಾ ಮಹಿಳೆಯ ಬದುಕಿಗಷ್ಟೇ ಅಲ್ಲ, ಇಡೀ ಕುಟುಂಬಕ್ಕೇ ನಿರೀಕ್ಷೆಯ ಮಾಸಗಳು. ಈ ದಿನಗಳಲ್ಲಿ ಆಕೆಯ ಆರೋಗ್ಯ ಸ್ಥಿರವಾಗಿ ಇರಬೇಡವೇ? ಆರೋಗ್ಯವೆಂದರೆ ದೇಹಾರೋಗ್ಯ ಮಾತ್ರವೇ ಅಲ್ಲ, ಮಾನಸಿಕ, ಭಾವನಾತ್ಮಕ ಸ್ಥಿತಿಗಳೂ ಸುದೃಢವಾಗಿ ಇರಬೇಕು. ಈ ಹಂತದಲ್ಲಿ ನೆರವಾಗುವುದು ಗರ್ಭಿಣಿಯರಿಗಾಗಿಯೇ ಇರುವ ಪ್ರೀನೇಟಲ್‌ ಯೋಗ. ಮೊದಲಿಗೆ ಯೋಗ ಮಾಡುವುದು ಆಯಾ ಗರ್ಭಿಣಿಯ ಆರೋಗ್ಯಕ್ಕೆ ಸೂಕ್ತವೇ ಎಂಬುದನ್ನು ವೈದ್ಯರಲ್ಲಿ ದೃಢಪಡಿಸಿಕೊಳ್ಳಬೇಕು. ಆನಂತರ ಅನುಭವಿ ಯೋಗ (International Yoga Day 2024) ಶಿಕ್ಷಕರ ಮಾರ್ಗದರ್ಶನ ಪಡೆಯುವುದು ಸರಿಯಾದ ಮಾರ್ಗ.

International Yoga Day 2024

ಏನು ಪ್ರಯೋಜನ?

  • ಗರ್ಭಿಣಿಯ ಆರೋಗ್ಯ ಸ್ಥಿರವಾಗಿದೆ ಎಂದಾದರೆ, ಒಂದಿಲ್ಲೊಂದು ವ್ಯಾಯಾಮ ಈ ದಿನಗಳಲ್ಲಿ ಬೇಕು. ಅದರಲ್ಲೂ ಯೋಗವನ್ನೇ ಅಭ್ಯಾಸ ಮಾಡುವುದರಿಂದ ಹಲವು ರೀತಿಯ ಲಾಭಗಳಿವೆ.
  • ಮೊದಲಿಗೆ, ಶರೀರ ಬಿಗಿಯದಂತೆ ಹಗುರವಾಗಿ ಇರಿಸಿಕೊಳ್ಳಬಹುದು. ಹೆರಿಗೆಯ ಸಂದರ್ಭದಲ್ಲಿ ಇದು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
  • ಪ್ರಾಣಾಯಾಮ, ಧ್ಯಾನದ ಜೊತೆಗೆ ಯೋಗವನ್ನು ಅಭ್ಯಾಸ ಮಾಡಿದಾಗ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು, ಉದ್ವೇಗವನ್ನು ದೂರ ಮಾಡಲು ಸಾಧ್ಯ. ಅದರಲ್ಲೂ ದೀರ್ಘ ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡಿದರೆ, ಹೆರಿಗೆಯ ಸಮಯದಲ್ಲಿ ಅನುಕೂಲ ಹೆಚ್ಚು.
  • ಯೋಗಾಭ್ಯಾಸದಿಂದ ಬೆಳಗಿನ ತಳಮಳಗಳು, ಕಾಲಿನ ಸೆಳೆತ, ಪಾದಗಳು ಊದಿಕೊಳ್ಳುವುದು, ಕೀಲಿನಲ್ಲಿ ನೋವು, ಮಲಬದ್ಧತೆ ಮುಂತಾದ ಆರೋಗ್ಯದ ಕಿರಿಕಿರಗಳನ್ನು ನಿಭಾಯಿಸುವುದು ಕಷ್ಟವಾಗುವುದಿಲ್ಲ
  • ಗರ್ಭಾವಸ್ಥೆಯಲ್ಲಿ ಯೋಗಾಭ್ಯಾಸ ಮಾಡುವುದರಿಂದ ಹೆರಿಗೆಯ ನಂತರ ಶರೀರ ಬೇಗ ಮೊದಲಿನ ಸ್ಥಿತಿಗೆ ಬರುತ್ತದೆ.

ಯಾವ ಆಸನಗಳನ್ನು ಮಾಡಬಹುದು?

ಮೊದಲಿನ ಮೂರು ತಿಂಗಳು ನಿಂತು ಮಾಡುವ ಆಸನಗಳು ಬೇಕಾಗುತ್ತವೆ. ಇದರಿಂದ ಕಾಲುಗಳ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ ಯಾವುದೇ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಭಂಗಿಗಳು ಗರ್ಭಿಣಿಯರಿಗೆ ಸೂಕ್ತವಲ್ಲ. ತಿರುಗುವ ಆಸನಗಳು ಶರೀರದ ಮೇಲಿನ ಭಾಗಗಳಿಗೇ ಹೊರತು ಕಿಬ್ಬೊಟ್ಟೆ ಮತ್ತು ಕಟಿಯ ಭಾಗಕ್ಕಲ್ಲ. ತಲೆಕೆಳಗು ಮಾಡುವ ಆಸನಗಳು ಸಹ ಗರ್ಭಿಣಿಯರಿಗೆ ಸಲ್ಲದು.

Beautiful pregnant woman doing prenatal yoga on nature outdoors.

ಯಾವುದು ಸೂಕ್ತ?

ವಜ್ರಾಸನ, ತಾಡಾಸನ, ಕೋನಾಸನ, ಬದ್ಧಕೋನಾಸನ, ವೀರಭದ್ರಾಸನ, ಮಾರ್ಜರಿಯಾಸನ, ಶವಾಸನ, ಯೋಗನಿದ್ರೆ ಮುಂತಾದವು ಗರ್ಭಿಣಿಯರಿಗೆ ಹಿತವಾದ ಭಂಗಿಗಳು.

ಯಾವುದು ಬೇಡ?

ನೌಕಾಸನ, ಚಕ್ರಾಸನ, ಅರ್ಧಮತ್ಸೇಂದ್ರಾನಸ, ಭುಜಂಗಾಸನ, ವಿಪರೀತ ಶಲಭಾಸನ, ಹಲಾಸನ, ಧನುರಾಸನ ಮುಂತಾದ ಕಟಿ, ಹೊಟ್ಟೆ, ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಯಾವ ಆಸನಗಳೂ ಸೂಕ್ತವಲ್ಲ.

Pranayama Yoga Poses For Bright And Glowing Skin

ಪ್ರಾಣಾಯಾಮ

ದೀರ್ಘ ಉಸಿರಾಟದಿಂದಲೂ ಬಹಳಷ್ಟು ಪ್ರಯೋಜನವಿದೆ ಭಾವೀ ತಾಯಂದಿರಿಗೆ. ಕಡೆಯ ಮೂರು ತಿಂಗಳುಗಳಲ್ಲಿ ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಯೋಜನ ಕಾಣಬಹುದು. ಆದರೆ ಭಸ್ತ್ರಿಕಾ, ಕಪಾಲಭಾತಿಯಂಥ ಉಸಿರಾಟದ ಕ್ರಮಗಳನ್ನು ಈ ದಿನಗಳಲ್ಲಿ ಮಾಡದಿದ್ದರೆ ಒಳಿತು. ಬದಲಿಗೆ, ನಾಡಿಶೋಧನ ಮತ್ತು ಭ್ರಾಮರಿಯಂಥ ಪ್ರಾಣಾಯಾಮ, ಧ್ಯಾನ ಮುಂತಾದವು ಗರ್ಭಿಣಿಯರಿಗೆ ಸೂಕ್ತವಾದದ್ದು.

Pregnant young women doing prenatal yoga

ಎಚ್ಚರಿಕೆ ಬೇಕು

  • ಪ್ರೀನೇಟಲ್‌ ಯೋಗವನ್ನು ಅನುಭವಿಯಾದ ಮಾರ್ಗದರ್ಶಕರ ನೆರವಿನಿಂದಲೇ ಮಾಡುವುದು ಸರಿಯಾದ ಕ್ರಮ. ಜೊತೆಗೆ ಕೆಲವು ಎಚ್ಚರಿಕೆಗಳೂ ಬೇಕಾಗುತ್ತವೆ.
  • ಮೊದಲ ಮೂರು ತಿಂಗಳು ನಿಂತು ಮಾಡುವ ಆಸನಗಳು ಸೂಕ್ತ. ಇದರಿಂದ ಕಾಲುಗಳನ್ನು ಬಲಪಡಿಸಬಹುದು, ರಕ್ತ ಪರಿಚಲನೆ ಹೆಚ್ಚಿಸಬಹುದು ಮತ್ತು ಕಾಲು ಸೆಳೆತ ಕಡಿಮೆಯಾಗಬಹುದು
  • ಗರ್ಭಾವಸ್ಥೆಯ ನಡುವಿನ ಮೂರು ತಿಂಗಳಲ್ಲಿ ಆಯಾಸವಾಗದೆ ಎಷ್ಟು ಆಸನಗಳು ಸಾಧ್ಯವೋ ಅಷ್ಟೇ ಮಾಡಿ. ಆಸನಗಳಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಬೇಡಿ, ಬೇಗ ಮುಗಿಸಿ.
  • ಕಡೆಯ ಮೂರು ತಿಂಗಳಲ್ಲಿ ಆಸನಗಳಿಗಿಂತ ಧ್ಯಾನ ಮತ್ತು ಪ್ರಾಣಾಯಾಮದತ್ತ ಗಮನ ನೀಡಿ. ಉಸಿರಾಟವನ್ನು ಬಲಪಡಿಸಿಕೊಂಡು, ದೇಹಕ್ಕೆ ಹೆಚ್ಚಿನ ಆಮ್ಲಜನಕ ಒದಗಿಸುವುದು ಕಡೆಯ ದಿನಗಳಲ್ಲಿ ಅಗತ್ಯವಾಗುತ್ತದೆ.

ಇದನ್ನೂ ಓದಿ: International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

Continue Reading
Advertisement
Drowns in Lake
ಕರ್ನಾಟಕ12 mins ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ47 mins ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Amit Shah
ದೇಶ48 mins ago

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Karnataka Weather Forecast
ಮಳೆ1 hour ago

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Actor Darshan
ಪ್ರಮುಖ ಸುದ್ದಿ1 hour ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Lok Sabha Speaker
ದೇಶ2 hours ago

Lok Sabha Speaker: ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಟಿಡಿಪಿಗೆ ಬೆಂಬಲ ಎಂದ ಇಂಡಿಯಾ ಒಕ್ಕೂಟ; ಯಾರಾಗ್ತಾರೆ ಸ್ಪೀಕರ್?

Renukaswamy murder case The location of the accused is complete
ಸಿನಿಮಾ2 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Petrol Diesel Price
ಕರ್ನಾಟಕ3 hours ago

Petrol Diesel Price: ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ತೈಲ ದರ ಏರಿಸಿದ ಕಾಂಗ್ರೆಸ್ ಸರ್ಕಾರ: ಆರ್‌. ಅಶೋಕ್‌ ಕಿಡಿ

Renuka swamy murder
ಚಿತ್ರದುರ್ಗ3 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Road Accident
ಕರ್ನಾಟಕ3 hours ago

Road Accident: ಸುಂಟಿಕೊಪ್ಪ‌ ಬಳಿ ಖಾಸಗಿ ಬಸ್- ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ2 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ8 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌