Sweating Sickness: ಏನಿದು, ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಬೆವರುವ ಕಾಯಿಲೆ? - Vistara News

ಆರೋಗ್ಯ

Sweating Sickness: ಏನಿದು, ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಬೆವರುವ ಕಾಯಿಲೆ?

ಟ್ಯೂಡರ್‌ ಕಾಯಿಲೆಗೆ ಪ್ರಮುಖ ಕಾರಣ ಗೌಟ್‌ ಎಂಬ ಇನ್ನೊಂದು ಸಮಸ್ಯೆ. ಗೌಟ್‌ ಒಂದು ಬಗೆಯ ಸಂಧಿವಾತದ ಸಮಸ್ಯೆಯೇ ಆದರೂ ಇದು ಬರಲು ಕಾರಣ ಬೇರೆ. ಈ ಬಗ್ಗೆ (Sweating Sickness) ಇಲ್ಲಿದೆ ಮಾಹಿತಿ.

VISTARANEWS.COM


on

Sweating Sickness
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆವರುವ ಕಾಯಿಲೆ (Sweating Sickness) ಎಂಬ ಹೆಸರಿನಿಂದಲೂ ಕರೆಯಲ್ಪಡುವ ಟ್ಯೂಡರ್‌ ಕಾಯಿಲೆ ಯುವ ಜನರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಈ ಕಾಯಿಲೆಯಿಂದ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚು. ಹಾಗಾದರೆ, ಈ ಟ್ಯೂಡರ್‌ ಎಂದರೆ ಏನು ಎಂಬ ಪ್ರಶ್ನೆ ನಿಮಗೀಗ ಬಂದಿರಬಹುದು. ಟ್ಯೂಡರ್‌ ಕಾಯಿಲೆಗೆ ಪ್ರಮುಖ ಕಾರಣ ಗೌಟ್‌ ಎಂಬ ಇನ್ನೊಂದು ಸಮಸ್ಯೆ. ಗೌಟ್‌ ಒಂದು ಬಗೆಯ ಸಂಧಿವಾತದ ಸಮಸ್ಯೆಯೇ ಆದರೂ ಇದು ಬರಲು ಕಾರಣ ಬೇರೆ. ಯೂರಿಕ್‌ ಆಸಿಡ್‌ ದೇಹದಲ್ಲಿ ಹೆಚ್ಚಾದಾಗ ಹಾಗೂ ಅದು ದೇಹದ ಕೆಲವು ಭಾಗಗಳಲ್ಲಿ ಶೇಖರಣೆಯಾಗಲು ಆರಂಭವಾದಾಗ ಸಂದುಗಳಲ್ಲಿ ನೋವು, ಕೈಕಾಲು ಸೆಳೆತ, ಅತೀವ ನೋವು ಕಾಣಿಸಿಕೊಳ್ಳುತ್ತದೆ. ಗಂಟುಗಳಲ್ಲಿ ಯೂರಿಕ್‌ ಆಸಿಡ್‌ ಶೇಖರಣೆಯಾದಾಗ ಈ ನೋವು ಉಲ್ಬಣಿಸುತ್ತದೆ. ಗಂಟುಗಳು ಊದಿಕೊಳ್ಳುವುದು, ಕೆಂಪಗಾಗುವುದು ಇತ್ಯಾದಿಗಳು ಗೌಟ್‌ನ ಆರಂಭಿಕ ಲಕ್ಷಣಗಳು.

Heart Attack

ಹೃದಯ ತೊಂದರೆಗೆ ದಾರಿ

ಈ ಸಮಸ್ಯೆ ಹೃದಯದ ತೊಂದರೆಯನ್ನು ಇನ್ನೂ ಹೆಚ್ಚು ಮಾಡುತ್ತದೆ. ಇದ್ದಕ್ಕಿದ್ದಂತೆ ಹೃದಯಾಘಾತ, ಕಾಲಿನ ಸಂಧಿಗಳಲ್ಲಿ ಅತೀವ ನೋವು, ಸೆಳೆತ, ಊದಿಕೊಂಡ ಪಾದ ಹಾಗೂ ಚರ್ಮ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇದು ಕೈಕಾಲುಗಳಿಗಿಡೀ ಹರಡಿಕೊಂಡು ತಡೆಯಲಾದ ನೋವನ್ನೂ ತರಬಹುದು. ಮೈಕೈ ಬೆವರಿ, ಅತೀವ ಸಂಕಟ ನೀಡುವ ಸಮಸ್ಯೆಯಿದು.

ರಕ್ತ ಸಂಚಾರ ಸಮಸ್ಯೆ

ವೈದ್ಯರುಗಳ ಪ್ರಕಾರ, ಈ ಸಮಸ್ಯೆಗೆ ಒಳಗಾದ ಮಂದಿಗೆ ಕೆಲವೊಮ್ಮೆ ಹೃದಯದ ಕೆಲವು ಭಾಗದ ಮಾಂಸಖಂಡಗಳಿಗೆ ರಕ್ತ ಸರಿಯಾಗಿ ಪೂರೈಕೆಯಾಗದೆ, ಇದ್ದಕ್ಕಿದ್ದ ಹಾಗೆಯೇ ಅತ್ಯಂತ ಅಪಾಯಕಾರಿಯಾದ ಹೃದಯಾಘಾತಕ್ಕೆ ಈಡಾಗುತ್ತಾರೆ. ಈ ರಕ್ತಪೂರಣ ಸಾಮರ್ಥ್ಯ ಕಡಿಮೆಯಾಗಲೂ ಕೂಡಾ ಕಾರಣವಿದೆ. ಹೃದಯದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬ್ಲಾಕ್‌ ಅಥವಾ ತಡೆಗಳಿದ್ದಾಗಲೂ ಹೀಗೆ ಆಗುತ್ತದೆ.

Paralysis

ಪಾರ್ಶ್ವವಾಯು ಸಾಧ್ಯತೆ

ಅಧ್ಯಯನಗಳ ಪ್ರಕಾರ, ಸಾಮಾನ್ಯವಾಗಿ ಗೌಟ್‌ ತೊಂದರೆ ಉಲ್ಬಣಿಸುವ ಸಂದರ್ಭ ಹೃದಯದ ಸಮಸ್ಯೆಗೂ ಸಂಬಂಧವಿರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿಗಳ ಅಪಾಯವನ್ನು ಗೌಟ್‌ ಹೆಚ್ಚು ಮಾಡುತ್ತದೆ. ಹಾಗಾಗಿ ಗೌಟ್‌ ಸಮಸ್ಯೆ ಇರುವ ಮಂದಿ ಹೃದಯದ ಬಗ್ಗೆಯೂ ಎಚ್ಚರದಿಂದಿರಬೇಕು. ಆಗಾಗ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು. ಒಂದು ಅಧ್ಯಯನದ ಪ್ರಕಾರ, ಗೌಟ್‌ ಸಮಸ್ಯೆ ಹೊಂದಿರುವ ಮಂದಿಯ ಪೈಕಿ, 62,000 ಮಂದಿ ಗೌಟ್‌ ಸಮಸ್ಯೆಯನ್ನು ಹೊತ್ತು ತಂದ ಮಂದಿಯಲ್ಲಿ ಶೇ. 70ರಷ್ಟು ಮಂದಿ ಪುರುಷರು. ಅಂದರೆ ಪುರುಷರಲ್ಲಿ ಈ ಸಮಸ್ಯೆ ಹೆಚ್ಚು. ಗೌಟ್‌ ಉಲ್ಬಣವಾದ ಮೂರ್ನಾಲ್ಕು ತಿಂಗಳಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಸಮಸ್ಯೆ ಕಾಡಿದ ಮಂದಿ 10,000ಕ್ಕೂ ಹೆಚ್ಚು. ಹಾಗಾಗಿ ಗೌಟ್‌ ಕಾಯಿಲೆ ಇದೆ ಎಂದು ತಿಳಿದು ಬಂದ ಮೇಲೆ ಸುಮಾರು ಎರಡು ಮೂರು ತಿಂಗಳ ಆರಂಭಿಕ ಹಂತದಲ್ಲಿ ಬಹಳ ಜಾಗರೂಕರಾಗಿರುವುದು ಅತ್ಯಗತ್ಯ ಎಂದು ಈ ವರದಿ ಹೇಳಿದೆ.

Diabetes control

ಮಧುಮೇಹ, ಹೈಪರ್‌ ಟೆನ್ಶನ್‌ ಸಮಸ್ಯೆ

ಯೂರಿಕ್‌ ಆಸಿಡ್‌ ದೇಹದಲ್ಲಿ ಹೆಚ್ಚಾದಾಗ ಸಹಜವಾಗಿಯೇ, ಮಧುಮೇಹ, ಹೈಪರ್‌ ಟೆನ್ಶನ್‌ನಂತಹ ಸಮಸ್ಯೆಗಳೂ ಬರುವ ಸಂಭವ ಹೆಚ್ಚು. ಇವೂ ಕೂಡಾ, ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಮಧುಮೇಹ, ಹೈಪರ್‌ಟೆನ್ಶನ್‌ಗಳು ಹೃದಯದ ಸಮಸ್ಯೆಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಗೌಟ್‌ ಇದ್ದ ಮಾತ್ರಕ್ಕೆ ಎಲ್ಲರಿಗೂ ಹೀಗೆ ಆಗಿಯೇ ಆಗುತ್ತದೆ ಎಂದು ಅರ್ಥವಲ್ಲ, ಬದಲಾಗಿ ಆಗುವ ಅಪಾಯ ಇತರರಿಗಿಂತ ಹೆಚ್ಚು ಎಂಬುದನ್ನು ಅರ್ಥೈಸಿಕೊಳ್ಳಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಲೈಫ್‌ಸ್ಟೈಲ್

Toothbrush Using Tips: ನಿಮ್ಮ ಬ್ರಷ್‌ ಬದಲಿಸಿದ್ದು ಯಾವಾಗ ನೆನಪಿದೆಯಾ?

Toothbrush Using Tips: ಬಾಯಿಯ ಆರೋಗ್ಯದ ವಿಷಯ ಬಂದಾಗ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ನಮ್ಮ ಬ್ರಷ್‌ಗಳನ್ನು ಯಾವಾಗ ಬದಲಿಸುತ್ತೇವೆ? ನಮಗೆ ಹೊಂದುವಂಥ ಬ್ರಷ್‌ ಖರೀದಿಸುವುದು ನಮಗೆ ತಿಳಿದಿದೆಯೇ? ಇನ್ನಷ್ಟು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Toothbrush Using Tips
Koo

ನಮ್ಮ ವೈಯಕ್ತಿಕ ಶುಚಿತ್ವದ ವಿಷಯ ಬಂದಾಗ ನಾವೆಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉದಾ, ನಮ್ಮ ಬಾಚಣಿಕೆ ಅಥವಾ ನಮ್ಮ ಹಲ್ಲುಜ್ಜುವ ಬ್ರಷ್‌ಗಳ ಬಗ್ಗೆ (Toothbrush Using Tips) ನಾವೆಷ್ಟು ಗಮನ ನೀಡುತ್ತೇವೆ? ಬಾಚಣಿಕೆಯನ್ನು ಯಾವಾಗ ಶುಚಿ ಮಾಡುತ್ತೇವೆ? ಹಲ್ಲುಜ್ಜುವ ಬ್ರಷ್ ಎಷ್ಟು ತಿಂಗಳಿಗೊಮ್ಮೆ ಬದಲಾಯಿಸುತ್ತೇವೆ? ಇಂಥ ವಿಷಯಗಳು ಸಣ್ಣದಾದರೂ ಬಾಯಿಯ ಆರೋಗ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ನಿರ್ಧರಿಸುತ್ತವೆ. ಈ ಕುರಿತಾದ ಇನ್ನಷ್ಟು ವಿವರಗಳು ಇಲ್ಲಿವೆ. ಯಾವ ವಸ್ತುವನ್ನು ಶುಚಿ ಮಾಡುವುದಕ್ಕೆ ಬಳಸುತ್ತೇವೋ ಅದನ್ನು ಮೊದಲು ಸ್ವಚ್ಛ ಮಾಡಿಕೊಳ್ಳಬೇಕಾದ್ದು ಅಗತ್ಯ. ಅದರಲ್ಲೂ ಬಾಯಿಯ ಆರೋಗ್ಯ ರಕ್ಷಣೆಗೆ ಉಪಯೋಗವಾಗುವ ಬ್ರಷ್‌ಗಳೇ ಕೊಳೆಯಾಗಿದ್ದರೆ ಹಲ್ಲು, ಒಸಡುಗಳ ಸ್ಥಿತಿ ಎನು? ಆದರೆ ಎಷ್ಟು ಜನ ಈ ಬಗ್ಗೆ ಲಕ್ಷ್ಯ ವಹಿಸುತ್ತಾರೆ? ಕಾಲಕಾಲಕ್ಕೆ ಅದನ್ನು ಬದಲಾಯಿಸುತ್ತಾರೆ? ಯಾವಾಗ ಬದಲಾಯಿಸಬೇಕು ಎನ್ನುವ ಮಾಹಿತಿ ಎಷ್ಟು ಜನರಲ್ಲಿ ಇರುತ್ತದೆ? ಅದನ್ನೆಲ್ಲ ಯಾಕಾಗಿ ತಿಳಿದುಕೊಳ್ಳಬೇಕು?

Toothbrush

ಬ್ರಷ್‌ ಹೇಗಿರಬೇಕು?

ಈ ಪ್ರಶ್ನೆಗೆ ಉತ್ತರ ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಯಾವುದನ್ನೇ ತೆಗೆದುಕೊಂಡರು, ಅದರ ಬಳಕೆಯ ತುದಿ ಒರಟಾಗಿರಬಾರದು. ಹಾಗಿದ್ದರೆ ಹಲ್ಲು ಮತ್ತು ಒಸಡುಗಳಿಗೆ ಹಾನಿ. ಬದಲಿಗೆ, ಮೃದುವಾಗಿರುವ ಬ್ರಿಸಲ್‌ಗಳು ಇರುವುದನ್ನು ಆಯ್ದುಕೊಳ್ಳಿ. ಅವುಗಳಲ್ಲಿ ಹಾರ್ಡ್‌, ಮೀಡಿಯಂ, ಸಾಫ್ಟ್‌, ಅಲ್ಟ್ರಾ ಸಾಫ್ಟ್‌ ಎಂಬ ನಾಲ್ಕು ವಿಧಗಳಿವೆ.
ಸಾಫ್ಟ್‌ ಮತ್ತು ಅಲ್ಟ್ರಾ ಸಾಫ್ಟ್‌ ಬ್ರಷ್‌ಗಳು ಹಲ್ಲುಗಳು ಸುಂದರವಾಗಿ ಒಂದೇ ಸಾಲಿನಲ್ಲಿದ್ದು, ಹುಳುಕು-ಕಲೆಗಳು ಇಲ್ಲದವರಿಗೆ ಸೂಕ್ತವಾದದ್ದು. ಆದರೆ ಹಲ್ಲುಗಳು ಸಾಲಿನಲ್ಲಿದ್ದೆ ಸೊಟ್ಟವಾಗಿದ್ದರೆ, ಮೀಡಿಯಂ ಬೇಕಾಗಬಹುದು. ತೀರಾ ಅಡ್ಡಾದಿಡ್ಡಿಯಾಗಿದ್ದು, ಕಲೆಗಳೂ ಇದ್ದರೆ ಒರಟಾದವು ಅಗತ್ಯವಾಗಬಹುದು. ಆದರೆ ಯಾವುದನ್ನೇ ತೆಗೆದುಕೊಂಡರೂ, ಅದು ಬಾಯಿಯ ಎಲ್ಲಾ ದಿಕ್ಕಿಗೂ ಸುಲಭಕ್ಕೆ ಹೋಗಿ ಸ್ವಚ್ಛ ಮಾಡುವಂತಿರಬೇಕು.

ಯಾವಾಗ ಬದಲಿಸಬೇಕು?

ಪ್ರತಿ 3-4 ತಿಂಗಳಿಗೆ ಬ್ರಷ್‌ ಬದಲಿಸಬೇಕು ಎಂಬುದು ದಂತಾರೋಗ್ಯ ತಜ್ಞರ ಅಭಿಮತ. ಕೆಲವೊಮ್ಮೆ ಅದಕ್ಕೂ ಮುನ್ನವೇ ಬದಲಿಸುವುದು ಬೇಕಾಗಲೂಬಹುದು. ಬ್ರಷ್‌ ತುದಿಯ ಕೂದಲು ಆಕಾರಗೆಟ್ಟಿದ್ದರೆ, ಸೊಟ್ಟಗಾಗಿ ತನ್ನ ಕೆಲಸ ಮಾಡಲು ಅಸಮರ್ಥವಾಗಿದ್ದರೆ ಅದನ್ನು ಬದಲಾಯಿಸಬೇಕು. ಅದಿಲ್ಲದಿದ್ದರೆ, ಹಲ್ಲಿನ ಎನಾಮಲ್‌ ಕವಚಕ್ಕೆ ಹಾನಿಯಾಗಬಹುದು; ಒಸಡುಗಳು ಗಾಯವಾಗಿ ರಕ್ತ ಸೋರಬಹುದು; ಸೂಕ್ಷ್ಮ ಸಂವೇದನೆಗಳು ಹೆಚ್ಚಬಹುದು.
ಯಾವುದಾದರೂ ಸೋಂಕು ತಗುಲಿದ್ದರೆ ಬ್ರಷ್‌ ಬದಲಾವಣೆ ಅಗತ್ಯ. ಅಂದರೆ ಜ್ವರ, ಗಂಟಲುನೋವು, ಕೆಮ್ಮು, ಶ್ವಾಸಕೋಶದ ಸೋಂಕುಗಳು- ಇಂಥವು ಬಂದರೆ, ಸೋಂಕು ಗುಣವಾದ ಬಳಿಕ ಬ್ರಷ್‌ ಬದಲಿಸಿ. ಇದು ಬಾಯಿಯ ಆರೋಗ್ಯದ ದೃಷ್ಟಿಯಿಂದ ಅಗತ್ಯವಾದದ್ದು. ಒಂದೊಮ್ಮೆ ಸೋಂಕಿತರ ಆರೈಕೆಯನ್ನು ಯಾರಾದರೂ ಮಾಡುತ್ತಿದ್ದರೆ, ಅವರೂ ಬ್ರಷ್‌ ಬದಲಿಸುವುದು ಒಳ್ಳೆಯದು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

ತಂತ್ರಗಳು

ಬ್ರಷ್‌ ಮಾಡುವ ತಂತ್ರಗಳನ್ನು ಸರಿಯಾಗಿ ರೂಢಿಸಿಕೊಳ್ಳಿ. ಅದಿಲ್ಲದಿದ್ದರೆ ಹಲ್ಲುಗಳ ಮೇಲೆ ಪ್ಲೇಕ್‌ನಂತೆ ಕೂರುವುದು, ಬಣ್ಣಗೆಡುವುದು, ಹುಳುಕಾಗುವುದು ಹೆಚ್ಚುತ್ತದೆ. ಒರಟಾಗಿ ಉಜ್ಜಿದರೆ ಎನಾಮಲ್‌ ಹಾಳಾಗಿಬಿಡುತ್ತದೆ. ಹಾಗಾಗಿ ಬಾಯಿಯ ಆರೋಗ್ಯ ರಕ್ಷಣೆಯಲ್ಲಿ ಈ ಎಲ್ಲ ಅಂಶಗಳೂ ಮುಖ್ಯವಾಗಿವೆ.
ಬ್ರಷ್‌ಗಳನ್ನು ಹೇಗೆ, ಎಲ್ಲಿ ಇರಿಸಿಕೊಳ್ಳುತ್ತೀರಿ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಒಂದೇ ಕಡೆ ಹತ್ತಾರು ಬ್ರಷ್‌ಗಳನ್ನು ತುರುಕಿದಂತೆ ಇರಿಸಿಕೊಳ್ಳುವವರು ನೀವಾಗಿದ್ದರೆ, ಈ ಮೂಲಕವೂ ಸೋಂಕುಗಳು ಬರಬಹುದು ಎನ್ನುವುದು ತಿಳಿದಿರಲಿ. ಹಾಗಾಗಿ ಬ್ರಷ್‌ ಮೂಲಕ ಬ್ಯಾಕ್ಟೀರಿಯ ಬರಬಾರದೆಂದರೆ, ಅದಕ್ಕೊಂದು ಸರಿಯಾದ ಕೇಸ್‌ ಹಾಕಿ ಇರಿಸಿಕೊಳ್ಳಿ.

Continue Reading

ಪ್ರಮುಖ ಸುದ್ದಿ

Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

Dengue Fever: ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್‌ ಹೇಳಿದ್ದಾರೆ.

VISTARANEWS.COM


on

DR CN Manjunath dengue fever
Koo

ಬೆಂಗಳೂರು: ಡೆಂಗ್ಯು ಜ್ವರಕ್ಕೆ (Dengue Fever) ಅಡ್ಮಿಟ್ ಆದವರಿಗೆ, ಕೋವಿಡ್ (Covid 19) ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯಿತೋ ಅದೇ ರೀತಿ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ (Bangalore Rural) ಸಂಸದ ಡಾ. ಸಿಎನ್‌ ಮಂಜುನಾಥ್‌ (Dr CN Manjunath) ಹೇಳಿದ್ದಾರೆ.

ಇದು ಸರ್ಕಾರಕ್ಕೆ ನನ್ನ ಸಲಹೆ. ಡೆಂಗ್ಯೂ ಫಿವರ್‌ ನಿಯಂತ್ರಣ ಅಂದರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯು ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಬರುತ್ತದೆ. ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದು ಮಂಜುನಾಥ್‌ ಹೇಳಿದ್ದಾರೆ.

ಸರಕಾರ ಡೆಂಗ್ಯುಗೆ ದರ ನಿಗದಿ ಮಾಡಿದೆ. ಡಯೋಗ್ನಾಸಿಸ್‌ಗಳು ಹೆಚ್ಚು ವಸೂಲಿ ಮಾಡಿದರೆ,‌ ಅವುಗಳ ಬಾಗಿಲು ಮುಚ್ಚಿಸಬೇಕು. ಡೆಂಗ್ಯು ಹರಡಲು ಕಾರಣ ಮಳೆಗಾಲದಲ್ಲಿ ನೀರು ನಿಲ್ಲೋದರಿಂದ. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಕಾಯಿಲೆ‌ ಹರಡುತ್ತಿದೆ. ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಆಗಬೇಕು. ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಮಳೆಗಾಲ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಈಗ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ ಎಂದು ಡಾ. ಮಂಜುನಾಥ್‌ ಎಚ್ಚರಿಸಿದ್ದಾರೆ.

ಡೆಂಗ್ಯು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರ್ತಿದೆ. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡ್ತಿದ್ದಾರೆ. ಅದರ ಜೊತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದವರ ಮನೆಗೆ ಸೊಳ್ಳೆಪರದೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಮಂಜುನಾಥ್ ಸೂಚಿಸಿದ್ದಾರೆ. ‌

ಡೆಂಗ್ಯು ಬಂದು ಮತ್ತೆ ಹುಷಾರಾಗುವಾಗ ಪ್ಲೇಟ್ ಲೆಟ್ಸ್ ಕಡಿಮೆ ಆಗುತ್ತೆ. ಜೊತೆಗೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ‌ ಗಮನಕ್ಕೂ ನಾನು ತರಲಿದ್ದೇನೆ. ಅವಶ್ಯಕತೆ ಇರುವವರಿಗೆ ಮೊದಲೇ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಕಾಯಿಲೆಗೆ ಬೇಕಾದ ಮಾತ್ರೆಗಳ ಕೊರತೆ ಕೂಡ ಎದುರಾಗಿದೆ. ವಾರ್ ರೂಮ್ ಮೂಲಕ ಮಾನಿಟರ್ ಮಾಡಬೇಕು. ಮುಂದುವರೆದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಾಯಿಲೆ ತಡೆದಿದ್ದಾರೆ. ಮಸ್ಕ್ಯೂಟೋ ರೆಪೆಲೆಂಟ್ಸ್ ಅಂತ ಸ್ಟಿಕರ್ ಬರುತ್ತಿದ್ದು. ಅದನ್ನ ಇಲ್ಲೂ ಹಾಕಬೇಕು. ಇದರಿಂದ ಮಕ್ಕಳಿಗೆ ಸೊಳ್ಳೆ ಕಡಿತ ತಪ್ಪಿಸಬಹುದು ಎಂದು ಅವರು ಹೇಳಿದರು.

ಜಪಾನ್, ಸಿಂಗಾಪುರ್, ಅಮೇರಿಕಾದಲ್ಲಿ ಡೆಂಗ್ಯೂ ಕಾಯಿಲೆಗೆ ಬೇಕಾದ ಮೆಡಿಸಿನ್ ಇದೆ. ಅವುಗಳನ್ನು ರಾಜ್ಯ ಸರ್ಕಾರ ತರಿಸಿಕೊಳ್ಳಬೇಕು. ಇಲ್ಲ ಅಲ್ಲಿ ನೀರು ನಿಲ್ಲೋದನ್ನ ತಡೆಗಟ್ಟಬೇಕು. ಸೊಳ್ಳೆ ನಿಯಂತ್ರಣ ಮಾಡಲು ಸ್ಪ್ರೇ ಮಾಡುವವರು ಕಾಣುತ್ತಿಲ್ಲ. ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Dengue Fever: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು

Continue Reading

ಶಿವಮೊಗ್ಗ

Zika Virus : ಡೆಂಗ್ಯೂ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧ ಬಲಿ

Dengue Fever : ಡೆಂಗ್ಯೂ ಜ್ವರ ಎಲ್ಲೆಡೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಜತೆಗೆ ಝಿಕಾ ವೈರಸ್‌ ಭೀತಿಯು (Zika Virus ) ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.

VISTARANEWS.COM


on

By

Zika Virus
ಸಾಂದರ್ಭಿಕ ಚಿತ್ರ
Koo

ಶಿವಮೊಗ್ಗ: ರಾಜ್ಯದಲ್ಲಿ ಝಿಕಾ ವೈರಸ್ (Zika Virus) ಆತಂಕ ಹೆಚ್ಚಾಗಿದ್ದು, ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ 74 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಝಿಕಾ ವೈರಸ್ ಜತೆಗೆ ಬಹು ಅಂಗಾಂಗ ವೈಫಲ್ಯಗಳಿಂದ ವೃದ್ಧ ಬಳಲುತ್ತಿದ್ದರು ಎನ್ನಲಾಗಿದೆ.

ಕಳೆದ ಹತ್ತು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೇವಲ ಝಿಕಾ ವೈರಸ್‌ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು ಎಂದು ಸಾವಿನ ಬಗ್ಗೆ ಶಿವಮೊಗ್ಗ ಡಿಎಚ್‌ಒ ಡಾ.ನಟರಾಜ್ ಸ್ಪಷ್ಟನೆ ಪಡಿಸಿದ್ದಾರೆ.

ಯುವಕನಲ್ಲೂ ಝಿಕಾ ವೈರಸ್‌ ಪತ್ತೆ

ಶಿವಮೊಗ್ಗದ ಸಾಗರ ಮೂಲದ 24 ವರ್ಷದ ಯುವಕನಲ್ಲೂ ಝಿಕಾ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ. ಯುವಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಝಿಕಾ ರೋಗದ ಲಕ್ಷಣಗಳೇನು?

  • ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಜನರು ಯಾವ ನಿಯಮ ಪಾಲಿಸಬೇಕು?

ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಈ ಮೂಲಕ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Death by Shock: ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ಹೊಡೆದು ವಿದ್ಯಾರ್ಥಿ ಸಾವು

ಝಿಕಾ ವೈರಸ್ ತಡೆಗಟ್ಟಲು ಜನಸಾಮಾನ್ಯರ ಜವಾಬ್ದಾರಿ ಏನು?

  • -ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್‌, ಟಬ್‌ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.
  • -ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
  • -ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು.
  • -ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.
  • -ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Dengue Fever: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ, ರಾಜಧಾನಿಯಲ್ಲಿ 2ನೇ ಸಾವು

Dengue Fever: ಅಂಜನಾಪುರದ 11 ವರ್ಷದ ಬಾಲಕ ಗಗನ್ ಜ್ವರದಿಂದ ಸಾವಿಗೀಡಾಗಿದ್ದು, ಇದು ಬೆಂಗಳೂರಿನಲ್ಲಿ ಡೆಂಗ್ಯುವಿಗೆ ಪುಟ್ಟ ಮಗುವಿನ ಮೊದಲ ಸಾವು ಆಗಿದೆ. ನಿನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಅಸುನೀಗಿದ್ದಾನೆ.

VISTARANEWS.COM


on

dengue fever death bangalore
Koo

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಡೆಂಗ್ಯು ಜ್ವರ (Dengue Fever) ಕರಾಳ ಸ್ವರೂಪವನ್ನು ಪ್ರದರ್ಶಿಸಲಾರಂಭಿಸಿದ್ದು, ಎರಡನೇ ಬಲಿ (dengue death) ತೆಗೆದುಕೊಂಡಿದೆ. ಬಾಲಕನೊಬ್ಬ ಬಲಿಯಾಗಿದ್ದಾನೆ. ಹಾಸನದಲ್ಲಿ ಶಂಕಿತ ಡೆಂಗ್ಯು ಜ್ವರಕ್ಕೆ ಮೂವರು ಹೆಣ್ಣು ಮಕ್ಕಳು ಬಲಿಯಾದ ಬೆನ್ನಲ್ಲೇ ಈ ಸುದ್ದಿ ಬಂದಿದೆ.

ಅಂಜನಾಪುರದ 11 ವರ್ಷದ ಬಾಲಕ ಗಗನ್ ಜ್ವರದಿಂದ ಸಾವಿಗೀಡಾಗಿದ್ದು, ಇದು ಬೆಂಗಳೂರಿನಲ್ಲಿ ಡೆಂಗ್ಯುವಿಗೆ ಪುಟ್ಟ ಮಗುವಿನ ಮೊದಲ ಸಾವು ಆಗಿದೆ. ನಿನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಅಸುನೀಗಿದ್ದಾನೆ. ಈತ ಜಂಬೂಸವಾರಿ ದಿಣ್ಣೆಯ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ. ಕಳೆದ ಮೂರು ದಿನಗಳಿಂದ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.

ಕಳೆದ ವಾರ ಕಗ್ಗದಾಸಪುರದಲ್ಲಿ 27 ವರ್ಷ ಯುವಕ ಡೆಂಗ್ಯುವಿನಿಂದ ಸಾವನ್ನಪ್ಪಿದ್ದ. ಹಾಸನದಲ್ಲಿ ಮೂವರು ಬಾಲಕಿಯರು ಡೆಂಗ್ಯುವಿನಿಂದ ಮೃತಪಟ್ಟಿದ್ದಾರೆ. ಒಟ್ಟು ಏಳು ಮಂದಿ ರಾಜ್ಯದಲ್ಲಿ ಇದುವರೆಗೆ ಡೆಂಗ್ಯುವಿನಿಂದ ಸಾವಿಗೀಡಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಕೆಲವು ಶಂಕಿತ ಡೆಂಗ್ಯು ಸಾವಿನ ಪ್ರಕರಣಗಳಿದ್ದು , ಅವು ಖಚಿತಗೊಳ್ಳಬೇಕಿವೆ.

ಡೆಂಗ್ಯು ಪರೀಕ್ಷೆಗೆ ದರ ನಿಗದಿ

ಬೆಂಗಳೂರು: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.

ಡೆಂಗ್ಯೂ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಂಗಳವಾರ ತಿಳಿಸಿದ್ದರು.

ಇದನ್ನೂ ಓದಿ | Dengue Fever: ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

Continue Reading
Advertisement
Toothbrush Using Tips
ಲೈಫ್‌ಸ್ಟೈಲ್13 mins ago

Toothbrush Using Tips: ನಿಮ್ಮ ಬ್ರಷ್‌ ಬದಲಿಸಿದ್ದು ಯಾವಾಗ ನೆನಪಿದೆಯಾ?

karnataka weather Forecast
ಮಳೆ1 hour ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

Puri Jagannath Temple
Latest2 hours ago

Puri Jagannath Temple: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಸಿಗಲಿದೆ ಶುಭ ಸುದ್ದಿ

Champions Trophy 2025:
ಪ್ರಮುಖ ಸುದ್ದಿ8 hours ago

Champions Trophy 2025 : ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಹಠ ಹಿಡಿದು ಕುಳಿತಿರುವ ಪಿಸಿಬಿ

Rain News
ದೇಶ8 hours ago

Rain News: ವರುಣನ ಆರ್ಭಟ; ಮಳೆ ಸಂಬಂಧಿ ಅವಘಡಗಳಿಗೆ 24 ಗಂಟೆಯಲ್ಲಿ 13 ಜನ ಬಲಿ

KAS
ಕರ್ನಾಟಕ8 hours ago

KAS: ಕೆಎಎಸ್‌ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್;‌ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ, ಇಲ್ಲಿದೆ ಮಾಹಿತಿ

Mid Day Meal
ದೇಶ9 hours ago

Mid Day Meal: ಮಕ್ಕಳ ಬಿಸಿಯೂಟದಲ್ಲೂ ಕಳ್ಳಾಟ, ವಿದ್ಯಾರ್ಥಿಗಳಿಗೆ ಸಿಗೋದು ಬರೀ ಅನ್ನ-ಅರಿಶಿಣ; Video ಇದೆ

Dr HS Shetty: Rs 7 crore spent on charity; Businessman Dr. HS Shetty
ಪ್ರಮುಖ ಸುದ್ದಿ9 hours ago

Dr HS Shetty : ದಾನಗಳಿಗಾಗಿಯೇ ವರ್ಷದಲ್ಲಿ 7 ಕೋಟಿ ರೂ. ವಿನಿಯೋಗ

Vasishtha Simha starrer VIP Kannada movie
ಕರ್ನಾಟಕ10 hours ago

Kannada New Movie: ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ವಸಿಷ್ಠ ಸಿಂಹ ಅಭಿನಯದ ‘ವಿಐಪಿ’ ಚಿತ್ರದ ಹಾಡು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 hour ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ13 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ16 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ17 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು19 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ21 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌