Money Guide: ಏ. 1ರಿಂದ ಹೊಸ ತೆರಿಗೆ ನಿಯಮಗಳ ಜಾರಿ; ಏನೆಲ್ಲ ಬದಲಾವಣೆ ? - Vistara News

ಮನಿ-ಗೈಡ್

Money Guide: ಏ. 1ರಿಂದ ಹೊಸ ತೆರಿಗೆ ನಿಯಮಗಳ ಜಾರಿ; ಏನೆಲ್ಲ ಬದಲಾವಣೆ ?

Money Guide: ಏಪ್ರಿಲ್‌ 1ರಂದು ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಅಂದಿನಿಂದ ಹೊಸ ತೆರಿಗೆ ನಿಯಮಗಳು ಜಾರಿಗೆ ಬರಲಿವೆ. ಹಾಗಾದರೆ ಯಾವೆಲ್ಲ ನಿಯಮಗಳು ಬದಲಾಗುತ್ತವೆ ? ಮಾಹಿತಿಗಾಗಿ ಮನಿಗೈಡ್‌ ಓದಿ.

VISTARANEWS.COM


on

tax
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ಆರ್ಥಿಕ ವರ್ಷದ ಕೊನೆಯ ದಿನಗಳಲ್ಲಿ ನಾವಿದ್ದೇವೆ. ಏಪ್ರಿಲ್‌ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಅದರಲ್ಲೂ ಆದಾಯ ತೆರಿಗೆಗೆ ಸಂಬಂಧಿಸಿದ ಹೆಚ್ಚಿನ ಬಜೆಟ್ ಪ್ರಸ್ತಾಪಗಳು ಈ ದಿನದಿಂದ ಜಾರಿಗೆ ಬರುವುದರಿಂದ ವೈಯಕ್ತಿಕ ಹಣಕಾಸು ದೃಷ್ಟಿಕೋನದಿಂದ ಈ ದಿನ ಮಹತ್ವದ್ದಾಗಿರುತ್ತದೆ. ಹಾಗಾದರೆ ಆದಾಯ ತೆರಿಗೆ ವಿಚಾರದಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ ? ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಹೊಸ ತೆರಿಗೆ ರೆಜಿಮ್‌ ಡೀಫಾಲ್ಟ್ ಅಳವಡಿಕೆಯಲ್ಲಿ ಗಮನಾರ್ಹ ಮಾರ್ಪಾಡು ನಡೆಸಲಾಗಿದೆ. ತೆರಿಗೆ ಫೈಲಿಂಗ್ ಕಾರ್ಯವಿಧಾನವನ್ನು ಸುಗಮಗೊಳಿಸುವುದು ಮತ್ತು ಹೊಸ ರೆಜಿಮ್‌ನಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಇದರಲ್ಲಿ ವಿನಾಯಿತಿಗಳೊಂದಿಗೆ ಕಡಿಮೆ ತೆರಿಗೆ ದರಗಳನ್ನು ಅಳವಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್​ಗಳು ಹಿಂದಿನದ್ದನ್ನೇ ಉಳಿಸಿಕೊಳ್ಳಲಾಗಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಹೊಸ ತೆರಿಗೆ ರೆಜಿಮ್‌ ಅಡಿಯಲ್ಲಿ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಅದು ಹಾಗೆಯೇ ಮುಂದುವರಿಯಲಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 87 ಎ ಅಡಿಯಲ್ಲಿ ರಿಯಾಯಿತಿಯನ್ನು 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಆದ್ದರಿಂದ ಹೊಸ ರೆಜಿಮ್‌ ಅಡಿಯಲ್ಲಿ ವೈಯಕ್ತಿಕ ತೆರಿಗೆದಾರರು 7 ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ಪಾವತಿಸುವುದರಿಂದ ಮುಕ್ತರಾಗುತ್ತಾರೆ.

ಹೊಸ ತೆರಿಗೆ ಸ್ಲ್ಯಾಬ್‌

  • 3 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
  • 3 ಲಕ್ಷ ರೂ.ಯಿಂದ 6 ಲಕ್ಷ ರೂ. ಆದಾಯಕ್ಕೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ.
  • 6 ಲಕ್ಷ ರೂ.ಯಿಂದ 9 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತದೆ.
  • 9 ಲಕ್ಷ ರೂ.ಗಳಿಂದ 12 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಶೇ. 15ರಷ್ಟು ತೆರಿಗೆ ವಿಧಿಸಲಾಗುತ್ತದೆ.
  • 12 ರೂ.ಗಳಿಂದ 15 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 20ರಷ್ಟು ತೆರಿಗೆ ವಿಧಿಸಲಾಗುತ್ತದೆ.
  • 15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣಕ್ಕೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಈ ಹಿಂದೆ ಹಳೆಯ ತೆರಿಗೆ ರೆಜಿಮ್‌ಗೆ ಮಾತ್ರ ಅನ್ವಯಿಸುತ್ತಿದ್ದ 50,000 ರೂ.ಯ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಈಗ ಹೊಸ ತೆರಿಗೆ ರೆಜಿಮ್‌ನಲ್ಲಿ ಸೇರಿಸಲಾಗಿದೆ. ಜತೆಗೆ 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯದ ಮೇಲೆ ವಿಧಿಸಲಾಗುತ್ತಿದ್ದ ಶೇ. 37ರಷ್ಟು ಸರ್ಚಾರ್ಜ್ ಅಥವಾ ಹೆಚ್ಚುವರಿ ತೆರಿಗೆಯ ದರವನ್ನು ಶೇ. 25ಕ್ಕೆ ಇಳಿಸಲಾಗಿದೆ.

ಜೀವ ವಿಮೆ ಮೇಲಿನ ತೆರಿಗೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿರುವ ಪ್ರಕಾರ, ಏಪ್ರಿಲ್ 1, 2023ರಂದು ಅಥವಾ ನಂತರ ವಿತರಿಸಲಾದ ಜೀವ ವಿಮಾ ಪಾಲಿಸಿಗಳ ಮೆಚ್ಯೂರಿಟಿ ಆದಾಯ ಮತ್ತು ಒಟ್ಟು ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅದು ತೆರಿಗೆಗೆ ಒಳಪಟ್ಟಿರುತ್ತದೆ. ಸರ್ಕಾರೇತರ ಉದ್ಯೋಗಿಗಳಿಗೆ ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 2022ರಿಂದ 3 ಲಕ್ಷ ರೂ.ಗಳಿಂದ ಈಗ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: Money Guide: ತೆರಿಗೆ ವಿನಾಯಿತಿ ಪಡೆಯಬೇಕೆ? ಮಾ. 31ರೊಳಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಎಫ್‌ಡಿ V/S ಆರ್‌ಡಿ; ಯಾವುದು ಉತ್ತಮ? ಯಾವುದರಲ್ಲಿ ಹೂಡಿಕೆ ಮಾಡಬೇಕು?

Money Guide: ಉಳಿತಾಯವು ಅನಿರೀಕ್ಷಿತ ಆಘಾತ, ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕುಗ್ಗದಂತೆ ಕಾಪಾಡುತ್ತದೆ. ಹೀಗಾಗಿ ನೀವು ಭವಿಷ್ಯದ ದೃಷ್ಟಿಯಿಂದ ವಿವಿಧ ಯೋಜನೆಗಳಲ್ಲಿ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ಪೈಕಿ ನಿಶ್ಚಿತ ಠೇವಣಿ ಮತ್ತು ರಿಕರಿಂಗ್‌ ಠೇವಣಿ ಪ್ರಮುಖವಾದುದು. ಹಾಗಾದರೆ ಈ ಎರಡು ಯೋಜನೆಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ನೋಡೋಣ. ಎಫ್‌ಡಿ ಮತ್ತು ಆರ್‌ಡಿ ಇವೆರಡೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳು ಎನಿಸಿಕೊಂಡಿವೆ. ವಿಶೇಷವಾಗಿ ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇವು ಉತ್ತಮ ಆಯ್ಕೆ.

VISTARANEWS.COM


on

Money Guide
Koo

ಬೆಂಗಳೂರು: ಇಂದಿನ ಉಳಿತಾಯವೇ ನಾಳೆಯ ಆದಾಯ ಎನ್ನುವ ಮಾತಿದೆ. ಅಂದರೆ ನಾವು ಎಷ್ಟು ಉಳಿತಾಯ ಮಾಡುತ್ತೇವೆಯೋ ಭವಿಷ್ಯದಲ್ಲಿ ಅಷ್ಟು ನೆಮ್ಮದಿ ಇರುತ್ತದೆ ಎನ್ನುವುದು ಇದಕ್ಕೆ ಕಾರಣ. ಇದಕ್ಕಾಗಿಯೇ ಆರ್ಥಿಕ ತಜ್ಞರು ಉಳಿತಾಯದತ್ತ ಗಮನ ಹರಿಸುವಂತೆ ಸಲಹೆ ನೀಡುತ್ತಾರೆ. ಉಳಿತಾಯವು ಅನಿರೀಕ್ಷಿತ ಆಘಾತ, ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕುಗ್ಗದಂತೆ ಕಾಪಾಡುತ್ತದೆ. ಹೀಗಾಗಿ ನೀವು ಭವಿಷ್ಯದ ದೃಷ್ಟಿಯಿಂದ ವಿವಿಧ ಯೋಜನೆಗಳಲ್ಲಿ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ಪೈಕಿ ನಿಶ್ಚಿತ ಠೇವಣಿ (Fixed Deposits) ಮತ್ತು ರಿಕರಿಂಗ್‌ ಠೇವಣಿ (Recurring Deposits) ಪ್ರಮುಖವಾದುದು. ಹಾಗಾದರೆ ಈ ಎರಡು ಯೋಜನೆಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ನೋಡೋಣ (Money Guide).

ಎಫ್‌ಡಿ ಮತ್ತು ಆರ್‌ಡಿ ಇವೆರಡೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳು ಎನಿಸಿಕೊಂಡಿವೆ. ವಿಶೇಷವಾಗಿ ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇವು ಉತ್ತಮ ಆಯ್ಕೆ. ಇದರಿಂದ ಯಾವುದೇ ಅಪಾಯವಿಲ್ಲದೆ ಸ್ಥಿರ ಆದಾಯವನ್ನು ಗಳಿಸಬಹುದು ಎನ್ನುವ ಕಾರಣಕ್ಕೆ ಇದನ್ನು ಬಹುತೇಕರು ನೆಚ್ಚಿಕೊಂಡಿದ್ದಾರೆ.

ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. 

ರಿಕರಿಂಗ್ ಡೆಪಾಸಿಟ್ ಯೋಜನೆಯಲ್ಲಿ ನೀವು ನಿರ್ದಿಷ್ಟ ಮೊತ್ತಗಳನ್ನು ಠೇವಣಿ ಇಡಬಹುದು. ಇದು 6 ತಿಂಗಳಿಂದ 10 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯಲ್ಲಿರಬಹುದು. ರಿಕರಿಂಗ್ ಡೆಪಾಸಿಟ್‌ನಲ್ಲಿ ನೀವು ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತವು ಸಾಮಾನ್ಯವಾಗಿ ಕೇವಲ ರೂ. 100 ಅಥವಾ ಅದಕ್ಕೂ ಕಡಿಮೆ ಇರುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಬಡ್ಡಿಯೊಂದಿಗೆ ಅಸಲನ್ನು ಪಡೆಯಬಹುದು.

ಎಫ್‌ಡಿಯ ವೈಶಿಷ್ಟ್ಯ

  • ಒಟ್ಟು ಮೊತ್ತದ ಹೂಡಿಕೆ: ಎಫ್‌ಡಿಗಳಿಗೆ ಒಂದು ಬಾರಿಯ ದೊಡ್ಡ ಮೊತ್ತದ ಠೇವಣಿ ಅಗತ್ಯ.
  • ಸ್ಥಿರ ಬಡ್ಡಿದರ: ಬಡ್ಡಿದರವನ್ನು ಹೂಡಿಕೆಯ ಸಮಯದಲ್ಲಿ ನಿಗದಿಪಡಿಸಲಾಗುತ್ತದೆ ಮತ್ತು ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ.
  • ಬಡ್ಡಿ ಪಾವತಿ ಆಯ್ಕೆಗಳು: ನಿಮ್ಮ ಆದ್ಯತೆಯನ್ನು ಅವಲಂಬಿಸಿ ಬಡ್ಡಿಯನ್ನು ಸಂಯೋಜಿಸಬಹುದು ಮತ್ತು ಮರುಹೂಡಿಕೆ ಮಾಡಬಹುದು.
  • ಕಡಿಮೆ ದ್ರವ್ಯತೆ: ಗಮನಿಸಿ ಅವಧಿ ಮುಕ್ತಾಯಗೊಳ್ಳುವ ಮೊದಲು ಎಫ್‌ಡಿಯನ್ನು ಹಿಂಪಡೆಯುವುದು ದಂಡಕ್ಕೆ ಮತ್ತು ಬಡ್ಡಿ ನಷ್ಟಕ್ಕೆ ಕಾರಣವಾಗಬಹುದು.

ಆರ್‌ಡಿಯ ವೈಶಿಷ್ಟ್ಯ

  • ನಿಯಮಿತ ಉಳಿತಾಯ: ಆರ್‌ಡಿ ನಿಮಗೆ ನಿಯಮಿತವಾಗಿ ಸಾಮಾನ್ಯವಾಗಿ ಮಾಸಿಕವಾಗಿ ನಿಗದಿತ ಮೊತ್ತವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.
  • ಫ್ಲೆಕ್ಸಿಬಲ್ ಡೆಪಾಸಿಟ್ ಮೊತ್ತ: ನೀವು ಪ್ರತಿ ತಿಂಗಳು ಠೇವಣಿ ಮಾಡಬೇಕಾದ ಮೊತ್ತವನ್ನು ಆಯ್ಕೆ ಮಾಡಬಹುದು.
  • ಸ್ಥಿರ ಬಡ್ಡಿದರ: ಎಫ್‌ಡಿಯಂತೆಯೇ ಆರ್‌ಡಿ ಕೂಡ ಇಡೀ ಅವಧಿಗೆ ಸ್ಥಿರ ಬಡ್ಡಿದರವನ್ನು ನೀಡುತ್ತದೆ.
  • ನಿಗದಿತ ಅವಧಿ: ಆರ್‌ಡಿ ನಿಗದಿತ ಅವಧಿಯನ್ನು ಹೊಂದಿರುತ್ತದೆ. ಮೆಚ್ಯೂರಿಟಿ ಮೊತ್ತವನ್ನು ಮೊದಲೇ ನಿರ್ಧರಿಸಲಾಗುತ್ತದೆ.
  • ಹೆಚ್ಚಿನ ದ್ರವ್ಯತೆ: ಎಫ್‌ಡಿಗೆ ಹೋಲಿಸಿದರೆ ಆರ್‌ಡಿ ಉತ್ತಮ ದ್ರವ್ಯತೆಯನ್ನು ನೀಡುತ್ತವೆ. ನೀವು ಸಂಗ್ರಹಿಸಿಟ್ಟ ಮೊತ್ತವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು ಅಥವಾ ತುರ್ತು ಸಂದರ್ಭಗಳಲ್ಲಿ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು.

ಯಾವುದು ಉತ್ತಮ?

ಮೊದಲೇ ಹೇಳಿದಂತೆ ಎಫ್‌ಡಿ ಮತ್ತು ಆರ್‌ಡಿ ಎರಡೂ ಉತ್ತಮ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿರಬೇಕಾಗುತ್ತದೆ. ಆದರೆ ಮಾಸಿಕ ಆದಾಯದಿಂದ ಸಣ್ಣ ಭಾಗವನ್ನು ಹೂಡಿಕೆ ಮಾಡುವವರಿಗೆ ಆರ್‌ಡಿ ಉತ್ತಮ. ಆರ್‌ಡಿ ಮತ್ತು ಎಫ್‌ಡಿ ಎರಡೂ ಕಡಿಮೆ ತೆರಿಗೆ ಸ್ಲ್ಯಾಬ್‌ನಲ್ಲಿರುವ ರಿಸ್ಕ್‌ಗಳನ್ನು ತೆಗೆದುಕೊಳ್ಳದ ಹೂಡಿಕೆದಾರರಿಗೆ ಹೆಚ್ಚು ಸೂಕ್ತವಾಗಿವೆ. ನಿಮಗೆ ಯಾವುದು ಉತ್ತಮ ಎಂಬುದು ನಿಮ್ಮ ಆರ್ಥಿಕ ಗುರಿಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ. ನೀವು ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿದ್ದರೆ ಮತ್ತು ದ್ರವ್ಯತೆ ಅಗತ್ಯವಿಲ್ಲದಿದ್ದರೆ ಎಫ್‌ಡಿ ಸೂಕ್ತವಾಗಬಹುದು. ಮತ್ತೊಂದೆಡೆ ನೀವು ನಿಯಮಿತವಾಗಿ ಉಳಿತಾಯ ಮಾಡಲು ಮತ್ತು ದ್ರವ್ಯತೆಗೆ ಆದ್ಯತೆ ನೀಡಲು ಬಯಸಿದರೆ ಆರ್‌ಡಿ ಉತ್ತಮ ಆಯ್ಕೆಯಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸುವುದು ಮತ್ತು ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ

Money Guide: ಈ ಅಮ್ಮಂದಿರ ದಿನ ನಿಮ್ಮ ತಾಯಿಗೆ ಉಡುಗೊರೆ ಕೊಡಬೇಕೆಂಬ ಯೋಜನೆಯಲ್ಲಿದ್ದೀರಾ? ಹಾಗಾದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ. ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ನಾಳೆ (ಮೇ 12) ವಿಶ್ವ ಅಮ್ಮಂದಿರ ದಿನ (Mother’s Day 2024). ಜೀವನಪೂರ್ತಿ ನಮಗಾಗಿ ನಿಸ್ವಾರ್ಥವಾಗಿ ಮಿಡಿಯುವ ಜೀವಕ್ಕೆ ಚಿಕ್ಕದೊಂದು ಧನ್ಯವಾದ ಹೇಳುವ ದಿನ ಇದು. ಅಮ್ಮಂದಿರ ಋಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಒಂದು ಚಿಕ್ಕ ಉಡುಗೊರೆ ಕೊಡುವ ಮೂಲಕ ಅವರ ಮೊಗದಲ್ಲಿ ನಗು ಅರಳಿಸಬಹುದು. ಈ ಅಮ್ಮಂದಿರ ದಿನದಲ್ಲಿ ನಿಮ್ಮ ಅಮ್ಮನಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯ ಪೈಕಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Saving Certificate Scheme)ವೂ ಒಂದು. ಏನಿದು ಯೋಜನೆ? ಈ ಯೋಜನೆ ಮಹಿಳೆಯರಿಗೆ ಹೇಗೆ ಪ್ರಯೋಜಕಾರಿ? ಮುಂತಾದ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ (Money Guide).

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಎಂದರೇನು?

ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ವಿಶೇಷ ಉಳಿತಾಯ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿದ್ದು, ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸುತ್ತದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಕೇಂದ್ರ ಬಜೆಟ್ ತನ್ನ 2023ರ ಬಜೆಟ್‌ನಲ್ಲಿ ಘೋಷಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ಮಾರ್ಚ್ 2025ರವರೆಗೆ ಲಭ್ಯವಿದೆ. ಇದು 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ.ವರೆಗೆ ಠೇವಣಿ ಇಡುವ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಕೇವಲ ಮಹಿಳೆಯರು ಹಾಗೂ ಯುವತಿಯರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಮಹಿಳೆಯರು ಸ್ವತಃ ತಾವೇ ಹಾಗೂ ಅಪ್ರಾಪ್ತ ಬಾಲಕಿಯರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ನಿರ್ವಹಿಸಬಹುದಾಗಿದೆ. ಹೀಗಾಗಿ ಈ ಬಾರಿ ನೀವು ತಾಯಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಿ.

ಅರ್ಹತೆ

  • ಯಾವುದೇ ಭಾರತೀಯ ಮಹಿಳೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ.
  • ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ವಾಭಾವಿಕ ಅಥವಾ ಕಾನೂನುಬದ್ಧ ಪೋಷಕರು ಖಾತೆ ತೆರೆಯಬಹುದು.
  • ಗಮನಿಸಿ ವೈಯಕ್ತಿಕ ಖಾತೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
  • ಹೂಡಿಕೆಯ ಕನಿಷ್ಠ ಮೊತ್ತ 1,000 ರೂ. ಮತ್ತು ಗರಿಷ್ಠ ಮೊತ್ತ 2,00,000.

ಬಡ್ಡಿ ದರ

ಈ ಖಾತೆಯನ್ನು ಹೊಂದಿರುವವರಿಗೆ ವಾರ್ಷಿಕ 7.5 ಪ್ರತಿಶತ ನಿಶ್ಚಿತ ಬಡ್ಡಿ ದರವನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಸ್ಥಿರ ಠೇವಣಿ ಹಾಗೂ ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಬಡ್ಡಿದರ ಸಿಗಲಿದೆ.

ಅವಧಿ

ಈ ಯೋಜನೆಯ ಮೆಚ್ಯೂರಿಟಿ ಅವಧಿ 2 ವರ್ಷ. ಈ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಖಾತೆದಾರರಿಗೆ ಮೆಚ್ಯೂರಿಟಿ ಮೊತ್ತ ಪಾವತಿಯಾಗುತ್ತದೆ. ಒಂದು ವೇಳೆ ಅವಧಿ ಮೀರುವ ಮುನ್ನ ಹಿಂಪಡೆಯಬೇಕೆಂದರೆ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ. 40ರಷ್ಟು ಹಿಂಪಡೆಯಬಹುದು. ಆದರೆ ಖಾತೆಯನ್ನು ತೆರೆದು ಒಂದು ವರ್ಷ ಆಗಿರಬೇಕು. ಜತೆಗೆ ಆಯ್ದ ಸಂದರ್ಭಗಳಲ್ಲಿ ಖಾತೆಗಳನ್ನು ಅಕಾಲಿಕವಾಗಿ ಬಂದ್ ಮಾಡಬಹುದು.

ಖಾತೆ ತೆರೆಯುವುದು ಹೇಗೆ?

ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕ್‌ಗಳಲ್ಲಿ ತೆರೆಯಬಹುದು. ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಿ, ಕೆವೈಸಿ ದಾಖಲೆಗಳನ್ನು ಒದಗಿಸಿ ಆರಂಭಿಕ ಠೇವಣಿ ಮೊತ್ತವನ್ನು ಇಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Money Guide: ಭಾರತದಲ್ಲಿ ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲ ಕಡೆ ಏಕೀಕೃತ ಪಾವತಿ ಇಂಟರ್ಫೇಸ್ ಜಾರಿಯಲ್ಲಿದೆ. ಹೀಗಾಗಿ ಗೂಗಲ್‌ ಪೇ ಜನಪ್ರಿಯವಾಗಿದೆ. ಇದೀಗ ಗೂಗಲ್‌ ಕಂಪೆನಿ ಭಾರತದಲ್ಲಿ ತನ್ನ ವ್ಯಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಗೂಗಲ್ ವ್ಯಾಲೆಟ್‌ ಎಂದರೇನು? ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಗೂಗಲ್‌ ಪೇ (Google Pay) ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದಲ್ಲಿ ಸದ್ಯ ಡಿಜಿಟಲ್‌ ಪೇಮೆಂಟ್‌ ಜನಪ್ರಿಯಾಗಿದ್ದು, ಗೂಗಲ್‌ ಪೇ ಬಳಕೆದಾರರ ಸಂಖ್ಯೆ ಹೆಚ್ಚಿದೆ. ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲ ಕಡೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಗ್ರಾಹಕ ಸ್ನೇಹಿಯಾಗಿರುವ ಗೂಗಲ್‌ ಪೇಯ ಬಳಕೆಯೂ ವ್ಯಾಪಕವಾಗಿದೆ. ಈ ಮಧ್ಯೆ ಇದೀಗ ಗೂಗಲ್‌ ಭಾರತದಲ್ಲಿ ತನ್ನ ವ್ಯಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಗೂಗಲ್ ವ್ಯಾಲೆಟ್‌ (Google Wallet) ಎಂದರೇನು? ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಗೂಗಲ್‌ ಪೇ ಆ್ಯಪ್‌ಗಿಂತ ಗೂಗಲ್‌ ವ್ಯಾಲೆಟ್‌ನ ಕಾರ್ಯ ವೈಖರಿ ಭಿನ್ನ. ಗೂಗಲ್ ವಾಲೆಟ್ ಹೆಸರಿಗೆ ತಕ್ಕಂತೆ ನಮ್ಮ ವ್ಯಾಲೆಟ್‌ (ಪರ್ಸ್‌)ನಂತೆಯೇ ಕಾರ್ಯ ನಿರ್ವಹಿಸಲಿದೆ. ಈ ಆ್ಯಪ್‌ನ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿಲ್ಲ. ಬದಲಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್, ಬಸ್‌, ಮೆಟ್ರೋ ಟಿಕೆಟ್‌ ಸೇರಿದಂತೆ ಇತರ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಸರಳವಾಗಿ ಹೇಳುವುದಾದರೆ ಗೂಗಲ್ ವ್ಯಾಲೆಟ್‌ ಭಾರತದಲ್ಲಿ ಈಗಾಗಲೇ ಲಭ್ಯವಿರುವ ಡಿಜಿಲಾಕರ್‌ನಂತೆಯೇ ಕಾರ್ಯ ನಿರ್ವಹಿಸಲಿದೆ.

ಸುರಕ್ಷಿತ ವಿಧಾನ

ಇದು ಅತ್ಯಂತ ಸುರಕ್ಷಿತ ಖಾಸಗಿ ಡಿಜಿಟಲ್ ವ್ಯಾಲೆಟ್ ಎಂದು ಕಂಪನಿ ಹೇಳಿದೆ. ಗೂಗಲ್‌ 2022ರಲ್ಲಿ ಅಮೇರಿಕಾದಲ್ಲಿ ಈ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಆರಂಭಿಸಿತ್ತು. ಇದಾಗಿ ಸುಮಾರು 2 ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಾಚರಿಸುತ್ತಿದೆ. ಗೂಗಲ್‌ ವ್ಯಾಲೆಟ್‌ ಇದೀಗ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಸದ್ಯಕ್ಕೆ ಗೂಗಲ್ ತನ್ನ ವ್ಯಾಲೆಟ್ ಅನ್ನು ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಿದೆ.

ನೀವು ಗೂಗಲ್‌ ವ್ಯಾಲೆಟ್‌ನಲ್ಲಿ ಹಣಕಾಸಿನ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಉದಾಹರಣೆಗೆ ನಿಮ್ಮ ಚಲನಚಿತ್ರ ಟಿಕೆಟ್‌ಗಳು ಮತ್ತು ಈವೆಂಟ್ ಟಿಕೆಟ್‌ಗಳನ್ನು ಭೌತಿಕವಾಗಿ ಇಟ್ಟುಕೊಳ್ಳುವ ಬದಲು ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ದೇಶದ ದೊಡ್ಡ ಕಂಪನಿಗಳಾದ ಪಿವಿಪಿ ಮತ್ತು ಐನಾಕ್ಸ್‌ಗಳು ಈಗಾಗಲೇ ಗೂಗಲ್ ವ್ಯಾಲೆಟ್‌ನಲ್ಲಿ ಲಭ್ಯ.

ಬಳಸುವುದು ಹೇಗೆ?

  • ಗೂಗಲ್‌ ಪ್ಲೇ ಸ್ಟೋರ್‌ (Play Store)ಗೆ ಹೋಗಿ ಗೂಗಲ್‌ ವ್ಯಾಲೆಟ್‌ (Google Wallet) ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ.
  • ಅಪ್ಲಿಕೇಷನ್‌ ಓಪನ್‌ ಮಾಡಿ ‘Add to Walletʼ ಆಯ್ಕೆನ್ನು ಸೆಲೆಕ್ಟ್‌ ಮಾಡಿ. ಈಗ ನೀವು ಫೋಟೊ, ಲಾಯಲ್ಟಿ, ಗಿಫ್ಟ್‌ ಕಾರ್ಡ್‌ ಮತ್ತು ಟ್ರಾನ್ಸ್‌ಪೋರ್ಟ್‌ ಪಾಸ್‌ ಎನ್ನುವ ನಾಲ್ಕು ಆಯ್ಕೆಯನ್ನು ಪಡೆಯುತ್ತೀರಿ.
  • ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಬಳಸಿ ಪಾಸ್ ರಚಿಸಲು ಫೋಟೊ ಆಯ್ಕೆ ಮಾಡಿ.
  • ವಿವಿಧ ಬ್ರ್ಯಾಂಡ್‌ಗಳಿಂದ ನಿಮ್ಮ ಲಾಯಲ್ಟಿ ಪಾಯಿಂಟ್‌ಗಳನ್ನು ಸೇರಿಸಲು ಲಾಯಲ್ಟಿ ಆಯ್ಕೆ ಬಳಸಿ. ಅದೇ ರೀತಿ ಗಿಫ್ಟ್‌ ಕಾರ್ಡ್ ಮತ್ತು ಟ್ರಾನ್ಸ್‌ಪೋರ್ಟ್‌ ಪಾಸ್‌ ಅನ್ನು ನಿಮ್ಮ ವ್ಯಾಲೆಟ್‌ಗೆ ಸೇರಿಸಿ.

ಗಮನಿಸಿ ಈ ಆ್ಯಪ್‌ನಲ್ಲಿ ಮೊದಲೇ ಹೇಳಿದಂತೆ ನಗದು ಪಾವತಿ ಸಾಧ್ಯವಿಲ್ಲ. ಅದಕ್ಕಾಗಿ ಗೂಗಲ್‌ ಪೇಯನ್ನು ಬಳಸಿ.

ಇದನ್ನೂ ಓದಿ: Money Guide: ಈ ರಜೆಯಲ್ಲಿ ಮಕ್ಕಳಿಗೆ ಆರ್ಥಿಕತೆಯ ಪ್ರಾಕ್ಟಿಕಲ್‌ ಪಾಠ ಮಾಡಿ

Continue Reading

ಮನಿ-ಗೈಡ್

Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Money Guide: ರಾಷ್ಟ್ರೀಯ ಪಿಂಚಣಿ ಯೋಜನೆ (NPS) ದೇಶದಲ್ಲಿರುವ ಅತ್ಯುತ್ತಮ ನಿವೃತ್ತಿ ಯೋಜನೆ ಎನಿಸಿಕೊಂಡಿದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್‌ಪಿಎಸ್‌ ಖಾತೆ ನಿಷ್ಕ್ರೀಯವಾಗುತ್ತದೆ. ಇದನ್ನು ಹೇಗೆ ಸರಿಪಡಿಸಬಹುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಪ್ರತಿಯೊಬ್ಬ ಉದ್ಯೋಗಿಯೂ ಕೆಲಸಕ್ಕೆ ಸೇರಿದಾಗಿನಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವುದು ಅಗತ್ಯ. ಅದಕ್ಕಾಗಿ ಈಗಲೇ ಒಂದಷ್ಟು ಮೊತ್ತವನ್ನು ಕೂಡಿಡಲು ಆರಂಭಿಸಬೇಕು ಎಂದು ಸಲಹೆ ನೀಡುತ್ತಾರೆ ಆರ್ಥಿಕ ತಜ್ಞರು. ಇದಕ್ಕಾಗಿ ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ಕೂಡ ಒಂದು. ಎನ್‌ಪಿಎಸ್‌ ಅನ್ನು ನಿವೃತ್ತಿಗೆ ಉತ್ತಮ ಯೋಜನೆ ಎಂದು ಪರಿಗಣಿಸಲಾಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್‌ಪಿಎಸ್‌ ಖಾತೆ ನಿಷ್ಕ್ರೀಯವಾಗುತ್ತದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ಸರಿಪಡಿಸಬಹುದು? ಮುಂತಾದ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಸ್ಥಗಿತಗೊಂಡ ಎನ್‌ಪಿಎಸ್‌ ಖಾತೆಯನ್ನು ಸಕ್ರಿಯಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಈ ಕುರಿತಾದ ವಿವರ ಇಲ್ಲಿದೆ.

ಯಾಕಾಗಿ ಖಾತೆ ಸ್ಥಗಿತಗೊಳ್ಳುತ್ತದೆ?

ಕನಿಷ್ಠ ಪಾವತಿಯ ಕೊರತೆ: ಟೈರ್ 1 ಎನ್‌ಪಿಎಸ್‌ ಖಾತೆಗಳಿಗೆ ವಾರ್ಷಿಕ ಕನಿಷ್ಠ 1,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಒಂದು ವರ್ಷದೊಳಗೆ ಈ ನಿಯಮ ಪಾಲಿಸದಿದ್ದರೆ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಟೈರ್ 1 ಸ್ಥಗಿತಗೊಂಡರೆ ಟೈರ್ 2 ಖಾತೆಗಳು ಸಹ ನಿಷ್ಕ್ರಿಯವಾಗುತ್ತವೆ.

ಅಪೂರ್ಣ ಕೆವೈಸಿ ಪ್ರಕ್ರಿಯೆ: ಎನ್‌ಪಿಎಸ್‌ ಖಾತೆಗಳಿಗೆ ಕೆವೈಸಿ (Know Your Customer) ಅಪ್‌ಡೇಟ್‌ ಮಾಡುವುದು ಕಡ್ಡಾಯಗೊಳಿಸಲಾಗಿದೆ. ನೋಂದಣಿ ವೇಳೆ ಅಪೂರ್ಣ ಮಾಹಿತಿ ನೀಡಿದ್ದರೆ ಅಥವಾ ಸೂಕ್ತ ದಾಖಲೆ ಒದಗಿಸದಿದ್ದರೆ ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಳ್ಳುತ್ತದೆ.

ದಾಖಲಾತಿ ನಮೂನೆ ಸಲ್ಲಿಕೆಯ ವಿಳಂಬ: ತಾಂತ್ರಿಕ ದೋಷ ಅಥವಾ ಕೇಂದ್ರ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ (CRA) ದಾಖಲಾತಿ ನಮೂನೆಯನ್ನು ಸಲ್ಲಿಸುವಲ್ಲಿನ ವಿಳಂಬವು ಖಾತೆ ಸ್ಥಗಿತಗೊಳಿಸಲು ಕಾರಣವಾಗಬಹುದು.

ಆನ್‌ಲೈನ್‌ ಮೂಲಕ ಹೀಗೆ ಸಕ್ರಿಯಗೊಳಿಸಿ

ಕನಿಷ್ಠ ಕೊಡುಗೆ ಪಾವತಿಸಿ / ದಂಡ ಕಟ್ಟಿ: ಎನ್‌ಪಿಎಸ್‌ ಅಕೌಂಟ್‌ಗೆ ಲಾಗಿನ್‌ ಆಗಿ Contribution ವಿಭಾಗಕ್ಕೆ ತೆರಳಿ. ನಿಮ್ಮ ಖಾತೆ ಸ್ಥಗಿತಗೊಂಡ ಅವಧಿಯಿಂದ ತೊಡಗಿ ಇದುವರೆಗೆ ತಿಂಗಳಿಗೆ ಕನಿಷ್ಠ 500 ರೂ. ಪಾವತಿಸಿ. ಹೆಚ್ಚುವರಿಯಾಗಿ 100 ರೂ. ದಂಡವನ್ನೂ ಕಟ್ಟಿ.

ದೃಢೀಕರಣ ಮತ್ತು ಖಾತೆ ಪುನರುಜ್ಜೀವನ: ಆನ್‌ಲೈನ್‌ ಪಾವತಿಯನ್ನು ಯಶಸ್ವಿಯಾಗಿ ಮಾಡಿದ ನಂತರ ಇಮೇಲ್ ಅಕೌಂಟ್‌ಗೆ ದೃಢೀಕರಣದ ಸಂದೇಶ ಬರುತ್ತದೆ. ಬಳಿಕ ಪಿಎಫ್‌ಆರ್‌ಡಿಎ ನಿಮ್ಮ ಖಾತೆಯನ್ನು ಪರಿಶೀಲಿಸಿ ಕೆಲವೇ ದಿನಗಳಲ್ಲಿ ಅದನ್ನು ಮತ್ತೆ ಸಕ್ರಿಯಗೊಳಿಸುತ್ತದೆ.

ಆಫ್‌ಲೈನ್‌ ಮೂಲಕ ಸಕ್ರಿಯಗೊಳಿಸುವ ವಿಧಾನ

ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ: ದಂಡ ಸಹಿತ ಬಾಕಿ ಇರುವ ಮೊತ್ತವನ್ನು ಪಾವತಿಸಿ. ಬಳಿಕ ಎನ್‌ಪಿಎಸ್‌ ವೆಬ್‌ಸೈಟ್‌ನಿಂದ UOS-S10-A ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿ. ಅದನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಪ್ಯಾನ್‌ ಕಾರ್ಡ್‌ ಪ್ರತಿಯನ್ನು ಲಗತ್ತಿಸಿ. ಇದನ್ನು ನಿಮ್ಮ ಪಿಒಪಿ ಶಾಖೆ (ಬ್ಯಾಂಕ್ ಅಥವಾ ನಿಯೋಜಿತ ಏಜೆನ್ಸಿ)ಗೆ ನೀಡಿ. ಪಿಒಪಿ ನಿಮ್ಮ ಮನವಿಯನ್ನು ಪರಿಶೀಲಿಸಿ ಪಿಎಫ್‌ಆರ್‌ಡಿಎಗೆ ಕಳುಹಿಸುತ್ತದೆ. ಕೆಲವೇ ದಿನಗಳಲ್ಲಿ ಖಾತೆ ಸಕ್ರಿಯಗೊಂಡಿರುವ ಬಗ್ಗೆ ಎಸ್‌ಎಂಎಸ್‌ ಅಥವಾ ಇಮೇಲ್‌ಗೆ ಮಾಹಿತಿ ರವಾನೆಯಾಗುತ್ತದೆ.

ಆಧಾರ್ ದೃಢೀಕರಣ ಕಡ್ಡಾಯ

ದೇಶಾದ್ಯಂತ ಆನ್‌ಲೈನ್‌ ವಂಚನೆ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಖಾತೆಗಳ ಲಾಗಿನ್ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಏಪ್ರಿಲ್ 1ರಿಂದ ಹೊಸ ನಿಯಮ- ಕಡ್ಡಾಯ ಆಧಾರ್ ಅಥೆಂಟಿಕೇಷನ್‌ ಜಾರಿಗೆ ಬಂದಿದೆ.  

ಇದನ್ನೂ ಓದಿ: Money Guide: ಗಮನಿಸಿ; ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ: ಏನಿದು ಹೊಸ ನಿಯಮ ? ಯಾಕಾಗಿ ?

Continue Reading
Advertisement
Patanjali case
ದೇಶ12 mins ago

Patanjali Case: ಪತಂಜಲಿ ಕೇಸ್‌- ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌; IMA ಅಧ್ಯಕ್ಷನಿಗೆ ಛೀಮಾರಿ

T20 World Cup 2024
ಕ್ರೀಡೆ29 mins ago

T20 World Cup 2024: 20 ತಂಡಗಳ ಪೈಕಿ 19 ತಂಡ ಪ್ರಕಟ; ಪಾಕಿಸ್ತಾನ ಮಾತ್ರ ಬಾಕಿ

Job News
ಉದ್ಯೋಗ1 hour ago

Job News: ಅಟೆನ್ಷನ್‌ ಪ್ಲೀಸ್‌; ಸರ್ಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದು, ನಾಳೆ ಕೊನೆಯ ದಿನ

kurkure divorce viral news
ವೈರಲ್ ನ್ಯೂಸ್1 hour ago

Viral News: ಕುರ್ಕುರೆ ಪ್ಯಾಕ್‌ ತರದೇ ಹೋದ ಗಂಡನಿಗೆ ಡೈವೋರ್ಸ್!‌

Supriya Sule
ದೇಶ1 hour ago

Supriya Sule: ಇವಿಎಂ ಇದ್ದ ಸ್ಟ್ರಾಂಗ್‌ ರೂಂ ಸಿಸಿಟಿವಿ ಕ್ಯಾಮೆರಾ ಸ್ವಿಚ್‌ ಆಫ್‌; ಸುಪ್ರಿಯಾ ಸುಳೆ ಗಂಭೀರ ಆರೋಪ, EC ರಿಯಾಕ್ಟ್‌

Road Accident
ಕ್ರೈಂ2 hours ago

Road Accident: ಸ್ಕೂಟರ್‌ಗೆ ಟ್ರಕ್‌, ಲಾರಿಗೆ ಬಸ್‌, ಡಿವೈಡರ್‌ಗೆ ಕಾರು ಡಿಕ್ಕಿ; ಅಪಾಯದಿಂದ ಜಸ್ಟ್‌ ಮಿಸ್‌

HD Revanna released from jail Revanna Go straight to HD Deve Gowda house
ಕ್ರೈಂ2 hours ago

HD Revanna Released: ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು

Viral video
ವೈರಲ್ ನ್ಯೂಸ್2 hours ago

Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

Vaishnavi Gowda
ಕಿರುತೆರೆ2 hours ago

Vaishnavi Gowda: ನಟಿ ವೈಷ್ಣವಿ ಗೌಡಗೆ ನೋಟಿಸ್‌ ಕೊಟ್ಟ ಟ್ರಾಫಿಕ್‌ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ3 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು4 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ11 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ21 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ21 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ21 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ22 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ22 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಟ್ರೆಂಡಿಂಗ್‌