Murder Case : ಜೋಡಿ ಕೊಲೆ; ಪರಪುರುಷನ ಮೋಹಿಸಿದ ತಾಯಿಯನ್ನು ಕೊಚ್ಚಿ ಕೊಂದ ಮಗ - Vistara News

ವಿಜಯಪುರ

Murder Case : ಜೋಡಿ ಕೊಲೆ; ಪರಪುರುಷನ ಮೋಹಿಸಿದ ತಾಯಿಯನ್ನು ಕೊಚ್ಚಿ ಕೊಂದ ಮಗ

Vijayapura Double murder : ವಿಜಯಪುರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ (Murder Case) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಗಿದ್ದ ಅಕ್ರಮ ಸಂಬಂಧಕ್ಕೆ (Illicit Relationship) ಮಗನೇ ತನ್ನ ಸ್ನೇಹಿತರ ಜತೆ ಸೇರಿ ಹತ್ಯೆ ಮಾಡಿದ್ದಾನೆ.

VISTARANEWS.COM


on

Vijayapura double murder case The accused have been arrested
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯಪುರ: ಕಳೆದ ಮಾರ್ಚ್ 18ರಂದು ವಿಜಯಪುರದ (Vijayapura News) ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಮಹಿಳೆಯೊಬ್ಬಳ ಬರ್ಬರ (Murder Case) ಕೊಲೆಯಾಗಿತ್ತು. ಅಕ್ರಮ‌ ಸಂಬಂಧದ (Illicit Relationship) ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆ (Couple murder) ಆಗಿರಬಹುದೆಂದು ಪೊಲೀಸರು ಶಂಕಿಸಿದ್ದರು. ಆದರೆ ಕೊಲೆಗಾರರು ಯಾರು ಎಂಬ ಪ್ರಶ್ನೆ ಮೂಡಿತ್ತು. ಇದೀಗ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಮತ್ತು ಪಾರ್ವತಿ ತಳವಾರ (38) ಎಂಬುವವರ ಹತ್ಯೆ ಆಗಿತ್ತು. ಪಾರ್ವತಿ ಅವರ ಮಗ ಲಕ್ಷ್ಮಣ ತಳವಾರನೇ ಸಂಚು ರೂಪಿಸಿ ತಾಯಿಯನ್ನು ಹಾಗೂ ಆಕೆಯ ಜತೆಗಿದ್ದ ಸೋಮನನ್ನು ಹತ್ಯೆ ಮಾಡಿದ್ದ. ಲಕ್ಷ್ಮಣನಿಗೆ ಗೆಳೆಯರಾದ ಶಶಿಕುಮಾರ ಮಣಗೂರ, ಬಸವರಾಜ ಹಡಪದ ಸಾಥ್‌ ಕೊಟ್ಟಿದ್ದರು.

ಆಕಳವಾಡಿ ಹಾಗೂ ಮಾರಡಗಿ ರಸ್ತೆಯಲ್ಲಿ ಪಾರ್ವತಿ ಹಾಗೂ ಸೋಮ ಜತೆಯಾಗಿ ಗಣಿ ಗ್ರಾಮಕ್ಕೆ ಬರುವ ದಾರಿಯಲ್ಲಿ ಇವರಿಬ್ಬರನ್ನು ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದರು. ನಿಡಗುಂದಿ ತಾಲೂಕಿನ‌ ಮಾರಡಗಿ ತಾಂಡಾದ ಸಮೀಪ ಸೋಮವಾರ (ಮಾ.18) ರಾತ್ರಿ ಕೊಲೆ ನಡೆದಿತ್ತು. ಮರುದಿನ ಬೆಳಗ್ಗೆ ಸ್ಥಳೀಯರು ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಬಂದ ನಿಡಗುಂದಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮೃತರ ಹಿನ್ನೆಲೆ ಹುಡುಕುತ್ತಾ ಹೋದಾಗ ಇವರಿಬ್ಬರು ಅಕ್ರಮ ಸಂಬಂಧದಿಂದಲೇ ಕೊಲೆಯಾದರು ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ:Murder Case: ಮೂವರ ಸುಟ್ಟು ಕೊಲ್ಲಲು ಕಾರಣವಾಯ್ತು ‘ಬಂಗಾರದ ಹಂಡೆ’! ಬಯಲಾಯ್ತು ಭೀಕರ ಹತ್ಯೆಯ ಕರಾಳ ಮುಖ

ಹಣಕ್ಕಾಗಿ ಸ್ನೇಹಿತನಿಗೆ ಚಾಕು ಹಾಕಿದ ದುಷ್ಮನ್‌ಗಳು

ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಲ್ಲಿ ನಡೆದಿದೆ. ಪ್ರಕಾಶ್ ಮಾನೆ (24) ಕೊಲೆಯಾದವನು.

ಪ್ರಕಾಶ್‌ನ ಸ್ನೇಹಿತರಾದ ಕಿರಣ ಬಡಿಗೇರ ಹಾಗೂ ಸಂಗಮೇಶ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರಿಬ್ಬರ ವಿರುದ್ಧ ಕೊಲೆ ಕೇಸ್‌ ದಾಖಲಾಗಿದ್ದು, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಭಾರಿ ಗಾಳಿ, ಮಳೆಗೆ ಶೃಂಗೇರಿಯಲ್ಲಿ ವಿದ್ಯುತ್‌ ಕಡಿತ; ಶಿರಸಿಯಲ್ಲಿ ಉರುಳಿ ಬಿದ್ದ ಮರ

Karnataka Weather Forecast : ಮಂಗಳವಾರ ಸಂಜೆ ಚಿಕ್ಕಮಗಳೂರು, ಕಾರವಾರ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದರೆ, ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಈ ವಾರ ಪೂರ್ತಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Rain News) ನೀಡಿದೆ.

VISTARANEWS.COM


on

By

Karnataka Weather Forecast
Koo

ಚಿಕ್ಕಮಗಳೂರು/ಬೆಂಗಳೂರು: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಗಾಳಿ ಸಹಿತ ಭಾರಿ (Heavy Rain) ಮಳೆಯಾಗುತ್ತಿದೆ. ಮಂಗಳವಾರ ಸಂಜೆ ಶುರುವಾದ ಮಳೆಯು ಕಳೆದ ಒಂದು ಗಂಟೆಗೂ ಹೆಚ್ಚು ಸಮಯದಿಂದ ಸುರಿಯುತ್ತಿದೆ. ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಧಾರಕಾರ ಮಳೆ‌ಯಾಗುತ್ತಿದ್ದು, ಪ್ರವಾಸಿಗರು ಹಾಗೂ ಜನ-ಜೀವನ ಅಸ್ತವ್ಯಸ್ತವಾಗಿತ್ತು. ಇನ್ನೂ ಗಾಳಿ ಮಳೆಗೆ ಶೃಂಗೇರಿ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸತತ ಮಳೆಯಿಂದಾಗಿ (Rain News) ತುಂಗಾ ನದಿ ಹರಿವು ಕೊಂಚ ಏರಿಕೆಯಾಗುವ (Karnataka weather Forecast) ಸಾಧ್ಯತೆ ಇದೆ.

ಉತ್ತರಕನ್ನಡದಲ್ಲೂ ವರುಣಾರ್ಭಟ

ಉತ್ತರಕನ್ನಡದ ಘಟ್ಟದ ಮೇಲಿನ ತಾಲೂಕುಗಳಲ್ಲೂ ವರುಣಾರ್ಭಟ ಜೋರಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲೂ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಶಿರಸಿಯಲ್ಲಿ ಭಾರೀ ಮಳೆಗೆ ಮರಗಳು ಧರೆಗುರುಳಿದೆ. ನಗರದ ಸಹ್ಯಾದ್ರಿ ಕಾಲೋನಿಯಲ್ಲಿ ಮರ ಬಿದ್ದು, ವಿದ್ಯುತ್ ಕಂಬ ಮುರಿದು ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ. ಹತ್ತಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಕುಮಟಾ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದಾನೆ. ಅರ್ಧ ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಮಳೆಯಾದರೂ ಕರಾವಳಿಗೆ ವರುಣ ಕಾಲಿಟ್ಟಿರಲಿಲ್ಲ. ಇದೀಗ ವರುಣಾಗಮನದಿಂದ ಕರಾವಳಿ ಜನತೆ ಖುಷಿಯಾಗಿದ್ದಾರೆ. ಭಟ್ಕಳ, ಹೊನ್ನಾವರ, ಅಂಕೋಲಾ, ಕಾರವಾರ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ.

ಧಾರವಾಡದಲ್ಲಿ ಮಳೆಯ ಅಬ್ಬರ

ಧಾರವಾಡದಲ್ಲಿ ಮಂಗಳವಾರ ಬೆಳಗ್ಗೆನಿಂದಲ್ಲೂ ಮೋಡ ಕವಿದ ವಾತಾವರಣವಿತ್ತು. ಇಳಿ ಸಂಜೆಯಾಗುತ್ತಿದ್ದಂತೆ ಧಾರವಾಡ ನಗರಕ್ಕೆ ವರುಣನ ಆಗಮನವಾಗಿದೆ. ಕಳೆದ ಎರಡು ದಿನಗಳ ಹಿಂದೆ ಸುರಿದಿದ್ದ ಮಳೆಯು ಸ್ವಲ್ಪ ಸಮಯ ಬ್ರೇಕ್‌ ಕೊಟ್ಟಿತ್ತು. ಇಂದು ಮತ್ತೆ ಮಳೆ ಸುರಿದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಇದನ್ನೂ ಓದಿ: Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಮೇ 18ರ ವರೆಗೆ ಮಳೆ ಸಾಧ್ಯತೆ

ಮೇ 18ರ ವರೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗಲಿದೆ.

ಕೊಡಗು, ಮೈಸೂರು, ಮಂಡ್ಯದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ (40-50 ಕಿಮೀ)ಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಚಾಮರಾಜನಗರದಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಕನ್ನಡ, ಧಾರವಾಡ, ಗದಗ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗುವ ಸಾಧ್ಯತೆ ಇದೆ.

ಶ್ರೀರಂಗಪಟ್ಟಣದಲ್ಲಿ 16 ಸೆಂ.ಮೀ ಮಳೆ

ನಿನ್ನೆ ಸೋಮವಾರ (ಮೇ 13) ರಾಜ್ಯಾದ್ಯಂತ ಮಳೆಯಾಗಿದ್ದು, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಶ್ರೀರಂಗಪಟ್ಟಣದಲ್ಲಿ 16 ಸೆಂ.ಮೀ ಮಳೆಯಾಗಿದ್ದು, ಮಂಡ್ಯದ ಪಿಟಿಒನಲ್ಲಿ 9 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಶಿರಾಳಿಯಲ್ಲಿ ಗರಿಷ್ಠ ಉಷ್ಣಾಂಶ 38.4 ಡಿ.ಸೆನಷ್ಟು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Karnataka Rain: ಸೋಮವಾರ ರಾತ್ರಿ ಸುರಿದ ಮಳೆಗೆ (Heavy Rain) ಜನರು ಕಂಗಲಾಗಿದ್ದಾರೆ. ಹಲವೆಡೆ ಭಾರಿ ಮಳೆಗೆ (Karnataka Weather) ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿದ್ದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಜಾಗರಣೆ ಮಾಡುವಂತಾಯಿತು.

VISTARANEWS.COM


on

By

karnataka Rain Effected
Koo

ಬೆಂಗಗಳೂರು/ಬೆಳಗಾವಿ: ತಡರಾತ್ರಿ ಸುರಿದ ಮಳೆಯು (Karnataka Rain) ಅವಾಂತರವನ್ನೇ ಸೃಷ್ಟಿಸಿ ಮಾಡಿದೆ. ಬೆಂಗಳೂರಿನಲ್ಲಿ ರಾತ್ರಿ ಪೂರ್ತಿ ಅಬ್ಬರಿಸಿದ ಮಳೆಗೆ (Rain News) ಮರಗಳು ಧರೆಗುರುಳಿದ್ದವು. ನೃಪತುಂಗದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎದುರಿಗೆ ಮರದ ಕೊಂಬೆ ನೆಲಕ್ಕೆ ಉರುಳಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಬುಕ್‌ಫೀಲ್ಡ್‌ನಲ್ಲಿ ಮರ ಬಿದ್ದು ಕಾರೊಂದು ಜಖಂಗೊಂಡಿತ್ತು. ಚಾಮರಾಜಪೇಟೆಯ ಗುಡ್ಡದಹಳ್ಳಿಯಲ್ಲಿ ಮನೆಗಳಿಗೆ ಕೆಸರುಮಯ ನೀರು ನುಗ್ಗಿದ್ದರಿಂದ ಹೊರಹಾಕಲು ಜನರು ತೊಂದರೆ ಅನುಭವಿಸಿದರು.

ಮೈಸೂರಿನಲ್ಲಿ ಕುಸಿದು ಬಿದ್ದ ಮನೆ

ಭಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುರಿದ ಬಾರಿ ಬಿರುಗಾಳಿ ಸಹಿತ ಮಳೆಗೆ ಭಾಗ್ಯಮ್ಮ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಮನೆ ಕುಸಿದು ಬಿದ್ದಿದ್ದು, ವಾಸ ಮಾಡಲು ಮನೆ ಇಲ್ಲದೆ ಭಾಗ್ಯಮ್ಮ ಕಣ್ಣೀರು ಹಾಕಿದರು. ಮನೆಯಲ್ಲಿ ಸುಮಾರು 6 ತಿಂಗಳು ಸಣ್ಣ ಮಗುವಿದ್ದು ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದ ಮನೆ ಕುಸಿದು ಬಿದ್ದು ಕುಟುಂಬವು ಕಂಗಲಾಗಿದೆ. ಮನೆಯಲ್ಲಿದ್ದ ಸಾಮಾನುಗಳು ನಾಶವಾಗಿವೆ. ನಮಗೆ ಆದಷ್ಟು ಬೇಗ ಸರ್ಕಾರ ಪರಿಹಾರ ಮಾಡಿಕೊಡಬೇಕು ಎಂದು ಭಾಗ್ಯಮ್ಮ ಮನವಿ ಮಾಡಿದರು.

ವಿಜಯನಗರದಲ್ಲಿ ಮಳೆಗೆ ಬೆಳೆ ಹಾನಿ

ಕಳೆದ ರಾತ್ರಿ ಮಳೆ ಜೆತಗೆ ಬಿರುಗಾಳಿ ಬೀಸಿದ ಹಿನ್ನೆಲೆಯಲ್ಲಿ ಬಾಳೆ, ಭತ್ತ, ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ. ವಿಜಯನಗರದ ಹುರುಳಿಹಾಳ ಗ್ರಾಮದಲ್ಲಿ ಗಾಳಿ ಪ್ರಮಾಣ ಹೆಚ್ಚಿದರಿಂದ ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ. ಕಾನಾಹೊಸಹಳ್ಳಿ ಹೋಬಳಿಯ ಎಕ್ಕೆಗೊಂದಿ ಗ್ರಾಮದಲ್ಲಿ ರೇಷ್ಮೆ ಸಾಗಾಣೆ ಮನೆಗೆ ಹಾನಿಯಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ ಗುಡುಗು, ಮಿಂಚು ಸಿಡಿಲಿನ ಆರ್ಭಟ ಮಧ್ಯೆ ಸಾಧಾರಣ ಮಳೆ ವರದಿಯಾಗಿದೆ.

ಧರೆಗುರುಳಿದ ಮರಗಳು

ಚಿಕ್ಕೋಡಿ ಗಡಿ ತಾಲೂಕು ನಿಪ್ಪಾಣಿಯಲ್ಲಿ ರಣ ಗಾಳಿ-ಮಳೆಗೆ ಸಿಕ್ಕಿ ನಲುಗಿದೆ. ನಿಪ್ಪಾಣಿ ನಗರದ ವಿವಿಧೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ನಿಪ್ಪಾಣಿಯ ಭೀಮನಗರ,ವಿದ್ಯಾನಗರ,ಅಂಬೇಡ್ಕರ್ ನಗರದ ಹತ್ತಿರ ಮರಗಳು ಬಿದ್ದಿವೆ. ಮುನ್ಸಿಪಲ್ ಹೈಸ್ಕೂಲ್,ಅಬಕಾರಿ ಫೀಸ್ ಸೇರಿದಂತೆ ವಿವಿಧೆಡೆ ಹಾನಿಯಾಗಿದೆ. ಭಾರಿ ಗಾಳಿಗೆ ವಿದ್ಯುತ್ ಕಂಬಗಳು ವಾಲಿದರೆ, ಮನೆಯ ಚಾವಣೆ ಹಾರಿ ಹೋಗಿವೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ನಿಪ್ಪಾಣಿ ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ವಾಹನ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಹಾನಿಯಾದ ಪ್ರದೇಶಗಳಿಗೆ ಜಗದೀಶ ಹುಲಗೆಜ್ಜಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಿಪ್ಪಾಣಿ ನಗರ ತತ್ತರಿಸಿದೆ. ಭಾರಿ ಮಳೆಗೆ 20 ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿ ಹೋಗಿದೆ. ಪತ್ರಾಸ್ ಶೇಡ್ ಹಾಗೂ ಹಂಚಿನ ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಭಾರಿ ಮಳೆ ಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಮರಗಳ ಜತೆಗೆ ನಗರದಲ್ಲಿ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿವೆ. ಮರಗಳು ಬಿದ್ದು 10 ಕ್ಕೂ ಹೆಚ್ಚು ವಾಹನಗಳು ಸಹ ಜಖಂಗೊಂಡಿವೆ. ಕಳೆದ ರಾತ್ರಿಯಿಂದ ನಿಪ್ಪಾಣಿ ನಗರದಲ್ಲಿ ವಿದ್ಯುತ್ ಕಟ್ ಆಗಿದೆ. ನಿಪ್ಪಾಣಿ ನಗರಸಭೆಯಿಂದ ಮರಗಳ ತೆರುವು ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿಪ್ಪಾಣಿ ನಗರಸಭೆ ಅಧಿಕಾರಿಗಳು ಹಾನಿಯಾದ ಮನೆಗಳ ಸರ್ವೆಗೆ ಮುಂದಾಗಿದ್ದಾರೆ. ನಿಪ್ಪಾಣಿ ಪಟ್ಟಣದ ಅಂಬೇಡ್ಕರ್ ಗಲ್ಲಿಗೆ ಭೀಮ ನಗರ ಪ್ರದೇಶದಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; 6ನೇ ಆರೋಪಿಯ ಬಂಧನ

ಆನೇಕಲ್‌ನಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು

ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಮನೆಗಳಿಗೆ ಹಾಗೂ ಬಡಾವಣೆಗಳಿಗೆ ಕೊಳಚೆ ನೀರು ನುಗ್ಗಿದೆ. ಚರಂಡಿ-ರಾಜಕಾಲುವೆ ವ್ಯವಸ್ಥೆ ಸರಿ ಇಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ನೀರಿನಲ್ಲಿ ನಿವಾಸಿಗಳು ಕಾಲ ಕಳೆದಿದ್ದಾರೆ. ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಮನೆಯೊಳಗೆ ನುಗ್ಗಿದ ಕೊಳಚೆ ನೀರನ್ನು ಸ್ವಚ್ಛ ಮಾಡುವುದರಲ್ಲಿ ದಿನದೂಡುತ್ತಿದ್ದಾರೆ.

ವಿಜಯನಗರದಲ್ಲಿ ವರುಣನ ಕೃಪೆಗಾಗಿ ಜಪ – ತಪ

ಜಪ – ತಪ ಮಾಡಿದ ಕೇವಲ ಎಂಟು ದಿನದಲ್ಲಿ ವರುಣನ ಆಗಮನವಾಗಿದೆ. ಕಳೆದ ಒಂದು ವಾರದಲ್ಲಿ ಎರಡು ಬಾರಿ ವಿಜಯನಗರದ ಹೊಸಪೇಟೆ ತಾಲೂಕಿನಲ್ಲಿ ಮಳೆ ಸುರಿದಿದೆ. ಭೀಕರ ಬರಗಾಲ, ಬಿಸಿಲಿನ ಧಗೆಯಿಂದ ಜನರು ಆಂಜನೇಯನ ಮೊರೆ ಹೋಗಿದ್ದರು. ಮಳೆಗಾಗಿ ನೂರಾರು ವರ್ಷ ಹಳೆಯದಾದ ಐತಿಹಾಸಿಕ ಹಿನ್ನೆಲೆವೊಳ್ಳ ಆಂಜನೇಯನಿಗೆ ಮಳೆಗಾಗಿ ನಿತ್ಯ ಪೂಜೆ, ಭಜನೆ ಮಾಡುತ್ತಿದ್ದರು. ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿರೋ ಐತಿಹಾಸಿಕ ಆಂಜನೇಯ ದೇಗುಲವನ್ನು ವಿಜಯನಗರ ಅರಸರ ಕಾಲದಿಂದಲೂ ವಿಶೇಷ ಸಲ್ಲಿಕೆ ಮಾಡುತ್ತಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಂತ ನೀರು

ಧಾರಾಕಾರ ಮಳೆಗೆ ಹಳೇ ಮೈ-ಬೆಂ ಹೆದ್ದಾರಿಯಲ್ಲಿ ಜಲಾವೃತಗೊಂಡಿತ್ತು. ಶ್ರೀರಂಗಪಟ್ಟಣದ ಅಗ್ನಿಶಾಮಕ ದಳದ ಎದುರಿನ ಮೈ- ಬೆಂ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ಮೂರು ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಹೆದ್ದಾರಿಯಲ್ಲಿ ತೆರಳಲಾಗದೆ ಬೈಕ್ ಸವಾರರು ಬದಲಿ ರಸ್ತೆಯಲ್ಲಿ ಸಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Karnataka weather Forecast: ರಾಜ್ಯದ ವಿವಿಧೆಡೆ ಮಳೆ ಅಬ್ಬರ (Heavy Rain)ಮುಂದುವರಿದಿದೆ. ಮೇ 14ರಂದು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದ್ದು, ಹವಾಮಾನ ಇಲಾಖೆಯು 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ದಕ್ಷಿಣ ಒಳನಾಡು, ಉತ್ತರ ಒಳನಾಡು ಸೇರಿ ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು ಗಾಳಿಯೊಂದಿಗೆ (30-40 ಕಿ.ಮೀ) ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದರೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಇದನ್ನೂ ಓದಿ: HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

ಬೆಂಗಳೂರು ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಮತ್ತು 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಯೆಲ್ಲೋ ಅಲರ್ಟ್‌:

ಭಾರೀ ಮಳೆಯೊಂದಿಗೆ ಗುಡುಗು ಹಾಗೂ ಬಿರುಗಾಳಿ ಇರಲಿದ್ದು ಹೀಗಾಗಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಪ್ರಮುಖವಾಗಿ ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಯಾದಗಿರಿ, ಕಲಬುರಗಿ, ಬಾಗಲಕೋಟೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Rain News : ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಗಾಳಿಯೊಟ್ಟಿಗೆ ಧಾರಾಕಾರ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಭಾನುವಾರದಂದು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿರುವ (Rain News) ವರದಿ ಆಗಿದೆ. ಅತಿ ಹೆಚ್ಚು ಮಳೆಯು ಪುತ್ತೂರು ಹಾಗೂ ರಾಯಚೂರಿನಲ್ಲಿ ತಲಾ 10 ಸೆಂ.ಮೀ (Karnataka Weather Forecast) ಮಳೆಯಾಗಿದೆ. ಉಳಿದಂತೆ ಉಪ್ಪಿನಂಗಡಿ 9, ಸಿರಾ ಮತ್ತು ಕೊಟ್ಟಿಗೆಹಾರದಲ್ಲಿ ತಲಾ 8 ಸೆಂ.ಮೀ, ಗಬ್ಬೂರು, ಬೆಳಗಾವಿಯಲ್ಲಿ 7 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ 39.4 ಡಿ. ಸೆ ದಾಖಲಾಗಿದೆ.

ಕಾಸರಗೋಡಿನಲ್ಲಿ ಗಾಳಿ ಮಳೆಗೆ ನೆಲಕ್ಕುರುಳಿದ ಬೃಹತ್ ಹೋರ್ಡಿಂಗ್‌

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೇರಳದ ಕಾಸರಗೋಡಿನ ಬಸ್ ನಿಲ್ದಾಣ ಬಳಿ ಗಾಳಿ ಸಹಿತ ಮಳೆಯಾಗುತ್ತಿದೆ. ಗಾಳಿ ಮಳೆಗೆ ಬೃಹತ್ ಹೋರ್ಡಿಂಗ್‌ ನೆಲಕ್ಕುರುಳಿದ ಘಟನೆ ನಡೆದಿದೆ. ಹೋರ್ಡಿಂಗ್‌ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಹೋರ್ಡಿಂಗ್‌ ಬಿದ್ದು ಕೆಳಗಡೆ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿಯಾಗಿದೆ. ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪಾರ್ಕಿಂಗ್‌ ಜಾಗದಲ್ಲಿ ಜನರು ಇರಲಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಹಾಸನದಲ್ಲಿ ಉರುಳಿ ಬಿದ್ದ ಮರ

ಹಾಸನ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮರವೊಂದು ಉರುಳಿ ಬಿದ್ದಿತ್ತು. ಪರಿಣಾಮ ಎರಡು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್‌ ರಸ್ತೆಯಲ್ಲಿ ಘಟನೆ ನಡೆದಿದೆ.

ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಗೆ ಮರ ಬಿದ್ದಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು. ಸ್ಥಳಕ್ಕಾಗಮಿಸಿ ಟ್ರಾಫಿಕ್‌ ಪೊಲೀಸರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿದರು.

ಇದನ್ನೂ ಓದಿ: Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಮಳೆ ಜತೆಗೆ 60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಬಿರುಗಾಳಿ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದ್ದು, ಮೇ 14ರಂದು ಭಾರಿ ಮಳೆಯೊಂದಿಗೆ ಗಾಳಿ ವೇಗವು 50-60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಚಿಕ್ಕಮಗಳೂರು, ಹಾಸನ, ಮಂಡ್ಯ,ಮೈಸೂರು ಸೇರಿ ಕಲಬುರಗಿ, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೋಲಾರ, ವಿಜಯಪುರ, ಬಾಗಲಕೋಟೆ, ಬೀದರ್‌, ಧಾರವಾಡ,ಗದಗದಲ್ಲಿ ಗುಡುಗು, ಸಿಡಿಲಿನೊಂದಿಗೆ ಜೋರಾದ ಗಾಳಿಯೊಂದಿಗೆ ಮಳೆಯಾಗಲಿದೆ. ಉಳಿದೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ನಂತರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
WhatsApp Update
ತಂತ್ರಜ್ಞಾನ6 mins ago

WhatsApp Update: ಅಪ್‌ಡೇಟ್ ಆಗಲಿದೆ ವಾಟ್ಸ್‌ಆಪ್ ಚಾನೆಲ್; ಹೊಸ ಆಪ್ಶನ್‌ ಏನೇನು?

Spoken Language
Latest13 mins ago

Spoken Language: ವಿಶ್ವದಲ್ಲಿ ಅತೀ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿ ಯಾವ ಸ್ಥಾನದಲ್ಲಿದೆ ಗೊತ್ತೆ?

Karnataka Weather Forecast
ಮಳೆ21 mins ago

Karnataka Weather : ಭಾರಿ ಗಾಳಿ, ಮಳೆಗೆ ಶೃಂಗೇರಿಯಲ್ಲಿ ವಿದ್ಯುತ್‌ ಕಡಿತ; ಶಿರಸಿಯಲ್ಲಿ ಉರುಳಿ ಬಿದ್ದ ಮರ

Prajwal Revanna Case
ಕರ್ನಾಟಕ27 mins ago

Prajwal Revanna Case: ಪ್ರೀತಂಗೌಡರ ಮತ್ತಿಬ್ಬರು ಆಪ್ತರ ಹೋಟೆಲ್‌, ಬಾರ್‌ ಮೇಲೆ ಎಸ್‌ಐಟಿ ದಾಳಿ

Warning For Android Users
ಗ್ಯಾಜೆಟ್ಸ್29 mins ago

Warning For Android Users: ಆಂಡ್ರಾಯ್ಡ್ ಬಳಕೆದಾರರಿಗೆ ಕಾದಿದೆ ಅಪಾಯ; ಸರ್ಕಾರದಿಂದ ಗಂಭೀರ ಎಚ್ಚರಿಕೆ

Dog Attack
ದೇಶ35 mins ago

Dog Attack : ಮನೆಯಲ್ಲಿ ಮಲಗಿಸಿದ್ದ ಐದು ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿ!

Fashion Trend
ಫ್ಯಾಷನ್37 mins ago

Fashion Trend: ಯುವತಿಯರನ್ನು ಸೆಳೆದಿರುವ 3 ಶೈಲಿಯ ವೈಟ್‌ ಪ್ಯಾಂಟ್‌ಗಳಿವು!

HSRP Number Plate Registration Deadline Near Will the government impose fines
ಬೆಂಗಳೂರು60 mins ago

HSRP Number Plate: ಬಂದೇ ಬಿಡ್ತು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಡೆಡ್‌ಲೈನ್‌! ಸರ್ಕಾರದಿಂದ ದಂಡಾಸ್ತ್ರ ಪ್ರಯೋಗ?

kodagu News Woman gives birth to baby in ambulance
ಕೊಡಗು1 hour ago

kodagu News : ಒಮ್ಮಿಂದೊಮ್ಮೆಗೇ ಜೋರಾಯಿತು ನೋವು; ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ ಸ್ಟಾಫ್‌ ನರ್ಸ್‌

IPL 2024
ಪ್ರಮುಖ ಸುದ್ದಿ1 hour ago

IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್​ಗೆ ತಿರುಗೇಟು ಕೊಟ್ಟ ಗಂಭೀರ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

CM Siddaramaiah says Our government is stable for 5 years BJP will disintegrate
Lok Sabha Election 20242 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20245 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ6 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು7 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ14 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ24 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ24 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ1 day ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ1 day ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌