MI vs GT: ಮಾಜಿ ತಂಡದ ವಿರುದ್ಧವೇ ಸೋಲು ಕಂಡ ಹಾರ್ದಿಕ್​ ಪಾಂಡ್ಯ - Vistara News

ಕ್ರೀಡೆ

MI vs GT: ಮಾಜಿ ತಂಡದ ವಿರುದ್ಧವೇ ಸೋಲು ಕಂಡ ಹಾರ್ದಿಕ್​ ಪಾಂಡ್ಯ

MI vs GT: ಗುಜರಾತ್​ ಗೆಲುವಿನೊಂದಿಗೆ ಹಾಲಿ ಆವೃತ್ತಿ ಐಪಿಎಲ್​ನಲ್ಲಿ ನಡೆದ ಎಲ್ಲ 5 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದಂತಾಯಿತು.

VISTARANEWS.COM


on

Gujarat Titans vs Mumbai Indians
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಅತ್ಯಂತ ರೋಚಕವಾಗಿ ಸಾಗಿದ ಸಣ್ಣ ಮೊತ್ತದ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡ ಗುಜರಾತ್​ ಟೈಟಾನ್ಸ್(Gujarat Titans)​ವಿರುದ್ಧ 6 ರನ್​ಗಳ ಸೋಲು ಕಂಡಿದೆ. ಸೋಲಿನಿಂದ ಹಾರ್ದಿಕ್​ ಪಾಂಡ್ಯಗೆ ಭಾರಿ ಮುಖಭಂಗವಾಯಿತು. ಮಾಜಿ ತಂಡದ ವಿರುದ್ಧವೇ ಸೋಲಿನ ಅವಮಾನಕ್ಕೆ ಒಳಗಾದರು.

ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್, ಜಸ್​ಪ್ರೀತ್​ ಬುಮ್ರಾ ಘಾತಕದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ ಬಾರಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್(MI vs GT) ಭರ್ತಿ 20 ಓವರ್​ ಆಡಿ​ 9 ವಿಕೆಟ್​ ಕಳೆದುಕೊಂಡು 162 ರನ್​ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಗುಜರಾತ್​ ಗೆಲುವಿನೊಂದಿಗೆ ಹಾಲಿ ಆವೃತ್ತಿಯಲ್ಲಿ ನಡೆದ ಎಲ್ಲ 5 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದಂತಾಯಿತು.

ಇದನ್ನೂ ಓದಿ RR vs LSG: ​ರಾಜಸ್ಥಾನ್ ವಿರುದ್ಧ ಹೋರಾಡಿ ಸೋತ ಲಕ್ನೋ ಸೂಪರ್​ಜೈಂಟ್ಸ್

ಹಲವು ಬಾರಿ ದೇಶಿಯ ಕ್ರಿಕೆಟ್​ನಲ್ಲಿ ಭಾಗಿಯಾಗುವಂತೆ ಬಿಸಿಸಿಐ(BCCI) ನೀಡಿದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದೆ ಕೇಂದ್ರ ಗುತ್ತಿಗೆ(BCCI Annual Contract) ಪಟ್ಟಿಯಿಂದ ಹೊರಬಿದ್ದ ಇಶಾನ್‌ ಕಿಶನ್​(Ishan Kishan) ನಾಲ್ಕು ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಮಾಜಿ ನಾಯಕ ರೋಹಿತ್​ ಶರ್ಮ ಅವರು 29 ಎಸೆತ ಎದುರಿಸಿ 7 ಆಕರ್ಷಕ ಬೌಂಡರಿ ಹಾಗು 1 ಸಿಕ್ಸರ್​ ಸಿಡಿಸಿ 43 ರನ್​ ಬಾರಿಸಿದರು. ನಮನ್ ಧೀರ್ 10 ಎಸೆತದಿಂದ 20 ರನ್​ ಗಳಿಸಿದರು. ಡೆವಾಲ್ಡ್ ಬ್ರೆವಿಸ್ ಅವರು ಮೋಹಿತ್​ ಶರ್ಮ ಹಿಡಿದ ಭಯಾನಕ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು.

ಅಂತಿಮ ಓವರ್​ನಲ್ಲಿ ಮುಂಬೈ ಗೆಲುವಿಗೆ 19 ರನ್​ ತೆಗೆಯುವ ಸವಾಲು ಎದುರಾಯಿತು. ಉಮೇಶ್​ ಯಾದವ್​ ಎಸೆದ ಈ ಓವರ್​ನ ಮೊದೆಲೆರಡು ಎಸೆತಗಳಿಗೆ ನಾಯಕ ಪಾಂಡ್ಯ ಸತತವಾಗಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಪಂದ್ಯವನ್ನು ರೋಚಹ ಹಂತಕ್ಕೆ ತಂದು ನಿಲ್ಲಿಸಿದರು. ಇನ್ನೇನು ಪಾಂಡ್ಯ ಗೆಲುವಿನ ಹೀರೊ ಆಗುತ್ತಾರೆ ಎನ್ನುವಷ್ಟರಲ್ಲಿ ಮೂರನೇ ಎಸೆತದಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಮುಂದಿನ ಎಸೆತದಲ್ಲಿಯೂ ಉಮೇಶ್​ ಮತ್ತೊಂದು ವಿಕೆಟ್​ ಕಿತ್ತರು. ವಿಲನ್​ ಆಗಬೇಕಿದ್ದ ಅವರು ಕೊನೆಗೆ ಹೀರೊ ಆಗಿ ಮೆರೆದಾಡಿದರು.

ಗುಜರಾತ್​ಗೆ ಆಸರೆಯಾದ ಸಾಯಿ ಸುದರ್ಶನ್, ಗಿಲ್


ಗುಜರಾತ್​ ಪರ ನಾಯಕ ಶುಭಮನ್​ ಗಿಲ್​(31) ಮತ್ತು ಸಾಯಿ ಸುದರ್ಶನ್(45) ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನು ಕೂಡ ದೊಡ್ಡ ಮೊತ್ತ ಪೇರಿಸುವಲ್ಲಿ ಯಶಸ್ಸು ಕಾಣಲಿಲಿಲ್ಲ. ಹಾರ್ದಿಕ್​ ಪಾಂಡ್ಯ ಎಸೆದ ಇನಿಂಗ್ಸ್​ನ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ವೃದ್ಧಿಮಾನ್​ ಸಾಹಾ 4 ಬೌಂಡರಿ ಬಾರಿಸಿ ಸಿಡಿಯುವ ಸೂಚನೆ ನೀಡಿದರೂ ಕೂಡ 19 ರನ್​ಗೆ ಆಟ ಮುಗಿಸಿದರು. ಅಂತಿಮ ಹಂತದಲ್ಲಿ ರಾಹುಲ್​ ತೆವಾಟಿಯ 22 ರನ್​ ಬಾರಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸುವಲ್ಲಿ ನೆರವಾದರು. ಚೊಚ್ಚಲ ಐಪಿಎಲ್​ ಪಂದ್ಯವಾಡಿದ ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಜಿ 27 ರನ್​ಗೆ 2 ವಿಕೆಟ್​ ಉರುಳಿಸಿದರು. ಬುಮ್ರಾ ಕೇವಲ 14 ರನ್ ನೀಡಿ 3 ವಿಕೆಟ್​ ಪಡೆದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

India vs Ireland: ನಿಧಾನಗತಿಯ ಟ್ರ್ಯಾಕ್​ನಲ್ಲಿ ಆರಂಭದಲ್ಲಿ ರನ್​ ಗಳಿಸಲು ತಿಣುಕಾಡಿದ ರೋಹಿತ್, ಆ​ ಬಳಿಕ ಸಿಡಿದು ನಿಂತರು. ಸತತವಾಗಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ಮೈಲುಗಲ್ಲು ನಿರ್ಮಿಸಿದರು.

VISTARANEWS.COM


on

India vs Ireland
Koo

ನ್ಯೂಯಾರ್ಕ್​: ಹಾರ್ದಿಕ್​ ಪಾಂಡ್ಯ(3), ಜಸ್​ಪ್ರೀತ್​ ಬುಮ್ರಾ(2) ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ, ನಾಯಕ ರೋಹಿತ್​ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಐರ್ಲೆಂಡ್(India vs Ireland)​ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ (T20 World Cup 2024 ಶುಭಾರಂಭ ಕಂಡಿದೆ. ಭಾರತ ತನ್ನ ದ್ವಿತೀಯ ಪಂದ್ಯವನ್ನು ಜೂನ್​ 9 ರಂದು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಇತ್ತಂಡಗಳ ಈ ಹೈವೋಲ್ಟೇಜ್​ ಪಂದ್ಯ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಲ್ಲಿನ ನಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ನಾಯಕ ರೋಹಿತ್​ ಶರ್ಮಾ ಅವರ ಆಯ್ಕೆಯನ್ನು ಬೌಲರ್​ಗಳು ಸಮರ್ಥಿಸಿಕೊಂಡರು. ಹಾರ್ದಿಕ್​ ಪಾಂಡ್ಯ, ಅರ್ಶದೀಪ್​, ಜಸ್​ಪ್ರೀತ್ ಬುಮ್ರಾ, ಸಿರಾಜ್ ಮತ್ತು ಅಕ್ಷರ್​​ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ ಕಿತ್ತು ಪಾರಮ್ಯ ಮೆರೆದರು. ಭಾರತೀಯ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಐರ್ಲೆಂಡ್​ ಕೇವಲ 96 ರನ್​ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಭಾರತ, ಈ ಸಣ್ಣ ಮೊತ್ತವನ್ನು 12.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 97 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಕೊಹ್ಲಿವಿಫಲ


ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, ಕೊಹ್ಲಿ ಈ ಪ್ರಯೋಗದಲ್ಲಿ ಯಶಸ್ಸು ಕಾಣಲಿಲ್ಲ. ಕೇವಲ 1 ರನ್​ಗೆ ವಿಕೆಟ್​ ಕಳೆದುಕೊಂಡರು. ಇದಕ್ಕೂ ಮುನ್ನ ಈ ಜೋಡಿ 2019ರಲ್ಲಿ ಅಹಮದಾಬಾದ್​ನಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯಲ್ಲಿ ಆರಂಭಿಕರಾಗಿ ಬ್ಯಾಟ್​ ಬೀಸಿತ್ತು. ಕೊಹ್ಲಿ ಐರ್ಲೆಂಡ್​ ವಿರುದ್ಧ ಆರಂಭಿಕನಾಗಿ ಆಡಿದ ಕಾರಣ ಜೈಸ್ವಾಲ್​ಗೆ ಅವಕಾಶ ಕೈತಪ್ಪಿತು.

ರೋಹಿತ್​ ಅರ್ಧಶತಕ


ನಿಧಾನಗತಿಯ ಟ್ರ್ಯಾಕ್​ನಲ್ಲಿ ಮೊದಲು ರನ್​ ಗಳಿಸಲು ತಿಣುಕಾಡಿದ ರೋಹಿತ್, ಆ​ ಬಳಿಕ ಸಿಡಿದು ನಿಂತರು. ಸತತ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ಮೈಲುಗಲ್ಲು ನಿರ್ಮಿಸಿದರು. 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರೋಹಿತ್​, 52 ರನ್​ ಗಳಿಸಿದ ವೇಳೆ ಭುಜದ ಗಾಯದ ಸಮಸ್ಯೆಗೆ ಸಿಲುಕಿ ರಿಟರ್ಡ್ ಹರ್ಟ್ ಆದರು. ಅವರ ಈ ಅರ್ಧಶತಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಅಂತಿಮವಾಗಿ ರಿಷಭ್​ ಪಂತ್ ಅಜೇಯ 36(3 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿಗೆ ರನ್​ ಬೇಕಿದ್ದಾಗ ಸಿಕ್ಸರ್​ ಬಾರಿಸುವ ಯತ್ನದಲ್ಲಿ ವಿಫಲವಾದ ಸೂರ್ಯಕುಮಾರ್(2)​ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು.

ಇದಕ್ಕೂ ಮುನ್ನ ಇನಿಂಗ್ಸ್​ ಆರಂಭಿಸಿದ ಐರ್ಲೆಂಡ್​ಗೆ ಎಡಗೈ ವೇಗಿ ಅರ್ಶ್​ದೀಪ್​ ತಮ್ಮ ದ್ವಿತೀಯ ಓವರ್​ನಲ್ಲಿ ಆಘಾತವಿಕ್ಕಿದರು. ನಾಯಕ ಪೌಲ್​ ಸ್ಟಿರ್ಲಿಂಗ್(7) ವಿಕೆಟ್​ ಕಿತ್ತು ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇಷ್ಟಕ್ಕೇ ತೃಪ್ತಿಯಾಗದ ಅರ್ಶ್​ದೀಪ್ ಇದೇ ಓವರ್​ನ ಅಂತಿಮ ಎಸೆತದಲ್ಲಿ ಮತ್ತೊಂದು ವಿಕೆಟ್​ ಉಡಾಯಿಸಿದರು. ಐರ್ಲೆಂಡ್​ 9 ರನ್​ಗೆ ಆರಂಭಿಕರಿಬ್ಬರ ವಿಕೆಟ್​ ಕಳೆದುಕೊಂಡಿತು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ

ಅರ್ಶದೀಪ್​ ಬಳಿಕ ಜಸ್​ಪ್ರೀತ್​ ಬುಮ್ರಾ ಮತ್ತು ಹಾರ್ದಿಕ್​ ಪಾಂಡ್ಯ ಕೂಡ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ ಬೇಟೆಯಾಡಿದರು. ಮೊದಲೇ ಆರಂಭಿಕ ಆಘಾತ ಕಂಡಿದ್ದ ಐರ್ಲೆಂಡ್​ಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಬಡಬಡನೆ ವಿಕೆಟ್​ ಕಳೆದುಕೊಂಡು ಪೆವಿಯನ್​ ಕಡೆಗೆ ಹೆಜ್ಜೆ ಹಾಕಿದರು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ ಜೋಶುವಾ ಲಿಟಲ್(14) ಮತ್ತು 7ನೇ ಕ್ರಮಾಂಕದ ಬ್ಯಾಟರ್​ ಗರೆಥ್ ಡೆಲಾನಿ ಕೊನೆಯ ಹಂತದಲ್ಲಿ ಶಕ್ತಿ ಮೀರಿ ನಡೆಸಿದ ಹೋರಾಟದ ಫಲದಿಂದ ತಂಡ 100ರ ಸನಿಹದ ಮೊತ್ತ ಕಲೆಹಾಕಿತು.

ಪಾಂಡ್ಯ ಬೌಲಿಂಗ್​ ಕಮಾಲ್​

ಆರಂಭಿಕ ಮೂರು ಓವರ್​ಗಳಲ್ಲಿ ಉತ್ತಮ ಬೌಲಿಂಗ್​ ದಾಳಿ ನಡೆಸಿ 2 ವಿಕೆಟ್​ ಕಿತ್ತಿದ್ದ ಅರ್ಶದೀಪ್​ ಸಿಂಗ್​ ತಮ್ಮ ಅಂತಿಮ ಓವರ್​ನಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್​ ಬಿಟ್ಟುಕೊಟ್ಟು 15 ರನ್​ ಹೊಡೆಸಿಕೊಂಡರು. ಗರೆಥ್ ಡೆಲಾನಿ 14 ಎಸೆತಗಳಿಂದ ತಲಾ 2 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 26 ರನ್​ ಗಳಿಸಿ ರನೌಟ್​ ಆದರು. ಇವರ ವಿಕೆಟ್​ ಪತನದೊಂದಿಗೆ ಐರ್ಲೆಂಡ್​ ಬ್ಯಾಟಿಂಗ್​ ಇನಿಂಗ್ಸ್​ ಕೂಡ ಮುಕ್ತಾಯ ಕಂಡಿತು. ಭಾರತ ಪರ ಉಪನಾಯಕ ಹಾರ್ದಿಕ್​ ಪಾಂಡ್ಯ 4 ಓವರ್​ ಎಸೆದು 1 ಮೇಡನ್​ ಸಹಿತ 27 ರನ್​ ವೆಚ್ಚದಲ್ಲಿ 3 ವಿಕೆಟ್​ ಉರುಳಿಸಿದರು. ಉಳಿದಂತೆ ಬುಮ್ರಾ ಮತ್ತು ಅರ್ಶ್​ದೀಪ್​ ತಲಾ 2, ಸಿರಾಜ್​ ಮತ್ತು ಅಕ್ಷರ್​ ತಲಾ 1 ವಿಕೆಟ್​ ಪಡೆದರು. ಆದರೆ ಅನುಭವಿ ಸ್ಪಿನ್ನರ್​ ಜಡೇಜಾ ವಿಕೆಟ್​ ಲೆಸ್​ ಎನಿಸಿಕೊಂಡರು. ಅಲ್ಲದೆ ಒಂದು ಕ್ಯಾಚ್​ ಕೂಡ ಕೈಚೆಲ್ಲಿದರು. ಅಕ್ಷರ್​ ಪಟೇಲ್​ ಅವರು ಒಂದು ವಿಕೆಟ್​ ಕೀಳುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದ ಮೈಲುಗಲ್ಲು ತಲುಪಿದರು.

Continue Reading

ಕ್ರೀಡೆ

French Open 2024: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ

French Open 2024: ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಅನುಭವಿ ಆಟಗಾರ್ತಿ ಕಜಾಕ್‌ಸ್ಥಾನದ ಎಲೆನಾ ರಿಬಕಿನಾ(Elena Rybakina) ಅವರು ಆಘಾತಕಾರಿ ಸೋಲು ಕಂಡಿದ್ದಾರೆ.

VISTARANEWS.COM


on

French Open 2024
Koo

ಪ್ಯಾರಿಸ್​: ಫ್ರೆಂಚ್‌ ಓಪನ್‌(French Open 2024) ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್‌ ಬೋಪಣ್ಣ(Rohan Bopanna)-ಮ್ಯಾಥ್ಯೂ ಎಬ್ಡೆನ್‌(Matthew Ebden) ಕಠಿಣ ಹೋರಾಟದ ಬಳಿಕ ಸೆಮಿಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್​ನಲ್ಲಿ ಸಿಮೋನ್ ಬೊಲೆಲಿ- ಆಂಡ್ರಿಯಾ ವವಸ್ಸೋರಿ ಜೋಡಿಯ ಸವಾಲು ಎದುರಿಸಲಿದ್ದಾರೆ.

ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬೋಪಣ್ಣ-ಮ್ಯಾಥ್ಯೂ ಜೋಡಿ ಸ್ಯಾಂಡರ್ ಗಿಲ್ಲೆ ಮತ್ತು ಜೊರಾನ್ ವಿಲೆಜೆನ್ ವಿರುದ್ಧ ಮೂರು ಸೆಟ್​​ಗಳ ಸುದೀರ್ಘ ಹೋರಾಟ ನಡೆಸಿ 7-6 (7-3), 5-7, 6-1 ಅಂತರದ ಗೆಲುವು ಸಾಧಿಸಿದರು. ಈ ಪಂದ್ಯ 2 ಗಂಟೆ 4 ನಿಮಿಷಗಳ ತನಕ ಸಾಗಿತು. ಕಳೆದ ಕೆಲವು ವರ್ಷಗಳಿಂದ ಇಂಡೋ-ಆಸೀಸ್​ ಜೋಡಿ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಸೆಮಿಫೈನಲ್(French Open semis)​ ತಲುಪಿರುವ ಈ ಜೋಡಿ ಇಲ್ಲಿಯೂ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Wimbledon 2023 : ಸೋಲಿನ ಹತಾಶೆಗೆ ರ್ಯಾಕೆಟ್​ ಪುಡಿಗಟ್ಟಿದ ಜೊಕೊವಿಕ್​! ಮುಂದೇನಾಯಿತು?

ಮೊದಲ ಸೆಟ್​ ಟ್ರೈಬೇಕರ್​ ಮೂಲಗ ಗೆದ್ದ ಬೋಪಣ್ಣ-ಮ್ಯಾಥ್ಯೂ ಜೋಡಿ ದ್ವಿತೀಯ ಸೆಟ್​ನಲ್ಲಿ ಸೋಲು ಕಂಡರು. ಅಂತಿಮ ಹಾಗೂ ನಿರ್ಣಾಯಕ ಸೆಟ್​ನಲ್ಲಿ ಶ್ರೇಷ್ಠ ಆಟವಾಡಿದ ಬೋಪಣ್ಣ ಮತ್ತು ಮ್ಯಾಥ್ಯೂ ಎದುರಾಳಿಗೆ ಕೇವಲ ಒಂದು ಸೆಟ್​ ಮಾತ್ರ ಬಿಟ್ಟುಕೊಟ್ಟು ಭರ್ಜರಿ ಗೆಲುವು ಸಾಧಿಸಿದರು.


2 ತಿಂಗಳ ಹಿಂದಷ್ಟೇ ನಡೆದಿದ್ದ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ(Miami Open 2024) ಪುರುಷರ ಡಬಲ್ಸ್​ನಲ್ಲಿ ಬೋಪಣ್ಣ-ಮ್ಯಾಥ್ಯೂ ಜೋಡಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಇದಕ್ಕೂ ಮುನ್ನ ವರ್ಷಾರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್​ ಗ್ರಾನ್​ಸ್ಲಾಂನಲ್ಲಿಯೂ ಈ ಜೋಡಿ ಚಾಂಪಿಯನ್​ ಆಗಿ ಐತಿಹಾಸಿಕ ಪ್ರಶಸ್ತಿ ಗೆದ್ದಿತ್ತು. 2017ರಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೋವ್​​ಸ್ಕಿ ಅವರೊಂದಿಗೆ ಬೋಪಣ್ಣ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.

ಎಲೆನಾ ರಿಬಕಿನಾಗೆ ಆಘಾತಕಾರಿ ಸೋಲು


ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಅನುಭವಿ ಆಟಗಾರ್ತಿ ಕಜಾಕ್‌ಸ್ಥಾನದ ಎಲೆನಾ ರಿಬಕಿನಾ(Elena Rybakina) ಅವರು ಆಘಾತಕಾರಿ ಸೋಲು ಕಂಡಿದ್ದಾರೆ. ಜಾಸ್ಮಿನ್ ಪಾವೊಲಿನಿ(Jasmine Paolini) ವಿರುದ್ಧ 6-2, 4-6, 6-4 ಅಂತರದಲ್ಲಿ ಸೋಲು ಕಂಡರು. ಈ ಪಂದ್ಯ 2 ಗಂಟೆ 3 ನಿಮಿಷಗಳ ತನಕ ಸಾಗಿತು. ಪಾವೊಲಿನಿಗೆ ಇದು ಈ ಕೂಟದ ಚೊಚ್ಚಲ ಸೆಮಿಫೈನಲ್ ಪಂದ್ಯವಾಗಿದೆ. ನಾಲ್ಕನೇ ಶ್ರೇಯಾಂಕಿತ ರಿಬಕಿನಾ ಅವರನ್ನು ಮಣಿಸಿದ ಕಾರಣ ಈ ಬಾರಿಯ ಕ್ರಶಸ್ತಿ ರೇಸ್​ನಲ್ಲಿ ಪಾವೊಲಿನಿ ಕೂಡ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

Continue Reading

ಕ್ರೀಡೆ

India vs Ireland: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತ; ರೋಹಿತ್​ ಜತೆ ಕೊಹ್ಲಿ ಇನಿಂಗ್ಸ್​ ಆರಂಭ

India vs Ireland: ನಸೌ ಕ್ರಿಕೆಟ್​ ಸ್ಟೇಡಿಯಂನ ಪಿಚ್ ಕೂಡ ಅತ್ಯಂತ ಆಘಾತಕಾರಿಯಾಗಿ ವರ್ತಿಸುತ್ತಿದೆ. ಬ್ಯಾಟರ್​ಗಳು ಇಲ್ಲಿ ರನ್​ಗಳಿಸಲು ಪರದಾಡಿದ್ದಾರೆ. ಇದೇ ಕಾರಣಕ್ಕೆ ಪಿಚ್​ ವರ್ತನೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿಯೇ ರೋಹಿತ್​ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಂತಿದೆ.

VISTARANEWS.COM


on

India vs Ireland
Koo

ನ್ಯೂಯಾರ್ಕ್​: ಐರ್ಲೆಂಡ್(India vs Ireland)​ ವಿರುದ್ಧದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ(Rohit Sharma) ಅವರು ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿದ್ದಾರೆ. ನಿರೀಕ್ಷೆಯಂತೆ ರೋಹಿತ್​ ಜತೆ ವಿರಾಟ್​ ಕೊಹ್ಲಿ(Virat Kohli) ಅವರು ಭಾರತದ ಇನಿಂಗ್ಸ್​ ಆರಂಭಿಸಲಿದ್ದಾರೆ. ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್​ಗೆ ಅವಕಾಶ ಸಿಗಲಿಲ್ಲ.

ಭಾರತ ಈ ಪಂದ್ಯಕ್ಕೆ ಅಚ್ಚರಿಯ ತಂಡವನ್ನು ಕಣಕ್ಕಿಳಿಸಿದೆ. ನಿರೀಕ್ಷೆಯೇ ಮಾಡದ ಶಿವಂ ದುಬೆ, ಅಕ್ಷರ್​ ಪಟೇಲ್​ ಮತ್ತು ಅರ್ಶದೀಪ್​ ಸಿಂಗ್​ ಅವರು ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅನುಭವಿ ಸ್ಪಿನ್ನರ್​ಗಳಾದ ಕುಲ್​ದೀಪ್​ ಯಾದವ್​ ಮತ್ತು ಯಜುವೇಂದ್ರ ಚಹಲ್​ ಬೆಂಚ್​ ಕಾಯಬೇಕಿದೆ. ರಿಷಭ್​ ಪಂತ್​ ವಿಕೆಟ್​ ಕೀಪರ್​ ಆಗಿದ್ದಾರೆ. ಅಲ್ಲದೆ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಒಟ್ಟು 4 ವೇಗಿಗಳು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ದುಬೆ ಕೂಡ ಬೌಲಿಂಗ್​ ಮಾಡಿದರೆ 5 ಮಂದಿ ವೇಗಿಗಳು ಆಡಿದಂತಾಗುತ್ತದೆ.

ನಸೌ ಕ್ರಿಕೆಟ್​ ಸ್ಟೇಡಿಯಂನ ಪಿಚ್ ಕೂಡ ಅತ್ಯಂತ ಆಘಾತಕಾರಿಯಾಗಿ ವರ್ತಿಸುತ್ತಿದೆ. ಬ್ಯಾಟರ್​ಗಳು ಇಲ್ಲಿ ರನ್​ಗಳಿಸಲು ಪರದಾಡಿದ್ದಾರೆ. ಇದೇ ಕಾರಣಕ್ಕೆ ಪಿಚ್​ ವರ್ತನೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿಯೇ ರೋಹಿತ್​ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಂತಿದೆ.

ಟಿ20 ಮುಖಾಮುಖಿ


ಉಭಯ ತಂಡಗಳು ಇದುವೆರೆಗೆ ಟಿ20 ಕ್ರಿಕೆಟ್​ನಲ್ಲಿ ಒಟ್ಟು 7 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತ ಗೆದ್ದಿದೆ. ಇದರಲ್ಲೊಂದು ಟಿ20 ವಿಶ್ವಕಪ್​ ಪಂದ್ಯವಾಗಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿ ಗೋಚರಿಸಿದರೂ ಕೂಡ ಐರ್ಲೆಂಡ್​ ಸವಾಲನ್ನು ಹಗುರವಾಗಿ ಕಾಣುವಂತಿಲ್ಲ. ಏಕೆಂದರೆ ಬಲಿಷ್ಠ ತಂಡಗಳು ಕೂಡ ದುರ್ಬಲ ತಂಡದ ವಿರುದ್ಧ ಸೋತ ಹಲವು ನಿದರ್ಶನಗಳಿವೆ. ಹೀಗಾಗಿ ಪ್ರತಿ ಹೆಚ್ಚುಗೂ ಎಚ್ಚರಿಕೆಯಿಂದ ಆಡಬೇಕು.

ಇದನ್ನು ಓದಿ Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

ಪಂದ್ಯದ ಪ್ರಸಾರ


ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಇತ್ತಂಡಗಳ ಆಡುವ ಬಳಗ


ಭಾರತ: ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಭ್​ ಪಂತ್(ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಐರ್ಲೆಂಡ್​: ಪಾಲ್ ಸ್ಟಿರ್ಲಿಂಗ್(ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್(ವಿಕೆಟ್​ ಕೀಪರ್​), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಬೆಂಜಮಿನ್ ವೈಟ್.

Continue Reading

ಕ್ರೀಡೆ

Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Rahul Dravid: ಟಿ20 ವಿಶ್ವಕಪ್​ ಟೂರ್ನಿ ಬಳಿಕ ರಾಹುಲ್​ ದ್ರಾವಿಡ್​ ಅವರು ಭಾರತ ತಂಡದ ಕೋಚ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಅವರು ತಮ್ಮ ಈ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ. ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು.

VISTARANEWS.COM


on

Rahul Dravid
Koo

ನ್ಯೂಯಾರ್ಕ್​: ಟೀಮ್​ ಇಂಡಿಯಾ ಇಂದು(ಬುಧವಾರ) ಐರ್ಲೆಂಡ್(India vs Ireland)​ ವಿರುದ್ಧ ತನ್ನ ಮೊದಲ ಟಿ20 ವಿಶ್ವಕಪ್(T20 World Cup 2024)​ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಮುಖ್ಯ ಕೋಚ್(head coach Rahul Dravid)​ ರಾಹುಲ್ ದ್ರಾವಿಡ್(Rahul Dravid)​ ಅವರು ಉರ್ದುವಿನಲ್ಲಿ(Dravid Speaks Urdu) ಮಾತನಾಡಿ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ್ರಾವಿಡ್​ ತಮ್ಮ ತಂಡದ ತಯಾರಿಯ ಬಗ್ಗೆ ಮಾತನಾಡುವ ವೇಳೆಯಲ್ಲಿ ಉರ್ದು ಭಾಷೆಯಲ್ಲಿಯೂ ಮಾತನಾಡಿದರು. ‘ಈ ಸ್ವರೂಪದ ಕ್ರಿಕೆಟ್​ನಲ್ಲಿ ಯಾರನ್ನೂ ಕಡೆಗಣಿಸಲು ಅಥವಾ ಯಾರನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಉರ್ದುವಿನಲ್ಲಿ ಹೇಳಿ ಜೋರಾಗಿ ನಕ್ಕಿದ್ದಾರೆ. ಜತೆಗೆ ವೆಲ್​ ಡನ್​ ರಾಹುಲ್​ ಎಂದು ಸ್ವತಃ ತಮ್ಮನ್ನು ತಾವೇ ಪ್ರಶಂಶಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿದ್ದ ಪತ್ರಕರ್ತರು ಕೂಡ ಜೋರಾಗಿ ನಗಾಡಿದ್ದಾರೆ. ದ್ರಾವಿಡ್ ಉರ್ದುವಿನಲ್ಲಿ ಮಾತನಾಡಿದ ವಿಡಿಯೊ ವೈರಲ್(viral video)​ ಆಗಿದೆ.

ಇದನ್ನೂ ಓದಿ Rahul Dravid: ಕೋಚ್ ಹುದ್ದೆಯಲ್ಲಿ ಮುಂದುವರಿಯಲ್ಲ; ಅಧಿಕೃತ ಹೇಳಿಕೆ ನೀಡಿದ ದ್ರಾವಿಡ್


ಟಿ20 ವಿಶ್ವಕಪ್​ ಟೂರ್ನಿ ಬಳಿಕ ರಾಹುಲ್​ ದ್ರಾವಿಡ್​ ಅವರು ಭಾರತ ತಂಡದ ಕೋಚ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಅವರು ತಮ್ಮ ಈ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ. ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು. ದ್ರಾವಿಡ್ ಕೋಚ್​ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್​ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್​ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್​-19 ಕ್ರಿಕೆಟ್​ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್‌ ತಂಡದಲ್ಲಿ ಸಿಗಲಿಲ್ಲ.

ದ್ರಾವಿಡ್​ಗೆ ಟೀಮ್​ ಇಂಡಿಯಾದ ಕೋಚಿಂಗ್​ ಬಗ್ಗೆ ಮೊದಲಿನಿಂದಲೇ ಆಸಕ್ತಿ ಇರಲಿಲ್ಲ. ಆದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರ ಒತ್ತಾಯದ ಮೇರೆಗೆ ದ್ರಾವಿಡ್​ ಕೋಚ್​ ಹುದ್ದೆ ವಹಿಸಿಕೊಂಡಿದ್ದರು. ಕೊನೆಯ ಬಾರಿಗೆ ಕೋಚಿಂಗ್​ ನಡೆಸುತ್ತಿರುವ ದ್ರಾವಿಡ್​ ಟಿ20 ವಿಶ್ವಕಪ್​ನಲ್ಲಾದರೂ ಕಪ್​ ಗೆದ್ದು ಗೆಲುವಿನ ವಿದಾಯ ಸಿಗಲಿ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಆಶಯ.

Continue Reading
Advertisement
Karnataka Weather
ಪ್ರಮುಖ ಸುದ್ದಿ2 mins ago

Karnataka Weather: ಇಂದು ಬಾಗಲಕೋಟೆ, ಬೀದರ್, ಕರಾವಳಿ ಜಿಲ್ಲೆಗಳು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ

Whitening Toothpaste
ಆರೋಗ್ಯ17 mins ago

Whitening Toothpaste: ವೈಟ್ನಿಂಗ್‌ ಪೇಸ್ಟ್‌ಗಳಿಂದ ಹಲ್ಲುಗಳಿಗೆ ಹಾನಿ ಆಗುತ್ತಾ?

Dina Bhavishya
ಪ್ರಮುಖ ಸುದ್ದಿ1 hour ago

Dina Bhavishya: ಈ ರಾಶಿಯವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ!

Odisha
ದೇಶ6 hours ago

Odisha: ಒಡಿಶಾದಲ್ಲಿ ಬಿಜೆಪಿಗೆ ಗೆಲುವು; ಸಿಎಂ ರೇಸ್‌ನಲ್ಲಿದ್ದಾರೆ ಐವರು ನಾಯಕರು, ಯಾರವರು?

Pradeep Eshwar
ಕರ್ನಾಟಕ7 hours ago

ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಗೆದ್ದ ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ ರಾಜೀನಾಮೆ ಪತ್ರ ವೈರಲ್;‌ ಇದು ಸತ್ಯವೇ?

India vs Ireland
ಕ್ರೀಡೆ7 hours ago

India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

Sunita Williams
ಪ್ರಮುಖ ಸುದ್ದಿ8 hours ago

Sunita Williams: 3ನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್;‌ Video ಇದೆ

Dr C N Manjunath
ಕರ್ನಾಟಕ8 hours ago

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

New Cancer Drug
ಆರೋಗ್ಯ8 hours ago

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

World Environment Day celebration in karatagi
ಕೊಪ್ಪಳ8 hours ago

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ7 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 weeks ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌