Rishabh Pant: ಸ್ಮರಣೀಯ ಪಂದ್ಯದಲ್ಲೂ ತಾಳ್ಮೆ ಕಳೆದುಕೊಂಡ ಪಂತ್​; ವಿಡಿಯೊ ವೈರಲ್​ - Vistara News

ಕ್ರೀಡೆ

Rishabh Pant: ಸ್ಮರಣೀಯ ಪಂದ್ಯದಲ್ಲೂ ತಾಳ್ಮೆ ಕಳೆದುಕೊಂಡ ಪಂತ್​; ವಿಡಿಯೊ ವೈರಲ್​

Rishabh Pant: ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 99 ಇನ್ನಿಂಗ್ಸ್​ಗಳಲ್ಲಿ 34.33ರ ಸರಾಸರಿಯಲ್ಲಿ 2884 ರನ್ ಗಳಿಸಿದ್ದಾರೆ.

VISTARANEWS.COM


on

Rishabh Pant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಪರ 100ನೇ ಐಪಿಎಲ್(IPL 2024) ಪಂದ್ಯವನ್ನಾಡಿದ ನಾಯಕ ರಿಷಭ್ ಪಂತ್(Rishabh Pant)​ ಅವರು ತಾಳ್ಮೆ ಕಳೆದುಕೊಂಡ ಫಟನೆ ಸಂಭವಿಸಿದೆ. ಔಟಾಗಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕುವ ವೇಳೆ ಪಂತ್​ ತಮ್ಮ ಬ್ಯಾಟನ್ನು ಜೋರಾಗಿ ಗೋಡೆಗೆ ಬಡಿದಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ.

ರಾಜಸ್ಥಾನ್ ರಾಯಲ್ಸ್​ ನೀಡಿದ ಮೊತ್ತವನ್ನು ಬೆನ್ನಟ್ಟುವ ವೇಳೆ 14ನೇ ಓವರ್‌ನ ಮೊದಲ ಎಸೆತದಲ್ಲಿ ಪಂತ್​ ಅವರು ಯಜುವೇಂದ್ರ ಚಾಹಲ್ ಎಸೆತದಲ್ಲಿ ವಿಕೆಟ್​ ಕೈಚೆಲ್ಲಿದರು. ಇವರ ವಿಕೆಟ್​ ಪತನಗೊಂಡದ್ದು ಪಂದ್ಯದ ಪ್ರಮುಖ ಹಂತದಲ್ಲಿ. ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗದ ಬೇಸರ ಮತ್ತು ಸಿಟ್ಟಿನಿಂದ ಪಂತ್​ ಈ ರೀತಿಯ ವರ್ತನೆ ತೋರಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಅವರು 26 ಎಸೆತಗಳಿಂದ 28 ರನ್​ ಬಾರಿಸಿದರು.

2022 ರ ಡಿಸೆಂಬರ್​ನಲ್ಲಿ ಅಪಘಾತದಿಂದ ಬದುಕುಳಿದ ನಂತರ 26 ವರ್ಷದ ಪಂತ್​​ ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಋತುವಿನ ಆರಂಭಿಕ ಪಂದ್ಯದ ಸಮಯದಲ್ಲಿ ಕ್ರಿಕೆಟ್​ ಮೈದಾನಕ್ಕೆ ಪುನರಾಗಮನ ಮಾಡಿದ್ದರು. ತಮ್ಮ ಪುನರಾಗಮನದ ಪಂದ್ಯದಲ್ಲಿ ಅವರು 18 (13 ಎಸೆತ) ರನ್ ಗಳಿಸಿದ್ದರು. ಜತೆಗೆ ಒಂದು ಸ್ಟಂಪಿಂಗ್ ಮತ್ತು ಅದ್ಭುತ ಕ್ಯಾಚ್ ಪಡೆದಿದ್ದರು.

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 99 ಇನ್ನಿಂಗ್ಸ್​ಗಳಲ್ಲಿ 34.33ರ ಸರಾಸರಿಯಲ್ಲಿ 2884 ರನ್ ಗಳಿಸಿದ್ದಾರೆ. 2018ರಲ್ಲಿ ಅವರು 14 ಇನ್ನಿಂಗ್ಸ್​ಗಳಿಂದ 52.61 ಸರಾಸರಿಯಲ್ಲಿ 684 ರನ್ ಮತ್ತು 173.6 ಸ್ಟ್ರೈಕ್​ರೇಟ್​ನೊಂದಿಗೆ ಆವೃತ್ತಿಯ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ರಾಜಸ್ಥಾನ್​ಗೆ ಗೆಲುವು


ರಿಯಾನ್ ಪರಾಗ್​ (84 ರನ್​, 45 ಎಸೆತ, 7 ಫೋರ್, 6 ಸಿಕ್ಸರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಮಿಂಚಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capital) ವಿರುದ್ಧ 12 ರನ್​ಗಳ ಗೆಲುವು ಸಾಧಿಸಿತು.

ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 185 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 175 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಹಂತದಲ್ಲಿ ಡೆಲ್ಲಿ ತಂಡದ ಟ್ರಿಸ್ಟಾನ್​ ಸ್ಟಬ್ಸ್ 23 ಎಸೆತಕ್ಕೆ 44 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಐಪಿಎಲ್ 2024

IPL 2024: ಆರ್‌ಸಿಬಿಯ ಪ್ಲೇ ಆಫ್ ಕನಸು ಜೀವಂತ; ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದ ಪಂಜಾಬ್‌: ಹೀಗಿದೆ ಹೊಸ ಅಂಕಪಟ್ಟಿ

IPL 2024: ಗುರುವಾರ ರಾತ್ರಿ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 60 ರನ್ನುಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. ಇತ್ತ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್‌ ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.

VISTARANEWS.COM


on

IPL 2024
Koo

ಧರ್ಮಶಾಲಾ: ಗುರುವಾರ ರಾತ್ರಿ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನಡೆದ ಐಪಿಎಲ್​ ಪಂದ್ಯದಲ್ಲಿ (IPL 2024) ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bengaluru) ತಂಡ 60 ರನ್ನುಗಳಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಮುಂದುವರಿದಿದೆ. ಇತ್ತ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್‌ ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.

ಸದ್ಯ ಕೋಲ್ಕತ್ತಾ ನೂಟ್‌ ರೈಡರ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಲಾ 16 ಅಂಕಗಳನ್ನು ಕಲೆ ಹಾಕಿ ಮೊದಲೆರಡು ಸ್ಥಾನಗಳಲ್ಲಿವೆ. ಇವೆರಡು ಪ್ಲೇ ಆಫ್​ ಪ್ರವೇಶಿಸುವುದು ಬಹುತೇಕ ಖಚಿತ. ಇತ್ತ 14 ಅಂಕ ಕಲೆ ಹಾಕಿರುವ ಹೈದರಾಬಾದ್​ಗೆ ಇನ್ನೊಂದು ಪಂದ್ಯ ಗೆದ್ದರೆ ಸಾಕು. ಪ್ಲೇ ಆಫ್‌ ಪ್ರವೇಶಿಸುವ ನಾಲ್ಕನೇ ತಂಡಕ್ಕಾಗಿ ತೀವ್ರ ಪೈಪೋಟಿ ಕಂಡು ಬರುವ ನಿರೀಕ್ಷೆ ಇದೆ. ಸದ್ಯ ಐದನೇ ಗೆಲುವು ಸಾಧಿಸಿರುವ ಆರ್‌ಸಿಬಿ, ಡೆಲ್ಲಿ, ಚೆನ್ನೈ ಮತ್ತು ಲಕ್ನೋ ನಡುವೆ ತೀವ್ರ ಸ್ಪರ್ಧೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​118316 (+0.476)
ಹೈದರಾಬಾದ್​127514 (+0.406)
ಚೆನ್ನೈ116512 (+0.700)
ಡೆಲ್ಲಿ126612 (-0.316)
ಲಕ್ನೋ126612 (-0.769)
ಆರ್​ಸಿಬಿ125710 (+0.217)
ಮುಂಬೈ12488 (-0.212)
ಪಂಜಾಬ್‌12488 (-0.423)
ಗುಜರಾತ್​11478 (-1.320)

ಆರ್‌ಸಿಬಿಗೆ ಭರ್ಜರಿ ಜಯ

ಆರಂಭದಲ್ಲಿ ಸತತ ಸೋಲಿಗೆ ತುತ್ತಾಗಿದ್ದ ಆರ್‌ಸಿಬಿ ಭರ್ಜರಿ ಕಂಬ್ಯಾಕ್‌ ಮಾಡಿದೆ. ಸತತ ಗೆಲುವಿನ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಗುರುವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ವಿರಾಟ್‌ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಶತಕದ ಅಂಚಿನಲ್ಲಿ ಎಡವಿದ ಅವರು 47 ಬಾಲ್‌ಗೆ 92 ರನ್‌ ಕಲೆ ಹಾಕಿದರು. ಇದು 6 ಭರ್ಜರಿ ಸಿಕ್ಸರ್‌ ಮತ್ತು 7 ಫೋರ್‌ ಅನ್ನು ಒಳಗೊಂಡಿತ್ತು. ಇವರಿಗೆ ಉತ್ತಮ ಸಾಥ್‌ ನೀಡಿದ ರಜತ್‌ ಪಾಟಿದಾರ್‌ ಕೇವಲ 23 ಎಸೆತಗಳಲ್ಲಿ 55 ರನ್‌ ಚಚ್ಚಿದರು (6 ಸಿಕ್ಸ್‌, 3 ಫೋರ್‌).

ಇನ್ನು ಬೌಲಿಂಗ್‌ನಲ್ಲಿಯೂ ಉತ್ತಮ ದಾಳಿ ಸಂಘಟಿಸಿದ ಬೆಂಗಳೂರು ತಂಡ ಪಂಜಾಬ್‌ ತಂಡವನ್ನು 17 ಓವರ್‌ಗೆ 181 ರನ್‌ಗೆ ಆಲೌಟ್‌ ಮಾಡಿತು. ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

ಇದನ್ನೂ ಓದಿ: Virat Kohli: ಮೈದಾನದಲ್ಲೇ ರುಸ್ಸೊ AK 47ಗೆ ಕಲಾಶ್‌ನಿಕಾವೋ ಗನ್ ತೆಗೆದ ಕೊಹ್ಲಿ; ವಿಡಿಯೊ ನೋಡಿ

Continue Reading

ಐಪಿಎಲ್ 2024

Virat Kohli: ಮೈದಾನದಲ್ಲೇ ರುಸ್ಸೊ AK 47ಗೆ ಕಲಾಶ್‌ನಿಕಾವೋ ಗನ್ ತೆಗೆದ ಕೊಹ್ಲಿ; ವಿಡಿಯೊ ನೋಡಿ

Virat Kohli: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ರೀಲಿ ರುಸ್ಸೊ ಅವರು ಗನ್‌ ಶಾಟ್‌ ರೀತಿಯ ಭಂಗಿ ಮೂಲಕ ಸಂಭ್ರಮಾಚರಿಸಿದರು. ಆದರೆ, ಅರ್ಧಶತಕದ ಬಳಿಕ ಕರಣ್‌ ಶರ್ಮಾ ಎಸೆತದಲ್ಲಿ ವಿಲ್‌ ಜಾಕ್ಸ್‌ಗೆ ಕ್ಯಾಚಿತ್ತು ರೀಲಿ ರುಸ್ಸೋ ಔಟಾದರು. ರುಸ್ಸೋ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಅವರೂ ಗನ್‌ನಿಂದ ಶೂಟ್‌ ಮಾಡುವ ರೀತಿ ಸಂಭ್ರಮಿಸುವ ಮೂಲಕ ಅವರಿಗೆ ತಿರುಗೇಟು ನೀಡಿದರು.

VISTARANEWS.COM


on

Virat Kohli
Koo

ಧರ್ಮಶಾಲಾ: ಮೈದಾನದಲ್ಲಿ ವಿರಾಟ್‌ ಕೊಹ್ಲಿ (Virat Kohli) ಇರುವುದೇ ಹಾಗೆ. ಅದು ಗೌತಮ್‌ ಗಂಭೀರ್‌ ಇರಲಿ, ಸ್ಟ್ರೈಕ್‌ ರೇಟ್‌ ಕುರಿತು ಕಾಮೆಂಟರಿ ನೀಡಿದ ಸುನೀಲ್‌ ಗವಾಸ್ಕರ್ ಇರಲಿ, ಹೆಲ್ಮೆಟ್‌ ಬಿಸಾಡಿದ ಆವೇಶ್‌ ಖಾನ್‌ ಇರಲಿ, ನವೀನ್‌ ಹುಲ್‌ ಹಕ್‌ ಇರಲಿ. ಅವರು ಮೈದಾನದಲ್ಲಿಯೇ ತಿರುಗೇಟು ನೀಡದೆ ಬಿಡುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಪ್ರಸಕ್ತ ಐಪಿಎಲ್‌ ಆವೃತ್ತಿಯ (IPL 2024) ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ನಡೆದ ಐಪಿಎಲ್‌ ಪಂದ್ಯದಲ್ಲಿ ರೀಲಿ ರುಸ್ಸೊ (Rilee Rossouw) ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಆರ್‌ಸಿಬಿ ನೀಡಿದ 242 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತುವಾಗ ರೀಲಿ ರುಸ್ಸೊ ಅವರು ಬಿರುಸಿನ ಅರ್ಧಶತಕ ಬಾರಿಸಿದರು. ಅರ್ಧಶತಕ ಬಾರಿಸಿದ ಬಳಿಕ ಅವರು ಗನ್‌ ಶಾಟ್‌ ರೀತಿಯ ಭಂಗಿ ಮೂಲಕ ಸಂಭ್ರಮಾಚರಿಸಿದರು. ಆದರೆ, ಅರ್ಧಶತಕದ ಬಳಿಕ ಕರಣ್‌ ಶರ್ಮಾ ಎಸೆತದಲ್ಲಿ ವಿಲ್‌ ಜಾಕ್ಸ್‌ಗೆ ಕ್ಯಾಚಿತ್ತು ರೀಲಿ ರುಸ್ಸೊ ಔಟಾದರು. ರುಸ್ಸೊ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಅವರೂ ಗನ್‌ನಿಂದ ಶೂಟ್‌ ಮಾಡುವ ರೀತಿ ಸಂಭ್ರಮಿಸುವ ಮೂಲಕ ಅವರಿಗೆ ತಿರುಗೇಟು ನೀಡಿದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು. ಇದರೊಂದಿಗೆ ಆರ್‌ಸಿಬಿಯು ಸತತ ನಾಲ್ಕನೇ ಜಯ ದಾಖಲಿಸಿತು.

ಕೊಹ್ಲಿಯ ಪ್ರದರ್ಶನ ‘ಕಿಂಗ್’

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ಫಾಫ್​ ಡು ಪ್ಲೆಸಿಸ್​ ಮತ್ತೊಂದು ಬಾರಿ ಕಳಪೆ ಪ್ರದರ್ಶನ ನೀಡಿದರು. 9 ರನ್​ಗೆ ಅವರು ಔಟಾದರು. ಹೀಗಾಗಿ 19 ರನ್​ಗೆ ಒಂದು ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಸಂಕಷ್ಟ ಶುರುವಾಯಿತು. ಬಳಿಕ ಬಂದ ವಿಲ್​ ಜ್ಯಾಕ್ಸ್​ ಕೂಡ 12 ರನ್​ಗೆ ಸೀಮಿತಗೊಂಡರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಇವರಿಗೆ ಜತೆಯಾದ ರಜತ್​ ಪಾಟೀದರ್ ಮತ್ತೊಂದು ವಿಸ್ಫೋಟಕ ಆಟ ಆಡಿದರು. ಅವರು 23 ಎಸೆತಕ್ಕೆ 55 ರನ್ ಬಾರಿಸಿದ್ದ ಕಾರಣ ಆರ್​ಸಿಬಿಯ ರನ್​ ಗಳಿಕೆ ಏರುಗತಿಯಲ್ಲಿ ಸಾಗಿತು.

ವಿರಾಟ್​ ಕೊಹ್ಲಿ ಜತೆ ಮತ್ತೊಂದು ಉತ್ತಮ ಜತೆಯಾಟ ನೀಡಿದ ವಿಲ್ ಜ್ಯಾಕ್ಸ್​ 46 ರನ್​ ಬಾರಿಸಿದರು. ಕೊಹ್ಲಿ 6 ಫೋರ್ ಹಾಗೂ 4 ಸಿಕ್ಸರ್ ಸಮೇತ ಭರ್ಜರಿ ಆಟವಾಡಿ ಶತಕದ ಹಾದಿಯಲ್ಲಿದ್ದರು. ಆದರೆ, ಕೊನೇ ಹಂತದಲ್ಲಿ ರನ್ ಬಾಚುವ ಒತ್ತಡಕ್ಕೆ ಬಿದ್ದ ಅವರು 8 ರನ್​ಗಳಿಂದ ಶತಕ ವಂಚಿತರಾದರು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ಹೀನಾಯ ಪ್ರದರ್ಶನ ನೀಡಿತು. ಪ್ರಭ್​ ಸಿಮ್ರಾನ್ ಸಿಂಗ್ 6 ರನ್​ಗೆ ಜಾಗ ಖಾಲಿ ಮಾಡಿದರು. ಬೈರ್​ಸ್ಟೋವ್ 27 ರನ್​ ಬಾರಿಸಿ ಔಟಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರೀಲಿ ರೊಸ್ಸೊ 27 ಎಸೆತಕ್ಕೆ 61 ರನ್ ಬಾರಿಸಿ ಗೆಲುವಿನ ಹುಮ್ಮಸ್ಸು ತಂದರು. ಆದರೆ, ತಲೆಗೆ ಚೆಂಡು ಬಡಿಸಿಕೊಂಡ ಮರು ಎಸೆತದಲ್ಲಿಯೇ ಸ್ಪಿನ್ನರ್​ ಕರಣ್ ಶರ್ಮಾ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಂ ದ ಪಂಜಾಬ್ ಇನಿಂಗ್ಸ್ ಕುಸಿಯಿತು. ನಡುವೆ ಶಶಾಂಕ್​ ಶರ್ಮಾ 37 ರನ್ ಬಾರಿಸಿದರು. ಆದರೆ, ಕೊಹ್ಲಿ ಮಾಡಿದ ಅದ್ಭುತ ರನ್​ಔಟ್​ಗೆ ಅವರು ಬಲಿಯಾದರು. ಸ್ಯಾಮ್​ ಕರ್ರನ್​ 22 ರನ್​ ಕೊಡುಗೆ ಕೊಟ್ಟರು. ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

ಇದನ್ನೂ ಓದಿ: IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

IPL 2024: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು.

VISTARANEWS.COM


on

IPL 2024
Koo

ಧರ್ಮಶಾಲಾ: ವಿರಾಟ್​ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ಬಲದಿಂದ ಮಿಂಚಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ 17ನೇ (IPL 2024 ) ಆವೃತ್ತಿಯ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದು ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ತಂಡಕ್ಕೆ ಐದನೇ ಗೆಲುವಾಗಿದೆ. ಇದರೊಂದಿಗೆ ಒಟ್ಟಾರೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಉಳಿದಿಗೆ. ಗೆಲುವಿನ ಹೊರತಾಗಿಯೂ ಆರ್​ಸಿಬಿ ತಂಡದ ಸ್ಥಾನ ಪಲ್ಲಟವೇನೂ ಆಗಿಲ್ಲ. ಇದೇ ವೇಳೆ 8ನೇ ಸೋಲಿಗೆ ಗುರಿಯಾದ ಪಂಜಾಬ್ ಕಿಂಗ್ಸ್​ ತಂಡ 9ನೇ ಸ್ಥಾನಕ್ಕೆ ಜಾರಿದೆ.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು.

ಕೊಹ್ಲಿಯ ದಾಖಲೆಯ ಪ್ರದರ್ಶನ

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ಫಾಫ್​ ಡು ಪ್ಲೆಸಿಸ್​ ಮತ್ತೊಂದು ಬಾರಿ ಕಳಪೆ ಪ್ರದರ್ಶನ ನೀಡಿದರು. 9 ರನ್​ಗೆ ಅವರು ಔಟಾದರು. ಹೀಗಾಗಿ 19 ರನ್​ಗೆ ಒಂದು ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಸಂಕಷ್ಟ ಶುರುವಾಯಿತು. ಬಳಿಕ ಬಂದ ವಿಲ್​ ಜ್ಯಾಕ್ಸ್​ ಕೂಡ 12 ರನ್​ಗೆ ಸೀಮಿತಗೊಂಡರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಇವರಿಗೆ ಜತೆಯಾದ ರಜತ್​ ಪಾಟೀದರ್ ಮತ್ತೊಂದು ವಿಸ್ಫೋಟಕ ಆಟ ಆಡಿದರು. ಅವರು 23 ಎಸೆತಕ್ಕೆ 55 ರನ್ ಬಾರಿಸಿದ್ದ ಕಾರಣ ಆರ್​ಸಿಬಿಯ ರನ್​ ಗಳಿಕೆ ಏರುಗತಿಯಲ್ಲಿ ಸಾಗಿತು.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ವಿರಾಟ್​ ಕೊಹ್ಲಿ ಜತೆ ಮತ್ತೊಂದು ಉತ್ತಮ ಜತೆಯಾಟ ನೀಡಿದ ವಿಲ್ ಜ್ಯಾಕ್ಸ್​ 46 ರನ್​ ಬಾರಿಸಿದರು. ಕೊಹ್ಲಿ 6 ಫೋರ್ ಹಾಗೂ 4 ಸಿಕ್ಸರ್ ಸಮೇತ ಭರ್ಜರಿ ಆಟವಾಡಿ ಶತಕದ ಹಾದಿಯಲ್ಲಿದ್ದರು. ಆದರೆ, ಕೊನೇ ಹಂತದಲ್ಲಿ ರನ್ ಬಾಚುವ ಒತ್ತಡಕ್ಕೆ ಬಿದ್ದ ಅವರು 8 ರನ್​ಗಳಿಂದ ಶತಕ ವಂಚಿತರಾದರು.

ಪಂಜಾಬ್ ಬ್ಯಾಟಿಂಗ್ ವೈಫಲ್ಯ

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ಹೀನಾಯ ಪ್ರದರ್ಶನ ನೀಡಿತು. ಪ್ರಭ್​ ಸಿಮ್ರಾನ್ ಸಿಂಗ್ 6 ರನ್​ಗೆ ಜಾಗ ಖಾಲಿ ಮಾಡಿದರು. ಬೈರ್​ಸ್ಟೋವ್ 27 ರನ್​ ಬಾರಿಸಿ ಔಟಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರೀಲಿ ರೊಸ್ಸೊ 27 ಎಸೆತಕ್ಕೆ 61 ರನ್ ಬಾರಿಸಿ ಗೆಲುವಿನ ಹುಮ್ಮಸ್ಸು ತಂದರು. ಆದರೆ, ತಲೆಗೆ ಚೆಂಡು ಬಡಿಸಿಕೊಂಡ ಮರು ಎಸೆತದಲ್ಲಿಯೇ ಸ್ಪಿನ್ನರ್​ ಕರಣ್ ಶರ್ಮಾ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಂ ದ ಪಂಜಾಬ್ ಇನಿಂಗ್ಸ್ ಕುಸಿಯಿತು. ನಡುವೆ ಶಶಾಂಕ್​ ಶರ್ಮಾ 37 ರನ್ ಬಾರಿಸಿದರು. ಆದರೆ, ಕೊಹ್ಲಿ ಮಾಡಿದ ಅದ್ಭುತ ರನ್​ಔಟ್​ಗೆ ಅವರು ಬಲಿಯಾದರು. ಸ್ಯಾಮ್​ ಕರ್ರನ್​ 22 ರನ್​ ಕೊಡುಗೆ ಕೊಟ್ಟರು.

ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

Continue Reading

ಪ್ರಮುಖ ಸುದ್ದಿ

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

T20 World Cup: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ‘ಡಿ’ ಗುಂಪಿನಲ್ಲಿದೆ. ‘ಡಿ’ ಗುಂಪಿನಲ್ಲಿರುವ ಇತರ ತಂಡಗಳೆಂದರೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ. ಇದರರ್ಥ ಶ್ರೀಲಂಕಾ ಮಾತ್ರ ಈ ಗುಂಪಿನಲ್ಲಿ ಮಾಜಿ ಟಿ20 ವಿಶ್ವಕಪ್ ವಿಜೇತರು. ದ್ವೀಪರಾಷ್ಟ್ರ 2014 ದಿಂದ ಇಲ್ಲಿಯವರೆಗೆ ಏಕೈಕ ಟಿ 20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್​ ಮಂಡಳಿ ಗುರುವಾರ (ಮೇ 9) ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ (T20 World Cup 2024) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಲೆಗ್ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ (Wanindu Hasaranga) ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದು, ಚರಿತ್ ಅಸಲಂಕಾ (Charit Asalanka) ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಐಪಿಎಲ್​ನಲ್ಲಿ ಚೆನ್ನೈ ಪರ ಮಿಂಚಿದ್ದ ಮಹೀಶ್​ ಪತಿರಾನಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ‘ಡಿ’ ಗುಂಪಿನಲ್ಲಿದೆ. ‘ಡಿ’ ಗುಂಪಿನಲ್ಲಿರುವ ಇತರ ತಂಡಗಳೆಂದರೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ. ಇದರರ್ಥ ಶ್ರೀಲಂಕಾ ಮಾತ್ರ ಈ ಗುಂಪಿನಲ್ಲಿ ಮಾಜಿ ಟಿ20 ವಿಶ್ವಕಪ್ ವಿಜೇತರು. ದ್ವೀಪರಾಷ್ಟ್ರ 2014 ದಿಂದ ಇಲ್ಲಿಯವರೆಗೆ ಏಕೈಕ ಟಿ 20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.

ಅನುಭವಿಗಳಿಗೆ ಅವಕಾಶ


ಶ್ರೀಲಂಕಾ ತಂಡದಲ್ಲಿ ಅನುಭವಿ ಆಲ್ರೌಂಡರ್ ಹಾಗೂ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಸ್ಥಾನ ಪಡೆದಿದ್ದಾರೆ. ಈ ವರ್ಷದ ಜನವರಿಯಲ್ಲಿ, ಲಂಕಾ ಮ್ಯಾನೇಜ್ಮೆಂಟ್​​ ಮ್ಯಾಥ್ಯೂಸ್ ಅವರನ್ನು ಮೂರು ವರ್ಷಗಳ ಸುದೀರ್ಘ ಅಂತರದ ನಂತರ ಟಿ 20 ಐ ತಂಡಕ್ಕೆ ಮರಳಿ ಕರೆಸಿಕೊಂಡಿತ್ತು. ಪ್ರಸ್ತುತ ಶ್ರೀಲಂಕಾ ತಂಡದಲ್ಲಿ 2014 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಏಕೈಕ ಆಟಗಾರ ಮ್ಯಾಥ್ಯೂಸ್. ಅನುಭವಿ ಆಲ್ರೌಂಡರ್ ತಮ್ಮ ಆರನೇ ಟಿ 20 ವಿಶ್ವಕಪ್ ಆಡಲು ಸಜ್ಜಾಗುತ್ತಿದ್ದಾರೆ.

ಪ್ರಸ್ತುತ ಏಕದಿನ ನಾಯಕ ಕುಸಾಲ್ ಮೆಂಡಿಸ್ ಮತ್ತು ಟೆಸ್ಟ್ ನಾಯಕ ಧನಂಜಯ ಡಿ ಸಿಲ್ವಾ ಅವರೊಂದಿಗೆ ಮಾಜಿ ಸೀಮಿತ ಓವರ್ಗಳ ನಾಯಕ ದಸುನ್ ಶನಕಾ ತಂಡದಲ್ಲಿರುವುದರಿಂದ ಶ್ರೀಲಂಕಾ ತಂಡದಲ್ಲಿ ನಾಯಕತ್ವದ ಕೊರತೆಯಿಲ್ಲ.

ಇದನ್ನೂ ಓದಿ: Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

2014 ರ ಟಿ 20 ವಿಶ್ವಕಪ್ ವಿಜೇತರ ವೇಗದ ದಾಳಿಯನ್ನು ಮಥೀಶಾ ಪತಿರಾನಾ ಮತ್ತು ದಿಲ್ಶಾನ್ ಮಧುಶಂಕಾ ಮುನ್ನಡೆಸಲಿದ್ದಾರೆ ಮತ್ತು ದುಷ್ಮಂತ ಚಮೀರಾ ಮತ್ತು ನುವಾನ್ ತುಷಾರಾ ಅವರೊಂದಿಗೆ ಇರಲಿದ್ದಾರೆ. ಸ್ಪಿನ್ ವಿಭಾಗವನ್ನು ಮಹೇಶ್ ದೀಕ್ಷಾ ಮತ್ತು ದುನಿತ್ ವೆಲ್ಲಾಗೆ ನೋಡಿಕೊಳ್ಳಲಿದ್ದು, ಧನಂಜಯ ಡಿ ಸಿಲ್ವಾ ಕೂಡ ಉತ್ತಮ ಆಯ್ಕೆಯಾಗಿದ್ದಾರೆ.

ಜೂನ್ 3 ರಂದು ನ್ಯೂಯಾರ್ಕ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ತನ್ನ ಅಭಿಯಾನ ಪ್ರಾರಂಭಿಸಲಿದೆ. ಜೂನ್ 7 ರಂದು ಡಲ್ಲಾಸ್​ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಜೂನ್ 11 ಮತ್ತು 16 ರಂದು ಕ್ರಮವಾಗಿ ನೇಪಾಳ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ.

ಶ್ರೀಲಂಕಾ ತಂಡ ಈ ರೀತಿ ಇದೆ

ವನಿಂದು ಹಸರಂಗ (ನಾಯಕ), ಚರಿತ್ ಅಸಲಂಕಾ (ಉಪನಾಯಕ), ಕುಸಲ್ ಮೆಂಡಿಸ್, 10ನೇ ನಿಸ್ಸಾಂಕಾ, ಕಮಿಂಡು ಮೆಂಡಿಸ್, ಸದೀರಾ ಸಮರವಿಕ್ರಮ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕಾ, ಧನಂಜಯ ಡಿ ಸಿಲ್ವಾ, ಮಹೀಶ್ ತೀಕ್ಷಾ, ದುನಿತ್ ವೆಲ್ಲಾಲಾಜ್, ದುಷ್ಮಂತ ಚಮೀರಾ, ನುವಾನ್ ತುಷಾರ, ಮತೀಶಾ ಪತಿರಾನಾ, ದಿಲ್ಶಾನ್ ಮಧುಶಂಕಾ.

ಮೀಸಲು ಆಟಗಾರರು: ಅಸಿತಾ ಫರ್ನಾಂಡೊ, ವಿಜಯಕಾಂತ್ ವಿಯಾಕಾಂತ್, ಭಾನುಕಾ ರಾಜಪಕ್ಸೆ, ಜನಿತ್ ಲಿಯಾನಗೆ

Continue Reading
Advertisement
IPL 2024
ಐಪಿಎಲ್ 20241 min ago

IPL 2024: ಆರ್‌ಸಿಬಿಯ ಪ್ಲೇ ಆಫ್ ಕನಸು ಜೀವಂತ; ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದ ಪಂಜಾಬ್‌: ಹೀಗಿದೆ ಹೊಸ ಅಂಕಪಟ್ಟಿ

Virat Kohli
ಐಪಿಎಲ್ 202412 mins ago

Virat Kohli: ಮೈದಾನದಲ್ಲೇ ರುಸ್ಸೊ AK 47ಗೆ ಕಲಾಶ್‌ನಿಕಾವೋ ಗನ್ ತೆಗೆದ ಕೊಹ್ಲಿ; ವಿಡಿಯೊ ನೋಡಿ

Akshaya Tritiya 2024
ಪ್ರಮುಖ ಸುದ್ದಿ17 mins ago

Akshaya Tritiya 2024: ಇಂದು ಏನೇನು ಖರೀದಿಸಬಹುದು? ಚಿನ್ನ- ಬೆಳ್ಳಿ ಏಕೆ ಖರೀದಿಸಬೇಕು?

Akshaya Tritiya 2024
ಧಾರ್ಮಿಕ32 mins ago

Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

America v/s Russia
ವಿದೇಶ40 mins ago

America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?

Actor Prabhas
ಸಿನಿಮಾ52 mins ago

Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

Prajwal Revanna Case
ಕ್ರೈಂ56 mins ago

Prajwal Revanna case: ಪ್ರಜ್ವಲ್‌ ರೇವಣ್ಣ ಮೇಲೆ ಸುಳ್ಳು ಆರೋಪ ನೀಡಲು ಒತ್ತಡ: ಮಹಿಳೆ ದೂರು

karnataka SSLC result 2024
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಜೊತೆಗೆ ಸಿಹಿ ಸುದ್ದಿಯೂ ಇದೆ

Digestion Tips
ಆರೋಗ್ಯ2 hours ago

Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

Karnataka Weather Forecast
ಮಳೆ2 hours ago

Karnataka Weather : 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆಗೆ ಯೆಲ್ಲೋ ಅಲರ್ಟ್‌ ಘೋಷಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ11 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ12 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ13 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ19 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ19 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ20 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು20 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ20 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು22 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಟ್ರೆಂಡಿಂಗ್‌