IPL 2024: ವಿಲ್ಲಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಲಕ್ನೋ ತಂಡ ಸೇರಿದ ಮ್ಯಾಟ್​ ಹೆನ್ರಿ - Vistara News

ಕ್ರೀಡೆ

IPL 2024: ವಿಲ್ಲಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಲಕ್ನೋ ತಂಡ ಸೇರಿದ ಮ್ಯಾಟ್​ ಹೆನ್ರಿ

IPL 2024: ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ಸೆಣಸಾಟ ನಡೆಸಲಿದೆ. ಈ ಲಕ್ನೋಗೆ ಇದು ಮೊದಲ ತವರಿನ ಪಂದ್ಯದವಾಗಿದೆ. ಪಂಜಾಬ್​ ಈಗಾಗಲೇ ಆಡಿದ 2 ಪಂದ್ಯಗಳ ಪೈಕಿ ಒಂದನ್ನು ಗೆದ್ದು ಮತ್ತೊಂದರಲ್ಲಿ ಸೋಲು ಕಂಡಿದೆ. ಲಕ್ನೋ ಒಂದೇ ಪಂದ್ಯ ಆಡಿ ಇದರಲ್ಲಿ ಸೋಲು ಕಂಡಿದೆ. ಇದೀಗ ಗೆಲುವಿನ ಶುಭಾರಂಭಕ್ಕಾಗಿ ಇಂದು ಶಕ್ತಿ ಮೀರಿ ಪ್ರಯತ್ನಿಸುವ ಇರಾದೆಯಲ್ಲಿದೆ.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ವೈಯಕ್ತಿಕ ಕಾರಣ ನೀಡಿ ಐಪಿಎಲ್​ನಿಂದ(IPL 2024) ಹಿಂದೆ ಸರಿದಿದ್ದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡದ ಇಂಗ್ಲೆಂಡ್​ ವೇಗಿ ಡೇವಿಡ್​ ವಿಲ್ಲಿ(David Willey) ಸ್ಥಾನಕ್ಕೆ ನ್ಯೂಜಿಲ್ಯಾಂಡ್​ನ ಬೌಲರ್​ ಮ್ಯಾಟ್​ ಹೆನ್ರಿ(Matt Henry) ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಇವರ ಆಯ್ಕೆಯನ್ನು ಫ್ರಾಂಚೈಸಿ ತನ್ನ ಅಧಿಕೃತ ಪ್ರಕಟನೆಯ ಮೂಲಕ ಪ್ರಕಟಿಸಿದೆ.


ವಿಲ್ಲಿ ಅವರು ಆರಂಭಿಕ 2 ಪಂದ್ಯಗಳಿಗೆ ಅಲಭ್ಯರಾಗುವುದಾಗಿ ಹೇಳಿ ತವರಿಗೆ ಮರಳಿದ್ದರು. ಆದರೆ ಸಂಪೂರ್ಣವಾಗಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಹೆನ್ರಿಯನ್ನು ಆಯ್ಕೆ ಮಾಡಲಾಗಿದೆ. ವಿಲ್ಲಿ ಅವರನ್ನು ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿ 2 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಮ್ಯಾಟ್ ಹೆನ್ರಿಯನ್ನು ಮೂಲ ಬೆಲೆ ರೂ 1.25 ಕೋಟಿಗೆ ಖರೀದಿ ಮಾಡಲಾಗಿದೆ.

ಮ್ಯಾಟ್​ ಹೆನ್ರಿಯ ಮೂರನೇ ಐಪಿಎಲ್​ ಫ್ರಾ.ಚೈಸಿ ಇದಾಗಿದೆ. ಇದಕ್ಕೂ ಮುನ್ನ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಭಾಗವಾಗಿದ್ದರು. ಹೆನ್ರಿ ಇದುವರೆಗೆ ಆಡಿದ್ದು ಕೇವಲ 2 ಐಪಿಎಲ್​ ಪಂದ್ಯಗಳನ್ನು ಮಾತ್ರ. 2017ರಲ್ಲಿ ಪಂಜಾಬ್​ ವಿರುದ್ಧ ಕಣಕ್ಕಿಳಿದಿದ್ದರು. 2 ಪಂದ್ಯಗಳಿಂದ 1 ವಿಕೆಟ್​ ಪಡೆದಿದ್ದಾರೆ.

32ರ ಹರೆಯದ ಅವರು ಇದುವರೆಗೆ ನ್ಯೂಜಿಲ್ಯಾಂಡ್​ ಪರ 25 ಟೆಸ್ಟ್‌, 82 ಏಕದಿನ ಮತ್ತು 17 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. 25 ಟೆಸ್ಟ್‌ಗಳಲ್ಲಿ 95 ವಿಕೆಟ್‌ಗಳು, 82 ಏಕದಿನಗಳಲ್ಲಿ 141 ವಿಕೆಟ್‌ಗಳು ಮತ್ತು 17 ಟಿ20 ಯಿಂದ 20 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ IPL 2024: ಮುಂಬೈ ತಂಡಕ್ಕೆ ಮತ್ತಷ್ಟು ಚಿಂತೆ ಹೆಚ್ಚಿಸಿದ ಸೂರ್ಯಕುಮಾರ್ ಫಿಟ್‌ನೆಸ್‌

ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ಸೆಣಸಾಟ ನಡೆಸಲಿದೆ. ಈ ಲಕ್ನೋಗೆ ಇದು ಮೊದಲ ತವರಿನ ಪಂದ್ಯದವಾಗಿದೆ. ಪಂಜಾಬ್​ ಈಗಾಗಲೇ ಆಡಿದ 2 ಪಂದ್ಯಗಳ ಪೈಕಿ ಒಂದನ್ನು ಗೆದ್ದು ಮತ್ತೊಂದರಲ್ಲಿ ಸೋಲು ಕಂಡಿದೆ. ಲಕ್ನೋ ಒಂದೇ ಪಂದ್ಯ ಆಡಿ ಇದರಲ್ಲಿ ಸೋಲು ಕಂಡಿದೆ. ಇದೀಗ ಗೆಲುವಿನ ಶುಭಾರಂಭಕ್ಕಾಗಿ ಇಂದು ಶಕ್ತಿ ಮೀರಿ ಪ್ರಯತ್ನಿಸುವ ಇರಾದೆಯಲ್ಲಿದೆ.

ಪರಿಷ್ಕೃತ ಲಕ್ನೋ ತಂಡ


ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್(ಉಪ ನಾಯಕ), ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ತ್​ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್​ ಜೋಸೆಫ್​, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆ್ಯಶ್ಟನ್​ ಟರ್ನರ್, ಮ್ಯಾಟ್​ ಹೆನ್ರಿ, ಮೊಹಮ್ಮದ್ ಅರ್ಷದ್ ಖಾನ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ಸೂಪರ್​-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ

T20 World Cup 2024: ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಸೂಪರ್​-8 ಹಂತದ(Super Eight stage) ತಂಡಗಳ ಪಟ್ಟಿ ಅಂತಿಮಗೊಂಡಿದೆ. ಇಂದು(ಸೋಮವಾರ) ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಈ ಪಟ್ಟಿ ಅಂತಿಮಗೊಂಡಿತು. 7 ತಂಡಗಳು ಈಗಾಗಲೇ ಈ ಹಂತಕ್ಕೇರಿತ್ತು. ಆದರೆ ಉಳಿದ ಒಂದು ಸ್ಥಾನಕ್ಕಾಗಿ ಡಿ ಗುಂಪಿನಿಂದ ಬಾಂಗ್ಲಾ ಮತ್ತು ನೆದರ್ಲೆಂಡ್ಸ್​ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಾಂಗ್ಲಾ ಮೇಲುಗೈ ಸಾಧಿಸಿ ಅಂತಿಮವಾಗಿ ತೇರ್ಗಡೆಗೊಂಡಿದೆ.

ಬಾಂಗ್ಲಾದೇಶ ‘ಎ’ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಅಪಘಾನಿಸ್ತಾನದ ಜತೆ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ವೆಸ್ಟ್​ ಇಂಡೀಸ್​, ಅಮೆರಿಕ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್​ ತಂಡಗಳು ಕಾಣಿಸಿಕೊಂಡಿವೆ. ಲೀಗ್​ ಹಂತದ ಪಂದ್ಯಕ್ಕೆ ನಾಳೆ ತೆರೆ ಬೀಳಲಿದೆ. ಅಂತಿಮ ಪಂದ್ಯದಲ್ಲಿ ವಿಂಡೀಸ್​ ಮತ್ತು ಆಫ್ಘಾನ್​ ಮುಖಾಮುಖಿಯಾಗಲಿವೆ. ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್​ 20ರಂದು ಬಾರ್ಬಡೋಸ್​ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಇದನ್ನೂ ಓದಿ BAN vs NEP: ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ನೇಪಾಳ ವಿರುದ್ಧ 21 ರನ್​ ಗೆಲುವು

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ

ಬಾಂಗ್ಲಾಗೆ 21 ರನ್​ ಜಯ


ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ 21 ರನ್​ ಅಂತರದಿಂದ ಗೆದ್ದು ಸೂಪರ್​-8ಗೆ ಪ್ರವೇಶ ಪಡೆಯಿತು. ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ 19.3 ಓವರ್​ಗಳಲ್ಲಿ ಕೇವಲ 106 ರನ್​ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್​ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ನಡೆಸಿ ನೇಪಾಳವನ್ನು 85 ರನ್​ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು.

ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್​ ಎಸೆದು 2 ಮೇಡನ್​ ಸಹಿತ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು. ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್​ಗೆ 3 ವಿಕೆಟ್​ ಪಡೆದರು. ನಾಯಕ ಶಕೀಬ್​ 2 ವಿಕೆಟ್​ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್​ ಮೊದಲ ಎಸೆತದಲ್ಲೇ ವಿಕೆಟ್​ ಕಿತ್ತರೆ ಬ್ರೋಕನ್​ ಹ್ಯಾಟ್ರಿಕ್​ ವಿಕೆಟ್​ ಕಿತ್ತ ದಾಖಲೆ ಮಾಡಲಿದ್ದಾರೆ.

Continue Reading

ಕ್ರೀಡೆ

BAN vs NEP: ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ನೇಪಾಳ ವಿರುದ್ಧ 21 ರನ್​ ಗೆಲುವು

BAN vs NEP: ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್​ ಎಸೆದು 2 ಮೇಡನ್​ ಸಹಿತ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು. ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು.

VISTARANEWS.COM


on

BAN vs NEP
Koo

ಕಿಂಗ್‌ಸ್ಟನ್‌: ತಂಜಿಮ್ ಹಸನ್ ಸಾಕಿಬ್(7ಕ್ಕೆ 4) ಅವರ ಘಾತಕ ಬೌಲಿಂಗ್​ ದಾಳಿಯ ನೆರವಿನಿಂದಾಗಿ ಸೂಪರ್​-8 ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ(BAN vs NEP) ಮೇಲುಗೈ ಸಾಧಿಸಿದೆ. ನೇಪಾಳ ವಿರುದ್ಧ 21 ರನ್​ ಅಂತರದಿಂದ ಗೆದ್ದು ಸೂಪರ್​-8ಗೆ ಪ್ರವೇಶ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ತಂಡದ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾ ಗೆಲುವಿನಿಂದ ನೆದರ್ಲೆಂಡ್ಸ್​ ತಂಡ ಟೂರ್ನಿಯಿಂದ ಹೊರಬಿದ್ದಿತು.

ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ 19.3 ಓವರ್​ಗಳಲ್ಲಿ ಕೇವಲ 106 ರನ್​ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್​ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ನಡೆಸಿ ನೇಪಾಳವನ್ನು 85 ರನ್​ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು.

ಬಾಂಗ್ಲಾದೇಶ ಈ ಪಂದ್ಯದಲ್ಲಿ ಸೋಲು ಕಾಣುತ್ತಿದ್ದರೆ, ನೆದರ್ಲೆಂಡ್ಸ್​ ತಂಡಕ್ಕೂ ಸೂಪರ್​-8 ಹಂತಕ್ಕೇರುವ ಅವಕಾಶವಿತ್ತು. ಆದರೆ ಬಾಂಗ್ಲಾ ಗೆಲುವಿನಿಂದ ನೆದರ್ಲೆಂಡ್ಸ್​ ತಂಡ ಹೊರಬಿದ್ದಿತು. ನೆದರ್ಲೆಂಡ್ಸ್​ ತಂಡ ಲಂಕಾ ವಿರುದ್ಧ 83 ರನ್​ ಅಂತರದ ಸೋಲು ಕಂಡಿತು. ಈ ಪಂದ್ಯ ಗೆದ್ದಿದ್ದರೂ ಕೂಡ ನೆದರ್ಲೆಂಡ್ಸ್​ಗೆ ಯಾವುದೇ ಲಾಭವಾಗುತ್ತಿರಲಿಲ್ಲ.

ಸಣ್ಣ ಮೊತ್ತವನ್ನು ಚೇಸಿಂಗ್​ ನಡೆಸಿದ ನೇಪಾಳ ಆರಂಭಿಕ ಆಘಾತ ಎದುರಿಸಿದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಕುಶಾಲ್ ಮಲ್ಲ ಮತ್ತು ದೀಪೇಂದ್ರ ಸಿಂಗ್ ಐರಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದ ಕಾರಣ ತಂಡ ಚೇತರಿಕೆಯ ಹಾದಿಗೆ ಮರಳಿ ಗೆಲುವು ಕಾಣುವ ಸ್ಥಿತಿಯಲ್ಲಿತ್ತು. ಆದರೆ, ಮುಸ್ತಫಿಜುರ್​ ರೆಹಮಾನ್​ ಅವರು ಉಭತ ಆಟಗಾರರ ವಿಕೆಟ್​ ಬೇಟೆಯಾಡಿ ಬಾಂಗ್ಲಾಗೆ ಯಶಸ್ಸು ತಂದುಕೊಟ್ಟರು. ಕುಶಾಲ್ ಮಲ್ಲ 27 ರನ್​ ಬಾರಿಸಿದರೆ, ದೀಪೇಂದ್ರ ಸಿಂಗ್ 25 ರನ್​ ಗಳಿಸಿದರು. ಇವರಿಬ್ಬರ ವಿಕೆಟ್​ ಪತನಗೊಳ್ಳುತ್ತಿದ್ದಂತೆ ನೆಪಾಳ ಸೋಲು ಕೂಡ ಖಚಿತಗೊಂಡಿತು.

ಇದನ್ನೂ ಓದಿ T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್​ ಎಸೆದು 2 ಮೇಡನ್​ ಸಹಿತ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು. ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್​ಗೆ 3 ವಿಕೆಟ್​ ಪಡೆದರು. ನಾಯಕ ಶಕೀಬ್​ 2 ವಿಕೆಟ್​ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್​ ಮೊದಲ ಎಸೆತದಲ್ಲೇ ವಿಕೆಟ್​ ಕಿತ್ತರೆ ಬ್ರೋಕನ್​ ಹ್ಯಾಟ್ರಿಕ್​ ವಿಕೆಟ್​ ಕಿತ್ತ ದಾಖಲೆ ಮಾಡಲಿದ್ದಾರೆ.

ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾ ತಂಡ ಖಾತೆ ತೆರೆಯುವ ಮುನ್ನವೇ ವಿಕೆಟ್​ ಕಳೆದುಕೊಂಡಿತು. ಬಳಿಕ ಬಂದ ಆಟಗಾರರು ಕೂಡ ಸತತವಾಗಿ ವಿಕೆಟ್​ ಕಳೆದುಕೊಂಡು ಪೆವಿಲಿಯನ್​ ಪರೇಡ್​ ನಡೆಸಿದರು. ನಾಯಕ ಶಕೀಬ್​ ಅಲ್​ ಹಸನ್​ 17 ರನ್​ ಬಾರಿಸಿದ್ದೇ ತಂಡದ ಪರ ಆಟಗಾರನೊಬ್ಬ ಬಾರಿಸಿದ ಗರಿಷ್ಠ ಸ್ಕೋರ್​. ನೇಪಾಳ ಪರ ಸೋಂಪಾಲ್ ಕಾಮಿ(2), ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇದೀಗ ನಿರಪರಾಧಿ ಎನಿಸಿಕೊಂಡಿರುವ ಸಂದೀಪ್ ಲಮಿಚಾನೆ(2), ನಾಯಕ ರೋಹಿತ್ ಪೌಡೆಲ್(2) ಮತ್ತು ದೀಪೇಂದ್ರ ಸಿಂಗ್(2) ವಿಕೆಟ್​ ಕಿತ್ತರು.

Continue Reading

ಕ್ರೀಡೆ

Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

Euro 2024:ಬದಲಿ ಆಟಗಾರನಾಗಿ ಕಣಕ್ಕಿಳಿದ ವೌಟ್ ವೆಗ್ ಹಾರ್ಟ್ಸ್ ಕೊನೆಯ ಕ್ಷಣದಲ್ಲಿ ಸಿಡಿಸಿದ ಗೋಲಿನಿಂದ ನೆದರ್ಲೆಂಡ್ಸ್ ತಂಡ ಪೋಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ನೆದರ್ಲೆಂಡ್ಸ್ ತಂಡದ ಪರ ಗೋಡಿ ಗಪ್ಕೊ (29ನೇ ನಿಮಿಷ) ಮತ್ತು ವೌಟ್ ವೆಗ್ ಹಾರ್ಟ್ಸ್ (83ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರೆ, ಪೋಲೆಂಡ್ ಪರ ಆಡಂ ಬುಕ್ಸ (16ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

VISTARANEWS.COM


on

Euro 2024
Koo

ಮ್ಯೂನಿಚ್: ಇಂಗ್ಲೆಂಡ್‌ ತಂಡ ಯುರೋ(Euro Cup) 2024(Euro 2024) ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಆಂಗ್ಲರು ಸೆರ್ಬಿಯಾ ವಿರುದ್ಧ 1-0 ಗೆಲುವು ಸಾಧಿಸಿದರು. ಮತ್ತೊಂದು ನೆದರ್ಲೆಂಡ್ಸ್(Poland vs Netherlands) ತಂಡ 2-1 ರಿಂದ ಪೋಲೆಂಡ್ ತಂಡವನ್ನು ಸೋಲಿಸಿದರೆ, ಡೆನ್ಮಾರ್ಕ್ ಮತ್ತು ಸ್ಲೊವೇನಿಯಾ(Denmark vs Slovenia) ಪಂದ್ಯ 1-1 ಸಮಬಲದೊಂದಿಗೆ ಡ್ರಾಗೊಂಡಿತು.

ಬದಲಿ ಆಟಗಾರನಾಗಿ ಕಣಕ್ಕಿಳಿದ ವೌಟ್ ವೆಗ್ ಹಾರ್ಟ್ಸ್ ಕೊನೆಯ ಕ್ಷಣದಲ್ಲಿ ಸಿಡಿಸಿದ ಗೋಲಿನಿಂದ ನೆದರ್ಲೆಂಡ್ಸ್ ತಂಡ ಪೋಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ನೆದರ್ಲೆಂಡ್ಸ್ ತಂಡದ ಪರ ಗೋಡಿ ಗಪ್ಕೊ (29ನೇ ನಿಮಿಷ) ಮತ್ತು ವೌಟ್ ವೆಗ್ ಹಾರ್ಟ್ಸ್ (83ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರೆ, ಪೋಲೆಂಡ್ ಪರ ಆಡಂ ಬುಕ್ಸ (16ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

ಪೋಲೆಂಡ್ ತಂಡ ಪಂದ್ಯ ಆರಂಭಗೊಂಡ 16ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ಸಾಧಿಸಿತು. ಆದರೆ 29ನೇ ನಿಮಿಷದಲ್ಲಿ ಎದುರಾಳಿ ತಂಡದ ಗೋಡಿ ಗಪ್ಕೊ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಇಲ್ಲಿಂದ ಮೇಲೆ ಉಭಯ ತಂಡಗಳ ರಕ್ಷಣ ವಿಭಾಗ ಅತ್ಯಂತ ಬಲಿಷ್ಠವಾಗಿ ಗೋಚರಿಸಿತು. ಇನ್ನೇನು ಪಂದ್ಯ ಟೈಗೊಳ್ಳುತ್ತದೆ ಎನ್ನುವಾಗ ನೆದರ್ಲೆಂಡ್ಸ್ ಪರ ಬದಲಿ ಆಟಗಾರನಾಗಿ ಕಣಕ್ಕಿಳಿದ ವೌಟ್ ವೆಗ್ ಹಾರ್ಟ್ಸ್ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇಂಗ್ಲೆಂಡ್​ಗೆ ಗೆಲುವು


ಇಂಗ್ಲೆಂಡ್​ ತಂಡ ಜೂಡ್ ಬೆಲ್ಲಿಂಗ್ಹ್ಯಾಮ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಸೆರ್ಬಿಯಾ ವಿರುದ್ಧ ಗೆದ್ದು ಬೀಗಿತು. ಪಂದ್ಯ ಆರಂಭಗೊಂಡ 13ನೇ ನಿಮಿಷದಲ್ಲೇ ಬೆಲ್ಲಿಂಗ್ಹ್ಯಾಮ್ ಗೋಲು ಬಾರಿಸಿ ಮಿಂಚಿದರು. ಈ ಗೋಲು ದಾಖಲಾದ ಬಳಿಕ ಇಂಗ್ಲೆಂಡ್ ಆಟಗಾರರು ಕೇವಲ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು ಕೊನೆಗೂ ಪಂದ್ಯವನ್ನು ಜಯಿಸಿದರು.

ಡೆನ್ಮಾರ್ಕ್-ಸ್ಲೊವೇನಿಯಾ ಪಂದ್ಯ ಡ್ರಾ


ಬಲಿಷ್ಠ ತಂಡಗಳಾದ ಸ್ಲೊವೇನಿಯಾ ಮತ್ತು ಡೆನ್ಮಾರ್ಕ್ ನಡುವಿನಿ ಪಂದ್ಯ ಡ್ರಾಗೊಳ್ಳುವ ಮೂಲಕ ಅಂತ್ಯ ಕಂಡಿತು. ಸ್ಲೊವೇನಿಯಾದ ಎರಿಕ್ ಜಾಂಜಾ ಅವರು ತಂಡದ ಪರ ಮೊದಲ ಗೋಲು ಗಳಿಸಿದರು. ಕ್ರಿಶ್ಚಿಯನ್ ಎರಿಕ್ಸನ್ ಡೆನ್ಮಾರ್ಕ್ ಪರ ಗೋಲು ಬಾರಿಸಿದರು. ಮ್ಯಾಂಚೆಸ್ಟರ್ ಕ್ಲಬ್​ ಪರ ಆಡುವ ಮಿಡ್​ಫೀಲ್ಡರ್​ ಕ್ರಿಶ್ಚಿಯನ್ ಎರಿಕ್ಸೆನ್(Christian Eriksen) 2021ರಲ್ಲಿ ಅವರು ಯರೋ ಕಪ್​ ಆಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮೈದಾನದಲ್ಲೇ ಕುಸಿದ್ದು ಬಿದ್ದು ಆಸ್ಪತ್ರೆ ಸೇರಿದ್ದರು. ಅದೃಷ್ಟವಶಾತ್ ಅವರು ಬದುಕುಳಿದಿದ್ದರು.

Continue Reading

ಕ್ರೀಡೆ

Sachin Tendulkar: ವಿಶ್ವ ಅಪ್ಪಂದಿರ ದಿನದಂದು ವಿಶೇಷ ಫೋಟೊ ಹಂಚಿಕೊಂಡು ಭಾವುಕರಾದ ಸಚಿನ್​ ತೆಂಡೂಲ್ಕರ್​

Sachin Tendulkar: ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ.

VISTARANEWS.COM


on

Sachin Tendulkar
Koo

ಮುಂಬಯಿ: ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರ ವಿಶ್ವ ಅಪ್ಪಂದಿರ(Father’s Day) ದಿನ ಎಂದು ಆಚರಿಸಲಾಗುತ್ತದೆ. ಇಂದು ವಿಶ್ವಾದ್ಯಂತ ಅಪ್ಪಂದಿರ ದಿನಾಚರಣೆಯನ್ನು(Happy Father’s Day) ಆಚರಿಸಲಾಗುತ್ತಿದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ ಮತ್ತು ಗೌರವ ಸಲ್ಲಿಸಲಾಗುತ್ತದೆ. ಟೀಮ್​ ಇಂಡಿಯಾದ ಮಾಜಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಕೂಡ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ತಂದೆ ಮತ್ತಉ ತಾಯಿಯ ಜತೆಗಿನ ಸುಂದರ ಕ್ಷಣದ ಫೋಟೊವನ್ನು ಹಂಚಿಕೊಂಡಿರುವ ಸಚಿನ್​, ನನ್ನ ತಂದೆಯ ಪ್ರೀತಿಯ ನೆನಪಿಗಾಗಿ, ಅವರ ನಗು ಪ್ರತಿಯೊಂದು ಕೋಣೆಯನ್ನು ಬೆಳಗಿಸುತ್ತದೆ ಮತ್ತು ಅವರ ಪ್ರೀತಿಯು ಪ್ರತಿ ಕ್ಷಣವೂ ವಿಶೇಷವಾಗಿಸಿತ್ತು. ನಮ್ಮಿಂದ ದೂರ ಆಗಿದ್ದರೂ ಕೂಡ ಆ ಪ್ರೀತಿ ಮಾತ್ರ ಶಾಶ್ವತವಾಗಿದೆ. ತಂದೆಯ ದಿನದ ಶುಭಾಶಯಗಳು, ಬಾಬಾ! ಎಂದು ಬರೆದುಕೊಂಡಿದ್ದಾರೆ.

ಸಚಿನ್ ತನ್ನ ತಂದೆ ರಮೇಶ್ ತೆಂಡೂಲ್ಕರ್ ಅವರ ನೆನಪಿಗಾಗಿ ಪ್ರತಿ ವರ್ಷವೂ ಕೂಡ ತಂದೆಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಕ್ರಿಕೆಟ್​ಗೆ ನಿವೃತ್ತಿ ಹೇಳುವ ಸಂದರ್ಭದಲ್ಲಿಯೂ ಸಚಿನ್​ ಅವರು ತಮ್ಮ ತಂದೆಯೇ ನನ್ನ ರೋಲ್​ ಮಾಡೆಲ್​ ಎಂದಿದ್ದರು. ಅವರು ನೀಡಿದ ಬೆಂಬಲದಿಂದ ನಾನು ಕ್ರಿಕೆಟ್​ನಲ್ಲಿ ಈ ಎಲ್ಲ ಸಾಧನೆ ಮಾಡಿದೆ ಎಂದಿದ್ದರು.

ಇದನ್ನೂ ಓದಿ Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

ತಂದೆಯ ಸಾವಿನ ನೋವಿನ ಮಧ್ಯೆಯೂ ವಿಶ್ವಕಪ್​ ಆಡಿದ್ದ ಸಚಿನ್​


1999ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡುತ್ತಿದ್ದ ವೇಳೆ ಸಚಿನ್​ ಅವರ ತಂದೆ ನಿಧನರಾಗಿದ್ದರು. ತಂದೆ ತೀರಿಕೊಂಡ ನೋವಿನ ಮಧ್ಯೆಯೂ ಮೂರು ದಿನಗಳ ನಂತರ ಸಚಿನ್ ಕೀನ್ಯಾ ವಿರುದ್ಧ 140 ರನ್ ಬಾರಿಸಿದ್ದರು. ​ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನೆದು ಸಚಿನ್​ ಭಾವುಕರಾಗಿದ್ದರು. ತಂದೆಯ ಹಠಾತ್ ಸಾವಿನಿಂದ ಸಚಿನ್ ವಿಶ್ವಕಪ್‌ನಿಂದ ಹಿಂದೆ ಸರಿಯಲಿದ್ದಾರೆ ಎಂಬ ಊಹಪೋಹಗಳು ಎದ್ದಿದ್ದವು. ಆದರೆ ವಿಶ್ವಕಪ್‌ನಲ್ಲಿ ಆಡುವುದನ್ನು ಮುಂದುವರೆಸಲು ತಾಯಿ ಒತ್ತಾಯಿಸಿದ ನಂತರ ಸಚಿನ್ ಮೈದಾನಕ್ಕೆ ಇಳಿದಿದ್ದರು.

ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ ಸಚಿನ್​ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Continue Reading
Advertisement
Kiccha Sudeep Replies To Darshan Ban Matter Entertainment
ಸ್ಯಾಂಡಲ್ ವುಡ್2 mins ago

Kiccha Sudeep: ಜಗ್ಗೇಶ್‌ಗೆ ಹೇಗೆ ಮಾತನಾಡಬೇಕು, ಹೇಗೆ ಎಸ್ಕೇಪ್ ಆಗಬೇಕು ಅನ್ನೋದು ಗೊತ್ತು ಎಂದ ಕಿಚ್ಚ!

T20 World Cup 2024
ಕ್ರೀಡೆ5 mins ago

T20 World Cup 2024: ಸೂಪರ್​-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ

Nikhil Gupta
ವಿದೇಶ9 mins ago

Nikhil Gupta: ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ಆರೋಪ; ಜೆಕ್‌ ಗಣರಾಜ್ಯದಿಂದ ನಿಖಿಲ್‌ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

BAN vs NEP
ಕ್ರೀಡೆ38 mins ago

BAN vs NEP: ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ನೇಪಾಳ ವಿರುದ್ಧ 21 ರನ್​ ಗೆಲುವು

Actor Darshan of many acquaintance unknown of darshan
ಸ್ಯಾಂಡಲ್ ವುಡ್43 mins ago

Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ!

Lok Sabha Election Result
Lok Sabha Election 202447 mins ago

Rajat Sharma: ಕಾಂಗ್ರೆಸ್ ನಾಯಕರ ವಿರುದ್ಧ ಖ್ಯಾತ ಪತ್ರಕರ್ತ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇಕೆ?

Flesh-Eating Bacteria
ಆರೋಗ್ಯ58 mins ago

Flesh-Eating Bacteria: ಆತಂಕ ಮೂಡಿಸಿದ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಸೋಂಕು ತಗುಲಿದ 48 ಗಂಟೆಯಲ್ಲೇ ಸಾವು!

CM Siddaramaiah and Vidhanasoudha
ಪ್ರಮುಖ ಸುದ್ದಿ1 hour ago

CM Siddaramaiah: 370 ನಿವೃತ್ತ ಅಧಿಕಾರಿಗಳಿಗೆ ಬಾಗಿಲು ತೋರಿಸಿದ ಸರಕಾರ

Euro 2024
ಕ್ರೀಡೆ1 hour ago

Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

Nayana Nagaraj ginirama serial fame got married with suhas
ಕಿರುತೆರೆ1 hour ago

Nayana Nagaraj: 10 ವರ್ಷದ ಪ್ರೀತಿ! ಮನಮೆಚ್ಚಿದ ಹುಡುಗನ ಜತೆ ಸಪ್ತಪದಿ ತುಳಿದ ʻಗಿಣಿರಾಮʼ ನಟಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ16 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ17 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ22 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌