IPL 2024: ಮುಂಬೈ ತಂಡ ಸೇರಿದ ಸೂರ್ಯಕುಮಾರ್‌; ಡೆಲ್ಲಿ ವಿರುದ್ಧ ಕಣಕ್ಕೆ - Vistara News

ಕ್ರೀಡೆ

IPL 2024: ಮುಂಬೈ ತಂಡ ಸೇರಿದ ಸೂರ್ಯಕುಮಾರ್‌; ಡೆಲ್ಲಿ ವಿರುದ್ಧ ಕಣಕ್ಕೆ

IPL 2024: ನಟರಾಜ ಶೈಲಿಯಲ್ಲಿ ಬ್ಯಾಟ್​ ಬೀಸುವ ಇವರು ಹಲವು ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಈ ವರೆಗೂ 60 ಟಿ20 ಪಂದ್ಯಗಳನ್ನಾಡಿದ್ದು, 171+ ಸ್ಟ್ರೈಕ್‌ರೇಟ್‌ನೊಂದಿಗೆ 2141 ರನ್‌ ಕಲೆಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು 4 ಶತಕಗಳನ್ನೂ ಬಾರಿಸಿದ್ದಾರೆ.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: 2 ದಿನಗಳ ಹಿಂದಷ್ಟೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಿಂದ ಫಿಟ್​ನೆಸ್​ ಕ್ಲೀಯರೆನ್ಸ್ ಸರ್ಟಿಫಿಕೇಟ್‌ ​ಪಡೆದು ಐಪಿಎಲ್(IPL 2024)​ ಆಡಲು ಅನುಮತಿ ಪಡೆದಿದ್ದ ಸ್ಫೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌(Suryakumar Yadav) ಮುಂಬೈ(mumbai indians) ತಂಡವನ್ನು ಸೇರಿದ್ದಾರೆ. ಸೂರ್ಯಕುಮಾರ್​ ಅವರು ಮುಂಬೈ ತಲುಪಿದ ಫೋಟೊ ಟ್ವಿಟರ್​ ಎಕ್ಸ್​ನಲ್ಲಿ ವೈರಲ್​ ಆಗಿದೆ.

ಮುಂಬೈ ತಲುಪಿರುವ ಸೂರ್ಯಕುಮಾರ್​ ಅವರು ಇಂದಿನಿಂದಲೇ ತಂಡದೊಂದಿಗೆ ಅಭ್ಯಾಸ ಆರಂಭಿಸಲಿದ್ದು ಏಪ್ರಿಲ್​ 7ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಸೂರ್ಯ ಆಗಮನದಿಂದ ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಹ್ಯಾಟ್ರಿಕ್​ ಸೋಲಿಗೆ ತುತ್ತಾಗಿರುವ ಮುಂಬೈ ಇನ್ನಾದರೂ ಸೋಲಿನ ಸುಳಿಯಿಂದ ಹೊರಬರಳಿದೆಯಾ ಎಂದು ಕಾದು ನೋಡಬೇಕಿದೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಎಡ ಪಾದದ ನೋವಿಗೆ ಸಿಲುಕಿದ್ದರು. ಬಳಿಕ ಜನವರಿಯಲ್ಲಿ ಸೂರ್ಯ ನ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಕೆ ಕಂಡು ಐಪಿಎಲ್ ಆಡಲು ಸಜ್ಜಾಗಿದ್ದಾರೆ. ಸೂರ್ಯಕುಮಾರ್​ ಯಾದವ್​ ಅವರ ಆಗಮನದಿಂದ ಮಧ್ಯಮ ಕ್ರಮಾಂಕ್ಕಕ್ಕೆ ಬಲ ಬಂದಂತಾಗಿದೆ. ಈ ಹಿಂದಿನ ಮೂರು ಪಂದ್ಯಗಳ ಸೋಲಿಗೂ ಕೂಡ ಮಧ್ಯಮ ಕ್ರಮಾಂಕದ ವೈಫಲ್ಯತೆ ಕಾರಣವಾಗಿತ್ತು. ಇದೀಗ ಸೂರ್ಯ ಎಂಟ್ರಿಯಿಂದ ಈ ಸಮಸ್ಯೆ ಬಗೆಹರಿದಂತಿದೆ. 

ಇದನ್ನೂ ಓದಿ IPL 2024: ಮೂರು ಕೋಟಿ ವಿದ್ಯುತ್ ಬಿಲ್‌ ಪಾವತಿ; ಚೆನ್ನೈ-ಹೈದರಾಬಾದ್​ ಪಂದ್ಯ ನಿರಾಳ

ನಟರಾಜ ಶೈಲಿಯಲ್ಲಿ ಬ್ಯಾಟ್​ ಬೀಸುವ ಇವರು ಹಲವು ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಈ ವರೆಗೂ 60 ಟಿ20 ಪಂದ್ಯಗಳನ್ನಾಡಿದ್ದು, 171+ ಸ್ಟ್ರೈಕ್‌ರೇಟ್‌ನೊಂದಿಗೆ 2141 ರನ್‌ ಕಲೆಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು 4 ಶತಕಗಳನ್ನೂ ಬಾರಿಸಿದ್ದಾರೆ. ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿಯೂ ಸೂರ್ಯ ನಂ.1 ಸ್ಥಾನ ಪಡೆದಿದ್ದಾರೆ. 

ಐಪಿಎಲ್​ ಸಾಧನೆ


ಸೂರ್ಯಕುಮಾರ್​ ಯಾದವ್​ ಅವರು ಈ ವರೆಗೆ ಐಪಿಎಲ್​ನಲ್ಲಿ 2 ಫ್ರಾಂಚೈಸಿಗಳನ್ನು ಪ್ರತಿನಿಧಿಸಿ ಒಟ್ಟು 139 ಪಂದ್ಯಗಳನ್ನು ಆಡಿದ್ದಾರೆ. 124 ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿರುವ ಇವರು 3249 ರನ್​ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಮತ್ತ 21 ಅರ್ಧಶತಕ ಒಳಗೊಂಡಿದೆ. ಮುಂಬೈಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೂರ್ಯ ಅವರ ದಾಖಲೆ ಉತ್ತಮವಾಗಿದೆ. ಹೀಗಾಗಿ ಅವರು ಡೆಲ್ಲಿ ವಿರುದ್ಧ ಕಣಕ್ಕಿಳಿದರೆ ಪಂದ್ಯದಲ್ಲಿ ಅಬ್ಬರಿಸುವುದು ಖಚಿತ ಎನ್ನಲಡ್ಡಿಯಿಲ್ಲ.

ಮುಂಬೈ ತಂಡ


ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್​ಪ್ರೀತ್​ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

PBKS vs RR: ಪ್ಲೇ ಆಫ್​ ರೇಸ್​ನಿಂದ ಈಗಾಗಲೇ ಹೊರಬಿದ್ದಿರುವ ಕಾರಣ ಪಂಜಾಬ್​ಗೆ ಈ ಗೆಲುವು ಕೇವಲ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರುವಲ್ಲಿ ಮಾತ್ರ ಸಹಾಯ ಮಾಡಿತು. ಹಾಲಿ ಚಾಂಪಿಯನ್​ ಕೊನೆಯ ಸ್ಥಾನಕ್ಕೆ ಕುಸಿಯಿತು. ಸದ್ಯ ಪಂಜಾಬ್​​ 9ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ

VISTARANEWS.COM


on

PBKS vs RR
Koo

ಗುವಾಹಟಿ: ಬುಧವಾರದ ಸಣ್ಣ ಮೊತ್ತದ ಐಪಿಎಲ್(IPL 2024)​ ಮೇಲಾಟದಲ್ಲಿ ಪಂಜಾಬ್​ ಕಿಂಗ್ಸ್​(PBKS vs RR) ತಂಡ ರಾಜಸ್ಥಾನ್​ ರಾಯಲ್ಸ್​(Rajasthan Royals) ವಿರುದ್ಧ 5 ವಿಕೆಟ್​ ಅಂತರದ ಗೆಲುವು ಸಾಧಿಸಿದೆ. ಲಕ್ನೋ ಸೋಲಿನಿಂದ ಪ್ಲೇ ಆಫ್​ ಪ್ರವೇಶಿಸಿದ ಕಾರಣ ಸಂಜು ಪಡೆಗೆ ಈ ಸೋಲು ಯಾವುದೇ ಪರಿಣಾಮ ಬೀರಲಿಲ್ಲ. ಒಂದೊಮ್ಮೆ ಡೆಲ್ಲಿ ವಿರುದ್ಧ ಲಕ್ನೋ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದರೆ, ಈ ಸೋಲು ರಾಜಸ್ಥಾನ್​ಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿತ್ತು.

ರಾಜಸ್ಥಾನ್​ ತಂಡಕ್ಕೆ​ 2ನೇ ತವರಾದ ಗುವಾಹಟಿಯ ಬರ್ಸಾಪರಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 65ನೇ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಾಜಸ್ಥಾನ್​ ರಾಯಲ್ಸ್ ಬ್ಯಾಟಿಂಗ್​ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಕೇವಲ 144 ರನ್​ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್(Punjab Kings)​ ಕೂಡ ಒಂದು ಹಂತದಲ್ಲಿ ಆಘಾತ ಎದುರಿಸಿ ಬಳಿಕ ಚೇತರಿಕೆ ಹಾದಿ ಹಿಡಿದು 18.5 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 145 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಪ್ಲೇ ಆಫ್​ ರೇಸ್​ನಿಂದ ಈಗಾಗಲೇ ಹೊರಬಿದ್ದಿರುವ ಕಾರಣ ಪಂಜಾಬ್​ಗೆ ಈ ಗೆಲುವು ಕೇವಲ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರುವಲ್ಲಿ ಮಾತ್ರ ಸಹಾಯ ಮಾಡಿತು. ಹಾಲಿ ಚಾಂಪಿಯನ್​ ಕೊನೆಯ ಸ್ಥಾನಕ್ಕೆ ಕುಸಿಯಿತು. ಸದ್ಯ ಪಂಜಾಬ್​​ 9ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ತನ್ನ ಅಂತಿಮ ಲೀಗ್​ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಆಡಲಿದೆ. ಈ ಪಂದ್ಯ ಮೇ 19ರಂದು ನಡೆಯಲಿದೆ.

ಚೇಸಿಂಗ್​ ವೇಳೆ ಪಂಜಾಬ್​ ಕೂಡ ಅಗ್ರ ಕ್ರಮಾಂಕದ ಆಟಗಾರರನ್ನು ಅಗ್ಗಕ್ಕೆ ಕಳೆದುಕೊಂಡು ರಾಜಸ್ಥಾನ್​ ತಂಡದ ಹಾಗೆ ಆರಂಭಿಕ ಆಘಾತಕ್ಕೆ ಸಿಲುಕಿತು. ಪ್ರಭಾಸಿಮ್ರಾನ್ ಸಿಂಗ್(6) ಮತ್ತು ಜಾನಿ ಬೇರ್​ಸ್ಟೋ(14) ರನ್​ ಗಳಿಸಿ ಪೆವಿಲಿಯನ್​ ಸೇರಿದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ, ಈ ಬಾರಿಯ ಐಪಿಎಲ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಸಂಚಲನ ಸೃಷ್ಟಿಸಿದ್ದ ಶಶಾಂಕ್​ ಸಿಂಗ್​ ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡರು. 36 ರನ್​ಗೆ 3 ವಿಕೆಟ್​ ಕಳೆದುಕೊಂಡ ಪಂಜಾಬ್​, ಚೇತರಿಕೆ ಕಾಣುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ರೀಲಿ ರೋಸೊ(22) ವಿಕೆಟ್ ಕೂಡ​ ಕಳೆದುಕೊಂಡಿತು. ತಂಡದ ಮೊತ್ತ 50 ಗಡಿ ದಾಟುವ ಮುನ್ನ 4 ವಿಕೆಟ್​ ಕಳೆದುಕೊಂಡು ಮತ್ತಷ್ಟು ತೀವ್ರ ಸಂಕಟಕ್ಕೆ ಒಳಗಾಯಿತು.

ಇದನ್ನೂ ಓದಿ IPL 2024: ಆರ್​ಸಿಬಿ ಪಂದ್ಯದ ವೇಳೆ ಕಳಪೆ ಆಹಾರ ವಿತರಣೆ: ಕೆಎಸ್​ಸಿಎ ವಿರುದ್ಧ ಎಫ್ಐಆರ್

ಅರ್ಧಶತಕ ಬಾರಿಸಿದ ಕರನ್​

ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನೆರವಾದದ್ದು ನಾಯಕ ಸ್ಯಾಮ್​ ಕರನ್​ ಮತ್ತು ಜಿತೇಶ್​ ಶರ್ಮ. ಉಭಯ ಆಟಗಾರರು ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದರು. 5ನೇ ವಿಕೆಟ್​ಗೆ 63 ರನ್​ ಒಟ್ಟುಗೂಡಿಸಿದರು. ಈ ಉಪಯುಕ್ತ ಜತೆಯಾಟದ ಸಹಾಯದಿಂದ ಪಂಜಾಬ್​ ಗೆಲುವಿನ ದಡ ಸೇರಿತು. ಜಿತೇಶ್​ ಶರ್ಮ 20 ಎಸೆತಗಳಿಂದ 22 ರನ್​ ಬಾರಿಸಿ ಪರಾಗ್​ಗೆ ವಿಕೆಟ್​ ಒಪ್ಪಿಸಿದರು. ಕರನ್ ಅಜೇಯರಾಗಿ ಉಳಿದು ಅರ್ಧಶತಕ ಬಾರಿಸಿದರು. ಇದು ಅವರ ಈ ಆವೃತ್ತಿಯ 2ನೇ ಅರ್ಧಶತಕವಾಗಿದೆ. ಒಟ್ಟು 41 ಎಸೆತ ಎದುರಿಸಿದ ಕರನ್​ 63* ರನ್​ ಬಾರಿಸಿದರು. ಈ ವೇಳೆ ಇವರ ಬ್ಯಾಟ್​ನಿಂದ 5 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ​

ರಾಜಸ್ಥಾನ್​ಗೆ ಆಸರೆಯಾದ ಪರಾಗ್-ಅಶ್ವಿನ್​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್​ ಪರ ಯಶಸ್ವಿ ಜೈಸ್ವಾಲ್​(4) ಜಾಸ್​ ಬಟ್ಲರ್​ ಅನುಪಸ್ಥಿತಿಯಲ್ಲಿ ಆಡಲಿಳಿದ ಕೊಹ್ಲರ್-ಕಾಡ್ಮೋರ್(18), ನಾಯಕ ಸಂಜು ಸ್ಯಾಮ್ಸನ್​(18), ಧೃವ್​ ಜುರೇಲ್​(0), ರೋಮನ್​ ಪೋವೆಲ್(4) ಬ್ಯಾಟಿಂಗ್​ ವೈಫಲ್ಯ ಕಂಡು ಪೆವಿಲಿಯನ್​ ಪರೇಡ್​ ನಡೆಸಿದರು. ರಿಯಾನ್​ ಪರಾಗ್​(48) ಮತ್ತು ಆರ್​.ಅಶ್ವಿನ್​(28) ಅವರ ಅಸಾಮಾನ್ಯ ಬ್ಯಾಟಿಂಗ್​ನಿಂದಾಗಿ ತಂಡ 100 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ಸು ಕಂಡಿತು. ಪಂಜಾಬ್​ ಪರ 2 ವಿಕೆಟ್​ ಪಡೆದ ಹರ್ಷಲ್​ ಪಟೇಲ್​ ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಅಗ್ರಸ್ಥಾನ ಪಡೆದರು. ಉಳಿದಂತೆ ಕರನ್​, ಮತ್ತು ರಾಹುಲ್​ ಚಹರ್​ ತಲಾ 2 ವಿಕೆಟ್​ ಉರುಳಿಸಿದರು.

Continue Reading

ಕ್ರೀಡೆ

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sandeep Lamichhane: ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಇದೀಗ ದೋಷಮುಕ್ತರಾಗಿದ್ದಾರೆ.

VISTARANEWS.COM


on

Sandeep Lamichhane
Koo

ಕಠ್ಮಂಡು: 18 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ(Sandeep Lamichhane)ಗೆ ದೊಡ್ಡ ರಿಲೀಫ್​ ಸಿಕ್ಕಿದೆ. ನೇಪಾಳ ಹೈಕೋರ್ಟ್(Nepal High Court) ನಿರಪರಾಧಿ ಎಂದು ಘೋಷಿಸಿದೆ.

ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಇದೀಗ ದೋಷಮುಕ್ತರಾಗಿದ್ದಾರೆ.

ಮಂಗಳವಾರ ಮತ್ತು ಬುಧವಾರ (ಮೇ 14 ಮತ್ತು 15) ನಡೆದ ಕೋರ್ಟ್ ಕಲಾಪದ ನಂತರ, ನ್ಯಾಯಾಲಯವು ಸಂದೀಪ್ ಲಮಿಚಾನೆ ಅವರ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೆ ಹೈಕೋರ್ಟ್ ನ್ಯಾಯಾಧೀಶರಾದ ಸುದರ್ಶನ್ ದೇವ್ ಭಟ್ಟ ಮತ್ತು ಅಂಜು ಉಪೇತ್ರಿ ಅವರು ಲಮಿಚಾನೆ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಲಮಿಚಾನೆ ಪರವಾಗಿ ಹಿರಿಯ ವಕೀಲರಾದ ರಾಮ್ ನಾರಾಯಣ ಬಿದರಿ, ರಾಮನ್ ಶ್ರೇಷ್ಠ, ಶಂಬು ಥಾಪಾ, ಮುರಾರಿ ಸಪ್ಕೋಟ ಮತ್ತು ಕೃಷ್ಣ ಸಪ್ಕೋಟ ತಮ್ಮ ವಾದವನ್ನು ಮಂಡಿಸಿದರು.

ಇದನ್ನೂ ಓದಿ 8 ವರ್ಷ ಜೈಲು ಶಿಕ್ಷೆ ಬೆನ್ನಲ್ಲೇ ಲಮಿಚಾನೆ ಅಮಾನತುಗೊಳಿಸಿದ ನೇಪಾಳ ಕ್ರಿಕೆಟ್ ಸಂಸ್ಥೆ

ವಿಶ್ವಕಪ್​ನಲ್ಲಿ ಅವಕಾಶ


ನಿರಪರಾಧಿ ಎಂದು ಸಾಬೀತಾದ ನಂತರ ಸಂದೀಪ್ ಇದೀಗ ಇದೇ ಜೂನ್​ 1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್(T20 World Cup) ತಂಡಕ್ಕೆ ಲಭ್ಯವಾಗಿದ್ದಾರೆ ಎನ್ನಲಾಗಿದೆ. ನೇಪಾಳ ತನ್ನ ತಂಡವನ್ನು ಈಗಾಗಲೇ ಘೋಷಿಸಿದ್ದರೂ ಕೂಡ ಮೇ 25 ರವರೆಗೆ ತಂಡದಲ್ಲಿ ಆಟಗಾರರ ಬದಲಾವಣೆಗೆ ಅವಕಾಶವಿರುವ ಕಾರಣ ಲಾಮಿಚಾನೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಏನಿದು ಪ್ರಕರಣ?

2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.

2022ರಲ್ಲಿ ಲಾಮಿಚಾನೆ ಅವರು ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದ ಕೆರಿಬಿಯನ್​ ಕ್ರಿಕೆಟ್​ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವೇಳೆ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರಂಟ್​ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್​ಗೆ ಹಾಜರುಪಡಿಸಿದ್ದರು.

ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳಿಂದ ಜೈಲಿನಲ್ಲಿದ್ದರು. ತಮಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಂದೀಪ್​ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್​ ಅವರಿಗೆ ಜಾಮೀನು ನೀಡಿತ್ತು. ಈ ವೇಳೆ 20 ಲಕ್ಷ ರೂಪಾಯಿ ಬಾಂಡ್​ ಕೂಡ ಪಡೆದುಕೊಂಡಿತ್ತು. ಕಳೆದ ವರ್ಷ ಜನವರಿ 12 ರಿಂದ ಲಾಮಿಚಾನೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೆ ನೇಪಾಳ ಪರ ಕ್ರಿಕೆಟ್​ ಕೂಡ ಆಡುತ್ತಿದ್ದರು.

ಐಪಿಎಲ್​ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಿದ್ದ ಸಂದೀಪ್ ಲಮಿಚಾನೆ ಒಟ್ಟು 9 ಪಂದ್ಯಗಳನ್ನು ಆಡಿ 13 ವಿಕೆಟ್​ ಪಡೆದಿದ್ದಾರೆ. 2018 ಮತ್ತು 2019ರ ಆವೃತ್ತಿಯಲ್ಲಿ ಅವರು ಆಡಿದ್ದರು.

Continue Reading

ಕ್ರೀಡೆ

DP Manu: ಫೆಡರೇಷನ್ ಕಪ್‌ನಲ್ಲಿ ನೀರಜ್​ ಚೋಪ್ರಾಗೆ ಬೆವರಿಳಿಯುವಂತೆ ಮಾಡಿದ ಕನ್ನಡಿಗ ಮನು; ಇವರ ಹಿನ್ನೆಲೆ, ಸಾಧನೆ ಏನೇನು?

DP Manu: ಫೆಡರೇಷನ್ ಕಪ್‌ನಲ್ಲಿ (82.06 ಮೀ) ಭರ್ಜಿ ಎಸೆದು ಭರವಸೆ ಮೂಡಿಸಿರುವ 23 ವರ್ಷದ ಡಿ.ಪಿ. ಮನು ಅವರು ಹಾಸನ(D. P. Manu Hassan) ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದವರು. ಹೊಯ್ಸಳ ಶಾಲೆಯಲ್ಲಿ ಓದುವಾಗಲೇ ಭರ್ಜಿಯತ್ತ ಆಕರ್ಷಣೆ ಬೆಳೆಸಿಕೊಂಡ ಮನು ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಕಠಿಣ ತರಬೇತಿ ಪಡೆದರು. ಇಲ್ಲಿ ತೋರಿದ ಪ್ರದರ್ಶನವು ಇಂದು ಚಿಗುರು ಮೀಸೆ ಹುಡುಗನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

VISTARANEWS.COM


on

DP Manu
Koo

ಬೆಂಗಳೂರು: ಬುಧವಾರ ನಡೆದ ಫೆಡರೇಷನ್ ಕಪ್‌ನಲ್ಲಿ(Federation Cup 2024) ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಅವರಿಗೆ ಬೆವರಿಳಿಸುಂತೆ ಮಾಡಿ ಸಣ್ಣ ಅಂತರದಿಂದ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕ ಗೆದ್ದ ಡಿ.ಪಿ ಮನು(DP Manu) ಅಪ್ಪಟ ಕನ್ನಡಿಗ. ಇವರ ಪೂರ್ಣ ಹೆಸರು ದೇವರಕೇಶವಿ ಪ್ರಕಾಶ ಮನು (ಡಿ.ಪಿ. ಮನು ಎಂದೇ ಖ್ಯಾತಿ). ಈಗಾಗಲೇ ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಇದೇ ರೀತಿಯ ಪ್ರದರ್ಶನ ತೋರಿದರೆ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಡಿ.ಪಿ. ಮನು ಹಿನ್ನೆಲೆ


ಫೆಡರೇಷನ್ ಕಪ್‌ನಲ್ಲಿ (82.06 ಮೀ) ಭರ್ಜಿ ಎಸೆದು ಭರವಸೆ ಮೂಡಿಸಿರುವ 23 ವರ್ಷದ ಡಿ.ಪಿ. ಮನು ಅವರು ಹಾಸನ(D. P. Manu Hassan) ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದವರು. ತಂದೆ ಪ್ರಕಾಶ ಹಾಗೂ ತಾಯಿ ಸುಜಾತಾ. ಹೊಯ್ಸಳ ಶಾಲೆಯಲ್ಲಿ ಓದುವಾಗಲೇ ಭರ್ಜಿಯತ್ತ ಆಕರ್ಷಣೆ ಬೆಳೆಸಿಕೊಂಡ ಮನು ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಕಠಿಣ ತರಬೇತಿ ಪಡೆದರು. ಇದೇ ವೇಳೆ ಮನು ಅವರು ಅಂತಾರಾಜ್ಯ, ಜೂನಿಯರ್‌ ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು. ಆಳ್ವಾಸ್‌ ಕಾಲೇಜಿನಲ್ಲಿ ಅವರು ಪಡೆದ ತರಬೇತಿ, ನೀಡಿದ ಪ್ರದರ್ಶನವು ಚಿಗುರು ಮೀಸೆ ಹುಡುಗನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

ಕಳೆದ ವರ್ಷ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮನು (84.14 ಮೀ.) 6ನೇ ಸ್ಥಾನ ಪಡೆದು ಭಾರೀ ಸಂಚಲನ ಮೂಡಿಸಿದ್ದರು. ಅಲ್ಲದೆ 2023ರಲ್ಲಿ ನಡೆದ ಏಶ್ಯನ್​ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಇಂದು ನಡೆದ ಫೆಡರೇಷನ್ ಕಪ್‌ನಲ್ಲಿ (82.06 ಮೀ) ಬೆಳ್ಳಿ ಗೆದ್ದಿದ್ದಾರೆ. ಮೂರನೇ ಸುತ್ತಿನ ವರೆಗೂ ಅಗ್ರಸ್ಥಾನ ಕಾಯ್ದುಕೊಂಡು ಅನುಭವಿ ನೀರಜ್​ಗೆ ಒಂದು ಕ್ಷಣ ಬೆವರಿಳಿಸುವಂತೆ ಮಾಡಿದ್ದು ನಿಜಕ್ಕೂ ಸಣ್ಣ ಮಾತಲ್ಲ. ನೀರಜ್​ ಗೆಲುವಿನ ಅಂತರ 82.27 ಮೀ.

ಇದನ್ನೂ ಓದಿ Federation Cup 2024: ಕನ್ನಡಿಗ ಮನು ಎದುರು ತೀವ್ರ ಪೈಪೋಟಿ ಎದುರಿಸಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಕಾಶಿನಾಥ ನಾಯ್ಕ್ ಗರಡಿಯಲ್ಲಿ ಬೆಳೆದ ಪ್ರತಿಭೆ


ಮನು ಅವರು ಕಾಶಿನಾಥ ನಾಯ್ಕ್​ ಅವರ ಗರಡಿಯಲ್ಲಿ ಬೆಳೆದು ಬಂದ ಪ್ರತಿಭೆ. 2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್‌ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯ್ಕ್​ ಅವರ ಪರಿಚಯವಾಯಿತು. ಕಾಶಿನಾಥ ಅವರ ಬಳಿ ಸತತ ತರಬೇತಿ ಪಡೆದ ಮನು, 65 ಮೀಟರ್‌ ದೂರ ಭರ್ಜಿ ಎಸೆತದಿಂದ 80 ಮೀಟರ್‌ ದಾಟುವಂತಾದರು. ಇದೀಗ ವಿಶ್ವ ಚಾಂಪಿಯನ್​ ನೀರಜ್​ಗೆ ತೀವ್ರ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ನೀರಜ್​ ಕೂಡ ಕಾಶಿನಾಥ ನಾಯ್ಕ್ ಮಾರ್ಗದರ್ಶನದಲ್ಲೇ ಬೆಳೆದು ಬಂದ ಪ್ರತಿಭೆಯಾಗಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರೊಬ್ಬರು ಜಾವೆಲಿನ್‌ ಥ್ರೋ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಅವರು ಒಲಿಂಪಿಕ್ಸ್‌ಗೂ ಆಯ್ಕೆಯಾಗಲಿ, ಅಲ್ಲೂ ರಾಜ್ಯ, ದೇಶದ ಘನತೆ ಹೆಚ್ಚಿಸಲಿ ಎಂದು ಆಶಿಸೋಣ.


ಮನು ಮಾಡಿದ ಸಾಧನೆಗಳು

  1. 1. 2023ರ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ

    2. 2023ರಲ್ಲಿ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 6ನೇ ಸ್ಥಾನ
  2. 3. 2024ರಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ ಬೆಳ್ಳಿ ಪದಕ

    4. 2022ರ ಜೂನ್‌ನಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಹಿರಿಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನದ ಪದಕ
  3. 5. 2023ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಚಿನ್ನ
  4. 6. 2022ರ ಏಪ್ರಿಲ್‌ನಲ್ಲಿ ಕೇರಳದ ತಿರುವನಂಪುರಂನಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಬಂಗಾರದ ಪದಕ
  5. 7. 2022ರ ಆಗಸ್ಟ್‌ನಲ್ಲಿ ನಡೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ
  6. 8. 2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಗೇಮ್ಸ್‌ನಲ್ಲಿ ಚಿನ್ನ

Continue Reading

ಕ್ರೀಡೆ

Federation Cup 2024: ಕನ್ನಡಿಗ ಮನು ಎದುರು ತೀವ್ರ ಪೈಪೋಟಿ ಎದುರಿಸಿ ಚಿನ್ನ ಗೆದ್ದ ನೀರಜ್ ಚೋಪ್ರಾ

Federation Cup 2024: ಫೆಡರೇಷನ್ ಕಪ್‌ನಲ್ಲಿ(Federation Cup)ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಕೊನೆಗೂ ಚಿನ್ನದ ಪದಕ ಗೆದ್ದರು

VISTARANEWS.COM


on

Federation Cup 2024
Koo

ಭುವನೇಶ್ವರ: ಮೂರು ವರ್ಷದ ಬಳಿಕ ತವರಿನಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಕೊನೆಗೂ ಚಿನ್ನದ ಪದಕ ಗೆದ್ದರು. ಮನು(82.06 ಮೀ) ಬೆಳ್ಳಿ ಪದಕ್ಕೆ ತೃಪ್ತಿಪಟ್ಟರು. ಮತೋರ್ವ ಪದಕ ಭರವಸೆಯ ಕಿಶೋರ್ ಜೆನಾ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಪದಕ ಗೆಲ್ಲುವಲ್ಲಿ ವಿಫಲರಾದರು. ಉತ್ತಮ್ ಪಾಟೀಲ್(78.39 ಮೀ) ಮೂರನೇ ಸ್ಥಾನ ಪಡೆದರು.

ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ (84.14 ಮೀ.) 6ನೇ ಸ್ಥಾನ ಪಡೆದಿದ್ದ ಮನು ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್​ಗೆ ತೀವ್ರ ಪೈಪೋಟಿ ನೀಡಿದರು. ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲಿ 82 ಮೀ. ದೂರ ಜಾವೆಲಿನ್​​ ಎಸೆದರೆ, ಡಿಪಿ ಮನು 82.06 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡರು. ದ್ವಿತೀಯ ಸುತ್ತಿನಲ್ಲಿ ಮನು 77.23 ದೂರ ಎಸೆದರು. ಆದರೆ ಇವರ ಪ್ರತಿಸ್ಪರ್ಧಿ ನೀರಜ್​ ಈ ಎಸೆತವನ್ನು ಉದ್ದೇಶಪೂರ್ವಕವಾಗಿ ಫೌಲ್ ಮಾಡಿದರು. ಈ ಥ್ರೋ ಅಷ್ಟು ಉತ್ತಮವಾಗಿರದ ಕಾರಣ ನೀರಜ್​ ಈ ತಂತ್ರ ಬಳಸಿದರು.

ಮೂರನೇ ಎಸೆತದಲ್ಲಿ ಮನು 81.43 ಮೀ. ದೂರ ದಾಖಲಿಸಿದರೆ, ಮತ್ತೆ ಎಡವಿದ ನೀರಜ್​ 81.29 ಮೀ ದಾಖಲಿಸಿ ಹಿನ್ನಡೆಯಲ್ಲೇ ಉಳಿದರು. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಪುಟಿದೆದ್ದ ನೀರಜ್​ 82.27 ಮೀ ದೂರ ಜಾವೆಲಿನ್​ ಎಸೆದು ಅಗ್ರಸ್ಥಾನವನ್ನು ವಶಪಡಿಸಿಕೊಂಡರು. ಮನು ಈ ಸುತ್ತಿನಲ್ಲಿ 81.47 ಮೀ. ಎಸೆದರು. 28 ವರ್ಷದ ಕಿಶೋರ್ ಜೆನಾ ತಾವೆಸೆದ 4 ಎಸೆತಗಳ ಪೈಲಿ ಮೂರರಲ್ಲಿ ಫೌಲ್ ಆಗಿ ಅತ್ಯಂತ ಕಳಪೆ ಪ್ರದರ್ಶನ ತೋರಿದರು. ಕನಿಷ್ಠ ಮೂರನೇ ಸ್ಥಾನ ಪಡೆಯುವಲ್ಲಿಯೂ ವಿಫಲರಾದರು.

ಉತ್ತಮವಾಗಿ ಆಡುತ್ತಿದ್ದ ಮನು 5ನೇ ಮತ್ತು ಅಂತಿಮ 6 ಸುತ್ತಿನ ಎಸೆತವನ್ನು ಫೌಲ್ ಮಾಡಿದರು. ಅಂತಿಮವಾಗಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು. ನೀರಜ್​ ಬಹಳ ಕಷ್ಟಪಟ್ಟು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಚೋಪ್ರಾ ಅವರು ಈ ಟೂರ್ನಿಯಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸಿದ್ದು ಮಾರ್ಚ್ 17, 2021 ರಲ್ಲಿ. ಈ ವೇಳೆ ಅವರು 87.80 ಮೀ ಎಸೆಯುವ ಮೂಲಕ ಚಿನ್ನ ಗೆದಿದ್ದರು. ಈ ಬಾರಿ 82.27 ಮೀ. ಎಸೆದರು. ಕಳೆದ ಕೆಲವು ಟೂರ್ನಿಗೆ ಹೋಲಿಸಿದರೆ ನೀರಜ್​ ಅವರ ಕಳಪೆ ಪ್ರದರ್ಶನ ಇದಾಗಿದೆ.

ಕಾಶಿನಾಥ ನಾಯ್ಕ್ ತರಬೇತಿ

2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್‌ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯ್ಕ್​ ಎಂಬ ಜಾವೆಲಿನ್‌ ತರಬೇತುದಾರರ ಪರಿಚಯವೂ ಆಯಿತು. ಕಾಶಿನಾಥ ಅವರ ಬಳಿ ಸತತ ತರಬೇತಿ ಪಡೆದ ಡಿ.ಪಿ. ಮನು, 65 ಮೀಟರ್‌ ದೂರ ಭರ್ಜಿ ಎಸೆತದಿಂದ 80 ಮೀಟರ್‌ ದಾಟುವಂತಾದರು.

ನೀರಜ್​ ಮತ್ತು ಕಿಶೋರ್​ ಈಗಾಗಲೇ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದಿದ್ದರು. ಮನು ಭಾರತದ ಮೂರನೇ ಸ್ಫರ್ಧಿಯಾಗಿ ಒಲಿಂಪಿಕ್ಸ್​ ಅರ್ಹತೆ ಪಡೆಲು ಅವರಿಗೆ ಈ ಟೂರ್ನಿಯಲ್ಲಿ 85.50 ಮೀ. ಎಸೆತದ ಮಾನದಂಡ ನೀಡಲಾಗಿತ್ತು. ಆದರೆ ಈ ಗುರಿಯನ್ನು ತಲುಪಲು ಅವರಿಂದ ಸಾಧ್ಯವಾಗಲಿಲ್ಲ.

ಮನು ಮಾಡಿದ ಸಾಧನೆಗಳು

  1. 2022ರ ಜೂನ್‌ನಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಹಿರಿಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನದ ಪದಕ
  2. 2023ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಚಿನ್ನ
  3. 2022ರ ಏಪ್ರಿಲ್‌ನಲ್ಲಿ ಕೇರಳದ ತಿರುವನಂಪುರಂನಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಬಂಗಾರದ ಪದಕ
  4. 2022ರ ಆಗಸ್ಟ್‌ನಲ್ಲಿ ನಡೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ
  5. 2023ರ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ
  6. 2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಗೇಮ್ಸ್‌ನಲ್ಲಿ ಚಿನ್ನ

Continue Reading
Advertisement
Mamata Banerjee
ಪ್ರಮುಖ ಸುದ್ದಿ2 hours ago

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

Bengaluru News
ಕರ್ನಾಟಕ2 hours ago

Bengaluru News: ಹಸುಗೂಸನ್ನು ರಸ್ತೆ ಬದಿ ಎಸೆದು ಹೋದ ಅನಾಮಿಕರು!

CAA
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Amit Shah
ದೇಶ2 hours ago

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

PBKS vs RR
ಕ್ರೀಡೆ2 hours ago

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

Anjali Murder Case
ಕ್ರೈಂ3 hours ago

Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Isha Ambani
ದೇಶ3 hours ago

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Retired Teacher G T Bhatt Bommanahalli 80th celebration programme on May 19
ಉತ್ತರ ಕನ್ನಡ3 hours ago

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Dalita Sangharsha samiti demands that Minister HK Patil should be dismissed from the Cabinet
ರಾಯಚೂರು3 hours ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ3 hours ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ18 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ21 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌