World Health Day: ಆರೋಗ್ಯವೇ ಸಂಪತ್ತು; ಈ ಸೂತ್ರ ಪಾಲಿಸಿ, ಆರೋಗ್ಯವಾಗಿರಿ! - Vistara News

ಆರೋಗ್ಯ

World Health Day: ಆರೋಗ್ಯವೇ ಸಂಪತ್ತು; ಈ ಸೂತ್ರ ಪಾಲಿಸಿ, ಆರೋಗ್ಯವಾಗಿರಿ!

ಏ.7ರಂದು ಭಾನುವಾರ ವಿಶ್ವ ಆರೋಗ್ಯ ದಿನ (World Health Day) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯದ ಕಾಳಜಿಗಾಗಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಪೌಷ್ಠಿಕತಜ್ಞರಾದ ಡಾ. ಸಂಜನಾ ಪ್ರೇಮ್‌ಲಾಲ್‌ ವಿವರಿಸಿದ್ದಾರೆ. ನಿಮಗಾಗಿ ಈ ಉಪಯುಕ್ತ ಲೇಖನ.

VISTARANEWS.COM


on

World Health Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ದಿನಗಳಲ್ಲಿ ಎಲ್ಲರೂ ಹಣಗಳಿಕೆಯತ್ತ ಮುಖಮಾಡುತ್ತಿದ್ದಾರೆ. ಆದರೆ ಈ ದಾರಿಯಲ್ಲಿ ಆರೋಗ್ಯಗಳಿಕೆಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದೇವೆ ? ಹಣಗಳಿಸುವುದು ಸುಲಭ ಆದರೆ ಆರೋಗ್ಯ ಕುಂಠಿತಗೊಳ್ಳಲು ಆರಂಭಿಸಿದರೆ ಗಳಿಸಿದೆಲ್ಲವೂ ಆರೋಗ್ಯದ ಕಾಳಜಿಗಾಗಿ ವ್ಯಯಿಸುವ ಅನಿರ್ವಾಯತೆ ಸೃಷ್ಠಿಯಾಗಲಿದೆ. ಇದೆಲ್ಲದಕ್ಕೂ ಕಾರಣ ಪ್ರಕೃತಿ ವೈಪರೀತ್ಯ, ಜೀವನ ಶೈಲಿ ಬದಲಾವಣೆ, ಬಿಡುವಿಲ್ಲದ ತಾಂತ್ರಿಕ ಜೀವನ. ಆರೋಗ್ಯ ಕಾಳಜಿಯ ನಿಟ್ಟಿನಲ್ಲಿ 2024ನೇ ಸಾಲಿನ ವಿಶ್ವ ಆರೋಗ್ಯ ದಿನವನ್ನು (World Health Day) ‘ನನ್ನ ಆರೋಗ್ಯ, ನನ್ನ ಹಕ್ಕು’ ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ, ಆದರೆ ಕುಟುಂಬದ ಜವಾಬ್ದಾರಿ ಹೊತ್ತು ಸಾಗುತ್ತಿರುವ ಮಹಿಳೆಯರು ಈ ವರ್ಷದ ಆರೋಗ್ಯ ದಿನದ ಆಶಯದಂತೆ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯ ಕಾಳಜಿಯನ್ನೂ ಮಾಡುತ್ತೇವೆ ಎಂದು ಪಣ ತೊಡಬೇಕು. ಏ.7 ಭಾನುವಾರ ವಿಶ್ವ ಆರೋಗ್ಯ ದಿನ. ಈ ಸಂದರ್ಭದಲ್ಲಿ ಆರೋಗ್ಯದ ಕಾಳಜಿಗಾಗಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ಪೌಷ್ಟಿಕತಜ್ಞರಾದ ಡಾ. ಸಂಜನಾ ಪ್ರೇಮ್‌ಲಾಲ್‌ ವಿವರಿಸಿದ್ದಾರೆ.

World Health Day

ಆಹಾರದ ಆಯ್ಕೆಗಳತ್ತ ಗಮನಿಸಿ

ಮಹಿಳೆಯರು ಆರೋಗ್ಯ ಕಾಳಜಿಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಆಹಾರದ ಆಯ್ಕೆಗಳು ಕೂಡ ಪ್ರಮುಖ ಪಾತ್ರವಹಿಸುತ್ತವೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ, ಪ್ರತಿನಿತ್ಯವೂ ತಾಜಾ ಆಹಾರವನ್ನು ಸೇವಿಸಬೇಕು. ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಂಸ್ಕರಿಸಿದ ಆಹಾರಗಳಿಂದ ದೂರವಿರಬೇಕು. ಅದರ ಬದಲಾಗಿ ಧಾನ್ಯಗಳು, ಪ್ರೋಟೀನ್‌ಗಳು ಮತ್ತು ಅವಕಾಡೋಗಳಲ್ಲಿ ಕಂಡುಬರುವ ಉತ್ತಮ ಕೊಬ್ಬಿನಂಶದಿಂದ ಕೂಡಿದ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಅದಲ್ಲದೆ ತೂಕ ನಿರ್ವಹಣೆ ಮಾತ್ರವಲ್ಲದೆ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಲು ಫೈಬರ್‌ ಭರಿತ ಆಹಾರಗಳ ಸೇವನೆಯೂ ಅತ್ಯಗತ್ಯ ಎಂದು ತಜ್ಞರಾದ ಡಾ.ಸಂಜನಾ ಅವರು ಹೇಳುತ್ತಾರೆ.

Sleeping Tips

ನಿದ್ರೆಯೂ ಜೊತೆಗಿರಲಿ

ಆರೋಗ್ಯದ ಕಾಳಜಿಯಲ್ಲಿ ನಿದ್ರೆಗೆ ನೀಡುವ ಆದ್ಯತೆ ಹೆಚ್ಚು. ನಿದ್ದೆ ಸರಿಯಾಗಿದ್ದರೆ ಆರೋಗ್ಯವೂ ಸಮತೋಲನದಲ್ಲಿರಲಿದೆ. ಹೀಗಾಗಿ ಪ್ರತಿನಿತ್ಯ ನಿಗದಿತ ಸಮಯದ ಅಂತದಲ್ಲಿ ನಿದ್ರೆಯನ್ನು ಮಾಡಬೇಕು ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು. ನಿದ್ದೆಗೆ ಜಾರುವ ಮುನ್ನ ಕೆಫಿನ್‌ಗಳ ಸೇವನೆ, ಮೊಬೈಲ್‌ ಮತ್ತು ಕಂಪ್ಯೂಟರ್‌ಗಳ ಬಳಕೆಯನ್ನು ಮಿತಿಗೊಳಿಸಬೇಕು. ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಉತ್ತಮ ಅಭ್ಯಾಸಗಳನ್ನು ಕೈಗೊಳ್ಳಬೇಕು ಅವುಗಳೆಂದರೆ ಮಲಗುವ ಮುನ್ನ ಸಂಗೀತವನ್ನು ಆಲಿಸಬೇಕು. ಸಾಕಷ್ಟು ನಿದ್ರೆಯನ್ನು ಮಾಡುವುದರಿಂದ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಸುಧಾರಿಸಲಿದೆ. ಅಲ್ಲದೆ ಸ್ಥೂಲಕಾಯ ಮತ್ತು ಹೃದ್ರೋಗದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗಲಿದೆ ಎಂಬುದು ವೈದ್ಯರ ಸಲಹೆ.

ದೈಹಿಕವಾಗಿ ಸಕ್ರಿಯತೆ ಮುಖ್ಯ

ಆರೋಗ್ಯ ಕಾಳಜಿಯಲ್ಲಿ ಮತ್ತೊಂದು ಉತ್ತಮ ಕ್ರಮವೆಂದರೆ ನಿಯಮಿತ ವ್ಯಾಯಾಮವನ್ನು ರೂಡಿಸಿಕೊಳ್ಳುವುದು. ಪ್ರತಿನಿತ್ಯ ಕನಿಷ್ಟ 30 ನಿಮಿಷಗಳ ಕಾಲ ನಡೆಯುವುದು, ಈಜು ಅಥವಾ ಯೋಗದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಅಭ್ಯಾಸಗಳಿಂದ ಹೃದಯರಕ್ತನಾಳದ ಆರೋಗ್ಯ, ತೂಕ ನಿರ್ವಹಣೆ ಮತ್ತು ಋತುಸಂಬಂಧ ಸಮಸ್ಯೆಗಳ ನಿವಾರಣೆಯಾಗಲಿದೆ. ಈ ಮೂಲಕ ಮಹಿಳೆಯರು ಉತ್ತಮ ದಿನಚರಿಯನ್ನು ಹೊಂದಬಹುದು ಎಂದು ಅವರು ತಿಳಿಸುತ್ತಾರೆ.

Doctor shows protected human liver

ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ

ಆರೋಗ್ಯ ತಪಾಸಣೆ ಮಾಡಿಸುವುದು ಕೂಡ ಆರೋಗ್ಯ ಕಾಳಜಿಯ ಒಂದು ಉತ್ತಮ ಕ್ರಮ. ಕೊಬ್ಬು, ರಕ್ತದೊತ್ತಡ, ಥೈರಾಯ್ಡ್‌ ಕಾರ್ಯ, ಮೆಮೊಗ್ರಾಮ್‌ ಮತ್ತುಇತರ ಪರೀಕ್ಷೆಗಳನ್ನು ಒಳಗೊಂಡಿರುವ ನಿಯಮಿತವಾದ ಆರೋಗ್ಯ ತಪಾಸಣೆಯನ್ನು ವರ್ಷಕ್ಕೊಮ್ಮೆ ಮಹಿಳೆಯರು ತೆಗೆದುಕೊಳ್ಳಬೇಕು. ಈ ಮೂಲಕ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಮತ್ತು ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

Stress Reduction Tea Benefits

ಒತ್ತಡ ನಿರ್ವಹಣೆ

ದೀರ್ಘಕಾಲದ ಒತ್ತಡವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಯಮಿತ ವಿಶ್ರಾಂತಿ ಜೊತೆಗೆ ಸ್ವಯಂ-ಆರೈಕೆ ಚಟುವಟಿಕೆಗಳೆಡೆಗೆ ಪ್ರತಿ ನಿತ್ಯ ಸಮಯ ಮೀಸಲಿಡಬೇಕು. ಅಗತ್ಯ ವ್ಯಾಯಾಮ, ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡವನ್ನು ನಿಯಂತ್ರಿಸಬಹುದು ಜೊತೆಗೆ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯವಾಗುತ್ತದೆ. ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿ ಸ್ವಯಂ-ಆರೈಕೆಗೆ ಆದ್ಯತೆ ನೀಡುವುದರಿಂದ ಮನಸ್ಸು, ದೇಹ ಮತ್ತು ಆತ್ಮವನ್ನು ಪೋಷಿಸಲು ನೆರವಾಗಲಿದೆ. ಪ್ರಸಕ್ತ ವರ್ಷ ಈ ಕ್ರಮಗಳನ್ನು ಅನುಸರಿಸುತ್ತೇವೆ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಮಹಿಳೆಯರು ಸುಧಾರಿತ ಮತ್ತು ಉತ್ತಮ ಗುಣಮಟ್ಟದ ಆರೋಗ್ಯವನ್ನು ಕಾಣಬಹುದು. ಇಂದು ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿದರೆ ನಾಳೆ ಉಜ್ವಲ ಭವಿಷ್ಯ ಕಾಣುವುದು ಖಚಿತ ಎಂಬುದು ತಜ್ಞರ ಆಶಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Skin Care Tips: ಬಿಸಿಲಿನಿಂದ ಚರ್ಮ ಕಪ್ಪಾಗಿದೆಯಾ? ಇಲ್ಲಿದೆ ಸರಳ ಮನೆಮದ್ದು

ಬೇಸಿಗೆಯಲ್ಲಿ ಚರ್ಮ (Skin Care Tips) ಸುಟ್ಟಂತಾಗಿ ಕೆಂಪಾಗುವುದು, ಅನಂತರ ಕಪ್ಪಾಗುವುದು ಮಾಮೂಲಿ. ಹೀಗಾದರೆ ಚರ್ಮ ಕಳೆಗೆಟ್ಟಂತಾಗುತ್ತದೆ. ದಿನವಿಡೀ ಸನ್‌ಸ್ಕ್ರೀನ್‌ ಹಚ್ಚಿಕೊಂಡಿರುವುದು ಆಗದ ಮಾತು. ಅದಕ್ಕೇ, ಬಿಸಿಲಲ್ಲಿ ಅಡ್ಡಾಡಿದಾಗ ಕಪ್ಪಾಗುವ ಚರ್ಮದ ರಕ್ಷಣೆ ಹೇಗೆ ಮಾಡುವುದು ಎಂಬ ಚಿಂತೆ ಬೇಡ. ಇಲ್ಲಿದೆ ಸರಳ ಮನೆ ಮದ್ದು.

VISTARANEWS.COM


on

By

Skin Care Tips
Koo

ಬಿಸಿಲಲ್ಲಿ (sunny) ಅಡ್ಡಾಡುವುದು (Skin Care Tips) ಎಲ್ಲರಿಗೂ ಪ್ರಿಯವೇನಲ್ಲ. ಆದರೆ ಬೇಸಿಗೆಯಲ್ಲಿ (summer) ಮನೆಯಿಂದ ಹೊರಬೀಳುತ್ತಿದ್ದಂತೆ ಬಿಸಿಲಿಗೆ ಸೋಕುವುದು ಬಿಟ್ಟರೆ ಬೇರೆ ದಾರಿ ಇರುವುದಿಲ್ಲ. ಇದರ ಪರಿಣಾಮವಾಗಿ ಚರ್ಮವೆಲ್ಲ (skin) ಕೆಂಪಾಗಿ ಸುಟ್ಟಂತಾಗುವುದು, ಕಪ್ಪಾಗುವುದು ಸಾಮಾನ್ಯ. ಬಿಸಿಲಿಗೆ ಚರ್ಮ ಕೆಂಪಾಗಿ, ಕಪ್ಪಾಗುವುದರಿಂದ ತ್ವಚೆಯ ಹೊಳಪು ಮಾಯವಾಗುತ್ತದೆ, ಸುಕ್ಕಾಗುತ್ತದೆ. ಕ್ರಮೇಣ ಕುಂದಿದಂತೆ ಕಾಣಲಾರಂಭಿಸುತ್ತದೆ.

ಜಾಹೀರಾತುಗಳಲ್ಲಿ ತೋರಿಸಿದಂತೆ ಮೈ-ಮುಖಗಳನ್ನೆಲ್ಲ ಮುಚ್ಚಿಕೊಂಡು ಅಡ್ಡಾಡುವುದು ಸಾಧ್ಯವಿಲ್ಲದ್ದು. ಇದಕ್ಕಾಗಿ ದಿನಕ್ಕೆ ಹಲವು ಬಾರಿ ದೇಹಕ್ಕೆಲ್ಲ ಸನ್‌ಬ್ಲಾಕ್‌ ಬಳಿದುಕೊಳ್ಳುವುದು ಎಲ್ಲರಿಗೂ ಅಸಾಧ್ಯ. ಹಾಗಾದರೆ ಬೇಸಿಗೆಯಲ್ಲಿ ಕಪ್ಪಾಗುವ ಚರ್ಮದ ರಕ್ಷಣೆ ಹೇಗೆ?

ಮಾರುಕಟ್ಟೆಯಲ್ಲಿ ʻಟ್ಯಾನ್‌ ರಿಮೂವ್‌ʼ ಎಂಬ ಹಣೆಪಟ್ಟಿಯೊಂದಿಗೆ ಬಹಳಷ್ಟು ಕ್ರೀಮ್‌ಗಳು ದೊರೆಯುತ್ತವೆ. ಅವಲ್ಲವೂ ಕಿಸೆಯ ಭಾರ ಇಳಿಸಿದಷ್ಟೇ ಸರಾಗವಾಗಿ ಸುಟ್ಟ ಗುರುತು ತೆಗೆಯುತ್ತವೆ ಎಂಬ ಖಾತ್ರಿಯೇನಿಲ್ಲ. ಕೆಲವೊಂದು ಕ್ರೀಮುಗಳು ಎಲ್ಲರ ಚರ್ಮಕ್ಕೆ ಒಗ್ಗುವುದೂ ಇಲ್ಲ. ಹಾಗಾಗಿ ಮನೆಮದ್ದುಗಳ ಮೊರೆ ಹೋಗುವುದೇ ಉತ್ತಮ ಎನಿಸುತ್ತದೆ. ಇದಕ್ಕಾಗಿ ಕೆಲವು ಸರಳವಾದ ಫೇಸ್‌ಮಾಸ್ಕ್‌ಗಳ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ.


ಜೇನು-ಪಪ್ಪಾಯ ಮಾಸ್ಕ್‌

ಪಪ್ಪಾಯದ ಹೋಳುಗಳನ್ನು ಜೇನು ತುಪ್ಪದೊಂದಿಗೆ ಸೇರಿಸಿ ಬ್ಲೆಂಡ್‌ ಮಾಡಿ. ಈ ಮಿಶ್ರಣವನ್ನು ಉದಾರವಾಗಿ ಮುಖಕ್ಕೆಲ್ಲ ಲೇಪಿಸಿ. 30 ನಿಮಿಷಗಳ ಅನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದನ್ನು ವಾರದಲ್ಲಿ ಮೂರು ಬಾರಿ ಮಾಡಬಹುದು.

ಓಟ್‌ಮೀಲ್‌-ಮೊಸರು

ಮುಖದ ಮೇಲಿನ ಜಡ ಕೋಶಗಳನ್ನು ತೆಗೆಯುವ ಸಾಮರ್ಥ್ಯ ಓಟ್‌ಮೀಲ್‌ಗಿದ್ದರೆ, ಮೊಸರಿನಲ್ಲಿರುವ ಲ್ಯಾಕ್ಟಿಕ್‌ ಆಮ್ಲವು ಚರ್ಮದ ತೇವವನ್ನು ಕಾಪಾಡಿ ಮೃದುವಾಗಿಸಬಲ್ಲದು. ಟ್ಯಾನ್‌ ತೆಗೆಯುವುದಕ್ಕೆ ಇದು ಒಳ್ಳೆಯ ಉಪಾಯ. ಓಟ್‌ಮೀಲ್‌ ಪುಡಿಯನ್ನು ಮಂದವಾದ ಮೊಸರಿನಲ್ಲಿ ಕಲೆಸಿ, ಮುಖಕ್ಕೆಲ್ಲ ಲೇಪಿಸಿ. 20 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಿರಿ. ವಾರಕ್ಕೆರಡು ಬಾರಿ ಮಾಡಬಹುದು ಇದನ್ನು.

ಶ್ರೀಗಂಧ-ತೆಂಗಿನೆಣ್ಣೆ

ಸುಟ್ಟು ಕೆಂಪಾದಂಥ ಚರ್ಮಕ್ಕೆ ಇದು ಒಳ್ಳೆಯ ಉಪಶಮನ ನೀಡುತ್ತದೆ. ಶ್ರೀಗಂಧ ಸುಟ್ಟ ಚರ್ಮವನ್ನು ತಂಪಾಗಿಸಿದರೆ, ಕೊಬ್ಬರಿ ಎಣ್ಣೆ ದುರಸ್ತಿ ಮಾಡಿ, ತೇವವನ್ನು ಹೆಚ್ಚಿಸುತ್ತದೆ. ಸುಟ್ಟು ಕೆಂಪಾದ ಚರ್ಮವನ್ನು ಶೀಘ್ರವೇ ಗುಣ ಪಡಿಸುತ್ತದೆ. 30 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಬಹುದು. ಆದರೆ ಒಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ಮುಖದಲ್ಲಿ ಮೊಡವೆಗಳಿದ್ದರೆ, ಇಂಥ ಎಣ್ಣೆಯುಕ್ತ ಪೇಸ್ಟ್‌ಗಳು ಮೊಡವೆಯ ಸಮಸ್ಯೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

ಮೊಸರು-ಕಾಫಿ

ಕಾಫಿಗೆ ಚರ್ಮವನ್ನು ಎಕ್ಸ್‌ಫಾಲಿಯೇಟ್‌ ಮಾಡುವ ಸಾಮರ್ಥ್ಯವಿದೆ. ಮೊಸರು ತ್ವಚೆಯನ್ನು ಮೃದುವಾಗಿಸುತ್ತದೆ. ಇದರ ಜೊತೆಗೆ ಕೊಂಚ ಟೊಮೇಟೊ ರಸವನ್ನೂ ಬೆರೆಸಿದರೆ, ಸುಟ್ಟಂತಾದ ಚರ್ಮಕ್ಕೆ ಉತ್ಕರ್ಷಣ ನಿರೋಧಕಗಳ ಆರೈಕೆಯೂ ದೊರೆತಂತಾಗುತ್ತದೆ. ಈ ಮೂರು ವಸ್ತುಗಳನ್ನು ಬ್ಲೆಂಡ್‌ ಮಾಡಿ, ಬಿಸಿಲಿಗೆ ಕೆಂಪಾದ ಭಾಗಕ್ಕೆಲ್ಲ ಹಚ್ಚಿ. 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕಾಗುತ್ತದೆ.

Continue Reading

ಆರೋಗ್ಯ

Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

EXCREPT
ಇತ್ತೀಚಿನ ದಿನಗಳಲ್ಲಿ ನಾವು (Food Tips Kannada) ಸೇವಿಸುವ ಆಹಾರ, ಜೀವನಶೈಲಿ ನಮ್ಮ ಶಕ್ತಿಯನ್ನು ಹೆಚ್ಚಿಸುತ್ತಿಲ್ಲ ಬದಲಾಗಿ ದಿಢೀರ್‌ ಕಡಿಮೆಗೊಳಿಸುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತಿದೆ. ಶಕ್ತಿ ಬೇಕೆಂದು ನಾವು ಮೊರೆ ಹೋಗುವ ದಿಢೀರ್‌ ಆಹಾರಗಳಿಂದ ಮೇಲ್ನೋಟಕ್ಕೆ ಶಕ್ತಿ, ಉಲ್ಲಾಸ ಹೆಚ್ಚಿದಂತೆ ಅನಿಸಿದರೂ ಇವು ನಮ್ಮ ಶಕ್ತಿಸಾಮರ್ಥ್ಯವೆಲ್ಲವನ್ನೂ ಬಸಿದು ತೆಗೆಯುವ, ನಮ್ಮನ್ನು ಸೋಮಾರಿಗಳನ್ನಾಗಿ ಮಾಡುವ, ತೂಕ ಹೆಚ್ಚಿಸುವ, ಚುರುಕುತನವನ್ನು ಕಸಿದುಕೊಳ್ಳುವ ಆಹಾರಗಳಾಗಿವೆ.

VISTARANEWS.COM


on

By

Food Tips Kannada
Koo

ಬೆಳಗಿನ ಹೊತ್ತು ನಮ್ಮ (Food Tips Kannada) ಶಕ್ತಿ ಕೊಂಚ ಹೆಚ್ಚಿರುವುದು, ಸಂಜೆಯಾಗುತ್ತಿದ್ದಂತೆ ಇದು ಕಡಿಮೆಯಾಗುತ್ತ ಬರುವುದು ಬಹಳ ಸಾಮಾನ್ಯ. ಮನುಷ್ಯನ ದೇಹ ಪ್ರಕೃತಿಯೇ ಹಾಗೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ (food), ಜೀವನಶೈಲಿಯೂ (life style) ಕೂಡಾ ನಮ್ಮ ಶಕ್ತಿಯನ್ನು ಹೆಚ್ಚಿಸುವುದಕ್ಕಿಂತ ದಿಢೀರ್‌ ಕಡಿಮೆಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ.

ಶಕ್ತಿ ಬೇಕೆಂದು ನಾವು ಮೊರೆ ಹೋಗುವ ದಿಢೀರ್‌ ಆಹಾರಗಳಿಂದ ಮೇಲ್ನೋಟಕ್ಕೆ ಶಕ್ತಿ, ಉಲ್ಲಾಸ ಹೆಚ್ಚಿದಂತೆ ಅನಿಸಿದರೂ ಇವು ನಮ್ಮ ಶಕ್ತಿ ಸಾಮರ್ಥ್ಯವೆಲ್ಲವನ್ನೂ ಬಸಿದು ತೆಗೆಯುವ, ನಮ್ಮನ್ನು ಸೋಮಾರಿಗಳನ್ನಾಗಿ ಮಾಡುವ, ತೂಕ ಹೆಚ್ಚಿಸುವ, ಚುರುಕುತನವನ್ನು ಕಸಿದುಕೊಳ್ಳುವ ಆಹಾರಗಳಾಗಿ ಬದಲಾಗಬಹುದು. ಬನ್ನಿ, ನಿಜವಾಗಿಯೂ ಶಕ್ತಿವರ್ಧಕದಂತೆ ಅನಿಸಿದರೂ, ನಮ್ಮ ಶಕ್ತಿಯನ್ನೆಲ್ಲ ಹಿಂಡಿ ತೆಗೆಯುವ ಆಹಾರಗಳಾವುವು ಎಂಬುದನ್ನು ನೋಡೋಣ.

ಬ್ರೆಡ್‌, ಪಾಸ್ತಾ

ಬಿಳಿ ಬ್ರೆಡ್‌ ಹಾಗೂ ಮೈದಾವೇ ಹೆಚ್ಚಿರುವ ಪಾಸ್ತಾ ಮತ್ತಿತರ ಆಹಾರಗಳು ದೇಹಕ್ಕೆ ಶಕ್ತಿ ನೀಡಿದಂತೆ ಅನಿಸಿದರೂ ಇವೆಲ್ಲ ಖಾಲಿ ಕ್ಯಾಲರಿಗಳು. ಇವೆಲ್ಲವೂ ಸಂಸ್ಕರಿಸಿದ ಆಹಾರಗಳಾಗಿರುವುದರಿಂದ ನಿಜವಾದ ಧಾನ್ಯ, ಬೇಳೆ ಕಾಳುಗಳ ಮೂಲಕ ದೇಹಕ್ಕೆ ಸಿಗುವ ಶಕ್ತಿ ಇದರಿಂದ ದೊರೆಯಲಾರದು. ಆ ಕ್ಷಣಕ್ಕೆ ಇವು ಹೊಟ್ಟೆ ತುಂಬಿಸಿದರೂ, ದೇಹಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶ ಈ ಆಹಾರಗಳಲ್ಲಿಲ್ಲ ಎಂಬುದನ್ನು ನೆನಪಿಡಿ.


ಬ್ರೇಕ್‌ಫಾಸ್ಟ್‌ ಸಿರಿಯಲ್‌ಗಳು ಹಾಗೂ ಫ್ಲೇವರ್ಡ್‌ ಮೊಸರು

ರೆಡಿಮಾಡಿ ಫುಡ್ ಗಳು ಹೆಸರಿಗೆ ಮಾತ್ರ ಆರೋಗ್ಯಕರ ಆಹಾರ ಎಂದೆನಿಸಿದರೂ ಇವು ಆರೋಗ್ಯಕರವಲ್ಲ. ಇದರಲ್ಲಿ ಒಳ್ಳೆಯ ಅಂಶಗಳಿಗಿಂತಲೂ ದೇಹಕ್ಕೆ ಮಾರಕವಾದ ಅಂಶಗಳೇ ಹೆಚ್ಚಿವೆ. ಇವುಗಳು ಸಂಸ್ಕರಿಸಿದ ಆಹಾರಗಳಷ್ಟೇ ಅಲ್ಲ, ಇವುಗಳಲ್ಲಿ ಹೆಚ್ಚುವರಿ ಸಕ್ಕರೆಯೂ ಇರುವುದರಿಂದ ದೇಹಕ್ಕೆ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮವೇ ಆಗುತ್ತದೆ.


ಆಲ್ಕೋಹಾಲ್‌

ಆಲ್ಕೋಹಾಲ್‌ ಸೇವನೆಯಿಂದ ದಿನದ ಇಡೀ ಸುಸ್ತು ಬಸಿದು ಹೋಗಿ ಜೀವ ಬಂದಂತಾಗಬಹುದು. ದೇಹವಿಡೀ ಉಲ್ಲಾಸದಿಂದ, ಕುಣಿಯಬಹುದು. ಚಿಂತೆಯೆಲ್ಲ ಮರೆತುಹೋಗಬಹುದು. ಆದರೆ, ಇದು ಕ್ಷಣಿಕ. ದೇಹಕ್ಕೆ ನಿಜವಾಗಿ ಬೇಕಾದ ಶಕ್ತಿ ಇದರಿಂದ ಎಳ್ಳಷ್ಟೂ ಸಿಗಲಾರದು.


ಕಾಫಿ, ಚಹಾ

ಕಾಫಿ ಹಾಗೂ ಚಹಾಗಳೆಂಬ ಎರಡು ಪೇಯಗಳು ಭಾರತೀಯರ ಪಾಲಿನ ಆರಾಧ್ಯ ದೈವ. ಬೆಳಗ್ಗೆದ್ದ ಕೂಡಲೇ ಬಹುಪಾಲು ಮಂದಿಗೆ ಚಹಾ ಕಾಫಿ ಬೇಕೇ ಬೇಕು. ಬೆಳಗಿನ ಕೆಲಸಗಳಲ್ಲಿ ಮತ್ತೆ ತೊಡಗಿಕೊಳ್ಳಲು ಚಹಾ ಕಾಫಿಗಳು ಚೈತನ್ಯದಂತೆ ಅನಿಸಬಹುದು. ಅಭ್ಯಾಸವೂ ಆಗಿರಬಹುದು.

ಕಚೇರಿಯ ಒತ್ತಡದ ಕೆಲಸದ ನಡುವೆ ಆಹಾ ಎಂದು ಉಸಿರೆಳೆದುಕೊಂಡು ಕೊಂಚ ಬ್ರೇಕ್‌ ಬೇಕಾದರೆ ಚಹಾ ಕಾಫಿಗಳು ಮತ್ತೆ ಕೆಲಸಕ್ಕೆ ಪ್ರೇರಣೆ ನೀಡಬಹುದು. ಆದರೆ, ಇವೆಲ್ಲವೂ ನೀಡುವ ಉದ್ದೀಪನ ಕ್ಷಣಿಕ. ಇದರಿಂದ ದೇಹಕ್ಕೆ ಲಾಭಕ್ಕಿಂತಲೂ ನಷ್ಟ ಹೆಚ್ಚು. ಅತಿಯಾದ ಇವುಗಳ ಅಭ್ಯಾಸದಿಂದ ದೇಹದ ಶಕ್ತಿ ಹೆಚ್ಚದು. ಬದಲಾಗಿ ನಮ್ಮ ಶಕ್ತಿಯನ್ನೇ ಹಿಂಡಿಬಿಡುತ್ತವೆ. ಈ ಚಟದ ದಾಸನನ್ನಾಗಿಸುತ್ತವೆ.


ಶಕ್ತಿವರ್ಧಕ ಪೇಯಗಳು

ಮಾರುಕಟ್ಟೆಯಲ್ಲಿ ಜಾಹೀರಾತುಗಳ ಮೂಲಕ ಯುವಜನರನ್ನೂ ಸೇರಿದಂತೆ ಬಹುಜನರನ್ನು ಆಕರ್ಷಿಸುವ ಶಕ್ತಿವರ್ಧಕ ಪೇಯಗಳು ಹೆಸರಿಗೆ ಮಾತ್ರ ಶಕ್ತಿವರ್ಧಕ. ಆ ಕೆಲವು ಕ್ಷಣಕ್ಕೆ ಇದರಿಂದ ಶಕ್ತಿ ಹೆಚ್ಚಿದಂತಾಗಿ ಚೈತನ್ಯ ಸಿಗುವುದು ನಿಜವಾದರೂ ದೇಹಕ್ಕೆ ಒಳ್ಳೆಯದನ್ನು ಮಾಡಲಾರವು.

ಇದನ್ನೂ ಓದಿ: MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

ಬದಲಾಗಿ ಇದರಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವ ಸಕ್ಕರೆ ಹಾಗೂ ರಾಸಾಯನಿಕಗಳು ದೇಹಕ್ಕೆ ಮಾರಕ. ಇವುಗಳನ್ನು ಆಗಾಗ ಕುಡಿಯುವುದರಿಂದ ತೂಕದಲ್ಲಿ ಹೆಚ್ಚಳವೂ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಹಾಗಾಗಿ ಇಂತಹ ಶಕ್ತಿವರ್ಧಕ ಪೇಯಗಳಿಂದ ನಾವು ದೂರವಿರುವುದು ಒಳ್ಳೆಯದು. ಕ್ಷಣಿಕ ಮಾತ್ರದ ಶಕ್ತಿವರ್ಧಕಗಳಿಗಿಂತ ಉತ್ತಮ ಪೋಷಕಾಂಶಯುಕ್ತ ಆರೋಗ್ಯಕರ ಆಹಾರಗಳ ಸೇವನೆಯಿಂದ ಆರೋಗ್ಯವನ್ನು ಹೆಚ್ಚಿಸಬಹುದು.

Continue Reading

ದೇಶ

World Aids Vaccine Day: ಇಂದು ವಿಶ್ವ ಏಡ್ಸ್ ಲಸಿಕೆ ದಿನ; ಈ ದಿನದ ಹಿನ್ನೆಲೆ ಏನು?

ಕೆಲವೊಂದು ಕಾಯಿಲೆಗಳಿಗೆ ಔಷಧವನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಮುನ್ನೆಚ್ಚರಿಕೆಯಿಂದ ಮಾತ್ರ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಬಹುದು. ಅಂತಹ ಒಂದು ಸಾಂಕ್ರಾಮಿಕ ಕಾಯಿಲೆಯಲ್ಲಿ ಹೆಚ್ ಐವಿ ಏಡ್ಸ್ ಕೂಡ (World Aids Vaccine Day) ಒಂದು. ಈ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರುವುದೇ ಇದರಿಂದ ರಕ್ಷಿಸಿಕೊಳ್ಳುವ ಒಂದು ಉತ್ತಮ ಉಪಾಯ.

VISTARANEWS.COM


on

By

World Aids Vaccine Day
Koo

ಜಗತ್ತಿನ ಬಹುತೇಕ ಕಾಯಿಲೆಗಳಿಗೆ ಈಗ ಔಷಧ ಲಭ್ಯವಿದೆ. ಆದರೆ ಎಚ್‌ಐವಿ (HIV) ಸೋಂಕಿಗೆ ಮಾತ್ರ ಇನ್ನೂ ಯಾವುದೇ ಚಿಕಿತ್ಸೆ ಕಂಡು ಹಿಡಿಯಲಾಗಿಲ್ಲ. ಹೀಗಾಗಿಯೇ ಇದರ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ (world) ಮೇ 18 ರಂದು ವಿಶ್ವ ಏಡ್ಸ್ (AIDS) ಲಸಿಕೆ ದಿನ ಅಥವಾ ಎಚ್ಐವಿ ಲಸಿಕೆ ಜಾಗೃತಿ ದಿನವನ್ನು (World Aids Vaccine Day) ಆಚರಿಸಲಾಗುತ್ತದೆ. ಎಚ್ಐವಿ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ. ಇದಕ್ಕೆ ಆಂಟಿರೆಟ್ರೋವೈರಲ್ ಔಷಧಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ದೇಹದಲ್ಲಿ ವೈರಸ್ ಪುನರಾವರ್ತನೆಯಾಗದಂತೆ ತಡೆಯುತ್ತದೆ.

ವಿಶ್ವ ಏಡ್ಸ್ ಲಸಿಕೆ ದಿನ ಅಥವಾ ಎಚ್‌ಐವಿ ಲಸಿಕೆ ಜಾಗೃತಿ ದಿನವನ್ನು ಮೇ 18ರಂದು ಎಚ್‌ಐವಿ ಲಸಿಕೆ, ರೋಗನಿರೋಧಕ ಪ್ರಯೋಜನಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಇತರ ವಿವರಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಎಚ್ಐವಿ ಸೋಂಕನ್ನು ತಡೆಗಟ್ಟಲು ಈ ಅರಿವು ಎಲ್ಲರಿಗೂ ಮುಖ್ಯವಾಗಿದೆ.
ಈ ದಿನವು ಲಸಿಕೆ ಸಂಶೋಧನೆಯ ಭಾಗವಾಗಿರುವ ಆರೋಗ್ಯ ವೃತ್ತಿಪರರು ಮತ್ತು ಸಹಾಯಕ ಸಿಬ್ಬಂದಿಯ ನಿರಂತರ ಕೊಡುಗೆಯನ್ನು ಸ್ಮರಿಸಲು ಆಚರಿಸಲಾಗುತ್ತದೆ.

ಎಷ್ಟು ಸೋಂಕಿತರು?

ಎಚ್ಐವಿ ಜಾಗತಿಕ ಸಾಂಕ್ರಾಮಿಕವಾಗಿದ್ದು, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಸರಿಸುಮಾರು 38.4 ಮಿಲಿಯನ್ ಜನರು HIVಯೊಂದಿಗೆ ವಾಸಿಸುತ್ತಿದ್ದಾರೆ, ಅವರಲ್ಲಿ ಮೂರನೇ ಎರಡರಷ್ಟು ಜನರು WHO ಆಫ್ರಿಕನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಸುಮಾರು ಏಳು ಜನರಲ್ಲಿ ಒಬ್ಬರು HIV ಯೊಂದಿಗೆ ವಾಸಿಸುತ್ತಿದ್ದಾರೆ. ಇದು ವಿಶ್ವದ ಜನಸಂಖ್ಯೆಯ 37.9 ಮಿಲಿಯನ್ ನಷ್ಟಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 2022 ರ ಅಂತ್ಯದ ವೇಳೆಗೆ 39 ಮಿಲಿಯನ್ ಎಚ್ಐವಿ ಪಾಸಿಟಿವ್ ಜನರಿದ್ದಾರೆ. ಅದರಲ್ಲಿ 1.5 ಮಿಲಿಯನ್ 0- 14 ವರ್ಷಗಳ ನಡುವಿನ ಮಕ್ಕಳು ಇದ್ದಾರೆ.

ಹರಡಲು ಕಾರಣ ಏನು?

ಬಡ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ವೈರಸ್ ಹೆಚ್ಚು ಹರಡುತ್ತದೆ. ಶೈಕ್ಷಣಿಕ ಮಾಹಿತಿಯ ಕೊರತೆ, ತಡೆಗಟ್ಟುವ ಕ್ರಮಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಎಚ್ಐವಿ ಹರಡುವಿಕೆಗೆ ಪ್ರಮುಖ ಕಾರಣಗಳಾಗಿವೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಾಡಿದ ಗಮನಾರ್ಹ ಪ್ರಯತ್ನಗಳ ಹೊರತಾಗಿಯೂ ಹೆಚ್ ಐವಿಯೊಂದಿಗೆ ವಾಸಿಸುವ ಜನರ ಸಂಖ್ಯೆಯು ಹೆಚ್ಚಾಗಿದೆ. ಇದರಿಂದಾಗಿ ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಾಗಿ ಸಂಶೋಧನೆಯನ್ನು ಮುಂದುವರಿಸುವುದು ಅತ್ಯಗತ್ಯ.


ವಿಶ್ವ ಏಡ್ಸ್ ಲಸಿಕೆ ದಿನದ ಇತಿಹಾಸ

1997ರ ಮೇ 18ರಂದು ಮೇರಿಲ್ಯಾಂಡ್‌ನ ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮಾಡಿದ ಭಾಷಣದಲ್ಲಿ ಆಗಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್, ಪರಿಣಾಮಕಾರಿ ಎಚ್‌ಐವಿ ತಡೆಗಟ್ಟುವ ಲಸಿಕೆ ಮಾತ್ರ ಏಡ್ಸ್ ಬೆದರಿಕೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ ಮತ್ತು ಅಂತಿಮವಾಗಿ ತೆಗೆದುಹಾಕುತ್ತದೆ ಎಂದು ಹೇಳಿದರು. ಪರಿಣಾಮಕಾರಿ ಲಸಿಕೆಯ ತುರ್ತು ಅಗತ್ಯವನ್ನು ಒತ್ತಿ ಹೇಳುವ ಕ್ಲಿಂಟನ್ ಅವರ ಭಾಷಣದ ಗೌರವಾರ್ಥವಾಗಿ ಮೇ 18 ಅನ್ನು ವಿಶ್ವ ಏಡ್ಸ್ ಲಸಿಕೆ ದಿನವೆಂದು ಘೋಷಿಸಲಾಗಿದೆ. ವಿಶ್ವ ಏಡ್ಸ್ ಲಸಿಕೆ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ವಿಶ್ವ ಏಡ್ಸ್ ಲಸಿಕೆ ದಿನದ ಮಹತ್ವ

ಎಚ್‌ಐವಿ ಮತ್ತು ಏಡ್ಸ್ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲು ಈ ದಿನ ಮಹತ್ವದ್ದಾಗಿದೆ. ಸರ್ಕಾರಗಳು ಮತ್ತು ಎನ್‌ಜಿಒಗಳ ಉಪಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಮತ್ತು ತಡೆಗಟ್ಟುವ ಎಚ್‌ಐವಿ ಲಸಿಕೆಯ ಅಗತ್ಯತೆಯ ಕಡೆಗೆ ಗಮನ ಸೆಳೆಯಲು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ.

Continue Reading

ಆರೋಗ್ಯ

Health Tips Kannada: ಕೂತಲ್ಲೇ ತೂಕಡಿಸುತ್ತೀರಾ? ಇದು ಒಳ್ಳೆಯದು!

ಇದ್ದಲ್ಲೇ ನಿದ್ದೆ ಮಾಡುವವರಿಗೆ (Health Tips Kannada) ಸುಖ ಹೆಚ್ಚು, ಚಿಂತೆ ಇಲ್ಲ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಹೀಗೆ ಕೋಳಿಗಳಂತೆ ಕೂತಲ್ಲೇ ಚುಟುಕು ನಿದ್ದೆ ಮಾಡುವುದು ಒಳ್ಳೆಯದು ಎಂಬುದು ಗೊತ್ತೇ? ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆʼ ಎಂದೆಲ್ಲಾ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಇಲ್ಲಿದೆ ವಿವರ.

VISTARANEWS.COM


on

Health Tips Kannada sleepy is good
Koo

ಕೂತಲ್ಲೇ (Health Tips Kannada) ತೂಕಡಿಸುವವರು, ಬಸ್ಸಲ್ಲಿ, ರೈಲಲ್ಲಿ ಓಡಾಡುವಾಗ ಗೊರಕೆ ಹೊಡೆಯುವವರು, ಕಾರಲ್ಲಿ ಹಿಂದೆ ಕೂತಾಗ ನಿದ್ದೆ ಮಾಡುವವರು…ಹೀಗೆ ಎಲ್ಲೆಂದರಲ್ಲಿ ನಿದ್ದೆ ತೆಗೆಯುವವರನ್ನು ಕಂಡು ʻಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆʼ ಎಂದೆಲ್ಲಾ ಗಾದೆ ಸೃಷ್ಟಿಯಾಗಿರುವುದುಂಟು. ಹಾಗೆ ಕೂತಲ್ಲಿ ತೂಕಡಿಸುವವರೆಲ್ಲರೂ ಸುಖವಾಗಿದ್ದಾರೆ ಎಂದು ಅರ್ಥವೇ? ಚಿಂತೆ ಇಲ್ಲದವರೆಂದು ತಿಳಿಯಬಹುದೇ? ಸುಸ್ತಾದಾಗಲೂ ಸಣ್ಣದೊಂದು ನಿದ್ದೆ ಮಾಡಿದರೆ ಆರಾಮ ಎನಿಸುತ್ತದಲ್ಲ, ಏನಿದರ ಮರ್ಮ? ಹಾಗೆ ಹಗಲಿನಲ್ಲಿ ನಿದ್ದೆ ಮಾಡಿದರೆ ರಾತ್ರಿಯ ನಿದ್ದೆಗೆ ತೊಂದರೆ ಆಗುವುದಿಲ್ಲವೇ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚುಟುಕು ನಿದ್ದೆ

ಈ ಹೆಸರಿನಲ್ಲೇ ಸಾಮಾನ್ಯವಾಗಿ ಕರೆಸಿಕೊಳ್ಳುವ ಹಗಲಿನ ನಿದ್ದೆ ದೀರ್ಘವಾದರೆ ʻಪವರ್‌ ನ್ಯಾಪ್‌ʼ ಎನಿಸಿಕೊಳ್ಳುವುದಿಲ್ಲ. ತೀರಾ ಆಯಾಸವಾದಾಗ 20 ನಿಮಿಷ ನಿದ್ದೆ ಮಾಡಿದರೆ, ಎಚ್ಚರಾದಮೇಲೆ ದೇಹದ ಚೈತನ್ಯ ಹೆಚ್ಚಿದಂತೆ ಭಾಸವಾಗುತ್ತದೆ. ಇದು ಹೌದೇ ಎಂಬುದನ್ನು ತಿಳಿಯಲು ಯೂನಿವರ್ಸಿಟಿ ಕಾಲೇಜ್‌ ಲಂಡನ್‌ನ ವಿಜ್ಞಾನಿಗಳು ಅಧ್ಯಯನವೊಂದನ್ನು ನಡೆಸಿದ್ದರು. ಇದಕ್ಕಾಗಿ 40ರಿಂದ 69 ವರ್ಷ ವಯಸ್ಸಿನ ನಡುವಿನ ಸುಮಾರು ೩೫ ಸಾವಿರ ಮಂದಿಯನ್ನ್ ಅ‍ಧ್ಯಯನಕ್ಕೆ ಒಳಪಡಿಸಿದ್ದರು. ಇದರಲ್ಲಿ ಗಮನಿಸಿದಾಗ, ನಿಯಮಿತವಾಗಿ ಹಗಲಿಗೆ ಚುಟುಕು ನಿದ್ದೆ ಮಾಡುವವರ ಮೆದುಳು, ಪವರ್‌ ನ್ಯಾಪ್‌ ಮಾಡದವರ ಮೆದುಳಿಗಿಂತ ದೊಡ್ಡದಾಗಿತ್ತು. ಏನಿದರರ್ಥ?
ಮೆದುಳಿನ ಗಾತ್ರ ಕಿರಿದಾಗುವುದಕ್ಕೂ ಮೆದುಳಿಗೆ ವಯಸ್ಸಾಗುವುದಕ್ಕೂ ಸಂಬಂಧವಿದೆ. ಹಾಗಾಗಿ ನಿಯಮಿತವಾಗಿ ಚುಟುಕು ನಿದ್ದೆ ಮಾಡುವವರಲ್ಲಿ ಮೆದುಳು ಕುಗ್ಗಿಲ್ಲ ಎಂದರೆ, ಮೆದುಳಿಗೆ ಬೇಗ ವಯಸ್ಸಾಗುವುದನ್ನು ಪವರ್‌ ನ್ಯಾಪ್‌ ಮುಂದೂಡುತ್ತದೆ ಎನ್ನುತ್ತಾರೆ ಅಧ್ಯಯನಕಾರರು. ಅಂದರೆ, ಅಲ್‌ಜೈಮರ್ಸ್‌ನಂಥ ಮೆದುಳು ಸಂಬಂಧಿ ರೋಗಗಳು, ಹೃದಯದ ತೊಂದರೆಗಳನ್ನು ಮುಂತಾದವು ಬರುವುದನ್ನು ಮುಂದೂಡಲು ಸಾಧ್ಯವಾಗಬಹುದು ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ಕೋಳಿ ನಿದ್ದೆಯ ಮ್ಯಾಜಿಕ್!

ಇಷ್ಟು ಮಾತ್ರವಲ್ಲ, 5ರಿಂದ 20 ನಿಮಿಷಗಳವರೆಗಿನ ಕೋಳಿ ನಿದ್ದೆಯಿಂದ ತಕ್ಷಣಕ್ಕೆ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಹುದು. ತೀರಾ ಆಯಾಸವಾಗಿ ಕೆಲಸ ಮಾಡಲೇ ಆಗುತ್ತಿಲ್ಲ, ಓದಿದರೆ ತಲೆಗೇ ಹೋಗುತ್ತಿಲ್ಲ ಎಂಬಂಥ ಸಂದರ್ಭದಲ್ಲಿ, ಹತ್ತಿಪ್ಪತ್ತು ನಿಮಿಷಗಳ ಕೋಳಿ ನಿದ್ದೆ ನಿಜಕ್ಕೂ ಮ್ಯಾಜಿಕ್‌ ಮಾಡಬಲ್ಲದು. ನಿದ್ದೆ ಮುಗಿಸಿ ಎದ್ದ ಸುಮಾರು ಮೂರು ತಾಸುಗಳವರೆಗೆ ದೇಹ-ಮನಸ್ಸುಗಳು ಚೈತನ್ಯಪೂರ್ಣವಾಗಿ ಇರುತ್ತವೆ ಎಂಬುದು ಖಚಿತವಾಗಿದೆ. ಕ್ರೀಡಾಳುಗಳ ಸಹ ತಮ್ಮ ತರಬೇತಿಯ ನಡುವಿನಲ್ಲಿ ಚುಟುಕು ನಿದ್ದೆಗಾಗಿಯೇ ಸಮಯ ನಿಗದಿ ಮಾಡಿಕೊಂಡಿದ್ದರೆ, ದೇಹ ಬಳಲುವುದನ್ನು ತಪ್ಪಿಸಬಹುದು. ಹಲವು ಅಥ್ಲೀಟ್‌ಗಳು ಇದನ್ನು ತಮ್ಮ ಕ್ರೀಡಾ ಜೀವನದ ಭಾಗವೆಂದೇ ಭಾವಿಸುತ್ತಾರೆ.

ಇನ್ನಷ್ಟು ಲಾಭಗಳು

ದೇಹ-ಮನಸ್ಸು ಚೈತನ್ಯಪೂರ್ಣ ಆಗುವುದು ಮಾತ್ರವೇ ಅಲ್ಲದೆ ಹೆಚ್ಚಿನ ಲಾಭಗಳಿವೆ ಇದರಿಂದ. ಮೂಡ್‌ ಸುಧಾರಿಸಿ, ಮನಸ್ಸಿನ ಉಲ್ಲಾಸ ಹೆಚ್ಚಿಸುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ, ಸೃಜನಶೀಲತೆ ವರ್ಧಿಸುತ್ತದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವಾಗ ಇಂಥ ನಿದ್ದೆಗಳು ದೇಹದ ದುರಸ್ತಿಗೆ ಗಣನೀಯ ಕೊಡುಗೆ ನೀಡುತ್ತವೆ.

ರಾತ್ರಿ ನಿದ್ದೆಗೆ ಬದಲಲ್ಲ

ಇದಕ್ಕಾಗಿ ರಾತ್ರಿಯೆಲ್ಲ ನಿದ್ದೆಗೆಟ್ಟು ಮೊಬೈಲು ಗೀರುತ್ತಾ, ಸಿನೆಮ ನೋಡುತ್ತಾ ಕೂತು, ಹಗಲಿಗೆ ನಿದ್ದೆ ಮಾಡಿ, ಮೆದುಳನ್ನು ಚುರುಕಾಗಿ ಇಟ್ಟುಕೊಳ್ಳುತ್ತೇವೆ ಎಂದು ಬೀಗುವುದಲ್ಲ. ಮಾತ್ರವಲ್ಲ, ಹಗಲಿನ ನಿದ್ದೆ ಚುಟುಕಾಗದೆ ತೀರಾ ದೀರ್ಘವಾದರೆ, ರಾತ್ರಿಯ ಪಾಲಿಗೆ ಕುಟುಕು ನಿದ್ದೆಯಾಗಬಹುದು. ಹಾಗಾಗಿ ಹಗಲಿಗೆ ಮಾಡುವ ನಿದ್ದೆಯಿಂದ ರಾತ್ರಿಯ ನಿದ್ದೆಯ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿದೆ ಎಂದಾದರೆ, ಹಗಲಿನ ನಿದ್ದೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ರಾತ್ರಿಯ ನಿದ್ರಾಹೀನತೆಗೆ ಚುಟುಕು ನಿದ್ದೆ ಮದ್ದೂ ಅಲ್ಲ. ರಾತ್ರಿಗೆ 7-8 ತಾಸಿನ ನಿದ್ದೆಯ ಅವಧಿಯಲ್ಲಿ ತೊಂದರೆಯಾದರೆ, ಅದನ್ನು ಪ್ರತ್ಯೇಕವಾಗಿಯೇ ಸರಿ ಪಡಿಸಿಕೊಳ್ಳುವುದು ಸೂಕ್ತ. ಹಗಲಿನ ಸುಸ್ತು, ಒತ್ತಡ, ಆಯಾಸಗಳ ನಡುವೆ ಕೆಲಸ ಮಾಡುವುದಕ್ಕೆ ತೊಂದರೆಯಾಗದಂತೆ ಮಾತ್ರವೇ ಕೋಳಿ ನಿದ್ದೆಯನ್ನು ಉಪಯೋಗಿಸಿಕೊಳ್ಳುವುದು ಜಾಣತನ.

ಎಷ್ಟು ಹೊತ್ತು?

ಮಧ್ಯಾಹ್ನದ 1 ಗಂಟೆಯಿಂದ 4 ಗಂಟೆಯ ನಡುವೆ, 20 ನಿಮಿಷಕ್ಕಿಂತ ಕಡಿಮೆ ಸಮಯದ ನಿದ್ದೆ ಎಲ್ಲ ರೀತಿಯಲ್ಲೂ ಒಳ್ಳೆಯ ಪರಿಣಾಮವನ್ನು ನೀಡುತ್ತದೆ. ಇನ್ನೂ ದೀರ್ಘ ಕಾಲ ನಿದ್ದೆ ಮಾಡಿದರೆ, ಎದ್ದಾಗ ಮಂಕು ಕವಿದಂತೆ, ದೇಹವೆಲ್ಲ ಜಡವಾದಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ, ಗಾಢ ನಿದ್ದೆಯ ಆವರ್ತನವನ್ನು ದೇಹ ಪ್ರವೇಶಿಸುವುದು. ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಗಳಿಂದ ದೇಹಕ್ಕೆ ತೀವ್ರ ಆಯಾಸವಾದಾಗಲೂ ನಿದ್ದೆಯ ಅವಧಿ 30 ನಿಮಿಷ ಮೀರದಿದ್ದರೆ ಒಳ್ಳೆಯದು.

Continue Reading
Advertisement
Prajwal Revanna Case pen drive and hard disk were found during the raids in Hassan and Bengaluru
ಕ್ರೈಂ8 mins ago

Prajwal Revanna Case: ವಿದೇಶದಿಂದ ಪ್ರಜ್ವಲ್‌ ಕರೆತರೋಕೆ ಎಸ್‌ಐಟಿ ಮಾಸ್ಟರ್‌ ಸ್ಟ್ರೋಕ್!‌

Singer Suchitra makes shocking aligeations against shahrukh khan
ಬಾಲಿವುಡ್24 mins ago

Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

Lok Sabha Election 2024
ವೈರಲ್ ನ್ಯೂಸ್33 mins ago

Lok Sabha Election 2024: ʼನನ್ನ ಸ್ಟೈಲು ಬೇರೇನೆ…ʼ; ಕತ್ತೆ ಮೂಲಕ ಪ್ರಚಾರ ನಡೆಸುವ ಅಭ್ಯರ್ಥಿಯ ಕಾರ್ಯ ವೈಖರಿ ಈಗ ವೈರಲ್‌

IPL 2024
ಕ್ರೀಡೆ35 mins ago

IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

natural ice cream 1 rajamarga coumn
ಅಂಕಣ42 mins ago

ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

naturals ic cream raghunandan kamath
ಶ್ರದ್ಧಾಂಜಲಿ1 hour ago

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

IPL 2024
ಪ್ರಮುಖ ಸುದ್ದಿ1 hour ago

IPL 2024 : ಸಹ ಆಟಗಾರ ರೊಮಾರಿಯೊ ಶೆಫರ್ಡ್​ಗೆ ಆಟೋಗ್ರಾಫ್​ ಕೊಟ್ಟ ರೋಹಿತ್​ , ಚಿತ್ರಗಳು ಇಲ್ಲಿವೆ

Kajal Aggarwal Kannappa Movie Entry
ಟಾಲಿವುಡ್2 hours ago

Kajal Aggarwal: ವಿಷ್ಣು ಮಂಚು `ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಅಗರ್​ವಾಲ್​​ ಎಂಟ್ರಿ; ಪಾತ್ರ ಏನಿರಬಹುದು?

White House
ವಿದೇಶ2 hours ago

White House: ಭಾರತದಲ್ಲಿದೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ: ಅಮೆರಿಕದ ಮೆಚ್ಚುಗೆ; ಮೋದಿ ನಾಯಕತ್ವಕ್ಕೂ ಸಿಕ್ತು ಶಹಬ್ಬಾಸ್‌ಗಿರಿ

IPL 2024
ಕ್ರೀಡೆ2 hours ago

IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ15 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌