Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ 5 ಸಾವಿರ ರೂ. ಕಾರ್ಡ್‌ ಹಂಚುತ್ತಿರುವ ಡಿಕೆ ಬ್ರದರ್ಸ್‌! ಮುನಿರತ್ನ ಆಕ್ರೋಶ - Vistara News

Lok Sabha Election 2024

Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ 5 ಸಾವಿರ ರೂ. ಕಾರ್ಡ್‌ ಹಂಚುತ್ತಿರುವ ಡಿಕೆ ಬ್ರದರ್ಸ್‌! ಮುನಿರತ್ನ ಆಕ್ರೋಶ

Lok Sabha Election 2024: ನಮ್ಮ ಕ್ಷೇತ್ರದಲ್ಲಿ ರೌಡಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರೆ ಊರು ಬಿಟ್ಟು ಹೋಗು ಅಂತ ಧಮ್ಕಿ ಹಾಕುತ್ತಿದ್ದಾರೆ. ಕನಕಪುರದಲ್ಲಿ ಹುಟ್ಟಿ ಬೆಳೆದವರು ಈ ರೀತಿ ಮಾಡುತ್ತಿದ್ದಾರೆ. ಗುತ್ತಿಗೆದಾರರ ದುಡ್ಡು, ಅಪಾರ್ಟ್ಮೆಂಟ್‌ಗಳ ದುಡ್ಡು ಬರುತ್ತಿದೆ ಅಂತ ಜನ ಹೇಳುತ್ತಿದ್ದಾರೆ. ಎಡಗೈಯಲ್ಲಿ ಅವರಿಂದ ಹಣ ಪಡೆಯಿರಿ, ಬಲಗೈಯಲ್ಲಿ ಮಂಜುನಾಥ್‌ಗೆ ವೋಟ್ ಹಾಕಿ. ಡಿಕೆಶಿ ನೋಟು ಡಾಕ್ಟರ್‌ಗೆ ವೋಟು ಅಂತ ಹೇಳುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಹತ್ತು ವರ್ಷಗಳಿಂದ ಇರುವ ಬೇವು ಹೋಗಿ ಬೆಲ್ಲ ಸಿಗಲಿ ಎಂದು ಮುನಿರತ್ನ ಹೇಳಿದ್ದಾರೆ.

VISTARANEWS.COM


on

Lok Sabha Election 2024 Rs 5000 in Bengaluru Rural DK Brothers distributing cards says Munirathna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಎಲ್ಲಿ ನೋಡಿದರೂ ಪ್ರಚಾರದ ಭರಾಟೆ. ಈ ನಡುವೆ ಗಿಫ್ಟ್‌ ಪಾಲಿಟಿಕ್ಸ್‌ ಶುರುವಾಗಿದೆ. ಮತದಾರರಿಗೆ ಸೀರೆ, ಕುಕ್ಕರ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ಕೊಡುವ ಮೂಲಕ ಆಮಿಷ ವೊಡ್ಡಲಾಗುತ್ತಿದೆ. ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha constituency) ಕಾಂಗ್ರೆಸ್‌ ವಿರುದ್ಧ “ಕಾರ್ಡ್ ಪಾಲಿಟಿಕ್ಸ್”ನ (Card Politics) ಗಂಭೀರ ಆರೋಪವೊಂದು ಕೇಳಿಬಂದಿದೆ. ಪ್ರತಿ ಕುಟುಂಬಕ್ಕೆ ಐದು ಸಾವಿರ ರೂಪಾಯಿ ಕಾರ್ಡ್ ಕೊಡಲಾಗುತ್ತಿದೆ ಎಂದು ಶಾಸಕ ಮುನಿರತ್ನ (MLA Muniratna) ಆರೋಪ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ ಅವರು ಡಿಕೆ ಬ್ರದರ್ಸ್‌ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಹಿಂದೆ ಐದು ಸಾವಿರ ರೂಪಾಯಿ ಕಾರ್ಡ್ ಹಂಚಿಕೆ ಮಾಡಿ ಐದು ಕ್ಷೇತ್ರಗಳನ್ನು ಗೆದ್ದಿದ್ದರು. ಈಗ ಮತ್ತೆ ಕಾರ್ಡ್ ಹಂಚಿಕೆ ಮಾಡುತ್ತಿದ್ದಾರೆ. ಶೆಟ್ಟಿ ಕೊಟ್ಟಿರುವ ಸಾಲ ವಾಪಸ್‌ ಕೊಟ್ಟರೆ, ಹೊಸ ಸಾಲ ಕೊಡ್ತಾನೆ. ಇನ್ನು ಆ ಕಾರ್ಡ್ ಕೊಟ್ಟಿರುವ ಐದು ಸಾವಿರ ರೂಪಾಯಿ ತೀರಿಸಿಲ್ಲ. ಈ ಚುನಾವಣೆಯಲ್ಲಿ ನಮ್ಮ ಮತದಾರ ಪ್ರಭು ತೀರಿಸುತ್ತಾನೆ ಎಂದು ಆರೋಪ ಮಾಡಿದರು.

ಡಿಕೆಶಿ ನೋಟು ಡಾಕ್ಟರ್‌ಗೆ ವೋಟು

ನಮ್ಮ ಕ್ಷೇತ್ರದಲ್ಲಿ ರೌಡಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರೆ ಊರು ಬಿಟ್ಟು ಹೋಗು ಅಂತ ಧಮ್ಕಿ ಹಾಕುತ್ತಿದ್ದಾರೆ. ಕನಕಪುರದಲ್ಲಿ ಹುಟ್ಟಿ ಬೆಳೆದವರು ಈ ರೀತಿ ಮಾಡುತ್ತಿದ್ದಾರೆ. ಗುತ್ತಿಗೆದಾರರ ದುಡ್ಡು, ಅಪಾರ್ಟ್ಮೆಂಟ್‌ಗಳ ದುಡ್ಡು ಬರುತ್ತಿದೆ ಅಂತ ಜನ ಹೇಳುತ್ತಿದ್ದಾರೆ. ಎಡಗೈಯಲ್ಲಿ ಅವರಿಂದ ಹಣ ಪಡೆಯಿರಿ, ಬಲಗೈಯಲ್ಲಿ ಮಂಜುನಾಥ್‌ಗೆ ವೋಟ್ ಹಾಕಿ. ಡಿಕೆಶಿ ನೋಟು ಡಾಕ್ಟರ್‌ಗೆ ವೋಟು ಅಂತ ಹೇಳುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಹತ್ತು ವರ್ಷಗಳಿಂದ ಇರುವ ಬೇವು ಹೋಗಿ ಬೆಲ್ಲ ಸಿಗಲಿ ಎಂದು ಮುನಿರತ್ನ ಹೇಳಿದರು.

ಮಂಜುನಾಥ್‌ 38 ವರ್ಷ ಸಂಬಳದಲ್ಲಿ ಬದುಕಿದ್ದಾರೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಳಿಯನಾದರೂ ಒಂದು ದಿನವೂ ರಾಜಕಾರಣಕ್ಕೆ ಬರಲಿಲ್ಲ. ಯಾಕೆಂದರೆ ಮಕ್ಕಳಿಗಿಂತ ಆಳಿಯಂದಿರು ಬುದ್ಧಿವಂತರು ಇರುತ್ತಾರೆ. ಅವರು ಮನಸ್ಸು ಮಾಡಿದರೆ ಯಾವತ್ತೋ ಅಧಿಕಾರ ಹಿಡಿಯಬಹುದಿತ್ತು. 38 ವರ್ಷ ಸಂಬಳದಲ್ಲಿ ಬದುಕಿದ್ದಾರೆ. ಇಂಥವರನ್ನ‌ ಬಿಟ್ಟು ಕೊಡುತ್ತೇವಾ ಎಂದು ಜನರೇ ಹೇಳುತ್ತಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.

ಇದನ್ನೂ ಓದಿ: Namma Metro: ಮತ್ತೆ ಅವಮಾನ ಮಾಡಿದ ನಮ್ಮ ಮೆಟ್ರೋ; ಬಟನ್‌ ಇಲ್ಲದ್ದಕ್ಕೆ ಕಾರ್ಮಿಕನಿಗೆ ಪ್ರವೇಶ ನೀಡದ ಸಿಬ್ಬಂದಿ!

ಕ್ಷೇತ್ರ ಬಿಡಲು ಬೆದರಿಕೆ

ಕ್ಷೇತ್ರದಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಇರುವವರನ್ನು ಕ್ಷೇತ್ರ ಬಿಡಲು ಸೂಚಿಸುತ್ತಿದ್ದಾರೆ. ಹಣದ ಆಮಿಷ ತೋರಿಸುತ್ತಿದ್ದಾರೆ. ಕಾರ್ಡ್ ಹಂಚಿಕೆ ಮಾಡುತ್ತಿದ್ದಾರೆ. ಒಂದು ಪ್ರಿಂಟ್ ಪೇಪರ್ ಕೊಟ್ಟು ಆಮಿಷ ತೋರಿಸುತ್ತಿದ್ದಾರೆ ಎಂದು ಡಿಕೆಶಿ ಬ್ರದರ್ಸ್ ವಿರುದ್ಧ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

ಪಾಕಿಸ್ತಾನದ ಬಳಿ ಅಣುಬಾಂಬ್‌ ಇವೆ ಎಂದು ಎಚ್ಚರಿಸಿದ್ದ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರಿಗೆ ಯೋಗಿ ಆದಿತ್ಯನಾಥ್‌ ತಿರುಗೇಟು ನೀಡಿದ್ದರು. “ನಾವೇನೂ ಅಣುಬಾಂಬ್‌ಗಳನ್ನು ಫ್ರಿಡ್ಜ್‌ನಲ್ಲಿ ಇರಿಸಲು ತಯಾರಿಸಿಲ್ಲ. ಇದು ಹೊಸ ಭಾರತ. ನಮ್ಮ ತಂಟೆಗೆ ಬಂದರೆ ಯಾರನ್ನೂ ನಾವು ಬಿಡುವುದಿಲ್ಲ. ಮನೆಗೆ ನುಗ್ಗಿ ಹೊಡೆಯುವ ಸಾಮರ್ಥ್ಯವನ್ನು ಭಾರತ ಕಳೆದ 10 ವರ್ಷಗಳಲ್ಲಿ ಕಂಡುಕೊಂಡಿದೆ” ಎಂದು ಹೇಳಿದ್ದರು. ಈಗ ಮೋದಿ ಕೂಡ ಕಾಂಗ್ರೆಸ್‌ಗೆ ಟಾಂಗ್‌ ಕೊಟ್ಟಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: “ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ. ಅದರ ಬಳಿ ಅಣು ಬಾಂಬ್‌ಗಳು ಇವೆ. ಹಾಗಾಗಿ, ಪಾಕಿಸ್ತಾನಕ್ಕೆ ಭಾರತ ಗೌರವ ನೀಡಬೇಕು” ಎಂಬುದಾಗಿ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನದ ಬಳಿ ಅಣು ಬಾಂಬ್‌ ಇವೆ ಎಂಬುದಾಗಿ ಕಾಂಗ್ರೆಸ್‌ (Congress) ಹೇಳುತ್ತದೆ. ಆದರೆ, ಅವುಗಳನ್ನು ನಿರ್ವಹಣೆ ಮಾಡುವಷ್ಟು ಹಣವೇ ಪಾಕಿಸ್ತಾನದ ಬಳಿ ಇಲ್ಲ” ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ನರೇಂದ್ರ ಮೋದಿ ಮಾತನಾಡಿದರು. “ಪಾಕಿಸ್ತಾನದ ಕುರಿತು ಕಾಂಗ್ರೆಸ್‌ ನಾಯಕರು ಹೆಚ್ಚು ಚಿಂತಿತರಾಗಿದ್ದಾರೆ. ನೆರೆಯ ರಾಷ್ಟ್ರದ ಬಳಿ ಅಣು ಬಾಂಬ್‌ಗಳಿವೆ ಎಂಬುದಾಗಿ ಅವರು ಹೆದರಿಸುತ್ತಾರೆ. ಆದರೆ, ಪಾಕಿಸ್ತಾನದ ಬಳಿ ಪರಮಾಣು ಬಾಂಬ್‌ಗಳಿವೆ ಹಾಗೂ ಅವುಗಳನ್ನು ನಿರ್ವಹಣೆ ಮಾಡಲು ಆಗದಂತಹ, ಅದಕ್ಕೆ ಹಣವೇ ಇಲ್ಲದಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ ಎಂಬುದನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

“ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ನಾಯಕರನ್ನು ಜನ ಯಾವುದೇ ಕಾರಣಕ್ಕೂ ನಂಬಬಾರದು. ಅವರು ವೋಟ್‌ ಜಿಹಾದ್‌ಗೆ ಕರೆ ನೀಡುತ್ತಾರೆ. ಸಮಾಜವನ್ನು ಒಡೆಯುವುದು ಅವರ ಉದ್ದೇಶವಾಗಿದೆ. ಮಾಫಿಯಾವನ್ನು ಸಮಾಜವಾದಿ ಪಕ್ಷವು ಈಗಲೂ ಬೆಂಬಲಿಸುತ್ತದೆ. ಇನ್ನು, ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುತ್ತಲೇ ಬಂದಿತು. ಆದರೆ, ಕಾಂಗ್ರೆಸ್‌ ದಾಳಿ ಮಾಡಿದವರಿಗೇ ಕ್ಲೀನ್‌ಚಿಟ್‌ ನೀಡುವ ಮೂಲಕ ತನ್ನ ನಿಲುವು ಯಾರ ಪರ ಎಂಬುದನ್ನು ಸಾಬೀತುಪಡಿಸಿತು” ಎಂದು ಮೋದಿ ಹೇಳಿದರು.

ಮಣಿಶಂಕರ್‌ ಅಯ್ಯರ್‌ ಹೇಳಿದ್ದೇನು?

“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್‌ ಹೇಳಿದ್ದರು.

ಇದನ್ನೂ ಓದಿ: PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

Continue Reading

ದೇಶ

Narendra Modi: ನೆಹರು-ಗಾಂಧಿ ಕುಟುಂಬಸ್ಥರಿಂದ ಸಂವಿಧಾನಕ್ಕೆ ಧಕ್ಕೆ; ಪ್ರಧಾನಿ ಮೋದಿ ವಾಗ್ದಾಳಿ

Narendra Modi: ದೇಶದ ಸಂವಿಧಾನಕ್ಕೆ ಮೊದಲು ತಿದ್ದುಪಡಿ ತಂದಿದ್ದು ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಅವರು. ಸಂವಿಧಾನಕ್ಕೆ ಧಕ್ಕೆ ತಂದವರು ಯಾರು ಎಂಬ ಪ್ರಶ್ನೆಯನ್ನು ಅವರಿಗೆ ಮೊದಲು ಕೇಳಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ತಿದ್ದುಪಡಿ ಮಾಡಿದರು. ಇದಾದ ಬಳಿಕ ಎಲ್ಲ ಪೀಳಿಗೆಗಳ ಕುಟುಂಬಸ್ಥರು ಹಲವು ರೀತಿಯಲ್ಲಿ ಸಂವಿಧಾನಕ್ಕೆ ಧಕ್ಕೆ ತಂದರು ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳುವ ಜತೆಗೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಂವಿಧಾನ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿ ಕುಟುಂಬಸ್ಥರ ವಿರುದ್ಧ ನರೇಂದ್ರ ಮೋದಿ ಟೀಕಿಸಿದ್ದಾರೆ. “ನೆಹರು ಅವರಿಂದ ಹಿಡಿದು ರಾಹುಲ್‌ ಗಾಂಧಿವರೆಗೆ ನಾಲ್ಕು ಪೀಳಿಗೆಗಳು (Gandhi Family) ಸಂವಿಧಾನಕ್ಕೆ ಧಕ್ಕೆ ತಂದಿವೆ” ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದ ವೇಳೆ ಪ್ರಸ್ತಾಪಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 400ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಾಯಿಸುತ್ತದೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸುತ್ತಿವೆ ಎಂಬ ಪ್ರಶ್ನೆಗೆ ನರೇಂದ್ರ ಮೋದಿ ಉತ್ತರಿಸಿದರು. “ದೇಶದ ಸಂವಿಧಾನಕ್ಕೆ ಮೊದಲು ತಿದ್ದುಪಡಿ ತಂದಿದ್ದು ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಅವರು. ಸಂವಿಧಾನಕ್ಕೆ ಧಕ್ಕೆ ತಂದವರು ಯಾರು ಎಂಬ ಪ್ರಶ್ನೆಯನ್ನು ಅವರಿಗೆ ಮೊದಲು ಕೇಳಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ತಿದ್ದುಪಡಿ ಮಾಡಿದರು. ಇದಾದ ಬಳಿಕ ಎಲ್ಲ ಪೀಳಿಗೆಗಳ ಕುಟುಂಬಸ್ಥರು ಹಲವು ರೀತಿಯಲ್ಲಿ ಸಂವಿಧಾನದ ಆಶಯಕ್ಕೆ ಧಕ್ಕೆ ತಂದರು” ಎಂದು ಹೇಳಿದರು.

“ಜವಾಹರ ಲಾಲ್‌ ನೆಹರು ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡಿದರು. ನೆಹರು ಅವರ ಪುತ್ರಿ ಇಂದಿರಾ ಗಾಂಧಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ನ್ಯಾಯಾಲಯದ ಆದೇಶವನ್ನೇ ಹಿಂದಕ್ಕೆ ತಳ್ಳಿದರು. ಇಂದಿರಾ ಗಾಂಧಿ ಅವರ ಪುತ್ರ ರಾಜೀವ್‌ ಗಾಂಧಿ ಅವರು ಶಾ ಬಾನೋ ಪ್ರಕರಣದಲ್ಲಿ ಕೋರ್ಟ್‌ ತೀರ್ಮಾನವನ್ನೇ ಬದಲಿಸಿದರು. ಇದಕ್ಕಾಗಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದರು. ಇನ್ನು ರಾಹುಲ್‌ ಗಾಂಧಿ ಅವರು ಮನಮೋಹನ್‌ ಸಿಂಗ್‌ ಸರ್ಕಾರವು 2013ರಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆಯ ಪ್ರತಿಯನ್ನೇ ಹರಿದುಹಾಕಿದರು. ಇದೆಲ್ಲ ಸಂವಿಧಾನಕ್ಕೆ ಗಾಂಧಿ ಕುಟುಂಬಸ್ಥರು ತಂದ ಧಕ್ಕೆಯಾಗಿದೆ” ಎಂದು ಮೋದಿ ವಾಗ್ದಾಳಿ ನಡೆಸಿದರು.

“ಹೀಗೆ ಜವಾಹರ ಲಾಲ್‌ ನೆಹರು ಅವರಿಂದ ಹಿಡಿದು ರಾಹುಲ್‌ ಗಾಂಧಿವರೆಗೆ ನಾಲ್ಕೂ ಪೀಳಿಗೆಗಳ ನಾಯಕರು ಸಂವಿಧಾನವನ್ನು ಒಂದಲ್ಲ ಒಂದು ರೀತಿಯಲ್ಲಿ ಹಾಳು ಮಾಡಿದ್ದಾರೆ. ಆದರೆ, ನಮ್ಮ ಸರ್ಕಾರವು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವುದಿಲ್ಲ. ಇದೇ ಕಾರಣಕ್ಕಾಗಿಯೇ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ನಾನು ಬಿಡುವುದಿಲ್ಲ ಎಂಬುದಾಗಿ ಹೇಳುತ್ತಿದ್ದೇನೆ” ಎಂದು ತಿಳಿಸಿದರು. “ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ. ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ರದ್ದುಗೊಳಿಸುತ್ತಾರೆ” ಎಂಬುದು ಕಾಂಗ್ರೆಸ್‌ ನಾಯಕರ ಆರೋಪವಾಗಿದೆ.

ಇದನ್ನೂ ಓದಿ: PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

Continue Reading

ಪ್ರಮುಖ ಸುದ್ದಿ

Lok Sabha Election 2024: 272 ಸೀಟು ಗೆಲ್ಲದೇ ಹೋದರೆ ಬಿಜೆಪಿಯ ಪ್ಲ್ಯಾನ್ ಬಿ ಏನು? ಅಮಿತ್ ಶಾ ಉತ್ತರ ಹೀಗಿದೆ

Lok Sabha Election 2024: ಲೋಕಸಭೆಯಲ್ಲಿ 400 ಸ್ಥಾನಗಳನ್ನು ಹೊಂದಲಿರುವ ಬಿಜೆಪಿಯು ಗಡಿಗಳನ್ನು ರಕ್ಷಿಸಲು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ಮತ್ತು ಬಡವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ ಎಂದು ಅಮಿತ್‌ ಶಾ ಹೇಳಿದರು.

VISTARANEWS.COM


on

Amith Shah lok sabha election 2024
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ (BJP) ಬಹುಮತಕ್ಕೆ ಬೇಕಾದ 272 ಸೀಟು ಪಡೆಯದಿದ್ದರೆ ಏನು ಮಾಡುತ್ತದೆ? ಈ ಕುರಿತು ಎದುರಾದ ಮಾಧ್ಯಮದ ಪ್ರಶ್ನೆಗೆ ಗೃಹ ಸಚಿವ ಅಮಿತ್ ಶಾ (Home minister Amit Shah) ಖಡಕ್‌ ಆಗಿ ಉತ್ತರಿಸಿದ್ದಾರೆ. ಅಂಥದೊಂದು ಸನ್ನಿವೇಶ ಸಂಭವಿಸುವ ಸಾಧ್ಯತೆ ನನಗೆ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿಗೆ ಪ್ಲಾನ್ ಬಿ (Plan B) ಬೇಕಾಗಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 272ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಬಿಜೆಪಿಯ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, “ಅಂತಹ ಯಾವುದೇ ಸಾಧ್ಯತೆಗಳು ನನಗೆ ಕಾಣುತ್ತಿಲ್ಲ, 60 ಕೋಟಿ ಫಲಾನುಭವಿಗಳ ಸೈನ್ಯವು ಪ್ರಧಾನಿ ಮೋದಿಯವರೊಂದಿಗೆ ನಿಂತಿದೆ. ಅವರಿಗೆ ಯಾವುದೇ ಜಾತಿಬಲ ಅಥವಾ ವಯೋಮಾನವಿಲ್ಲ. ಈ ಎಲ್ಲಾ ಪ್ರಯೋಜನಗಳನ್ನು ಪಡೆದವರಿಗೆ ನರೇಂದ್ರ ಮೋದಿಯವರಿಗೆ ಹೇಗೇ ಆದರೂ 400 ಸೀಟ್‌ ನೀಡುವುದು ಗೊತ್ತು” ಎಂದು ಶಾ ಹೇಳಿದ್ದಾರೆ.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಬಿಜೆಪಿಯ ಪ್ಲಾನ್ ಬಿ ಬಗ್ಗೆ ಕೇಳಲಾಯಿತು. ಆದರೆ ಪಕ್ಷದ ಪ್ಲಾನ್ ಎ ಯಶಸ್ವಿಯಾಗಿಯೇ ಆಗುತ್ತದೆ ಎಂದು ಅಮಿತ್ ಶಾ ಹೇಳಿದರು. “ಪ್ಲಾನ್ ಎ ಯಶಸ್ವಿಯಾಗಲು 60%ಕ್ಕಿಂತ ಕಡಿಮೆ ಅವಕಾಶವಿರುವಾಗ ಮಾತ್ರ ಪ್ಲಾನ್ ಬಿ ಮಾಡಬೇಕು. ಪಿಎಂ ಮೋದಿ ಅವರು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆ ಎಂದು ನನಗೆ ಖಚಿತವಾಗಿದೆ” ಎಂದು ಅವರು ಹೇಳಿದರು.

ʻಉತ್ತರ-ದಕ್ಷಿಣ’ ವಿಭಜನೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.‌

“ಇದು ಪ್ರತ್ಯೇಕ ದೇಶ ಎಂದು ಯಾರಾದರೂ ಹೇಳಿದರೆ ಅದು ತುಂಬಾ ಆಕ್ಷೇಪಾರ್ಹ. ಈ ದೇಶವನ್ನು ಇನ್ನು ಎಂದಿಗೂ ವಿಭಜಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸುವ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅದನ್ನು ನಿರಾಕರಿಸಿಲ್ಲ. ಜನತೆ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಸೂಚಿಯ ಬಗ್ಗೆ ಗ್ರಹಿಸಬೇಕು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ 5 ರಾಜ್ಯಗಳನ್ನು ಒಟ್ಟುಗೂಡಿಸಿ ಬಿಜೆಪಿ ಈ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ” ಎಂದು ಅವರು ಹೇಳಿದರು.

ದೇಶದ ರಾಜಕೀಯದಲ್ಲಿ ಸ್ಥಿರತೆ ತರಲು 400ಕ್ಕೂ ಹೆಚ್ಚು ಸ್ಥಾನಗಳ ಅಗತ್ಯವಿದೆ. ಸಂವಿಧಾನವನ್ನು ಬದಲಾಯಿಸುವ ಜನಾದೇಶ ಬಿಜೆಪಿಗಿದೆ. ಆದರೆ ನಾವು ಎಂದಿಗೂ ಹಾಗೆ ಮಾಡಲಿಲ್ಲ. ಲೋಕಸಭೆಯಲ್ಲಿ 400 ಸ್ಥಾನಗಳನ್ನು ಹೊಂದಲಿರುವ ಬಿಜೆಪಿಯು ಗಡಿಗಳನ್ನು ರಕ್ಷಿಸಲು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ಮತ್ತು ಬಡವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂವಿಧಾನವನ್ನು ತಿದ್ದುಪಡಿ ಮಾಡಲು ಬಯಸುತ್ತದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿ ಪ್ರಯೋಜನಗಳನ್ನು ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ನೀಡಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಮೋದಿ, ಶಾ ಸೇರಿದಂತೆ ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

Continue Reading

ದೇಶ

PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

PM Narendra Modi:ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮಲಲ್ಲಾ ಮತ್ತೆ ಟೆಂಟ್‌ನಲ್ಲಿ ಕೂರಬೇಕಾದೀತು. ಏಕೆಂದರೆ ಅವರು ಬುಲ್ಡೋಜರ್‌ ಮೂಲಕ ರಾಮಮಂದಿರವನ್ನು ಕೆಡವುತ್ತಾರೆ. ಬುಲ್ಡೋಜರ್‌ ಅನ್ನು ಎಲ್ಲಿ ಬಳಸಬೇಕು ಅಥವಾ ಎಲ್ಲಿ ಬಳಸಬಾರದು ಎಂಬುದನ್ನು ಯೋಗಿಯಿಂದ ಕಲಿಯಬೇಕು. ಒಂದೆಡೆ ದೇಶದ ಪ್ರಗತಿಗಾಗಿ ಎನ್‌ಡಿಎ ಶ್ರಮಿಸುತ್ತಿದೆ. ಮತ್ತೊಂದೆಡೆ ಇಂಡಿಯಾ ಒಕ್ಕೂಟ ದೇಶದಲ್ಲಿ ಅಶಾಂತಿ ಹುಟ್ಟಿಸಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

VISTARANEWS.COM


on

PM Narendra Modi
Koo

ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌(Yogi Adityanath) ಬುಲ್ಡೋಜರ್‌ ಬಾಬಾ ಎಂದೇ ಜನಪ್ರಿಯರಾದವರು. ಕೊಲೆ ದರೋಡೆ, ಅತ್ಯಾಚಾರ, ಗೂಂಡಾಗಿರಿ ಮಾಡುವವರಿಗೆ ಬಿಸಿ ಮುಟ್ಟಿಸಲು ಅವರ ಮನೆಗಳನ್ನೇ ಬುಲ್ಡೋಜರ್‌ ಮೂಲಕ ನೆಲಸಮ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದವರು. ಇದೀಗ ಈ ಬುಲ್ಡೋಜರ್‌ ನೀತಿ ಬಗ್ಗೆ ನರೇಂದ್ರ ಮೋದಿ(PM Narendra Modi) ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌(Congress) ಮತ್ತು ಸಮಾಜವಾದಿ ಪಕ್ಷ(Samajwadi Party) ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್‌ ಚಲಾಯಿಸುತ್ತಾರೆ. ಅವರು ಬುಲ್ಡೋಜರ್‌ ಅನ್ನು ಎಲ್ಲಿ ಬಳಸಬೇಕು ಎಂಬುದನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರಿಂದ ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂಡಿಯಾ(INDIA bloc) ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮಲಲ್ಲಾ ಮತ್ತೆ ಟೆಂಟ್‌ನಲ್ಲಿ ಕೂರಬೇಕಾದೀತು. ಏಕೆಂದರೆ ಅವರು ಬುಲ್ಡೋಜರ್‌ ಮೂಲಕ ರಾಮಮಂದಿರವನ್ನು ಕೆಡವುತ್ತಾರೆ. ಬುಲ್ಡೋಜರ್‌ ಅನ್ನು ಎಲ್ಲಿ ಬಳಸಬೇಕು ಅಥವಾ ಎಲ್ಲಿ ಬಳಸಬಾರದು ಎಂಬುದನ್ನು ಯೋಗಿಯಿಂದ ಕಲಿಯಬೇಕು. ಒಂದೆಡೆ ದೇಶದ ಪ್ರಗತಿಗಾಗಿ ಎನ್‌ಡಿಎ ಶ್ರಮಿಸುತ್ತಿದೆ. ಮತ್ತೊಂದೆಡೆ ಇಂಡಿಯಾ ಒಕ್ಕೂಟ ದೇಶದಲ್ಲಿ ಅಶಾಂತಿ ಹುಟ್ಟಿಸಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಸಮಾಜವಾದಿ ಪಕ್ಷದ ರಾಜಕುಮಾರ ಅಖಿಲೇಶ್‌ ಯಾದವ್‌ ಹೊಸ ಆಂಟಿಯ(ಮಮತಾ ಬ್ಯಾನರ್ಜಿ) ಆಶ್ರಯ ಪಡೆಯುತ್ತಿದ್ದಾರೆ. ಆ ಆಂಟಿ ಬಂಗಾಳದಲ್ಲಿದ್ದಾರೆ. ಅವರು ಮಾತ್ರ ತಾವು ನೇರವಾಗಿ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ಕೊಡುವುದಿಲ್ಲ. ಬಾಹ್ಯ ಬೆಂಬಲ ಸೂಚಿಸುತ್ತೇನೆ ಅಂದಿದ್ದಾರೆ.

ಇದನ್ನೂ ಓದಿ:DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್‌ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?

ಪ್ರಧಾನಿ ಮೋದಿ ಕಳೆದೆರಡು ಬಾರಿಯಂತೆ ಈ ಬಾರಿ ಮೊದಲ 100 ದಿನಗಳ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಯುವಕರನ್ನು ಗುರಿಯಾಗಿಸಿಯೇ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದನ್ನು ಹೆಚ್ಚುವರಿ 25 ದಿನಗಳವರೆಗೆ ವಿಸ್ತರಿಸಲಾಗುತ್ತದೆ. ಈ 125 ದಿನಗಳವರೆಗೆ ಮೊದಲ ಬಾರಿಗೆ ಮತದಾನ ಮಾಡಿದವರು, ಯುವಜನತೆಯನ್ನು ಗುರಿಯಾಗಿಸಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕನಸಿನ ಯೋಜನೆಯಾಗಿರುವ ವಿಕ್ಷಿತ್‌ ಭಾರತ್‌ಗೆ ಯುವಕರು ತಮ್ಮ ಹೊಸ ಐಡಿಯಾಗಳ ಮೂಲಕ ಕೊಡುಗೆ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.


Continue Reading
Advertisement
HD Revanna case Hearing in Holenarasipura sexual assault case adjourned to Monday
ಹಾಸನ27 mins ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

Kanguva Film Suriya-Bobby Deol's war scene with 10,000 people
ಕಾಲಿವುಡ್30 mins ago

Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

karnataka weather Forecast
ಮಳೆ32 mins ago

Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

Narendra Modi
ದೇಶ34 mins ago

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

IPL 2024
ಪ್ರಮುಖ ಸುದ್ದಿ35 mins ago

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

SubAir facility
ಕ್ರೀಡೆ46 mins ago

SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

Lokayukta Raid
ಕರ್ನಾಟಕ52 mins ago

Lokayukta Raid: ಲೋಕಾಯುಕ್ತ ದಾಳಿ; 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಎಫ್‌ಡಿಎ

Health Tips Kannada sleepy is good
ಆರೋಗ್ಯ54 mins ago

Health Tips Kannada: ಕೂತಲ್ಲೇ ತೂಕಡಿಸುತ್ತೀರಾ? ಇದು ಒಳ್ಳೆಯದು!

Jr NTR and Prashanth Neel get the title Dragon from Karan
ಬಾಲಿವುಡ್58 mins ago

Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

Narendra Modi
ದೇಶ1 hour ago

Narendra Modi: ನೆಹರು-ಗಾಂಧಿ ಕುಟುಂಬಸ್ಥರಿಂದ ಸಂವಿಧಾನಕ್ಕೆ ಧಕ್ಕೆ; ಪ್ರಧಾನಿ ಮೋದಿ ವಾಗ್ದಾಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ11 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌