Pakistan Cricket : ಪಾಕಿಸ್ತಾನ ಟಿ20 ತಂಡದಲ್ಲಿ ನಿಷೇಧಿತ ಆಟಗಾರನಿಗೂ ಸ್ಥಾನ! - Vistara News

ಕ್ರೀಡೆ

Pakistan Cricket : ಪಾಕಿಸ್ತಾನ ಟಿ20 ತಂಡದಲ್ಲಿ ನಿಷೇಧಿತ ಆಟಗಾರನಿಗೂ ಸ್ಥಾನ!

Pakistan Cricket: 28 ವರ್ಷದ ಖಾನ್ ಅವರು ತಮ್ಮ ಹುಟ್ಟಿದ ದೇಶಕ್ಕಾಗಿ ಆಡಲು ಆಸಕ್ತಿ ತೋರಿಸಿದ ನಂತರ ಮತ್ತು ಕಾಕುಲ್​ನ ಸೇನಾ ತರಬೇತಿ ಅಕಾಡೆಮಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಶಿಬಿರದಲ್ಲಿ ಭಾಗವಹಿಸಿದ್ದರು. ಆದರೆ ಅದಕ್ಕಿಂತ ಒಂದು ವಾರ ಮೊದಲು ಈ ಆಟಗಾರನನ್ನು ಇಸಿಬಿ ನಿಷೇಧ ಮಾಡಿದೆ.

VISTARANEWS.COM


on

usman Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಪಾಕಿಸ್ತಾನ ತಂಡದಲ್ಲಿ (Pakistan Cricket) ಅನ್​ಕ್ಯಾಪ್ಡ್​ ಉಸ್ಮಾನ್ ಖಾನ್ (Usaman Khan) ಅವರನ್ನು ಆಯ್ಕೆ ಮಾಡಿದೆ. ವಿಪರ್ಯಾಸ ಎಂದರೆ ಈ ಆಟಗಾರನಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಐದು ವರ್ಷಗಳ ಕಾಲ ನಿಷೇಧಿಸಿತ್ತು. ಆದರೆ ಆತ ದೇಶಕ್ಕಾಗಿ ಆಡಲು ಆಸಕ್ತಿ ತೋರಿದ ಕಾರಣಕ್ಕೆ ತಂಡದಲ್ಲಿ ಅವಕಾಶ ನೀಡಲಾಗಿದೆ.

28 ವರ್ಷದ ಖಾನ್ ಅವರು ತಮ್ಮ ಹುಟ್ಟಿದ ದೇಶಕ್ಕಾಗಿ ಆಡಲು ಆಸಕ್ತಿ ತೋರಿಸಿದ ನಂತರ ಮತ್ತು ಕಾಕುಲ್​ನ ಸೇನಾ ತರಬೇತಿ ಅಕಾಡೆಮಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಶಿಬಿರದಲ್ಲಿ ಭಾಗವಹಿಸಿದ್ದರು. ಆದರೆ ಅದಕ್ಕಿಂತ ಒಂದು ವಾರ ಮೊದಲು ಈ ಆಟಗಾರನನ್ನು ಇಸಿಬಿ ನಿಷೇಧ ಮಾಡಿದೆ.

ಖಾನ್ ಅವರು “ಇಸಿಬಿ ಒದಗಿಸಿದ ಅವಕಾಶಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ಇನ್ನು ಮುಂದೆ ಇಸಿಬಿಗಾಗಿ ಆಡಲು ಬಯಸುವುದಿಲ್ಲ. ಅರ್ಹತೆಯ ಮಾನದಂಡಗಳನ್ನು ಪೂರ್ಣಗೊಳಿಸಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಎಮಿರೇಟ್ಸ್​ ​ ಕ್ರಿಕೆಟ್​​ ಮಂಡಳಿ ಹೇಳಿದೆ.

ಕೆರಿಬಿಯನ್ ಮತ್ತು ಅಮೆರಿಕದಲ್ಲಿ ಮುಂದಿನ ಜೂನ್​ನಲ್ಲಿ ನಡೆಯಲಿರುವ ಟ್ವೆಂಟಿ -20 ವಿಶ್ವಕಪ್​ಗೆ ಮುಂಚಿತವಾಗಿ ಪಾಕಿಸ್ತಾನವು 11 ಟಿ 20 ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಪಾಕಿಸ್ತಾನದ 17 ಸದಸ್ಯರ ತಂಡದಲ್ಲಿ ಖಾನ್ ಅವರನ್ನು ಸೇರಿಸಿದೆ.

“ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗುವುದು ಯಾವುದೇ ಕ್ರೀಡಾಪಟುವಿನ ಅಂತಿಮ ಕನಸು ಮತ್ತು ಗುರಿಯಾಗಿದೆ” ಎಂದು ಟಿ 20 ವಿಶ್ವಕಪ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಖಾನ್ ಹೇಳಿದ್ದಾರೆ. “ಇಂದು, ನಾನು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ ಮತ್ತು ಸಂತೋಷದಿಂದ ಇದ್ದೇನೆ ಎಂದು ಹೇಳಿದ್ದಾರೆ.

ಸರಣಿಯು ಏಪ್ರಿಲ್ 18 ರಂದು ರಾವಲ್ಪಿಂಡಿಯಲ್ಲಿ ಪ್ರಾರಂಭವಾಗುತ್ತದೆ. ಇದು ಏಪ್ರಿಲ್ 20 ಮತ್ತು 21 ರಂದು ಎರಡನೇ ಮತ್ತು ಮೂರನೇ ಪಂದ್ಯಗಳಿಗೆ ಆತಿಥ್ಯ ವಹಿಸುತ್ತದೆ. ಉಳಿದ ಎರಡು ಪಂದ್ಯಗಳು ಏಪ್ರಿಲ್ 25 ಮತ್ತು 27ರಂದು ಲಾಹೋರ್​ನಲ್ಲಿ ನಡೆಯಲಿವೆ.

ಬಾಬರ್ ಮತ್ತೆ ನಾಯಕ

ಈ ವರ್ಷದ ಆರಂಭದಲ್ಲಿ ಶಾಹೀನ್ ಶಾ ಅಫ್ರಿದಿ ನಾಯಕನಾಗಿ ತಮ್ಮ ಮೊದಲ ಸರಣಿಯಲ್ಲಿ ಆಡಿದ್ದರು. ನ್ಯೂಜಿಲೆಂಡ್ ವಿರುದ್ಧ ಆ ಸರಣಿಯಲ್ಲಿ ಪಾಕ್​ 4-1 ಅಂತರದಿಂದ ಸೋತಿತ್ತು. ಇದೀಗ ಬಾಬರ್ ಅಜಮ್ ಪಾಕಿಸ್ತಾನದ ವೈಟ್-ಬಾಲ್ ಕ್ರಿಕೆಟ್ ತಂಡದ ನಾಯಕರಾಗಿ ಮರಳಿದ್ದಾರೆ.

ಇದನ್ನೂ ಓದಿ: IPL 2024 : ವನಿಂದು ಬದಲಿಗೆ ಲಂಕಾ ಬೌಲರ್​​ನನ್ನೇ ಆಯ್ಕೆ ಮಾಡಿಕೊಂಡ ಎಸ್​ಆರ್​ಎಚ್​​​

ಖಾನ್ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ವಿದೇಶಿ ಆಟಗಾರನಾಗಿ ಮುಲ್ತಾನ್ ಸುಲ್ತಾನ್ಸ್ ಪರ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿದ್ದರು. ಈ ತಂಡದ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ರೋಮಾಂಚಕ ಫೈನಲ್​​ನಲ್ಲಿ ಸೋತಿತು.

ಪಾಕಿಸ್ತಾನದ ಪ್ರೀಮಿಯರ್ ಟಿ 20 ಲೀಗ್​ನಲ್ಲಿ ಉದಯೋನ್ಮುಖ ಆಟಗಾರ ಮತ್ತು ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ಪಡೆದ ನಂತರ ಬ್ಯಾಡರ್​ ಇರ್ಫಾನ್ ಖಾನ್ ಗೂ ಮೊದಲ ಕರೆ ಸಿಕ್ಕಿದೆ. ಫಿಟ್ನೆಸ್ ಸಮಸ್ಯೆಗಳಿಂದಾಗಿ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್​ನಲ್ಲಿ ನಡೆದ ಟಿ 20 ಸರಣಿಯಿಂದ ಹೊರಗುಳಿದ ನಂತರ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವಕಾಶ ಪಡೆದಿ್ದಾರೆ.

ಆಲ್ರೌಂಡರ್ ಇಮಾದ್ ವಾಸಿಮ್ ಮತ್ತು ವೇಗದ ಬೌಲರ್ ಮೊಹಮ್ಮದ್ ಅಮೀರ್ ಕಳೆದ ತಿಂಗಳು ನಿವೃತ್ತಿಯಿಂದ ಹೊರಬಂದ ನಂತರ ತಂಡಕ್ಕೆ ಮರಳಲಿದ್ದಾರೆ. ಪಾಕಿಸ್ತಾನ ಪರ 50 ಟಿ 20 ಪಂದ್ಯಗಳಲ್ಲಿ 59 ವಿಕೆಟ್​​ ಪಡೆದಿರುವ ಅಮೀರ್, 2020 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಆಡಿದ್ದರು.

ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಜರ್ ಮಹಮೂದ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಮಹಮೂದ್ ಈ ಹಿಂದೆ 2016 ರಿಂದ 19 ರವರೆಗೆ ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ ಕೇನ್ ವಿಲಿಯಮ್ಸನ್ ಮತ್ತು ಡ್ಯಾರಿಲ್ ಮಿಚೆಲ್ ಸೇರಿದಂತೆ ಹಲವಾರು ಪ್ರಮುಖ ಟಿ 20 ಆಟಗಾರರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ಆಡಲಿದೆ.

ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಇಫ್ತಿಖರ್ ಅಹ್ಮದ್, ಇಮಾದ್ ವಾಸಿಮ್, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅಮೀರ್, ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯೂಬ್, ಶದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸಾಮಾ ಮಿರ್, ಉಸ್ಮಾನ್ ಖಾನ್, ಜಮಾನ್ ಖಾನ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Virat Kohli: ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾತ್ರ ಮ್ಯಾಥ್ಯೂ ಹೇಡನ್ ಹೊಗಳಲಿಲ್ಲ. ಅವರ ಫೀಲ್ಡಿಂಗ್​ ಕರಾಮತ್ತನ್ನು ಕೂಡ ಮೆಚ್ಚಿದ್ದಾರೆ. ಮೈದಾನದಲ್ಲಿ ಚಿಗರೆಯಂತೆ ಓಡಿ ಫೀಲ್ಡಿಂಗ್ ಮಾಡುವ ಅವರಿಂದಾಗಿ ವಿಕೆಟ್​ಗಳು ಲಭಿಸಿವೆ ಎಂಬುದಾಗಿ ಹೇಡನ್​ ಹೇಳಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನದಿಂದಾಗಿಯೇ ಆರ್​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಲು ಸಾಧ್ಯವಾಯಿತು. ಹೀಗಾಗಿ ಕೊಹ್ಲಿಗೆ ನಿಜವಾದ ಗೌರವ ಸಲ್ಲಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ನುಡಿದಿದ್ದಾರೆ.

VISTARANEWS.COM


on

Virat Kohli
Koo

ಬೆಂಗಳೂರು: ಮೇ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಲ್ಕು ವಿಕೆಟ್‌ಗಳ ಸೋಲನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮತ್ತು ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೇಡನ್ ಬೇಸರದ ವಿಷಯ ಎಂದು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಅವರು ವಿರಾಟ್​ ಕೊಹ್ಲಿಗೆ ನಿಜವಾದ ಗೌರವ ಸಲ್ಲಿಸಬೇಕು. ತಂಡದ ಸೋಲಿಗೆ ಅವರನ್ನು ಹೊಣೆಗಾರನನ್ನಾಗಿ ಮಾಡಬಾರದು ಒತ್ತಿ ಹೇಳಿದರು. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರು ಪಂದ್ಯದುದ್ದಕ್ಕೂ ಕೊಹ್ಲಿಯ ಸಮರ್ಪಣೆ ಮತ್ತು ಪ್ರಭಾವಶಾಲಿ ಆಟವನ್ನು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನು ಮಾತ್ರ ಮ್ಯಾಥ್ಯೂ ಹೇಡನ್ ಹೊಗಳಲಿಲ್ಲ. ಅವರ ಫೀಲ್ಡಿಂಗ್​ ಕರಾಮತ್ತನ್ನು ಕೂಡ ಮೆಚ್ಚಿದ್ದಾರೆ. ಮೈದಾನದಲ್ಲಿ ಚಿಗರೆಯಂತೆ ಓಡಿ ಫೀಲ್ಡಿಂಗ್ ಮಾಡುವ ಅವರಿಂದಾಗಿ ವಿಕೆಟ್​ಗಳು ಲಭಿಸಿವೆ ಎಂಬುದಾಗಿ ಹೇಡನ್​ ಹೇಳಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನದಿಂದಾಗಿಯೇ ಆರ್​ಸಿಬಿ ತಂಡ ಪ್ಲೇಆಫ್​ ಹಂತಕ್ಕೆ ಏರಲು ಸಾಧ್ಯವಾಯಿತು. ಹೀಗಾಗಿ ಕೊಹ್ಲಿಗೆ ನಿಜವಾದ ಗೌರವ ಸಲ್ಲಬೇಕು ಎಂದು ಮಾಜಿ ಆರಂಭಿಕ ಬ್ಯಾಟರ್ ನುಡಿದಿದ್ದಾರೆ.

ಆರ್‌ಆರ್ ವಿರುದ್ಧ 24 ಎಸೆತಗಳಲ್ಲಿ 33 ರನ್ ಬಾರಿಸಿದ ಕೊಹ್ಲಿ ಅದ್ಭುತ ಮೈಲಿಗಲ್ಲನ್ನು ಸಾಧಿಸಿದ್ದರು. ಐಪಿಎಲ್‌ನಲ್ಲಿ 8000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೇಡನ್ ಇದನ್ನು ಅಸಾಮಾನ್ಯ ಸಾಧನೆ ಎಂದು ಕರೆದಿದ್ದಾರೆ. ಭಾರತೀಯ ಬ್ಯಾಟಿಂಗ್ ಮಾಸ್ಟರ್ ಅವರು ಎಂದು ಹೇಳಿದ್ದಾರೆ

ಇದಲ್ಲದೆ, ಐಪಿಎಲ್ 2024 ರಲ್ಲಿ ಆರ್​​ಬಿಗಾಗಿ ಕೊಹ್ಲಿ ತೋರಿದ ಸ್ಪರ್ಧಾತ್ಮಕ ಮನೋಭಾವ ಸ್ಥಿರ ಪ್ರದರ್ಶನವನ್ನು ಹೇಡನ್ ಶ್ಲಾಘಿಸಿದರು. ಬಲಗೈ ಬ್ಯಾಟರ್​ ಈ ಋತುವಿನಲ್ಲಿ ರನ್‌ಗಾಗಿ ಹಸಿದ ರೀತಿಯಲ್ಲಿ ತೋರುತ್ತಿದ್ದರು. ಮೈದಾದನದಲ್ಲಿ ಅವರ ಉಪಸ್ಥಿತಿಯು ಪರಿಣಾಮ ಬೀರಿತ್ತು. ಬೆಂಗಳೂರು ತಂಡ ಪ್ಲೇಆಫ್‌ ಪ್ರವೇಶಿಸುವಲ್ಲಿ ಅವರ ಪಾತ್ರ ಮುಖ್ಯ ಎಂದು ಹೇಳಿದರು.

ಆರ್‌ಆರ್‌ಗೆ ಆರ್‌ಸಿಬಿ ಸೋಲಿಗೂ ವಿರಾಟ್ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ: ಮ್ಯಾಥ್ಯೂ ಹೇಡನ್

ಮ್ಯಾಥ್ಯೂ ಹೇಡನ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೀಗೆ ಹೇಳಿದ್ಧಾರೆ. “ಈ ಸೋಲಿಗೆ ಕೊಹ್ಲಿಯೊಂದಿಗೆ ಯಾವುದೇ ಸಂಬಂಧವಿಲ್ಲ. ನಮಗೆ ತಿಳಿದಿದೆ, ಅವರು ತನ್ನ ಸಂಪೂರ್ಣ ಹೃದಯ ಮತ್ತು ಆತ್ಮವನ್ನು ತಂಡಕ್ಕಾಗಿ ಕೊಟ್ಟಿದ್ದಾರೆ. ಅವರ ಫೀಲ್ಡಿಂಗ್ ಪ್ರಯತ್ನದ ಬಗ್ಗೆ ನೀವು ಯೋಚಿಸಿದಾಗ ಇನ್ನು ವಿಶೇಷ ಎನಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಬ್ಯಾಟ್‌ನೊಂದಿಗೆ ಅದ್ಭುತವಾಗಿದ್ದರು. 15 ಪಂದ್ಯಗಳಲ್ಲಿ 154 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಕೊಹ್ಲಿ ಆಗಾಗ್ಗೆ ಆರ್​ಸಿಬಿ ತಂಡವನ್ನು ಅನ್ನು ಏಕಾಂಗಿಯಾಗಿ ಗೆಲ್ಲಿಸಿದ್ದರು. 2024 ರಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೊಹ್ಲಿ ಶೀಘ್ರದಲ್ಲೇ T20 ವಿಶ್ವಕಪ್ 2024 ಗಾಗಿ ಭಾರತೀಯ ತಂಡದೊಂದಿಗೆ ಯುಎಸ್​ಎ ಮತ್ತು ವೆಸ್ಟ್​ ಇಂಡೀಸ್​​ಗೆ ತೆರಳಲಿದ್ದಾರೆ. ಅವರು ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಆರ್​ಸಿಬಿ ಓಪನರ್ ಐಪಿಎಲ್ 2024 ರಲ್ಲಿ ಉತ್ತಮ ಫಾರ್ಮ್​ ತೋರಿದ ಕಾರಣ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಆಡುವ ಸಾಧ್ಯತೆಯಿದೆ.

Continue Reading

ಪ್ರಮುಖ ಸುದ್ದಿ

Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

Glenn Maxwell : ಮ್ಯಾಕ್ಸ್​ವೆಲ್​ ಗೋಲ್ಡನ್ ಡಕ್‌ ಆಗುವ ಮೂಲಕ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿದರು. ಈ ವಿರುದ್ಧದ ವೈಫಲ್ಯವು ಐಪಿಎಲ್​ 2024ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮರೆಯಲಾಗದ ಅಭಿಯಾನನವಾಗಿದೆ. ಈ ಋತುವಿನ 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ 28 ರ ಗರಿಷ್ಠ ಸ್ಕೋರ್‌ನೊಂದಿಗೆ ಕೇವಲ 52 ರನ್ ಗಳಿಸಿದ್ದಾರೆ. ಅವರು ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

VISTARANEWS.COM


on

Glenn Maxwell
Koo

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆದ ಐಪಿಎಲ್​ 2024 (IPL 2024) ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸೋಲುಕಂಡಿತು. ಇದರೊಂದಿಗೆ ಆರ್​ಸಿಬಿಯ ಅಭಿಯಾನ ಕೊನೆಗೊಂಡಿತು. ಸೋಲಿನ ನಡುವೆಯೂ ಹೆಚ್ಚು ಚರ್ಚೆಗೆ ಒಳಗಾಗಿದ್ದು ಐಪಿಎಲ್ 2024 ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರ ಕೆಟ್ಟ ಅಭಿಯಾನ.

ಆರ್​​ಸಿಬಿ ತನ್ನ ಹಿಂದಿನ ಲೀಗ್​ ಹಂತದ ಆರು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ ನಂತರ ಎಲಿಮಿನೇಟರ್​ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಮತ್ತೊಂದೆಡೆ, ರಾಜಸ್ಥಾನ್​ ತನ್ನ ಹಿಂದಿನ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತ್ತು. ಮೇ ತಿಂಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಹೀಗಾಗಿ ಆರ್​​ಸಿಬಿ ಫೇವರಿಟ್​ ಆಗಿತ್ತು. ಆದಾಗ್ಯೂ, ಸಂಜು ಸ್ಯಾಮ್ಸನ್ ನೇತೃತ್ವದ ಆರ್‌ಸಿಬಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಎರಡನೇ ಕ್ವಾಲಿಫೈಯರ್‌ನಲ್ಲಿ ತಮ್ಮ ಸ್ಥಾನ ಕಾಯ್ದಿರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 172 ರನ್ ಗಳಿಸಿತು. ಆರ್​ಸಿಬಿ ಬ್ಯಾಟರ್‌ಗಳು ಉತ್ತಮ ಆರಂಭ ಪಡೆದರೂ ಅವರಲ್ಲಿ ಯಾರೂ ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲಿಲ್ಲ. ರಜತ್ ಪಾಟಿದಾರ್ 34 ರನ್ ಗಳಿಸಿದ್ದೇ ಗರಿಷ್ಠ. ಉತ್ತರವಾಗಿ, ಆರ್​ಆರ್​ 19 ಓವರ್‌ಗಳಲ್ಲಿ ಮೊತ್ತವನ್ನು ಬೆನ್ನಟ್ಟಿ ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗಿನ ಹಣಾಹಣಿಯನ್ನು ನಿಕ್ಕಿ ಮಾಡಿಕೊಂಡಿತು.

ಆರ್​ಸಿಬಿ ತಂಡ ತಮ್ಮ ಅಭಿಯಾನವನ್ನು ಪರಿವರ್ತಿಸಿದ ರೀತಿ ಮತ್ತು ಎಲ್ಲಾ ಅಡೆತಡೆಗಳನ್ನು ಮೀರಿ ಪ್ಲೇಆಫ್‌ಗೆ ಅರ್ಹತೆ ಗಳಿಸಿದ್ದಕ್ಕಾಗಿ ಹಲವಾರು ಕಡೆಗಳಿಂದ ಪ್ರಶಂಸೆ ಪಡೆಯುತ್ತಿದ್ದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಎಲ್ಲೆಡೆಯಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅವರಿಗೆ ಕೊಟ್ಟಿರುವ ಕೋಟ್ಯಂತರ ರೂಪಾಯಿ ವಾಪಸ್​ ಪಡೆಯಿರಿ ಎಂಬುದಾಗಿ ಒತ್ತಾಯ ಕೇಳಿ ಬಂದಿದೆ.

ಎಲಿಮಿನೇಟರ್‌ನಲ್ಲಿ ಆರ್​ಆರ್​ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯನ್ ಆಟಗಾರನಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ಇತ್ತು. ಆದರೆ ಅವರು ಗೋಲ್ಡನ್ ಡಕ್‌ ಆಗುವ ಮೂಲಕ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿದರು. ಈ ವಿರುದ್ಧದ ವೈಫಲ್ಯವು ಐಪಿಎಲ್​ 2024ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮರೆಯಲಾಗದ ಅಭಿಯಾನನವಾಗಿದೆ. ಈ ಋತುವಿನ 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ 28 ರ ಗರಿಷ್ಠ ಸ್ಕೋರ್‌ನೊಂದಿಗೆ ಕೇವಲ 52 ರನ್ ಗಳಿಸಿದ್ದಾರೆ. ಅವರು ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಮನೋಜ್ ತಿವಾರಿ ವಾಗ್ದಾಳಿ

ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಆರ್ ವಿರುದ್ಧ ಭಾರತದ ಮಾಜಿ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಋತುವಿನಲ್ಲಿ ಮ್ಯಾಕ್ಸ್‌ವೆಲ್ ಅವರ ಪ್ರದರ್ಶನವನ್ನು ತಿವಾರಿ ತೀವ್ರವಾಗಿ ಟೀಕಿಸಿದ್ದಲ್ಲದೆ, ಫ್ರಾಂಚೈಸಿಗೆ ಅವರ ಬದ್ಧತೆ ಏನೆಂದು ಪ್ರಶ್ನಿಸಿದ್ದಾರೆ.

ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಆರ್‌ಸಿಬಿಗೆ ಅದೇ ಪ್ರದರ್ಶನವನ್ನು ಪುನರಾವರ್ತಿಸುವುದಿಲ್ಲ ಯಾಕೆ ಎಂದು ತಿವಾರಿ ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಮಗೆ ತುಂಬಾ ಅನುಭವವಿದೆ. ನೀವು ಆಸ್ಟ್ರೇಲಿಯಾ ಪರ ಆಡಿದಾಗ ನೀವು ತುಂಬಾ ಉತ್ತಮ ಪ್ರದರ್ಶನ ನೀಡುತ್ತೀರಿ. ಆದರೆ ನೀವು ಐಪಿಎಲ್‌ಗೆ ಬಂದ ತಕ್ಷಣ ಏನಾಗುತ್ತೋ ಗೊತ್ತಿಲ್ಲ. ಅವರಿಗೆ ಆಸಕ್ತಿಯಿರುವುದಿಲ್ಲ ಎಂದು ತಿವಾರಿ ಹೇಳಿದ್ದಾರೆ.

ಮ್ಯಾಕ್ಸ್​​ವೆಲ್ ಆಡದಿದ್ದರೂ ಪರ್ವಾಗಿಲ್ಲ. ಅವರ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದೆ. ಚೆಕ್ ಅವರಿಗೆ ತಲುಪುತ್ತದೆ. ಅವರು ರಾತ್ರಿಯಲ್ಲಿ ಗೆಟ್-ಟುಗೆದರ್ ಮಾಡುತ್ತಾರೆ. ನಗುತ್ತಾರೆ ಮತ್ತು ಫೋಟೋಗಳನ್ನು ಕ್ಲಿಕ್ ಮಾಡಿಸಿಕೊಳ್ಳುತ್ತಾರೆ ಎಂದು ತಿವಾರಿ ಕ್ರಿಕ್‌ಬಜ್‌ಗೆ ಮಾತನಾಡುತ್ತಾ ಆರೋಪಿಸಿದ್ದಾರೆ.

ಇದನ್ನೂ ಓದಿ: IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್​ಸಿಬಿ ಮಾಜಿ ನಾಯಕ

ಆರ್‌ಸಿಬಿ ಆರಂಭದಲ್ಲಿ ಉತ್ತಮವಾಗಿ ಪ್ರದರ್ಶನ ನೀಡದೇ ಹೋದಾಗ ನಾವು ಇಲ್ಲಿ ಕುಳಿತು ವಿಶ್ಲೇಷಿಸುತ್ತಿದ್ದೆವು. ಆದರೆ, ಕೊನೆಯಲ್ಲಿ, ಅವರು ಆರು ಗೆಲುವ ಕಂಡರು. ಅದಕ್ಕಾಗಿ ಅವರು ಸಂತೋಷಪಡಬಹುದು. ಆದರೂ ಅಂತಿಮ ಫಲಿತಾಂಶವು ಟ್ರೋಫಿಯಾಗಿರುತ್ತದೆ. ಹೀಗಾಗಿ ತಂಡದಲ್ಲಿ ಸಮಸ್ಯೆ ಇದೆ, ”ಎಂದು ತಿವಾರಿ ಹೇಳಿದ್ದಾರೆ.

ಮ್ಯಾಕ್ಸ್‌ವೆಲ್ ಮುಂಬರುವ ಟಿ20 ವಿಶ್ವಕಪ್ 2024ರಲ್ಲಿ ಆಸ್ಟ್ರೇಲಿಯಾ ತಂಡದ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ಕಾದು ನೋಡಬೇಕು.

Continue Reading

ಕ್ರೀಡೆ

IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್​ಸಿಬಿ ಮಾಜಿ ನಾಯಕ

IPL 2024: ಕ್ರೀಡೆಯಲ್ಲಿ ಶ್ರೇಷ್ಠ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋಗಿ ಗೆಲುವು ಸಾಧಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್​ಸಿಬಿ ಗೆಲುವಿಗೆ ಪ್ರಯತ್ನಿಸುದಕ್ಕಿಂತ ಡೆಲ್ಲಿ ಪರ ಆಡಿದರೆ ಉತ್ತಮ. ಅವರಿಗೆ ದೆಹಲಿಯಲ್ಲಿ ಮನೆ ಇದೆ. ಕೊಹ್ಲಿಗೆ ಕುಟುಂಬವಿದೆ. ದೆಹಲಿಯಲ್ಲಿ ಆಡಿದರೆ, ಅವರಿಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದು. ವಿರಾಟ್ ಅವರು ದೆಹಲಿಗೆ ಏಕೆ ಆಡಬಾರದು? ಎಂದು ಕೆವಿನ್​ ಪೀಟರ್ಸನ್ ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

IPL 202
Koo

ಬೆಂಗಳೂರು: ಕಳೆದ 17 ವರ್ಷಗಳಿಂದ ಆರ್​ಸಿಬಿ(RCB) ಪರ ನಿಷ್ಠೆಯಿಂದ ಆಡುತ್ತಿರುವ ವಿರಾಟ್​ ಕೊಹ್ಲಿ(Virat Kohli) ಮುಂದಿನ ಆವೃತ್ತಿಗೆ ತಂಡ ತೊರೆದು ಬೇರೆ ಫ್ರಾಂಚೈಸಿ ಪರ ಆಡಬೇಕೆಂದು ಆರ್​ಸಿಬಿಯ ಮಾಜಿ ನಾಯಕ ಕೆವಿನ್​ ಪೀಟರ್ಸನ್ ಸಲಹೆ ನೀಡಿದ್ದಾರೆ.

​ರಾಜಸ್ಥಾನ್​ ರಾಯಲ್ಸ್(Rajasthan Royals)​ ವಿರುದ್ಧ ಬುಧವಾರ ನಡೆದಿದ್ದ ಎಲಿಮಿನೇಟರ್​ ಪಂದ್ಯದಲ್ಲಿ(IPL 2024) ಆರ್​ಸಿಬಿ 4 ವಿಕೆಟ್​ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಈ ಸೋಲಿನ ಹತಾಶೆಯಲ್ಲಿ ವಿರಾಟ್​ ಕೊಹ್ಲಿ ಕಣ್ಣೀರು ಕೂಡ ಸುರಿಸಿದರು. ಅಲ್ಲದೆ ಅತ್ಯಂತ ಭಾವುಕರಾಗಿ ಕಂಡುಬಂದರು. ಇದನ್ನು ನೋಡಿದ ಅವರ ಅಭಿಮಾನಿಗಳು ಕೂಡ ಅತ್ಯಂತ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ಮಾತನಾಡಿದ ಪೀಟರ್ಸನ್, ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ತಮ್ಮ ತವರಾದ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಬೇಕು ಎಂದು ಹೇಳಿದ್ದಾರೆ.

ಸ್ಟಾರ್​ ಸ್ಟೋರ್ಟ್ಸ್​ ಸಂದರ್ಶನದಲ್ಲಿ ಮಾತನಾಡಿದ ಪೀಟರ್ಸನ್, ಮುಂದಿನ ಆವೃತ್ತಿಗೆ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಹಲವು ಆಟಗಾರರು ತಮ್ಮ ತವರು ತಂಡದ ಪೊರ ಆಟಲು ಕಾತರಗೊಂಡಿದ್ದಾರೆ. ಕನ್ನಡಿಗ ಕೆ.ಎಲ್​ ರಾಹುಲ್​ ಕೂಡ ಆರ್​ಸಿಬಿ ಪರ ಆಡಬೇಕು, ಬೆಂಗಳೂರು ನನ್ನ ತವರು ಎಂದು ಹೇಳಿದ್ದರು. ಕೊಹ್ಲಿ ಕೂಡ ಆರ್​ಸಿಬಿ ತೊರೆದು ಡೆಲ್ಲಿ ಪರ ಆಡಿದರೆ ಉತ್ತಮ ಎಂದು ಪೀಟರ್ಸನ್​ ಹೇಳಿದ್ದಾರೆ.

“ಕ್ರೀಡೆಯಲ್ಲಿ ಶ್ರೇಷ್ಠ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋಗಿ ಗೆಲುವು ಸಾಧಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್​ಸಿಬಿ ಗೆಲುವಿಗೆ ಪ್ರಯತ್ನಿಸುದಕ್ಕಿಂತ ಡೆಲ್ಲಿ ಪರ ಆಡಿದರೆ ಉತ್ತಮ. ಅವರಿಗೆ ದೆಹಲಿಯಲ್ಲಿ ಮನೆ ಇದೆ. ಕೊಹ್ಲಿಗೆ ಕುಟುಂಬವಿದೆ. ದೆಹಲಿಯಲ್ಲಿ ಆಡಿದರೆ, ಅವರಿಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದು. ವಿರಾಟ್ ಅವರು ದೆಹಲಿಗೆ ಏಕೆ ಆಡಬಾರದು? ರೊನಾಲ್ಡೊ, ಮೆಸ್ಸಿ, ಹ್ಯಾರಿ ಕೇನ್ ಅವರಂತಹ ದಿಗ್ಗಜ ಫುಟ್ಬಾಲ್​ ಆಟಗಾರರು ತಮ್ಮ ನೆಚ್ಚಿನ ಫ್ರಾಂಚೈಸಿ ತೊರೆದ ಉದಾಹರಣೆ ಇದೆ” ಎಂದು ಹೇಳುವ ಮೂಲಕ ಕೊಹ್ಲಿ ಡೆಲ್ಲಿ ಪರ ಆಡುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

ವಿರಾಟ್​ ಕೊಹ್ಲಿ ಮಾತ್ರ ಚೊಚ್ಚಲ ಆವೃತ್ತಿಯ ಐಪಿಎಲ್​ನಿಂದ ಇದುವರೆಗಿನ ಐಪಿಎಲ್​ ತನಕ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರನಾಗಿದ್ದಾರೆ. ಚೆನ್ನೈ ತಂಡ 2 ವರ್ಷ ಬ್ಯಾನ್​ ಆಗದಿದ್ದರೆ ಧೋನಿ ಕೂಡ ಈ ಹಿರಿಮೆಗೆ ಪಾತ್ರರಾಗುತ್ತಿದ್ದರು. ವಿರಾಟ್​ ಕೊಹ್ಲಿ 252 ಐಪಿಎಲ್​ ಪಂದ್ಯಗಳನ್ನಾಡಿ 8,004 ರನ್​ ಬಾರಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 55 ಅರ್ಧಶತಕ ಗಳಿಸಿದ್ದಾರೆ.

ಈ ಆವೃತ್ತಿಯಲ್ಲಿ ಕೊಹ್ಲಿ 15 ಪಂದ್ಯಗಳಿಂದ 741 ರನ್​ ಬಾರಿಸಿ ಸದ್ಯ ಆರೆಂಜ್​ ಕ್ಯಾಪ್​ ಹೋಲ್ಡರ್​ ಆಗಿದ್ದಾರೆ. 38 ಸಿಕ್ಸರ್​ ಮತ್ತು 62 ಬೌಂಡರಿ ಬಾರಿಸಿದ್ದಾರೆ. ಎಮಿನೇಟರ್​ ಪಂದ್ಯದಲ್ಲಿಯೂ ಕೊಹ್ಲಿ ತಂಡದ ಗೆಲುವಿಗಾಗಿ ಮೈದಾನದ ಮೂಲೆ ಮೂಲೆಗೂ ಚಿರತೆ ವೇಗದಲ್ಲಿ ಓಡಿ ಬೌಂಡರಿ ತಡೆಯುವ ಕಾರ್ಯ ಮಾಡಿದ್ದರು. ಆದದೆ ಅದೃಷ್ಟ ನೆಟ್ಟಗಿರದ ಕಾರಣ ಅಂತಿಮವಾಗಿ ಸೋಲು ಕಾಣಬೇಕಾಯಿತು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಸಂಜುಗಿಂತ ಪಂತ್​ ಬೆಸ್ಟ್​ ಎಂದ ಯುವರಾಜ್

T20 World Cup 2024: ಸಂಜು ಸ್ಯಾಮ್ಸನ್‌ಗಿಂತ(sanju samson) ರಿಷಭ್​ ಪಂತ್(Rishabh Pant) ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಎಡಗೈ ಆಟಗಾರ, ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲುವ ಬೃಹತ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಹಿಂದೆಯೂ ಕೂಡ ಭಾರತಕ್ಕೆ ಸ್ಮರಣೀಯ ಇನಿಂಗ್ಸ್​ ಆಡಿ ಗೆಲುವು ತಂದುಕೊಟ್ಟಿದ್ದಾರೆ. ಟಿ20 ವಿಶ್ವಕಪ್​ನಲ್ಲಿಯೂ ಅವರು ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಯುವರಾಜ್​ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

T20 World Cup 2024
Koo

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರನ್ನು ಆಡಿದರೆ ಉತ್ತಮ ಎಂದು ಹಲವು ಮಾಜಿ ಆಟಗಾರರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್​ ಸಿಂಗ್(Yuvraj Singh) ಕೂಡ ಯಾರನ್ನು ಆಡಿಸಿದರೆ ಉತ್ತಮ ಎಂದು ಹೇಳಿದ್ದಾರೆ.​​

​ಐಸಿಸಿ​ ಸಂದರ್ಶವೊಂದರಲ್ಲಿ ಮಾತನಾಡಿದ ಯುವರಾಜ್​ ಸಿಂಗ್​, “ನಾನು ಸಂಜು ಸ್ಯಾಮ್ಸನ್‌ಗಿಂತ(sanju samson) ರಿಷಭ್​ ಪಂತ್(Rishabh Pant) ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಎಡಗೈ ಆಟಗಾರ, ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲುವ ಬೃಹತ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಹಿಂದೆಯೂ ಕೂಡ ಭಾರತಕ್ಕೆ ಸ್ಮರಣೀಯ ಇನಿಂಗ್ಸ್​ ಆಡಿ ಗೆಲುವು ತಂದುಕೊಟ್ಟಿದ್ದಾರೆ. ಟಿ20 ವಿಶ್ವಕಪ್​ನಲ್ಲಿಯೂ ಅವರು ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಹೇಳಿದರು.

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್​ ಪಂತ್​ ಅವರು 14 ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಈ ಬಾರಿಯ ಐಪಿಎಲ್​ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು. ಪಂತ್​ ದೀರ್ಘಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಕೂಡ ಅವರ ಪ್ರದರ್ಶನದಲ್ಲಿ ಯಾವುದೇ ವ್ಯತ್ಯಾಸ ಮಾತ್ರ ಕಂಡುಬಂದಿರಲಿಲ್ಲ. ಹಳೆಯ ಫಾರ್ಮ್​ನಂತೆ ಪ್ರದರ್ಶನ ತೋರಿದ್ದರು. ಹೀಗಾಗಿ ಯುವರಾಜ್​ ಕೂಡ ಪಂತ್​ರನ್ನು ಟಿ20ಯಲ್ಲಿ ಆಡಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ T20 World Cup 2024: ಇನ್ನೆರಡು ದಿನದಲ್ಲಿ ಮಿನಿ ವಿಶ್ವಕಪ್​ ಸಮರಕ್ಕೆ ರೋಹಿತ್​, ಕೊಹ್ಲಿ ಸೇರಿ ಮೊದಲ ಬ್ಯಾಚ್​ ನ್ಯೂಯಾರ್ಕ್​ಗೆ ಪ್ರಯಾಣ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

Continue Reading
Advertisement
Golden Star Ganesh Krishnam Pranaya Sakhi movie first song release on May 25 in Mysore
ಸಿನಿಮಾ49 seconds ago

Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

Prashant Kishor
ದೇಶ19 mins ago

Prashant Kishor: ಜೂನ್‌ 4ರಂದು ಪ್ರತಿಪಕ್ಷಗಳು ನೀರು ಕುಡಿಯಲಿವೆ; ಪ್ರಶಾಂತ್‌ ಕಿಶೋರ್‌ ಮಾತಿನ ಮರ್ಮವೇನು?

Virat Kohli
ಕ್ರೀಡೆ21 mins ago

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Karnataka rain
ಮಳೆ1 hour ago

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Shivasharane Hemaraddi Mallamma Jayanti celebration in Srisailam
ಯಾದಗಿರಿ1 hour ago

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

union minister Pralhad Joshi latest statement in bidar
ಕರ್ನಾಟಕ1 hour ago

Pralhad Joshi: ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರ ಮೌನ; ಪ್ರಲ್ಹಾದ ಜೋಶಿ ಆರೋಪ

Rave party 86 people including Hema and Ashi consumed drugs in the rave party Blood report positive
ಕ್ರೈಂ1 hour ago

Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Remedies For SadeSati
ಧಾರ್ಮಿಕ1 hour ago

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

Sharad Kelkar
ಸಿನಿಮಾ1 hour ago

Sharad Kelkar: ‘ಬಾಹುಬಲಿ’ಗೆ ಧ್ವನಿ ನೀಡಿದ್ದು ಮರೆಯಲಾಗದ ಅನುಭವ ಎಂದ ಶರದ್ ಕೇಳ್ಕರ್

Glenn Maxwell
ಪ್ರಮುಖ ಸುದ್ದಿ2 hours ago

Glenn Maxwell : ಮ್ಯಾಕ್ಸ್​​ವೆಲ್​ಗೆ ಕೊಟ್ಟ ಹಣ ವಾಪಸ್​ ಪಡೆಯಿರಿ; ಅಭಿಮಾನಿಗಳ ಒತ್ತಾಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ15 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌