T20 World Cup: ಕೋಚ್ ದ್ರಾವಿಡ್, ರೋಹಿತ್​​ ಜತೆ ಸಭೆ ನಡೆಸಿದ ಆಯ್ಕೆ ಸಮಿತಿ; ಪಾಂಡ್ಯಗೆ ಹೆಚ್ಚಿದ ಚಿಂತೆ ​ - Vistara News

ಕ್ರೀಡೆ

T20 World Cup: ಕೋಚ್ ದ್ರಾವಿಡ್, ರೋಹಿತ್​​ ಜತೆ ಸಭೆ ನಡೆಸಿದ ಆಯ್ಕೆ ಸಮಿತಿ; ಪಾಂಡ್ಯಗೆ ಹೆಚ್ಚಿದ ಚಿಂತೆ ​

T20 World Cup: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್​(T20 World Cup 2024) ಟೂರ್ನಿ ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ

VISTARANEWS.COM


on

T20 World Cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಏಪ್ರಿಲ್ ಕೊನೆಯ ವಾರದಲ್ಲಿ ಟಿ20 ವಿಶ್ವಕಪ್​ಗೆ(T20 World Cup) ಭಾರತ ತಂಡ ಪ್ರಕಟಗೊಳ್ಳಲಿದೆ ಎಂದು ಕೆಲ ದಿನಗಳ ಹಿಂದೆಯೇ ವರದಿಯಾಗಿತ್ತು. ಐಪಿಎಲ್​ನಲ್ಲಿ ಆಟಗಾರರು ತೋರುವ ಪ್ರದರ್ಶನದ ಆಧಾರದಲ್ಲಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಈಗಾಗಲೇ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್(Ajit Agarkar)​ ಹೇಳಿದ್ದರು. ಇದೀಗ ವಿಶ್ವಕಪ್​ಗೆ ಸಂಬಂಧಿಸಿದಂತೆ ಬಿಸಿಸಿಐ ಹಾರ್ದಿಕ್​ ಪಾಂಡ್ಯಗೆ(Hardik Pandya) ಷರತ್ತೊಂದನ್ನು ಹಾಕಿದ್ದು, ಅದರಲ್ಲಿ ಯಶಸ್ವಿಯಾದರೆ​​​ ಮಾತ್ರ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಮೂಲಗಳ ಪ್ರಕಾರ ಟಿ-20 ವಿಶ್ವಕಪ್​ಗೆ ತಂಡ ಆಯ್ಕೆ ಮಾಡುವ ಸಂಬಂಧ ಕೋಚ್​ ರಾಹುಲ್​ ದ್ರಾವಿಡ್​, ನಾಯಕ ರೋಹಿತ್​ ಶರ್ಮಾ(Rohit Sharma), ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ಇಂದು ರಹಸ್ಯ ಸಭೆ ಸೇರಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಹಾರ್ದಿಕ್​ ಪಾಂಡ್ಯ ಆಯ್ಕೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಹಾಲಿ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ​ ನಾಯಕನಾಗಿರುವ ಹಾರ್ದಿಕ್​ ಪಾಂಡ್ಯ ಅವರು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆಡಿದ 6 ಪಂದ್ಯಗಳಲ್ಲಿ 26.20ರ ಸರಾಸರಿಯಲ್ಲಿ ಕೇವಲ 131 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ ಅತ್ಯಂತ ಕಳಪೆ. ಓವರ್​ ಒಂದಕ್ಕೆ ಕನಿಷ್ಠ 20 ರನ್​ ಬಿಟ್ಟುಕೊಡುತ್ತಿದ್ದಾರೆ. ​ಪಾಂಡ್ಯ ಮುಂದಿನ ಐಪಿಎಲ್​ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಅವರನ್ನು ಟಿ-20 ವಿಶ್ವಕಪ್​ಗೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ IPL 2024: ಕೆಕೆಆರ್ ನಾಯಕ ಶ್ರೇಯಸ್​ ಅಯ್ಯರ್​ಗೆ ಬಿತ್ತು 12 ಲಕ್ಷ ದಂಡದ ಬರೆ

ಶಿವಂ ದುಬೆಗೆ ಅವಕಾಶ


ಹಾರ್ದಿಕ್​ ಪಾಂಡ್ಯ ಐಪಿಎಲ್​ನಲ್ಲಿ ವಿಫಲರಾಗಿ ಟಿ-20 ತಂಡದಲ್ಲಿ ಸ್ಥಾನ ಪಡೆಯದಿದ್ದರೆ, ಅವರ ಬದಲಿಗೆ ಆಲ್ರೌಂಡರ್​ ಶಿವಂ ದುಬೆ ಅವರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ದುಬೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಈ ಬಾರಿ ಬೌಲಿಂಗ್​ ನಡೆಸದೇ ಇರುವುದೊಂದೆ ಹಿನ್ನಡೆ. ಪಾಂಡ್ಯ ಅವರು ಕಳೆದ ವರ್ಷ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದಾಗಿ ಕನಿಷ್ಠ 4 ತಿಂಗಳು ಕ್ರಿಕೆಟ್​ನಿಂದ ವಿಶ್ರಾಂತಿ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾಗದಿದ್ದರು ಕೂಡ ಪಾಂಡ್ಯ ಐಪಿಎಲ್​ ಆಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್​(T20 World Cup 2024) ಟೂರ್ನಿ ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB: ಅಮೆರಿಕದ ಘಟಿಕೋತ್ಸವದಲ್ಲೂ ಆರ್​ಸಿಬಿಯದ್ದೇ ಹವಾ: ವಿಡಿಯೊ ವೈರಲ್​

RCB: ಆರ್​ಸಿಬಿಯ ಗೆಲುವಿಗೆ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್​ ಮಲ್ಯ(Vijay Mallya) ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದರು. “ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್​ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದರು.

VISTARANEWS.COM


on

RCB
Koo

ನ್ಯೂಯಾರ್ಕ್​: ಅಮೆರಿಕದಲ್ಲಿರುವ ಕರ್ನಾಟಕ ಮೂಲಕದ ಆರ್​ಸಿಬಿಯ(RCB) ಅಪಟ್ಟ ಅಭಿಮಾನಿಯೊಬ್ಬ(RCB fan) ತನ್ನ ಕಾಲೇಜಿನ ಘಟಿಕೋತ್ಸವ(ಕಾನ್ವೋಕೇಷನ್)(convocation) ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸುವಾಗ ಆರ್​ಸಿಬಿ ತಂಡದ ಜೆರ್ಸಿಯನ್ನು ಪ್ರದರ್ಶಸಿದ್ದಾನೆ. ಈ ವಿಡಿಯೊ ವೈರಲ್​ ಆಗಿದೆ.

ಯಾವುದೇ ಒಂದು ವಿಶ್ವವಿದ್ಯಾನಿಲಯದ ಅಥವಾ ಇತರ ಅಂಗೀಕೃತ ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಯನ ಘಟಕವೊಂದರ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಇಲ್ಲವೇ ಯಾವುದಾದರೊಂದು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಥವಾ ಪಾಂಡಿತ್ಯ ಸಾಧಿಸಿದ ಖ್ಯಾತ ವ್ಯಕ್ತಿಗಳಿಗೆ ಪದವಿ/ಪ್ರಶಸ್ತಿಯನ್ನು ನೀಡಲು ಏರ್ಪಡಿಸುವ ಸಾಂಪ್ರದಾಯಿಕ ಸಮಾರಂಭವನ್ನು ಘಟಿಕೋತ್ಸವ ಎಂದು ಕರೆಯಲಾಗುತ್ತದೆ. ಆರ್​ಸಿಬಿಯ ಈ ಅಭಿಮಾನಿ ಕೂಡ ಇತಂಹದ್ದೇ ಸಾಧನೆ ಮಾಡಿದ್ದ. ಆದರೆ ಆತನ ಸಾಧನೆಗಿಂತ ಆರ್​ಸಿಬಿ ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್​ ಪ್ರವೇಶಿಸಿದ್ದೇ ಆತನಿಗೆ ಎಲ್ಲಿಲ್ಲದ ಸಂತಸ ತಂದಿದೆ. ಕರಣ್​ ಎನ್ನುವಾತ ಈ ವಿಡಿಯೊವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾನೆ.

ಆರ್​ಸಿಬಿ ಅಭಿಮಾನಿಗಳು ತಮ್ಮ ಭಾವೋದ್ರಿಕ್ತ ಮತ್ತು ಅಚಲ ಬೆಂಬಲಕ್ಕೆ ಹೆಸರುವಾಸಿಯಾಗಿದ್ದಾರೆ. ಫ್ರ್ಯಾಂಚೈಸಿಯು ಭೌಗೋಳಿಕ ಗಡಿಗಳು ಮತ್ತು ಸಂಸ್ಕೃತಿಗಳನ್ನು ಮೀರಿದ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ. ಈ ಬಾರಿ ಆರಂಭಿಕ ಹಂತದಲ್ಲಿ ಸತತ ಸೋಲು ಕಂಡಿದ್ದ ಆರ್​ಸಿಬಿ ಆ ಬಳಿಕ ಪವಾಡ ಸೃಷ್ಟಿಸಿದಂತೆ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ ಪ್ರವೇಶಿಸಿತ್ತು. ಬುಧವಾರ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್​ ವಿರುದ್ಧ ಆಡಲಿದೆ. ಗೆದ್ದರೆ 2ನೇ ಕ್ವಾಲಿಫೈಯರ್​ ಪಂದ್ಯವನ್ನಾಡಲಿದೆ.

ಶನಿವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಗಿತ್ತು. ಈ ಪಂದ್ಯ ಫೈನಲ್​ ಪಂದ್ಯಕ್ಕೂ ಮಿಗಿಲಾದ ಕಾತುಕ ಸೃಷ್ಟಿಸಿತ್ತು.

ಇದನ್ನೂ ಓದಿ IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

ಆರ್​ಸಿಬಿ ಗೆಲುವಿನ ಬಳಿಕ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಸಂಭ್ರಮಾಚರಣೆ ಕಂಡು ಬಂದಿತ್ತು. ಪಂದ್ಯ ಮುಕ್ತಾಯವಾದಾಗ ತಡರಾತ್ರಿಯಾಗಿದ್ದರೂ ಅಭಿಮಾನಿಗಳ ಸಡಗರಕ್ಕೆ ಕೊರತೆ ಇರಲಿಲ್ಲ. ಪುಟ್ಟ ಮಕ್ಕಳು ಸೇರಿದಂತೆ ಆರ್‌ಸಿಬಿ ಫ್ಯಾನ್ಸ್‌ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದರು. ಮಕ್ಕಳಂತೂ ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗುತ್ತಿರುವುದು ಕಂಡು ಬಂದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಎದುರಿನ ರಸ್ತೆ ಬ್ಲಾಕ್ ಮಾಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಇದು ನಿಜವಾದ ಹೊಸ ಅಧ್ಯಾಯ ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿತ್ತು.

ಆರ್​ಸಿಬಿಯ ಗೆಲುವಿಗೆ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್​ ಮಲ್ಯ(Vijay Mallya) ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದರು. “ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್​ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದರು.

Continue Reading

ಕ್ರಿಕೆಟ್

T20 World Cup 2024: ಆಸ್ಟ್ರೇಲಿಯಾ ತಂಡ ಸೇರಿದ ಸ್ಫೋಟಕ ಬ್ಯಾಟರ್​ ಫ್ರೇಸರ್-ಮೆಕ್‌ಗುರ್ಕ್​

T20 World Cup 2024: ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

VISTARANEWS.COM


on

T20 World Cup 2024
Koo

ಸಿಡ್ನಿ: ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ(IPL 2024) ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಭಾರೀ ಸಂಚಲನ ಸೃಷ್ಟಿಸಿದ್ದ ಯುವ ಬ್ಯಾಟರ್​ ಜೇಕ್ ಫ್ರೇಸರ್-ಮೆಕ್‌ಗುರ್ಕ್(Jake Fraser-McGurk) ಅವರನ್ನು ಕೊನೆಗೂ ಕ್ರಿಕೆಟ್​ ಆಸ್ಟ್ರೇಲಿಯಾ ಮುಂದಿನ ತಿಂಗಳು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಪ್ರಯಾಣದ ಮೀಸಲು ಆಟಗಾರನಾಗಿ ಆಯ್ಕೆ ಮಾಡಿದೆ. ಇವರ ಜತೆಗೆ ಮ್ಯಾಟ್ ಶಾರ್ಟ್ ಕೂಡ ಅವಕಾಶ ಪಡೆದಿದ್ದಾರೆ. ಉಭಯ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ ವಿಚಾರವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದೆ. ಆಸ್ಟ್ರೇಲಿಯಾ(Australia T20 World Cup squad) ತನ್ನ ಮೊದಲ ಪಂದ್ಯವನ್ನು ಜೂನ್​ 3ರಂದು ಉಗಾಂಡ ವಿರುದ್ಧ ಆಡಲಿದೆ.

ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. 

ಡೆಲ್ಲಿ ತಂಡದ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಫ್ರೇಸರ್-ಮೆಕ್‌ಗುರ್ಕ್ ಪಾತ್ರರಾಗಿದ್ದರು. ಜತೆಗೆ ಈ ಆವೃತ್ತಿಯ ಐಪಿಎಲ್​ನಲ್ಲಿ ಅತಿ ಕಡಿಮೆ ಎಸೆತಗಳಿಂದ(15) ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ಬರೆದಿದ್ದರು. ಈ ಬಾರಿ ಒಟ್ಟು 9 ಐಪಿಎಲ್​ ಪಂದ್ಯಗಳನ್ನಾಡಿದ ಮೆಕ್‌ಗುರ್ಕ್ 330 ರನ್​ ಬಾರಿಸಿದ್ದಾರೆ. 84 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ T20 World Cup 2024: ಇಂಡೋ-ಪಾಕ್​ ಮಿನಿ ವಿಶ್ವಕಪ್​ ಸಮರ ನಡೆಯುವ ಸ್ಟೇಡಿಯಂನ ವಿಡಿಯೊ ವೈರಲ್​

ಲುಂಗಿ ಎನ್‌ಗಿಡಿ ಬದಲಿಗೆ ಆಲ್​ರೌಂಡರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್(Jake Fraser-McGurk) ಅವರನ್ನು ಡೆಲ್ಲಿ ತಂಡ ಬದಲಿ ಆಟಗಾರನಾಗಿ ಮೂಲಬೆಲೆ 50 ಲಕ್ಷ ರೂ.ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಮೆಕ್‌ಗುರ್ಕ್ ಲಿಸ್ಟ್ ಎ ಪಂದ್ಯದಲ್ಲಿ ಕೇವಲ 29 ಎಸೆತದಲ್ಲಿ ಶತಕ ಬಾರಿಸಿ ಅತ್ಯಂತ ವೇಗದ ಶತಕದ ವಿಶ್ವದಾಖಲೆ ಬರೆದಿದ್ದರು. ಈ ಬಾರಿಯ ಐಪಿಎಲ್​ನಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪ ತೋರಿಸಿದ್ದರು. ಮುಂದಿನ ಬಾರಿ ಇವರಿಗೆ ಹರಾಜಿನಲ್ಲಿ ದುಬಾರಿ ಬೆಲೆ ಸಿಗುವ ಸಾಧ್ಯತೆ ಇದೆ.

ಮಿಚೆಲ್​ ಮಾರ್ಷ್​ ತಂಡದ ನಾಯಕನಾಗಿದ್ದಾರೆ.

ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಡೇವಿಡ್ ವಾರ್ನರ್, ಟಿಮ್‌ ಡೇವಿಡ್ ಅವರನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ಗ್ಲೆನ್​ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ತಂಡದ ಸ್ಟಾರ್​ ಆಲ್​ರೌಂಡರ್​ಗಳಾಗಿದ್ದಾರೆ. ಸ್ಪಿನ್ಸ್‌ ಬೌಲರ್​ಗಳಾಗಿ ಆ್ಯಡಂ ಝಂಪಾ ಮತ್ತು ಆ್ಯಶ್ಟನ್​ ಅಗರ್ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಆ್ಯಶ್ಟನ್​ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ. ಪ್ರಯಾಣದ ಮೀಸಲು ಆಟಗಾರರು: ಮ್ಯಾಟ್ ಶಾರ್ಟ್, ಜೇಕ್ ಫ್ರೇಸರ್-ಮೆಕ್‌ಗುರ್ಕ್

Continue Reading

ಕ್ರೀಡೆ

Rohit Sharma: ಖಾಸಗಿತನಕ್ಕೆ ಧಕ್ಕೆ ಆರೋಪ ಮಾಡಿದ ರೋಹಿತ್​ಗೆ ಸ್ಪಷ್ಟನೆ ನೀಡಿದ ಸ್ಟಾರ್‌ಸ್ಪೋರ್ಟ್ಸ್

Rohit Sharma: ರೋಹಿತ್​ ಶರ್ಮ(Rohit Sharma) ಅವರ ಈ ಆರೋಪಕ್ಕೆ ಇದೀಗ ಸ್ಟಾರ್‌ಸ್ಪೋರ್ಟ್ಸ್ ಸ್ಪಷ್ಟನೆ ನೀಡಿದ್ದು, ರೋಹಿತ್‌ ಮಾತನಾಡಿರುವ ಯಾವುದೇ ಖಾಸಗಿ ಆಡಿಯೋಗಳನ್ನು ಪ್ರಸಾರ ಮಾಡಿಲ್ಲ ಎಂದು ಹೇಳಿದೆ.

VISTARANEWS.COM


on

Rohit Sharma
Koo

ಮುಂಬಯಿ: ಐಪಿಎಲ್‌(IPL 2024) ಪ್ರಸಾರಕರಿಂದ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಟ್ವೀಟ್​ ಮೂಲಕ ಸ್ಟಾರ್‌ಸ್ಪೋರ್ಟ್ಸ್(Star Sports) ವಿರುದ್ಧ ಗಂಭೀರ ಆರೋಪ ಮಾಡಿದ್ದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರ ಈ ಆರೋಪಕ್ಕೆ ಇದೀಗ ಸ್ಟಾರ್‌ಸ್ಪೋರ್ಟ್ಸ್ ಸ್ಪಷ್ಟನೆ ನೀಡಿದ್ದು, ರೋಹಿತ್‌ ಮಾತನಾಡಿರುವ ಯಾವುದೇ ಖಾಸಗಿ ಆಡಿಯೋಗಳನ್ನು ಪ್ರಸಾರ ಮಾಡಿಲ್ಲ ಎಂದು ಹೇಳಿದೆ.

ಕೋಲ್ಕತಾ ನೈಟ್​ ರೈಡರ್ಸ್​ ತಂಡದ ಸಹಾಯಕ ಕೋಚ್‌ ಜತೆ ರೋಹಿತ್‌ ಮಾತನಾಡುತ್ತ ಕುಳಿತ್ತಿದ್ದ ವೀಡಿಯೋವನ್ನು ಪ್ರಸಾರ ಮಾಡಲಾಗಿತ್ತು. ಇದಾದ ಬಳಿಕ ರೋಹಿತ್​ ಮುಂಬೈಯಲ್ಲಿ ನಡೆದಿದ್ದ ಐಪಿಎಲ್​​ ಪಂದ್ಯದ ವೇಳೆ ಧವಳ್ ಕುಲಕರ್ಣಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಇದನ್ನು ರೆಕಾರ್ಡ್​ ಮಾಡುತ್ತಿರುವಾಗ ಕ್ಯಾಮೆರಾಮನ್​ಗೆ ಆಡಿಯೊ ಆಫ್​ ಮಾಡಿ ಎಂದು ಕೋರಿಕೊಂಡಿದ್ದರು.

ಇದನ್ನೂ ಓದಿ IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

ಇದೇ ವಿಚಾರವಾಗಿ ರೋಹಿತ್​ ಟ್ವೀಟ್​ ಮಾಡಿ ‘ತನ್ನ ವಿನಂತಿಯ ಹೊರತಾಗಿಯೂ, ಸ್ಟಾರ್ ಸ್ಪೋರ್ಟ್ಸ್ ನಾನು ತಂಡದ ಸಹ ಆಟಗಾರರು ಮತ್ತು ಸಹೋದ್ಯೋಗಿಗಳೊಂದಿಗೆ ಆಡಿದ ವೈಯಕ್ತಿಕ ಮಾತುಕತೆಗಳ ಆಡಿಯೊ ಮತ್ತು ವಿಡಿಯೊ ತುಣುಕನ್ನು ಹಂಚಿಕೊಳ್ಳುವುದನ್ನು ಸ್ಟಾರ್ ಸ್ಪೋರ್ಟ್ಸ್ ಮುಂದುವರೆಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್​ ಹುಟ್ಟಿಸುವ ಸಲುವಾಗಿ ಪ್ರಸಾರಕರು ಈ ರೀತಿ ಕ್ರಿಕೆಟಿಗರ ಗೌಪ್ಯತೆಗೆ ಅಡ್ಡಿಪಡಿಸುವುದು ಸರಿಯಲ್ಲ. ಸ್ವಲ್ಪವಾದರೂ ಸಾಮಾನ್ಯ ಜ್ಞಾನ ಇರಬೇಕು” ಎಂದು ಟ್ವೀಟ್​ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.

ಕ್ರಿಕೆಟಿಗರ ಜೀವನವು ಎಷ್ಟು ಗೊಂದಲವಾಗಿದೆ ಎಂದರೆ, ಈಗ ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ, ತರಬೇತಿ ಅಥವಾ ಪಂದ್ಯದ ದಿನಗಳಲ್ಲಿ ಗೌಪ್ಯವಾಗಿ ಮಾತನಾಡು ಕೂಡ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ನಡೆಸುವ ಪ್ರತಿಯೊಂದು ಸಂಭಾಷಣೆಯನ್ನು ಕೂಡ ಕ್ಯಾಮೆರಾಗಳು ರೆಕಾರ್ಡ್ ಮಾಡುತ್ತಿವೆ. ಇದು ಒಳ್ಳೆಯ ವಾತಾವರಣವಲ್ಲ ಎಂದು ರೋಹಿತ್​ ಬೇಸರ ವ್ಯಕ್ತಪಡಿಸಿದ್ದರು.

ಈ ಕುರಿತು ಸ್ಪಷ್ಟನೆ ನೀಡಿದ ಸ್ಟಾರ್‌ಸ್ಪೋರ್ಟ್ಸ್, ‘ಇದರಲ್ಲಿ ಯಾವುದೇ ಧ್ವನಿ ಇರಲಿಲ್ಲ. ಅಲ್ಲದೇ ನಮಗೆ ಅನುಮತಿ ನೀಡಿದ ಜಾಗದಲ್ಲೇ ಚಿತ್ರೀಕರಣ ಮಾಡಲಾಗಿತ್ತು. ಚಿತ್ರೀಕರಣದ ವೇಳೆಯಲ್ಲೂ ಧ್ವನಿ ಮುದ್ರಿಸಲಾಗಿರಲಿಲ್ಲ’ ಎಂದು ಹೇಳಿದೆ.

ನಾಯಕತ್ವದ ಕರ್ತವ್ಯಗಳಿಂದ ಮುಕ್ತರಾದ ನಂತರ ರೋಹಿತ್ ಈ ಬಾರಿ ದೊಡ್ಡ ಸ್ಕೋರ್ ಮಾಡುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಗಳಲ್ಲೆ ಹುಸಿಯಾಗಿತ್ತು. ರೋಹಿತ್​ ಈ ಬಾರಿ 1 ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಬಹುತೇಕ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದರು. ಐಪಿಎಲ್​​ ವೇದಿಕೆಯಲ್ಲಿ ಮಿಂಚಲು ಸಾಧ್ಯವಾಗದಿದ್ದರೂ, ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ರೋಹಿತ್ ದೊಡ್ಡ ಮೊತ್ತವನ್ನು ಗಳಿಸಲು ಎದುರು ನೋಡುತ್ತಿದ್ದಾರೆ.

ಟೀಮ್​ ಇಂಡಿಯಾದ(team india) ಮೊದಲ ಬ್ಯಾಚ್​ ಮೇ 25ರಂದು ನ್ಯೂಯಾರ್ಕ್(New York)​ಗೆ ಪ್ರಯಾಣಿಸಲಿದೆ. ಈ ಬ್ಯಾಚ್​ನಲ್ಲಿ ನಾಯಕ ರೋಹಿತ್​ ಶರ್ಮ(Rohit Sharma), ಉಪನಾಯಕ ಹಾರ್ದಿಕ್​ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​ ಸೇರಿ ಐಪಿಎಲ್​ ಪ್ಲೇ ಆಫ್​ನಿಂದ ಹೊರಬಿದ್ದ ತಂಡದ ಆಟಗಾರರು ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ಮೇ 26 ಐಪಿಎಲ್​ ಫೈನಲ್​ ಬಳಿಕ ವಿಮಾನ ಏರಲಿದ್ದಾರೆ. ಒಟ್ಟು 2 ಬ್ಯಾಚ್​ಗಳಾಗಿ ಭಾರತೀಯ ಆಟಗಾರರು ಪ್ರಯಾಣಿಸಲಿದ್ದಾರೆ.

Continue Reading

ಕ್ರೀಡೆ

KKR vs SRH: ಇಂದು ಮೊದಲ ಕ್ವಾಲಿಫೈಯರ್‌ ಪಂದ್ಯ: ಅಯ್ಯರ್​-ಕಮಿನ್ಸ್​ ಪಡೆಗಳ ಫೈನಲ್‌ ರೇಸ್‌

KKR vs SRH: ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಟ್ರಾವಿಸ್​ ಹೆಡ್​ ಇದೇ ಸ್ಟೇಡಿಯಂನಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕದ ಆಟವಾಡುವ ಮೂಲಕ ಭಾರತದ ಗೆಲುವನ್ನು ಕಸಿದಿದ್ದರು. ಹೀಗಾಗಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್​ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ

VISTARANEWS.COM


on

KKR vs SRH
Koo

ಅಹಮದಾಬಾದ್​: 17ನೇ ಆವೃತ್ತಿಯ ಐಪಿಎಲ್​ನ(IPL 2024) ಮೊದಲ ಕ್ವಾಲಿಫೈಯರ್(KKR vs SRH) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯದಲ್ಲಿ ಕೆಕೆಆರ್​(Kolkata Knight Riders) ಮತ್ತು ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡಗಳು ಕಾದಾಟ ನಡೆಸಲಿದೆ. ಇತ್ತಂಡಗಳ ಈ ಹೋರಾಟಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ. ಸೋಮವಾರ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳವು (ATS) ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರನ್ನು (ISIS Terrorists) ಬಂಧಿಸಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇತ್ತಂಡಗಳಲ್ಲಿ ಕೆಕೆಆರ್​ ಲೀಗ್‌ ಹಂತದ ಅಗ್ರಸ್ಥಾನಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ, ಲೀಗ್‌ ಹಂತದಲ್ಲಿ ಎದುರಾದ ಒಂದು ಪಂದ್ಯಗಳಲ್ಲಿ ಹೈದರಾಬಾದ್​ಗೆ 4 ರನ್​ ಅಂತರದ ಸೋಲುಣಿಸಿದ ಹಿರಿಮೆಯನ್ನೂ ಹೊಂದಿದೆ. ಜತೆಗೆ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್​ 17 ಪಂದ್ಯ ಗೆದ್ದಿದೆ. ಹೈದರಾಬಾದ್​ ಗೆದ್ದಿರುವುದು ಕೇವಲ 9 ಪಂದ್ಯ ಮಾತ್ರ. ಈ ಲೆಕ್ಕಾಚಾರದಲ್ಲಿ ಕೆಕೆಆರ್​ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.

ಹೆಡ್​-ಅಭಿಷೇಕ್​ ಮೇಲೆ ಭಾರೀ ನಿರೀಕ್ಷೆ


ಆಸ್ಟ್ರೇಲಿಯಾದ ಎಡಗೈ ಬ್ಯಾಟರ್​ ಟ್ರಾವಿಸ್​ ಹೆಡ್​ ಇದೇ ಸ್ಟೇಡಿಯಂನಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶತಕದ ಆಟವಾಡುವ ಮೂಲಕ ಭಾರತದ ಗೆಲುವನ್ನು ಕಸಿದಿದ್ದರು. ಹೀಗಾಗಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್​ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಜತೆಗೆ 25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ ಬ್ಯಾಟಿಂಗ್​ ಮೇಲು ತಂಡ ಹೆಚ್ಚಿನ ನಂಬಿಕೆ ಇರಿಸಿದೆ.

ಈ ಆವೃತ್ತಿಯ ಐಪಿಎಲ್​ನಲ್ಲಿ ಹೆಡ್ ಮತ್ತು ಅಭಿಷೇಕ್​ ​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರುವುದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಈ ಜೋಡಿ ಲೀಗ್​ನಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 5 ಓವರ್​ನಲ್ಲಿಯೇ 100ರ ಗಡಿ ದಾಟಿದ ದಾಖಲೆಯನ್ನು ಕೂಡ ಹೊಂದಿದ್ದಾರೆ. ಅಭಿಷೇಕ್​ ಶರ್ಮ ಈ ಬಾರಿಯ ಕೂಟದಲ್ಲಿ 41 ಸಿಕ್ಸರ್​ ಬಾರಿಸಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಕೆಕೆಆರ್​ ಕೂಡ ಸಮರ್ಥ ತಂಡ


ಗೌತಮ್​ ಗಂಭಿರ್​ ಅವರ ಮಾರ್ಗದರ್ಶನ ಮತ್ತು ಆಟಗಾರರ ಸಂಘಟಿತ ಪ್ರದರ್ಶನ ಕೆಕೆಆರ್​ ಪಾಲಿನ ಬಲ. ಅದರಲ್ಲೂ ಆಲ್​ರೌಂಡರ್​ ಸುನೀಲ್​ ನರೈನ್​ ಅವರಂತು ಈ ಬಾರಿ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ತಂಡಕ್ಕೆ ಹಿನ್ನಡೆಯಾಗಿರುವುದೆಂದರೆ ಇಂಗ್ಲೆಂಡ್​ನ ಫಿಲ್​ ಸಾಲ್ಟ್ ಪಾಕ್​ ವಿರುದ್ಧದ ಟಿ20 ಸರಣಿಯ ಭಾಗವಾಗಿ ತವರಿಗೆ ಮರಳಿದ್ದು. ಹೀಗಾಗಿ ಅವರ ತಂಡ ಇವರ ಸೇವೆ ಕಳೆದುಕೊಂಡಿದೆ. ಇವರ ಸ್ಥಾನದಲ್ಲಿ ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಈ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲ ಪಂದ್ಯವನ್ನಾಡುತ್ತಿರುವ ಕಾರಣ ಅವರ ಫಾರ್ಮ್​ ಹೇಗಿರಲಿದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗಿದೆ.

ಇದನ್ನೂ ಓದಿ KKR vs SRH: ಕೆಕೆಆರ್​-ಹೈದರಾಬಾದ್​ ಕ್ವಾಲಿಫೈಯರ್​ ಪಂದ್ಯದ ಹವಾಮಾನ ವರದಿ ಹೇಗಿದೆ?

ಆ್ಯಂಡ್ರೆ ರೆಸಲ್​ ಈ ಬಾರಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಯುವ ಆಟಗಾರ ಆಂಗ್ಕ್ರಿಶ್ ರಘುವಂಶಿ, ಗಾಯದಿಂದ ಚೇತರಿಕೆ ಕಂಡು ಕಮ್​ಬ್ಯಾಕ್​ ಮಾಡಿರುವ ನಿತೇಶ್​ ರಾಣಾ, ವೆಂಕಟೇಶ್​ ಅಯ್ಯರ್​ ಮತ್ತು ನಾಯಕ ಶ್ರೇಯಸ್​ ಅಯ್ಯರ್​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನೆರವು ನೀಡಲಿದ್ದಾರೆ. ರಿಂಕು ಸಿಂಗ್​ ಕಳೆದ ಆವೃತ್ತಿಯಲ್ಲಿ ತೋರಿದ ಪ್ರದರ್ಶನ ಇದುವರೆಗೂ ತೋರಿಲ್ಲ. ಹೀಗಾಗಿ ಈ ಮಹತ್ವದ ಪಂದ್ಯದಲ್ಲಿ ಅವರು ಅಬ್ಬರಿಸುವ ಅನಿವಾರ್ಯತೆ ಇದೆ. 24 ಕೋಟಿ ವೀರ ಮಿಚೆಲ್​ ಸ್ಟಾರ್ಕ್​ ಈ ಪಂದ್ಯದಲ್ಲಾದರೂ ತಾವು ಪಡೆದ ಈ ಮೊತ್ತಕ್ಕೆ ನ್ಯಾಯ ಒದಗಿಸಲೇ ಬೇಕು. ದುಬಾರಿ ಮೊತ್ತ ಪಡೆದರೂ ಕೂಡ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ.

Continue Reading
Advertisement
Viral video
ವೈರಲ್ ನ್ಯೂಸ್2 mins ago

Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Actor Upendra Ajaneesh Visited Hangary To Record Music
ಸ್ಯಾಂಡಲ್ ವುಡ್23 mins ago

Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

RCB
ಕ್ರೀಡೆ27 mins ago

RCB: ಅಮೆರಿಕದ ಘಟಿಕೋತ್ಸವದಲ್ಲೂ ಆರ್​ಸಿಬಿಯದ್ದೇ ಹವಾ: ವಿಡಿಯೊ ವೈರಲ್​

Dog Attack in raichur
ರಾಯಚೂರು31 mins ago

Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

jain monk samadhi sena chikkodi sallekhana
ಚಿಕ್ಕೋಡಿ38 mins ago

Sallekhana: ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಸೇನ ಮುನಿ ಜಿನೈಕ್ಯ

Viral Video
ವೈರಲ್ ನ್ಯೂಸ್45 mins ago

Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Prashant Kishor
Lok Sabha Election 202451 mins ago

Prashant Kishor: ಈ ಬಾರಿ ಮೋದಿಗೆ ಹಿನ್ನಡೆ ಆಗುತ್ತಾ? ಪ್ರಶಾಂತ್ ಕಿಶೋರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Cannes 2024 Sonam Kapoor dubs this outfit the best at Cannes this year
ಬಾಲಿವುಡ್1 hour ago

Cannes 2024: ಇವರ ಫ್ಯಾಷನ್‌ ಮುಂದೆ ಐಶ್ವರ್ಯಾ ರೈ, ಕಿಯಾರಾನೂ ಇಲ್ಲ! ಸೋನಮ್ ಹೊಗಳಿದ್ದು ಯಾರನ್ನ?

cisf soldier death raichur
ಕ್ರೈಂ1 hour ago

Soldier death: ಬಂದೂಕು ಆಕಸ್ಮಿಕವಾಗಿ ಸಿಡಿದು CISF ಯೋಧ ಸಾವು

Viral Video
ವೈರಲ್ ನ್ಯೂಸ್2 hours ago

Viral Video: ಈಜುಕೊಳದಲ್ಲಿ ಭೀಕರ ದುರಂತ; ಸ್ಟಂಟ್‌ ಮಾಡಲು ಹೋಗಿ ಯುವಕನ ಪ್ರಾಣಕ್ಕೆ ಕುತ್ತು-ವಿಡಿಯೋ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌