Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌! - Vistara News

ಸ್ಯಾಂಡಲ್ ವುಡ್

Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

Actor Upendra: ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.

VISTARANEWS.COM


on

Actor Upendra Ajaneesh Visited Hangary To Record Music
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಅವರ ‘ಯುಐ’ ಸಿನಿಮಾ ಚಿತ್ರೀಕರಣ ಮುಗಿದು ಇದೀಗ ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ವರ್ಷವಷ್ಟೇ ‘UI’ ಸಿನಿಮಾವನ್ನು ಅನೌನ್ಸ್ ಮಾಡುವುದಾಗಿ ಘೋಷಿಸಿದ್ದರು. ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್‌ ಸಿನಿಮಾದಾಗಿದೆ. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಇದೀಗ ನಿರ್ದೇಶಕ ಉಪೇಂದ್ರ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಯೂರೋಪಿಯಾ ದೇಶವಾದ ಹಂಗೆರಿಗೆ ಹೋಗಿದ್ದಾರೆ.ಅಜನೀಶ್ ಲೋಕನಾಥ್ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡಲು ಹಂಗೆರಿಯನ್ನು ಆರಿಸಿಕೊಂಡಿದ್ದಾರೆ.

ತಮ್ಮ ಸಿನಿಮಾದ ಹಾಡುಗಳಿಗೆ ಉಪೇಂದ್ರ ಅವರೇ ಸಾಹಿತ್ಯವನ್ನು ಬರೆಯುತ್ತಾರೆ. ಹಾಗಾಗಿ ಸಂಗೀತ ನಿರ್ದೇಶಕರ ಜೊತೆಗೆ ಉಪ್ಪಿ ಸಹ ಹಂಗೆರಿಗೆ ತೆರಳಿದ್ದಾರೆ. ಅಲ್ಲದೆ ಅಲ್ಲಿ ಸಿನಿಮಾದ ಇನ್ನಿತರೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಸಹ ಮಾಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ‘ಎ’ ಸಂಗೀತದೊಂದಿಗೆ ಆರಂಭವಾಗುವ ವಿಡಿಯೊನಲ್ಲಿ ಉಪ್ಪಿ ಹಾಗೂ ಅಜನೀಶ್ ಲೋಕನಾಥ್ ಹಂಗೆರಿಯ ನಗರವೊಂದರಲ್ಲಿ ನಿಂತು ಚರ್ಚೆ ಮಾಡುತ್ತಿರುವ ದೃಶ್ಯಗಳಿವೆ.

ಇದನ್ನೂ ಓದಿ: Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್‌ ಹಾಕಿ, ಮೈಕ್‌ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ.

ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.

ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಎಡಿಟಿಂಗ್ ಹಂತದಲ್ಲಿದ್ದು, ಮುಂದಿನ ತಿಂಗಳಿಂದ ಪ್ರಚಾರ ಶುರು ಮಾಡುವ ಸಾಧ್ಯತೆಯಿದೆ.ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ!

Actor Darshan: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

VISTARANEWS.COM


on

Actor Darshan of many acquaintance unknown of darshan
Koo

ಬೆಂಗಳೂರು: ನಟ ದರ್ಶನ್‌ (Actor Darshan) ಟೀಮ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Murder Case) ಮೊಬೈಲ್‌ಗಾಗಿ (mobile phone) ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾಗಿ ಹತ್ತು ದಿನ ಕಳೆಯುತ್ತಿದ್ದರೂ ಮೊಬೈಲ್ ಪತ್ತೆಯಾಗಿಲ್ಲ. ಇನ್ನು ಕೊಲೆ ಕೇಸ್‌ಗೆ ಸಂಬಂಧಪಟ್ಟಂತೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭಾಗಿಯಾದವರ ಸಂಖ್ಯೆ 19 ಮಂದಿ. 19 ಮಂದಿಯಲ್ಲಿ ಹಲವರಿಗೆ ದರ್ಶನ್‌ ಅವರ ನೇರ ಪರಿಚಯವೇ ಇಲ್ಲ ಎಂದು ತಿಳಿದು ಬಂದಿದೆ.

ಹಲವರು ದರ್ಶನ್‌ ಅವರನ್ನು ಭೇಟಿಯಾಗಿದ್ದೇ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಎನ್ನಲಾಗಿದೆ. ದರ್ಶನ್‌ಗಾಗಿ ಕೃತ್ಯ ಎಸಗಿದವರಲ್ಲಿ ಕೆಲವರು ದರ್ಶನ್‌ ಅವರನ್ನು ಮುಖಾಮುಖಿ ನೋಡಿದ್ದೇ ಪೊಲೀಸ್ ಸ್ಟೇಷನ್ ನಲ್ಲಿ ಎನ್ನಲಾಗಿದೆ. ಪ್ರಕರಣದಲ್ಲಿ ಪವಿತ್ರಾಗೌಡ, ಪವಿತ್ರಾಗೌಡ ಮ್ಯಾನೇಜರ್ ಪವನ್‌, ಸ್ಟೋನಿಬ್ರೂಕ್ಸ್ ಮಾಲೀಕ ವಿನಯ್, ದರ್ಶನ್ ಮ್ಯಾನೇಜರ್ ನಾಗರಾಜ್, ಸ್ಕಾರ್ಪಿಯೋ ಕಾರು ಮಾಲೀಕ ಪುನೀತ್, ವಿನಯ್,ದೀಪಕ್, ಪ್ರದೋಶ್, ಚಿತ್ರದುರ್ಗದ ರಾಘವೇಂದ್ರ, ಮಂಡ್ಯದ ನಂದೀಶ್ ಮಾತ್ರ ದರ್ಶನ್‌ಗೆ ನೇರ ಪರಿಚಯ ಇದ್ದರಂತೆ. ರಾಘವೇಂದ್ರ ಜತೆ ಕಿಡ್ನಾಪ್ ಮಾಡಿದ್ದ ಅನುಕುಮಾರ್, ಈಟಿಯೋಸ್ ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ಇವರುಗಳು ದರ್ಶನ್ ಅವರನ್ನು ಕಂಡಿದ್ದೆ ಪೊಲೀಸ್ ಸ್ಟೇಷನ್‌ನಲ್ಲಿ ಎಂದು ತಿಳಿದು ಬಂದಿದೆ.

ದರ್ಶನ್‌ಗಾಗಿ ರೇಣುಕಾಸ್ವಾಮಿ ಮೃತ ದೇಹ ಬಿಸಾಡಿದ್ದ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್
ದರ್ಶನ್‌ ಅವರನ್ನು ಮೊದಲು ಭೇಟಿಯಾಗಿದ್ದು ಕೊಲೆಯಾದ ಮಾರನೇ ದಿನ ಅಂದರೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಎನ್ನಲಾಗಿದೆ. ದರ್ಶನ್ ತಂಗಿದ್ದ ಮೈಸೂರಿನ ಖಾಸಗಿ ಹೋಟೆಲ್‌ಗೆ ಕೇಶವ್, ಕಾರ್ತಿಕ್, ನಿಖಿಲ್ ರನ್ನು ಕರೆದೊಯ್ದು ದೀಪಕ್ ಭೇಟಿ ಮಾಡಿಸಿದ್ದ . ದೀಪಕ್ ಸೂಚನೆಯಂತೆ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ರು. ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾಗಿ ಸರೆಂಡರ್ ಆಗಿದ್ದರು ಕೇಶವ್, ಕಾರ್ತಿಕ್‌, ನಿಖಿಲ್‌ನಾಯಕ್.

ಇದನ್ನೂ ಓದಿ: Actor Darshan: ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್‌ ಹೋಯಿತೆಲ್ಲಿ?

ಮೊಬೈಲ್ ಪತ್ತೆಯಾಗಿಲ್ಲ

ಕಳೆದ ಹತ್ತು ದಿನಗಳಿಂದ ಹುಡುಕಾಡಿದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ರೇಣುಕಾಸ್ವಾಮಿ ಮೊಬೈಲ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಅಶ್ಲೀಲ ಕಮೆಂಟ್ ಸಂಬಂಧಪಟ್ಟಂತೆ ಇದರಿಂದ ಸಾಕ್ಷಿಗಳನ್ನು ರಿಟ್ರೀವ್‌ ಮಾಡಬೇಕಾಗಿದೆ. ಆರೋಪಿಗಳು ರೇಣುಕಾಸ್ವಾಮಿ ಮೊಬೈಲ್‌ನಲ್ಲೇ ಕ್ಷಮಾಪಣಾ ವಿಡಿಯೋ ಮಾಡಿಸಿದ್ದರು. ಆರ್‌ಆರ್ ನಗರ ಪಟ್ಟಣಗೆರೆ ಶೆಡ್, ಕಿಡ್ನಾಪ್ ಮಾಡಿದ ರವಿಯ ಈಟಿಯೋಸ್ ಕಾರು ಸೇರಿ ಹಲವು ಕಡೆ ಹುಡುಕಿದರೂ ಮೊಬೈಲ್ ಪತ್ತೆಯಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.

ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಷ್ಟಾದರೂ ಪಟ್ಟು ಬಿಡದ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Actor Darshan: ಚಿತ್ರರಂಗದಿಂದ ಒಬ್ಬರನ್ನು ಬ್ಯಾನ್ ಮಾಡುವುದಕ್ಕಿಂತ ನ್ಯಾಯ ಮುಖ್ಯ. ಫಿಲ್ಮ್‌ ಚೇಂಬರ್ ಇರುವುದು ನಿರ್ಮಾಪಕ, ಕಲಾವಿದರಿಗೆ ನ್ಯಾಯ ಕೊಡಿಸಲು. ಹಾಗೆಯೇ ರೇಣುಕಾಸ್ವಾಮಿ ಸಾವಿಗೂ ನ್ಯಾಯ ಸಿಗಬೇಕು ಎಂದು ನಟ ಕಿಚ್ಚ ಸುದೀಪ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಬಂಧನವಾಗಿರುವ ಬಗ್ಗೆ ನಟ ಕಿಚ್ಚ ಸುದೀಪ್‌ (Kiccha Sudeep) ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕೊಲೆ ಕೇಸ್‌ನಲ್ಲಿ ಬಂಧನವಾಗಿರುವ ದರ್ಶನ್‌ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬ್ಯಾನ್ ಅನ್ನೋದಕ್ಕಿಂತ ನ್ಯಾಯ ಮುಖ್ಯ. ಫಿಲ್ಮ್‌ ಚೇಂಬರ್ ಇರುವುದು ನಿರ್ಮಾಪಕ, ಕಲಾವಿದರಿಗೆ ನ್ಯಾಯ ಕೊಡಿಸಲು. ರೇಣುಕಾಸ್ವಾಮಿ ಸಾವಿಗೂ ನ್ಯಾಯ ಬೇಕು, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.

ದರ್ಶನ್‌ ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ನೀವು ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರಿ ಅಷ್ಟು ಮಾತ್ರ ನನಗೆ ಗೊತ್ತು. ಮಾಧ್ಯಮ, ಪೊಲೀಸ್ ಸಿಬ್ಬಂದಿ ಪ್ರಯತ್ನದಿಂದ ಸತ್ಯಾಂಶಗಳು ಬೆಳಕಿಗೆ ಬಂದಿವೆ. ಸಿಎಂ ಸಿದ್ದರಾಮಯ್ಯ ಹಠ ಹಿಡಿದು ಕುಳಿತ ಮೇಲೆ ಈ ಕೇಸ್ ಎಫೆಕ್ಟ್ ಗೊತಾಗ್ತಿದೆ. ಆ ಕುಟುಂಬದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿಗೆ ನ್ಯಾಯ ಬೇಕು. ನ್ಯಾಯದ ಮೇಲೆ ನಂಬಿಕೆ ಹುಟ್ಟಬೇಕೆಂದರೆ ನ್ಯಾಯ ಸಿಗಬೇಕು. ಚಿತ್ರರಂಗಕ್ಕೂ ನ್ಯಾಯ ಸಿಗಬೇಕು ತಿಳಿಸಿದರು.

ದರ್ಶನ್ ಬ್ಯಾನ್ ಕುರಿತು ಮಾತನಾಡಿ, ನ್ಯಾಯ ಬೇರೆ, ಫ್ರೆಂಡ್‌ಶಿಪ್‌ ಬೇರೆ. ಚಿತ್ರರಂಗದ ಮೇಲೆ ಕಪ್ಪು ಚುಕ್ಕೆ ಬರುವುದು ನಮಗೂ ಇಷ್ಟವಿಲ್ಲ. ಯಾರೋ ಒಬ್ಬರಿಂದ ಚಿತ್ರರಂಗ ಹಾಳಾಗಬಾರದು. ನಾವು ಯಾರೂ ಕಾನೂನು ಅಲ್ಲ. ಈ ಕೇಸ್‌ನಿಂದ ಹೊರಬಂದರೆ ಬ್ಯಾನ್ ಅನ್ನೋದು ಬರೋದಿಲ್ಲ. ಬ್ಯಾನ್ ಅನ್ನೋದಕ್ಕಿಂತ ನ್ಯಾಯ ಮುಖ್ಯ. ಚೇಂಬರ್ ಇರುವುದು ನಿರ್ಮಾಪಕ, ಕಲಾವಿದರಿಗೆ ನ್ಯಾಯ ಕೊಡಿಸಲು. ಬ್ಯಾನ್ ಅನ್ನೋ ಪದ ಕಟ್ಟಬೇಡಿ. ಪೊಲೀಸ್ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿ ಅಷ್ಟು ಸಾಕು ಎಂದು ಕೋರಿದರು.

ಇದನ್ನೂ ಓದಿ | Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ?

ಚಿತ್ರರಂಗದಲ್ಲಿ ಹಿರಿಯರು ಇದ್ದಾರೆ. ಒಳ್ಳೆ ಸಿನಿಮಾ ಬಂದರೆ ಜನ ಥಿಯೇಟರ್‌ಗೆ ಬಂದೇ ಬರುತ್ತಾರೆ. ಪ್ರಯತ್ನ ಮಾಡೋಣ, ಚಿತ್ರರಂಗ ಬೆಳಿಯುತ್ತದೆ. ಮ್ಯಾಕ್ಸ್ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ಆಗಸ್ಟ್‌ನಲ್ಲಿ ತೆರೆಗೆ ಬರೋ ಸಾಧ್ಯತೆ ಇದೆ ಎಂದು ಹೇಳಿದರು.

Continue Reading

ಸಿನಿಮಾ

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka Swamy murder : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿ ಈಗಾಗಲೇ ಆರೋಪಿಗಳ ಬಂಧನವಾಗಿದೆ. ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದ ಆಟೋ ಹಾಗೂ ಕಾರನ್ನು ಸೀಜ್ ಮಾಡಲಾಗಿದೆ. ಇದೇ ವೇಳೆ ಎ1 ಆರೋಪಿ ಪವಿತ್ರಾ ಗೌಡ ಸೇರಿ ಹಲವು ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಲಾಯಿತು.

VISTARANEWS.COM


on

By

Renukaswamy murder case The location of the accused is complete
Koo

ಬೆಂಗಳೂರು/ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ (Renuka Swamy murder) ಪ್ರಕರಣ ಸಂಬಂಧ ತನಿಖೆಯು ಚುರುಕುಗೊಂಡಿದೆ. ಭಾನುವಾರ ಆರೋಪಿಗಳ ಮನೆಯಲ್ಲಿ ಸ್ಥಳ ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು. ಚಿತ್ರದುರ್ಗದಲ್ಲಿ ಬೆಂಗಳೂರು ಪೊಲೀಸರಿಂದ ಸ್ಥಳ ಮಹಜರು ವೇಳೆ ರೇಣುಕಾಸ್ವಾಮಿ ಕಿಡ್ನ್ಯಾಪ್‌ಗೆ ಬಳಸಿದ್ದ ಆಟೋವನ್ನು ಸೀಜ್‌ ಮಾಡಲಾಯಿತು. ಜತೆಗೆ ಆರೋಪಿ ರವಿ ಮನೆ ಬಳಿ ಇದ್ದ ಟೊಯೊಟಾ ಇಟಿಯೋಸ್ ಕಾರನ್ನು ಜಪ್ತಿ ಮಾಡಲಾಗಿದೆ. ಭೀಕರವಾಗಿ ಕೊಂದರೂ ಆರೋಪಿಗಳಿಗೆ ಪಾಪಪ್ರಜ್ಞೆ ಕಾಡುತ್ತಿಲ್ವಾ? ಅಥವಾ ಪ್ರಭಾವಿಗಳ ಬೆಂಬಲ ಇದೆ ಎಂಬಂತೆ ನಗುತ್ತಲೇ ಪವಿತ್ರಾ ಗೌಡ ಹಾಗೂ ಪವನ್‌ ಮನೆಯಿಂದ ಹೊರಬಂದಿದ್ದಾರೆ.

ಪವಿತ್ರಾಗೌಡ ಮನೆಯಲ್ಲಿ ಸತತ 3 ಗಂಟೆಗಳ ಕಾಲ ಪರಿಶೀಲನೆ

ಬೆಂಗಳೂರಿನ ಆರ್‌ಆರ್ ನಗರದಲ್ಲಿ ಕಳೆದ 10 ವರ್ಷಗಳಿಂದ ಪವಿತ್ರಾಗೌಡ ವಾಸವಿದ್ದು, ಭಾನುವಾರ ಅವರ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರ್ ಮಾಡಿದರು. ಪವಿತ್ರಾ ಜೂನ್ 9 – 10ರಂದು ಎಲ್ಲಿದ್ದರು? ಎಷ್ಟೊತ್ತಿಗೆ ಮನೆಯಿಂದ ತೆರಳಿದ್ದರು ಎಂಬುದನ್ನು ತಿಳಿಯಲು ಸಿಸಿಟಿವಿ ಪರಿಶೀಲನೆ ನಡೆಸಲಾಯಿತು.

ಪವಿತ್ರಾಗೌಡ ಇರುವ ಮನೆಯು ಡುಪ್ಲೆಕ್ಸ್ ಆಗಿದ್ದು ಒಟ್ಟು ಮೂರು ಮಹಡಿ ಇದೆ. ಇದರಲ್ಲಿ ಕೆಳಗಡೆ ಪಾರ್ಕಿಂಗ್‌ ಜಾಗದೊಂದಿಗೆ ಪವನ್ ವಾಸಕ್ಕೆ ಮನೆಯೊಂದು ಇದೆ. ಪವನ್ ಪವಿತ್ರಾ ಗೌಡಗೆ ಮನೆ‌ ಕೆಲಸಗಾರ ಜತೆಗೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ. ಆಗಾಗ ದರ್ಶನ್ ಈ ಮನೆಗೆ ಫಾರ್ಚುನರ್ ಕಾರಿನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಅಕ್ಕಪಕ್ಕ ಮನೆಯವರ ಜತೆ ಪವಿತ್ರಾಗೆ ಸಂಪರ್ಕವೇ ಇರಲಿಲ್ಲ. ಪವಿತ್ರಾ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್‌ ಕಾರಿನಲ್ಲಿ ಓಡಾಡುತ್ತಿದ್ದಳು ಎನ್ನಲಾಗಿದೆ. ಇನ್ನೂ ಪವಿತ್ರಾ ಗೌಡ ಮಗಳು ಹಾಸ್ಟೆಲ್‌ನಲ್ಲಿ ಇದ್ದು, ಆಗಾಗ ಬಂದು ಹೋಗುತ್ತಿದ್ದಳು.

ಗುಸು ಗುಸು ಮಾತು, ನಗುತ್ತಲೇ ಮಹಜರ್‌ ಪ್ರಕ್ರಿಯೆಯಲ್ಲಿ ಭಾಗಿ

ಪವಿತ್ರಾಗೌಡ ಜತೆಗೆ ಪವನ್‌ನನ್ನು ಸ್ಥಳ ಮಹಜರಿಗೆ ಕರೆತರಲಾಗಿತ್ತು. ಈ ವೇಳೆ ಇಬ್ಬರು ಗುಸು ಗುಸು ಎಂದು ಮಾತನಾಡುತ್ತಿರುವುದು ಕಂಡು ಬಂತು. ಪವನ್ ನಗು ನಗುತ್ತಲೇ ಮಹಜರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಪ್ರಭಾವಿಗಳ ರಕ್ಷಣೆಯ ವಿಶ್ವಾಸ ತೋರಿದಂತೆ ಇತ್ತು. ಅತ್ತ ಸತತ ಮೂರು ಗಂಟೆಗಳ ಮಹಜರ್ ಪ್ರಕ್ರಿಯೆ ನಂತರ ಹೊರ ಬಂದ ಪವಿತ್ರ ಗೌಡ ಕೂಡ ನಗುಮುಖದಲ್ಲೇ ಪೊಲೀಸ್‌ ವ್ಯಾನ್‌ ಹತ್ತಿದ್ದರು.

ಎಫ್‌ಎಸ್‌ಎಲ್ ತಂಡದಿಂದ ಮಹತ್ತರ ಸಾಕ್ಷಿಗಳ ಸಂಗ್ರಹ ಮಾಡಿ, ಎರಡು ಬಟ್ಟೆಗಂಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸ್ಥಳ ಮಹಜರು ಮುಗಿಸಿದ ಬಳಿಕ ಪವಿತ್ರಗೌಡ ಹಾಗೂ ಪವನ್‌ನನ್ನು ವಾಪಸ್‌ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತರಲಾಯಿತು.

ಇತ್ತ ಎ5 ಆರೋಪಿ ನಂದೀಶ್‌ನನ್ನು ಪಟ್ಟಣಗೆರೆ ಶೆಡ್‌ನಿಂದ ನೇರವಾಗಿ ದರ್ಶನ್‌ ಮನೆಗೆ ಕರೆತಂದು ಪರಿಶೀಲನೆ ಮಾಡಲಾಯಿತು. ಈ ವೇಳೆ ನಂದೀಶ್‌ ಶೂ ಮತ್ತೆ ಬಟ್ಟೆಯನ್ನು ಜಪ್ತಿ ಮಾಡಲಾಯಿತು. ಸ್ಥಳ ಮಹಜರಿಗಾಗಿ ಆರೋಪಿ ವಿನಯ್ ಜತೆಗೆ ನಿಖಿಲ್‌ನನ್ನು ಅವರ ಮನೆಯಲ್ಲಿ ಕರೆದುಕೊಂಡು ಹೋಗಲಾಗಿತ್ತು. ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆ , ಶೂ ಇನ್ನಿತರ ವಸ್ತುಗಳ ರಿಕವರಿಗಾಗಿ ‌ಮುಂದಾದರು.

ಚಿತ್ರದುರ್ಗದಲ್ಲೂ ಸ್ಥಳ ಮಹಜರು

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆ ತಂದು ಸ್ಥಳ ಮಹಜರು ಮಾಡಲಾಯಿತು. ರೇಣುಕಾ ಸ್ವಾಮಿ ಕೊಲೆ ಆರೋಪಿಗಳಾದ ರಘು, ರವಿ, ಅನು, ಜಗ್ಗನ ಕರೆ ತರಲಾಯಿತು. ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಗರದ ಮಹಾವೀರ ನಗರದಲ್ಲಿರುವ ಜಗ್ಗ ಅಲಿಯಾಸ್‌ ಜಗದೀಶ್ ಮನೆಯನ್ನು ಪರಿಶೀಲನೆ ನಡೆಸಿದರು. ಗೋವಿಂದರಾಜ ನಗರ ಪೊಲೀಸ್ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯ ನೇತೃತ್ವದಲ್ಲಿ ಮಹಜರು ನಡೆಸಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿತ್ರದುರ್ಗ

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Renuka swamy Murder : ರೇಣುಕಾಸ್ವಾಮಿಯನ್ನು ಮನುಷ್ಯತ್ವವನ್ನು ಇಲ್ಲದಂತೆ ಕ್ರೂರಿಗಳ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗದಂತೆ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಬೇಕು ಎಂದು ಬಾಳೇ ಹೊನ್ನೂರು ಶ್ರೀಗಳು ಆಗ್ರಹಿಸಿದರು.

VISTARANEWS.COM


on

By

Renuka swamy murder
Koo

ಚಿತ್ರದುರ್ಗ: ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ (Renuka swamy Murder) ಮನೆಗೆ ಭಾನುವಾರ ಬಾಳೆ ಹೊನ್ನೂರು ಮಠದ ರಂಭಾಪುರಿ ಶ್ರೀಗಳು ಭೇಟಿ ನೀಡಿದರು. ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರೇಣುಕಾಸ್ವಾಮಿ ಪೋಷಕರು ಶ್ರೀಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಶ್ರೀಗಳು ರೇಣುಕಾಸ್ವಾಮಿ ಕೊಲೆಯು ಅಮಾನವೀಯವಾಗಿದೆ. ಮನುಷ್ಯತ್ವ ಇಲ್ಲದಂತೆ ಕ್ರೂರಿಗಳ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಯಾವುದೇ ಪಕ್ಷದ ಸರ್ಕಾರಗಳು ಇರಲಿ ನಿರ್ದಾಕ್ಷಣ್ಯವಾಗಿ ಕ್ರಮಕೈಗೊಳ್ಳಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು. ಮೃತ ಕುಟುಂಸ್ಥರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು ಎಂದರು.

ನಟರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು- ಜಯ ಮೃತ್ಯುಂಜಯ ಸ್ವಾಮೀಜಿ

ಕಲಾವಿದರ ಬದುಕು ಮತ್ತು ಬರಹ ಒಂದೆ ಆಗಿರಬೇಕು. ಪರದೆ ಮೇಲಿನ ನಟನೆಗೂ ಬದುಕಿಗೂ ಸಾಮೀಪ್ಯವಾಗುವಂತೆ ಬದಕುವ ಪ್ರಯತ್ನ ಮಾಡಬೇಕು. ಪರದೇ ಮೇಲೆ ಒಂದು ನಟನೆ, ಪರದೇ ಹಿಂದೆ ಒಂದು ನಟನೆ ಮಾಡಿದಾಗ ಇಂತಹ ಅವಘಡ ಆಗುತ್ತವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬ ನಟರು ತಮ್ಮ ವ್ಯಕ್ತಿತ್ವ ರೂಪಿಸಿಕೋಳ್ಳಬೇಕು. ಡಾ ರಾಜಕುಮಾರ, ಡಾ ವಿಷ್ಣುವರ್ಧನ್‌ ಆದರ್ಶವಾಗಿದ್ದಾರೆ. ಅಂತಹ ಮಹಾನ್‌ ನಟರಂತೆ ಎಲ್ಲರಿಗೂ ಆದರ್ಶವಾಗಬೇಕು ಎಂದರು.

ದರ್ಶನ ವಿರುದ್ಧ ರೊಚ್ಚಿಗೆದ್ದ ಕರವೇ ಕಾರ್ಯಕರ್ತರು

ಬೆಳಗಾವಿಯಲ್ಲಿ ನಟ ದರ್ಶನ ವಿರುದ್ಧ ಕರವೇ ಕಾರ್ಯಕರ್ತರು ರೊಚ್ಚಿಗೆದ್ದರು. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಖಂಡಿಸಿ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಘಟಕದಿಂದ ದರ್ಶನ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಕೊಲೆಗಳಾಗುತ್ತಿವೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು. ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ ಮತ್ತು ಪವಿತ್ರಾಗೌಡ ಸೇರಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ: Renuka Swamy Murder:‌ ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!

ಚಿತ್ರರಂಗದಿಂದ ಬ್ಯಾನ್‌ ಮಾಡಿ

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಖಂಡಿಸಿ ಮೈಸೂರಿನ ತಿ.ನರಸೀಪುರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗಗಳ ಒಕ್ಕೂಟ ಪ್ರತಿಭಟಿಸಿದೆ. ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು ನಟ ದರ್ಶನ್‌ ಚಿತ್ರರಂಗದಿಂದ ಬ್ಯಾನ್ ಆಗಬೇಕು ಎಂದು ಒತ್ತಾಯಿಸಿದರು.

ನಟ ದರ್ಶನ್‌ ಚಿತ್ರಗಳು ತೆರೆಯ ಮೇಲೆ ಬರದಂತೆ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರವು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಪ್ರಕರಣದಲ್ಲಿ ಯಾರ ಒತ್ತಡಕ್ಕೂ ಮಣಿಯಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
BAN vs NEP
ಕ್ರೀಡೆ1 min ago

BAN vs NEP: ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ನೇಪಾಳ ವಿರುದ್ಧ 21 ರನ್​ ಗೆಲುವು

Actor Darshan of many acquaintance unknown of darshan
ಸ್ಯಾಂಡಲ್ ವುಡ್6 mins ago

Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ!

Lok Sabha Election Result
Lok Sabha Election 202411 mins ago

Rajat Sharma: ಕಾಂಗ್ರೆಸ್ ನಾಯಕರ ವಿರುದ್ಧ ಖ್ಯಾತ ಪತ್ರಕರ್ತ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇಕೆ?

Flesh-Eating Bacteria
ಆರೋಗ್ಯ21 mins ago

Flesh-Eating Bacteria: ಆತಂಕ ಮೂಡಿಸಿದ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಸೋಂಕು ತಗುಲಿದ 48 ಗಂಟೆಯಲ್ಲೇ ಸಾವು!

CM Siddaramaiah and Vidhanasoudha
ಪ್ರಮುಖ ಸುದ್ದಿ29 mins ago

CM Siddaramaiah: 370 ನಿವೃತ್ತ ಅಧಿಕಾರಿಗಳಿಗೆ ಬಾಗಿಲು ತೋರಿಸಿದ ಸರಕಾರ

Euro 2024
ಕ್ರೀಡೆ37 mins ago

Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

Nayana Nagaraj ginirama serial fame got married with suhas
ಕಿರುತೆರೆ38 mins ago

Nayana Nagaraj: 10 ವರ್ಷದ ಪ್ರೀತಿ! ಮನಮೆಚ್ಚಿದ ಹುಡುಗನ ಜತೆ ಸಪ್ತಪದಿ ತುಳಿದ ʻಗಿಣಿರಾಮʼ ನಟಿ

Auto Launches
ಆಟೋಮೊಬೈಲ್41 mins ago

Auto Launches: ಸ್ಕೋಡಾ ಕುಶಾಕ್‌, ಬಿಎಂಡಬ್ಲ್ಯು ಆರ್ 1300 ಸೇರಿ ಇನ್ನೂ ಹಲವು ಹೊಸ ವಾಹನ ಮಾರುಕಟ್ಟೆಗೆ!

Irregular Periods problem Here are some simple home remedies
ಆರೋಗ್ಯ57 mins ago

Irregular Periods: ಏರುಪೇರಾದ ಋತುಚಕ್ರದ ಸಮಸ್ಯೆಯೇ? ಇಲ್ಲಿವೆ ಸರಳ ಮನೆಮದ್ದುಗಳು!

Drowned in river
ಕ್ರೈಂ1 hour ago

Drowned: ಈಜಲು ಹೋಗಿ ಬಾಲಕರು ನೀರುಪಾಲು; ಕಮಲ ಕೊಯ್ಯಲು ಹೋಗಿ ಕೆಸರಿನಲ್ಲಿ ವ್ಯಕ್ತಿ ಸಮಾಧಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ15 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ16 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ21 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌