IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ - Vistara News

ಕ್ರೀಡೆ

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

IPL 2024: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದ ಮೋಹಿತ್​ ಶರ್ಮ 4 ಓವರ್​ಗೆ ಬರೋಬ್ಬರಿ 73 ರನ್​ ಬಿಟ್ಟುಕೊಟ್ಟರು. ಈ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲೇ ಅತ್ಯಧಿಕ ರನ್​ ಬಿಟ್ಟುಕೊಟ್ಟ ಮೊದಲ ಬೌಲರ್​ ಎನ್ನುವ ಹಣೆಪಟ್ಟಿ ಕಟ್ಟಿಕೊಂಡರು.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಗುಜರಾತ್​ ಟೈಟಾನ್ಸ್​( ತಂಡದ ಮಧ್ಯಮ ಕ್ರಮಾಂಕದ ವೇಗಿ ಮೋಹಿತ್​ ಶರ್ಮ(Mohit Sharma) ಅವರು ಐಪಿಎಲ್​ನಲ್ಲಿ(IPL 2024) ಅತಿ ಹೆಚ್ಚು ರನ್​ ಬಿಟ್ಟುಕೊಟ್ಟ ಆಟಗಾರ ಎಂಬ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಈ ಮೂಲಕ ಬಾಸಿಲ್ ಥಾಂಪಿ ದಾಖಲೆಯನ್ನು ಮುರಿದಿದ್ದಾರೆ.

​ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದ ಮೋಹಿತ್​ ಶರ್ಮ 4 ಓವರ್​ಗೆ ಬರೋಬ್ಬರಿ 73 ರನ್​ ಬಿಟ್ಟುಕೊಟ್ಟರು. ಈ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲೇ ಅತ್ಯಧಿಕ ರನ್​ ಬಿಟ್ಟುಕೊಟ್ಟ ಮೊದಲ ಬೌಲರ್​ ಎನ್ನುವ ಹಣೆಪಟ್ಟಿ ಕಟ್ಟಿಕೊಂಡರು. ಅಂತಿಮ ಓವರ್​ನಲ್ಲಿ ರಿಷಭ್​ ಪಂತ್​ ಅವರು 4 ಸಿಕ್ಸರ್​ ಮತ್ತು ಒಂದು ಬೌಂಡರಿ ಬಾರಿಸಿ ಒಟ್ಟು 31 ರನ್​ ಚಚ್ಚಿದರು.

ದುಬಾರಿ ರನ್​ ನೀಡಿದ ಆಟಗಾರರು


ಮೋಹಿತ್​ ಶರ್ಮ-73 ರನ್​. ಡೆಲ್ಲಿ ವಿರುದ್ಧ (2024)

ಬಾಸಿಲ್ ಥಾಂಪಿ-70 ರನ್​. ಆರ್​ಸಿಬಿ ವಿರುದ್ಧ (2018)

ಯಶ್​ ದಯಾಳ್​-69 ರನ್​. ಕೆಕೆಆರ್​ ವಿರುದ್ಧ (2023)

ರೀಸ್‌ ಟೋಪ್ಲೆ-68 ರನ್​. ಹೈದರಾಬಾದ್​ ವಿರುದ್ಧ (2024)

ಇದನ್ನೂ ಓದಿ IPL 2024 Points Table: ಡೆಲ್ಲಿ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ಗುಜರಾತ್​ಗೆ 4 ರನ್​ ವಿರೋಚಿತ ಸೋಲು


ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ಚೇಸಿಂಗ್​ ವೇಳೆ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು. ಅಂತಿಮ ಓವರ್​ನಲ್ಲಿ ಮೋಹಿತ್​ ಶರ್ಮ ಕನಿಷ್ಠ ಒಂದು ಬಾಲ್​ ಕಂಟ್ರೋಲ್​ ಮಾಡುತ್ತಿದ್ದರೂ ಕೂಡ ಗುಜರಾತ್​ ಗೆಲ್ಲುವು ಕಾಣುವ ಸಾಧ್ಯತೆ ಇತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

Team India Coach : ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಗಂಭೀರ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಮೊದಲು ದೊಡ್ಡ ಮಟ್ಟಿಗೆ ಚರ್ಚೆ ನಡೆದಿತ್ತು. ಇದೀಗ ಅವರು ಮಹತ್ವದ ಪಾತ್ರಕ್ಕೆ ಕಾಲಿಡುತ್ತಿರುವುದರಿಂದ ಅಭಿಮಾನಿಗಳು, ಆಟಗಾರರು ಮತ್ತು ಪ್ರಸಾರಕರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Team India Coach
Koo

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ (Team India Coach) ಆಗಿ ಗೌತಮ್ ಗಂಭೀರ್ (Gautam Gambhir) ತಮ್ಮ ಚೊಚ್ಚಲ ಪಂದ್ಯವನ್ನು ಆಡಿಸುತ್ತಿರುವ ನಡುವೆ ಅವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿವೆ. ಇದನ್ನು ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕವಿವರಣೆಗಾರ ಸಂಜಯ್ ಮಂಜ್ರೇಕರ್ (Sanjay Majrekar) ಆಕ್ಷೇಪಿಸಿದ್ದಾರೆ. ಈ ವೇಳೆ ಅವರು ಮಾಜಿ ಕೋಚ್​​ ದ್ರಾವಿಡ್​ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಭಾರತ ತಂಡ ಮುಖ್ಯ. ಯಾರು ಕೋಚ್ ಎಂಬುದು ಮುಖ್ಯವಲ್ಲ ಎಂಬುದಾಗಿ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಗಂಭೀರ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಮೊದಲು ದೊಡ್ಡ ಮಟ್ಟಿಗೆ ಚರ್ಚೆ ನಡೆದಿತ್ತು. ಇದೀಗ ಅವರು ಮಹತ್ವದ ಪಾತ್ರಕ್ಕೆ ಕಾಲಿಡುತ್ತಿರುವುದರಿಂದ ಅಭಿಮಾನಿಗಳು, ಆಟಗಾರರು ಮತ್ತು ಪ್ರಸಾರಕರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಗಳು ಅಥವಾ ಹೊಸ ತರಬೇತುದಾರ ಗಂಭೀರ್ ಅವರಿಗಿಂತ ಹೆಚ್ಚಾಗಿ ಒಟ್ಟಾರೆಯಾಗಿ ಭಾರತೀಯ ಕ್ರಿಕೆಟ್ ತಂಡದ ಮೇಲೆ ಗಮನ ಹರಿಸಬೇಕು ಎಂದು ಮಂಜ್ರೇಕರ್​ ಹೇಳಿದ್ದಾರೆ. ಭಾರತೀಯ ಕ್ರಿಕೆಟ್​​ನ ಯಶಸ್ಸಿಗೆ ಕೋಚ್ ಸೇರಿದಂತೆ ಯಾವುದೇ ಒಬ್ಬ ವ್ಯಕ್ತಿ ಮಾತ್ರವಲ್ಲ, ತಂಡದ ಸಾಮೂಹಿಕ ಪ್ರಯತ್ನಗಳು ಕಾರಣ ಎಂದು ನುಡಿದಿದ್ದಾರೆ.

ಗಂಭೀರ್ ಎರಡು ಬಾರಿ ವಿಶ್ವಕಪ್ ವಿಜೇತ ಮತ್ತು ಭಾರತೀಯ ಕ್ರಿಕೆಟ್​​ನ ಪ್ರಮುಖ ವ್ಯಕ್ತಿಯಾಗಿದ್ದಾರೆ. ಆದರೆ ಕ್ರೀಡೆ ಯಶಸ್ವು ಮೂಲಭೂತವಾಗಿ ತಂಡದ ಸಾಮೂಹಿಕ ಪ್ರಯತ್ನವೇ ಹೊರತು ತರಬೇತುದಾರನಲ್ಲ ಎಂದು ಮಂಜ್ರೇಕರ್ ಹೇಳಿದ್ದಾರೆ. ಇತ್ತೀಚೆಗೆ ಐಸಿಸಿ ಟಿ 20 ವಿಶ್ವಕಪ್ 2024 ಗೆದ್ದ ದ್ರಾವಿಡ್ ಅವರನ್ನು ಗುರಿಯಾಗಿಸಿಕೊಂಡ ಸಂಜಯ್​, ಭಾರತದ ನಾಲ್ಕು ವಿಶ್ವಕಪ್ ಗೆಲುವುಗಳು ಪ್ರಯತ್ನದಿಂದ ಬಂದಿದೆಯೇ ಹೊರತು ತರಬೇತುದಾರರಿಂದಲ್ಲ ಎಂದು ಹೇಳಿದ್ದಾರೆ.

ಬಾರ್ಬಡೋಸ್​​ನಲ್ಲಿ ನಡೆದ ಟಿ 20 ವಿಶ್ವಕಪ್ 2024 ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ತಮ್ಮ ಅಧಿಕಾರಾವಧಿಯನ್ನು ಉತ್ತಮವಾಗಿ ಮುಗಿಸಿದ್ದರು. ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ 2013ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಹಾಗೂ ಏಕದಿನ ವಿಶ್ವಕಪ್ ಫೈನಲ್ ತಲುಪಿತ್ತು.

ಇದನ್ನೂ ಓದಿ: Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಂಜಯ್​, ಎಲ್ಲವೂ ತರಬೇತುದಾರನ ಕುರಿತ ಚರ್ಚೆ ಅಲ್ಲ. ನಾಲ್ಕು ವಿಶ್ವಕಪ್​​ ಗೆದ್ದ ಭಾರತೀಯ ಕ್ರಿಕೆಟ್ ಬಗ್ಗೆ ಮಾಡಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಗಮನವನ್ನು ವೈಯಕ್ತಿಕ ಹೆಸರಿನ ಬದಲಾಗಿ ಸಾಮೂಹಿಕ ತಂಡದ ಪ್ರದರ್ಶನಕ್ಕೆ ಬದಲಾಯಿಸಬೇಕೆಂದು ನುಡಿದರು.

1983 ರ ವಿಶ್ವಕಪ್ ಮತ್ತು 2007ರ ಟಿ 20 ವಿಶ್ವಕಪ್​​ ವೇಳೆ ಭಾರತಕ್ಕೆ ಕೋಚ್ ಇರಲಿಲ್ಲ. ತರಬೇತುದಾರರಿಂದ ಪ್ರಾಮುಖ್ಯತೆ ಪಡೆಯದ ಯುಗಗಳಲ್ಲಿ ಭಾರತದ ಮೊದಲ ಎರಡು ವಿಶ್ವಕಪ್ ಗೆಲುವುಗಳು ಬಂದಿವೆ ಎಂದು ಅವರು ಗಮನಸೆಳೆದರು. ಶ್ರೀಲಂಕಾ ವಿರುದ್ಧದ ಮೊದಲ ಟಿ 20 ಪಂದ್ಯಕ್ಕೆ ಮುಂಚಿತವಾಗಿ ಅವರು ಶನಿವಾರ (ಜುಲೈ 27) ಬೆಳಿಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಲಾಲ್​ಚಂದ್​ ರಜಪೂತ್​​

ಲೆಜೆಂಡರಿ ಆಲ್ರೌಂಡರ್ ಮತ್ತು ಮಾಜಿ ನಾಯಕ ಕಪಿಲ್ ದೇವ್ 1983 ರಲ್ಲಿ ಮುಖ್ಯ ಕೋಚ್ ಇಲ್ಲದೆ ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಮೂಲಕ ಏಕದಿನ ವಿಶ್ವಕಪ್ ಅನ್ನು ಎತ್ತಿಹಿಡಿದಿದ್ದರು. ಆದಾಗ್ಯೂ, ಭಾರತವು ತನ್ನ ಎರಡನೇ ವಿಶ್ವಕಪ್ ಗೆಲ್ಲಲು 24 ವರ್ಷಗಳ ಕಾಲ ಕಾಯಬೇಕಾಯಿತು.

ಎಂಎಸ್ ಧೋನಿ ಅವರ ವರ್ಚಸ್ವಿ ನಾಯಕತ್ವವು 2007 ರಲ್ಲಿ ಮೊದಲ ಟಿ 20 ವಿಶ್ವಕಪ್​​ನಲ್ಲಿ ಯುವ ಭಾರತೀಯ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿತು. ಆದಾಗ್ಯೂ, ಆ ಬಾರಿಯೂ ಭಾರತಕ್ಕೆ ಮುಖ್ಯ ಕೋಚ್ ಇರಲಿಲ್ಲ, ಏಕೆಂದರೆ ಗ್ರೆಗ್ ಚಾಪೆಲ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿತ್ತು. ಧೋನಿ ಅವರ ತಂಡಕ್ಕೆ ಲಾಲ್​ಚಂದ್​ ರಜಪೂತ್ ಅವರನ್ನು ತಂಡದ ನಿರ್ದೇಶಕರಾಗಿ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿತ್ತು.

ಭಾರತ 2011ರ ಏಕದಿನ ವಿಶ್ವಕಪ್ ಹಾಗೂ 2024ರ ಟಿ20 ವಿಶ್ವಕಪ್ ಗೆದ್ದಾಗ ಗ್ಯಾರಿ ಕರ್ಸ್ಟನ್ ಮತ್ತು ದ್ರಾವಿಡ್ ನಾಯಕತ್ವ ವಹಿಸಿದ್ದರು.

Continue Reading

ಕ್ರೀಡೆ

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

Joe Root : ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅವರು ಸೀಮಿತ ಅವಕಾಶಗಳನ್ನು ಪಡೆದುಕೊಂಡಿದ್ದರು. ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡಿದ್ದರು. ಆದಾಗ್ಯೂ, ಟ್ರೆಂಟ್ ಬ್ರಿಜ್​​ನಲ್ಲಿ ನಡೆದ ಎರಡನೇ ಟೆಸ್ಟ್​​ನಲ್ಲಿ ಅವರು ಶ್ರೀಲಂಕಾದ ಆಟಗಾರ ಮಹೇಲಾ ಜಯವರ್ಧನೆ ಮತ್ತು ವೆಸ್ಟ್ ಇಂಡೀಸ್​​ನ ಶಿವನಾರಾಯಣ್ ಚಂದ್ರಪಾಲ್ ಅವರನ್ನು ಹಿಂದಿಕ್ಕಿದ್ದರು. ಇದರಲ್ಲಿ ಅವರ 32 ನೇ ಟೆಸ್ಟ್ ಶತಕವೂ ಸೇರಿದೆ.

VISTARANEWS.COM


on

Joe Root
Koo

ಎಡ್ಜ್ ಬಾಸ್ಟನ್: ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ಜೋ ರೂಟ್ (Joe Root) ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾರಾ ಅವರ ವೃತ್ತಿಜೀವನದಲ್ಲಿ ಗಳಿಸಿದ್ದ 11,953 ರನ್​ ಳಿಗಿಂತ ಕೇವಲ 14 ರನ್​ ಹಿಂದಿದ್ದ ರೂಟ್​ ಮೊದಲ ದಿನ ಸ್ಟಂಪ್ ವೇಲೆ 2* ರನ್ ಗಳಿಸಿ ಅಜೇಯರಾಗಿದ್ದರು. ಅಂತೆಯೇ ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್​ನ 14 ನೇ ಓವರ್​ನಲ್ಲಿ ಅವರು ಜೇಡನ್ ಸೀಲ್ಸ್ ಅವರ ಎಸೆತವನ್ನು ಎದುರಿಸಿ ಲಾರಾ ಹಿಂದಿಕ್ಕಿದರು. ಇದು ರೂಟ್​ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಸಾಧನೆಯನ್ನು ಸೂಚಿಸುತ್ತದೆ.

ಈ ಮೈಲಿಗಲ್ಲು ದಾಟುವಲ್ಲಿ ರೂಟ್ ಕೆಲವು ನಾಟಕೀಯ ಅವಕಾಶಗಳನ್ನು ಪಡೆದರು. 10 ನೇ ಓವರ್​ನಲ್ಲಿ ಸೀಲ್ಸ್ ಅವರ ಬೌಲಿಂಗ್​ ವೇಳೆ ಎಲ್ಬಿಡಬ್ಲ್ಯು ನಿರ್ಧಾರವನ್ನು ವೆಸ್ಟ್ ಇಂಡೀಸ್ ಪರಿಶೀಲಿಸಲಿಲ್ಲ, ಈ ನಿರ್ಧಾರವು ದುಬಾರಿ ಎಂಬುದಾಗಿ ಸಾಬೀತಾಯಿತು. ಡಿಆರ್​ಎಸ್​ ತೆಗೆದುಕೊಂಡಿದ್ದರೆ ರೂಟ್ ಔಟ್ ಆಗುತ್ತಿದ್ದರು ಎಂದು ರಿಪ್ಲೇಗಳು ತೋರಿಸಿದ್ದವು. ಇಂಗ್ಲೆಂಡ್​ನ ಬ್ಯಾಟಿಂಗ್ ಲೈನ್ಅಪ್​​ನ ಆಧಾರಸ್ತಂಭವಾಗಿರುವ ರೂಟ್, ಟೆಸ್ಟ್ ಕ್ರಿಕೆಟ್​​ನಲ್ಲಿ 10 ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಈ ಸರಣಿ ಪ್ರಾರಂಭಿಸಿದ್ದರು. ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅವರು ಸೀಮಿತ ಅವಕಾಶಗಳನ್ನು ಪಡೆದುಕೊಂಡಿದ್ದರು. ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡಿದ್ದರು. ಆದಾಗ್ಯೂ, ಟ್ರೆಂಟ್ ಬ್ರಿಜ್​​ನಲ್ಲಿ ನಡೆದ ಎರಡನೇ ಟೆಸ್ಟ್​​ನಲ್ಲಿ ಅವರು ಶ್ರೀಲಂಕಾದ ಆಟಗಾರ ಮಹೇಲಾ ಜಯವರ್ಧನೆ ಮತ್ತು ವೆಸ್ಟ್ ಇಂಡೀಸ್​​ನ ಶಿವನಾರಾಯಣ್ ಚಂದ್ರಪಾಲ್ ಅವರನ್ನು ಹಿಂದಿಕ್ಕಿದ್ದರು. ಇದರಲ್ಲಿ ಅವರ 32 ನೇ ಟೆಸ್ಟ್ ಶತಕವೂ ಸೇರಿದೆ.

ಫಾರ್ಮ್​ಗೆ ಮರಳಿದ ರೂಟ್​

ಇಂಗ್ಲೆಂಡ್​ನ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ ಫಾರ್ಮ್ ಮರಳಿ ಪಡೆದಿದ್ದಾರೆ. ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪ್ರಸ್ತುತ ಮೂರು ಪಂದ್ಯಗಳ ಸರಣಿಯಲ್ಲಿ, ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ಅರ್ಧಶತಕವನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುವ ಸಾಮರ್ಥ್ಯ ರೂಟ್ ಹೊಂದಿದ್ದಾರೆ ಎಂದು ಅನೇಕ ಕ್ರಿಕೆಟ್ ಶ್ರೇಷ್ಠರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 32 ಶತಕಗಳು ಮತ್ತು 62 ಅರ್ಧಶತಕಗಳನ್ನು ಹೊಂದಿರುವ ಅವರ ದಾಖಲೆ ಸ್ವತಃ ಮಾತನಾಡುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಮತ್ತು ಶತಕಗಳ ದಾಖಲೆಯನ್ನು ರೂಟ್ ಹೊಂದಿದ್ದಾರೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024 :

VISTARANEWS.COM


on

Paris Olympics 2024
Koo

ನವದೆಹಲಿ: ಭಾರತದ ಮಹಿಳಾ ಶೂಟರ್​ ಮನು ಭಾಕರ್ ಶನಿವಾರ (ಜುಲೈ 27) ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) 10 ಮೀಟರ್​ ಏರ್​ ಪಿಸ್ತೂಲ್ ವಿಭಾಗದಲ್ಲಿ ಫೈನಲ್​ಗೇರಿದ್ದಾರೆ. ಈ ಮೂಲಕ ಹಾಲಿ ಒಲಿಂಪಿಕ್ಸ್​​ನಲ್ಲಿ ಫೈನಲ್​ಗೇರಿದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಫ್ರಾನ್ಸ್ನ ಚಟೌರಾಕ್ಸ್​ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ 22 ವರ್ಷದ ಭಾಕರ್ ಮೂರನೇ ಸ್ಥಾನ ಪಡೆದುಕೊಂಡು ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಭಾರತದ ಶೂಟರ್​ಗಳು ಮೊದಲ ದಿನದಂದು ನಿರಾಸೆಯ ಪ್ರದರ್ಶನ ನೀಡಿರುವ ಕಾರಣ ಮನು ಸಾಧನೆ ಭರವಸೆ ಎನಿಸಿಕೊಂಡಿದೆ.

ಭಾನುವಾರ ನಡೆಯಲಿರುವ ಫೈನಲ್ ಪ್ರವೇಶಿಸಲು ಆರು ಸರಣಿಗಳ ಶೂಟಿಂಗ್​ ಅರ್ಹತೆಯಲ್ಲಿ 580 ಅಂಕ ಗಳಿಸಿದ ಮನು ಸಂಭ್ರಮಿಸಿದರು. ಭಾರತದ ಮತ್ತೊಬ್ಬರು ಶೂಟರ್​ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ತಮ್ಮ ಅಭಿಯಾನ ಮುಗಿಸಿದರು. ಅವರು 573 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಗ್ರ ಎಂಟು ಶೂಟರ್​ಗಳು ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಹಂಗರಿಯ ವೆರೋನಿಕಾ ಮೇಜರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು 582 ಅಂಕಗಳನ್ನು ಪಡೆದರು. ಇನ್ನು ಕೊರಿಯಾದ ವೈ.ಜೆ ಓಹ್​ 52 ಅಂಕ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಮನು ಬಾಕರ್​ ಆರಂಭದಿಂದಲೇ ಉತ್ತಮ ಪ್ರದರ್ಶ ನೀಡಿದ್ದರು. ಮೊದಲ 10 ಶಾಟ್​ಗಳಲ್ಲಿ 97/100 ಗಳಿಸಿದರು 22 ವರ್ಷದ ಭಾರತೀಯ ಆಟಗಾರ್ತಿ ಎರಡನೇ ಸುತ್ತಿನಲ್ಲೂ 97 ಅಂಕ ಗಳಿಸಿಕೊಂಡರು. ಆರು ಸೀರಿಸ್​​ನ ಸ್ಪರ್ಧೆಯಲ್ಲಿ ಮನು 292/300 ಅಂಕಗಳನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

ರಿದಮ್ ಸಾಂಗ್ವಾನ್ ಅರ್ಧದ ಹಂತದಲ್ಲಿ 286/300 ರನ್ ಗಳಿಸಿದ್ದರು. ಅವರು ಈವೆಂಟ್ ಅನ್ನು 573-14x ನಿಂದ ಕೊನೆಗೊಳಿಸಿದರು. ಮೊದಲ ಸರಣಿಯಲ್ಲಿ 97/100 ರನ್ ಗಳಿಸಿದ ನಂತರ, ಸಾಂಗ್ವಾನ್ ಎರಡನೇ ಸೀರಿಸ್​ನಲ್ಲಿ 92 ರನ್ ಗಳಿಸಿದರು. ಅಗ್ರ ಎಂಟು ಶೂಟರ್ಗಳು ನಾಳೆ, ಭಾನುವಾರ ಮಧ್ಯಾಹ್ನ 3:30 ಕ್ಕೆ ನಡೆಯಲಿರುವ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

ಫೈನಲ್​​ಗೆ ಅರ್ಹತೆ ಪಡೆದ ಅಗ್ರ ಎಂಟು ಶೂಟರ್​ಗಳ ವಿವರ

  • ವೆರೋನಿಕಾ ಮೇಜರ್ (ಹಂಗರಿ) : 582 ಅಂಕ
  • ಓಹ್ ಯೆ ಜಿನ್ (ಕೊರಿಯಾ ): 582 ಅಂಕ
  • ಮನು ಭಾಕರ್ (ಭಾರತ): 580 ಅಂಕ
  • ಥು ವಿನ್ಹ್ ಟ್ರಿನ್ಹ್ (ವಿಯೆಟ್ನಾಂ): 578 ಅಂಕ
  • ಕಿಮ್ ಯೆಜಿ (ಕೊರಿಯಾ): 578 ಅಂಕ
  • ಲಿ ಕ್ಸುಯೆ (ಚೈನಾ): 577 ಅಂಕ
  • ಸೇವ್ವಾಲ್ ತರ್ಹಾನ್ (ಟರ್ಕಿ): 577 ಅಂಕ
  • ಜಿಯಾಂಗ್ ರಾನ್ಕ್ಸಿನ್ (ಚೈನಾ): 577 ಅಂಕ

ಭಾರತಕ್ಕೆ ನಿರಾಸೆ

ಆರಂಭಿಕ ಎರಡು ಸ್ಪರ್ಧೆಗಳಲ್ಲಿ ಯಾವುದೇ ಭಾರತೀಯರು ಫೈನಲ್​​ಗೆ ಪ್ರವೇಶಿಸಲು ಸಾಧ್ಯವಾಗದ ಕಾರಣ ಭಾರತವು ಶೂಟಿಂಗ್​​ನಲ್ಲಿ ಕಳಪೆ ಆರಂಭವನ್ನು ಹೊಂದಿತ್ತು. 10 ಮೀಟರ್ ಏರ್ ರೈಫಲ್ ಮಿಶ್ರ ತಂಡಗಳು 28 ತಂಡಗಳ ಸ್ಪರ್ಧೆಯಲ್ಲಿ 6 ಮತ್ತು 12 ನೇ ಸ್ಥಾನಗಳನ್ನು ಗಳಿಸಿದವು. ಹೀಗಾಗಿ ಪದಕ ಪಂದ್ಯಗಳಿಗೆ ಅಗತ್ಯವಾದ ಅಗ್ರ ನಾಲ್ಕು ಸ್ಥಾನಗಳಿಗೆ ಹೋಗಲು ವಿಫಲಗೊಂಡಿತು. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ 33 ಅಥ್ಲೀಟ್​ಗಳ ವಿಭಾಗದಲ್ಲಿ 9ನೇ ಸ್ಥಾನ ಪಡೆದು ಫೈನಲ್​ಗೆ ಪ್ರವೇಶಿಸುವಲ್ಲಿ ವಿಫಲರಾದರು. ಮತ್ತೊಬ್ಬ ಶೂಟರ್ ಅರ್ಜುನ್ ಸಿಂಗ್ ಚೀಮಾ 18ನೇ ಸ್ಥಾನ ಪಡೆದರು.

Continue Reading

ಕ್ರೀಡೆ

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

Paris Olympics: ಕೇವಲ ಆಹಾರ ಸಮಸ್ಯೆ ಮಾತ್ರವಲ್ಲದೇ ತಮಗೆ ಉಳಿದುಕೊಳ್ಳಲು ನೀಡಿರುವ ಕೋಣೆ ಬಹಳ ಇಕ್ಕಟ್ಟಿನಿಂದ ಕೂಡಿದ್ದು ಸರಿಯಾಗಿ ನಿದ್ರಿಸಲು ಕೂಡ ಆಗುತ್ತಿಲ್ಲ ಎಂದು ಬಾಕ್ಸರ್‌ ಅಮಿತ್ ಪಂಘಲ್‌ ಅಸಮಾಧಾನ ಹೊರಹಾಕಿದ್ದಾರೆ

VISTARANEWS.COM


on

Paris Olympics
Koo

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​(Paris Olympics) ಕ್ರೀಡಾಕೂಟಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ಸಿಕ್ಕಾಗಿದೆ. ಈಗಾಗಲೇ ಭಾರತೀಯ ಕ್ರೀಡಾಪಟುಗಳು ಕೆಲ ವಿಭಾಗದಲ್ಲಿ ಸ್ಪರ್ಧಿಸಿ ಸೋಲು ಮತ್ತು ಗೆಲುವು ಕಂಡಿದ್ದಾರೆ. ಈ ಮಧ್ಯೆ ಕ್ರೀಡಾ ಗ್ರಾಮದಲ್ಲಿ ಆಹಾರದ ಕೊರತೆ ಉಂಟಾಗಿದೆ ಎಂದು ಭಾರತೀಯ ಅಥ್ಲೀಟ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿಯೂ ಭಾರತೀಯ ಅಥ್ಲೀಟ್​ಗಳು ಸರಿಯಾದ ಪೌಷ್ಟಿಕಾಂಶ ಆಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. 

“ಕ್ರೀಡಾ ಗ್ರಾಮದಲ್ಲಿ ಬೃಹತ್‌ ರೆಸ್ಟೋರೆಂಟ್‌ ನಿರ್ಮಿಸಲಾಗಿದೆ. ನೂರಾರು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಆದರೆ ತಾವು ಊಟಕ್ಕೆ ತೆರಳಿದಾಗ ಕೆಲವು ಭಾರತೀಯ ಖಾದ್ಯಗಳು ಖಾಲಿಯಾಗಿತ್ತು” ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ತನಿಶಾ ಕ್ರಾಸ್ಟೊ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Paris Olympics: ಶುಭಾರಂಭದ ನಿರೀಕ್ಷೆಯಲ್ಲಿ ಪುರುಷರ ಹಾಕಿ ತಂಡ; ಕಿವೀಸ್​ ಎದುರಾಳಿ

ಕೇವಲ ಆಹಾರ ಸಮಸ್ಯೆ ಮಾತ್ರವಲ್ಲದೇ ತಮಗೆ ಉಳಿದುಕೊಳ್ಳಲು ನೀಡಿರುವ ಕೋಣೆ ಬಹಳ ಇಕ್ಕಟ್ಟಿನಿಂದ ಕೂಡಿದ್ದು ಸರಿಯಾಗಿ ನಿದ್ರಿಸಲು ಕೂಡ ಆಗುತ್ತಿಲ್ಲ ಎಂದು ಬಾಕ್ಸರ್‌ ಅಮಿತ್ ಪಂಘಲ್‌ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಆಹಾರ ಕೊರತೆಯಾದ ಕಾರಣ ಹೊರಗಿನಿಂದ ರೋಟಿ ದಾಲ್‌ ತರಿಸಿಕೊಂಡು ಹಸಿವು ನೀಗಿಸಿದೆವೆ ಎಂದು ಹೇಳಿದ್ದಾರೆ. ಆಹಾರ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಅಥ್ಲೀಟ್​ಗಳು ಭಾರತೀಯ ಒಲಿಂಪಿಕ್ಸ್​ ಸಮಿತಿಗೆ ಮನವಿ ಮಾಡಿದ್ದಾರೆ.

ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಈ ಬಾರಿ ಎಷ್ಟು ಪದಕ ಗೆಲ್ಲಬಹುದು ಎಂದು ಕಾದು ನೋಡಬೇಕಿದೆ. ಇಂದು ನಡೆದ ಸ್ಪರ್ಧೆಯಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಬಂದಿದೆ. ಶೂಟಿಂಗ್​ನಲ್ಲಿ ಸೋಲು ಎದುರಾದರೆ, ರೋಯಿಂಗ್​ನಲ್ಲಿ ಗೆಲುವಿನ ಶುಭಾರಂಭ ಕಂಡಿದೆ.

ಆರ್ಚರಿಯಲ್ಲಿ ಪದಕ ನಿರೀಕ್ಷೆ


ಗುರುವಾರ ನಡೆದಿದ್ದ  ಪುರುಷರ ಮತ್ತು ಮಹಿಳೆಯರ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ ಭಾರತ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿತ್ತು. ಮಹಿಳಾ ತಂಡ 4ನೇ ಸ್ಥಾನ ಗಳಿಸಿದರೆ, ಪುರುಷರ ತಂಡ 3ನೇ ಸ್ಥಾನ ಗಳಿಸುವ ಮೂಲಕ ಕ್ವಾರ್ಟರ್​ ಫೈನಲ್​ ಅರ್ಹತೆ ಗಳಿಸಿತು. ಜತೆಗೆ ಮಿಶ್ರ ತಂಡದಲ್ಲಿ ಭಾರತ 5ನೇ ಸ್ಥಾನ ಪಡೆದು ಮುಂದಿನ ಹಂತಕ್ಕೇರಿದೆ. ಆರ್ಚರಿ ವಿಭಾಗದಲ್ಲಿ ಕನಿಷ್ಠ ಒಂದಾದರು ಪದಕ ನಿರೀಕ್ಷೆ ಮಾಡಲಾಗಿದೆ. ಯಾವುದೇ ಪದಕ ಗೆದ್ದರೂ ಕೂಡ ಇದು ಆರ್ಚರಿಯಲ್ಲಿ ಭಾರತಕ್ಕೆ ಒಲಿಯುವ ಐತಿಹಾಸಿಕ ಪದಕವಾಗಲಿದೆ.

Continue Reading
Advertisement
Opposition MLAs agree to Skydeck near Nice Road will discuss in Cabinet meeting says DCM DK Shivakumar
ಕರ್ನಾಟಕ2 seconds ago

DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

Team India Coach
ಪ್ರಮುಖ ಸುದ್ದಿ11 mins ago

Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

Infiltration
ದೇಶ20 mins ago

Infiltration: ಭಾರತಕ್ಕೆ ನುಗ್ಗುವುದು ಹೇಗೆ ಎಂದು ವಿಡಿಯೊ ಮಾಡಿದ ಬಾಂಗ್ಲಾ ವ್ಯಕ್ತಿ; ದೀದಿ ಆಹ್ವಾನದ ಬೆನ್ನಲ್ಲೇ ವಿಡಿಯೊ ವೈರಲ್‌

ICW 2024
ಫ್ಯಾಷನ್51 mins ago

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

Indian Army
ದೇಶ1 hour ago

ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜಿಸಿದ ಕೇಂದ್ರ; ಏನಿದರ ಮರ್ಮ?

Joe Root
ಕ್ರೀಡೆ2 hours ago

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

CT Ravi
ಕರ್ನಾಟಕ2 hours ago

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

Aishwarya Rai Bachchan
ಸಿನಿಮಾ2 hours ago

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Mukesh Ambani
ವಾಣಿಜ್ಯ2 hours ago

Mukesh Ambani: ಮುಕೇಶ್ ಅಂಬಾನಿಯ ಒಂದು ದಿನದ ಆದಾಯ 163 ಕೋಟಿ ರೂ! ಒಟ್ಟು ಸಂಪತ್ತೆಷ್ಟು?

Minister Dinesh Gundurao drives for the 5th Kannada Sahitya Sammelana in Bengaluru
ಬೆಂಗಳೂರು3 hours ago

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ7 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ8 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌