Kalki 2898 AD: ಪ್ರಭಾಸ್, ದೀಪಿಕಾ, ಅಮಿತಾಭ್‌ ಮುಖ್ಯಭೂಮಿಕೆಯ ʻಕಲ್ಕಿ 2898 ADʼ ರಿಲೀಸ್‌ ಡೇಟ್‌ ಅನೌನ್ಸ್‌! - Vistara News

ಟಾಲಿವುಡ್

Kalki 2898 AD: ಪ್ರಭಾಸ್, ದೀಪಿಕಾ, ಅಮಿತಾಭ್‌ ಮುಖ್ಯಭೂಮಿಕೆಯ ʻಕಲ್ಕಿ 2898 ADʼ ರಿಲೀಸ್‌ ಡೇಟ್‌ ಅನೌನ್ಸ್‌!

Kalki 2898 AD: ಪ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿ ಈ ಸಿನಿಮಾಕ್ಕಿದೆ. ಅಶ್ವತ್ಥಾಮನಾಗಿ ಅಮಿತಾಭ್​ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.ಇತ್ತೀಚಿನ ವರದಿ ಪ್ರಕಾರ ಸಿನಿಮಾ ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡುವುದಾಗಿ ವರದಿಯಾಗಿದೆ. ಜೂನ್ 27 ರಂದು ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಚಿತ್ರ ಮೊದಲಿಗೆ ಮೇ 9ರಂದು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು.

VISTARANEWS.COM


on

Kalki 2898 AD to release on this date
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಭಾಸ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ಕಲ್ಕಿ (Kalki 2898 AD) ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ತಂಡ ರಿವೀಲ್ ಮಾಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇವರ ಜತೆಗೆ ಘಟಾನುಘಟಿ ಕಲಾವಿದರಾದ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ (Amitabh Bachchan) ಮತ್ತು ಕಮಲ್‌ ಹಾಸನ್‌ (Kamal Haasan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ರಿಲೀಸ್‌ ಡೇಟ್‌ ಬಗ್ಗೆ ಸಖತ್‌ ಚರ್ಚೆಗಳು ಆಗುತ್ತಿವೆ. ಚಿತ್ರತಂಡ ಜೂನ್ 27ರಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ ಎಂದು ವರದಿಯಾಗಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿ ಈ ಸಿನಿಮಾಕ್ಕಿದೆ. ಅಶ್ವತ್ಥಾಮನಾಗಿ ಅಮಿತಾಭ್​ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Kalki 2898 AD: ‘ಅಶ್ವತ್ಥಾಮ’ನಾಗಿ ಬಂದ ಅಮಿತಾಭ್‌: ಬಿಗ್‌ಬಿ ಲುಕ್ ಹೇಗಿದೆ?

ಏ.21ರಂದು ಚಿತ್ರತಂಡ ಅಮಿತಾಭ್‌ ಅವರ ಪಾತ್ರವನ್ನು ರಿವೀಲ್‌ ಮಾಡಿತ್ತು. ಅಶ್ವತ್ಥಾಮನಾಗಿ ಅಮಿತಾಭ್​ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತಾಭ್‌ ಬಚ್ಚನ್ ಹಳದಿ ಬಟ್ಟೆಯನ್ನು ಧರಿಸಿದ್ದರು. ಗುಹೆಯಂತೆ ಕಾಣುವ ಶಿವಲಿಂಗದ ಮುಂದೆ ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಮಗುವೊಂದು ನೀನು ಯಾರು? ಎಂದು ಕೇಳಿದಾಗ ʻʻಪ್ರಾಚೀನ ಕಾಲದಿಂದಲೂ, ನಾನು ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೆ. ನಾನು ಗುರು ದ್ರೋಣರ ಮಗ. ಅಶ್ವತ್ಥಾಮ.”ಎಂದು ಹೇಳುತ್ತಾರೆ. ಈ ಮೂಲಕ ಅಮಿತಾಭ್‌ ಪಾತ್ರ ರಿವೀಲ್‌ ಆಗಿತ್ತು.

ಇತ್ತೀಚಿನ ವರದಿ ಪ್ರಕಾರ ಸಿನಿಮಾ ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡುವುದಾಗಿ ವರದಿಯಾಗಿದೆ. ಜೂನ್ 27 ರಂದು ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಚಿತ್ರ ಮೊದಲಿಗೆ ಮೇ 9ರಂದು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಚುನಾವಣೆಯ ಕಾರಣ ಸಿನಿಮಾ ರಿಲೀಸ್‌ ಡೇಟ್‌ವನ್ನು ಮುಂದೂಡಲಾಯಿತು.

ಇದನ್ನೂ ಓದಿ: Kalki 2898 AD: ‘ಅಶ್ವತ್ಥಾಮ’ನಾಗಿ ಬಂದ ಅಮಿತಾಭ್‌: ಬಿಗ್‌ಬಿ ಲುಕ್ ಹೇಗಿದೆ?

ಇದನ್ನೂ ಓದಿ: Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼ ಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

ಭೂತ ಮತ್ತು ಭವಿಷ್ಯತ್‌ ಕಾಲದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ದೀಪಿಕಾ ಪಡುಕೋಣೆ, ಪ್ರಭಾಸ್‌, ಅಮಿತಾಬ್‌ ಬಚ್ಚನ್‌ ಅವರ ಫಸ್ಟ್‌ ಲುಕ್‌ ಅನ್ನು ರಿಲೀಸ್‌ ಮಾಡಲಾಗಿತ್ತು. ಇದು ಚಿತ್ರಪ್ರೇಮಿಗಳ ಗಮನ ಸೆಳೆದಿತ್ತು. ಜತೆಗೆ ಶಿವರಾತ್ರಿಯಂದು ಪ್ರಭಾಸ್‌ ಅವರ ಪಾತ್ರ ಹೆಸರನ್ನೂ ರಿವೀಲ್‌ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ದುಬಾರಿ ಸಿನಿಮಾ

ʼಕಲ್ಕಿ 2898 ಎಡಿʼ ಈ ವರ್ಷದ ಅತೀ ಹೆಚ್ಚಿನ ಬಜೆಟ್‌ ಹೊಂದಿರುವ ಚಿತ್ರ ಎನಿಸಿಕೊಳ್ಳಲಿದೆ. ಈ ಚಿತ್ರದ ಬಜೆಟ್‌ ಬರೋಬ್ಬರಿ 600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಇತ್ತೀಚಿನ ಬಹು ಕೋಟಿ ರೂ. ಬಜೆಟ್‌ನ ʼಸಲಾರ್‌ʼ (270 ಕೋಟಿ ರೂ.), ʼಅನಿಮಲ್‌ʼ (100 ಕೋಟಿ ರೂ.) ಮತ್ತು ʼಡಂಕಿʼ (140 ಕೋಟಿ ರೂ.) ಈ ಮೂರು ಚಿತ್ರಗಳ ಒಟ್ಟು ಬಜೆಟ್‌ಗಿಂತ ಜಾಸ್ತಿ. ಅಲ್ಲದೆ 2022ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ʼಬಹ್ಮಾಸ್ತ್ರʼಕ್ಕಿಂತಲೂ (400 ಕೋಟಿ ರೂ.) ʼಕಲ್ಕಿʼಯ ಬಜೆಟ್‌ ಅಧಿಕ. ಹೀಗಾಗಿಯೇ ಈ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.

ಯಾವುದೇ ತೆಲುಗು ಸಿನಿಮಾ ರಿಲೀಸ್ ಆದರೂ, ಒಂದು ದಿನ ಮುಂಚಿತವಾಗಿ ಅಮೆರಿಕದಲ್ಲಿ ಪ್ರೀಮಿಯರ್ ನಡೆಯುತ್ತೆ. ‘ಕಲ್ಕಿ 2828 AD’ ಬಹುಕೋಟಿ ವೆಚ್ಚದ ಸಿನಿಮಾ ಆಗಿರುವುದರಿಂದ ಒಂದು ದಿನ ಮುಂಚಿತವಾಗಿ, ಅಂದರೆ, ಜೂನ್ 26ರಂದು ಅಮೆರಿಕದಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Nandamuri Balakrishna: ಕುಡಿದು ಬಂದು ವೇದಿಕೆ ಮೇಲೆ ನಟಿ ಅಂಜಲಿಯನ್ನು ತಳ್ಳಿದ್ರಾ ಬಾಲಯ್ಯ?

Nandamuri Balakrishna: ವೇದಿಕೆ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯ ಸೇವಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿ ಬಾಲಕೃಷ್ಣ ವೇದಿಕೆಯಲ್ಲಿ ನಟಿ ಅಂಜಲಿ ಜತೆ ಆ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಇದೇ ವಿಚಾರ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ವಿಶ್ವಕ್ ಸೇನ್ ಮತ್ತು ನೇಹಾ ಶೆಟ್ಟಿ ಜೊತೆಯಾಗಿ ನಟಿಸಿರುವ ಅಂಜಲಿ ಅವರ ಮುಂಬರುವ ಚಿತ್ರ ‘ಗ್ಯಾಂಗ್ಸ್ ಆಫ್ ಗೋದಾವರಿ’ ಯ ಪ್ರೀ-ರಿಲೀಸ್ ಸಮಾರಂಭದಲ್ಲಿ ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು.

VISTARANEWS.COM


on

Nandamuri Balakrishna Pushes Away Actress Anjali
Koo

ಬೆಂಗಳೂರು: ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ (Nandamuri Balakrishna) ಇತ್ತೀಚೆಗೆ ತಮ್ಮ ಚಿತ್ರ `ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಪ್ರಚಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟಿ ಅಂಜಲಿಯನ್ನು (Actress Anjali ) ವೇದಿಕೆಯಲ್ಲಿಯೇ ತಳ್ಳಿದ್ದಾರೆ. ‘ಗ್ಯಾಂಗ್ಸ್ ಆಫ್ ಗೋದಾವರಿ’ ಯ ಪ್ರೀ-ರಿಲೀಸ್ ಸಮಾರಂಭದಲ್ಲಿ (Vishwak Sen and Neha Shetty) ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಇದೀಗ ಬಾಲಯ್ಯ ಅವರ ವರ್ತನೆಗೆ ನೆಟ್ಟಿಗರು ಛಿಮಾರಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ವೇದಿಕೆ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯ ಸೇವಿಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿ ಬಾಲಕೃಷ್ಣ ವೇದಿಕೆಯಲ್ಲಿ ನಟಿ ಅಂಜಲಿ ಜತೆ ಆ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಇದೇ ವಿಚಾರ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಬಾಟಲ್‌ನ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ವಿಡಿಯೊದಲ್ಲಿ ಏನಿದೆ?

ವೈರಲ್‌ ಆದ ವಿಡಿಯೊದಲ್ಲಿ ನಂದಮೂರಿ ಕೃಷ್ಣ ಅವರು ಚೈತನ್ಯ ಅವರ ಮುಂಬರುವ ತೆಲುಗು ಆಕ್ಷನ್ ಚಿತ್ರ ಗ್ಯಾಂಗ್ಸ್ ಆಫ್ ಗೋದಾವರಿಯ ಪ್ರಚಾರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಬಿಳಿ ಶೆರ್ವಾನಿ ಧರಿಸಿದ್ದರು. ವೇದಿಕೆಯ ಮೇಲೆ ನೇಹಾ ಶೆಟ್ಟಿ ಮತ್ತು ಅಂಜಲಿ ಅಕ್ಕ ಪಕ್ಕ ನಿಂತಿದ್ದರು. ನೇಹಾ ಅವರಿಗೆ ನಯವಾಗಿ ಪಕ್ಕಕ್ಕೆ ಸರಿಯಲು ಕೇಳುತ್ತಾರೆ. ಕೆಲವು ಕ್ಷಣಗಳ ನಂತರ, ಬಾಲಯ್ಯ ಅವರು ಅಂಜಲಿಯನ್ನು ದೂರ ತಳ್ಳುತ್ತಾರೆ, ಬಹುತೇಕ ನಟಿ ಬಿದ್ದೇ ಬಿಡುವಂತಿದ್ದರು. ಆಗ ನೇಹಾ ಅವರು ಅಂಜಲಿ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ನಟಿಯರು ತಮಾಷೆಯಾಗಿ ಬಾಲಯ್ಯ ನೋಡಿ ನಕ್ಕಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಬಾಲಯ್ಯ ಬಗ್ಗೆ ನೆಗೆಟಿವ್‌ ಕಮೆಂಟ್‌ಗಳು ಬರುತ್ತಿವೆ.

ಇದನ್ನೂ ಓದಿ: Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್‌ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್‌ ರಿವೀಲ್‌!

ಕಾರ್ಯಕ್ರಮದ ನಡುವೆ ಕೂಡ ಬಾಲಕೃಷ್ಣ ಮಧ್ಯ ಸೇವಿಸಿದ್ದಾರೆ. ಕುಡಿದು ವೇದಿಕೆ ಏರಿ ನಟಿ ಅಂಜಲಿ ಜತೆ ಈ ರೀತಿ ವರ್ತಿಸಿದ್ದಾರೆ ಎಂದು ಕೆಲವರು ಎರಡೂ ವೀಡಿಯೊಗಳನ್ನು ವೈರಲ್ ಮಾಡುತ್ತಿದ್ದಾರೆ. ಇನ್ನು ಬಾಲಯ್ಯ ವೇದಿಕೆಯಲ್ಲಿ ಬೇಕಾ ಬಿಟ್ಟಿ ಡೈಲಾಗ್‌ಗಳನ್ನು ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

“ಈ ವ್ಯಕ್ತಿ ಸೂಪರ್‌ಸ್ಟಾರ್, ಯಶಸ್ವಿ ರಾಜಕಾರಣಿ ಮತ್ತು ಸಹನಟಿಯನ್ನು ತಳ್ಳಿರುವುದು ಸರಿಯಲ್ಲʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ, ʻʻಆ ನಟಿ 50 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಿಟ್‌ ಕಂಡಿದೆ. ಆದರೆ ನಟ ಈ ರೀತಿ ವರ್ತಿಸಿದ್ದು ಸರಿಯಲ್ಲʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬಾಲಕೃಷ್ಣ ಅವರು ಮಗ ಮೋಕ್ಷಜ್ಞ ಕುರಿತಾಗಿ ಮಾತನಾಡಿದರು. ನಟ ಮಾತನಾಡಿ “ನನ್ನ ಮಗ ನನ್ನಿಂದ ಸ್ಫೂರ್ತಿ ಪಡೆಯಬೇಕೆಂದು ನಾನು ಬಯಸುವುದಿಲ್ಲ. ಆದರೂ ನನ್ನ ಅಭಿಮಾನಿಗಳು ನನ್ನ ನಿರ್ಧಾರದಿಂದ ಅಸಮಾಧಾನಗೊಳ್ಳುತ್ತಾರೆ. ಮೋಕ್ಷಜ್ಞ ಶೀಘ್ರದಲ್ಲೇ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾನೆ. ಇದು ಬಹುನಿರೀಕ್ಷಿತ ಚಿತ್ರವಾಗಲಿದೆ. ನಾನು ಅವನ ಹಿಂದೆ ಸದಾ ಇರುತ್ತೇನೆʼʼಎಂದರು.

“ನನ್ನ ಮಗ ಹೊಸ ತಲೆಮಾರಿ ನಟರ ಜತೆ ಕಾಂಪೀಟ್‌ ಮಾಡಬೇಕು ಎಂದು ಬಯಸುತ್ತೇನೆ. ಯುವ ನಾಯಕರಾದ ಸಿದ್ದು ಜೊನ್ನಲಗಡ್ಡ ಮತ್ತು ಅಡಿವಿ ಶೇಷ್‌ರನ್ನು ಕಣಕ್ಕಿಳಿಸಿ ಅವರಿಗೆ ಕಠಿಣ ಹೋರಾಟ ನೀಡಬಲ್ಲೆ ಎಂದು ಬಾಲಕೃಷ್ಣ ಹೇಳಿಕೊಂಡಿದ್ದಾರೆ.

ಬಾಲಕೃಷ್ಣ ‘ಅಖಂಡ’ ಮತ್ತು ‘ವೀರಸಿಂಹ ರೆಡ್ಡಿ’ಯಂತಹ ಹಿಟ್‌ ಸಿನಿಮಾಗಳಿಂದ ಸುದ್ದಿ ಮಾಡುತ್ತಿದ್ದಾರೆ. ‘ಅಖಂಡ 2’ ಗಾಗಿ ನಿರ್ದೇಶಕ ಬೋಯಪತಿ ಶ್ರೀನು ಅವರೊಂದಿಗೆ ಕೈಜೋಡಿಸಲು ಯೋಜಿಸುತ್ತಿದ್ದಾರೆ.

Continue Reading

ಸಿನಿಮಾ

Rashmika Mandanna: ಸಮಾರಂಭಗಳಲ್ಲಿ ರಶ್ಮಿಕಾ ಇಂಗ್ಲೀಷ್‌ ಏಕೆ ಮಾತನಾಡಲ್ಲ? ನಟಿ ಕೊಟ್ಟ ಸ್ಪಷ್ಟನೆ ಏನು?

Rashmika Mandanna: ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ `ಗಂ ಗಂ ಗಣೇಶ’ ( Gam Gam Ganesha) ಸಿನಿಮಾದ ಪ್ರಿ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಅವರ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೀಗ ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ರಶ್ಮಿಕಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಉತ್ತರವನ್ನೂ ನೀಡಿದ್ದಾರೆ.

VISTARANEWS.COM


on

Rashmika Mandanna shares why she doesn’t speak English
Koo

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ `ಗಂ ಗಂ ಗಣೇಶ’ ( Gam Gam Ganesha) ಸಿನಿಮಾದ ಪ್ರಿ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಅವರ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೀಗ ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ರಶ್ಮಿಕಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಉತ್ತರವನ್ನೂ ನೀಡಿದ್ದಾರೆ.

ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ ʻʻನೀವು ಇಂಗ್ಲಿಷ್‌ನಲ್ಲಿ ಮಾತನಾಡಲು ವಿನಂತಿ. ಇಂದು ನೀವು ಈವೆಂಟ್‌ನಲ್ಲಿ ತುಂಬ ಸುಂದರವಾಗಿ ಕಾಣುತ್ತೀದ್ದೀರಿ. ನಿಮ್ಮನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು, ಆದರೆ ನಾವು ನಿಮ್ಮನ್ನು ನೋಡಿ ಆನಂದಿಸುವಷ್ಟು ನಿಮ್ಮ ಮಾತುಗಳನ್ನು ಕೇಳಿಯೂ ಖುಷಿ ಪಡುತ್ತೇವೆ. ಆದರೆ, ನೀವು ತೆಲುಗಿನಲ್ಲಿ ಮಾತನಾಡುವುದನ್ನು ಮುಂದುವರಿಸಿದ್ದೀರಿ, ಅದು ನಮಗೆ ಅರ್ಥವಾಗಲಿಲ್ಲ. ಒಂದು ವೇಳೆ ನಾರ್ಥ್‌ ಸೈಡ್‌ ನಿಮಗೆ ಅಭಿಮಾನಿಗಳಿದ್ದರೆ, ಅವರೂ ನಿಮ್ಮ ಮಾತನ್ನು ಕೇಳಲು ಇಷ್ಟಪಡುತ್ತಾರೆ ಎಂದು ನೀವು ಭಾವಿಸುವುದಿಲ್ಲವೇ? ನೀವು ಇಂಗ್ಲಿಷ್‌ನಲ್ಲಿ ಮಾತನಾಡಿದರೆ, ಹೆಚ್ಚಿನ ಜನರು ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ನಾರ್ಥ್‌ ಮತ್ರವಲ್ಲ ಕನ್ನಡ, ತಮಿಳು ಅಥವಾ ಮಲಯಾಳಂ ಮಾತನಾಡುವವರೂ ಸಹ ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ಇಂಗ್ಲೀಷ್‌ನಲ್ಲಿ ಮಾತನಾಡಿ ಎಂಬುದೇ ನಮ್ಮ ವಿನಂತಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

ಈ ಪೋಸ್ಟ್‌ಗೆ ರಶ್ಮಿಕಾ ಎಕ್ಸ್‌ ಮೂಲಕ ಹೀಗೆ ಬರೆದುಕೊಂಡಿದ್ದಾರೆ ʻʻನಾನು ಇಂಗ್ಲಿಷ್‌ನಲ್ಲಿ ಮಾತನಾಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನೀವು ಎಲ್ಲಿಂದಲೇ ಬಂದಿದ್ದರೂ ಸಹ ಅರ್ಥ ಮಾಡಿಸಲು ಪ್ರಯತ್ನಿಸುತ್ತೇನೆ. ಆದರೆ ಅನೇಕ ಜನರು ಅವರ ಭಾಷೆಗಳಲ್ಲಿ ಮಾತನಾಡಬೇಕೆಂದು ಬಯಸುತ್ತಾರೆ. ಆಗ ನಾನು ಭಾಷೆಯ ಬಗ್ಗೆ ಅಗೌರವ ತೋರುತ್ತೇನೆ ಅಥವಾ ನನಗೆ ಭಾಷೆ ತಿಳಿದಿಲ್ಲ ಎಂದು ಭಾವಿಸುತ್ತಾರೆ. ಹೀಗಾಗಿ ನನ್ನ ನನ್ನ ಕೈಲಾದಷ್ಟು ಪ್ರಯತ್ನಿಸುವೆʼʼಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರು, ‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಶೀಘ್ರದಲ್ಲೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ ಎಂದು ವದಂತಿಗಳಿವೆ. ಹಿಂದಿಯಲ್ಲಿ, ಅವರು ಸಲ್ಮಾನ್ ಖಾನ್ ಅವರೊಂದಿಗೆ ಸಿಕಂದರ್ ಮತ್ತು ವಿಕ್ಕಿ ಕೌಶಲ್ ಅವರೊಂದಿಗೆ ಛಾವಾದಲ್ಲಿ ನಟಿಸಲಿದ್ದಾರೆ. ತೆಲುಗಿನಲ್ಲಿ, ಅವರು ಅಲ್ಲು ಅರ್ಜುನ್ ಜೊತೆ ಪುಷ್ಪ: ದಿ ರೂಲ್, ಧನುಷ್ ಜೊತೆ ಕುಬೇರ, ದಿ ಗರ್ಲ್‌ಫ್ರೆಂಡ್ ಮತ್ತು ರೇನ್‌ಬೋ ಚಿತ್ರಗಳಲ್ಲಿ ನಟಿಸಲಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಇದು ರಶ್ಮಿಕಾ ಅವರ ನಾಲ್ಕನೇ ಬಾಲಿವುಡ್ ಚಿತ್ರ. ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.

ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ರಶ್ಮಿಕಾ ಮುಂದೆ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

Continue Reading

ಟಾಲಿವುಡ್

Pushpa 2: ʼಪುಷ್ಪ 2ʼ ಸಿನಿಮಾದ ಎರಡನೇ ಹಾಡು ರಿಲೀಸ್‌: ಅಲ್ಲು ಜತೆ ಹೆಜ್ಜೆ ಹಾಕಿದ ರಶ್ಮಿಕಾ!

Pushpa 2: ಸಾಮಿ ಹಾಡನ್ನೂ ಮೀರಿಸುವಂತಿದೆ ಹಾಡು. ಅ ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನದಲ್ಲಿ ಶ್ರೇಯಾ ಘೋಷಾಲ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಹಾಡಿಗೆ ಬಾಲಿವುಡ್‌ ಗಣೇಶ್ ಆಚಾರ್ಯ ಕೊರಿಯೋಗ್ರಾಫಿ ಇದೆ.ಈ ಹಾಡು 6 ಭಾಷೆಗಳಲ್ಲಿ ಮೂಡಿ ಬಂದಿದೆ. ಎಲ್ಲ ಭಾಷೆಗಳಲ್ಲಿಯೂ ಶ್ರೇಯಾ ಘೋಷಾಲ್‌ ಹಾಡಿಗೆ ಧ್ವನಿ ನೀಡುತ್ತಿರುವುದು ವಿಶೇಷ.

VISTARANEWS.COM


on

Pushpa 2 SOOSEKI Couple Song Lyrical Video out
Koo

ಬೆಂಗಳೂರು: ಸದ್ಯ ದೇಶದ ಗಮನ ಸೆಳೆದಿರುವ ಚಿತ್ರಗಳ ಪೈಕಿ ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ (Pushpa 2) ಕೂಡ ಒಂದು. 2021ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುದ್ದ ಪ್ಯಾನ್‌ ಇಂಡಿಯಾ ಸಿನಿಮಾ ʼಪುಷ್ಪʼದ ಮುಂದುವರಿದ ಭಾಗ ಇದು. ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಮೊದಲ ಹಾಡು ಈಗಾಗಲೇ ರಿಲೀಸ್‌ ಆಗಿ ಧೂಳೆಬ್ಬಿಸುತ್ತಿದೆ. ಅದರಲ್ಲಿಯೂ ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ. ʻಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಇದರಲ್ಲಿನ ಹುಕ್ ಸ್ಟೆಪ್ ವೈರಲ್‌ ಆಗಿದೆ. ಇದೀಗ ಎರಡನೇ ಹಾಡು ಔಟ್‌ ಆಗಿದೆ. ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್‌ ಪಡೆದುಕೊಂಡಿದೆ.

ಸಾಮಿ ಹಾಡನ್ನೂ ಮೀರಿಸುವಂತಿದೆ ಸೂಸೇನೆ ಹಾಡು. ಅ ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನದಲ್ಲಿ ಶ್ರೇಯಾ ಘೋಷಾಲ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಹಾಡಿಗೆ ಬಾಲಿವುಡ್‌ ಗಣೇಶ್ ಆಚಾರ್ಯ ಕೊರಿಯೋಗ್ರಾಫಿ ಇದೆ.

6 ಭಾಷೆಗಳಲ್ಲಿಯೂ ಶ್ರೇಯಾ ಮೋಡಿ

ಈ ಹಾಡು 6 ಭಾಷೆಗಳಲ್ಲಿ ಮೂಡಿ ಬಂದಿದೆ. ಎಲ್ಲ ಭಾಷೆಗಳಲ್ಲಿಯೂ ಶ್ರೇಯಾ ಘೋಷಾಲ್‌ ಹಾಡಿಗೆ ಧ್ವನಿ ನೀಡುತ್ತಿರುವುದು ವಿಶೇಷ. ಸೂಸೆಕಿ (ತೆಲುಗು), ನೋಡೋಕ (ಕನ್ನಡ), ಅಂಗಾರೊನ್‌ (ಹಿಂದಿ), ಸೂಡಾನ (ತಮಿಳು), ಕಂಡಾಲೋ (ಮಲಯಾಳಂ) ಮತ್ತು ಆಗುನೆರ್‌ (ಬಂಗಾಳಿ) ಎಂದು ಆರಂಭವಾಗುವ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಿದ್ದಾರೆ.

ಇದನ್ನೂ ಓದಿ: Pushpa 2: ʼಪುಷ್ಪ 2ʼ ಸಿನಿಮಾ ತಂಡದಿಂದ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ಚಿತ್ರ ಬಿಡುಗಡೆ ಯಾವಾಗ?

ʼಪುಷ್ಪ 2ʼ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಜತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ʼಪುಷ್ಪ 2ʼ ತಯಾರಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಟೀಸರ್​ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮುಖವನ್ನು ನೀಲಿ ಮತ್ತು ಕೆಂಪು ಬಣ್ಣಗಳನ್ನು ಮೆತ್ತಿಕೊಂಡಿರುವುದು ಕಂಡು ಬಂದಿತ್ತು. ಭಾರವಾದ ಸಾಂಪ್ರದಾಯಿಕ ಚಿನ್ನ ಮತ್ತು ಹೂವಿನ ಆಭರಣಗಳೊಂದಿಗೆ ಮೇಕಪ್ ಧರಿಸಿ ಗೂಂಡಾಗಳನ್ನು ಹೊಡೆಯುತ್ತಿರುವುದು ಟೀಸರ್‌ ಕಂಡು ಬಂದು ವೀಕ್ಷಕರ ಕುತೂಹಲ ಕೆರಳಿಸಿತ್ತು. ಸದ್ಯ ಅಭಿಮಾನಿಗಳು ಚಿತ್ರ ಬಿಡುಗಡೆ ದಿನಾಂಕವನ್ನು ಎದುರು ನೋಡುತ್ತಿದ್ದಾರೆ.

Continue Reading

ಟಾಲಿವುಡ್

Kannada New Movie: ʻಸಂಭವಾಮಿ ಯುಗೇ ಯುಗೇʼ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಿದ ನಟಿ ಶ್ರುತಿ ಹರಿಹರನ್!

Kannada New Movie: ಖ್ಯಾತ ನಟಿ ಶ್ರುತಿ ಹರಿಹರನ್ ಜಾನಪದ ಶೈಲಿಯ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಪೂರನ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ನಕಾಶ್ ಹಾಗೂ ಸ್ಪರ್ಶ ಹಾಡಿದ್ದಾರೆ. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

VISTARANEWS.COM


on

Sambavami Yuge Yuge song release By sruthi hariharan
Koo

ಬೆಂಗಳೂರು: ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ (Kannada New Movie) ನಾಯಕನಾಗಿ ನಟಿಸಿರುವ “ಸಂಭಾವಮಿ ಯುಗೇಯುಗೇ” ಚಿತ್ರದ ಮೊದಲ ಹಾಡು “ಡೋಲು ತಮಟೆ ವಾದ್ಯ” ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ನಟಿ ಶ್ರುತಿ ಹರಿಹರನ್ ಜಾನಪದ ಶೈಲಿಯ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಅರಸು ಅಂತಾರೆ ಬರೆದಿರುವ ಈ ಹಾಡಿಗೆ ಗೀತಾ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಪೂರನ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ. ನಕಾಶ್ ಹಾಗೂ ಸ್ಪರ್ಶ ಹಾಡಿದ್ದಾರೆ. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ʻʻಇದು ನನ್ನ ಮೊದಲ ಚಿತ್ರ. ನನ್ನ ಮೇಲೆ ನಂಬಿಕೆ ಇಟ್ಟು ಇಂಥದ್ದೊಂದು ಅವಕಾಶ ಕೊಟ್ಟ ನಿರ್ಮಾಪಕಿ ಪ್ರತಿಭಾ ಅವರಿಗೆ ಧನ್ಯವಾದಗಳು. ಇದೊಂದು ಕಮರ್ಷಿಯಲ್‍ ಥ್ರಿಲ್ಲರ್ ನ ಚಿತ್ರ. ಮಂಡ್ಯ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಾನು ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೆ. ಇದೊಂದು ಹಳ್ಳಿ ಹಿನ್ನೆಲೆಯ ಚಿತ್ರ. ಹಳ್ಳಿ ಹುಡುಗರು ಓದಿ, ಪಟ್ಟಣಕ್ಕೆ ಹೋಗಿ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ಹಳ್ಳಿ ಉಳಿಯುವುದು ಹೇಗೆ? ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲಸಬೇಕು ಎಂಬುದೆ ಚಿತ್ರದ ಕಥಾ ಸಾರಾಂಶ. ಜೂನ್‍ 21ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಇದು ಕಮರ್ಷಿಯಲ್‍ ಚಿತ್ರವಾದರೂ ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳಿವೆʼʼ ಎಂದರು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ನಾಯಕ ಜಯ್ ಶೆಟ್ಟಿ ಮಾತನಾಡಿ ʻʻನನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ. ನಾನು ಹೊಸಬನಾದರೂ ನನ್ನ ಮೇಲೆ ನಂಬಿಕೆ ಇಟ್ಟು, ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಧನ್ಯವಾದಗಳುʼʼ ಎಂದರು.

ʻʻನಾನು ಬಿಜಾಪುರ ಮೂಲದವಳು. ಆದರೆ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಒಂಬತ್ತು ವರ್ಷಗಳ ಕಾಲ ಮಾಡಲಿಂಗ್‍ ಮಾಡಿದ್ದೇನೆ. ಹೀಗಿರುವಾಗಲೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ನನ್ನ ಭಾಷೆ ಮತ್ತು ನಟನೆಯನ್ನು ತಿದ್ದಿತೀಡಿದ ನಿರ್ದೇಶಕ ಚೇತನ್‍ ಶೆಟ್ಟಿ ಅವರಿಗೆ ಧನ್ಯವಾದಗಳುʼʼ ಎಂದರು ನಾಯಕಿ ನಿಶಾ ರಜಪೂತ್ .

ಪ್ರಮುಖಪಾತ್ರದಲ್ಲಿ ನಟಿಸಿರುವ ಅಶೋಕ್ ಕುಮಾರ್ ಹಾಗೂ ಮಧುರಗೌಡ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಾಜೇಂದ್ರ ಕಾರಂತ್‍, ಅಶ್ವಿನ್‍ ಹಾಸನ್‍, ವಿಕ್ಟರಿ ವಾಸು, ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ, ಕಾರ್ಯಕಾರಿ ನಿರ್ಮಾಪಕ ದಿನೇಶ್ ರಾಜನ್ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಹಾಜರಿದ್ದರು. ನಿರ್ಮಾಪಕಿ ಪ್ರತಿಭಾ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

Continue Reading
Advertisement
Fake CBI Officer
ಬೆಂಗಳೂರು4 mins ago

Fake CBI Officer : ಸಿಬಿಐ ಪೊಲೀಸರೆಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ ನಾಲ್ವರು ಅರೆಸ್ಟ್‌

Prajwal Devaraj death news take leagal action by family
ಸ್ಯಾಂಡಲ್ ವುಡ್20 mins ago

Prajwal Devaraj: ಪ್ರಜ್ವಲ್​ ದೇವರಾಜ್ ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಕುಟುಂಬಸ್ಥರ ಆಕ್ರೋಶ!

Prajwal Revanna Case
ಕ್ರೈಂ24 mins ago

Prajwal Revanna Case: ಅಶ್ಲೀಲ ವಿಡಿಯೋ ಹಂಚಿದ ಆರೋಪಿಗಳಾದ ಚೇತನ್‌, ಲಿಖಿತ್‌ಗೆ ಜಾಮೀನು

Agnikul Cosmos
ತಂತ್ರಜ್ಞಾನ40 mins ago

Agnikul Cosmos: ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿದ ಸ್ಟಾರ್ಟ್ ಅಪ್ ಕಂಪನಿ ಅಗ್ನಿಕುಲ್ ಕಾಸ್ಮೋಸ್; ಮೋದಿ ಅಭಿನಂದನೆ

PM Modi
Lok Sabha Election 202444 mins ago

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

Love Case in vijayapura
ವಿಜಯಪುರ53 mins ago

Love Case : ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕೇಸ್‌; ಯುವತಿ ತಂದೆ ಅರೆಸ್ಟ್‌

Kantara Movie Mollywood actor enters
ಸಿನಿಮಾ57 mins ago

Kantara Movie: `ಕಾಂತಾರ ಚಾಪ್ಟರ್‌ 1‌’ ಸಿನಿಮಾಗೆ ಖ್ಯಾತ ಮಾಲಿವುಡ್‌ ನಟ ಎಂಟ್ರಿ!

Singapore Open
ಕ್ರೀಡೆ58 mins ago

Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

prajwalrevanna case hassan protest
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

PM Narendra Modi
ದೇಶ1 hour ago

PM Narendra Modi: ಪ್ರಧಾನಿ ಮೋದಿ ಸ್ಪರ್ಧೆ ಅನರ್ಹತೆಗೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌