IPL 2024 : ಹಳೆ ಸೇಡು; ರಾಹುಲ್ ವಿರುದ್ಧವೇ ತಿರುಗಿಬಿದ್ದ ನವಿನ್​ ಉಲ್ ಹಕ್​ - Vistara News

ಕ್ರೀಡೆ

IPL 2024 : ಹಳೆ ಸೇಡು; ರಾಹುಲ್ ವಿರುದ್ಧವೇ ತಿರುಗಿಬಿದ್ದ ನವಿನ್​ ಉಲ್ ಹಕ್​

IPL 2024: ಎಕಾನಾ ಕ್ರೀಡಾಂಗಣದಲ್ಲಿ ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ನವೀನ್-ಉಲ್-ಹಕ್ ಬೌಲರ್​ಗಳ ಪ್ರದರ್ಶನದ ಬಗ್ಗೆ ಟೀಕಿಸಲಿಲ್ಲ ಆದರೆ ಬ್ಯಾಟಿಂಗ್ ವಿಭಾಗವನ್ನು ತರಾಟೆಗೆ ತೆಗೆದುಕೊಂಡರು. ವಿಕೆಟ್ ಬ್ಯಾಟರ್​ಗಳಿಗೆ ಸೂಕ್ತವಾದ ಟ್ರ್ಯಾಕ್ ಆಗಿತ್ತು. ಐಪಿಎಲ್ 2024 ರಲ್ಲಿ ಅವರು ಇಲ್ಲಿಯವರೆಗೆ ನೋಡಿದ ಏಕಾನಾದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪಿಚ್​ ಆಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾನುವಾರ ರಾತ್ರಿ ಕೋಲ್ಕೊತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಬಗ್ಗೆ ವೇಗದ ಬೌಲರ್​ ನವಿನ್​ ಉಲ್​ ಹಕ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್ ಸರಿಯಾಗಿ ಮಾಡದ ರಾಹುಲ್​ ಹಾಗೂ ಇತರರ ಮೇಲೆ ಅವರು ತಿರುಗಿ ಬಿದ್ದಿದ್ದಾರೆ. ಎಲ್ಎಸ್​ಜಿ ಬ್ಯಾಟರ್​ಗಳು ಕಳಪೆ ಬ್ಯಾಟಿಂಗ್ ಮಾಡಿದ್ದರು. ನಾಯಕ ರಾಹುಲ್ ಬಳಿಕ ಬೌಲಿಂಗ್ ಸರಿಯಾಗಿ ಇಲ್ಲ ಎಂದು ದೂರಿದ್ದರು. ಇದು ನವಿನ್​ಗೆ ಬೇಸರ ತರಿಸಿತ್ತು ಎಂದು ಅಂದಾಜಿಸಲಾಗಿದೆ. ಒಂದು ಅರ್ಥದಲ್ಲಿ ರಾಹುಲ್ ಹೇಳಿರುವುದು ಸರಿಯಾಗಿದೆ. ಆರಂಭದಲ್ಲಿ ಸುನಿಲ್ ನರೈನ್​ಗೆ ಹೆಚ್ಚು ರನ್​ ಬಿಟ್ಟುಕೊಟ್ಟ ಕಾರಣ ಸಮಸ್ಯೆ ಉಂಟಾಗಿತ್ತು. ಅಲ್ಲದೆ, 236 ರನ್​ಗಳ ಬೃಹತ್​ ಗುರಿಯನ್ನು ಎದುರಿಸುವಂತಾಗಿತ್ತು.

ನವೀನ್ ಉಲ್ ಹಕ್ ಹೇಳಿದ್ದೇನು?

ಎಕಾನಾ ಕ್ರೀಡಾಂಗಣದಲ್ಲಿ ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ನವೀನ್-ಉಲ್-ಹಕ್ ಬೌಲರ್​ಗಳ ಪ್ರದರ್ಶನದ ಬಗ್ಗೆ ಟೀಕಿಸಲಿಲ್ಲ ಆದರೆ ಬ್ಯಾಟಿಂಗ್ ವಿಭಾಗವನ್ನು ತರಾಟೆಗೆ ತೆಗೆದುಕೊಂಡರು. ವಿಕೆಟ್ ಬ್ಯಾಟರ್​ಗಳಿಗೆ ಸೂಕ್ತವಾದ ಟ್ರ್ಯಾಕ್ ಆಗಿತ್ತು. ಐಪಿಎಲ್ 2024 ರಲ್ಲಿ ಅವರು ಇಲ್ಲಿಯವರೆಗೆ ನೋಡಿದ ಏಕಾನಾದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪಿಚ್​ ಆಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಕೊಹ್ಲಿ ಜತೆ ಜಗಳವಾಡಿದ್ದ ವೇಳೆ ನಾಯಕ ರಾಹುಲ್ ಅವರ ಬೆಂಬಲಕ್ಕೆ ನಿಂತಿಲ್ಲ. ಬದಲಾಗಿ ಕೊಹ್ಲಿ ಪರವಾಗಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಕೊಹ್ಲಿ ಪ್ರತಿಕಾರ ತೀರಿಸಿದ್ದಾರೆ ಎನ್ನಲಾಗಿದೆ.

236 ರನ್​ಗಳ ಗುರಿ ಬೆನ್ನಟ್ಟಬೇಕಾಗಿತ್ತು ಎಂದು ನವೀನ್-ಉಲ್-ಹಕ್ ಹೇಳಿದ್ದಾರೆ. ಏಕೆಂದರೆ ಪಿಚ್​ ಬ್ಯಾಟರ್​ಗಳಿಗೆ ಹೆಚ್ಚು ಅನುಕೂಲಕರವಾಗಿತ್ತು. ಎಲ್ಎಸ್​​ಜಿ ಬ್ಯಾಟಿಂಗ್ ವಿಭಾಗದಲ್ಲಿ ಜಿದ್ದು ಕಾಣೆಯಾಗಿದೆ. ಅವರು ಚೇಸಿಂಗ್ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ.

ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್​​ಜಿ 211 ರನ್​ಗಳ ಚೇಸ್ ಮಾಡಿದ್ದನ್ನು ಅವರು ಉದಾಹರಣೆಯಾಗಿ ನೀಡಿದರು. 2 ನೇ ಇನಿಂಗ್ಸ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಾಗಿತ್ತು. ಆದರೆ, ಎಲ್​ಎಸ್​ಜಿ ಆಟಗಾರರು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದರು.

“ವಿಕೆಟ್ ಸಾಕಷ್ಟು ಉತ್ತಮವಾಗಿತ್ತು. ಲಕ್ನೋದಲ್ಲಿ ನಾವು ಇಲ್ಲಿಯವರೆಗೆ ಆಡಿದ ಪಂದ್ಯಗಳನ್ನು ನೋಡಿದರೆ, ಇದು ಬ್ಯಾಟಿಂಗ್ ಮಾಡಲು ಅತ್ಯುತ್ತಮ ವಿಕೆಟ್ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಇಲ್ಲಿಯವರೆಗೆ ಚೇಸಿಂಗ್ ನಲ್ಲಿ ಮಾಡಿದಂತಹ ಕೆಲಸಗಳನ್ನು ಮಾಡಲಿಲ್ಲ. ಚೆಪಾಕ್​ನಲ್ಲಿ ನಾವು ಆಡಿದ ಪಂದ್ಯದಲ್ಲೂ ನಾವು ಸ್ಕೋರ್ ಅನ್ನು ಬೆನ್ನಟ್ಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Asha Sobhana : ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ಸಿಬಿ ಆಟಗಾರ್ತಿ

ವಿಕೆಟ್ ಕೆಟ್ಟದಾಗಿರಲಿಲ್ಲ ಅಥವಾ ಬೌಲರ್​ಗಳಿಗೆ ಅನುಕೂಲಕರವಾಗಿರಲಿ್ಲ. ಬೌಲರ್​ಗಳಿಗೆ ಯಾವುದೇ ಕೆಲಸ ಮಾಡಲಿಲ್ಲ. ಕೆಕೆಆರ್​ ತಂಡದ ಆಟಗಾರರು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದು ನವೀನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಂಡದ ಆಯ್ಕೆ ಬಗ್ಗೆ ನವೀನ್ ಅಭಿಪ್ರಾಯ


ಲಕ್ನೋ ಸೂಪರ್ ಜೈಂಟ್ಸ್​​ ಪ್ಲೇಯಿಂಗ್ ಇಲೆವೆನ್ ಆಯ್ಕೆ ಪ್ರಕ್ರಿಯೆಯ ಬಗ್ಗೆಯೂ ನವಿನ್​ ಮಾತನಾಡಿದ್ದಾರೆ. ಅದಕ್ಕೆ ಅದ್ಭುತ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಾನು ತರಬೇತುದಾರನಲ್ಲ ಅಥವಾ ತಂಡದ ನಾಯಕನಲ್ಲ, ಆದ್ದರಿಂದ ಆಯ್ಕೆಯ ಬಗ್ಗೆ ತಿಳಿದಿಲ್ಲ, ತೆರೆಮರೆಯಲ್ಲಿ ನಡೆಯುವ ವಿಷಯಗಳ ಬಗ್ಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ಸರ್, ನಾನು ಕೋಚ್ ಅಲ್ಲ, ನಾಯಕನೂ ಅಲ್ಲ. ನಾನೊಬ್ಬ ಆಟಗಾರ. ನನ್ನ ಆಯ್ಕೆಯ ಬಗ್ಗೆ ನನಗೆ ತಿಳಿದಿಲ್ಲ, ಇತರರ ಬಗ್ಗೆ ನಾನು ಏನು ಹೇಳಬಹುದು? ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ಲ” ಎಂದು ನವೀನ್ ಹೇಳಿದ್ದಾರೆ.

ಎಸ್​ಆರ್​​ಎಚ್​​ ಸೋಲಿಸಬೇಕು

ಲಕ್ನೋ ಸೂಪರ್ ಜೈಂಟ್ಸ್ ತನ್ನ ಮುಂದಿನ ಲೀಗ್ ಹಂತದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಐಪಿಎಲ್ 2024 ರಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಡಲು ಎಲ್ಎಸ್ಜಿ ಆರೆಂಜ್ ಆರ್ಮಿಯನ್ನು ಸೋಲಿಸಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

IND vs SA Final: ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಇರುವ ಭಾರತ ತಂಡವನ್ನು ಬಲಿಷ್ಠ ಎನ್ನಲೇಬೇಕು. ಆದರೆ, ಭಾರತ ಪೂರ್ಣ ಎಚ್ಚರದಿಂದಲೇ ಫೈನಲ್​ ಆಡಬೇಕು.

VISTARANEWS.COM


on

IND vs SA Final
Koo

ಬಾರ್ಬಡೋಸ್​: 10 ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಲ್ಲಿ ಫೈನಲ್​(IND vs SA Final) ಪ್ರವೇಶಿಸಿರುವ ಭಾರತ ತಂಡ ಫೈನಲ್​ ಪಂದ್ಯ ಆಡಲು ಸಜ್ಜಾಗಿ ನಿಂತಿದೆ. ಬ್ರಿಜ್‌ಟೌನ್‌ನ(Bridgetown) “ಕೆನ್ಸಿಂಗ್ಟನ್‌ ಓವಲ್‌’(Kensington Oval) ಮೈದಾನದಲ್ಲಿ ಇಂದು ನಡೆಯುವ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ(South Africa vs India Final) ಸವಾಲು ಎದುರಿಸಲಿದೆ. ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿಗೆ ಇದು ಬಹುತೇಕ ಕೊನೆಯ ಟಿ20 ವಿಶ್ವಕಪ್​ ಟೂರ್ನಿಯಾಗಿದೆ. ತಮ್ಮ ಅಂತಿಮ ಪ್ರಯತ್ನದಲ್ಲಾದರೂ ಕಪ್​ ಗೆದ್ದು ಸ್ಮರಣೀಯ ವಿದಾಯ ಸಿಗುವಂತಾಗಲಿ ಎಂದು ಉಭಯ ಆಟಗಾರರ ಅಭಿಮಾನಿಗಳ ಹಾರೈಕೆಯಾಗಿದೆ.

ರನ್‌ ಮಷಿನ್‌ ಖ್ಯಾತಿಯ ವಿರಾಟ್​ ಕೊಹ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಆಡಿದ 7 ಪಂದ್ಯಗಳಲ್ಲಿ ವಿರಾಟ್‌ ಗಳಿಸಿರುವುದು ಕೇವಲ 75 ರನ್‌. ಪ್ರತಿ ಐಸಿಸಿ ಟೂರ್ನಿಯಲ್ಲಿ ಅಬ್ಬರಿಸುವ ಕೊಹ್ಲಿ ಇಷ್ಟೊಂದು ಕಳಪೆ ಪ್ರದರ್ಶನ ತೋರಿದ್ದು ಇದೇ ಮೊದಲು. ಸ್ವತಃ ಕೊಹ್ಲಿ ಕೂಡ ತಮ್ಮ ಬ್ಯಾಟಿಂಗ್​ ಬಗ್ಗೆ ಚಿಂತಿಸಿ ಕಣ್ಣೀರು ಕೂಡ ಹಾಕಿದ್ದಾರೆ. 35 ವರ್ಷದ ವಿರಾಟ್ ಕೊಹ್ಲಿ ಮತ್ತು 36 ವರ್ಷದ ರೋಹಿತ್​ ಶರ್ಮ ಪಾಲಿಗೆ ಬಹುತೇಕ ಇದೇ ಕೊನೆಯ ಟಿ20 ವಿಶ್ವಕಪ್ ಆಗುವ ಸಾಧ್ಯತೆಯಿದೆ. ಹೀಗಾಗಿ ವಿರಾಟ್ ಮತ್ತು ರೋಹಿತ್​ ತಮ್ಮ ಪಾಲಿನ ಬಹುತೇಕ ಕೊನೆಯ ವಿಶ್ವಕಪ್ ಫೈನಲ್‌ನಲ್ಲಿ ಸ್ಮರಣೀಯ ಇನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ.

ದ್ರಾವಿಡ್​ಗೆ ಸಿಗಲಿ ಸ್ಮರಣೀಯ ಉಡುಗೊರೆ

ರಾಹುಲ್​ ದ್ರಾವಿಡ್​ ಅವರಿಗೆ ಕೋಚ್​ ಆಗಿ ಇದು ಕೊನೆಯ ಟೂರ್ನಿಯಾಗಿದೆ. ಈ ಟೂರ್ನಿ ಮುಕ್ತಾಯದ ಬಳಿಕ ಅವರು ಕೋಚಿಂಗ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. 2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ರಾಹುಲ್​ ದ್ರಾವಿಡ್​ಗೆ ಕೋಚ್​ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್​ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿಯೂ ಭಾರತ ಫೈನಲ್​ನಲ್ಲಿ ಸೋಲು ಕಂಡಿತ್ತು. ಇದೀಗ ನಿರ್ಗಮನದ ಹಂತದಲ್ಲಿರುವ ದ್ರಾವಿಡ್​ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಭಾರತ ತಂಡ ಕಪ್​ ಗೆದ್ದರೆ ಅವರಿಗೂ ಕೂಡ ವಿಶ್ವಕಪ್​ ಗೆದ್ದ ಸಂತಸವಿರುತ್ತದೆ. ಜತೆಗೆ ಸ್ಮರಣೀಯ ಉಡುಗೊರೆಯೊಂದು ಲಭಿಸಲಿದೆ. ಇದು ನೆರವೇರಲಿ ಎನ್ನುವುದು ಕೊಟ್ಯಂತರ ಅಭಿಮಾನಿಗಳ ಹಾರೈಕೆಯಾಗಿದೆ.

ಇದನ್ನೂ ಓದಿ IND vs SA Final: ಭಾರತ ತಂಡ ವಿಶ್ವಕಪ್​ ಗೆಲ್ಲಲಿ; ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

ಭಾರತ ಬಲಿಷ್ಠ ಆದರೆ ಎಚ್ಚರ ಅಗತ್ಯ


ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಇರುವ ಭಾರತ ತಂಡವನ್ನು ಬಲಿಷ್ಠ ಎನ್ನಲೇಬೇಕು. ಆದರೆ, ಭಾರತ ಪೂರ್ಣ ಎಚ್ಚರದಿಂದಲೇ ಫೈನಲ್​ ಆಡಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.

Continue Reading

ಕ್ರಿಕೆಟ್

IND vs SA Final: ಭಾರತ ತಂಡ ವಿಶ್ವಕಪ್​ ಗೆಲ್ಲಲಿ; ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

IND vs SA Final: 2014ರಲ್ಲಿ ಭಾರತ ಟಿ20 ಫೈನಲ್​ ಪ್ರವೇಶಿಸಿತ್ತು. ಆದರೆ ಲಂಕಾ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದೀಗ 10 ವರ್ಷಗಳ ಬಳಿಕ ಈ ಕೂಟದಲ್ಲಿ ಭಾರತ ಫೈನಲ್​ ಪಂದ್ಯ ಆಡುತ್ತಿದೆ. ಎದುರಾಳಿ ದಕ್ಷಿಣ ಆಫ್ರಿಕಾಕ್ಕೆ ಇದು ಚೊಚ್ಚಲ ಫೈನಲ್​ ಪಂದ್ಯವಾಗಿದೆ.

VISTARANEWS.COM


on

IND vs SA Final
Koo

ಉತ್ತರ ಪ್ರದೇಶ: 2023ರ ಏಕದಿನ ವಿಶ್ವಕಪ್‌ ಗೆಲ್ಲುವ ಸುವರ್ಣಾವಕಾಶ ಕಳೆದುಕೊಂಡ ಭಾರತದ ಮುಂದೆ ಇದೀಗ ಟಿ20 ವಿಶ್ವಕಪ್(T20 World Cup 2024)​ ಗೆಲ್ಲುವ ಅವಕಾಶವೊಂದು ಬಂದು ನಿಂತಿದೆ. ಇಂದು(ಶನಿವಾರ) ನಡೆಯುವ ಫೈನಲ್(IND vs SA Final)​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಟಿ20 ವಿಶ್ವಕಪ್‌ ಭಾರತಕ್ಕೆ ಒಲಿಯಲಿ ಎಂಬುದು ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಹಾರೈಕೆ. ಭಾರತ ತಂಡದ ಯಶಸ್ಸಿಗಾಗಿ ಅಭಿಮಾನಿಗಳು ಮತ್ತು ಕೆಲ ಸಾಧು ಸಂತರು ಉತ್ತರಪ್ರದೇಶದ ಪ್ರಯಾಗ್ ರಾಜ್​ನಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

2013ರ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಫೈನಲ್​ನಲ್ಲಿ ಗೆದ್ದು ಭಾರತದ ಪ್ರಶಸ್ತಿ ಬರ ನೀಗಲಿ ಎನ್ನುವ ನಿಟ್ಟಿನಲ್ಲಿ ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳು ಟೀಮ್​ ಇಂಡಿಯಾ ಆಟಗಾರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ತಂಡದ ಆಟಗಾರರ ಫೋಟೊವನ್ನು ಇರಿಸಿ ಪೂಜೆ, ಭಜನೆ ಮತ್ತು ಗಂಗಾ ಪೂಜೆ ನೆರವೇರಿಸಿ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ IND vs SA Final: ಫೈನಲ್​ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ನಡುಕ ಹುಟ್ಟಿಸಿದ ಅಂಪೈರ್​!

2014ರಲ್ಲಿ ಭಾರತ ಟಿ20 ಫೈನಲ್​ ಪ್ರವೇಶಿಸಿತ್ತು. ಆದರೆ ಲಂಕಾ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದೀಗ 10 ವರ್ಷಗಳ ಬಳಿಕ ಈ ಕೂಟದಲ್ಲಿ ಭಾರತ ಫೈನಲ್​ ಪಂದ್ಯ ಆಡುತ್ತಿದೆ. ಎದುರಾಳಿ ದಕ್ಷಿಣ ಆಫ್ರಿಕಾಕ್ಕೆ ಇದು ಚೊಚ್ಚಲ ಫೈನಲ್​ ಪಂದ್ಯವಾಗಿದೆ. ಇತ್ತಂಡಗಳು ಕೂಡ ಟೂರ್ನಿಯ ಅಜೇಯ ತಂಡಗಳಾಗಿ ಫೈನಲ್​ ಪ್ರವೇಶಿಸಿರುವ ಕಾರಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಪಿಚ್​ ರಿಪೋರ್ಟ್


ಬ್ರಿಜ್‌ಟೌನ್‌ನಲ್ಲಿ ಈವರೆಗೆ 50 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ತಂಡ 31ರಲ್ಲಿ ಗೆಲುವು ಕಂಡಿದೆ. ಈ ಟೂರ್ನಿಯಲ್ಲಿ ಭಾರತ ಬ್ರಿಜ್‌ಟೌನ್‌ನಲ್ಲಿ ಒಂದು ಪಂದ್ಯ ಆಡಿ ಗೆಲುವು ಕಂಡಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಇನ್ನೂ ಆಡಿಲ್ಲ. ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಆಯ್ದುಕೊಂಡರೆ ಉತ್ತಮ.

ಭಾರತ ತಂಡದ ದೊಡ್ಡ ಸಮಸ್ಯೆ ಎಂದರೆ ಲೀಗ್, ಸೆಮಿಫೈನಲ್​ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ತೋರಿದರೂ ಕೂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಂಪೂರ್ಣ ನರ್ವಸ್​ ಆಗಿ ಆಡುವುದು. ಒಂದು ವಿಕೆಟ್​ ಬಿದ್ದರೆ ಸಾಕು ಬಳಿಕ ಕ್ರೀಸ್​ಗಿಳಿವ ಬ್ಯಾಟರ್​ಗಳು ಭಯದಿಂದಲೇ ಆಡಲು ಮುಂದಾಗಿ ಸತತವಾಗಿ ವಿಕೆಟ್​ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುತ್ತಾರೆ. ಕಳೆದ ಏಕದಿನ ವಿಶ್ವಕಪ್​ ಫೈನಲ್​, ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ನಾಳೆ ನಡೆಯುವ ಫೈನಲ್​ ಪಂದ್ಯದಲ್ಲಿ ಬ್ಯಾಟರ್​ಗಳು ಮತ್ತು ಬೌಲರ್​ಗಳು ವಿಚಲಿತರಾಗದೆ ಆಡಬೇಕು.

Continue Reading

ಕ್ರೀಡೆ

IND vs SA Final: ಫೈನಲ್​ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ನಡುಕ ಹುಟ್ಟಿಸಿದ ಅಂಪೈರ್​!

IND vs SA Final: ಬ್ರಿಜ್‌ಟೌನ್‌ನ “ಕೆನ್ಸಿಂಗ್ಟನ್‌ ಓವಲ್‌’ ಮೈದಾನದಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ಭಾರತದ ಪಾಲಿಗೆ ಐರನ್ ಲೆಗ್ ಎಂದು ಕರೆಯಲ್ಪಡುವ ರಿಚರ್ಡ್‌ ಕೆಟಲ್‌ಬರೋ(Richard Kettleborough) ಈ ಪಂದ್ಯಕ್ಕೆ ಥರ್ಡ್‌ ಅಂಪೈರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

VISTARANEWS.COM


on

IND vs SA Final
Koo

ಬಾರ್ಬಡೋಸ್​: ದ್ವಿತೀಯ ಟಿ20 ವಿಶ್ವಕಪ್‌(T20 World Cup 2024) ಕಿರೀಟ ಎತ್ತಿಹಿಡಿಯಲು ಕಾದು ಕುಳಿತಿರುವ ಭಾರತ, ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನವೇ ಭಾರತ(IND vs SA Final) ತಂಡಕ್ಕೆ ನಡುಕವೊಂದು ಶುರುವಾಗಿದೆ. ಇದಕ್ಕೆ ಕಾರಣ ಈ ಪಂದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಅಂಪೈರ್​.

ಬ್ರಿಜ್‌ಟೌನ್‌ನ “ಕೆನ್ಸಿಂಗ್ಟನ್‌ ಓವಲ್‌’ ಮೈದಾನದಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ಭಾರತದ ಪಾಲಿಗೆ ಐರನ್ ಲೆಗ್ ಎಂದು ಕರೆಯಲ್ಪಡುವ ರಿಚರ್ಡ್‌ ಕೆಟಲ್‌ಬರೋ(Richard Kettleborough) ಈ ಪಂದ್ಯಕ್ಕೆ ಥರ್ಡ್‌ ಅಂಪೈರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಕೆಟಲ್‌ಬರೋ ಅಂಪೈರ್​ ಎಂದು ತಿಳಿದಾಗಲೇ ಎಲ್ಲ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕೂಡ ಈ ಬಾರಿ ಭಾರತಕ್ಕೆ ಸೋಲು ಖಚಿತ ಎಂದೇ ಹೇಳಿದ್ದರು. ಅದರಂತೆ ಈ ಭವಿಷ್ಯ ಕೂಡ ನಿಜವಾಗಿತ್ತು. ಸದ್ಯ ಈ ಬಾರಿ ಫೀಲ್ಡ್​ ಅಂಪೈರ್​ ಆಗಿ ಕರ್ತವ್ಯ ನಿರ್ವಹಿಸುವ ಬದಲು ಮೂರನೇ ಅಂಪೈರ್​ ಆಗಿ ಕಾರ್ಯನಿರ್ವಹಿಸುವ ಕಾರಣ ಕೊಂಚ ಅದೃಷ್ಟ ಭಾರತದ ಪಾಲಿಗೆ ಇರಬಹುದೆಂಬುದು ಈ ಬಾರಿ ಅಭಿಮಾನಿಗಳ ನಂಬಿಕೆ.

ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿತ್ತು. ಕಳೆದ ಬಾರಿಯ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅವರು ಅಂಪೈರ್​ ಆದಾಗ ಅಭಿಮಾನಿಗಳು ಭಾರತಕ್ಕೆ ಸೋಲು ಖಚಿತ ಎಂದು ಹೇಳಿದ್ದರು. ಈ ಭವಿಷ್ಯ ಕೂಡ ನಿಜವಾಗಿತ್ತು. ಭಾರತ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಲೀಗ್​ನಿಂದ ಸೆಮಿಫೈನಲ್​ ತನಕ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಭಾರತ ಸಾಧಿಸಿದ ಗೆಲುವು ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನೀರಲ್ಲಿ ಹೋಮವಾಗಿತ್ತು. ಇದೀಗ ಮತ್ತೆ ಭಾರದ ಪಾಲಿಗೆ ಈ ಅಂಪೈರ್​ ಅಡ್ಡಗಾಲಿಕ್ಕಲಿದ್ದಾರಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

ಎಲ್ಲ ಪಂದ್ಯದಲ್ಲಿಯೂ ಸೋಲು


2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ಸೋತಿತ್ತು.

ಅಂಪೈರ್​ಗಳ ಪಟ್ಟಿ​


ಅಂಪೈರ್​: ಕ್ರಿಸ್‌ ಗಫಾನಿ, ರಿಚರ್ಡ್‌ ಇಲ್ಲಿಂಗ್‌ವರ್ತ್‌

ರೆಫ್ರಿ: ರಿಚೀ ರಿಚರ್ಡ್‌ಸನ್‌

ಥರ್ಡ್‌ ಅಂಪಾಯರ್‌: ರಿಚರ್ಡ್‌ ಕೆಟಲ್‌ಬರೊ

ಫೋರ್ತ್‌ ಅಂಪಾಯರ್‌: ರಾಡ್‌ ಟ್ಯುಕರ್‌

Continue Reading

ಕ್ರೀಡೆ

IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

IND vs SA Final: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳಲ್ಲಿ ಆಡಿದ್ದು, ಭಾರತ 4 ಪಂದ್ಯ ಗೆದ್ದಿದೆ. 2 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದೆ. 2022ರಲ್ಲಿ ನಡೆದಿದ್ದ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಅಂತರದ ಸೋಲು ಕಂಡಿತ್ತು.

VISTARANEWS.COM


on

IND vs SA Final
Koo

ಬಾರ್ಬಡೋಸ್​: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯ(IND vs SA Final) ಲೀಗ್​, ಸೂಪರ್-8 ಮತ್ತು ನಾಕೌಟ್​ ಪಂದ್ಯಗಳಿಗೆ ಮಳೆಯಿಂದ ಅಡಚಣೆ ಉಂಟಾಗಿತ್ತು. ಇದೀಗ ಇಂದು ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಫೈನಲ್​ ಪಂದ್ಯಕ್ಕೂ ಭಾರೀ ಮಳೆ ಭೀತಿ ಎದುರಾಗಿದೆ.

ಫೈನಲ್​ ಪಂದ್ಯಕ್ಕೂ ಹವಾಮಾನ ಇಲಾಖೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶೇ.70ರಷ್ಟು ಮಳೆಯಾಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಒಂದೊಮ್ಮೆ ನಿಗದಿತ ದಿನ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನಕ್ಕೆ ಮುಂದುವರಿಯಲಿದೆ. ಸೂಪರ್​ 8 ಹಂತದಲ್ಲಿ ಮತ್ತು ಸೆಮಿಫೈನಲ್​ ಪಂದ್ಯ ಮಳೆಯಿಂದ ಮೀಸಲು ದಿನವೂ ಫಲಿತಾಂಶ ಕಾಣದಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸ್ಥಾನ ಮುಂದಿನ ಹಂತಕ್ಕೇರುತ್ತದೆ. ಆದರೆ ಫೈನಲ್​ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.

ಮುಖಾಮುಖಿ


ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ 26 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 14 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳಲ್ಲಿ ಆಡಿದ್ದು, ಭಾರತ 4 ಪಂದ್ಯ ಗೆದ್ದಿದೆ. 2 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದೆ. 2022ರಲ್ಲಿ ನಡೆದಿದ್ದ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಅಂತರದ ಸೋಲು ಕಂಡಿತ್ತು.

ಜಂಟಿ ವಿಜೇತರ ಘೋಷಣೆ


ಒಂದು ವೇಳೆ ಫೈನಲ್‌(T20 World Cup 2024) ಪಂದ್ಯ ಮೀಸಲು ದಿನದಲ್ಲಿಯೂ ನಡೆಯದೇ ಹೋದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಭಾರತ ಮತ್ತು ಆತಿಥೇಯ ಶ್ರೀಲಂಕಾ ಎರಡು ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಲಾಗಿತ್ತು.

ಕೊಲಂಬೊದಲ್ಲಿ ನಡೆದಿದ್ದ ಆ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ 5 ವಿಕೆಟ್​ಗೆ 244 ರನ್ ಗಳಿಸಿತು. ಭಾರತ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿದ ವೇಳೆ ಜೋರಾಗಿ ಮಳೆ ಸುರಿಯಿತು. ಮಳೆ ಬಿಡುವು ನೀಡದೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಕೂಡ ಪೂರ್ಣ ಫಲಿತಾಂಶ ಕಾಣದಿದ್ದರೆ ಇತ್ತಂಡಗಳು ಕೂಡ ಜಂಟಿ ಚಾಂಪಿಯನ್​ ಎನಿಸಿಕೊಳ್ಳಲಿದೆ. ಭಾರತ 2ನೇ ಕಪ್​ ಗೆದ್ದರೆ, ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದಂತಾಗುತ್ತದೆ.

Continue Reading
Advertisement
Mohan Bhagwat
ದೇಶ2 mins ago

Mohan Bhagwat: ಮುಕೇಶ್‌ ಅಂಬಾನಿ ನಿವಾಸಕ್ಕೆ ಆಗಮಿಸಿದ ಮೋಹನ್‌ ಭಾಗವತ್‌; ಕೈ ಮುಗಿದು ಸ್ವಾಗತಿಸಿದ ನೀತಾ ಅಂಬಾನಿ

Kalki 2898 AD Yash calls visually stunning spectacle
ಟಾಲಿವುಡ್18 mins ago

Kalki 2898 AD: ʻಕಲ್ಕಿʼ ಸಿನಿಮಾ ಹಾಡಿ ಹೊಗಳಿದ ರಾಕಿಂಗ್‌ ಸ್ಟಾರ್‌ ಯಶ್‌!

IND vs SA Final
ಕ್ರೀಡೆ21 mins ago

IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

Law And Order
ಕರ್ನಾಟಕ29 mins ago

Law And Order: ಗದಗ, ರಾಯಚೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ; ಕಾನೂನು ಸುವ್ಯವಸ್ಥೆ ಗತಿ ಏನು?

Actor Darshan Renuka Swamy case In colorskannada shantam Paapam
ಸ್ಯಾಂಡಲ್ ವುಡ್39 mins ago

Actor Darshan: ‘ಶಾಂತಂ ಪಾಪಂ’ ಕಿರುತೆರೆ ಶೋನಲ್ಲಿ ದರ್ಶನ್‌ ಕಥೆ? ಏನಿದು ಡೇರ್ ಡೆವಿಲ್ ದೇವದಾಸ್‌ ಡೆಡ್ಲಿ ಕಹಾನಿ?

Isha Ambani
ವಾಣಿಜ್ಯ49 mins ago

Isha Ambani: ತಾನು ಅವಳಿ ಮಕ್ಕಳಿಗೆ ತಾಯಿಯಾಗಿದ್ದು ಐವಿಎಫ್ ಮೂಲಕ ಎಂದ ಇಶಾ ಅಂಬಾನಿ

Road Accident
ದೇಶ55 mins ago

Road Accident: ಭೀಕರ ರಸ್ತೆ ಅಪಘಾತ; 2 ಕಾರು ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಸಾವು

IND vs SA Final
ಕ್ರಿಕೆಟ್1 hour ago

IND vs SA Final: ಭಾರತ ತಂಡ ವಿಶ್ವಕಪ್​ ಗೆಲ್ಲಲಿ; ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

Job Alert
ಉದ್ಯೋಗ2 hours ago

Job Alert: ಗಮನಿಸಿ: ಗ್ರಾಮೀಣ ಬ್ಯಾಂಕ್‌ನ 9,995 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ನಾಳೆ ಕೊನೆಯ ದಿನ

Kannada New Movie Kenda in premier In world wide
ಸ್ಯಾಂಡಲ್ ವುಡ್2 hours ago

Kannada New Movie: ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ `ಕೆಂಡ’!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ16 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌