Viral News: ತಮ್ಮನ ಬದಲು ನೀಟ್‌ ಪರೀಕ್ಷೆ ಬರೆದ ಅಣ್ಣ; ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾಗಿದ್ದು ಹೇಗೆ? - Vistara News

ವೈರಲ್ ನ್ಯೂಸ್

Viral News: ತಮ್ಮನ ಬದಲು ನೀಟ್‌ ಪರೀಕ್ಷೆ ಬರೆದ ಅಣ್ಣ; ಕೊನೆಯ ಕ್ಷಣದಲ್ಲಿ ಸಹೋದರರ ಕಳ್ಳಾಟ ಬಯಲಾಗಿದ್ದು ಹೇಗೆ?

Viral News: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಆಕಾಂಕ್ಷಿಯ ಬದಲಾಗಿ ಆತನ ಸಹೋದರ ಪರೀಕ್ಷೆ ಬರೆದಿದ್ದಾನೆ. ಸದ್ಯ ಇವರ ಈ ಮೋಸದಾಟ ಬೆಳಕಿಗೆ ಬಂದಿದೆ. ಪರೀಕ್ಷೆಗೆ ಹಾಜರಾದ ನೀಟ್ ಆಕಾಂಕ್ಷಿಯ ಸಹೋದರ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮತ್ತು ನೀಟ್ ಆಕಾಂಕ್ಷಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್‌ ಚಿತ್ರ ʼಮುನ್ನಾಭಾಯಿ ಎಂಬಿಬಿಎಸ್‌ʼ ಸಿನಿಮಾದಿಂದ ಸ್ಫೂರ್ತಿಗೊಂಡು ಸಹೋದರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: 2003ರಲ್ಲಿ ತೆರೆಕಂಡ ಬಾಲಿವುಡ್‌ನ ʼಮುನ್ನಾಭಾಯಿ ಎಂಬಿಬಿಎಸ್‌ʼ ಚಿತ್ರ ನಿಮಗೆಲ್ಲ ನೆನಪಿರಬಹುದು. ಎಂಬಿಬಿಎಸ್‌ ವಿದ್ಯಾರ್ಥಿಯಾಗಿರುವ ನಾಯಕ ಮುನ್ನಾ ಭಾಯಿ (ಸಂಜಯ್‌ ದತ್‌) ತನ್ನ ಪರವಾಗಿ ವೈದ್ಯನೊಬ್ಬನ ಮೂಲಕ ಪರೀಕ್ಷೆ ಬರೆಸುತ್ತಾನೆ. ಆ ವೇಳೆ ಈ ದೃಶ್ಯ ಜನಪ್ರಿಯವಾಗಿತ್ತು. ಅದೆಲ್ಲ ಸರಿ ಈಗ್ಯಾಕೆ ಈ ವಿಚಾರ ಎಂಬ ಸಂದೇಹ ನಿಮ್ಮನ್ನು ಕಾಡಬಹುದು. ಇದನ್ನೇ ಹೋಲುವ ಘಟನೆಯೊಂದು ವರದಿಯಾಗಿದೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ಯ ಆಕಾಂಕ್ಷಿಯ ಬದಲಾಗಿ ಆತನ ಸಹೋದರ ಪರೀಕ್ಷೆ ಬರೆದಿದ್ದಾನೆ. ಸದ್ಯ ಇವರ ಈ ಮೋಸದಾಟ ಬೆಳಕಿಗೆ ಬಂದಿದೆ (Viral News).

ರಾಜಸ್ಥಾನದ ಬಾರ್ಮರ್‌ನಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆಗೆ ಹಾಜರಾದ ನೀಟ್ ಆಕಾಂಕ್ಷಿಯ ಸಹೋದರ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮತ್ತು ನೀಟ್ ಆಕಾಂಕ್ಷಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್‌ ಚಿತ್ರ ʼಮುನ್ನಾಭಾಯಿ ಎಂಬಿಬಿಎಸ್‌ʼ ಸಿನಿಮಾದಿಂದ ಸ್ಫೂರ್ತಿಗೊಂಡು ಸಹೋದರರು ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾರ್ಮರ್‌ನ ಅಂತ್ರಿ ದೇವಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಅನಿತಾ ಚೌಧರಿ ಭಾನುವಾರ ಗೋಪಾಲ ರಾಮ್ ಬದಲಿಗೆ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್ ಮೀನಾ ತಿಳಿಸಿದ್ದಾರೆ.

ಅಧಿಕಾರಿಗಳಾದ ಲೇಖ್‌ರಾಜ್‌ ಸಿಯಾಗ್‌ ಮತ್ತು ಡಿಎಸ್‌ಟಿ ಇನ್‌ಚಾರ್ಜ್‌ ಮಹಿಪಾಲ್‌ ಸಿಂಗ್‌ ಕೂಡಲೇ ಸ್ಥಳಕ್ಕೆ ಧಾವಿಸಿ ಕೃಷ್ಣ ರಾಮ್ ಅವರ ಪುತ್ರ ಭಗೀರಥ ರಾಮ್ ವಿಷ್ಣೋಯ್ ಮತ್ತು ಆತನ ಕಿರಿಯ ಸಹೋದರ ಗೋಪಾಲ ರಾಮ್‌ನನ್ನು ಪರೀಕ್ಷಾ ಕೇಂದ್ರದಿಂದ ಬಂಧಿಸಿದ್ದಾರೆ. ಭಗೀರಥ ರಾಮ್ ವಿಷ್ಣೋಯ್ ಜೋಧಾಪುರ ಎಸ್‌.ಎನ್‌.ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ನ ಮೊದಲ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ.

ಘಟನೆ ವಿವರ

ಭಗೀರಥ ರಾಮ್ ವಿಷ್ಣೋಯ್ ಆಧಾರ್‌ ಕಾರ್ಡ್‌ನಲ್ಲಿರುವ ತನ್ನ ಫೋಟೊವನ್ನು ಎಡಿಟ್‌ ಮಾಡಿ ಅದರ ಬದಲಿಗೆ ಸಹೋದರ ಗೋಪಾಲ ರಾಮ್ ಫೋಟೊ ಎಡಿಟ್‌ ಮಾಡಿ ನೀಟ್‌ ಪರೀಕ್ಷೆ ಬರೆಯಲು ತೆರಳಿದ್ದ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಕಿಲಾಡಿ ಸಹೋದರರ ಕ್ರಿಮಿನಲ್‌ ಐಡಿಯಾ ಸಾಂಗವಾಗಿ ನೆರವೇರುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ಇವರ ಅದೃಷ್ಟ ಕೈಕೊಟ್ಟಿತ್ತು. ಪ್ರಾಂಶುಪಾಲೆಯ ಕಣ್ಣಿಗೆ ಬಿದ್ದು ಇವರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Viral News : ನಿಜವಾದ ಪೊಲೀಸ್​ಗೆ ತಪ್ಪಾಗಿ ಸೆಲ್ಯೂಟ್​ ಹೊಡೆದು ಸಿಕ್ಕಿ ಬಿದ್ದ ನಕಲಿ ಪೊಲೀಸ್​!

ದಾಖಲೆ ಪ್ರಮಾಣದಲ್ಲಿ ನೋಂದಣಿ

ನೀಟ್‌ ಯುಜಿ 2024ಕ್ಕೆ ಈ ಬಾರಿ ದಾಖಲೆ ಪ್ರಮಾಣದ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಅತ್ಯಧಿಕ 23 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದ ಇದರಲ್ಲಿ 10 ಲಕ್ಷ ಮಂದಿ ಪುರುಷರಾದರೆ 13 ಮಂದಿ ಸ್ತ್ರೀಯರು. ವಿಶೇಷ ಎಂದರೆ ಪುದುಚೇರಿ, ಜಮ್ಮು ಮತ್ತು ಕಾಶ್ಮೀರ ಮತ್ತಿತರ ಕಡೆಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ದೇವಸ್ಥಾನದಿಂದ ಬರ್ತಿದ್ದ ಪುರೋಹಿತರ ಮೇಲೆ ಚಾಕು, ದೊಣ್ಣೆಯಿಂದ ಡೆಡ್ಲಿ ಅಟ್ಯಾಕ್‌! ವಿಡಿಯೋ ಇದೆ

Viral Video: ಆ.17ರಂದು ಈ ಭೀಕರ ಘಟನೆ ನಡೆದಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಅರ್ಚಕರು ದೇವಸ್ಥಾನದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ಚಾಕುವಿನಿಂದ ಇರಿದಿದೆ. ಗುಂಪು ಗುಂಪುಗಳಾಗಿ ಪುರೋಹಿತರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿದ್ದ ಒಬ್ಬ ಪುರೋಹಿತ ರಸ್ತೆಯಲ್ಲಿ ಬಿದ್ದ ಸ್ಕೂಟರ್‌ನ ಹತ್ತಿರ ನಿಂತಿರುವುದು ಕಂಡುಬಂದರೆ, ಮತ್ತೊಬ್ಬ ಬಿಳಿಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹಲ್ಲೆ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಮುಂಬೈ: ದೇವಸ್ಥಾನದಿಂದ ಪೂಜೆ ಮುಗಿಸಿ ಹಿಂದಿರುಗುತ್ತಿದ್ದ ಹಿಂದೂ ಪುರೋಹಿತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ(Priests attacked) ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿನ ಲಾಲ್ಜಿಪಾಡಾದ ಕಾಂದಿವಲಿಯಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಜನನಿಬಿಡ ರಸ್ತೆಯಲ್ಲಿ ಚಾಕು ಮತ್ತು ಕೋಲುಗಳಿಂದ ಶಸ್ತ್ರಸಜ್ಜಿತವಾದ ಗುಂಪೊಂದು ಇಬ್ಬರು ಹಿಂದೂ ಪುರೋಹಿತರ ಮೇಲೆ ಹಲ್ಲೆ ನಡೆಸಿದೆ. ಈ ಆಘಾತಕಾರಿ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಆ.17ರಂದು ಈ ಭೀಕರ ಘಟನೆ ನಡೆದಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಅರ್ಚಕರು ದೇವಸ್ಥಾನದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ಚಾಕುವಿನಿಂದ ಇರಿದಿದೆ. ಗುಂಪು ಗುಂಪುಗಳಾಗಿ ಪುರೋಹಿತರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿದ್ದ ಒಬ್ಬ ಪುರೋಹಿತ ರಸ್ತೆಯಲ್ಲಿ ಬಿದ್ದ ಸ್ಕೂಟರ್‌ನ ಹತ್ತಿರ ನಿಂತಿರುವುದು ಕಂಡುಬಂದರೆ, ಮತ್ತೊಬ್ಬ ಬಿಳಿಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹಲ್ಲೆ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಒಬ್ಬ ವ್ಯಕ್ತಿಯು ಚಾಕುವನ್ನು ಹಿಡಿದಿರುವುದು ಕಂಡುಬರುತ್ತದೆ, ಇತರರು ತಮ್ಮ ಕೈಯಲ್ಲಿ ಕೋಲುಗಳನ್ನು ಹಿಡಿದಿರುವುದು ಕಂಡುಬರುತ್ತದೆ. ಆದರೆ, ದಾಳಿಯ ಹಿಂದಿನ ಕಾರಣ ತಿಳಿದುಬಂದಿಲ್ಲ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ದಾಳಿಯಲ್ಲಿ ಕನಿಷ್ಠ 5 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಅರ್ಚಕರ ಮೇಲಿನ ಅಮಾನುಷ ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ(Uttar Pradesh)ದ ಲಕ್ನೋದಲ್ಲಿ ಸಾಧುಗಳಂತೆ ನಟಿಸಿ ಜನರ ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ದೋಚುತ್ತಿದ್ದ ನಾಲ್ವರು ಯುವಕರನ್ನು ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ್ದಾರೆ. ನಾಲ್ವರನ್ನು ದೈಹಿಕವಾಗಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದ್ದು, ಈ ಘಟನೆಯ ವಿಡಿಯೋದಲ್ಲಿ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಸಾಧುಗಳ ವೇಷ ಧರಿಸಿದ ಪುರುಷರು ಮಹುರಕಲಾ ಗ್ರಾಮದ ಅಂಗಡಿಯೊಂದಕ್ಕೆ ಭೇಟಿ ನೀಡಿದಾಗ ಗಲಾಟೆ ಶುರುವಾಗಿತ್ತು. ಅಂಗಡಿಯವನಿಗೆ ತಿಲಕವನ್ನು ಹಚ್ಚಿ, ಪ್ರಸಾದವನ್ನು ಕೊಡುವ ಮೊದಲು 1,100 ರೂಪಾಯಿಗಳನ್ನು ಕೊಡುವಂತೆ ಮನವೊಲಿಸಿದರು. ಒಮ್ಮೆ ಅಂಗಡಿಯವನು ಪ್ರಜ್ಞಾಹೀನನಾಗಿ ಬಿದ್ದಾಗ, ಖದೀಮರು ಪರಾರಿಯಾಗುವ ಮೊದಲು ಅಂಗಡಿಯಲ್ಲಿದ್ದ ಮೂರು ಗೋಣಿ ಸಾಸಿವೆ ಮತ್ತು ಹಣವನ್ನು ಕದ್ದೊಯ್ದಿದ್ದರು.

ಇದನ್ನೂ ಓದಿ: Mistaken Identity | ಕಳ್ಳರೆಂದು ಭಾವಿಸಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಹೊಸಮನಿ ಹಟ್ಟಿ ಗ್ರಾಮಸ್ಥರು

Continue Reading

ವೈರಲ್ ನ್ಯೂಸ್

Fake Garlic: ಎಚ್ಚರ..ಎಚ್ಚರ.. ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ ಸಿಮೆಂಟ್‌ ಬೆಳ್ಳುಳ್ಳಿ! ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

Fake Garlic: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಿಮೆಂಟ್‌ನಿಂದ ತಯಾರಿಸಿದ ನಕಲಿ ಬೆಳ್ಳುಳ್ಳಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ. ಅಗತ್ಯ ಅಡುಗೆಮನೆಯ ಮುಖ್ಯ ವಸ್ತುಗಳ ಬೆಲೆಗಳು ಗಗನಕ್ಕೇರುವುದರೊಂದಿಗೆ, ಕೆಲವು ಮಾರಾಟಗಾರರು ಪರಿಸ್ಥಿತಿಯ ಲಾಭವನ್ನು ಪಡೆಯಲು ಮುಂದಾಗಿದ್ದು, ಗ್ರಾಹಕರಿಗೆ ಕೊಂಚವೂ ಅನುಮಾನವೇ ಬರದಂತೆ ಸಿಮೆಂಟ್‌ ಬೆಳ್ಳುಳ್ಳಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

VISTARANEWS.COM


on

Fake Garlic
Koo

ಮುಂಬೈ: ದುಡ್ಡಿನಾಸೆ ಮನುಷ್ಯನಿಂದ ಎಂಥಹ ನೀಜ ಕೆಲಸನ್ನಾದರೂ ಮಾಡಿಸುತ್ತೆ. ಎಲ್ಲಿವರೆಗೆ ಅಂದ್ರೆ ತಿನ್ನೋ ಅನ್ನವನ್ನೂ ವಿಷ ಮಾಡಿಬಿಡುತ್ತೆ. ಈ ಹಿಂದೆ ಪ್ಲಾಸ್ಟಿಕ್‌ ಅಕ್ಕಿ(Plastic Rice), ಪ್ಲಾಸ್ಟಿಕ್‌ ಮೊಟ್ಟೆಗಳು(Plastic egg) ಮಾರುಕಟ್ಟೆಯಿಂದ ಸಾರಾ ಸಲೀಸಾಗಿ ಜನರ ಹೊಟ್ಟೆ ಸೇರುತ್ತಿರುವ ಬಗ್ಗೆ ಭಾರೀ ಸುದ್ದಿಯಾಗಿತ್ತು. ಈಗಲೂ ಈ ದಂಧೆ ನಡೆಯುತ್ತಲೇ ಇದೆ. ಅದು ಒಂದು ಕಡೆಯಾದ್ರೆ ಇಲ್ಲೊಂದು ಕಡೆ ಫೇಕ್‌ ಬೆಳ್ಳುಳ್ಳಿಗಳು(Fake Garlic) ಮಾರ್ಕೆಟ್‌ಗೆ ಲಗ್ಗೆ ಇಟ್ಟಿವೆ ಎಂದರೆ ನಂಬಲೇಬೇಕು(Viral Video).

ಹೌದು…ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಿಮೆಂಟ್‌ನಿಂದ ತಯಾರಿಸಿದ ನಕಲಿ ಬೆಳ್ಳುಳ್ಳಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ. ಅಗತ್ಯ ಅಡುಗೆಮನೆಯ ಮುಖ್ಯ ವಸ್ತುಗಳ ಬೆಲೆಗಳು ಗಗನಕ್ಕೇರುವುದರೊಂದಿಗೆ, ಕೆಲವು ಮಾರಾಟಗಾರರು ಪರಿಸ್ಥಿತಿಯ ಲಾಭವನ್ನು ಪಡೆಯಲು ಮುಂದಾಗಿದ್ದು, ಗ್ರಾಹಕರಿಗೆ ಕೊಂಚವೂ ಅನುಮಾನವೇ ಬರದಂತೆ ಸಿಮೆಂಟ್‌ ಬೆಳ್ಳುಳ್ಳಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಅಕೋಲಾದ ಬಜೋರಿಯಾ ನಗರದಲ್ಲಿ ನೆಲೆಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಅವರ ಪತ್ನಿ ಕೃತಕ ಬೆಳ್ಳುಳ್ಳಿ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಯಿಂದ ವಂಚನೆಗೊಳಗಾಗಿದ್ದು, ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಈ ವಂಚನೆ ಬೆಳಕಿಗೆ ಬಂದಿದೆ.

ಇನ್ನು ಸಿಮೆಂಟ್​ ಬೆಳ್ಳುಳ್ಳಿಯನ್ನು ಬೇರ್ಪಡಿಸಲು ಪ್ರಯತ್ನಿಸಿದಾಗ ನಕಲಿ ಎಂದು ಬಯಲಾಗಿದೆ. ಚಾಕುವಿನಿಂದ ಕತ್ತರಿಸಿದಾಗ ಅದು ಸಿಮೆಂಟ್​ನಿಂದ ಮಾಡಿದ ಬೆಳ್ಳುಳ್ಳಿ ಎಂದು ಬೆಳಕಿಗೆ ಬಂದಿದೆ. ಅಕೋಲಾದಲ್ಲಿ ಬೆಳ್ಳುಳ್ಳಿ ನಕಲಿ ಮಾರಾಟಗಾರರು ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಅಕೋಲಾ ನಗರದ ಹೆಚ್ಚಿನ ಭಾಗಗಳಲ್ಲಿ, ಈ ವ್ಯಾಪಾರಿಗಳು ಪ್ರತಿದಿನ ತರಕಾರಿಗಳನ್ನು ಮಾರಾಟ ಮಾಡಲು ಬರುತ್ತಾರೆ, ಅವರಲ್ಲಿ ಕೆಲವರು ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಮೊಟ್ಟೆ, ನಕಲಿ ಅಕ್ಕಿಗಳ ಮಾರಾಟ ಹೆಚ್ಚಾಗಿದೆ. ನಕಲಿ ಮೊಟ್ಟೆ ಹಾವಳಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೇ ಅತಿ ಹೆಚ್ಚು. ಇಲ್ಲೇ ಅದನ್ನು ಮೊಟ್ಟೆ ಉತ್ಪಾದಿಸಲಾಗುತ್ತಿದೆ. ಆದರೆ ಇದರ ಗರಿಷ್ಠ ಬಳಕೆ ಕರ್ನಾಟಕದಲ್ಲಿದೆ. ವರದಿಯ ಪ್ರಕಾರ ಬೆಂಗಳೂರಿನಲ್ಲಿ ದಿನಕ್ಕೆ 75 ಲಕ್ಷ ಮೊಟ್ಟೆಗಳಿಗೆ ಬೇಡಿಕೆ ಇದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೊಟ್ಟೆ ಬೇಡಿಕೆಯಿಂದ ನಕಲಿ ಮೊಟ್ಟೆಗಳ ವ್ಯಾಪಾರ ಹೆಚ್ಚುತ್ತಿದೆ.

ಇದನ್ನೂ ಓದಿ:Plastic rice | ಶಾಲಾ ಮಕ್ಕಳ ಬಿಸಿಯೂಟದ ಅಕ್ಕಿ ಜತೆ ಮಿಕ್ಸ್‌ ಆಗಿದೆಯಾ ಪ್ಲಾಸ್ಟಿಕ್‌ ರೈಸ್‌: ತೇಲುವ ಮಣಿಗಳು ಏನಿವು?

Continue Reading

ವೈರಲ್ ನ್ಯೂಸ್

Viral Video: ಪಬ್ಲಿಕ್‌ನಲ್ಲೇ ಲಂಚದ ಹಣ ಹಂಚಿಕೊಂಡ ಟ್ರಾಫಿಕ್‌ ಪೊಲೀಸರು; ಖಾಕಿಯ ಲಂಚಾವತಾರ ಸಿಸಿಟಿವಿಯಲ್ಲಿ ಸೆರೆ

Viral Video: ಗಾಜಿಪುರ ಪೊಲೀಸ್ ಠಾಣೆಯಾ ಎದುರು ಕಲ್ಯಾಣಪುರಿ ವೃತ್ತದಲ್ಲಿ ಈ ಘಟನೆ ನಡೆದಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರು ಅಲ್ಲೇ ಒಂದು ಸಣ್ಣ ಶೆಡ್ ಮಾಡಿಕೊಂಡು ಅಲ್ಲಿ ವಾಹನ ಸವಾರರನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬಂದಿತ್ತು. ಈ ವಿಡಿಯೋದಲ್ಲಿ ರೆಡ್‌ ಹ್ಯಾಂಡಾಗಿ ಸಿಕ್ಕಿಕೊಂಡಿರುವ ಲಂಚಕೋರ ಮೂವರು ಸಂಚಾರಿ ಪೊಲೀಸರು ಬಂದ ಹಣವನ್ನು ಹಂಚಿಕೊಳ್ಳುತ್ತಿರುವುದು ಬಯಲಾಗಿದೆ.

VISTARANEWS.COM


on

Viral Video
Koo

ನವದೆಹಲಿ: ಟ್ರಾಫಿಕ್‌ ಪೊಲೀಸ(Traffic Police)ರ ವಿರುದ್ಧ ಲಂಚ(Bribe)ದ ಆರೋಪ ಕೇಳಿ ಬರುವುದು ಸರ್ವೇ ಸಾಮಾನ್ಯ. ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರಿಂದ ಹಣ ಪೀಕಿಸಿ ತಮ್ಮ ಜೇಬ ತುಂಬಿಸಿಕೊಂಡು ಕೆಲವೊಮ್ಮೆ ಸಿಕ್ಕಿಹಾಕಿಕೊಂಡಿರುವ ಘಟನೆಗಳೂ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ವಾಹನ ತಪಾಸಣೆ ನೆಪದಲ್ಲಿ ವಾಹನ ಸವಾರರಿಂದ ಪಡೆದ ಲಂಚದ ಹಣವನ್ನು ಮೂವರು ಟ್ರಾಫಿಕ್ ಪೊಲೀಸರು ಹಂಚಿಕೊಳ್ಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.

ಗಾಜಿಪುರ ಪೊಲೀಸ್ ಠಾಣೆಯಾ ಎದುರು ಕಲ್ಯಾಣಪುರಿ ವೃತ್ತದಲ್ಲಿ ಈ ಘಟನೆ ನಡೆದಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರು ಅಲ್ಲೇ ಒಂದು ಸಣ್ಣ ಶೆಡ್ ಮಾಡಿಕೊಂಡು ಅಲ್ಲಿ ವಾಹನ ಸವಾರರನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬಂದಿತ್ತು. ಈ ವಿಡಿಯೋದಲ್ಲಿ ರೆಡ್‌ ಹ್ಯಾಂಡಾಗಿ ಸಿಕ್ಕಿಕೊಂಡಿರುವ ಲಂಚಕೋರ ಮೂವರು ಸಂಚಾರಿ ಪೊಲೀಸರು ಬಂದ ಹಣವನ್ನು ಹಂಚಿಕೊಳ್ಳುತ್ತಿರುವುದು ಬಯಲಾಗಿದೆ. ಅಲ್ಲದೆ ಇದಕ್ಕೆ ಪೂರಕ ಎಂಬಂತೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಈ ಮೂವರು ಸಂಚಾರಿ ಪೊಲೀಸರು ಹಣ ಹಂಚಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಮತ್ತೊಂದು ವಿಡಿಯೋದಲ್ಲಿ ವಾಹನ ಚಾಲಕನೊಬ್ಬ ಚೌಕಿಯ ಬಳಿ ಬಂದು ಪೊಲೀಸರ ಜೊತೆ ಮಾತನಾಡುವ ದೃಶ್ಯವಿದೆ. ಕೆಲ ಹೊತ್ತಿನ ಮಾತುಕತೆ ಬಳಿಕ ಟ್ರಾಫಿಕ್ ಪೊಲೀಸ್ ಆತನಿಂದ ಲಂಚವಾಗಿ ಹಣ ಪಡೆದಿದ್ದಾರೆ. ಆದರೆ ನೇರವಾಗಿ ಹಣ ಪಡೆಯದೇ, ಕುಳಿತಿಕೊಂಡ ಬಳಿ ಇಡುವಂತೆ ಸೂಚಿದ್ದಾನೆ. ಲಂಚದ ರೂಪದಲ್ಲಿ ಹಣ ಇಟ್ಟು ವಾಹನ ಚಾಲಕ ತೆರಳಿದ್ದಾನೆ.

ಮೂವರೂ ಸಸ್ಪೆಂಡ್‌

ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದರ ಹಿನ್ನೆಲೆಯಲ್ಲಿ ಅಪರಾಧವೆಸಗಿದ ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ

ಇದನ್ನೂ ಓದಿ: Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ !

Continue Reading

ವೈರಲ್ ನ್ಯೂಸ್

Viral Video: ಅಬ್ಬಾ.. ಸಾವು ಹೀಗೂ ಬರುತ್ತಾ? ಸ್ನೇಹಿತನೊಂದಿಗೆ ಮಾತಾಡ್ತಾ ನಿಂತಿದ್ದವನ ಮೇಲೆ ದೊಪ್ಪೆಂದು ಬಿದ್ದ ಎಸಿ-ವಿಡಿಯೋ ಇದೆ

Viral Video: ದೆಹಲಿಯ ದೇಶ್ ಬಂಧು ಗುಪ್ತಾ ರಸ್ತೆಯಲ್ಲಿರುವ ಡೋರಿವಾಲಾ ಪ್ರದೇಶದಲ್ಲಿ ನಿನ್ನೆ ಸಂಜೆ 6:40 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಇದೇ ಪ್ರದೇಶದ ಜಿತೇಶ್‌ ಎಂದು ಗುರುತಿಸಲಾಗಿದೆ. ಕಿಟಕಿಗೆ ಅಳವಡಿಸಿದ್ದ ಎಸಿ ಜಿತೇಶ್‌ನ ತಲೆಯ ಮೇಲೆ ಬೀಳುತ್ತದೆ. ಎರಡನೇ ಮಹಡಿಯಿಂದ ಎಸಿ ಬಿದ್ದ ರಭಸಕ್ಕೆ ಜಿತೇಶ್‌ ಗಂಭೀರವಾಗಿ ಗಾಯಗೊಂಡು ತಕ್ಷಣವೇ ಕೊನೆಯುಸಿರೆಳೆಯುತ್ತಾನೆ.

VISTARANEWS.COM


on

Viral Video
Koo

ನವದೆಹಲಿ: ಸಾವು ಎಂಬುದು ಕ್ಷಣ ಕ್ಷಣಕ್ಕೂ ನೆರಳಿನಂತೆ ನಮ್ಮ ಹಿಂದೆಯೇ ಇರುತ್ತದೆ. ಯಾವಾಗ ಯಾವ ರೀತಿಯಲ್ಲಾದರೂ, ಯಾವ ರೂಪದಲ್ಲಾದರೂ ಸಾವು ಬರುತ್ತದೆ ಎಂಬುದಕ್ಕೆ ಈ ದುರ್ಘಟನೆಯೇ ನಿದರ್ಶನ. ಸ್ನೇಹಿತನ ಜೊತೆ ಹರಟೆ ಹೊಡೆಯುತ್ತಾ, ಎಂಜಾಯ್‌ ಮಾಡುತ್ತಾ ನಿಂತಿದ್ದ ಯುವಕನಿಗೆ ಯಮಸ್ವರೂಪಿಯಾಗಿ ಬಂದಿದ್ದು ಬೇರೇ ಏನೂ ಅಲ್ಲ ಮೇಲಿನ ಮಹಡಿಯಲ್ಲಿದ್ದ ಏರ್ ಕಂಡಿಷನರ್(AC). ಕೆಳಗೆ ನಿಂತಿದ್ದ ಯುವಕನ ಮೇಲೆ ಎಸಿ ಬಿದ್ದಿದೆ. ಬಿದ್ದ ರಭಸಕ್ಕೆ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆಯುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಘಟನೆ ವಿವರ:

ದೆಹಲಿಯ ದೇಶ್ ಬಂಧು ಗುಪ್ತಾ ರಸ್ತೆಯಲ್ಲಿರುವ ಡೋರಿವಾಲಾ ಪ್ರದೇಶದಲ್ಲಿ ನಿನ್ನೆ ಸಂಜೆ 6:40 ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಇದೇ ಪ್ರದೇಶದ ಜಿತೇಶ್‌ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ, 18 ವರ್ಷದ ಜಿತೇಶ್ ತನ್ನ ಸ್ಕೂಟರ್‌ನಲ್ಲಿ ಇನ್ನೊಬ್ಬ ಹುಡುಗ ಪ್ರಾಂಶು ಎಂಬಾತನೊಂದಿಗೆ ಹರಟೆ ಹೊಡೆಯುತ್ತಾ ಬೈಕ್‌ ಮೇಲೆ ಕುಳಿತಿರುವುದನ್ನು ಕಾಣಬಹುದು. ಇಬ್ಬರೂ ಪರಸ್ಪರ ಅಪ್ಪಿಕೊಂಡು ಇನ್ನೇನು ಇಬ್ಬರು ಅಲ್ಲಿಂದ ಹೊರಬೇಕಾಗಿತ್ತು. ಆಗ ಕಿಟಕಿಗೆ ಅಳವಡಿಸಿದ್ದ ಎಸಿ ಜಿತೇಶ್‌ನ ತಲೆಯ ಮೇಲೆ ಬೀಳುತ್ತದೆ. ಎರಡನೇ ಮಹಡಿಯಿಂದ ಎಸಿ ಬಿದ್ದ ರಭಸಕ್ಕೆ ಜಿತೇಶ್‌ ಗಂಭೀರವಾಗಿ ಗಾಯಗೊಂಡು ತಕ್ಷಣವೇ ಕೊನೆಯುಸಿರೆಳೆಯುತ್ತಾನೆ. ಇನ್ನು ಘಟನೆಯಲ್ಲಿ ಪ್ರಾಂಶು ಕೂಡ ಗಾಯಗೊಂಡಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿತೇಶ್ ದೆಹಲಿಯ ಡೋರಿವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಪ್ರಾಂಶು ಪಟೇಲ್ ನಗರದ ನಿವಾಸಿ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇಂತಹದ್ದೇ ಒಂದು ಘಟನೆ ಥಾಣೆಯಲ್ಲಿ ಕೆಲವು ದಿನಗಳ ಹಿಂದೆ ನಡೆದಿತ್ತು.ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಐದನೇ ಮಹಡಿಯಿಂದ ನಾಯಿಯೊಂದು ಬಿದ್ದಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಥಾಣೆ(Thane)ಯಲ್ಲಿ ನಡೆದಿದೆ. ಮುಂಬ್ರಾದಲ್ಲಿ ಜನನಿಬಿಡ ರಸ್ತೆಯಲ್ಲಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಮೂರು ವರ್ಷ ಬಾಲಕಿ ಮೇಲೆ ನಾಯಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ರೆಕಾರ್ಡ್‌ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

Continue Reading
Advertisement
physical abuse hsr layout
ಕ್ರೈಂ31 mins ago

Physical Abuse: ಪಾರ್ಟಿ ಮುಗಿಸಿ ಲಿಫ್ಟ್‌ ಕೇಳಿದ ಯುವತಿಯ ಮೇಲೆರಗಿದ ಕಾಮುಕನ ಬಂಧನ; ಸಂತ್ರಸ್ತೆಯ ಜೀವ ಉಳಿಸಿದ SOS ಬಟನ್!

ಬಾಲಿವುಡ್37 mins ago

Deepika Padukone: ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ ಮುಂಬೈನಲ್ಲಿ ಸುತ್ತಾಟ; ವಿಡಿಯೊ ವೈರಲ್‌!

Viral Video
ವೈರಲ್ ನ್ಯೂಸ್58 mins ago

Viral Video: ದೇವಸ್ಥಾನದಿಂದ ಬರ್ತಿದ್ದ ಪುರೋಹಿತರ ಮೇಲೆ ಚಾಕು, ದೊಣ್ಣೆಯಿಂದ ಡೆಡ್ಲಿ ಅಟ್ಯಾಕ್‌! ವಿಡಿಯೋ ಇದೆ

CM Siddaramaiah and high court
ಪ್ರಮುಖ ಸುದ್ದಿ1 hour ago

CM Siddaramaiah: ಇಂದು ಕಟಕಟೆ ಏರಲಿದೆ ಮುಡಾ ಪ್ರಕರಣ; 20 ಅಂಶಗಳೊಂದಿಗೆ ಸಿದ್ದರಾಮಯ್ಯ ಹೈಕೋರ್ಟ್‌ಗೆ; ಇಂದು ಏನೇನಾಗಲಿದೆ?

Vinay Rajkumar Pepe Trailer Shreelesh SNair out
ಸ್ಯಾಂಡಲ್ ವುಡ್1 hour ago

Vinay Rajkumar: ಪೆಪೆ ಟ್ರೈಲರ್ ಔಟ್‌; ವಿನಯ್‌ ರಾಜ್‌ಕುಮಾರ್ ಸಿನಿಮಾ ಹಿಟ್‌ ಗ್ಯಾರಂಟಿ ಅಂದ್ರು ಫ್ಯಾನ್ಸ್‌!

Fake Garlic
ವೈರಲ್ ನ್ಯೂಸ್2 hours ago

Fake Garlic: ಎಚ್ಚರ..ಎಚ್ಚರ.. ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ ಸಿಮೆಂಟ್‌ ಬೆಳ್ಳುಳ್ಳಿ! ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

kolar teacher murder case
ಕ್ರೈಂ2 hours ago

Murder Case: ಗಂಡನ ಫೈನಾನ್ಸ್‌ ವ್ಯವಹಾರಕ್ಕಾಗಿ ಹೆಂಡತಿಯ ಹತ್ಯೆ; ಕೊಲೆ ಮಾಡಿ ತಿರುಪತಿಯಲ್ಲಿ ತಲೆಮರೆಸಿಕೊಂಡವರ ಸೆರೆ

Kidnap Case
ಬೆಂಗಳೂರು2 hours ago

Kidnap case: ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರು ಹೇಳಿ ವಿದ್ಯಾರ್ಥಿಯ ಕಿಡ್ನಾಪ್!

Woman Using an Asthma Inhaler
ಆರೋಗ್ಯ3 hours ago

Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು!

food poison bangalore
ಬೆಂಗಳೂರು3 hours ago

Food Poison: ಊಟ ಮಾಡುವಾಗ ಇಲಿ ವಿಷ ಸಿಂಪಡಣೆ, ವಿದ್ಯಾರ್ಥಿಗಳು ಅಸ್ವಸ್ಥ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌