IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​ - Vistara News

ಕ್ರೀಡೆ

IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

IPL 2024:ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ಸೋಲು ಕಂಡ ಪರಿಣಾಮ ರಾಜಸ್ಥಾನ್ ರಾಯಲ್ಸ್​(Rajasthan Royals) ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್​ಗೆ ಅಧಿಕೃತ ಪ್ರವೇಶ ಪಡೆದಿದೆ. ಒಂದೊಮ್ಮೆ ಲಕ್ನೋ ಗೆಲುವು ಸಾಧಿಸುತ್ತಿದ್ದರೆ, ರಾಜಸ್ಥಾನ್​ ಇನ್ನೊಂದು ಗೆಲುವು ಸಾಧಿಸಬೇಕಿತ್ತು.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯಲ್ಲಿ ಈಗಾಗಲೇ ಪಂಜಾಬ್​ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಎಲಿಮಿನೇಟ್ ಆಗಿವೆ. ನಿನ್ನೆ (ಮಂಗಳವಾರ) ನಡೆದ ​ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ಸೋಲು ಕಂಡ ಪರಿಣಾಮ ರಾಜಸ್ಥಾನ್ ರಾಯಲ್ಸ್​(Rajasthan Royals) ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್​ಗೆ ಅಧಿಕೃತ ಪ್ರವೇಶ ಪಡೆದಿದೆ. ಒಂದೊಮ್ಮೆ ಲಕ್ನೋ ಗೆಲುವು ಸಾಧಿಸುತ್ತಿದ್ದರೆ, ರಾಜಸ್ಥಾನ್​ ಇನ್ನೊಂದು ಗೆಲುವು ಸಾಧಿಸಬೇಕಿತ್ತು.

ರಾಜಸ್ಥಾನ್​ ಮತ್ತು ಕೆಕೆಆರ್​ ಪ್ಲೇ ಆಫ್​ ಟಿಕೆಟ್​ ಗಿಟ್ಟಿಸಿಕೊಂಡ ಕಾರಣ ಉಳಿದ 2 ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಚ್ಚರಿ ಎಂದರೆ 7 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಿಯಾಗಿದ್ದ ಆರ್​ಸಿಬಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವ ಸ್ಥಿತಿಯಿಂದ ಸತತ ಗೆಲುವಿನೊಂದಿಗೆ ಕಮ್​ಬ್ಯಾಕ್​ ಮಾಡಿ ಇದೀಗ 6ನೇ ಸ್ಥಾನಿಯಾಗಿದೆ. ಚೆನ್ನೈ ವಿರುದ್ಧ ಗೆದ್ದರೆ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​139319 (+1.428)
ರಾಜಸ್ಥಾನ್​ ರಾಯಲ್ಸ್​​​128416 (+0.349)
ಚೆನ್ನೈ​​137614 (+0.528)
ಹೈದರಾಬಾದ್​127514 (+0.406)
ಡೆಲ್ಲಿ147714 (-0.377)
ಆರ್​ಸಿಬಿ136712 (+0.387)
ಲಕ್ನೋ136712 (-0.787)
ಗುಜರಾತ್​135711 (-1.063)
ಮುಂಬೈ13498 (-0.271)
ಪಂಜಾಬ್​​12488 (-0.423)

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್​ಗೆ ತಿರುಗೇಟು ಕೊಟ್ಟ ಗಂಭೀರ್​

ಡೆಲ್ಲಿಯ ಪಿಚ್​ನಲ್ಲಿ ಲಕ್ನೊ ತಂಡಕ್ಕೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಆ ತಂಡದ ಬ್ಯಾಟರ್​​ಗಳು ಗೆಲುವಿಗಾಗಿ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇಶಾಂತ್ ಶರ್ಮಾ (34 ರನ್​ಗೆ 3 ವಿಕೆಟ್​​) ಡೆಲ್ಲಿಯ ಬೌಲರ್​ಗಳ ಅಬ್ಬರಕ್ಕೆ ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್​​ ಪೂರನ್​ (27 ಎಸೆತಕ್ಕೆ 61 ರನ್​) ಹಾಗೂ ಅರ್ಶದ್​ ಖಾನ್​ (33 ಎಸೆತಕ್ಕೆ 58 ರನ್​) ಅವರ ಹೋರಾಟದಿಂದಾಗಿ ಗುರಿಯ ಸನಿಹಕ್ಕೆ ಬಂದು ಮರ್ಯಾದೆ ಉಳಿಸಿಕೊಂಡಿತು. ಕ್ವಿಂಟನ್ ಡಿ ಕಾಕ್​ (12), ಕೆ. ಎಲ್​ ರಾಹುಲ್​ (05), ಮಾರ್ಕಸ್​ ಸ್ಟೊಯಿನಿಸ್​​ (05), ದೀಪಕ್ ಹೂಡ (0) ಆಯುಷ್​ ಬದೋನಿ (06), ಅವರ ಅಸಮರ್ಥತೆ ತಂಡವನ್ನು ಸೋಲಿನ ಸುಳಿಗೆ ತಳ್ಳಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್​

Rohit Sharma: ವಿಶ್ವಕಪ್​ ಆಡಿದ ಟೀಮ್​ ಇಂಡಿಯಾದ ಹಲವು ಆಟಗಾರರು ಮುಂದಿನ ಸರಣಿಗೂ ಮುನ್ನ ಕೊಂಚ ರಿಲ್ಯಾಕ್ಸ್ ಆಗುವ ನಿಟ್ಟಿನಲ್ಲಿ ತಮ್ಮ ಕುಟುಂಬದ ಜತೆ ನೆಚ್ಚಿನ ತಾಣಗಳಿಗೆ ಪ್ರವಾಸ ಕೈಗೊಂಡಿದ್ದಾರೆ.

VISTARANEWS.COM


on

Rohit Sharma
Koo

ಮುಂಬಯಿ: ಟಿ20 ವಿಶ್ವಕಪ್​ ಗೆದ್ದು ತವರಿಗೆ ಮರಳಿ ಎಲ್ಲ ಅಭಿನಂದನಾ ಕಾರ್ಯಕ್ರಮ ಮತ್ತು ಸನ್ಮಾನಗಳನ್ನು ಸ್ವೀಕರಿಸಿರುವ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ(Rohit Sharma) ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ರೋಹಿತ್ ತಮ್ಮ ಪತ್ನಿ, ಮಗಳ ಜತೆ ಮುಂಬೈ ವಿಮಾನ ನಿಲ್ದಾಣದಿಂದ ವಿದೇಶ ಪ್ರಯಾಣ ಬೆಳೆಸಿದ ವಿಡಿಯೊ ವೈರಲ್​ ಆಗಿದೆ. ರೋಹಿತ್​ ಮಾತ್ರವಲ್ಲದೆ ಸೂರ್ಯಕುಮಾರ್ ಯಾದವ್ ಕೂಡಾ ಪತ್ನಿ ಜತೆ ಪ್ರವಾಸಕ್ಕೆ ತೆರಳಿದ್ದಾರೆ. ಒಟ್ಟಾರೆ ವಿಶ್ವಕಪ್​ ಆಡಿದ ಟೀಮ್​ ಇಂಡಿಯಾದ ಹಲವು ಆಟಗಾರರು ಮುಂದಿನ ಸರಣಿಗೂ ಮುನ್ನ ಕೊಂಚ ರಿಲ್ಯಾಕ್ಸ್ ಆಗುವ ನಿಟ್ಟಿನಲ್ಲಿ ತಮ್ಮ ಕುಟುಂಬದ ಜತೆ ನೆಚ್ಚಿನ ತಾಣಗಳಿಗೆ ಪ್ರವಾಸ ಕೈಗೊಂಡಿದ್ದಾರೆ.

ರೋಹಿತ್ ನಾಯಕತ್ವದಲ್ಲಿ, ಕಳೆದ ವಾರ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಇದನ್ನೂ ಓದಿ Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್​ ಶರ್ಮಾ

ಚಾಂಪಿಯನ್ಸ್​ ಟ್ರೋಫಿಗೂ ರೋಹಿತ್​ ನಾಯಕ


ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವರ್ಷ ನಡೆಯಲಿರುವ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ರೋಹಿತ್​ ಶರ್ಮ ನಾಯಕತ್ವದಲ್ಲಿ ಚಾಂಪಿಯನ್​ ಆಗಲಿದೆ” ಎಂದು ಜಯ್​ ಶಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿದುಬಂದಿದೆ. ಕೆಲದಿನಗಳ ಹಿಂದಷ್ಟೇ ಚಾಂಪಿಯನ್ಸ್‌ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌, ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಿಗದಿ ಮಾಡಿತ್ತು. ಆದರೆ, ಭದ್ರತೆಯ ಕಾರಣವನ್ನು ನೀಡಿರುವ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.

Continue Reading

ಕ್ರೀಡೆ

Hasin Jahan: ‘ನಾಯಿಗಳ ದಂಡು’… ಎಂದು ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ವಿಚ್ಛೇದಿತ ಪತ್ನಿ?; ವಿಡಿಯೊ ವೈರಲ್​

Hasin Jahan: ಶಮಿ ವಿರುದ್ಧ ಹಸೀನ್ ಜಹಾನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಉತ್ತಮ ಪ್ರದರ್ಶನ ತೋರಿದಾಗ ಎಮ್ಮೆ ನೀರು ಕುಡಿಯುತ್ತಿರುವ ಚಿತ್ರಗಳನ್ನು ಪೋಸ್ಟ್​ ಮಾಡುವ ಮೂಲಕ ವಿಲಕ್ಷಣದ ಹೇಳಿಕೆ ನೀಡಿದ್ದರು.

VISTARANEWS.COM


on

Hasin Jahan: Divorced wife who scolded Shami unnecessarily as 'pack of dogs'; The video is viral
Koo

ಕೋಲ್ಕತ್ತಾ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರ ವಿರುದ್ಧ ಸದಾ ಒಂದಿಲ್ಲೊಂದು ಕಾರಣಗಳಿಂದ ಟೀಕಿಸುತ್ತಿರುವ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್(Hasin Jahan) ಈ ಬಾರಿ ನಾಯಿಗೆ ಹೋಲಿಕೆ ಮಾಡಿ ಪರೋಕ್ಷವಾಗಿ ಹೀಯಾಳಿಸಿದ್ದಾರೆ.

ಹೌದು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಣ್ಣು ಮಿಟುಕಿಸುವ ಒಂದು ನಿಮಿಷದ ವಿಡಿಯೊ ಹಂಚಿಕೊಂಡಿರುವ ಹಸೀನ್ ಜಹಾನ್, ನಾಯಿಗಳ ದಂಡು ಹೆಣ್ಣು ಮಕ್ಕಳ ಹಿಂದಿನಿಂದ ಮಾತ್ರ ಬೊಗಳುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ಎಂದ ಅನುಮಾನ ಮೂಡಿದೆ.

ಶಮಿ ವಿರುದ್ಧ ಹಸೀನ್ ಜಹಾನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಉತ್ತಮ ಪ್ರದರ್ಶನ ತೋರಿದಾಗ ಎಮ್ಮೆ ನೀರು ಕುಡಿಯುತ್ತಿರುವ ಚಿತ್ರಗಳನ್ನು ಪೋಸ್ಟ್​ ಮಾಡುವ ಮೂಲಕ ವಿಲಕ್ಷಣದ ಹೇಳಿಕೆ ನೀಡಿದ್ದರು.

ಕೆಲವು ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೋಹಿತ್​ ಶರ್ಮ ಅವರು ತಮ್ಮ ಪುಟ್ಟ ಮಗಳು ಸಮೈರಾ ತೊಡೆ ಮೇಲೆ ಹಾಯಾಗಿ ಮಲಗಿರುವ ಫೋಟೊ ಹಂಚಿಕೊಂಡಿದ್ದ ಹಸೀನ್ ಜಹಾನ್, ಹೆಚ್ಚಿನ ತಂದೆಯಂದಿರು ತಮ್ಮ ಪುಟ್ಟ ಮಗಳನ್ನು ದೇವರಂತೆ ಕಂಡು ಅವರಿಂದ ಶಾಂತಿ ಕಂಡುಕೊಳ್ಳುತ್ತಾರೆ. ಮತ್ತು ಕೆಲವು ತಂದೆಯರು ವೇಶ್ಯೆಯರ ಮಡಿಲಲ್ಲಿ!. ಅಲ್ಲಾಹು ಯಾವುದೇ ಮಗಳಿಗೆ ಇಂತಹ ಗುಣವಿಲ್ಲದ ತಂದೆಯನ್ನು ಎಂದಿಗೂ ನೀಡದಿರಲಿ. ಆಮೀನ್. ನನ್ನ ಪುಟ್ಟ ಮಗಳಿಗೆ ತಾಳ್ಮೆಯನ್ನು ನೀಡುವಂತೆ ನಾನು ಅಲ್ಲಾಹುವಿನನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್​ ಮಾಡಿ ಶಮಿಯನ್ನು ಅನಗತ್ಯವಾಗಿ ಕೆಣಕ್ಕಿದ್ದರು.

16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

ಜೀವನಾಂಶ ನೀಡುತ್ತಿರುವ ಶಮಿ

2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್​ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್​ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

Abhishek Sharma : ಅಭಿಷೇಕ್​ ಶತಕಕ್ಕೆ ಸಹೋದರಿಯ ಚಪ್ಪಾಳೆ, ವಿಡಿಯೊ ಶೇರ್ ಮಾಡಿದ ಕೋಮಲ್​ ಶರ್ಮಾ

Abhishek Sharma : ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಟಿ 20 ಐ ನಲ್ಲಿ ಡಕ್ ಔಟ್ ಆಗಿದ್ದರು. ತಮ್ಮ ಎರಡನೇ ಟಿ 20 ಪಂದ್ಯದಲ್ಲಿ ಅವರು ಗರಿಷ್ಠ ಲಾಭ ಪಡೆದರು. ಅವರು 47 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಜಿಂಬಾಬ್ವೆ ಬೌಲರ್ ಗಳನ್ನು ಮೈದಾನದ ಎಲ್ಲಾ ಭಾಗಗಳಿಗೆ ಅಟ್ಟಿದರು. ಅವರು ತಮ್ಮ ಇನ್ನಿಂಗ್ಸ್ ಉದ್ದಕ್ಕೂ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಆಡಿದ್ದಾರೆ.

VISTARANEWS.COM


on

Abhishek Sharma
Koo

ಬೆಂಗಳೂರು: ಅಭಿಷೇಕ್ ಶರ್ಮಾ (Abhishek Sharma) ತಮ್ಮ ವೃತ್ತಿ ಜೀವನದ ಎರಡನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ 20 ಶತಕ ಗಳಿಸಿದ್ದರು. ಇದರೊಂದಿಗೆ ಭಾರತಕ್ಕೆ ಜಿಂಬಾಬ್ವೆ ವಿರುದ್ಧ 100 ರನ್ ಗಳ ಗೆಲುವು ಸಿಕ್ಕಿದ್ದು, ಐದು ಪಂದ್ಯಗಳ ಸರಣಿಯಲ್ಲಿ ಸಮಬಲದ ಸಾಧನೆ ಮಾಡಿದೆ.

ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಟಿ 20 ಐ ನಲ್ಲಿ ಡಕ್ ಔಟ್ ಆಗಿದ್ದರು. ತಮ್ಮ ಎರಡನೇ ಟಿ 20 ಪಂದ್ಯದಲ್ಲಿ ಅವರು ಗರಿಷ್ಠ ಲಾಭ ಪಡೆದರು. ಅವರು 47 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಜಿಂಬಾಬ್ವೆ ಬೌಲರ್ ಗಳನ್ನು ಮೈದಾನದ ಎಲ್ಲಾ ಭಾಗಗಳಿಗೆ ಅಟ್ಟಿದರು. ಅವರು ತಮ್ಮ ಇನ್ನಿಂಗ್ಸ್ ಉದ್ದಕ್ಕೂ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಆಡಿದ್ದಾರೆ. ಅವರು 34 ಎಸೆತಗಳಲ್ಲಿ ತಮ್ಮ ಅರ್ಧಶತಕ ಗಳಿಸಿದ್ದರು ಹಾಗೂ ಮುಂದಿನ 13 ಎಸೆತಗಳಲ್ಲಿ ತಮ್ಮ ಮುಂದಿನ 50 ರನ್ ಗಳಿಸಿದರು.

ಟಿ 20 ಪಂದ್ಯಗಳಲ್ಲಿ ಸಿಕ್ಸರ್​ನೊಂದಿಗೆ ಇನಿಂಗ್ಸ್ ಆರಂಭಿಸಿದ್ದರು ಮತ್ತು ಸತತ ಮೂರು ಸಿಕ್ಸರ್​ಗಳೊಂದಿಗೆ 100 ರನ್ ಗಳಿಸಿದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಸಿಕ್ಸರ್​ ಮೂಲಕ ಶತಕ ಗಳಿಸಿದ ಆರನೇ ಭಾರತೀಯ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ ಚೊಚ್ಚಲ ಟಿ 20 ಐ ಶತಕವನ್ನು ಗಳಿಸಲು ಕಡಿಮೆ ಇನ್ನಿಂಗ್ಸ್ (2) ತೆಗೆದುಕೊಂಡ ದಾಖಲೆಯೂ ಅವರ ಹೆಸರಿನಲ್ಲಿದೆ.

ಋತುರಾಜ್ ಗಾಯಕ್ವಾಡ್ ಅವರೊಂದಿಗೆ 37 ರನ್ ಸೇರಿಸಿದರು ಮತ್ತು 14 ನೇ ಓವರ್ ನ ಕೊನೆಯ ಎಸೆತದಲ್ಲಿ 100 ರನ್ ಗಳಿಸಿ ಔಟಾದರು. ಗಾಯಕ್ವಾಡ್ ಮತ್ತು ರಿಂಕು ಸಿಂಗ್ (22 ಎಸೆತಗಳಲ್ಲಿ 48* ರನ್) ಕೊನೆಯ ಐದು ಓವರ್​ಗಳಲ್ಲಿ 87 ರನ್​ ಸೇರಿಸಿ ಬೃಹತ್ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು. ನಂತರ ಭಾರತೀಯ ಬೌಲರ್​ಗಳು ಜಿಂಬಾಬ್ವೆಯನ್ನು ಕೇವಲ 134 ರನ್​ಗಳಿಗೆ ಆಲೌಟ್ ಮಾಡಿದರು.

ಕುಟುಂಬದ ಸಂಭ್ರಮ

ಅಭಿಷೇಕ್​ ಶರ್ಮಾ ಸಿಕ್ಸರ್​ ಬಾರಿಸಿ ಶತಕ ದಾಖಲಿಸುತ್ತಿದ್ದಂತ ಅವರ ಕುಟುಂಬದ ಸದಸ್ಯರು ಸಂಭ್ರಸಿದ್ದಾರೆ. ಇದರ ವಿಡಿಯೊವನ್ನು ಸಹೋದರಿ ಕೋಮಲ್​ ಶರ್ಮಾ ಇಂಟರ್ನೆಟ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಮ್ಮ ಮಗ ವಿಶೇಷ ಹೆಗ್ಗುರುತನ್ನು ತಲುಪಿದ ನಂತರ ಅವರೆಲ್ಲರೂ ನಗುವುದು ಕಂಡು ಬಂತು. ಐಪಿಎಲ್​​ನ ಅವರ ಅದ್ಭುತ ಪ್ರದರ್ಶನದ ಬಳಿಕ ಶರ್ಮಾ ಅವರನ್ನು ಸರಣಿಗಾಗಿ ಈ ಭಾರತೀಯ ತಂಡಕ್ಕೆ ಸೇರಿಸಲಾಯಿತು. ಅವರು ಎಸ್​​ಆರ್​ಎಚ್​ ಪರ 16 ಇನಿಂಗ್ಸ್​ಗಳಲ್ಲಿ 204.02 ಸ್ಟ್ರೈಕ್ ರೇಟ್​​ನಲ್ಲಿ 484 ರನ್ ಗಳಿಸಿದ್ದರು.

ಇದನ್ನೂ ಓದಿ: Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

ಹರಾರೆಯಲ್ಲಿ ನಡೆದ 2 ನೇ ಟಿ 20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಅಭಿಷೇಕ್ ಶರ್ಮಾ ಹರಾರೆ ಸ್ಪೋರ್ಟ್ಸ್ ಕ್ಲಬ್​ನಿಂದ ತಮ್ಮ ಕುಟುಂಬದೊಂದಿಗೆ ವಿಡಿಯೊ ಕಾಲ್ ಮೂಲಕ ಮಾತನಾಡಿದರು. ದಾಖಲೆಯ ಶತಕದ ನಂತರ ಅಭಿಷೇಕ್ ತನ್ನ ಹೆತ್ತವರೊಂದಿಗೆ ಮಾತನಾಡುವ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ.

ಅಭಿಷೇಕ್ ಶರ್ಮಾ ಅವರ ಸಹೋದರಿ ಪಂಜಾಬ್​​ ಯುವ ಕ್ರಿಕೆಟಿಗನಿಗೆ ಬೆಂಬಲವಾಗಿದ್ದಾರೆ. ವೈದ್ಯರಾಗಿರುವ ಕೋಮಲ್, ಐಪಿಎಲ್ 2024 ರ ಋತುವಿನಾದ್ಯಂತ ಅಭಿಷೇಕ್ ಅವರೊಂದಿಗೆ ಸಮಯ ಕಳೆಯುತ್ತಿದ್ದರು. ಹರಾರೆಯಲ್ಲಿ ಶತಕದ ನಂತರ ಅಭಿಷೇಕ್ ಶರ್ಮಾ ತಮ್ಮ ಮಾರ್ಗದರ್ಶಕ ಮತ್ತು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರೊಂದಿಗೆ ಮಾತನಾಡಿದರು. ಭಾರತೀಯ ಕ್ರಿಕೆಟ್ ಮಂಡಳಿ ಹಂಚಿಕೊಂಡ ವೀಡಿಯೊದಲ್ಲಿ, ಯುವರಾಜ್ ಅಭಿಷೇಕ್ ಅವರನ್ನು ಅಭಿನಂದಿಸುವುದನ್ನು ಕಾಣಬಹುದು.

Continue Reading

ಪ್ರಮುಖ ಸುದ್ದಿ

Mumbai Cricket Association : ಮುಂಬೈನಲ್ಲಿ ನಿರ್ಮಾಣವಾಗಲಿದೆ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್​ ಸ್ಟೇಡಿಯಮ್​

Mumbai Cricket Association : ಟಿ20 ವಿಜಯೋತ್ಸವ ಬಳಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರು ಸ್ವಾಗತಿಸಿದ್ದರು.

VISTARANEWS.COM


on

Mumbai Cricket Association
Koo

ಬೆಂಗಳೂರು: ಟಿ 20 ವಿಶ್ವಕಪ್ 2024 ವಿಜೇತ ಭಾರತೀಯ ತಂಡದ ಸದಸ್ಯರು ಇತ್ತೀಚೆಗೆ ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಮ್​ನಲ್ಲಿ (wankhede stadium) ಸಂಭ್ರಮಾಚರಣೆ ಮಾಡಿದ್ದರು. ಆದರೆ, ಈ ಐತಿಹಾಸಿಕ ಸ್ಟೇಡಿಯಮ್​ ಇನ್ನು ಮುಂದೆ ಇತಿಹಾಸದ ಪುಸ್ತಕ ಸೇರುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಯು (Mumbai Cricket Association) ಒಂದು ಲಕ್ಷ ಮಂದಿ ಪ್ರೇಕ್ಷಕರ ದೊಡ್ಡ ಸ್ಟೇಡಿಯಮ್ ಒಂದನ್ನು ನಿರ್ಮಿಸಲು ಮುಂದಾಗಿದೆ. ಹೀಗಾದರೆ ವಾಂಖೆಡೆ ಮೂಲೆಗುಂಪಾಗುವುದು ಖಚಿತ.

ಟಿ20 ವಿಜಯೋತ್ಸವ ಬಳಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರು ಸ್ವಾಗತಿಸಿದ್ದರು.

ಮಹಾರಾಷ್ಟ್ರ ಮೂಲದ ಎಲ್ಲಾ ಕ್ರಿಕೆಟಿಗರನ್ನು ರಾಜ್ಯ ಸರ್ಕಾರವು ಸನ್ಮಾನಿಸಿತ್ತು. ಆಗ ಫಡ್ನವೀಸ್ ಸಿಎಂ ಏಕನಾಥ್​ ಶಿಂಧೆ ಬಳಿ ರಾಜ್ಯದಲ್ಲಿ ಮತ್ತೊಂದು ವಿಶ್ವ ದರ್ಜೆಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಆಲೋಚನೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದರು. ಇದು ಒಂದು ಲಕ್ಷಕ್ಕೂ ಹೆಚ್ಚು ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ದೇಶದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾಗಲಿದೆ.

ಥಾಣೆ ಜಿಲ್ಲೆಯ ಅಮಾನೆ ಗ್ರಾಮದಲ್ಲಿ 50 ಎಕರೆ ಭೂಮಿಗಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್​ಡಿಸಿಗೆ) ನೀಡುವ ಮುಕ್ತ ಟೆಂಡರ್​ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಈಗಾಗಲೇ ಅರ್ಜಿ ಸಲ್ಲಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ. ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಔಪಚಾರಿಕ ಯೋಜನೆ ಸಿದ್ಧಗೊಳ್ಳಲಿದೆ.

ವಾಂಖೆಡೆಯಿಂದ 68 ಕಿ.ಮೀ ದೂರದ ಸ್ಟೇಡಿಯಮ್​

ಥಾಣೆಯಿಂದ 26 ಕಿ.ಮೀ ಮತ್ತು ವಾಂಖೆಡೆ ಕ್ರೀಡಾಂಗಣದಿಂದ 68 ಕಿ.ಮೀ ದೂರದಲ್ಲಿರುವ ಅಮಾನೆಯಲ್ಲಿ ಸುಮಾರು 50 ಎಕರೆ ತೆರೆದ ಭೂಮಿಯಲ್ಲಿ ಹರಡಿರುವ 1 ಲಕ್ಷ ಸಾಮರ್ಥ್ಯದ ಬೃಹತ್ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಎಂಸಿಎ ನೋಡುತ್ತಿದೆ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ) ಕರೆದ ಮುಕ್ತ ಟೆಂಡರ್ ಅನ್ನು ಎಂಸಿಎ ಭರ್ತಿ ಮಾಡಿದೆ. ಸಂಘವು ಮಹಾರಾಷ್ಟ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ” ಎಂದು ವರದಿ ತಿಳಿಸಿದೆ.

ಅಮೋಲ್ ಕಾಳೆ ಕನಸಿನ ಯೋಜನೆ

ದಿವಂಗತ ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರು ಫಡ್ನವೀಸ್ ಅವರ ಆಪ್ತ ಸ್ನೇಹಿತರಾಗಿದ್ದರು. ಹೊಸ ಕ್ರಿಕೆಟ್ ಅಖಾಡವನ್ನು ನಿರ್ಮಿಸುವುದು ಅವರ ಕನಸಿನ ಯೋಜನೆಯಾಗಿತ್ತು ಎಂದು ವರದಿಯಾಗಿದೆ. ವಿಶೇಷವೆಂದರೆ, ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಲ್ಲಿ ಭಾಗವಹಿಸಿದ ಸ್ವಲ್ಪ ಸಮಯದ ನಂತರ ಹೃದಾಯಘಾತದಿಂದ ನಿಧನ ಹೊಂದಿದ್ದರು.

ಇದನ್ನೂ ಓದಿ: Sourav Ganguly : ಸೌರವ್​ ಗಂಗೂಲಿಗೆ 52ನೇ ಜನ್ಮದಿನ; ದಾದಾನ ಅಭೂತಪೂರ್ವ ವೃತ್ತಿ ಜೀವನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ

ಈ ಕ್ರೀಡಾಂಗಣವು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರ ಕನಸಿನ ಯೋಜನೆಯಾಗಿತ್ತು. ಇದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಬಹುದಾದ ಎರಡು ಮೈದಾನಗಳು ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ” ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತು ನವೀ ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಎಂಸಿಎ ಅಡಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದ ಎರಡು ಸ್ಥಳಗಳಾಗಿವೆ. ಬಿಕೆಸಿ ಮೈದಾನ ಮತ್ತು ಡೆಕ್ಕನ್ ಜಿಮ್ಖಾನಾ ಮೈದಾನಗಳು ಸಹ ಅಂತರರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಿವೆ. ಆದರೆ ಆಧುನಿಕ ಕ್ರಿಕೆಟ್​ಗೆ ಪೂರಕವಾಗಿ ಸೌಲಭ್ಯಗಳು ಇಲ್ಲ.

Continue Reading
Advertisement
Supreme Court
ಪ್ರಮುಖ ಸುದ್ದಿ43 seconds ago

Sandeshkhali case : ಸುಪ್ರೀಂ ಕೋರ್ಟ್‌‌ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ…

Kiccha Sudeep Call Boss To Only Two Persons
ಸ್ಯಾಂಡಲ್ ವುಡ್7 mins ago

Kiccha Sudeep: ಇಬ್ಬರಿಗೆ ಮಾತ್ರ ʻಬಾಸ್‌ʼ ಎಂದು ಕರೆಯುವೆ ಎಂದ ಕಿಚ್ಚ; ಯಾರವರು?

France Election
ಪ್ರಮುಖ ಸುದ್ದಿ28 mins ago

France Election: ಫ್ರಾನ್ಸ್ ಚುನಾವಣೆ: ಎಡ ಪಕ್ಷಗಳ ಒಕ್ಕೂಟದ ಮೇಲುಗೈ; ಅತಂತ್ರ ಫಲಿತಾಂಶ

Chennai Police commissioner
ಪ್ರಮುಖ ಸುದ್ದಿ31 mins ago

Chennai Police commissioner : ಬಿಎಸ್‌‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

Rohit Sharma
ಕ್ರೀಡೆ32 mins ago

Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್​

Karnataka Rain Effect
ಮಳೆ33 mins ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Kalki 2898 AD box office thrashes 'PK' record
ಟಾಲಿವುಡ್40 mins ago

Kalki 2898 AD: ‘ಪಿಕೆ’, ʻಗದರ್‌ʼ ಸಿನಿಮಾಗಳ ದಾಖಲೆ ಮುರಿದ ʻಕಲ್ಕಿ 2898 ಎಡಿʼ!

Cm Siddaramaiah in Janatha Darshan
ಪ್ರಮುಖ ಸುದ್ದಿ49 mins ago

CM Siddaramaiah: ಆಗಸ್ಟ್‌ನಲ್ಲಿ ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಜನಸ್ಪಂದನ

Indecent behaviour
ಕರ್ನಾಟಕ53 mins ago

Indecent Behaviour: ಕಾಲೇಜು ಯುವತಿಯವರಿಗೆ ಮರ್ಮಾಂಗ ತೋರಿಸಿ ಎಸ್ಕೇಪ್‌ ಆಗಿದ್ದವ ಪೊಲೀಸ್‌ ವಶಕ್ಕೆ

Hasin Jahan: Divorced wife who scolded Shami unnecessarily as 'pack of dogs'; The video is viral
ಕ್ರೀಡೆ59 mins ago

Hasin Jahan: ‘ನಾಯಿಗಳ ದಂಡು’… ಎಂದು ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ವಿಚ್ಛೇದಿತ ಪತ್ನಿ?; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain Effect
ಮಳೆ33 mins ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ3 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ20 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ23 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ23 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಟ್ರೆಂಡಿಂಗ್‌