Mohan Lal: ಅಣ್ಣಾವ್ರ ಹಾಡನ್ನು ಎಂಜಾಯ್‌ ಮಾಡಿದ ಮೋಹನ್ ಲಾಲ್; ವಿಡಿಯೊ ವೈರಲ್‌! - Vistara News

ಮಾಲಿವುಡ್

Mohan Lal: ಅಣ್ಣಾವ್ರ ಹಾಡನ್ನು ಎಂಜಾಯ್‌ ಮಾಡಿದ ಮೋಹನ್ ಲಾಲ್; ವಿಡಿಯೊ ವೈರಲ್‌!

Mohan Lal: ಮೋಹನ್ ಲಾಲ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ‘ಮೈತ್ರಿ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ರಾಜ್‌ಕುಮಾರ್‌ ಅವರ ʻಎರಡೂ ಕನಸುʼ ಚಿತ್ರದ ʻಎಂದೆಂದೂ ನಿನ್ನನ್ನು ಮರೆತು” ಹಾಡನ್ನು ಪ್ಲೇ ಮಾಡಿ ಗುನುಗುತ್ತಿದ್ದರು ಮೋಹನ್ ಲಾಲ್.

VISTARANEWS.COM


on

Mohan Lal watching dr rajkumars super hit song
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡದ ಕುಲಪುತ್ರ ದಿವಂಗತ ಡಾ. ರಾಜ್ ಕುಮಾರ್ (Dr. Rajkumar) ಎಂದರೆ ಅದು ಕೇವಲ ವ್ಯಕ್ತಿಯಲ್ಲ. ಅವರು ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಟ. ಕನ್ನಡಿಗರಿಗೆಲ್ಲರಿಗೂ ಅವರೊಂದು ಶಕ್ತಿ. ಅವರು ಕನ್ನಡ ಭಾಷೆಯ ಅಸ್ಮಿತೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಸಾರ್ವಭೌಮ ಬಣ್ಣ ಹಚ್ಚಿದ್ದರು. ರಾಜ್‌ಕುಮಾರ್‌ ಅವರನ್ನು ಇಷ್ಟ ಪಡದವರೇ ಇಲ್ಲ. ಇನ್ನು ಮಾಲಿವುಡ್ ನಟ ಮೋಹನ್ ಲಾಲ್‌ಗೂ (Mohan Lal) ರಾಜ್‌ ಅಂದರೆ ಪ್ರೀತಿ. ರಾಜ್‌ಕುಮಾರ್‌ ಅವರ ʻಎರಡೂ ಕನಸುʼ ಚಿತ್ರದ ʻಎಂದೆಂದೂ ನಿನ್ನನ್ನು ಮರೆತು” ಹಾಡನ್ನು ಪ್ಲೇ ಮಾಡಿ ಗುನುಗುತ್ತಿದ್ದರು ಮೋಹನ್ ಲಾಲ್. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮೋಹನ್ ಲಾಲ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ‘ಮೈತ್ರಿ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. 50 ವರ್ಷಗಳ ಹಿಂದೆ ತೆರೆಕಂಡಿದ್ದ ‘ಎರಡು ಕನಸು’ ಚಿತ್ರಕ್ಕೆ ದೊರೆ- ಭಗವಾನ್ ಆಕ್ಷನ್ ಕಟ್ ಹೇಳಿದ್ದರು. ವಾಣಿ ಅವರು ಬರೆದ ಕಾದಂಬರಿ ಆಧರಿಸಿ ಸಿನಿಮಾ ಮೂಡಿ ಬಂದಿತ್ತು.30 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ ‘ಎರಡು ಕನಸು’ ಸಿನಿಮಾ 1982ರಲ್ಲಿ ರೀ ರಿಲೀಸ್ ಆಗಿ ಶತದಿನೋತ್ಸವ ಆಚರಿಸಿತ್ತು. 2015ರಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಸಿನಿಮಾ ಗಮನ ಸೆಳೆದಿತ್ತು. ಇದೀಗ ಮೋಹನ್‌ಲಾಲ್‌ ತಮ್ಮ ಮೊಬೈಲ್ ನಲ್ಲಿ ರಾಜ್ ಕುಮಾರ್ ಹಾಡು ಕೇಳುತ್ತ ಅದೇ ರೀತಿ ಹಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Actor Mohanlal: 56ನೇ ಬಾರಿಗೆ ಮೋಹನ್ ಲಾಲ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಈ ಫೇಮಸ್‌ ನಟಿ!

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

IMDb 2024 top movies: ಈ ವರ್ಷದ ಅತ್ಯಂತ ನಿರೀಕ್ಷಿತ ಮತ್ತು ಜನಪ್ರಿಯ ಸಿನಿಮಾಗಳ ಪಟ್ಟಿ ಇಲ್ಲಿದೆ

ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಸೆಲೆಬ್ರಿಟಿಗಳ ಕುರಿತು ಮಾಹಿತಿಗಾಗಿ ಅತ್ಯಂತ ಜನಪ್ರಿಯ ಮೂಲಗಳಲ್ಲಿ ಒಂದಾಗಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ 2024ರ (IMDb 2024) ಟಾಪ್ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2024ರಲ್ಲಿ ಈವರೆಗಿನ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಮತ್ತು ಹೆಚ್ಚು ನಿರೀಕ್ಷಿತ ಚಲನಚಿತ್ರಗಳ ಮಾಹಿತಿಯನ್ನು ನೀಡಲಾಗಿದೆ. ನೀವು ಇವುಗಳಲ್ಲಿ ಯಾವ ಚಿತ್ರ ನೋಡಿದ್ದೀರಿ? ಈ ಪಟ್ಟಿ ನೋಡಿ.

VISTARANEWS.COM


on

By

IMDb 2024
Koo

ಬಾಕ್ಸ್ ಆಫೀಸ್‌ನಲ್ಲಿ (box office collection) ಅನಿಶ್ಚಿತತೆಯ ಹೊರತಾಗಿಯೂ 2024ರಲ್ಲಿ ಹಲವು ಭಾರತೀಯ ಸಿನಿಮಾಗಳು (Indian film) ದಾಖಲೆಯನ್ನು ಬರೆದಿತ್ತು. ಕಲ್ಕಿ 2898 ಎಡಿ (kalki 2898 AD) ಪ್ರಸ್ತುತ 2024ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರವಾಗಿದೆ. ಪುಷ್ಪ: ದಿ ರೂಲ್ ಭಾಗ 2 (pushpa: the rule part 2) ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಇಂಟರ್ನೆಟ್ ಮೂವಿ ಡೇಟಾಬೇಸ್ (IMDb 2024) ಪ್ರಕಾರ ಇದು ಈ ವರ್ಷದ ಬಹು ನಿರೀಕ್ಷಿತ ಭಾರತೀಯ ಚಲನಚಿತ್ರವಾಗಿದೆ.

ಇಂಟರ್ನೆಟ್ ಮೂವಿ ಡೇಟಾಬೇಸ್ 2024ರ ಟಾಪ್ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂಟರ್ನೆಟ್ ಮೂವಿ ಡೇಟಾಬೇಸ್ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಸೆಲೆಬ್ರಿಟಿಗಳ ಕುರಿತು ಮಾಹಿತಿಗಾಗಿ ಅತ್ಯಂತ ಜನಪ್ರಿಯ ಮೂಲಗಳಲ್ಲಿ ಒಂದಾಗಿದೆ. 2024ರಲ್ಲಿ ಈವರೆಗಿನ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಮತ್ತು ಹೆಚ್ಚು ನಿರೀಕ್ಷಿತ ಚಲನಚಿತ್ರಗಳ ಮಾಹಿತಿಯನ್ನು ಐಎಂಡಿಬಿ ಪ್ರಕಟಿಸಿದೆ.

ಕಲ್ಕಿ 2898 ಎಡಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಮಾತನಾಡಿ, ನಮ್ಮ ಇಡೀ ತಂಡವು ಐಎಂಡಿಬಿ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಬಹಳ ಸಂತೋಷ ಮತ್ತು ಗೌರವವಾಗಿದೆ. ಇದು ಪ್ರಪಂಚದಾದ್ಯಂತದ ನಮ್ಮ ಪ್ರೇಕ್ಷಕರ ಪ್ರೀತಿಯನ್ನು ನೇರವಾಗಿ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.


ಐಎಂಡಿಬಿ ಪಟ್ಟಿಯ 2024ರ ನಂ. 2 ಶ್ರೇಯಾಂಕದಲ್ಲಿರುವ ʼಮಂಜುಮ್ಮೆಲ್ ಬಾಯ್ಸ್‌ʼ ಚಿತ್ರದ ನಿರ್ದೇಶಕ ಚಿದಂಬರಂ ಪ್ರತಿಕ್ರಿಯಿಸಿ ಈ ಗೌರವಕ್ಕಾಗಿ ನಾನು ಐಎಂಡಿಬಿಗೆ ಕೃತಜ್ಞನಾಗಿದ್ದೇನೆ. ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ಪ್ರಪಂಚದಾದ್ಯಂತದ ವೀಕ್ಷಕರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಈ ಚಿತ್ರದ ಮ್ಯಾಜಿಕ್‌ಗೆ ಜೀವ ತುಂಬಿದ ಇಡೀ ಚಿತ್ರತಂಡದ ಶ್ರಮ ಮತ್ತು ಸಮರ್ಪಣೆಗೆ ಈ ಸಾಧನೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಐಎಂಡಿಬಿ 2024 ಪಟ್ಟಿಯಲ್ಲಿ ಭಾರತೀಯ ಸಿನಿಮಾ

ಭಾರತೀಯ ಸಿನಿಮಾವು ಭಾರತದಲ್ಲಿ ಮತ್ತು ಜಾಗತಿಕವಾಗಿ ಅತೀ ಹೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ ಎಂದು ಐಎಂಡಿಬಿ ಇಂಡಿಯಾದ ಮುಖ್ಯಸ್ಥೆ ಯಾಮಿನಿ ಪಟೋಡಿಯಾ ಹೇಳಿದ್ದಾರೆ.
2024ರಲ್ಲಿ ಇಲ್ಲಿಯವರೆಗೆ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಐದು ಹಿಂದಿ, ಮೂರು ಮಲಯಾಳಂ ಮತ್ತು ಎರಡು ತೆಲುಗು ಚಲನಚಿತ್ರಗಳು ಪ್ರೇಕ್ಷಕರನ್ನು ಕಾಯುವಂತೆ ಮಾಡಿದೆ. ಇದರಲ್ಲಿ ಪುಷ್ಪಾ: ದಿ ರೂಲ್ – ಭಾಗ 2 ಮೊದಲ ಸ್ಥಾನದಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ.


ಅತ್ಯಂತ ಜನಪ್ರಿಯ ಚಿತ್ರಗಳು

ಕಲ್ಕಿ 2898 ಎಡಿ, ಮಂಜುಮ್ಮೆಲ್ ಬಾಯ್ಸ್, ಫೈಟರ್, ಹನುಮಾನ್, ಶೈತಾನ್, ಲಾಪತಾ ಲೇಡಿಸ್, ಆರ್ಟಿಕಲ್ 370, ಪ್ರೇಮಾಲು, ಆವೇಶಮ್, ಮುಂಜ್ಯ ಕ್ರಮವಾಗಿ 1ರಿಂದ 10ರೊಳಗಿನ ಸ್ಥಾನದಲ್ಲಿದೆ.

ಶ್ರೇಯಾಂಕ

2024ರ ಜನವರಿ 1ರಿಂದ ಜುಲೈ 10ರ ನಡುವೆ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳಲ್ಲಿ ಐಎಂಡಿಬಿ ಬಳಕೆದಾರರ ಸರಾಸರಿ ರೇಟಿಂಗ್ 6 ಅಥವಾ ಕನಿಷ್ಠ 10,000 ಮತಗಳೊಂದಿಗೆ ಈ ಚಿತ್ರಗಳು ಹೆಚ್ಚು ಜನಪ್ರಿಯವಾಗಿವೆ.


ಹೆಚ್ಚು ನಿರೀಕ್ಷಿತ ಚಿತ್ರಗಳು

ಪುಷ್ಪಾ: ದಿ ರೂಲ್- ಭಾಗ 2, ದೇವರ- ಭಾಗ 1, ವೆಲ್ಕಮ್ ಟು ಜಂಗಲ್, ಡಿ ಗ್ರೇಟೆಸ್ಟ್ ಆಫ್ ಆಲ್ ಟೈಮ್, ಕಂಗುವ, ಸಿಂಗಂ ಅಗೈನ್, ಭೂಲ್ ಭುಲೈಯಾ 3, ತಂಗಲಾನ್, ಔರಾನ್ ಮೇ ಕಹಾನ್ ದಮ್ ಥಾ, ಸ್ತ್ರೀ 2 ಕ್ರಮವಾಗಿ 1ರಿಂದ 10ರೊಳಗಿನ ಸ್ಥಾನದಲ್ಲಿದೆ.


ಟಾಪ್ ಸ್ಥಾನದಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಜಯ್ ದೇವಗನ್

ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಅಜಯ್ ದೇವಗನ್ ಅವರ ಚಿತ್ರಗಳು ಎರಡೂ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ದೀಪಿಕಾ ಮತ್ತು ದಿಶಾ ಕಲ್ಕಿ 2898 ಎಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಫೈಟರ್ ಚಿತ್ರದಲ್ಲೂ ದೀಪಿಕಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actor Dhanush: ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಬಾರದಾ? ನಾನೇನು ಬೀದಿಯಲ್ಲಿ ಇರಬೇಕಾ ಎಂದ ನಟ ಧನುಷ್‌!

ಶೈತಾನ್ ಚಿತ್ರದಲ್ಲಿ ಅಜಯ್ ನಟಿಸಿದ್ದು, ದೀಪಿಕಾ ಮತ್ತು ಅಜಯ್ ಮೊದಲ ಬಾರಿಗೆ ಸಿಂಗಮ್ ಅಗೈನ್ ನಲ್ಲಿ ಕಾಣಿಸಿಕೊಂಡಿದ್ದಾರೆ.


ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ದಿಶಾ ಅವರ ಮುಂಬರುವ ಬಿಡುಗಡೆಗಳಲ್ಲಿ ವೆಲ್ಕಮ್ ಟು ದಿ ಜಂಗಲ್ ಮತ್ತು ಕಂಗುವ ಸೇರಿವೆ.

Continue Reading

ಮಾಲಿವುಡ್

Kannada New Movie: ಕರ್ನಾಟಕ- ಕೇರಳ ಗಡಿಯ ಕಥೆ ʻಎಂಥಾ ಲೋಕವಯ್ಯʼ ಚಿತ್ರಕ್ಕೆ ಖ್ಯಾತ ಮಾಲಿವುಡ್‌ ನಿರ್ದೇಶಕ ಸಾಥ್‌

Kannda New Movie: ದಿ ಗ್ರೇಟ್ ಇಂಡಿಯನ್ ಕಿಚನ್” ಮತ್ತು ಮಮ್ಮುಟ್ಟಿ ಹಾಗೂ ಜ್ಯೋತಿಕ ಅಭಿನಯದ “ಕಾದಲ್-ದಿ ಕೋರ್” ನಂತಹ ಜನ ಮೆಚ್ಚುಗೆ ಪಡೆದ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಪ್ರಭಾವಶಾಲಿ ಕಥೆ ಹೇಳುವಿಕೆಗೆ ಹೆಸರುವಾಸಿಯಾದ ನಿರ್ದೇಶಕ ಜಿಯೋ ಬೇಬಿ ಅವರು ಈ ಹೊಸ ಯೋಜನೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

VISTARANEWS.COM


on

Kannada New Movie malayali director jeo baby presents sithesh c govind directs
Koo

ಬೆಂಗಳೂರು: ಪ್ರಾದೇಶಿಕ ಪ್ರತಿಭೆಗಳ (Kannda New Movie) ಅಭಿನಯದೊಂದಿಗೆ ಪ್ರತಿಭಾನ್ವಿತ ನಿರ್ದೇಶಕ ಸಿತೇಶ್ ಸಿ ಗೋವಿಂದ್ ನಿರ್ದೇಶನದ “ಇದು ಎಂಥಾ ಲೋಕವಯ್ಯ” ಕನ್ನಡ ಚಲನಚಿತ್ರವನ್ನು ಸಿನಿಮಾವನ್ನು ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿಯವರು ಅರ್ಪಿಸುತ್ತಿದ್ದಾರೆ. ಈ ಚಿತ್ರವು ಒಂದು ಹೊಸತನದ ಮತ್ತು ವಿಶಿಷ್ಟ ರೀತಿಯ ಸಿನಿಮಾ ಅನುಭವವನ್ನು ನೀಡುವ ಭರವಸೆಯೊಂದಿಗೆ ಮೂಡಿಬಂದಿದೆ.

“ದಿ ಗ್ರೇಟ್ ಇಂಡಿಯನ್ ಕಿಚನ್” ಮತ್ತು ಮಮ್ಮುಟ್ಟಿ ಹಾಗೂ ಜ್ಯೋತಿಕ ಅಭಿನಯದ “ಕಾದಲ್-ದಿ ಕೋರ್” ನಂತಹ ಜನ ಮೆಚ್ಚುಗೆ ಪಡೆದ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಪ್ರಭಾವಶಾಲಿ ಕಥೆ ಹೇಳುವಿಕೆಗೆ ಹೆಸರುವಾಸಿಯಾದ ನಿರ್ದೇಶಕ ಜಿಯೋ ಬೇಬಿ ಅವರು ಈ ಹೊಸ ಯೋಜನೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

“ಇದು ಎಂಥಾ ಲೋಕವಯ್ಯ” ಚಿತ್ರವನ್ನು ಪ್ರಸ್ತುತಪಡಿಸುವ ಅವರ ನಿರ್ಧಾರವು ಭಾರತದಲ್ಲಿನ ವಿವಿಧ ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ನಡುವೆ ಬೆಳೆಯುತ್ತಿರುವ ಸಹಯೋಗತೆಯನ್ನು ಪ್ರದರ್ಶಿಸುತ್ತದೆ.
“ಇದು ಎಂಥಾ ಲೋಕವಯ್ಯ” ಒಂದು ಸಾಮಾಜಿಕ ವಿಡಂಬನಾತ್ಮಕ ಚಲನಚಿತ್ರವಾಗಿದ್ದು, ಇದು ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕತೆಯಾಗಿದೆ.

ಚಲನಚಿತ್ರವು ಎರಡು ದಿನಗಳಲ್ಲಿ ನಡೆಯುವ ಘಟನೆಗಳೊಂದಿಗೆ ತೆರೆದುಕೊಳ್ಳುತ್ತದೆ, ಇಲ್ಲಿನ ಪಾತ್ರಗಳ ಜೀವನದಲ್ಲಿ ಉಂಟಾಗುವ ಕೆಲವು ಆಳವಾದ ಬದಲಾವಣೆಗಳಿಗೆ ಕಾರಣವಾಗುವ ಘಟನೆಗಳು ಈ ಚಿತ್ರದಲ್ಲಿ ಹೊಂದಿರುತ್ತದೆ.
ಚಿತ್ರದಲ್ಲಿ ಕನ್ನಡ, ಮಲಯಾಳಂ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ವಿಶಿಷ್ಟಪೂರ್ಣ ಸಮ್ಮೇಳನವಾಗಿದೆ. ಇದು ಗಡಿ ಪ್ರದೇಶದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನು ಕೂಡಾ ಪ್ರತಿಬಿಂಬಿಸುತ್ತದೆ. ಚಿತ್ರದ ಹಾಡುಗಳು ಸಹ ಮಿಶ್ರ ಭಾಷಾ ಛಾಯೆಗಳನ್ನು ಹೊಂದಿದ್ದು, ಚಿತ್ರದ ಮೆರುಗು ಮತ್ತು ಆಕರ್ಷಣೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

ಈ ಅಪರೂಪದ ಹೈಪರ್‌ಲಿಂಕ್ ಚಿತ್ರವು ಒಂದು ಕುತೂಹಲಕಾರಿ ಘಟನೆ ಕೆಲವು ಕುಟುಂಬಗಳ ಮಧ್ಯದಲ್ಲಿ ಸಂಭವಿಸುವುದರದೊಂದಿಗೆ ಪ್ರಾರಂಭವಾಗುತ್ತದೆ, ಸ್ಥಳೀಯ ಮೂಢನಂಬಿಕೆಗಳಿಂದ ಪ್ರಭಾವಿತವಾದ ಘಟನೆಗಳ ಸರಣಿಯನ್ನು ಎತ್ತಿತೋರಿಸುತ್ತದೆ. ಮತ್ತು ಕೆಲವು ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತದೆ. ಸಿತೇಶ್ ಸಿ ಗೋವಿಂದ್ ಅವರು ಕರ್ನಾಟಕ-ಕೇರಳ ಗಡಿಯ ಸಾಂಸ್ಕೃತಿಕ ಸತ್ವ ಮತ್ತು ಅಲ್ಲಿನ ಜನರ ವಿಶಿಷ್ಟ ರೀತಿಯ ನಂಬಿಕೆಗಳನ್ನು ಹೊರತರುವ ಒಳನೋಟವುಳ್ಳ ಸಾಮಾಜಿಕ ವ್ಯಾಖ್ಯಾನವನ್ನು ತಿಳಿಯಾದ ಹಾಸ್ಯದೊಂದಿಗೆ ಸಮತೋಲನಗೊಳಿಸಿ ಕಥೆಯನ್ನು ರಚಿಸಿದ್ದಾರೆ.

ಜಿಯೋ ಬೇಬಿ ಮತ್ತು ಸಿತೇಶ್ ಸಿ ಗೋವಿಂದ್ ನಡುವಿನ ಸಹಯೋಗವು ಚಲನಚಿತ್ರ ರಂಗದಲ್ಲಿ ಸಾಕಷ್ಟು ತರಂಗವನ್ನು ಅನ್ನು ಸೃಷ್ಟಿಸಿದೆ. ಜಿಯೋ ಬೇಬಿ ಅವರ ಈ ಒಂದು ಒಳಗೊಳ್ಳುವಿಕೆಯು ಗಮನಾರ್ಹವಾದ ಅನುಮೋದನೆಯಾಗಿ ಕಂಡುಬರುತ್ತದೆ, ಇದು ವ್ಯಾಪಕವಾಗಿ ಪ್ರೇಕ್ಷಕರನ್ನು ಆಕರ್ಷಿಸುವ ಮತ್ತು ಕನ್ನಡ-ಮಾತನಾಡುವ ಪ್ರದೇಶಗಳನ್ನು ಮೀರಿ ಚಿತ್ರದ ಜನಪ್ರಿಯತೆಯನ್ನು ಹಾಗೂ ಗುರುತಿಸುವಿಕೆಯನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚಿನ ಮಟ್ಟಿಗೆ ಇರುತ್ತದೆ.

“ಇದು ಎಂಥಾ ಲೋಕವಯ್ಯ” ಆಗಸ್ಟ್ 9, 2024 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ನಿರೀಕ್ಷೆಯನ್ನು ಹೆಚ್ಚಿಸಿದಂತೆ, ಚಲನಚಿತ್ರವು ಒಂದು ಹೆಗ್ಗುರುತನ್ನೂ ಮೂಡಿಸಲು ಸಜ್ಜಾಗಿದೆ. ಇದು ಪ್ರಾದೇಶಿಕ ಸಿನಿಮಾ ಪ್ರತಿಭೆಗಳ ಸಾಮರಸ್ಯದ ಮಿಶ್ರಣವನ್ನು ತೋರಿಸುತ್ತದೆ. ಮತ್ತು ಎಲ್ಲರಿಗೂ ಮನರಂಜನೆಯ ಮತ್ತು ಪ್ರಬುದ್ಧವಾದ ಅನುಭವವನ್ನು ನೀಡುತ್ತದೆ.

Continue Reading

ಸಿನಿಮಾ

Bhama Kurup: ಡಿವೋರ್ಸ್‌ ಆದ ಬೆನ್ನಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಬೇಕಾ? ಎಂದು ಪೋಸ್ಟ್‌ ಮಾಡಿದ ʻಶೈಲೂʼ ನಟಿ!

Bhama Kurup: ಮಾಲಿವುಡ್‌ ನಟಿ ಭಾಮಾ ಸಿಂಗಲ್‌ ಪೇರೆಂಟ್‌ ಎಂದು ಅನೌನ್ಸ್‌ ಕೂಡ ಮಾಡಿದ್ದರು. ಅಧಿಕೃತವಾಗಿ ದಂಪತಿಗೆ ಡಿವೋರ್ಸ್ ಸಿಕ್ಕ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೆಲ್ಲದರ ನಡುವೆ ಹೆಣ್ಣು ಮಕ್ಕಳು ಯಾಕೆ ಮದುವೆ ಆಗಬೇಕು? ಎನ್ನುವ ಅರ್ಥದಲ್ಲಿ ಭಾಮಾ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

VISTARANEWS.COM


on

Bhama Kurup questions necessity of marriage
Koo

ಬೆಂಗಳೂರು: ಮಾಲಿವುಡ್‌ ನಟಿ ಭಾಮಾ (Bhama Kurup) ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.ಮದುವೆಯ ಬಗ್ಗೆ, ವರದಕ್ಷಿಣೆ ಬಗ್ಗೆ ,ಮಹಿಳೆಯರ ಪಾತ್ರಗಳ ಬಗ್ಗೆ ಬರೆದುಕೊಂಡಿದ್ದಾರೆ. ಈಗಾಗಲೇ ಪತಿಯಿಂದ ದೂರವಾಗಿ ಮಗಳ ಜತೆ ಇದ್ದಾರೆ. ಸಿಂಗಲ್‌ ಪೇರೆಂಟ್‌ ಎಂದು ಅನೌನ್ಸ್‌ ಕೂಡ ಮಾಡಿದ್ದರು. ಅಧಿಕೃತವಾಗಿ ದಂಪತಿಗೆ ಡಿವೋರ್ಸ್ ಸಿಕ್ಕ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೆಲ್ಲದರ ನಡುವೆ ಹೆಣ್ಣು ಮಕ್ಕಳು ಯಾಕೆ ಮದುವೆ ಆಗಬೇಕು? ಎನ್ನುವ ಅರ್ಥದಲ್ಲಿ ಭಾಮಾ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

ಭಾಮಾ ಅವರ ಪೋಸ್ಟ್ ಹೀಗಿದೆ. ʻʻಹೆಣ್ಣು ಮಕ್ಕಳಿಗೆ ನಿಜವಾಗಿಯೂ ಮದುವೆ ಬೇಕೇ? ಖಂಡಿತ ಇಲ್ಲ!
ನಿಜಕ್ಕೂ ಬೇಡ. ತಮ್ಮ ಹಣವನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಆಗಬೇಕಾ? ಖಂಡಿತ ಬೇಕಾಗಿಲ್ಲ. ಅವರು ನಿಮ್ಮನ್ನು ತೊರೆದರೆ ಕಥೆಯೇನು? ನಮ್ಮ ಹಣದಿಂದ ಅವರು ಸುಖವಾಗಿ ಬದುಕುತ್ತಾರೆ. ಆದರೆ ನಾವು ಮದುವೆ ಆಗದೇ ಒಂಟಿಯಾಗಿ ಬದುಕಬೇಕು. ನಿಮ್ಮ ಬಾಳಿಗೆ ಬರುವ ವ್ಯಕ್ತಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎನ್ನುವ ಕಲ್ಪನೆಯೂ ಇರುವುದಿಲ್ಲʼʼ ಎಂದು ಭಾಮಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಹಲ್ಲೆ ದೃಶ್ಯ ಐಫೋನ್‌ನಲ್ಲಿ ರೆಕಾರ್ಡ್‌; ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೃತ್ಯ!

ಭಾಮಾ ಮತ್ತು ಅರುಣ್ 2020ರಲ್ಲಿ ವಿವಾಹವಾದರು. ಬಳಿಕ ನಟಿ ನಟನೆಯಿಂದ ಬ್ರೇಕ್‌ ತೆಗೆದುಕೊಂಡರು. ಮಗಳು ಗೌರಿ ಜನಿಸಿದ ನಂತರ ಕುಟುಂಬದ ಜತೆ ಇರುವ ಫೋಟೊಗಳನ್ನು ಆಗಾಗ ಶೇರ್‌ ಮಾಡಿಕೊಳ್ಳುತ್ತಿದ್ದರು. ಆದರೆ ಒಂದು ದಿನ ಏಕಾಏಕಿ ಪತಿ ಜತೆಗೆ ಇದ್ದ ಎಲ್ಲ ಫೋಟೊಗಳನ್ನು ಡಿಲಿಟ್‌ ಮಾಡಿದರು. ಮತ್ತಷ್ಟು ವಿಚ್ಛೇದನ ಊಹಾಪೋಹ ಶುರುವಾಗಿದ್ದವು. ಮಲಯಾಳಂ ನಟಿ ಭಾಮಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಈ ಪೋಸ್ಟ್‌ಗೂ ಮೊದಲು ಸಿಂಗಲ್‌ ಪೇರೆಂಟ್‌ ಎಂಬ ಪೋಸ್ಟ್‌ ಕೂಡ ಶೇರ್‌ ಮಾಡಿಕೊಂಡಿದ್ದರು. “ನನಗೆ ನನ್ನ ಶಕ್ತಿ ಬಗ್ಗೆ ಗೊತ್ತೇ ಇರಲಿಲ್ಲ. ಆದರೆ ನಾನು ಸಿಂಗಲ್ ಮದರ್ ಆದ ಮೇಲೆ ಆ ಶಕ್ತಿಯ ಅರಿವಾಗಿದೆ. ಈಗ ನಾನು ಮತ್ತು ನನ್ನಮಗಳು” ಎಂದು ಬರೆದು ಭಾಮಾ ಮಗಳ ಜೊತೆಗಿನ ಫೋಟೊ ಹಂಚಿಕೊಂಡಿದ್ದರು.




Continue Reading

ಮಾಲಿವುಡ್

Aadujeevitham Movie: ಬ್ಲಾಕ್‌ ಬಸ್ಟರ್‌ ಹಿಟ್‌ ʻಆಡು ಜೀವಿತಂʼ ಒಟಿಟಿ ರಿಲೀಸ್‌ ಡೇಟ್‌ ಔಟ್‌!

Aadujeevitham Movie: ಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

VISTARANEWS.COM


on

Aadujeevitham Movie OTT release date out
Koo

ಬೆಂಗಳೂರು: ಪೃಥ್ವಿರಾಜ್ ಸುಕುಮಾರನ್ (Aadujeevitham box office) ಅಭಿನಯದ ‘ಆಡು ಜೀವಿತಂ’ (Aadujeevitham Box Office) ಮೊದಲ ದಿನವೇ ಬಾಕ್ಸ್ ಆಫೀಸ್ ಇತಿಹಾಸ ನಿರ್ಮಿಸಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ಆಡು ಜೀವಿತಂ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಡಲಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ‘ಆಡುಜೀವಿತಂ’ ಸಿನಿಮಾ ಜುಲೈ 19ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಧಿಕೃತವಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಸಂಸ್ಥೆ ಈ ವಿಚಾರವನ್ನು ಹಂಚಿಕೊಂಡಿದೆ.

ನೈಜ ಘಟನೆಗಳನ್ನು ಆಧರಿಸಿ ಬರೆದ ಕಾದಂಬರಿಯನ್ನು ತೆರೆಗೆ ತಂದು ಚಿತ್ರತಂಡ ಸಕ್ಸಸ್ ಕಂಡಿತ್ತು. ಬ್ಲೆಸ್ಸಿ ನಿರ್ದೇಶನದ ಈ ಚಿತ್ರ ಆರು ದಿನಗಳಲ್ಲಿ ಭಾರತದಲ್ಲಿ ಸುಮಾರು 40.4 ಕೋಟಿ ರೂ. ಸಂಗ್ರಹಿಸಿತ್ತು. ಮೊದಲ ದಿನ, ʻಆಡುಜೀವಿತಂʼ ಭಾರತದಲ್ಲಿ ಒಟ್ಟು ಎಲ್ಲಾ ಭಾಷೆಗಳು ಸೇರಿದಂತೆ 7.6 ಕೋಟಿ ರೂ. ಸಂಗ್ರಹಿಸಿದರೆ, ಎರಡನೇ ದಿನ ದಿನ 6.25 ಕೋಟಿ ರೂ. ಮೂರನೇ ದಿನ 7.75 ಕೋಟಿ ರೂ. ನಾಲ್ಕು ಮತ್ತು ಐದನೇ ದಿನ 8.7 ಕೋಟಿ ರೂ. ಮತ್ತು ಆರನೇ ದಿನ 4. 5 ಕೋಟಿ ರೂ. ವ್ಯವಹಾರ ಮಾಡಿತ್ತು.

ಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

‘ಆಡು ಜೀವಿತಂʼ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

ಇದನ್ನೂ ಓದಿ: Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?

ಏನಿದೆ ಆಡುಜೀವಿತಂ ಸಿನಿಮಾ ಕಥೆ?

ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್‌ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್‌ GOAT LIFE ಎಂದಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.

ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್‌ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.

Continue Reading
Advertisement
Mumbai Girl
ದೇಶ10 mins ago

ಬಾರೆ ಸಖಿ ಎಂದು 20 ವರ್ಷದ ಯುವತಿಯನ್ನು ಕರೆದುಕೊಂಡು ಹೋದ, ಕೊಂದು ಪೊದೆಯಲ್ಲಿ ಬಿಸಾಡಿದ; ಕೃತ್ಯಕ್ಕೆ ಕಾರಣವೇನು?

ಪರಿಸರ18 mins ago

Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

ind vs sl
ಪ್ರಮುಖ ಸುದ್ದಿ38 mins ago

IND vs SL : ಅಪರೂಪದ ದೃಶ್ಯ; ಎರಡೂ ಕೈಯಲ್ಲಿ ಬೌಲಿಂಗ್ ಮಾಡಿದ ಲಂಕಾದ ಬೌಲರ್​ ಕಮಿಂಡು ಮೆಂಡಿಸ್​!

Opposition MLAs agree to Skydeck near Nice Road will discuss in Cabinet meeting says DCM DK Shivakumar
ಕರ್ನಾಟಕ48 mins ago

DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

Team India Coach
ಪ್ರಮುಖ ಸುದ್ದಿ59 mins ago

Team India Coach : ಕೋಚ್​​ ಗೌತಮ್ ಗಂಭೀರ್ ವೈಭವೀಕರಣ; ಮಾಜಿ ಆಟಗಾರನ ಆಕ್ಷೇಪ

Infiltration
ದೇಶ1 hour ago

Infiltration: ಭಾರತಕ್ಕೆ ನುಗ್ಗುವುದು ಹೇಗೆ ಎಂದು ವಿಡಿಯೊ ಮಾಡಿದ ಬಾಂಗ್ಲಾ ವ್ಯಕ್ತಿ; ದೀದಿ ಆಹ್ವಾನದ ಬೆನ್ನಲ್ಲೇ ವಿಡಿಯೊ ವೈರಲ್‌

ICW 2024
ಫ್ಯಾಷನ್2 hours ago

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

Indian Army
ದೇಶ2 hours ago

ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜಿಸಿದ ಕೇಂದ್ರ; ಏನಿದರ ಮರ್ಮ?

Joe Root
ಕ್ರೀಡೆ3 hours ago

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

CT Ravi
ಕರ್ನಾಟಕ3 hours ago

CT Ravi: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸಿ.ಟಿ.ರವಿ; ಇಲ್ಲಿದೆ ಪತ್ರದ ಸಾರಾಂಶ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ8 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ9 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌