Road Accident : ಬೈಕ್‌-ಕ್ಯಾಂಟರ್‌ ಡಿಕ್ಕಿಗೆ ಯುವತಿ ನಾಲಿಗೆ ಕಟ್! ಸವಾರ ಸ್ಪಾಟ್‌ ಡೆತ್‌ - Vistara News

ಕ್ರೈಂ

Road Accident : ಬೈಕ್‌-ಕ್ಯಾಂಟರ್‌ ಡಿಕ್ಕಿಗೆ ಯುವತಿ ನಾಲಿಗೆ ಕಟ್! ಸವಾರ ಸ್ಪಾಟ್‌ ಡೆತ್‌

Road Accident : ಚಿಕ್ಕಮಗಳೂರಲ್ಲಿ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಪ್ರಾಣ ಕಳೆದುಕೊಂಡರೆ, ಹಿಂಬದಿ ಕುಳಿತಿದ್ದ ಯುವತಿಯ ನಾಲಿಗೆ ಕಟ್‌ ಆಗಿದೆ. ಬೆಳಗಾವಿಯಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಾಗ ವಿದ್ಯುತ್ ತಂತಿ ತಗುಲಿ ರೈತ ದುರ್ಮರಣ ಹೊಂದಿದ್ದಾರೆ.

VISTARANEWS.COM


on

Road Accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು/ಬೆಳಗಾವಿ: ಬೈಕ್-ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಇದ್ದ ಯುವತಿಯ ನಾಲಿಗೆ ಕಟ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ (Road Accident) ಘಟನೆ ನಡೆದಿದೆ.

ಶಿವರಾಜ್ (26) ಮೃತ ದುರ್ದೈವಿ. ಲಾವಣ್ಯ (20) ನಾಲಿಗೆ ಕಳೆದುಕೊಂಡವಳು. ಲಾವಣ್ಯ ಹಾಸನದ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಳು. ಶಿವರಾಜ್-ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರು.

ಇಬ್ಬರು ಬೈಕ್‌ನಲ್ಲಿ ಬರುವಾಗ ಕ್ಯಾಂಟರ್‌ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಶಿವರಾಜ್‌ ಸ್ಥಳದಲ್ಲೆ ಮೃತಪಟ್ಟರೆ, ಇತ್ತ ಹಿಂಬದಿ ಕುಳಿತಿದ್ದ ಲಾವಣ್ಯ ಡಿಕ್ಕಿ ರಭಸಕ್ಕೆ ನಾಲಿಗೆಯೇ ಕಟ್‌ ಆಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಗಾಯಾಳು ಲಾವಣ್ಯಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಉಳುಮೆ ಮಾಡುವಾಗ ಕರೆಂಟ್‌ ಶಾಕ್‌ಗೆ ರೈತ ಬಲಿ

ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ದುರ್ಮರಣ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನದಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರೈತ ಮಂಜುನಾಥ್ ದಾಸನಕೊಪ್ಪ ಮೃತ ದುರ್ದೈವಿ.

ಗ್ರಾಮದಲ್ಲ ಭಾರಿ ಮಳೆ ಗಾಳಿಗೆ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದನ್ನು ಗಮನಿಸದ ರೈತ ಮಂಜುನಾಥ್ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಿತ್ತೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ: Love Propose : I Love You ಮೆಸೇಜ್‌ ಕಳಿಸಿದ ಮುಸ್ಲಿಂ ಯುವಕನಿಗೆ ವಿವಾಹಿತೆಯಿಂದ ಚಪ್ಪಲಿ ಏಟು!

ಈಶಾ ಫೌಂಡೇಶ್‌ಗೆ ಬಂದು ಕಲ್ಲು ಕ್ವಾರಿಯಲ್ಲಿ‌ ಬಿದ್ದ ಕಾರು

ಚಿಕ್ಕಬಳ್ಳಾಪುರದ ಈಶಾ ಫೌಂಡೇಶ್‌ನಲ್ಲಿ ಲೇಸರ್ ಲೈಟ್ ನೋಡಲು ಬಂದ ಯುವಕ ಕಾರು ಕಲ್ಲು ಕ್ವಾರಿಯಲ್ಲಿ‌ ಬಿದ್ದ ಘಟನೆ ನಡೆದಿದೆ. ರಾಯಚೂರಿನಿಂದ‌ ಯುವಕರು ಶಿಫ್ಟ್‌ ಕಾರಿನಲ್ಲಿ ಬಂದಿದ್ದರು. ಈ ವೇಳೆ ಟಿಟಿ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಕಲ್ಲು ಕ್ವಾರಿಗೆ ಕಾರು ಹಾರಿದೆ

ಕಾರು ಫುಲ್‌ ಜಖಂಗೊಂಡಿದ್ದು, ಅದೃಷ್ಟವಶಾತ್‌ ಯುವಕರು ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರನ್ನು‌ ಜೆಸಿಬಿ ಮೂಲಕ ರಕ್ಷಣೆ ನಡೆಸಲಾಗಿದೆ. ಘಟನೆಯಲ್ಲಿ ಗಾಯಾಳುಗಳನ್ನು ಚಿಕ್ಕಬಳ್ಳಾಪುರ‌ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕೌರವನಹಳ್ಳಿ ಗ್ರಾಮದ ಈಶಾ ಸದ್ಗುರು ಧ್ಯಾನ ಕೇಂದ್ರದಲ್ಲಿ ಘಟನೆ ನಡೆದಿದೆ.

ಸರ್ಕಾರಿ ಬಸ್ ಹರಿದು ಕುರಿಗಾಹಿ ಸೇರಿ 15ಕ್ಕೂ ಹೆಚ್ಚು ಕುರಿಗಳು ಸಾವು

ಚಿತ್ರದುರ್ಗದಲ್ಲಿ ಸರ್ಕಾರಿ ಬಸ್ ಹರಿದು ಕುರಿಗಾಹಿ ಸೇರಿ 15ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಮತ್ತೊಬ್ಬ ಕುರಿಗಾಹಿಗೆ ಸಣ್ಣ ಪುಟ್ಟ ಗಾಯವಾಗಿದೆ. ಚಿತ್ರದುರ್ಗ ಹೊರವಲಯದ ಈರಜ್ಜನ ಹಟ್ಟಿ ಗೇಟ್ ಬಳಿ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ಕುರಿ ಹಾದು ಹೋಗುವಾಗ ಘಟನೆ ನಡೆದಿದೆ. ಚಾಲಕನ ಅತಿ ವೇಗ ಚಾಲನೆಯೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಾಯಗೊಂಡ ಕುರಿಗಾಹಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸತ್ತು ಬಿದ್ದ ಕುರಿಗಳನ್ನು ತೆರವು ಮಾಡಲಾಗಿದೆ. ಕುರಿಗಾಹಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

Actor Darshan: ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

VISTARANEWS.COM


on

Actor Darshan Full aggressive mode while he drunk
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾತ್ರವಲ್ಲ ಹಲವು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ (Actor Darshan) ನೀಡಿದ್ದಾರೆ. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

ಭಾವನಾ ಬೆಳಗೆರೆ ಮಾತನಾಡಿ ʻʻದರ್ಶನ್‌ ಅವರು ಕುಡಿದು ಮಾತನಾಡುವಾಗ ಅಗ್ರೆಸಿವ್‌ ಆಗಿ ಮಾತಾಡ್ತಾರೆ. ಇಲ್ಲ ಅಂದರೆ ಆರಾಮಾಗಿ ಮಾತನಾಡುತ್ತಾರೆ. ಪ್ರತಿ ಬಾರಿ ಮಾತನಾಡುವಾಗ ಅಲ್ವಾ! ಎಂಬ ಉತ್ತರಕ್ಕೆ ಕಾಯುತ್ತಾರೆ. ಮಿಕ್ಕಿದ ದಿನದಲ್ಲಿ ಕ್ಯಾಮೆರಾಗೆ ಅಟ್ಯಾಕ್‌ ಮಾಡಲು ಬರುತ್ತಾರೆ. ಕುಡಿದಿದ್ದಾಗ ಯಾರು ಏನೇ ಹೇಳಿದ್ದರೂ ಒಪ್ಪಿಕೊಳ್ಳಲ್ಲ. ಇಂದು ನಾನು ತಂದೆಯವರೆ ಹಿಸ್ಟರಿ ಇಟ್ಟುಕೊಂಡು ಮಾತಾಡ್ತಾ ಇಲ್ಲ. ನನ್ನ ಸ್ವತಃ ಅಣುಭವ ಹಂಚಿಕೊಳ್ಳುತ್ತಿರುವೆʼʼಎಂದರು.

ಇದನ್ನೂ ಓದಿ: ‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

ʻʻಆಗಿನ ಕಾಲದ ನಟರನ್ನು ನಾವು ಪೂಜಿಸುತ್ತಿದ್ದೇವು. ಅಣ್ಣಾವ್ರ ಆಗಲಿ ಹಲವು ನಟರು ಇಷ್ಟವಾಗುತ್ತಿದ್ದರು. ಆದರೆ ಆಗ ಅಭಿಮಾನಿಗಳ ನಡುವೆ ಜಿದ್ದಾ ಜಿದ್ದಿ ಇರಲಿಲ್ಲ. ಆದರೆ ಈಗ ದರ್ಶನ್‌ ಅಥವಾ ಅಪ್ಪು, ಸುದೀಪ್‌ ಈ ರೀತಿ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ. ಮುಂಚೆ ಎಲ್ಲರೂ ಒಟ್ಟಿಗೆ ನಿಂತು ಬೆಳೆಸುತ್ತಿದ್ದರು. ಆದರೀಗ ಒಬ್ಬರ ಫ್ಯಾನ್ಸ್‌ ಇನ್ನೊಬ್ಬರ ಸಿನಿಮಾ ಕೂಡ ನೋಡುತ್ತಿಲ್ಲʼʼಎಂದರು.

ನಮ್ಮ ತಂದೆ ಅವತ್ತು ಬುದ್ಧಿ ಹೇಳಿದ್ದೇ ತಪ್ಪಾ?

ʻʻನನ್ನ ತಂದೆ ದರ್ಶನ್‌ ಅವರಿಗೆ ವಿಜಯಲಕ್ಷ್ಮಿ ಅವರನ್ನು ಹೊಡೆಯಬೇಡ ಎಂದಿದ್ದಾಗ, ದರ್ಶನ್‌ ನನ್ನ ಹೆಂಡತಿ ಅವಳು ಹೊಡತ್ತೀನಿ, ನೀನು ಯಾರು ಎಂದು ಕೇಳಿದ್ದರು. ಆದರೆ ನನ್ನ ತಂದೆ ಬುದ್ಧಿ ಮಾತು ಹೇಳಿದ್ದರು. ಕುಡಿದಾಗ ಮಾತ್ರ ದರ್ಶನ್‌ ಹೀಗೆ. ಆದರೆ ಬೇರೆ ಸಮಯದಲ್ಲಿ ತುಂಬ ಸಾಫ್ಟ್‌. ಈ ಕೃತ್ಯ ಆದಾಗ ಅವರು ಕುಡಿದಾಗಲೇ ಮಾಡಿರೋದು. ಆದರೆ ಈಗ ಕಾನೂನು ಒಂದೇ. ಕುಡಿದು ಮಾಡಿದೆ ಅಂತ ಕ್ಷಮೆ ಏನು ಕಡಿಮೆ ಆಗಲ್ಲ. ಆದರೆ ದರ್ಶನ್‌ ಯಾವಾಗ ಈ ರೀತಿಯ ಗೂನವನ್ನು ಸರಿ ಮಾಡ್ಕೋತ್ತಾರೆ? ಆದರೆ ಮುಂದೆ ಏನಾಗುತ್ತೆ ಎನ್ನುವುದು ಗೊತ್ತಿಲ್ಲʼʼಎಂದರು.

ರೇಣುಕಾ ಸ್ವಾಮಿ ಚಿತ್ರದುರ್ಗದವರಾಗಿದ್ದು ಬಡ ಮಧ್ಯಮ ಕುಟುಂಬದವರಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಮದುವೆಯಾಗಿದ್ದ ರೇಣುಕಾ ಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ಶನಿವಾರ ಅಪಹರಣ ಮಾಡಿದ್ದ ನಟ ದರ್ಶನ್ ಸಹಚರರು ಪಟ್ಟಣಗೆರೆಯ ಶೆಡ್​ನಲ್ಲಿ ಕೂಡಿಹಾಕಿ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿ, ಚರಂಡಿಗೆ ಎಸಗಿ ಹೋಗಿದ್ದರು.

Continue Reading

ಕರ್ನಾಟಕ

Prajwal Revanna Case: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ; ಮತ್ತೆ ಜೈಲೇ ಗತಿ

Prajwal Revanna Case: ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, 82ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ವಜಾ ಮಾಡಿದೆ.

VISTARANEWS.COM


on

Prajwal revanna Case
Koo

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಜಾಮೀನು ಅರ್ಜಿ ವಜಾಗೊಂಡಿದೆ. ಹೊಳೆನರಸೀಪುರ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, 82ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜಡ್ಜ್‌ ಸಂತೋಷ್‌ ಗಜಾನನ ಭಟ್‌ ಅವರು ಜಾಮೀನು ಅರ್ಜಿ ವಜಾಗೊಳಿಸಿದ್ದು, ಇದರಿಂದ ಸದ್ಯ ಪ್ರಜ್ವಲ್‌ಗೆ ಜೈಲೇ ಗತಿಯಾಗಿದೆ.

ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ನಂತರ ಪ್ರಜ್ವಲ್ ಮೇಲೆ ಅತ್ಯಾಚಾರ ಆರೋಪವನ್ನು ಪ್ರಕರಣದಲ್ಲಿ ಸೇರಿಸಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಜಾಮೀನು ಪಡೆದುಕೊಂಡಿದ್ದರು. ಆದರೆ, ಪ್ರಜ್ವಲ್‌ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ʼಪ್ರತಿ ದಿನ ಫೋನ್‌ ಮಾಡಿ ಬಟ್ಟೆ ಕಳಚಲು ಹೇಳ್ತಿದ್ದ…ʼ ಪ್ರಜ್ವಲ್‌ ವಿರುದ್ಧ ದಾಖಲಾದ 4ನೇ ದೂರಿನಲ್ಲಿ ಏನಿದೆ?

prajwal revanna case 4th


ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ನಾಲ್ಕನೇ ಪ್ರಕರಣ ದಾಖಲಾಗಿದ್ದು, ಆರೋಪಿಯ ಕುರಿತು ಇನ್ನಷ್ಟು ವಿಕೃತಿಯ ದೂರುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಹೆಸರು ಕೂಡ ತಳುಕು ಹಾಕಿಕೊಂಡಿದೆ.

ಸಿಐಡಿ ಸೈಬರ್ ಕ್ರೈಂ (CID Cyber Crime) ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನನ್ವಯ ಎಫ್ಐಆರ್ (FIR) ದಾಖಲಾಗಿದೆ. ಎಫ್ಐಆರ್‌ನಲ್ಲಿ ಸಂತ್ರಸ್ತೆಯಿಂದ ಉಲ್ಲೇಖವಾಗಿರುವ ಅಂಶಗಳು ಹೀಗಿವೆ: ಮಗನ ಶಾಲೆ‌ ವಿಚಾರಕ್ಕೆ ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಭೇಟಿಯಾಗಿದ್ದರು. ಭೇಟಿ ವೇಳೆ ಸಂತ್ರಸ್ತೆಯಿಂದ ಪ್ರಜ್ವಲ್‌ ಫೋನ್‌ ನಂಬರ್ ಪಡೆದಿದ್ದ. ನಂಬರ್‌ ಪಡೆದು ವಿಡಿಯೊ ಕಾಲ್ ಮಾಡಿ ದಿನ ನಿತ್ಯ ಮಾತಾಡುತ್ತಿದ್ದ.

ನಂತರ ಮಹಿಳೆಗೆ ವಿಡಿಯೊ ಕಾಲ್ ಮಾಡಿ ವಿವಸ್ತ್ರವಾಗುವಂತೆ ಒತ್ತಾಯಿಸುತ್ತಿದ್ದ. ವಿವಸ್ತ್ರಗೊಂಡ ಮಹಿಳೆಯನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ವಿವಸ್ತ್ರವಾಗಲು ಒಪ್ಪದಿದ್ದಾಗ ವಿಡಿಯೊ ಸೇವ್ ಮಾಡಿಕೊಂಡಿರುವುದಾಗಿಯೂ, ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ನಂತರ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್ ಆಗಿರುವ ವಿಚಾರ ಸಂತ್ರಸ್ತೆ ಗಮನಕ್ಕೆ ಬಂದಿದೆ. ಈ ಕುರಿತು ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಸಂಪರ್ಕ ಮಾಡಿದ್ದಾರೆ. ಆಗ ʼಸ್ಟೇ ತಂದಿದ್ದೇನೆ, ಏನೂ ಆಗಲ್ಲʼ ಎಂದಿದ್ದರಂತೆ. ಎರಡನೇ ಬಾರಿ ಫೋಟೊ ವೈರಲ್ ಆದಾಗ ಸಂತ್ರಸ್ತೆ ದೂರು ನೀಡಲು ಮುಂದಾಗಿದ್ದರು.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

ವೈರಲ್ ಆದ ಕೆಲವು ಫೋಟೊಗಳನ್ನು ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವೈರಲ್‌ ಮಾಡಿಸಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಜನರ ಮೇಲೆ ದೂರು ನೀಡಲು ಮಹಿಳೆ ಮುಂದಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಎಸ್ಐಟಿ ಅಧಿಕಾರಿಗಳಿಂದ ತನಿಖೆ‌ ಚುರುಕುಗತಿ ಪಡೆದುಕೊಂಡಿದೆ.

Continue Reading

ಕರ್ನಾಟಕ

Renuka Swamy Murder: ರೇಣುಕಾಸ್ವಾಮಿ ಕೊಲೆ ಕೇಸ್‌; ಬೆಂಗಳೂರಿನಿಂದ ತುಮಕೂರು ಜೈಲು ಸೇರಿದ ನಾಲ್ವರು ಆರೋಪಿಗಳು

Renuka Swamy Murder: ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶದ ಹಿನ್ನೆಲೆ‌ಯಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನ ನಾಲ್ವರು ಆರೋಪಿಗಳನ್ನು ಬೆಂಗಳೂರಿನಿಂದ ತುಮಕೂರು ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

VISTARANEWS.COM


on

Renuka Swamy Murder
Koo

ತುಮಕೂರು‌: ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರಿನ ಜೈಲಿಗೆ ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶದ ಹಿನ್ನೆಲೆ‌ಯಲ್ಲಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್‌ ಮಾಡಲಾಗಿದೆ.‌

ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವ್, ನಿಖಿಲ್ ತುಮಕೂರು ಜೈಲಿಗೆ ಸ್ಥಳಾಂತರಗೊಂಡಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ನಾಲ್ವರು ಆರೋಪಿಗಳನ್ನು ತುಮಕೂರಿನ ಊರುಕೆರೆ ಬಳಿಯ ರಂಗಾಪುರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾರಾಗೃಹ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಈ ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿಡಲು ಕೋರ್ಟ್ ಆದೇಶಿಸಿತ್ತು. ಹೀಗಾಗಿ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳನ್ನು ಕರೆತರಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಜೂನ್‌ 24ರಂದು ಆದೇಶ ನೀಡಿತ್ತು. ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಆರೋಪಿಗಳ ವರ್ಗಾವಣೆ ಯಾಕೆ ಅಗತ್ಯ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಿವರಿಸಿದ್ದರು.

ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

ಕೊಲೆ ನಡೆದ ಬಳಿಕ ಮೊದಲು ಪೊಲೀಸರ ಮುಂದೆ ಕಾರ್ತಿಕ್‌, ಕೇಶವ್ ಮತ್ತು ನಿಖಿಲ್ ಶರಣಾಗಿದ್ದರು. ಈ ಮೂವರು ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು. ಇದರಿಂದ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿತ್ತು. ಒಂದೇ ಜೈಲಿನಲ್ಲಿದ್ದರೇ ಅವರವರೇ ಹೊಡೆದಾಡಿಕೊಳ್ಳುವ ಸಾಧ್ಯತೆ ಇದ್ದು, ನಾಲ್ವರು ಆರೋಪಿಗಳ ಜೀವಕ್ಕೆ ಅಪಾಯ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ತುಮಕೂರು ಜೈಲಿಗೆ ಶಿಫ್ಟ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

Actor Darshan support by anchor hemalatha

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ (Actor Darshan) ಹತ್ಯೆಯಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್​ 14ದಿನಗಳ ವರೆಗೆ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಹಲವರು ನಟನ ಬೆಂಬಲಕ್ಕೆ ನಿಂತಿದ್ದರು. ನಟಿ ಸಂಜನಾ ಗಲ್ರಾನಿ ಅವರು ಕೂಡ ಸ್ಪಷ್ಟ ಅಭಿಪ್ರಾಯ ನೀಡಿ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತಿದ್ದರು. ಇದರ ಬೆನ್ನಲ್ಲೇ ಕನ್ನಡದ ಖ್ಯಾತ ನಿರೂಪಕಿ ಹೇಮಾಲತಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡು ಮೃತ ರೇಣುಕಾಸ್ವಾಮಿಯನ್ನು ಹೀರೋ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.

ನಿರೂಪಕಿ ಹೇಮಾಲತಾ ಪೋಸ್ಟ್‌ನಲ್ಲಿ ʻʻಸಾವಿರ ಜನ ಸಾವಿರ ಮಾತನಾಡಲಿ.. ಒಮ್ಮೆ ಬೆಳೆದ ಸ್ನೇಹಕ್ಕೆ ಕಡಲಿನಸ್ಟಿರುವ ಪ್ರೀತಿಗೆ ನಾವೆಲ್ಲರೂ ಋಣಿಗಳೇ.. ಸ್ನೇಹಾವೆಂಬ ಸಂಕೋಲೆಯಲಿ ಒಮ್ಮೆ ಸಿಕ್ಕಿಕೊಂಡರೆ ಕೊಂಡಿ ಕಳಚುವುದಿಲ್ಲ…
ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯುವುದಿಲ್ಲ, ಬಿಡುವುದಿಲ್ಲ, ಬಿಟ್ಟುಕೊಡುವುದಿಲ್ಲ. ಈ ಘಟನೆಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ, ಕಾನೂನಿನ ಮುಖಾಂತರ ಅಂತ್ಯವನ್ನಾಡಿ ಎಲ್ಲಾ ಕಳಂಕವನ್ನು ತೊಳೆದುಕೊಂಡು ಹೊರಗೆ ಬನ್ನಿ. ನಿಮ್ಮ ಮೇಲಿರುವ ಪ್ರೀತಿ ಗೌರವ ಎಂದಿಗೂ ಕಮ್ಮಿ ಆಗುವುದಿಲ್ಲ. ಅಲ್ಲದೇ ಕೊಲೆಯಾಗಿರುವ ರೇಣುಕಾಸ್ವಾಮಿಯನ್ನು ಹೀರೋ ಎನ್ನುವಂತೆ ಬಿಂಬಿಸಬೇಡಿʼʼ ಎಂದು ನಿರೂಪಕಿ ಹೇಮಾಲತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

ಇನ್ನು ಈ ಹಿಂದೆ ಬಿಗ್‌ಬಾಸ್‌ ಸ್ಪರ್ಧಿ ಇಶಾನಿ ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡು, ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಇಶಾನಿ, ನಿಜಕ್ಕೂ ಇದು ಅಘಾತಕಾರಿ ಸುದ್ದಿ. ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Continue Reading

ಕ್ರೈಂ

Varthur Santhosh: ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿದ್ದ ವರ್ತೂರು ಸಂತೋಷ್​ ವಿರುದ್ಧ ಪ್ರಕರಣ ದಾಖಲು

Varthur Santhosh: ಹಳ್ಳಿಕಾರ್‌ʼ ವರ್ತೂರ್‌ ಸಂತೋಷ್‌ (Varthur Santhosh) ಅವರು ʻಬಿಗ್‌ ಬಾಸ್‌ ಸೀಸನ್‌ ಹತ್ತರʼ 4ನೇ ರನ್ನರ್‌ ಅಪ್ ಆಗಿದ್ದರು. ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ವರ್ತೂರ್‌ ಅವರು ಕಿಚ್ಚ ಸುದೀಪ್‌ ಅವರಿಗೆ ರೇಸ್‌ಗೆ ಆಹ್ವಾನ ನೀಡಿದ್ದರು. ಸುದೀಪ್ ಕೂಡ ರೇಸ್‌ಗೆ ಬರುವುದಾಗಿ ಹೇಳಿದ್ದರು.

VISTARANEWS.COM


on

Varthur Santhosh Animal Transport Rules Violation Allegation
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ವರ್ತೂರ್‌ ಸಂತೋಷ್‌ (Varthur Santhosh) ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜತೆಗೆ ಅವರ ವಿರುದ್ಧ ಹಲವರು ಟೀಕೆ ಮಾಡುವವರು ಇದ್ದಾರೆ.ಬಿಗ್​ಬಾಸ್ ಮನೆಯಲ್ಲಿದ್ದಾಗಲೇ ಹುಲಿ ಉಗುರು ಪ್ರಕರಣದಿಂದಾಗಿ ಜೈಲು ಪಾಲಾಗಿದ್ದ ವರ್ತೂರು ಸತೋಷ್​ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಾಣಿ ಸಾಗಾಟ ನಿಯಮವನ್ನು ಉಲ್ಲಂಘಿಸಿದ್ದಾರೆಂದು ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘಿಸಿ ಅಸುರಕ್ಷಿತ ರೀತಿಯಿಂದ ಪ್ರಾಣಿಗಳನ್ನು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವರ್ತೂರು ಸಂತೋಷ್ ಅನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಸಹ ಮಾಡಲಾಗಿದೆ ಎನ್ನಲಾಗುತ್ತಿದೆ. ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿರುವ ವರ್ತೂರು ಸಂತೋಷ್‌ಗೆ ಸಂಕಷ್ಟ ಎದುರಾಗಿದೆ. ರೇಸ್‌ ಮಾಡಲು ಮುಂದಾಗಿದ್ದ ವರ್ತೂರ್‌ ಒಂದರಲ್ಲಿ ಒಂಬತ್ತು ಹೋರಿಗಳನ್ನು ತುಂಬಿ ಸಾಗಾಟ ಮಾಡಿದ್ದರಂತೆ ಅಲ್ಲದೆ ಅದೇ ಟ್ರಕ್​ನಲ್ಲಿ ಕೆಲವು ವಸ್ತುಗಳನ್ನು ಸಹ ತುಂಬಿಸಿದ್ದರಂತೆ. ಇದು ಪ್ರಾಣಿ ಸಾಗಾಟ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಅಧಿಕಾರಿ ಹರೀಶ್ ವರ್ತೂರು ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಲು ಸಹ ಹರೀಶ್ ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

ಹಳ್ಳಿಕಾರ್‌ʼ ವರ್ತೂರ್‌ ಸಂತೋಷ್‌ (Varthur Santhosh) ಅವರು ʻಬಿಗ್‌ ಬಾಸ್‌ ಸೀಸನ್‌ ಹತ್ತರʼ 4ನೇ ರನ್ನರ್‌ ಅಪ್ ಆಗಿದ್ದರು. ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ವರ್ತೂರ್‌ ಅವರು ಕಿಚ್ಚ ಸುದೀಪ್‌ ಅವರಿಗೆ ರೇಸ್‌ಗೆ ಆಹ್ವಾನ ನೀಡಿದ್ದರು. ಸುದೀಪ್ ಕೂಡ ರೇಸ್‌ಗೆ ಬರುವುದಾಗಿ ಹೇಳಿದ್ದರು.

ಹುಲಿ ಉಗುರು ಹೊಂದಿರುವ ಆರೋಪ ಬಂದು ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದರು. ಸಂತೋಷ್ ಮದುವೆ ಬಗ್ಗೆ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ಮೇಲೆಯೂ ಅವರಿಗೆ ಪ್ರಶ್ನೆ ಎದುರಾಗಿತ್ತು. ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ವರ್ತೂರು ಸಂತೋಷ್. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರು ಪಾಲ್ಗೊಳ್ಳುತ್ತಿರಲಿಲ್ಲ. ಹಾಗಾಗಿಯೇ ಪ್ರತಿ ವಾರ ನಾಮಿನೇಷನ್‌ ಆಗುವಾಗಲೂ ಈ ಕಾರಣ ಎಲ್ಲರ ಬಾಯಿಯಲ್ಲಿ ಬರುತ್ತಿತ್ತು. ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರು ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಸಾಕಷ್ಟು ನೆನಪುಗಳನ್ನು ಬಿಗ್‌ಬಾಸ್ ಮನೆಯೊಳಗಿಂದ ಹೊತ್ತು ಬಂದಿದ್ದರು.

Continue Reading
Advertisement
ECE V/S CSE
ಶಿಕ್ಷಣ11 mins ago

ECE v/s CSE: ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್; ಯಾವುದು ಉತ್ತಮ ಆಯ್ಕೆ?

Vijayalakshmi Darshan
ಕರ್ನಾಟಕ35 mins ago

Vijayalakshmi Darshan: ಜೈಲಲ್ಲಿ ದರ್ಶನ್‌ ಭೇಟಿ ಬೆನ್ನಲ್ಲೇ ಫ್ಯಾನ್ಸ್‌ಗೆ ದೊಡ್ಡ ಸಂದೇಶ ಕೊಟ್ಟ ವಿಜಯಲಕ್ಷ್ಮೀ; ಇಲ್ಲಿದೆ ಪೋಸ್ಟ್!

Monsoon Rain Boots Fashion
ಫ್ಯಾಷನ್57 mins ago

Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Narendra Modi
ದೇಶ1 hour ago

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Weight Loss Tips
ಆರೋಗ್ಯ1 hour ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು2 hours ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ2 hours ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್2 hours ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ2 hours ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest3 hours ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌