T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು - Vistara News

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು

T20 World Cup 2024: ಭಾರತದ ಸ್ಟಾರ್ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ 2007 ರ ಟಿ20 ವಿಶ್ವ ಕಪ್‌ನಲ್ಲಿ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ 6 ಸಿಕ್ಸರ್(yuvraj singh 6 sixes) ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

VISTARANEWS.COM


on

T20 World Cup 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚುಟುಕು ಕ್ರಿಕೆಟ್​ ಸಮರವಾದ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಆರಂಭಕ್ಕೆ ಇನ್ನು ಕೇವಲ 4 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬಾರಿ ಗರಿಷ್ಠ 20 ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ. ಅಮೆರಿಕ ಇದೇ ಮೊದಲ ಬಾರಿಗೆ ವೆಸ್ಟ್​ ಇಂಡೀಸ್​ ಜತೆ ಸೇರಿಕೊಂಡು ಜಂಟಿ ಕ್ರಿಕೆಟ್​ ಟೂರ್ನಿಯ ಆತಿಥ್ಯವಹಿಸಿಕೊಂಡಿದೆ. ಟೂರ್ನಿ ಆರಂಭಕ್ಕೂ ಮುನ್ನ ಇದುವರೆಗಿನ ಟಿ20 ವಿಶ್ವ ಕಪ್ (T20 World Cup 2024)​ ಇತಿಹಾಸದಲ್ಲಿ ಎಂದೂ ಮರೆಯದ ಕೆಲ ಸ್ಮರಣೀಯ ಸನ್ನಿವೇಶಗಳ ಇಣುಕು ನೋಡ ಇಂತಿದೆ.

ಯುವರಾಜ್​ ಸಿಂಗ್​ ಸಿಕ್ಸ್​ ಸಿಕ್ಸರ್​


ಭಾರತದ ಸ್ಟಾರ್ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ 2007 ರ ಟಿ20 ವಿಶ್ವ ಕಪ್‌ನಲ್ಲಿ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ 6 ಸಿಕ್ಸರ್(yuvraj singh 6 sixes) ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇಂಗ್ಲೆಂಡ್​ ತಂಡದ ಫ್ಲಿಂಟಾಫ್​​ ಅವರು ಯುವಿಯನ್ನು ಕೆಣಕಿದ ಕಾರಣ ಸಿಟ್ಟಿಗೆದ್ದ ಯುವಿ ಮುಂದಿನ ಓವರ್​ನಲ್ಲಿ ಬ್ರಾಡ್​ಗೆ ಸಿಕ್ಸರ್​ಗಳ ರುಚಿ ತೋರಿಸಿದರು. ಈ ಘಟನೆ ಪ್ರತಿ ಟಿ20 ವಿಶ್ವ ಕಪ್​ ಆರಂಭಗೊಂಡಾಗಲೂ ಮುನ್ನಲೆಗೆ ಬಂದೇ ಬರುತ್ತದೆ. ಅದರಂತೆ ಟಿ20 ವಿಶ್ವ ಕಪ್​ ಎಂದರೆ ಯುವಿಯ 6 ಸಿಕ್ಸರ್​​ ಎಂದೇ ಪ್ರಸಿದ್ಧಿ ಹೊಂದಿದೆ. ಯುವರಾಜ್​ ಬಳಿಕ ದಕ್ಷಿಣ ಆಫ್ರಿಕಾ ತಂಡದ ಹರ್ಷಲ್ ಗಿಬ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಕಾರ್ಲೊಸ್ ಬ್ರಾಥ್‌ವೇಟ್ ಅಸಾಮ್ಯಾನ್ಯ ಬ್ಯಾಟಿಂಗ್​


2016ರ ಟಿ20 ವಿಶ್ವ ಕಪ್ ಫೈನಲ್​ನ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡಕ್ಕೆ ಗೆಲ್ಲಲು ಅಂತಿಮ ಓವರ್​ನಲ್ಲಿ 19 ರನ್​ ಬೇಕಿತ್ತು. ಈ ಓವರ್​ ಎಸೆಯಲು ಬಂದ ಬೆನ್​ ಸ್ಟೋಕ್ಸ್​ಗೆ ಕ್ರೀಸ್​ನಲ್ಲಿದ್ದ ಕಾರ್ಲೊಸ್ ಬ್ರಾಥ್‌ವೇಟ್ ಸತತ ನಾಲ್ಕು ಸಿಕ್ಸರ್‌ ಸಿಡಿಸಿ ವೆಸ್ಟ್ ಇಂಡೀಸ್​ಗೆ ಗೆಲುವು ತಂದು ಕೊಟ್ಟರು. ಈ ವೇಳೆ ಕಾಮೆಂಟರಿ ಪ್ಯಾನಲ್​ನಲ್ಲಿದ್ದ ಇಯಾನ್​ ಬಿಷಪ್​ ಕಾರ್ಲೊಸ್ ಬ್ರಾಥ್‌ವೇಟ್, ಹೆಸರನ್ನು ನೆನಪಿಡಿ! (‘Remember the Name’) ಎಂದು ಹೇಳುವ ಮೂಲಕ ವಿಂಡೀಸ್​ ಗೆಲುವಿನ ಸಂಭ್ರಮದಲ್ಲಿ ತಾವೂ ಕೂಡ ಭಾಗಿಯಾದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವ ಕಪ್​ನಲ್ಲಿ ಟೀಮ್​ ಇಂಡಿಯಾದ ಮುಂದಿರುವ ಸವಾಲುಗಳೇನು?

ಪಾಕ್​ ವಿರುದ್ಧ ಗೆದ್ದು ಹೀರೊ ಆದ ಜೋಗಿಂದರ್​ ಶರ್ಮಾ


ಟಿ20 ವಿಶ್ವ ಕಪ್‌ನ ಉದ್ಘಾಟನಾ ಋತುವಿನಲ್ಲಿ ಭಾರತದ ಜೋಗಿಂದರ್ ಶರ್ಮಾ ಹೀರೊ ಆಗಿ ಹೊರಹೊಮ್ಮಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್​ನಲ್ಲಿ ಅಂತಿಮ ಓವರ್​ ಎಸೆದ ಜೋಗಿಂದರ್​ ಪಾಕ್​ ಬ್ಯಾಟರ್​ ಮಿಸ್ಬಾ-ಉಲ್-ಹಕ್ ಅವರ ನಿರ್ಣಾಯಕ ವಿಕೆಟ್ ಪಡೆದು ಭಾರತಕ್ಕೆ ಗೆಲುವು ತಂದು ಕೊಟ್ಟರು. ಜೋಗಿಂದರ್ ಎಸೆತದಲ್ಲಿ ಎಸ್ ಶ್ರೀಶಾಂತ್ ಅವರಿಗೆ ಮಿಸ್ಬಾ ಕ್ಯಾಚ್ ನೀಡಿದರು. ಈ ಮೂಲಕ ಭಾರತ ಚೊಚ್ಚಲ ಬಾರಿಗೆ ವಿಶ್ವಕಪ್​ ಗೆದ್ದು ಸಂಭ್ರಮಿಸಿತು.

ರಂಗನಾ ಹೆರಾತ್ ಶ್ರೇಷ್ಠ ಬೌಲಿಂಗ್​ ಸಾಧನೆ


ಶ್ರೀಲಂಕಾ ಕ್ರಿಕೆಟ್​ ತಂಡದ ಸ್ಪಿನ್ನರ್​ ರಂಗನಾ ಹೆರಾತ್ ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 3.3 ಓವರ್‌ಗಳಲ್ಲಿ 2 ಮೇಡನ್ ಸಹಿತ ಕೇವಲ 3 ರನ್ ಬಿಟ್ಟುಕೊಟ್ಟು 5 ವಿಕೆಟ್ ಉರುಳಿಸಿದರು. ನ್ಯೂಜಿಲೆಂಡ್ ತಂಡ ಕೇವಲ 15.3 ಓವರ್‌ಗಳಲ್ಲಿ 60 ರನ್‌ಗಳಿಗೆ ಆಲೌಟ್ ಆಯಿತು. ಹೆರಾತ್​ ಅವರ ಈ ಬೌಲಿಂಗ್​ ಸಾಧನೆ ಈ ವರೆಗಿನ ಟಿ 20 ವಿಶ್ವ ಕಪ್​ನಲ್ಲಿ ಶ್ರೇಷ್ಠ ಸಾಧನೆಯಾಗಿ ಉಳಿದಿದೆ.

ಧೋನಿ ರನೌಟ್​


ಭಾರತದ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2016ರ ಟಿ20 ವಿಶ್ವ ಕಪ್​ನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರ ಕೊನೆಯ ಎಸೆತದಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೇವಲ 2 ಸೆಕೆಂಡುಗಳಲ್ಲಿ ರನ್ ಔಟ್ ಮಾಡಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಧೋನಿ ಅವರ ಈ ಚುರುಕಿನ ರನ್ ಔಟ್ ಪ್ರಪಂಚದಾದ್ಯಂತ ಭಾರೀ ಸುದ್ದಿಯಾಗಿತ್ತು. ಉಸೇನ್​ ಬೋಲ್ಟ್​ ಅವರಿಗೆ ಧೋನಿ ಪ್ರತಿಸ್ಪರ್ಧಿ ಎಂದು ಕೆಲವರು ಹೋಲಿಕೆ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Team India: ಟೀಮ್‌ ಇಂಡಿಯಾ ಆಟಗಾರರನ್ನು ಸನ್ಮಾನಿಸಿದ ಪ್ರಧಾನಿ ಮೋದಿ

Team India: ಟಿ-20 ವಿಶ್ವಕಪ್​ನೊಂದಿಗೆ ತವರಿಗೆ ಮರಳಿದ ಟೀಮ್​ ಇಂಡಿಯಾ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಸನ್ಮಾನಿಸಿದರು. ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

VISTARANEWS.COM


on

Team India
Koo

ನವದೆಹಲಿ: ಟಿ-20 ವಿಶ್ವಕಪ್​ನೊಂದಿಗೆ ತವರಿಗೆ ಮರಳಿದ ಟೀಮ್​ ಇಂಡಿಯಾ (Team India) ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ನಿವಾಸದಲ್ಲಿ ಸನ್ಮಾನಿಸಿದರು. ಇಂದು ಬೆಳಿಗ್ಗೆ ದೆಹಲಿಗೆ ಆಗಮಿಸಿದ ಆಟಗಾರರು ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು.

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ಬಾರ್ಬಡಾಸ್​ನಲ್ಲೇ ಸಿಲುಕಿದ್ದ ಆಟಗಾರರು

ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ (T20 World Cup 2024) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್‌ ಶರ್ಮಾ ನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಇಂದು ಬೆಳಿಗ್ಗೆ ಭಾರತಕ್ಕೆ ಆಗಮಿಸಿತ್ತು. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ ಆಟಗಾರರು ದೆಹಲಿಗೆ ಆಗಮಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಇದೀಗ ತವರಿಗೆ ಆಗಮಿಸಿದ ವಿಶ್ವಕಪ್‌ ಹೀರೋಗಳಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ವಿಜಯಯಾತ್ರೆಗೆ ಸಕಲ ಸಿದ್ಧತೆ

ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ ಗುರುವಾರ ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರೂ ಬನ್ನಿ ಎಂಬುದಾಗಿ ರೋಹಿತ್‌ ಶರ್ಮಾ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.

ಆಟಗಾರರಿಗೆ ಕರೆ ಮಾಡಿದ್ದ ಮೋದಿ

ಜೂನ್‌ 29ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿತ್ತು. ಆ ವೇಳೆ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದರು. ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡಿದ್ದರು.

ಜತೆಗೆ ಭಾರತೀಯ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೂ ಪ್ರಧಾನಿ ಮೆಚ್ಚುಗೆ ಸೂಚಿಸಿದ್ದರು. ಮಾತ್ರವಲ್ಲ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂರ್ಯ ಕುಮಾರ್ ಯಾದವ್ ಅವರನ್ನು ಉಲ್ಲೇಖಿಸಲು ಪ್ರಧಾನಿ ಮರೆತಿರಲಿಲ್ಲ. ಗೆಲುವಿಗಾಗಿ ಮುಖ್ಯ ಕೊಡುಗೆ ನೀಡಿದ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಮೋದಿ ಧನ್ಯವಾದ ಅರ್ಪಿಸಿದ್ದರು. ಈ ಕುರಿತಾದ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಪ್ರಧಾನಿ ಅವರ ನಡೆಗೆ ಕ್ರೀಡಾಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ: T20 World Cup 2024: ʼವಿಶ್ವʼ ಗೆದ್ದ ನಾಯಕ ರೋಹಿತ್‌, ಕೋಚ್‌ ದ್ರಾವಿಡ್‌, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ

Continue Reading

ಪ್ರಮುಖ ಸುದ್ದಿ

Team India victory parade: ಸಂಜೆ 5ರಿಂದ 7ರವರೆಗೆ ಮುಂಬಯಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ರೋಡ್ ಶೋ; ನೇರ ಪ್ರಸಾರ ವೀಕ್ಷಣೆ ಹೇಗೆ?

Team India victory parade: ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್‌ನಿಂದ ರೋಡ್‌ ಶೋ ಆರಂಭವಾಗಲಿದೆ. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ.

VISTARANEWS.COM


on

Team India victory parade
Koo

ಮುಂಬಯಿ: ಟಿ20 ವಿಶ್ವಕಪ್​ ಟ್ರೋಫಿ ಗೆದ್ದು 13 ವರ್ಷಗಳ ಬಳಿಕ ಐಸಿಸಿ ಟ್ರೋಫಿಯ ಬರ ನೀಗಿಸಿದ ಟೀಮ್​ ಇಂಡಿಯಾ(Team India) ಆಟಗಾರರು ಇಂದು(ಗುರುವಾರ) ತವರಿಗೆ ಆಗಮಿಸಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಭರ್ಜರಿ ಸ್ವಾಗತ ಮತ್ತು ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿರುವ ರೋಹಿತ್​ ಪಡೆ ಇದೀಗ ದೇಶದ ವಾಣಿಜ್ಯ ರಾಜಧಾನಿ ಮುಂಬೈನತ್ತ ಪ್ರಯಾಣ ಬೆಳೆಸಿದೆ. ವಿಶ್ವ ವಿಜೇತರನ್ನು ಅಭಿನಂದಿಸಲು(Team India victory parade) ಮುಂಬೈ ನಗರಿ ಸಿದ್ಧವಾಗಿ ನಿಂತಿದೆ.

ತೆರೆದ ಬಸ್​ನಲ್ಲಿ ರೋಡ್ ಶೋ


ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್‌ನಿಂದ ರೋಡ್‌ ಶೋ ಆರಂಭವಾಗಲಿದೆ. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ಬಹುಮಾನ ಮೊತ್ತವನ್ನು ಕೂಡ ಪ್ರದಾನ ಮಾಡಲಾಗುತ್ತದೆ. ಈ ಸನ್ಮಾನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಈಗಾಗಲೇ ಅಭಿಮಾನಿಗಳು ಟೀಮ್​ ಇಂಡಿಯಾ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ.

ಸಾರ್ವಜನಿಕ ಸಾರಿಗೆ ಬಳಸುವಂತೆ ಒತ್ತಾಯ


ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮುಂಬೈ ಪೊಲೀಸರು ಜನರನ್ನು ಒತ್ತಾಯಿಸಿದ್ದಾರೆ. ಮುಂಬೈ ವಲಯ 1ರ ಡಿಸಿಪಿ ಪ್ರವೀಣ್ ಮುಂಡೆ ಮಾಧ್ಯಮದೊಂದಿಗೆ ಮಾತನಾಡಿ, ”ಟಿ20 ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಮುಂಬೈಗೆ ಆಗಮಿಸುತ್ತಿದೆ. ನಾರಿಮನ್ ಪಾಯಿಂಟ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವೆ ಮರೈನ್ ಡ್ರೈವ್‌ನಲ್ಲಿ ಸಂಜೆ 5ರಿಂದ 7 ಗಂಟೆಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಾಗುತ್ತಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಂಜೆ 4:30 ಕ್ಕೆ ಮೊದಲು ತಲುಪಿ ಮತ್ತು ರಸ್ತೆಯಲ್ಲಿ ಯಾರೂ ದಟ್ಟಣೆ ಸೇರಬೇಡಿ ಎಂದಿದ್ದಾರೆ.

https://twitter.com/BCCI/status/1808768308579348742

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?


ಈ ವಿಜಯಯಾತ್ರೆಯನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಹಾಗೆಯೇ ಸ್ಪೋರ್ಟ್ಸ್ 18ನಲ್ಲಿ, ಜಿಯೋ ಸಿನಿಮಾ ಆ್ಯಪ್​ನಲ್ಲಿಯೂ ಈ ವಿಜಯೋತ್ಸವದ ನೇರ ಪ್ರಸಾರ ಇರಲಿದೆ.

ಮೋದಿ ಭೇಟಿ ಮಾಡಿದ ತಂಡ


ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ(Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟವನ್ನು ಕೂಡ ಏರ್ಪಡಿಸಲಾಗಿತ್ತು.

ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಸದ್ಯ ತವರಿಗೆ ಆಗಮಿಸಿದ್ದಾರೆ. ಸಂಜೆ ಮುಂಬೈಯಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮದ ಬಳಿಕ ಟೀಮ್​ ಇಂಡಿಯಾ ಆಟಗಾರರು ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಲಿದ್ದಾರೆ.

Continue Reading

ಕ್ರೀಡೆ

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 9 ಅಥ್ಲೀಟ್​ಗಳು

Paris Olympics 2024: ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

VISTARANEWS.COM


on

Paris Olympics
Koo

ನವದೆಹಲಿ: ಬಹುನಿರೀಕ್ಷಿತ ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ ಕ್ರೀಡಾಕೂಡ ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಹಲವು ಭಾರತೀಯ ಕ್ರೀಡಾಪಟುಗಳು ಈ ಟೂರ್ನಿಗೆ ಅರ್ಹತೆ ಪಡೆದಿದ್ದು ಪದಕ ಗೆಲ್ಲಲು ಪೂರ್ವ ತಯಾರಿ ಮಾಡುತ್ತಿದ್ದಾರೆ. ಇದೀಗ ಭಾರತದ 9 ಅಥ್ಲೀಟ್​ಗಳು ವಿಶ್ವ ಶ್ರೇಯಾಂಕದ ಆಧಾರದಲ್ಲಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಪೈಕಿ 100 ಮೀ. ಹರ್ಡಲ್ಸ್​ನಲ್ಲಿ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದ ಜ್ಯೋತಿ ಯರಾಜಿ(JYOTHI YARRAJI) ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದಾರೆ.

ಶಾಟ್​ಪುಟ್​ ಪಟುಗಳಾದ ಅಭಾ ಖತುವಾ, ತಜಿಂದರ್​ಪಾಲ್​ ಸಿಂಗ್​, ಜಾವೆಲಿನ್​ ಥ್ರೋಪಟು ಅನ್ನುರಾಣಿ, ಟ್ರಿಪಲ್​ಜಂಪ್​ ಪಟುಗಳಾದ ಪರ್ವೀನ್​ ಚಿತ್ರವೇಲ್​, ಅಬ್ದುಲ್​ ಅಬೂಬಕರ್​, ಹೈಜಂಪ್​ ಪಟು ಸರ್ವೇಶ್​ ಕುಶಾರೆ, 5,000 ಮೀ. ಓಟಗಾರ್ತಿ ಪಾರುಲ್​ ಚೌಧರಿ, ನಡಿಗೆ ಸ್ಪರ್ಧಿ ಸೂರಜ್​ ಪನ್ವರ್​ ರ್ಯಾಂಕಿಂಗ್​ ಆಧಾರದಲ್ಲಿ ಒಲಿಂಪಿಕ್ಸ್​ ಅರ್ಹತೆ ಪಡೆದ ಇತರರು. ಅರ್ಹತೆ ಪಡೆದಿರುವ 9 ಮಂದಿ ಅಥ್ಲೀಟ್​ಗಳನ್ನು​ ಕೂಡ ಭಾರತೀಯ ಅಥ್ಲೆಟಿಕ್ಸ್​ ಒಕ್ಕೂಟವು (ಎಎ​ಐ) ಒಲಿಂಪಿಕ್ಸ್​ಗೆ ಕಳುಹಿಸಬೇಕೆಂದಿಲ್ಲ. ಅಂತಿಮ ಆಯ್ಕೆಯು ಎಎಫ್​​ಐನದ್ದೇ ಆಗಿರುತ್ತದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್​​ ಸ್ಮರಣೆಗಾಗಿ ಜೆಎಸ್​ಡಬ್ಲ್ಯುನಿಂದ ಪ್ಯಾರಿಸ್​ನಲ್ಲಿ ವಿಶೇಷ ಪ್ರದರ್ಶನ

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ತಾವರಣವನ್ನು ಕಲ್ಪಿಸಲು ಇದರ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

ಇಂಡಿಯಾ ಹೌಸ್​ಗೆ ಎಲ್ಲ ದೇಶಗಳ ಪತ್ರಕರ್ತರಿಗೆ ಮುಕ್ತ ಪ್ರವೇಶವಿದೆ ಎಂದು ನೀತಾ ಅಂಬಾನಿ(Nita Ambani) ಹೇಳಿದ್ದಾರೆ. ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ.) ಸದಸ್ಯೆಯಾಗಿದ್ದಾರೆ. ಅಮೆರಿಕಾದ ಲಾಸ್ ಏಂಜಲಿಸ್​ನಲ್ಲಿ 2028ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳ್ಳುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆದ ವೇಳೆಯೂ ನೀತಾ ಅಂಬಾನಿ ಈ ಸಭೆಯ ವಕಾಲತ್ತು ವಹಿಸಿದ್ದರು.

Continue Reading

ಕ್ರೀಡೆ

Virat Kohli: ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Virat Kohli: ಓವನ್​ ಒಳಗಡೆ ಹೋದ ಕಟ್ಲೆಟ್‌ ಹೊರಬಾರದೇ ಇದ್ದಾಗ ಕೊಹ್ಲಿ ಓವನ್​ ಒಳಗಡೆ ಕೈ ಕಾಕಿ ಕೊನೆಗೂ ಕಟ್ಲೆಟ್‌ ಹೊರಗಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Virat Kohli
Koo

ಬಾರ್ಬಡೋಸ್​: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಬಾರ್ಬಡೋಸ್​ನಲ್ಲಿ ತಾವು ತಂಗಿದ್ದ ಹೋಟೆಲ್​ನಲ್ಲಿ ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ(Kohli’s Breakfast Trouble) ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿದೆ.

ಟಿ20 ವಿಶ್ವಕಪ್​ ಗೆಲುವಿನ ಬಳಿಕ ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿದ ಬೆರಿಲ್ ಚಂಡಮಾರುತದಿಂದಾಗಿ ಟೀಮ್​ ಇಂಡಿಯಾ ಆಟಗಾರರು 2 ದಿನಗಳ ಕಾಲ ಬಾರ್ಬಡೋಸ್​ನ ಹೋಟೆಲ್​ನಲ್ಲಿಯೇ ಉಳಿದುಕೊಂಡಿದ್ದರು. ಈ ವೇಳೆ ಕೊಹ್ಲಿ ಕಟ್ಲೆಟ್‌ ಅನ್ನು ಓವನ್​ನಲ್ಲಿ ಬಿಸಿ ಮಾಡಲು ಯತ್ನಿಸಿದ್ದಾರೆ. ಓವನ್​ ಒಳಗಡೆ ಹೋದ ಕಟ್ಲೆಟ್‌ ಹೊರಬಾರದೇ ಇದ್ದಾಗ ಕೊಹ್ಲಿ ಓವನ್​ ಒಳಗಡೆ ಕೈ ಕಾಕಿ ಕೊನೆಗೂ ಕಟ್ಲೆಟ್‌ ಹೊರಗಡೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಹೋಟೆಲ್​ನಲ್ಲಿ ತಿಂಡಿ ತಿನ್ನುತ್ತಿದ್ದವರು ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಸಹೋದರನಿಂದ ಭರ್ಜರಿ ಸ್ವಾಗತ


ಟಿ20 ವಿಶ್ವಕಪ್​ ಗೆದ್ದ ಭಾರತ ತಂಡ ಆಟಗಾರರು ಇಂದು(ಗುರುವಾರ) ನವದೆಹಲಿಗೆ ಆಗಮಿಸಿದರು. ಈ ವೇಳೆ ಕೊಹ್ಲಿಯ ಸಹೋದರ ವಿಕಾಸ್​ ಕೊಹ್ಲಿ ಮತ್ತು ಅವರ ಮಕ್ಕಳು ವಿಮಾನ ನಿಲ್ದಾಣದಲ್ಲಿ ಕೊಹ್ಲಿಯನ್ನು ಸ್ವಾಗತಿಸಿದ್ದಾರೆ. ಕೊಹ್ಲಿ ಗೆದ್ದ ಪದಕವನ್ನು ಕೊರಳಿಗೆ ಹಾಕಿ ಸಂಭ್ರಮಿಸಿದರು. ಈ ಫೋಟೊ ವೈರಲ್​ ಆಗಿದೆ.

ಇದನ್ನೂ ಓದಿ Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

ಚಂಡಮಾರುತದ ಅಬ್ಬರದ ದೃಶ್ಯವನ್ನು ವಿರಾಟ್​ ಕೊಹ್ಲಿ(virat kohli) ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಗೆ(Virat- Anushka) ವಿಡಿಯೊ ಕಾಲ್ ಮೂಲಕ ತೋರಿಸುತ್ತಿರುವ ವಿಡಿಯೊ ಇದೀಗ ವೈರಲ್​ ಆಗಿತ್ತು. ವಿರಾಟ್​ ಕೊಹ್ಲಿ ತಾವು ತಂಗಿರುವ ಹೊಟೇಲ್‌ ಕಿಟಕಿಯಿಂದ ಸಮುದ್ರದಲ್ಲಿ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳನ್ನು, ಮತ್ತು ಅಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಪತ್ನಿ ಅನುಷ್ಕಾಗೆ(anushka sharma) ವಿಡಿಯೊ ಕಾಲ್​ ಮೂಲಕ ತೋರಿಸಿದ್ದರು. ಕುಟುಂಬಕ್ಕೆ ಮೊದಲ ಪ್ರಾಧಾನ್ಯತೆ ನೀಡುವ ಕೊಹ್ಲಿ ಯಾವುದೇ ಪಂದ್ಯ ಇರಲಿ ಇದು ಮುಕ್ತಾಯಗೊಂಡ ತಕ್ಷಣ ಪತ್ನಿಗೆ ವಿಡಿಯೊ ಕಾಲ್​ ಮಾಡಿ ಮಾತನಾಡುತ್ತಾರೆ. ಕೆಲವೊಮ್ಮೆ ಕ್ರಿಕೆಟ್​ ಸರಣಿ ಇದ್ದರೂ ಕೂಡ ಇದರಿಂದ ಹಿಂದೆ ಸರಿದು ಕುಟುಂಬದ ಜತೆ ಕಾಲ ಕಳೆಯುತ್ತಾರೆ.

ಟಿ20ಗೆ ವಿದಾಯ ಹೇಳಿದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಟಿ20 ವಿಶ್ವಕಪ್​ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಫೈನಲ್​ ಪಂದ್ಯದಲ್ಲಿ 76 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.

Continue Reading
Advertisement
Satsang programme on 5th July in Bengaluru
ಬೆಂಗಳೂರು14 mins ago

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Hassan News Distribution of free notebook bag to government primary schools in Alur
ಹಾಸನ16 mins ago

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

To complete pending railway projects in the state former MP DK Suresh appeals central government
ಬೆಂಗಳೂರು18 mins ago

DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

ದೇಶ27 mins ago

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೆ ಒಲಿದ ಸಿಎಂ ಪಟ್ಟ; ಜು.7ರಂದು ಪ್ರಮಾಣ ವಚನ- ರಾಜ್ಯಪಾಲರಿಂದ ಗ್ರೀನ್‌ ಸಿಗ್ನಲ್‌

drivers protest
ಪ್ರಮುಖ ಸುದ್ದಿ36 mins ago

Drivers Protest: ಆಟೋ, ಕ್ಯಾಬ್ ಚಾಲಕರಿಂದ ದಿಢೀರ್‌ ರಸ್ತೆ ತಡೆ, ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ, ಸಂಚಾರ ಅಸ್ತವ್ಯಸ್ತ

Viral News
ವೈರಲ್ ನ್ಯೂಸ್59 mins ago

Viral News: ಇವನು ಅಂತಿಂತಾ ಕಳ್ಳನಲ್ಲ…ಮನೆ ಎಲ್ಲಾ ದೋಚಿ, ಲೆಟರ್‌ ಬರೆದಿಟ್ಟು ಕ್ಷಮೆ ಕೇಳ್ತಾನೆ!

Chikkaballapura News
ಚಿಕ್ಕಬಳ್ಳಾಪುರ1 hour ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

Team India
ಕ್ರೀಡೆ1 hour ago

Team India: ಟೀಮ್‌ ಇಂಡಿಯಾ ಆಟಗಾರರನ್ನು ಸನ್ಮಾನಿಸಿದ ಪ್ರಧಾನಿ ಮೋದಿ

Bhole Baba
Latest1 hour ago

Hathras Case: ಭೋಲೆ ಬಾಬಾ ಇರುತ್ತಿದ್ದುದು ಫೈವ್‌ ಸ್ಟಾರ್‌ ಆಶ್ರಮದಲ್ಲಿ! ಅವರಿಗಿದೆ ಅಪಾರ ಆಸ್ತಿ!

Team India victory parade
ಪ್ರಮುಖ ಸುದ್ದಿ1 hour ago

Team India victory parade: ಸಂಜೆ 5ರಿಂದ 7ರವರೆಗೆ ಮುಂಬಯಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ರೋಡ್ ಶೋ; ನೇರ ಪ್ರಸಾರ ವೀಕ್ಷಣೆ ಹೇಗೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Chikkaballapura News
ಚಿಕ್ಕಬಳ್ಳಾಪುರ1 hour ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ3 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ4 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

ಟ್ರೆಂಡಿಂಗ್‌