Tamarind Fruit Benefits: ಜೀರ್ಣಶಕ್ತಿ ಹೆಚ್ಚಿಸಿ ತೂಕ ಇಳಿಸಲು ಹುಣಸೇ ಹಣ್ಣು ಸುಲಭದ ಉಪಾಯ! - Vistara News

ಆರೋಗ್ಯ

Tamarind Fruit Benefits: ಜೀರ್ಣಶಕ್ತಿ ಹೆಚ್ಚಿಸಿ ತೂಕ ಇಳಿಸಲು ಹುಣಸೇ ಹಣ್ಣು ಸುಲಭದ ಉಪಾಯ!

ಜೀವನಶೈಲಿ, ಕೆಲಸದ ಒತ್ತಡ, ಹೊರಗೆ ತಿನ್ನುವ ಅಭ್ಯಾಸ, ಚಟುವಟಿಕೆಗಳಿಲ್ಲದ ಕೆಲಸ, ಹಾರ್ಮೋನ್‌ ಸಮಸ್ಯೆ, ರಾತ್ರಿಪಾಳಿ ಸೇರಿದಂತೆ ಅನೇಕ ವಿಚಾರಗಳು ಇಂದು ತೂಕ ಏರಿಕೆಗೆ ಕಾರಣವಾಗುತ್ತದೆ. ಆದರೆ ಇಳಿಸುವ ಬಗ್ಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಎಲ್ಲರ ಸಮಸ್ಯೆಯೂ ಇದೇ. ವ್ಯಾಯಾಮ, ಜಾಗಿಂಗ್‌, ಯೋಗ ಇತ್ಯಾದಿ ಮಾಡಿದರೂ ತೂಕ ಮಾತ್ರ ಇಳಿಯುವುದಿಲ್ಲ ಎಂಬುದು. ಏನೆಲ್ಲ ಪ್ರಯತ್ನಿಸಿ ನೋಡಿದ ನೀವು ಹುಣಸೆ ಹಣ್ಣನ್ನೂ (Tamarind Fruit Benefits) ಯಾಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು?

VISTARANEWS.COM


on

Tamarind Fruit Benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೂಕ ಇಳಿಸುವುದು ಹೇಗೆ ಎಂಬುದು ಸದ್ಯ ಎಲ್ಲರ ನಡುವೆ ಚರ್ಚೆಯಾಗುವ ಅತ್ಯಂತ ಸಾಮಾನ್ಯ ವಿಷಯ. ಜೀವನಶೈಲಿ, ಕೆಲಸದ ಒತ್ತಡ, ಹೊರಗೆ ತಿನ್ನುವ ಅಭ್ಯಾಸ, ಚಟುವಟಿಕೆಗಳಿಲ್ಲದ ಕೆಲಸ, ಹಾರ್ಮೋನ್‌ ಸಮಸ್ಯೆ, ರಾತ್ರಿಪಾಳಿ ಸೇರಿದಂತೆ ಅನೇಕ ವಿಚಾರಗಳು ಇಂದು ತೂಕ ಏರಿಕೆಗೆ ಕಾರಣವಾಗುತ್ತದೆ. ಆದರೆ ಇಳಿಸುವ ಬಗ್ಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಎಲ್ಲರ ಸಮಸ್ಯೆಯೂ ಇದೇ. ವ್ಯಾಯಾಮ, ಜಾಗಿಂಗ್‌, ಯೋಗ ಇತ್ಯಾದಿ ಮಾಡಿದರೂ ತೂಕ ಮಾತ್ರ ಇಳಿಯುವುದಿಲ್ಲ ಎಂಬುದು. ಏನೆಲ್ಲ ಪ್ರಯತ್ನಿಸಿ ನೋಡಿದ ನೀವು ಹುಣಸೆ ಹಣ್ಣನ್ನೂ ಯಾಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು? ಹುಣಸೆಹಣ್ಣಿಗೂ ತೂಕಕ್ಕೂ ಏನು ಸಂಬಂಧ ಅಂತೀರಾ? ಸಂಬಂಧ ಇದೆ. ಹುಳಿಯಾದ ಹುಣಸೇಹಣ್ಣನ್ನು ನೀವು ಚಿಕ್ಕವರಿದ್ದಾಗ ಚಪ್ಪರಿಸಿ ತಿಂದಿರಬಹುದು, ಈಗ ಕ್ಯಾಂಡಿಗಳ ರೂಪದಲ್ಲೋ, ಚಟ್ನಿ ರೂಪದಲ್ಲೋ, ಅಥವಾ ಅಡುಗೆಗೆ ಬಳಸುವ ಮೂಲಕ ಮಾತ್ರ ಹುಣಸೆ ಹಣ್ಣನ್ನು ಬಳಸುತ್ತಿರಬಹುದು. ಆದರೆ ಹುಣಸೆ ಹಣ್ಣಿನ (Tamarind Fruit Benefits) ನೀರನ್ನು ತೂಕ ಇಳಿಕೆಗೆ ನೀವು ಬಳಸಿಲ್ಲವಾದರೆ ಒಮ್ಮೆ ಬಳಸಿ ನೋಡಿ. ಇದೂ ಕೂಡಾ ತೂಕ ಇಳಿಸಲು ನೆರವಾಗುತ್ತದೆ.

Tamarind Fruit

ಕಡಿಮೆ ಕ್ಯಾಲರಿಯಿದೆ

ಹುಣಸೆ ಹಣ್ಣಿನ ನೀರು ಅತ್ಯಂತ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಒಂದು ಹುಣಸೆಹಣ್ಣಿನಲ್ಲಿ ಕೇವಲ ಐದರಿಂದ ಆರು ಕ್ಯಾಲರಿ ಇರುತ್ತದಂತೆ. ಹಾಗಾಗಿ ಇದರ ಮೂಲಕ ಕ್ಯಾಲರಿ ಹೆಚ್ಚು ತೆಗೆದುಕೊಂಡ ಭಯವಿಲ್ಲ. ಇದಕ್ಕೆ ಸಿಹಿ ಹಾಗೂ ಮಸಾಲೆಗಳನ್ನು ಸೇರಿಸಿದರೆ ಖಂಡಿತವಾಗಿಯೂ ಕ್ಯಾಲರಿ ಬದಲಾವಣೆಯಾಗುತ್ತದೆ.

healthy internal organs of human digestive system

ಜೀರ್ಣಕ್ರಿಯೆಗೆ ಒಳ್ಳೆಯದು

ತೂಕ ಇಳಿಕೆಯ ಹಾದಿಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆ ಯಾವತ್ತಿಗೂ ಇರಬಾರದು. ಆಹಾರ ಚೆನ್ನಾಗಿ ಜೀರ್ಣವಾಗಬೇಕು. ನಿಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸಬೇಕಾದರೆ, ಬಹುಬೇಗನೆ ಸರಿಯಾಗಿ ಆಹಾರ ಜೀರ್ಣವಾಗಬೇಕೆಂದರೆ ಈ ಹುಣಸೇ ಹಣ್ಣಿನ ನೀರು ಸಹಾಯ ಮಾಡುತ್ತದೆ. ಇದು ಪಚನಕ್ರಿಯೆಯನ್ನು ಚುರುಕಾಗಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ನಾರಿನಂಶವಿದೆ

ಹುಣಸೇಹಣ್ಣಿನಲ್ಲಿ ಸಾಕಷ್ಟು ನಾರಿನಂಶ ಇದೆ. ನಾರಿನಂಶವು ಜೀರ್ಣಕ್ರಿಯೆಗೆ ಒಳ್ಳೆಯದು. ಅಷ್ಟೇ ಅಲ್ಲ, ಇದು ತೂಕವನ್ನೂ ಇಳಿಸುತ್ತದೆ. ಹೊಟ್ಟೆ ತುಂಬಿರುವ ಫೀಲ್‌ ನೀಡುವುದರಿಂದ ಬೇರೆ ತಿನ್ನುವ ಬಯಕೆಯಾಗುವುದಿಲ್ಲ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ

ಹುಣಸೇ ಹಣ್ಣಿನ ನೀರನ್ನು ಯಾಕೆ ಕುಡಿಯಬೇಕು ಎಂದರೆ ಹುಣಸೇಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹುಣಸೆಯಲ್ಲಿ ಟಾರ್ಟಾರಿಕ್‌ ಆಸಿಡ್‌ ಎಂಬ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌ ಇದ್ದು ಇದು ಫ್ರೀ ರ್ಯಾಡಿಕಲ್‌ಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರವು ಆರೋಗ್ಯವನ್ನು ಹೆಚ್ಚಿಸಿ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡಿ ತೂಕವನ್ನು ಇಳಿಸುತ್ತದೆ. ಹಾಗಾದರೆ, ಹುಣಸೆ ಹಣ್ಣಿನ ನೀರನ್ನು ಮಾಡುವುದು ಹೇಗೆ ಅಂತೀರಾ? ಇದೇನೂ ಬ್ರಹ್ಮವಿದ್ಯೆಯಲ್ಲ. ಹುಣಸೆ ಹಣ್ಣಿನ ಒಂದು ಸಣ್ಣ ತುಂಡನ್ನು ಬಿಸಿನೀರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ. ಇದು ಮೆತ್ತಗಾದ ಮೇಲೆ ಇದನ್ನು ಸ್ವಲ್ಪ ಕಿವುಚಿ ರಸ ಹಿಂಡಿ. ಹಿಂಡಿದ ಮೇಲೆ ಉಳಿದ ರಸಹೀನ ಹುಣಸೇ ಹಣ್ಣನ್ನು ಎಸೆಯಿರಿ. ನಂತರ ಈ ಹುಣಸೇ ಹಣ್ಣಿನ ನೀರಿಗೆ ನಿಮಗೆ ಬೇಕಾದಷ್ಟು ರುಚಿಗೆ ತಕ್ಕಂತೆ ನೀರು ಸೇರಿಸಿ ಕುಡಿಯಿರಿ. ರುಚಿಯಾಗಿ ಕುಡಿಯಬೇಕೆಂಬ ಬಯಕೆಯಿದ್ದರೆ, ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಅಥವಾ ಚಾಟ್‌ ಮಸಾಲಾ ಹಾಕಿಯೂ ಕುಡಿಯಬಹುದು. ಆದರೆ ಇದು ನಿಮ್ಮ ರುಚಿಗೆ ಬಿಟ್ಟದ್ದು. ಹೀಗೆ ಮಾಡಿದಾಗ ಖಂಡಿತವಾಗಿ ನೀವು ಸೇವಿಸುವ ಕ್ಯಾಲರಿಯಲ್ಲಿ ವ್ಯತ್ಯಾಸವಾಗುತ್ತದೆ. ತೂಕ ಇಳಿಕೆಯ ಲಾಭ ಪಡೆಯಬೇಕೆಂದಿದ್ದರೆ ಬೆಳಗ್ಗಿನ ಹೊತ್ತು, ಇದಕ್ಕೆ ಸಿಹಿ, ಮಸಾಲೆ ಸೇರಿಸದೆ ಹಾಗೆಯೇ ಕುಡಿಯಿರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Sabja Seeds Benefits: ಸಬ್ಜಾ, ಚಿಯಾ, ಕುಂಬಳಕಾಯಿ ಬೀಜಗಳಂತಹ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದ ಬೀಜಗಳ ಸೇವನೆ ಮಾಡಿರಬಹುದು. ಇವೆಲ್ಲವೂ ನೈಸರ್ಗಿಕವಾಗಿ ಲಭ್ಯವಿರುವ ಪೋಷಕಾಂಶಗಳ ಪವರ್‌ಹೌಸ್‌ಗಳು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ನಿಮಿಷಗಳ ಕಾಲ ನೆನೆಸಿಟ್ಟು ನಂತರ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಕಡಿಮೆ ಕ್ಯಾಲರಿಯಿರುವ ಇವುಗಳನ್ನು ತೂಕ ಇಳಿಸುವ ಪಯಣದಲ್ಲಿರುವ ಪ್ರತಿಯೊಬ್ಬರೂ ಈ ಸಬ್ಜಾ ಹಾಗೂ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಿರಬಹುದು. ಆದರೆ, ಇವನ್ನು ನೆನೆ ಹಾಕಿಯೇ ಬಳಸಬೇಕು ಯಾಕೆ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಇದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

Sabja Seeds Benefits
Koo

ನಿಮಗೆ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ, ಖಂಡಿತಾ ಸಬ್ಜಾ, ಚಿಯಾ, ಕುಂಬಳಕಾಯಿ ಬೀಜಗಳಂತಹ ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದ ಬೀಜಗಳ ಸೇವನೆ ಮಾಡಿರಬಹುದು. ಇವೆಲ್ಲವೂ ನೈಸರ್ಗಿಕವಾಗಿ ಲಭ್ಯವಿರುವ ಪೋಷಕಾಂಶಗಳ ಪವರ್‌ಹೌಸ್‌ಗಳು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ನಿಮಿಷಗಳ ಕಾಲ ನೆನೆಸಿಟ್ಟು ನಂತರ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಕಡಿಮೆ ಕ್ಯಾಲರಿಯಿರುವ ಇವುಗಳನ್ನು ತೂಕ ಇಳಿಸುವ ಪಯಣದಲ್ಲಿರುವ ಪ್ರತಿಯೊಬ್ಬರೂ ಈ ಸಬ್ಜಾ ಹಾಗೂ ಚಿಯಾ ಬೀಜಗಳನ್ನು ಬಳಕೆ ಮಾಡುತ್ತಿರಬಹುದು. ಆದರೆ, ಇವನ್ನು ನೆನೆ ಹಾಕಿಯೇ ಬಳಸಬೇಕು ಯಾಕೆ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಅಂತಹ ಗೊಂದಲವಿದ್ದರೆ (Sabja Seeds Benefits) ಅದಕ್ಕೆ ಉತ್ತರ ಇಲ್ಲಿದೆ. ಸಬ್ಜಾ ಬೀಜಗಳನ್ನು ಹಾಗೆಯೇ ಹಸಿಯಾಗಿ ನೆನೆಸದೆ ಯಾಕೆ ತಿನ್ನಬಾರದು ಎಂಬುದಕ್ಕೆ ಮೊದಲು ಸಬ್ಜಾ ಹಾಗೂ ಚಿಯಾ ಬೀಜಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳೋಣ.ಬಹಳಷ್ಟು ಮಂದಿ ಚಿಯಾ ಬೀಜಗಳು ಹಾಗೂ ಸಬ್ಜಾ ಬೀಜಗಳ ನಡುವೆ ಗೊಂದಲಕ್ಕೆ ಬೀಳುವುದುಂಟು. ಎರಡನ್ನೂ ಒಂದೇ ಎಂದು ತಿಳಿದುಕೊಳ್ಳುವುದುಂಟು. ಆದರೆ, ಇವೆರಡೂ ಬೇರೆ ಬೇರೆ. ಇವೆರಡನ್ನೂ ಸರಿಯಾಗಿ ಗಮನಿಸಿ ನೋಡಿದರೆ ಬೇರೆ ಬೇರೆ ಎಂದು ತಿಳಿಯುತ್ತದೆ. ಸಬ್ಜಾ ಬೀಜ ಕಡು ಕಪ್ಪಗಿದ್ದರೆ, ಚಿಯಾ ಬೀಜ ಕಪ್ಪು, ಬೂದು, ಬಿಳಿ ಹಾಗೂ ಕಂದು ಬಣ್ಣಗಳಿಂದ ಮಿಶ್ರಿತವಾಗಿರುತ್ತದೆ. ಸಬ್ಜಾಕ್ಕೆ ಅದರದ್ದೇ ಆದ ರುಚಿಯಿದ್ದರೆ, ಚಿಯಾ ಬೀಜಕ್ಕೆ ಹೇಳಿಕೊಳ್ಳುವ ರುಚಿಯೇನೂ ಇಲ್ಲ. ಆದರೆ, ಇವೆರಡೂ ಬೀಜಗಳನ್ನು ಸಲಾಡ್‌ ಹಾಗೂ ಇತರ ಆಹಾರಗಳ ಜೊತೆ ಸೇರಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸೇರ್ಪಡೆಯಾಗುವ ಪೋಷಕಾಂಶಗಳ ಪ್ರಮಾಣ ಹೆಚ್ಚು.

Sabja Seeds

ಸಬ್ಜಾ ಬೀಜಗಳನ್ನು ಯಾಕೆ ನೀರಿನಲ್ಲಿ ನೆನೆಸದೆ ತಿನ್ನಬೇಕು ಗೊತ್ತೇ? ಸಬ್ಜಾ ಬೀಜಗಳು ತೀರಾ ಚಿಕ್ಕದಾದ ಕಪ್ಪಗಿನ ಬೀಜಗಳಾಗಿದ್ದು, ನೀರಿನಲ್ಲಿ ಅಥವಾ ಯಾವುದೇ ದ್ರವದಲ್ಲಿ ಹಾಕಿದ ಕೂಡಲೇ ಊದಿಕೊಳ್ಳುತ್ತವೆ. ಆದರೆ ಊದಿಕೊಳ್ಳುವ ಮೊದಲೇ ಹಾಗೆಯೇ ಹಸಿಯಾಗಿಯೇ ತಿಂದರೆ ಇದು ದೇಹ ಪ್ರವೇಶಿಸಿದ ಮೇಲೆ ಎಲ್ಲಿ ಬೇಕಾದರೂ ಹೀಗೆ ಊದಿಕೊಂಡು ಕೆಲವೊಮ್ಮೆ ಸಿಕ್ಕಿಹಾಕಿಕೊಂಡ ಅನುಭವ ಕೊಡಬಹುದು.ಹೀಗಾಗಿ ಇದನ್ನು ಯಾವಾಗಲೂ ನೀರಿನಲ್ಲಿ ನೆನೆ ಹಾಕಿಯೇ ತಿನ್ನಬೇಕು. ಒಂದು ಚಮಚ ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಊಟದ ನಂತರ ಸೇವಿಸುವುದು ಒಳ್ಳೆಯದು. ಸಬ್ಜಾ ಬೀಜಗಳಿಂದ ಹಲವಾರು ಆರೋಗ್ಯಕರ ಲಾಭಗಳಿವೆ. ಅದಕ್ಕಾಗಿಯೇ ಇತ್ತೀಚೆಗಿನ ದಿನಗಳಲ್ಲಿ ಹಲವರು ಇದನ್ನು ತಮ್ಮ ನಿತ್ಯ ಆಹಾರದಲ್ಲಿ ಇದನ್ನು ಸೇರಿಸಿಕೊಂಡಿದ್ದಾರೆ.

Soaking sabja seeds
  • ನಿಮ್ಮ ದೇಹ ಉಷ್ಣ ಪ್ರಕೃತಿಯದಾಗಿದ್ದರೆ, ಸಬ್ಜಾ ಬೀಜ ಬಹಳ ಒಳ್ಳೆಯದು. ಇದು ದೇಹವನ್ನು ತಂಪು ಮಾಡುವ ಗುಣವನ್ನು ಹೊಂದಿದೆ.
  • ಮದುಮೇಹಿಗಳಿಗೆ ಸಬ್ಜಾ ಬೀಜ ಒಳ್ಳೆಯದು. ದೇಹದ ಸಕ್ಕರೆಯ ಮಟ್ಟವನ್ನು ಇದು ಸಮತೋಲನದಲ್ಲಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
  • ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೂ ಸಬ್ಜಾ ಬೀಜಗಳು ಅತ್ಯುತ್ತಮ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಬೆಳಗ್ಗೆ ಸರಿಯಾಗಿ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
  • ತೂಕ ಇಳಿಸುವ ಮಂದಿಗೂ ಸಬ್ಜಾ ಬೀಜ ಅತ್ಯುತ್ತಮ. ಎರಡು ಚಮಚ ಸಬ್ಜಾ ಬೀಜವನ್ನು ಒಂದು ಲೋಟ ನೀರಿನಲ್ಲಿ ಮೊದಲೇ ನೆನೆಸಿಟ್ಟು ಸೇವಿಸಿದರೆ, ಇದು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗಿ ತೂಕ ಇಳಿಕೆಗೆ ಸಹಾಯವಾಗುತ್ತದೆ. ಸಬ್ಜಾ ಬೀಜಕ್ಕೆ ತನ್ನದೇ ಆದ ರುಚಿ ಇಲ್ಲದೇ ಇರುವುದರಿಂದ ಅನೇಕ ತಿನಿಸುಗಳಿಗೆ ಹಾಗೂ ಪೇಯಗಳಿಗೆ ಬಳಸುವ ಮೂಲಕ ನಿತಯವೂ ನಿಮ್ಮ ಹೊಟ್ಟೆ ಸೇರುವಂತೆ ಮಾಡಬಹುದು. ಮಿಲ್ಕ್‌ ಶೇಕ್‌ಗಳಲಲಿ, ಸ್ಮೂದಿಗಳಲ್ಲಿ, ಲೆಮನೇಡ್‌ಗಳಲ್ಲಿ, ಸಲಾಡ್‌ ಹಾಗೂ ಡೆಸರ್ಟ್‌ಗಳಲ್ಲೂ ಇದನ್ನು ಬಳಸಬಹುದು.

ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

Continue Reading

ಆರೋಗ್ಯ

Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

swim benefits: ಫಿಟ್‌ನೆಸ್‌ನ ಭಾಗವಾಗಿ ಈಜುತ್ತಿದ್ದರೆ ಅದೂ ಕೂಡಾ ಒಳ್ಳೆಯದೇ. ಇತ್ತೀಚೆಗಿನ ದಿನಗಳಲ್ಲಿ ಈಜು ಮಕ್ಕಳಾದಿಯಾಗಿ ಹಿರಿಯರೂ ಕೂಡಾ ಕಲಿತು ತಮ್ಮ ಫಿಟ್‌ನೆಸ್‌ನ ಭಾಗವಾಗಿ ರೂಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ, ಈಜುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ಕಾರ್ಡಿಯೋ ವ್ಯಾಯಾಮ. ಬನ್ನಿ, ಈಜುವುದರಿಂದ ನಮ್ಮ ಆರೋಗ್ಯಕ್ಕೆ, ಫಿಟ್‌ನೆಸ್‌ಗೆ ಯಾವೆಲ್ಲ ಉಪಯೋಗಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

swim benefits
Koo

ಹಳ್ಳಿಗಳಲ್ಲಿ ಬೆಳೆದ ನಮ್ಮ ಬಾಲ್ಯಗಳನ್ನು ನೆನೆಪಿಸಿಕೊಂಡರೆ ಅನೇಕರಿಗೆ ಬೇಸಿಗೆ ಬಂದೊಡನೆ ಅಜ್ಜಿಮನೆಯ ಕೆರೆ ಕೊಳ್ಳ, ಹೊಳೆಗಳಲ್ಲೆಲ್ಲ ಈಜಾಡಿಕೊಂಡು ಮಜವಾಗಿ ಕಾಲ ಕಳೆದದ್ದು ನೆನಪಿಗೆ ಬರಬಹುದು. ಆಗೆಲ್ಲ, ಈಜುವ ತರಗತಿ ಹೋಗದೆ, ಹಳ್ಳಿಗಳಲ್ಲೇ ಬಹುತೇಕರು ಬಾಲ್ಯದ ಭಾಗವಾಗಿ ಈಜು ಕಲಿತುಕೊಳ್ಳುತ್ತಿದ್ದರು. ಈಗ ನಗರಗಳಲ್ಲಿ ಎಲ್ಲರಿಗೂ ಈಜು ಬೇಕಾದ ಸಮಯಕ್ಕೆ ಕಲಿತುಕೊಳ್ಳಬಹುದು. ಈಜು ಗೊತ್ತಿದ್ದವರು ಈಜುಕೊಳಗಳಲ್ಲಿ ದುಡ್ಡುಕೊಟ್ಟು ನಿತ್ಯವೂ ಈಜಿ ಬರಬಹುದು. ಈಜಲು ತಿಳಿದಿದ್ದರೆ ಅದು ಒಳಳೆಯದು. ಫಿಟ್‌ನೆಸ್‌ನ ಭಾಗವಾಗಿ ಈಜುತ್ತಿದ್ದರೆ ಅದೂ ಕೂಡಾ ಒಳ್ಳೆಯದೇ. ಇತ್ತೀಚೆಗಿನ ದಿನಗಳಲ್ಲಿ ಈಜು ಮಕ್ಕಳಾದಿಯಾಗಿ ಹಿರಿಯರೂ ಕೂಡಾ ಕಲಿತು ತಮ್ಮ ಫಿಟ್‌ನೆಸ್‌ನ ಭಾಗವಾಗಿ ರೂಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ, ಈಜುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ಕಾರ್ಡಿಯೋ ವ್ಯಾಯಾಮ. ಬನ್ನಿ, ಈಜುವುದರಿಂದ ನಮ್ಮ ಆರೋಗ್ಯಕ್ಕೆ, ಫಿಟ್‌ನೆಸ್‌ಗೆ ಯಾವೆಲ್ಲ ಉಪಯೋಗಗಳಿವೆ ಎಂಬುದನ್ನು (swim benefits) ನೋಡೋಣ.

image of Benefits Of Swimming For Women
  • ಈಜು ಸುಲಭ ಖಂಡಿತ ಅಲ್ಲ ನಿಜ. ಆದರೆ, ಈಜಲು ಗೊತ್ತಿದ್ದರೆ, ಈಜುತ್ತಿದ್ದರೆ, ನೀವು ಬೇರೆ ವ್ಯಾಯಾಮಕ್ಕೆ ಹಾಕಿದ ಶ್ರಮವನ್ನು ಈಜಲು ಹಾಕಬೇಕಿಲ್ಲ. ಆದರೂ, ಇಡೀ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ಇದರಿಂದ ದೊರೆಯುತ್ತದೆ. ಮಂಡಿ ನೋವು, ಸಂಧಿವಾತ, ಬೊಜ್ಜು ಇತ್ಯಾದಿ ಸಮಸ್ಯೆಗಳಿರುವ ಮಂದಿಯೂ ನಿರಾಯಾಸವಾಗಿ ಈಜಿ ಇದರಿಂದ ಲಾಭ ಪಡೆಯಬಹುದು.
  • ಈಜುವುದರಿಂದ ಹೃದಯ ಗಟ್ಟಿಯಾಗಿರುತ್ತದೆ. ಇದು ಕೊಲೆಸ್ಟೆರಾಲ್‌ ಮಟ್ಟವನ್ನು ಸರಿಯಾಗಿಟ್ಟು, ಅಧಿಕ ರಕ್ತದೊತ್ತಡವನ್ನೂ ಸಮತೋಲನಕ್ಕೆ ತಂದು, ಹೃದಯ ಅಚ್ಚುಕಟ್ಟಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
  • ಶ್ವಾಸಕೋಶಕ್ಕೆ ಈಜು ಅತ್ಯಂತ ಒಳ್ಳೆಯದು. ಈಜಿನ ಜೊತೆ ಉಸಿರಾಟದ ಗಮನವೂ ಇರಬೇಕಾದ್ದರಿಂದ ಇಲ್ಲಿ ಶ್ವಾಸಕೋಶಕ್ಕೆ ಅತ್ಯಂತ ಹೆಚ್ಚು ವ್ಯಾಯಾಮ ದೊರೆಯುತ್ತದೆ. ಅಸ್ತಮಾ, ಅಥವಾ ಶ್ವಾಸಕೋಶದ ಸಮಸ್ಯೆ ಇರುವ ಮಂದಿ ತಮ್ಮ ಶ್ವಾಸಕೋಶಕ್ಕೆ ನೀಡಬಹುದಾದ ಉತ್ತಮ ವ್ಯಾಯಾಮ ಇದು.
  • ಈಜುವುದರಿಂದ ಹೆಚ್ಚು ಕ್ಯಾಲರಿ ಕರಗಿಸಬಹುದು. ಅರ್ಧ ಗಂಟೆ ಈಜುವುದರಿಂದ ೨೫೦ ಕ್ಯಾಲರಿಯಷ್ಟನ್ನು ಕರಗಿಸಬಹುದು. ಬೇರೆ ಯಾವ ವ್ಯಾಯಾಮದಲ್ಲಿಯೂ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಕ್ಯಾಲರಿ ಕರಗದು.
  • ಮಾಂಸಖಂಡಗಳ ಬಲವರ್ಧನೆಗೆ, ನಿಮ್ಮ ದೇಹದ ತೂಕ ಇಳಿಸಿ ಟೋನ್‌ ಮಾಡಲು ಈಜುವುದು ಒಳ್ಳೆಯ ವ್ಯಾಯಾಮ. ಇದರಿಂದ ಮಾಂಸಖಂಡಗಳು ದೃಢವಾಗುತ್ತದೆ.
  • ಈಜುವುದರಿಂದ ಮಿದುಳು ಚುರುಕಾಗುತ್ತದೆ. ವಯಸ್ಸಾದಂತೆ ಮಿದುಳಿಗೂ ವ್ಯಾಯಾಮ ನೀಡಲು ಈಜಬಹುದು.
  • ಆರೋಗ್ಯಕರವಾಗಿ ವಯಸ್ಸಾಗಬೇಕೆಂಬ ಆಸೆ ನಿಮಗಿದ್ದರೆ ನಿತ್ಯವೂ ಈಜಲು ಸಮಯ ಮೀಸಲಿಡಿ. ದೇಹದ ಎಲ್ಲ ಕೆಲಸವೂ ಸಮತೋಲನದಲ್ಲಿ ಇರಲು ಈಜುವುದರಿಂದ ಸಹಾಯವಾಗುತ್ತದೆ.
  • ಮೆನೋಪಾಸ್‌ ಹತ್ತಿರ ಬರುತ್ತಿದ್ದಂತೆ ಮಹಿಳೆಯರ ಎಲುಬಿನ ಸಾಂದ್ರತೆ ಕಡಿಮೆಯಾಗತೊಡಗುತ್ತದೆ. ಇಂಥ ಸಮಯದಲ್ಲಿ ಈಜುವುದರಿಂದ ಎಲುಬಿನ ಮೇಲೆ ಸಕಾರಾತ್ಮಕ ಪ್ರಭಾವ ಬೀಳುವುದರಿಂದ ಎಲುಬು ಸವೆತದಂಥ ಸಮಸ್ಯೆ ಬಹುಬೇಗನೆ ಬಾರದು.
  • ನೀವು ಈಗಷ್ಟೇ ವ್ಯಾಯಾಮದ ಬಗ್ಗೆ ಆಸಕ್ತಿ ತೋರಿಸುತ್ತಿದ್ದೀರಿ ಎಂದಾದಲ್ಲಿ, ಈಜು ನಿಮಗೆ ಅತ್ಯುತ್ತಮ ವ್ಯಾಯಾಮ. ಇಡೀ ದೇಹಕ್ಕೆ ಏಕಕಾಲದಲ್ಲಿ ವ್ಯಾಯಾಮ ದೊರೆಯುವುದು ಈಜಿನಿಂದ ಮಾತ್ರ.
  • ಕೇವಲ ಈಜಷ್ಟೇ ಅಲ್ಲ, ಈಜುಕೊಳದೊಳಗೆ ನಡೆಯುವುದರಿಂದ, ಕೈಬೀಸುವುದರಿಂದ ಹೊರಗೆ ನಡಿಗೆ ಮಾಡಿದ್ದರಿಂದ ಹೆಚ್ಚು ಫಲ ದೊರೆತುತ್ತದೆ. ಅದಕ್ಕಾಗಿಯೇ ವಾಟರ್‌ ಏರೋಬಿಕ್ಸ್‌ ಇತ್ಯಾದಿಗಳೂ ಕೂಡಾ ಈಗ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Continue Reading

ಚಿಕ್ಕಮಗಳೂರು

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Dengue Fever : ಪ್ರಸಕ್ತ ವರ್ಷ ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಾಲಕಿಯೊಬ್ಬಳು ಮಹಾಮಾರಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

VISTARANEWS.COM


on

By

Dengue Fever
Koo

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ (Dengue Fever) ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸಾನಿಯಾ (6) ಮೃತ ದುರ್ದೈವಿ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.

ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾನಿಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕಿದರು.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

Orange Peel Benefits: ಸಿಪ್ಪೆ ಸುಲಿದು ರಸಭರಿತ ಕಿತ್ತಳೆಯನ್ನು ಬಾಯಿಗಿಟ್ಟರೆ, ಅಥವಾ ಜ್ಯೂಸ್‌ ಕುಡಿದರೆ, ಎಂಥಾ ಸೆಖೆಯಲ್ಲೂ ತಂಪಿನ, ಎಂಥಾ ಬಾಯಾರಿಕೆಯ ಸುಸ್ತಿನಲ್ಲೂ ಉಲ್ಲಾಸವನ್ನೂ ಶಕ್ತಿಯನ್ನೂ ಮತ್ತೆ ಜಿನುಗಿಸುವ ಶಕ್ತಿ ಇದೆ. ಆದರೆ, ಘಮಘಮಿಸುವ ಕಿತ್ತಳೆಯ ಸಿಪ್ಪೆಯನ್ನು ಮಾತ್ರ ನಾವು ಯಾವುದೇ ಯೋಚನೆ ಮಾಡದೆ ಎಸೆದು ಬಿಡುತ್ತೇವೆ. ನೀವು ವೇಸ್ಟ್‌ ಎಂದುಕೊಳ್ಳುವ ಈ ಸಿಪ್ಪೆಯಲ್ಲೂ ಬೇಕಾದಷ್ಟು ವಿಟಮಿನ್‌ ಸಿ, ನಾರಿನಂಶ ಹಾಗೂ ಪಾಲಿ ಫಿನಾಳ್‌ಗಳು ಇವೆ ಎಂದರೆ ನಂಬುತ್ತೀರಾ?

VISTARANEWS.COM


on

Orange Peel Benefits
Koo

ಕಿತ್ತಳೆ ಹಣ್ಣು ಹುಳಿಯನ್ನೂ ಸಿಹಿಯನ್ನೂ ಸಮಪ್ರಮಾಣದಲ್ಲಿ ಹೊಂದಿರುವ ದೇಹಕ್ಕೆ ಒಳ್ಳೆಯದನ್ನೇ ಬಯಸುವ ಹಣ್ಣು. ಇದರ ಘಮಕ್ಕೆ ಎಂಥ ಸಮಯದಲ್ಲೂ ನಮ್ಮನ್ನು ಬಡಿದೆಚ್ಚರಿಸುವ, ಉಲ್ಲಾಸವನ್ನು ತರುವ ಗುಣವಿದೆ. ಸಿಪ್ಪೆ ಸುಲಿದು ರಸಭರಿತ ಕಿತ್ತಳೆಯನ್ನು ಬಾಯಿಗಿಟ್ಟರೆ, ಅಥವಾ ಜ್ಯೂಸ್‌ ಕುಡಿದರೆ, ಎಂಥಾ ಸೆಖೆಯಲ್ಲೂ ತಂಪಿನ, ಎಂಥಾ ಬಾಯಾರಿಕೆಯ ಸುಸ್ತಿನಲ್ಲೂ ಉಲ್ಲಾಸವನ್ನೂ ಶಕ್ತಿಯನ್ನೂ ಮತ್ತೆ ಜಿನುಗಿಸುವ ಶಕ್ತಿ ಇದೆ. ಆದರೆ, ಘಮಘಮಿಸುವ ಕಿತ್ತಳೆಯ ಸಿಪ್ಪೆಯನ್ನು ಮಾತ್ರ ನಾವು ಯಾವುದೇ ಯೋಚನೆ ಮಾಡದೆ ಎಸೆದು ಬಿಡುತ್ತೇವೆ. ನೀವು ವೇಸ್ಟ್‌ ಎಂದುಕೊಳ್ಳುವ ಈ ಸಿಪ್ಪೆಯಲ್ಲೂ (Orange Peel Benefits) ಬೇಕಾದಷ್ಟು ವಿಟಮಿನ್‌ ಸಿ, ನಾರಿನಂಶ ಹಾಗೂ ಪಾಲಿ ಫಿನಾಳ್‌ಗಳು ಇವೆ ಎಂದರೆ ನಂಬುತ್ತೀರಾ?

Orange Peel

ಹೌದು. ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾಗುವ ವಿಟಮಿನ್‌ ಸಿಯ ಶೇ.14ರಷ್ಟಿದೆಯಂತೆ. ಅಂದರೆ ಅದು ಒಳಗಿರುವ ಕಿತ್ತಳೆ ಹಣ್ಣಿನ ಮೂರು ಪಟ್ಟು ಹೆಚ್ಚು! ಕಿತ್ತಳೆ ಸಿಪ್ಪೆಯಲ್ಲಿ ಒಳಗಿನ ಹಣ್ಣಿಗಿಂತ ನಾಲ್ಕು ಪಟ್ಟು ಹೆಚ್ಚು ನಾರಿನಂಶವಿದೆಯಂತೆ. ಫ್ಲಾರಿಡಾ ವಿಶ್ವವಿದ್ಯಾಲಯವು ಕಿತ್ತಳೆ ಸಿಪ್ಪೆಯ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ ಎಂದು ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ. ನಮ್ಮ ದೇಹದಲ್ಲಿರುವ ಕೆಲವೊಂದು ಬ್ಯಾಕ್ಟೀರಿಯಾಗಳು ಹೃದಯದ ಕಾಯಿಲೆಯನ್ನು ಉಲ್ಬಣಗೊಳಿಸುವ ತಾಕತ್ತನ್ನು ಹೊಂದಿದೆಯಂತೆ. ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಶಕ್ತಿ ಈ ಕಿತ್ತಳೆ ಸಿಪ್ಪೆಯಲ್ಲಿದೆಯಂತೆ. ಕಿತ್ತಳೆ ಸಿಪ್ಪೆಯಲ್ಲಿರುವ ಫೈಟೋ ಕೆಮಿಕಲ್‌ಗಳು ಹೃದಯದ ಕಾಯಿಲೆಗೆ ಪೂರಕವಾದ ಟ್ರೈಮೀಥೈಲಾಮೈನ್‌ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಹೃದಯಸ್ನೇಹಿಯಾಗಿ ವರ್ತಿಸುತ್ತದೆ.

ನಿತ್ಯ ಸೇವಿಸಬೇಕಿಲ್ಲ

ಹಾಗಂತ ಕಿತ್ತಳೆ ಹಣ್ಣಿಸ ಸಿಪ್ಪೆ ಒಳ್ಳೆಯದು ಎಂದು ಅದನ್ನು ನಿತ್ಯವೂ ಸೇವಿಸಬಹುದು ಎಂದಲ್ಲ. ಹಾಗೆ ಸೇವಿಸುವುದೂ ಕೂಡಾ ಒಳ್ಳೆಯದಲ್ಲ. ಕಿತ್ತಳೆಯ ಸಿಪ್ಪೆ ಕಹಿ ರುಚಿಯನ್ನು ಹೊಂದಿರುತ್ತದೆ ಹಾಗೂ ಇದನ್ನು ಹಾಗೆಯೇ ತಿನ್ನಲಾಗುವುದಿಲ್ಲ ಎಂಬುದೂ ನಿಮಗೆ ಗೊತ್ತು. ಅಷ್ಟೇ ಅಲ್ಲ. ಕಿತ್ತಳೆಯ ಸಿಪ್ಪೆಯಲ್ಲಿ ಅದನ್ನು ಬೆಳೆಸುವ ಸಂದರ್ಭ ಸಿಂಪಡಿಸಿದ ರಾಜಾಯನಿಕಗಳೂ, ಕೀಟನಾಶಕಗಳೂ ಇರುವ ಸಂಭವ ಹೆಚ್ಚು. ಹೀಗಾಗಿ ಅದನ್ನು ಸರಿಯಾಘಿ, ಸರಿಯಾದ ಕ್ರಮದಲ್ಲಿ ತೊಳೆದುಕೊಂಡು ಕೆಲವು ಆಹಾರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು.

ಕ್ಯಾಂಡಿ

ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಕ್ಕಳಿಗಾಗಿ ಸಿಹಿ ಕ್ಯಾಂಡಿಗಳನ್ನು ಮಾಡಬಹುದು. ಸಿಪ್ಪೆಯನ್ನು 15 ನಿಮಿಷ ನೀರಿನಲ್ಲಿ ಹಾಕಿಟ್ಟು ನಂತರ ಚೆನ್ನಾಗಿ ತೊಳೆದು, ಅದನ್ನು ನೀರಿನಲ್ಲಿ ೧೫ ನಿಮಿಷ ಕುದಿಸಿ, ಸಿಪ್ಪೆಯನ್ನು ಸಕ್ಕರೆ ಪಾಕಕ್ಕೆ ಹಾಕಿ ಒಣಗಿಸುವ ಮೂಲಕ ಒಳ್ಳೆಯ ನೈಸರ್ಗಿಕ ಕ್ಯಾಂಡಿ ಮಾಡಬಹುದು.

ಸ್ಮೂದಿ

ಸಣ್ಣ ಸಣ್ಣ ತುಂಡುಗಳನ್ನು ನೀವು ಮಾಡುವ ಸ್ಮೂದಿಗೆ ಹಾಕಬಹುದು.

ಕಿತ್ತಳೆ ಕೇಕ್‌

ಕಿತ್ತಳೆ ಕೇಕ್‌ಗಳನ್ನು ಮಾಡುವಾಗ ಕಿತ್ತಳೆಯ ಸಿಪ್ಪೆಯನ್ನು ತುರಿದು ಒಂದೆರಡು ಚಮಚದಷ್ಟು ಪೇಸ್ಟ್‌ ತಯಾರಿಸಿ ಹಾಕಿದರೆ, ಯಾವುದೇ ಕೃತಕ ಘಮದ ಅವಶ್ಯಕತೆಯೇ ಇಲ್ಲ.

ಕಿತ್ತಳೆ ಸಿಪ್ಪೆಯ ಚಹಾ

ಕಿತ್ತಳೆ ಸಿಪ್ಪೆಯ ಚಹಾ ಮಾಡಿ ಕುಡಿಯಬಹುದು. ನಿತ್ಯವೂ ಅಲ್ಲದಿದ್ದರೂ, ಯಾವಾಗಲಾದರೊಮ್ಮೆ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ, ನೀವು ಮನೆಯಲ್ಲೇ ಮಾಡುವ ಫೇಸ್‌ಪ್ಯಾಕ್‌ಗಳಿಗೆ ಇವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಮುಖದ ಮೇಲಿನ ಕಲೆಗಳು, ಸುಕ್ಕು ನಿರಿಗೆಗಳಿಗೆ ಇದು ಬಹಳ ಒಳ್ಳೆಯದು. ಇದರ ನಿಯಮಿತ ಬಳಕೆಯಿಂದ ಮುಖ ತಾಜಾತನದಿಂದ ಹೊಳೆಯುತ್ತದೆ.

Continue Reading
Advertisement
T20 World Cup 2024
ಕ್ರೀಡೆ1 min ago

T20 World Cup 2024: ʼವಿಶ್ವʼ ಗೆದ್ದ ನಾಯಕ ರೋಹಿತ್‌, ಕೋಚ್‌ ದ್ರಾವಿಡ್‌, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ

Self Harming
ಮೈಸೂರು7 mins ago

Self Harming : ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ

Jay Shah Promise
ಪ್ರಮುಖ ಸುದ್ದಿ19 mins ago

Jay Shah Promise: ಜಯ್​​ ಶಾ ಭವಿಷ್ಯ ನುಡಿದಂತೆ ಟಿ20 ವಿಶ್ವಕಪ್​ ಗೆದ್ದ ಭಾರತ; ವಿಡಿಯೊ ವೈರಲ್​

snake Bite
ಕಲಬುರಗಿ28 mins ago

Snake Bite : ಮರದಡಿ ಕುಳಿತಾಗ ಮಹಿಳೆಯ ಕಿವಿಗೆ ಕುಟುಕಿದ ಹಾವು; ವಿಷವೇರಿ ಸಾವು

T20 World Cup 2024 prize money
ಕ್ರೀಡೆ46 mins ago

T20 World Cup 2024 Prize Money:ಚಾಂಪಿಯನ್​ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Text Book
ಕರ್ನಾಟಕ46 mins ago

Text Book: ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರ ಅಸಮಾಧಾನ; ಸಿಎಂಗೆ ಪತ್ರ

Virat Kohli video calls Anushka Sharma after winning
ಬಾಲಿವುಡ್48 mins ago

Virat Kohli: ವಿಶ್ವಕಪ್ ಗೆದ್ದ ನಂತರ ಅನುಷ್ಕಾ ಶರ್ಮಾಗೆ ವಿಡಿಯೊ ಕಾಲ್‌ ಮಾಡಿ ಫ್ಲೈಯಿಂಗ್ ಕಿಸ್‌ ಕೊಟ್ಟ ವಿರಾಟ್ ಕೊಹ್ಲಿ!

Sabja Seeds Benefits
ಆರೋಗ್ಯ50 mins ago

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Physical Abuse
ಚಿಕ್ಕಬಳ್ಳಾಪುರ58 mins ago

Physical Abuse : ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ

Mann Ki Baat
ದೇಶ1 hour ago

Mann Ki Baat: ನಾಲ್ಕು ತಿಂಗಳ ನಂತರ ಮೋದಿ ʼಮನ್‌ ಕೀ ಬಾತ್‌ʼ; Live ಲಿಂಕ್ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ19 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌