Mens Fashion: ಸ್ಲಿಮ್‌ಫಿಟ್‌ ರಾಯಲ್‌ ಬ್ಲ್ಯೂ ಪ್ಯಾಂಟ್‌ ಸೂಟ್‌; ಕಾರ್ಪೋರೇಟ್‌ ಮೆನ್ಸ್ ಫ್ಯಾಷನ್‌ಗೆ ಎಂಟ್ರಿ - Vistara News

ಫ್ಯಾಷನ್

Mens Fashion: ಸ್ಲಿಮ್‌ಫಿಟ್‌ ರಾಯಲ್‌ ಬ್ಲ್ಯೂ ಪ್ಯಾಂಟ್‌ ಸೂಟ್‌; ಕಾರ್ಪೋರೇಟ್‌ ಮೆನ್ಸ್ ಫ್ಯಾಷನ್‌ಗೆ ಎಂಟ್ರಿ

ಡೀಸೆಂಟ್‌ ಲುಕ್‌ ನೀಡುವ ಸ್ಲಿಮ್‌ಫಿಟ್‌ ರಾಯಲ್‌ ಬ್ಲ್ಯೂ ಪ್ಯಾಂಟ್‌ ಸೂಟ್‌ಗಳು ಮೆನ್ಸ್ ಫ್ಯಾಷನ್‌ನಲ್ಲಿ (Mens Fashion) ಟ್ರೆಂಡಿಯಾಗಿವೆ. ಬಾಲಿವುಡ್‌ ನಟ ಇಶಾನ್‌ ಕಟ್ಟರ್‌ ಈ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡ ನಂತರ ಹುಡುಗರ ಒಲವು ಇದರತ್ತ ಹೆಚ್ಚಾಗಿದೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Mens Fashion
ಚಿತ್ರಗಳು: ಇಶಾನ್‌ ಕಟ್ಟರ್‌, ನಟ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಲಿಮ್‌ ಫಿಟ್‌ ರಾಯಲ್‌ ಬ್ಲ್ಯೂ ಪ್ಯಾಂಟ್‌ ಸೂಟ್‌ಗಳು ಇದೀಗ ಮೆನ್ಸ್ ಫ್ಯಾಷನ್‌ನಲ್ಲಿ (Mens Fashion) ಟ್ರೆಂಡಿಯಾಗಿವೆ. ಬಾಲಿವುಡ್‌ ನಟ ಇಶಾನ್‌ ಕಟ್ಟರ್‌ ಈ ಸೂಟ್‌ನಲ್ಲಿ ಕಾಣಿಸಿಕೊಂಡ ನಂತರ ಡಿಸೈನರ್‌ಗಳು ಇದೇ ಶೇಡ್‌ನಲ್ಲಿ ನಾನಾ ಬಗೆಯ ಪ್ಯಾಂಟ್‌ಸೂಟ್‌ಗಳನ್ನು ಡಿಸೈನ್‌ ಮಾಡತೊಡಗಿದ್ದು, ಇದಕ್ಕೆ ಪೂರಕ ಎಂಬಂತೆ, ಕಾರ್ಪೋರೇಟ್‌ ಹುಡುಗರು ಇವುಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ.

Mens Fashion, Ishaan Cutter, actor

ಡೀಸೆಂಟ್‌ ಲುಕ್‌ಗೆ ಕಾರ್ಪೋರೇಟ್ ಹುಡುಗರ ಫಿದಾ

“ಪ್ಯಾಂಟ್‌ ಸೂಟ್‌ ಎಂದಾಕ್ಷಣ ಸಾಕಷ್ಟು ಹುಡುಗರು ಲೆಕ್ಕವಿಲ್ಲದಷ್ಟು ಬಗೆಯ ಕಲರ್‌ ಹಾಗೂ ಡಿಸೈನ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವರಂತೂ ಎದ್ದು ಕಾಣುವಂತಹ ವೈಬ್ರೆಂಟ್‌ ಶೇಡ್‌ಗಳಲ್ಲಿ ಹೈಲೈಟಾಗುತ್ತಾರೆ. ಇನ್ನು ಕೆಲವರು ಇದಕ್ಕೆ ನಾನಾ ಪ್ರಯೋಗಗಳನ್ನು ಮಾಡುತ್ತಾರೆ. ಇಲ್ಲವೇ, ತಮ್ಮದೇ ಆದ ಡಿಸೈನ್‌ ಮಾಡಿಸಿ, ಫ್ಯಾಷನ್‌ ಇನಫ್ಲೂಯೆನ್ಸರ್‌ ಓರ್ರಿಯಂತೆ ಸುದ್ದಿಯಾಗುತ್ತಾರೆ. ಆದರೆ, ಡಿಸೆಂಟ್‌ ಕಾರ್ಪೋರೇಟ್‌ ಹುಡುಗರಿಗೆ ಮಾತ್ರ ಆಕರ್ಷಕ ಸಿಂಪಲ್‌ ಪ್ಯಾಂಟ್‌ಸೂಟ್‌ಗಳ ಮೇಲೆ ಪ್ರೀತಿ. ಇದೇ ಸಮಯದಲ್ಲಿ ನಟ ಇಶಾನ್‌ ಕಟ್ಟರ್‌ ಧರಿಸಿದ ಡಾರ್ಕ್ ರಾಯಲ್‌ ಬ್ಲ್ಯೂ ಪ್ಯಾಂಟ್‌ಸೂಟ್‌ ಟ್ರೆಂಡಿಯಾಗಿದೆ. ಪರಿಣಾಮ, ಈ ಔಟ್‌ಫಿಟ್‌ ಬೇಡಿಕೆ ಹೆಚ್ಚಿಸಿಕೊಂಡಿದೆ” ಎನ್ನುತ್ತಾರೆ ಡಿಸೈನರ್ಸ್.

Mens Fashion, Ishaan Cutter

ಡೀಪ್‌ ರಾಯಲ್‌ ಬ್ಲ್ಯೂ ಶೇಡ್‌ ಪ್ಯಾಂಟ್‌ ಸೂಟ್‌ಗೆ ಬೇಡಿಕೆ

ಪಾಸ್ಟೆಲ್‌ ಶೇಡ್‌ನವು ಹುಡುಗಿಯರ ಕೆಟಗರಿಯಲ್ಲಿ ಪಾಪುಲರ್‌ ಆಗಿದ್ದರೇ, ಹುಡುಗರ ಕೆಟಗರಿಯಲ್ಲಿ ಡಾರ್ಕ್ ಶೇಡ್‌ನವು ಪಾಪುಲರ್‌ ಆಗಿವೆ. ಬ್ಲ್ಯಾಕ್‌ ಕಲರ್‌ ಮಿಡಲ್‌ ಏಜ್‌ ಚಾಯ್ಸ್ ಎಂಬಂತಾಗಿದ್ದು, ಹಾಗಾಗಿ ಯಂಗ್‌ ಲುಕ್‌ ಬಯಸುವವರು ಹಾಗೂ ಟ್ರೆಂಡಿ ಲುಕ್‌ ಬಯಸುವವರು ಇದೀಗ ಡೀಪ್‌ ರಾಯಲ್‌ ಬ್ಲ್ಯೂ ಶೇಡ್‌ ಪ್ಯಾಂಟ್‌ ಸೂಟ್‌ಗೆ ಮನಸೋತಿದ್ದಾರೆ.

Ishaan Cutter, actor

ಡೀಪ್‌ ಶೇಡ್‌ ಪ್ಯಾಂಟ್‌ಸೂಟ್‌ ಟಿಪ್ಸ್

  • ಡಾರ್ಕ್‌ ಸ್ಕಿನ್‌ ಟೋನ್‌ನವರಿಗೆ ನಾಟ್‌ ಓಕೆ.
  • ಈ ಸೂಟ್‌ ಧರಿಸಿದಾಗ ಹೆಚ್ಚು ಆಕ್ಸೆಸರೀಸ್‌ ಧರಿಸಕೂಡದು.
  • ಡೀಸೆಂಟ್‌ ಹೇರ್‌ಸ್ಟೈಲ್‌ ಮ್ಯಾಚ್‌ ಆಗುತ್ತದೆ.
  • ಸೂಟಿನೊಳಗೆ ಧರಿಸುವ ಇನ್ನರ್‌ ಹೊಂದಬೇಕು.
  • ಸ್ಲಿಮ್‌ಫಿಟ್‌ ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್‌ಗೆ ಹೊಂದುವುದು ಅಗತ್ಯ.
  • ಶೂ ಅಥವಾ ಸ್ನೀಕರ್‌ ಧರಿಸಿ.
  • ಬ್ರೋಚರ್‌ ಕೋಟ್ ಮೇಲೆ ಧರಿಸಿದಲ್ಲಿ ಹೈಲೈಟಾಗುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ಏನಿದು ನಟಿ ಶ್ರೀ ಲೀಲಾ ಧರಿಸಿ ಮಿಂಚಿದ್ದ ಘರಾರ ಡ್ರೆಸ್?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Zircon Jewellery Fashion: ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ಗೆ ಸೇರಿದ ವೈವಿಧ್ಯಯಮಯ ಜಿರ್ಕೊನ್‌ ಆಭರಣಗಳ ಹಂಗಾಮಾ!

Zircon Jewellery Fashion: ಧರಿಸಿದಾಗ ಮಿರಮಿರ ಮಿನುಗುವ ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಜಿರ್ಕೊನ್‌ ಜ್ಯುವೆಲರಿಗಳು ಇದೀಗ ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆದಿವೆ. ಯಾವ್ಯಾವ ವಿನ್ಯಾಸದವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ ಎಂಬುದರ ಕುರಿತಂತೆ ಜ್ಯುವೆಲ್‌ ಡಿಸೈನರ್‌ಗಳು ಮಾಹಿತಿ ನೀಡಿದ್ದಾರೆ. ಫ್ಯಾಷನ್‌ ಪ್ರಿಯರಿಗೆ ಉಪಯುಕ್ತ ಮಾಹಿತಿ ಇದು.

VISTARANEWS.COM


on

Zircon Jewellery Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಜಿರ್ಕೊನ್‌ ಜ್ಯುವೆಲರಿಗಳು (Zircon Jewellery Fashion) ಇದೀಗ ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆದಿವೆ. ಕತ್ತಿಗೆ ಧರಿಸಿದಾಗ ಮಿರಮಿರ ಮಿನುಗುವ ವೈವಿಧ್ಯಮಯ ಈ ಜ್ಯುವೆಲರಿಗಳು ಇದೀಗ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ.

ಹೈ ಫ್ಯಾಷನ್‌ ಜ್ಯುವೆಲರಿಗಳಿವು

“ಜಿರ್ಕೊನ್‌ ಜ್ಯುವೆಲರಿ ಹೈ ಫ್ಯಾಷನ್‌ ಜ್ಯುವೆಲರಿ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿವೆ. ಬಂಗಾರ ಹಾಗೂ ಬಂಗಾರೇತರ ಲೋಹದಲ್ಲೂ ಈ ಆಭರಣಗಳು ಮಾರುಕಟ್ಟೆಗೆ ಆಗಮಿಸಿವೆ. ಬಂಗಾರದಲ್ಲಾದರೇ ಕೊಂಚ ದುಬಾರಿ ಎಂದೆನಿಸುವುದರಿಂದ ಮಹಿಳೆಯರು, ಇತರೇ ಲೋಹದಲ್ಲಿ ಲಭ್ಯವಿರುವ ಡಿಸೈನ್‌ಗಳಿಗೆ ಮನಸೋಲಲಾರಂಭಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಆಭರಣಗಳ ಅತ್ಯಾಕರ್ಷಕ ವಿನ್ಯಾಸ ಹಾಗೂ ಔಟ್‌ಲುಕ್‌” ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ಅಮನ್‌. ಅವರ ಪ್ರಕಾರ, ಜಿರ್ಕೊನ್‌ ಆಭರಣಗಳು ಮೊದಮೊದಲು ಯುವತಿಯರಿಗೆ ಮಾತ್ರ ಪ್ರಿಯವಾಗಿದ್ದವು. ಇದೀಗ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲರೂ ಧರಿಸಲಾರಂಭಿಸಿದ್ದಾರೆ. ಪ್ರತಿ ಮಹಿಳೆಯ ಬಳಿಯೂ ಈ ವಿನ್ಯಾಸದ ಒಂದಾದರೂ ಆಭರಣದ ಕಲೆಕ್ಷನ್‌ ಇದ್ದೇ ಇರುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Pregnancy Fashion: ಪ್ರೆಗ್ನೆನ್ಸಿ ಸ್ಟೈಲಿಂಗ್‌ನಲ್ಲಿ ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು!

ಟ್ರೆಂಡಿಯಾಗಿರುವ ಜಿರ್ಕೊನ್‌ ಆಭರಣಗಳು

ಜಿರ್ಕೊನ್‌ ಬ್ರೈಡಲ್‌ ಸೆಟ್‌, ಬ್ರೈಡಲ್‌ ಪರ್ಲ್‌, ಸಿಲ್ವರ್‌ ಗೋಲ್ಡ್ ಪಾಲಿಶ್‌ನ ಜಿರ್ಕೊನ್‌ ನೆಕ್ಲೇಸ್‌ ಹಾಗೂ ಇಯರಿಂಗ್ಸ್, ಜಿರ್ಕೊನ್‌ ಎಮರಾಲ್ಡ್, ರೂಬಿ ಸೆಟ್‌ ಸೇರಿದಂತೆ ನಾನಾ ಬಗೆಯವು ಆಭರಣಗಳ ಲೋಕದಲ್ಲಿ ಸದ್ಯ ಟ್ರೆಂಡಿಯಾಗಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ. ಇನ್ನು, ಕ್ಯೂಬಿಕ್ಸ್, ಜೆಮ್‌, ಟೀ ಡ್ರಾಪ್‌, ರೊಡಿಯಂ ಪ್ಲೇಟೆಡ್‌, ಸ್ಟೆರ್ಲಿಂಗ್‌, ಗೋಲ್ಡ್ ಪ್ಲೇಟೆಡ್‌, ಚೋಕರ್‌ ಸ್ಟೈಲ್‌, ಕಾಪರ್‌ ಅಲೋಯ್‌ ಶೈಲಿಯವು ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿದ್ದು, ಉದ್ಯೋಗಸ್ಥ ಮಹಿಳೆಯರಿಗೆ ಪ್ರಿಯವಾಗಿವೆ.

ಜಿರ್ಕೊನ್‌ ಜ್ಯುವೆಲರಿ ಆಯ್ಕೆ

  • ಜಿರ್ಕೊನ್‌ ಜ್ಯುವೆಲರಿಗಳಲ್ಲೂ ಲೆಕ್ಕವಿಲ್ಲದಷ್ಟು ಡಿಸೈನ್‌ಗಳು ಲಭ್ಯವಿರುವುದರಿಂದ ಆಯ್ಕೆ ಸುಲಭವೇನಲ್ಲ!
  • ಧರಿಸುವ ಮ್ಯಾಚಿಂಗ್‌ ಔಟ್‌ಫಿಟ್‌ಗೆ ತಕ್ಕಂತೆ ಆಯ್ಕೆ ಮಾಡಬಹುದು.
  • ಅಗಲವಾದ ಡಿಸೈನ್‌ನವನ್ನು ನೆಕ್‌ಲೈನ್‌ ಅಗಲವಾಗಿರುವ ಉಡುಪಿಗೆ ಧರಿಸಬಹುದು.
  • ಸಿಂಪಲ್‌ ಡಿಸೈನ್‌ನವನ್ನು ಎಲ್ಲಾ ಬಗೆಯ ಔಟ್‌ಫಿಟ್‌ಗೂ ಧರಿಸಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Pregnancy Fashion: ಪ್ರೆಗ್ನೆನ್ಸಿ ಸ್ಟೈಲಿಂಗ್‌ನಲ್ಲಿ ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು!

Pregnancy Fashion: ಪ್ರೆಗ್ನೆನ್ಸಿ ಸ್ಟೈಲ್‌ ಎಂದು ಗರ್ಭಿಣಿಯರು ಕಂಡಕಂಡದ್ದನ್ನೆಲ್ಲಾ ಧರಿಸುವುದು ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ಯಾವ್ಯಾವ ಫ್ಯಾಷನ್‌ವೇರ್‌ ಧರಿಸುವುದು ಸೂಕ್ತ /ಸೂಕ್ತವಲ್ಲ ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಫರ್ಟ್‌ ಒಂದಿಷ್ಟು ಸಿಂಪಲ್‌ ಸಲಹೆ ನೀಡಿದ್ದಾರೆ.

VISTARANEWS.COM


on

Pregnancy Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರೆಗ್ನೆನ್ಸಿ ಸ್ಟೈಲ್‌ಗೂ ನಾನಾ (Pregnancy Fashion) ರೂಲ್ಸ್ ಇವೆ. ಗರ್ಭಿಣಿಯರು ಈ ಸಮಯದಲ್ಲಿ ಕಂಡಕಂಡದ್ದನ್ನೆಲ್ಲಾ ಧರಿಸುವುದು ಒಳಿತಲ್ಲ! ಬದಲಿಗೆ ತಮ್ಮ ದೇಹಕ್ಕೆ ಹೊಂದುವಂತಹದ್ದನ್ನು ಧರಿಸುವುದು ಉತ್ತಮ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಹೌದು, ಇತ್ತೀಚೆಗೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ತಮ್ಮ ಕಲ್ಕಿ ಸಿನಿಮಾ ಪ್ರಮೋಷನ್‌ ಸಮಯದಲ್ಲಿ ಧರಿಸಿದ್ದ, ಉಸಿರುಗಟ್ಟಿಸುವ ಟೈಟ್‌ ಬಾಡಿಕಾನ್‌ ಡ್ರೆಸ್‌ ಹಾಗೂ ಹೈ ಹೀಲ್ಸ್ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಇಂತಹ ಸಮಯದಲ್ಲೂ ದೀಪಿಕಾಗೆ ಹೈ ಹೀಲ್ಸ್ ಬೇಕಿತ್ತೇ! ಎಂದೆಲ್ಲಾ ಕಾಮೆಂಟ್‌ಗಳು ತೇಲಿಬಂದವು. ಗೈನಾಕಲಜಿಸ್ಟ್‌ಗಳು ಕೂಡ ಇದನ್ನುತಪ್ಪು ಎನ್ನುತ್ತಾರೆ. ಅವರು ಹೇಳುವಂತೆ, ಸ್ಟೈಲಿಂಗ್‌ ಹೆಸರಲ್ಲಿ ಯಾವುದೇ ಗರ್ಭಿಣಿ ಕೂಡ ಆರೋಗ್ಯಕ್ಕೆ ಮಾರಕವಾಗುವಂತಹ ಫ್ಯಾಷನ್‌ವೇರ್ಸ್ ಹಾಗೂ ಫುಟ್‌ವೇರ್‌ ಧರಿಸುವುದು ಸರಿಯಲ್ಲ! ಎನ್ನುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಈ ಸಂದರ್ಭದಲ್ಲಿ ಗರ್ಭಿಣಿಯರು ಯಾವ್ಯಾವ ಬಗೆಯ ಫ್ಯಾಷನ್‌ವೇರ್‌ ಧರಿಸುವುದು ಸೂಕ್ತ /ಸೂಕ್ತವಲ್ಲ! ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಫರ್ಟ್‌ ವಿದ್ಯಾ ವಿವೇಕ್‌ ಒಂದಿಷ್ಟು ಸಿಂಪಲ್‌ ಸಲಹೆ ನೀಡಿದ್ದಾರೆ.

Pregnancy Fashion

ಟೈಟ್‌ ಫಿಟ್‌ ಡ್ರೆಸ್‌ಗಳನ್ನು ಅವಾಯ್ಡ್ ಮಾಡಿ

ಅಪರೂಪಕ್ಕೆ ಅಥವಾ ಫೋಟೋ ಶೂಟ್‌ಗೆ ಟೈಟ್‌ ಫಿಟ್‌ ಡ್ರೆಸ್‌ ತಾತ್ಕಲಿಕವಾಗಿ ಧರಿಸಿದರೇ ಓಕೆ. ಅದನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಬಾರದು. ಟೈಟ್‌ಫೀಟ್‌ನಿಂದ ದೇಹದ ಸುಗಮ ರಕ್ತ ಸಂಚಾರಕ್ಕೆ ಧಕ್ಕೆಯುಂಟಾಗಬಹುದು.

Pregnancy Fashion

ಹೈ ಹೀಲ್ಸ್ ಫುಟ್‌ವೇರ್‌ ನಾಟ್‌ ಓಕೆ

ಗರ್ಭಿಣಿಯರು ಫ್ಲ್ಯಾಟ್‌ ಫುಟ್‌ವೇರ್‌ ಅಥವಾ ಶೂಗಳನ್ನು ಧರಿಸುವುದು ಉತ್ತಮ. ಇಲ್ಲವಾದಲ್ಲಿ, ನಡೆಯುವಾಗ ಬೆನ್ನಿನ ಹಿಂಭಾಗಕ್ಕೆ ಒತ್ತಡ ಹೆಚ್ಚಾಗಿ ನೋವು ಬರಬಹುದು. ಪಾದಗಳು ಊದಿಕೊಳ್ಳಬಹುದು. ಅವಘಡ ಉಂಟಾಗಿ ಎಡವಬಹುದಾದ ಸಂದರ್ಭವು ಎದುರಾಗಬಹುದು.

Pregnancy Fashion

ಬ್ರಿಥಬಲ್‌ ಫ್ಯಾಬ್ರಿಕ್‌ ಡ್ರೆಸ್‌ಗಳನ್ನು ಚೂಸ್‌ ಮಾಡಿ

ಉಸಿರುಗಟ್ಟಿಸುವಂತಹ ಉಡುಪುಗಳಿಗೆ ಆದ್ಯತೆ ನೀಡಬೇಕು. ಕಾಟನ್‌, ಲೆನಿನ್‌ ಹಾಗೂ ಹ್ಯಾಂಡ್‌ಲೂಮ್‌ನಂತಹ ಬ್ರಿಥೆಬಲ್‌ ಫ್ಯಾಬ್ರಿಕ್‌ ಡ್ರೆಸ್‌ಗಳನ್ನು ಧರಿಸುವುದು ಉತ್ತಮ.

Pregnancy Fashion

ದೊಗಲೆ ಉಡುಪುಗಳನ್ನು ಧರಿಸಿ

ಹೊಟ್ಟೆ ಭಾಗದಲ್ಲಿ ಟೈಟಾಗಿರದ ದೊಗಲೆ ಉಡುಪುಗಳು ಈ ಸಂದರ್ಭಕ್ಕೆ ಬೆಸ್ಟ್. ದೊಗಲೆ ಬೇಡ ಎನ್ನುವುದಾದಲ್ಲಿ, ಆದಷ್ಟೂ ಕೊಂಚ ಲೂಸಾಗಿರುವ ಅಥವಾ ಅಂಬ್ರೆಲ್ಲಾ ಕಟ್‌, ಎ ಲೈನ್‌ ಮತ್ತು ಫ್ಲೇರ್‌ ಇರುವಂತಹ ಉಡುಪುಗಳನ್ನು ಧರಿಸಬಹುದು.

ಇದನ್ನೂ ಓದಿ: Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

ಮನೋಲ್ಲಾಸ ತುಂಬುವ ಕಲರ್‌ಫುಲ್‌ ಡ್ರೆಸ್‌

ತಿಳಿ ವರ್ಣದ ಹಾಗೂ ಬ್ರೈಟ್‌ ಡ್ರೆಸ್‌ಗಳು ಮನೋಲ್ಲಾಸ ತುಂಬಬಹುದು. ಮೂಡ್‌ಸ್ವಿಂಗ್‌ನಿಂದ ಪಾರು ಮಾಡಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

Monsoon Jacket Styling Tips: ಉಡುಪಿನ ಮೇಲೆ ಜಾಕೆಟ್‌ ಧರಿಸಿದಾಕ್ಷಣ ಕಂಪ್ಲೀಟ್‌ ಲುಕ್‌ ಬದಲಾಗುತ್ತದೆ. ಪದೇ ಪದೇ ಒಂದೇ ಜಾಕೆಟ್‌ ಧರಿಸಿದರೂ ಒಂದೇ ಬಗೆಯದ್ದಾಗಿ ಕಾಣಿಸುತ್ತದೆ. ಹಾಗಾದಲ್ಲಿ, ಎಲ್ಲಾ ಉಡುಪುಗಳ ಮೇಲೆ ಭಿನ್ನ-ವಿಭಿನ್ನವಾಗಿ ಹೇಗೆಲ್ಲಾ ಜಾಕೆಟ್‌ ಧರಿಸಿ ಸ್ಟೈಲಿಶ್‌ ಆಗಿ ಕಾಣಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Jacket Styling Tips
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಜಾಕೆಟ್‌ (Monsoon Jacket Styling Tips) ಧರಿಸಿಯೂ ಸ್ಟೈಲಿಶ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು, ಮಳೆಗಾಲದಲ್ಲಿ ಹೊರಗೆ ಹೋಗುವಾಗ ಧರಿಸಿದ ಉಡುಪಿನ ಮೇಲೆ ಜಾಕೆಟ್‌ ಧರಿಸುವುದು ಸಾಮಾನ್ಯ. ಆದರೆ, ಪದೇ ಪದೇ ಒಂದೇ ಜಾಕೆಟ್‌ ಧರಿಸಿದರಂತೂ ಪ್ರತಿ ಬಾರಿಯೂ ಒಂದೇ ಲುಕ್‌ನಲ್ಲಿ ಕಾಣಿಸುವುದು ಗ್ಯಾರಂಟಿ. ಹಾಗೆಂದು, ಎಲ್ಲರ ಬಳಿಯಲ್ಲೂ ಒಂದೊಂದು ಉಡುಪಿಗೂ ಒಂದೊಂದು ಜಾಕೆಟ್‌ ಸಂಗ್ರಹವಿರುವುದಿಲ್ಲ. ಬದಲಿಗೆ ಒಂದೆರೆಡು ಜಾಕೆಟ್‌ಗಳಲ್ಲೇ ಇಡೀ ಮಾನ್ಸೂನ್‌ ಸೀಸನ್‌ ಕಳೆಯಬೇಕಾಗುತ್ತದೆ. ಅಂತಹವರೂ ಕೂಡ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿದಲ್ಲಿ, ಜಾಕೆಟ್‌ ಧರಿಸಿದ ಮೇಲೂ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಸ್ಟೈಲಿಂಗ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್ ಕರಣ್‌ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

Monsoon Jacket Styling

ಕಾಶ್ಯುವಲ್‌ ಉಡುಪಿಗೆ ಜಾಕೆಟ್‌

ವೆಸ್ಟರ್ನ್‌ ಹಾಗೂ ಯಾವುದೇ ಕ್ಯಾಶುವಲ್‌ ಉಡುಪಿನ ಮೇಲೆ ಜಾಕೆಟ್‌ ಧರಿಸುವಂತವರು ಆದಷ್ಟೂ ಕಂಟೆಂಪರರಿ ಡಿಸೈನ್‌ನ ಜಾಕೆಟ್‌ ಧರಿಸುವುದು ಉತ್ತಮ. ಅದರಲ್ಲೂ ಧರಿಸುವ ಉಡುಪಿಗೆ ಜಾಕೆಟ್‌ ಹೊಂದುವುದು ಮುಖ್ಯ.

ಮಿನಿಮಲ್‌ ಆಕ್ಸೆಸರೀಸ್‌ ಇರಲಿ

ಜಾಕೆಟ್‌ ಧರಿಸಿದಾಗ ಆದಷ್ಟೂ ಮಿನಿಮಲ್‌ ಆಕ್ಸೆಸರೀಸ್‌ ಧರಿಸುವುದು ಉತ್ತಮ. ಯಾಕೆಂದರೇ, ಮೆಸ್ಸಿಯಾಗಿ ಕಾಣಿಸಬಹುದು. ಹಾಗಾಗಿ ಆಕ್ಸೆಸರೀಸ್‌ ಧರಿಸದಿದ್ದರೂ ಓಕೆ.

Monsoon Jacket

ಎಥ್ನಿಕ್‌ ಡ್ರೆಸ್‌ಗೆ ಜಾಕೆಟ್‌

ಎಥ್ನಿಕ್‌ ಡ್ರೆಸ್‌ಗೆ ವೆಸ್ಟರ್ನ್ ಲುಕ್‌ ನೀಡುವ ಜಾಕೆಟ್‌ ಆಷ್ಟಾಗಿ ಹೊಂದದು. ಆದರೂ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಮೇಕೋವರ್‌ ಮಾಡಿದಲ್ಲಿ ನೋಡಲು ಅಂದವಾಗಿ ಬಿಂಬಿಸಬಲ್ಲದು. ಇದಕ್ಕಾಗಿ ಧರಿಸುವ ಉಡುಪು ಪ್ರಿಂಟೆಡ್‌ನದ್ದಾಗಿದ್ದಲ್ಲಿ ಅದಕ್ಕೆ ಸಾದಾ ಸಾಲಿಡ್‌ ಶೇಡ್‌ನ ಜಾಕೆಟ್‌ ಧರಿಸುವುದು ಉತ್ತಮ. ಸಾದಾ ಡ್ರೆಸ್‌ಗೆ ಪ್ರಿಂಟೆಡ್‌ ಜಾಕೆಟ್‌ ಧರಿಸಬಹುದು.

ಫಂಕಿ ಲುಕ್‌ ಜಾಕೆಟ್‌ಗಾದಲ್ಲಿ

ಫಂಕಿ ಲುಕ್‌ ಇರುವಂತಹ ಜಾಕೆಟ್‌ಗಳನ್ನು ಧರಿಸುವುದಾದಲ್ಲಿ ಆದಷ್ಟೂ ವೆಸ್ಟರ್ನ್‌ ಲುಕ್‌ ಉಡುಪುಗಳನ್ನೇ ಮ್ಯಾಚ್‌ ಮಾಡಬೇಕಾಗುತ್ತದೆ. ಅದರಲ್ಲೂ ಸ್ಲಿಮ್‌ ಫಿಟ್‌ ಜಾಕೆಟ್‌ ಉತ್ತಮ.

Monsoon Styling

ಜಾಕೆಟ್‌ ಸೀರೆ

ಸೀರೆಗೂ ಜಾಕೆಟ್ಟಾ ಎಂದುಕೊಂಡರೇ, ಹೌದು. ಹೀಗೂ ಧರಿಸಬಹುದು. ಆದರೆ, ಸೀರೆಯ ಬಣ್ಣಕ್ಕೆ ಹೊಂದುವಂತಹ ಜಾಕೆಟ್‌ ಇದ್ದರೇ ಉತ್ತಮ. ಪಲ್ಲುವನ್ನು ಜಾಕೆಟ್‌ ಮೇಲೆ ಡ್ರೆಪ್‌ ಮಾಡಿದಲ್ಲಿ ಜಾಕೆಟ್‌ ಸೀರೆಯಂತೆ ಕಾಣಿಸಬಲ್ಲದು.

ಇದನ್ನೂ ಓದಿ: Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

ಪಸರ್ನಾಲಿಟಿಗೆ ತಕ್ಕಂತಿರಲಿ

ಜಾಕೆಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಹೆಸರಲ್ಲಿ ಮನ ಬಂದಂತೆ ಧರಿಸಿದರೇ ಚೆನ್ನಾಗಿ ಕಾಣದು. ಸ್ಲಿಮ್‌ ಇರುವವರಿಗೆ ಜಾಕೆಟ್‌ ಸ್ಟೈಲಿಂಗ್‌ ಓಕೆ. ಆದರೆ, ಪ್ಲಂಪಿಯಾಗಿರುವವರು ಮಾತ್ರ, ಇತರೇ ಡ್ರೆಸ್‌ಗಳೊಂದಿಗೆ ಜಾಕೆಟ್‌ ಧರಿಸುವಾಗ ಆದಷ್ಟೂ ಲೈಟ್‌ವೈಟ್‌ ಜಾಕೆಟ್‌ ಅಥವಾ ಸ್ಲಿಮ್‌ ಫಿಟ್‌ಜಾಕೆಟ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Designer Hairpins Fashion: ಕೂದಲಿನ ಅಂದವನ್ನು ಹೆಚ್ಚಿಸಿ, ಗ್ರ್ಯಾಂಡ್‌ ಲುಕ್‌ ನೀಡುವಂತಹ ವೆರೈಟಿ ವಿನ್ಯಾಸದ ಡಿಸೈನರ್‌ ಹೇರ್‌ಪಿನ್‌ಗಳು ಆಗಮಿಸಿವೆ. ಅತಿ ಸುಲಭವಾಗಿ ಇಡೀ ಹೇರ್‌ಸ್ಟೈಲನ್ನು ಅಂದಗಾಣಿಸುವ ಇವು ಯಾವ್ಯಾವ ಬಗೆಯಲ್ಲಿ ಲಭ್ಯ? ಯಾವ ಕೂದಲಿಗೆ ಯಾವುದು? ಎಂಬುದರ ಬಗ್ಗೆ ಹೇರ್‌ಸ್ಟೈಲಿಸ್ಟ್ಗಳು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Designer Hairpins Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವಂತಹ ವೆರೈಟಿ ಡಿಸೈನರ್‌ ಹೇರ್‌ಪಿನ್‌ಗಳು (Designer Hairpins Fashion) ಟ್ರೆಂಡಿಯಾಗಿವೆ. ಸಿಂಪಲ್‌ ಪರ್ಲ್ ಡಿಸೈನ್‌ನಿಂದಿಡಿದು ಸ್ಟೋನ್‌ನಿಂದ ಸಿಂಗಾರಗೊಂಡ ಮಲ್ಟಿ ಡಿಸೈನ್‌ನ ಹೇರ್‌ಪಿನ್‌ಗಳು ಹೇರ್‌ಸ್ಟೈಲ್‌ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಹೆಣ್ಣುಮಕ್ಕಳ ಕೂದಲಿನ ಅಂದವನ್ನು ಹೆಚ್ಚಿಸಿ, ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ ಹೇರ್‌ಪಿನ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ದೊರೆಯುತ್ತಿವೆ. ಆಯಾ ಕೂದಲಿನ ವಿನ್ಯಾಸಕ್ಕೆ ತಕ್ಕಂತೆ ಹುಡುಗಿಯರನ್ನು ಸಿಂಗರಿಸುತ್ತಿವೆ.

Designer Hairpins Fashion

ಡಿಸೈನರ್‌ ಹೇರ್‌ಪಿನ್ಸ್ ಲೋಕ

ಫ್ಯಾನ್ಸಿ ಶಾಪ್‌ಗಳಿಗೆ ಕಾಲಿಟ್ಟರೇ ಸಾಕು, ಊಹೆಗೂ ಮೀರಿದ ಡಿಸೈನ್‌ನ ಗ್ರ್ಯಾಂಡ್‌ ಲುಕ್‌ ನೀಡುವಂತಹ ಹಾಗೂ ಅತಿ ಸುಲಭವಾಗಿ ಇಡೀ ಹೇರ್‌ಸ್ಟೈಲ್‌ ಅಂದಗಾಣಿಸುವಂತಹ ಹೇರ್‌ಪಿನ್ಸ್ ಲಭ್ಯ. ಅವುಗಳಲ್ಲಿ ಕ್ಯಾಶುವಲ್‌ ಲುಕ್‌ ನೀಡುವಂತವು ಹಾಗೂ ಎಥ್ನಿಕ್‌ ಲುಕ್‌ ನೀಡುವಂತವು ಮತ್ತು ಪಾರ್ಟಿವೇರ್‌ ಹೇರ್‌ಪಿನ್ಸ್ ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

Designer Hairpins Fashion

ಬೀಡ್ಸ್ -ಪರ್ಲ್ ಹೇರ್‌ಪಿನ್ಸ್

ಕೃತಕ ಮುತ್ತುಗಳಿಂದ ಸಿಂಗರಿಸಿದ ಹೇರ್‌ಪಿನ್‌ಗಳು ಒಂದು ಲೈನ್‌ನಿಂದಿಡಿದು ನಾಲ್ಕೈದು ಸಾಲಿನಂತಿರುವ ಡಿಸೈನ್‌ನವು ಮಿಕ್ಸ್ ಮ್ಯಾಚ್‌ ಬೀಡ್ಸ್‌ನೊಂದಿಗೆ ಡಿಸೈನ್‌ ಮಾಡಿದವು ಯುವತಿಯರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೇರಿವೆ. ಇವು ಜಡೆ ಹೆಣೆದವರೂ ಕೂಡ ಧರಿಸಬಹುದು. ಫ್ರೀ ಕೂದಲಿನ ಹೇರ್‌ಸ್ಟೈಲ್‌ ಮಾಡುವವರೂ ಧರಿಸಬಹುದು.

Designer Hairpins Fashion

ಡಿಸೈನರ್‌ ಹೇರ್‌ಪಿನ್ಸ್

ಹೂ ಗುಚ್ಛಗಳಂತೆ ಕಾಣುವ ಪುಟ್ಟ ಬಾಚಣಿಗೆಯ ಹಲ್ಲುಗಳ ಮೇಲೆ ಜೋಡಿಸಿದಂತೆ ಕಾಣುವ ಕ್ರಿಸ್ಟಲ್‌, ಬೀಡ್ಸ್, ಪರ್ಲ್‌, ತಂತಿಗಳಿಂದಲೇ ಅಬ್‌ಸ್ಟ್ರಾಕ್ಟ್ ಡಿಸೈನ್‌ ಮಾಡಿರುವ ಹೇರ್‌ ಪಿನ್ಸ್, ಯು ಶೇಪ್‌ ಡಿಸೈನರ್‌ ಹೇರ್‌ಪಿನ್ಸ್ ಸೇರಿದಂತೆ ನಾನಾ ಬಗೆಯವು ಈ ಕೆಟಗರಿಯಲ್ಲಿ ಪ್ರಚಲಿತದಲ್ಲಿವೆ.

ಇದನ್ನೂ ಓದಿ: Printed Handbags F ashion: ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿರುವ ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್ಸ್

ಕೂದಲಿಗೆ ತಕ್ಕಂತೆ ಡಿಸೈನರ್‌ ಹೇರ್‌ಪಿನ್ಸ್ ಆಯ್ಕೆ

· ಸ್ಟ್ರೇಟ್ ಹೇರ್‌ ಇದ್ದವರು ತೀರಾ ಭಾರವಾದ ಡಿಸೈನರ್‌ ಹೇರ್‌ಪಿನ್ಸ್ ಧರಿಸುವುದು ಬೇಡ. ಧರಿಸಿದಾಗ ಜಾರಬಹುದು, ಇಲ್ಲವೇ ಕೂದಲು ಕಿತ್ತು ಬರಬಹುದು.
· ಕೂದಲಿಗೆ ಮೆಸ್ಸಿ ವಿನ್ಯಾಸ ಮಾಡಿದಾಗ ಡಿಸೈನರ್‌ ಹೇರ್‌ಪಿನ್‌ ಧರಿಸಬಹುದು.
· ಲೈಟ್‌ವೈಟ್‌ ಹೇರ್‌ಪಿನ್‌ಗಳ ಆಯ್ಕೆ ಮಾಡುವುದು ಉತ್ತಮ.
· ಕರ್ಲಿ ಹೇರ್‌ ಇರುವಂತವರು ಆದಷ್ಟೂ ಅಬ್‌ಸ್ಟ್ರಾಕ್ಟ್‌ ಡಿಸೈನ್‌, ಅಥವಾ ಸಿಕ್ಕಿಹಾಕಿಕೊಳ್ಳುವಂತಹ ಕಾಂಪ್ಲೀಕೇಟೆಡ್ ಡಿಸೈನ್‌ ಇರುವಂತವನ್ನು ಆವಾಯ್ಡ್ ಮಾಡುವುದು ಉತ್ತಮ.
· ಚಿಕ್ಕ ಕೂದಲಿರುವವರು ಸಿಂಪಲ್‌ ಲೈನ್ಸ್‌ನಲ್ಲಿ ಡಿಸೈನ್‌ ಮಾಡಿರುವ ಹೇರ್‌ಪಿನ್ಸ್ ಧರಿಸಬಹುದು.
· ಧರಿಸುವ
· ಹೇರ್‌ಪಿನ್ಸ್‌ನ ಫಿನಿಶಿಂಗ್‌ ಚೆನ್ನಾಗಿರಬೇಕು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Hina Khan mom weeps as actor cuts her hair
ಬಾಲಿವುಡ್8 mins ago

Hina Khan: ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ `ಹಿನಾ ಖಾನ್’ ತಬ್ಬಿ ಕಣ್ಣೀರಿಟ್ಟ ತಾಯಿ; ಕೂದಲಿಗೆ ಬಿತ್ತು ಕತ್ತರಿ!

Robbery Case
ಕ್ರೈಂ17 mins ago

Robbery Case : ರಾಯಚೂರಿನಲ್ಲಿ ಸ್ವಾಮೀಜಿ ತಲೆಗೆ ಗನ್ ಇಟ್ಟು ದರೋಡೆ!

Jay Shah
ಕ್ರೀಡೆ24 mins ago

Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

hd kumaraswamy
ಪ್ರಮುಖ ಸುದ್ದಿ26 mins ago

HD Kumaraswamy: ಸಿಎಂ ಕುರ್ಚಿ ಮೇಲೆ ಟವಲ್‌ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ

Bigg Boss Telugu 8 Astrologer Venu Swamy A Contestant
ಟಾಲಿವುಡ್39 mins ago

Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

Gold Rate Today
ಚಿನ್ನದ ದರ54 mins ago

Gold Rate Today: ಇಂದು ಏರಿಕೆಯಾಗಿಲ್ಲ ಚಿನ್ನದ ದರ; ಬೆಲೆ ಎಷ್ಟಿದೆ ನೋಡಿ

Physical Abuse
ಬೆಂಗಳೂರು59 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Team India
ಕ್ರಿಕೆಟ್1 hour ago

Team India: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟ ಟೀಮ್​ ಕ್ರಿಕೆಟಿಗರು

ಉದ್ಯೋಗ1 hour ago

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

Actor Darshan SIM Secret Revealed investigation start
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್; ಆಪ್ತರಿಗೆ ತಟ್ಟಿದೆ ವಿಚಾರಣೆ ಬಿಸಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse
ಬೆಂಗಳೂರು59 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು2 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ6 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ19 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ21 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ22 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ1 day ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ1 day ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

ಟ್ರೆಂಡಿಂಗ್‌