ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ - Vistara News

ಆರೋಗ್ಯ

ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

ಘನ ಆಹಾರ ಪ್ರಾರಂಭ ಮಾಡಿದ ತಕ್ಷಣ ಅತ್ಯಂತ ತೆಳುವಾದ ಹದದಲ್ಲಿರುವ ಅಕ್ಕಿ ಗಂಜಿ, ಬೇಳೆ-ತರಕಾರಿಯ ನೀರು ಮುಂತಾದವನ್ನು ಶಿಶುಗಳಿಗೆ ನೀಡಲಾಗುತ್ತದೆ. ಪ್ರಾರಂಭದಲ್ಲಿ ಇದು ಸೂಕ್ತವಾದರೂ, ಕ್ರಮೇಣ ಶಿಶುಗಳ ಆಹಾರದ ಹದವನ್ನು ಮಂದಗೊಳಿಸಿ ಎನ್ನುವುದು ಐಸಿಎಂಆರ್‌ ಸಲಹೆ. ಈ ಕುರಿತ ಉಪಯುಕ್ತ (ICMR guidelines) ಮಾಹಿತಿ ಇಲ್ಲಿದೆ.

VISTARANEWS.COM


on

ICMR Guidelines
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಳೆ ಮಕ್ಕಳಿಗೆ ಆರು ತಿಂಗಳು ತುಂಬುತ್ತಿದ್ದಂತೆ, ಅವುಗಳ ಬೆಳವಣಿಗೆಗೆ ಸೂಕ್ತವಾದ ಆಹಾರವನ್ನು ನೀಡಬೇಕಾಗುತ್ತದೆ. ಅಲ್ಲಿಯವರೆಗೆ ತಾಯಿಯ ಹಾಲು ಮಾತ್ರವೇ ಶಿಶುವಿಗೆ ಸಾಕಾದರೂ, ನಂತರ ತಾಯಿಯ ಹಾಲಿನ ಜೊತೆಗೆ ಹೆಚ್ಚುವರಿ ಆಹಾರಗಳ ಅಗತ್ಯ ಬಂದೇಬರುತ್ತದೆ. 6-12 ತಿಂಗಳವರೆಗೆ ಮತ್ತು ಒಂದು ವರ್ಷದ ನಂತರ ಆಹಾರ ಕ್ರಮವನ್ನು ಬದಲಿಸಬೇಕಾಗುತ್ತದೆ. ಈ ಕುರಿತಾಗಿ ಹಲವಾರು ವಿವರಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಇತ್ತೀಚೆಗೆ ಪ್ರಕಟಿಸಿದೆ. ತಾಯಿ ಹಾಲಿನ ಜೊತೆಗೆ, ಹೊರಗಿನಿಂದ ಆಹಾರ ಪ್ರಾರಂಭ ಮಾಡಿದ ತಕ್ಷಣ ಅತ್ಯಂತ ತೆಳುವಾದ ಹದದಲ್ಲಿರುವ ಅಕ್ಕಿ ಗಂಜಿ, ಬೇಳೆ-ತರಕಾರಿಯ ನೀರು ಮುಂತಾದವನ್ನು ಶಿಶುಗಳಿಗೆ ನೀಡಲಾಗುತ್ತದೆ. “ಪ್ರಾರಂಭದಲ್ಲಿ ಇದು ಸೂಕ್ತವಾದರೂ, ಕ್ರಮೇಣ ಶಿಶುಗಳ ಆಹಾರದ ಹದವನ್ನು ಮಂದಗೊಳಿಸಿ” ಎನ್ನುವುದು ಐಸಿಎಂಆರ್‌ ಸಲಹೆ (ICMR guidelines). ಅಂದರೆ ಬೇಳೆ-ತರಕಾರಿಯ ನೀರಿಗೇ ಶಿಶುಗಳ ಆಹಾರವನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಬದಲಿಗೆ, ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತೆಳುವಾದ ಪೇಸ್ಟ್‌ನಂತೆ ಮಾಡುವುದು, ಬೇಳೆಯ ಮಂದ ಕಟ್ಟು ಉಣಿಸುವುದು ಶಿಶುಗಳಿಗೆ ಹೆಚ್ಚು ಪೂರಕ. ಘನ ಆಹಾರ ನೀಡುವುದಕ್ಕೆ ಪ್ರಾರಂಭಿಸಿದಾಗ ಕೂಸುಗಳು ಉಗಿಯುವುದು, ಕಟವಾಯಲ್ಲಿ ಹರಿಸುವುದು ಸಾಮಾನ್ಯ. ಕಾರಣ ಅವುಗಳಿಗೆ ಘನ ಆಹಾರವನ್ನು ನುಂಗುವುದು ಅಭ್ಯಾಸವಾಗುವುದಕ್ಕೆ ಸಮಯ ಬೇಕು. ನಾಲಿಗೆಯಲ್ಲಿ ಅದನ್ನು ಒಳಗೆ ತಳ್ಳುವ ಪ್ರಯತ್ನದಲ್ಲಿ, ಹೆಚ್ಚಿನ ಆಹಾರವನ್ನು ಅವು ಬಾಯಿಂದ ಹೊರಗೆ ತಳ್ಳುವುದೇ ಹೆಚ್ಚು. ಇದೇ ನೆವದಿಂದ ತೀರಾ ನೀರಾದ ಆಹಾರವನ್ನು ಅವುಗಳಿಗೆ ಉಣಿಸುವ ಅಗತ್ಯವಿಲ್ಲ ಅಥವಾ ಆ ಆಹಾರಗಳನ್ನು ಕೂಸುಗಳು ಇಷ್ಟಪಡುವುದಿಲ್ಲ ಎಂದೂ ಅರ್ಥವಲ್ಲ. ಪ್ರಾರಂಭದಲ್ಲಿ ತೆಳುವಾದ ಹದದಲ್ಲಿ ಇದ್ದರೂ, ಕ್ರಮೇಣ ಇದನ್ನು ಮಂದವಾದ ಹದಕ್ಕೆ (ಇಡ್ಲಿ ಹಿಟ್ಟಿನ ಹದಕ್ಕೆ) ತರುವುದು ಅಗತ್ಯ ಎಂದು ತನ್ನ ವಿವರವಾದ ನಿರ್ದೇಶನಗಳಲ್ಲಿ ಸಂಸ್ಥೆ ಹೇಳಿದೆ.

Mother Feeding Baby⁠

ಪೂರಕ ಆಹಾರಗಳೆಂದರೆ…?

ಇದನ್ನು ಪಾಲಕರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. 6 ತಿಂಗಳವರೆಗಿನ ಬೆಳವಣಿಗೆಗೆ ತಾಯಿಯ ಹಾಲು ಸಾಕಾಗುತ್ತದೆ. ಇದರಿಂದ ದಿನಕ್ಕೆ ಅಂದಾಜು 5 ಗ್ರಾಂ ಪ್ರೊಟೀನ್‌ ಮತ್ತು 500 ಕ್ಯಾಲರಿ ಶಕ್ತಿ ಮಗುವಿಗೆ ದೊರೆಯುತ್ತದೆ. 6 ತಿಂಗಳ ನಂತರ, ತನ್ನ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳುವ ಮಗುವಿಗೆ ಈ ಪ್ರಮಾಣ ಸಾಕಾಗುವುದಿಲ್ಲ. ದಿನಕ್ಕೆ 9-10 ಗ್ರಾಂ ಪ್ರೊಟೀನ್‌ ಮತ್ತು650ರಿಂದ720 ಕ್ಯಾಲರಿಗಳವರೆಗೆ ಶಕ್ತಿ ಬೇಕಾಗುತ್ತದೆ. ಈ ಕೊರತೆಯನ್ನು ತುಂಬುವುದಕ್ಕೆ ಪೂರಕವಾದ ಘನ ಆಹಾರಗಳನ್ನು ಮಗುವಿಗೆ ನೀಡಬೇಕಾಗುತ್ತದೆ.

ಏನು ಕೊಡಬೇಕು?

ಈ ದಿನಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಅಗತ್ಯ ಶಿಶುಗಳಿಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಧಾನ್ಯಗಳ ಜೊತೆಗೆ ಎಣ್ಣೆ ಬೀಜಗಳು, ಹಾಲು, ತರಕಾರಿಗಳು ಮತ್ತು ಹಣ್ಣುಗಳನ್ನು ನೀಡಬೇಕು. ಮಾತ್ರವಲ್ಲ, ತರಹೇವಾರಿ ಬೇಳೆಗಳು, ನಾನಾ ರೀತಿಯ ಕಾಳುಗಳೆಲ್ಲ ಪುಟ್ಟ ಮಕ್ಕಳ ಪ್ರೊಟೀನ್‌ ಅಗತ್ಯವನ್ನು ಪೂರೈಸುತ್ತವೆ. ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಅಷ್ಟಷ್ಟಾಗಿ ಅಭ್ಯಾಸ ಮಾಡಿಸಬಹುದು.
ಬೇಯಿಸಿದ ಕ್ಯಾರೆಟ್‌, ಕುಂಬಳಕಾಯಿ, ಪಾಲಕ್‌, ಗೆಣಸು ಮುಂತಾದ ಸೊಪ್ಪು-ತರಕಾರಿಗಳ ಪೇಸ್ಟ್‌ ಮಕ್ಕಳಿಗೆ ಉಣಿಸಬಹುದು. ಸೇಬುಹಣ್ಣನ್ನೂ ಇದೇ ರೀತಿಯಲ್ಲಿ ನೀಡಬಹುದು. ಮೊದಲಿಗೆ ತರಕಾರಿ, ಹಣ್ಣುಗಳನ್ನು ಒಂದೊಂದಾಗಿ ನೀಡಿ, ಅದರಿಂದ ಶಿಶುಗಳ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದು ಖಾತ್ರಿಯಾದ ಮೇಲೆ, ಮಿಶ್ರ ತರಕಾರಿ ಮತ್ತು ಬೇಳೆಗಳನ್ನು ಉಣಿಸಬಹುದು. ಒಂದು ವರ್ಷದ ನಂತರ ಮೃದುವಾಗಿ ಬೇಯಿಸಿದ ಧಾನ್ಯದ ಉಪ್ಪಿಟ್ಟುಗಳು, ಬೇಳೆ ಹಾಕಿದ ಕಿಚಡಿಗಳು, ಬೇಯಿಸಿದ ಮೊಟ್ಟೆ, ಮೀನುಗಳನ್ನು ರೂಢಿಸಬಹುದು.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಯಾವುದು ಬೇಡ?

ಪುಟ್ಟ ಮಕ್ಕಳು ಉಪ್ಪಾದ ಚಿಪ್ಸ್‌, ಸಿಹಿ ಕ್ಯಾಂಡಿಗಳೆಲ್ಲ ಇಷ್ಟಪಟ್ಟು ನೆಕ್ಕುತ್ತವೆ. ಆದರೆ ಅವುಗಳನ್ನು ನೀಡುವುದು ಸಲ್ಲದು. ಆಹಾರಕ್ಕೆ ಸಕ್ಕರೆಯಂಥ ಕೃತಕ ಸಿಹಿಗಳು, ಫ್ರೂಟ್‌ ಜ್ಯೂಸ್‌ಗಳನ್ನು ಮಿಶ್ರ ಮಾಡುವುದಕ್ಕೂ ಐಸಿಎಂಆರ್‌ಗೆ ಸಹಮತವಿಲ್ಲ. ಬದಲಿಗೆ ನೈಸರ್ಗಿಕವಾದ ಹಣ್ಣುಗಳನ್ನೇ ಸೀರಿಯಲ್‌ಗೆ ಮಿಶ್ರ ಮಾಡುವುದು ಆರೋಗ್ಯಕರ. ಪೂರಕ ಆಹಾರಗಳಿಗೆ ಉಪ್ಪು-ಸಿಹಿಗಳನ್ನೆಲ್ಲಾ ಸೇರಿಸಿಯೇ ತಿನ್ನಿಸುವ ಅಭ್ಯಾಸ ಸರಿಯಲ್ಲ ಎಂದು ನಿರ್ದೇಶನದಲ್ಲಿ ಹೇಳಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

How to spot fake ghee: ನಾವು ಖರೀದಿಸಿದ ತುಪ್ಪ ಶುದ್ಧವೋ ಕಲಬೆರಕೆಯೋ ಪರೀಕ್ಷಿಸುವುದು ಹೇಗೆ?

How to spot fake ghee: ನಮ್ಮ ಭಾರತೀಯ ಶೈಲಿಯ ಕೆಲ ಅಡುಗೆಗಳಿಗೆ ತುಪ್ಪ ಹಾಕಿದರೆ ಅದರ ರುಚಿ, ಘಮ ಎಲ್ಲವೂ ಸ್ವರ್ಗಸದೃಶ. ಅನ್ನ, ದೋಸೆ, ಪರಾಠಾ, ಚಪಾತಿ ಸೇರಿದಂತೆ ನಿತ್ಯವೂ ತುಪ್ಪ ಹಾಕಿ ಉಣ್ಣುತ್ತೇವೆ. ದೇಸೀ ದನದ ತುಪ್ಪದ ಹಿತಮಿತ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ನಮ್ಮ ಹಿರಿಯರು ತಲೆತಲಾಂತರ ವರ್ಷಗಳಿಂದ ತುಪ್ಪದ ಬಹುಪಯೋಗಗಳ ಅರಿವನ್ನು ನಮಗೆ ದಾಟಿಸುತ್ತಲೇ ಬಂದಿದ್ದಾರೆ. ಆದರೆ ಇಂಥ ಅಮೂಲ್ಯ ತುಪ್ಪ ಕಲಬೆರಕೆ ಆಗುತ್ತಿದೆ. ಇದನ್ನು ಪತ್ತೆ ಹಚ್ಚುವುದು ಹೇಗೆ?

VISTARANEWS.COM


on

Ghee benefits
Koo

ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಅದು ಅಡುಗೆ ಮನೆಯೊಳಗಿನ ಚಿನ್ನವೂ ಹೌದು. ನಮ್ಮ ಭಾರತೀಯ ಶೈಲಿಯ ಕೆಲ ಅಡುಗೆಗಳಿಗೆ ತುಪ್ಪ ಹಾಕಿದರೆ ಅದರ ರುಚಿ, ಘಮ ಎಲ್ಲವೂ ಸ್ವರ್ಗಸದೃಶ. ಅನ್ನ, ದೋಸೆ, ಪರಾಠಾ, ಚಪಾತಿ ಸೇರಿದಂತೆ ನಿತ್ಯವೂ ತುಪ್ಪ ಹಾಕಿ ಉಣ್ಣುತ್ತೇವೆ. ದೇಸೀ ದನದ ತುಪ್ಪದ ಹಿತಮಿತ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ನಮ್ಮ ಹಿರಿಯರು ತಲೆತಲಾಂತರ ವರ್ಷಗಳಿಂದ ತುಪ್ಪದ ಬಹುಪಯೋಗಗಳ ಅರಿವನ್ನು ನಮಗೆ ದಾಟಿಸುತ್ತಲೇ ಬಂದಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ತುಪ್ಪದ ಬಗೆಗೆ ಮತ್ತೆ ಜನರಲ್ಲಿ ಅರಿವು ಮೂಡಿ ಮತ್ತೆ ತುಪ್ಪ ಸೇವನೆಯತ್ತ ಹಲವರು ಮುಖ ಮಾಡಿ ಅದರ ಲಾಭಗಳನ್ನು ಪಡೆಯುತ್ತಿದ್ದಾರೆ ಕೂಡಾ. ಆದರೆ, ಮನೆಗಳಲ್ಲಿ ತುಪ್ಪ ಮಾಡುವ ಪ್ರವೃತ್ತಿ ಅತ್ಯಂತ ಕಡಿಮೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ತುಪ್ಪವನ್ನು ಕೊಂಡು ತರುವುದು ಸಾಮಾನ್ಯ. ಆದರೆ, ಶುದ್ಧ ತುಪ್ಪ ಎಂದುಕೊಂಡು ನಾವು ಕೊಂಡು ತಂದು ಬಳಸುವ ತುಪ್ಪದಲ್ಲಿ ಕಲಬೆರಕೆಯೂ ಇರಬಹುದು ಎಂಬ ಸತ್ಯವನ್ನು ನಾವು ಅರಗಿಸಿಕೊಳ್ಳಲೇ ಬೇಕಾಗಿದೆ. ಯಾಕೆಂದರೆ ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಸುಮಾರು 14 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಮೂರು ಸಾವಿರ ಲೀಟರ್‌ಗಳಷ್ಟು ತುಪ್ಪದಲ್ಲಿ ಕಲಬೆರಕೆಯಾಗಿರುವುದನ್ನು ಪತ್ತೆ ಹಚ್ಚಿರುವ ಎಫ್‌ಡಿಸಿಎ ಅವುಗಳನ್ನು ವಶಪಡಿಸಿಕೊಂಡಿದೆ. ಇದು ನಮಗೆ ಎಚ್ಚರಿಕೆಯ ಕರೆಗಂಟೆಯೂ ಆಗಿದೆ. ನಾವು ಮಾರುಕಟ್ಟೆಯಿಂದ ಕೊಂಡು ತರುವ ತುಪ್ಪದ ಮೇಲೆ ಎಷ್ಟೇ ನಂಬಿಕೆಯಿದ್ದರೂ, ನಮ್ಮ ನಂಬಿಕೆಯನ್ನೊಮ್ಮೆ ನಾವು ಪರೀಕ್ಷಿಸಿ ದೃಢಪಡಿಸಿಕೊಂಡರೆ ತಪ್ಪಿಲ್ಲ. ಬನ್ನಿ ತುಪ್ಪ ಪರಿಶುದ್ಧವಾಗಿದೆಯೋ (How to spot fake ghee), ಕಲಬೆರಕೆಯದ್ದೋ ಎಂದು ಹೇಗೆಲ್ಲ ಪರೀಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

Rich in antioxidants ghee is anti-inflammatory Ghee Benefits

ನೀರಿನ ಮೂಲಕ ಪರೀಕ್ಷೆ

ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಗಟ್ಟಿಯಾದ ತುಪ್ಪವನ್ನು ಹಾಕಿ. ಅದು ತೇಲಿದರೆ ನಿಮ್ಮ ತುಪ್ಪ ಪರಿಶುದ್ಧವಾಗಿದೆ ಎಂದು ಅರ್ಥ.

ಕುದಿಸುವ ಪರೀಕ್ಷೆ

ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಾಗಾದಾಗ ಪ್ರತ್ಯೇಕವಾದ ಪದರವೊಂದು ತುಪ್ಪದ ಮೇಲ್ಮೈ ಮೇಲೆ ಸಂಗ್ರಹವಾಯಿತೆಂದರೆ, ಆ ತುಪ್ಪದಲ್ಲಿ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಕೆಲ ಅಗ್ಗದ ಎಣ್ಣೆಗಳನ್ನು ತುಪ್ಪದ ಜೊತೆ ಕಲಬೆರಕೆ ಮಾಡಿರಲೂಬಹುದು ಎಂದರ್ಥ.

Ghee is rich in antioxidants Ghee Health Benefits

ಅಯೋಡಿನ್‌ ಪರೀಕ್ಷೆ

ಸ್ವಲ್ಪ ಅಯೋಡಿನ್‌ ಅನ್ನು ಮಾರುಕಟ್ಟೆಯಿಂದ ಕೊಂಡು ತನ್ನಿ. ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಮೂರ್ನಾಲ್ಕು ಬಿಂದುಗಳಷ್ಟು ಅಯೋಡಿನ್‌ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಿಮ್ಮ ತುಪ್ಪ ಪರಿಶುದ್ಧವಾಗಿದ್ದರೆ ಅದು ಬಣ್ಣ ಬದಲಾಯಿಸದು. ನಿಮ್ಮ ತುಪ್ಪಕ್ಕೆ ಸ್ಟಾರ್ಚ್‌ ಅಥವಾ ಗಂಜಿಯ ಕಲಬೆರಕೆ ಮಾಡಿದ್ದರೆ ನಿಮ್ಮ ತುಪ್ಪ ಅಯೋಡಿನ್‌ ಜೊತೆ ಸೇರಿದ ತಕ್ಷಣ ನೀಲಿ ಬಣ್ಣಕ್ಕೆ ತಿರುಗಬಹುದು.

ಅಂಗೈ ಪರೀಕ್ಷೆ

ಸ್ವಲ್ಪ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಳ್ಳಿ. ನಿಮ್ಮ ತುಪ್ಪ ಶುದ್ಧವಾಗಿದ್ದರೆ ಅದು ನಿಧಾನವಾಗಿ ಕರಗಿ ಹರಿಯಲು ಶುರು ಮಾಡುತ್ತದೆ. ನಿಮ್ಮ ತುಪ್ಪ ಕಲಬೆರಕೆಯದಾಗಿದ್ದರೆ, ಅದು ಗಟ್ಟಿಯಾಗಿ ಅಲುಗಾಡದೆ ಕೈಯಲ್ಲಿ ಹಾಗೆಯೇ ಇರುತ್ತದೆ. ಅತೀವ ಚಳಿ ಪ್ರದೇಶಗಳಲ್ಲಿ ಈ ಪರೀಕ್ಷೆ ಅನ್ವಯಿಸದು.

ಇದನ್ನೂ ಓದಿ: Superfoods: ಮಾರುಕಟ್ಟೆಯಲ್ಲಿ ಸೂಪರ್‌ಫುಡ್‌ಗಳೆನ್ನುವ ಈ ಆಹಾರಗಳು ನಿಜಕ್ಕೂ ಸೂಪರ್‌ಫುಡ್‌ಗಳೇ?

ಎಚ್‌ಸಿಎಲ್‌ ಪರೀಕ್ಷೆ

ಒಂದು ಟೆಸ್ಟ್‌ ಟ್ಯೂಬ್‌ ತೆಗದುಕೊಂಡು ಅದರಲ್ಲಿ ಸ್ವಲ್ಪ ತುಪ್ಪ ತೆಗೆದುಕೊಳ್ಳಿ. ನಂತರ ಅದಕ್ಕೆ ಕೆಲ ಬಿಂದುಗಳಷ್ಟು ಹೈಡ್ರೋಕ್ಲೋರಿಕ್‌ ಆಸಿಡ್‌ ಸೇರಿಸಿ ಕುಲುಕಿ. ಆಗ ನಿಮ್ಮದು ಶುದ್ಧ ತುಪ್ಪವಾಗಿದ್ದರೆ ಅದರ ಬಣ್ಣ ಬದಲಾಗದೆ ಹಾಗೆಯೇ ಇರುತ್ತದೆ. ಕಲಬೆರಕೆಯ ತುಪ್ಪವಾಗಿದ್ದರೆ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.

Continue Reading

ಬೆಂಗಳೂರು

Dengue Scare: ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಡೆಂಗ್ಯೂ; ನೂರಾರು ಮಂದಿ ಆಸ್ಪತ್ರೆಗೆ ದಾಖಲು

ಬೆಂಗಳೂರಿನಲ್ಲಿ ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ (Dengue Scare) ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ಡೆಂಗ್ಯೂ ಪೀಡಿತರ ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

VISTARANEWS.COM


on

By

Dengue Scare
Koo

ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು (Dengue Scare) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ (silicon city) ಬೆಂಗಳೂರಿನಲ್ಲಿ (bengaluru) ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಅನೇಕರು ಸೊಳ್ಳೆ ಬ್ಯಾಟ್‌ಗಳನ್ನು (Mosquito Bats) ಖರೀದಿಸುತ್ತಿದ್ದು, ಮನೆ ಸುತ್ತಮುತ್ತ ಸೊಳ್ಳೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸುತ್ತಿರುವುದು ಕಂಡು ಬರುತ್ತಿದೆ. ಈ ನಡುವೆ, ಡೆಂಗ್ಯೂ ಪೀಡಿತರಾಗಿ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಡೆಂಗ್ಯೂವಿನಿಂದಾಗಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸಿಲಿಕಾನ್ ಸಿಟಿಯು ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯಾದ್ಯಂತ ಒಟ್ಟು ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮನೆಯಲ್ಲಿ ಹೆಚ್ಚುವರಿ ಸೊಳ್ಳೆ ಬ್ಯಾಟ್‌ಗಳನ್ನು ಖರೀದಿಸುವ ಅವಶ್ಯಕತೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ಗಿಡಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಬಾವಲಿಗಳು ಹೆಚ್ಚುತ್ತಿದೆ. ಜೂನ್‌ನಲ್ಲಿ ಭಾರೀ ಮಳೆಯು ಸೊಳ್ಳೆಗಳಿಗೆ ಸೂಕ್ತವಾದ ಸಂತಾನೋತ್ಪತ್ತಿಯ ಸ್ಥಳವನ್ನು ಸೃಷ್ಟಿಸಿದ ಅನಂತರ ಬಾವಲಿಗಳೂ ಹೆಚ್ಚಾಗಿವೆ.


ಬೆಂಗಳೂರಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಗಳು

ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಸಭೆಯಲ್ಲಿ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹರಡುವ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನಹರಿಸಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲೀಕರಿಗೆ ಗರಿಷ್ಠ 50೦ ರೂಪಾಯಿ ದಂಡ ವಿಧಿಸುವಂತೆ ಆರೋಗ್ಯ ಸಚಿವರು ಸೂಚಿಸಿದ್ದಾರೆ.

ಇದನ್ನೂ ಓದಿ: Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

ಇದಲ್ಲದೆ, ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವುದನ್ನು ತಡೆಯಲು ಲಾರ್ವಾ ಪರೀಕ್ಷೆ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಬಿಎಂಪಿಯಿಂದ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದಟ್ಟ ಜನಸಂಖ್ಯೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 25 ಲಕ್ಷ ನಗರ ಬಡವರನ್ನು ಸಮೀಕ್ಷೆಗಾಗಿ ಎಲ್ಲಾ ಬಿಬಿಎಂಪಿ ವಲಯಗಳಲ್ಲಿ ಗುರುತಿಸಲಾಗಿದೆ. ಅಲ್ಲಿ ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತರು, ಎಎನ್‌ಎಂಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂಸೇವಕರು ಇರಲಿದ್ದಾರೆ. ತಲಾ 1,000 ಮನೆಗಳನ್ನು ಒಳಗೊಂಡ ಬ್ಲಾಕ್ ರಚಿಸಲು ನಿರ್ದೇಶನ ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 12-14 ಲಕ್ಷ ಮನೆಗಳನ್ನು ಆವರಿಸುವ ಗುರಿ ಹೊಂದಲಾಗಿದೆ.

Continue Reading

ಆರೋಗ್ಯ

Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

Foods for Hormone Balance: ಮಹಿಳೆಯ ಶಕ್ತಿ, ಲೈಂಗಿಕ ಆರೋಗ್ಯ, ಸಂತಾನೋತ್ಪತ್ತಿ ಕ್ರಿಯೆ, ಮೂಡು, ತೂಕ, ಮಾಸಿಕ ಚಕ್ರವೂ ಸೇರಿದಂತೆ ಪ್ರತಿಯೊಂದು ಆಕೆಯ ಹಾರ್ಮೋನಿನ ಆರೋಗ್ಯದ ಮೇಲೆ ನಿರ್ಧರಿತವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಮಹಿಳೆಯನ್ನು ಬಾಧಿಸುವ ಸಮಸ್ಯೆಯೇ ಇದು. ಮನೆಯವರ ಕಷ್ಟಸುಖಗಳು, ಹೊರಗೆ ದುಡಿದು ಬಂದು ಮನೆಯನ್ನು ಸಂಭಾಳಿಸುವ ಆಧುನಿಕ ಮಹಿಳೆ ಬಹಳಷ್ಟು ಸಾರಿ ತನ್ನ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾಳೆ. ಪರಿಣಾಮವಾಗಿ ಇಂತಹ ಸಮಸ್ಯೆಗಳು ಆಕೆಯನ್ನು ಬೆಂಬಿಡದೆ ಕಾಡುತ್ತವೆ. ಹಾಗಾದರೆ ಸರಿಯಾದ ಆಹಾರಕ್ರಮ ಪಾಲಿಸುವುದು ಹೇಗೆ?

VISTARANEWS.COM


on

Foods For Hormone Balance
Koo

ಮಹಿಳೆಯರ ಆರೋಗ್ಯದಲ್ಲಿ ಹಾರ್ಮೋನಿನ (Foods for Hormone Balance) ಆರೋಗ್ಯಕ್ಕೆ ಬಹಳ ಮುಖ್ಯವಾದ ಸ್ಥಾನವಿದೆ. ಆಕೆಯ ಹಾರ್ಮೋನುಗಳು ಸಮತೋಲನದಲ್ಲಿದ್ದರೆ ಆಕೆ ಆರೋಗ್ಯವಾಗಿದ್ದಾಳೆ ಎಂದರ್ಥ. ಆಕೆಯ ಶಕ್ತಿ, ಲೈಂಗಿಕ ಆರೋಗ್ಯ, ಸಂತಾನೋತ್ಪತ್ತಿ ಕ್ರಿಯೆ, ಮೂಡು, ತೂಕ, ಮಾಸಿಕ ಚಕ್ರವೂ ಸೇರಿದಂತೆ ಪ್ರತಿಯೊಂದು ಆಕೆಯ ಹಾರ್ಮೋನಿನ ಆರೋಗ್ಯದ ಮೇಲೆ ನಿರ್ಧರಿತವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಮಹಿಳೆಯನ್ನು ಬಾಧಿಸುವ ಸಮಸ್ಯೆಯೇ ಇದು. ಮನೆಯವರ ಕಷ್ಟಸುಖಗಳು, ಹೊರಗೆ ದುಡಿದು ಬಂದು ಮನೆಯನ್ನು ಸಂಭಾಳಿಸುವ ಆಧುನಿಕ ಮಹಿಳೆ ಬಹಳಷ್ಟು ಸಾರಿ ತನ್ನ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾಳೆ. ಪರಿಣಾಮವಾಗಿ ಇಂತಹ ಸಮಸ್ಯೆಗಳು ಆಕೆಯನ್ನು ಬೆಂಬಿಡದೆ ಕಾಡುತ್ತವೆ. ಆಹಾರಕ್ರಮದಲ್ಲಿ ಕೊಂಚ ವ್ಯತ್ಯಾಸ, ಆರೋಗ್ಯಕರ ಜೀವನ ಪದ್ಧತಿ ಹಾಗೂ ಸ್ವಂತ ಕಾಳಜಿ, ಮಾಡಿದರೆ, ಈ ಸಮಸ್ಯೆಗಳು ಬರದಂತೆ ತಡೆಯಬಹುದು. ಮೆನೋಪಾಸ್‌ ಎಂಬ ಸಂದಿಗ್ಧದ ಹೊತ್ತಿನಲ್ಲಿ ಆಕೆ ಆರೋಗ್ಯಕರವಾಗಿ ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬಹುದು. ಬನ್ನಿ, ಹಾರ್ಮೋನಿನ ಸಮಸ್ಯೆ ಎದುರಿಸುವ ಪ್ರತಿ ಮಹಿಳೆಯೂ ಯಾವೆಲ್ಲ ಸೂಪರ್‌ಫುಡ್‌ಗಳನ್ನು ತನ್ನ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊಂಡು ಲಾಭ ಪಡೆಯಬಹುದು ಎಂಬುದನ್ನು ನೋಡೋಣ.

Flax Seeds with Pottery

ಅಗಸೆ ಬೀಜ

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ನಲ್ಲಿ ಲಿಗ್ನನ್‌ ಹೇರಳವಾಗಿದ್ದು, ಇವು ಫೈಟೀ ಎಸ್ಟ್ರೋಜೆನ್‌ಗಳಾಗಿದ್ದು ಇವು ಇಸ್ಟ್ರೋಜೆನ್‌ ಮಟ್ಟದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳೂ ಹೇರಳವಾಗಿದ್ದು, ಹಾರ್ಮೋನಿನ ಆರೋಗ್ಖಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶವಾಗಿದೆ. ಹಾಗಾಗಿ ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ಕ್ರಶ್‌ ಮಾಡಿ, ಬಳಕೆ ಮಾಡುವ ಮೂಲಕ ಲಾಭ ಪಡೆಯಬಹುದು.

Fatty Fish Joint Pain Relief Foods

ಸಾಲ್ಮನ್‌

ಸಾಲ್ಮನ್‌ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ ಹೇರಳವಾಗಿದ್ದು, ದೇಹದ ಉರಿಯೂತವನ್ನು ಕಡಿಮೆ ಮಾಡುವ ಅತ್ಯಂತ ಅಗತ್ಯವಾದ ಹಾರ್ಮೋನಿನ ಉತ್ಪಾದನೆಗೆ ಪ್ರಚೋದಿಸುತ್ತದೆ. ದೇಹದ ಜೀವಕೋಶಗಳ ಪದರಗಳ ಆರೋಗ್ಯಕ್ಕೂ ಈ ಪೋಷಕಾಂಶ ಬೇಕು. ಯಾಕೆಂದರೆ, ತಿಂದ ಆಹಾರದ ಪೋಷಕಾಂಶಗಳು ಜೀವಕೋಶಗಳಿಗೆ ತಲುಪಬೇಕಿದ್ದರೆ ಅವುಗಳ ಪದರದ ಮೂಲಕ ಪ್ರವೇಶ ಸಲಭವಾಗಬೇಕು. ಈ ಎಲ್ಲ ಕಾರಣಗಳಿಗೆ ಒಮೆಗಾ 3 ಫ್ಯಾಟಿ ಆಸಿಡ್‌ ಬಹಳ ಮುಖ್ಯ. ಅದು ಸಾಲ್ಮನ್‌ನಲ್ಲಿದೆ.

Avocado Anti Ageing Fruits Avocados contain healthy monounsaturated fats and vitamin E, which are beneficial for skin health and preventing oxidative damage.

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ ಕೊಬ್ಬಿದೆ. ಪೊಟಾಶಿಯಂ, ನಾರಿನಂಶ, ಮೆಗ್ನೀಶಿಯಂ ಸೇರಿದಂತೆ ಎಲ್ಲ ಪೋಷಕಾಂಶಗಳೂ ಇದರಲ್ಲಿ ಇರುವುದರಿಂದ ಹಾರ್ಮೋನಿನ ಆರೋಗ್ಯಕ್ಕೆ ಇದು ಒಳ್ಳೆಯದು.

Green leafy vegetables like celery and spinach are high in sodium and cause blood clots Foods To Avoid For Blood Pressure

ಹಸಿರು ಸೊಪ್ಪು ತರಕಾರಿ

ಮಹಿಳೆಯರು ಹಸಿರು ಸೊಪ್ಪು ತರಕಾರಿಗಳ ಸೇವನೆ ಹೆಚ್ಚು ಮಾಡಬೇಕು. ಇದರಲ್ಲಿ ಮೆಗ್ನೀಶಿಯಂ ಅಧಿಕವಾಗಿರುತ್ತವೆ. ಮೆಗ್ನೀಶಿಯಂ ಕಾರ್ಟಿಸಾಲ್‌ ಮಟ್ಟವನ್ನು ಸಮತೋಲಗೊಳಿಸಲು ನೆರವಾಗುತ್ತದೆ. ಹಾಗೆಯೇ ಇವುಗಳಲ್ಲಿರುವ ವಿಟಮಿನ್‌ ಬಿ6, ಪ್ರೊಜೆಸ್ಟೆರಾನ್‌ ಉತ್ಪಾದನೆಯನ್ನೂ ಪ್ರೋತ್ಸಾಹಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ಹಾರ್ಮೋನಿನ ಮಟ್ಟವನ್ನು ಸಮತೋಲನಗೊಳಿಸಲು ಇಂತಹ ಆಹಾರ ಮಹಿಳೆಗೆ ಮುಖ್ಯ.

Sweet potatoes have the ability to control diabetes and prevent cancer

ಸಿಹಿಗೆಣಸು

ಸಿಹಿ ಗೆಣಸಿನಲ್ಲಿ ಹೆಚ್ಚು ಬೀಟಾ ಕೆರಟಿನ್‌ ಇದ್ದು ಇದು ಹಾರ್ಮೋನಿನ ಉತ್ಪಾದನೆಗೆ ಬಹಳ ಒಳ್ಳೆಯದು. ಇದರಲ್ಲಿ ನಾರಿನಂಶವೂ ಹೇರಳವಾಗಿದೆ. ದೇಹದ ರಕ್ತದ ಮಟ್ಟವನ್ನು ಸಮತೋಲನಗೊಳಿಸಲೂ ಇದು ನೆರವಾಗುತ್ತದೆ.

Raw Turmeric with Powder Cutout

ಅರಿಶಿನ

ಕರ್ಕ್ಯುಮಿನ್‌ ಎಂಬ ಆಂಟಿ ಇನ್‌ಫ್ಲಮೇಟರಿ ಅಂಶಗಳನ್ನು ಹೊಂದಿರುವ ಅರಿಶಿನ ಮಹಿಳೆಯ ಹಾರ್ಮೋನಿನ ಸಮತೋಲನಕ್ಕೂ ಬಹಳ ಮುಖ್ಯ. ಪಿತ್ತಕೋಶದ ಆರೋಗ್ಯಕ್ಕೆ, ಹಾರ್ಮೋನ್‌ ಡಿಟಾಕ್ಸಿಫಿಕೇಶನ್‌ಗೆ ಇದು ಒಳ್ಳೆಯದು.

Dry Seeds

ಒಣಬೀಜಗಳು

ಬಾದಾಮಿ, ವಾಲ್ನಟ್‌, ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು ಸೇರಿದಂತೆ ಒಣ ಬೀಜಗಳಲ್ಲಿ ಫ್ಯಾಟಿ ಆಸಿಡ್‌ಗಳು, ವಿಟಮಿನ್‌ಗಳು, ಪ್ರೊಟೀನ್‌ ಹಾಗೂ ಖನಿಜಾಂಶಗಳು ಹೇರಳವಾಗಿರುತ್ತವೆ. ಇವು ಮಹಿಳೆಯ ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಮುಖ್ಯ.

homemade curd in a clay pot Stomach Bloating Relief

ಮೊಸರು

ಪ್ರೊಬಯಾಟಿಕ್‌ ಗುಣಗಳಿರುವ ಆಹಾರಗಳೂ ಮಹಿಳೆಗೆ ಮುಖ್ಯ. ಮೊಸರಿನಲ್ಲಿ ಈ ಗುಣವಿದ್ದು ಇದು ಹಾರ್ಮೋನಿನ ಆರೋಗ್ಯಕ್ಕೆ ಬಹಳ ಮುಖ್ಯ. ಮಹಿಳೆಗೆ ವಯಸ್ಸಾದಂತೆ ಕ್ಯಾಲ್ಶಿಯಂ ಅಗತ್ಯ ಹೆಚ್ಚು. ಈ ಕ್ಯಾಲ್ಶಿಯಂ ಇದರಲ್ಲಿ ದೊರೆಯುವ ಕಾರಣ, ಮೊಸರು ಸೇರಿದಂತೆ ಕ್ಯಾಲ್ಶಿಯಂ ಹೆಚ್ಚಿರುವ ಆಹಾರಗಳನ್ನು ಆಕೆ ನಿತ್ಯಾಹಾರದಲ್ಲಿ ಬಳಸಬೇಕು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

Continue Reading

ಕಲಬುರಗಿ

Kalaburagi News : ಆಕ್ಸಿಜನ್ ಸೋರಿಕೆ! ತಾಲೂಕು ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು

Kalaburagi News : ತಾಲೂಕು ಆಸ್ಪತ್ರೆ ಆವರಣದಲ್ಲಿದ್ದ ಘಟಕದಿಂದ ಆಕ್ಸಿಜನ್‌ ಸೋರಿಕೆ ಆಗಿತ್ತು. ಈ ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಹೊರಗೆ ಓಡಿ ಬಂದಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿದ್ದರು.

VISTARANEWS.COM


on

By

kalaburagi news
Koo

ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi News) ಚಿಂಚೊಳ್ಳಿ‌ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ (Oxygen leakage) ಆಗಿದೆ ಎಂಬ ಸುದ್ದಿ ಕೇಳಿ ರೋಗಿಗಳು ಶಾಕ್‌ ಆಗಿದ್ದರು. ಆಸ್ಪತ್ರೆ ಹಿಂಭಾಗದಲ್ಲಿದ್ದ ಆಕ್ಸಿಜನ್ ಘಟಕದಿಂದ ಸೋರಿಕೆಯಾಗಿ ಅರ್ಧ ಕಿಮೀ ವ್ಯಾಪ್ತಿವರೆಗೂ ವಾಸನೆ ಮೂಗಿಗೆ ಬಡಿದಿತ್ತು.

ನೋಡನೋಡುತ್ತಿದ್ದ ಒಬ್ಬರಿಂದ ಒಬ್ಬರಿಗೆ ಆಕ್ಸಿಜನ್‌ ಸೋರಿಕೆ ಸುದ್ದಿ ಹರಿದಾಡಿದೆ. ಬಳಿಕ ಆಸ್ಪತ್ರೆಯೊಳಗೆ ಇದ್ದ ಸಿಬ್ಬಂದಿ, ರೋಗಿಗಳು ಭಯಭೀತರಾಗಿ ಹೊರಗೆ ಓಡಿ ಬಂದು ಆವರಣದೊಳಗೆ ಬಂದು ಕುಳಿತುಕೊಳ್ಳುವಂತಾಯಿತು. ಇತ್ತ ಆಕ್ಸಿಜನ್‌ ಟ್ಯಾಂಕ್‌ ಸ್ಫೋಟಗೊಂಡಿದೆ ಎಂಬ ಸುದ್ದಿಯಿಂದಾಗಿ ವೈದ್ಯರು ಮತ್ತು ಸಿಬ್ಬಂದಿ ತಗ್ಗಿದ ವಸತಿಗೃಹಗಳನ್ನು ಖಾಲಿ ಮಾಡಿದ್ದವು.

kalaburagi News

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿಂಚೊಳ್ಳಿ ಪೊಲೀಸರು ದೌಡಾಯಿಸಿದ್ದರು. ಪರಿಶೀಲನೆ ನಡೆಸಿದಾಗ ಆಕ್ಸಿಜನ್‌ ಟ್ಯಾಂಕ್ ತುಂಬಿದ್ದರಿಂದ ಅದರ ಒತ್ತಡವನ್ನು ಹೊರಹಾಕಿದೆ ಎಂದು ಗೊತ್ತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಲಬುರಗಿ ಡಿ.ಎಚ್.ಓ ಡಾ.ರತಿಕಾಂತ್ ಸ್ವಾಮಿ, ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂಬುದು ಸುಳ್ಳು ಸುದ್ದಿ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಆಕ್ಸಿಜನ್‌ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಆಗಿದೆ. ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ಆಮ್ಲಜನಕ ಭರ್ತಿ ಮಾಡಿದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಎ, ಬಿ, ಸಿ ಎಂಬ ಸುರಕ್ಷತೆಯ ವಾಲ್‌ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಹೀಗಾಗಿ ಸಾರ್ವಜನಿಕರು ಯಾರು ಆತಂಕ ಪಡಬೇಕಾಗಿಲ್ಲಾ ಎಂದರು.

ಇದನ್ನೂ ಓದಿ: Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!

ಐದು ಅಂತಸ್ತಿನ ಕಟ್ಟಡ ಧರಾಶಾಹಿ- ಏಳು ಜನ ದಾರುಣ ಸಾವು

ಅಹ್ಮದಾಬಾದ್‌: ಗೇಮಿಂಗ್‌ ಜೋನ್‌(Gaming zone)ನಲ್ಲಿ ಭಾರೀ ಬೆಂಕಿ ಅವಘಡ(Fire Accident)ದ ಬಳಿಕ ಗುಜರಾತ್‌(Gujarat)ನಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡ(Building Collapse) ಧರಾಶಾಹಿಯಾಗಿದ್ದು, ಏಳು ಜನ ಧಾರುಣವಾಗಿ ಮೃತಪಟ್ಟಿದ್ದಾರೆ. ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅವಶೇಷದಡಿಯಲ್ಲಿ ಹಲವು ಜನ ಸಿಲುಕಿರುವ ಸಾಧ್ಯತೆ ಇದೆ.

ಘಟನೆ ಬಗ್ಗೆ ಸೂರತ್‌ನ ಅಗ್ನಿಶಾಮಕ ಅಧಿಕಾರಿ ಬಸಂತ್‌ ಪರೀಕ್‌ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ರಾತ್ರಿಯಿಡೀ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಏಳು ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನಿಷ್ಠ ಆರರಿಂದ ಏಳು ಜನರು ಇನ್ನೂ ಅವಶೇಷಗಳಲ್ಲಿ ಸಿಕ್ಕಿಬಿದ್ದಿರುವ ಭಯವಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ನಡೆಸುತ್ತಿವೆ ಎಂದು ಹೇಳಿದ್ದಾರೆ.

ಸುಮಾರು ಐದು ಫ್ಲಾಟ್‌ಗಳಿಗಳನ್ನು ಹೊಂದಿರುವ ಈ ಕಟ್ಟಡವನ್ನು 2016-17ರಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಈ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದಾಗ, ಒಳಗೆ ಸಿಲುಕಿರುವವರ ಧ್ವನಿಯನ್ನು ನಾವು ಕೇಳಿದ್ದೇವೆ. ನಾವು ಮಹಿಳೆಯನ್ನು ಜೀವಂತವಾಗಿ ಅವಶೇಷಗಳಿಂದ ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದೇವೆ. ಸುಮಾರು ಐದು ಜನರು ಇನ್ನೂ ಒಳಗೆ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ (Rajkot) ನಗರದಲ್ಲಿರುವ ಗೇಮಿಂಗ್‌ ಜೋನ್‌ (Gaming Zone) ಒಂದರಲ್ಲಿ ಮೇ 25ರಂದು ಸಂಜೆ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 32 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿತ್ತು.

ಗೇಮಿಂಗ್‌ ಜೋನ್‌ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್‌ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್‌ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ.

ರಾಜ್‌ಕೋಟ್‌ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನೂ ಘೋಷಣೆ ಮಾಡಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನೂ (SIT) ರಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Yuzvendra Chahal
ಕ್ರಿಕೆಟ್12 mins ago

Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್​ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್​

Rahul Gandhi
ರಾಜಕೀಯ19 mins ago

Rahul Gandhi: ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಗೆ ಇರುವ ಅಧಿಕಾರ ಏನೇನು?

karthik purohith samatha actor darshan
ಕ್ರೈಂ21 mins ago

Actor Darshan: ಪವಿತ್ರ ಗೌಡ ಆಪ್ತೆ, ಶಾಸಕರ ಕಾರು ಚಾಲಕನಿಗೆ ಸಂಕಷ್ಟ; 2ನೇ ಬಾರಿ ವಿಚಾರಣೆ, ಬಂಧನ?

Kashmir Encounter
ಪ್ರಮುಖ ಸುದ್ದಿ33 mins ago

Terrorists Killed : ನಕಲಿ ಬಂಕರ್​ನಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ATM Robbery case
ಕ್ರೈಂ51 mins ago

Robbery Case: ಬೆಂಗಳೂರಿನ ಎಟಿಎಂಗಳಲ್ಲಿ ಹರ್ಯಾಣದ ಗ್ಯಾಂಗ್‌ಗಳಿಂದ ದರೋಡೆ!

Abhishek Sharma
ಪ್ರಮುಖ ಸುದ್ದಿ54 mins ago

Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

Ghee benefits
ಲೈಫ್‌ಸ್ಟೈಲ್1 hour ago

How to spot fake ghee: ನಾವು ಖರೀದಿಸಿದ ತುಪ್ಪ ಶುದ್ಧವೋ ಕಲಬೆರಕೆಯೋ ಪರೀಕ್ಷಿಸುವುದು ಹೇಗೆ?

ರಾಜಮಾರ್ಗ ಅಂಕಣ bola akshta pujari
ಅಂಕಣ1 hour ago

ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

karnataka weather Forecast
ಮಳೆ2 hours ago

Karnataka Weather : ಬೆಂಗಳೂರಲ್ಲಿ ಗುಡುಗು ಸಹಿತ ಮಳೆ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ ಮುಂದುವರಿಕೆ

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ನೆಮ್ಮದಿ ನೆಲೆಸಬೇಕೆ? ಹಾಗಿದ್ದರೆ ಅಡುಗೆ ಒಲೆಯ ದಿಕ್ಕು ಸರಿಯಾಗಿರಲಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ15 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ16 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌