Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು - Vistara News

ಆರೋಗ್ಯ

Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಗರ್ಭಕೊರಳಿನ ಕ್ಯಾನ್ಸರ್‌ (Cervical Cancer) ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, 30ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್‌ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ಇಲ್ಲಿವೆ ವಿವರಗಳು.

VISTARANEWS.COM


on

Cervical Cancer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಆರೋಗ್ಯ ರಕ್ಷಣೆಯಲ್ಲಿ ಹಲವು ವಿಷಯಗಳಿವೆ. ಒಂದು, ಸರಿಯಾದ ಸತ್ವಯುತ ಆಹಾರವನ್ನು ತೆಗೆದುಕೊಳ್ಳುವುದು, ತಪ್ಪದೆ ವ್ಯಾಯಾಮ ಮಾಡಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ತಪಾಸಣೆಗಳಿಗೆ ಒಳಗಾಗುವುದು- ಈ ಮೂರು ವಿಷಯಗಳನ್ನು ಪಾಲಿಸುವುದು ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಿಂದ ಮುಂದೆ ಬರಬಹುದಾದ ಬಹಳಷ್ಟು ತೊಂದರೆಗಳನ್ನು ಬುಡದಲ್ಲೇ ಕತ್ತರಿಸಬಹುದು. ನಿಯಮಿತ ತಪಾಸಣೆಯಿಂದ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಪ್ರಾರಂಭಿಕ ಹಂತದಲ್ಲಿ ಅಥವಾ ಪ್ರಾರಂಭವಾಗುವ ಮುನ್ನವೇ ಪತ್ತೆ ಮಾಡಬಹುದು. ಉದಾ, ಸರ್ವೈಕಲ್‌ ಕ್ಯಾನ್ಸರ್‌ ಅಥವಾ ಗರ್ಭಕೊರಳಿನ ಕ್ಯಾನ್ಸರ್‌ (Cervical Cancer). ಇದು ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, ೩೦ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್‌ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ಇಲ್ಲಿವೆ ವಿವರಗಳು.

Ovarian and Cervical Cancer. Woman Touching on Lower Abdomen in

ವೈರಸ್‌ ಕಾರಣ

ಹ್ಯೂಮನ್‌ ಪ್ಯಾಪಿಲೋಮ ವೈರಸ್‌ ಅಥವಾ ಎಚ್‌ಪಿವಿ ಎಂದು ಕರೆಯಲಾಗುವ ವೈರಸ್‌ನಿಂದ ಗರ್ಭಕಂಠದ ಕ್ಯಾನ್ಸರ್‌ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಲೈಂಗಿಕವಾಗಿ ಸಕ್ರಿಯರಾಗಿರುವವರಲ್ಲಿ ಈ ವೈರಸ್‌ ಹರಡುತ್ತದೆ. ಒಮ್ಮೆ ವೈರಸ್‌ ಬಂದ ಮೇಲೆ ಹಲವಾರು ವರ್ಷಗಳ ನಂತರ ಗರ್ಭಕೋಶದ ಕಂಠದಲ್ಲಿ ಕ್ಯಾನ್ಸರ್‌ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮಹಿಳೆಯರು ತುತ್ತಾಗುತ್ತಿರುವ ಕ್ಯಾನ್ಸರ್‌ಗಳ ಪೈಕಿ ಮುಂಚೂಣಿಯಲ್ಲಿ ಸರ್ವೈಕಲ್‌ ಕ್ಯಾನ್ಸರ್‌ ಸಹ ಒಂದು. ಗ್ರಾಮೀಣ ಮತ್ತು ನಗರ ಭಾಗಗಳೆಂಬ ವ್ಯತ್ಯಾಸವಿಲ್ಲದಂತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಲಕ್ಷಣಗಳೇನು?

ಪ್ರಾರಂಭದಲ್ಲಿ ಈ ಕ್ಯಾನ್ಸರ್‌ ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ ಎನ್ನುವುದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ರೋಗ ಮುಂದುವರಿದಂತೆ, ಋತುಚಕ್ರಗಳ ನಡುವಿನ ಅವಧಿಯಲ್ಲಿ ರಕ್ತಸ್ರಾವ ಆಗುವುದು, ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನೋವು ಅಥವಾ ರಕ್ತಸ್ರಾವ, ಮೂತ್ರದಲ್ಲಿನ ರಕ್ತ, ರಜೋನಿವೃತ್ತಿಯ ನಂತರ ರಕ್ತಸ್ರಾವ, ಕಿಬ್ಬೊಟ್ಟೆಯಲ್ಲಿ ನೋವು, ಬೆನ್ನಿನ ಕೆಳಭಾಗದಲ್ಲಿ ನೋವು- ಇಂಥ ಲಕ್ಷಣಗಳು ಕಾಣುತ್ತವೆ. ಆಗ ತುರ್ತಾಗಿ ಸ್ತ್ರೀರೋಗ ತಜ್ಞರನ್ನು ಕಾಣಬೇಕಾಗುತ್ತದೆ.

Vaccine

ಲಸಿಕೆ ಇದೆ

ಎಚ್‌ಪಿವಿ ರೋಗಾಣುವಿನಿಂದ ಬರುವ ಗರ್ಭಕೊರಳಿನ ಕ್ಯಾನ್ಸರ್‌ ತಡೆಯಲು ಸಾಧ್ಯವಿದೆ. ಇದಕ್ಕಾಗಿ ಪರಿಣಾಮಕಾರಿ ಲಸಿಕೆ ಲಭ್ಯವಿದ್ದು, 9-14 ವರ್ಷ ವಯೋಮಾನದ ಹೆಣ್ಣು ಮಕ್ಕಳಿಗೆ ಇದನ್ನು ನೀಡಿದರೆ, ಅತಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸಿದೆ. ಆನಂತರ 26 ವರ್ಷ ವಯಸ್ಸಿನವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದು, ಯಶಸ್ಸಿನ ಪ್ರಮಾಣ ಸಮಾಧಾನಕರವಾಗಿದೆ. ಆನಂತರ 45 ವರ್ಷಗಳವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದರೂ ವಯಸ್ಸು ಹೆಚ್ಚಿದಂತೆಲ್ಲಾ ಲಸಿಕೆಯ ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತದೆ.

ಏನು ಪರೀಕ್ಷೆ?

ಗರ್ಭ ಕಂಠದ ಕೆಲವು ಅಂಗಾಂಶಗಳನ್ನು ತೆಗೆಯುವ ವೈದ್ಯರು, ಅದನ್ನು ಪರೀಕ್ಷೆ ಮಾಡಿಸುತ್ತಾರೆ. ಅದರಲ್ಲಿ ಯಾವುದಾದರೂ ಅಸ್ವಾಭಾವಿಕ ಬೆಳವಣಿಗೆಗಳು ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈಗಾಗಲೇ ಕ್ಯಾನ್ಸರ್‌ ಬಂದಿರುವುದು ಮಾತ್ರವಲ್ಲ, ಮುಂದಿನ ನಾಲ್ಕಾರು ವರ್ಷಗಳಲ್ಲಿ ಈ ಕೋಶಗಳಲ್ಲಿ ಅನಿಯಂತ್ರಿತ ಬೆಳವಣಿಗೆ ಆಗಬಹುದೇ ಎಂಬುದನ್ನೂ ಈ ಪರೀಕ್ಷೆಯಲ್ಲಿ ಪತ್ತೆ ಮಾಡಬಹುದು. ಹಾಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್‌ ಸ್ಮೇರ್‌ ಪರೀಕ್ಷೆಯನ್ನು ಮಹಿಳೆಯರು ತಪ್ಪದೆ ಮಾಡಿಸುವುದು ಸೂಕ್ತ. ಈ ಪರೀಕ್ಷೆಯಲ್ಲಿ ಕ್ಯಾನ್ಸರ್‌ ಸಂಭಾವ್ಯತೆಯನ್ನು ಉದ್ಭವಾವಸ್ಥೆಯಲ್ಲೇ ಪತ್ತೆ ಮಾಡಬಹುದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಬದಲಾವಣೆಗಳು

ಬದುಕಿನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ನಮ್ಮನ್ನು ಇಂಥ ರೋಗಗಳಿಂದ ದೂರ ಇರಿಸುತ್ತವೆ. ಸುರಕ್ಷಿತ ಲೈಂಗಿಕ ಅ‍ಭ್ಯಾಸಗಳು ಬದುಕಿನಲ್ಲಿ ಅತ್ಯಂತ ಮಹತ್ವವನ್ನು ಹೊಂದಿವೆ. ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದು ಮತ್ತು ಕಾಂಡೊಮ್‌ ಬಳಸದೆ ಇರುವುದು ಹಲವು ರೋಗಗಳನ್ನು ತರಬಹುದು. ಅತಿ ಸಣ್ಣ ಪ್ರಾಯದಲ್ಲಿ ಲೈಂಗಿಕವಾಗಿ ಸಕ್ರಿಯರಾಗುವುದು ಸಹ ಕ್ಯಾನ್ಸರ್‌ ಸಹಿತ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಮತೋಲನದಿಂದ ಕೂಡಿದ ತಾಜಾ ಆಹಾರಗಳ ಸೇವನೆ, ಸಿಗರೇಟ್‌ ಮತ್ತು ಮದ್ಯಗಳನ್ನು ದೂರ ಮಾಡುವುದು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳು. ನಿಯಮಿತವಾದ ವ್ಯಾಯಾಮ ಮತ್ತು ಒತ್ತಡ ನಿವಾರಣೆಯ ಕ್ರಮಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Brain-Eating Amoeba: ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಬುಧವಾರ ರಾತ್ರಿ ಮೃತಪಟ್ಟ ಕೇರಳದ ಕೋಝಿಕ್ಕೋಡ್‌ ಜಿಲ್ಲೆಯ 12 ವರ್ಷ ಬಾಲಕನಿಗೆ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಮೆದುಳು ತಿನ್ನುವ ಅಮೀಬಾ) ಸೋಂಕು ತಗುಲಿದ್ದು ದೃಧಪಟ್ಟಿದ್ದು, ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂತಹ ಮೂರನೇ ಸಾವಿನ ಪ್ರಕರಣ ಇದಾಗಿದೆ.

VISTARANEWS.COM


on

Brain-Eating Mmoeba
Koo

ತಿರುವನಂತಪುರಂ: ಅಪರೂಪದ ಮೆದುಳು ತಿನ್ನುವ ಅಮೀಬಾ (Brain-Eating Amoeba) ಸೋಂಕಿಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಬುಧವಾರ ರಾತ್ರಿ ಮೃತಪಟ್ಟ ಕೇರಳದ ಕೋಝಿಕ್ಕೋಡ್‌ ಜಿಲ್ಲೆಯ 12 ವರ್ಷ ಬಾಲಕನಿಗೆ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಮೆದುಳು ತಿನ್ನುವ ಅಮೀಬಾ) ಸೋಂಕು ತಗುಲಿದ್ದು ದೃಧಪಟ್ಟಿದ್ದು, ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂತಹ ಮೂರನೇ ಸಾವಿನ ಪ್ರಕರಣ ಇದಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಬಾಲಕನನ್ನು ಮೃದುಲ್‌ ಇ.ಪಿ. ಎಂದು ಗುರುತಿಸಲಾಗಿದೆ. ಕೋಝಿಕ್ಕೋಡ್‌ ಜಿಲ್ಲೆಯ ಫೆರೊಕೆ ಮೂಲದ ಈತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 7ನೇ ತರಗತಿಯಲ್ಲಿ ಓದುತ್ತಿದ್ದ ಮೃದುಲ್‌ನಲ್ಲಿ ಕೆಲವು ದಿನಗಳ ಹಿಂದೆ ಸೋಂಕಿನ ಲಕ್ಷಣಗಳಾದ ತೀವ್ರ ತಲೆನೋವು, ವಾಕರಿಕೆ, ವಾಂತಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಜೂನ್‌ 24ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊಳದಲ್ಲಿ ಸ್ನಾನ ಮಾಡಿದ ನಂತರ ಬಾಲಕನಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಕೊಳಗಳು ಮತ್ತು ಸರೋವರಗಳಂತಹ ಸಿಹಿನೀರಿನ ಮೂಲಗಳಲ್ಲಿ ಕಂಡುಬರುವ ಈ ಅಮೀಬಾ ಮೂಗಿನ ಮೂಲಕ ಶರೀರವನ್ನು ಸೇರಿ ಮಾರಣಾಂತಿಕವಾಗುತ್ತದೆ. ಇದು ಮೆದುಳಿನ ಜೀವಕೋಶಗಳನ್ನು ತಿನ್ನುವುದರಿಂದ ಇದನ್ನು ಮೆದುಳು ತಿನ್ನುವ ಅಮೀಬಾ ಎಂದೇ ಕರೆಯಲಾಗುತ್ತದೆ.

ಆರಂಭದಲ್ಲಿ ಮೃದುಲ್‌ನನ್ನು ಎರಡು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಮತ್ತು ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆ್ಯಂಟಿ ಮೈಕ್ರೊಬಿಯಲ್ ಚಿಕಿತ್ಸೆ ನೀಡಲಾಯಿತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ರಾಮನಾಟುಕರ ಮುನ್ಸಿಪಾಲಿಟಿ ಮೃದುಲ್‌ ಸ್ನಾನ ಮಾಡಿದ್ದ ಕೊಳಕ್ಕೆ ಸಾರ್ವಜನಿಕರ ಪ್ರವೇಸವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಮೂರನೇ ಪ್ರಕರಣ

ಈ ಹಿಂದೆ ಜೂನ್ 25ರಂದು ಕಣ್ಣೂರು ಜಿಲ್ಲೆಯ 13 ವರ್ಷದ ಬಾಲಕಿ ಮತ್ತು ಮೇ 21ರಂದು ಮಲಪ್ಪುರಂನ 5 ವರ್ಷದ ಬಾಲಕಿ ಈ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. “ನಾವು ರಾಜ್ಯದಲ್ಲಿ ಸಂಭವಿಸಿದ ಈ ಮೂರು ಸಾವುಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡುತ್ತಿದ್ದೇವೆ. ಕಣ್ಗಾವಲು ತೀವ್ರಗೊಳಿಸಿದ್ದೇವೆ. ನಾವು ಮೃದುಲ್‌ನಂತೆ ಅದೇ ಕೊಳದಲ್ಲಿ ಸ್ನಾನ ಮಾಡಿದ ಇತರರನ್ನು ಪರೀಕ್ಷಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾರಲ್ಲಿಯೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ. “ಕೊಳಗಳು ಅಥವಾ ಸರೋವರಗಳಲ್ಲಿ ಸ್ನಾನ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ ಅಪರೂಪದ ಸೋಂಕು. ಅಮೀಬಾ ಪ್ರಭೇದಗಳ ಉಪಸ್ಥಿತಿಯನ್ನು ಪರೀಕ್ಷಿಸಲು ನಾವು ವಿವಿಧ ಜಲ ಮೂಲಗಳ ಮಾದರಿಗಳನ್ನು ಪರೀಕ್ಷಿಸುತ್ತೇವೆ. ಮಳೆ ತೀವ್ರಗೊಳ್ಳುತ್ತಿದ್ದಂತೆ ಸೋಂಕುಗಳ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ” ಎಂದು ಅವರು ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: Brain eating amoeba | ಮೆದುಳು ತಿನ್ನುವ ಅಮೀಬಾ! ಏನಿದು ವಿಚಿತ್ರ ಕಾಯಿಲೆ?

ಹೇಗೆ ಹರಡುತ್ತದೆ?

ಈ ರೋಗಾಣು ಇರುವ ನೀರಿನಲ್ಲಿ ಈಜುವುದು ಅಥವಾ ಇನ್ನಾವುದಾದರೂ ರೀತಿಯಿಂದ ಈ ನೀರು ಮೂಗಿನೊಳಗೆ ಹೋದರೆ, ಆ ವ್ಯಕ್ತಿಗೆ ಈ ಅಮೀಬಾ ಸೋಂಕು ತಗುಲುತ್ತದೆ. ತುಂಬ ದಿನದಿಂದ ಈಜುಕೊಳದ ನೀರು ಬದಲಿಸದೆ ಇದ್ದರೆ ಅಲ್ಲಿಯೂ ಈ ಅಮೀಬಾ ಇರಬಹುದು. ಅದರಲ್ಲೂ ಕಲುಷಿತ ನೀರಿನಲ್ಲಿ ಈ ಅಮೀಬಾ ಉತ್ಪತ್ತಿ ಪ್ರಮಾಣ ಹೆಚ್ಚು. ನೀರೊಳಗೆ ಮುಖ ಒಳಗೆ ಹಾಕಿ ಈಜಿದಾಗ, ಸರೋವರ, ಕೊಳ, ನದಿ ನೀರಿನಲ್ಲಿ ಮುಖ ಮುಳುಗಿಸಿದಾಗ, ಕಲುಷಿತ ನೀರಿನಲ್ಲಿ ತಲೆ ಸ್ನಾನ ಮಾಡಿದಾಗ ಈ ಅಮೀಬಾ ಮೂಗಿನ ಮೂಲಕ ಮೆದುಳು ಸೇರುವ ಸಾಧ್ಯತೆ ಹೆಚ್ಚು.

Continue Reading

ಆರೋಗ್ಯ

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

sleep apnea: ಸಣ್ಣ ಪ್ರಮಾಣದಲ್ಲಿ ಗೊರೆಯುವವರು, ಆಯಾಸವಾದಾಗ, ನಿದ್ದೆಗೆಟ್ಟಾಗ ಗೊರೆಯುವವರು ಬಹಳಷ್ಟು ಜನರಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲದೆ, ಸದಾ ಕಾಲ ಗೊರಕೆ ಹೊಡೆಯುವುದು, ಜೋರಾದ ಕರ್ಕಶವಾದ ಗೊರಕೆಗಳು, ಆಗಾಗ ಉಸಿರುಗಟ್ಟುವಂಥದ್ದು- ಇವೆಲ್ಲ ದೀರ್ಘ ಕಾಲದಲ್ಲಿ ಸಮಸ್ಯೆಗಳನ್ನು ತರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Sleep Apnea
Koo

ನಾವೆಲ್ಲ ನಿದ್ದೆ ಮಾಡುವವರೇ (sleep apnea) ಆದರೂ, ನಮ್ಮಲ್ಲಿ ನಿದ್ದೆ ಸರಿಯಾಗಿ ಬಾರದೆ ಒದ್ದಾಡುವವರದ್ದು ಒಂದು ವರ್ಗ. ನಿದ್ದೆ ಬಂದ ಮೇಲೂ ಒದ್ದಾಡುವವರದ್ದು ಇನ್ನೊಂದು ವರ್ಗ. ಈ ಎರಡನೇ ಸಾಲಿಗೆ ಸೇರಿದವರು, ನಿದ್ದೆ ಬಂದ ಮೇಲೆ ತಾವು ಒದ್ದಾಡುವುದಿಲ್ಲ, ಆಚೀಚಿನವರನ್ನು ಒದ್ದಾಡಿಸುತ್ತಾರೆ- ಗೊರಕೆ ಹೊಡೆಯುವ ಮೂಲಕ. ಅರೆ! ಗೊರೆಯುವುದು ನಿದ್ದೆಯ ಅವಿಭಾಜ್ಯ ಅಂಗ ಎಂದು ತಿಳಿದವರೇ ಭಾರತದಲ್ಲಿ ಹೆಚ್ಚಿರುವಾಗ, ಗೊರೆದು ಒರಗುವವರ ಬಗ್ಗೆ ಹೀಗೆ ತಕರಾರು ತೆಗೆಯಬಹುದೇ ಎನ್ನಬಹುದು. ಬೇರೆ ದೇಶಗಳಲ್ಲಿ ಹಾಗಲ್ಲ, ಗೊರೆದು ನಿದ್ದೆಗೆಡಿಸುವ ಸಂಗಾತಿ ಬೇಡವೆಂದು ಸೋಡಾಚೀಟಿ ಕೊಟ್ಟ ನಿದರ್ಶನಗಳು ಸಾಕಷ್ಟಿವೆ. ಇರಲಿ, ಗೊರೆದರೆ ಪಕ್ಕದಲ್ಲಿ ಮಲಗಿದವರ ನಿದ್ದೆ ಹಾಳು ಎನ್ನುವುದು ದೊಡ್ಡ ವಿಷಯವೇ ಅಲ್ಲ. ಹಾಗೆ ಗಂಟಲು ಬಿರಿಯುವಂತೆ ಗೊರೆದರೆ, ಗೊರೆಯುವವರದ್ದೇ ಆರೋಗ್ಯ ಹಾಳು ಎನ್ನುವುದು ಮುಖ್ಯ ಸಂಗತಿ.

Difficulty Sleeping

ಸ್ಲೀಪ್‌ ಅಪ್ನಿಯ

ಗೊರಕೆ ಹೊಡೆಯುವ ಮತ್ತು ಹಾಗೆ ಮಾಡುವಾಗ ಕೆಲವು ಕ್ಷಣಗಳ ಕಾಲ ಉಸಿರಾಟ ನಿಲ್ಲಿಸುವ ಈ ಪ್ರಕ್ರಿಯೆಯನ್ನು ಅಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯ (ಒಎಸ್‌ಎ) ಎಂದು ಕರೆಯಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಗೊರೆಯುವವರು, ಆಯಾಸವಾದಾಗ, ನಿದ್ದೆಗೆಟ್ಟಾಗ ಗೊರೆಯುವವರು ಬಹಳಷ್ಟು ಜನರಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲದೆ, ಸದಾ ಕಾಲ ಗೊರೆಯುವುದು, ಜೋರಾದ ಕರ್ಕಶವಾದ ಗೊರಕೆಗಳು, ಆಗಾಗ ಉಸಿರುಗಟ್ಟುವಂಥದ್ದು- ಇವೆಲ್ಲ ದೀರ್ಘ ಕಾಲದಲ್ಲಿ ಆರೋಗ್ಯಕ್ಕೆ ಸಮಸ್ಯೆಗಳನ್ನು ತರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೇ ಹೋದಲ್ಲಿ, ಹೃದಯ ರೋಗಗಳು ಬರುವ ಸಾಧ್ಯತೆಯನ್ನು ಶೇ. 30ರಷ್ಟು ಮತ್ತು ಪಾರ್ಶ್ವವಾಯು ಬಡಿಯುವ ಸಾಧ್ಯತೆಯನ್ನು ಶೇ. 60ರಷ್ಟು ಹೆಚ್ಚಿಸುತ್ತದಂತೆ. ಅಂದರೆ ನಿದ್ರಿಸಿದವರು ಏಳದಿರುವ ಸಾಧ್ಯತೆ ಈ ಪ್ರಮಾಣದಲ್ಲಿದೆ.

ಲಕ್ಷಣಗಳೇನು?

ವಿಶ್ವದೆಲ್ಲೆಡೆಯ ಅಂಕಿ-ಅಂಶಗಳನ್ನು ನೋಡಿದರೆ, ಸುಮಾರು 936 ದಶಲಕ್ಷ ಮಂದಿ ಒಎಸ್‌ಎ ಹೊಂದಿದವರಿದ್ದಾರೆ. ಇವರಲ್ಲಿ ಹೆಚ್ಚಿನವರ ಲಕ್ಷಣಗಳು ಸೌಮ್ಯವಾದದ್ದು. ಈ ಲಕ್ಷಣಗಳು ತೀವ್ರವಾಗಿ ಇದ್ದವರಲ್ಲಿ, ನಿದ್ದೆಯಲ್ಲಿ ಆಗಾಗ ಉಸಿರುಗಟ್ಟುವುದು, ಕೆಮ್ಮುವುದು, ನಿದ್ದೆಯಿಂದ ಆಗಾಗ ಎಚ್ಚರವಾಗುವುದು, ಬಾತ್‌ರೂಂ ಓಡಾಟಗಳು, ನಿದ್ದೆಯಲ್ಲಿ ಬೆವರುವುದು ಇತ್ಯಾದಿಗಳು ಸಾಮಾನ್ಯ. ಇದರಿಂದಾಗಿ ಹಗಲಿಗೂ ಇವರು ಸುಸ್ತು, ಆಯಾಸ, ಏಕಾಗ್ರತೆಯ ಕೊರತೆ, ತಲೆನೋವು, ಎದೆ ಉರಿ, ಮೂಡ್‌ ಬದಲಾವಣೆ, ತೂಕಡಿಕೆಗಳಿಂದ ಮುಕ್ತರಾಗಿ ಇರುವುದಿಲ್ಲ. ಇದನ್ನು ವೈದ್ಯಕೀಯವಾಗಿ ನಿರ್ವಹಿಸದಿದ್ದರೆ ಮುಂದೆ ಗಂಭೀರ ಸಮಸ್ಯೆಗಳು ಬರಬಹುದು ಎನ್ನುವುದು ತಜ್ಞರ ಅಭಿಮತ.
ಬ್ರೆಜಿಲ್‌ ದೇಶದ ಸಾವೊ ಪೌಲೊ ವಿಶ್ವವಿದ್ಯಾಲಯದ ಅಧ್ಯಯನಕಾರರು ಹೇಳುವ ಪ್ರಕಾರ, ಒಂದು ಸರಳವಾದ ರಕ್ತ ಪರೀಕ್ಷೆಯ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಇದನ್ನು ವಿವರಿಸಿ ಹೇಳುವುದಾದರೆ, ರಕ್ತದಲ್ಲಿರುವ ಹೋಮೋಸಿಸ್ಟೀನ್‌ ಎಂಬ ಅಮೈನೊ ಆಮ್ಲದ ಮಟ್ಟ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೆ ರಕ್ತ ಮತ್ತು ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು. ಸರಿ, ಆದರೆ ಹೋಮೋಸಿಸ್ಟೀನ್‌ಗೂ ಗೊರೆಯುವುದಕ್ಕೂ ಎತ್ತಣಿದೆಂತ್ತ ಸಂಬಂಧ? ಇದಕ್ಕಾಗಿ ಈ ತಜ್ಞರು ನಡೆಸಿದ್ದ ಅಧ್ಯಯನದ ಬಗ್ಗೆ ಚುಟುಕಾಗಿ ಹೇಳಬೇಕಿದೆ.

ಇದನ್ನೂ ಓದಿ: Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

ವಿಷಯ ಏನೆಂದರೆ…

ಇದಕ್ಕಾಗಿ ಸುಮಾರು 20-80 ವರ್ಷ ವಯಸ್ಸಿನ ೮೦೦ಕ್ಕೂ ಹೆಚ್ಚಿನವರ ದತ್ತಾಂಶಗಳ ಅಧ್ಯಯನವನ್ನು ಈ ತಂಡ ನಡೆಸಿತು. ಇದರ ಪ್ರಕಾರ, ರಕ್ತದಲ್ಲಿ ಹೋಮೋಸಿಸ್ಟೀನ್‌ ಎಷ್ಟಿದೆ ಎನ್ನುವ ಆಧಾರದ ಮೇಲೆ ಕಡಿಮೆ, ಮಧ್ಯಮ, ಹೆಚ್ಚು ಎಂಬ ಮೂರು ಗುಂಪುಗಳನ್ನಾಗಿ ವಿಂಗಡಿಸಿದ್ದರು. ಈ ಗುಂಪುಗಳ ನಿದ್ದೆಯನ್ನು ಅಧ್ಯಯನಕ್ಕೆ (ಪಾಲಿಸೋಮ್ನೋಗ್ರಾಂ) ಒಳಪಡಿಸಿದಾಗ ಅಚ್ಚರಿಯ ಅಂಶಗಳು ಕಂಡವು. ಒಂದು ತಾಸಿನ ಸರಾಸರಿ ನಿದ್ದೆಯ ಹೊತ್ತಿನಲ್ಲಿ ಎಷ್ಟು ಬಾರಿ ಉಸಿರು ಕಡಿಮೆಯಾಗುತ್ತದೆ ಅಥವಾ ನಿಲ್ಲುತ್ತದೆ (ಒಎಸ್‌ಎ) ಎಂಬುದನ್ನು ಪರಿಶೀಲಿಸಲಾಯಿತು. ತಾಸಿಗೆ ಐದಕ್ಕಿಂತ ಕಡಿಮೆ ಬಾರಿ ಹೀಗಾದರೆ ಸಾಮಾನ್ಯ. 5-15 ಬಾರಿ ಹೀಗಾದರೆ ಸೌಮ್ಯ ಪ್ರಮಾಣದಲ್ಲಿ ಒಎಸ್‌ಎ ಇದೆ; 15-30 ಬಾರಿ ಹೀಗಾದರೆ ಮಧ್ಯಮ ಪ್ರಮಾಣದ ಒಎಸ್‌ಎ ಇದೆ; 30ಕ್ಕಿಂತ ಹೆಚ್ಚು ಬಾರಿ ಹೀಗಾದರೆ ತೀವ್ರ ತೆರನಾಗಿದೆ ಎಂಬುದು ಅಳತೆಗೋಲು. ಕಡಿಮೆ ಪ್ರಮಾಣದ ಒಎಸ್‌ಎ ಇದ್ದವರ ರಕ್ತದಲ್ಲಿ ಹೋಮೋಸಿಸ್ಟೀನ್‌ ಮಟ್ಟ ಕಡಿಮೆ ಇತ್ತು; ಮಧ್ಯಮ ಒಎಸ್‌ಎ ಇದ್ದವರಲ್ಲಿ ಹೋಮೋಸಿಸ್ಟೀನ್‌ ಮಟ್ಟವೂ ಮಧ್ಯಮ ಪ್ರಮಾಣದಲ್ಲೇ ಇತ್ತು; ಉಳಿದವರಲ್ಲಿ ಎರಡೂ ತೀವ್ರವಾಗಿಯೇ ಇದ್ದವು. ಹಾಗಾಗಿ ಇದೊಂದು ರಕ್ತ ಪರೀಕ್ಷೆ ಮುಂದಾಗುವುದನ್ನು ತಪ್ಪಿಸೀತು ಎನ್ನುವುದು ಅಧ್ಯಯನಕಾರರ ನಿಲುವು.

Continue Reading

ಕೋಲಾರ

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

Chemicals in Food: ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು.

VISTARANEWS.COM


on

chemicals in food
Koo

ಕೋಲಾರ: ಕ್ಯಾನ್ಸರ್‌ ಕಾರಕ (Carcinogenic) ಅಂಶಗಳನ್ನು ಹೊಂದಿರುವ ರಾಸಾಯನಿಕ ಬಣ್ಣಗಳನ್ನು (Chemical color) ಬಳಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಕೆಜಿಎಫ್​ (KGF) ನಗರಸಭೆ ವ್ಯಾಪ್ತಿಯಲ್ಲಿ ಸ್ವೀಟ್​​ ಅಂಗಡಿಗಳ (Sweet stalls) ಮೇಲೆ ನಗರಸಭೆ ಪೌರಾಯುಕ್ತ ಪವನ್​ ಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ರಾಸಾಯನಿಕ ಹೊಂದಿದ (Chemicals in Food) ಕೃತಕ ಬಣ್ಣ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ತಿಂಡಿಗಳನ್ನು (Seize) ವಶಕ್ಕೆ ಪಡೆಯಲಾಯಿತು.

ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್​ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್​ ನೀಡಿ ದಂಡ ವಿಧಿಸಲಾಗಿದೆ. ಕಲರ್ ಬಳಸಿ ತಯಾರು ಮಾಡಿದ ಸ್ವೀಟ್​ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಸದ ಲಾರಿಗೆ ತುಂಬಿಸಿದರು.

ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು. ಜೊತೆಗೆ ಕಲರ್‌ ಬಳಸುವ ಎಲ್ಲಾ ಗೋಬಿ ಮಂಚೂರಿ, ಕಬಾಬ್ ಸೆಂಟರ್​ಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶದಂತೆ ನಿಷೇಧಿತ ಕಲರ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ವೀಟ್​​ ಅಂಗಡಿಗಳ ಮೇಲೆ ದಾಳಿ ನಡೆದಿದೆ.

ಪಾನಿಪುರಿಯಲ್ಲೂ ಹಾನಿಕಾರಕ ರಾಸಾಯನಿಕ, ಬ್ಯಾನ್‌ಗೆ ಚಿಂತನೆ

ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (food safety and standards authority of india) ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ (Carcinogenic), ಹಾನಿಕಾರಕ ರಾಸಾಯನಿಕ (Chemicals in Food) ವಿಷಗಳು.

ಹೌದು. ಗೋಬಿ ಮಂಚೂರಿ (Gobi Manchurian) ಹಾಗೂ ಕಬಾಬ್ (Kebab) ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್‌ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.

ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.

ಪಾನಿಪುರಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್, ಜನತೆ ವಿವೇಚನೆಯಿಂದ ಈ ಆಹಾರ ಸೇವಿಸಬೇಕು ಎಂದಿದ್ದಾರೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Continue Reading

ಆರೋಗ್ಯ

Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

Hair Oil Tips: ಮಕ್ಕಳ ಕೂದಲಿಗೆ ಎಣ್ಣೆ ಹಾಕುವ ಅಥವಾ ಪ್ರೀತಿ ಪಾತ್ರರ ತಲೆಗೆ ಎಣ್ಣೆ ತಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಹಾಗೆಂದು ದಿನವೂ ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ, ಬೆಳಗ್ಗೆ ತಲೆಸ್ನಾನ ಮಾಡುವುದು ಸರಿಯೇ? ಇದರಿಂದ ಲಾಭ ಹೆಚ್ಚೋ ನಷ್ಟವೋ? ಇಲ್ಲಿದೆ ತುಂಬಾ ಜನರನ್ನು ಕಾಡುವ ಪ್ರಶ್ನೆಗೆ ಉತ್ತರ.

VISTARANEWS.COM


on

Hair Oil Tips
Koo

ಕೂದಲಿಗೆ ಎಣ್ಣೆ (Hair Oil Tips) ಹಾಕುವ ಬಗ್ಗೆ ನಾನಾ ಅಭಿಪ್ರಾಯಗಳಿವೆ. ಹಾಕುವುದೇ ಇಲ್ಲ ಎನ್ನುವವರಿಂದ ಹಿಡಿದು, ಹಾಕಿದ ಎಣ್ಣೆ ತೆಗೆಯುವುದೇ ಇಲ್ಲ ಎನ್ನುವವರೆಗೆ, ದೇಶದ ಉದ್ದಗಲಕ್ಕೆ ಹಲವು ಮಾತುಗಳು ಕೇಳಬರುತ್ತವೆ. ಅದರಲ್ಲೂ ಮಕ್ಕಳ ಕೂದಲಿಗೆ ಎಣ್ಣೆ ಹಾಕುವ ಅಥವಾ ಪ್ರೀತಿ ಪಾತ್ರರ ತಲೆಗೆ ಎಣ್ಣೆ ತಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಹೀಗಿರುವಾಗ ದಿನವೂ ರಾತ್ರಿ ಎಣ್ಣೆ ಹಾಕಿ (ಅಂದರೆ… ತಲೆಗೆ!) ಬೆಳಗ್ಗೆ ಕೂದಲು ಸ್ವಚ್ಛ ಮಾಡುವುದು ಸರಿಯೇ? ಇದರಿಂದ ಲಾಭ ಹೆಚ್ಚೋ ನಷ್ಟವೋ ಎಂಬ ಅನುಮಾನ ಹಲವರಲ್ಲಿ ಇರಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Lady Sitting on the Couch Gives Herself a Scalp Massage Gooseberry Benefits

ಲಾಭಗಳೇನು?

ಕೂದಲಿಗೆ ಸರಿಯಾದ ತೇವವನ್ನು ನೀಡುವದು ಮುಖ್ಯವಾದ ಕೆಲಸ. ರಾತ್ರಿಡಿ ತೈಲದಂಶವನ್ನು ಕೂದಲಲ್ಲೇ ಉಳಿಸಿದರೆ, ಬೆಳಗಿನವರೆಗೆ ಆಳವಾಗಿ ಕಂಡೀಶನಿಂಗ್‌ ಮಾಡುವುದಕ್ಕೆ ಸಾಧ್ಯವಿದೆ. ಕೂದಲಿನ ಬುಡ ಮತ್ತು ತಲೆಯ ಚರ್ಮವನ್ನು ಚೆನ್ನಾಗಿ ಕಂಡೀಶನಿಂಗ್‌ ಮಾಡಿ, ತೇವವನ್ನು ಸರಿಯಾಗಿ ಹೀರಿಕೊಳ್ಳುವುದಕ್ಕೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ತಲೆಗೆ ಎಣ್ಣೆ ಮಸಾಜ್‌ ಮಾಡಿದ ಕೆಲವೇ ತಾಸುಗಳಲ್ಲಿ ತಲೆಸ್ನಾನ ಮಾಡಿದಾಗ, ಈ ಕೆಲಸ ಪೂರ್ಣ ಆಗಿರುವವ ಸಂಭವ ಕಡಿಮೆ.

ಸುರುಳಿ ಕೂದಲಿಗೆ ಲಾಭ

ನೇರವಾದ, ನಯವಾದ ಕೂದಲುಗಳಿಗಿಂತ, ಒರಟಾದ, ಗುಂಗುರಾದ ಕೂದಲುಗಳಿಗೆ ಅಹೋರಾತ್ರಿ ತೈಲದಲ್ಲಿ ನೆನೆಸುವುದು ಹೆಚ್ಚು ಲಾಭದಾಯಕ. ಇದರಿಂದ ಕೂದಲಿನ ಒರಟುತನ ಕಡಿಮೆಯಾಗಿ, ತೇವ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಕೂದಲಿನ ನೈಸರ್ಗಿಕ ತೈಲದಂಶವನ್ನು ಉಳಿಸಿಕೊಂಡು, ಕೂದಲಿಗೆ ಹೆಚ್ಚಿನ ಆರೈಕೆ ಒದಗಿಸಲು ಅನುಕೂಲ.

Young Woman Takes Care of Her Hair Using Natural Oils and Conditioners for Hair Care

ಚರ್ಮದ ಆರೋಗ್ಯ

ತಲೆಯ ಚರ್ಮ ಕಣ್ಣಿಗೆ ಕಾಣುವುದಿಲ್ಲ, ಆದರೆ ಸೂಕ್ಷ್ಮವಾದ ಪ್ರಕೃತಿಯದ್ದು. ತಲೆಯ ಚರ್ಮ ಶುಷ್ಕವಾದರೆ ಹೊಟ್ಟು, ತುರಿಕೆ ಗಂಟು ಬೀಳುತ್ತದೆ. ಇದನ್ನೆಲ್ಲ ನಿವಾರಿಸಿಕೊಳ್ಳಲು ಇರುವ ಸರಳವಾದ ನೈಸರ್ಗಿಕವಾದ ಉಪಾಯವೆಂದರೆ ರಾತ್ರಿಯ ಸಮಯದಲ್ಲಿ ತಲೆಯ ಚರ್ಮಕ್ಕೆ ಲಘುವಾಗಿ ಎಣ್ಣೆ ಮಸಾಜ್‌ ಮಾಡುವುದು. ಇದರಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಿ, ಕೂದಲು ಸೊಂಪಾಗಿ ಬೆಳೆಯುವುದಕ್ಕೆ ಸಹಾಯವಾಗುತ್ತದೆ.

ರಕ್ಷಣೆ

ತೈಲದಂಶವು ಕೂದಲು ಮತ್ತು ತಲೆಯ ಚರ್ಮದ ಮೇಲೆ ತೆಳುವಾದ ರಕ್ಷಣಾ ಕವಚವನ್ನು ನಿರ್ಮಿಸಬಲ್ಲದು. ಈ ಕವಚವು ವಾತಾವರಣದ ಮಾಲಿನ್ಯ, ದೂಳು, ಹೊಗೆ ಮುಂತಾದವುಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ತಲೆಗೆ ಉಪಯೋಗಿಸುವ ಹಲವು ರೀತಿಯ ಜೆಲ್‌, ಬಣ್ಣದಂಥ ರಾಸಾಯನಿಕಗಳು ಮತ್ತು ಹೀಟ್‌ ಸ್ಟೈಲಿಂಗ್‌ ನಿಂದ ಆಗಬಹುದಾದ ಹಾನಿಯನ್ನೂ ತಗ್ಗಿಸುತ್ತದೆ.

Curry Leaves and Coconut Oil Hair Pack Discover the Best Herbal Hair Pack for Hair Growth

ತೊಂದರೆಗಳೂ ಇವೆ

ಹಾಗೆಂದು ಕೂದಲಿಗೆ ತೈಲ ಹಾಕುವುದರಿಂದ ಎಲ್ಲವೂ ಸರಾಗ ಎಂದು ಭಾವಿಸುವಂತಿಲ್ಲ. ಅಹೋರಾತ್ರಿ ತೈಲದಲ್ಲಿ ಕೂದಲು ನೆನೆಸುವುದರಿಂದ ತಲೆಯ ಚರ್ಮದ ಸೂಕ್ಷ್ಮ ರಂಧ್ರಗಳು ಕಟ್ಟಿಕೊಳ್ಳಬಹುದು. ಇದರಿಂದ ತ್ವಚೆಯ ಆ ಭಾಗ ಸೋಂಕುಗಳಿಗೆ ಸುಲಭ ತುತ್ತಾಗುತ್ತದೆ. ಹಾಗಾಗಿ ಮಾರನೇ ದಿನ ತಲೆಸ್ನಾನ ಮಾಡುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ಕೊಳೆ

ತಲೆಯಲ್ಲಿ ದೀರ್ಘ ಕಾಲ ಎಣ್ಣೆ ಉಳಿಯಿತು ಎಂದಾದರೆ, ಕೂದಲು ಬೇಗನೇ ಕೊಳೆಯಾಗುತ್ತವೆ. ತಲೆಯಲ್ಲಿ ಹೊಟ್ಟು, ತುರಿಕೆಗಳು ಪ್ರಾರಂಭವಾಗುತ್ತವೆ. ಹೊಳೆಯುವ ಸ್ವಚ್ಛವಾದ ಕೂದಲಿಗೂ ಜಿಡ್ಡುಜಿಡ್ಡಾದ ಮೆತ್ತಿಕೊಂಡು ಮುದ್ದೆಯಂತಾದ ಕೂದಲಿಗೂ ಎಲ್ಲಿಂದೆಲ್ಲಿಯ ಹೋಲಿಕೆ! ಹಾಗಾಗಿ ಎಣ್ಣೆಯಂಶ ಅತಿಯಾಗಿ ಉಳಿಯದಂತೆ ಸ್ವಚ್ಛ ಮಾಡುವುದು ಮುಖ್ಯ. ಹಾಗೆಂದು ತಲೆ ಚರ್ಮದ ನೈಸರ್ಗಿಕ ತೈಲವೂ ತೊಳೆದು ಹೋಗುವಂತೆ ಶಾಂಪೂ ಹಾಕಿ ಉಜ್ಜುವುದು ಬೇಡ.

ಇದನ್ನೂ ಓದಿ: Health Tips: ಮಧ್ಯಾಹ್ನದ ನಂತರ ಏನಾದರು ಸಿಹಿತಿನಿಸು ತಿನ್ನಬೇಕು ಅನಿಸುತ್ತಿದೆಯೆ? ಇದಕ್ಕೂ ಇದೆ ಕಾರಣ

ಯಾವ ಎಣ್ಣೆ?

ತಲೆಗೆ ಹಾಕುವುದಕ್ಕೆಂದೇ ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ತೈಲಗಳು ಲಭ್ಯವಿವೆ. ಇವುಗಳಲ್ಲಿ ಯಾವುದನ್ನು ಹಾಕುವುದು? ಅಸಂಖ್ಯಾತ ಗಿಡಮೂಲಿಕೆಗಳನ್ನು ಸೇರಿಸಿದ, ಚಿತ್ರವಿಚಿತ್ರ ಬಣ್ಣದ ಎಣ್ಣೆಗಳಿಗಿಂತ ಸರಳವಾದ ಕೊಬ್ಬರಿ ಎಣ್ಣೆ ಉತ್ತಮ ಆಯ್ಕೆ. ನಿಮ್ಮ ಎಣ್ಣೆಯನ್ನು ನೀವೇ ತಯಾರಿಸಿಕೊಳ್ಳುವವರಾದರೆ ಆ ಮಾತು ಬೇರೆ. ಹಾಗಲ್ಲದಿದ್ದರೆ, ಶುದ್ಧವಾದ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥವು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ.
ಕೂದಲಿಗೆ ಎಣ್ಣೆ ಹಾಕುವ ಭರದಲ್ಲಿ ತಲೆ ನೆನೆಯುವಂತೆ ಎಣ್ಣೆ ಮೆತ್ತಿಕೊಳ್ಳಬೇಡಿ. ಇದರಿಂದ ಹಾಸಿಗೆ ದಿಂಬುಗಳೂ ಹಾಳಾಗಿ ಹೋಗುತ್ತವೆ. ಎಷ್ಟು ಎಣ್ಣೆ ನಿಮ್ಮ ತಲೆಗೆ ಬೇಕು ಎನ್ನುವುದು ನಿಮ್ಮ ಕೂದಲಿನ ಉದ್ದ, ದಪ್ಪಗಳನ್ನು ಅವಲಂಬಿಸಿದೆ. ತಲೆಯ ಬುಡವನ್ನು ಲಘುವಾಗಿ ಮಸಾಜ್‌ ಮಾಡಿ, ಉಜ್ಜುವ ಭರದಲ್ಲಿ ಕೂದಲು ಕಿತ್ತುಕೊಳ್ಳಬೇಡಿ. ತೀರಾ ಅಂಟಾದ ಎಣ್ಣೆಯೂ ಸೂಕ್ತವಲ್ಲ. ಹಗುರವಾದ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಿ.

Continue Reading
Advertisement
Hina Khan mom weeps as actor cuts her hair
ಬಾಲಿವುಡ್13 mins ago

Hina Khan: ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ `ಹಿನಾ ಖಾನ್’ ತಬ್ಬಿ ಕಣ್ಣೀರಿಟ್ಟ ತಾಯಿ; ಕೂದಲಿಗೆ ಬಿತ್ತು ಕತ್ತರಿ!

Robbery Case
ಕ್ರೈಂ22 mins ago

Robbery Case : ರಾಯಚೂರಿನಲ್ಲಿ ಸ್ವಾಮೀಜಿ ತಲೆಗೆ ಗನ್ ಇಟ್ಟು ದರೋಡೆ!

Jay Shah
ಕ್ರೀಡೆ29 mins ago

Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

hd kumaraswamy
ಪ್ರಮುಖ ಸುದ್ದಿ30 mins ago

HD Kumaraswamy: ಸಿಎಂ ಕುರ್ಚಿ ಮೇಲೆ ಟವಲ್‌ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ

Bigg Boss Telugu 8 Astrologer Venu Swamy A Contestant
ಟಾಲಿವುಡ್43 mins ago

Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

Gold Rate Today
ಚಿನ್ನದ ದರ58 mins ago

Gold Rate Today: ಇಂದು ಏರಿಕೆಯಾಗಿಲ್ಲ ಚಿನ್ನದ ದರ; ಬೆಲೆ ಎಷ್ಟಿದೆ ನೋಡಿ

Physical Abuse
ಬೆಂಗಳೂರು1 hour ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Team India
ಕ್ರಿಕೆಟ್1 hour ago

Team India: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟ ಟೀಮ್​ ಕ್ರಿಕೆಟಿಗರು

ಉದ್ಯೋಗ1 hour ago

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

Actor Darshan SIM Secret Revealed investigation start
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್; ಆಪ್ತರಿಗೆ ತಟ್ಟಿದೆ ವಿಚಾರಣೆ ಬಿಸಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse
ಬೆಂಗಳೂರು1 hour ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು2 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ6 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ20 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ21 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ22 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ1 day ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ1 day ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

ಟ್ರೆಂಡಿಂಗ್‌