IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​ - Vistara News

ಕ್ರಿಕೆಟ್

IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​

IND vs PAK:ಭಾರತ ಮತ್ತು ಪಾಕ್​ ಪಂದ್ಯದ ಟಿಕೆಟ್​ ಸಿಗುವುದೇ ಒಂದು ಅದೃಷ್ಟ. ಮ್ಯಾಚ್​ನ ಟಿಕೆಟ್​ಗಳು ಘೋಷಣೆಯಾದ ಕ್ಷಣಾರ್ಧದಲ್ಲೇ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಯಾರಿಗೂ ಕೂಡ ಟಿಕೆಟ್​ ಕೊಳ್ಳಲು ಆಸಕ್ತಿಯೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಟಿಕೆಟ್​ ಬೆಲೆ ದುಬಾರಿಯಾಗಿರುವುದು

VISTARANEWS.COM


on

IND vs PAK
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್​: ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿರುವ ಜೂನ್​ 9ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ವಿಶ್ವಕಪ್​ನ(T20 World Cup 2024) ಹೈವೋಲ್ಟೇಜ್ ಪಂದ್ಯಕ್ಕೆ ಈ ಬಾರಿ ಪ್ರೇಕ್ಷಕರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್‌ಗಳು ಇನ್ನೂ ಐಸಿಸಿ ವೆಬ್​ಸೈಟ್​ನಲ್ಲಿ ಲಭ್ಯವಿದ್ದು, ಇನ್ನೂ ಕೂಡ ಮಾರಾಟವಾಗದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಭಾರತ ಮತ್ತು ಪಾಕ್​ ಪಂದ್ಯದ ಟಿಕೆಟ್​ ಸಿಗುವುದೇ ಒಂದು ಅದೃಷ್ಟ. ಮ್ಯಾಚ್​ನ ಟಿಕೆಟ್​ಗಳು ಘೋಷಣೆಯಾದ ಕ್ಷಣಾರ್ಧದಲ್ಲೇ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಯಾರಿಗೂ ಕೂಡ ಟಿಕೆಟ್​ ಕೊಳ್ಳಲು ಆಸಕ್ತಿಯೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಟಿಕೆಟ್​ ಬೆಲೆ ದುಬಾರಿಯಾಗಿರುವುದು. ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್‌ಗಳಲ್ಲಿ ಟಿಕೆಟ್‌ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲಾಂಜ್​​ ಮತ್ತು ಕಾರ್ನರ್ ಕ್ಲಬ್​​ಗಳನ್ನು ಒಳಗೊಂಡಿವೆ.

ಡೈಮಂಡ್ ಕ್ಲಬ್ ಟಿಕೆಟ್ ಬೆಲೆ 8.34 ಲಕ್ಷ ರೂ. ಈ ಟಿಕೆಟ್​ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಪ್ರೀಮಿಯಂ ಕ್ಲಬ್ ಲಾಂಜ್​ ಟಿಕೆಟ್ ಬೆಲೆ 2 ಲಕ್ಷ ರೂ, ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂ. ಆಗಿದೆ. ಭಾರತ-ಪಾಕಿಸ್ತಾನ ಪಂದ್ಯದ ದೃಷ್ಟಿಯಿಂದ ಐಸಿಸಿ ಟಿಕೆಟ್ ಬೆಲೆಯನ್ನು ಇಷ್ಟು ದುಬಾರಿ ಇರಿಸಿದೆ. ಇದಲ್ಲದೆ ಪಂದ್ಯಕ್ಕೆ ಉಗ್ರರು ಬಾಂಬ್​ ಬೆದರಿಕೆ ಹಾಕಿದ್ದು ಕೂಡ ಅಭಿಮಾನಿಗಳ ಹಿಂದೇಟಿಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಹೆಚ್ಚಿನ ಟಿಕೆಟ್​ಗಳು ಖರೀದಿಯಾಗದಿದ್ದಲ್ಲಿ ಐಸಿಸಿ ಮತ್ತೆ ಪರಿಷ್ಕೃತ ಟಿಕೆಟ್​ ದರ ಹೊರಡಿಡುವ ಸಾಧ್ಯತೆ ಇದೆ.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯಕ್ಕೆ ಉಗ್ರರಿಂದ ದಾಳಿಯ ಬೆದರಿಕೆ ಬಂದಿರುವ ಕಾರಣ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳಲಾಗಿದೆ. ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯಕ್ಕೆ ಸುಧಾರಿತ ಕಣ್ಗಾವಲು ಏರ್ಪಡಿಸಲಾಗಿದೆ.

ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.

ಟಿ20 ಮುಖಾಮುಖಿ

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rohit Sharma: ಪಿಚ್​ ಮಣ್ಣು ತಿಂದಿದ್ದೇಕೆ?; ಪ್ರತಿಕ್ರಿಯಿಸಿದ ರೋಹಿತ್​

Rohit Sharma: ನಾನು ಮೈದಾನಕ್ಕೆ ಇಳಿದಾಗ ಆ ಕ್ಷಣವನ್ನು ಅನುಭವಿಸುತ್ತಿದ್ದೆ. ಗೆಲುವು ತಂದು ಕೊಟ್ಟ ಈ ಪಿಚ್​ನ ಋಣವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಜೀವನದುದ್ದಕ್ಕೂ ಈ ಪಿಚ್​ನ ಮಣ್ಣಿನ ನೆನಪನ್ನು ಇಟ್ಟು ಕೊಳ್ಳುವ ಸಲುವಾಗಿ ನಾನು ಪಿಚ್​ನ ಮಣ್ಣು ತಿಂದೆ” ಎಂದು ರೋಹಿತ್​ ಹೇಳಿದ್ದಾರೆ.

VISTARANEWS.COM


on

Rohit Sharma
Koo

ಬಾರ್ಬಡೋಸ್​: ಕಳೆದ ಶನಿವಾರ ನಡೆದ ಟಿ20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ಮೂಲಕ 13 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸುವಂತೆ ಮಾಡಿತ್ತು. ಜತೆಗೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಐತಿಹಾಸಿಕ ಗೆಲುವಿನ ಬಳಿಕ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಬಾರ್ಬಡೋಸ್​ ಕ್ರೀಡಾಂಗಣದ ಪಿಚ್​ನಲ್ಲಿನ ಮಣ್ಣನ್ನು ತಿಂದು ಧನ್ಯತಾ ಭಾವ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ರೋಹಿತ್​ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ನಾಯಕತ್ವದಲ್ಲಿ ಮೊದಲ ವಿಶ್ವಕಪ್​ ಗೆದ್ದ ಖುಷಿಯಲ್ಲಿ ರೋಹಿತ್​ ಪಂದ್ಯ ಮುಕ್ತಾಯದ ಬಳಿಕ ತುಂಬಾ ಭಾವುಕರಾಗಿ ಕಂಡು ಬಂದಿದ್ದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಬಾರ್ಬಡೋಸ್​ ಕ್ರೀಡಾಂಗಣದ ಪಿಚ್​ನಿಂದ ಒಂದು ಚಿಟಿಕೆ ಮಣ್ಣನ್ನು ತಿಂದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿತ್ತು.

ಇದೀಗ ಟಿ20 ವಿಶ್ವಕಪ್​ ಜತೆಗೆ ಫೋಟೋಶೂಟ್ ನಡೆಸಿದ ವೇಳೆ ರೋಹಿತ್ ಪಂದ್ಯದ ಬಳಿಕ ​ಮಣ್ಣು ತಿಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಆ ವಿಷಯಗಳನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ, ಯಾವುದನ್ನೂ ನಾನು ಸ್ಕ್ರಿಪ್ಟ್ ಮಾಡಿಲ್ಲ. ನಾನು ಮೈದಾನಕ್ಕೆ ಇಳಿದಾಗ ಆ ಕ್ಷಣವನ್ನು ಅನುಭವಿಸುತ್ತಿದ್ದೆ. ಗೆಲುವು ತಂದು ಕೊಟ್ಟ ಈ ಪಿಚ್​ನ ಋಣವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಜೀವನದುದ್ದಕ್ಕೂ ಈ ಪಿಚ್​ನ ಮಣ್ಣಿನ ನೆನಪನ್ನು ಇಟ್ಟು ಕೊಳ್ಳುವ ಸಲುವಾಗಿ ನಾನು ಪಿಚ್​ನ ಮಣ್ಣು ತಿಂದೆ” ಎಂದು ಹೇಳಿದರು. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಟಿ20 ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದರೂ ಕೂಡ ರೋಹಿತ್​ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. 2027ರ ಏಕದಿನ ವಿಶ್ವಕಪ್​ ಟೂರ್ನಿ ಕೂಡ ಆಡುವ ಸಾಧ್ಯತೆ ಇದೆ. ಈ ಟೂರ್ನಿ ಆಡಿ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿಯಾಗುವ ಯೋಜನೆ ಹಾಕಿಕೊಂಡಂತಿದೆ.

Continue Reading

ಕ್ರೀಡೆ

Shoaib Akhtar: ಭಗವದ್ಗೀತೆಯ ಸಂದೇಶ ಹಂಚಿಕೊಂಡ ಪಾಕ್​ ಆಟಗಾರ ಶೋಯೆಬ್ ಅಖ್ತರ್

Shoaib Akhtar: ಶೋಯೆಬ್ ಅಖ್ತರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಪಾಕ್​ ಪರ 163 ಏಕ ದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಏಕ ದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

VISTARANEWS.COM


on

Shoaib Akhtar
Koo

ಕರಾಚಿ: ಪಾಕಿಸ್ಥಾನದ ಮಾಜಿ ವೇಗಿ ಶೋಯೆಬ್ ಅಖ್ತರ್(Shoaib Akhtar) ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಭಗವದ್ಗೀತೆಯಲ್ಲಿ (Bhagavad Gita) ಉಲ್ಲೇಖಿಸಲಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ ಎಂಬ ಸಂದೇಶವನ್ನು ಅಖ್ತರ್ ಇನ್​ಸ್ಟಾದಲ್ಲಿ ಸ್ಟೋರಿ ಹಾಕಿದ್ದಾರೆ. ಇದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಇದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿದೆ.

ಅಖ್ತರ್​ ಅವರು ಹಂಚಿಕೊಂಡ ಸ್ಟೋರಿಯಲ್ಲಿ, ವಿಷ್ಣುವಿನ ಅವತಾರವಾದ ಫೋಟೊವನ್ನು ಹಂಚಿಕೊಂಡು, ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು ಎಂಬ ಸಂದೇಶ ಬರೆಯಲಾಗಿದೆ. ಅಖ್ತರ್​ ಅವರು ಭಗವದ್ಗೀತೆಯ ಈ ಸಾರವನ್ನು ಹಾಕಿದಕ್ಕೆ ಮುಸ್ಲಿಂ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕುರಾನ್​ ಹಲವು ಸಂದೇಶವಿದೆ ಇದನ್ನು ಬಿಟ್ಟು ಭಗವದ್ಗೀತೆಯ ಸಂದೇಶ ಹಾಕಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ಅಖ್ತರ್​ ಅವರು ತಮ್ಮ ಈ ಪೋಸ್ಟ್ ಡಿಲೀಟ್​ ಮಾಡಿಲ್ಲ.

ಪಾಕ್​ ವೇಗಿಗೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರದೇಶದ ರಾವಲ್ಪಿಂಡಿಯಲ್ಲಿ ಜನಿಸಿದ ಅಖ್ತರ್‌ “ರಾವಲ್ಪಿಂಡಿ ಎಕ್ಸ್‌ಪ್ರೆಸ್” ಎಂದೇ ಕ್ರಿಕೆಟ್​ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 2022ರಲ್ಲಿ ಅಖ್ತರ್ ಅವರು ‘ರಾವಲ್ಪಿಂಡಿ ಎಕ್ಸ್‌ಪ್ರೆಸ್; ರೇಸಿಂಗ್ ಎಗೇನ್ಸ್ಟ್ ದಿ ಆಡ್ಸ್’ ಎಂದ ಶೀರ್ಷಿಕೆಯ ತಮ್ಮ ಜೀವನಚರಿತ್ರೆಯ ಚಿತ್ರವನ್ನು ಘೋಷಣೆ ಮಾಡಿದ್ದರು. ಆದರೆ ಈ ಚಿತ್ರದ ನಿರ್ಮಾಣ ಆರಂಭವಾಗಿರುವ ಬಗ್ಗೆ ಸದ್ಯ ಇದುವರೆಗೆ ಯಾವುದೇ ಮಾಹಿತಿ ಇಲ್ಲ.

ಶೋಯೆಬ್ ಅಖ್ತರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಪಾಕ್​ ಪರ 163 ಏಕ ದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಏಕ ದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ IND vs PAK: ಶೋಯೆಬ್ ಅಖ್ತರ್ ಕಾಲೆಳೆದ ಸಚಿನ್​ ತೆಂಡೂಲ್ಕರ್-ವೀರೇಂದ್ರ ಸೆಹವಾಗ್

ಭಾರತಕ್ಕೆ ಬೆಂಬಲ ಸೂಚಿಸಿದ್ದ ಅಖ್ತರ್​


ಕಳೆದ ವರ್ಷ ನಡೆದಿದ್ದ ಏಷ್ಯಾಕಪ್​ನಲ್ಲಿ(Asia Cup 2023) ಪಾಕಿಸ್ತಾನ(IND vs PAK) ತಂಡವನ್ನು(IND vs PAK) ಫೈನಲ್​ ರೇಸ್​ನಿಂದ ಹೊರ ಹಾಕಲು ಭಾರತ ತಂಡ ಒಂದು ರೀತಿಯ ಫಿಕ್ಸಿಂಗ್​ ನಡೆಸುತ್ತಿದೆ ಎಂದು ಹೇಳಿದ್ದ ನೆಟ್ಟಿಗರೊಬ್ಬರಿಗೆ ಶೋಯೆಬ್ ಅಖ್ತರ್ ಸರಿಯಾಗಿ ಜಾಡಿಸಿದ್ದರು. ಅಸಂಬದ್ಧ ಹೇಳಿಕೆ ನೀಡಿದರೆ ಜಾಗ್ರತೆ ಎಂದು ಎಚ್ಚರಿಸಿದ್ದರು.

ಭಾರತದ ಎದುರು ಪಾಕಿಸ್ತಾನ ಗೆಲ್ಲಲಿಲ್ಲ ಎಂಬ ಮಾತ್ರಕ್ಕೆ ಈ ಕೀಳುಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ನು ಮಂದೆ ನೀಡಿದರೆ ಎಚ್ಚರಿಕೆ. ಭಾರತ ತನ್ನ ಆಟದ ಸಾಮರ್ಥ್ಯದಿಂದ ಗೆದ್ದಿದೆ. ನಮ್ಮವರಿಗೆ ಇದು ಸಾಧ್ಯವಾಗಿಲ್ಲ. ಸೋಲು ಕಂಡ ಬಳಿಕ ಭಾರತದ ಮೇಲೆ ಸುಮ್ಮನೆ ಗೂಬೆ ಕೂರಿಸೋದು ಬಿಟ್ಟುಬಿಡಿ” ಎಂದು ಸರಿಯಾಗಿ ಜಾಡಿಸಿದ್ದರು. ಅಖ್ತರ್ ಭಾರತ ತಂಡದ ಬಗ್ಗೆ ಹಲವು ಬಾರಿ ಆರೋಪ ಮಾಡಿದ್ದರೂ ಕೂಡ ಕೆಲವೊಮ್ಮೆ ಬೆಂಬಲವನ್ನು ಸೂಚಿಸಿದ್ದಾರೆ. ವಿಶೇಷವಾಗಿ ಸಚಿನ್​ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.

Continue Reading

ಕ್ರೀಡೆ

Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

Virat Kohli: 829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್‌ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ.

VISTARANEWS.COM


on

Virat Kohli
Koo

ದುಬೈ: ಟಿ20 ಕ್ರಿಕೆಟ್​ಗೆ ವಿದಾಯ(virat kohli retirement) ಹೇಳಿದ ವಿರಾಟ್​ ಕೊಹ್ಲಿಗೆ(Virat Kohli) ಗೌರವ ಸೂಚಕವಾಗಿ ಅವರ ಫೋಟೊವನ್ನು ಬುರ್ಜ್‌ ಖಲೀಫಾ(Burj Khalifa) ಕಟ್ಟಡದ ಮೇಲೆ ಪ್ರದರ್ಶನ ಮಾಡಲಾಯಿತು. ಲೇಸರ್​ ಲೈಟ್​ಗಳ ಮೂಲಕ ಕೊಹ್ಲಿಯ ಫೋಟೊ ಕಂಗೊಳಿಸಿದ ವಿಡಿಯೊ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಅವರು ಟಿ20 ವಿಶ್ವಕಪ್​ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಫೈನಲ್​ ಪಂದ್ಯದಲ್ಲಿ 76 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.

829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್‌ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ. ಹೈಮೆನೋಕಾಲಿಸ್‌ ಎಂಬ ಮರುಭೂಮಿಯ ಹೂವಿನ ಆಕಾರವು ಈ ಕಟ್ಟಡದ ತಳವಿನ್ಯಾಸಕ್ಕೆ ಪ್ರೇರಣೆಯಾಗಿದೆ. 2004ರ ಸೆಪ್ಟಂಬರ್‌ 20ರಂದು ಪ್ರಾರಂಭವಾದ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡದ್ದು 2010ರ ಜನವರಿ 4ರಂದು.

ಇದನ್ನೂ ಓದಿ Virat Kohli: ನನ್ನ ​ಅಹಂಕಾರವೇ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ಎಂದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

ದುಬೈ ಸರ್ಕಾರ ಈ ಹಿಂದೆ ಭಾರತದ 77ನೇ ಸ್ವಾತಂತ್ರ್ಯೋತ್ಸವದಂದು ಭಾರತದ ತ್ರಿವರ್ಣ ಧ್ವಜ, ಕೋವಿಡ್ ಸಂಕಷ್ಟದ ವೇಳೆ ಭಾರತಕ್ಕೆ ಧೈರ್ಯ ತುಂಬುವ ಸಂದೇಶವನ್ನು ಬುರ್ಜ್‌ ಖಲೀಫಾದಲ್ಲಿ ಪ್ರದರ್ಶಿಸಿತ್ತು. ಹಲವು ಭಾರತೀಯ ಚಲನಚಿತ್ತರಗಳ ಫೋಸ್ಟರ್​ಗಳನ್ನು ಕೂಡ ಬುರ್ಜ್‌ ಖಲೀಫಾದಲ್ಲಿ ಪ್ರರ್ಶಿಸಲಾಗುತ್ತದೆ. ಕಟ್ಟಡದ ಹೊರ ಆವರಣದ ಒಂದು ಸುತ್ತು ಬರಬಹುದಾದ ವೀಕ್ಷಣಾ ಬಾಲ್ಕನಿ 124 ಮತ್ತು 125ನೇ ಮಹಡಿಯಲ್ಲಿವೆ. ಗಾಜಿನ ಗೋಡೆಯ ಮೂಲಕ ನಾವು ಸುತ್ತಲಿನ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಪ್ರತಿಷ್ಠಿತ ಹೊಟೇಲ್‌ಗ‌ಳು, ಪ್ರಖ್ಯಾತ ಅಪಾರ್ಟ್‌ಮೆಂಟ್‌ಗಳು, ವ್ಯಾಪಾರಿ ಕೇಂದ್ರಗಳು ಇತ್ಯಾದಿ ಇವೆ. ಈ ಕಟ್ಟಡದಲ್ಲಿ ಒಂದು ಐಷಾರಾಮಿ ಮನೆಯನ್ನು ಹೊಂದುವುದು ದೇಶ-ವಿದೇಶಗಳ ಕೋಟ್ಯಾಧಿಪತಿಗಳ ಕನಸು ಎಂದರೆ ತಪ್ಪಲ್ಲ. ಈ ಕಟ್ಟಡವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಒಳಿತಾಗಿದೆ. ಹಾಗೆಯೇ ದೇಶ-ವಿದೇಶಗಳ ಪ್ರವಾಸಿಗರಿಗೆ ಈ ಅದ್ಭುತ ಕಟ್ಟಡವನ್ನು ನೋಡುವ ಸ್ಮರಣೀಯ ಅನುಭವ ಲಭ್ಯವಾಗುತ್ತದೆ. ಬುರ್ಜ್‌ ಖಲೀಫಾದ 125ನೇ ಮಹಡಿಯವರೆಗೆ ಹೋಗಲು ಪ್ರವಾಸಿಗರಿಗೆ ಅವಕಾಶವಿದೆ. ವಾರ್ಷಿಕ ಎರಡು ಮಿಲಿಯನ್​ಗೂ ಅಧಿಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

Continue Reading

ಕ್ರೀಡೆ

Jasprit Bumrah: ವಿಶ್ವಕಪ್​ ಗೆದ್ದ ಖುಷಿಯಲ್ಲಿ ಜಸ್​ಪ್ರೀತ್​ ಬುಮ್ರಾಗೆ ಟ್ರೀಟ್​ ಕೊಡಿಸಿದ ಪತ್ನಿ

Jasprit Bumrah:ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಮತ್ತು ಬುಮ್ರಾ ಅವರು 2021 ಮಾರ್ಚ್​ 15ರಂದು ಗೋವಾದಲ್ಲಿ ಮದುವೆಯಾಗಿದ್ದರು. ಮಹಾರಾಷ್ಟ್ರದವರಾದ ಸಂಜನಾ 2014ರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ತಲುಪಿದ್ದರು.

VISTARANEWS.COM


on

Jasprit Bumrah
Koo

ಬಾರ್ಬಡೋಸ್​: ಟಿ20 ವಿಶ್ವಕಪ್​(T20 World Cup) ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಭಾರತ ತಂಡದ ವಿಶ್ವಕಪ್(India’s T20 World Cup win)​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರಿಗೆ ಪತ್ನಿ, ಕ್ರೀಡಾ ನಿರೂಪಕಿಯೂ ಆಗಿರುವ ಸಂಜನಾ ಗಣೇಶನ್(Sanjana Ganesan) ಐಸ್‌ ಕ್ರೀಂ ಪಾರ್ಟಿ ಕೊಡಿಸಿದ್ದಾರೆ. ಪತ್ನಿ ಐಸ್‌ ಕ್ರೀಂ ಟ್ರೀಟ್​ ಕೊಟ್ಟ ಫೋಟೊವನ್ನು ಬುಮ್ರಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಾಕಿದ್ದಾರೆ.

ಫೈನಲ್​ ಪಂದ್ಯದ ಬಳಿಕ ಸಂಜನಾ ಅವರು ಪತಿ ಬುಮ್ರಾರನ್ನು ಇಲ್ಲಿನ ಸ್ಥಳೀಯ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿ ಐಸ್ ಕ್ರೀಂ ತಿನ್ನಿಸಿದ್ದಾರೆ. ‘ವಿಶ್ವ ಚಾಂಪಿಯನ್ ಜತೆಗೆ ಐಸ್ ಕ್ರೀಂ ತಿನ್ನುವ ಖುಷಿ’ ಎಂದು ಸಂಜನಾ ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಐಸ್‌ ಕ್ರೀಂ ಟ್ರೀಟ್​ ಕೊಟ್ಟ ಪತ್ನಿಗೆ ಧನ್ಯವಾದಗಳು ಮೈ ಡಿಯರ್..ಎಂದು ಬುಮ್ರಾ ಹೇಳಿದ್ದಾರೆ.

ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಮತ್ತು ಬುಮ್ರಾ ಅವರು 2021 ಮಾರ್ಚ್​ 15ರಂದು ಗೋವಾದಲ್ಲಿ ಮದುವೆಯಾಗಿದ್ದರು. ಮಹಾರಾಷ್ಟ್ರದವರಾದ ಸಂಜನಾ 2014ರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ತಲುಪಿದ್ದರು. ಬುಮ್ರಾ ಅವರು ಕಳೆದ ವರ್ಷ ಗಂಡು ಮಗುವಿನ ತಂದೆಯಾಗಿದ್ದರು. ಮಗುವಿಗೆ ‘ಅಂಗದ್(Angad) ಜಸ್​ಪ್ರೀತ್​ ಬುಮ್ರಾ’ ಎಂದು ಹೆಸರಿಡಲಾಗಿದೆ. ಅಂಗದ್​ ಎಂದರೆ ಯೋಧ ಎಂದರ್ಥ. ರಾಮಾಯಣದಲ್ಲಿ ಬರುವ ವಾಲಿಯ ಪುತ್ರನ ಹೆಸರು ಕೂಡ ಅಂಗದ್​. ಇದೇ ಹೆಸರನ್ನು ಬುಮ್ರಾ ಅವರು ತಮ್ಮ ಮಗನಿಗೆ ಇಟ್ಟಿದ್ದಾರೆ.

ಭಾರತದ ಸ್ಟಾರ್ ವೇಗಿ ಬುಮ್ರಾ ಈ ಬಾರಿಯ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಯಾವುದೇ ಬೌಲರ್​​ಗೆ ಕಡಿಮೆ ಇಲ್ಲದ ಎಕಾನಮಿ ರೇಟ್ ಪ್ರದರ್ಶಿಸಿದರು. ಅವರು 8.26 ಸರಾಸರಿ ಮತ್ತು 4.17 ಎಕಾನಮಿ ರೇಟ್​​​ನಲ್ಲಿ 15 ವಿಕೆಟ್​ ಉರುಳಿಸಿ ಭಾರತದ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ Jasprit Bumrah : ಜಸ್​ಪ್ರಿತ್ ಬುಮ್ರಾ ವೈಟ್ ಬಾಲ್ ಕ್ರಿಕೆಟ್​​ನ ಅತ್ಯುತ್ತಮ ಬೌಲರ್​ ಎಂದು ಹೊಗಳಿದ ಮೈಕಲ್ ವಾನ್

ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ


ಕೆರಿಬಿಯನ್‌ ರಾಷ್ಟ್ರದಲ್ಲಿ(Caribbean country) ಬೀಸುತ್ತಿರುವ ಭಾರೀ ಚಂಡಮಾರುತದಿಂದಾಗಿ ಬಾರ್ಬಡೋಸ್​ನಲ್ಲಿಯೇ ಉಳಿದಿರುವ ಟೀಮ್​ ಇಂಡಿಯಾ(Team India stuck in Barbados), ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಚಂಡಮಾರುತದ ಅಬ್ಬರ ಮತ್ತೆ ಹೆಚ್ಚಾಗಿರುವ ಕಾರಣ ಬಾರ್ಬಡೋಸ್​ನಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆಗೆ ತೊಂದರೆಯಾಗಿದೆ. ಜತೆಗೆ ವಿಮಾನ ನಿಲ್ದಾಣಗಳು ಬಂದ್‌ ಆಗಿವೆ. ಹೀಗಾಗಿ ಆಟಗಾರರು ಭಾರತಕ್ಕೆ ಬರುವುದು ಇನ್ನೂ 2 ದಿನ ತಡವಾಗುವ ಸಾಧ್ಯತೆ ಕಂಡುಬಂದಿದೆ.

ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.

ಸದ್ಯ ಟೀಮ್​ ಇಂಡಿಯಾದ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಬಾರ್ಬಡೋಸ್​ನ ಹೊಟೇಲ್‌ನಲ್ಲಿ ತಂಗಿದೆ. ಚಂಡಮಾರುತದ ಕಾರಣ, ಭಾರತೀಯ ಆಟಗಾರರಿರುವ ಹೊಟೇಲ್‌ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ. ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು.

Continue Reading
Advertisement
Rohit Sharma
ಕ್ರೀಡೆ6 mins ago

Rohit Sharma: ಪಿಚ್​ ಮಣ್ಣು ತಿಂದಿದ್ದೇಕೆ?; ಪ್ರತಿಕ್ರಿಯಿಸಿದ ರೋಹಿತ್​

Allahabad High Court
ದೇಶ12 mins ago

Allahabad High Court: ಮತಾಂತರ ತಡೆಯದಿದ್ದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್ ಹೈಕೋರ್ಟ್ ಕಳವಳ

Physical Abuse
ಬೆಂಗಳೂರು16 mins ago

Physical Abuse : ಶಿಕ್ಷಕನಿಂದ ಇದೆಂಥ ಅನಾಚಾರ! ಬಾಲಕಿಗೆ ಲೈಂಗಿಕ ಕಿರುಕುಳ

Actor Darshan Devil gang gets life imprisonment What do legal experts say
ಕ್ರೈಂ30 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹೆಸರು ಆಚೆ ಬಂದದ್ದು ಹೀಗೆ!

Road Rage Case
ಕರ್ನಾಟಕ31 mins ago

Road Rage Case: ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಕಾರು ಮಾಲೀಕನ ಕಾಪಾಡಿದ ಡ್ಯಾಶ್‌ ಕ್ಯಾಮೆರಾ; ವಿಡಿಯೊ ಇದೆ

Namma metro Yellow line
ಬೆಂಗಳೂರು43 mins ago

Namma Metro : ಗುಡ್‌ ನ್ಯೂಸ್‌- ಹಳದಿ ಮೆಟ್ರೋ ಮಾರ್ಗದಲ್ಲಿ ಟ್ರಯಲ್ ರನ್‌ ಮುಕ್ತಾಯ; ಸಿಗ್ನಲಿಂಗ್ ಟೆಸ್ಟ್ ಆರಂಭ

Shoaib Akhtar
ಕ್ರೀಡೆ58 mins ago

Shoaib Akhtar: ಭಗವದ್ಗೀತೆಯ ಸಂದೇಶ ಹಂಚಿಕೊಂಡ ಪಾಕ್​ ಆಟಗಾರ ಶೋಯೆಬ್ ಅಖ್ತರ್

Gold Rate Today
ಚಿನ್ನದ ದರ1 hour ago

Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

Road Accident
ಕ್ರೈಂ1 hour ago

Road Accident : ಹೆದ್ದಾರಿಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ಗೆ ‌ವೃದ್ಧ ಸಾವು; ಯುವಕನ ತಲೆ ಮೇಲೆ ಹರಿದ ಟ್ಯಾಂಕರ್‌

Virat Kohli
ಕ್ರೀಡೆ2 hours ago

Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ20 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌