Actor Dhanush: ಇಳಯರಾಜ ಬಯೋಪಿಕ್‌ ಹೊಸ ಪೋಸ್ಟರ್‌ ಔಟ್‌; ಸಹೋದರರು ಎಂದು ಕಮಲ್‌ ಹಾಸನ್‌ ಹೇಳಿದ್ಯಾರಿಗೆ? - Vistara News

ಕಾಲಿವುಡ್

Actor Dhanush: ಇಳಯರಾಜ ಬಯೋಪಿಕ್‌ ಹೊಸ ಪೋಸ್ಟರ್‌ ಔಟ್‌; ಸಹೋದರರು ಎಂದು ಕಮಲ್‌ ಹಾಸನ್‌ ಹೇಳಿದ್ಯಾರಿಗೆ?

Actor Dhanush: ತಮಿಳು ನಟ ಧನುಷ್ (Actor Dhanush) ಅವರು ಇಳಯರಾಜ ಬಯೋಪಿಕ್‌ನಲ್ಲಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತಗೊಂಡಿದೆ. ಅರುಣ್ ಮಾಥೇಶ್ವರನ್ ನಿರ್ದೇಶನ ಕನೆಕ್ಟ್ ಮೀಡಿಯಾ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಫಸ್ಟ್‌ ಲಕ್‌ ಪೋಸ್ಟರ್‌ (Ilaiyaraaja first poster) ಚೆನ್ನೈನಲ್ಲಿ ಅನಾವರಣಗೊಂಡಿತ್ತು.

VISTARANEWS.COM


on

Actor Dhanush unveils new poster from Ilaiyaraaja biopic
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಸಂಗೀತ ಮಾಂತ್ರಿಕ ಇಳಯರಾಜ ಮತ್ತು ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರಿಗೆ ಇಂದು (ಜೂನ್ 2) ಜನುಮದಿನದ ಸಂಭ್ರಮ. ವಿಶೇಷ ಸಂದರ್ಭದಲ್ಲಿ, ನಟರಾದ ಕಮಲ್ ಹಾಸನ್ ಮತ್ತು ಧನುಷ್ ಶುಭ ಹಾರೈಸಿದರು. ಇಳಯರಾಜ 81ನೇ ವಂಸತಕ್ಕೆ ಕಾಲಿಟ್ಟಿದ್ದಾರೆ. ತಮಿಳು ನಟ ಧನುಷ್ (Actor Dhanush) ಅವರು ಇಳಯರಾಜ ಬಯೋಪಿಕ್‌ನಲ್ಲಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತಗೊಂಡಿದೆ. ಅರುಣ್ ಮಾಥೇಶ್ವರನ್ ನಿರ್ದೇಶನ ಕನೆಕ್ಟ್ ಮೀಡಿಯಾ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಫಸ್ಟ್‌ ಲಕ್‌ ಪೋಸ್ಟರ್‌ (Ilaiyaraaja first poster) ಚೆನ್ನೈನಲ್ಲಿ ಅನಾವರಣಗೊಂಡಿತ್ತು. ಕನ್ನಡದಲ್ಲೂ ಸಿನಿಮಾ ಬರಲಿದೆ.

ಇದೀಗ ಧನುಷ್ ತಮ್ಮ ಮುಂಬರುವ ಚಿತ್ರವಾದ ಇಳಯರಾಜ ಅವರ ಜೀವನಚರಿತ್ರೆಯ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಸಾವಿರಾರು ಜನರ ಮುಂದೆ ಹಾರ್ಮೋನಿಯಂ ಹಿಡಿದು ವೇದಿಕೆಯಲ್ಲಿ ನಿಂತಿರುವ ಪೋಸ್ಟರ್‌ ಹಂಚಿಕೊಂಡಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಮೇಷ್ಟ್ರೇ’ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.

ಕಮಲ್ ಹಾಸನ್ ಎಕ್ಸ್‌ನಲ್ಲಿ ಇಳಯರಾಜ ಮತ್ತು ಮಣಿರತ್ನಂ ಜತೆಗಿರುವ ಫೋಟೊವನ್ನು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಡಬಲ್ ಹ್ಯಾಪಿನೆಸ್. ಸಂತೋಷವನ್ನು ಅಳೆಯಲು ಸಾಧ್ಯವೇ? ಇಂದು ನನ್ನ ದೊಡ್ಡಣ್ಣ ಹಾಗೂ ಚಿಕ್ಕಣ್ಣನ ಜನ್ಮದಿನವಾಗಿರುವುದರಿಂದ ಇದು ಸಂತೋಷದ ಕ್ಷಣವಾಗಿದೆ. ನನ್ನ ಪ್ರೀತಿಯ ಸಹೋದರ ಇಳಯರಾಜ ಅವರು ಸಂಗೀತದಲ್ಲಿ ಕಥೆಯನ್ನು ಹೇಳಲಿದ್ದಾರೆ. ನಿಮ್ಮಿಬ್ಬರಿಗೂ ಜನ್ಮದಿನದ ಶುಭಾಶಯಗಳು. ನಮ್ಮ ಮೂವರ ಪರಂಪರೆ ಶಾಶ್ವತವಾಗಿ ಮುಂದುವರಿಯಲಿ. ಹ್ಯಾಪಿ ಬರ್ತ್‌ಡೇ ಇಳಯರಾಜ ಮತ್ತು ಹ್ಯಾಪಿ ಬರ್ತ್‌ಡೇ ಮಣಿರತ್ನಂ. ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Dhanush: ಧನುಷ್‌ಗೆ ಐಶ್ವರ್ಯಾ ದೋಖಾ; ಐಶ್ವರ್ಯಾಗೆ ಧನುಷ್‌ ಮೋಸ! ಖ್ಯಾತ ಗಾಯಕಿಯಿಂದ ಸೆನ್ಷೆಷನಲ್‌ ಮಾಹಿತಿ

ತಮಿಳು ನಟ ಧನುಷ್ (Actor Dhanush) ಅವರು ಇಳಯರಾಜ ಬಯೋಪಿಕ್‌ನಲ್ಲಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತಗೊಂಡಿದೆ. ಅರುಣ್ ಮಾಥೇಶ್ವರನ್ ನಿರ್ದೇಶನ ಕನೆಕ್ಟ್ ಮೀಡಿಯಾ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದ ಫಸ್ಟ್‌ ಲಕ್‌ ಪೋಸ್ಟರ್‌ (Ilaiyaraaja first poster) ಚೆನ್ನೈನಲ್ಲಿ ಅನಾವರಣಗೊಂಡಿತ್ತು.

ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ದೇಶಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇಷ್ಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಸಾಕಾಗುವುದಿಲ್ಲ. ಇತರ ಹಲವು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಬೇಕು ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟರು.

ಈ ಬಯೋಪಿಕ್‌ಗೆ ಇಳಯರಾಜ ಅವರೇ ಸ್ವತಃ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರಕ್ಕೆ ನೀರವ್ ಷಾ ಕ್ಯಾಮೆರಾ ನಿರ್ವಹಿಸುತ್ತಿದ್ದು, ಮುತ್ತುರಾಜ ನಿರ್ಮಾಣ ವಿನ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಮತ್ತು ಇತರ ವಿವರಗಳು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇಳಯರಾಜ ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ. ಏಳು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. 1,400 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಂಗೀತವಾದ್ಯ ನೀಡಿದ್ದಾರೆ. ಭಾರತದ ಅದರಲ್ಲೂ ತಮಿಳಿನ ಜಾನಪದ ಸಂಗೀತವನ್ನು ಆಧರಿಸಿಯೇ ಹೆಚ್ಚಾಗಿ ಇವರು ಹಾಡು ಕಟ್ಟಿದ್ದಾರೆ. ಇದೀಗ ಇಳಯರಾಜ ಅವರ ಜೀವನ ಪ್ರಯಾಣದ ಕುರಿತಾದ ಚಿತ್ರ ಸೆಟ್ಟೇರಲು ಸಜ್ಜಾಗುತ್ತಿದೆ.

ಧನುಷ್ ಈಗಾಗಲೇ ʻಕುಬೇರʼ ಮತ್ತು ʻರಾಯನ್‌ʼ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ʻನಿಲವುಕು ಎನ್ಮೇಲ್ ಎನ್ನದಿ ಕೋಬಂʼ ಚಿತ್ರವನ್ನು ಸಹ ನಿರ್ದೇಶಿಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ

VISTARANEWS.COM


on

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಅಟ್ಲಿ ಅವರ ಪತ್ನಿ ಪ್ರಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಟ್ಲಿ ಹಾಗೂ ಅವರ ಪತ್ನಿ ಪ್ರಿಯಾ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಈ ದಂಪತಿ ಎರಡನೇ ಬಾರಿಗೆ ಪೋಷಕರಾಗಿದ್ದು, ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರು ತಮ್ಮ ಎರಡನೇ ಪ್ರೆಗ್ನೆನ್ಸಿ ಸುದ್ದಿಯನ್ನು ಹಂಚಿಕೊಂಡ ಮರುದಿನವೇ ಅಟ್ಲೀ ಕೂಡ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಿಯಾ ಅಟ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಟ್ಲಿ ಮತ್ತು ಪ್ರಿಯಾ, ತಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಪೋಸ್ಟ್‌ ಗೆ ‘ಧನ್ಯತೆಯ ಭಾವ ಮೂಡಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ತಮ್ಮ ಮೊದಲ ಪುತ್ರ ಮೀರ್ ಈಗ ದೊಡ್ಡ ಅಣ್ಣನ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿರುವ ಮುದ್ದಾದ ಪೋಸ್ಟರ್ ಒಂದನ್ನೂ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ.
ಅಟ್ಲಿ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇಡೀ ದೇಶದ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಅಟ್ಲಿ ಮತ್ತು ಪ್ರಿಯಾ ಹಲವು ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಎಂಟು ವರ್ಷಗಳ ನಂತರ 2023ರ ಜನವರಿ 31ರಂದು ದಂಪತಿಗೆ ಮೊದಲ ಪುತ್ರ ಮೀರ್ ಜನಿಸಿದ್ದ. ಈಗ ಎರಡನೇ ಮಗುವಿನ ಆಗಮನವಾಗಿದೆ.
ಚಿತ್ರರಂಗದಲ್ಲಿಯೂ ಅಟ್ಲಿ ಅವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈಗ ಅವರು ‘ರಾಕಾ’ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

Continue Reading

ಸಿನಿಮಾ

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

Parvati Nair: ಐರ್ಲೆಂಡ್‌ನ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮಿಳು ಥ್ರಿಲ್ಲರ್ “ಊಣ್ ಪರವೈಲ್ ” ಹೆಸರು ಬಿಡುಗಡೆಯಾಗಿದೆ. ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Parvati Nair to play dual role in suspense thriller un Paravail Tamil film

ಬೆಂಗಳೂರು: ಇತ್ತೀಚೆಗೆ ಐರ್ಲೆಂಡ್, ಡಬ್ಲಿನ್‌ನಲ್ಲಿ ನಡೆದ ಭಾರತೀಯ ಚಲನಚಿತ್ರೋತ್ಸವದಲ್ಲಿ ಬಹುನಿರೀಕ್ಷಿತ ತಮಿಳು ಥ್ರಿಲ್ಲರ್ ಮೂವಿ ” ಊಣ್ ಪರವೈಲ್ ” ಅಧಿಕೃತವಾಗಿ ಬಿಡುಗಡೆಯಾಯಿತು. ತಾಲ್ ಮತ್ತು ಕಹೋ ನಾ ಪ್ಯಾರ್ ಹೈ ಖ್ಯಾತಿಯ ಪ್ರಸಿದ್ಧ ಬಾಲಿವುಡ್ ಛಾಯಾಗ್ರಾಹಕ ಕಬೀರ್ ಲಾಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ಪಾರ್ವತಿ ನಾಯರ್ (Parvati Nair) ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಸಾಧಾರಣ ನಟನಾ ಕೌಶಲ್ಯವನ್ನು ಪ್ರದ‌ರ್ಶಿಸಿದ್ದಾರೆ. ಊಣ್ ಪರವೈಲ್ ಚಿತ್ರವು ಸಸ್ಪೆನ್ಸ್, ರಹಸ್ಯ ಮತ್ತು ಭಾವನಾತ್ಮಕ ನಾಟಕದ ವಿಶಿಷ್ಟ ಮಿಶ್ರಣವಾಗಿದೆ ಎಂದು ಪಾರ್ವತಿ ನಾಯರ್ ಹೇಳಿದರು.

ಪಾರ್ವತಿ ನಾಯರ್‌ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. “ಭವ್ಯ ಮತ್ತು ದಿವ್ಯಾ ದ್ವಿಪಾತ್ರಗಳನ್ನು ನಿರ್ವಹಿಸುವುದು ಸವಾಲಾಗಿತ್ತು. ಥ್ರಿಲ್ಲರ್‌ ಸಿನಿಮಾದಲ್ಲಿ ನನ್ನ ಅಭಿಯಾನವನ್ನು ಪ್ರದರ್ಶಿಸಲು ರೋಮಾಂಚನಗೊಂಡಿದ್ದೇನೆ ಎಂದಿದ್ದಾರೆ. ಇನ್ನು “ಊಣ್ ಪರವೈಲ್” ನಲ್ಲಿ ಪಾರ್ವತಿ ನಾಯರ್ ಅದ್ಭುತವಾಗಿ ನಟಿಸಿದ್ದಾರೆ. ಎರಡು ವಿಭಿನ್ನ ಪಾತ್ರಗಳಲ್ಲಿ ದಿವ್ಯಾ, ದೃಢಸಂಕಲ್ಪವುಳ್ಳ ಮತ್ತು ರಕ್ಷಿಸುವ ಸಹೋದರಿ ಮತ್ತು ಭವ್ಯಾ, ನಿಗೂಢ ಸಂದರ್ಭಗಳಲ್ಲಿ ದುರಂತ ಅಂತ್ಯವನ್ನು ಎದುರಿಸುವ ದೃಷ್ಟಿಹೀನ ಹುಡುಗಿಯಾಗಿದ್ದಾಳೆ. 

Parvati Nair to play dual role in suspense thriller un Paravail Tamil film

ದಿವ್ಯಾ ತನ್ನ ಸಹೋದರಿ ಭವ್ಯಳ ಸಾವಿನ ಸುತ್ತಲಿನ ಸತ್ಯವನ್ನು ಆಳವಾಗಿ ಪರಿಶೀಲಿಸಿದಾಗ, ಆಕೆಯ ಹಿಂದಿನ ರಹಸ್ಯಗಳು ಮತ್ತು ಸುಳ್ಳಿನ ಸಂಕೀರ್ಣ ಜಾಲವನ್ನು ಬಹಿರಂಗಪಡಿಸುತ್ತಾರೆ. ಊಣ್ ಪರವೈಲ್ ಮಹಿಳಾ ಪ್ರಧಾನ ಚಿತ್ರವಾಗಿದ್ದು ಅದು ಮಹಿಳೆಯರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವದ ಮೇಲೆ ಬೆಳಕು ಚೆಲ್ಲುತ್ತದೆ” ಎಂದು ನಿರ್ದೇಶಕ ಕಬೀರ್ ಲಾಲ್ ಹೇಳಿದರು. “ಪಾರ್ವತಿ ನಾಯರ್ ಅವರ ಗಮನಾರ್ಹ ಅಭಿನಯವು ನಿರೂಪಣೆಗೆ ಆಳ ಮತ್ತು ಸೂಕ್ಷ್ಮತೆಯನ್ನು ತರುತ್ತದೆ. ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದುಇಟ್ಟುಕೊಳ್ಳಲಿದೆ. ಐರ್ಲೆಂಡ್‌ನ ಭಾರತೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರದ ಬಿಡುಗಡೆಯು ಮತ್ತಷ್ಟು ಉತ್ಸಾಹದಿಂದ ಕೂಡಿತ್ತು. ಉದ್ಯಮದ ತಜ್ಞರು ಮತ್ತು ಚಲನಚಿತ್ರ ಉತ್ಸಾಹಿಗಳು ಚಲನಚಿತ್ರದ ವಿಶಿಷ್ಟತೆಯನ್ನು ಶ್ಲಾಘಿಸಿದರು. 

ಪಾರ್ವತಿ ನಾಯರ್ ಅವರ ಅದ್ವಿತೀಯ ಅಭಿನಯದ ಕಥಾಹಂದರ ಹೊಂದಿರುವ ಈ ಚಿತ್ರ ಭಾರತದಲ್ಲಿ ಡಿಸೆಂಬರ್ 2024 ರೊಳಗೆ ಬಿಡುಗಡೆಗೊಳ್ಳಲಿದೆ. ಊಣ್ ಪರವೈಲ್ ಬಗ್ಗೆ” ಊಣ್ ಪರವೈಲ್” ಅಜಯ್ ಕುಮಾರ್ ಸಿಂಗ್ ಮತ್ತು ರೇಖಾ ಸಿಂಗ್ ನಿರ್ಮಿಸಿದ ತಮಿಳು ಥ್ರಿಲ್ಲರ್ ಆಗಿದೆ. ಚಿತ್ರದ ಹಿಡಿತದ ನಿರೂಪಣೆ ಮತ್ತು ಪಾರ್ವತಿ ನಾಯರ್ ಅವರ ಅಸಾಧಾರಣ ಅಭಿನಯವು ಪ್ರೇಕ್ಷಕರನ್ನು ಅವರ ಆಸನಗಳ ತುದಿಯಲ್ಲಿ ಇರಿಸುವ ಭರವಸೆ ನೀಡುತ್ತದೆ.

Continue Reading

ಸಿನಿಮಾ

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಧ್ಯರಾತ್ರಿಯೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

VISTARANEWS.COM


on

Superstar Rajinikanth is unwell Family members admitted to hospital in the middle of the night

ಸೂಪರ್‌ ಸ್ಟಾರ್‌ ರಜನಿಕಾಂತ್ (Actor Rajinikanth) ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ (ಸೆ.30) ಮಧ್ಯರಾತ್ರಿ ತಲೈವಾ ರಜನಿಕಾತ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಜನಿಕಾಂತ್​ಗೆ ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್‌ ಅಭಿನಯಿಸಿರುವ ವೆಟ್ಟೈಯನ್​​​ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್‌ಗೆ 73 ವರ್ಷ ವಯಸ್ಸು ಆಗಿದೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mallikarjun Kharge: ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಅಸ್ವಸ್ಥಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Upendra : ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್; ಕಲೀಷ ಪಾತ್ರದಲ್ಲಿ ಮಿಂಚಲಿರುವ ಉಪೇಂದ್ರ

Actor Upendra : ಸೂಪರ್‌ ಸ್ಟಾರ್‌ ತಲೈವಾ ರಜಿನಿಕಾಂತ್‌ ಜತೆಗೆ ರಿಯಲ್ ಸ್ಟಾರ್ ಉಪೇಂದ್ರ ಮಿಂಚಲಿದ್ದಾರೆ. ಕೂಲಿ ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Real Star Upendra Acting with Superstar Rajinikanth Coolie Movie

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading
Advertisement
Latest14 hours ago

ಇತಿಹಾಸ ಬರೆಯಲು ಸಜ್ಜಾದ ರನ್ ಮಷೀನ್: ಐಪಿಎಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ಹೊಸ ರೆಕಾರ್ಡ್‌

Latest14 hours ago

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

Latest15 hours ago

ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಪೆಟ್ಟು: 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಯುಎಇ ಸೂಚನೆ

ಸಿನಿಮಾ16 hours ago

ಎಲೆಕ್ಷನ್ ಮುಗಿದರೂ ಮುಗಿಯದ ದಳಪತಿ ಆಸ್ತಿ ಸಂಘರ್ಷ: ಹೆಂಡತಿಗೆ ಕೊಟ್ಟ 12 ಕೋಟಿ ಸಾಲದ ರಹಸ್ಯವೇನು?

Latest16 hours ago

ಹರಿಹರ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ, ಟ್ರಸ್ಟಿಗಳ ನಡುವೆ ಆರೋಪ-ಪ್ರತ್ಯಾರೋಪ.

Latest17 hours ago

RCB v/s GT ಪಂದ್ಯದ ವೇಳೆ ಭದ್ರತಾ ವೈಫಲ್ಯ: 240 ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದೇಕೆ? ಹೊರಬಿತ್ತು ಶಾಕಿಂಗ್‌ ಸತ್ಯ!

Latest18 hours ago

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ: ಮೇ 1ರಿಂದ ಬದಲಾಗಲಿವೆ ಎಲ್‌ಪಿಜಿ ನಿಯಮಗಳು

Latest20 hours ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ21 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest21 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌