Hassan Lok Sabha Constituency : ಅತ್ಯಾಚಾರ ಆರೋಪಿ ಪ್ರಜ್ವಲ್​ ರೇವಣ್ಣ ಹಾಸನದಲ್ಲಿ ಮತ್ತೆ ಗೆಲ್ಲುವರೇ? - Vistara News

ಪ್ರಮುಖ ಸುದ್ದಿ

Hassan Lok Sabha Constituency : ಅತ್ಯಾಚಾರ ಆರೋಪಿ ಪ್ರಜ್ವಲ್​ ರೇವಣ್ಣ ಹಾಸನದಲ್ಲಿ ಮತ್ತೆ ಗೆಲ್ಲುವರೇ?

Hassan Lok Sabha Constituency: ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿವೆ. ಜೆಡಿಎಸ್ 4, ಕಾಂಗ್ರೆಸ್ 2, ಬಿಜೆಪಿ 2 ಸ್ಥಾನಗಳನ್ನು ಹೊಂದಿವೆ.

VISTARANEWS.COM


on

Hassan Lok Sabha Constituency
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಸನ ಲೋಕಸಭಾ ಕ್ಷೇತ್ರವು ಆರಂಭದಲ್ಲಿ ಮೈಸೂರು ರಾಜ್ಯದ ಭಾಗವಾಗಿತ್ತು. 1957ರಲ್ಲಿ ಈ ಕ್ಷೇತ್ರವನ್ನು ಹಾಸನ ಎಂದು ಗುರುತಿಸಲಾಯಿತು. 1974 ರಲ್ಲಿ, ಹಾಸನ ಕ್ಷೇತ್ರವು ಕರ್ನಾಟಕದ ಭಾಗವಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಜನತಾದಳದಿಂದ ಹಾಗೂ ಮೂರು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿದೆ. 1999ರಲ್ಲಿ ದೇವೇಗೌಡರನ್ನು ಸೋಲಿಸಿದ್ದ ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಎಂ.ಪಟೇಲ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಮೂಲಕ ದಶಕಗಳ ಹಿಂದಿನ ರಾಜಕೀಯ ಹೋರಾಟಕ್ಕೆ ಮತ್ತೆ ಚಾಲನೆ ಸಿಕ್ಕಿದೆ.

ಬೆಂಗಳೂರಿನಿಂದ 200 ಕಿಲೋಮೀಟರ್ ದೂರದಲ್ಲಿರುವ ಈ ನಗರವು ಹೊಯ್ಸಳ ರಾಜರ ಪ್ರಾಚೀನ ತಾಣಗಳಿಗೆ ನೆಲೆಯಾಗಿದೆ. ಹಾಸನ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ ಸುಮಾರು 2,016,000. ಈ ಪೈಕಿ 1,561,000 ಮತದಾರರಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಜನಸಂಖ್ಯೆಯ ಸುಮಾರು 78% ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, 22% ರಷ್ಟು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ.

ಹಾಸನ ಲೋಕಸಭೆ ಕ್ಷೇತ್ರ ಸಾಮಾನ್ಯ ವರ್ಗದ ಸಂಸತ್ ಸ್ಥಾನವಾಗಿದೆ. ಇದು ಇಡೀ ಹಾಸನ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗವನ್ನು ಒಳಗೊಂಡಿದೆ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ವಿಧಾನಸಭಾ ಕ್ಷೇತ್ರಗಳಿವೆ. ಜೆಡಿಎಸ್ 4, ಕಾಂಗ್ರೆಸ್ 2, ಬಿಜೆಪಿ 2 ಸ್ಥಾನಗಳನ್ನು ಹೊಂದಿವೆ.

ಹಿಂದಿನ ಫಲಿತಾಂಶಗಳು

2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎ.ಮಂಜು 5,35,382 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಬಿಎಸ್ಪಿಯ ವಿನೋದ್ ರಾಜ್ ಕೆ.ಎಚ್ 38,761 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು.2019ರ ಚುನಾವಣೆಯಲ್ಲಿ ಜೆಡಿಎಸ್ ಶೇ.52.92ರಷ್ಟು ಮತಗಳನ್ನು ಪಡೆದಿತ್ತು.

2014ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 5,09,841 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ನ ಎ.ಮಂಜು 4,09,378 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಜೆಡಿಎಸ್ ಶೇ.44.44ರಷ್ಟು ಮತಗಳನ್ನು ಪಡೆದಿದೆ.

ಇದನ್ನೂ ಓದಿ: Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರು ಬಿಜೆಪಿಯ ಕೆ.ಎಚ್.ಹನುಮೇಗೌಡ ಅವರನ್ನು 2,91,113 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.50.63ರಷ್ಟು ಮತಗಳನ್ನು ಪಡೆದಿತ್ತು.

ದೇವೇಗೌಡ ಕುಟುಂಬದ ಭದ್ರಕೋಟೆ

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ಪಕ್ಷ ಮತ್ತು ಕುಟುಂಬದ ಭದ್ರಕೋಟೆಯಾಗಿ ಪರಿವರ್ತಿಸಿದ್ದಾರೆ. 1991ರಲ್ಲಿ ಅವರ ಮೊದಲ ವಿಜಯದ ನಂತರ, ಅವರು 1998, 2004, 2009 ಮತ್ತು 2014 ರಲ್ಲಿ ಮರು ಆಯ್ಕೆಯಾದರು.

ಹಾಸನ ಲೋಕಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ ಸುಮಾರು 2016000. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ಸರಾಸರಿ ಸಾಕ್ಷರತಾ ಪ್ರಮಾಣವು ಸುಮಾರು 69.34% ರಷ್ಟಿತ್ತು. ಎಸ್ಸಿ ಮತದಾರರು ಸುಮಾರು 19.5% ರಷ್ಟಿದ್ದರೆ, ಎಸ್ಟಿ ಮತದಾರರು ಸುಮಾರು 1.8% ರಷ್ಟಿದ್ದಾರೆ. ಸುಮಾರು 1294690 ಗ್ರಾಮೀಣ ಮತದಾರರು 78.4% ರಷ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

IND vs SA Final: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳಲ್ಲಿ ಆಡಿದ್ದು, ಭಾರತ 4 ಪಂದ್ಯ ಗೆದ್ದಿದೆ. 2 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದೆ. 2022ರಲ್ಲಿ ನಡೆದಿದ್ದ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಅಂತರದ ಸೋಲು ಕಂಡಿತ್ತು.

VISTARANEWS.COM


on

IND vs SA Final
Koo

ಬಾರ್ಬಡೋಸ್​: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯ(IND vs SA Final) ಲೀಗ್​, ಸೂಪರ್-8 ಮತ್ತು ನಾಕೌಟ್​ ಪಂದ್ಯಗಳಿಗೆ ಮಳೆಯಿಂದ ಅಡಚಣೆ ಉಂಟಾಗಿತ್ತು. ಇದೀಗ ಇಂದು ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಫೈನಲ್​ ಪಂದ್ಯಕ್ಕೂ ಭಾರೀ ಮಳೆ ಭೀತಿ ಎದುರಾಗಿದೆ.

ಫೈನಲ್​ ಪಂದ್ಯಕ್ಕೂ ಹವಾಮಾನ ಇಲಾಖೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶೇ.70ರಷ್ಟು ಮಳೆಯಾಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಒಂದೊಮ್ಮೆ ನಿಗದಿತ ದಿನ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನಕ್ಕೆ ಮುಂದುವರಿಯಲಿದೆ. ಸೂಪರ್​ 8 ಹಂತದಲ್ಲಿ ಮತ್ತು ಸೆಮಿಫೈನಲ್​ ಪಂದ್ಯ ಮಳೆಯಿಂದ ಮೀಸಲು ದಿನವೂ ಫಲಿತಾಂಶ ಕಾಣದಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸ್ಥಾನ ಮುಂದಿನ ಹಂತಕ್ಕೇರುತ್ತದೆ. ಆದರೆ ಫೈನಲ್​ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.

ಮುಖಾಮುಖಿ


ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ 26 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 14 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳಲ್ಲಿ ಆಡಿದ್ದು, ಭಾರತ 4 ಪಂದ್ಯ ಗೆದ್ದಿದೆ. 2 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದೆ. 2022ರಲ್ಲಿ ನಡೆದಿದ್ದ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಅಂತರದ ಸೋಲು ಕಂಡಿತ್ತು.

ಜಂಟಿ ವಿಜೇತರ ಘೋಷಣೆ


ಒಂದು ವೇಳೆ ಫೈನಲ್‌(T20 World Cup 2024) ಪಂದ್ಯ ಮೀಸಲು ದಿನದಲ್ಲಿಯೂ ನಡೆಯದೇ ಹೋದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಭಾರತ ಮತ್ತು ಆತಿಥೇಯ ಶ್ರೀಲಂಕಾ ಎರಡು ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಲಾಗಿತ್ತು.

ಕೊಲಂಬೊದಲ್ಲಿ ನಡೆದಿದ್ದ ಆ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ 5 ವಿಕೆಟ್​ಗೆ 244 ರನ್ ಗಳಿಸಿತು. ಭಾರತ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿದ ವೇಳೆ ಜೋರಾಗಿ ಮಳೆ ಸುರಿಯಿತು. ಮಳೆ ಬಿಡುವು ನೀಡದೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಕೂಡ ಪೂರ್ಣ ಫಲಿತಾಂಶ ಕಾಣದಿದ್ದರೆ ಇತ್ತಂಡಗಳು ಕೂಡ ಜಂಟಿ ಚಾಂಪಿಯನ್​ ಎನಿಸಿಕೊಳ್ಳಲಿದೆ. ಭಾರತ 2ನೇ ಕಪ್​ ಗೆದ್ದರೆ, ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದಂತಾಗುತ್ತದೆ.

Continue Reading

ಕರ್ನಾಟಕ

Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

Actor Darshan: ಶನಿವಾರ ಬೆಳಗ್ಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ನಟ ದರ್ಶನ್‌ (Actor Darshan) ಅವರಿಗೆ ಜೈಲಿನ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಅದರಂತೆ, ಶುಕ್ರವಾರ (ಜೂನ್‌ 28) ರಾತ್ರಿ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಜೈಲಿನ ಅನ್ನ-ಸಾಂಬಾರ್‌ ತಿಂದು ಬಸವಳಿದಿದ್ದ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್‌ ಸಾಂಬಾರ್‌ ಸೇವಿಸಿದ ದರ್ಶನ್‌ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ.

ಶನಿವಾರ (ಜೂನ್‌ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್‌ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Actor Darshan

6106 ಸ್ಟಿಕ್ಕರ್‌ಗಳಿಗೆ ಡಿಮ್ಯಾಂಡ್

ʻʻಡಿ 6106ʼʼಎಂದು ಒಬ್ಬ ಅಭಿಮಾನಿ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ದರ್ಶನ್ ಕೈದಿ ನಂಬರ್‌ನಲ್ಲಿಯೇ ಮೊಬೈಲ್ ಕವರ್‌ ಕೂಡ ಬಂದಿದೆ. ಬೈಕ್,ಆಟೋಗಳ ಹಿಂದೆ ಕೂಡ ಇದೇ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್‌ವನ್ನು ನೂರಾರು ಫ್ಯಾನ್ಸ್‌ ಹಾಕಿಕೊಂಡು ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಾರೆ. ಕೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟ್ರೆಂಡಿಂಗ್ ಆಗುತ್ತಿದೆ.

ಸದ್ಯ ಈಗ ಕೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ ಎನ್ನಲಾಗಿದ್ದು ವಿಭಿನ್ನ ಬಣ್ಣ, ವಿನ್ಯಾಸದಲ್ಲಿ ದರ್ಶನ್ ಫ್ಯಾನ್ಸ್ ಇದನ್ನು ಮಾಡಿಸಿಕೊಂಡು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ.ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇತ್ತೀಚೆಗೆ ಅವರ ವಿಶೇಷ ಚೇತನ ಅಭಿಮಾನಿಯೊಬ್ಬರು ಅವರನ್ನು ನೋಡಲು ಬಂದಿದ್ದರು. ಈ ಘಟನೆಯ ನಂತರ ಅಭಿಮಾನಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದು ಜೈಲಿನಿಂದಲೇ ನಟ ದರ್ಶನ್ ಮನವಿ ತಿಳಿಸಿದ್ದಾರೆ.

ಇದನ್ನೂ ಓದಿ: Actor Darshan: ಒಂದಲ್ಲ, ಎರಡಲ್ಲ…. ಬರೋಬ್ಬರಿ 50 ನಿಮಿಷ ರೇಣುಕಾ ಸ್ವಾಮಿ ಮೇಲೆ ದರ್ಶನ್‌ ಕ್ರೌರ್ಯ!

Continue Reading

ಬೆಂಗಳೂರು

BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

BBMP Scam: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಈಗಾಗಲೇ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಬಿಬಿಎಂಪಿ ಅಧಿಕಾರಿಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂದರೆ, 2020-21ರಲ್ಲಿ ನಕಲಿ ಸೊಸೈಟಿಗಳಿಗೆ 102 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

VISTARANEWS.COM


on

BBMP Scam
Koo

ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣವು ಗಂಭೀರ ಸ್ವರೂಪ ಪಡೆದಿರುವ ಬೆನ್ನಲ್ಲೇ ಮತ್ತೊಂದು ಬಹುಕೋಟಿ ಹಗರಣವು ಬಯಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP Scam) ಅಧಿಕಾರಿಗಳು ಸುಮಾರು 102 ಕೋಟಿ ರೂಪಾಯಿಯನ್ನು ನಕಲಿ ಸೊಸೈಟಿಗಳಿಗೆ (Fake Societies) ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 9 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು, ಬಿಬಿಎಂಪಿ ಅಧಿಕಾರಿಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂದರೆ, 2020-21ರಲ್ಲಿ ನಕಲಿ ಸೊಸೈಟಿಗಳಿಗೆ 102 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ವಿಧವೆಯರಿಗೆ ಮೀಸಲಾದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 102 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಹಗರಣದಲ್ಲಿ ಶಾಮೀಲಾದ ಅಧಿಕಾರಿಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ

ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಚಿವ ಬಿ. ನಾಗೇಂದ್ರ 20% ತಿಂದಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ 80% ತಿಂದಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಕುರಿತು ಸದನದಲ್ಲೂ ಆಗ್ರಹಿಸುತ್ತೇವೆ. ಸಿಎಂ ರಾಜೀನಾಮೆ ನೀಡುವವರೆಗೂ ಹೋರಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಉಚಿತಗಳ ಹೆಸರಲ್ಲಿ ಬೆಲೆ ಏರಿಕೆ ಮಾಡಿದೆ. ಹಾಲಿನ ಬೆಲೆ ಏರಿಕೆ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದರೆ ಹೆಚ್ಚು ಹಾಲು ನೀಡಿದ್ದೇವೆ ಎನ್ನುತ್ತಾರೆ. ಆದರೆ ಹೆಚ್ಚಾದ ಹಣವನ್ನು ರೈತರಿಗೆ ಕೊಡುವುದಿಲ್ಲ. ಬಡವರು ಕೂಲಿ ಮಾಡಿ ದುಡಿದು ಮದ್ಯ ಸೇವಿಸಲು ಹೋದರೆ ಅದಕ್ಕೂ ದರ ಏರಿಕೆ ಮಾಡಿದ್ದಾರೆ. ಶ್ರೀಮಂತರು ಕುಡಿಯುವ ಮದ್ಯದ ದರವನ್ನು ಇಳಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ

Continue Reading

ದೇಶ

Rahul Gandhi: ರಾಹುಲ್‌ ಗಾಂಧಿ ಈಗ ಪ್ರತಿಪಕ್ಷ ನಾಯಕ; ಅವರಿಗಿರುವ ಅಧಿಕಾರ ಯಾವವು? ಸಂಬಳ ಎಷ್ಟು?

Rahul Gandhi: 10 ವರ್ಷಗಳ ಬಳಿಕ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನವು ಕಾಂಗ್ರೆಸ್‌ಗೆ ಲಭಿಸಿದ್ದು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕರಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಲು ರಾಹುಲ್‌ ಗಾಂಧಿ ಅವರು ಸಜ್ಜಾಗಿದ್ದಾರೆ. ಇನ್ನು ಪ್ರತಿಪಕ್ಷ ನಾಯಕನಾಗಿರುವ ರಾಹುಲ್‌ ಗಾಂಧಿ ಅವರಿಗೆ ಸಿಗುವ ಸಂಬಳ ಎಷ್ಟು? ಅವರಿಗೆ ಇರುವ ವಿಶೇಷ ಅಧಿಕಾರಗಳು ಯಾವವು? ಸವಲತ್ತುಗಳು ಏನೇನು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Rahul Gandhi
Koo

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ (Leader Of The Opposition) ಆಯ್ಕೆಯಾಗಿದ್ದಾರೆ. ಕಳೆದ ಎರಡು (2014, 2019) ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಪ್ರತಿಪಕ್ಷವಾಗುವಷ್ಟು ಸೀಟುಗಳನ್ನು ಗೆದ್ದಿರದ ಕಾರಣ ಪ್ರತಿಪಕ್ಷ ನಾಯಕರೇ ಇರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ 99 ಕ್ಷೇತ್ರಗಳನ್ನು ಗೆದ್ದಿದ್ದು, ಈಗ ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇವರು ಆಡಳಿತಾರೂಢ ಪಕ್ಷಕ್ಕೆ ಸೆಡ್ಡು ಹೊಡೆಯುವ ಜತೆಗೆ ಹಲವು ಅಧಿಕಾರಗಳು ಹಾಗೂ ಸವಲತ್ತುಗಳನ್ನು ಪಡೆಯಲಿದ್ದಾರೆ. ಅವುಗಳ ಕುರಿತ ಮಾಹಿತಿ ಹೀಗಿದೆ…

ರಾಹುಲ್‌ ಗಾಂಧಿ ಸಂಬಳ ಎಷ್ಟು?

ರಾಹುಲ್‌ ಗಾಂಧಿ ಅವರು ಸಂಸದನಾಗಿ ಪಡೆಯುವ ಸಂಬಳದ ಜತೆಗೆ ಪ್ರತಿಪಕ್ಷ ನಾಯಕರೂ ಆಗಿರುವ ಕಾರಣ ಅವರಿಗೆ ಮಾಸಿಕ 3.3 ಲಕ್ಷ ರೂ. ಸಂಬಳ ಸಿಗಲಿದೆ. ಅಲ್ಲದೆ, ಕ್ಯಾಬಿನೆಟ್‌ ದರ್ಜೆಯ ಸಚಿವರಿಗೆ ಸಿಗುವ ಸವಲತ್ತುಗಳು, ಭದ್ರತೆ (ಝಡ್‌ ಪ್ಲಸ್‌) ಸಿಗಲಿದೆ. ಕ್ಯಾಬಿನೆಟ್‌ ಸಚಿವರೊಬ್ಬರಿಗೆ ಸಿಗುವ ಬಂಗಲೆಯೇ ರಾಹುಲ್‌ ಗಾಂಧಿ ಅವರಿಗೂ ನೀಡಲಾಗುತ್ತದೆ. ಇದರ ಜತೆಗೆ ಹಲವು ಭತ್ಯೆಗಳು ಕೂಡ ರಾಹುಲ್‌ ಗಾಂಧಿ ಅವರಿಗೆ ಸಿಗಲಿವೆ.

Rahul Gandhi

ಅವರ ಅಧಿಕಾರ ವ್ಯಾಪ್ತಿ ಹೇಗಿರಲಿದೆ?

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಹಲವು ಸಂಸದೀಯ ಸಮಿತಿಗಳ ಸದಸ್ಯರೂ ಆಗಿರುತ್ತಾರೆ. ಜಂಟಿ ಸಂಸದೀಯ ಸಮಿತಿಗಳು, ಪಬ್ಲಿಕ್‌ ಅಕೌಂಟ್ಸ್‌ ಸಮಿತಿ ಸದಸ್ಯರಾಗಿರುತ್ತಾರೆ. ಹಾಗೆಯೇ, ಸಿಬಿಐ ನಿರ್ದೇಶಕ, ಮುಖ್ಯ ಚುನಾವಣಾ ಆಯುಕ್ತರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಚೀಫ್‌ ವಿಜಿಲನ್ಸ್‌ ಕಮಿಷನರ್‌, ಕೇಂದ್ರೀಯ ಮಾಹಿತಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವಾಗ ರಾಹುಲ್‌ ಗಾಂಧಿ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು ಪ್ರತಿಪಕ್ಷ ನಾಯಕನಾಗಿ ಸದನದ ಮುಂದಿನ ಸಾಲಿನಲ್ಲಿರುವ ಆಸನದಲ್ಲಿ ಕುಳಿತುಕೊಳ್ಳಲಿದ್ದಾರೆ. ಹಾಗೆಯೇ, ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾತನಾಡುವಾಗ ಕೂಡ ಅವರಿಗೆ ಮುಂದಿನ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಮಾಡಲಾಗುತ್ತದೆ.

ಲೋಕಸಭೆಯ ಒಟ್ಟು ಕ್ಷೇತ್ರಗಳ ಶೇ.10ರಷ್ಟು ಅಂದರೆ 55 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷವು ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆಯುತ್ತದೆ. ಆ ಪಕ್ಷದ ನಾಯಕ ಪ್ರತಿಪಕ್ಷ ನಾಯಕರಾಗುತ್ತಾರೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 44 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ 52 ಕ್ಷೇತ್ರ ಗೆದ್ದ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇತ್ತು. ಈ ಬಾರಿ 99 ಕ್ಷೇತ್ರಗಳನ್ನು ಗೆದ್ದಿರುವ ಕಾರಣ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

Continue Reading
Advertisement
US Presidential Election
ವಿದೇಶ11 mins ago

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

IND vs SA Final
ಕ್ರೀಡೆ13 mins ago

IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

Sadhguru Jaggi Vasudev
ಆರೋಗ್ಯ13 mins ago

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Kannada New Movie niveditha Shivarajkumar frefly cinema sudharani join
ಸಿನಿಮಾ24 mins ago

Kannada New Movie: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!

Actor Darshan
ಕರ್ನಾಟಕ43 mins ago

Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

Amarnath Yatra
ದೇಶ52 mins ago

Amarnath Yatra: ವ್ಯಾಪಕ ಬಿಗಿ ಭದ್ರತೆಯೊಂದಿಗೆ ಈ ಬಾರಿಯ ಅಮರನಾಥ ಯಾತ್ರೆ ಆರಂಭ; ಪವಿತ್ರ ಗುಹೆಯತ್ತ ಹೊರಟ ಮೊದಲ ತಂಡ

BBMP Scam
ಬೆಂಗಳೂರು1 hour ago

BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

Assam Tour
ಪ್ರವಾಸ1 hour ago

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Ashada Month
ಧಾರ್ಮಿಕ2 hours ago

Ashada Month: ಆಷಾಢವನ್ನು ಅಶುಭ ತಿಂಗಳು ಅನ್ನುವುದೇಕೆ? ಇದಕ್ಕಿದೆ ವೈಜ್ಞಾನಿಕ ಕಾರಣ!

Mango Storage
ಆಹಾರ/ಅಡುಗೆ2 hours ago

Mango Storage: ಮಾವಿನ ಹಣ್ಣಿನ ಸೀಸನ್‌ ಮುಗಿದರೇನಂತೆ? ತಿಂಗಳ ಕಾಲ ಇದನ್ನು ಶೇಖರಿಸಿ ಇಡುವ ವಿಧಾನ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ14 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌