Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ - Vistara News

ಪ್ರಮುಖ ಸುದ್ದಿ

Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ

Uttarakhand Trekking Tragedy: ಉತ್ತರಾಖಂಡದ ಶಾಸ್ತ್ರತಾಳ್‌ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ 22 ಚಾರಣಿಗರ ತಂಡ ತೆರಳಿತ್ತು. ಹವಾಮಾನ ವೈಪರೀತ್ಯದಿಂದಾಗಿ ಅಪಾಯಕ್ಕೆ ಸಿಲುಕಿ ರಾಜ್ಯದ ಐವರು ಸೇರಿ 9 ಮಂದಿ ಮೃತಪಟ್ಟಿದ್ದಾರೆ.

VISTARANEWS.COM


on

Uttarakhand Trekking Tragedy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಉತ್ತರಾಖಂಡದ ಶಾಸ್ತ್ರತಾಳ್‌ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್‌ನಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜತೆ ದೂರವಾಣಿ ಮೂಲಕ ಮಾತನಾಡಿ ಸಿಎಂ ಅವರು, ಮೃತರ ಸಂಖ್ಯೆ 9ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡರಿಗೆ ನೀಡಿದ್ದಾರೆ.

ರಕ್ಷಿಸಲ್ಪಟ್ಟು ಸುರಕ್ಷಿತ ನೆಲೆಗೆ ಕರೆತರಲಾಗಿರುವ ಚಾರಣಿಗರ ಜೊತೆಗೂ ಮಾತನಾಡಿದ ಮುಖ್ಯಮಂತ್ರಿಗಳು, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಭರವಸೆ ನೀಡಿದ್ದಾರೆ.

ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲ್ಪಟ್ಟವರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಮೃತರಿಗೆ ಸಿಎಂ ಸಂತಾಪ

ಉತ್ತರಾಖಂಡದ ಶಾಸ್ತ್ರತಾಳ್‌ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ ಐವರು ಚಾರಣಿಗರು ಮೃತಪಟ್ಟ (Uttarakhand Trekking Tragedy) ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ರಕ್ಷಣಾ ಕಾರ್ಯಾಚರಣೆಯ ಮೂಲಕ 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಚಿವರಾದ ಕೃಷ್ಣ ಬೈರೇಗೌಡ ಅವರಿಗೆ ಇಂದೇ ಡೆಹ್ರಾಡೂನ್‌ಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದೇನೆ. ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳು ಹಾಗೂ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಂಡು ಅಪಾಯದಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಗೂಡು ಸೇರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ | Drowned in Water: ನದಿಗೆ ಬಿದ್ದವನು ಬದುಕಿದ, ರಕ್ಷಿಸಲು ಹೋದವನು ಸತ್ತ

ಚಾರಣಕ್ಕೆ ತೆರಳಿದ್ದ ಕರ್ನಾಟಕದ ಐವರು ಸೇರಿ 9 ಮಂದಿ ಸಾವು

Uttarkashi Trekking Tragedy

ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರತಿಕೂಲ ಹವಾಮಾನಕ್ಕೆ (Uttarkashi Trekking Tragedy) ಸಿಲುಕಿ ಕರ್ನಾಟಕದ ಐವರು ಸೇರಿ 9 ಚಾರಣಿಗರು ಮೃತಪಟ್ಟಿರುವ ಘಟನೆ ನಡೆದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಚಾರಣಿಗರು, ಟೂರ್‌ ಗೈಡ್‌ಗಳು ಸೇರಿ 22 ಮಂದಿ ತಂಡವೊಂದು ಉತ್ತರಕಾಶಿಯ ಎತ್ತರದ ಶಾಸ್ತ್ರತಾಳ್‌ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದಾಗ ಪ್ರತಿಕೂಲ ಹವಾಮಾನದಿಂದ ಅಪಾಯಕ್ಕೆ ಸಿಲುಕಿತ್ತು. ಚಾರಣದಿಂದ ಹಿಂತಿರುಗುವಾಗ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಪೈಕಿ 9 ಮಂದಿ ಮೃತಪಟ್ಟಿದ್ದಾರೆ.

ಮೃತರನ್ನು ಸುಜಾತ ಬೆಂಗಳೂರು (52), ಸಿಂಧು (47), ಚಿತ್ರಾ (48), ಪದ್ಮಿನಿ (45), ವೆಂಕಟೇಶ್‌ ಪ್ರಸಾದ್‌ (52, ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ KPS (50), ವಿನಾಯಕ್ ಎಂದು ಗುರುತಿಸಲಾಗಿದೆ.

ಸೌಮ್ಯಾ (36), ವಿನಯ್ (49), ಶಿವಜ್ಯೋತಿ (46), ಸುಧಾಕರ್‌ (64), ಸ್ಮೃತಿ (41), ಸೀನಾ (48), ಮಧುರೆಡ್ಡಿ (52), ಜಯಪ್ರಕಾಶ್ (61), ಭರತ್ (53), ಅನಿಲ್ ಭಟ್ಟ್ (52), ವಿವೇಕ್ ಶ್ರೀಧರ್, ರಿತಿಕಾ ಜಿಂದಾಲ್, ನವೀನ್ ಸೇರಿ 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಮೇ 29ರಂದು ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬರು ಹಾಗೂ ಮೂವರು ಟೂರ್‌ ಗೈಡ್‌ಗಳು ಸೇರಿ 22 ಮಂದಿ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿದ್ದರು. ಹಿಮಾಲಯ ಪರ್ವತಗಳಲ್ಲಿ ಸುಮಾರು 4,400 ಮೀಟರ್‌ ಎತ್ತರದಲ್ಲಿ ಶಾಸ್ತ್ರತಾಳ್‌ ಸರೋವರವಿದೆ. ಈ ಸರೋವರ ನೋಡಲು ಚಾರಣಿಗರು ತೆರಳಿದ್ದರು.

ಶಾಸ್ತ್ರತಾಳ್‌ನಿಂದ ಬೇಸ್‌ ಕ್ಯಾಂಪ್‌ಗೆ ಮರಳುತ್ತಿದ್ದಾಗ ಪ್ರತಿಕೂಲ ಹವಾಮಾನಕ್ಕೆ ಚಾರಣಿಗರು ಸಿಲುಕಿದ್ದರು. ಈ ವೇಳೆ ಎರಡು ವಾಹನದಲ್ಲಿ 8 ಮಂದಿ ಬೇಸ್‌ ಕ್ಯಾಂಪ್‌ಗೆ ಮರಳಿದ್ದು, 13 ಮಂದಿ ಅಪಾಯದಲ್ಲಿ ಸಿಲುಕಿದ್ದರು. ಈ ಪೈಕಿ 9 ಮಂದಿ ಮೃತಪಟ್ಟಿದ್ದು, ಇನ್ನುಳಿದವರ ರಕ್ಷಣೆ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ | ‌Prajwal Revanna Case: ಪ್ರಜ್ವಲ್ ರೇವಣ್ಣ‌ ಮನೆಯಲ್ಲಿ ಪತ್ತೆಯಾಯ್ತು ಸಂಶಯಾಸ್ಪದ ಕಲೆ ಇರುವ ಬೆಡ್‌ಶೀಟ್!

ಈ ಬಗ್ಗೆ ಸಚಿವ ಕೃಷ್ಣ ಬೈರೆಗೌಡ ಪ್ರತಿಕ್ರಿಯಿಸಿ, ಉತ್ತರಾಖಂಡ್‌ನಲ್ಲಿ ರಾಜ್ಯದ ಟ್ರೆಕ್ಕಿಂಗ್ ಟೀಂ ಸಿಲುಕಿರುವ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗಿದೆ. ರಕ್ಷಣೆ ಸಂಬಂಧ ಉತ್ತರಾಖಂಡ ಸರ್ಕಾರದ ಜೊತೆ ಮಾತನಾಡಲಾಗಿದೆ. ಖುದ್ದು ತೆರಳಿ ಕಾರ್ಯಚರಣೆ ನೋಡಿಕೊಳ್ಳಿ ಎಂದು ಸೂಚಿಸಿದ್ದರಿಂದ ಡೆಹ್ರಾಡೂನ್‌ಗೆ ಹೊರಟಿರುವುದಾಗಿ ತಿಳಿಸಿದ್ದಾರೆ.

ಇನ್ನು ಉತ್ತರಾಖಂಡಕ್ಕೆ ಟ್ರೆಕ್ಕಿಂಗ್ ಹೋದ ತಂಡದ ರಕ್ಷಣಾ ಕಾರ್ಯಕ್ಕಾಗಿ ಐಎಎಸ್‌ ಅಧಿಕಾರಿ ವಿಪುಲ್ ಬನ್ಸಲ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಉತ್ತರಾಖಾಂಡ ಸರ್ಕಾರದ ಜೊತೆ ನಿರಂತರ ಸಂಪರ್ಕ ಬೆಳಸಲು ಸಮನ್ವಯ ಅಧಿಕಾರಿಯಾಗಿ ಇವರನ್ನು ನೇಮಕ ಮಾಡಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

T20 World Cup 2024 : ಭಾರತ ತಂಡವೇ ವಿಶ್ವ ಕಪ್​​ ಗೆಲ್ಲುತ್ತದೆ; ಕುಲ್ದೀಪ್​ ಯಾದವ್ ಬಾಲ್ಯದ ಕೋಚ್​ ವಿಶ್ವಾಸ

T20 World cup : ನಿಸ್ಸಂಶಯವಾಗಿ ಅವರು (ಕುಲ್ದೀಪ್) ಭಾರತೀಯ ತಂಡದ ಬೆನ್ನೆಲುಬು. ಕಳೆದ ನಾಲ್ಕು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಯಾವ ರೀತಿಯ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ದೇಶಕ್ಕಾಗಿ ಪ್ರದರ್ಶನ ನೀಡುವುದನ್ನು ನೋಡಲು ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ ಎಂದು ಕಪಿಲ್ ದೇವ್ ಪಾಂಡೆ ಹೇಳಿದರು.

VISTARANEWS.COM


on

T20 World cup
Koo

ಬೆಂಗಳೂರು: ಕುಲದೀಪ್ ಯಾದವ್ ಅವರ ಬಾಲ್ಯದ ತರಬೇತುದಾರ ಕಪಿಲ್ ದೇವ್ ಪಾಂಡೆ ಭಾರತವೇ ವಿಶ್ವ ಕಪ್​ ಗೆಲ್ಲುತ್ತದೆ (T20 World cup) ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಹಾಲಿ ಆವೃತ್ತಿಯಲ್ಲಿ ಕುಲ್ದೀಪ್ ಯಾದವ್ ಅವರ ಪ್ರದರ್ಶನವನ್ನೂ ಮೆಚ್ಚಿದ್ದಾರೆ. ನ್ಯೂಯಾರ್ಕ್​ನಲ್ಲಿ ವೇಗದ ಬೌಲಿಂಗ್​ಗೆ ಪೂರಕ ಪಿಚ್ ಇದ್ದ ಕಾರಣ ಯುಎಸ್ಎಯಲ್ಲಿ ಆಡಿದ ಪಂದ್ಯಾವಳಿಯ ಗುಂಪು ಹಂತಗಳ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ವಿಂಡೀಸ್​ನಲ್ಲಿ ನಡೆದ ಸೂಪರ್​ 8 ಹಂತದಲ್ಲಿ ಅವರಿಗೆ ಅವಕಾಶಗಳು ಲಭಿಸಿವೆ.

ಅಲ್ಲಿಂದೀಚೆಗ, ಸ್ಪಿನ್ನರ್ ಹಿಂದೆ ಬಿದ್ದಿಲ್ಲ. ಭಾರತದ ಬೌಲಿಂಗ್ ವಿಭಾಗದಲ್ಲಿ ಭಾರತದ ಪ್ರಮುಖ ಅಸ್ತ್ರವಾಗಿ ಬಳಕೆಯಾದರು. ಮಧ್ಯಮ ಓವರ್​ಗಳಲ್ಲಿ ವಿಕೆಟ್ ಪಡೆಯುವ ಅವರ ಸಾಮರ್ಥ್ಯವು ಹೆಚ್ಚು ಎದ್ದು ಕಂಡಿತು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​​ನಲ್ಲಿಯೂ ಅವರ ಪಾತ್ರ ನಿರ್ಣಾಯಕವಾಗಲಿದೆ. ಅಂತೆಯೇ ಕುಲದೀಪ್ ಯಾದವ್ ಅವರ ಬಾಲ್ಯದ ತರಬೇತುದಾರ ಕಪಿಲ್​ದೇವ್ ಪಾಂಡೆ, ತಮ್ಮ ನೆಚ್ಚಿನ ಆಟಗಾರನನ್ನು ತಂಡದ ಬೆನ್ನೆಲುಬು ಎಂದು ಕರೆದಿದ್ದಾರೆ. ಅವರು ತಮ್ಮ ದೇಶಕ್ಕಾಗಿ ಪ್ರದರ್ಶನ ನೀಡುತ್ತಿರುವ ವಿಧಾನದ ಬಗ್ಗೆ ಹೆಮ್ಮೆಪಟ್ಟರು.

ನಿಸ್ಸಂಶಯವಾಗಿ ಅವರು (ಕುಲ್ದೀಪ್) ಭಾರತೀಯ ತಂಡದ ಬೆನ್ನೆಲುಬು. ಕಳೆದ ನಾಲ್ಕು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಯಾವ ರೀತಿಯ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ದೇಶಕ್ಕಾಗಿ ಪ್ರದರ್ಶನ ನೀಡುವುದನ್ನು ನೋಡಲು ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ ಎಂದು ಕಪಿಲ್ ದೇವ್ ಪಾಂಡೆ ಹೇಳಿದರು.

ಕುಲದೀಪ್ ಯಾದವ್ ಆಡಿರುವ ನಾಲ್ಕು ಪಂದ್ಯಗಳಲ್ಲಿ 9.40ರ ಸರಾಸರಿಯಲ್ಲಿ 5.87ರ ಎಕಾನಮಿ ರೇಟ್​ನಲ್ಲಿ 10 ವಿಕೆಟ್​​ಗಳನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​ನಲ್ಲಿ 19 ರನ್​ಗೆ 3 ವಿಕೆಟ್ ಪಡೆದು ಭಾರತ ಫೈನಲ್​ ಪ್ರವೇಶಿಸಲು ಸಹಾಯ ಮಾಡಿದ್ದರು. ಎಡಗೈ ಮಣಿಕಟ್ಟು ಸ್ಪಿನ್ನರ್ ಕಳೆದ ಒಂದು ವರ್ಷದಿಂದ ಆಟದ ಎಲ್ಲಾ ಸ್ವರೂಪಗಳಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲೂ ಕುಲ್ದೀಪ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಭಾರತ ಬಲಿಷ್ಠ ತಂಡ

ಭಾರತ ತಂಡವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅವರು ಪ್ರತಿ ತಂಡವನ್ನು ಸೋಲಿಸಿದ ನಂತರ ಟಿ 20 ವಿಶ್ವಕಪ್​​ ಫೈನಲ್ ತಲುಪಿದ್ದಾರೆ. ಇದು ಫೈನಲ್ ತಲುಪಿದ ಅತ್ಯುತ್ತಮ ಭಾರತೀಯ ಟಿ 20 ಐ ತಂಡಗಳಲ್ಲೊಂದು. ಈ ತಂಡವು 2007 ರ ಟಿ 20 ವಿಶ್ವಕಪ್​ನ ವೈಭವವನ್ನು ಮರಳಿ ತರುತ್ತದೆ. 17 ವರ್ಷಗಳ ಬರಗಾಲವನ್ನು ಕೊನೆಗೊಳಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ಪಾಂಡೆ ಹೇಳಿದ್ದಾರೆ.

2007ರಲ್ಲಿ ಭಾರತ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಅಂದಿನಿಂದ, ಭಾರತವು ಒಮ್ಮೆ (2014 ರಲ್ಲಿ) ಮಾತ್ರ ಫೈನಲ್ ತಲುಪಿತ್ತು. ಆದರೆ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಸೋತಿತ್ತು. 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಮೆನ್ ಇನ್ ಬ್ಲೂ ತಂಡ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಲವು ಬಾರಿ ಸೆಮಿಫೈನಲ್ ಹಾಗೂ ಫೈನಲ್ ತಲುಪಿದ್ದರೂ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.

ಭಾರತದ ಟ್ರೋಫಿ ಬರವು ಈ ಬಾರಿ ಕೊನೆಗೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುವುದು ಆಸಕ್ತಿದಾಯಕ. ಆದರೆ ದಕ್ಷಿಣ ಆಫ್ರಿಕಾ ತಂಡದಿಂದ ಕಠಿಣ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ.

Continue Reading

ಪ್ರಮುಖ ಸುದ್ದಿ

Arvind Kejriwal: ಅರವಿಂದ ಕೇಜ್ರಿವಾಲ್‌ ಬಿಡುಗಡೆ ಕನಸು ಭಗ್ನ; ಮತ್ತೆ 14 ದಿನ ನ್ಯಾಯಾಂಗ ಬಂಧನ

Arvind Kejriwal: ತನಿಖೆ ಮತ್ತು ಮುಕ್ತ ನ್ಯಾಯಾಂಗ ಪ್ರಕ್ರಿಯೆಯ ದೃಷ್ಟಿಯಿಂದ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ಪಡೆಯುವುದು ಅಗತ್ಯವಿದೆ ಎಂದು ಸಿಬಿಐ ಹೇಳಿದೆ. ಮೂರು ದಿನಗಳ ಸಿಬಿಐ ಕಸ್ಟಡಿ ಅಂತ್ಯಗೊಂಡ ನಂತರ ಕೇಜ್ರಿವಾಲ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು.

VISTARANEWS.COM


on

Arvind Kejriwal
Koo

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ದೆಹಲಿ ಅವೆನ್ಯೂ ಕೋರ್ಟ್‌ (Dehli avenue Court) ಆದೇಶ ನೀಡಿದೆ. ಸಿಬಿಐ ನಡೆಸುತ್ತಿರುವ ದೆಹಲಿ ಮದ್ಯ ನೀತಿ (Delhi Excise policy) ಪ್ರಕರಣದಲ್ಲಿ, ಅವರಿಗೆ ನೀಡಲಾಗಿದ್ದ ಜಾಮೀನನ್ನು ಪ್ರಶ್ನಿಸಲಾಗಿತ್ತು.

ತನಿಖೆ ಮತ್ತು ಮುಕ್ತ ನ್ಯಾಯಾಂಗ ಪ್ರಕ್ರಿಯೆಯ ದೃಷ್ಟಿಯಿಂದ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ಪಡೆಯುವುದು ಅಗತ್ಯವಿದೆ ಎಂದು ಸಿಬಿಐ ಹೇಳಿದೆ. ಮೂರು ದಿನಗಳ ಸಿಬಿಐ ಕಸ್ಟಡಿ ಅಂತ್ಯಗೊಂಡ ನಂತರ ಕೇಜ್ರಿವಾಲ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆದೇಶವನ್ನು ವಿಶೇಷ ನ್ಯಾಯಾಧೀಶ ಸುನೇನಾ ಶರ್ಮಾ ಕಾಯ್ದಿರಿಸಿದ್ದರು. ಕೇಜ್ರಿವಾಲ್ ತನಿಖೆಗೆ ಸಹಕಾರ ನೀಡುತ್ತಿಲ್ಲ, ಸರಿಯಾದ ಉತ್ತರಗಳನ್ನು ಕೊಡುತ್ತಿಲ್ಲ ಎಂದು ಸಿಬಿಐ ರಿಮಾಂಡ್ ಅರ್ಜಿಯಲ್ಲಿ ಆರೋಪಿಸಿದೆ.

2021-22 ರ ದೆಹಲಿಯ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭದ ಪ್ರಮಾಣವನ್ನು ಶೇಕಡಾ 5 ರಿಂದ 12 ಕ್ಕೆ ಹೆಚ್ಚಿಸಿರುವ ಬಗ್ಗೆ ಯಾವುದೇ ಸಮರ್ಥನೆ ಅಥವಾ ಸತ್ಯವಾದ ವಿವರಣೆ ನೀಡಿಲ್ಲ ಎಂದು ಸಿಬಿಐ ಆರೋಪಿಸಿದೆ. ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರಮುಖರು ದೆಹಲಿಯಲ್ಲಿ ಮೊಕ್ಕಾಂ ಹೂಡಿದಾಗ, ಪರಿಷ್ಕೃತ ಅಬಕಾರಿ ನೀತಿಗೆ ಕ್ಯಾಬಿನೆಟ್ ಅನುಮೋದನೆಯನ್ನು ಒಂದೇ ದಿನದಲ್ಲಿ ತರಾತುರಿಯಲ್ಲಿ ಚಲಾವಣೆ ಮಾಡುವ ಮೂಲಕ ಏಕೆ ಪಡೆಯಲಾಯಿತು ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದಿದೆ. ಕೇಜ್ರಿವಾಲ್ ಅವರು ಪ್ರಕರಣದ ಆರೋಪಿಗಳಾದ ಮಾಗುಂಟ ಶ್ರೀನಿವಾಸಲು ರೆಡ್ಡಿ, ಅರ್ಜುನ್ ಪಾಂಡೆ ಮತ್ತು ಮೂತ ಗೌತಮ್ ಅವರನ್ನು ಭೇಟಿಯಾದ ಬಗ್ಗೆ ಸರಿಯಾದ ವಿವರಣೆಯನ್ನು ಕೊಟ್ಟಿಲ್ಲ ಎಂದು ಸಿಬಿಐ ಹೇಳಿದೆ.

ಕೇಜ್ರಿವಾಲ್ ಪ್ರಮುಖ ರಾಜಕಾರಣಿ ಮತ್ತು ದೆಹಲಿಯ ಮುಖ್ಯಮಂತ್ರಿಯಾಗಿರುವುದರಿಂದ, ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿರುವುದರಿಂದ, ಕಸ್ಟಡಿ ವಿಚಾರಣೆಯ ಸಮಯದಲ್ಲಿ ಅವರು ಈಗಾಗಲೇ ಬಹಿರಂಗಪಡಿಸಿದ ಸಾಕ್ಷಿಗಳು ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು. ಇನ್ನೂ ಪರಿಶೀಲಿಸಬೇಕಾದವರು, ಮತ್ತಷ್ಟು ಸಂಗ್ರಹಿಸಬೇಕಾದ ಪುರಾವೆಗಳನ್ನು ಹಾಳು ಮಾಡಿ ಮತ್ತು ನಡೆಯುತ್ತಿರುವ ತನಿಖೆಗೆ ಅಡ್ಡಿಯಾಗಬಹುದು ಎಂದು ಸಿಬಿಐ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

2021-22ರ ದೆಹಲಿ ಮದ್ಯ ನೀತಿಯನ್ನು ರೂಪಿಸುವಾಗ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮೊದಲು ಬಂಧಿಸಿತ್ತು. ಕೇಜ್ರಿವಾಲ್ ಅವರು ಎಎಪಿಯ ಸಂಚಾಲಕರಾಗಿದ್ದರಿಂದ ಗೋವಾದಲ್ಲಿ ಪಕ್ಷದ ಪ್ರಚಾರಕ್ಕೆ ಹಣ ನೀಡಲು ಮದ್ಯ ಮಾರಾಟಗಾರರಿಂದ ಪಡೆದ ಹಣವನ್ನು ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. ಕೇಜ್ರಿವಾಲ್ ಮತ್ತು ಇತರ ಪ್ರಮುಖ ಆಮ್ ಆದ್ಮಿ ಪಾರ್ಟಿ ನಾಯಕರಿಗೆ ಕೇಂದ್ರ ಸರ್ಕಾರ ತನ್ನ ಏಜೆನ್ಸಿಗಳನ್ನು ಬಳಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Arvind Kejriwal: ಪ್ಯಾಂಟ್‌ ಲೂಸ್‌ ಆಗಿದೆ, ಒಂದು ಬೆಲ್ಟ್‌ ಕೊಡಿ; ಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಮನವಿ‌

Continue Reading

ಕ್ರೀಡೆ

Arshdeep Singh : ಫೈನಲ್​ ಪಂದ್ಯದಲ್ಲಿ ಅರ್ಶ್​ದೀಪ್​ ಸಿಂಗ್​ಗೆ ಇದೆ ದಾಖಲೆ ಬರೆಯುವ ಅವಕಾಶ

Arshdeep Singh: 2012-2013ರ ಆವೃತ್ತಿಯಲ್ಲಿ 15 ವಿಕೆಟ್ ಪಡೆದ ಶ್ರೀಲಂಕಾದ ಅಜಂತಾ ಮೆಂಡಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಅರ್ಶ್​​ದೀಪ್​ ಸಿಂಗ್ 2024 ರ ಟಿ 20 ವಿಶ್ವಕಪ್​ನಲ್ಲಿ ಉತ್ತಮ ಫಾರ್ಮ್​​ನಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಅದೇ ಫಾರ್ಮ್ ಅನ್ನು ಮುಂದುವರಿಸುವ ಭರವಸೆ ಹೊಂದಿದ್ದಾರೆ. ಹೀಗಾಗಿ ದಾಖಲೆ ಮುರಿಯುವ ಎಲ್ಲ ಅವಕಾಶಗಳು ಅವರ ಮುಂದಿವೆ.

VISTARANEWS.COM


on

Arshdeep Singh
Koo

ಬೆಂಗಳೂರು : ಭಾರತ ತಂಡದ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ಗೆ (Arshdeep Singh) 2024 ರ ಟಿ 20 ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್​ಗಳನ್ನು ಪಡೆದಿರುವ ಹೊಸ ದಾಖಲೆಯನ್ನು ಮಾಡುವ ಅವಕಾಶ ಹೊಂದಿದ್ದಾರೆ. ಅರ್ಶ್​ದೀಪ್​ 7.50ರ ಎಕಾನಮಿ ರೇಟ್​ನಲ್ಲಿ ಇದುವರೆಗೆ ಆಡಿರುವ ಏಳು ಪಂದ್ಯದಲ್ಲಿ 15 ವಿಕೆಟ್​ಗಳನ್ನು ಪಡೆದಿದ್ದಾರೆ. ಈ ಸಾಧನೆಯು ಟಿ 20 ವಿಶ್ವಕಪ್​​ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾರ್ವಕಾಲಿಕ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪ್ರಸ್ತುತ ಅಫ್ಘಾನಿಸ್ತಾನ ತಂಡದ ಆಟಗಾರ ಫಜಲ್ಹಾಕ್ ಫಾರೂಕಿ 2024ರ ಆವೃತ್ತಿಯಲ್ಲಿ 17 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಅವರು ಇತ್ತೀಚೆಗೆ 2021- 2022 ಋತುವಿನಲ್ಲಿ ಶ್ರೀಲಂಕಾದ ಆಲ್​ರೌಂಡರ್​ ವನಿಂದು ಹಸರಂಗ ಅವರ 16 ವಿಕೆಟ್​ಗಳ ದಾಖಲೆಯನ್ನು ಮುರಿದಿದ್ದಾರೆ ಹೀಗಾಗಿ ಅರ್ಶ್​ದೀಪ್​ ಇನ್ನೆರಡು ವಿಕೆಟ್​ ಪಡೆದರೆ ದಾಖಲೆ ಗ್ಯಾರಂಟಿ.

2012-2013ರ ಆವೃತ್ತಿಯಲ್ಲಿ 15 ವಿಕೆಟ್ ಪಡೆದ ಶ್ರೀಲಂಕಾದ ಅಜಂತಾ ಮೆಂಡಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಅರ್ಶ್​​ದೀಪ್​ ಸಿಂಗ್ 2024 ರ ಟಿ 20 ವಿಶ್ವಕಪ್​ನಲ್ಲಿ ಉತ್ತಮ ಫಾರ್ಮ್​​ನಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಅದೇ ಫಾರ್ಮ್ ಅನ್ನು ಮುಂದುವರಿಸುವ ಭರವಸೆ ಹೊಂದಿದ್ದಾರೆ. ಹೀಗಾಗಿ ದಾಖಲೆ ಮುರಿಯುವ ಎಲ್ಲ ಅವಕಾಶಗಳು ಅವರ ಮುಂದಿವೆ.

ಭಾರತದ ಗೆಲವಿಗೆ ವಿಶೇಷ ಪೂಜೆ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ ಫೈನಲ್​​ನಲ್ಲಿ(T20 World Cup Final) ಭಾರತದ ಗೆಲ್ಲಲ್ಲಿ ಎಂದು ಪ್ರಾರ್ಥಿಸಿ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯದ ಅರ್ಚಕರು ಶನಿವಾರ ವಿಶೇಷ ಪೂಜೆ ನಡೆಸಿದ್ದಾರೆ. ದೊಡ್ಡ ಫೈನಲ್ ಸಮೀಪಿಸುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಉತ್ಸಾಹ ಮತ್ತು ಆತಂಕ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಪ್ರೋತ್ಸಾಹದ ಸಂದೇಶಗಳು ತುಂಬಿಕೊಂಡಿವೆ. ಪ್ರಮುಖ ಬೀದಿಗಳು ಟೀಮ್ ಇಂಡಿಯಾವನ್ನು ಬೆಂಬಲಿಸುವ ಪೋಸ್ಟರ್​ಗಳಿಂದ ತುಂಬಿಕೊಂಡಿವೆ. ಈ ನಡುವೆ ಹಲವೆಡೆ ವಿಶೇಷ ಪೂಜೆಗಳು ನಡೆಯುತ್ತಿವೆ. ಅಂತೆಯ ಸಿದ್ಧಿವಿನಾಯಕ ದೇವಾಲಯದಲ್ಲೂ ಪೂಜೆ ಮಾಡಲಾಗಿದೆ.

ಇದನ್ನೂ ಓದಿ: IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

ಈ ಪಂದ್ಯವು ಭಾರತದ ಕ್ರಿಕೆಟ್​ ಪಾಲಿಗೆ ಪ್ರಮುಖ ಘಟನೆಯಾಗಿದೆ. ಲಕ್ಷಾಂತರ ಭಾರತೀಯರ ಭರವಸೆಗಳು ಮತ್ತು ಪ್ರಾರ್ಥನೆಗಳು ಪ್ರಸಸ್ತಿಗಾಗಿ ಹಂಬಲಿಸಿವೆ. 17 ವರ್ಷಗಳ ಸುದೀರ್ಘ ನಂತರ ಭಾರತವು ಟಿ 20 ವಿಶ್ವಕಪ್ ಟ್ರೋಫಿ ಎತ್ತುವುದನ್ನು ನೋಡಲು ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ.

ಸಿದ್ಧಿವಿನಾಯಕ ದೇವಾಲಯವು ವಿಶ್ವ ಕಪ್​ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಆರತಿಗಳನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಭಕ್ತರು ಮೆನ್ ಇನ್ ಬ್ಲೂಗೆ ಆಶೀರ್ವಾದ ಮಾಡುವಂತೆ ಭಗವಂತನ ಬಳಿ ಕೋರಿಕೊಂಡರು. ಸಿದ್ಧಿವಿನಾಯಕನ ಪುರೋಹಿತರು. ತಂಡ ಮತ್ತು ಅವರ ಅಭಿಮಾನಿಗಳ ಪರವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತಣೆ ಮಾಡಿದರು.

ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಭಾರತ ಅದಕ್ಕಾಗಿ ಸಜ್ಜಾಗಿದ್ದು, ಮೊದಲ ಟಿ20 ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ದಕ್ಷಿಣ ಆಫ್ರಿಕಾ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎರಡೂ ತಂಡಗಳು ಐಸಿಸಿ ಟ್ರೋಫಿಗಾಗಿ ದೀರ್ಘ ಕಾಯುವಿಕೆ ಎದುರಿಸಿವೆ. ಭಾರತಕ್ಕೆ 13 ವರ್ಷಗಳಿಂದ ಪ್ರಶಸ್ತಿಗಾಗಿ ಕಾದರೆ, ದಕ್ಷಿಣ ಆಫ್ರಿಕಾ ಇದುವರೆಗೆ ಒಂದೇ ಒಂದು ಟ್ರೋಫಿ ಸಿಕ್ಕಿಲ್ಲ. ಈ ಅಂತಿಮ ಪಂದ್ಯವು ಈ ಕ್ರಿಕೆಟ್ ಶಕ್ತಿ ಕೇಂದ್ರಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಲಿದೆ.

Continue Reading

ಪ್ರಮುಖ ಸುದ್ದಿ

T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

T20 World Cup Final : ಈ ಪಂದ್ಯವು ಭಾರತದ ಕ್ರಿಕೆಟ್​ ಪಾಲಿಗೆ ಪ್ರಮುಖ ಘಟನೆಯಾಗಿದೆ. ಲಕ್ಷಾಂತರ ಭಾರತೀಯರ ಭರವಸೆಗಳು ಮತ್ತು ಪ್ರಾರ್ಥನೆಗಳು ಪ್ರಸಸ್ತಿಗಾಗಿ ಹಂಬಲಿಸಿವೆ. 17 ವರ್ಷಗಳ ಸುದೀರ್ಘ ನಂತರ ಭಾರತವು ಟಿ 20 ವಿಶ್ವಕಪ್ ಟ್ರೋಫಿ ಎತ್ತುವುದನ್ನು ನೋಡಲು ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ.

VISTARANEWS.COM


on

T20 World Cup Final
Koo

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ ಫೈನಲ್​​ನಲ್ಲಿ(T20 World Cup Final) ಭಾರತದ ಗೆಲ್ಲಲ್ಲಿ ಎಂದು ಪ್ರಾರ್ಥಿಸಿ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯದ ಅರ್ಚಕರು ಶನಿವಾರ ವಿಶೇಷ ಪೂಜೆ ನಡೆಸಿದ್ದಾರೆ. ದೊಡ್ಡ ಫೈನಲ್ ಸಮೀಪಿಸುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಉತ್ಸಾಹ ಮತ್ತು ಆತಂಕ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಪ್ರೋತ್ಸಾಹದ ಸಂದೇಶಗಳು ತುಂಬಿಕೊಂಡಿವೆ. ಪ್ರಮುಖ ಬೀದಿಗಳು ಟೀಮ್ ಇಂಡಿಯಾವನ್ನು ಬೆಂಬಲಿಸುವ ಪೋಸ್ಟರ್​ಗಳಿಂದ ತುಂಬಿಕೊಂಡಿವೆ. ಈ ನಡುವೆ ಹಲವೆಡೆ ವಿಶೇಷ ಪೂಜೆಗಳು ನಡೆಯುತ್ತಿವೆ. ಅಂತೆಯ ಸಿದ್ಧಿವಿನಾಯಕ ದೇವಾಲಯದಲ್ಲೂ ಪೂಜೆ ಮಾಡಲಾಗಿದೆ.

ಈ ಪಂದ್ಯವು ಭಾರತದ ಕ್ರಿಕೆಟ್​ ಪಾಲಿಗೆ ಪ್ರಮುಖ ಘಟನೆಯಾಗಿದೆ. ಲಕ್ಷಾಂತರ ಭಾರತೀಯರ ಭರವಸೆಗಳು ಮತ್ತು ಪ್ರಾರ್ಥನೆಗಳು ಪ್ರಸಸ್ತಿಗಾಗಿ ಹಂಬಲಿಸಿವೆ. 17 ವರ್ಷಗಳ ಸುದೀರ್ಘ ನಂತರ ಭಾರತವು ಟಿ 20 ವಿಶ್ವಕಪ್ ಟ್ರೋಫಿ ಎತ್ತುವುದನ್ನು ನೋಡಲು ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ.

ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸಿದ್ಧಿವಿನಾಯಕ ದೇವಾಲಯವು ವಿಶ್ವ ಕಪ್​ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಆರತಿಗಳನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಭಕ್ತರು ಮೆನ್ ಇನ್ ಬ್ಲೂಗೆ ಆಶೀರ್ವಾದ ಮಾಡುವಂತೆ ಭಗವಂತನ ಬಳಿ ಕೋರಿಕೊಂಡರು. ಸಿದ್ಧಿವಿನಾಯಕನ ಪುರೋಹಿತರು. ತಂಡ ಮತ್ತು ಅವರ ಅಭಿಮಾನಿಗಳ ಪರವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿತಣೆ ಮಾಡಿದರು.

ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಭಾರತ ಅದಕ್ಕಾಗಿ ಸಜ್ಜಾಗಿದ್ದು, ಮೊದಲ ಟಿ20 ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ದಕ್ಷಿಣ ಆಫ್ರಿಕಾ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎರಡೂ ತಂಡಗಳು ಐಸಿಸಿ ಟ್ರೋಫಿಗಾಗಿ ದೀರ್ಘ ಕಾಯುವಿಕೆ ಎದುರಿಸಿವೆ. ಭಾರತಕ್ಕೆ 13 ವರ್ಷಗಳಿಂದ ಪ್ರಶಸ್ತಿಗಾಗಿ ಕಾದರೆ, ದಕ್ಷಿಣ ಆಫ್ರಿಕಾ ಇದುವರೆಗೆ ಒಂದೇ ಒಂದು ಟ್ರೋಫಿ ಸಿಕ್ಕಿಲ್ಲ. ಈ ಅಂತಿಮ ಪಂದ್ಯವು ಈ ಕ್ರಿಕೆಟ್ ಶಕ್ತಿ ಕೇಂದ್ರಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಲಿದೆ.

ಸಿದ್ಧಿವಿನಾಯಕ ದೇವಸ್ಥಾನದಲ್ಲಿನ ಪ್ರಾರ್ಥನೆಗಳು ಫಲಿಸುತ್ತವೆ ಎಂಬುದು ನಂಬಿಕೆ. ಅಂತೆಯ ವಿಶ್ವ ಕಪ್​ಗಾಗಿ ಭಾರತದ ಆಟಗಾರರಿಗೂ ಒಳಿತಾಗಲಿ ಎಂಬ ನಂಬಿಕೆ ಅಭಿಮಾನಿಗಳದ್ದು. 2023ರ ಏಕ ದಿನ ವಿಶ್ವ ಕಪ್​ನಲ್ಲಿ ಸೋತು ಬೇಸರ ಎದುರಿಸಿರುವ ಭಾರತ ತಂಡ ಈ ವಿಶ್ವ ಕಪ್​ನಲ್ಲಿ ಗೆಲ್ಲುವ ಉದ್ದೇಶವನ್ನು ಹೊಂದಿದೆ. ಈ ಟೂರ್ನಿಯು ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಟಿ20 ಅಂತಾರಾಷ್ಟ್ರೀಯ ಕೊನೇ ಪಂದ್ಯಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಬಾರ್ಬಡೋಸ್ನ ಬ್ರಿಜ್​ಟೌನ್​ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ. ಇದು ದೊಡ್ಡ ಸ್ಕೋರ್​ ಹಾಗೂ ವೇಗದ ಬೌಲಿಂಗ್​ಗೆ ಪೂರಕವಾಗಿರುವ ಪಿಚ್ ಆಗಿದೆ. ಇದು ಸ್ಪಿನ್ನರ್​ಗಳಿಗೂ ಅನುಕೂಲಕರ. ಎರಡೂ ತಂಡಗಳ ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ ಮತ್ತು ಪಂದ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. ಹಿಂದಿನ ಪಂದ್ಯದಲ್ಲಿ ಯಾವುದೇ ಆಟಗಾರನಿಗೆ ಗಾಯಗಳಾದ ಪ್ರಕರಣಗಳಿಲ್ಲ. ಹೀಗಾಗಿ ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿತ.

ಇದನ್ನೂ ಓದಿ: IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ 

ಭಾರತ-ಭಾರತ ತಂಡವು ಬಲಿಷ್ಠ ಬ್ಯಾಟರ್​ಗಳು ಮತ್ತು ಬೌಲರ್​ಗಳನ್ನು ಹೊಂದಿದ್ದು, ಟೂರ್ನಿಯಲ್ಲಿ ಇದುವರೆಗೂ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ- ದಕ್ಷಿಣ ಆಫ್ರಿಕಾ ಬ್ಯಾಟಿಂಗ್, ಸ್ಪಿನ್ ಮತ್ತು ವೇಗದ ಘಟಕಗಳಲ್ಲಿ ಪರಿಣಿತ ಬೌಲರ್​ಗಳನ್ನು ಒಳಗೊಂಡಿದೆ.

ಭಾರತ ರೋಹಿತ್ ಶರ್ಮಾ, ರಿಷಭ್ ಪಂತ್, ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಅತ್ಯುತ್ತಮ ಬ್ಯಾಟರ್​ಗಳಾದರೆ. ಅರ್ಶ್​ದೀಪ್​ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಮಿಂಚಲಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ ಮತ್ತು ತಬ್ರೀಜ್ ಶಮ್ಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

Continue Reading
Advertisement
Shirt Dress Fashion
ಫ್ಯಾಷನ್2 mins ago

Shirt Dress Fashion: ಶರ್ಟ್ ಡ್ರೆಸ್‌ ನ್ಯೂ ಲುಕ್‌ಗೆ 3 ಸಿಂಪಲ್‌ ಐಡಿಯಾ

assault case bjp worker
ಕ್ರೈಂ9 mins ago

Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

T20 World cup
ಪ್ರಮುಖ ಸುದ್ದಿ9 mins ago

T20 World Cup 2024 : ಭಾರತ ತಂಡವೇ ವಿಶ್ವ ಕಪ್​​ ಗೆಲ್ಲುತ್ತದೆ; ಕುಲ್ದೀಪ್​ ಯಾದವ್ ಬಾಲ್ಯದ ಕೋಚ್​ ವಿಶ್ವಾಸ

Arvind Kejriwal
ಪ್ರಮುಖ ಸುದ್ದಿ18 mins ago

Arvind Kejriwal: ಅರವಿಂದ ಕೇಜ್ರಿವಾಲ್‌ ಬಿಡುಗಡೆ ಕನಸು ಭಗ್ನ; ಮತ್ತೆ 14 ದಿನ ನ್ಯಾಯಾಂಗ ಬಂಧನ

Dengue Fever
ಕರ್ನಾಟಕ29 mins ago

Dengue Fever: ರಾಯಚೂರಲ್ಲಿ 6 ವರ್ಷದ ಮಗುವಿಗೆ ಡೆಂಗ್ಯೂ; ದಾವಣಗೆರೆ ಜಿಲ್ಲೆಯಲ್ಲಿ 142 ಪ್ರಕರಣಗಳು ಪತ್ತೆ!

Arshdeep Singh
ಕ್ರೀಡೆ35 mins ago

Arshdeep Singh : ಫೈನಲ್​ ಪಂದ್ಯದಲ್ಲಿ ಅರ್ಶ್​ದೀಪ್​ ಸಿಂಗ್​ಗೆ ಇದೆ ದಾಖಲೆ ಬರೆಯುವ ಅವಕಾಶ

International Mud Day
ಫ್ಯಾಷನ್46 mins ago

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

Physical relationship
ವಿದೇಶ1 hour ago

Physical relationship: ಕೈದಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ ಮಹಿಳಾ ಜೈಲಾಧಿಕಾರಿ ಬಗ್ಗೆ ಶಾಕಿಂಗ್‌ ವಿಚಾರ ಬಯಲು

Actor Darshan does not need counseling says by shamitha malnad
ಸ್ಯಾಂಡಲ್ ವುಡ್1 hour ago

Actor Darshan: ದಚ್ಚು ಪರಿಸ್ಥಿತಿಗೆ ಪವಿತ್ರಾ ಕಾರಣ ಅನ್ನೋಕಾಗಲ್ಲ; ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ ಎಂದ ಖ್ಯಾತ ಗಾಯಕಿ!

IND vs SA Final
ಕ್ರೀಡೆ1 hour ago

IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 hour ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ7 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ24 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌