Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ - Vistara News

ವೈರಲ್ ನ್ಯೂಸ್

Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

Viral Video:ರಾಜಸ್ಥಾನದ ಚಿತ್ತೋರ್‌ಗಡದಲ್ಲಿರುವ ವಾಟರ್‌ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಉದ್ರಿಕ್ತ ಜನರ ಗುಂಪೊಂದು ಬುಲ್ಡೋಜರ್‌ ಸಮೇತ ವಾಟರ್‌ ಪಾರ್ಕ್‌ಗೆ ನುಗ್ಗಿ ಪುಡಿಗಟ್ಟಿದ್ದಾರೆ. ವಾಟರ್‌ ಪಾರ್ಕ್‌ ಆಡಳಿತಾಧಿಕಾರಿಗಳು ಏಕಾಏಕಿ ಭಾರೀ ಮೊತ್ತ ಪ್ರವೇಶ ಶುಲ್ಕವನ್ನು ವಿಧಿಸಿದ್ದರು. ಇದರಿಂದ ಕೋಪಗೊಂಡಿದ್ದ ಸ್ಥಳೀಯರು ಪಾರ್ಕ್‌ಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಆಡಳಿತಾಧಿಕಾರಿಗಳು ಒಪ್ಪದೇ ಇದ್ದಾಗ ಜನ ಉದ್ರಿಕ್ತಗೊಂಡು ಪಾರ್ಕ್‌ ಧ್ವಂಸಕ್ಕೆ ಮುಂದಾಗಿದ್ದಾರೆ

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: ಉತ್ತರಪ್ರದೇಶ(Uttara Pradesh)ದಲ್ಲಿ ಯೋಗಿ ಆದಿತ್ಯನಾಥ್‌(Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬುಲ್ಡೋಜರ್‌ಗಳು ಭಾರೀ ಸದ್ದು ಮಾಡುತ್ತಿವೆ. ಅತ್ಯಾಚಾರ, ಕೊಲೆ, ಸುಲಿಗೆ ಹೀಗೆ ಕುಕೃತ್ಯಗಳಲ್ಲಿ ಭಾಗಿಯಾಗುವ ಅಪರಾಧಿಗಳ ಮನೆಗೆ ಬುಲ್ಡೋಜರ್‌ ನುಗ್ಗಿಸಿ ಪಾಠ ಕಲಿಸುವ ಪರಿಪಾಠವನ್ನು ಯೋಗಿ ಹುಟ್ಟು ಹಾಕಿದ್ದರು. ಇದೇ ಮುಂದೆ ರಾಜಸ್ಥಾನದಲ್ಲೂ ಮುಂದುವರೆಯವಂತಾಯಿತು. ಇದೇ ನಡೆಯನ್ನು ರಾಜಸ್ಥಾನ ಸರ್ಕಾರ(Rajasthan Government) ಕೂಡ ಅಳವಡಿಸಿಕೊಂಡು ಸುದ್ದಿಯಾಗಿತ್ತು. ಇದೀಗ ರಾಜಸ್ಥಾನದಲ್ಲಿ ಬುಲ್ಡೋಜರ್‌ ಒಂದು ಭಾರೀ ಸದ್ದು ಮಾಡುತ್ತಿದೆ. ಆದರೆ ಇದು ಸರ್ಕಾರದ ಕ್ರಮ ಅಲ್ಲ. ವಾಟರ್‌ ಪಾರ್ಕ್‌ ವಿರುದ್ಧ ರೊಚ್ಚಿಗೆದ್ದ ಜನರೇ ಕೈಗೆತ್ತಿಗೊಂಡ ಕ್ರಮ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌(Viral Video) ಆಗುತ್ತಿದೆ.

ಏನಿದು ವೈರಲ್‌ ವಿಡಿಯೋ?

ರಾಜಸ್ಥಾನದ ಚಿತ್ತೋರ್‌ಗಡದಲ್ಲಿರುವ ವಾಟರ್‌ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಉದ್ರಿಕ್ತ ಜನರ ಗುಂಪೊಂದು ಬುಲ್ಡೋಜರ್‌ ಸಮೇತ ವಾಟರ್‌ ಪಾರ್ಕ್‌ಗೆ ನುಗ್ಗಿ ಪುಡಿಗಟ್ಟಿದ್ದಾರೆ. ವಾಟರ್‌ ಪಾರ್ಕ್‌ ಆಡಳಿತಾಧಿಕಾರಿಗಳು ಏಕಾಏಕಿ ಭಾರೀ ಮೊತ್ತ ಪ್ರವೇಶ ಶುಲ್ಕವನ್ನು ವಿಧಿಸಿದ್ದರು. ಇದರಿಂದ ಕೋಪಗೊಂಡಿದ್ದ ಸ್ಥಳೀಯರು ಪಾರ್ಕ್‌ಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಆಡಳಿತಾಧಿಕಾರಿಗಳು ಒಪ್ಪದೇ ಇದ್ದಾಗ ಜನ ಉದ್ರಿಕ್ತಗೊಂಡು ಪಾರ್ಕ್‌ ಧ್ವಂಸಕ್ಕೆ ಮುಂದಾಗಿದ್ದಾರೆ.

ಸುಮಾರು ನೂರು ಉದ್ರಿಕ್ತ ಜನರು ಪಾರ್ಕ್ ಒಳಗೆ ಬುಲ್ಡೋಜರ್‌ ನುಗ್ಗಿಸಿದ್ದಾರೆ. ಪಾರ್ಕ್‌ ಒಳಗೆ ನುಗ್ಗಿದ ಬುಲ್ಡೋಜರ್‌ ಅಲ್ಲಿದ್ದ ಆಟದ ವಸ್ತುಗಳನ್ನು ಜಖಂಗೊಳಿಸಿದೆ. ಅಲ್ಲದೇ ಈಜುಕೊಳವನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ಜನರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಲ್ಡೋಜರ್‌ ನುಗ್ಗುತ್ತಿದ್ದಂತೆ ಗಾಬರಿಗೊಂಡ ಜನ ಅಲ್ಲಿಂದ ಅಡ್ಡಾದಿಡ್ಡಿ ಓಡುತ್ತಿರುವುದನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಜನ ಬೇಜವಾಬ್ದಾರಿಯುತ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Sunita Williams: ಡ್ಯಾನ್ಸ್‌ ಮಾಡುತ್ತಲೇ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಭಾರತ ಮೂಲದ ಸುನೀತಾ ವಿಲಿಯಮ್ಸ್; ವಿಡಿಯೊ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಬುಲೆಟ್‌ ಮೇಲೆ ಬಂದ ಹುಡುಗಿ ಆಟೊ ಚಾಲಕನ ಬುರುಡೆ ಒಡೆದಳು!

Viral Video: ದೆಹಲಿಯ ನಿಹಾಲ್ ವಿಹಾರ್‌ ರಸ್ತೆಯೊಂದರಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಟ್ರಾಫಿಕ್‌ನಿಂದಾಗಿ ತನ್ನ ವಾಹನವನ್ನು ನಿಲ್ಲಿಸಿದಾನೆ. ಆಗ ಹಿಂದೆ ಬುಲೆಟ್‌ನಲ್ಲಿ ಬಂದ ಯುವತಿ ಆಟೋ ಚಾಲಕನಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆತನಿಗೆ ವಾಹನವೊಂದು ರಸ್ತೆಗೆ ತಡಲಾಗಿ ನಿಂತಿದ್ದರಿಂದ ತನ್ನ ಆಟೋವನ್ನು ಮುಂದೆ ಸಾಗಿಸಲು ಸಾಧ್ಯವಾಗಲಿಲ್ಲ. ನಂತರ ಯುವತಿ ತಾಳ್ಮೆ ಕಳೆದುಕೊಂಡು ಆಟೊ ಚಾಲಕನೊಂದಿಗೆ ಗಲಾಟೆಗೆ ಇಳಿದಿದ್ದಾಳೆ, ಆಟೋ ಚಾಲಕನ ಮೇಲೆ ಕಬ್ಬಿಣದ ಉಪಕರಣದಿಂದ ಹಲ್ಲೆ ಮಾಡಿದ್ದಾಳೆ.

VISTARANEWS.COM


on

Viral Video
Koo

ಟ್ರಾಫಿಕ್ ಸಮಸ್ಯೆ ಎಲ್ಲೆಂದರಲ್ಲಿ ಕಂಡುಬರುವುದು ಸಾಮಾನ್ಯ. ಕೆಲವೊಂದು ಕಡೆ ರಸ್ತೆಗಳ ಸಮಸ್ಯೆಯಿಂದಾಗಿ ವಾಹನಗಳು ಮುಂದೆ ಚಲಾಯಿಸಲಾಗದೆ ಗಂಟೆಗಟ್ಟಲೆ ಅಲ್ಲೇ ನಿಂತು ಕಾಯುವಂತಾಗುತ್ತದೆ. ಇದರಿಂದ ಕೆಲಸಕ್ಕೆ ಹೋಗುವವರು, ಶಾಲಾ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತದೆ. ದೆಹಲಿ, ಬೆಂಗಳೂರಿನಂತಹ ಸಿಟಿಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಇದೀಗ ಇಂತಹ ಟ್ರಾಫಿಕ್‌ನಿಂದಾಗಿ ರೊಚ್ಚಿಗೆದ್ದ ಯುವತಿಯೊಬ್ಬಳು ಆಟೋ ಚಾಲಕನ ಮೇಲೆ ಕಬ್ಬಿಣದ ಉಪಕರಣದಿಂದ ಹಲ್ಲೆ ಮಾಡಿದ ಘಟನೆ ದೆಹಲಿಯ ನಿಹಾಲ್ ವಿಹಾರ್‌ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದ ಪೋಸ್ಟ್ ಆಗಿದ್ದು, ಸಖತ್ ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.

ದೆಹಲಿಯ ನಿಹಾಲ್ ವಿಹಾರ್‌ನ ರಸ್ತೆಯೊಂದರಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಟ್ರಾಫಿಕ್‍ನಿಂದಾಗಿ ತನ್ನ ವಾಹನವನ್ನು ನಿಲ್ಲಿಸಿದಾನೆ. ಆಗ ಹಿಂದೆ ಬುಲೆಟ್‍ನಲ್ಲಿ ಬಂದ ಯುವತಿ ಆಟೋ ಚಾಲಕನಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆತನಿಗೆ ವಾಹನವೊಂದು ರಸ್ತೆಗೆ ತಡಲಾಗಿ ನಿಂತಿದ್ದರಿಂದ ತನ್ನ ಆಟೋವನ್ನು ಮುಂದೆ ಸಾಗಿಸಲು ಸಾಧ್ಯವಾಗಲಿಲ್ಲ. ನಂತರ ಯುವತಿ ತಾಳ್ಮೆ ಕಳೆದುಕೊಂಡು ಆಟೊ ಚಾಲಕನೊಂದಿಗೆ ಗಲಾಟೆಗೆ ಇಳಿದಿದ್ದಾಳೆ, ನಂತರ ಕೋಪಗೊಂಡು ಕಬ್ಬಿಣದ ಉಪಕರಣದಿಂದ ಆಟೋ ಚಾಲಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಳೆ. ಇದರಿಂದ ಆತನ ತಲೆಗೆ ಗಾಯವಾಗಿ ರಕ್ತ ಸೋರಿದೆ.

ವಿಡಿಯೊದಲ್ಲಿ ಯುವತಿ ಕಬ್ಬಿಣದ ಉಪಕರಣದಿಂದ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ಕಾಣಬಹುದು. ಅಲ್ಲಿದ್ದವರು ಆಕೆಯನ್ನು ತಡೆದರೂ ಕೇಳದ ಯುವತಿ ಮತ್ತೆ ಆತನಿಗೆ ಹೊಡೆದಿದ್ದಾಳೆ. ಚಾಲಕನ ತಲೆಯಲ್ಲಿ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಇಷ್ಟಾದರೂ ಯುವತಿ ವಾಗ್ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಘಟನೆಯನ್ನು ನೋಡುಗರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಜನರ ಗಮನ ಸೆಳೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ರಸ್ತೆ ಶಿಷ್ಟಾಚಾರ, ಸುರಕ್ಷತೆ ಮತ್ತು ಅಂತಹ ಘರ್ಷಣೆಗಳನ್ನು ತಡೆಗಟ್ಟುವಲ್ಲಿ ಕಾನೂನು ಜಾರಿಯ ಪಾತ್ರದ ಬಗ್ಗೆ ಜನರು ಚರ್ಚೆ ಮಾಡಿದ್ದಾರೆ. ದೆಹಲಿಯಂತಹ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ರಸ್ತೆ ಮೂಲಸೌಕರ್ಯಗಳಲ್ಲಿ ಸಮಸ್ಯೆ ಎದುರಿಸುತ್ತಿರುವುದನ್ನು ಕಂಡು ಆಶ್ವರ್ಯವಾಗಿದೆ. ಕಿಕ್ಕಿರಿದ ರಸ್ತೆಗಳಲ್ಲಿ ಸಂಚರಿಸುವಾಗ ಸುರಕ್ಷತೆ ಮತ್ತು ಪರಸ್ಪರ ಗೌರವಕ್ಕೆ ಆದ್ಯತೆ ನೀಡುವಂತೆ ಚಾಲಕರಿಗೆ ಮನದಟ್ಟು ಮಾಡಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ರಸ್ತೆ ಸುರಕ್ಷತೆ ಮತ್ತು ಜವಾಬ್ದಾರಿಯುತ ಚಾಲನೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಲಾಗಿದೆ.

Continue Reading

Latest

Viral News: ಚಾಲಕನ ಹೆಸರು ʼಯಮರಾಜʼ ಎನ್ನುವುದು ಗೊತ್ತಾಗುತ್ತಲೇ ಕ್ಯಾಬ್ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ ಗ್ರಾಹಕ!

Viral News: ಮೊದಲೆಲ್ಲ ಬಸ್, ಆಟೊಗಳಿಗಾಗಿ ಕಾಯುತ್ತಿದ್ದರು. ಆದರೆ ಈ ಬುಕ್ಕಿಂಗ್ ಮಾಡಿ ಕಣ್ಮುಚ್ಚಿ ತೆರೆಯುವುದರೊಳಗೆ ಮನೆ ಮುಂದೆ ಕ್ಯಾಬ್ ಬಂದು ನಿಲ್ಲುತ್ತದೆ. ಅಲ್ಲದೇ ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಕಂಪನಿಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಗಾಗಿ ಕಂಪನಿಗಳು, ಡ್ರೈವರ್ ಹೆಸರುಗಳು ಮತ್ತು ಸ್ಥಳಗಳ ಬಗ್ಗೆ ಮೊದಲೇ ಮಾಹಿತಿ ನೀಡುತ್ತವೆ, ಹಾಗೇ ಇದರಲ್ಲಿ ಗ್ರಾಹಕರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಬುಕ್ಕಿಂಗ್ ಮಾಡಿದ ಪ್ರಯಾಣಿಕರೊಬ್ಬರು ಡ್ರೈವರ್ ಹೆಸರು ನೋಡಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ತಮಾಷೆಯ ಘಟನೆಯೊಂದು ನಡೆದಿದೆ.

VISTARANEWS.COM


on

Viral News
Koo

ಇತ್ತೀಚಿನ ದಿನಗಳಲ್ಲಿ ಸಿಟಿಯಲ್ಲಿ ವಾಸಿಸುವ ಜನರು ಆಟೊಗಳಿಗಿಂತ ಹೆಚ್ಚು ಕ್ಯಾಬ್‌ಗಳನ್ನು ಬುಕ್ ಮಾಡಿಕೊಂಡು ಹೋಗುತ್ತಾರೆ. ಇದು ತುಂಬಾ ಸುಲಭ ಮತ್ತು ಕಡಿಮೆ ದರಗಳಲ್ಲಿ ನೀವು ಯಾವುದೇ ಭಯವಿಲ್ಲದೆ ನಿಮಗಿಷ್ಟ ಬಂದ ಕಡೆ ಹೋಗಬಹುದು. ಅಲ್ಲದೇ ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಕಂಪನಿಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ರೈವರ್ ಹೆಸರುಗಳು ಮತ್ತು ಸ್ಥಳಗಳ ಬಗ್ಗೆ ಮೊದಲೇ ಮಾಹಿತಿ ನೀಡುತ್ತವೆ. ಹಾಗೇ ಇದರಲ್ಲಿ ಗ್ರಾಹಕರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಆದರೆ ಈ ಸುರಕ್ಷತೆಯ ಸೌಲಭ್ಯಗಳು ಈಗ ಕ್ಯಾಬ್ ಕಂಪನಿಗಳಿಗೆ ಸಮಸ್ಯೆಯನ್ನುಂಟುಮಾಡಿದೆ. ಯಾಕೆಂದರೆ ಕ್ಯಾಬ್ ಡ್ರೈವರ್ ಹೆಸರು ತಿಳಿದು ವ್ಯಕ್ತಿಯೊಬ್ಬ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದು, ಈ ತಮಾಷೆಯ ಕಾರಣದಿಂದ ಈ ಸುದ್ದಿ ಸಖತ್ ವೈರಲ್ (Viral News) ಆಗಿದೆ.

ಈ ವೈರಲ್ ಪೋಸ್ಟ್ ಅನ್ನು @timepassstruggler ಎಂಬ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಓಲಾದಿಂದ ಬಂದ ಸಂದೇಶದ ಸ್ಕ್ರೀನ್‍ಶಾಟ್ ಆಗಿದೆ. ಅದರಲ್ಲಿ “ಯಮರಾಜ ಆಗಮಿಸಿದ್ದಾರೆ ಮತ್ತು ನಿಮ್ಮ ಸ್ಥಳದಲ್ಲಿ ಕಾಯುತ್ತಿದ್ದಾರೆ” ಎಂದು ಬರೆಯಲಾಗಿತ್ತು. ಈ ಬಗ್ಗೆ ನೀಡಿದ ವಿವರಣೆಯಲ್ಲಿ ಕರ್ನಾಟಕದಲ್ಲಿ ಯಾರೋ ಒಬ್ಬರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಚಾಲಕನ ಹೆಸರು ʼಯಮರಾಜʼ ಎಂದು ನೋಡಿದ ನಂತರ ಅದನ್ನು ರದ್ದುಗೊಳಿಸಿದರು ಎನ್ನಲಾಗಿದೆ.

ಹಿಂದೂ ಧರ್ಮದ ಪ್ರಕಾರ, ಯಮರಾಜನು ಸಾವಿನ ದೇವರು. ಆತ ಬಂದಿದ್ದಾನೆ ಎಂದರೆ ಸಾವು ನಮ್ಮ ಹತ್ತಿರದಲ್ಲಿದೆ ಎಂಬ ನಂಬಿಕೆ ನಮ್ಮಲಿದೆ. ಆದ್ದರಿಂದ, ಯಮರಾಜ ಆಗಮಿಸಿದ್ದಾರೆ ಮತ್ತು ನಿಮ್ಮ ಸ್ಥಳದಲ್ಲಿ ಕಾಯುತ್ತಿದ್ದಾರೆ ಎಂದು ಬರೆದ ಮೆಸೇಜ್ ನೋಡಿ ಗ್ರಾಹಕರು ಹೆದರಿ ಕ್ಯಾಬ್ ಬುಕ್ಕಿಂಗ್ ಅನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸುವ ಮೂಲಕ ಆಶ್ವರ್ಯವನ್ನುಂಟು ಮಾಡಿದ್ದಾರೆ.

ಇದನ್ನೂ ಓದಿ: ಭೋಲೆ ಬಾಬಾ ಇರುತ್ತಿದ್ದುದು ಫೈವ್‌ ಸ್ಟಾರ್‌ ಆಶ್ರಮದಲ್ಲಿ! ಅವರಿಗಿದೆ ಅಪಾರ ಆಸ್ತಿ!

ಇದೇ ತರಹದ ಘಟನೆ ಕಳೆದ ಜನವರಿಯಲ್ಲಿ ನಡೆದಿದ್ದು, ಇದು ಆನ್‌ಲೈನ್ ನಲ್ಲಿ ವೈರಲ್ ಆಗಿತ್ತು. ಅದನ್ನು @ashimhta ಎಂಬ ಬಳಕೆದಾರರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಆಕೆ ತನ್ನ ಉಬರ್ ಡ್ರೈವರ್ ನಡುವಿನ ಸಂಭಾಷಣೆಯ ಸ್ಕ್ರೀನ್‍ಶಾಟ್ ಅನ್ನು ಹಂಚಿಕೊಂಡಿದ್ದು, ಇದರಲ್ಲಿ ಭರತ್ ಎಂಬ ಚಾಲಕ “ಈ ಬುಕ್ಕಿಂಗ್ ಅನ್ನು ರದ್ದುಗೊಳಿಸಿ, ನನಗೆ ನಿದ್ರೆ ಬರುತ್ತಿದೆ” ಎಂದು ಮೆಸೇಜ್ ಕಳುಹಿಸಿದರು. ತನಗೆ ತುಂಬಾ ಸುಸ್ತಾಗಿದೆ. ಹಾಗಾಗಿ ಬರಲು ಆಗಲ್ಲ ಎಂದಿದ್ದ ಮೆಸೇಜ್‌ನ ಸ್ಕ್ರೀನ್‍ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.

Continue Reading

Latest

Viral Video: ಹೆಂಡತಿಯನ್ನು ಯಾಮಾರಿಸಿ ಪ್ರೇಯಸಿಯನ್ನು ಮನೆಗೆ ಕರೆಸಬಾರದಿತ್ತು! ಗೂಸಾ ತಿಂದವನ ಪ್ರತಿಕ್ರಿಯೆ!

Viral Video: ವ್ಯಕ್ತಿಯೊಬ್ಬ ಮಹಿಳೆಯನ್ನು ಮನೆಗೆ ಕರೆತಂದ್ದ. ಇದು ಅಕ್ರಮ ಸಂಬಂಧವೆಂದು ನಿರ್ಧರಿಸಿ ಗ್ರಾಮ ಸಭೆಯಲ್ಲಿ ಇವರಿಬ್ಬರಿಗೆ ಸಾರ್ವಜನಿಕವಾಗಿ ಥಳಿತಕ್ಕೆ ಒಳಗಾಗುವಂತೆ ಶಿಕ್ಷೆ ವಿಧಿಸಲಾಗಿತ್ತು. ಈ ವಿಡಿಯೊ ವೈರಲ್ ಆದ ಕೆಲವು ದಿನಗಳ ನಂತರ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಸಂತ್ರಸ್ತ ವ್ಯಕ್ತಿ, ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವಿವರಣೆ ನೀಡಿರುವುದ ಜೊತೆಗೆ ಈ ಘಟನೆ ಆಗಿದ್ದು ಒಳ್ಳೆಯದೇ ಆಯಿತು ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದಾನೆ.

VISTARANEWS.COM


on

Viral Video
Koo

ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಚೋಪ್ರಾದಲ್ಲಿ ಪುರುಷ ಮತ್ತು ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ್ದು ಭಾರಿ ಸುದ್ದಿಯಾಗಿತ್ತು. ಈ ಘಟನೆಗೆ ಸಂಬಂಧಪಟ್ಟ ದೃಶ್ಯ ವೈರಲ್ (Viral Video) ಆಗಿತ್ತು. ಹಾಗಾಗಿ ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು. ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಆದರೆ ಈಗ, ಭೀಕರವಾಗಿ ಹಲ್ಲೆಗೊಳಗಾದ ವ್ಯಕ್ತಿ ಮಾತ್ರ ʼಆಗಿದ್ದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳುವ ಮೂಲಕ ಆಶ್ಚರ್ಯನ್ನುಂಟುಮಾಡಿದ್ದಾನೆ!

ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ದಂಪತಿಯನ್ನು ಬಿದಿರಿನ ಕೋಲಿನಿಂದ ಪದೇಪದೇ ಹೊಡೆಯುವುದನ್ನು ತೋರಿಸುತ್ತದೆ. ಸುತ್ತಲೂ ಜನರು ನಿಂತಿರುವುದು ಕಾಣಿಸುತ್ತದೆ. ಆದರೆ ಯಾರು ಈ ದಂಪತಿಯ ಸಹಾಯಕ್ಕೆ ಬರುತ್ತಿಲ್ಲ. ಸ್ಥಳೀಯ ಟಿಎಂಸಿ ನಾಯಕ ತಜ್ಜಿಮುಲ್ ಹಕ್ ಅವರ ನಿರ್ದೇಶನದಲ್ಲಿ ಈ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು.

ಈ ವಿಡಿಯೊ ವೈರಲ್ ಆದ ಕೆಲವು ದಿನಗಳ ನಂತರ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಸಂತ್ರಸ್ತ ವ್ಯಕ್ತಿ, ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವಿವರಣೆ ನೀಡಿರುವುದ ಜೊತೆಗೆ ಈ ಘಟನೆ ಆಗಿದ್ದು ಒಳ್ಳೆಯದೇ ಆಯಿತು ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದಾನೆ. ನಾನೊಬ್ಬ ವಿವಾಹಿತ. ಆದರೆ ನಾನು ಹೆಂಡತಿಗೆ ಮೋಸ ಮಾಡಿ ಮತ್ತೊಬ್ಬ ವಿವಾಹಿತ ಮಹಿಳೆಯನ್ನು ಮನೆಗೆ ಕರೆತಂದು ಮೋಜು ಮಾಡುತ್ತಿದ್ದೆ. ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದೆ. ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ನಮಗಿಬ್ಬರಿಗೆ ನಡು ರಸ್ತೆಯಲ್ಲಿ ಬೆತ್ತದಿಂದ ಬಾರಿಸಲಾಯಿತು. ನನ್ನದೇ ತಪ್ಪಾಗಿರುವುದರಿಂದ ಈ ಬಗ್ಗೆ ಯಾರ ವಿರುದ್ಧವೂ ದೂರು ನೀಡುವುದಿಲ್ಲ ಎಂಬುದಾಗಿ ಆತ ತಿಳಿಸಿದ್ದಾನೆ. ಈಗ ಏನು ನಡೆಯಿತೋ ಅದು ಒಳ್ಳೆಯದೆ ಆಗಿದೆ. ಇದರಿಂದ ಈಗ ನನ್ನ ಪತ್ನಿಯ ಜೊತೆಗೆ ಶಾಂತಿಯಿಂದ ಬದುಕಬಹುದು ಎಂದಾತ ಖುಷಿ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ: ಭೋಲೆ ಬಾಬಾ ಇರುತ್ತಿದ್ದುದು ಫೈವ್‌ ಸ್ಟಾರ್‌ ಆಶ್ರಮದಲ್ಲಿ! ಅವರಿಗಿದೆ ಅಪಾರ ಆಸ್ತಿ!

Continue Reading

ವೈರಲ್ ನ್ಯೂಸ್

Viral News: ಇವನು ಅಂತಿಂತಾ ಕಳ್ಳನಲ್ಲ…ಮನೆ ಎಲ್ಲಾ ದೋಚಿ, ಲೆಟರ್‌ ಬರೆದಿಟ್ಟು ಕ್ಷಮೆ ಕೇಳ್ತಾನೆ!

Viral News: ಸೆಲ್ವಿನ್‌ ಕುಟುಂಬಸ್ಥರು ಪರಿಶೀಲನೆ ನಡೆಸಿದಾಗ 60,000 ನಗದು, 12 ಗ್ರಾಂ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ದೋಚಿರುವುದು ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಪೊಲೀಸರಿಗೆ ಪತ್ರವೊಂದು ಪತ್ತೆಯಾಗಿತ್ತು. ಆ ಪತ್ರವನ್ನು ಕಳ್ಳನೇ ಮನೆಯ ಮಾಲೀಕನಿಗೆ ಬರೆದಿದ್ದು, “ದಯವಿಟ್ಟು ಕ್ಷಮಿ..ಒಂದು ತಿಂಗಳಲ್ಲಿ ನಿಮ್ಮ ಎಲ್ಲಾ ವಸ್ತುಗಳನ್ನು ವಾಪಸ್‌ ಮಾಡುತ್ತೇನೆ. ನನ್ನ ಮನೆಯ ಸದಸ್ಯರೊಬ್ಬರ ಆರೋಗ್ಯ ಸ್ಥಿತಿ ಬಹಳ ಹದಗೆಟ್ಟಿದೆ. ಅದಕ್ಕಾಗಿ ಈ ಕೃತ್ಯ ಎಸಗಿದ್ದೇನೆ” ಎಂದು ಬರೆದಿದ್ದ.

VISTARANEWS.COM


on

Viral News
Koo

ಚೆನ್ನೈ: ಒಬ್ಬ ವ್ಯಕ್ತಿ ಕಳ್ಳನಾಗಬೇಕೆಂದರೆ ಅದರ ಹಿಂದೆ ಯಾವುದಾದರೂ ಬಲವಾದ ಕಾರಣವಿರುತ್ತೆ ಅನ್ನುತ್ತಾರೆ ಮನಶಾಸ್ತ್ರಜ್ಞರು. ಆದ್ರೆ ಒಮ್ಮೆ ಕಳ್ಳತನ ಮಾಡಿದ ಮೇಲೆ ಅದೇ ಕಸುಬು ಚೆನ್ನಾಗಿದೆ ಎಂದು ಮುಂದುವರೆಸುವವರೇ ಹೆಚ್ಚು. ಇನ್ನು ಕೆಲವೇ ಕೆಲವರು ಏನೋ ಅನಿವಾರ್ಯತೆಗೆ ಕಟ್ಟು ಬಿದ್ದು ಇಂತಹ ಕೆಲಸಕ್ಕೆ ಕೈ ಹಾಕುವುದೂ ಇದೆ. ಇದೀಗ ಮನೆಗೆ ನುಗ್ಗಿದ ಕಳ್ಳನೋರ್ವ ಸಾಮಾನುಗಳನ್ನೆಲ್ಲಾ ದೋಚಿ ಬಳಿಕ ಕ್ಷಮಾಪಣೆ ಪತ್ರ ಬರೆದಿಟ್ಟಿರುವ ಘಟನೆ(Viral News) ತಮಿಳುನಾಡಿನಲ್ಲಿ ನಡೆದಿದೆ.

ಘಟನೆ ವಿವರ

ಮೆಗ್ನಾನಪುರಂನ ಸಾತನ್‌ಕುಲಂನಲ್ಲಿ ಈ ಘಟನೆ ನಡೆದಿದ್ದು, ನಿವೃತ ಶಿಕ್ಷಕ ದಂಪತಿ ಮನೆಯಲ್ಲಿ ಜೂನ್‌ 17ರಂದು ಕಳ್ಳತನ ನಡೆದಿತ್ತು. ಸೆಲ್ವಿನ್‌ ಮತ್ತು ಅವರ ಪತ್ನಿ ತಮ್ಮ ಮಗನನ್ನು ಭೇಟಿಯಾಗಲು ಚೆನ್ನೈಗೆ ತೆರಳಿದ್ದರು. ಈ ವೇಳ ಕಳ್ಳನೋರ್ವ ಮನೆಗೆ ನುಗ್ಗಿದ್ದಾರೆ. ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ. ಇನ್ನು ದಂಪತಿ ತಾವು ಇಲ್ಲದಾಗ ಮನೆ ಸ್ವಚ್ಛಗೊಳಿಸಲು ಸೆಲ್ವಿ ಎಂಬ ಕೆಲಸದಾಕೆಯನ್ನು ನಿಯೋಜಿಸಿದ್ದರು. ಸೆಲ್ವಿ ಎಂದಿನಂತೆ ಮನೆ ಕೆಲಸಕ್ಕೆಂದು ಬಂದಾಗ ಬಾಗಿ ಒಡೆದಿರುವುದನ್ನು ಕಂಡು ಗಾಬರಿ ಆಗಿದ್ದಾಳೆ. ತಕ್ಷಣ ಮನೆಯ ಯಜಮಾನ ಸೆಲ್ವಿನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.

ತಕ್ಷಣ ಸ್ಥಳಕ್ಕೆ ಬಂದ ಸೆಲ್ವಿನ್‌ ಕುಟುಂಬಸ್ಥರು ಪರಿಶೀಲನೆ ನಡೆಸಿದಾಗ 60,000 ನಗದು, 12 ಗ್ರಾಂ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ದೋಚಿರುವುದು ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಪೊಲೀಸರಿಗೆ ಪತ್ರವೊಂದು ಪತ್ತೆಯಾಗಿತ್ತು. ಆ ಪತ್ರವನ್ನು ಕಳ್ಳನೇ ಮನೆಯ ಮಾಲೀಕನಿಗೆ ಬರೆದಿದ್ದು, “ದಯವಿಟ್ಟು ಕ್ಷಮಿ..ಒಂದು ತಿಂಗಳಲ್ಲಿ ನಿಮ್ಮ ಎಲ್ಲಾ ವಸ್ತುಗಳನ್ನು ವಾಪಸ್‌ ಮಾಡುತ್ತೇನೆ. ನನ್ನ ಮನೆಯ ಸದಸ್ಯರೊಬ್ಬರ ಆರೋಗ್ಯ ಸ್ಥಿತಿ ಬಹಳ ಹದಗೆಟ್ಟಿದೆ. ಅದಕ್ಕಾಗಿ ಈ ಕೃತ್ಯ ಎಸಗಿದ್ದೇನೆ” ಎಂದು ಬರೆದಿದ್ದ.

ಇನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ. ಕಳೆದ ವರ್ಷ ಕೇರಳದಲ್ಲಿ ಇಂತಹುದೇ ಘಟನೆ ನಡೆದಿದ್ದು, ಮೂರು ವರ್ಷದ ಮಗುವಿನ ಚಿನ್ನದ ಸರವನ್ನು ಕದ್ದ ಕಳ್ಳನೊಬ್ಬ ಅದನ್ನು ಮಾರಿ ಬಂದ ಹಣವನ್ನು ಕ್ಷಮಾಪಣೆ ಪತ್ರದೊಂದಿಗೆ ಹಿಂದಿರುಗಿಸಿದ್ದಾನೆ. ಪಾಲಕ್ಕಾಡ್ ಬಳಿ ಈ ಘಟನೆ ನಡೆದಿತ್ತು.

ಮಧ್ಯಪ್ರದೇಶದ ಭಿಂದ್ ನಗರದಲ್ಲೂ ಖದೀಮನೊಬ್ಬ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಬೆಲೆ ಬಾಳುವ ವವಸ್ತುಗಳನ್ನು ಕಳ್ಳತನ ಮಾಡಿ ಪತ್ರ ಬರೆದಿಟ್ಟು ಕ್ಷಮೆ ಕೇಳಿರುವ ಘಟನೆ ನಡೆದಿತ್ತು. ನಗರದ ಪೊಲೀಸ್​ ಅಧಿಕಾರಿಯ ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು ಕ್ಷಮೆಯಾಚಿಸುವ ಪತ್ರವೊಂದನ್ನು ಕಳ್ಳ ಬರೆದಿಟ್ಟು ಪರಾರಿಯಾಗಿದ್ದ. ಸ್ನೇಹಿತನ ಜೀವ ಉಳಿಸುವ ಸಲುವಾಗಿ ನಾನು ನಿಮ್ಮ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದೇನೆ ಮತ್ತು ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕಳ್ಳ ತನ್ನ ಪತ್ರದಲ್ಲಿ ಬರೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Continue Reading
Advertisement
Robot Suicide
ತಂತ್ರಜ್ಞಾನ11 mins ago

Robot Suicide: ದ. ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ?

Muda site allocation Politically motivated allegation says CM Siddaramaiah
ಕರ್ನಾಟಕ15 mins ago

CM Siddaramaiah: ನಮಗೆ ನಿವೇಶನ ಕೊಟ್ಟಿರುವುದು ತಪ್ಪು ಎಂದರೆ ಪರಿಹಾರ ಕೊಡಲಿ; ಸಿದ್ದರಾಮಯ್ಯ ಸವಾಲು

Narendra modi
ಪ್ರಮುಖ ಸುದ್ದಿ16 mins ago

Narendra Modi : ಭಾರತ ತಂಡಕ್ಕೆ ಆತಿಥ್ಯ ನೀಡಿದ ಬಳಿಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ನರೇಂದ್ರ ಮೋದಿ

LK Advani
ದೇಶ32 mins ago

LK Advani: ಎಲ್‌.ಕೆ. ಅಡ್ವಾಣಿ ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

Kannada New Movie Kadalura Kanmani will release soon
ಕರ್ನಾಟಕ42 mins ago

Kannada New Movie: ಶೀಘ್ರದಲ್ಲೇ ತೆರೆಗೆ ಬರಲಿದೆ ‘ಕಡಲೂರ ಕಣ್ಮಣಿ’ ಚಿತ್ರ

Zircon Jewellery Fashion
ಫ್ಯಾಷನ್50 mins ago

Zircon Jewellery Fashion: ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ಗೆ ಸೇರಿದ ವೈವಿಧ್ಯಯಮಯ ಜಿರ್ಕೊನ್‌ ಆಭರಣಗಳ ಹಂಗಾಮಾ!

ZIM vs IND
ಪ್ರಮುಖ ಸುದ್ದಿ56 mins ago

ZIM vs IND : ಭಾರತ ವಿರುದ್ಧ ಸರಣಿಗೂ ಮುನ್ನ ಜಿಂಬಾಬ್ವೆ ಬೌಲಿಂಗ್ ಕೋಚ್ ಆಗಿ ಚಾರ್ಲ್ ಲ್ಯಾಂಗೆವೆಲ್ಟ್ ನೇಮಕ

Cabinet Meeting
ಕರ್ನಾಟಕ1 hour ago

Cabinet Meeting: ವಿಮಾದಾರರು, ಆರೋಗ್ಯ ಕ್ಷೇಮ ಕೇಂದ್ರಗಳಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್;‌ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಇಲ್ಲಿವೆ

Hair Oil Tips
ಆರೋಗ್ಯ1 hour ago

Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

karnataka Weather Forecast
ಮಳೆ2 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ3 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ4 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ6 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ7 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ8 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ9 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

ಟ್ರೆಂಡಿಂಗ್‌