IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್! - Vistara News

ಪ್ರಮುಖ ಸುದ್ದಿ

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

IND vs PAK : ಡ್ರೇಕ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ 2024 ರ ಫೈನಲ್​​ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತಾ ನೈಟ್ ರೈಡರ್ಸ್​ ಪರ ಸನ್​​​ರೈಸರ್ಸ್​ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ 2 ಕೋಟಿ ರೂ. ಕಟ್ಟಿದ್ದರು. ಆದರೆ ಫಲಿತಾಂಶ ಅವರಿಗೆ ಪೂರಕವಾಗಿ ಬರಲಿಲ್ಲ.

VISTARANEWS.COM


on

IND vs PAK
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (IND vs PAK) ವಿರುದ್ಧ 6 ರನ್​ಗಳ ವಿಜಯ ದಾಖಲಿಸಿದೆ. ಈ ಮೂಲಕ ನೆರೆಯ ದೇಶದ ವಿರುದ್ಧದ ವಿಶ್ವ ಕಪ್ ಪ್ರಾಬಲ್ಯವನ್ನು ಮುಂದುವರಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು. ಈ ವೇಳೆ ಪಾಕ್(Pakistan Cricket Team)​ ಗೆಲ್ಲುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತದ (India Cricket Team) ಬೌಲರ್​ಗಳು ತನ್ನ ಪ್ರಭಾವಿ ಸ್ಪೆಲ್​ಗಳ ಮೂಲಕ ಪಾಕಿಸ್ತಾನ ತಂಡವನ್ನು 113 ರನ್​ಗಳಿಗೆ ಕಟ್ಟಿ ಹಾಕಿತು. ಹೀಗಅಗಿ ಭಾರತ ತಂಡದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಇದೇ ವೇಳೆ ಕೆನಡಾದ ರ್ಯಾಪರ್​ ಡ್ರೇಕ್​ಗೂ ಸಾಕಷ್ಟು ಖುಷಿ ಸಿಕ್ಕಿದೆ. ಹೇಗೆಂದರೆ ಅವರು ಭಾರತ ಪರ 5.4 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಇದೀಗ ಅವರಿಗೆ ಅದರ ಎರಡು ಪಟ್ಟು ಹಣ ಸಿಕ್ಕಿದೆ.

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿಯೇ ಸೋಲಿಸುತ್ತದೆ ಎಂಬ ವಿಶ್ವಾಸದಲ್ಲಿ ಕೆನಡಾದ ರ್ಯಾಪರ್ ಆಬ್ರೆ ಡ್ರೇಕ್ ಗ್ರಹಾಂ ಟೀಮ್ ಇಂಡಿಯಾ ಪರ 5 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಟಿ 20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಒಂಬತ್ತನೇ ಬಾರಿಗೆ ಮುಖಾಮುಖಿಯಾಗಿದ್ದು ಎಂಟು ಸಲ ಭಾರತವೇ ಗೆದ್ದಿದೆ. ಹೀಗಾಗಿ ಅವರು ಸಹಜವಾಗಿ ಭಾರತ ಪರವೇ ಬೆಟ್ಟಿಂಗ್​ ಕಟ್ಟಿದ್ದಾರೆ. ಇನ್ನು 2021ರ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದೆ. ಇದು ಆ ತಂಡಕ್ಕೆ ವಿಶ್ವ ಕಪ್​ನಲ್ಲಿ ಏಕೈಕ ಗೆಲುವು.

ಟಿ 20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪ್ರಾಬಲ್ಯ ಹೊಂದಿರುವ ಕಾರಣ ಪಂದ್ಯವನ್ನು ಗೆಲ್ಲುವ ಪ್ರಬಲ ನೆಚ್ಚಿನ ತಂಡವೆಂದು ಬೆಟ್ಟಿಂಗ್​ ಆ್ಯಪ್​ಗಳ ಪರಿಗಣಿಸಿದ್ದವು. ಮೆನ್ ಇನ್ ಗ್ರೀನ್ ವಿರುದ್ಧದ ಮೆನ್ ಇನ್ ಬ್ಲೂ ಗಮನಾರ್ಹ ಟ್ರ್ಯಾಕ್ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು, ಡ್ರೇಕ್ ನ್ಯೂಯಾರ್ಕ್​​ನಲ್ಲಿ ನಡೆದ ಬಹುನಿರೀಕ್ಷಿತ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡದ ಮೇಲೆ ಪಣತೊಡಲು ನಿರ್ಧರಿಸಿದ್ದರು.

ಇದನ್ನೂ ಓದಿ: IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

ಡ್ರೇಕ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ 2024 ರ ಫೈನಲ್​​ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತಾ ನೈಟ್ ರೈಡರ್ಸ್​ ಪರ ಸನ್​​​ರೈಸರ್ಸ್​ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ 2 ಕೋಟಿ ರೂ. ಕಟ್ಟಿದ್ದರು. ಆದರೆ ಫಲಿತಾಂಶ ಅವರಿಗೆ ಪೂರಕವಾಗಿ ಬರಲಿಲ್ಲ. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಪ್ಯಾಟ್ ಕಮಿನ್ಸ್ ಮುಂದಾಳತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಡ್ರೇಕ್ ಹಣ ಕಳೆದುಕೊಂಡಿದ್ದರು.

ಪಾಕಿಸ್ತಾನ ವಿರುದ್ಧ ಬುಮ್ರಾ ಭರ್ಜರಿ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ರಕ್ಷಕನಂತೆ ಆಡಿದರು. ಅವರು ಕೆಲವು ನಿರ್ಣಾಯಕ ವಿಕೆಟ್​ಗಳನ್ನು ಗಳಿಸಿದರು. ಇನ್ನಿಂಗ್ಸ್​ನ 19 ನೇ ಓವರ್​ನಲ್ಲಿ ಒಂದು ವಿಕೆಟ್ ಪಡೆದರು. ಅವರು ತಂಡಕ್ಕೆ ಅಗತ್ಯವಿದ್ದಾಗ ನಿಖರವಾಗಿ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಭಾರತವನ್ನು ಕಾಪಾಡಿದರು.

120 ರನ್​ಗಳ ಗುರಿ ಬೆನ್ನತ್ತಿದ ಪಾಕ್​​ ಹೀನಾಯ ಸೋಲಿಗೆ ಒಳಗಾಯಿತು. ಇದೇ ವೇಳೆ ಮೆನ್ ಇನ್ ಬ್ಲೂ ನಿಜವಾದ ವಿಜೇತರಂತೆ ಆಡಿತು. ಟಿ 20 ಐ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿತು. ಜಸ್ಪ್ರೀತ್ ಬುಮ್ರಾ ನಿಗದಿತ 4 ಓವರ್ಗಳಲ್ಲಿ 3.50 ಎಕಾನಮಿಯೊಂದಿಗೆ 3 ವಿಕೆಟ್ ಪಡೆದರು. ಆರಂಭಿಕ ವೇಗಿ ಭಾರತ ತಂಡವನ್ನು ನಿರಾಶಾದಾಯಕ ಸೋಲಿನಿಂದ ರಕ್ಷಿಸಿದರು. To Beat Pakistan

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Ananth Ambani: ಮಗನ ಮದುವೆ ಖುಷಿಯಲ್ಲಿ ನೀತಾ ಅಂಬಾನಿ ಹಾಗೂ ಮುಖೇಶ್‌ ಅಂಬಾನಿಯಿಂದ ಬಡವರಿಗಾಗಿ ಸಾಮೂಹಿಕ ವಿವಾಹ!

Ananth Ambani ಅಂಬಾನಿ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಮನೆಮಾಡಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ವೈವಾಹಿಕ ಜೀವನ ಶುರುಮಾಡಲಿದ್ದಾರೆ. ಮುಖೇಶ್ ಅಂಬಾನಿ-ನೀತಾ ಅಂಬಾನಿ ಇಬ್ಬರ ಮುಖದಲ್ಲೂ ಮಗನ ಮದುವೆಯ ಖುಷಿ ಕಾಣುತ್ತಿದೆ. ಈಗಾಗಲೇ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಾಶಿಯ ವಿಶ್ವನಾಥನ ಸನ್ನಿಧಿಯಲ್ಲಿಟ್ಟು ಆರ್ಶಿವಾದ ಪಡೆದಿದ್ದಾರೆ. ಅದು ಅಲ್ಲದೇ ಈಗ ಮಗನ ಮದುವೆಗೂ ಮುನ್ನ ದೀನದಲಿತರಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಸಿದ್ಧರಾಗಿದ್ದಾರೆ.

VISTARANEWS.COM


on

Ananth Ambani
Koo

ಮುಂಬೈ : ಜುಲೈ 12ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿ (Ananth Ambani) ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಆಮಂತ್ರಣ ಪತ್ರಿಕೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿತ್ತು. ಇದೀಗ ಅವರ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ನಡುವೆ ಅಂಬಾನಿ ಕುಟುಂಬವು ಮತ್ತೊಂದು ಸುತ್ತಿನ ಭವ್ಯ ವಿವಾಹ ಪೂರ್ವ ಉತ್ಸವಗಳನ್ನು ಆಯೋಜಿಸಲು ಯೋಜಿಸುತ್ತಿದೆ ಎನ್ನಲಾಗಿದೆ.

Ananth Ambani

ಹೌದು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಯ ಭಾಗವಾಗಿ, ಮುಖೇಶ್ ಮತ್ತು ನೀತಾ ಅಂಬಾನಿ ಜುಲೈ 2 ರಂದು ಪಾಲ್ಘರ್ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ದೀನದಲಿತರಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಸೋಮವಾರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು ಮತ್ತು ಶಿವನ ಸನ್ನಿಧಿಯಲ್ಲಿ ಮೊದಲ ವಿವಾಹ ಆಮಂತ್ರಣವನ್ನು ನೀಡಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಹಿಂದೂ ವೈದಿಕ ಪದ್ಧತಿಗಳಿಗೆ ಬದ್ಧವಾಗಿ ವಿವಾಹ ಉತ್ಸವಗಳನ್ನು ನಿಖರವಾಗಿ ಯೋಜಿಸಲಾಗಿದೆ. ಸಮಾರಂಭಗಳು ಜುಲೈ 12 ರ ಶುಕ್ರವಾರ ಶುಭ ವಿವಾಹ ಸಮಾರಂಭದೊಂದಿಗೆ ಪ್ರಾರಂಭವಾಗಲಿದೆ. ಮೂಲಗಳ ಪ್ರಕಾರ, ಅತಿಥಿಗಳು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸುವ ಮೂಲಕ ಈ ಸಮಾರಂಭಕ್ಕೆ ಪ್ರೋತ್ಸಾಹ ನೀಡುವಂತೆ ಕೇಳಿಕೊಳ್ಳಲಾಗಿದೆ.

Ananth Ambani

ಇದನ್ನೂ ಓದಿ:ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

ಜುಲೈ 13 ರ ಶನಿವಾರದಂದು ಶುಭ್ ಆಶಿರ್ವಾದ್ ಆಚರಣೆಗಳು ನಡೆಯಲಿದ್ದು, ಅಂತಿಮ ಕಾರ್ಯಕ್ರಮ, ಮಂಗಲ್ ಉತ್ಸವ್ ಅಥವಾ ವಿವಾಹ ಆರತಕ್ಷತೆಯನ್ನು ಜುಲೈ 14 ರ ಭಾನುವಾರ ನಿಗದಿಪಡಿಸಲಾಗಿದೆ. ಈ ಸಮಾರಂಭಕ್ಕಾಗಿ, ಅತಿಥಿಗಳಿಗೆ ‘ಇಂಡಿಯನ್ ಚಿಕ್’ ಧರಿಸಲು ಕೇಳಲಾಗಿದೆ. ಈ ಸಮಾರಂಭಕ್ಕೆ ಪ್ರಪಂಚದಾದ್ಯಂತದ ತಾರೆಯರು ಸೇರಿದಂತೆ ಅನೇಕ ಅತಿಥಿಗಳನ್ನು ಮದುವೆ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಉದ್ಯಮಿಗಳು, ರಾಷ್ಟ್ರಗಳ ಮುಖ್ಯಸ್ಥರು ಮತ್ತು ಹಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಈ ಸಮಾರಂಭಕ್ಕೆ ಹಾಜರಾಗುವುದರಿಂದ ಇದು ನೆನಪಿನಲ್ಲಿ ಚಿರಕಾಲ ಉಳಿಯುವಂತಹ ಕಾರ್ಯಕ್ರಮವಾಗಲಿದೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

T20 World Cup 2024 : ಕಣ್ಣೀರ ಧಾರೆ; ಟ್ರೋಫಿ ಗೆದ್ದ ಖುಷಿಗೆ ಕಣ್ಣೀರು ಸುರಿಸಿದ ಪಾಂಡ್ಯ, ರೋಹಿತ್, ಕೊಹ್ಲಿ, ಸಿರಾಜ್​

T20 World Cup 2024 : 2007 ರ ನಂತರ ಮೊದಲ ಬಾರಿಗೆ ಟಿ20 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ಟಿ20 ವಿಶ್ವ ಕಪ್ ಟ್ರೋಫಿ. 2011ರಲ್ಲಿ ಧೋನಿ ನೇತೃತ್ವದಲ್ಲಿ ಭಾರತ ಗೆದ್ದಿದ್ದು. ಅಂತೆಯೇ 2023ರ ಏಕ ದಿನ ವಿಶ್ವ ಕಪ್​ನ ಫೈನಲ್ ಸೋಲಿನ ನಿರಾಸೆಯೂ ಉಂಟಾಗಿತ್ತು.

VISTARANEWS.COM


on

T20 World Cup 2024
Koo

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ 2024ರ (T20 World Cup 2024) ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿಗಾಗಿ ತಮ್ಮ ದೀರ್ಘಕಾಲದ ಕಾಯುವಿಕೆಯನ್ನು ಕೊನೆಗೊಳಿಸಿತು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಸೋಲಿಸಿ ಒಟ್ಟು ಎರಡನೇ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2007 ರ ನಂತರ ಮೊದಲ ಬಾರಿಗೆ ಟಿ20 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ಟಿ20 ವಿಶ್ವ ಕಪ್ ಟ್ರೋಫಿ. 2011ರಲ್ಲಿ ಧೋನಿ ನೇತೃತ್ವದಲ್ಲಿ ಭಾರತ ಗೆದ್ದಿದ್ದು. ಅಂತೆಯೇ 2023ರ ಏಕ ದಿನ ವಿಶ್ವ ಕಪ್​ನ ಫೈನಲ್ ಸೋಲಿನ ನಿರಾಸೆಯೂ ಉಂಟಾಗಿತ್ತು.

ಚಾಂಪಿಯನ್ ಆದ ತಕ್ಷಣ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ ಮತ್ತು ಇತರರು ಸೇರಿದಂತೆ ಭಾರತದ ಆಟಗಾರರಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ವಿಶ್ವಕಪ್ ಗೆಲುವಿಗಾಗಿ ಭಾರತ ತನ್ನ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸುತ್ತಿದ್ದಂತೆ ಆಟಗಾರರೆಲ್ಲರೂ ಭಾವುಕರಾದರು. ಫೈನಲ್ ಪಂದ್ಯದ ನಂತರದ ದೃಶ್ಯಗಳಲ್ಲಿ ಅವರೆಲ್ಲರೂ ಪರಸ್ಪರ ಅಪ್ಪಿಕೊಳ್ಳುವಾಗ ಕಣ್ಣೀರು ಹಾಕಿದರು. ಪರಸ್ಪರ ಸಂತೈಸಿದರು.

177 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿತ್ತು. 16ನೇ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದ್ದ ದ. ಆಫ್ರಿಕಾ 25 ಎಸೆತಗಳಲ್ಲಿ ಕೇವಲ 24 ರನ್ ಗಳಿಸಬೇಕಿತ್ತು. ಆದಾಗ್ಯೂ, ಭಾರತದ ಬೌಲರ್​ಗಳು ಗಮನಾರ್ಹ ಪುನರಾಗಮನ ತೋರಿದರು. ದಕ್ಷಿಣ ಆಫ್ರಿಕಾ ಅಂತಿಮ ಗುರಿಯನ್ನು ದಾಟಲು ವಿಫಲವಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಮತ್ತೆ ಚೋಕರ್ಸ್​ ಹಣೆಪಟ್ಟಿಯನ್ನು ಕಟ್ಟಿಕೊಂಡು ಮರಳಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ತಂಡಕ್ಕೆ ತಮ್ಮ ಸಹಾಯ ಅಗತ್ಯವಿರುವಾಗ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳಿದಿರು. ಭಾರತವು ಪವರ್​ಪ್ಲೇನಲ್ಲಿ ವಿಕೆಟ್ಗಳನ್ನು ಕಳೆದುಕೊಂಡಿತು. ಭಾರತದ ಮಾಜಿ ನಾಯಕ 76 ರನ್ ಗಳಿಸಿದರೆ, ಅಕ್ಷರ್ ಪಟೇಲ್ 47 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

ಈ ಮೂಲಕ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಒಟ್ಟಾರೆಯಾಗಿ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಂತರ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ತಂಡವಾಗಿದೆ. ಈ ಗೆಲುವು ಐಸಿಸಿ ಟ್ರೋಫಿಗಾಗಿ ಭಾರತದ ದೀರ್ಘಕಾಲದ ಕಾಯುವಿಕೆಯನ್ನು ಕೊನೆಗೊಳಿಸಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ಯಾವುದೇ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ. ಕಳೆದ ವರ್ಷ ತವರಿನಲ್ಲಿ ನಡೆದ ಡಬ್ಲ್ಯುಟಿಸಿ ಮತ್ತು ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಸೋತಿತ್ತು.

Continue Reading

ಪ್ರಮುಖ ಸುದ್ದಿ

T20 World Cup 2024 : ರೋಹಿತ್ ಬಳಗಕ್ಕೆ ಶುಭಾಶಯಗಳ ಸುರಿಮಳೆ; ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಹಾರೈಕೆ

T20 World Cup 2024: ತಂಡವನ್ನು ಅಭಿನಂದಿಸಿದ ವೀಡಿಯೊ ಸಂದೇಶದಲ್ಲಿ ಪಿಎಂ ಮೋದಿ, ತಂಡವು ವಿಶ್ವಕಪ್ ಗೆದ್ದಿದೆ ಮತ್ತು “ಕೋಟ್ಯಂತರ ಭಾರತೀಯರ ಹೃದಯವನ್ನೂ ಜಯಿಸಿದೆ ” ಎಂದು ಹೇಳಿದರು. ಒಂದೇ ಒಂದು ಪಂದ್ಯವನ್ನು ಸೋಲದೇ ಪಂದ್ಯವನ್ನು ಗೆದ್ದಿರುವುದು ಸಣ್ಣ ಸಾಧನೆಯಲ್ಲ ಎಂದು ಅವರು ಹೇಳಿದರು.

VISTARANEWS.COM


on

T20 World Cup 2024
Koo

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ (T20 World Cup 2024 ) ಗೆದ್ದ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಫೈನಲ್ ನಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಸೋಲಿಸಿತು. ರೋಹಿತ್ ಶರ್ಮಾ ಮತ್ತು ತಂಡವು 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ದೇಶಕ್ಕೆ ತಂದಿತು ಮತ್ತು 2011 ರ ನಂತರ ಭಾರತದ ಮೊದಲ ವಿಶ್ವಕಪ್ ಗೆಲುವಾಗಿದೆ.

ಚಾಂಪಿಯನ್ಸ್! ನಮ್ಮ ತಂಡವು ಟಿ 20 ವಿಶ್ವಕಪ್ ಅನ್ನು ತನ್ನದೇ ಶೈಲಿಯಲ್ಲಿ ಮನೆಗೆ ತರುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ತಂಡವನ್ನು ಅಭಿನಂದಿಸಿದ ವೀಡಿಯೊ ಸಂದೇಶದಲ್ಲಿ ಪಿಎಂ ಮೋದಿ, ತಂಡವು ವಿಶ್ವಕಪ್ ಗೆದ್ದಿದೆ ಮತ್ತು “ಕೋಟ್ಯಂತರ ಭಾರತೀಯರ ಹೃದಯವನ್ನೂ ಜಯಿಸಿದೆ ” ಎಂದು ಹೇಳಿದರು. ಒಂದೇ ಒಂದು ಪಂದ್ಯವನ್ನು ಸೋಲದೇ ಪಂದ್ಯವನ್ನು ಗೆದ್ದಿರುವುದು ಸಣ್ಣ ಸಾಧನೆಯಲ್ಲ ಎಂದು ಅವರು ಹೇಳಿದರು.

“ಈ ಅದ್ಭುತ ಗೆಲುವಿಗಾಗಿ ಭಾರತಕ್ಕೆ ಅಭಿನಂದನೆಗಳು. ಇಂದು, 140 ಕೋಟಿ ದೇಶವಾಸಿಗಳು ನಿಮ್ಮ ಅದ್ಭುತ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತಾರೆ. ನೀವು ವಿಶ್ವಕಪ್ ಗೆದ್ದಿದ್ದೀರಿ ಮತ್ತು ಕೋಟ್ಯಂತರ ಭಾರತೀಯರ ಹೃದಯವನ್ನು ಗೆದ್ದಿದ್ದೀರಿ. ನೀವು ಒಂದು ಪಂದ್ಯವನ್ನೂ ಸೋತಿಲ್ಲ; ಇದು ಸಣ್ಣ ಸಾಧನೆಯಲ್ಲ. ನೀವು ಅದ್ಭುತ ವಿಜಯವನ್ನು ಸಾಧಿಸಿದ್ದೀರಿ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಹಿಂದಿಯಲ್ಲಿ ಹೇಳಿದ್ದಾರೆ .

ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಭಾರತೀಯ ತಂಡವನ್ನು ಅಭಿನಂದಿಸಿದ್ದರೆ. “ಎಂದಿಗೂ ಸೋಲದ ” ಮನೋಭಾವವನ್ನು ಶ್ಲಾಘಿಸಿದರು. “ಟಿ 20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಎಂದಿಗೂ ಸೋಲದ ಮನೋಭಾವದಿಂದ, ತಂಡವು ಕಠಿಣ ಸಂದರ್ಭಗಳಲ್ಲಿ ತೋರಿಸಿತು. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಕೌಶಲಗಳನ್ನು ಪ್ರದರ್ಶಿಸಿತು. ಇದು ಫೈನಲ್​ ಪಂದ್ಯದಲ್ಲಿ ಅಸಾಧಾರಣ ಗೆಲುವು. ಟೀಮ್ ಇಂಡಿಯಾ! ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ! ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇ ರೀತಿ ಗೃಹ ಮಂತ್ರಿ ಅಮಿತ್​ ಶಾ ಸೇರಿದಂತೆ ರಾಜ್ಯ ಹಾಗೂ ದೇಶದ ರಾಜಕೀಯ ನಾಯಕರು ಹಾಗೂ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಭಿನಂದನೆ

ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಎಕ್ಸ್ ಮೂಲಕ ಶುಭಾಶಯ ಕೋರಿದ್ದಾರೆ. ಭಾರತ ತಂಡಕ್ಕೆ ಅಭಿನಂದನೆಗಳು. ನಿರ್ಣಾಯಕ ಹಂತದಲ್ಲಿ ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ವಿಶ್ವಕಪ್ ಟಿ20 ಜಯಿಸಿದ ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rohit Sharma : ಕೊಹ್ಲಿ ಹಾದಿ ತುಳಿದ ರೋಹಿತ್​, ಟಿ20 ಐ ಕ್ರಿಕೆಟ್​​ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ನಾಯಕ

ಸಿನಿ ಕ್ಷೇತ್ರದ ಗಣ್ಯರಿಂದಲೂ ಶುಭಾಶಯ

ಭಾರತ ತಂಡ ಚುಟುಕು ಕ್ರಿಕೆಟ್​ನಲ್ಲಿ ಟ್ರೋಫಿ ಗೆದ್ದಿರುವುದಕ್ಕೆ ಸಿನಿಮಾ ಕ್ಷೇತ್ರದ ಗಣ್ಯರೂ ಶುಭಾಶಯ ಹೇಳಿದ್ದಾರೆ. ಅಜಯ್​ ದೇವಗನ್​, ಕಾಜೊಲ್​, ಆಯುಷ್ಮಾನ್ ಖುರಾನಾ. ಎಸ್​ಎಸ್​. ರಾಜಮೌಳಿ, ಜೂನಿಯರ್ ಎನ್​ಟಿಆರ್​. ರವೀನಾ ಟಂಡನ್​, ಅನಿಲ್ ಕಪೂರ್​, ಅಲ್ಲು ಅರ್ಜುನ್​, ವರಣ್ ಧವನ್​ ಸೇರಿದಂತೆ ಗಣ್ಯರು ಶುಭಾಶಯ ತಿಳಿಸಿದ್ದರೆ.

Continue Reading

ಪ್ರಮುಖ ಸುದ್ದಿ

Suryakumar Yadav : ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅದ್ಬುತ ಕ್ಯಾಚ್ ಹಿಡಿದ ಸೂರ್ಯಕುಮಾರ್​; ವಿಶ್ವ ಕಪ್​ ಗೆಲ್ಲಲು ಭಾರತಕ್ಕೆ ನೆರವಾಗಿದ್ದೂ ಇದೇ ಕ್ಯಾಚ್​​

Suryakumar Yadav :

VISTARANEWS.COM


on

Suryakumar Yadav
Koo

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಟಿ 20 ವಿಶ್ವಕಪ್ ಫೈನಲ್ 2024 ರ ಫೈನಲ್​ ಪಂದ್ಯದಲ್ಲಿ ಬೌಂಡರಿ ಲೈನ್​ನಲ್ಲಿದ್ದ ಫೀಲ್ಡರ್​ ಸೂರ್ಯಕುಮಾರ್ ಯಾದವ್ (Suryakumar Yadav ) ಆಕರ್ಷಕ ಜಗ್ಲಿಂಗ್ ಕ್ಯಾಚ್​ ಹಿಡಿದಿದ್ದಾರೆ. ಇದು ಭಾರತದ ಕ್ರಿಕೆಟ್​ ಇತಿಹಾಸ ಸ್ಮರಣೀಯ ಕ್ಯಾಚ್​ ಆಗಿ ಇತಿಹಾಸ ಪುಸ್ತಕ ಸೇರಲಿದೆ. ಯಾಕೆಂದರೆ ಅದೇ ಕ್ಯಾಚ್​ನಿಂದ ಭಾರತ ತಂಡ ಗೆಲುವು ಸಾಧಿಸಿದೆ ಎಂದೂ ಹೇಳಬಹುದು. ಯಾಕೆಂದರೆ ಅವರು ಔಟ್ ಮಾಡಿದ್ದು 19.1 ಓವರ್​ನಲ್ಲಿ ಹೊಡೆಬಡಿಯ ಬ್ಯಾಟರ್​​ ಡೇವಿಡ್​ ಮಿಲ್ಲರ್ ಅವರನ್ನು. ಅದೇನಾದರು ಸಿಕ್ಸರ್ ಹೋಗಿದ್ದರೆ ಭಾರತಕ್ಕೆ ಸೋಲಾಗುತ್ತಿತ್ತು.

ಅದಕ್ಕಿಂತ ಮೊದಲು ಹೆನ್ರಿಚ್​ ಕ್ಲಾಸೆನ್ ಅಮೋಘ 52 ರನ್ ಗಳಿಸಿ ಭಾರತದ ಗೆಲುವು ಕಸಿಯಲು ಯತ್ನಿಸಿದ್ದರು. ಆದರೆ, ಹಾರ್ದಿಕ್ ಪಾಂಡ್ಯ 17ನೇ ಓವರ್​ನಲ್ಲಿ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ತಮ್ಮ ಕಡೆಗೆ ತಿರುಗಿಸಿದರು. ಕೊನೆಯ ಎರಡು ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 20 ರನ್​ಗಳ ಅವಶ್ಯಕತೆಯಿತ್ತು.

ನಂತರ ಅರ್ಶ್​ದೀಪ್​ ಸಿಂಗ್ 19ನೇ ಓವರ್​ನಲ್ಲಿ ಕೇವಲ 4 ರನ್ ನೀಡಿ ಮಿಂಚಿದರು. ಅಂತಿಮ ಓವರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ 16 ರನ್​ಗಳ ಅವಶ್ಯಕತೆಯಿತ್ತು. ಮೊದಲ ಎಸೆತಕ್ಕೆ ಡೇವಿಡ್ ಮಿಲ್ಲರ್ ಹಾರ್ದಿಕ್ ಪಾಂಡ್ಯ ಅವರನ್ನು ಎದುರಿಸಿದರು. ಮಿಲ್ಲರ್ ದಕ್ಷಿಣ ಆಫ್ರಿಕಾದ ಕೊನೆಯ ಬಲಾಢ್ಯ ಬ್ಯಾಟ್ಸ್ಮನ್ ಆಗಿದ್ದರು. ಅವರಿಗೆ ತಂಡವನ್ನು ಗೆಲ್ಲಿಸುವ ಜವಾಬ್ದಾರಿ ಇತ್ತು. ಮತ್ತೊಂದೆಡೆ, ಮಿಲ್ಲರ್ ಅವರ ವಿಕೆಟ್ ಭಾರತಕ್ಕೆ ಪಂದ್ಯವನ್ನು ಗೆಲ್ಲಲು ನಿರ್ಣಾಯಕವಾಗಿತ್ತು.

ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಪ್ರಯತ್ನದಿಂದಾಗಿ ಪಂದ್ಯ ಫಲಿತಾಂಶವನ್ನು ಮೊದಲ ಎಸೆತದಲ್ಲೇ ನಿರ್ಧರಿಸಲಾಯಿತು. ಪಾಂಡ್ಯ ವೈಡ್​ ಕಡೆಗೆ ಲೊ ಫುಲ್ ಟಾಸ್ ಎಸೆದರು. ಮಿಲ್ಲರ್ ಅದನ್ನು ಲಾಂಗ್ ಆಫ್ ಕಡೆಗೆ ಹೊಡೆದರು. ಚೆಂಡು ಬೌಂಡರಿ ಹಗ್ಗವನ್ನು ದಾಟಲು ಸಿದ್ಧವಾಗಿತ್ತು ಆದರೆ ಸೂರ್ಯಕುಮಾರ್ ಯಾದವ್ ಚುರುಕಾದರು.

ಭಾರತದ ಸ್ಟಾರ್ ಫೀಲ್ಡರ್​ ಓಡಿ ಬಂದರು. ಚೆಂಡನ್ನು ಹಿಡಿದು ಗಾಳಿಯಲ್ಲಿ ಎಸೆದು ಬೌಂಡರಿ ಲೈನ್ ದಾಟಿ ಮತ್ತೆ ಬಂದು ಹಿಡಿದರು. ಇದು ಈ ದಶಕದ ಅಮೋಘ ಕ್ಯಾಚ್ ಎಂದರೂ ಕಡಿಮೆಯೇ. ಯಾಕೆಂದರೆ ಇದು ನಿರ್ಣಾಯಕ ಕ್ಯಾಚ್ ಅಗಿತ್ತು. ಮಿಲ್ಲರ್ ಅವರ ಔಟ್ ನಿಂದಾಗಿ ಭಾರತ 7 ರನ್ ಗಳಿಂದ ಪಂದ್ಯವನ್ನು ಗೆದ್ದು 17 ವರ್ಷಗಳ ನಂತರ ಟಿ 20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. 2007ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಈ ಮೂಲಕ ಎರಡು ಬಾರಿ ಪ್ರಶಸ್ತಿ ಗೆದ್ದ ಏಷ್ಯಾದ ಮೊದಲ ಹಾಗೂ ಒಟ್ಟಾರೆ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸುವುದರೊಂದಿಗೆ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ 76 ರನ್ ಬಾರಿಸುವುದರೊಂದಿಗೆ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತ್ತು.

Continue Reading
Advertisement
Ananth Ambani
Latest5 mins ago

Ananth Ambani: ಮಗನ ಮದುವೆ ಖುಷಿಯಲ್ಲಿ ನೀತಾ ಅಂಬಾನಿ ಹಾಗೂ ಮುಖೇಶ್‌ ಅಂಬಾನಿಯಿಂದ ಬಡವರಿಗಾಗಿ ಸಾಮೂಹಿಕ ವಿವಾಹ!

T20 World Cup 2024
ಪ್ರಮುಖ ಸುದ್ದಿ15 mins ago

T20 World Cup 2024 : ಕಣ್ಣೀರ ಧಾರೆ; ಟ್ರೋಫಿ ಗೆದ್ದ ಖುಷಿಗೆ ಕಣ್ಣೀರು ಸುರಿಸಿದ ಪಾಂಡ್ಯ, ರೋಹಿತ್, ಕೊಹ್ಲಿ, ಸಿರಾಜ್​

UGCET 2024 Online verification of UGCET records Information publish on karnataka examination authority website
ಬೆಂಗಳೂರು15 mins ago

UGCET 2024: ಯುಜಿಸಿಇಟಿ ದಾಖಲೆಗಳ ಆನ್‌ಲೈನ್‌ ಪರಿಶೀಲನೆ; ವಿದ್ಯಾರ್ಥಿಗಳೇ ನಿಮ್ಮ status ಚೆಕ್ ಮಾಡಿಕೊಳ್ಳಿ

T20 World Cup 2024
ಪ್ರಮುಖ ಸುದ್ದಿ45 mins ago

T20 World Cup 2024 : ರೋಹಿತ್ ಬಳಗಕ್ಕೆ ಶುಭಾಶಯಗಳ ಸುರಿಮಳೆ; ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಹಾರೈಕೆ

Suryakumar Yadav
ಪ್ರಮುಖ ಸುದ್ದಿ1 hour ago

Suryakumar Yadav : ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅದ್ಬುತ ಕ್ಯಾಚ್ ಹಿಡಿದ ಸೂರ್ಯಕುಮಾರ್​; ವಿಶ್ವ ಕಪ್​ ಗೆಲ್ಲಲು ಭಾರತಕ್ಕೆ ನೆರವಾಗಿದ್ದೂ ಇದೇ ಕ್ಯಾಚ್​​

Dina Bhvishya
ಭವಿಷ್ಯ1 hour ago

Dina Bhavishya : ಈ ರಾಶಿಯವರು ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವಿರಿ ಈ ದಿನ ಎಚ್ಚರಿಕೆ ಇರಲಿ

Rohit Sharma
ಪ್ರಮುಖ ಸುದ್ದಿ4 hours ago

Rohit Sharma : ಕೊಹ್ಲಿ ಹಾದಿ ತುಳಿದ ರೋಹಿತ್​, ಟಿ20 ಐ ಕ್ರಿಕೆಟ್​​ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ನಾಯಕ

Virat Kohli
ಪ್ರಮುಖ ಸುದ್ದಿ6 hours ago

Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

T20 World Cup
ಪ್ರಮುಖ ಸುದ್ದಿ7 hours ago

T20 World Cup 2024 : 13 ವರ್ಷಗಳ ಕಾಯುವಿಕೆ ಅಂತ್ಯ, ಕೊನೆಗೂ ವಿಶ್ವ ಕಪ್​ ಗೆದ್ದ ಭಾರತ

Progress review meeting at Karwar ZP office
ಉತ್ತರ ಕನ್ನಡ7 hours ago

Uttara Kannada News: ಕೂಸಿನ ಮನೆ ಯೋಜನೆ ಯಶಸ್ವಿಗೊಳಿಸಿ: ಉಮಾ ಮಹಾದೇವನ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ13 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ19 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ1 day ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌