Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ! - Vistara News

ಪ್ರಮುಖ ಸುದ್ದಿ

Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

ಯಾವ ರೀತಿ ಕುದಿಯುವ ನೀರಿನಲ್ಲಿ ನಮ್ಮ ಮುಖ ನಮಗೆ ಕಾಣುವುದಿಲ್ಲವೋ ಹಾಗೆಯೇ ಸಿಟ್ಟಿನಲ್ಲಿದ್ದಾಗ ಮನುಷ್ಯ ತನ್ನ ತಪ್ಪನ್ನು ಅರಿತುಕೊಳ್ಳುವುದಿಲ್ಲ. ಶಾಂತವಾದ ಮತ್ತು ಶುದ್ಧವಾದ ಪರಿಸರದಲ್ಲಿ ತನ್ನ ತನು, ಮನಗಳನ್ನು ಶುದ್ಧೀಕರಿಸಿಕೊಳ್ಳಲು ಆ ಮೂಲಕ ತನ್ನನ್ನು ತಾನು ತಿದ್ದಿಕೊಳ್ಳಲು ಈ ಕೆಲವು ವಿಷಯಗಳು ಮನುಷ್ಯನಿಗೆ ಸಹಾಯಕವಾಗುತ್ತವೆ. ನಮ್ಮ ವ್ಯಕ್ತಿತ್ವ ವಿಕಸನಗೊಳಿಸುವ (Personality Development) ಹತ್ತು ಸೂತ್ರಗಳು ಇಲ್ಲಿವೆ.

VISTARANEWS.COM


on

Personality Development
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Veena Hemant Gowda Patil Mundaragi, Gadag

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ
ನಮ್ಮ ದೇಹವು (Personality Development) ಪಂಚಭೂತಗಳಾದ ಪೃಥ್ವಿ, ಆಕಾಶ, ವಾಯು, ಜಲ ಮತ್ತು ಅಗ್ನಿ ತತ್ವಗಳಿಂದ ಕೂಡಿದೆ. ಹುಟ್ಟಿದಾಗ ನಾವು ಪರಿಶುದ್ಧರಾಗಿಯೇ ಇದ್ದು ಜೀವಿತಾವಧಿಯಲ್ಲಿ ಸಿಟ್ಟು ಸೆಡವು ಕೋಪ ತಾಪ ದ್ವೇಷ ಅಸೂಯೆ, ಸುಖ ಸಂತೋಷ ನೆಮ್ಮದಿ ರಾಗ ಮುಂತಾದ ಎಲ್ಲಾ ರೀತಿಯ ಭಾವಗಳಿಗೆ ಸ್ಪಂದಿಸುತ್ತ ಬೆಳೆಯುತ್ತೇವೆ. ಒಟ್ಟಿನಲ್ಲಿ ಮನುಷ್ಯ ಜೀವಿ ಕಾರ್ಕೋಟಕ ವಿಷಕ್ಕಿಂತಲೂ ಕಡೆ ಎಂದು ಭಾವಿಸುವಂತೆ ತನ್ನ ಜೀವಿತಾವಧಿಯನ್ನು ಮನುಷ್ಯ ಕಳೆಯುತ್ತಾನೆ. ಯಾವ ರೀತಿ ಅಗರ ಬತ್ತಿಯು ತನ್ನನ್ನು ತಾನು ಸುಟ್ಟು ಕೊಳ್ಳುವುದೋ ಹಾಗೆಯೇ ನಮ್ಮಲ್ಲಿ ಉಂಟಾಗುವ ದ್ವೇಷ, ಅಸೂಯೆ, ಮದ, ಮತ್ಸರಗಳು ನಮ್ಮನ್ನು ನಮಗರಿವಿಲ್ಲದೆಯೇ ಸುಟ್ಟು ಹಾಕುತ್ತವೆ. ಯಾವ ರೀತಿ ಕುದಿಯುವ ನೀರಿನಲ್ಲಿ ನಮ್ಮ ಮುಖ ನಮಗೆ ಕಾಣುವುದಿಲ್ಲವೋ ಹಾಗೆಯೇ ಸಿಟ್ಟಿನಲ್ಲಿದ್ದಾಗ ಮನುಷ್ಯ ತನ್ನ ತಪ್ಪನ್ನು ಅರಿತುಕೊಳ್ಳುವುದಿಲ್ಲ. ಶಾಂತವಾದ ಮತ್ತು ಶುದ್ಧವಾದ ಪರಿಸರದಲ್ಲಿ ತನ್ನ ತನು, ಮನಗಳನ್ನು ಶುದ್ಧೀಕರಿಸಿಕೊಳ್ಳಲು ಆ ಮೂಲಕ ತನ್ನನ್ನು ತಾನು ತಿದ್ದಿಕೊಳ್ಳಲು ಈ ಕೆಲವು ವಿಷಯಗಳು ಮನುಷ್ಯನಿಗೆ ಸಹಾಯಕವಾಗುತ್ತವೆ. ನೀರಿನ ಸೇವನೆಯಿಂದ….. ದೇಹವು ಶುದ್ದವಾಗುತ್ತದೆ. ಹೆಚ್ಚು ನೀರು ಸೇವನೆ ಮಾಡುವುದರಿಂದ ಮನುಷ್ಯನ ದೇಹದಲ್ಲಿರುವ ಕಶ್ಮಲಗಳು ಮೂತ್ರ, ಮಲ ಮತ್ತು ಬೆವರಿನ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಯೋಗಾಸನವನ್ನು ಮಾಡುವುದರಿಂದ ಮನುಷ್ಯ ತನ್ನ ಆಂತರಿಕ ಮತ್ತು ಮಾನಸಿಕ ಕಶ್ಮಲಗಳನ್ನು ಹೊರ ಹಾಕುತ್ತಾನೆ, ಇದರಿಂದ ಮನಸ್ಸು ಪ್ರಶಾಂತವಾಗಿ ಪ್ರಪುಲಿತವಾಗಿರುತ್ತದೆ. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿರುವುದಿಲ್ಲ.

Pranayama Yoga Poses For Bright And Glowing Skin

ಪ್ರಾಣಾಯಾಮ ಸೂಕ್ತ

ಪ್ರಾಣಾಯಾಮ ಮಾಡುವುದರಿಂದ ಉಸಿರಾಟ ಶುದ್ಧವಾಗುತ್ತದೆ. ಪ್ರತಿನಿತ್ಯ ಪ್ರಾಣಾಯಾಮದ ಅಭ್ಯಾಸ ಮಾಡುವುದು ಅನೇಕ ಮನೋ ದೈಹಿಕ ಕಾಯಿಲೆಗಳಿಗೆ ರಾಮಬಾಣದಂತೆ. ಕನಿಷ್ಠ ಮೂರು ನಿಮಿಷದಿಂದ ಗರಿಷ್ಠ ಮುಕ್ಕಾಲು ಗಂಟೆಯವರೆಗೆ ಪ್ರಾಣಾಯಾಮದ ಅಭ್ಯಾಸ ಮಾಡಿದಾಗ ಮನಸ್ಸು ಸಂಪೂರ್ಣ ನಿರಾಳವಾಗಿ ಜಂಜಡಗಳಿಂದ ಮುಕ್ತವಾಗುತ್ತದೆ. ಯಾವುದೇ ರೀತಿಯ ಆತಂಕ ಭಯಗಳಿಂದ ಮುಕ್ತವಾಗುತ್ತದೆ. ಸತತವಾಗಿ ಪ್ರಾಣಾಯಾಮದ ಅಭ್ಯಾಸ ಮಾಡುವುದರಿಂದ ವ್ಯಕ್ತಿಯು ಮಾನಸಿಕ ಒತ್ತಡ, ರಕ್ತದೊತ್ತಡ,
ಹೃದ್ರೋಗ ಮುಂತಾದ ಕಾಯಿಲೆಗಳಿಂದ ಮುಕ್ತನಾಗುತ್ತಾನೆ.

Meditation Yoga Poses For Bright And Glowing Skin

ಧ್ಯಾನ ಉತ್ತಮ ಅಭ್ಯಾಸ

ಧ್ಯಾನ ಮಾಡುವುದರಿಂದ ಮನಸ್ಸು ಶುದ್ದವಾಗುತ್ತದೆ. ಧ್ಯಾನವು ಮನಸ್ಸನ್ನು ಒಂದು ನಿಶ್ಚಿತ ಏಕಾಗ್ರತೆಯತ್ತ ಕೊಂಡೊಯ್ಯುವ ಸಾಧನ. ಸರಳವಾದ ಬಟ್ಟೆಯನ್ನು ತೊಟ್ಟು ಅನುಕೂಲಕರ ಆಸನದಲ್ಲಿ ಕುಳಿತು ಕತ್ತು, ಬೆನ್ನು ಮತ್ತು ತಲೆಯನ್ನು ನೇರವಾಗಿ ಇಟ್ಟುಕೊಂಡು ಕಣ್ಣು ಮುಚ್ಚಿ ಧ್ಯಾನಮಗ್ನ ರಾಗುವ ವ್ಯಕ್ತಿಗಳಿಗೆ ಅಪಾರವಾದ ಮಾನಸಿಕ ಶಾಂತಿ ಮತ್ತು ತನ್ಮೂಲಕ ಸ್ಥಿತಪ್ರಜ್ಞತೆ ಲಭಿಸುತ್ತದೆ. ಇಂದಿನ ಒತ್ತಡಭರಿತ ದೈನಂದಿನ ಜೀವನದಲ್ಲಿ ಧ್ಯಾನವನ್ನು ಅಭ್ಯಾಸ ಮಾಡುವುದು ಅತ್ಯಂತ ಸೂಕ್ತವಾದದ್ದು.

ಜ್ಞಾನ ಸಂಪಾದಿಸುವುದರಿಂದ…

ಇದರಿಂದ ಜಾಣ್ಮೆ, ಉನ್ನತ ವಿಚಾರಧಾರೆಗಳ ಹರಿವು ಹೆಚ್ಚುತ್ತದೆ. ಜ್ಞಾನ ಸಂಪಾದನೆಯು ಎಲ್ಲಾ ಚಟುವಟಿಕೆಗಳಲ್ಲಿಯೇ ಮಹತ್ತರವಾದ ಕ್ರಿಯೆ. ತಿಳಿದವರಿಂದ, ಪಂಡಿತರಿಂದ, ಜ್ಞಾನಿಗಳಿಂದ ಪುಸ್ತಕಗಳಿಂದ ಅನುಭವಗಳಿಂದ ಸಂಪಾದಿಸುವ ಜ್ಞಾನ ನಮ್ಮ ಜೀವಿತದ ಕೊನೆಯವರೆಗೂ ನಮ್ಮೊಂದಿಗೆ ಇರುತ್ತದೆ ಯಾರು ಕದಿಯಲಾರದ ವಿದ್ಯೆ ಜ್ಞಾನ. ಅರಿವಿನ ಕೊರತೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ ಅಂತಹ ಸಮಯದಲ್ಲಿ ಸೂಕ್ತವಾದ ಪ್ರಾಪಂಚಿಕ ಜ್ಞಾನವು ಕೂಡ ಎಷ್ಟೋ ಸಮಸ್ಯೆಗಳನ್ನು ನಿವಾರಿಸುತ್ತದೆ. ಐಹಿಕ ಜೀವನದ ಎಷ್ಟೋ ತೊಂದರೆಗಳಿಗೆ ಆಧ್ಯಾತ್ಮದಲ್ಲಿ ಉತ್ತರವಿದೆ.

Personality development activities

ಚಿಂತನ ಮಂಥನದಿಂದ

ಇದರಿಂದ ಅಜ್ಞಾನ ತೊಲಗಿ ಸುಜ್ಞಾನ ದೊರೆಯುತ್ತದೆ. ಸರಿ-ತಪ್ಪು,
ಒಳಿತು-ಕೆಡುಕು, ಧರ್ಮ-ಅಧರ್ಮ ಇವುಗಳ ಕುರಿತು ಸೂಕ್ತವಾದ ಚಿಂತನೆ ಮಾಡಿ ವಿಚಾರವೆಂಬ ಕಡೆಗೋಲಿನಿಂದ ಮಂಥನ ಮಾಡಿ ಒಳ್ಳೆಯ ನಿರ್ಧಾರಕ್ಕೆ ಬರುವುದು ಕೂಡ ಅತ್ಯಂತ ಒಳ್ಳೆಯ ಕಾರ್ಯ. ಸರಿ ತಪ್ಪುಗಳ ಪರಾಮರ್ಶೆಯಿಂದ ಮನುಷ್ಯ ತಪ್ಪು ವಿಷಯಗಳಿಂದ ದೂರ ಸರಿದು ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಚಿಂತನೆ ಮಾಡಿದರೆ ಕಾರ್ಯಾಕಾರ್ಯಗಳ ಅರಿವು ಆಗುವುದಿಲ್ಲ. *ಸರಿ ತಪ್ಪುಗಳ ಮೊಸರನ್ನು ಅರಿವು ಮತ್ತು ವಿಮರ್ಶೆಗಳ ಮಂಥನದ ಮೂಲಕ ಕಡೆದು ಉತ್ತಮ ವಿಚಾರಗಳ ಬೆಣ್ಣೆ ತೆಗೆದು ಉತ್ತಮ ವ್ಯಕ್ತಿತ್ವವೆಂಬ ಕಾಯಿಸಿದ ತುಪ್ಪವನ್ನು ಈ ಸಮಾಜಕ್ಕೆ ಬಡಿಸುವುದು ಸಮಾಜ ಜೀವಿಯಾಗಿ ನಮ್ಮ ಕರ್ತವ್ಯ.

ಸೇವೆ ಮಾಡುವುದರಿಂದ

ಇದರಿಂದ ಅಹಮ್ಮಿಗೆ ಸಂತೃಪ್ತಿ ದೊರೆಯುತ್ತದೆ. ಎಷ್ಟೋ ಜನ ಶ್ರೀಮಂತರು ಅಲ್ಲಲ್ಲಿ ನಡೆಯುವ ಪ್ರಸಾದ ಸೇವಾ ಕಾರ್ಯಗಳಲ್ಲಿ ಪ್ರವಾಹ, ಸುನಾಮಿ ಚಂಡಮಾರುತ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಸಂತ್ರಸ್ತರಾದ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗೆ ತೊಡಗಿಸಿಕೊಳ್ಳುವ ಮೂಲಕ ಅವರು ನಾನು ಶ್ರೀಮಂತ, ಉನ್ನತ ವರ್ಗದವನು ಎಲ್ಲರಿಗಿಂತ ಮೇಲು ಎಂಬ ಮೇಲರಿಮೆಯನ್ನು ತೊಡೆದು ಕೊಳ್ಳುತ್ತಾರೆ. ನಮ್ಮದೇ ಅಹಮ್ಮಿನ ಕೋಟೆಯೊಳಗೆ ಬಂಧಿಯಾದಾಗ ಇತರರ ಸಂಕಟಗಳು ನಮಗೆ ಕಾಣುವುದಿಲ್ಲ. ಆದರೆ ಸೇವೆಯ ಮೂಲಕ ಮನುಷ್ಯ ತನ್ನನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವ ಮನುಷ್ಯ ಪರಿಶುದ್ಧನಾಗುತ್ತಾನೆ. ಅಹಮ್ಮಿನ ಸಂತೃಪ್ತಿಗೆ ಕಾರಣವಾಗುತ್ತಾನೆ. ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ಉಕ್ತಿ ಸದಾ ಸರ್ವದ ನಮ್ಮ ಮನದಲ್ಲಿ ನೆಲೆ ಮಾಡಿರಬೇಕು.

Photo of Man Wearing Hooded Jacket in Front of Body of Water

ಮೌನದಿಂದ…

ಇದರಿಂದ ನಾನು ಮತ್ತು ನನ್ನದು ಎಂಬ ವೈಯಕ್ತಿಕತೆ ಸ್ವಾರ್ಥತೆಯು ಶುದ್ಧವಾಗುತ್ತದೆ. ಪ್ರಶಾಂತವಾಗಿರುವ ಮೌನವೆಂಬ ಕೊಳದಲ್ಲಿ ಒಂದೇ ಸಮನೆ ನಿರರ್ಥಕವಾದ ಒಣ ಮಾತುಗಳನ್ನಾಡಿ ಬಗ್ಗಡ ಮಾಡುವುದಕ್ಕಿಂತ ಹಿತವಾದ ಮೌನ ಲೇಸು. ಮೌನವು ನಮಗೆ ಆತ್ಮ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಸರಿ ತಪ್ಪುಗಳ ವಿಮರ್ಶೆ, ಒಳಿತು ಕೆಡುಕುಗಳ ಪರಾಮರ್ಶೆಯನ್ನು ನಾವು ಮೌನಾನುಸಂಧಾನದಲ್ಲಿ ಪಡೆಯಬಹುದು. ಮೌನದ ಶಕ್ತಿ ಅಪಾರ. ಮಾತು ನಮ್ಮನ್ನು ಹಗುರಗೊಳಿಸಿದರೆ ಮೌನವು ನಮ್ಮನ್ನು ಆಂತರಿಕವಾಗಿ ಬಲಿಷ್ಠವಾಗಿಸುತ್ತದೆ. ಆದ್ದರಿಂದಲೇ ಋಷಿ ಮುನಿಗಳು, ಜ್ಞಾನಿಗಳು ಸದಾ ಮೌನದ ಮೊರೆ ಹೋಗುತ್ತಾರೆ. ಇನ್ನು ಹಲವು ಜನ ಸಂತರು ವಾರಕ್ಕೊಂದು ದಿನ, ಪ್ರತಿದಿನ ಸ್ನಾನ ಪೂಜೆ ಮುಗಿಯುವವರೆಗೆ ಮತ್ತೆ ಹಲವಾರು ದಿನಗಳ ಕಾಲದ ಮೌನಾನುಷ್ಠಾನವನ್ನು ಮಾಡುತ್ತಾರೆ. ಮೌನವು ನಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸಿ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸುತ್ತದೆ.

ಉನ್ನತ ಆಲೋಚನೆಗಳಿಂದ…

ಇದರಿಂದ ತಿನ್ನುವ ಆಹಾರ ಸಾತ್ವಿಕವಾಗುತ್ತದೆ. ಒಳ್ಳೆಯ ವಿಚಾರಗಳು, ಒಳ್ಳೆಯ ಕಾರ್ಯಗಳು, ಒಳ್ಳೆಯ ದುಡಿಮೆಯನ್ನು ಪ್ರೋತ್ಸಾಹಿಸುತ್ತದೆ. ಒಳ್ಳೆಯ ಮತ್ತು ಉನ್ನತ ವಿಚಾರಧಾರೆಗಳು ನಮ್ಮ ಆಹಾರದ ಮೇಲೂ ಪರಿಣಾಮ ಬೀರುತ್ತವೆ. ನಾವು ಆಹಾರವನ್ನು ತಯಾರಿಸುವಾಗ ಒಳ್ಳೆಯ ಆಲೋಚನೆ ಮಾಡಬೇಕು.ಸ್ವಚ್ಛ,ಶುದ್ಧವಾದ ಪ್ರಶಾಂತ ಪರಿಸರದಲ್ಲಿ ಅಡುಗೆಯನ್ನು ಮಾಡುವುದರ ಹಿಂದಿನ ಗುಟ್ಟು ಇದೇ. ವ್ಯವಹಾರವೇ ಮುಖ್ಯವಾಗಿರುವ ಹೋಟೆಲ್, ರೆಸ್ಟೋರೆಂಟ್ ಮುಂತಾದವುಗಳಲ್ಲಿ ನಾವು ಸೇವಿಸುವ ಆಹಾರ ತಾಮಸಿಕ ಮತ್ತು ರಾಜಸಿಕ ಗುಣವನ್ನು ಹೊಂದಿದ್ದು ಅಂತಹ ಆಹಾರವನ್ನು ಸೇವಿಸಿದಾಗ ನಮಗೆ ಅಜೀರ್ಣ, ಹುಳಿತೇಗು ಹೊಟ್ಟೆ ಉಬ್ಬರ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಸೇವೆಯೇ ಪ್ರಧಾನವಾಗಿರುವ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಸೇವಾ ಸದನಗಳಲ್ಲಿ ತಯಾರಿಸುವ ಆಹಾರಗಳಲ್ಲಿ ಸಾತ್ವಿಕ ಗುಣವೇ ತುಂಬಿದ್ದು ಮನಸ್ಸನ್ನು ಅರಳಿಸುವ ಮತ್ತು ಚೇತನ ಕೊಡುವ ಶಕ್ತಿ ಇರುತ್ತದೆ. ಒಳ್ಳೆಯ ಆಹಾರ ಸೇವನೆ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬಡಿದೆಬ್ಬಿಸಿ ನಮ್ಮನ್ನು ಉತ್ತಮ ಕಾರ್ಯಗಳತ್ತ ಪ್ರೇರೇಪಿಸುತ್ತದೆ.

The concept of sharing

ದಾನ ಮಾಡುವುದರಿಂದ…

ಇದರಿಂದ ಸಂಪತ್ತಿನ ಸದ್ವಿನಿಯೋಗವಾಗುವುದು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂದು ಹೇಳುತ್ತಾರಲ್ಲವೇ. ಕೊಡುವುದರ ಮೂಲಕ ವ್ಯಕ್ತಿ ತನ್ನೊಳಗಿನ ಎಲ್ಲ ನಕಾರಾತ್ಮಕ ಚಿಂತನೆಗಳನ್ನು ಕಳೆದುಕೊಳ್ಳುತ್ತಾನೆ. ದಾನ ನೀಡುವ ಮೂಲಕ ತನ್ನಲ್ಲಿರುವ ಸಿಟ್ಟು ಸೆಡವು ಹಟಗಳನ್ನು ಕಳೆದುಕೊಳ್ಳುತ್ತಾನೆ. ಬೇಡುವ ಕೈಗಳಿಗಿಂತ ಕೊಡುವ ಕೈಗಳು ಶ್ರೇಷ್ಠ ಎಂದು ಹಿರಿಯರು ಹೇಳಿರುವುದು ಇದಕ್ಕೆ ಇರಬಹುದು. ದಾನಮಾಡುವ ಶಕ್ತಿಯನ್ನು ನೀಡಿರುವ ಆ ದೇವರಿಗೆ ಕೃತಾರ್ಥರಾಗಿರೋಣ.

ಇದನ್ನೂ ಓದಿ: Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ?

ಪ್ರೀತಿ ಮತ್ತು ಸಮರ್ಪಣಾ ಭಾವದಿಂದ

ಇದರಿಂದ ಭಾವನೆಗಳು ಶುದ್ಧವಾಗುತ್ತವೆ. ವ್ಯಕ್ತಿಯನ್ನು ಆತನ ದೈಹಿಕ,ಮಾನಸಿಕ ಮತ್ತು ಇತರ ಒಳಿತು ಮತ್ತು ಕೆಡುಕುಗಳೊಂದಿಗೆ ಪ್ರೀತಿಸುವುದು ನಿಜವಾದ ಪ್ರೀತಿ. ಅಂತಹ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಆಕಾಂಕ್ಷೆಗಳು ಇರುವುದಿಲ್ಲ. ನೀನು ಹೀಗಿದ್ದರೆ ಮಾತ್ರ ನಾನು ನಿನ್ನನ್ನು ಪ್ರೀತಿಸಬಲ್ಲೆ ಎಂಬ ಶರತ್ತುಬದ್ಧ ಪ್ರೀತಿ ಸ್ವಾರ್ಥ ಎಂದೆನಿಸಿಕೊಳ್ಳುತ್ತದೆ. ಪ್ರೀತಿಗೆ ಬೇಕಾಗಿರುವುದು ಶುದ್ಧ ಅಂತಃಕರಣ ಮತ್ತು ಸಮರ್ಪಣಾ ಮನೋಭಾವ ಮಾತ್ರ. ಆದ್ದರಿಂದಲೇ ನಿಸ್ವಾರ್ಥವಾದ, ಕಲ್ಮಶವಿಲ್ಲದ ಮಾತೆಯ ಮಮತೆಯನ್ನು ಎಲ್ಲರೂ ಕೊಂಡಾಡುತ್ತಾರೆ. ಶುದ್ಧವಾದ ಪ್ರೀತಿ ವ್ಯಕ್ತಿಯ ಅಂದ ಚಂದಗಳನ್ನು ನೋಡದೆ ತನ್ನ ಎದುರಿರುವ ವ್ಯಕ್ತಿಯನ್ನು ಅವನಿರುವ ಹಾಗೆಯೇ ಅಂಗೀಕರಿಸುತ್ತದೆ.

ಮೇಲಿನ ದಶಗುಣಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳುವ ಮೂಲಕ ನಮ್ಮಲ್ಲಿರುವ ಕೋಪ,ಅಸಹನೆ,ಉದ್ರೇಕ ಮುಂತಾದ ಗುಣಗಳನ್ನು ಕಳೆದುಕೊಂಡು ಪ್ರೀತಿ ವಿಶ್ವಾಸ ಭ್ರಾತೃತ್ವ, ಸಹನೆ, ಒಳ್ಳೆಯತನ ಮುಂತಾದ ಉನ್ನತ ಗುಣಗಳನ್ನು ಆವಾಹಿಸಿಕೊಳ್ಳುತ್ತಾ ವಿಶ್ವಮಾನವರಾಗುವ ಮೂಲಕ ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಜಗತ್ತಿನಲ್ಲಿ ಬಿತ್ತರಿಸೋಣ ಎಂಬ ಆಶಯದೊಂದಿಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024 Prize Money:ಚಾಂಪಿಯನ್​ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

T20 World Cup 2024 Prize Money: ರನ್ನರ್​ ಅಪ್​ ದಕ್ಷಿಣ ಆಫ್ರಿಕಾ ತಂಡಕ್ಕೆ 1,280,000 USD (10,68,06,400 ರೂ.) ಹಣ ದೊರೆಕಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ 11.25 ಮಿಲಿಯನ್ ಯುಸ್ ಡಾಲರ್ ಆಗಿತ್ತು.

VISTARANEWS.COM


on

T20 World Cup 2024 prize money
Koo

ಬಾರ್ಬಡೋಸ್​: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಚಾಂಪಿಯನ್​(T20 World Cup Final) ಭಾರತ ತಂಡಕ್ಕೆ ಭಾರಿ(t20 world cup winner) ಮೊತ್ತದ ಬಹುಮಾನ(T20 World Cup 2024 Prize Money) ಲಭಿಸಿದೆ. $ 2.45 ಮಿಲಿಯನ್ ಯುಎಸ್ ಡಿ (20,42,49,000 ರೂ) ಪಡೆದಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ. ರನ್ನರ್​ ಅಪ್​ ದಕ್ಷಿಣ ಆಫ್ರಿಕಾ ತಂಡಕ್ಕೆ 1,280,000 USD (10,68,06,400 ರೂ.) ಹಣ ದೊರೆಕಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ 11.25 ಮಿಲಿಯನ್ ಯುಸ್ ಡಾಲರ್ ಆಗಿತ್ತು.

ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

ಇದನ್ನೂ ಓದಿ Rahul Dravid: ನಾಯಕನಾಗಿ ಸೋಲಿನ ಅವಮಾನ ಎದುರಿಸಿದ್ದ ಮೈದಾನದಲ್ಲೇ ಕೋಚ್​ ಆಗಿ ವಿಶ್ವಕಪ್​ ಎತ್ತಿ ಹಿಡಿದ ದ್ರಾವಿಡ್

ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ


17ನೇ ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup final)​ ಗೆದ್ದ ಭಾರತ ತಂಡದ ಈ ಅಭೂತಪೂರ್ವ ಗೆಲುವನ್ನು ಅಭಿಮಾನಿಗಳು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ತಡರಾತ್ರಿಯೇ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಅಭಿಮಾನಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಗೆಲುವನ್ನು ಸಂಭ್ರಮಿಸಿದ್ದಾರೆ. ಇದರ ಫೋಟೊ ಮತ್ತು ವೈರಲ್​ ಆಗಿದೆ.

ಜಮ್ಮು ಕಾಶ್ಮೀರದ ಕಚಿ ಚೌನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಳಿಯನ್ನು ಕೂಡ ಲೆಕ್ಕಿಸದೆ ಮಧ್ಯರಾತ್ರಿಯೇ ಅಭಿಮಾನಿಗಳು ಮನೆಯಿಂದ ಹೊರ ಬಂದು ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ. ಬೃಹತ್ ತ್ರಿವರ್ಣ ಧ್ವಜ ಹಿಡಿದು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದ್ದಾರೆ.

Continue Reading

ಕ್ರೀಡೆ

Rahul Dravid: ನಾಯಕನಾಗಿ ಸೋಲಿನ ಅವಮಾನ ಎದುರಿಸಿದ್ದ ಮೈದಾನದಲ್ಲೇ ಕೋಚ್​ ಆಗಿ ವಿಶ್ವಕಪ್​ ಎತ್ತಿ ಹಿಡಿದ ದ್ರಾವಿಡ್

Rahul Dravid: 1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ಇದೀಗ ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ.

VISTARANEWS.COM


on

Rahul Dravid
Koo

ಬಾರ್ಬಡೋಸ್​: ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024)​ ಟ್ರೋಫಿಯನ್ನು ರಾಹುಲ್​ ದ್ರಾವಿಡ್‌(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ. ಈ ಗೆಲುವನ್ನು ಆಟಗಾರರಿಗಿಂತ ದ್ರಾವಿಡ್​ ಅವರೇ ಹೆಚ್ಚಾಗಿ ಸಂಭ್ರಮಿಸಿದರು. ಅಲ್ಲದೆ ಭಾವುಕರಾಗಿಯೂ ಕಂಡು ಬಂದರು.

ಶಾಂತ ಸ್ವಾಭಾವದ ದ್ರಾವಿಡ್​ ಅವರು ವಿಶ್ವಕಪ್​​ ಎತ್ತಿ ಹಿಡಿಯುವ ವೇಳೆ ಅವರ ಸಂತಸಕ್ಕೆ ಪಾರತವೇ ಇರಲಿಲ್ಲ. ಅತ್ಯಂತ ಜೋಶ್​ನಿಂದಲೇ ಕಿರುಚುತ್ತಾ ಕಪ್​ ಮೇಲೆತ್ತಿ ತಾನು ಕೂಡ ಆಟಗಾರನಂತೆ ಈ ಗೆಲುವನ್ನು ಸಂಭ್ರಮಿಸಿದರು. ಆಟಗಾರರ ಜತೆಗೂ ಈ ಸಂಭ್ರಮ ಕಂಡು ಬಂತು. ಒಟ್ಟಾರೆಯಾಗಿ ಇದು ಅವರಿಗೆ ಸ್ಮರಣೀಯ ಬೀಳ್ಕೊಡುಗೆ ಸಮಾರಂಭವಾಗಿತ್ತು. ಆಟಗಾರರು ಕೂಡ ಡ್ರಾವಿಡ್​ ಅವರನ್ನು ಮಗುವಿನಂತೆ ಮೇಲೆತ್ತಿ ಸಂಭ್ರಮಿಸಿದರು. ಈ ವಿಡಿಯೊ ವೈರಲ್​ ಆಗಿದೆ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ಇದೀಗ ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ.

ಇದನ್ನೂ ಓದಿ T20 World Cup final: ತ್ರಿವರ್ಣ ಧ್ವಜ ಹಿಡಿದು ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ

2007ರಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ರಾಹುಲ್​ ದ್ರಾವಿಡ್​ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್​ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್​ ನೆಲದಲ್ಲೇ ಇದೀಗ ದ್ರಾವಿಡ್​ ತರಬೇತುದಾರನಾಗಿ ಕಪ್​ ಗೆದ್ದು ಸಂಭ್ರಮಿಸಿದ್ದಾರೆ.

 2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ರಾಹುಲ್​ ದ್ರಾವಿಡ್​ಗೆ ಕೋಚ್​ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್​ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿಯೂ ಭಾರತ ಫೈನಲ್​ನಲ್ಲಿ ಸೋಲು ಕಂಡಿತ್ತು. ನಿರ್ಗಮನದ ಹಂತದಲ್ಲಿ ಕೊನೆಗೂ ಕಪ್​ ಗೆದ್ದ ಖಷಿ ಅವರಿಗೆ ಲಭಿಸಿದೆ. ಜತೆಗೆ ಅವರ ಈ ಕನಸು ನೆರವೇರಲೆಂದು ಪ್ರಾರ್ಥಿಸಿಸಿದ ಕೊಟ್ಯಂತರ ಅಭಿಮಾನಿಗಳ ಹಾರೈಕೆ ಕೂಡ ಫಲಿಸಿದೆ.

ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ ಅಂತರದಿಂದ ಗೆದ್ದು 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್​ ಎತ್ತಿ ಹಿಡಿಯಿತು.

Continue Reading

ಕ್ರೀಡೆ

T20 World Cup final: ತ್ರಿವರ್ಣ ಧ್ವಜ ಹಿಡಿದು ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ

T20 World Cup final: ಜಮ್ಮು ಕಾಶ್ಮೀರದ ಕಚಿ ಚೌನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಳಿಯನ್ನು ಕೂಡ ಲೆಕ್ಕಿಸದೆ ಮಧ್ಯರಾತ್ರಿಯೇ ಅಭಿಮಾನಿಗಳು ಮನೆಯಿಂದ ಹೊರ ಬಂದು ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ. ಬೃಹತ್ ತ್ರಿವರ್ಣ ಧ್ವಜ ಹಿಡಿದು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದ್ದಾರೆ.

VISTARANEWS.COM


on

T20 World Cup final
Koo

ಜಮ್ಮ-ಕಾಶ್ಮೀರ: 17ನೇ ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup final)​ ಗೆದ್ದ ಭಾರತ ತಂಡದ ಈ ಅಭೂತಪೂರ್ವ ಗೆಲುವನ್ನು ಅಭಿಮಾನಿಗಳು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ತಡರಾತ್ರಿಯೇ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಅಭಿಮಾನಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಗೆಲುವನ್ನು ಸಂಭ್ರಮಿಸಿದ್ದಾರೆ. ಇದರ ಫೋಟೊ ಮತ್ತು ವೈರಲ್​ ಆಗಿದೆ.

ಜಮ್ಮು ಕಾಶ್ಮೀರದ ಕಚಿ ಚೌನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಳಿಯನ್ನು ಕೂಡ ಲೆಕ್ಕಿಸದೆ ಮಧ್ಯರಾತ್ರಿಯೇ ಅಭಿಮಾನಿಗಳು ಮನೆಯಿಂದ ಹೊರ ಬಂದು ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ. ಬೃಹತ್ ತ್ರಿವರ್ಣ ಧ್ವಜ ಹಿಡಿದು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ 

ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು‌. ಎಂ.ಜಿ. ರಸ್ತೆ, ಬ್ರಿಗೇಡ್ ರೋಡ್, ಕೋರಮಂಗಲ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಮತ್ತು ತ್ರಿವರ್ಣ ಧ್ವಜ ಹಾರಿಸಿ, ಹಾಡುಗಳಿಗೆ ಕುಣಿದು ಸಂಭ್ರಮ ಆಚರಿಸಿ ಭಾರತ ತಂಡಕ್ಕೆ ಅಭಿನಂದನೆ‌ ಸಲ್ಲಿಸಿದರು.

ಇದನ್ನೂ ಓದಿ MS Dhoni Instagram Post: ಭಾರತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಚ್ಚರಿಯ ಪೋಸ್ಟ್ ಮಾಡಿದ ಧೋನಿ

ಭಾರತ ತಂಡ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಭಾರತ ಧ್ವಜ, ಭಗವಾಧ್ವಜ ಪ್ರದರ್ಶಿಸಿ ಖುಷಿಪಟ್ಟರು. ಜತೆಗೆ ಡಿಜೆಗೆ ಸಖತ್‌ ಸ್ಟೆಪ್ ಹಾಕಿ ಕ್ರೀಡಾ ಪ್ರೇಮಿಗಳು ಸಂಭ್ರಮಿಸಿದರು. ಕನ್ನಡ, ಹಿಂದಿ ಹಾಡುಗಳ ನಡುವೆ ಯುವ ಜನತೆಯ ಡ್ಯಾನ್ಸ್‌ ಗಮನ ಸೆಳೆಯಿತು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಭಾರತದ ಗೆಲುವನ್ನು ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸಿದರು. ಭಟ್ಕಳದ ಸಂಶುದ್ದೀನ್ ವೃತ್ತದಲ್ಲಿ ತಡರಾತ್ರಿ ಸಂಭ್ರಮಾಚರಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಜಮಾಯಿಸಿದ ಕ್ರಿಕೆಟ್ ಪ್ರೇಮಿಗಳು ಸಂಚರಿಸುತ್ತಿದ್ದ ವಾಹನಗಳ ಎದುರು ಕುಣಿದು ಕುಪ್ಪಳಿಸಿದರು. ಭಾರತದ ಬಾವುಟ ಹಿಡಿದ ಯುವಕರು, ಮಕ್ಕಳು, ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿತು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಪ್ರಸಂಗವೂ ನಡೆಯಿತು. ಕ್ರಿಕೆಟ್ ಪ್ರೇಮಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಕೊನೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಿಕೆಟ್ ಪ್ರೇಮಿಗಳನ್ನು ಪೊಲೀಸರು ಚದುರಿಸಿದರು.

Continue Reading

ಕ್ರೀಡೆ

MS Dhoni Instagram Post: ಭಾರತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಚ್ಚರಿಯ ಪೋಸ್ಟ್ ಮಾಡಿದ ಧೋನಿ

MS Dhoni Instagram Post: 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಭಾರತ ಯಾವುದೇ ಕಪ್​ ಗೆದ್ದಿಲ್ಲ. 2014ರಲ್ಲಿ ಧೋನಿ ನಾಯಕತ್ವದಲ್ಲಿ ಫೈನಲ್​ ಪ್ರವೇಶಿಸಿದ್ದರೂ ಕೂಡ ಶ್ರೀಲಂಕಾ ವಿರುದ್ಧ ಸೋಲು ಕಂಡು ರನ್ನರ್ ಅಪ್​ ಆಗಿತ್ತು. ಇದೀಗ ರೋಹಿತ್​ ಕಪ್​ ಗೆಲ್ಲುವ ಮೂಲಕ ಭಾರತ ತಂಡ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್​ ಗೆದ್ದ ಸಾಧನೆ ಮಾಡಿದೆ.

VISTARANEWS.COM


on

Koo

ರಾಂಚಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup 2024)​ ಗೆದ್ದ ಟೀಮ್​ ಇಂಡಿಯಾಕ್ಕೆ, ಚೊಚ್ಚಲ ಟಿ20 ವಿಶ್ವಕಪ್(T20 World Cup Win)​ ಗೆದ್ದ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ವಿಶೇಷವಾಗಿ ಶುಭ ಹಾರೈಸಿದ್ದಾರೆ. ನನ್ನ ಹುಟ್ಟು ಹಬ್ಬಕ್ಕೆ ಮುಂಚಿತವಾಗಿಯೇ ಸ್ಮರಣೀಯ ಉಡುಗೊರೆ ನೀಡಿದ್ದಕ್ಕೆ ಟೀಮ್​ ಇಂಡಿಯಾಕ್ಕೆ ಧನ್ಯವಾದಗಳು ಎಂದು ಇನ್​ಸ್ಟಾಗ್ರಾಮ್(MS Dhoni Instagram Post)​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಚಾಂಪಿಯನ್​ ತಂಡದ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ಧೋನಿ, ನನ್ನ ಎದೆ ಬಡಿತ ಹೆಚ್ಚಾಗಿತ್ತು. ಆದರೆ ದೃಢ ನಂಬಿಕೆಯೊಂದಿಗೆ ನೀವೆಲ್ಲರೂ ಉತ್ತಮವಾಗಿ ಆಡಿದ್ದೀರಿ. ತವರಿನ ಮತ್ತು ವಿಶ್ವದೆಲ್ಲಡೆ ಇರುವ ಎಲ್ಲಾ ಭಾರತೀಯರಿಂದ, ವಿಶ್ವಕಪ್ ಮರಳಿ ಮನೆಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅಭಿನಂದನೆಗಳು. ಜತೆಗೆ ನನ್ನ ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು” ಎಂದು ಧೋನಿ ಬರೆದುಕೊಂಡಿದ್ದಾರೆ. ಧೋನಿ ಅವರ ಜನ್ಮ ದಿನ ಜುಲೈ 7. 43ನೇ ವರ್ಷಕ್ಕೆ ಕಾಲಿಡುತ್ತಿರುವ ಧೋನಿಗೆ ಈ ಗೆಲುವು ಅಮೂಲ್ಯ ಉಡುಗೊರ ಎಂದು ಧೋನಿ ಭಾವಿಸಿದ್ದಾರೆ.

2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಭಾರತ ಯಾವುದೇ ಕಪ್​ ಗೆದ್ದಿಲ್ಲ. 2014ರಲ್ಲಿ ಧೋನಿ ನಾಯಕತ್ವದಲ್ಲಿ ಫೈನಲ್​ ಪ್ರವೇಶಿಸಿದ್ದರೂ ಕೂಡ ಶ್ರೀಲಂಕಾ ವಿರುದ್ಧ ಸೋಲು ಕಂಡು ರನ್ನರ್ ಅಪ್​ ಆಗಿತ್ತು. ಇದೀಗ ರೋಹಿತ್​ ಕಪ್​ ಗೆಲ್ಲುವ ಮೂಲಕ ಭಾರತ ತಂಡ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್​ ಗೆದ್ದ ಸಾಧನೆ ಮಾಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

Continue Reading
Advertisement
T20 World Cup 2024 prize money
ಕ್ರೀಡೆ17 mins ago

T20 World Cup 2024 Prize Money:ಚಾಂಪಿಯನ್​ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Text Book
ಕರ್ನಾಟಕ17 mins ago

Text Book: ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರ ಅಸಮಾಧಾನ; ಸಿಎಂಗೆ ಪತ್ರ

Virat Kohli video calls Anushka Sharma after winning
ಬಾಲಿವುಡ್18 mins ago

Virat Kohli: ವಿಶ್ವಕಪ್ ಗೆದ್ದ ನಂತರ ಅನುಷ್ಕಾ ಶರ್ಮಾಗೆ ವಿಡಿಯೊ ಕಾಲ್‌ ಮಾಡಿ ಫ್ಲೈಯಿಂಗ್ ಕಿಸ್‌ ಕೊಟ್ಟ ವಿರಾಟ್ ಕೊಹ್ಲಿ!

Sabja Seeds Benefits
ಆರೋಗ್ಯ20 mins ago

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Physical Abuse
ಚಿಕ್ಕಬಳ್ಳಾಪುರ29 mins ago

Physical Abuse : ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ

Mann Ki Baat
ದೇಶ38 mins ago

Mann Ki Baat: ನಾಲ್ಕು ತಿಂಗಳ ನಂತರ ಮೋದಿ ʼಮನ್‌ ಕೀ ಬಾತ್‌ʼ; Live ಲಿಂಕ್ ಇಲ್ಲಿದೆ

Rahul Dravid
ಕ್ರೀಡೆ40 mins ago

Rahul Dravid: ನಾಯಕನಾಗಿ ಸೋಲಿನ ಅವಮಾನ ಎದುರಿಸಿದ್ದ ಮೈದಾನದಲ್ಲೇ ಕೋಚ್​ ಆಗಿ ವಿಶ್ವಕಪ್​ ಎತ್ತಿ ಹಿಡಿದ ದ್ರಾವಿಡ್

Shiva Rajkumar Tweet About India's T20 Victory about rahul
ಕ್ರಿಕೆಟ್51 mins ago

Shiva Rajkumar: ರಾಹುಲ್ ದ್ರಾವಿಡ್ ಫೋಟೊ ಶೇರ್‌ ಮಾಡಿ ‘ಗೋಡೆ’ ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು ಎಂದ ಶಿವಣ್ಣ

T20 World Cup 2024 Anushka Sharma reveals Vamika biggest concern
ಕ್ರಿಕೆಟ್1 hour ago

T20 World Cup 2024: ಟೀಮ್​ ಇಂಡಿಯಾ ಗೆದ್ದ ಬಳಿಕ ವಿರಾಟ್‌- ಅನುಷ್ಕಾ ಮಗಳ ವಿಶೇಷ ಕಾಳಜಿ ಏನಾಗಿತ್ತು?

T20 World Cup final
ಕ್ರೀಡೆ1 hour ago

T20 World Cup final: ತ್ರಿವರ್ಣ ಧ್ವಜ ಹಿಡಿದು ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ18 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌