ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು? - Vistara News

ವಿದೇಶ

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

ಅಮೆರಿಕದ ನ್ಯೂಜೆರ್ಸಿಯಲ್ಲಿ ಪಂಜಾಬ್‌ ಮೂಲದ, 19 ವರ್ಷದ ಗೌರವ್‌ ಗಿಲ್ಲ ಎಂಬಾತನು 29 ವರ್ಷದ ಜಸ್ವೀರ್‌ ಕೌರ್‌ ಎಂಬ ಮಹಿಳೆಯನ್ನು ಕೊಂದಿದ್ದಾನೆ. ಗುಂಡಿನ ದಾಳಿಯಲ್ಲಿ 20 ವರ್ಷದ ಗಗನ್‌ದೀಪ್‌ ಕೌರ್‌ ಎಂಬ ಯುವತಿಯು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಮಾಡಲೆಂದೇ ಆತನು ಅಮೆರಿಕಕ್ಕೆ ತೆರಳಿದ್ದ ಎಂದು ತಿಳಿದುಬಂದಿದೆ.

VISTARANEWS.COM


on

Indian Women
ಜಸ್ವೀನ್‌ ಕೌರ್‌ ಹಾಗೂ ಗಗನ್‌ದೀಪ್‌ ಕೌರ್.‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಇತ್ತೀಚಿನ ಯುವಕ-ಯುವತಿಯರಲ್ಲಿ ಸೇಡಿನ ಕೃತ್ಯಗಳು, ಲವ್‌ ಬ್ರೇಕಪ್‌ (Love Breakup) ಆದ ಕೂಡಲೇ ಪ್ರೇಯಸಿಯನ್ನು ಕೊಲ್ಲುವುದು, ಆಸಿಡ್‌ ದಾಳಿ ಮಾಡುವುದು ಸೇರಿ ಹಲವು ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಇನ್ನು ಪಂಜಾಬ್‌ ಯುವಕನೊಬ್ಬ ಭಾರತದಿಂದ ಅಮೆರಿಕಕ್ಕೆ (America) ತೆರಳಿ, ಅಲ್ಲಿ 29 ವರ್ಷದ ಮಹಿಳೆಯ ಮೇಲೆ 7 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಭೀಕರ ಹತ್ಯೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ಪಂಜಾಬ್‌ ಮೂಲದ, 19 ವರ್ಷದ ಗೌರವ್‌ ಗಿಲ್ಲ ಎಂಬಾತನು 29 ವರ್ಷದ ಜಸ್ವೀರ್‌ ಕೌರ್‌ ಎಂಬ ಮಹಿಳೆಯನ್ನು ಕೊಂದಿದ್ದಾನೆ. ಗುಂಡಿನ ದಾಳಿಯಲ್ಲಿ 20 ವರ್ಷದ ಗಗನ್‌ದೀಪ್‌ ಕೌರ್‌ ಎಂಬ ಯುವತಿಯು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದಿಂದ ಅಮೆರಿಕಕ್ಕೆ ತೆರಳಿ, ಅಲ್ಲಿ ಯುವತಿಯನ್ನು ಹುಡುಕಿ, ಅವರ ಮನೆಗೇ ತೆರಳಿ ಗುಂಡಿನ ದಾಳಿ ಮಾಡಲು ನಿಖರ ಕಾರಣ ತಿಳಿದುಬಂದಿಲ್ಲ. ಕೃತ್ಯದ ಬಳಿಕ ಪೊಲೀಸರು ಗೌರವ್‌ ಗಿಲ್‌ನನ್ನು ಬಂಧಿಸಿದ್ದಾರೆ.

ಪಂಜಾಬ್‌ನ ಗೌರವ್‌ ಗಿಲ್‌ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದು, ವಾಷಿಂಗ್ಟನ್‌ ಜಿಲ್ಲೆಯ ಕೆಂಟ್‌ ಪಟ್ಟಣದಲ್ಲಿ ವಾಸಿಸುತ್ತಿದ್ದ. ನ್ಯೂಜೆರ್ಸಿಯ ಕಾರ್ಟರೆಟ್‌ನಲ್ಲಿ ಘಟನೆ ನಡೆದಿದೆ. ಗೌರವ್‌ ಗಿಲ್‌ ಹಾಗೂ ಗಗನ್‌ದೀಪ್‌ ಕೌರ್‌ ಅವರು ಪಂಜಾಬ್‌ನ ನಾಕೋದರ್‌ನಲ್ಲಿ ಕೋಚಿಂಗ್‌ ಸೆಂಟರ್‌ನಲ್ಲಿ ಅಧ್ಯಯನ ಮಾಡುವಾಗ ಪರಸ್ಪರ ಪರಿಚಯವಾಗಿದ್ದರು ಎಂದು ತಿಳಿದುಬಂದಿದೆ. ಜಸ್ವೀರ್‌ ಅವರು ಗಗನ್‌ದೀಪ್‌ ಕಸಿನ್‌ ಆಗಿದ್ದು, ಗಗನ್‌ದೀಪ್‌ ಅವರು ಜಸ್ವೀರ್‌ ಮನೆಗೆ ಹೋಗಿದ್ದರು. ಆಗ ಗೌರವ್‌ ಗಿಲ್‌ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಜಸ್ವೀರ್‌ ಕೌರ್‌ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಅಮೆಜಾನ್‌ ಫೆಸಿಲಿಟಿಯಲ್ಲಿ ಇದಕ್ಕೂ ಮೊದಲು ಕೆಲಸ ಮಾಡುತ್ತಿದ್ದರು. ಜಸ್ವೀರ್‌ ಕೌರ್‌ ಅವರ ಪತಿಯು ವಾಹನ ಚಾಲಕರಾಗಿದ್ದು, ಘಟನೆ ನಡೆದಾಗ ಅವರು ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಜಸ್ವೀರ್‌ ಅವರು ಐದು ವರ್ಷದ ಹಿಂದೆಯೇ ಅಮೆರಿಕಕ್ಕೆ ತೆರಳಿದ್ದಾರೆ. ಇನ್ನು ಗಗನ್‌ದೀಪ್‌ ಅವರು ಅಧ್ಯಯನ ವೀಸಾ ಪಡೆದು ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದರು ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ಗೌರವ್‌ ಗಿಲ್‌ ಹಾಗೂ ಗಗನ್‌ದೀಪ್‌ ಕೌರ್‌ ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ಬ್ರೇಕಪ್‌ ಆಗಿತ್ತು. ಇದರಿಂದ ಕುಪಿತಗೊಂಡ ಗೌರವ್‌ ಗಿಲ್‌, ಗಗನ್‌ದೀಪ್‌ ಕೌರ್‌ ಅವರನ್ನು ಕೊಲೆ ಮಾಡಲು ಗುಂಡು ಹಾರಿಸಿದ್ದಾನೆ. ಆಗ ಜಸ್ವೀರ್‌ ಕೌರ್‌ಗೆ ಗುಂಡು ತಗುಲಿ, ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಸ್ವೀರ್‌ ತಂದೆ ಹೇಳುವುದೇನು?

“ನನ್ನ ಪುತ್ರಿ ಜಸ್ವೀರ್‌ ಕೌರ್‌ ಮನೆಯಲ್ಲಿ ಗಗನ್‌ದೀಪ್‌ ಕೌರ್‌ ಇದ್ದಳು. ಘಟನೆ ನಡೆಯುವಾಗ ಜಸ್ವೀರ್‌ ಕೌರ್‌ ಮಲಗಿದ್ದಳು. ಮನೆಯ ಹೊರಗೆ ಗಗನ್‌ದೀಪ್‌ ಕೌರ್‌ ಹಾಗೂ ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಮಧ್ಯೆ ವಾಗ್ವಾದ ನಡೆದಿದೆ. ಆಗ ಸಹಾಯಕ್ಕಾಗಿ ಗಗನ್‌ದೀಪ್‌ ಕೌರ್‌ ನನ್ನ ಮಗಳನ್ನು ಕರೆದಿದ್ದಾಳೆ. ಆಗ ಜಸ್ವೀರ್‌ ಕೌರ್‌ ಜಗಳ ಬಿಡಿಸಲು ಹೋಗಿದ್ದು, ಆರೋಪಿಯು ನನ್ನ ಮಗಳ ಮುಖಕ್ಕೆ ಏಳು ಗುಂಡು ಹಾರಿಸಿ ಕೊಂದಿದ್ದಾನೆ” ಎಂದು ಜಸ್ವೀರ್‌ ಕೌರ್‌ ತಂದೆ ಕೇವಾಲ್‌ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Physical relationship: ಕೈದಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ ಮಹಿಳಾ ಜೈಲಾಧಿಕಾರಿ ಬಗ್ಗೆ ಶಾಕಿಂಗ್‌ ವಿಚಾರ ಬಯಲು

Physical relationship: ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ.

VISTARANEWS.COM


on

Physical relationship
Koo

ಲಂಡನ್‌: ಜೈಲಿನ ಮಹಿಳಾ ಸಿಬ್ಬಂದಿ ಕೈದಿಯ ಜೊತೆ ಲೈಂಗಿಕ ಕ್ರಿಯೆ(Physical relationship) ನಡೆಸಿರುವ ಶಾಕಿಂಗ್‌ ಘಟನೆ ಇಂಗ್ಲೆಂಡ್‌ನ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದ್ದಂತೆ ಈ ಮಹಿಳಾ ಪೊಲೀಸ್‌ ಸಿಬ್ಬಂದಿ ಯಾರು ಎಂಬ ಬಗ್ಗೆ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ಹಾಗಿದ್ದರೆ ಈ ಕೃತ್ಯ ಎಸಗಿರುವ ಈ ಮಹಿಳೆ ಯಾರು? ಇಲ್ಲಿದೆ ಸಂಪೂರ್ಣ ವರದಿ.

ಜೈಲಿನಲ್ಲಿ ಖೈದಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಕೆಯ ಹೆಸರು ಲಿಂಡಾ ಡಿ ಸೋಜಾ. 31ವರ್ಷದ ಈಕೆ ದಕ್ಷಿಣ ಲಂಡನ್‌ನಲ್ಲಿರುವ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ಜೈಲಿನಲ್ಲಿ ಅಧಿಕಾರಿಯಾಗಿದ್ದಳು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಕೆ ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಲಿಂಡಾಳ ಸಹೋದರಿ ಆಂಡ್ರೈನಾ ಪ್ರತಿಕ್ರಿಯಿಸಿದ್ದು, ಲಿಂಡಾ ಮತ್ತು ಪತಿ ನಾತನ್‌ 2023ರ ʼಓಪನ್ ಹೌಸ್: ದಿ ಗ್ರೇಟ್ ಸೆಕ್ಸ್ ಎಕ್ಸ್‌ಪರಿಮೆಂಟ್ʼ ಎಂಬ ಟಿವಿ ಶೋ ಸ್ಪರ್ಧಿಗಳಾಗಿದ್ದರು. ಅದೂ ಅಲ್ಲದೇ ಆಕೆ ಅಡಲ್ಡ್‌ ವಿಡಿಯೋ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸೀಕ್ರೆಟ್‌ ಅಕೌಂಟನ್ನೂ ಹೊಂದಿದ್ದಾಳೆ ಎಂದು ಹೇಳಿದ್ದಾಳೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ. ಕೈಯಲ್ಲಿ ಸಿಗರೇಟ್‌ ಹಿಡಿದು ವಿಡಿಯೋ ಮಾಡುತ್ತಿರುವ ಆ ವ್ಯಕ್ತಿ ” ಹಾಯ್‌.. ನಾವು ಇವತ್ತು ಇತಿಹಾಸ ಸೃಷ್ಟಿಸಿದ್ದೇವೆ. ನಾನು ಹೇಳುತ್ತಿರುವುದು ಇದೇ ವಿಚಾರವನ್ನು ಎಂದು ಹೇಳುತ್ತಾ ಕ್ಯಾಮೆರಾವನ್ನು ತಿರುಗಿಸುತ್ತಾನೆ. ಅಲ್ಲಿ ಜೈಲಿನ ಸಿಬ್ಬಂದಿ ಮತ್ತು ಕೈದಿ ಲೈಂಗಿಕ ಚಟುವಟಿಕೆಯಲ್ಲಿ ಭಾಗಿರುವುದನ್ನು ಕಾಣಬಹುದಾಗಿದೆ. ಅದೂ ಅಲ್ಲೇ ಇದ್ದ ಬೆಡ್‌ ಮೇಲೆ ಕೈದಿಗಳ ಬಟ್ಟೆ ಬಿದ್ದಿರುವುದನ್ನು ಕಾಣಬಹುದಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಮತ್ತೊರ್ವ ಖೈದಿ ಸೆಲ್‌ ಒಳಗೆ ಬರಲು ಯತ್ನಿಸುತ್ತಾರೆ. ಆಗ ವಿಡಿಯೋ ಮಾಡುತ್ತಿದ್ದವನು “ಸ್ವಲ್ಪ ಹೊತ್ತು ಇರು” ಅಂತಾನೆ. ಆಮೇಲೆ ಕ್ಯಾಮೆರಾವನ್ನು ಸುತ್ತ ತಿರುಗಿಸುತ್ತಾ “ಇದು ವಾಂಡ್‌ವರ್ಥ್‌ ಜೈಲು” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ಘಟನೆ ಬಗ್ಗೆ ಲಂಡನ್‌ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲೆ ನಡೆದಿರುವ ಘಟನೆ ಎಂಬುದು ಸ್ಪಷ್ಟವಾಗಿದೆ. ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಕಾನೂನು ಸಚಿವಾಲಯದ ಜೊತೆಗೂ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.

HMP ಜೈಲು ಸೇವೆಯ ವಕ್ತಾರರು ಮಾತನಾಡಿ, ಘಟನೆಯು ಇತ್ತೀಚೆಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ, ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಿಬ್ಬಂದಿ ಭ್ರಷ್ಟಾಚಾರವನ್ನು ಸಹಿಸಲಾಗುವುದಿಲ್ಲ ಮತ್ತು ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜೈಲು ಅಧಿಕಾರಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Continue Reading

ವಿದೇಶ

Mohamed Muizzu: ಮಾಲ್ಡೀವ್ಸ್‌ ಅಧ್ಯಕ್ಷನ ವಿರುದ್ಧ ವಾಮಾಚಾರ; ಸಚಿವೆ ಅರೆಸ್ಟ್‌

Mohamed Muizzu: ಮಾಲ್ಡೀವ್ಸ್ ಸಚಿವೆ ಫಾತಿಮತ್ ಶಮ್ನಾಜ್ ಅವರು ಅಧ್ಯಕ್ಷ ಮೊಯಿಝು ವಿರುದ್ಧವೇ ಅಂದ್ರೆ ಮಾಟ ಮಂತ್ರ ಮಾಡಿಸಿದ್ದಾರೆ. ವಾಮಾಚಾರ ಮಾಡಿದ ಆರೋಪದಲ್ಲಿ ಮಾಲ್ಡೀವ್ಸ್ ಪೊಲೀಸರು ಸಚಿವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಆಕೆಯ ಜೊತೆಗೆ ಮತ್ತು ಆಕೆಯ ಇಬ್ಬರು ಸೋದರಿಯರನ್ನು ರಾಜಧಾನಿ ಮಾಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಇಬ್ಬರನ್ನೂ ಒಂದು ವಾರಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈ ಬಗ್ಗೆ ಮಾಲ್ಡೀವ್ಸ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

VISTARANEWS.COM


on

Mohamed Muizzu
Koo

ಮಾಲ್ಡೀವ್ಸ್: ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿರುದ್ಧ ಟೀಕೆ ವ್ಯಕ್ತಪಡಿಸಿ ಬಾಯ್ಕಟ್‌ ಸಮಸ್ಯೆ ಎದುರಿಸಿದ್ದ ಮಾಲ್ಡೀವ್ಸ್‌(Maldives) ಇದೀಗ ಮತ್ತೆ ಸುದ್ದಿಯಲ್ಲಿದೆ. ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮೊಯಿಝು(Mohamed Muizzu) ವಿರುದ್ಧ ಮಾಟ ಮಂತ್ರ(black magic) ಮಾಡಿದ ಆರೋಪದಲ್ಲಿ ಸಚಿವೆಯೊಬ್ಬರು ಅರೆಸ್ಟ್‌ ಆಗಿದ್ದಾರೆ. ಮಾಲ್ಡೀವ್ಸ್‌ನ ಪರಿಸರ, ಹವಾಮಾನ ಬದಲಾವಣೆ ಮತ್ತು ಇಂಧನ ಖಾತೆ ರಾಜ್ಯ ಸಚಿವೆ ಫತೀಮತ್‌ ಶಮ್ನಾಜ್‌ ಅಲಿ ಸಲೀಂ ಬಂಧನಕ್ಕೊಳಗಾಗದ ಸಚಿವೆ.

ಮಾಲ್ಡೀವ್ಸ್ ಸಚಿವೆ ಫಾತಿಮತ್ ಶಮ್ನಾಜ್ ಅವರು ಅಧ್ಯಕ್ಷ ಮೊಯಿಝು ವಿರುದ್ಧವೇ ಅಂದ್ರೆ ಮಾಟ ಮಂತ್ರ ಮಾಡಿಸಿದ್ದಾರೆ. ವಾಮಾಚಾರ ಮಾಡಿದ ಆರೋಪದಲ್ಲಿ ಮಾಲ್ಡೀವ್ಸ್ ಪೊಲೀಸರು ಸಚಿವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಆಕೆಯ ಜೊತೆಗೆ ಮತ್ತು ಆಕೆಯ ಇಬ್ಬರು ಸೋದರಿಯರನ್ನು ರಾಜಧಾನಿ ಮಾಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಇಬ್ಬರನ್ನೂ ಒಂದು ವಾರಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈ ಬಗ್ಗೆ ಮಾಲ್ಡೀವ್ಸ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಾಟ ಮಂತ್ರ ಮಾಡಿದ್ದೇಕೆ?

ಇನ್ನು ಶಮ್ನಾಜ್‌ ಈ ರೀತಿಯಾಗಿ ಅಧ್ಯಕ್ಷನ ವಿರುದ್ಧವೇ ವಾಮಾಚಾರ ಮಾಡಲು ಕಾರಣವೇನೆಂಬುದನ್ನು ಪೊಲೀಸರು ವಿಚಾರಣೆ ವಿಚಾರಣೆ ನಡೆಸಿದಾಗ ಹಲವು ವಿಚಾರಗಳು ಬಯಲಾಗಿವೆ. ಶಮ್ನಾಜ್ ಮಾಜಿ ಗಂಡ ಅದಂ ರಮೀಜ್ ಅವರು ಸಹ ಮಾಲ್ಡೀವ್ಸ್ ಅಧ್ಯಕ್ಷ ಮೊಯಿಝು ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೇ ತಿಂಗಳ ಹಿಂದೆ ಮೊಯಿಝು ಅವರನ್ನು ಅಮಾನತು ಮಾಡಿದ್ದರು. ಇದರ ಜೊತೆಗೆ ಫಾತಿಮತ್‌ ಅವರಿಗೆ ಮಾಟ ಮಂತ್ರದಲ್ಲಿ ಅಪಾರ ನಂಬಿಕೆ ಇತ್ತು. ವಾಮಾಚಾರ ಮಾಡಿಸಿದರೆ ತನಗೆ ಸದ್ಯ ಇರುವ ಕ್ಯಾಬಿನೆಟ್‌ ಖಾತೆಯ ಬದಲು ಇನ್ನೂ ಅತ್ಯುನ್ನತವಾದ ಖಾತೆಯೇ ಸಿಗುತ್ತದೆ ಅನ್ನೋ ನಂಬಿಕೆ ಇತ್ತು. ಈ ಎಲ್ಲಾ ಕಾರಣದಿಂದ ಮಾಲ್ಡೀವ್ಸ್ ಅಧ್ಯಕ್ಷರ ವಿರುದ್ಧವೇ ವಾಮಾಚಾರ ನಡೆಸಿ ಸಿಕ್ಕಿಬಿದ್ದಿದ್ದಾರೆ.

ಅಂದ ಹಾಗೆ ಮಾಲ್ಡೀವ್ಸ್‌ನಲ್ಲಿ ವಾಮಾಚಾರ ಮಾಡುವುದು ಸರ್ವೇ ಸಾಮಾನ್ಯ. ಮಾಲ್ಡೀವ್ಸ್‌ನ ಬಹಳಷ್ಟು ಕಡೆ ವಾಮಾಚಾರ ಮಾಡುವುದು ವ್ಯಾಪಕವಾಗಿದೆ. ಆದರೆ ಈ ಮಾಟಮಂತ್ರದಲ್ಲಿ ಸಿಕ್ಕಿಬಿದ್ದರೆ ಇಸ್ಲಾಮಿಕ್ ಕಾನೂನಿನ ಪ್ರಕಾರ 6 ತಿಂಗಳವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತೆ.

ಇದನ್ನೂ ಓದಿ: Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Continue Reading

ವಿದೇಶ

Shabbar Zaidi: ಮಸೀದಿಗಳ ಧ್ವನಿವರ್ಧಕದ ಬಗ್ಗೆ ಪಾಕಿಸ್ತಾನದಲ್ಲೇ ಕೇಳಿ ಬಂತು ಅಪಸ್ವರ; ಮೊಹಮ್ಮದ್ ಶಬ್ಬರ್ ಜೈದಿ ಹೇಳಿದ್ದೇನು?

Shabbar Zaidi: ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸುವ ವಿಚಾರದ ಬಗ್ಗೆ ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ಮಾಜಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಶಬ್ಬರ್ ಜೈದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಸೈಯದ್ ಮೊಹಮ್ಮದ್ ಶಬ್ಬರ್ ಜೈದಿ ಅವರ ಈ ವಿಡಿಯೊ ಪಾಕಿಸ್ತಾನದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ನೆಟ್ಟಿಗರು ಬಗ್ಗೆ ವಿಧ ವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

VISTARANEWS.COM


on

Shabbar Zaidi
Koo

ಇಸ್ಲಾಮಾಬಾದ್‌: ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸುವ ವಿಚಾರದ ಬಗ್ಗೆ ಭಾರತ ಮಾತ್ರವಲ್ಲದೆ ಪಾಕಿಸ್ತಾನದಲ್ಲಿಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ (Federal Board of Revenue) ಮಾಜಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಶಬ್ಬರ್ ಜೈದಿ (Syed Mohammad Shabbar Zaidi) ಅವರು ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸುವುದು ಅನಗತ್ಯ ಎಂದು ಹೇಳಿದ್ದಾರೆ (Viral Video).

ಪಾಕಿಸ್ತಾನದ ಯೂಟ್ಯೂಬರ್ ಜತೆ ಮಾತನಾಡಿದ ಜೈದಿ, ʼʼನೀವು ಇತರರಿಗೆ ತೊಂದರೆ ನೀಡಿ ಅಜಾನ್ ಅನ್ನು ಜೋರಾಗಿ ಕೂಗುವುದು ಸರಿಯಲ್ಲ. ಅಲ್ಲಾಹನೊಂದಿಗಿನ ಜತೆಗಿನ ಸಂಬಂಧದ ಮಧ್ಯೆ ಇತರರಿಗೆ ನೋವು ನೀಡುವುದೇಕೆ? ನಾನು ಬರುತ್ತಿದ್ದಾಗ ಎಷ್ಟು ದೊಡ್ಡ ಅಜಾನ್ ಶಬ್ದ ಕೇಳಿಸಿಕೊಂಡಿತ್ತೆಂದರೆ ಅದು ನನ್ನ ತಲೆಗೆ ಅಪ್ಪಳಿಸಿತು. ನನಗೆ ಅದು ಇಷ್ಟವಿಲ್ಲ. ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ, ಇಷ್ಟು ದೊಡ್ಡ ಧ್ವನಿವರ್ಧಕಗಳನ್ನು ಏಕೆ ಸ್ಥಾಪಿಸಲಾಗುತ್ತಿದೆ?ʼʼ ಎಂದು ಅವರು ಪ್ರಶ್ನಿಸಿದ್ದಾರೆ.

ತೀವ್ರ ಚರ್ಚೆ

ಸದ್ಯ ಸೈಯದ್ ಮೊಹಮ್ಮದ್ ಶಬ್ಬರ್ ಜೈದಿ ಅವರ ಈ ವಿಡಿಯೊ ಪಾಕಿಸ್ತಾನದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ನೆಟ್ಟಿಗರು ಬಗ್ಗೆ ವಿಧ ವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ಜೈದಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದು ಮೊದಲ ಸಲವೇನಲ್ಲ. ಅವರ ಆಗಾಗ ಪಾಕಿಸ್ತಾನದ ಜನರನ್ನು ಧಾರ್ಮಿಕ ನಡೆಯನ್ನು ಟೀಕಿಸುತ್ತ ಬಂದಿದ್ದಾರೆ. ಪಾಕಿಸ್ತಾನದಲ್ಲಿ ಧರ್ಮಗುರುಗಳ ಕೈಯಲ್ಲಿರುವ ಅಧಿಕಾರವು ಹಾನಿಕಾರಕವೆಂದು ಸಾಬೀತಾಗಿದೆ ಎಂದು ಜೈದಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಭಾರತದ ಕುರಿತು ಮೆಚ್ಚುಗೆ

ಇದೇ ವೇಳೆ ಜೈದಿ ಅವರು ಭಾರತವನ್ನು ಹೊಗಳಿದ್ದಾರೆ. ಇಲ್ಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನದೊಂದಿಗೆ ಹೋಲಿಸಿ ಭಾರತವನ್ನು ಶ್ಲಾಘಿಸಿದ್ದಾರೆ. ಮನಮೋಹನ್ ಸಿಂಗ್ ಅವರಂತಹ ನಾಯಕ ಪಾಕಿಸ್ತಾನಕ್ಕೆ ಇಲ್ಲ ಎಂದು ಜೈದಿ ಹೇಳಿದ್ದಾರೆ. ʼʼಅಂತಹವರು ಇಲ್ಲಿದ್ದರೆ ಇಂದು ಪಾಕಿಸ್ತಾನ ಇನ್ನಷ್ಟು ಬಲಿಷ್ಠವಾಗುತ್ತಿತ್ತು. ಆರ್ಥಿಕವಾಗಿ ದರಢವಾಗುತ್ತಿತ್ತು. 1992ರಲ್ಲಿ ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ಒಂದೇ ಆಗಿತ್ತು. ಭಾರತ ಇಂದು ಯಶಸ್ಸಿನ ಉತ್ತುಂಗಕ್ಕೇರಿದೆ. ಆದರೆ ಪಾಕಿಸ್ತಾನ ಇನ್ನೂ ಹಿಂದೆ ಇದೆ. ಅದಕ್ಕೆ ಕಾರಣ ಭಾರತದಲ್ಲಿ ಮನಮೋಹನ್ ಸಿಂಗ್ ಅವರಂತಹವರು ಇದ್ದರುʼʼ ಎಂದು ಮಾಜಿ ಪ್ರಧಾನಿಯ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

ಕಾಶ್ಮೀರವನ್ನು ಮರೆತು ಬಿಡಿ

ಜತೆಗೆ ಅವರು ಪಾಕಿಸ್ತಾನವು ಕಾಶ್ಮೀರವನ್ನು ಮರೆತು ಬಿಡಿವುದು ಒಳಿತು ಎಂದು ಸಲಹೆ ನೀಡಿದ್ದಾರೆ. “ಪಾಕಿಸ್ತಾನವು ಕಾಶ್ಮೀರ, ಇಸ್ಲಾಂ ಇತ್ಯಾದಿಗಳನ್ನು ಮರೆತು ಭಾರತದ ಮುಂದೆ ಮಂಡಿಯೂರಿ ನಿಲ್ಲಬೇಕು. ನಾವು ಭಾರತಕ್ಕೆ ಸಮಾನರಲ್ಲ. ಪಾಕಿಸ್ತಾನ ಸೇನೆಗೆ ತನ್ನ ಸೈನಿಕರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲʼʼ ಎಂದೂ ಅವರು ಹೇಳಿದ್ದಾರೆ.

ಜೈದಿ ಅವರು 2019ರ ಮೇಯಿಂದ 2020ರ ಏಪ್ರಿಲ್‌ವರೆಗೆ ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂನ 26 ನೇ ಅಧ್ಯಕ್ಷರಾಗಿದ್ದರು. ಅವರು Panama Leaks – A Blessing in Disguise – Offshore Assets of Pakistani Citizens, A Journey for Clarity and Pakistan: Not a Failed State ಮುಂತಾದ ಪುಸ್ತಕ ಬರೆದಿದ್ದಾರೆ.

ಇದನ್ನೂ ಓದಿ: Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Continue Reading

ವಿದೇಶ

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

US Presidential Election: ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಟೆಡ್‌ ಕ್ರೂಸ್‌ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಂದು ನಡೆದ ಬೃಹತ್‌ ಚರ್ಚೆಯನ್ನು ಗಮನಿಸಿದರೆ ಡೆಮಾಕ್ರಟಿಕ್‌ ಪಕ್ಷವು ತನ್ನ ಅಭ್ಯರ್ಥಿಯಾಗಿರುವ ಜೋ ಬೈಡೆನ್‌ ಅವರನ್ನು ಕೈಬಿಟ್ಟು ಅವರ ಬದಲಿಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಪತ್ನಿ ಮಿಶೆಲ್‌ ಒಬಾಮಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದನ್ನು ನಾನು ಒಂಬತ್ತು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದು ಹೇಳಿದ್ದಾರೆ.

VISTARANEWS.COM


on

US Presidential Election
Koo

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ(US Presidential Election) ರಂಗೇರಿದೆ. ಇದರ ಮೊದಲ ಭಾಗವಾಗಿ ಕಣದಲ್ಲಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ (Joe Biden) ಮತ್ತು ಅವರ ಪ್ರತಿ ಸ್ಪರ್ಧಿ, ರಿಪಬ್ಲಿನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ (Donald Trump) ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಈ ಚರ್ಚೆ ಪೂರ್ಣಗೊಳ್ಳುತ್ತಿದ್ದಂತೆ ಡೆಮಾಕ್ರಟಿಕ್‌ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಿಸುತ್ತದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೋ ಬೈಡೆನ್‌ ಅವರ ಬದಲಿಗೆ ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಶೆಲ್‌ ಒಬಾಮಾ ಅವರ ಹೆಸರು ಬಹಳ ಕೇಳಿ ಬರುತ್ತಿದೆ.

ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಟೆಡ್‌ ಕ್ರೂಸ್‌ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಂದು ನಡೆದ ಬೃಹತ್‌ ಚರ್ಚೆಯನ್ನು ಗಮನಿಸಿದರೆ ಡೆಮಾಕ್ರಟಿಕ್‌ ಪಕ್ಷವು ತನ್ನ ಅಭ್ಯರ್ಥಿಯಾಗಿರುವ ಜೋ ಬೈಡೆನ್‌ ಅವರನ್ನು ಕೈಬಿಟ್ಟು ಅವರ ಬದಲಿಗೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಪತ್ನಿ ಮಿಶೆಲ್‌ ಒಬಾಮಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದನ್ನು ನಾನು ಒಂಬತ್ತು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದು ಹೇಳಿದ್ದಾರೆ.

ಟ್ರಂಪ್‌ ವಿರುದ್ಧ ಬೈಡೆನ್‌ ಪ್ರಬಲ ಅಸ್ತ್ರ

ಟ್ರಂಪ್‌ರನ್ನು ಲೂಸರ್‌ ಎಂದು ಕರೆದಿರುವ ಬೈಡೆನ್‌, ಇರಾಕ್‌ನಲ್ಲಿರುವ ಅಮೆರಿಕ ಸೇನೆಯಲ್ಲಿ ಕರ್ತವ್ಯ ನಿರ್ಹಿಸಿ ಹುತಾತ್ಮನಾದ ತಮ್ಮ ಪುತ್ರ ಬ್ಯೂ ಬಗ್ಗೆ ಪ್ರಸ್ತಾಪಿಸಿದರು. ನನ್ನ ಪುತ್ರ ಧೀರ, ಧೈರ್ಯಶಾಲಿ. ಆದರೆ ಟ್ರಂಪ್‌ ಒಬ್ಬ ಲೂಸರ್‌, ಅಮಾಯಕರ ರಕ್ತ ಹೀರುವವರು ಎಂದು ಕಿಡಿ ಕಾರಿದರು.

ಉಕ್ರೇನ್‌ ದಾಳಿ ವಿಚಾರವನ್ನು ಮುಂದಿಟ್ಟುಕೊಂಡು ಬೈಡೆನ್‌ಗೆ ಟಾಂಗ್‌ ಕೊಟ್ಟ ಟ್ರಂಪ್‌, ನೀವು ನಿಜವಾಗಿಯೂ ಒಬ್ಬರು ಉತ್ತಮ ಅಧ್ಯಕ್ಷರಾಗಿದ್ದರೆ, ರಷ್ಯಾ ಅಧ್ಯಕ್ಷ ಪುಟಿನ್‌ ತಮ್ಮ ಬಗ್ಗೆ ಗೌರವ ಹೊಂದಿದ್ದರೆ ಉಕ್ರೇನ್‌ ಮೇಲಿನ ರಷ್ಯಾ ದಾಳಿ ನಡೆಯುತ್ತಿರಲಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಬೈಡೆನ್‌, ಟ್ರಂಪ್‌ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವೇ ಆಗುತ್ತಿಲ್ಲ ಎಂದರು.

ತಾವು ಅಧ್ಯಕ್ಷರಾಗಿದ್ದರೆ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಅನ್ನು ಎಂದಿಗೂ ಆಕ್ರಮಿಸುತ್ತಿರಲಿಲ್ಲ. ಬೈಡೆನ್‌ ಪ್ಯಾಲೆಸ್ತೀನಿಯನ್‌ ನಂತೆ ವರ್ತಿಸುತ್ತಿದ್ದಾರೆ. ಆದರೆ ಅವರು ಅವನನ್ನು ಇಷ್ಟಪಡುವುದಿಲ್ಲ ಏಕೆಂದರೆ ಅವರು ತುಂಬಾ ಕೆಟ್ಟ ಪ್ಯಾಲೆಸ್ತೇನಿಯನ್‌. ಅವರು ದುರ್ಬಲರು, ”ಎಂದು ಟ್ರಂಪ್ ಬಿಡೆನ್ ಬಗ್ಗೆ ಹೇಳಿದರು.

ಬೈಡೆನ್‌ ಅವರು ಚೀನಾದೊಂದಿಗೆ ವ್ಯವಹರಿಸಲು ಹೆದರುತ್ತಾರೆ ಏಕೆಂದರೆ ಅವರು ಅವರಿಂದ ಹಣವನ್ನು ಪಡೆಯುತ್ತಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ನಾವು ಈಗ ನಮ್ಮ ದೇಶದ ಇತಿಹಾಸದಲ್ಲಿ ಅತಿದೊಡ್ಡ ಸಮಸ್ಯೆಯನ್ನು ಹೊಂದಿದ್ದೇವೆ. ನಾವು ಚೀನಾದೊಂದಿಗೆ ಬಿಕ್ಕಟ್ಟು ಹೊಂದಿದ್ದೇವೆ. ಬೈಡೆನ್‌ ಚೀನಾದಿಂದ ಹಣ ಪಡೆಯುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

ಹಣದುಬ್ಬರವು ನಮ್ಮ ದೇಶವನ್ನು ಕೊಲ್ಲುತ್ತಿದೆ. ಇದು ನಮ್ಮನ್ನು ಸಂಪೂರ್ಣವಾಗಿ ಕೊಲ್ಲುತ್ತಿದೆ ”ಎಂದು 2017-2021 ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಟ್ರಂಪ್ ಆರೋಪಿಸಿದರೆ, “ಎಲ್ಲವೂ ಉತ್ತಮವಾಗಿದೆ.” ಟ್ರಂಪ್ ಆಡಳಿತಾವಧಿಯಲ್ಲಿ ಅಡಿಯಲ್ಲಿ ಆರ್ಥಿಕತೆಯು ಕುಸಿದಿತ್ತು ಎಂದು ಬಿಡೆನ್ ತಿರುಗೇಟು ಕೊಟ್ಟರು.

ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Continue Reading
Advertisement
Arvind Kejriwal
ಪ್ರಮುಖ ಸುದ್ದಿ8 mins ago

Arvind Kejriwal: ಅರವಿಂದ ಕೇಜ್ರಿವಾಲ್‌ ಬಿಡುಗಡೆ ಕನಸು ಭಗ್ನ; ಮತ್ತೆ 14 ದಿನ ನ್ಯಾಯಾಂಗ ಬಂಧನ

Dengue Fever
ಕರ್ನಾಟಕ19 mins ago

Dengue Fever: ರಾಯಚೂರಲ್ಲಿ 6 ವರ್ಷದ ಮಗುವಿಗೆ ಡೆಂಗ್ಯೂ; ದಾವಣಗೆರೆ ಜಿಲ್ಲೆಯಲ್ಲಿ 142 ಪ್ರಕರಣಗಳು ಪತ್ತೆ!

Arshdeep Singh
ಕ್ರೀಡೆ25 mins ago

Arshdeep Singh : ಫೈನಲ್​ ಪಂದ್ಯದಲ್ಲಿ ಅರ್ಶ್​ದೀಪ್​ ಸಿಂಗ್​ಗೆ ಇದೆ ದಾಖಲೆ ಬರೆಯುವ ಅವಕಾಶ

International Mud Day
ಫ್ಯಾಷನ್36 mins ago

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

Physical relationship
ವಿದೇಶ54 mins ago

Physical relationship: ಕೈದಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ ಮಹಿಳಾ ಜೈಲಾಧಿಕಾರಿ ಬಗ್ಗೆ ಶಾಕಿಂಗ್‌ ವಿಚಾರ ಬಯಲು

Actor Darshan does not need counseling says by shamitha malnad
ಸ್ಯಾಂಡಲ್ ವುಡ್59 mins ago

Actor Darshan: ದಚ್ಚು ಪರಿಸ್ಥಿತಿಗೆ ಪವಿತ್ರಾ ಕಾರಣ ಅನ್ನೋಕಾಗಲ್ಲ; ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ ಎಂದ ಖ್ಯಾತ ಗಾಯಕಿ!

IND vs SA Final
ಕ್ರೀಡೆ1 hour ago

IND vs SA Final: ರಾಮನಾಮ ಸ್ಮರಣೆ ಮಾಡಿ ಭಾರತ ವಿರುದ್ಧ ಫೈನಲ್​ ಆಡಲಿದ್ದಾರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

karnataka weather Forecast
ಮಳೆ1 hour ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

Road Accident
ಕರ್ನಾಟಕ1 hour ago

Road Accident: ಮುಧೋಳ ಬಳಿ ಶಾಲಾ ಬಸ್‌ ಹರಿದು 4 ವರ್ಷದ ಬಾಲಕ ಸಾವು

T20 World Cup Final
ಪ್ರಮುಖ ಸುದ್ದಿ1 hour ago

T20 World Cup Final : ಭಾರತ ತಂಡದ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 hour ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ7 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ24 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌