Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌! - Vistara News

Latest

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Viral Video: ಆನ್‌ಲೈನ್‌ ಮೂಲಕ ಫುಡ್ ತರಿಸಿಕೊಂಡು ತಿನ್ನುವುದು ಈಗ ಸರ್ವೆಸಾಮಾನ್ಯವಾಗಿ ಬಿಟ್ಟಿದೆ. ಫುಡ್ ಡೆಲಿವರಿ ಬಾಯ್ ಮಾಡಿದ ದುಷ್ಕೃತ್ಯದ ವಿಡಿಯೊವೊಂದು ಈಗ ಎಲ್ಲೆಡೆ ವೈರಲ್ ಆಗಿದೆ. ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಅನ್ನು ಮನೆಗೆ ತಲುಪಿಸಲು ಮನೆಯ ಬಾಗಿಲಿಗೆ ಬಂದಿದ್ದಾನೆ. ನಂತರ ಆತ ಆರ್ಡರ್ ನೀಡಿ ಮರಳುವಾಗ ಮನೆಯ ಬಾಗಿಲಿ ಬಳಿ ಇದ್ದ ಆಹಾರದ ಪ್ಯಾಕೆಟ್ ಒಂದನ್ನು ಗಮನಿಸಿದ್ದಾನೆ. ಮನೆಯವರು ಒಳಗೆ ಹೋದ ತಕ್ಷಣ ಅದನ್ನು ಎತ್ತಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಯಾವುದೇ ಆನ್‌ಲೈನ್ ಆ್ಯಪ್‌ಗಳಲ್ಲಿ ನೀವು ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿದರೂ ಅದನ್ನು ಅವರು ಮನೆ ಬಾಗಿಲಿಗೆ ತಂದು ನೀಡುತ್ತಾರೆ ನಿಜ. ಆದರೆ ಕೆಲವೊಮ್ಮೆ ಡೆಲಿವರಿ ಬಾಯ್ಸ್ ನಿಂದ ಕೆಲವು ದುರ್ಘಟನೆಗಳು ನಡೆಯುತ್ತಿರುವುದನ್ನು ನೀವು ಕೇಳಿರಬಹುದು. ಹಾಗಾಗಿ ಡೆಲಿವರಿ ಬಾಯ್ಸ್ ಬಗ್ಗೆ ಎಚ್ಚರಿಕೆಯಿಂದಿರಿ. ಯಾಕೆಂದರೆ ಅಂತಹದೊಂದು ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಜೊಮ್ಯಾಟೊ ಡೆಲಿವರಿ ಬಾಯ್ ಮಾಡಿದ ಕಳ್ಳತನದ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಜೂನ್ 25ರಂದು ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಅನ್ನು ಮನೆಗೆ ತಲುಪಿಸಲು ಮನೆಯ ಬಾಗಿಲಿಗೆ ಬಂದಿದ್ದಾನೆ. ನಂತರ ಆತ ಆರ್ಡರ್ ನೀಡಿ ಮರಳುವಾಗ ಮನೆಯ ಬಾಗಿಲಿ ಬಳಿ ಇದ್ದ ಆಹಾರದ ಪ್ಯಾಕೆಟ್ ಒಂದನ್ನು ಗಮನಿಸಿದ್ದಾನೆ. ಮನೆಯವರು ಒಳಗೆ ಹೋದ ತಕ್ಷಣ ಅದನ್ನು ಎತ್ತಿಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪತ್ರಕರ್ತ ಆದಿತ್ಯ ಕಾಲ್ರಾ ಎಂಬುವವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಜೊಮ್ಯಾಟೊ ಕೇರ್ ಈ ಬಗ್ಗೆ ಕ್ಷಮೆ ಯಾಚಿಸಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. “ಇದು ಸಂಭವಿಸಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಅಂತಹ ವಿಷಯಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಮತ್ತು ಅಂತಹ ಘಟನೆಗಳಿಗೆ ಕಾರಣವಾದವರ ವಿರುದ್ಧ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜೊಮ್ಯಾಟೊ ಕೇರ್ ಭರವಸೆ ನೀಡಿದ್ದಾರೆ. ಹಾಗೇ ಇದಕ್ಕೆ ಸಂಬಂಧಪಟ್ಟ ವಿವರಗಳನ್ನು ಕಳುಹಿಸಿ, ಇದರಿಂದ ನಾವು ತ್ವರಿತವಾಗಿ ತನಿಖೆ ಮಾಡಬಹುದು ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

Viral Video

ಜೊಮ್ಯಾಟೊ ಡೆಲಿವರಿ ಬಾಯ್ಸ್ ನ ಕಳ್ಳತನದ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮೊದಲು ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಗ್ರಾಹಕರು ಆರ್ಡರ್ ಮಾಡಿದ ಬಾಕ್ಸ್ ನಿಂದ ಫುಡ್ ತೆಗೆದು ತಿಂದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಜೊಮ್ಯಾಟೊ ಆಹಾರ ಸುರಕ್ಷತಾ ಕಾರ್ಯವಿಧಾನಗಳ ಬಗ್ಗೆ ಜನರಿಗೆ ಕಳವಳ ಉಂಟಾಗಿತ್ತು. ಹಾಗಾಗಿ ಜೊಮ್ಯಾಟೊದಿಂದ ವಸ್ತುಗಳನ್ನು ಆರ್ಡರ್ ಮಾಡುವಾಗ ಗ್ರಾಹಕರು ಬಹಳ ಎಚ್ಚರಿಕೆ ಇರುವುದು ಉತ್ತಮ. ಇಲ್ಲವಾದರೆ ಇದರಿಂದ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

VISTARANEWS.COM


on

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಜಂಟಿಯಾಗಿ ಮೇ 16ರಂದು ನಗರದಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಿವೆ.
“ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ ಸಮ್ಮಿಟ್ ನಡೆಯಲಿದೆ ಎಂದು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಇಂದು ಭಾರತದ ತಂತ್ರಜ್ಞಾನ ಮಹತ್ವಾಕಾಂಕ್ಷೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ದೇಶದ ಪ್ರಮುಖ ಜಿಡಿಪಿ ಕೊಡುಗೆ ನೀಡುವ ನಗರಗಳಲ್ಲಿ ಬೆಂಗಳೂರು ಒಂದಾಗಿದೆ, ವೆಂಚರ್ ಕ್ಯಾಪಿಟಲ್ ಹೂಡಿಕೆಗಳ ಪ್ರಮುಖ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಸ್ಟಾರ್ಟ್‌ಅಪ್‌ಗಳ ನಿಧಿ ಸಂಗ್ರಹ ಹಾಗೂ ನವೀನ ಚಟುವಟಿಕೆಗಳಲ್ಲಿ ಮಹತ್ತರ ಪಾತ್ರವಹಿಸಿದ್ದು, ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವದ ಅತಿ ದೊಡ್ಡ ಪ್ರತಿಭಾ ಸಂಪನ್ಮೂಲಗಳಲ್ಲಿ ಒಂದನ್ನು ಹೊಂದಿರುವುದರಿಂದ ಬೆಂಗಳೂರು “ಪೂರ್ವದ ಸಿಲಿಕಾನ್ ವ್ಯಾಲಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ವಲಯ ಮತ್ತು ತಾಂತ್ರಿಕ ಕಂಪನಿಗಳ ಮೂಲಕ ಏರೋಸ್ಪೇಸ್, ರಕ್ಷಣಾ ಹಾಗೂ ಮೂಲ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕ ಬಲವಾದ ನೆಲೆ ನಿರ್ಮಿಸಿತು. ಬಳಿಕ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಮತ್ತು ವಿಪ್ರೋ ಮುಂತಾದ ಐಟಿ ದಿಗ್ಗಜಗಳ ಉದಯದೊಂದಿಗೆ ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ ಭಾರತ ಡೀಪ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ವೈಜ್ಞಾನಿಕ ನವೀನತೆಯ ಹಂತಕ್ಕೆ ಸಾಗುತ್ತಿದೆ. ಈ ಹಂತದಲ್ಲಿ ಅಕಾಡೆಮಿಯಾ, ಕೈಗಾರಿಕೆ ಮತ್ತು ಸರ್ಕಾರಗಳ ನಡುವಿನ ಗಟ್ಟಿಯಾದ ಸಹಕಾರ ಅತ್ಯಾವಶ್ಯ. ತಂತ್ರಜ್ಞಾನ ಸ್ವಾಯತ್ತತೆ ಸಾಧಿಸಲು ಇದು ಪ್ರಮುಖ ಹಂತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ರೂಪುಗೊಂಡಿದೆ ಎಂದು ತಿಳಿಸಿದರು.
ಪ್ಯಾನ್ ಐಐಟಿ ಅಧ್ಯಕ್ಷರಾದ ಶ್ರೀ ಪ್ರಭಾತ್ ಕುಮಾರ್ (ಐ.ಆರ್.ಎಸ್) ಅವರು ಮಾತನಾಡಿ, ಸಮ್ಮಿಟ್‌ನಲ್ಲಿ ಉನ್ನತ ಮಟ್ಟದ ಪ್ಲೀನರಿ ಸೆಷನ್‌ಗಳು, ಆಳವಾದ ಪ್ಯಾನೆಲ್ ಚರ್ಚೆಗಳು ಹಾಗೂ ಎಐ, ರಕ್ಷಣಾ, ಸೆಮಿಕಂಡಕ್ಟರ್, ಇಂಧನ, ಮೊಬೈಲಿಟಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮಾಂತರ ಚರ್ಚೆಗಳು ನಡೆಯಲಿವೆ ಎಂದರು.
23 ಐಐಟಿಗಳ 5 ಲಕ್ಷಕ್ಕೂ ಹೆಚ್ಚು ಅಲ್ಯೂಮ್ನಿಗಳ ಸಂಯುಕ್ತ ಚಿಂತನೆಯ ಫಲವಾಗಿರುವ ಈ ಸಮ್ಮಿಟ್, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವ್ಯವಹಾರ ಮತ್ತು ನೀತಿ ರೂಪಣೆಯಲ್ಲಿ ಸಕ್ರಿಯ ಸಮುದಾಯವನ್ನು ಒಂದೇ ವೇದಿಕೆಗೆ ತರಲಿದೆ. ನವೀನತೆ, ಉದ್ಯಮಶೀಲತೆ ಮತ್ತು ರಾಷ್ಟ್ರ ನಿರ್ಮಾಣದ ಮುಂದಿನ ಹಂತವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

Continue Reading

ಕರ್ನಾಟಕ

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

VISTARANEWS.COM


on

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ಈಗ ಹೊಸ ತಿರುವು ಪಡೆದಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸತತವಾಗಿ ದೆಹಲಿಗೆ ಪ್ರವಾಸ ಕೈಗೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. “ಹೈಕಮಾಂಡ್ ಏನು ತೀರ್ಮಾನ ಮಾಡಿದೆಯೋ, ಅದು ಸಮಯ ಬಂದಾಗ ಜಾರಿಗೆ ಬರಲಿದೆ” ಎಂದು ಡಿಕೆಶಿ ನೀಡಿರುವ ಮಾರ್ಮಿಕ ಹೇಳಿಕೆಯು, ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಚುರುಕಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅವರು ನಡೆಸಿದ ಸುದೀರ್ಘ ಮಾತುಕತೆ ಈ ಗುಮಾನಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಇನ್ನೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದೊಳಗೆ ‘ಗೊಂದಲ’ ಇರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. “ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ” ಎಂದು ಅವರು ಹೇಳಿದ್ದರೂ, ಪಕ್ಷದ ಒಳಗಿನ ಆಂತರಿಕ ಅಸಮಾಧಾನ ಮತ್ತು ಗೊಂದಲಗಳ ಬಗ್ಗೆ ಅವರು ನೀಡಿರುವ ಸುಳಿವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆಯಂತೆ ಕಾಣುತ್ತಿದೆ. ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣದ ನಡುವಿನ ಈ ಹಗ್ಗಜಗ್ಗಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪಿದಂತೆ ಭಾಸವಾಗುತ್ತಿದೆ.

ಮೇ 4 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಆ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಡಿಕೆಶಿ ಬಣವು ಹಳೆಯ ವಾಗ್ದಾನಗಳನ್ನು ಈಡೇರಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೆ, ಸಿದ್ದರಾಮಯ್ಯ ಬಣವು ತನ್ನದೇ ಆದ ರಕ್ಷಣಾತ್ಮಕ ತಂತ್ರಗಳನ್ನು ಹೆಣೆಯುತ್ತಿದೆ. ಒಟ್ಟಿನಲ್ಲಿ, ಮೇ 15 ರ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಸುಮಾರಿಗೆ ಕಾಂಗ್ರೆಸ್ ಪಾಳಯದಲ್ಲಿ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದ್ದು, ಅಲ್ಲಿಯವರೆಗೆ ಈ ಕುತೂಹಲ ಮುಂದುವರಿಯಲಿದೆ.

Continue Reading

Latest

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

VISTARANEWS.COM


on

ಅಮೆರಿಕವು ಇತ್ತೀಚೆಗಷ್ಟೇ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇರಾನ್ ಜಾಗತಿಕ ಸಂಘರ್ಷ ಶಮನಕ್ಕೆ ಹೊಸ ತಂತ್ರ ಹೂಡಿದೆ. ಪಾಕಿಸ್ತಾನದ ಸಂಧಾನಕಾರರ ಮೂಲಕ ವಾಷಿಂಗ್ಟನ್‌ಗೆ ಹೊಸ ಶಾಂತಿ ಪ್ರಸ್ತಾವನೆಯನ್ನು ರವಾನಿಸಿರುವ ಟೆಹ್ರಾನ್, ವಿಶ್ವದ ಅತ್ಯಂತ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ತಾವು ಸಿದ್ಧ ಎಂಬ ಆಶಯ ವ್ಯಕ್ತಪಡಿಸಿದೆ. ಪ್ರಸ್ತುತ ನಡೆಯುತ್ತಿರುವ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಅತ್ಯಂತ ವಿವಾದಾತ್ಮಕವಾಗಿರುವ ಪರಮಾಣು ಕಾರ್ಯಕ್ರಮದ ಚರ್ಚೆಯನ್ನು ಸದ್ಯಕ್ಕೆ ಬದಿಗಿಟ್ಟು, ಮೊದಲು ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳ ಬಗ್ಗೆ ಮಾತುಕತೆ ನಡೆಸೋಣ ಎಂಬ ಪ್ರಸ್ತಾಪವನ್ನು ಇರಾನ್ ಮುಂದಿಟ್ಟಿದೆ.

ಇರಾನ್ ವಿಧಿಸಿರುವ ಈ ಹೊಸ ಷರತ್ತುಗಳ ಪ್ರಕಾರ, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕಾದರೆ ಅಮೆರಿಕವು ಮೊದಲು ಇರಾನ್ ಬಂದರುಗಳ ಮೇಲೆ ಹೇರಿರುವ ನೌಕಾ ದಿಗ್ಬಂಧನವನ್ನು (Naval Blockade) ಹಿಂಪಡೆಯಬೇಕು. ಅಲ್ಲದೆ, ತನ್ನ ಮೇಲೆ ಹೇರಲಾಗಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಿ, ಜಪ್ತಿ ಮಾಡಲಾಗಿರುವ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಬೇಕೆಂದು ಟೆಹ್ರಾನ್ ಒತ್ತಾಯಿಸಿದೆ. ಸದ್ಯಕ್ಕೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತ, ಚೀನಾ ಮತ್ತು ರಷ್ಯಾದಂತಹ ಸ್ನೇಹಿ ರಾಷ್ಟ್ರಗಳ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದು, ಇತರ ರಾಷ್ಟ್ರಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಇರಾನ್‌ನ ಈ ಷರತ್ತುಬದ್ಧ ಆಫರ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಉನ್ನತ ಮಟ್ಟದ ಭದ್ರತಾ ಸಭೆಯನ್ನು ಕರೆದಿದ್ದಾರೆ. ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೇರದೆ ಅಮೆರಿಕ ಯಾವುದೇ ಶಾಶ್ವತ ಒಪ್ಪಂದಕ್ಕೆ ಸಹಿ ಹಾಕುವುದು ಅನುಮಾನ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಜಾಗತಿಕ ತೈಲ ಮಾರುಕಟ್ಟೆ ಮತ್ತು ಇಂಧನ ಬೆಲೆಗಳ ದೃಷ್ಟಿಯಿಂದ ಈ ಸಂಧಾನ ಪ್ರಕ್ರಿಯೆಯು ಅತ್ಯಂತ ಮಹತ್ವ ಪಡೆದಿದ್ದು, ಟ್ರಂಪ್ ಸರ್ಕಾರದ ಮುಂದಿನ ನಡೆ ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

Continue Reading

Latest

ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ RCB! ಹೇಗಿರಲಿದೆ ಹೈವೋಲ್ಟೇಜ್‌ ಮ್ಯಾಚ್‌?

VISTARANEWS.COM


on

ಇಂದು (ಏಪ್ರಿಲ್ 27) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ಮುಖಾಮುಖಿಯಾಗಲಿವೆ. ಏಪ್ರಿಲ್ 19 ರಂದು ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾಲಿ ಚಾಂಪಿಯನ್ ಆರ್‌ಸಿಬಿ ಸರ್ವಸನ್ನದ್ಧವಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿ ಭರ್ಜರಿ ಫಾರ್ಮ್‌ನಲ್ಲಿದೆ. ಆದರೆ, ಫಿಲ್ ಸಾಲ್ಟ್ ಅವರ ಗಾಯದ ಸಮಸ್ಯೆ ತಂಡಕ್ಕೆ ಸಣ್ಣ ತಲೆನೋವು ತಂದಿದ್ದು, ಅವರ ಸ್ಥಾನದಲ್ಲಿ ಜಾಕೋಬ್ ಬೆಥೆಲ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ತೀವ್ರ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 264 ರನ್ ಗಳಿಸಿದ್ದರೂ ಸಹ, ಟಿ20 ಇತಿಹಾಸದ ದಾಖಲೆಯ ರನ್ ಚೇಸ್‌ಗೆ ಬಲಿಯಾಗಿ ಸೋಲೊಪ್ಪಿಕೊಂಡಿತ್ತು. ಕೆ.ಎಲ್ ರಾಹುಲ್ ಅವರ ಅಮೋಘ 152 ರನ್‌ಗಳ ಇನಿಂಗ್ಸ್ ಕೂಡ ತಂಡಕ್ಕೆ ಜಯ ತಂದುಕೊಡಲಿಲ್ಲ. ಸದ್ಯ ಏಳು ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡಕ್ಕೆ, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಲುಂಗಿ ಎನ್‌ಗಿಡಿ ಅವರ ಅನುಪಸ್ಥಿತಿ ಡೆಲ್ಲಿಯ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗುವ ಭೀತಿ ಎದುರಾಗಿದೆ.

ಇತಿಹಾಸದ ಅಂಕಿಅಂಶಗಳನ್ನು ಗಮನಿಸಿದರೆ ಆರ್‌ಸಿಬಿ ತಂಡವು ಡೆಲ್ಲಿ ವಿರುದ್ಧ ಸ್ಪಷ್ಟ ಪ್ರಾಬಲ್ಯ ಹೊಂದಿದೆ. ಈವರೆಗೆ ನಡೆದ 34 ಮುಖಾಮುಖಿಗಳಲ್ಲಿ ಆರ್‌ಸಿಬಿ 20 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ 13 ರಲ್ಲಿ ಮಾತ್ರ ಜಯ ಸಾಧಿಸಿದೆ. ದೆಹಲಿಯ ಮೈದಾನದಲ್ಲೂ ಆಡಿದ 11 ಪಂದ್ಯಗಳಲ್ಲಿ 7 ಬಾರಿ ಬೆಂಗಳೂರು ಜಯಭೇರಿ ಬಾರಿಸಿದೆ. ಇಂದಿನ ಪಂದ್ಯವು ಸಂಜೆ 7:30ಕ್ಕೆ ಆರಂಭವಾಗಲಿದ್ದು, ಗೆಲುವಿನ ಲಯದಲ್ಲಿರುವ ರಜತ್ ಪಾಟಿದಾರ್ ಸೈನ್ಯವು ಹತಾಶ ಸ್ಥಿತಿಯಲ್ಲಿರುವ ಡೆಲ್ಲಿಯನ್ನು ಅವರದ್ದೇ ತವರಿನಲ್ಲಿ ಮಣಿಸಿ ಸೇಡು ತೀರಿಸಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.

Continue Reading
Advertisement
Latest1 hour ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ2 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest3 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

Latest3 hours ago

ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ RCB! ಹೇಗಿರಲಿದೆ ಹೈವೋಲ್ಟೇಜ್‌ ಮ್ಯಾಚ್‌?

Latest19 hours ago

ಮೇ 15ಕ್ಕೆ ಸಿಗುತ್ತಾ ಗುಡ್​ ನ್ಯೂಸ್?​ ಸಂಭ್ರಮಾಚರಣೆ ಬೇಡವೆಂದು ಬೆಂಬಲಿಗರಿಗೆ ಖಡಕ್​ ಸೂಚನೆ! ಡಿ ಕೆ ಬ್ರದರ್ಸ್‌ ಪ್ಲ್ಯಾನ್‌ಗೆ ಟಕ್ಕರ್‌ ಕೊಡ್ತಾರಾ ಸಿಎಂ

Latest20 hours ago

ಮುಂದೆ ಕಾದಿದೆ ಘೋರ ವಿಪತ್ತು: ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ! ಕೋಡಿ ಶ್ರೀಗಳ ಭಯಾನಕ ಭವಿಷ್ಯಕ್ಕೆ ನಡುಗಿದ ನಾಡು

Latest20 hours ago

ಮುಂದಿನ ಪಂದ್ಯದಿಂದ ‘ಯಂಗ್ ಸೆನ್ಸೇಷನ್’ ಔಟ್? ವೈಭವ್ ಸೂರ್ಯವಂಶಿ ಬಗ್ಗೆ ಕೋಚ್ ಕೊಟ್ಟ ಅಪ್ಡೇಟ್ ಏನು?

Latest21 hours ago

ಅಧ್ಯಕ್ಷ ಹುದ್ದೆ ಇಷ್ಟು ಡೇಂಜರ್ ಅಂತ ಗೊತ್ತಿರಲಿಲ್ಲ!”: ಗುಂಡಿನ ದಾಳಿಯಿಂದ ಬಚಾವಾದ ಬೆನ್ನಲ್ಲೇ ಟ್ರಂಪ್ ವ್ಯಂಗ್ಯ

Latest22 hours ago

ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೊಸ ಬಲ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ

Latest22 hours ago

‘ಟಾಕ್ಸಿಕ್’ ಬೋಲ್ಡ್ ದೃಶ್ಯದ ವಿವಾದಕ್ಕೆ ರಾಕಿಂಗ್ ಸ್ಟಾರ್ ಖಡಕ್ ರಿಯಾಕ್ಷನ್: ಟೀಕಾಕಾರರಿಗೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟ ಯಶ್

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌