ಬದುಕು ಸುಂದರವಾಗಿರಲು ಮದುವೆ-ಮಕ್ಕಳೇ ಬೇಕಿಲ್ಲ! ವೈಯಕ್ತಿಕ ಜೀವನದ ಬಗ್ಗೆ ನಿತ್ಯಾ ಮೆನನ್ ಹಂಚಿಕೊಂಡ ಮನದಾಳದ ಮಾತು - Vistara News

Latest

ಬದುಕು ಸುಂದರವಾಗಿರಲು ಮದುವೆ-ಮಕ್ಕಳೇ ಬೇಕಿಲ್ಲ! ವೈಯಕ್ತಿಕ ಜೀವನದ ಬಗ್ಗೆ ನಿತ್ಯಾ ಮೆನನ್ ಹಂಚಿಕೊಂಡ ಮನದಾಳದ ಮಾತು

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ದಕ್ಷಿಣ ಭಾರತದ ಪ್ರತಿಭಾವಂತ ನಟಿ ನಿತ್ಯಾ ಮೆನನ್ ತಮ್ಮ ನೇರ ನುಡಿ ಹಾಗೂ ವೈಚಾರಿಕ ನಿಲುವುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕನ್ನಡ ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೆ ಐವಿಎಫ್ (IVF) ಮೂಲಕ ಮಗು ಪಡೆದ ವಿಷಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ, ಮದುವೆ ಮತ್ತು ಮಾತೃತ್ವದ ಕುರಿತು ನಿತ್ಯಾ ಮೆನನ್ ಈ ಹಿಂದೆ ನೀಡಿದ್ದ ಹೇಳಿಕೆಗಳು ಮತ್ತೆ ಮುನ್ನಲೆಗೆ ಬಂದಿದ್ದು, ಭಾರೀ ವೈರಲ್ ಆಗುತ್ತಿವೆ. ಮದುವೆಯಾಗದೆಯೇ ಮಕ್ಕಳನ್ನು ಹೊಂದುವ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುವ ಮೂಲಕ ಅವರು ಆಧುನಿಕ ಬದುಕಿನ ಆಯ್ಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ತಮಿಳಿನ ‘ಕಾದಲಿಕ್ಕಾ ನೇರಮಿಲ್ಲೈ’ ಸಿನಿಮಾದ ಪ್ರಚಾರದ ವೇಳೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. “ಮದುವೆಗಿಂತ ಮೊದಲು ಅಥವಾ ನಂತರ ಗರ್ಭಿಣಿಯಾಗುವುದು ಎನ್ನುವುದಕ್ಕಿಂತ, ಮದುವೆಯೇ ಇಲ್ಲದೆ ಗರ್ಭಿಣಿಯಾಗುವುದು ಅಥವಾ ಮಗು ಪಡೆಯುವುದರಲ್ಲಿ ತಪ್ಪೇನಿಲ್ಲ” ಎಂಬುದು ನಿತ್ಯಾ ಅವರ ಅಭಿಪ್ರಾಯ. ಒಬ್ಬ ಹೆಣ್ಣಿಗೆ ಮಗು ಬೇಕು ಎನಿಸಿದರೆ, ಆದರೆ ಮದುವೆಯ ಬಂಧನ ಇಷ್ಟವಿಲ್ಲದಿದ್ದರೆ ಅವಳು ಮಗು ಪಡೆಯುವ ನಿರ್ಧಾರ ಮಾಡಬಹುದು. ಇದಕ್ಕೆ ಈಗ ವೈದ್ಯಕೀಯವಾಗಿ ಸಾಕಷ್ಟು ಅವಕಾಶಗಳಿವೆ ಮತ್ತು ಹಲವರು ಇದನ್ನು ಯಶಸ್ವಿಯಾಗಿ ಅನುಸರಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಕೇವಲ ಮಕ್ಕಳ ಬಗ್ಗೆ ಮಾತ್ರವಲ್ಲದೆ, ಮದುವೆಯಾದ ನಂತರ ಮಕ್ಕಳಿಲ್ಲದ ದಂಪತಿಗಳ ಬಗ್ಗೆಯೂ ನಿತ್ಯಾ ಮೆನನ್ ಸಂವೇದನಾಶೀಲವಾಗಿ ಮಾತನಾಡಿದ್ದಾರೆ. “ಮದುವೆಯಾದ ಮೇಲೆ ಮಕ್ಕಳಾಗಲೇಬೇಕು ಎಂಬ ಹಠ ಬೇಡ, ಮಕ್ಕಳಿಲ್ಲದಿದ್ದರೂ ಬದುಕು ಸುಂದರವಾಗಿರಲು ಸಾಧ್ಯವಿದೆ” ಎಂಬುದು ಅವರ ನಿಲುವು. ಸಮಾಜದ ಅಲಿಖಿತ ನಿಯಮಗಳನ್ನು ಪ್ರಶ್ನಿಸಿರುವ ಅವರು, ಪ್ರತಿಯೊಬ್ಬರಿಗೂ ತಮ್ಮ ಜೀವನದ ಬಗ್ಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಒತ್ತಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಈ ‘ಬೋಲ್ಡ್’ ಹೇಳಿಕೆಗಳು ಈಗ ಯುವಜನತೆಯ ಮೆಚ್ಚುಗೆಗೆ ಪಾತ್ರವಾಗುತ್ತಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

‘ಟಾಕ್ಸಿಕ್’ ಬೋಲ್ಡ್ ದೃಶ್ಯದ ವಿವಾದಕ್ಕೆ ರಾಕಿಂಗ್ ಸ್ಟಾರ್ ಖಡಕ್ ರಿಯಾಕ್ಷನ್: ಟೀಕಾಕಾರರಿಗೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟ ಯಶ್

VISTARANEWS.COM


on

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್‌ನಲ್ಲಿನ ಕೆಲವು ಬೋಲ್ಡ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹಾಗೂ ಆಕ್ಷೇಪಗಳಿಗೆ ಕಾರಣವಾಗಿದ್ದವು. ಈ ವಿವಾದದ ಕುರಿತು ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ‘ಸಿನೆಮಾಕಾನ್ 2026’ ಮೇಳದಲ್ಲಿ ಮಾತನಾಡಿದ ಯಶ್, ಟೀಕಾಕಾರರಿಗೆ ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಪಾತ್ರವಾದ ‘ರಾಯಾ’ನ ಡಾರ್ಕ್ ಶೇಡ್ ಮತ್ತು ಸ್ಮಶಾನದ ಎದುರಿನ ದೃಶ್ಯಗಳ ಬಗ್ಗೆ ಎದ್ದಿದ್ದ ಪರ-ವಿರೋಧದ ಮಾತುಗಳಿಗೆ ಅವರು ಈಗ ಫುಲ್ ಸ್ಟಾಪ್ ಇಟ್ಟಿದ್ದಾರೆ.

ವಿವಾದಾತ್ಮಕ ದೃಶ್ಯಗಳನ್ನು ಸಮರ್ಥಿಸಿಕೊಂಡ ಯಶ್, ಆಕ್ಷನ್ ಸಿನಿಮಾಗಳನ್ನು ಕೇವಲ ಪುರುಷ ನಿರ್ದೇಶಕರ ದೃಷ್ಟಿಕೋನದಿಂದ ನೋಡಿ ನಮಗೆ ಅಭ್ಯಾಸವಾಗಿದೆ, ಆದರೆ ಒಬ್ಬ ಮಹಿಳಾ ನಿರ್ದೇಶಕಿ (ಗೀತು ಮೋಹನ್‌ದಾಸ್) ಆಕ್ಷನ್ ಚಿತ್ರವನ್ನು ಕಟ್ಟಿಕೊಡುತ್ತಿರುವ ರೀತಿ ತುಂಬಾ ಹೊಸತನದಿಂದ ಕೂಡಿದೆ ಎಂದಿದ್ದಾರೆ. ಕಥೆಯಲ್ಲಿ ಹೆಣ್ಣಿನ ದೃಷ್ಟಿಕೋನದಿಂದ ಭಾವನೆಗಳನ್ನು ಮತ್ತು ಬಯಕೆಗಳನ್ನು ಹೇಗೆ ಆಳವಾಗಿ ತೋರಿಸಬಹುದು ಎಂಬ ಹೊಸ ಪ್ರಯತ್ನವನ್ನು ಈ ಸಿನಿಮಾ ಮಾಡಿದೆ ಎಂದು ಅವರು ವಿವರಿಸಿದ್ದಾರೆ.

ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ರಾಕಿಂಗ್ ಸ್ಟಾರ್, ಈ ಚಿತ್ರವು ಈವರೆಗಿನ ಆಕ್ಷನ್ ಸಿನಿಮಾಗಳಿಗಿಂತ ಬಹಳ ವಿಭಿನ್ನವಾಗಿರಲಿದೆ ಎಂದು ಭರವಸೆ ನೀಡಿದ್ದಾರೆ. ಕಥೆಯ ಬೇಡಿಕೆಗೆ ತಕ್ಕಂತೆ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆಯೇ ಹೊರತು ಅನಗತ್ಯವಾಗಿ ಅಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ.

Continue Reading

Latest

ಆರ್‌ಸಿಬಿ ಪ್ಲೇಯಿಂಗ್ 11 ಅಪ್‌ಡೇಟ್: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್?

VISTARANEWS.COM


on

ನವದೆಹಲಿ: ಐಪಿಎಲ್ 2026ರ ಮೊದಲಾರ್ಧದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗ ಮತ್ತೊಂದು ಮಹತ್ವದ ಸವಾಲಿಗೆ ಸಜ್ಜಾಗಿದೆ. ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ 10 ಅಂಕಗಳನ್ನು ಗಳಿಸಿರುವ ಆರ್‌ಸಿಬಿ, ನಾಳೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಎದುರಿಸಲಿದೆ. ಆದರೆ, ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ತಂಡದ ಇಬ್ಬರು ಪ್ರಮುಖ ಆಟಗಾರರು ಅಲಭ್ಯರಾಗುವ ಸಾಧ್ಯತೆ ಇರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರು ಅಭ್ಯಾಸದ ವೇಳೆ ಉಂಟಾದ ಗಾಯದ ಸಮಸ್ಯೆಯಿಂದಾಗಿ ಕಳೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದಲೂ ಹೊರಗುಳಿದಿದ್ದರು. ಈಗ ಅವರ ಗಾಯದ ಸಮಸ್ಯೆ ಇನ್ನೂ ಪೂರ್ಣವಾಗಿ ವಾಸಿಯಾಗದ ಕಾರಣ, ಅವರು ಡೆಲ್ಲಿ ವಿರುದ್ಧದ ಪಂದ್ಯವನ್ನೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಇವರ ಜೊತೆಗೆ ಯುವ ವೇಗಿ ರಾಸಿಖ್ ಸಲಾಂ ದಾರ್ ಕಳೆದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ (Muscle Cramp) ಒಳಗಾಗಿ ಮೈದಾನ ತೊರೆದಿದ್ದರು. ಫಿಟ್ನೆಸ್ ಸಮಸ್ಯೆಯ ಕಾರಣ ರಾಸಿಖ್ ಕೂಡ ನಾಳೆಯ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಈ ಇಬ್ಬರು ಆಟಗಾರರ ಅನುಪಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇಯಿಂಗ್ 11 ನಲ್ಲಿ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಫಿಲ್ ಸಾಲ್ಟ್ ಬದಲಿಗೆ ಮತ್ತೊಬ್ಬ ಸ್ಫೋಟಕ ಆಟಗಾರ ಜೇಕಬ್ ಬೆಥೆಲ್ ಅವರು ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರಾಸಿಖ್ ಸಲಾಂ ಬದಲಿಗೆ ಬಲಗೈ ವೇಗಿ ಅಭಿನಂದನ್ ಸಿಂಗ್ ಅವರಿಗೆ ಚಾನ್ಸ್ ಸಿಗುವ ನಿರೀಕ್ಷೆಯಿದೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು ಈ ಬದಲಾವಣೆಗಳೊಂದಿಗೆ ದೆಹಲಿ ನೆಲದಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಲು ಹರಸಾಹಸ ಪಡಬೇಕಿದೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11:
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಜೇಕಬ್ ಬೆಥೆಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೋಶ್ ಹೇಝಲ್‌ವುಡ್, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್/ಸುಯಶ್ ಶರ್ಮಾ.

Continue Reading

Latest

ಬಿಗಿ ಭದ್ರತೆಯ ನಡುವೆಯೂ ಟ್ರಂಪ್ ಪಾರ್ಟಿಗೆ ಅತಿಥಿಯಂತೆ ಬಂದಿದ್ದ ದಾಳಿಕೋರ! ಸೀಕ್ರೆಟ್ ಸರ್ವಿಸ್ ಕಣ್ಣು ತಪ್ಪಿಸಿದ್ದು ಹೇಗೆ?

VISTARANEWS.COM


on

ವಾಷಿಂಗ್ಟನ್‌: ಶ್ವೇತಭವನದ ವರದಿಗಾರರ ಔತಣಕೂಟದಲ್ಲಿ (White House Correspondents’ Dinner) ನಡೆದ ಗುಂಡಿನ ದಾಳಿಯ ತನಿಖೆಯಲ್ಲಿ ದಿಗಿಲುಗೊಳಿಸುವ ಮಾಹಿತಿಗಳು ಹೊರಬಂದಿವೆ. ಭದ್ರತಾ ಪಡೆಗಳಿಂದ ಬಂಧಿಸಲ್ಪಟ್ಟ ದಾಳಿಕೋರ, 31 ವರ್ಷದ ಕೋಲ್ ಅಲೆನ್ ಒಬ್ಬ ಸಾಮಾನ್ಯ ಅತಿಥಿಯಂತೆ ಹೋಟೆಲ್ ಪ್ರವೇಶಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕ್ಯಾಲಿಫೋರ್ನಿಯಾ ಮೂಲದ ಈತ ವೃತ್ತಿಯಲ್ಲಿ ಶಿಕ್ಷಕ ಮತ್ತು ವಿಡಿಯೋ ಗೇಮ್ ಡೆವಲಪರ್ ಆಗಿದ್ದು, ನಾಸಾದಲ್ಲಿ ಇಂಟರ್ನ್‌ಶಿಪ್ ಮಾಡಿದ ಹಾಗೂ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಪಡೆದ ಉನ್ನತ ಶಿಕ್ಷಣವಂತ ಎಂಬುದು ಭದ್ರತಾ ಸಂಸ್ಥೆಗಳಿಗೆ ದೊಡ್ಡ ಶಾಕ್ ನೀಡಿದೆ. ಈತ ಡೆಮೋಕ್ರಾಟ್ ಬೆಂಬಲಿಗನಾಗಿದ್ದು, ಕಮಲ ಹ್ಯಾರಿಸ್ ಪ್ರಚಾರಕ್ಕೂ ದೇಣಿಗೆ ನೀಡಿದ್ದ ಎನ್ನಲಾಗಿದೆ.

ದಾಳಿಕೋರ ಕೋಲ್ ಅಲೆನ್ ಹೋಟೆಲ್‌ಗೆ ನುಗ್ಗಲು ಅತೀ ಚಾಣಾಕ್ಷತನದ ಪ್ಲ್ಯಾನ್ ಹೂಡಿದ್ದ. ಡಿನ್ನರ್ ಕಾರ್ಯಕ್ರಮ ಆರಂಭವಾಗುವ ಮೊದಲೇ ಆತ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ ಅತಿಥಿಯಾಗಿ ಒಳಪ್ರವೇಶಿಸಿದ್ದ. ಸಾಮಾನ್ಯ ಅತಿಥಿಗಳು ಹೋಟೆಲ್ ಪ್ರವೇಶಿಸುವಾಗ ಅಲ್ಲಿ ಬಿಗಿಯಾದ ಭದ್ರತಾ ತಪಾಸಣೆ ಇಲ್ಲದಿದ್ದನ್ನು ಬಳಸಿಕೊಂಡ ಅಲೆನ್, ಮೆಷಿನ್ ಗನ್, ಹ್ಯಾಂಡ್ ಗನ್ ಮತ್ತು ಚಾಕುಗಳನ್ನು ಸುಲಭವಾಗಿ ತನ್ನ ಕೋಣೆಗೆ ತಂದಿದ್ದ. ಹೋಟೆಲ್‌ನ ಲಾಬಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಕಠಿಣ ತಪಾಸಣೆ ಇರದ ಕಾರಣ, ಆತ ಶಸ್ತ್ರಸಜ್ಜಿತನಾಗಿ ಗಣ್ಯರು ಸೇರಿದ್ದ ಬಾಲ್‌ರೂಮ್ ಕಡೆಗೆ ನುಗ್ಗಲು ಸಾಧ್ಯವಾಯಿತು.

ಹೋಟೆಲ್‌ನಿಂದ ಬಾಲ್‌ರೂಮ್‌ಗೆ ಹೋಗುವ ದಾರಿಯಲ್ಲಿ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ನಿರ್ಮಿಸಿದ್ದ ಮ್ಯಾಗ್ನೆಟೋಮೀಟರ್ ತಪಾಸಣಾ ಕೇಂದ್ರದ ಬಳಿ ಅಲೆನ್ ಏಕಾಏಕಿ ಏಳೆಂಟು ಬಾರಿ ಗುಂಡು ಹಾರಿಸಿದ್ದಾನೆ. ಈ ವೇಳೆ ಜಾಗೃತರಾದ ಅಧಿಕಾರಿಗಳು ಪ್ರಾಣದ ಹಂಗು ತೊರೆದು ಆತನನ್ನು ಎದುರಿಸಿ, ಆತ ಮತ್ತಷ್ಟು ಗುಂಡು ಹಾರಿಸದಂತೆ ಕೆಳಕ್ಕೆ ತಳ್ಳಿದ್ದಾರೆ. ಈ ಸಂಘರ್ಷದಲ್ಲಿ ಒಬ್ಬ ಏಜೆಂಟ್‌ಗೆ ಗುಂಡು ತಗುಲಿತಾದರೂ ಬುಲೆಟ್ ಪ್ರೂಫ್ ಜಾಕೆಟ್ ಅವರನ್ನು ರಕ್ಷಿಸಿದೆ. ಭದ್ರತಾ ಪಡೆಗಳು ದಾಳಿಕೋರನನ್ನು ಹತ್ತಿಕ್ಕುತ್ತಿದ್ದಂತೆಯೇ, ಮತ್ತೊಂದು ತಂಡ ಅಧ್ಯಕ್ಷ ಟ್ರಂಪ್ ಅವರನ್ನು ಸುರಕ್ಷಿತವಾಗಿ ಶ್ವೇತಭವನಕ್ಕೆ ಕರೆದೊಯ್ದಿದೆ. ಈ ಘಟನೆಯು ಅಮೆರಿಕದ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸಿದೆ.

Continue Reading

Latest

ದೆಹಲಿ ಏರ್‌ಪೋರ್ಟ್‌ನಲ್ಲಿ ಅಪಘಾತ: ಟೇಕಾಫ್ ಆಗುವಾಗ ಸ್ವಿಸ್ ಏರ್ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಆರು ಮಂದಿಗೆ ಗಾಯ!

VISTARANEWS.COM


on

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್‌ಗೆ ಹಾರಲು ಸಿದ್ಧವಾಗಿದ್ದ ಸ್ವಿಸ್ ಏರ್ ವಿಮಾನ (LX147) ರನ್‌ವೇನಲ್ಲಿ ಟೇಕಾಫ್ ಆಗಲು ವೇಗವಾಗಿ ಚಲಿಸುತ್ತಿದ್ದಾಗ, ಅದರ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಬೆಳಗಿನ ಜಾವ 1.08ರ ಸುಮಾರಿಗೆ ಸಂಭವಿಸಿದ ಈ ಘಟನೆಯಿಂದ ವಿಮಾನದಲ್ಲಿದ್ದ 228 ಪ್ರಯಾಣಿಕರು ಮತ್ತು ನಾಲ್ವರು ಶಿಶುಗಳು ಸೇರಿದಂತೆ ಒಟ್ಟು 232 ಮಂದಿ ಕೆಲಕಾಲ ಆತಂಕದ ಸುಳಿಯಲ್ಲಿ ಸಿಲುಕಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ಸಮಯಪ್ರಜ್ಞೆ ಮೆರೆದು ಟೇಕಾಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ನಿರ್ಗಮನ ಸ್ಲೈಡ್‌ಗಳನ್ನು (Emergency Slides) ಬಳಸಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಅವಸರದ ಸ್ಥಳಾಂತರ ಪ್ರಕ್ರಿಯೆಯಲ್ಲಿ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ವಿಮಾನದ ಸಿಬ್ಬಂದಿ ವರ್ಗದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಸ್ಲೈಡ್‌ಗಳನ್ನು ಬಳಸಲು ಸಾಧ್ಯವಾಗದ ಕೆಲವು ಪ್ರಯಾಣಿಕರಿಗೆ ಪರ್ಯಾಯ ಮೆಟ್ಟಿಲುಗಳ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಘಟನೆಗೆ ಸಂಬಂಧಿಸಿದಂತೆ ಸ್ವಿಸ್ ಏರ್ ಸಂಸ್ಥೆಯು ಈಗಾಗಲೇ ತನಿಖಾ ಕಾರ್ಯಪಡೆಯನ್ನು ರಚಿಸಿದೆ. ವಿಮಾನಯಾನ ಸಂಸ್ಥೆಯ ತಾಂತ್ರಿಕ ತಜ್ಞರು ದೆಹಲಿಗೆ ಆಗಮಿಸಿ ವಿಮಾನದ ಎಂಜಿನ್ ವಿಫಲವಾಗಲು ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಿದ್ದಾರೆ. ಸದ್ಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸ್ಥಳೀಯ ತಂಡಗಳು ನೆರವು ನೀಡುತ್ತಿದ್ದು, ಅವರಿಗೆ ಹೋಟೆಲ್ ವಸತಿ ಮತ್ತು ಮರು ಬುಕಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿರುವ ಸಂಸ್ಥೆಯು, ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದೆ.

Continue Reading
Advertisement
Latest2 minutes ago

‘ಟಾಕ್ಸಿಕ್’ ಬೋಲ್ಡ್ ದೃಶ್ಯದ ವಿವಾದಕ್ಕೆ ರಾಕಿಂಗ್ ಸ್ಟಾರ್ ಖಡಕ್ ರಿಯಾಕ್ಷನ್: ಟೀಕಾಕಾರರಿಗೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟ ಯಶ್

Latest28 minutes ago

ಬದುಕು ಸುಂದರವಾಗಿರಲು ಮದುವೆ-ಮಕ್ಕಳೇ ಬೇಕಿಲ್ಲ! ವೈಯಕ್ತಿಕ ಜೀವನದ ಬಗ್ಗೆ ನಿತ್ಯಾ ಮೆನನ್ ಹಂಚಿಕೊಂಡ ಮನದಾಳದ ಮಾತು

Latest2 hours ago

ಆರ್‌ಸಿಬಿ ಪ್ಲೇಯಿಂಗ್ 11 ಅಪ್‌ಡೇಟ್: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್?

Latest3 hours ago

ಬಿಗಿ ಭದ್ರತೆಯ ನಡುವೆಯೂ ಟ್ರಂಪ್ ಪಾರ್ಟಿಗೆ ಅತಿಥಿಯಂತೆ ಬಂದಿದ್ದ ದಾಳಿಕೋರ! ಸೀಕ್ರೆಟ್ ಸರ್ವಿಸ್ ಕಣ್ಣು ತಪ್ಪಿಸಿದ್ದು ಹೇಗೆ?

ಕರ್ನಾಟಕ4 hours ago

ಹುಬ್ಬಳ್ಳಿಯಲ್ಲಿ ವಾರದಲ್ಲಿ ಮೂರನೇ ಬಾರಿ ವಿಮಾನ ಲ್ಯಾಂಡಿಂಗ್ ಸಮಸ್ಯೆ; ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

Latest4 hours ago

ದೆಹಲಿ ಏರ್‌ಪೋರ್ಟ್‌ನಲ್ಲಿ ಅಪಘಾತ: ಟೇಕಾಫ್ ಆಗುವಾಗ ಸ್ವಿಸ್ ಏರ್ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಆರು ಮಂದಿಗೆ ಗಾಯ!

Latest21 hours ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

Latest22 hours ago

ಟೆಹರಾನ್‌ನಲ್ಲಿ ವಿಮಾನ ಹಾರಾಟ ಪುನರಾರಂಭ: ಪಾಕ್‌ಗೆ ಆಗಮಿಸಿದ ಇರಾನ್‌ ನಿಯೋಗ: ಯುದ್ಧದ ಅಂತ್ಯದ ಮುನ್ಸೂಚನೆಯೇ ?

Latest23 hours ago

ಪರಮಾಣು ಶಸ್ತ್ರಾಸ್ತ್ರಗಳು ಶಾಂತಿಯ ಉದ್ದೇಶಕ್ಕೆ ಬಳಕೆಯಾಗಲಿ: ವಿಶ್ವಸಂಸ್ಥೆ ಕಳಕಳಿ

Latest23 hours ago

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌