Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್ - Vistara News

ಕ್ರೈಂ

Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್

Self Harming: ಸಾಲದ ಶೂಲಕ್ಕೆ ಬೇಸತ್ತ ಮೆಕ್ಯಾನಿಕ್‌ವೊಬ್ಬರು ಮನೆಯಲ್ಲಿದ್ದ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

VISTARANEWS.COM


on

Self Harming
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೊಡ್ಡಬಳ್ಳಾಪುರ: ಸಾಲ ಮಾಡಿ ಬಡ್ಡಿ ಕಟ್ಟಲಾಗದೆ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಪರ್ವೀಜ್ ಪಾಷ (38) ಆತ್ಮಹತ್ಯೆಗೆ ಶರಣಾದವರು.

ದೊಡ್ಡಬಳ್ಳಾಪುರ ನಗರದ ರೋಜಿಪುರ ಬಡಾವಣೆಯ ನಿವಾಸಿಯಾದ ಪರ್ವೀಜ್ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪರ್ವೀಜ್‌ ಈ ಹಿಂದೆ ಹಲವು ವ್ಯಕ್ತಿಗಳ ಬಳಿ ಬಡ್ಡಿಗೆ ಸಾಲ ಪಡೆದಿದ್ದ. ಸಾಲಗಾರರ ಕಾಟ ತಡೆಯಲಾರದೇ ಮನನೊಂದಿದ್ದ.

ಸಾಲ ತೀರಿಸಲು ದಿಕ್ಕು ದೋಚದೆ ಮೂರು ದಿನ ಊಟ ಬಿಟ್ಟಿದ್ದ. ನಂತರ ಅಂಗಡಿ ಮುಂದೆ ಸಾಲಗಾರರ ಕಾಟ ಹೆಚ್ಚಾದಾಗ ಕಳೆದ ಭಾನುವಾರ ಮನೆಗೆ ಬಂದವರೇ ಇಲಿ ಪಾಷಣ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಪರ್ವೀಜ್‌ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಪರ್ವೀಜ್‌ ಸಾವನ್ನಪ್ಪಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Self harming

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೋಜಿಪುರದಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Sonu Srinivas Gowda: ದರ್ಶನ್‌ ಬಗ್ಗೆ ಮಾತನಾಡಿಲ್ಲ ಎಂದು ಸೋನು ಶ್ರೀನಿವಾಸ್ ಗೌಡಗೆ ಕಿರುಕುಳ ಕೊಟ್ಟ ದಚ್ಚು ಫ್ಯಾನ್ಸ್‌!

ಕುಸಿದು ಬಿದ್ದ ದಿಲ್ಲಿ ಏರ್‌ಪೋರ್ಟ್‌ ಛಾವಣಿ- ಒಬ್ಬ ಬಲಿ, 5 ಮಂದಿಗೆ ಗಂಭೀರ ಗಾಯ

ಹೊಸದಿಲ್ಲಿ: ಇಷ್ಟು ದಿನ ಬಿಸಿಲ ಬೇಗೆ, ಉಷ್ಣ ಗಾಳಿಯ ತಾಪಕ್ಕೆ ಬೇಸತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿ(New Delhi)ಯಲ್ಲಿ ವರಣನ ಅಬ್ಬರ(Delhi Rain) ಜೋರಾಗಿದೆ. ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕಾರುಗಳ ಮೇಲೆ ಕುಸಿದು ಬಿದ್ದಿದ್ದು, ಒಬ್ಬ ದುರ್ಮರಣಕ್ಕೀಡಾಗಿದ್ದಾನೆ. ಘಟನೆಯಲ್ಲಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಟರ್ಮಿನಲ್‌ 1ರ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಅದೂ ಅಲ್ಲದೇ ಮುಂಜಾಗೃತಾ ಕ್ರಮವಾಗಿ ದಿಲ್ಲಿ ವಿಮಾನ ನಿಲ್ದಾಣ(Delhi International Airport)ದ ಎಲ್ಲಾ ಚೆಕ್-ಇನ್‌ ಕೌಂಟರ್‌ಗಳನ್ನು ಮುಚ್ಚಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿ ಶೀಟ್‌ ಮತ್ತು ಬೀಮ್‌ ಕುಸಿದು ಬಿದ್ದಿದ್ದು, ಪಾರ್ಕಿಂಗ್‌ ಏರಿಯಾದಲ್ಲಿದ್ದ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಘಟನೆ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಪ್ರತಿಕ್ರಿಯಿಸಿದ್ದು, ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ದಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ರಣಭೀಕರ ಮಳೆಗೆ ದಿಲ್ಲಿ ತತ್ತರ

ಎರಡನೇ ದಿನವೂ ದಿಲ್ಲಿಯ್ಲಿ ಭಾರೀ ಮಳೆಯಾಗುತ್ತಿದೆ. ರಸ್ತೆ, ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಚಾರ ಅಸ್ತವ್ಯಸ್ತಗೊಂಡಿದೆ. ದಿಲ್ಲಿಯ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Sandalwood theft : ಕೋಲಾರದಲ್ಲಿ ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ ಗಂಧ ಕದಿಯಲು ಬಂದ ಚೋರನಿಗೆ ಗುಂಡು ಹಾರಿಸಲಾಗಿದೆ. ನಾಲ್ಕೈದು ಮಂದಿ ಕಾಲ್ಕಿತ್ತಿದ್ದು, ಗುಂಡೇಟು ತಿಂದವನು ಸಿಕ್ಕಿಬಿದ್ದಿದ್ದಾನೆ. ಇತ್ತ ಕಲಬುರಗಿಯಲ್ಲಿ ಕಿಡಿಗೇಡಿಗಳು ಕೋರ್ಟ್‌ ಆವರಣದಲ್ಲೇ ತಳವಾರ್‌ ಹಿಡಿದು ದಾಳಿ ಮಾಡಿದ್ದಾರೆ.

VISTARANEWS.COM


on

By

sandalwood theft
Koo

ಕೋಲಾರ : ಅರಣ್ಯ ಪ್ರದೇಶದಲ್ಲಿ ಶ್ರೀಗಂಧವನ್ನು ಕದಿಯಲು (Sandalwood theft) ಬಂದವನು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗುಂಡೇಟು ತಿಂದಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿ (Kashipura Forest) ಘಟನೆ ನಡೆದಿದೆ.

ತಾಯಲೂರು ಗ್ರಾಮದ ಭತ್ಯಪ್ಪ ಎಂಬಾತ ಕಾಲಿಗೆ ಗುಂಡು ತಗುಲಿದೆ. ಅರಣ್ಯ ಇಲಾಖೆ ರಕ್ಷಕ ಅನಿಲ್ ಗುಂಡು ಹಾರಿಸಿದ್ದಾರೆ. ಶ್ರೀಗಂಧ ಕಳ್ಳತನಕ್ಕೆ ಆಂಧ್ರಪ್ರದೇಶದ ಐದಾರು ಮಂದಿ ಜತೆಗೆ ಭತ್ಯಪ್ಪ ಬಂದಿದ್ದ. ಈ ವೇಳೆ ರಕ್ಷಕ ಅನಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದ.

ರಕ್ಷಣೆಗಾಗಿ ಭತ್ಯಪ್ಪ ಹಾಗೂ ಮತ್ತೋರ್ವನಿಗೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಭತ್ಯಪ್ಪ ಸಿಕ್ಕಿಬಿದ್ದರೆ ಉಳಿದವರು ಕಾಲ್ಕಿತ್ತಿದ್ದಾರೆ. ಗಾಯಾಳು ಭತ್ಯಪ್ಪಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Drowned In water : ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋದ ಮಾಜಿ ಸೈನಿಕ

ಕೋರ್ಟ್‌ ಆವರಣದಲ್ಲೇ ಡೆಡ್ಲಿ ಅಟ್ಯಾಕ್‌

ಕಲಬುರಗಿ ಕೋರ್ಟ್ ಆವರಣದಲ್ಲಿ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಬೆನ್ನತ್ತಿ ದುಷ್ಕರ್ಮಿಗಳು ತಲವಾರ್‌ನಿಂದ ದಾಳಿ ನಡೆಸಿದ್ದಾರೆ. ಧೀರಜ್ ಎಂಬಾತನ ಮೇಲೆ ತಲವಾರ್‌‌ನಿಂದ ದಾಳಿ ನಡೆಸಿದ್ದಾರೆ.

ತಲವಾರ್ ದಾಳಿಯಿಂದ ಧೀರಜ್‌ ಎಂಬಾತ ಗಾಯಗೊಂಡಿದ್ದು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇತ್ತ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ದುಷ್ಕರ್ಮಿಗಳನ್ನು ಸಾರ್ವಜನಿಕರು ಹಾಗೂ ವಕೀಲರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಸಂಬಂಧ ಪ್ರಶಾಂತ್ ಪಾಟೀಲ್ (20), ವಿರೇಶ್ ಪಾಟೀಲ್ (19), ರಾಮು ಪಾಟೀಲ್ (38) ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಲಬುರಗಿ ನಗರದ ಬಾಪುನಗರ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Latest

Gold Smuggling: ಏರ್‌ಪೋರ್ಟ್‌ನಲ್ಲಿ 267 ಕೆಜಿ ಚಿನ್ನ ಸಾಗಣೆ; ಯೂಟ್ಯೂಬರ್‌ ಸೇರಿ ಹಲವರ ಸೆರೆ

Gold Smuggling: ಚಿನ್ನದ ಬೆಲೆ ಗಗನಕ್ಕೇರಿದೆ.ಇನ್ನು ಸುಲಭವಾಗಿ ದುಡ್ಡು ಮಾಡಬೇಕು ಎಂಬ ದುರಾಸೆ ಇರುವವರು ಕಳ್ಳತನವನ್ನೇ ತಮ್ಮ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಚಿನ್ನದ ಬೆಲೆ ಗಗನಕ್ಕೇರಿದ ಕಾರಣ ಚಿನ್ನದ ಕಳ್ಳಸಾಗಾಣಿಕೆ ಮಾಡಿ ಕೋಟಿ ಕೋಟಿ ಹಣ ಸಂಪಾದಿಸಲು ಹೊರಟಿದ್ದಾರೆ. ಅಂತಹದೊಂದು ಪ್ರಕರಣ ಇದೀಗ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿರುವ ಅಂಗಡಿಯಲ್ಲಿ ಚಿನ್ನದ ಕಳ್ಳಸಾಗಾಣಿಕೆ ನಡೆದಿದೆ.

VISTARANEWS.COM


on

Gold Smuggling
Koo

ಚೆನ್ನೈ : ಚಿನ್ನದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಕಳ್ಳತನದ ಜೊತೆಗೆ ಚಿನ್ನದ ಕಳ್ಳಸಾಗಣೆ ಪ್ರಕರಣ ಕೂಡ ಹೆಚ್ಚಾಗಿ ನಡೆಯುತ್ತಿದೆ. ಚಿನ್ನದ ಬೆಲೆ ಗಗನಕ್ಕೇರಿದ ಕಾರಣ ಚಿನ್ನದ ಕಳ್ಳಸಾಗಾಣಿಕೆ ಮಾಡಿ ಕೋಟಿ ಕೋಟಿ ಹಣ ಸಂಪಾದಿಸಲು ಹೊರಟಿದ್ದಾರೆ. ಅಂತಹದೊಂದು ಪ್ರಕರಣ ಇದೀಗ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿರುವ ಅಂಗಡಿಯಲ್ಲಿ ಚಿನ್ನದ ಕಳ್ಳಸಾಗಾಣಿಕೆ(Gold Smuggling) ನಡೆದಿದೆ.

ಮೊಹಮ್ಮದ್ ಸಬೀರ್ ಅಲಿ (29 ವರ್ಷ) ಕಳ್ಳಸಾಗಾಣಿಕೆಗೆ ಸಹಾಯ ಮಾಡಿದ ಆರೋಪಿ. ಸಬೀರ್ ಅಲಿಗೆ ಅಂಗಡಿಯೊಂದನ್ನು ನಡೆಸುವ ಯಾವುದೇ ಅನುಭವವಿಲ್ಲದಿದ್ದರೂ ಆತನ ಯೂಟ್ಯೂಬ್ ಚಾನೆಲ್ ಶಾಪಿಂಗ್ ಬಾಯ್ಸ್‌ನ ವಿಡಿಯೊಗಳನ್ನು ನೋಡಿದ ನಂತರ ಈ ಕಳ್ಳರ ಗುಂಪು (syndicate) ಅವನನ್ನು ನೇಮಕ ಮಾಡಿಕೊಂಡಿದೆ.

ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡುವಂತೆ ಮೊಹಮ್ಮದ್ ಸಬೀರ್ ಅಲಿಯನ್ನು ಕಳ್ಳ ದಂಧೆಕೋರರ ಗುಂಪೊಂದು ಕೇಳಿ ಕೊಂಡಿದೆ. ಇದಕ್ಕೆ ಒಪ್ಪಿದ ಸಬೀರ್‌ಗೆ ಚಿನ್ನ ಕಳ್ಳಸಾಗಣೆಗೆ ಮಾಡಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಂಗಡಿಯನ್ನು ತೆರೆಯುವ ಆಲೋಚನೆಯನ್ನು ಈ ಗುಂಪು ಸೂಚಿಸಿದೆ. ಅಬುದಾಬಿಯಲ್ಲಿ ವಾಸಿಸುವ ಶ್ರೀಲಂಕಾ ಮೂಲದ ಚಿನ್ನ ಕಳ್ಳಸಾಗಣೆದಾರರ ಗುಂಪಿನ ಸದಸ್ಯರೊಬ್ಬರು ಅಲಿಗೆ ಅಂಗಡಿಯ ಗುತ್ತಿಗೆ ಪಡೆಯಲು 70 ಲಕ್ಷ ರೂ.ಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಅವರ ಯೋಜನೆಯಂತೆ ಅಲಿ ಚೆನ್ನೈ ವಿಮಾನ ನಿಲ್ದಾಣದ ಎಕ್ಸಿಟ್ ಲಾಂಜ್ ನಲ್ಲಿ ಏರ್ಹಬ್ ಎಂಬ ಶಾಪ್‌ ಶುರು ಮಾಡಿದ. ಅಲಿಗೆ ಸಹಾಯಕ್ಕಾಗಿ ಏಳು ಮಂದಿ ಉದ್ಯೋಗಿಗಳನ್ನು ನೇಮಿಸಿದ ಗುಂಪೊಂದು ಅವರಿಗೆ ತರಬೇತಿ ನೀಡಿತ್ತು. ಟ್ರಾನ್ಸಿಟ್ ಪ್ಯಾಸೆಂಜರ್‌ಗಳಿಂದ ಚಿನ್ನವನ್ನು ಪಡೆದು ಅದನ್ನು ತಮ್ಮ ದೇಹದಲ್ಲಿ ಬಚ್ಚಿಟ್ಟುಕೊಂಡು ನಂತರ ವಿಮಾನ ನಿಲ್ದಾಣದ ಹೊರಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದರು.

ಇದಕ್ಕಾಗಿ, ಅಲಿ ಮತ್ತು ಇತರರಿಗೆ ಎರಡು ತಿಂಗಳಿಗೆ 3 ಕೋಟಿ ರೂ.ಗಳ ಕಮಿಷನ್ ನೀಡುತ್ತಿದ್ದರು ಎನ್ನಲಾಗಿದೆ.
ಆದರೆ ಜೂನ್ 29ರಂದು ಕಸ್ಟಮ್ಸ್ ಅಧಿಕಾರಿಯೊಬ್ಬರಿಗೆ ಇವರ ಚಲನವಲನದಲ್ಲಿ ಅನುಮಾನ ಬಂದು ಅಂಗಡಿಯನ್ನು ಪರಿಶೀಲಿಸಿದಾಗ 1 ಕೆಜಿ ಚಿನ್ನದ ಪುಡಿ ಸಿಕ್ಕಿದೆ. ಹಾಗಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಉದ್ಯೋಗಿಗಳು ಮತ್ತು ಚಿನ್ನ ಸಾಗಣೆ ಮಾಡಿದ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಇದನ್ನೂ ಓದಿ: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

ಎರಡು ತಿಂಗಳ ಅವಧಿಯಲ್ಲಿ 167 ಕೋಟಿ ಮೌಲ್ಯದ 267 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಅಲಿ ಮತ್ತು ಅವರ ಏಳು ಉದ್ಯೋಗಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಗ್ರೂಪ್‌ನ ಎಲ್ಲಾ ಎಂಟು ಸದಸ್ಯರು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ನೀಡಿದ ಗುರುತಿನ ಚೀಟಿಗಳನ್ನು ಹೊಂದಿದ್ದರು ಹಾಗಾಗಿ ಅವರನ್ನು ಭದ್ರತಾ ತಪಾಸಣೆಗೆ ಒಳಪಡಿಸಿಲ್ಲ ಎಂಬುದಾಗಿ ತನಿಖೆಯಿಂದ ತಿಳಿದುಬಂದಿದೆ.

Continue Reading

ದೇಶ

Drowned In water : ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋದ ಮಾಜಿ ಸೈನಿಕ

Drowned In water ; ಮೊನ್ನೆ ಮೊನ್ನೆಯಷ್ಟೇ ಲೊನಾವನಾದಲ್ಲಿ ಐದು ಮಂದಿ ಕೊಚ್ಚಿ ಹೋಗಿದ್ದರು. ಈ ಘಟನೆ ಮಾಸುವ ಮುನ್ನವೇ ತಮ್ಹಿನಿ ಘಾಟ್‌ನಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಮಾಜಿ ಸೈನಿಕ ಕೊಚ್ಚಿ ಹೋಗಿದ್ದಾರೆ.

VISTARANEWS.COM


on

By

Drowned in water
Koo

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಪದೆಪದೇ ಅವಘಡಗಳು ಮರುಕಳಿಸುತ್ತಿವೆ. ತುಂಬಿ ಹರಿಯುವ ಹಳ್ಳಕ್ಕೆ ಹಾರಿದ ವ್ಯಕ್ತಿ ಶವವಾಗಿದ್ದಾರೆ. ಮಹಾರಾಷ್ಟ್ರದ ತಮ್ಹಿನಿ ಘಾಟ್‌ನಲ್ಲಿ ಈ ದುರ್ಘಟನೆ (Drowned In water ) ನಡೆದಿದೆ.

ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಮಾಜಿ ಸೈನಿಕರೊಬ್ಬರು ಕೊಚ್ಚಿ ಹೋಗಿದ್ದಾರೆ. ಈ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನೋಡನೋಡುತ್ತಿದ್ದಂತೆ ವ್ಯಕ್ತಿ ಜಲಸಮಾಧಿಯಾಗಿದ್ದಾರೆ. ಸುಮಾರು 20 ಜನರ ತಂಡ ಟ್ರಕ್ಕಿಂಗ್‌ ಹೋಗಿದ್ದರು. ಈ ವೇಳೆ ತುಂಬಿ ಹರಿವ ಹಳ್ಳಕ್ಕೆ ಜಿಗಿದ ಮಾಜಿ ಸೈನಿಕ ಸಾಹಸ ತೋರಿಸಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದಾನೆ.

ಮಹಾರಾಷ್ಟ್ರದ ಲೊನಾವನಾ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ. ಈಜಿ ಬರುವ ವಿಶ್ವಾಸ ತೋರಿದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಸದ್ಯ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Allahabad High Court: ಮತಾಂತರ ತಡೆಯದಿದ್ದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್ ಹೈಕೋರ್ಟ್ ಕಳವಳ

ಕಾಳಮ್ಮವಾಡಿ ಜಲಾಶಯದಲ್ಲಿ ನಿಪ್ಪಾಣಿ ಯುವಕರು ಕಣ್ಮರೆ

ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಲ್ಲಿ ನಿಪ್ಪಾಣಿ ಯುವಕರು ಕಣ್ಮರೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ಶವ ಪತ್ತೆಯಾಗಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ಮುಂದುವರಿದಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯಕ್ಕೆ ನಿನ್ನೆ ನಿಪ್ಪಾಣಿಯಿಂದ ಪ್ರವಾಸಕ್ಕೆಂದು 13 ಜನರ ಯುವಕರ ತಂಡ ತೆರಳಿದ್ದರು. ಈ ವೇಳೆ ಕಾಳಮ್ಮವಾಡಿ ಜಲಾಶಯದಲ್ಲಿ ಇಬ್ಬರು ನೀರಿನಲ್ಲಿ ಕಣ್ಮರೆಯಾಗಿದ್ದರು. ನಿಪ್ಪಾಣಿಯ ಗಣೇಶ ಕದಮ್ ಪ್ರತೀಕ್ ಪಾಟೀಲ್ ಇಬ್ಬರು ಕಣ್ಮರೆಯಾಗಿದ್ದರು. ಪ್ರತಿಕ ಪಾಟೀಲ್ ಶವವಾಗಿ ಪತ್ತೆಯಾದರೆ, ಗಣೇಶ್ ಕದಮ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ಎನ್ ಡಿ ಆರ್ ಎಫ್ ಹಾಗೂ ಕೊಲ್ಹಾಪುರ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

ನೀರಲ್ಲಿ ಕೊಚ್ಚಿ ಹೋದವರ ಶವ ಪತ್ತೆ

ಭಾನುವಾರ ಮಹಾರಾಷ್ಟ್ರದ ಲೋನಾವಲಾ ಬಳಿ ದಿಢೀರ್ ಪ್ರವಾಹಕ್ಕೆ ನೋಡನೋಡುತ್ತಿದ್ದಂತೆ ಐವರು ಕೊಚ್ಚಿ ಹೋಗಿದ್ದರು. ಪುಣೆಯ ಅನ್ಸಾರಿ ಕುಟುಂಬದ ನಾಲ್ವರು ಮಕ್ಕಳು ಸೇರಿ ಓರ್ವ ‌ಮಹಿಳೆ‌ ನೀರುಪಾಲಾಗಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ಎನ್‌ಆರ್‌ಎಫ್‌ ತಂಡ ಮೂವರ ಶವ ಹೊರ ತೆಗೆದಿತ್ತು. ನೀರಲ್ಲಿ ಕಣ್ಮರೆಯಾಗಿರುವ ಇನ್ನಿಬ್ಬರಿಗಾಗಿ ನಿರಂತರ ಶೋಧ ಕಾರ್ಯ ನಡೆಸಿತ್ತ. ಅದರಲ್ಲಿ ಒಬ್ಬನ ಮೃತದೇಹವು ಮಂಗಳವಾರ ಸಿಕ್ಕಿದ್ದು, ಮತ್ತೊಬ್ಬ ಶವಕ್ಕೆ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬೀಡು ಬಿಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bike Accident: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸವಾರ ಸಾವು, ಇಬ್ಬರಿಗೆ ಗಾಯ

Bike Accident: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಬಳಿ ಅಪಘಾತ ನಡೆದಿದೆ. ಟಿವಿಎಸ್‌ ಎಕ್ಸೆಲ್‌ ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್‌ ಮುಖಾಮುಖಿ ಡಿಕ್ಕಿಯಾಗಿ ಸವಾರರೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

Bike Accident
Koo

ಬಾಗಲಕೋಟೆ: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರಿಗೆ ಗಾಯಗಳಾಗಿರುವ ಘಟನೆ (Bike Accident) ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಬಳಿ ನಡೆದಿದೆ. ಸಿದ್ದರಾಮಯ್ಯ ಸಂಗಯ್ಯ ಹಿಡಕಲ್ಲ (60) ಮೃತ ದುರ್ದೈವಿ.

ಟಿವಿಎಸ್‌ ಸೂಪರ್ ಎಕ್ಸೆಲ್‌ನಲ್ಲಿ ಜಮಖಂಡಿಯಿಂದ ಮಧುರಖಂಡಿಗೆ ಸಿದ್ದರಾಮಯ್ಯ ಹೊರಟಿದ್ದರು. ಈ ವೇಳೆ ತೇರದಾಳದಿಂದ ಜಮಖಂಡಿ ಕಡೆ ಬರುತ್ತಿದ್ದ ತಾಯಿ, ಮಗನಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕ್‌ಗೆ ಡಿಕ್ಕಿಯಾಗಿದ್ದರಿಂದ ಸ್ಥಳದಲ್ಲೇ ಎಕ್ಸೆಲ್‌ ಸವಾರ ಸಿದ್ದರಾಮಯ್ಯ ಹಿಡಕಲ್ಲ ಮೃತಪಟ್ಟಿದ್ದಾರೆ.

ಮತ್ತೊಂದು ಬೈಕ್‌‌‌ನಲ್ಲಿದ್ದ ಗಾಯಾಳುಗಳು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Student Death : ಅಮ್ಮನ ಸೀರೆಯಲ್ಲಿ ನೇಣು ಬಿಗಿದುಕೊಂಡಳು ಅಪ್ರಾಪ್ತೆ

Road Accident : ಹೆದ್ದಾರಿಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ಗೆ ‌ವೃದ್ಧ ಸಾವು; ಯುವಕನ ತಲೆ ಮೇಲೆ ಹರಿದ ಟ್ಯಾಂಕರ್‌

ಬೆಂಗಳೂರು: ವಾಟರ್ ಟ್ಯಾಂಕರ್ ವಾಹನಕ್ಕೆ ಯುವಕನೊರ್ವ (Road Accident) ಬಲಿಯಾಗಿದ್ದಾನೆ. ಕಿರಣ್ ಕುಮಾರ್ (21) ಮೃತಪಟ್ಟವನು. ಬೆಂಗಳೂರಿನ ಕೊತ್ತನೂರು ದಿಣ್ಣೆ ಆರ್‌ಬಿಐ ಲೇಔಟ್‌ನಲ್ಲಿ ಬೆಳಗ್ಗೆ 9.30ಕ್ಕೆ ಈ ಅಪಘಾತ ಸಂಭವಿಸಿದೆ.

ಬೇಕರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್‌ ಕುಮಾರ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ನಿಂದ ಕೆಳಗೆ ಬಿದ್ದ ಕಿರಣ್‌ ತಲೆ ಮೇಲೆ ಟ್ಯಾಂಕರ್‌ ಹರಿದಿದೆ. ಅಪಘಾತದಲ್ಲಿ ಕಿರಣ್‌ ಕುಮಾರ್‌ ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆ.ಎಸ್.ಲೇಔಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಎಸ್‌ ಲೇಔಟ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ವಾಟರ್‌ ಟ್ಯಾಂಕರ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Self Harming: ಅಳಿಯನಿಂದ ಕೊಲೆಯಾದ ಪುತ್ರ, ಅಗಲಿಕೆ ಸಹಿಸದೆ ತಾಯಿ ಆತ್ಮಹತ್ಯೆ

ಸ್ಕೂಟರ್‌ಗೆ ಗುದ್ದಿದ ಕಾರು; ಹಾರಿ ಬಿದ್ದ ವೃದ್ಧ ಸ್ಪಾಟ್‌ ಡೆತ್‌

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತಕ್ಕೆ ವೃದ್ಧನೊರ್ವ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಡಿವೈಡರ್ ಬಳಿ ರಸ್ತೆ ದಾಟುವಾಗ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಹಾರಿ ಬಿದ್ದ ವೃದ್ಧ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು ಗ್ರಾಮಾಂತರದ ದಾಬಸ್ ಪೇಟೆ ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮೇಶ್ವರ ಗೇಟ್ ಬಳಿ ಅಪಘಾತ ನಡೆದಿದೆ. ನಾರನಹಳ್ಳಿ ಗ್ರಾಮದ ಮಾಳಪ್ಪ (80) ಮೃತ ದುರ್ದೈವಿ. ರಾಮೇಶ್ವರ ಗೇಟ್‌ನಲ್ಲಿ ರಸ್ತೆ ದಾಟುವಾಗ ದಾಬಸ್ ಪೇಟೆ ಕಡೆಯಿಂದ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ಮಾಳಪ್ಪ ಸಾವನ್ನಪ್ಪಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

Continue Reading
Advertisement
Narendra Modi
ಪ್ರಮುಖ ಸುದ್ದಿ12 mins ago

Narendra Modi: ಸಂಸತ್ತಲ್ಲಿ ಹಿಂದುಗಳಿಗೆ ಅವಮಾನ, ದೇವರಿಗೆ ಅಪಮಾನ, ಇದನ್ನು ಹಿಂದುಗಳು ಮರೆಯಲಾರರು ಎಂದ ಮೋದಿ

NEET PG exam
ಪ್ರಮುಖ ಸುದ್ದಿ14 mins ago

NEET PG exam : ಮೋಸ ತಡೆಯಲು ಕ್ರಮ; ನೀಟ್ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ತಯಾರಿ!

Viral Video
Latest18 mins ago

Eknath Shinde: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

Rainy Season Tourism
ಪ್ರವಾಸ29 mins ago

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Viral News
Latest30 mins ago

Viral News: ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದರು! ವೆಡ್ಡಿಂಗ್‌ ಕಾರ್ಡ್‌ ನೋಡಿ!

Narendra Modi
ದೇಶ35 mins ago

Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ

Pourakarmikas
ಕರ್ನಾಟಕ38 mins ago

Pourakarmikas: ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

Super Computers
ಪ್ರಮುಖ ಸುದ್ದಿ40 mins ago

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

sandalwood theft
ಕ್ರೈಂ43 mins ago

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Narendra Modi
ದೇಶ51 mins ago

Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌