International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು! - Vistara News

ಫ್ಯಾಷನ್

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

International Mud Day: ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ.

VISTARANEWS.COM


on

International Mud Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ (International Mud Day). ಇತ್ತೀಚೆಗೆ ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಸುದ್ದಿಯನ್ನೇ ಕೇಳುತ್ತಿರುವ ನಮಗೆ ಮಣ್ಣಿನ ದಿನವೆಂದರೆ ಕಣ್‌ ಬಿಡುವಂತಾಗುವುದು ಸಹಜ. ಅಥವಾ ಎಂದಾದರೂ ಮಣ್ಣಲ್ಲಿ ಮಣ್ಣಾಗಿ ಹೋಗುವಂಥ ಆಧ್ಯಾತ್ಮದ ಬಗ್ಗೆ ಯೋಚಿಸಲೂ ಬಹುದು. ಇಂಥ ಯಾವ ವಿಷಯಕ್ಕೂ ಅಲ್ಲ, ಮಣ್ಣಾಟ ಆಡುವುದರಲ್ಲಿರುವ ಸೊಗಸನ್ನು ಎತ್ತಿ ಹಿಡಿಯುವ ಉದ್ದೇಶ ಈ ದಿನಕ್ಕಿದೆಯಂತೆ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ. ಮಣ್ಣೆಂದರೆ ಕೃಷಿ ಎನ್ನುವ ಜನಪ್ರಿಯ ಕಲ್ಪನೆಯೇ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಅದಲ್ಲದೆ ಮಣ್ಣಿನ ಮಡಿಕೆಗಳಲ್ಲಿ ಆಹಾರ ಬೇಯಿಸುತ್ತಿದ್ದ ದಿನಗಳಿಂದ ಹಿಡಿದು ಮಣ್ಣನ್ನು ಔಷಧಿಯಾಗಿ ಉಪಯೋಗಿಸುವವರೆಗೆ ಬಹಳಷ್ಟು ಬಗೆಯಲ್ಲಿ ಮಣ್ಣಿನೊಂದಿಗೆ ನಮಗೆ ನಂಟಿದೆ. ಮಣ್ಣು ತಿಂದು ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದ ತುಂಟ ಕೃಷ್ಣನಿಂದ ತೊಡಗಿ, ಮಣ್ಣಲ್ಲಾಡುವ ಎಲ್ಲ ಮಕ್ಕಳಿಗೂ ಕಲ್ಲು-ಮಣ್ಣುಗಳೇ ಮಿತ್ರರು. ಆದರೀಗ ಮಕ್ಕಳು ಮಣ್ಣಲ್ಲಾಡುವುದಕ್ಕಿಂತ ಮೊಬೈಲ್‌ನಲ್ಲಿ ಆಡುವುದೇ ಹೆಚ್ಚು. ಅಂದಹಾಗೆ, ಮಣ್ಣನ್ನು ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ ಎಂಬುದು ಗೊತ್ತೇ?

Mud Girl

ಮಣ್ಣಿಗೂ ಮಹತ್ವವಿದೆ

ಈಜಿಪ್ತ್‌ನ ರಾಣಿ ಕ್ಲಿಯೋಪಾತ್ರ ತನ್ನ ಚೆಲುವಿಗೂ ಹೆಸರಾಗಿದ್ದವಳು. ಅವಳ ಚರ್ಮದ ಕಾಂತಿಯ ದೇಖರೇಖಿಯಲ್ಲಿ ಮೃತ ಸಮುದ್ರದ (ಡೆಡ್‌ ಸೀ) ಮಣ್ಣನ್ನು ಬಳಸುತ್ತಿದ್ದಳಂತೆ. ಇಷ್ಟೇ ಅಲ್ಲ, 19ನೇ ಶತಮಾನದಲ್ಲಿ ಐರೋಪ್ಯ ದೇಶಗಳ ಸ್ಪಾಗಳಲ್ಲಿ ʻಮಡ್‌ ಬಾತ್‌ʼ ಜನಪ್ರಿಯಗೊಂಡಿತು. ನೋವುಗಳಿಂದ ಮುಕ್ತರಾಗುವುದಕ್ಕೆ, ಚರ್ಮದ ಕಾಂತಿಗೆ ಹಾಗೂ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದೇ ಮದ್ದು ಎಂಬಂತೆ ಇದನ್ನು ಬಿಂಬಿಸಲಾಗುತ್ತಿತ್ತು. ಇವೆಲ್ಲ ನಿಜವೇ? ಮಣ್ಣನ್ನು ಮೈಗೆಲ್ಲ ಮೆತ್ತಿಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿ ಆಗುವುದೇ ಅಥವಾ ಇದೂ ಗಾಳಿ ಮೇಲಿನ ಗುಳ್ಳೆಯೇ? ಅಂತಾರಾಷ್ಟ್ರೀಯ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸೌಂದರ್ಯವರ್ಧಕ ಅಂಶಗಳ ಬಗ್ಗೆ ಮಾಹಿತಿ.

ಮಣ್ಣಿನ ಸ್ನಾನ

ಹಲವಾರು ಶತಮಾನಗಳಿಂದ ಮಣ್ಣಿನ ಸ್ನಾನವನ್ನು ಚಿಕಿತ್ಸೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಹಳೆಯ ಕಾಲದ ಈಜಿಪ್ತ್‌, ಗ್ರೀಕ್‌ ಮತ್ತು ರೋಮನ್ನರು ಇದನ್ನು ಸ್ವಾಸ್ಥ್ಯ ಮತ್ತು ಸೌಂದರ್ಯವನ್ನು ಉದ್ದೀಪಿಸುವ ಮಾರ್ಗವಾಗಿ ಬಳಸುತ್ತಿದ್ದರು. ಬೆಚ್ಚಗಿನ ಮಣ್ಣಿನಲ್ಲಿ ದೇಹವನ್ನು ನೆನೆಸುವುದು, ಆ ಮೂಲಕ ಆರ್ಥರೈಟಿಸ್‌ ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದು ಅವರ ಕ್ರಮವಾಗಿತ್ತು. ಇದಕ್ಕಾಗಿ ಬಿಸಿನೀರಿನ ಬುಗ್ಗೆಗಳ ಪ್ರದೇಶವನ್ನು ಅವಲಂಬಿಸುತ್ತಿದ್ದರು. ಅದಲ್ಲದೆ, ಮಣ್ಣಿನ ಪುಟ್ಟ ಕೊಳಗಳನ್ನೂ ನಿರ್ಮಿಸಿಕೊಳ್ಳುತ್ತಿದ್ದರು. ಈ ನಿಸರ್ಗ ಚಿಕಿತ್ಸೆ ಇಂದಿಗೂ ಜನಪ್ರಿಯವಾಗಿದೆ. ಇದಕ್ಕಾಗಿ ಹಲವು ರೀತಿಯ ಮಣ್ಣುಗಳನ್ನು ಬಳಸಲಾಗುತ್ತದೆ. ಒಂದೊಂದು ಬಗೆಯ ಮಣ್ಣಿಗೂ ಅದರದ್ದೇ ಆದ ಅನುಕೂಲಗಳಿವೆ.

Dead Sea Mud bath Treatment
  • ಮೃತ ಸಮುದ್ರದ ಮಣ್ಣು: ಖನಿಜಗಳಿಂದ ಭರಿತವಾದ ಮಣ್ಣಿದು. ಮೆಗ್ನೀಶಿಯಂ, ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಇದರಲ್ಲಿ ಅತ್ಯಂತ ಸಾಂದ್ರವಾಗಿರುತ್ತವೆ. ಇದನ್ನು ಡಿಟಾಕ್ಸ್‌ ಮಾಡುವುದಕ್ಕೆ ಮತ್ತು ಚರ್ಮದ ತೇವ ಹೆಚ್ಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.
  • ಜ್ವಾಲಾಮುಖಿಯ ಬೂದಿ-ಮಣ್ಣು: ಇದನ್ನು ಜ್ವಾಲಾಮುಖಿ ಇದ್ದಂಥ ಜಾಗಗಳಿಂದ ಮಾತ್ರವೇ ಸಂಗ್ರಹಿಸಬಹುದು. ಇದರ ಬೂದಿಯಲ್ಲಿ ಬಹಳಷ್ಟು ರೀತಿಯ ಖನಿಜಗಳು ಸೇರಿಕೊಂಡಿರುತ್ತವೆ. ಚರ್ಮವನ್ನು ಎಕ್‌ಫಾಲಿಯೇಟ್‌ ಮಾಡುವುದಕ್ಕೆ ಮತ್ತು ಶುದ್ಧೀಕರಿಸುವುದಕ್ಕೆ ಇದಕ್ಕಿಂತ ಒಳ್ಳೆಯದು ಇನ್ನೊಂದಿಲ್ಲ ಎಂಬ ಅಭಿಪ್ರಾಯವಿದೆ.
  • ಬೆಂಟೋನೈಟ್‌ ಮಣ್ಣು: ಇದು ಜೇಡಿಮಣ್ಣಿನಂಥದ್ದು. ಆದರೆ ಇದನ್ನೂ ಜ್ವಾಲಾಮುಖಿಯ ಪ್ರದೇಶದಿಂದಲೇ ಸಂಗ್ರಹಿಸಲಾಗುತ್ತದೆ.
  • ಮುಲ್ತಾನಿ ಮಿಟ್ಟಿ (ಫುಲ್ಲರ್ಸ್‌ ಅರ್ಥ್): ಇದೂ ಸಹ ಜೇಡಿಮಣ್ಣಿನಂಥದ್ದೇ ಆಗಿದ್ದು,‌ ಅತಿಯಾದ ಎಣ್ಣೆ ಸೂಸುವ ಮುಖಕ್ಕೆ ಇದನ್ನು ಬಳಸಲಾಗುತ್ತದೆ.

ಲಾಭಗಳೇನು?

ಮುಖಕ್ಕೆ ಮಣ್ಣಿನ ಲೇಪ ಮಾಡುವುದಕ್ಕೆ ಅದರದ್ದೇ ಆದ ಲಾಭಗಳಿವೆ. ಚರ್ಮದ ಕಶ್ಮಲಗಳನ್ನು ತೆಗೆದು, ಮುಖಕ್ಕೆ ಬೇಕಾದ ತೇವವನ್ನು ನೀಡುವುದು ಇದರ ಉದ್ದೇಶ. ಅದರಲ್ಲೂ ಖನಿಜಯುಕ್ತವಾದ ಮಣ್ಣನ್ನು ಲೇಪಿಸುವುದರಿಂದ ಚರ್ಮಕ್ಕೆ ಕಾಂತಿಯನ್ನು ಮರಳಿಸಬಹುದು. ಚರ್ಮದ ಮೇಲಿನ ಸತ್ತ ಕೋಶಗಳನ್ನು ತೆಗೆದು, ಹೊಳಪು ನೀಡುತ್ತದೆ. ನೋವುಗಳ ಪರಿಹಾರಕ್ಕಾಗಿ ಬೆಚ್ಚಗಿನ ಮಣ್ಣಿನಿಲ್ಲಿ ಹುದುಗಿ ಕೂರುವುದು ಜನಪ್ರಿಯ ಕ್ರಮ. ಇದರಿಂದ ಶರೀರಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡಿ, ಒತ್ತಡವನ್ನೂ ನಿವಾರಿಸಿಕೊಳ್ಳಬಹುದು.

ಇದನ್ನೂ ಓದಿ: Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

ತೊಂದರೆಗಳಿವೆಯೇ?

ಎಲ್ಲಕ್ಕಿಂತ ಮುಖ್ಯವಾಗಿದ್ದು ಅಲರ್ಜಿ. ಮಣ್ಣಲ್ಲಿ ಇರಬಹುದಾದ ಕೆಲವು ಖನಿಜಗಳು ಹಲವರ ಚರ್ಮಕ್ಕೆ ಅಲರ್ಜಿಯನ್ನು ತರಬಹುದು. ಇದಲ್ಲದೆ ಸ್ವಚ್ಛತೆಯ ಬಗ್ಗೆಯೂ ಗಮನ ನೀಡಬೇಕು. ಯಾವುದೇ ಸ್ಪಾದಲ್ಲಿ ಇಂಥವನ್ನು ಬಳಸುವುದಾದರೂ, ಶುಚಿತ್ವದ ಬಗ್ಗೆ ಬಹಳ ಲಕ್ಷ್ಯ ವಹಿಸುವಂಥ ಜಾಗವನ್ನೇ ಆಯ್ಕೆ ಮಾಡಿ. ಈಗಾಗಲೇ ಒಣ ಚರ್ಮದ ಸಮಸ್ಯೆ ಇರುವವರಿಗೆ ಬೆಂಟೋನೈಟ್‌ ಮಣ್ಣಿನ ಪ್ಯಾಕ್‌ ಹಾಕಿದರೆ ಶುಷ್ಕತೆ ಹೆಚ್ಚುತ್ತದೆ. ಹಾಗಾಗಿ ಯಾರಿಗೆ ಯಾವುದು ಎಂಬ ಬಗ್ಗೆ ಮಾಹಿತಿ ಹೊಂದುವುದು ಅಗತ್ಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

Monsoon Jacket Styling Tips: ಉಡುಪಿನ ಮೇಲೆ ಜಾಕೆಟ್‌ ಧರಿಸಿದಾಕ್ಷಣ ಕಂಪ್ಲೀಟ್‌ ಲುಕ್‌ ಬದಲಾಗುತ್ತದೆ. ಪದೇ ಪದೇ ಒಂದೇ ಜಾಕೆಟ್‌ ಧರಿಸಿದರೂ ಒಂದೇ ಬಗೆಯದ್ದಾಗಿ ಕಾಣಿಸುತ್ತದೆ. ಹಾಗಾದಲ್ಲಿ, ಎಲ್ಲಾ ಉಡುಪುಗಳ ಮೇಲೆ ಭಿನ್ನ-ವಿಭಿನ್ನವಾಗಿ ಹೇಗೆಲ್ಲಾ ಜಾಕೆಟ್‌ ಧರಿಸಿ ಸ್ಟೈಲಿಶ್‌ ಆಗಿ ಕಾಣಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Jacket Styling Tips
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಜಾಕೆಟ್‌ (Monsoon Jacket Styling Tips) ಧರಿಸಿಯೂ ಸ್ಟೈಲಿಶ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು, ಮಳೆಗಾಲದಲ್ಲಿ ಹೊರಗೆ ಹೋಗುವಾಗ ಧರಿಸಿದ ಉಡುಪಿನ ಮೇಲೆ ಜಾಕೆಟ್‌ ಧರಿಸುವುದು ಸಾಮಾನ್ಯ. ಆದರೆ, ಪದೇ ಪದೇ ಒಂದೇ ಜಾಕೆಟ್‌ ಧರಿಸಿದರಂತೂ ಪ್ರತಿ ಬಾರಿಯೂ ಒಂದೇ ಲುಕ್‌ನಲ್ಲಿ ಕಾಣಿಸುವುದು ಗ್ಯಾರಂಟಿ. ಹಾಗೆಂದು, ಎಲ್ಲರ ಬಳಿಯಲ್ಲೂ ಒಂದೊಂದು ಉಡುಪಿಗೂ ಒಂದೊಂದು ಜಾಕೆಟ್‌ ಸಂಗ್ರಹವಿರುವುದಿಲ್ಲ. ಬದಲಿಗೆ ಒಂದೆರೆಡು ಜಾಕೆಟ್‌ಗಳಲ್ಲೇ ಇಡೀ ಮಾನ್ಸೂನ್‌ ಸೀಸನ್‌ ಕಳೆಯಬೇಕಾಗುತ್ತದೆ. ಅಂತಹವರೂ ಕೂಡ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿದಲ್ಲಿ, ಜಾಕೆಟ್‌ ಧರಿಸಿದ ಮೇಲೂ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಸ್ಟೈಲಿಂಗ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್ ಕರಣ್‌ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

Monsoon Jacket Styling

ಕಾಶ್ಯುವಲ್‌ ಉಡುಪಿಗೆ ಜಾಕೆಟ್‌

ವೆಸ್ಟರ್ನ್‌ ಹಾಗೂ ಯಾವುದೇ ಕ್ಯಾಶುವಲ್‌ ಉಡುಪಿನ ಮೇಲೆ ಜಾಕೆಟ್‌ ಧರಿಸುವಂತವರು ಆದಷ್ಟೂ ಕಂಟೆಂಪರರಿ ಡಿಸೈನ್‌ನ ಜಾಕೆಟ್‌ ಧರಿಸುವುದು ಉತ್ತಮ. ಅದರಲ್ಲೂ ಧರಿಸುವ ಉಡುಪಿಗೆ ಜಾಕೆಟ್‌ ಹೊಂದುವುದು ಮುಖ್ಯ.

ಮಿನಿಮಲ್‌ ಆಕ್ಸೆಸರೀಸ್‌ ಇರಲಿ

ಜಾಕೆಟ್‌ ಧರಿಸಿದಾಗ ಆದಷ್ಟೂ ಮಿನಿಮಲ್‌ ಆಕ್ಸೆಸರೀಸ್‌ ಧರಿಸುವುದು ಉತ್ತಮ. ಯಾಕೆಂದರೇ, ಮೆಸ್ಸಿಯಾಗಿ ಕಾಣಿಸಬಹುದು. ಹಾಗಾಗಿ ಆಕ್ಸೆಸರೀಸ್‌ ಧರಿಸದಿದ್ದರೂ ಓಕೆ.

Monsoon Jacket

ಎಥ್ನಿಕ್‌ ಡ್ರೆಸ್‌ಗೆ ಜಾಕೆಟ್‌

ಎಥ್ನಿಕ್‌ ಡ್ರೆಸ್‌ಗೆ ವೆಸ್ಟರ್ನ್ ಲುಕ್‌ ನೀಡುವ ಜಾಕೆಟ್‌ ಆಷ್ಟಾಗಿ ಹೊಂದದು. ಆದರೂ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಮೇಕೋವರ್‌ ಮಾಡಿದಲ್ಲಿ ನೋಡಲು ಅಂದವಾಗಿ ಬಿಂಬಿಸಬಲ್ಲದು. ಇದಕ್ಕಾಗಿ ಧರಿಸುವ ಉಡುಪು ಪ್ರಿಂಟೆಡ್‌ನದ್ದಾಗಿದ್ದಲ್ಲಿ ಅದಕ್ಕೆ ಸಾದಾ ಸಾಲಿಡ್‌ ಶೇಡ್‌ನ ಜಾಕೆಟ್‌ ಧರಿಸುವುದು ಉತ್ತಮ. ಸಾದಾ ಡ್ರೆಸ್‌ಗೆ ಪ್ರಿಂಟೆಡ್‌ ಜಾಕೆಟ್‌ ಧರಿಸಬಹುದು.

ಫಂಕಿ ಲುಕ್‌ ಜಾಕೆಟ್‌ಗಾದಲ್ಲಿ

ಫಂಕಿ ಲುಕ್‌ ಇರುವಂತಹ ಜಾಕೆಟ್‌ಗಳನ್ನು ಧರಿಸುವುದಾದಲ್ಲಿ ಆದಷ್ಟೂ ವೆಸ್ಟರ್ನ್‌ ಲುಕ್‌ ಉಡುಪುಗಳನ್ನೇ ಮ್ಯಾಚ್‌ ಮಾಡಬೇಕಾಗುತ್ತದೆ. ಅದರಲ್ಲೂ ಸ್ಲಿಮ್‌ ಫಿಟ್‌ ಜಾಕೆಟ್‌ ಉತ್ತಮ.

Monsoon Styling

ಜಾಕೆಟ್‌ ಸೀರೆ

ಸೀರೆಗೂ ಜಾಕೆಟ್ಟಾ ಎಂದುಕೊಂಡರೇ, ಹೌದು. ಹೀಗೂ ಧರಿಸಬಹುದು. ಆದರೆ, ಸೀರೆಯ ಬಣ್ಣಕ್ಕೆ ಹೊಂದುವಂತಹ ಜಾಕೆಟ್‌ ಇದ್ದರೇ ಉತ್ತಮ. ಪಲ್ಲುವನ್ನು ಜಾಕೆಟ್‌ ಮೇಲೆ ಡ್ರೆಪ್‌ ಮಾಡಿದಲ್ಲಿ ಜಾಕೆಟ್‌ ಸೀರೆಯಂತೆ ಕಾಣಿಸಬಲ್ಲದು.

ಇದನ್ನೂ ಓದಿ: Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

ಪಸರ್ನಾಲಿಟಿಗೆ ತಕ್ಕಂತಿರಲಿ

ಜಾಕೆಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಹೆಸರಲ್ಲಿ ಮನ ಬಂದಂತೆ ಧರಿಸಿದರೇ ಚೆನ್ನಾಗಿ ಕಾಣದು. ಸ್ಲಿಮ್‌ ಇರುವವರಿಗೆ ಜಾಕೆಟ್‌ ಸ್ಟೈಲಿಂಗ್‌ ಓಕೆ. ಆದರೆ, ಪ್ಲಂಪಿಯಾಗಿರುವವರು ಮಾತ್ರ, ಇತರೇ ಡ್ರೆಸ್‌ಗಳೊಂದಿಗೆ ಜಾಕೆಟ್‌ ಧರಿಸುವಾಗ ಆದಷ್ಟೂ ಲೈಟ್‌ವೈಟ್‌ ಜಾಕೆಟ್‌ ಅಥವಾ ಸ್ಲಿಮ್‌ ಫಿಟ್‌ಜಾಕೆಟ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Designer Hairpins Fashion: ಕೂದಲಿನ ಅಂದವನ್ನು ಹೆಚ್ಚಿಸಿ, ಗ್ರ್ಯಾಂಡ್‌ ಲುಕ್‌ ನೀಡುವಂತಹ ವೆರೈಟಿ ವಿನ್ಯಾಸದ ಡಿಸೈನರ್‌ ಹೇರ್‌ಪಿನ್‌ಗಳು ಆಗಮಿಸಿವೆ. ಅತಿ ಸುಲಭವಾಗಿ ಇಡೀ ಹೇರ್‌ಸ್ಟೈಲನ್ನು ಅಂದಗಾಣಿಸುವ ಇವು ಯಾವ್ಯಾವ ಬಗೆಯಲ್ಲಿ ಲಭ್ಯ? ಯಾವ ಕೂದಲಿಗೆ ಯಾವುದು? ಎಂಬುದರ ಬಗ್ಗೆ ಹೇರ್‌ಸ್ಟೈಲಿಸ್ಟ್ಗಳು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Designer Hairpins Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವಂತಹ ವೆರೈಟಿ ಡಿಸೈನರ್‌ ಹೇರ್‌ಪಿನ್‌ಗಳು (Designer Hairpins Fashion) ಟ್ರೆಂಡಿಯಾಗಿವೆ. ಸಿಂಪಲ್‌ ಪರ್ಲ್ ಡಿಸೈನ್‌ನಿಂದಿಡಿದು ಸ್ಟೋನ್‌ನಿಂದ ಸಿಂಗಾರಗೊಂಡ ಮಲ್ಟಿ ಡಿಸೈನ್‌ನ ಹೇರ್‌ಪಿನ್‌ಗಳು ಹೇರ್‌ಸ್ಟೈಲ್‌ ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಹೆಣ್ಣುಮಕ್ಕಳ ಕೂದಲಿನ ಅಂದವನ್ನು ಹೆಚ್ಚಿಸಿ, ಗ್ರ್ಯಾಂಡ್‌ ಲುಕ್‌ ನೀಡುವ ಈ ಡಿಸೈನರ್‌ ಹೇರ್‌ಪಿನ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ದೊರೆಯುತ್ತಿವೆ. ಆಯಾ ಕೂದಲಿನ ವಿನ್ಯಾಸಕ್ಕೆ ತಕ್ಕಂತೆ ಹುಡುಗಿಯರನ್ನು ಸಿಂಗರಿಸುತ್ತಿವೆ.

Designer Hairpins Fashion

ಡಿಸೈನರ್‌ ಹೇರ್‌ಪಿನ್ಸ್ ಲೋಕ

ಫ್ಯಾನ್ಸಿ ಶಾಪ್‌ಗಳಿಗೆ ಕಾಲಿಟ್ಟರೇ ಸಾಕು, ಊಹೆಗೂ ಮೀರಿದ ಡಿಸೈನ್‌ನ ಗ್ರ್ಯಾಂಡ್‌ ಲುಕ್‌ ನೀಡುವಂತಹ ಹಾಗೂ ಅತಿ ಸುಲಭವಾಗಿ ಇಡೀ ಹೇರ್‌ಸ್ಟೈಲ್‌ ಅಂದಗಾಣಿಸುವಂತಹ ಹೇರ್‌ಪಿನ್ಸ್ ಲಭ್ಯ. ಅವುಗಳಲ್ಲಿ ಕ್ಯಾಶುವಲ್‌ ಲುಕ್‌ ನೀಡುವಂತವು ಹಾಗೂ ಎಥ್ನಿಕ್‌ ಲುಕ್‌ ನೀಡುವಂತವು ಮತ್ತು ಪಾರ್ಟಿವೇರ್‌ ಹೇರ್‌ಪಿನ್ಸ್ ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

Designer Hairpins Fashion

ಬೀಡ್ಸ್ -ಪರ್ಲ್ ಹೇರ್‌ಪಿನ್ಸ್

ಕೃತಕ ಮುತ್ತುಗಳಿಂದ ಸಿಂಗರಿಸಿದ ಹೇರ್‌ಪಿನ್‌ಗಳು ಒಂದು ಲೈನ್‌ನಿಂದಿಡಿದು ನಾಲ್ಕೈದು ಸಾಲಿನಂತಿರುವ ಡಿಸೈನ್‌ನವು ಮಿಕ್ಸ್ ಮ್ಯಾಚ್‌ ಬೀಡ್ಸ್‌ನೊಂದಿಗೆ ಡಿಸೈನ್‌ ಮಾಡಿದವು ಯುವತಿಯರ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೇರಿವೆ. ಇವು ಜಡೆ ಹೆಣೆದವರೂ ಕೂಡ ಧರಿಸಬಹುದು. ಫ್ರೀ ಕೂದಲಿನ ಹೇರ್‌ಸ್ಟೈಲ್‌ ಮಾಡುವವರೂ ಧರಿಸಬಹುದು.

Designer Hairpins Fashion

ಡಿಸೈನರ್‌ ಹೇರ್‌ಪಿನ್ಸ್

ಹೂ ಗುಚ್ಛಗಳಂತೆ ಕಾಣುವ ಪುಟ್ಟ ಬಾಚಣಿಗೆಯ ಹಲ್ಲುಗಳ ಮೇಲೆ ಜೋಡಿಸಿದಂತೆ ಕಾಣುವ ಕ್ರಿಸ್ಟಲ್‌, ಬೀಡ್ಸ್, ಪರ್ಲ್‌, ತಂತಿಗಳಿಂದಲೇ ಅಬ್‌ಸ್ಟ್ರಾಕ್ಟ್ ಡಿಸೈನ್‌ ಮಾಡಿರುವ ಹೇರ್‌ ಪಿನ್ಸ್, ಯು ಶೇಪ್‌ ಡಿಸೈನರ್‌ ಹೇರ್‌ಪಿನ್ಸ್ ಸೇರಿದಂತೆ ನಾನಾ ಬಗೆಯವು ಈ ಕೆಟಗರಿಯಲ್ಲಿ ಪ್ರಚಲಿತದಲ್ಲಿವೆ.

ಇದನ್ನೂ ಓದಿ: Printed Handbags F ashion: ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿರುವ ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್ಸ್

ಕೂದಲಿಗೆ ತಕ್ಕಂತೆ ಡಿಸೈನರ್‌ ಹೇರ್‌ಪಿನ್ಸ್ ಆಯ್ಕೆ

· ಸ್ಟ್ರೇಟ್ ಹೇರ್‌ ಇದ್ದವರು ತೀರಾ ಭಾರವಾದ ಡಿಸೈನರ್‌ ಹೇರ್‌ಪಿನ್ಸ್ ಧರಿಸುವುದು ಬೇಡ. ಧರಿಸಿದಾಗ ಜಾರಬಹುದು, ಇಲ್ಲವೇ ಕೂದಲು ಕಿತ್ತು ಬರಬಹುದು.
· ಕೂದಲಿಗೆ ಮೆಸ್ಸಿ ವಿನ್ಯಾಸ ಮಾಡಿದಾಗ ಡಿಸೈನರ್‌ ಹೇರ್‌ಪಿನ್‌ ಧರಿಸಬಹುದು.
· ಲೈಟ್‌ವೈಟ್‌ ಹೇರ್‌ಪಿನ್‌ಗಳ ಆಯ್ಕೆ ಮಾಡುವುದು ಉತ್ತಮ.
· ಕರ್ಲಿ ಹೇರ್‌ ಇರುವಂತವರು ಆದಷ್ಟೂ ಅಬ್‌ಸ್ಟ್ರಾಕ್ಟ್‌ ಡಿಸೈನ್‌, ಅಥವಾ ಸಿಕ್ಕಿಹಾಕಿಕೊಳ್ಳುವಂತಹ ಕಾಂಪ್ಲೀಕೇಟೆಡ್ ಡಿಸೈನ್‌ ಇರುವಂತವನ್ನು ಆವಾಯ್ಡ್ ಮಾಡುವುದು ಉತ್ತಮ.
· ಚಿಕ್ಕ ಕೂದಲಿರುವವರು ಸಿಂಪಲ್‌ ಲೈನ್ಸ್‌ನಲ್ಲಿ ಡಿಸೈನ್‌ ಮಾಡಿರುವ ಹೇರ್‌ಪಿನ್ಸ್ ಧರಿಸಬಹುದು.
· ಧರಿಸುವ
· ಹೇರ್‌ಪಿನ್ಸ್‌ನ ಫಿನಿಶಿಂಗ್‌ ಚೆನ್ನಾಗಿರಬೇಕು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Printed Handbags Fashion: ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುತ್ತಿರುವ ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್ಸ್

Printed Handbags Fashion: ಸಾದಾ ಹ್ಯಾಂಡ್‌ ಬ್ಯಾಗ್‌ಗಳ ನಡುವೆ ಇದೀಗ ನಾನಾ ಪ್ರಿಂಟ್ಸ್ ಇರುವಂತಹ ಹ್ಯಾಂಡ್‌ಬ್ಯಾಗ್‌ಗಳು ಟ್ರೆಂಡಿಯಾಗಿವೆ. ಇವುಗಳೊಂದಿಗೆ ಎಲ್ಲಾ ಬಗೆಯ ಉಡುಪಿನೊಂದಿಗೆ ಧರಿಸಬಹುದಾದಂತಹ ಮಲ್ಟಿಶೇಡ್‌ನವು ಬಂದಿವೆ. ಈ ಕುರಿತಂತೆ ಇಲ್ಲಿದೆ ವಿವರ.

VISTARANEWS.COM


on

Printed Handbags Fashion
ಚಿತ್ರಗಳು: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಿಂಟೆಡ್‌ ಹ್ಯಾಂಡ್‌ಬ್ಯಾಗ್ಸ್ (Printed Handbags Fashion) ಇದೀಗ ಉದ್ಯೋಗಸ್ಥ ಮಹಿಳೆಯರನ್ನು ಸೆಳೆದಿವೆ. ಸಾಲಿಡ್‌ ಶೇಡ್ಸ್ ಡಿಸೈನ್‌ ಹೊಂದಿದ ಹ್ಯಾಂಡ್‌ಬ್ಯಾಗ್ಸ್ ಟ್ರೆಂಡ್‌ ನಡುವೆ ಇದೀಗ ನಾನಾ ಬಗೆಯ ಪ್ರಿಂಟ್ಸ್ ಇರುವಂತವು ಕೂಡ ಟ್ರೆಂಡಿಯಾಗಿವೆ. ಎಲ್ಲಾ ಬಗೆಯ ಉಡುಪು ಹಾಗೂ ಸೀರೆಯೊಂದಿಗೂ ಮ್ಯಾಚ್‌ ಮಾಡಬಹುದಾದಂತಹ ಮಲ್ಟಿಶೇಡ್‌ನವು ಹೆಚ್ಚಾಗಿ ಮಹಿಳೆಯರನ್ನು ಆಕರ್ಷಿಸತೊಡಗಿವೆ.

Printed Handbags Fashion

ಪ್ರಿಂಟೆಡ್‌ ಹ್ಯಾಂಡ್‌ಬ್ಯಾಗ್ಸ್ ಜರ್ನಿ

“ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್ಸ್ ಮೊದಲಿನಿಂದಲೂ ಇದ್ದವು. ಆದರೆ, ಈ ಮೊದಲು ಅಷ್ಟಾಗಿ ಟ್ರೆಂಡಿಯಾಗಿರಲಿಲ್ಲ. ಮಹಿಳೆಯರು ಹೆಚ್ಚಾಗಿ ಸಾದಾ ಹಾಗೂ ಸಾಲಿಶ್‌ ಶೇಡ್‌ನವನ್ನು ಮಾತ್ರ ಬಳಸುತ್ತಿದ್ದರು. ಇನ್ನು, ದೊಡ್ಡ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರ, ಈ ಪ್ರಿಂಟೆಡ್‌ ಡಿಸೈನ್‌ನವು ದೊರೆಯುತ್ತಿದ್ದವು. ಆದರೆ, ಅವುಗಳ ಬೆಲೆ ದುಬಾರಿಯಾಗಿರುತ್ತಿದ್ದದ್ದರಿಂದ ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆಯಿತ್ತು. ಬರಬರುತ್ತಾ ಈ ಡಿಸೈನ್‌ನವು ಕೂಡ ಸಾಮಾನ್ಯ ಮಹಿಳೆಯರ ಕೈಗೆಟಕುವಂತಹ ದರದಲ್ಲಿ ದೊರೆಯಲಾರಂಭಿಸಿದವು. ಬ್ರಾಂಡ್‌ರಹಿತವಾಗಿಯೂ ಸಿಗಲಾರಂಭಿಸಿದವು. ಪರಿಣಾಮ, ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್‌ಗಳು ಚಾಲ್ತಿಗೆ ಬಂದವು ಎನ್ನುತ್ತಾರೆ ಇಮೇಜ್‌ ಸ್ಟೈಲಿಸ್ಟ್ ರೀಟಾ.

Printed Handbags Fashion

ಟ್ರೆಂಡಿಯಾಗಿರುವ ಪ್ರಿಂಟೆಡ್‌ ಬ್ಯಾಗ್ಸ್

ಫ್ಲೋರಲ್‌, ಟ್ರಾಪಿಕಲ್‌, ಜೆಮಿಟ್ರಿಕಲ್‌, ಸ್ಟ್ರೈಪ್ಸ್, ಜೀಬ್ರಾ ಪ್ರಿಂಟ್ಸ್, ವೈಲ್ಡ್ ಅನಿಮಲ್‌ ಪ್ರಿಂಟ್ಸ್, ರಂಗೋಲಿ ಡಿಸೈನ್ಸ್, ಮಂಡಲಾ ಆರ್ಟ್, ಅಬ್‌ಸ್ಟ್ರಾಕ್ಟ್‌ ಆರ್ಟ್ ಸೇರಿದಂತೆ ನಾನಾ ಪ್ರಿಂಟ್ಸ್‌ಗಳಿರುವ ಹ್ಯಾಂಡ್‌ಬ್ಯಾಗ್‌ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಚಿಕ್ಕ ಪರ್ಸ್‌ನಂತಹ ಸೈಜಿನಿಂದಿಡಿದು ಟೊಟೆ ಬ್ಯಾಗ್‌ನಂತಹ ದೊಡ್ಡ ಹ್ಯಾಂಡ್‌ಬ್ಯಾಗ್‌ಗಳ ವಿನ್ಯಾಸದಲ್ಲೂ ದೊರೆಯುತ್ತಿವೆ.

Printed Handbags Fashion

ಪ್ರಿಂಟೆಡ್‌ ಹ್ಯಾಂಡ್‌ಬ್ಯಾಗ್ಸ್ ರಿಪ್ಲೀಕಾ

ದೊಡ್ಡ ಬ್ರಾಂಡ್‌ಗಳ ಪ್ರಿಂಟೆಡ್‌ ಹ್ಯಾಂಡ್‌ ಬ್ಯಾಗ್‌ಗಳು ಕೊಂಚ ದುಬಾರಿ. ಇದನ್ನು, ಮನಗೊಂಡ ಲೋಕಲ್‌ ಹ್ಯಾಂಡ್‌ಬ್ಯಾಗ್‌ ತಯಾರಕರು ಅವುಗಳ ಕಾಪಿ ತರಲಾರಂಭಿಸಿದ್ದಾರೆ. ಬ್ರಾಂಡ್‌ ಹೆಸರು ಅಚ್ಚಾಗಾದಿದ್ದರೂ ನೋಡಲು ಥೇಟ್‌ ಅವುಗಳಂತೆಯೇ ಕಾಣಿಸುತ್ತವೆ. ಇವು ಕೈಗೆಟಕುವ ಬೆಲೆಯಲ್ಲಿ ದೊರೆಯಲಾರಂಭಿಸಿವೆ ಎನ್ನುತ್ತಾರೆ ಬ್ಯಾಗ್‌ ಮಾರಾಟಗಾರರು

ಇದನ್ನೂ ಓದಿ: New Trend: ಕೋಟ್‌ ರಹಿತ ಪ್ಯಾಂಟ್ ಸೂಟ್ಸ್ ಇದೀಗ ಹೊಸ ಟ್ರೆಂಡ್!

ಪ್ರಿಂಟೆಡ್‌ ಬ್ಯಾಗ್‌ ಆಯ್ಕೆ ಹೇಗೆ?

  • ಟ್ರೆಂಡಿಯಾಗಿರುವ ಪ್ರಿಂಟ್ಸ್ ಇರುವಂತವನ್ನು ಸೆಲೆಕ್ಟ್ ಮಾಡಿ.
  • ಬ್ಲ್ಯಾಕ್‌ ಹಾಗೂ ವೈಟ್‌ ಎಲ್ಲಾ ಔಟ್‌ ಫಿಟ್‌ಗಳಿಗೂ ಮ್ಯಾಚ್‌ ಮಾಡಬಹುದು.
  • ಟೂ ಇನ್‌ ಒನ್‌ ಶೈಲಿಯಲ್ಲಿ ಧರಿಸಬಹುದಾದಂಥವು ಟ್ರೆಂಡ್‌ನಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

New Trend: ಕೋಟ್‌ ರಹಿತ ಪ್ಯಾಂಟ್ ಸೂಟ್ಸ್ ಇದೀಗ ಹೊಸ ಟ್ರೆಂಡ್!

New Trend: ಇದೀಗ ಕೋಟ್‌ ಇಲ್ಲದ ಪ್ಯಾಂಟ್‌ ಸೂಟ್‌ಗಳು ಟ್ರೆಂಡಿಯಾಗಿವೆ. ನ್ಯೂಡ್‌ ಶೇಡ್‌ನ ಕೋ ಆರ್ಡ್ ಸೆಟ್‌ ರೂಪದಲ್ಲಿ ಕಾಣಿಸಿಕೊಂಡಿರುವ ಈ ಕ್ರಾಪ್‌ ವೇಸ್ಟ್‌ಕೋಟ್‌ ಪ್ಯಾಂಟ್‌ಗಳ ಫ್ಯಾಷನ್‌ ಬಗ್ಗೆ ಇಲ್ಲಿದೆ ಒಂದಿಷ್ಟು ಡಿಟೇಲ್ಸ್.

VISTARANEWS.COM


on

New Trend
ಚಿತ್ರಗಳು: ಶ್ವೇತಾ ತಿವಾರಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೋಟ್‌ ರಹಿತ ಪ್ಯಾಂಟ್‌ ಸೂಟ್ಸ್ (New Trend) ಇದೀಗ ಟ್ರೆಂಡಿಯಾಗಿದೆ. ಹೌದು, ಇತ್ತೀಚೆಗೆ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಮಾಡೆಲ್‌ಗಳು ಈ ಶೈಲಿಯ ಪ್ಯಾಂಟ್‌ಸೂಟ್‌ನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ನಟಿ ಶ್ವೇತಾ ತಿವಾರಿ ಧರಿಸಿದ್ದ ನ್ಯೂಡ್‌ ಕೋಟ್‌ಲೆಸ್‌ ಪ್ಯಾಂಟ್‌ ಸೂಟ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದ್ದು, ಸದ್ಯ ಬಾಲಿವುಡ್‌ ಫ್ಯಾಷನ್‌ ಲೋಕದಲ್ಲಿ ಟ್ರೆಂಡಿಯಾಗಿವೆ.

ಬದಲಾದ ಸೂಟ್‌ ಕಾನ್ಸೆಪ್ಟ್

“ಸೂಟ್‌ ಅಂದರೇ, ಕೋಟ್‌ ಎನ್ನುವ ಕಾಲವೊಂದಿತ್ತು. ಆದರೆ, ಈ ವೇಸ್ಟ್‌ಕೋಟ್‌ ಇದೀಗ ಕಂಪ್ಲೀಟ್‌ ಬದಲಾಗಿದೆ. ಹೌದು, ಇದಕ್ಕೆ ತಕ್ಕಂತೆ, ಸೆಲೆಬ್ರೆಟಿಗಳು ಕೂಡ ಗ್ಲಾಮರಸ್‌ ಲುಕ್‌ ನೀಡುವಂತಹ ಕ್ರಾಪ್‌ ವೇಸ್ಟ್‌ಕೋಟ್‌ ಜೊತೆಗೆ ಪ್ಯಾಂಟ್‌ಸೂಟನ್ನು ಕೋಟ್‌ ರಹಿತ ಧರಿಸಲಾರಂಭಿಸಿದ್ದಾರೆ. ಆದರೆ, ಇವು ನೋಡಲು ವಿಭಿನ್ನವಾಗಿ ಕಾಣಿಸುತ್ತವೆ. ಸ್ಲಿವ್‌ಲೆಸ್‌ ವೇಸ್ಟ್‌ಕೋಟ್‌ಗಳು ಈ ಪ್ಯಾಂಟ್‌ ಸೂಟ್‌ಗೆ ಸಾಥ್‌ ನೀಡಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಕ್ಲೆಮೆಂಟೊ. ಅವರ ಪ್ರಕಾರ, ಇಂತಹ ವೇಸ್ಟ್‌ಕೋಟ್‌ಗಳು ಕೇವಲ ಹೆಣ್ಣುಮಕ್ಕಳ ಫ್ಯಾಷನ್‌ನಲ್ಲಿ ಮಾತ್ರ ಕಂಡು ಬರಲು ಸಾಧ್ಯ. ಇನ್ನೂ ಪುರುಷರ ಪ್ಯಾಂಟ್‌ ಸೂಟ್‌ನಲ್ಲಿ ಇವು ಎಂಟ್ರಿ ನೀಡಿಲ್ಲ. ನೀಡಿದ್ದರೂ ಅದು ಇನ್ನೂ ನಮ್ಮ ರಾಷ್ಟ್ರಕ್ಕೆ ಕಾಲಿಟ್ಟಿಲ್ಲ ಎನ್ನುತ್ತಾರೆ.

ಏನಿದು ಕೋಟ್‌ ಇಲ್ಲದ ಪ್ಯಾಂಟ್‌ ಸೂಟ್‌?

ಸ್ಲಿವ್‌ಲೆಸ್‌ ಕ್ರಾಪ್‌ ಶೈಲಿಯ ವೇಸ್ಟ್ ಕೋಟ್‌ ಜೊತೆಗಿನ ಪ್ಯಾಂಟ್‌ ಸೂಟ್‌ ಎನ್ನಬಹುದು. ಫುಲ್‌ ಸೆಟ್‌ನೊಳಗೆ ಬರುವಂತಹ ಉಡುಗೆಯೇ ಇದರ ಹೈಲೈಟ್‌! ಸಿಂಪಲ್‌ ಆಗಿ ಹೇಳಬೇಕೆಂದರೇ, ಇದರಲ್ಲಿ ಧರಿಸುವ ಕೋಟ್‌ ಮೈನಸ್‌ ಆಗಿ ಕೇವಲ ವೇಸ್ಟ್‌ಕೋಟ್‌ ಟಾಪ್‌ನ ಪಾತ್ರವಹಿಸುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಇದನ್ನೂ ಓದಿ: Fashion Show News: ಸಿಇಎಸ್‌ ಫ್ಯಾಷನ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ರ‍್ಯಾಂಪ್‌ ಶೋ

ಪ್ಯಾಂಟ್‌ ಸೂಟ್‌ಗೂ ಗ್ಲಾಮರ್‌ ಟಚ್‌

ಸೂಟ್‌ನಲ್ಲಿ ಗ್ಲಾಮರ್‌ ಟಚ್‌ ನೀಡಲು ಫ್ಯಾಷನ್‌ ಡಿಸೈನರ್‌ ಗಳು ಏನೆಲ್ಲಾ ಸರ್ಕಸ್ ನಡೆಸುತ್ತಾರೆಂದರೇ, ಇದೀಗ ಇವನ್ನು ಕೋಟ್‌ ಇಲ್ಲದೇ ಡಿಸೈನ್‌ ಮಾಡಿ ಚಾಲ್ತಿಗೆ ತಂದಿದ್ದಾರೆ. ಅಚ್ಚರಿ ಎಂದರೇ ಇವು ಇದೀಗ ಪ್ಯಾಂಟ್‌ಸೂಟ್‌ ಪ್ರಿಯ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರನ್ನು ಸೆಳೆಯತೊಡಗಿವೆ. ಈ ವರ್ಗದ ಯುವತಿಯರ ಫಾರ್ಮಲ್‌ ಔಟ್‌ಫಿಟ್‌ ಕೆಟಗರಿಗೆ ಸೇರಿವೆ ಎನ್ನುತ್ತಾರೆ ಪ್ಯಾಂಟ್‌ ಸೂಟ್‌ ಸ್ಪೆಷಲಿಸ್ಟ್ ರಿಯಾ.

  • ನ್ಯೂಡ್‌, ನ್ಯೂಟ್ರಲ್‌ ಶೇಡ್‌ನವು ಟ್ರೆಂಡಿಯಾಗಿವೆ.
  • ಸಿಂಪಲ್‌ ಲುಕ್‌ಗೆ ಮಾತ್ರ ಇವು ಆಕರ್ಷಕವಾಗಿ ಕಾಣಿಸುತ್ತವೆ.
  • ಕಾರ್ಪೋರೇಟ್‌ ಮಹಿಳೆಯರ ಫ್ಯಾಷನ್‌ನಲ್ಲಿ ಸ್ಥಾನ ಪಡೆದಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Monsoon Jacket Styling Tips
ಫ್ಯಾಷನ್8 mins ago

Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

Dengue fever
ಕರ್ನಾಟಕ13 mins ago

Dengue fever: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿದ ರಾಜ್ಯ ಸರ್ಕಾರ

mamatheya thottilu inauguration programme at gangavathi
ಕರ್ನಾಟಕ15 mins ago

Koppala News: ʼಮಮತೆಯ ತೊಟ್ಟಿಲುʼವಿನ 4 ಅನಾಥ ಮಕ್ಕಳು ವಿದೇಶಿ ದಂಪತಿಗಳ ಮಡಿಲಿಗೆ!

Viral Video
Latest23 mins ago

Viral Video: ಸಾವು ಹೇಗೆಲ್ಲ ಹೊಂಚು ಹಾಕುತ್ತದೆ! ಈ ವಿಡಿಯೊ ನೋಡಿ

Viral Video
ವೈರಲ್ ನ್ಯೂಸ್29 mins ago

Viral Video: ವಿಮಾನದಲ್ಲಿ ದಢೂತಿ ಹೆಂಗಸಿನ ಡ್ಯಾನ್ಸ್‌! ನಗಲಾರದೆ ಅಳಲಾರದೆ ತೊಳಲಾಡಿದ ಪ್ರಯಾಣಿಕರು!

OTT Releases
ಸಿನಿಮಾ38 mins ago

OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

Sexual Harassment
Latest45 mins ago

Sexual Harassment: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

Woman Doctor
ದೇಶ56 mins ago

ಬೇರೆ ಹುಡುಗಿಗೆ ಮೋಸ ಆಗಬಾರದು; ಮದುವೆಯಾಗಲ್ಲ ಎಂದ ಗೆಳೆಯನ ಗುಪ್ತಾಂಗ ಕತ್ತರಿಸಿದ ಯುವತಿ! Video ಇದೆ

Designer Hairpins Fashion
ಫ್ಯಾಷನ್1 hour ago

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Amritpal Singh
ದೇಶ2 hours ago

Amritpal Singh: ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ಗೆ ಪೆರೋಲ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌