Kidnap case : ಕೋಟಿ ಆಸೆಗೆ ಸಿನಿಮಾ ಸ್ಟೈಲ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ ವಂಚಕನ ಕಿಡ್ನ್ಯಾಪ್‌ - Vistara News

ಬೆಂಗಳೂರು

Kidnap case : ಕೋಟಿ ಆಸೆಗೆ ಸಿನಿಮಾ ಸ್ಟೈಲ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ ವಂಚಕನ ಕಿಡ್ನ್ಯಾಪ್‌

Kidnap case : ವಂಚನೆ ಕೇಸ್‌ನಲ್ಲಿ ಅರೆಸ್ಟ್‌ ಆಗಿ ಜಾಮೀನಿನ ಮೇಲೆ ಹೊರ ಬಂದವನ್ನು ಖತರ್ನಾಕ್‌ ಗ್ಯಾಂಗ್‌ವೊಂದು ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನ್ಯಾಪ್‌ ಮಾಡಿದೆ. ಬೆಂಗಳೂರಿನಲ್ಲಿ ಕಿಡ್ನ್ಯಾಪ್‌ ಮಾಡಿ ತೆಲಂಗಾಣದ ಫಾರ್ಮ್‌ ಹೌಸ್‌ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದೆ.

VISTARANEWS.COM


on

kidnap Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೋಟಿ ಕೋಟಿ ಹಣಕ್ಕಾಗಿ ಪ್ರಭಾವಿಗಳ ಹೆಸರು ಹೇಳಿ, ಬೆದರಿಕೆ ಹಾಕಿ ಅಪಹರಣ (Kidnap case) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೆಲಂಗಾಣ ಮೂಲದ ಅಜ್ಮೀರ್ ರಾಜು ಎಂಬಾತನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಆತನ ಮೇಲೆ ಹಲ್ಲೆ ನಡೆಸಿ ಆತನಿಂದ ದುಡ್ಡು ಕೀಳುವ ಪ್ರಯತ್ನ ಕೂಡ ನಡೆದಿತ್ತು ಎನ್ನಲಾಗಿದೆ.

ತೆಲಂಗಾಣ ನಿವಾಸಿಯಾಗಿರುವ ಅಜ್ಮೀರ್ ರಾಜು ದುಬೈನಲ್ಲಿ ಇರುವುದು. ಆನ್‌ಲೈನ್‌ನಲ್ಲಿ ಅನಾಯಸವಾಗಿ ದುಡ್ಡು ಮಾಡುವ ಬುದ್ಧಿವಂತ. ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿಸಿ ಅದನ್ನು ನಾನಾ ಕಾರಣದಿಂದ ರಿಟರ್ನ್ ಬಾರದ ರೀತಿ ನೋಡಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ. ಆದರೆ ಆತನ ಟೈಂ ಕೆಟ್ಟಿತ್ತು, ಬೆಂಗಳೂರಿಗೆ ಬಂದ ಕೂಡಲೇ ಅರೆಸ್ಟ್‌ ಆಗಿದ್ದ.

ಕಳೆದ ವರ್ಷ ಐಪಿಎಲ್ ನೋಡಲು ಬಂದಿದ್ದ ಅಜ್ಮೀರ್‌ನನ್ನು ಪೊಲೀಸರು ಬಂಧಿಸಿದ್ದರು. ಸುಮಾರು ಮೂರು ತಿಂಗಳ ಬಳಿಕ ಜೈಲಿನಿಂದ ಹೊರ ಬಂದಿದ್ದ ಅಜ್ಮೀರ್‌ ರಾಜು, ಎಂಜಿ ರೋಡ್ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ. ಈ ವೇಳೆ ಅಜ್ಮೀರ್‌ ರಾಜುಗೆ ಸಾತ್ವಿಕ್‌ ಎಂಬಾತ ಪರಿಚಯವಾಗಿದ್ದ.

ಇದನ್ನೂ ಓದಿ: Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ

ಕಿಡ್ನ್ಯಾಪ್ ಆದ ದಿನ ತಡರಾತ್ರಿ ಊಟಕ್ಕೆಂದು ಸಾತ್ವಿಕ್‌ ಜತೆಗೆ ಬೈಕ್‌ನಲ್ಲಿ ಹೊರಹೋಗಿದ್ದ. ಊಟ ಸಿಗದ ಕಾರಣ ನೇರವಾಗಿ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ತಾವು ಹೋದಲೆಲ್ಲ ಒಂದು ಸ್ಕಾರ್ಪಿಯೋ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಅನುಮಾನಗೊಂಡ ಅಜ್ಮೀರ್‌ ರಾಜು, ಕಾರು ಚಾಲಕನ ಬಳಿ ಕೇಳಿದ್ದಾನೆ.

ಆಗ ಕಾರಲಿದ್ದ ಆರೇಳು ಜನರು ಏಕಾಏಕಿ ಮುಗಿ ಬಿದ್ದು, ಅಜ್ಮೀರ್‌ನನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ನೇರವಾಗಿ ತೆಲಂಗಾಣಕ್ಕೆ ಕರೆದೊಯ್ದು ಅಲ್ಲಿನ ಫಾರ್ಮ್ ಹೌಸ್‌ನಲ್ಲಿ ಕೂಡಿ ಹಾಕಿದ್ದಾರೆ. ಕಿಡ್ನ್ಯಾಪರ್ಸ್‌ ಐದು ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ಹಣವಿಲ್ಲ ಎಂದಾಗ ಬಿಟ್ ಕಾಯಿನ್‌ಗಳನ್ನು ಟ್ರಾನ್ಸ್‌ಫರ್‌ ಮಾಡು ಎಂದು ಪಟ್ಟು ಹಿಡಿದಿದ್ದಾರೆ. ಇಂಟರ್ ನ್ಯಾಷನಲ್ ಅಕೌಂಟ್‌ನಲ್ಲಿರುವ ಹಣವನ್ನೂ ವರ್ಗಾವಣೆ ಮಾಡುವಂತೆ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದರಂತೆ.

ಇನ್ನು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರಂತೆ. ದೂರು ನೀಡಿದರೆ ನಮಗೆ ತೆಲಂಗಾಣ ಎಂಪಿ, ಎಂಎಲ್‌ಎ ಗೊತ್ತು. ಈ ಕೇಸ್ ನಿಲ್ಲದೆ ಇರುವ ಹಾಗೆ ಮಾಡಿ ನಿನ್ನ ಕೊಲೆ ಮಾಡುತ್ತೀವಿ ಎಂದು ಕೊಲೆ ಬೆದರಿಕೆಯನ್ನೂ ಹಾಕಿದ್ದರಂತೆ. ಸದ್ಯ ಅಜ್ಮೀರ್‌ ಸ್ನೇಹಿತ ಸಾತ್ವಿಕ್‌ ನೀಡಿದ ದೂರಿನ ಮೇರೆಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

Karnataka Weather Forecast : ಅಬ್ಬರಿಸುತ್ತಿರುವ ಮಳೆಯಿಂದಾಗಿ ನಾನಾ ಅವಾಂತರವೇ ಸೃಷ್ಟಿ ಆಗಿದೆ. ಮಳೆಗೆ (Rain News) ಲಾರಿಗಳ ನಡುವೆ ಮುಖಾಮುಖಿ (Road Accident) ಡಿಕ್ಕಿಯಾದರೆ, ಮತ್ತೊಂದು ಕಡೆ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್‌ ಮರ ಬಿದ್ದು ಜಖಂಗೊಂಡಿದೆ. ಹಲವಾರು ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದೆ.

VISTARANEWS.COM


on

By

karnataka Rain
Koo

ಬೆಳಗಾವಿ/ಶಿವಮೊಗ್ಗ/ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು (Karnataka rain) ಅವಾಂತರವನ್ನೇ (Rain Effect) ಸೃಷ್ಟಿಸಿದೆ. ತೀವ್ರ ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಲಾರಿಗಳ ಮಧ್ಯೆ ಮುಖಾಮುಖಿ (Road Accident) ಡಿಕ್ಕಿಯಾಗಿದೆ. ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕರಿಬ್ಬರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಗಳು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿವೆ. ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Karnataka Rain

ಮಳೆಗೆ ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗತ್ತಿದೆ. ಪರಿಣಾಮ ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಬೃಹತ್ ಮರ ಬಿದ್ದಿದೆ. ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಓಮಿನಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓಮಿನಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

karnataka Rain

ಉಡುಪಿಯಲ್ಲಿ ಮುಳುಗಡೆಯಾದ ಗ್ರಾಮಗಳು

ಪ್ರತಿ ವರ್ಷದಂತೆ ಈ ವರ್ಷವೂ ಉಡುಪಿಯ ಬೈಂದೂರು ತಾಲೂಕಿನಲ್ಲಿ ನೆರೆಹಾವಳಿ ಸೃಷ್ಟಿಯಾಗಿದೆ. ತಾಲೂಕಿನ ನಾವುಂದ, ಬಡಾಕೇರಿ, ಮರವಂತೆ, ಸಾಲ್ಬುಡ, ಅರೆಹೊಳೆ ಕೋಣ್ಕಿ ಹಾಗೂ ಕುದ್ರು ಚಿಕ್ಕಳ್ಳಿ ಪಡುಕೋಣೆ ಭಾಗದಲ್ಲಿ ನೆರೆಹಾವಳಿಗೆ ತುತ್ತಾಗಿವೆ.

ಸ್ಥಳೀಯ ಯುವಕರು ನೆರೆಹಾವಳಿ ಪೀಡಿತ ಪ್ರದೇಶಗಳಿಗೆ ತೆರಳಿ ಅಗತ್ಯ ನೆರವು ನೀಡುತ್ತಿದ್ದಾರೆ. ಮೂರು ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯದ ಜತೆಗೆ ಅಗತ್ಯ ವಸ್ತು ಪೂರೈಸುತ್ತಿದ್ದಾರೆ. ಹೆಚ್ಚುವರಿಯಾಗಿ ಬೈಂದೂರು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೆರೆಪೀಡಿತ ಪ್ರದೇಶಕ್ಕೆ ಕುಂದಾಪುರ ಸಹಾಯಕ ಕಮೀಶನರ್ ರಶ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

ಮನೆಗಳು ಜಲಾವೃತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಬಿಳೆಹೊಂಯ್ಗಿ, ಮಂಜಗುಣಿ ಸೇರಿದಂತೆ 5ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಹೊನ್ನೆಬೈಲ್ ಗ್ರಾಮದಲ್ಲಿ 20 ಮನೆಗಳು ಜಲಾವೃತಗೊಂಡಿದೆ. ಅಂಕೋಲಾ ತಾಲೂಕಿನ 5 ಗ್ರಾಮಗಳಲ್ಲಿ ರಸ್ತೆ ನೀರಿನಿಂದ ಮುಳುಗಿದೆ. ಹೀಗಾಗಿ ಬಿಳೆಹೊಂಯ್ಗಿ, ಹೊನ್ನೆಬೈಲು, ಶಿಂಗನಮಕ್ಕಿ, ಮಂಜಗುಣಿ ಶಾಲೆಗಳಲ್ಲಿ ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ. ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

karnataka rain

50ಕ್ಕೂ ಅಧಿಕ ನಿವಾಸಿಗಳು ಕಾಳಜಿ ಕೇಂದ್ರಕ್ಕೆ ರವಾನೆಯಾಗಿದ್ದಾರೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ವರುಣನ ಅಬ್ಬರಕ್ಕೆ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಇತ್ತ ಭಟ್ಕಳದಲ್ಲೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆ ಹಿನ್ನಲೆ ಭಟ್ಕಳ ರಂಗಿನಕಟ್ಟೆ ಪ್ರದೇಶ ಹೊಳೆಯಂತಾಗಿದೆ. ಭಟ್ಕಳ ತಹಸೀಲ್ದಾರ ನಾಗರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಸಭಾ ಸಿಬ್ಬಂದಿ ಚರಂಡಿಯಲ್ಲಿ ತುಂಬಿರುವ ಮಣ್ಣು, ಕಲ್ಲನ್ನು ತೆರವುಗೊಳಿಸುತ್ತಿದ್ದಾರೆ. ಪಟ್ಟಣದ ಜಾಮೀಯಾಬಾದ್‌ ನಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ. ಕೋಗ್ತಿ ರೋಡ್, ಡೊಂಗರಪಳ್ಳಿ, ಆಝಾದ್‌ನಗರ, ಕಾರಗದ್ದೆ ರಸ್ತೆ ಜಲಾವೃತಗೊಂಡಿದೆ.

ಉಡುಪಿಯಲ್ಲಿ ಉಕ್ಕಿಹರಿದ ಮಡಿಸಾಲು ಹೊಳೆ

ಬ್ರಹ್ಮಾವರ ತಾಲೂಕಿನ ಆಲೂರು ಬಳಿ ಮಡಿಸಾಲು ಹೊಳೆಯು ಉಕ್ಕಿಹರಿದಿದೆ. ಆರೂರು- ಬೆಳ್ಮಾರು ಗ್ರಾಮದ ಮಧ್ಯ ಹರಿಯಲಿದ್ದು, ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆರೆಹಾವಳಿ ಸೃಷ್ಟಿಯಾಗಿದೆ. ಕೃಷಿಕರಿಗೆ ಜೀವನದಿಯಾಗಿದ್ದ ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಹೊಳೆಯ ಪಕ್ಕದ ಎಕರೆಗಟ್ಟಲೆ ಕೃಷಿ ಭೂಮಿ ಜಲಾವೃತಗೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಭತ್ತದ ನಾಟಿ ಮಾಡಿ ಮಾಡಿದ್ದ ಪ್ರದೇಶದಲ್ಲಿ ಈಗ ನೆರೆಹಾವಳಿ ಸೃಷ್ಟಿಯಾಗಿದೆ. ನೆರೆಯಿಂದಾಗಿ ಆರೂರು ಬೆಳ್ಮಾರು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮತ್ತೆ ಮಳೆ ಮುಂದುವರಿದರೆ ಕಿರು ಸೇತುವೆ ಮುಳುಗಡೆಯಾಗುವ ಭೀತಿ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Bengaluru News: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಇದೇ ಜು.5 ರಂದು ಶುಕ್ರವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್‌ ಹಾಲ್‌ನಲ್ಲಿ ಸತ್ಸಂಗ (ಸದ್ವಿಚಾರಗಳ ಸಂಪ್ರೋಕ್ಷಣೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Satsang programme on 5th July in Bengaluru
Koo

ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಜು.5ರಂದು ಶುಕ್ರವಾರ ಸಂಜೆ 5 ಗಂಟೆಗೆ ನಗರದ (Bengaluru News) ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್‌ ಹಾಲ್‌ನಲ್ಲಿ ಸತ್ಸಂಗ (ಸದ್ವಿಚಾರಗಳ ಸಂಪ್ರೋಕ್ಷಣೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇದನ್ನೂ ಓದಿ: Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಸೌಮ್ಯನಾಥ ಸ್ವಾಮೀಜಿ ಉಪಸ್ಥಿತರಿರುವರು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ಬ್ರಹ್ಮಚಾರಿ ಶ್ರೀ ಸಾಯಿ ಕೀರ್ತಿನಾಥ್‌ಜಿ ಮತ್ತು ತಂಡದವರಿಂದ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಕ್ರಮಣ ಗುರುವಂದನ ಬಳಗ ಕಾರ್ಯಕ್ರಮ ಆಯೋಜನೆ ಮತ್ತು ನಿರ್ವಹಿಸಲಿದ್ದಾರೆ.

Continue Reading

ಬೆಂಗಳೂರು

DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

DK Suresh: ದೆಹಲಿಯಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬುಧವಾರ ಭೇಟಿ ಮಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ರಾಜ್ಯದ ಬಾಕಿ ರೈಲ್ವೆ ಹಾಗೂ ಜಲ ಮಿಷನ್ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

VISTARANEWS.COM


on

To complete pending railway projects in the state former MP DK Suresh appeals central government
Koo

ನವದೆಹಲಿ: ರಾಜ್ಯದ ಬಾಕಿ ರೈಲ್ವೆ ಹಾಗೂ ಜಲ ಜೀವನ್‌ ಮಿಷನ್ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh), ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬುಧವಾರ ಭೇಟಿ ಮಾಡಿ, ಮನವಿ ಸಲ್ಲಿಸಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಹೆಜ್ಜಾಲ, ಕನಕಪುರ ಹಾಗೂ ಚಾಮರಾಜನಗರ ಹೊಸ ರೈಲ್ವೆ ಮಾರ್ಗ ಈ ಹಿಂದೆಯೇ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಆಗಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ಅದೇ ರೀತಿ ರಾಜ್ಯದ ಅನೇಕ ರೈಲ್ವೆ ಯೋಜನೆಗಳು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಗೆ ಅನುದಾನ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದು ಅವರು ಕೋರಿದರು.

ಇದನ್ನೂ ಓದಿ: Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳು ಆರು ತಿಂಗಳಿಂದ ಬಾಕಿ ಉಳಿದಿವೆ. ಅವುಗಳಿಗೆ ಮಂಜೂರಾತಿ ಕೊಡಿ ಎಂದು ಡಿ.ಕೆ. ಸುರೇಶ್ ಮನವಿ ಮಾಡಿದ್ದು, ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Drivers Protest: ಆಟೋ, ಕ್ಯಾಬ್ ಚಾಲಕರಿಂದ ದಿಢೀರ್‌ ರಸ್ತೆ ತಡೆ, ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ, ಸಂಚಾರ ಅಸ್ತವ್ಯಸ್ತ

ರಾಜ್ಯ ಸರ್ಕಾರ ಫೆಬ್ರವರಿಯಲ್ಲಿಯೇ ʼಒನ್ ಸಿಟಿ ಒನ್‌ ರೇಟ್ʼ ಆದೇಶವನ್ನು ಹೊರಡಿಸಿದೆ. ಆದೇಶ ಆಗಿ ಆರು ತಿಂಗಳಾದರೂ ಓಲಾ- ಉಬರ್‌ ಸೇರಿ ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶವನ್ನು ಪಾಲನೆ ಮಾಡ್ತಿಲ್ಲ. ಆರ್ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಆರ್ಟಿಓ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದಾರೆ.

VISTARANEWS.COM


on

drivers protest
Koo

ಬೆಂಗಳೂರು: ರಾಜಧಾನಿಯ ಶಾಂತಿನಗರದಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು (Auto Drivers, Cab Drivers) ಓಲಾ- ಉಬರ್‌ (Ola, Uber) ಮುಂತಾದ ಆನ್‌ಲೈನ್‌ ಟ್ಯಾಕ್ಸಿ ವ್ಯವಸ್ಥೆಗಳ ವಿರುದ್ಧ ಸಾರಿಗೆ ಇಲಾಖೆ (Transport department) ಮುಖ್ಯ ಕಚೇರಿಗೆ ಮುತ್ತಿಗೆ (Drivers Protest) ಹಾಕಿದರು. ಬಿಟಿಎಸ್ ರೋಡ್ ಬ್ಲಾಕ್ (Road Block) ಮಾಡಿ ಪ್ರತಿಭಟನೆ (Protest) ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ಸಾವಿರಾರು ಆಟೋ, ಕ್ಯಾಬ್‌ಗಳನ್ನು ತಂದಿರುವ ಚಾಲಕರು ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಆಟೋ ಕ್ಯಾಬ್‌ಗಳನ್ನು ಎಲ್ಲೆಂದಲ್ಲಿ ನಿಲ್ಲಿಸಿದ್ದರಿಂದ ಬಿಟಿಎಸ್ ರೋಡ್‌ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ವಾಹನಗಳೆಲ್ಲ ರಸ್ತೆಯಲ್ಲೇ ನಿಂತವು.

ರಾಜ್ಯ ಸರ್ಕಾರ ಫೆಬ್ರವರಿಯಲ್ಲಿಯೇ ʼಒನ್ ಸಿಟಿ ಒನ್‌ ರೇಟ್ʼ ಆದೇಶವನ್ನು ಹೊರಡಿಸಿದೆ. ಆದೇಶ ಆಗಿ ಆರು ತಿಂಗಳಾದರೂ ಓಲಾ- ಉಬರ್‌ ಸೇರಿ ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶವನ್ನು ಪಾಲನೆ ಮಾಡ್ತಿಲ್ಲ. ಆರ್ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಆರ್ಟಿಓ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಪ್ರಯಾಣಿಕರಿಗೆ ತೊಂದರೆ ಆಗಬಾರದು, ಪ್ರಯಾಣಿಕರಿಂದ ದುಪ್ಪಟ್ಟು ದರ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದೆ. ಆದರೆ ಓಲಾ- ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ದರವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇದರ ಲಾಭವನ್ನು ಚಾಲಕರಿಗೂ ಕೊಡ್ತಿಲ್ಲ. ಇದರಿಂದ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ವಾಹನಗಳನ್ನು ಖರೀದಿ ಮಾಡಿರುವ ಚಾಲಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಈ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಂದು ಇನ್ನಷ್ಟು ದೊಡ್ಡ ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಖಾಸಗಿ ಸಾರಿಗೆ (Private Transport) ಸಂಘಟನೆಗಳ ಅಧ್ಯಕ್ಷ ನಟರಾಜ್ ಶರ್ಮ ಹೇಳಿಕೆ ನೀಡಿದ್ದು, ಓಲಾ ಮತ್ತು ಉಬರ್ ಸಂಸ್ಥೆಗಳ ದರಗಳನ್ನು ನಿಯಂತ್ರಿಸಬೇಕು, ಅವುಗಳ ಲಾಭ ಚಾಲಕರಿಗೆ ನೀಡಬೇಕು, ಪೋರ್ಟರ್ ಕಂಪನಿಯನ್ನು ನಿರ್ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅವರ ಹೇಳಿಕೆ ಹೀಗಿದೆ: ಸೆ.11, 2023ರಂದು ಖಾಸಗಿ ಸಾರಿಗೆ ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿದ್ದೆವು. ಬಸ್, ಆಟೋ, ಟ್ಯಾಕ್ಸಿ, ಗೂಡ್ಸ್, ಶಾಲಾ ವಾಹನಗಳು ಎಲ್ಲರೂ ಸೇರಿ ಸರ್ಕಾರದ ಮುಂದೆ 30 ಬೇಡಿಕೆಗಳನ್ನಿಟ್ಟು ಪ್ರತಿಭಟಿಸಿದೆವು. ಸಾರಿಗೆ ಸಚಿವರು 30 ಬೇಡಿಕೆಗಳಲ್ಲಿ‌ 28 ಬೇಡಿಕೆ ಈಡೇರಿಕೆ ಆಗುತ್ತದೆ ಎಂದಿದ್ದರು. ಅದರಲ್ಲಿ 26 ಬೇಡಿಕೆ ಈಡೇರಿಕೆ ಮಾಡಿದ್ದಾರೆ. ಪೋರ್ಟಲ್, ಬೈಕ್ ಟ್ಯಾಕ್ಸಿ ನಿಲ್ಲಿಸಿದ್ದಾರೆ. ʼಒಂದು ಸಿಟಿ ಒಂದು ದರʼ ಎಲ್ಲದಕ್ಕೂ ಸರ್ಕಾರದಿಂದ ನೋಟಿಫಿಕೇಶನ್ ಬಂದಿದೆ. ಆದರೆ ಸಾರಿಗೆ ಅಧಿಕಾರಿಗಳು ಅವುಗಳನ್ನು ಮಾರ್ಪಾಡು ಮಾಡದೇ ಕಸದ ಬುಟ್ಟಿಗೆ ಬಿಸಾಕಿದ್ದಾರೆ. ನಾವು ಕೇಳಿದರೆ ಕೋರ್ಟ್‌ನಲ್ಲಿ ಇದೆ ಅನ್ನುತ್ತಾರೆ.

ಅನಧಿಕೃತವಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಆಟೋ ಚಾಲಕರು ಕ್ರಮ ಕೈಗೊಳ್ಳಬಾರದು ಅಂತ ಹೇಳಿದ್ದಾರೆ. ನಾವು ಪ್ರಶ್ನೆ ಮಾಡಿದರೆ 10 ಸಾವಿರ, 20 ಸಾವಿರ ಫೈನ್ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಪೋನ್ ಪೇ, ಗೂಗಲ್ ಪೇ ಮೂಲಕ ಹಣ ಪಡೆಯುತ್ತಿದ್ದಾರೆ. ಇವತ್ತು ಸರ್ಕಾರದಿಂದ ಕಾನೂನಿನ ಅಡಿಯಲ್ಲಿ ಎಲ್ಲ ರೂಲ್ಸ್‌ಗಳು ಬಂದಿವೆ. ಅದಕ್ಕೆ ಅಧಿಕಾರಿಗಳು ಸಹಿ ಹಾಕೋಕೆ ಹಿಂದೆ ಮುಂದೆ ನೋಡ್ತಿದ್ದಾರೆ. ಓಲಾ ಮತ್ತು ಉಬರ್ ಸಂಸ್ಥೆಗಳು ಚಾಲಕರಿಗೆ ಎಷ್ಟು ದುಡ್ಡು ಕೊಡ್ತಿದ್ದಾರೆ ಇದು ಹೊರಗಡೆ ಬರಬೇಕು. ಪೋರ್ಟರ್ ಅನ್ನುವ ವಾಹನದ ಜಾಹಿರಾತನ್ನು ಕಿತ್ತು ಎಸೆಯುವ ಕೆಲಸವನ್ನು ಪೊಲೀಸ್ ಮತ್ತು ಸಾರಿಗೆ ಇಲಾಖೆ ಮಾಡಬೇಕು. ಆನ್‌ಲೈನ್ ಸ್ಪೆಷಲ್ ಪರ್ಮೀಟ್ ಮಾಡಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ಸೆಪ್ಟೆಂಬರ್ 11ರಂದು ಮತ್ತೆ ಪ್ರತಿಭಟನೆ ಮಾಡುತ್ತೇವೆ. ಕಳೆದ ಬಾರಿ 90% ವಾಹನಗಳು ಮಾತ್ರ ರಸ್ತೆಗಿಳಿಸದೆ ಪ್ರತಿಭಟಿಸಿದ್ದೆವು. ಈ ಬಾರಿ ಒಂದು ವಾಹನವೂ ರಸ್ತೆಗಿಳಿಯುವುದಿಲ್ಲ. ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ನಟರಾಜ್‌ ಎಚ್ಚರಿಕೆ ನೀಡಿದ್ದಾರೆ.

ವಾಹನಗಳ ಮೌಲ್ಯ ಮತ್ತು ಸರ್ಕಾರ ನಿಗದಿಪಡಿಸಿದ ದರ ಹೀಗಿದೆ:

ಹತ್ತು ಲಕ್ಷಕ್ಕಿಂತ ಕಡಿಮೆ- ನಿಗದಿತ ದರ- ಕನಿಷ್ಠ 4 ಕಿಮೀ, 100 ರುಪಾಯಿ) ಪ್ರತಿ ಕಿಮೀಗೆ- 24 ರುಪಾಯಿ
10ರಿಂದ 15 ಲಕ್ಷದ ವಾಹನ- 115 ರುಪಾಯಿ- 28 ರುಪಾಯಿ
15 ಲಕ್ಷಕ್ಕಿಂತ ಹೆಚ್ಚು – 130 ರುಪಾಯಿ- 32 ರುಪಾಯಿ

ಚಾಲಕರ ಬೇಡಿಕೆಗಳು:

1) ಓನ್ ಸಿಟಿ ಓನ್ ಫೇರ್ ಜಾರಿಯಾಗಬೇಕು
2) ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು
3) ಆರ್ಟಿಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು
4) ಪೋರ್ಟರ್ ಕಂಪನಿಯನ್ನು ಬ್ಯಾನ್ ಮಾಡಬೇಕು
5) ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು

ಇದನ್ನೂ ಓದಿ: Bangalore Water Parks : ಬೆಂಗಳೂರಿನಲ್ಲಿರುವ ಪ್ರಸಿದ್ಧ ವಾಟರ್‌ ಪಾರ್ಕ್‌ಗಳಿವು…

Continue Reading
Advertisement
ಪ್ರಮುಖ ಸುದ್ದಿ6 mins ago

Narendra Modi : ಟ್ರೋಫಿಯನ್ನು ಕೈಯಲ್ಲಿ ಮುಟ್ಟದ ಪ್ರಧಾನಿ ಮೋದಿ, ಕಾರಣವೇನು?

Viral Video
Latest13 mins ago

Viral Video: ಹೆಂಡತಿಯನ್ನು ಯಾಮಾರಿಸಿ ಪ್ರೇಯಸಿಯನ್ನು ಮನೆಗೆ ಕರೆಸಬಾರದಿತ್ತು! ಗೂಸಾ ತಿಂದವನ ಪ್ರತಿಕ್ರಿಯೆ!

Dhruva Sarja Gym Trainer Prashanth poojari twist
ಸ್ಯಾಂಡಲ್ ವುಡ್15 mins ago

Dhruva Sarja: ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಹಲ್ಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!

Air India
ಕ್ರೀಡೆ21 mins ago

Air India: ಟೀಮ್​ ಇಂಡಿಯಾ ಆಟಗಾರರನ್ನು ಕರೆ ತಂದ ಏರ್‌ ಇಂಡಿಯಾಗೆ ವರದಿ ಕೇಳಿದ ಡಿಜಿಸಿಎ; ಕಾರಣವೇನು?

karnataka Rain
ಮಳೆ25 mins ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

Kannada Serials TRP Gowri in trp puttakkana makkalu number 1
ಕಿರುತೆರೆ1 hour ago

Kannada Serials TRP: ಟ್ರ್ಯಾಕ್‌ಗೆ ಮರಳಿದ `ಶ್ರೀಗೌರಿ’; ಟಿಆರ್​ಪಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

Arecanut Import
ಕೃಷಿ1 hour ago

Arecanut Import: ಅಕ್ರಮ ಅಡಿಕೆ ಆಮದು ರೋಗಕ್ಕೆ ಔಷಧವೇ ಇಲ್ಲವೇ?

Team India
ಕ್ರೀಡೆ1 hour ago

Team India: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ಗೆ ಕ್ಷಣಗಣನೆ; ಮುಂಬೈ ತಲುಪಿದ ಆಟಗಾರರು

ಪ್ರಮುಖ ಸುದ್ದಿ1 hour ago

Virat kohli: ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ ವಿರಾಟ್​​​

Om Birla
ದೇಶ1 hour ago

Om Birla: ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಸಂಸದರು ಘೋಷಣೆ ಕೂಗುವಂತಿಲ್ಲ; ಹೊಸ ನಿಯಮದಲ್ಲಿ ಏನಿದೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ25 mins ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ2 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ3 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ4 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ5 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ6 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

ಟ್ರೆಂಡಿಂಗ್‌