Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ವಿದಾಯ - Vistara News

ಪ್ರಮುಖ ಸುದ್ದಿ

Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ವಿದಾಯ

Ravindra Jadeja : ರವೀಂದ್ರ ಜಡೇಜಾ ಅವರ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಹೇಳುವುದರೊಂದಿಗೆ ಟಿ20 ವಿಶ್ವ ಕಪ್​ ಗೆಲುವಿನ ಬಳಿಕ ಭಾರತ ತಂಡದಿಂದ ಟಿ20 ವಿಶ್ವ ಕಪ್​ಗೆ ವಿದಾಯ ಹೇಳಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

VISTARANEWS.COM


on

Ravindra jadeja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ತಂಡ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja ) ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್​ ಮೂಲಕ ಟಿ 20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. “ಕೃತಜ್ಞತೆ ತುಂಬಿದ ಹೃದಯದಿಂದ ನಾನು ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತಿದ್ದೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದುದ್ದನ್ನು ನೀಡಿದ್ದೇನೆ. ಕ್ರಿಕೆಟ್​​ನ ಇತರ ಸ್ವರೂಪಗಳಲ್ಲಿ ಆಟ ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವುದು ನನ್ನ ಕನಸು ನನಸಾಗಿತ್ತು. ಅದು ನನಸಾಗಿದೆ. ನನ್ನ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನದ ಉತ್ತುಂಗವಾಗಿದೆ. ನೆನಪುಗಳು, ಅಚಲ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಸ್ಪಿನ್-ಬೌಲಿಂಗ್ ಆಲ್ರೌಂಡರ್ ಎಂಎಸ್ ಧೋನಿ ನಾಯಕತ್ವದಲ್ಲಿ ತಂಡಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಅವರು ಹೆಚ್ಚು ಪ್ರಭಾವಶಾಲಿ ಪ್ರದರ್ಶನ ನೀಡಿರಲಿಲ್ಲ. 2009ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅವರು 74 ಪಂದ್ಯಗಳನ್ನು ಆಡಿದ್ದು, 515 ರನ್ ಹಾಗೂ 54 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: Suryakumar Yadav : ವಿಶ್ವ ಕಪ್​ ಟ್ರೋಫಿಯನ್ನು ಬೆಡ್​ ಮಧ್ಯದಲ್ಲಿಟ್ಟು ನಿದ್ದೆ ಮಾಡಿದ ಸೂರ್ಯಕುಮಾರ್ ದಂಪತಿ!

2024ರ ಟಿ20 ವಿಶ್ವಕಪ್ ಗೆದ್ದ ಮರುದಿನವೇ ಆಲ್​ರೌಂಡ್​​ ರವೀಂದ್ರ ಜಡೇಜಾ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಂಡದಲ್ಲಿ ವಿದಾಯ ಹೇಳಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಅದಕ್ಕಿಂತ ಮೊದಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿದಾಯ ಹೇಳಿದ್ದರು. ಬಾರ್ಬಡೋಸ್​ನ ಕೆನ್ಸಿಂಗ್ಟನ್​ ಓವಲ್​​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ವಿಶ್ವಕಪ್ ಟ್ರೋಫಿಯನ್ನು ಭಾರತ 7 ರನ್​ಗಳಿಂದ ಗೆದ್ದುಕೊಂಡಿತು. ಐಸಿಸಿ ಪ್ರಶಸ್ತಿ ಗೆಲುವಿನ ನಂತರ ಭಾರತ ಸಂಭ್ರಮದಲ್ಲಿರುವಾಗ ಜಡೇಜಾ ಅವರು ವಿರಾಟ್ ಕೊಹ್ಲಿ ಮತ್ತು ಅವರ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂಬಾಲಿಸಿದರು.

ವಿಶ್ವ ಕಪ್​ನಲ್ಲಿ ಜಡೇಜಾ ಉತ್ತಮ ಫಾರ್ಮ್​​ನಲ್ಲಿ ಇರಲಿಲ್ಲ. ಆದರೆ ಕಳೆದ ದಶಕದಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಅವರು ಪ್ರಾಬಲ್ಯ ಸಾಧಿಸಿದ್ದರು. ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತೀಯ ತಂಡದ ಆಸ್ತಿಯಾಗಿದ್ದರು. ಸಾರ್ವಕಾಲಿಕ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರೆಂದು ಕರೆಯಲ್ಪಡುವ ಜಡೇಜಾ ಸುಮಾರು 36 ನೇ ವಯಸ್ಸಿನಲ್ಲಿ ಟಿ 20 ಐ ಕ್ರಿಕೆಟ್​ನಿಂದ ವಿದಾಯ ಹೇಳಿದ್ದಾರೆ. ಅವರು ಐಪಿಎಲ್​ನಲ್ಲಿ ಮುಂದುವರಿಯಲಿದ್ದಾರೆ.

2022 ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್​ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ಬಂದಿದ್ದವು. ಅಲ್ಲಿ ಅವರು 29 ಎಸೆತಗಳಲ್ಲಿ 46 ರನ್ ಗಳಿಸಿದ್ದರು. ಆ ಪಂದ್ಯವನ್ನು ಭಾರತ 49 ರನ್​ಗಳಿಂದ ಗೆದ್ದಿತ್ತು. ದುಬೈನಲ್ಲಿ ನಡೆದ 2021 ರ ಟಿ 20 ವಿಶ್ವಕಪ್​​ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅವರು ಬೌಲಿಂಗ್​ನಲ್ಲಿ 15 ನೀಡಿ 3 ವಿಕೆಟ್ ಉರುಳಿಸಿದ್ದರು.

ಜಡೇಜಾ ಅವರ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅವರ ಫೀಲ್ಡಿಂಗ್. ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ನಾವು ಹೊಂದಿದ್ದ ಸಮಯದಲ್ಲಿ ಸೌರಾಷ್ಟ್ರದ ಆಟಗಾರ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ್ದಾರೆ. ಅವರು ಎದುರಾಳಿ ತಂಡಕ್ಕೆ 20 ರನ್​ಗಳನ್ನು ಫೀಲ್ಡಿಂಗ್​ನಲ್ಲಿ ಬಿಟ್ಟುಕೊಡುತ್ತಿರಲಿಲ್ಲ.

ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ನಿಯೋಜಿತ ಆಲ್​ರೌಂಡರ್​ಗಳಾಗಿ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಜಡೇಜಾ ಈಗ ಏಕದಿನ ಮತ್ತು ಟೆಸ್ಟ್ ಸ್ವರೂಪಗಳತ್ತ ಗಮನ ಹರಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Team India: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ಗೆ ಕ್ಷಣಗಣನೆ; ಮುಂಬೈ ತಲುಪಿದ ಆಟಗಾರರು

Team India: ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಟ್ವೀಟ್ ಮಾಡಿದ್ದರು. ಈಗಾಗಲೇ ಅಭಿಮಾನಿಗಳು ಟೀಮ್​ ಇಂಡಿಯಾ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದಾರೆ.

VISTARANEWS.COM


on

Team India
Koo

ಮುಂಬಯಿ: ಟಿ20 ವಿಶ್ವಕಪ್(T20 World Cup) ವಿಜೇತ ಟೀಮ್​ ಇಂಡಿಯಾದ(Team India) ವಿಕ್ಟರಿ ಪೆರೇಡ್​ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವ ವಿಜೇತರನ್ನು ಅಭಿನಂದಿಸಲು(Team India victory parade) ಮುಂಬೈ ನಗರಿ ಸಿದ್ಧವಾಗಿ ನಿಂತಿದೆ. ಆಟಗಾರರು ಈಗಾಗಲೇ ಮುಂಬೈ ತಲುಪಿದ್ದಾರೆ. ಈ ವಿಜಯಯಾತ್ರೆಯನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡುವುದಾಗಿ ಘೋಷಿಸಿದೆ. ಹಾಗೆಯೇ ಸ್ಪೋರ್ಟ್ಸ್ 18ನಲ್ಲಿ, ಜಿಯೋ ಸಿನಿಮಾ ಆ್ಯಪ್​ನಲ್ಲಿಯೂ ಈ ವಿಜಯೋತ್ಸವದ ನೇರ ಪ್ರಸಾರ ಇರಲಿದೆ.

ಸಂಭ್ರಮಾಚರಣೆಗೆ ಆಹ್ವಾನ ನೀಡಿದ್ದ ರೋಹಿತ್​


ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಟ್ವೀಟ್ ಮಾಡಿದ್ದರು. ಈಗಾಗಲೇ ಅಭಿಮಾನಿಗಳು ಟೀಮ್​ ಇಂಡಿಯಾ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದಾರೆ.

ತೆರೆದ ಬಸ್​ನಲ್ಲಿ ರೋಡ್ ಶೋ


ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್‌ನಿಂದ ಸರಿಯಾಗಿ 5 ಗಂಟೆಗೆ ರೋಡ್‌ ಶೋ ಆರಂಭವಾಗಲಿದೆ. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ಬಹುಮಾನ ಮೊತ್ತವನ್ನು ಕೂಡ ಪ್ರದಾನ ಮಾಡಲಾಗುತ್ತದೆ.

ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ(Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟವನ್ನು ಕೂಡ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ(PM Modi) ನಮೋ ನಂ.1 ಎಂದು ಬರೆದ ಟೀಮ್​ ಇಂಡಿಯಾ ಜೆರ್ಸಿಯನ್ನು(Indian Cricket Jersey) ಉಡುಗೊರೆಯಾಗಿ ನೀಡಲಾಯಿತು.

ಇದನ್ನೂ ಓದಿ Team India: ಮೋದಿಗೆ ನಮೋ ಹೆಸರಿನ ಟೀಮ್​ ಇಂಡಿಯಾ ಜೆರ್ಸಿ ಉಡುಗೊರೆ ನೀಡಿದ ಬಿಸಿಸಿಐ

ವಿಶ್ವ ವಿಜೇತ ತಂಡವನ್ನು ಭೇಟಿ ಮಾಡಿದ ಫೋಟೊವನ್ನು ಮೋದಿ ಕೂಡ ತನ್ನ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ನಮ್ಮ ಚಾಂಪಿಯನ್‌ಗಳೊಂದಿಗೆ ಉತ್ತಮ ಸಭೆ!…ಪಂದ್ಯಾವಳಿಯ ಸ್ಮರಣೀಯ ಸಂಭಾಷಣೆy ಅನುಭವವನ್ನು ಕೇಳಿ ನಿಜವಾಗಿಯೂ ಸಂತಸ ತಂದಿತು ಎಂದು ಬರೆದುಕೊಂಡಿದ್ದಾರೆ.

ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮುಂಬೈ ಪೊಲೀಸರು ಜನರನ್ನು ಒತ್ತಾಯಿಸಿದ್ದಾರೆ. ಮುಂಬೈ ವಲಯ 1ರ ಡಿಸಿಪಿ ಪ್ರವೀಣ್ ಮುಂಡೆ ಮಾಧ್ಯಮದೊಂದಿಗೆ ಮಾತನಾಡಿ, ”ಟಿ20 ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಮುಂಬೈಗೆ ಆಗಮಿಸುತ್ತಿದೆ. ನಾರಿಮನ್ ಪಾಯಿಂಟ್ ಮತ್ತು ವಾಂಖೆಡೆ ಸ್ಟೇಡಿಯಂ ನಡುವೆ ಮರೈನ್ ಡ್ರೈವ್‌ನಲ್ಲಿ ಸಂಜೆ 5ರಿಂದ 7 ಗಂಟೆಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಾಗುತ್ತಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಂಜೆ 4:30 ಕ್ಕೆ ಮೊದಲು ತಲುಪಿ ಮತ್ತು ರಸ್ತೆಯಲ್ಲಿ ಯಾರೂ ದಟ್ಟಣೆ ಸೇರಬೇಡಿ ಎಂದಿದ್ದಾರೆ.

Continue Reading

ಪ್ರಮುಖ ಸುದ್ದಿ

Virat kohli: ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ ವಿರಾಟ್​​​

Virat Kohli : ಹೌದು, ಪುರಾಣ ಕಥೆಗಳಲ್ಲಿ ಏಕಾಂಗಿಯಾಗಿ ಯುದ್ಧ ಮಾಡುವ ಮಹಾ ಶೂರರ ಕಥೆಗಳನ್ನು ಕೇಳಿದ್ರೂ ಕಣ್ಣಾರೆ ನೋಡಿಲ್ಲ. ಆದ್ರೆ 22 ಯಾರ್ಡ್ ನ ಕ್ರಿಕೆಟ್ ಮೈದಾನದಲ್ಲಿ ನಿನ್ನಾಟವನ್ನು ಕಣ್ಣಾರೆ ನೋಡಿದ ಮೇಲೆ ನೀನೊಬ್ಬ ಮಹಾ ಶೂರನಂತೆ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.

VISTARANEWS.COM


on

Koo

ಸನತ್ ರೈ, ಬೆಂಗಳೂರು

ನೀನೊಬ್ಬ ಮಾಸ್ಟರ್ ಪೀಸ್..! ಮೈದಾನದಲ್ಲಿ ನೀಡಾಡುವ ಆಟದ ಪರಿಯೇ ಅದ್ಭುತ..! ಎದುರಾಳಿಗಳಿಗೆ ನೀನೊಬ್ಬ ಘನಘೋರ ಅಸುರ.. ಟೀಮ್ ಇಂಡಿಯಾದ ಗರ್ಭಗುಡಿಗೆ ನೀನೇ ರಕ್ಷಕ..! ಅಬ್ಬಾ.. ನಿನ್ನ ಬ್ಯಾಟಿಂಗ್ ವೈಖರಿಯನ್ನು ಯಾವ ರೀತಿ ಬಣ್ಣಿಸಬೇಕು ಅಂತನೇ ತಿಳಿಯುತ್ತಿಲ್ಲ. ಯಾಕಂದ್ರೆ ನೀನು ಮೈದಾನದಲ್ಲಿ ಆಡುತ್ತಿದ್ದಿಯೋ ಅಥವಾ ಯುದ್ಧ ಮಾಡುತ್ತಿದ್ದಿಯೋ ಎಂಬುದೇ ಗೊತ್ತಾಗುತ್ತಿಲ್ಲ. ಮೈದಾನದಲ್ಲಿ ನೀನಾಡುವ ಪರಿಯನ್ನು ನೋಡಿದಾಗ ನೀ ರಕ್ಷಕನೋ..ರಕ್ಕಸನೋ ಅನ್ನೋ ಅನುಮಾನ ಕೂಡ ಮೂಡದೇ ಇರುವುದಿಲ್ಲ.

ಹೌದು, ಪುರಾಣ ಕಥೆಗಳಲ್ಲಿ ಏಕಾಂಗಿಯಾಗಿ ಯುದ್ಧ ಮಾಡುವ ಮಹಾ ಶೂರರ ಕಥೆಗಳನ್ನು ಕೇಳಿದ್ರೂ ಕಣ್ಣಾರೆ ನೋಡಿಲ್ಲ. ಆದ್ರೆ 22 ಯಾರ್ಡ್ ನ ಕ್ರಿಕೆಟ್ ಮೈದಾನದಲ್ಲಿ ನಿನ್ನಾಟವನ್ನು ಕಣ್ಣಾರೆ ನೋಡಿದ ಮೇಲೆ ನೀನೊಬ್ಬ ಮಹಾ ಶೂರನಂತೆ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.

ಟೀಮ್ ಇಂಡಿಯಾದ ದಳಪತಿಯಾಗಿ ತಂಡವನ್ನು ರಕ್ಷಣೆ ಮಾಡುವುದು ನಿನ್ನ ಜವಾಬ್ದಾರಿ ಎಂಬುದನ್ನು ನೀ ಮರೆಯುವುದಿಲ್ಲ. ತಂಡದ ಗೆಲುವಿಗಾಗಿ ನೀ ನಡೆಸುವ ಹೋರಾಟಕ್ಕೆ ಭೇಷ್ ಅನ್ನದಿರಲು ಎಂಥ ಕಠೋರ ಕೂಡ ಮನಸ್ಸು ಒಪ್ಪುವುದಿಲ್ಲ. ಕ್ರಿಕೆಟ್ ಲೋಕದ ಮಹಾನ್ ಬೌಲರ್​ಗಳನ್ನು ನೀ ಘನಘೋರ ರಕ್ಕಸನಂತೆ ಕಾಡಿದ್ದು ಸುಳ್ಳಲ್ಲ. ಉಗ್ರಪ್ರತಾಪಿಯಂತೆ ಬ್ಯಾಟ್ ಬೀಸಿದ ನಿನ್ನನ್ನು ಕ್ರಿಕೆಟ್ ಜಗತ್ತು ಮಹಾ ಕ್ರೂರಿ ಅಂತ ಬಣ್ಣಿಸಿದ್ರೂ ಅಚ್ಚರಿ ಏನಿಲ್ಲ. ಹಾಗೇ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ನಿನ್ನನ್ನು ಚೇಸಿಂಗ್ ಮಾಸ್ಟರ್ ಅಂತ ಉಘೇ.. ಉಘೇ ಅನ್ನುವುದರಲ್ಲಿ ತಪ್ಪೇನೂ ಇಲ್ಲ.

ಯಾಕಂದ್ರೆ ನೀ ಆಡುವ ರೀತಿ ಹಾಗಿದೆ. ಚೆಂಡು ಬ್ಯಾಟ್‍ನ ಸಮರದಲ್ಲಿ ಕೋಪ, ರೋಷಾಗ್ನಿ ಜ್ವಾಲೆ ನಿನ್ನ ಮುಖದಲ್ಲಿ ಪ್ರಜ್ವಲಿಸುತ್ತದೆ. ಮಾತಿಗೆ ಮಾತು.. ಏಟಿಗೆ ಏಟು.. ಅಲ್ಲೇ ಡ್ರಾ.. ಆಲ್ಲೇ ಬಹುಮಾನ ಎಂಬಂತೆ ಕೆಣಕಿದವರಿಗೆ ನೀ ಕೊಡುವ ತಿರುಗೇಟನ್ನು ಜೀವಮಾನದಲ್ಲೇ ಅವರು ಮರೆಯಲಿಕ್ಕಿಲ್ಲ. ನೀ ಗಳಿಸಿದ್ದ ಒಂದೊಂದು ರನ್‍ಗಳಿಗೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಬೌಂಡರಿ ಸಿಕ್ಸರ್‍ಗಳ ಅಬ್ಬರಕ್ಕೆ ಅಭಿಮಾನಿಗಳ ಕೂಗು ಝೇಂಕಾರದಂತೆ ಮಾರ್ದನಿಸುತ್ತದೆ.ಈ ಕಾರಣದಿಂದಲೇ ಕ್ರಿಕೆಟ್ ಜಗದಗಲದಲ್ಲಿ ಪ್ರತಿಧ್ವನಿಸುತ್ತಿದೆ ನಿನಗೆ ಕೊಟ್ಟ ಬಿರುದುಗಳು. ಅದುವೇ ಚೇಸಿಂಗ್ ಮಾಸ್ಟರ್..! ಚೇಸಿಂಗ್ ಗಾಡ್..!

ಹೌದು, ನಿನ್ನದು ಕಿರು ನಗೆಯಿಂದಲೇ ಸೂಜಿಗಲ್ಲಿನಂತೆ ಆಕರ್ಷಿಸುವ ನೋಟ… ಆದ್ರೆ ನೀ ನೋಡುವುದಕ್ಕೆ ಮಾತ್ರ ತುಂಬಾನೇ ಒರಟ…ವಯಸ್ಸು 35 ದಾಟಿದ್ರೂ ಇನ್ನೂ ಬಿಟ್ಟಿಲ್ಲ ತುಂಟಾಟ.. ಕ್ರಿಕೆಟ್ ಮೈದಾನಕ್ಕಿಳಿದ್ರೆ ಸಾಕು ಸುನಾಮಿಯನ್ನು ನಾಚಿಸುವಂತಹ ನಿನ್ನ ಆರ್ಭಟ.. ಬೌಲರ್‍ಗಳಿಗೆ ಸುಸ್ತು ಸುಸ್ತಾಗುವಷ್ಟು ಕೊಡ್ತಿಯ ಕಾಟ…ಎಂಥ ಒತ್ತಡದಲ್ಲೂ ಹಿತವಾಗಿ, ಮಜವಾಗಿ ಆಡುವುದು ನಿನ್ನ ಪರಿಪಾಠ..ಎದುರಾಳಿ ಆಟಗಾರರು ಮಾತಿನ ಸಮರ ನಡೆಸಿದ್ರೆ ಹಿಂದೆ ಮುಂದೆ ನೋಡದೆ ಮಾಡ್ತಿಯಾ ಕಿತ್ತಾಟ.. ಬ್ಯಾಟಿಂಗ್ ಲಯವಿದ್ರೂ, ಲಯ ತಪ್ಪಿದ್ರೂ ಮೈದಾನದಲ್ಲೇ ನಿನ್ನದೇ ರಂಪಾಟ.. ಸೋಲನ್ನು ಒಪ್ಪಿಕೊಳ್ಳದ ಮನದಲ್ಲಿದೆ ಗೆಲ್ಲಲೇಬೇಕು ಅನ್ನೋ ಹಠ.… ಕ್ರಿಕೆಟ್‍ನ ಎಲ್ಲಾ ಗ್ರಾಮರ್‍ಗಳನ್ನು ಮಾಡಿಕೊಂಡಿದ್ದೀಯಾ ಕಂಠಪಾಠ. ಕ್ರಿಕೆಟ್ ಜಗತ್ತನ್ನು ಒಂದು ಕ್ಷಣ ಚಕಿತಗೊಳಿಸುವಂತೆ ಮಾಡುತ್ತೆ ನಿನ್ನ ಬೊಂಬಾಟ್ ಆಟ.…ಪ್ರತಿ ಕ್ಷಣವೂ ನಿನ್ನ ಯೋಚನೆಯಲ್ಲಿರುತ್ತೆ ಸಾಧನೆಯ ಹುಡುಕಾಟ. ಆಧುನಿಕ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲವೂ ನಿನ್ನದೇ ಚೆಲ್ಲಾಟ. ಪ್ರಬುದ್ಧ, ಪರಿಪಕ್ವ ಆಟದಿಂದಲೇ ಆಗಿದ್ದಿಯಾ ನೀನು ವಿಶ್ವ ಸಾಮ್ರಾಟ…

ನಿಜ, ನೀನು ಮಾಡಿರುವ ಸಾಧನೆಯೇ ಅಂತಹುದ್ದು. ಅದನ್ನು ಯಾರು ಕೂಡ ಊಹೆ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸಾಧನೆಯ ಹಿಂದಿನ ಒಂದೊಂದು ಹೆಜ್ಜೆಯಲ್ಲೂ ರಾಜ ಗಾಂಭೀರ್ಯವಿದೆ. ಅಷ್ಟೊಂದು ಅರ್ಥಗರ್ಭಿತವಾಗಿದೆ ನೀನು ನಡೆದು ಬಂದಿರುವ ರಾಜಪಥದ ಹಾದಿ.

ನಿನ್ನಂತಹ ಮ್ಯಾಚ್ ವಿನ್ನರ್ ಮತ್ತೊಬ್ಬನಿಲ್ಲ..!

ನಿಜ, ನಿನ್ನ ಆಟಕ್ಕೆ ಏನೆಂದು ಹೆಸರಿಡಬೇಕು. ಸೋಲಿನ ದವಡೆಯಿಂದ ಪಾರು ಮಾಡುವ ರೀತಿಯನ್ನು ಹೇಗಂತ ವರ್ಣಿಸಬೇಕು. ಒತ್ತಡದಲ್ಲೂ ಆಡುವ ಕಲೆಯನ್ನು ಕರಗತ ಮಾಡ್ಕೊಂಡಿರುವ ಲಯಕ್ಕೆ ಏನಂತ ಹೇಳಬೇಕು. ವಿರೋಧಿಗಳು ತಲೆಬಾಗುವಂತೆ ಆಡುವ ವೈಖರಿಯನ್ನು ಯಾವ ಪರಿ ಕೊಂಡಾಡಬೇಕು. ಅಭಿಮಾನಿಗಳ ಮೊಗದಲ್ಲಿ ನಗುವಿನ ಚಿತ್ತಾರ ಬಿಡಿಸಿರುವುದನ್ನು ಹೇಗೆ ಮರೆಯಲಿ. ಕ್ರಿಕೆಟ್ ಜಗತ್ತನ್ನು ಆಕ್ಷೇಪ ಮಾಡುವ ದಾಟಿಯನ್ನು ಯಾವ ಶಬ್ದದಿಂದ ಕರೆಯಲಿ..ಅಷ್ಟಕ್ಕೂ ಮೈದಾನದಲ್ಲಿ ವಿರಾಟ್ ನಡೆಸುವ ಒಡ್ಡೋಲಗವನ್ನು ಹೇಳಲು ಪದಪುಂಜಗಳು ಸಿಗುತ್ತಿಲ್ಲ. ಏಕಾಂಗಿಯಾಗಿ ನಡೆಸಿದ ಹೋರಾಟದ ಹೊಲಿಕೆಗೆ ನವರಸಗಳು ಸಾಕಾಗುತ್ತಿಲ್ಲ. ಬೌಲರ್​ಗಳನ್ನು ಎದುರು ಮಾಡುವ ತಾಂಡವ ನೃತ್ಯಕ್ಕೆ ಮನಸೋಲದವರಿಲ್ಲ. ಬ್ಯಾಟ್ ಅನ್ನು ಗದೆಯಂತೆ ತಿರುಗಿಸುತ್ತ ರನ್ ಗಳಿಸುವ ನಿನ್ನಂತಹ ಚಾಣಾಕ್ಯ ಇನ್ನೊಬ್ಬನಿಲ್ಲ. ಸವಾಲನ್ನು ಸ್ವೀಕರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ನಿನ್ನಂತಹ ಮ್ಯಾಚ್ ವಿನ್ನರ್ ಮತ್ತೊಬ್ಬನಿಲ್ಲ.

ಏನೇ ಆದ್ರೂ ಕ್ರಿಕೆಟ್ ಅನ್ನೋ ಇಂಗ್ಲೀಷರ ಆಟದಲ್ಲೂ ನವರಸಗಳನ್ನು ಬೆರೆಸಿದ ಮಹಾ ಮಾಂತ್ರಿಕ. ಶೃಂಗಾರ ಕಾವ್ಯದಂತೆ ರನ್‍ಗಳಿಸುವ ಕಲಾಕಾರ. ಮಹೋನ್ನತ ಇನಿಂಗ್ಸ್ ನಡುವೆಯೇ ಹಾಸ್ಯ ಮಾಡುವ ಹಾಸ್ಯಗಾರ. ಕೆಣಕಲು ಬಂದ್ರೆ ಮೈದಾನದಲ್ಲೇ ನಿನ್ನ ರೌದ್ರಾವತಾರ. ಕಠಿಣ ಸಂದರ್ಭದಲ್ಲಿ ಕರುಣಾ ರಸದಂತೆ ಆಡುವ ಆಟಗಾರ. ಸವಾಲಿನ ಪ್ರಶ್ನೆ ಬಂದಾಗ ಭೀಭತ್ಸ ತೋರುವ ಮಹಾಶೂರ . ಅಷ್ಟೇ ಅಲ್ಲ, ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ. ಎಂತಹ ಸನ್ನಿವೇಶದಲ್ಲೂ ಅದ್ಭುತ ಆಟ ಪ್ರದರ್ಶಿಸುವ ಜಾದುಗಾರ. ಕ್ರೀಸ್‍ಗೆ ಆಗಮಿಸುವಾಗಲೇ ಎದುರಾಳಿ ತಂಡಕ್ಕೆ ಭಯಮೂಡಿಸುವ ರಣಧೀರ. ಶಾಂತ ಚಿತ್ತದಿಂದಲೇ ಎಲ್ಲವನ್ನು ಅರಿತುಕೊಂಡು ಕ್ರಿಕೆಟ್ ಜಗತ್ತನ್ನು ಮೋಡಿ ಮಾಡುವ ಮೋಡಿಗಾರ.

ಒಂದಂತೂ ನಿಜ, ನಿನ್ನ ಅಭಿಮಾನಿಗಳಿಗೆ ನೀನು ಎಷ್ಟು ಆಡಿದ್ರೂ, ಎಷ್ಟು ರನ್ ಗಳಿಸಿದ್ರೂ ಅವರ ಮನ ತಣಿಸುವುದಿಲ್ಲ. ಅಭಿಮಾನಿಗಳ ಹೃದಯಕ್ಕೆ ಇನ್ನಷ್ಟು ಬೇಕು ಅಂತ ಅನ್ನಿಸುತ್ತಲೇ ಇರುತ್ತದೆ. ಯಾಕಂದ್ರೆ ನಿನ್ನ ಮೇಲೆ ಅವರಿಗೆ ಆಗಾಧವಾದ ನಂಬಿಕೆ ಮತ್ತು ಪ್ರೀತಿ ಇದೆ. ಅಂತಹ ಒಂದು ಸ್ಥಾನವನ್ನು ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿಟ್ಟುಕೊಳ್ಳುವಂತೆ ಮಾಡಿದ್ದೀಯಾ… ಅದಕ್ಕಾಗಿಯೇ ನೀನು ಚುಟುಕು ಕ್ರಿಕೆಟ್‍ಗೆ ವಿದಾಯ ಹೇಳಿದಾಗ ನಿನ್ನ ಅಭಿಮಾನಿಗಳು ಕಣ್ಣೀರು ಸುರಿಸಿದ್ರು. ಆದ್ರೆ ನೀನು ಟಿ-20 ವಿಶ್ವಕಪ್ ಗೆದ್ದು ಸಾರ್ಥಕತೆಯೊಂದಿಗೆ ಟಿ-20 ಕ್ರಿಕೆಟ್‍ಗೆ ವಿದಾಯ ಹೇಳಿದ್ದೀಯ. ಆದ್ರೂ ಒಂದು ರೀತಿಯ ಸಮಾಧಾನ ಅವರಿಗಿದೆ. ಏಕದಿನ, ಟೆಸ್ಟ್ ಮತ್ತು ಐಪಿಎಲ್‍ನಲ್ಲಿ ನಿನ್ನ ಆಟವನ್ನು ಕಣ್ತುಂಬಿಕೊಳ್ಳಬಹುದು ಎಂಬ ಆಸೆ ಅವರಲ್ಲಿದೆ.

ಅದೇನೇ ಇರಲಿ, ನೀನು ಈಗಾಗಲೇ ಏಕದಿನ ಕ್ರಿಕೆಟ್‍ನಲ್ಲಿ ಸಚಿನ್ ತೆಂಡುಲ್ಕರ್ ಅವರ ಶತಕದ ದಾಖಲೆಯನ್ನು ನಿನ್ನ ಹೆಸರಿಗೆ ಬರೆಸಿಕೊಂಡಿದ್ದಿಯ. ಆದ್ರೆ ಟೆಸ್ಟ್ ಶತಕ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ನ ಗರಿಷ್ಠ ರನ್ ದಾಖಲೆ ಅಳಿಸಿ ಹಾಕೋದು ಅಂದುಕೊಂಡಷ್ಟು ಸುಲಭವಿಲ್ಲ. ಆದ್ರೂ ನೀನು ಕ್ರಿಕೆಟ್ ದೇವ್ರ ಮಾತು ನಂಬಿಕೆಯನ್ನು ಹುಸಿಗೊಳಿಸಿಲ್ಲ. 14 ವರ್ಷಗಳ ಕಾಲ ಚುಟುಕು ಕ್ರಿಕೆಟ್‍ನಲ್ಲಿ ನಿನ್ನ ಆಟವನ್ನು ನೋಡಿ ಮನಸ್ಸಿಗೆ ಖುಷಿಯಾಗಿದೆ. ಆದ್ರೆ ನಿನ್ನ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ಕೊರಗು ಇರಬಹುದು. ಆದ್ರೆ ನಿನ್ನ ಸಮಯ ಅಲ್ಲ ಅಂದಾಗ ಆ ದೇವರು ಕೂಡ ಕೈಹಿಡಿಯುವುದಿಲ್ಲ. ಆದ್ರೆ ನೀನು ನಿನ್ನ ಕರ್ತವ್ಯವನ್ನು ನಿಸ್ವಾರ್ಥದಿಂದ ಮಾಡಿದ್ದೀಯಾ. ಅದರ ಪುಣ್ಯದ ಫಲವೇ ಟಿ-20 ವಿಶ್ವಕಪ್ ಗೆಲುವು ನಿನಗೆ ಸಿಕ್ಕಿರುವುದು. ಕಡೆಯ ಟಿ-20 ಪಂದ್ಯದಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿರುವುದು. ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡು ಗೆಲುವನ್ನು ಸಂಭ್ರಮಿಸಿರುವುದು. ಭಾವುಕನಾಗಿ ನೀನು ನಲಿದಾಡಿದ ಕ್ಷಣಗಳನ್ನ ಎಂದೆಂದಿಗೂ ಮರೆಯಲು ಆಗಲ್ಲ. ಆದ್ರೂ ಚುಟುಕು ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ನೀನು ಇಲ್ಲ ಅನ್ನೋ ಬೇಸರವಂತೂ ಇದ್ದೇ ಇದೆ. ಏನೇ ಇರಲಿ…ನಿನ್ನ ಬಗ್ಗೆ ಇಷ್ಟು ಬರೆಯುವಂತೆ ಮಾಡಿದ ನಿನ್ನ ಆಟದ ಖದರ್, ನಿನ್ನ ವ್ಯಕ್ತಿತ್ವಕ್ಕೆ ಸಲಾಂ.. ಪ್ರೀತಿಪೂರ್ವಕ ಧನ್ಯವಾದಗಳು ಕಿಂಗ್ ವಿರಾಟ್ ಕೊಹ್ಲಿ..!

Continue Reading

ದೇಶ

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ; 6 ಜನರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

Hathras Stampede: ಕಾಲ್ತುಳಿತದ ಬಳಿಕ ನಾಪತ್ತೆಯಾಗಿದ್ದ ಭೋಲೆ ಬಾಬಾ ನಂತರ ಪ್ರತ್ಯಕ್ಷರಾಗಿದ್ದು, “ನಾನು ಸತ್ಸಂಗ ಮುಗಿಸಿ ತೆರಳಿದ ಬಳಿಕ ಘಟನೆ ನಡೆದಿದೆ. ಇದು ಸಮಾಜಘಾತುಕ ಶಕ್ತಿಗಳ ಕೃತ್ಯ” ಎಂದಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ. ಇದರ ಬೆನ್ನಲ್ಲೇ ಪೊಲೀಸರು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿ 121 ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಹಾಗೆಯೇ, ಪ್ರಮುಖ ಆರೋಪಿಯ ಕುರಿತು ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.

“ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೆ 121 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಭೋಲೆ ಬಾಬಾ ನಂತರ ಪ್ರತ್ಯಕ್ಷರಾಗಿದ್ದು, “ನಾನು ಸತ್ಸಂಗ ಮುಗಿಸಿ ತೆರಳಿದ ಬಳಿಕ ಘಟನೆ ನಡೆದಿದೆ. ಇದು ಸಮಾಜಘಾತುಕ ಶಕ್ತಿಗಳ ಕೃತ್ಯ” ಎಂದಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ.

ಹತ್ರಾಸ್‌ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನೂ ರಚಿಸಲಾಗಿದೆ. ಮತ್ತೊಂದೆಡೆ, ನೂರಾರು ಜನರ ಸಾವಿನ ಬಳಿಕ ಭೋಲೆ ಬಾಬಾ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾಲ್ತುಳಿತದ ಕುರಿತು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. “ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸೇರಿದ್ದರು. ಸತ್ಸಂಗ ಮುಗಿದ ಬಳಿಕ ಇನ್ನೇನು ಭೋಲೆ ಬಾಬಾ ಹೊರಡುವವರಿದ್ದರು. ಇದೇ ವೇಳೆ ಲಕ್ಷಾಂತರ ಜನ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ, ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣವಾಗಿದೆ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

Continue Reading

Latest

Robbery Video: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

Robbery Video: ಬೆಂಗಳೂರಿನ ಸಿಲ್ಕ್ ಬೋರ್ಡ್‌ನಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಚೀಲವನ್ನು ಹಿಡಿದು ನಿಂತಿದ್ದು, ಹಿಂದಿನಿಂದ ಬಂದ ಕಳ್ಳ ಅದನ್ನು ಕಸಿದುಕೊಂಡು ಓಡಿದ್ದಾನೆ. ಹಾಡಹಗಲಿನಲ್ಲಿ ಜನಸಂದಣಿ ಇರುವ ಕಡೆಯಲ್ಲೇ ಈತ ಕಳ್ಳತನ ಮಾಡಿದ್ದನ್ನು ಕಂಡು ಜನರು ಭಯಗೊಂಡಿದ್ದಾರೆ. ಈ ವಿಡಿಯೊ ಈಗ ವಿಡಿಯೊ ವೈರಲ್ ಆಗಿದೆ. ಬೆಂಗಳೂರು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಜನ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

VISTARANEWS.COM


on

Robbery Video
Koo

ಬೆಂಗಳೂರು: ಕಳ್ಳತನದ ಪ್ರಕರಣ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಕೇಳಿ ಬರುತ್ತಿದೆ. ಜನರಿಗೆ ದುಡಿಮೆ ಬಗ್ಗೆ ಆಸಕ್ತಿ ಕಡಿಮೆಯಾಗಿ ಸುಲಭವಾಗಿ ಹಣ ಸಂಪಾದಿಸಲು ಕಳ್ಳತನದ ಮಾರ್ಗವನ್ನು ಕಂಡುಕೊಳ್ಲುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವವೂ ಹೋಗಿದೆ. ಹಾಗಾಗಿ (Robbery Video) ಇಂತಹ ಕಳ್ಳತನ(Robbery Case )ವನ್ನು ಮಟ್ಟ ಹಾಕಲೇಬೇಕು. ಇದೀಗ ಬೆಂಗಳೂರಿನಲ್ಲಿ ಹಾಡಹಗಲಿನಲ್ಲೇ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಧ್ಯವಯಸ್ಕರೊಬ್ಬರ ಬ್ಯಾಗನ್ನು ಕಿತ್ತುಕೊಂಡು ಓಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಡೀ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್‍ನಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಚೀಲವನ್ನು ಹಿಡಿದು ನಿಂತಿದ್ದು, ಹಿಂದಿನಿಂದ ಬಂದ ಕಳ್ಳ ಅದನ್ನು ಕಸಿದುಕೊಂಡು ಓಡಿದ್ದಾನೆ. ಹಾಡಹಗಲಿನಲ್ಲಿ ಜನಸಂದಣಿ ಇರುವ ಕಡೆಯಲ್ಲಿ ಈತ ಕಳ್ಳತನ ಮಾಡಿದ್ದನ್ನು ಕಂಡು ಜನರು ಭಯಗೊಂಡಿದ್ದಾರೆ. ವೀಡಿಯೊದಲ್ಲಿ, ಯುವಕನೊಬ್ಬ ಜನಸಂದಣಿ ಇರುವ ಬಸ್ ನಿಲ್ದಾಣದಲ್ಲಿ ಮಧ್ಯವಯಸ್ಕ ವ್ಯಕ್ತಿಯನ್ನು ಗಮನಿಸುತ್ತಾ ಅವರ ಹಿಂದಿನಿಂದ ಬಂದು ಚೀಲವನ್ನು ಹಿಡಿದು ಕಸಿದುಕೊಂಡು ಪೇರಿ ಕಿತ್ತಿದ್ದಾನೆ. ಕಳ್ಳನು ಕೈಯಲ್ಲಿ ಚೀಲದೊಂದಿಗೆ ಓಡಿಹೋಗುತ್ತಿರುವುದು ಕಂಡು ಮಧ್ಯವಯಸ್ಕ ವ್ಯಕ್ತಿ ಸಹಾಯಕ್ಕಾಗಿ ಕೂಗಿದ್ದಾರೆ.

ಸಿಟಿಜನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ಎಂಬ ಕಮ್ಯುನಿಟಿ ಎಕ್ಸ್ ಹ್ಯಾಂಡಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಹಾಡಹಗಲೇ ಬ್ಯಾಗ್ ಸ್ನ್ಯಾಚಿಂಗ್ ಮಾಡಲಾಗುತ್ತಿದೆ. ಈ ಜನರಿಗೆ ಧೈರ್ಯ ಎಲ್ಲಿಂದ ಬರುತ್ತಿದೆ. ದಯವಿಟ್ಟು ನಿಮ್ಮ ಜಾಗರೂಕತೆಯನ್ನು ಕಳೆದುಕೊಳ್ಳಬೇಡಿ!” ಎಂದು ಬರೆದಿದ್ದಾರೆ.

ಈ ವಿಡಿಯೊ ನೋಡಿ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದೆ. ಹೊಸೂರು ರಸ್ತೆಯಲ್ಲಿ ಹಾಡಹಗಲೇ ಸರಗಳ್ಳತನ ಸಾಮಾನ್ಯವಾಗಿದೆ. ಬೆಂಗಳೂರು ಸಿಟಿ ಪೊಲೀಸರು ದಯವಿಟ್ಟು ಪ್ರಕರಣದ ಪರಿಸ್ಥಿತಿಯನ್ನು ಪರಿಶೀಲಿಸಿ. ಪ್ರತಿದಿನ ಕಾರುಗಳ ಮೂಲಕ ಬ್ಯಾಗ ಕಳ್ಳತನ ಮಾಡಲಾಗುತ್ತಿದೆ. ಇದರ ಹಿಂದೆ ಮಾಫಿಯಾ ಇದೆ. ನಾಗರಿಕರೇ, ಬೆಲೆಬಾಳುವ ವಸ್ತುಗಳನ್ನು ಎಂದಿಗೂ ಎಲ್ಲರಿಗೂ ಕಾಣುವಂತೆ ತೋರಿಸಬೇಡಿ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

ಇನ್ನೊಬ್ಬ ಬಳಕೆದಾರರು “ಈ ಕೃತ್ಯದಲ್ಲಿ ಕೆಲವು ಪೊಲೀಸರು, ಬಿಎಂಟಿಸಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಹಾಗಾಗಿ ದರೋಡೆಕೋರರು ಸರಳವಾಗಿ ಈ ಕೆಲಸ ಮಾಡುತ್ತಿದ್ದಾರೆ. ಇಲ್ಲವಾದರೆ ಇಂತಹ ಘಟನೆ ಪ್ರತಿದಿನ ನಡೆಯುವುದಿಲ್ಲ” ಎಂಬುದಾಗಿ ತಿಳಿಸಿದ್ದಾರೆ. ಇಂತಹ ಪ್ರಕರಣದಿಂದ ಬೆಂಗಳೂರು ಜನರ ಜೀವನ ನರಕವಾಗಿದೆ ಎಂದು ನೆಟ್ಟಿಜನ್ ಬೇಸರ ವ್ಯಕ್ತಪಡಿಸಿದ್ದಾರೆ.

Continue Reading
Advertisement
karnataka Rain
ಮಳೆ4 mins ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

Kannada Serials TRP Gowri in trp puttakkana makkalu number 1
ಕಿರುತೆರೆ39 mins ago

Kannada Serials TRP: ಟ್ರ್ಯಾಕ್‌ಗೆ ಮರಳಿದ `ಶ್ರೀಗೌರಿ’; ಟಿಆರ್​ಪಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

Arecanut Import
ಕೃಷಿ42 mins ago

Arecanut Import: ಅಕ್ರಮ ಅಡಿಕೆ ಆಮದು ರೋಗಕ್ಕೆ ಔಷಧವೇ ಇಲ್ಲವೇ?

Team India
ಕ್ರೀಡೆ51 mins ago

Team India: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ಗೆ ಕ್ಷಣಗಣನೆ; ಮುಂಬೈ ತಲುಪಿದ ಆಟಗಾರರು

ಪ್ರಮುಖ ಸುದ್ದಿ55 mins ago

Virat kohli: ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ ವಿರಾಟ್​​​

Om Birla
ದೇಶ1 hour ago

Om Birla: ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಸಂಸದರು ಘೋಷಣೆ ಕೂಗುವಂತಿಲ್ಲ; ಹೊಸ ನಿಯಮದಲ್ಲಿ ಏನಿದೆ?

Hathras Stampede
ದೇಶ1 hour ago

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ; 6 ಜನರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

wild animal attack
ಬೆಂಗಳೂರು ಗ್ರಾಮಾಂತರ1 hour ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Agnipath Scheme
ದೇಶ1 hour ago

Agnipath Scheme: ಅಗ್ನಿವೀರರಿಗೆ ಪರಿಹಾರ ಸಿಕ್ಕಿಲ್ಲ ಎಂದ ರಾಹುಲ್‌ ಗಾಂಧಿಗೆ ಭಾರತೀಯ ಸೇನೆ ತಿರುಗೇಟು

Robbery Video
Latest1 hour ago

Robbery Video: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 mins ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ1 hour ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ3 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ3 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ5 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ6 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

ಟ್ರೆಂಡಿಂಗ್‌