Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ! - Vistara News

ಟಾಲಿವುಡ್

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

Kalki 2898 AD: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 300.6 ಕೋಟಿ ರೂ. ಗಳಿಸಿದೆ. ವರದಿಗಳ ಪ್ರಕಾರ, ಕಲ್ಕಿ 2898 AD ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮೀರಿದೆ.ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.

VISTARANEWS.COM


on

Kalki 2898 AD Prabhas Film Hits Jackpot 500 Cr WW In Opening
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಲ್ಕಿ 2898 AD (Kalki 2898 AD) ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ನಾಗ್ ಅಶ್ವಿನ್ ಅವರ ಕಲ್ಕಿ 2898 AD ಜೂನ್ 27 ರಂದು ಬಿಡುಗಡೆಯಾಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 300.6 ಕೋಟಿ ರೂ. ಗಳಿಸಿದೆ. ವರದಿಗಳ ಪ್ರಕಾರ, ಕಲ್ಕಿ 2898 AD ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮೀರಿದೆ.ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.

ಕಲ್ಕಿ 2898 AD ತನ್ನ ಆರಂಭಿಕ ದಿನದಲ್ಲಿ 95.3 ಕೋಟಿ ರೂ. ಮತ್ತು ಶುಕ್ರವಾರ 57.6 ಕೋಟಿ ರೂ. ಭಾರತದಲ್ಲಿ ಗಳಿಸಿತು. ಶನಿವಾರ 67.1 ಕೋಟಿ ರೂ. ಮತ್ತು ಭಾನುವಾರ 83.2 ಕೋಟಿ ರೂ. ಗಳಿಸಿದ ಈ ಚಿತ್ರ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಚಿತ್ರದ ಒಟ್ಟು ಮೊತ್ತ 300.6 ಕೋಟಿ ರೂ. ಆಗಿದೆ. ವಿಶ್ವಾದ್ಯಂತ ಮೂರು ದಿನಗಳಲ್ಲಿ ಚಿತ್ರ 415 ಕೋಟಿ ಗಳಿಸಿದೆ. ವಾರದ ದಿನಗಳಲ್ಲೂ ಚಿತ್ರ ತನ್ನ ಯಶಸ್ವಿ ಪ್ರದರ್ಶನವನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಕಲ್ಕಿ 2898 AD ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ 2D ಮತ್ತು 3D ನಲ್ಲಿ ಬಿಡುಗಡೆಯಾಯಿತು.

ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

ಇದನ್ನೂ ಓದಿ: Kalki 2898 AD: ಮೂರನೇ ದಿನ ಭರ್ಜರಿ ಗಳಿಕೆ ಕಂಡ ‘ಕಲ್ಕಿ 2898 ಎಡಿ’ ಸಿನಿಮಾ ! 

ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

Kalki 2898 AD:ಪ್ಯಾನ್‌ ಇಂಡಿಯಾ ಸ್ಟಾರ್‌ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಯಾಗಿಯೇ ಅಚ್ಚೊತ್ತಿಕೊಂಡಿದ್ದಾರೆ ಪ್ರಭಾಸ್‌. ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ ಅವರ ‘ಕಲ್ಕಿ 2898 AD’ ಸಿನಿಮಾ ವೀಕ್ಷಿಸಲು ಜಪಾನ್‌ನಿಂದ ಹೈದರಾಬಾದ್‌ಗೆ ಆಗಮಿಸಿತ್ತು.

VISTARANEWS.COM


on

Fans came from Japan to Hyderabad to watch Prabhas starrer Kalki 2898 AD
Koo

ಬೆಂಗಳೂರು: ವೈಜಯಂತಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಕಲ್ಕಿ 2898 ಎಡಿ (Kalki 2898 AD) ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿದೆ. ಸಾಹಸ ದೃಶ್ಯಗಳಿಗೆ ಪ್ರೇಕ್ಷಕ ವರ್ಗ ಮೂಕವಿಸ್ಮಿತನಾಗಿದ್ದ. ನಿರ್ದೇಶಕ ನಾಗ್‌ ಅಶ್ವಿನ್‌ ಅವರ ಕೈ ಚಳಕಕ್ಕೂ ಬಹುಪರಾಕ್‌ ಸಿಕ್ಕಿತ್ತು. ಅಭಿಮಾನಿಗಳಿಂದಲೂ ಪ್ರಭಾಸ್‌ ಹೊಸ ಅವತಾರಕ್ಕೆ ಮೆಚ್ಚುಗೆಯ ಮಹಾಪೂರವೇ ಸಿಕ್ಕಿತ್ತು. ಸಲಾರ್‌ಗೂ ಮುನ್ನ ಸರಣಿ ಸೋಲು ಅನುಭವಿಸಿದ್ದ ಪ್ರಭಾಸ್‌ಗೀಗ ಕಲ್ಕಿ ಸಿನಿಮಾ ಮೂಲಕ ಮತ್ತೆ ಮರು ಜೀವ ಸಿಕ್ಕಿದೆ.

ಪ್ಯಾನ್‌ ಇಂಡಿಯಾ ಸ್ಟಾರ್‌ ಎಂಬ ಹಣೆಪಟ್ಟಿಯನ್ನು ಮತ್ತಷ್ಟು ಗಟ್ಟಿಯಾಗಿಯೇ ಅಚ್ಚೊತ್ತಿಕೊಂಡಿದ್ದಾರೆ ಪ್ರಭಾಸ್‌. ಕಲ್ಕಿ ಸಿನಿಮಾ ಅಂಥದ್ದೊಂದು ದೊಡ್ಡ ಗೆಲುವನ್ನು ಪ್ರಭಾಸ್‌ ಅವರಿಗೆ ನೀಡಿದೆ. ಫ್ಯಾಂಟಸಿ ಸಿನಿಮಾ ಮೂಲಕ, ಕಣ್ಣಿಗೆ ಅಚ್ಚರಿ ಎನಿಸುವ ದೃಶ್ಯಾವಳಿಗಳನ್ನೇ ನೋಡುಗರಿಗೆ ನೀಡಿ, ಮಾಸ್‌ ಆಕ್ಷನ್‌ ಸೀನ್‌ಗಳಿಂದ ಸಮೃದ್ಧವಾದ ಚಿತ್ರವನ್ನೇ ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ಪ್ರಭಾಸ್‌. ತಮ್ಮ ಗಮನಾರ್ಹವಾದ ಆನ್- ಸ್ಕ್ರೀನ್ ಪಾತ್ರದಿಂದಲೇ ಗಮನ ಸೆಳೆದ ಪ್ರಭಾಸ್‌, ಜಾಗತಿಕ ಅಭಿಮಾನಿಗಳಿಗೂ ಹಬ್ಬದೂಟ ಹಾಕಿಸಿದ್ದಾರೆ.

ಪ್ರಭಾಸ್ ಅವರ ಕಟ್ಟಾ ಅಭಿಮಾನಿಗಳ ತಂಡವೊಂದು ಇತ್ತೀಚೆಗೆ ಅವರ ‘ಕಲ್ಕಿ 2898 AD’ ಸಿನಿಮಾ ವೀಕ್ಷಿಸಲು ಜಪಾನ್‌ನಿಂದ ಹೈದರಾಬಾದ್‌ಗೆ ಆಗಮಿಸಿತ್ತು. ಈ ಅದ್ಭುತ ಗೆಸ್ಚರ್ ಸೂಪರ್‌ಸ್ಟಾರ್‌ನ ಜಾಗತಿಕ ಸ್ಟಾರ್‌ಡಮ್‌ಗೆ ಹಿಡಿದ ಸಾಕ್ಷಿ.

ಇದನ್ನೂ ಓದಿ: Lakshmi Hebbalkar: ಅಂಗನವಾಡಿ ಹೆಸರು ಶೀಘ್ರದಲ್ಲೇ ಬದಲಾವಣೆ! ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುಳಿವು

ಚಿತ್ರದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್, ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ಐಕಾನಿಕ್ ‘ರೆಬೆಲ್’ ಟ್ರಕ್ ಪಕ್ಕದಲ್ಲಿ ನಿಂತಿರುವ ಮೂವರು ಜಪಾನೀ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದೆ. ಪ್ರಭಾಸ್ ಪಾತ್ರದ ಭೈರವ ಮತ್ತು ಬುಜ್ಜಿ ವಾಹನದ ಫೋಟೋ ಇರುವ ವಿಶೇಷ ಬಾವುಟ ಹಿಡಿದು “ಕಲ್ಕಿ 2898 AD. ಬಿಡುಗಡೆಗೆ ಅಭಿನಂದನೆಗಳು!! ಜಪಾನಿನ ಅಭಿಮಾನಿಗಳಿಂದ 2024.6.27.” ಎಂದು ಜಪಾನಿನ ಫ್ಯಾನ್ಸ್‌ ಖುಷಿ ವ್ಯಕ್ತಪಡಿಸಿದ್ದಾರೆ.

‘ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

ಇದನ್ನೂ ಓದಿ: Uttara Kannada News: ಉ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡ

‘ಬಾಹುಬಲಿ’ಯಿಂದ ‘ಸಲಾರ್’, ‘ಕಲ್ಕಿ 2898 AD’ ವರೆಗೆ ಪ್ರಭಾಸ್ ತಮ್ಮ ಸ್ಟಾರ್ ಪವರ್‌ಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಸಮಕಾಲೀನ ಸಿನಿಮಾರಂಗದಲ್ಲಿ ಅತ್ಯಂತ ಅಪ್ರತಿಮ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಪ್ರಭಾಸ್.‌ ಅಂದಹಾಗೆ ನಾಗ್ ಅಶ್ವಿನ್ ನಿರ್ದೇಶಿಸಿದ, ‘ಕಲ್ಕಿ 2898 AD’ 2898 AD ವರ್ಷದಲ್ಲಿ ಹಿಂದೂಗಳ ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ಆಕ್ಷನ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಲೆಜಂಡರಿ ಕಲಾವಿದರಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.

Continue Reading

ಟಾಲಿವುಡ್

Kalki 2898 AD: 1000 ಕೋಟಿ ರೂ. ಗಳಿಕೆಯತ್ತ ‘ಕಲ್ಕಿ 2898  ಎಡಿʼ; ಇಲ್ಲಿಯವರೆಗೆ ಕಲೆಕ್ಷನ್‌ ಮಾಡಿದ್ದೆಷ್ಟು?

Kalki 2898 AD: ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್‌ ಕಟ್‌ ಹೇಳಿರುವ ʼಕಲ್ಕಿʼಯಲ್ಲಿ ಬಹುತಾರಾಗಣವಿದೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು, ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Kalki 2898 AD records global box office collection
Koo

ಬೆಂಗಳೂರು:   ʼಕಲ್ಕಿ 2898 ಎಡಿʼ (Kalki 2898 AD) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನಾಗಾಲೋಟ ಮುಂದುವರಿಸಿದೆ. ಜೂನ್ 27ರಂದು ವಿಶ್ವಾದ್ಯಂತ ತೆರೆಕಂಡ ಈ ಸೈನ್ಸ್‌ ಫಿಕ್ಷನ್‌ ದಾಖಲೆಯ ಕಲೆಕ್ಷನ್‌ ಮಾಡಿದೆ. ಜಾಗತಿಕವಾಗಿ 700 ಕೋಟಿ ರೂ. ಬಾಕ್ಸ್ ಆಫೀಸ್ ಸಂಗ್ರಹ ಮಾಡಿದೆ. ಮೊದಲ ವಾರದಲ್ಲಿ ಭಾರತದಲ್ಲಿ 393.4 ಕೋಟಿ ರೂ ಗಳಿಕೆ ಕಂಡಿದೆ.

ಭಾರತದ ಒಟ್ಟು ಕಲೆಕ್ಷನ್ ಅಂದಾಜು 441.5 ಕೋಟಿ ರೂ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ 168.5 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದರೊಂದಿಗೆ, ಚಿತ್ರದ 7-ದಿನಗಳ ಒಟ್ಟು ಒಟ್ಟು ಮೊತ್ತ ಸುಮಾರು 610 ಕೋಟಿ ರೂ. ಕಲೆಕ್ಷನ್‌ ಆಗಿದೆ ಎಂದು ಅಂದಾಜಿಸಲಾಗಿದೆ. “ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬ್ಲಾಕ್‌ಬಸ್ಟರ್” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ʻʻಈ ಚಿತ್ರ ಎಷ್ಟು ಲಾಭ ಗಳಿಸುತ್ತದೆ ಎಂದು ನೋಡೋಣ” ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Kalki 2898 AD: ಕಡಿಮೆ ಆಗಿಲ್ಲ `ಕಲ್ಕಿ’ ಅಬ್ಬರ; ಚಿತ್ರದ ಒಟ್ಟೂ ಗಳಿಕೆ ಎಷ್ಟು?

ಭರ್ಜರಿ ಗಳಿಕೆ

ಮೊದಲ ದಿನ ಭರ್ಜರಿ 191 ಕೋಟಿ ರೂ. ಗಳಿಸಿದ ʼಕಲ್ಕಿʼ ಆ ಮೂಲಕ ಸ್ಯಾಂಡಲ್‌ವುಡ್‌ನ ʼಕೆಜಿಎಫ್‌ 2ʼ (159 ಕೋಟಿ ರೂ.), ʼಸಲಾರ್‌ʼ (158 ಕೋಟಿ ರೂ.), ʼಲಿಯೋʼ (142.75 ಕೋಟಿ ರೂ.), ʼಸಾಹೋʼ (130 ಕೋಟಿ ರೂ.) ಮತ್ತು ʼಜವಾನ್‌ʼ (129 ಕೋಟಿ ರೂ.) ದಾಖಲೆ ಮುರಿದೆ. ಅದಾಗ್ಯೂ 223 ಕೋಟಿ ರೂ. ಕಲೆಕ್ಷನ್‌ ಮಾಡಿದ ʼಆರ್‌ಆರ್‌ಆರ್‌ʼ ಮತ್ತು 217 ಕೋಟಿ ರೂ. ಗಳಿಸಿದ ʼಬಾಹುಬಲಿ 2ʼ ಈಗಲೂ ಮೊದಲ ದಿನದ ಕಲೆಕ್ಷನ್‌ ವಿಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿ ಭದ್ರವಾಗಿವೆ.

ಬಹುತಾರಾಗಣ

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್‌ ಕಟ್‌ ಹೇಳಿರುವ ʼಕಲ್ಕಿʼಯಲ್ಲಿ ಬಹುತಾರಾಗಣವಿದೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು, ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ತಾರೆಗಳಾದ ಕಮಲ್‌ ಹಾಸನ್‌, ಶೋಭನಾ ಮತ್ತಿತರರು ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

Continue Reading

ಟಾಲಿವುಡ್

Ram Charan: ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಸಿನಿಮಾ!

Ram Charan: ದಿ ಕಾಶ್ಮೀರಿ ಫೈಲ್ಸ್, ಕಾರ್ತಿಕೇಯ-2 ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಅಭಿಷೇಕ್ ಅಗರ್ವಾಲ್ ತಮ್ಮದೇ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಹಾಗೂ ರಾಮ್ ಚರಣ್ ಒಡೆತನದ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದೆ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ ‘ದಿ ಇಂಡಿಯಾ ಹೌಸ್’ ವನ್ನು ಕಟ್ಟಿಕೊಡಲಾಗುತ್ತಿದೆ. ಸಿನಿಮಾದಲ್ಲಿ ನಾಯಕ ನಿಖಿಲ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Ram charan the Indian House on set
Koo

ಬೆಂಗಳೂರು: ಆರ್‌ಆರ್‌ಆರ್‌ ಸಿನಿಮಾ (Ram Charan) ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ , ಇತ್ತೀಚೆಗೆ ವಿ ಮೆಗಾ ಪಿಕ್ಚರ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ತಮ್ಮ ಮೊದಲ ಸಿನಿಮಾ ಆಗಿ ಸಾರ್ವಕರ್ ಜೀವನ ಕತೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ʻದಿ ಇಂಡಿಯಾ ಹೌಸ್ʼ ಹೆಸರಿನಡಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ತೆಲುಗಿನ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸಲಿದ್ದಾರೆ. ಹಂಪಿಯ ವಿರೂಪಾಕ್ಷ ಸನ್ನಿಧಿಯಲ್ಲಿ ʻದಿ ಇಂಡಿಯಾ ಹೌಸ್ʼ ಸಿನಿಮಾದ ಮುಹೂರ್ತ ನೆರವೇರಿದೆ. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ದಿ ಕಾಶ್ಮೀರಿ ಫೈಲ್ಸ್, ಕಾರ್ತಿಕೇಯ-2 ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಅಭಿಷೇಕ್ ಅಗರ್ವಾಲ್ ತಮ್ಮದೇ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಹಾಗೂ ರಾಮ್ ಚರಣ್ ಒಡೆತನದ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದೆ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ ‘ದಿ ಇಂಡಿಯಾ ಹೌಸ್’ ವನ್ನು ಕಟ್ಟಿಕೊಡಲಾಗುತ್ತಿದೆ. ಸಿನಿಮಾದಲ್ಲಿ ನಾಯಕ ನಿಖಿಲ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ವಂಶಿ ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಅನುಪಮ್ ಅವರು ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಪಾತ್ರ ನಿರ್ವಹಿಸಲಿದ್ದಾರೆ. ನಿಖಿಲ್ ಸಿದ್ದಾರ್ಥ್ ಗೆ ಜೋಡಿಯಾಗಿ ಸಾಯಿ ಮಂಜ್ರೇಕರ್ ಬಣ್ಣ ಹಚ್ಚಲಿದ್ದಾರೆ.

ಇದನ್ನೂ ಓದಿ: Kannada New Movie: ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಸಿನಿಮಾದ ಸಾಂಗ್!

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿ ಬರುತ್ತಿರು ದಿ ಇಂಡಿಯನ್ ಹೌಸ್ ಸಿನಿಮಾಗೆ ಕ್ಯಾಮೆರಾನ್ ಬ್ರೈಸನ್ ಕ್ಯಾಮೆರಾ ಹಿಡಿಯಲಿದ್ದಾರೆ. ಕಾರ್ತಿಕೇಯ 2 ನಂತರ ನಿಖಿಲ್, ಅನುಪಮ್ ಖೇರ್, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜೊತೆ ದಿ ಇಂಡಿಯಾ ಹೌಸ್ ಸಿನಿಮಾಗಾಗಿ ಮತ್ತೊಮ್ಮೆ ಒಂದಾಗಿದ್ದಾರೆ.

Continue Reading

ಟಾಲಿವುಡ್

Double Ismart: ಪ್ರಚಾರ ಅಖಾಡದಲ್ಲಿ ‘ಡಬಲ್ ಇಸ್ಮಾರ್ಟ್’: ಮೊದಲ ಹಾಡು ರಿಲೀಸ್!

Double Ismart: ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

VISTARANEWS.COM


on

Double Ismart Steppa Maar electrifies with mass beats
Koo

ಬೆಂಗಳೂರು: ಉಸ್ತಾದ್ ರಾಮ್ ಪೋತಿನೇನಿ ಮತ್ತು ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿಯ ಬಹುನಿರೀಕ್ಷಿತ ಸಿನಿಮಾ ʻಡಬಲ್ ಇಸ್ಮಾರ್ಟ್ʼ (Double Ismart). ಪುರಿ ಕನೆಕ್ಟ್ಸ್ ಬ್ಯಾನರ್‌ನಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರ ಆಗಸ್ಟ್ 15 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಡಬಲ್ ಇಸ್ಮಾರ್ಟ್ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇತ್ತ ಪ್ರಚಾರ ಕೆಲಸ ಕೂಡ ಆರಂಭವಾಗಿದೆ.

ಡಬಲ್ ಇಸ್ಮಾರ್ಟ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ʻಸ್ಟೆಪ್ಪಾ ಮಾರ್‌ʼ ಎಂಬ ಹಾಡಿಗೆ ಭಾಸ್ಕರ ಭಟ್ಲರ ಸಾಹಿತ್ಯ ಬರೆದಿದ್ದು , ಅನುರಾಗ್ ಕುಲಕರ್ಣಿ ಹಾಗೂ ಸಾಹಿತಿ ಚಂಗಂತಿ ಧ್ವನಿಯಾಗಿದ್ದಾರೆ.‌ ಮಣಿ ಶರ್ಮಾ ಟ್ಯೂನ್ ಹಾಕಿದ್ದಾರೆ. ಅದ್ಧೂರಿ ಸೆಟ್ ನಲ್ಲಿ ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ರಾಮ್ ಪೋತಿನೇನಿ ಜಬರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ.

ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ.

ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

ಇದನ್ನೂ ಓದಿ: Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

2019 ರಲ್ಲಿ ಇಸ್ಮಾರ್ಟ್ ಶಂಕರ್ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು.

Continue Reading
Advertisement
Physical Abuse
ಬೆಂಗಳೂರು4 mins ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Team India
ಕ್ರಿಕೆಟ್10 mins ago

Team India: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟ ಟೀಮ್​ ಕ್ರಿಕೆಟಿಗರು

ಉದ್ಯೋಗ17 mins ago

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

Actor Darshan SIM Secret Revealed investigation start
ಸ್ಯಾಂಡಲ್ ವುಡ್18 mins ago

Actor Darshan: ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್; ಆಪ್ತರಿಗೆ ತಟ್ಟಿದೆ ವಿಚಾರಣೆ ಬಿಸಿ!

Brain-Eating Mmoeba
ಆರೋಗ್ಯ26 mins ago

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Self Harming in bengaluru
ಬೆಂಗಳೂರು38 mins ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

salary hike cm siddaramaiah
ಪ್ರಮುಖ ಸುದ್ದಿ40 mins ago

Salary Hike: ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ: ನೌಕರರ ಸಂಬಳ ನುಂಗಿದ ʼಗ್ಯಾರಂಟಿʼ!

Chaithra J Achar Kittale Roopanthara Raj B Shetty out
ಸ್ಯಾಂಡಲ್ ವುಡ್59 mins ago

Chaithra J Achar: ʻರೂಪಾಂತರʼ ಸಿನಿಮಾದ ಹಾಡು ರಿಲೀಸ್‌; ಇಳಕಲ್‌ ಸೀರೆಯಲ್ಲಿ ಮಿಂಚಿದ ಚೈತ್ರಾ ಆಚಾರ್!

UK Election
ವಿದೇಶ1 hour ago

UK Election: ಯುಕೆ ಎಲೆಕ್ಷನ್‌ನಲ್ಲಿ ಹೀನಾಯ ಸೋಲು; ರಿಶಿ ಸುನಕ್‌ ಫಸ್ಟ್‌ ರಿಯಾಕ್ಷನ್‌

Team India
ಕ್ರೀಡೆ1 hour ago

Team India: ಟೀಮ್​ ಇಂಡಿಯಾ ಬಳಿ ಇರುವುದು ನಕಲಿ ವಿಶ್ವಕಪ್​ ಟ್ರೋಫಿ; ಅಸಲಿ ಟ್ರೋಫಿ ಎಲ್ಲಿದೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ5 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ19 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ20 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ21 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ22 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ23 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ1 day ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌